1 00:00:00,083 --> 00:00:02,040 ಈ ಹಿಂದೆ ದ ಬೆಟರ್ ಸಿಸ್ಟರ್‌ನಲ್ಲಿ... 2 00:00:02,041 --> 00:00:04,915 ಈಗ ನಾನು ನಿದ್ರಿಸಲು ಮಲಗುತ್ತಿದ್ದೇನೆ... 3 00:00:04,916 --> 00:00:07,750 "ನಾನು ನಿದ್ರೆಗೆ ಜಾರಿದಾಗ" ಇದು ಪ್ರೇತ ಕಥೆಯಲ್ಲ, ಅದು ಒಂದು ಪ್ರಾರ್ಥನೆ. 4 00:00:08,208 --> 00:00:09,832 "ಈಗ ನಾನು ನಿದ್ರಿಸಲು ಮಲಗುತ್ತಿದ್ದೇನೆ." 5 00:00:09,833 --> 00:00:12,874 "ನನ್ನ ಆತ್ಮವನ್ನು ಕಾಪಾಡುವಂತೆ ಕರ್ತನನ್ನು ಪ್ರಾರ್ಥಿಸುವೆ." 6 00:00:12,875 --> 00:00:14,916 - ಶಾಂತವಾಗು! - ನನ್ನನ್ನು ಬಿಡು! 7 00:00:15,041 --> 00:00:18,540 ನೀನು ನನ್ನನ್ನು ಮತ್ತೊಮ್ಮೆ ಮುಟ್ಟಿದರೆ, ನಿನ್ನನ್ನು ಕೊಂದುಬಿಡುತ್ತೇನೆ! 8 00:00:18,541 --> 00:00:20,999 ನಿಮ್ಮ ಗಂಡನ ಕೊಲೆಗಾರನನ್ನು ಇನ್ನೂ ಹುಡುಕುತ್ತಿದ್ದೇವೆ. 9 00:00:21,000 --> 00:00:22,540 ನಾವು ಮೊದಲಿನಿಂದ ಆರಂಭಿಸುತ್ತಿದ್ದೇವೆ. 10 00:00:22,541 --> 00:00:25,040 ಅವನು ಸಾಯಬೇಕೆಂದು ಬಯಸಿದವರ ಪಟ್ಟಿ ಬೆಳೆಯುತ್ತಲೇ ಇದೆ. 11 00:00:25,041 --> 00:00:26,082 ನೀವು ಕಾರ್ಯನಿರತರಾಗಲಿದ್ದೀರಿ. 12 00:00:26,083 --> 00:00:28,999 ನೀನು ಆಡಮ್‌ನ ಕಂಪ್ಯೂಟರ್‌ನಲ್ಲಿರುವ ಎಲ್ಲಾ ಜೆಂಟ್ರಿ ಗ್ರೂಪ್ ಕಡತಗಳನ್ನು ಅಳಿಸಿದೆ. 13 00:00:29,000 --> 00:00:31,915 - ನೀನು ಏನನ್ನು ಹುಡುಕುತ್ತಿದ್ದೆ? - ಆಡಮ್‌ಗೆ ಏನಾಯಿತು ಎಂಬ ಬಗ್ಗೆ ಸತ್ಯವನ್ನಷ್ಟೇ. 14 00:00:31,916 --> 00:00:33,041 ನಮಗೆ ತಿಳಿಯದೇ ಇರಬಹುದು. 15 00:00:34,333 --> 00:00:35,165 ದೇವರೇ. 16 00:00:35,166 --> 00:00:36,832 - ನಮ್ಮ ನಡುವೆ ಒಪ್ಪಂದವಿತ್ತು. - ನಾನು ಭಾಗಿಯಾಗಲ್ಲ. 17 00:00:36,833 --> 00:00:38,333 ಆಡಮ್ ಕೂಡ ಬಿಟ್ಟು ಹೋಗಿದ್ದ. 18 00:00:39,125 --> 00:00:40,708 ಸಣ್ಣ ಸಲಹೆ, ನನ್ನ ಮುದ್ದಿನವಳೇ. 19 00:00:41,750 --> 00:00:43,749 ಬಿಲ್‌ನಿಂದ ದೂರ ಓಡಬೇಡ. 20 00:00:43,750 --> 00:00:45,833 ಅವನಿಗೆ ಬೆನ್ನತ್ತಿ ಬರುವುದು ಇಷ್ಟ. 21 00:00:46,125 --> 00:00:48,249 ನಿಮಗೆ ಆ ಅಕ್ಕನ ಜೊತೆ ಏನಾದರೂ ಮಾತುಕತೆ ಇದೆಯಾ? 22 00:00:48,250 --> 00:00:49,415 - ನಿಕ್ಕಿ ಜೊತೆನಾ? - ಹೌದು. 23 00:00:49,416 --> 00:00:51,624 ಓಹಾಯೋದಲ್ಲಿ ವಾಸಿಸುವ ಆ ತಾಯಿಯನ್ನು ಈಗಲೂ ನೋಡಿಕೊಳ್ಳುತ್ತಾಳೆ. 24 00:00:51,625 --> 00:00:52,874 ಆಡಮ್‌ನ ತಾಯಿ. 25 00:00:52,875 --> 00:00:55,208 ಇವತ್ತು ಆ ಡಿಟೆಕ್ಟಿವ್ ಡಿಲ್ಡೋ ನನ್ನ ಸಭೆಯ ಬಳಿ ಬಂದಿದ್ದಳು. 26 00:00:56,708 --> 00:00:59,000 - ಆಕೆ ಆತನ ಹೆಂಡತಿಯೇ? - ಆತನನ್ನು ಇಲ್ಲಿಗೆ ಕರೆತಂದವಳು ಅವಳೇ. 27 00:00:59,791 --> 00:01:01,874 ಇದಕ್ಕೆ ಯಾವುದೇ ಅರ್ಥವಿಲ್ಲ. 28 00:01:01,875 --> 00:01:04,749 "ತಂದೆಯು ಮಗ ನೀರಲ್ಲಿ ಕೆಳಮುಖವಾಗಿ ಬಿದ್ದಿರುವುದರ ಬಗ್ಗೆ ದೂರು ನೀಡಿದರು, 29 00:01:04,750 --> 00:01:08,540 ಆದರೆ ಮಗ ನೀರು ಕುಡಿದಿರುವ ಯಾವುದೇ ಲಕ್ಷಣಗಳಿಲ್ಲ." 30 00:01:08,541 --> 00:01:09,916 ಅದರರ್ಥ ಏನು? 31 00:01:10,541 --> 00:01:11,541 ಆತ ಸುಳ್ಳು ಹೇಳಿದ ಎಂದರ್ಥ. 32 00:01:15,000 --> 00:01:16,707 ನೀನು ಯಾಕೆ ಏನನ್ನೂ ಹೇಳಲಿಲ್ಲ? 33 00:01:16,708 --> 00:01:18,375 ಅದಕ್ಕಾಗಿಯೇ ನಾನು ಬಂದೆ. 34 00:01:21,583 --> 00:01:22,916 ನಿಕ್ಕಿ. 35 00:01:26,000 --> 00:01:27,541 ಏನು ಹೇಳುತ್ತಿದ್ದೀಯಾ? 36 00:01:32,250 --> 00:01:34,125 ಓಹ್, ದೇವರೇ. 37 00:01:34,875 --> 00:01:36,124 ದ ಬೆಟರ್ ಸಿಸ್ಟರ್ 38 00:01:36,125 --> 00:01:38,666 ಒಂದರ ನಂತರ ಒಂದು ಭಯಾನಕ ಘಟನೆಗಳು. 39 00:01:53,708 --> 00:01:54,708 ನಿನ್ನ ದಿನ ಚೆನ್ನಾಗಿರಲಿ. 40 00:02:15,916 --> 00:02:17,082 ಹಾಯ್, ಆಡಮ್. 41 00:02:17,083 --> 00:02:18,375 ನೀನು ಇಲ್ಲೇನು ಮಾಡುತ್ತಿದ್ದೀಯಾ? 42 00:02:18,958 --> 00:02:20,165 ಕ್ಲೋಯಿ ಇಲ್ಲಿದ್ದಾಳೆಯೇ? 43 00:02:20,166 --> 00:02:22,207 - ಕ್ಲೋ? - ಇದು ಸರಿ ಇರೋದಿಲ್ಲ. ನೀನು ಹೊರಡಬೇಕು. 44 00:02:22,208 --> 00:02:23,915 - ಕ್ಲೋಯಿ? - ನೀನು ಇಲ್ಲಿಗೆ ಬರುವಂತಿಲ್ಲ, 45 00:02:23,916 --> 00:02:25,415 - ಮುಂಚಿತವಾಗಿ ತಿಳಿಸದೆ... - ಕ್ಲೋ? 46 00:02:25,416 --> 00:02:26,957 ...ಹಾಗೂ ನಮ್ಮ ಲಿಖಿತ ಅನುಮತಿ ಪಡೆಯದೆ. 47 00:02:26,958 --> 00:02:28,790 - ನಿನಗಿದು ಗೊತ್ತು. - ಪಾರಿವಾಳದ ಮೂಲಕ ಸುದ್ಧಿ ಕಳಿಸಿದೆ. 48 00:02:28,791 --> 00:02:30,666 - ಅದು ಬರಲಿಲ್ಲವೇ? - ನೀನು ಕುಡಿದಿದ್ದೀಯಾ? 49 00:02:31,083 --> 00:02:33,665 ಅದು ನಿನ್ನ ಭ್ರಮೆ. ನೀನು ಕುಡಿದಂತೆ ವಾಸನೆ ಬರುತ್ತಿದ್ದೆ. ಎಲ್ಲಿಗೆ ಹೋಗಿದ್ದೆ? 50 00:02:33,666 --> 00:02:35,458 ನನಗೆ ಈಗ ಇದನ್ನೆಲ್ಲಾ ಸಹಿಸಲು ಆಗುವುದಿಲ್ಲ. 51 00:02:36,500 --> 00:02:38,915 - ದಿನ ಸರಿಯಿರಲಿಲ್ವಾ, ಚಿನ್ನಾ? - ಎದ್ದೇಳು. 52 00:02:38,916 --> 00:02:41,957 ನಾನು ಕ್ಲೋಯಿ ಜೊತೆ ಮಾತಾಡುವವರೆಗೂ ಇಲ್ಲಿಂದ ಹೋಗಲ್ಲ. 53 00:02:41,958 --> 00:02:44,207 - ಪೊಲೀಸರನ್ನು ಕರೆಸುತ್ತೇನೆ. - ಒಳ್ಳೆಯದು. ಕರೆಸು. 54 00:02:44,208 --> 00:02:47,375 ನೀನು ನನ್ನ ತಂಗಿಗೆ ಏನು ಮಾಡುತ್ತಿದ್ದೀಯೋ ಅದೆಲ್ಲವನ್ನೂ ಅವರಿಗೆ ಹೇಳುತ್ತೇನೆ. 55 00:02:48,041 --> 00:02:48,875 ಏನದು? 56 00:02:50,541 --> 00:02:52,040 ಮತ್ತು ನನ್ನ ಮಗನಿಗೂ ಗೊತ್ತು. 57 00:02:52,041 --> 00:02:53,708 ನೀನು ಅಮಲಿನಲ್ಲಿರುವುದು ಈಗ ನನಗೆ ತಿಳಿಯಿತು. 58 00:02:54,958 --> 00:02:58,290 ಅವನು ಮನೆಗೆ ಬಂದಾಗ ಅವನನ್ನು ಕೇಳೋಣ, ಆಮೇಲೆ ಅವನನ್ನು ನನ್ನ ಜೊತೆ ಕರೆದೊಯ್ಯುತ್ತೇನೆ. 59 00:02:58,291 --> 00:02:59,582 ನೀನು ಅವನ ಹತ್ತಿರ ಸುಳಿಯಲು ಆಗದು. 60 00:02:59,583 --> 00:03:01,832 ಮತ್ತು ನೀನು ಮತ್ತೆಂದಿಗೂ ನನ್ನನ್ನು ಅವನಿಂದ ದೂರವಿಡಲು ಆಗದು. 61 00:03:01,833 --> 00:03:03,040 ಪೊಲೀಸರನ್ನು ಕರೆಸು, ಆಡಮ್. 62 00:03:03,041 --> 00:03:05,082 - ಅವರನ್ನು ಕರೆಸು. - ನಿನ್ನ ಮಾತು ನಂಬುತ್ತಾರೆ ಅನಿಸುತ್ತಾ? 63 00:03:05,083 --> 00:03:08,249 - ನಿನ್ನ ಹಿಂದಿನ ಕಥೆ ಗೊತ್ತಿದ್ದೂ? - ನನ್ನ ಹಿಂದಿನ ಕಥೆ? ಅದು ನೀನು ಕಟ್ಟಿದ ಕಥೆ. 64 00:03:08,250 --> 00:03:10,165 ಅದೇನಾ ನೀನು ಈಗ ನಿನಗೆ ಹೇಳಿಕೊಳ್ಳುತ್ತಿರುವುದು? 65 00:03:10,166 --> 00:03:11,874 - ನೀನೊಬ್ಬಳು ವ್ಯಸನಿ... - ಅದೇ ಸತ್ಯ. 66 00:03:11,875 --> 00:03:15,833 - ...ಮತ್ತು ನೀನು ಮೊದಲಿನಿಂದಲೂ ಹಾಗೇ ಇದ್ದೀಯ. - ಮತ್ತು ನೀನೊಬ್ಬ ಘೋರ ರಾಕ್ಷಸ! ನನ್ನನ್ನು ಬಿಡು! 67 00:03:16,916 --> 00:03:17,791 ಇಲ್ಲ. 68 00:03:30,875 --> 00:03:31,707 ಇಲ್ಲ. 69 00:03:31,708 --> 00:03:33,041 ಅಯ್ಯೋ. ಇಲ್ಲ! 70 00:04:25,083 --> 00:04:27,250 12 ಗಂಟೆಗಳ ಹಿಂದೆ 71 00:04:28,625 --> 00:04:32,708 ಈ ಕುರ್ಚಿ ಮತ್ತೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಿಮ್ಮುಖವಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. 72 00:04:34,208 --> 00:04:35,457 ಇದೆಲ್ಲಾ ಹೇಗೆ ಆಯಿತು? 73 00:04:35,458 --> 00:04:37,625 ನಾನು ಡಾಲರ್ ಅಂಗಡಿಗೆ ಹೋಗಿದ್ದೆ, 74 00:04:38,125 --> 00:04:42,457 ಸ್ನಾನಗೃಹಕ್ಕಾಗಿ "ಕಡಲತೀರ ಈ ಕಡೆಗೆ" ಎನ್ನುವ ಚಿಪ್ಪು ಆಕಾರದ ಚಿಹ್ನೆಗಳನ್ನು ತೆಗೆದುಕೊಳ್ಳಲು. 75 00:04:42,458 --> 00:04:44,582 - ಅದು ಚೆಂದ ಕಾಣುತ್ತೆ ಅಂದುಕೊಂಡೆ. - ಹಾಂ, ಚೆಂದ ಕಾಣುತ್ತೆ. 76 00:04:44,583 --> 00:04:46,083 ಅವರಲ್ಲಿ ಒಂದು ವಿಶೇಷ ಕೊಡುಗೆ ಇತ್ತು. 77 00:04:46,458 --> 00:04:49,500 ಏಣಿ, ಹಜಾರದ ಮಧ್ಯದಲ್ಲೇ ಇತ್ತು, 78 00:04:49,916 --> 00:04:53,415 ನೋಡದೇ ಸೀದಾ ಹೋಗಿ ಗುದ್ದಿ ಉರುಳಿಸಿಬಿಟ್ಟೆ. ನಂಬಲು ಕಷ್ಟ ಅಲ್ವಾ? 79 00:04:53,416 --> 00:04:55,249 ಆ ಬೇಜವಾಬ್ದಾರಿ ಬೇವರ್ಸಿಗಳು ಹಾಗೇನೇ. 80 00:04:55,250 --> 00:04:58,749 ಹೌದು, ನಿನ್ನೆ ಅಂಗವಿಕಲರ ಇಲಾಖೆಯವರ ಜೊತೆ ಫೋನಿನಲ್ಲೇ ಕಾದು ಐದು ಗಂಟೆ ಮಾತಾಡುತ್ತಿದ್ದೆ. 81 00:04:58,750 --> 00:05:00,250 ಅಷ್ಟೊತ್ತು ಯಾರಿಗೆ ಸಮಯ ಇರುತ್ತೆ? 82 00:05:00,625 --> 00:05:02,499 ಖಂಡಿತವಾಗಲೂ ಉದ್ದೇಶಪೂರ್ವಕವಾಗಿಯೇ ಕಾಯಿಸುವರು. 83 00:05:02,500 --> 00:05:06,249 ಹಣ ಬಂದ ಕೂಡಲೇ ಮೊದಲ ಕೆಲಸ, ನನ್ನ ಹಳೇ ಗಾಲಿಕುರ್ಚಿ 'ಸೂಸಿ ಕ್ರೂಸಿ'ಯನ್ನ ಸರಿಮಾಡಿಸುವೆ. 84 00:05:06,250 --> 00:05:09,375 ನನ್ನ ಕಾಲು ಊದಿಕೊಂಡಿದೆ, ಸಿಯಾಟಿಕಾ ನರ ಸಿಕ್ಕಾಪಟ್ಟೆ ನೋಯುತ್ತಿದೆ. 85 00:05:09,791 --> 00:05:12,208 ಒಂದು ತೊಂದರೆ ನಿವಾರಿಸಿಕೊಂಡರೆ, ಇನ್ನೊಂದು ಶುರುವಾಗುತ್ತೆ. 86 00:05:12,750 --> 00:05:14,790 ನನಗೆ ಗೊತ್ತಿಲ್ಲ. ನನಗೆ ನಿಮ್ಮ ಕೈಕಾಲು ಚೆನ್ನಾಗಿರುವಂತಿವೆ. 87 00:05:14,791 --> 00:05:17,291 ನೀನು ದಾದಿಯಲ್ಲ, ಬೇಜಾರಾಗಬೇಡ. 88 00:05:17,708 --> 00:05:19,374 ನಿನ್ನ ತಾಯಿಯು ಗುಣಪಡಿಸುವ ವೈದ್ಯರಂತಿದ್ದರು. 89 00:05:19,375 --> 00:05:21,625 ಗಟ್ಟಿಗಿತ್ತಿ, ಆದರೆ ಆಕೆಗೆ ತನ್ನ ಕೆಲಸದಲ್ಲಿ ಹಿಡಿತವಿತ್ತು. 90 00:05:22,250 --> 00:05:25,415 ಚೆಕ್ ಬಂದಾಗ, ಆ ಕೆಲಸ ಮಾಡಿದ್ದಕ್ಕೆ ನಿನಗೂ ಒಂದು ಪಾಲು ಕೊಡುತ್ತೇನೆ. 91 00:05:25,416 --> 00:05:26,457 ಸುಮ್ಮನಿರಿ. 92 00:05:26,458 --> 00:05:27,707 ನೀನು ಸುಮ್ಮನಿರು. 93 00:05:27,708 --> 00:05:29,665 ನನಗಾಗಿ ಏನು ತಂದೆ? 94 00:05:29,666 --> 00:05:31,500 ನಿಮಗೆ ಗೊತ್ತು. ನಿಮಗಿದು ಬಹಳ ಇಷ್ಟವಾಗುತ್ತೆ. 95 00:05:32,208 --> 00:05:33,500 ಇಗೋ, ಎದ್ದು ನಿಂತೇ ಬಿಟ್ಟರು. 96 00:05:37,083 --> 00:05:39,000 - ನನ್ನ ಕಚೇರಿಯನ್ನು ಬಳಸು. - ಸರಿ. 97 00:05:40,833 --> 00:05:42,125 ನನ್ನ ವಸ್ತುಗಳನ್ನು ಮುಟ್ಟಬೇಡ. 98 00:05:45,166 --> 00:05:47,000 ಇಗೋ, ಈಗ ನೀನು ಸಿಕ್ಕಿದೆ! 99 00:05:47,416 --> 00:05:50,208 ಕೊನೆಗೂ. ನೀನು ನನ್ನನ್ನ ಕಡೆಗಣಿಸುತ್ತಿರಬಹುದು ಎಂದುಕೊಂಡೆ. 100 00:05:50,583 --> 00:05:51,790 ಏನು ಮಾಡುತ್ತಿದ್ದೀರಿ? 101 00:05:51,791 --> 00:05:52,708 ನಾನೇ? 102 00:05:54,083 --> 00:05:55,791 ನಾನು ಸುಮ್ಮನೆ ಹಾಗೇ ಏನೋ ಮಾಡುತ್ತಿದ್ದೇನೆ. 103 00:05:56,250 --> 00:05:59,165 ನೀನೇನು ಮಾಡುತ್ತಿದ್ದೀಯಾ? ಏನು-- ಆ ಸಮಾರಂಭಕ್ಕೆ ಏನು ಧರಿಸಿದ್ದೆ? 104 00:05:59,166 --> 00:06:00,208 ಏನಾದರೂ ಅಲಂಕಾರಿಕವಾದದ್ದು? 105 00:06:00,750 --> 00:06:02,166 ಗರಿಗಳು ಇರೋದು? ಚರ್ಮದ್ದು? 106 00:06:06,125 --> 00:06:07,083 ಹೇ, ಚೆನ್ನಾಗಿದ್ದೀಯ ತಾನೆ? 107 00:06:09,750 --> 00:06:10,625 ಅಷ್ಟೇನೂ ಇಲ್ಲ. 108 00:06:11,833 --> 00:06:13,791 ಏನೋ ನಡೆಯಿತು. ಮತ್ತು ನಾನು... 109 00:06:15,000 --> 00:06:17,291 ಅದನ್ನು ನಿಮಗೆ ಹೇಳಬೇಕೋ ಬೇಡವೋ ಎಂದು ಯೋಚಿಸುತ್ತಿದ್ದೆ. 110 00:06:18,458 --> 00:06:20,833 ಹಾಂ, ಖಂಡಿತ-- ಹೌದು, ಖಂಡಿತ, ಈಥನ್, ಹೇಳು. 111 00:06:23,958 --> 00:06:27,416 ಒಂದೆರಡು ದಿನಗಳ ಹಿಂದೆ ಅಪ್ಪ-ಅಮ್ಮನ ಮಧ್ಯೆ ಏನೋ ನಡೆದದ್ದನ್ನು ನೋಡಿದೆ. 112 00:06:28,458 --> 00:06:29,416 ಅದು... 113 00:06:29,958 --> 00:06:31,750 ಅದು... ಅದು ಬಹಳ ಕೆಟ್ಟದಾಗಿತ್ತು. 114 00:06:34,416 --> 00:06:35,375 ಎಷ್ಟು ಕೆಟ್ಟದಾಗಿತ್ತು? 115 00:06:37,958 --> 00:06:38,875 ನಾನು... 116 00:06:40,000 --> 00:06:43,208 ನಾನು ನಿಮಗೆ ಸೆಲ್ಫಿ ಕಳುಹಿಸಲು ಮಾಳಿಗೆ ಮೇಲೆ ಇದ್ದೆ, ಮತ್ತು... 117 00:06:44,416 --> 00:06:46,457 ಅವರು ಜಗಳವಾಡುತ್ತಿದ್ದರು, 118 00:06:46,458 --> 00:06:50,416 ಆಮೇಲೆ ಆತ ಅಮ್ಮನನ್ನು ಜೋರಾಗಿ ತಳ್ಳಿದರು... 119 00:06:51,500 --> 00:06:54,666 ಜೋರಾಗಿ, ತುಂಬಾ ಜೋರಾಗಿ, ಮತ್ತು ಆಕೆಯ ತಲೆ ಗೋಡೆಗೆ ಬಡಿದುಕೊಂಡಿತು. 120 00:06:58,000 --> 00:06:59,166 ನೀನೇನು ಮಾಡಿದೆ? 121 00:07:00,041 --> 00:07:00,916 ಅಮ್ಮ ಹೊರಟುಹೋದರು. 122 00:07:02,583 --> 00:07:05,500 ಆತ ಆಕೆಗೆ ಹಿಂಸೆ ಕೊಟ್ಟಿರುವುದು ಇದೇ ಮೊದಲೇನಲ್ಲ. 123 00:07:08,166 --> 00:07:09,541 ಅವಳು ಈಗ ಆರಾಮವಾಗಿದ್ದಾಳಾ? 124 00:07:10,333 --> 00:07:12,625 ನನಗೆ ಗೊತ್ತಿಲ್ಲ. ಆಕೆಯ ವಿಷಯದಲ್ಲಿ ಹೇಳುವುದು ಕಷ್ಟ. 125 00:07:13,875 --> 00:07:15,415 ಹೌದು, ಅವಳು ಸುಮ್ಮನಾಗಿಬಿಡುತ್ತಾಳೆ. 126 00:07:15,416 --> 00:07:17,958 ಹೌದು, ಆಕೆ ಒಂಥರಾ ಭಯ ಆಗುವಷ್ಟು ಶಾಂತವಾಗಿಬಿಡುತ್ತಾರೆ. ಹಾಗೇ... 127 00:07:21,791 --> 00:07:23,957 ಕ್ಷಮಿಸಿ. ಬಹುಶಃ ನಾನು ಏನನ್ನೂ ಹೇಳಬಾರದಿತ್ತು. 128 00:07:23,958 --> 00:07:26,499 ಕಂದ, ಪರವಾಗಿಲ್ಲ. ನೀನು ನನಗೆ ಹೇಳಿದ್ದು ಒಳ್ಳೆಯದಾಯಿತು. 129 00:07:26,500 --> 00:07:27,582 ಹೇ. ನೀನು ಆರಾಮವಾಗಿದ್ದೀಯಾ? 130 00:07:27,583 --> 00:07:29,541 ಅಯ್ಯೋ. ನಾನು ಹೋಗಬೇಕು. 131 00:07:30,166 --> 00:07:31,791 ಆಮೇಲೆ ಕರೆ ಮಾಡುತ್ತೇನೆ, ಸರಿನಾ? 132 00:07:32,125 --> 00:07:32,958 ಹೇ... 133 00:07:33,666 --> 00:07:34,666 ಸರಿ. 134 00:07:35,125 --> 00:07:36,958 ಆಮೇಲೆ ಕರೆ ಮಾಡು. ಛೇ. 135 00:07:44,833 --> 00:07:46,208 ಅಲ್ಲಿ ಒಳಗೆ ಏನಾದರೂ ನಿನಗೆ ತೊಂದರೆನಾ? 136 00:07:46,833 --> 00:07:47,666 ಹೌದು. 137 00:07:55,541 --> 00:07:58,082 ಹುಡುಗಿ, ನಾನು ಕಳೆದ ವಾರ ಇವುಗಳಲ್ಲೊಂದರಲ್ಲಿ ಕ್ಲೋಯಿಳನ್ನು ನೋಡಿದೆ. 138 00:07:58,083 --> 00:08:00,082 ಆ ದಪ್ಪ ತುಟಿಯವಳ ಪಕ್ಕದಲ್ಲಿ. 139 00:08:00,083 --> 00:08:02,457 ಅವಳು ಈಗ ಒಳ್ಳೆಯದನ್ನು ಮಾಡುವ ಭರದಲ್ಲಿ ಎಲ್ಲಾ ಕೆಡಿಸುವವಳು. 140 00:08:02,458 --> 00:08:04,083 ಎಂತಹ ಕಪಟಿ! 141 00:08:04,583 --> 00:08:06,124 ಅವಳು ಭಯಾನಕವಾಗಿ ಕಾಣುತ್ತಿದ್ದಳು. 142 00:08:06,125 --> 00:08:07,290 ಆದರೂ ತೆಳ್ಳಗೆ. 143 00:08:07,291 --> 00:08:08,624 ಜಿಮ್ನಾಸ್ಟ್‌ನಂತಹ ತೋಳುಗಳು. 144 00:08:08,625 --> 00:08:09,915 ಆಡಮ್ ಇಲ್ಲ. 145 00:08:09,916 --> 00:08:11,832 ಈ ಸಂಜೆಕೂಟಗಳಲ್ಲಿ ಸದಾ ಅವಳು ಮಾತ್ರ ಇರುತ್ತಾಳೆ. 146 00:08:11,833 --> 00:08:14,957 ಒಬ್ಬ ತಾಯಿಯಾಗಿ, ಯೋಚನೆ ಮಾಡುತ್ತೇವೆ, "ಅವನು ಖುಷಿಯಾಗಿದ್ದಾನಾ?" ಅಂತ. 147 00:08:14,958 --> 00:08:17,624 ಆದರೆ ಅವರು ನಮ್ಮನ್ನು ಬಿಟ್ಟು ಹೋದರು. ಅಲ್ಲಿ ಅವರದೇ ಆದ ಲೋಕದಲ್ಲಿದ್ದಾರೆ. 148 00:08:17,625 --> 00:08:18,708 ನಾವು ಇಲ್ಲಿದ್ದೇವೆ. 149 00:08:20,541 --> 00:08:22,083 ಗಟ್ಟಿ ಕೆನೆ ತಂದೆಯಾ? 150 00:08:24,208 --> 00:08:25,499 ಮರೆತುಹೋದೆ. 151 00:08:25,500 --> 00:08:27,665 ಅದು ಅಟ್ಕಿನ್ಸ್ ಆಹಾರ ಪಥ್ಯಕ್ಕಾಗಿ. ಅದು ಬೇಗ ಕೆಲಸ ಮಾಡುತ್ತೆ. 152 00:08:27,666 --> 00:08:30,665 ಒಂದು ಏನೆಂದರೆ, ನಾನು ಕೀಟೋಸಿಸ್‌ನಲ್ಲಿದ್ದಾಗ ಬಾಯಿಯಲ್ಲಿ ಕಡಲಸಸ್ಯದ ರುಚಿ ಇರುತ್ತೆ. 153 00:08:30,666 --> 00:08:33,916 - ಆದರೆ ಅದರಿಂದ ಉಪಯೋಗ ಇದೆ ಅನಿಸುತ್ತೆ. - ನಾನು ಹೋಗಬೇಕು. ಅದನ್ನು ತರುತ್ತೇನೆ, ಸರಿ. 154 00:08:51,708 --> 00:08:53,500 ಯುಎಸ್ಎ ಈಶಾನ್ಯ 155 00:08:58,041 --> 00:08:59,041 ಹಾಯ್, ಆಡಮ್. 156 00:09:25,291 --> 00:09:26,666 ಮ್ಯಾಕಿಂಟೋಷ್, ಡೆಬ್ಬಿ ಅಮೋಕ್ಸಿಸಿಲಿನ್ 157 00:09:37,250 --> 00:09:39,375 ಕರೆ ಬರುತ್ತಿದೆ ಈಸ್ಟ್ ಹ್ಯಾಂಪ್ಟನ್ ಪೊಲೀಸ್ 158 00:09:40,375 --> 00:09:42,000 ಅವಾಗಲೇ ಅವರು ನನಗೆ ಕರೆ ಮಾಡಿದ್ದು. 159 00:09:44,875 --> 00:09:46,290 ನೀನು ನನ್ನನ್ನು ಕಾಪಾಡಲು ಬಂದೆಯಾ? 160 00:09:46,291 --> 00:09:48,208 ಅವನು ನನ್ನನ್ನು ನಿನ್ನನ್ನು ಭೇಟಿಯಾಗಲು ಬಿಡಲಿಲ್ಲ. 161 00:09:49,833 --> 00:09:53,208 ಇನ್ನು ಒಂದು ನಿಮಿಷ ಕೂಡ ನನ್ನ ತಂಗಿಯಿಂದ ನನ್ನನ್ನ ದೂರವಿಡಲು ಆಗಲ್ಲ ಅಂದೆ. 162 00:09:55,291 --> 00:09:56,583 ಒಂದೋ ನಾನು ಅಥವಾ ಅವನು ಎಂಬಂತಿತ್ತು. 163 00:09:57,833 --> 00:09:59,208 ಅವನು ನನ್ನನ್ನು ಕೊಲ್ಲಲಿದ್ದ. 164 00:10:00,875 --> 00:10:02,416 ನೀನು ಏನು ಮಾಡಬೇಕಾಗಿತ್ತು? 165 00:10:02,666 --> 00:10:05,415 ನೀನು ನಿನ್ನನ್ನು ಕಾಪಾಡಿಕೊಳ್ಳಬೇಕಿತ್ತು. ಇನ್ನೇನು ಮಾಡಲು ಆಗುತ್ತಿತ್ತು? 166 00:10:05,416 --> 00:10:06,790 ಎಲ್ಲವೂ ಸರಿಹೋಗುತ್ತದೆ. 167 00:10:06,791 --> 00:10:08,375 ಎಲ್ಲವೂ ಸರಿಹೋಗದೆ ಇರಬಹುದು. 168 00:10:09,125 --> 00:10:12,540 ಅಂದರೆ, ಆ ಪೋಲೀಸಿನವಳು ನನ್ನನ್ನು ಬಂಧಿಸುವವರೆಗೆ ನಿಲ್ಲುವುದಿಲ್ಲ ಎಂದು 169 00:10:12,541 --> 00:10:14,708 - ನಾನು ಭಾವಿಸುತ್ತೇನೆ. - ಇಲ್ಲ. ಸುಮ್ಮನಿರು. 170 00:10:15,083 --> 00:10:16,790 - ಕ್ಲೋಯಿ. - ಹಾಗೆ ನಡೆಯುವುದಿಲ್ಲ. 171 00:10:16,791 --> 00:10:18,249 ಅದು ನಿನಗೆ ಗೊತ್ತಿಲ್ಲ. 172 00:10:18,250 --> 00:10:19,624 ನಾನು ಹಾಗೆ ಆಗಲು ಬಿಡುವುದಿಲ್ಲ. 173 00:10:19,625 --> 00:10:20,666 ಹೇಳೋದು ಕೇಳಿಸುತ್ತಿದೆಯಾ? 174 00:10:21,000 --> 00:10:22,791 ನಾನು ಹಾಗೆ ಆಗಲು ಬಿಡುವುದಿಲ್ಲ. 175 00:10:28,375 --> 00:10:30,416 - ಈಥನ್ ಬಗ್ಗೆ ಹೇಳು? - ನೀನು ಅವನ ಜೊತೆ ಇಲ್ಲಿದ್ದೀಯ. 176 00:10:30,833 --> 00:10:32,458 ನೀನು ಅವನ ಜೊತೆ ಇಲ್ಲಿ ಇರಲಿದ್ದೀಯ. 177 00:10:34,208 --> 00:10:35,166 ಸರಿನಾ? 178 00:10:36,416 --> 00:10:37,250 ಸರಿ. 179 00:10:38,916 --> 00:10:39,750 ಸರಿ. 180 00:10:40,833 --> 00:10:41,666 ಸರಿ. 181 00:10:43,875 --> 00:10:44,708 ನಾಳೆ... 182 00:10:45,541 --> 00:10:47,291 ನಾಳೆ, ನೀನು ಮತ್ತು ಈಥನ್, 183 00:10:48,750 --> 00:10:50,874 ಎಲ್ಲಿಗಾದರೂ ಹೋಗಿ, ಬೆಟ್ಟ ಹತ್ತಲು ಹೋಗಿ. 184 00:10:50,875 --> 00:10:52,458 ಅವನ ಜೊತೆ ಸಮಯ ಕಳೆ. 185 00:10:53,208 --> 00:10:55,625 ಏಕೆಂದರೆ ನನಗೆ ಗಂಭೀರವಾಗಿ ಯೋಚಿಸಲು ಸಮಯ ಬೇಕು, 186 00:10:57,500 --> 00:10:59,250 ಮುಂದೆ ನಾವೇನು ಮಾಡಲಿದ್ದೇವೆ ಎಂಬುದರ ಬಗ್ಗೆ. 187 00:10:59,750 --> 00:11:00,874 ನನಗೆ ಅರ್ಥವಾಯಿತು. 188 00:11:00,875 --> 00:11:01,958 ಸರಿ. 189 00:11:03,583 --> 00:11:05,000 ನಿನ್ನ ಬಳಿ ಈಗಲೂ ಆ ಚಾಕು ಇದೆಯಾ? 190 00:11:07,791 --> 00:11:08,749 ಹೌದು. 191 00:11:08,750 --> 00:11:10,875 ಸರಿ. ಅದನ್ನು ನನ್ನ ಬಳಿ ಇಟ್ಟುಕೊಳ್ಳಲು ಬಿಡು. 192 00:11:12,041 --> 00:11:13,500 ಮತ್ತು ನನಗೆ ಆ ಗನ್ ಕೂಡ ಬೇಕು. 193 00:11:13,916 --> 00:11:15,083 ಅದು ನಿನ್ನ ಬಳಿ ಇದೆ ಎಂದು ಗೊತ್ತು. 194 00:11:16,625 --> 00:11:18,040 ಅದು ಕಾರಿನಲ್ಲಿದೆ. 195 00:11:18,041 --> 00:11:19,749 ಅದನ್ನಿಟ್ಟುಕೊಂಡು ಏನು ಮಾಡಲು ಹೊರಟಿದ್ದೆ? 196 00:11:19,750 --> 00:11:22,708 ನಾನು ಮಾಡಿದ ತಪ್ಪಿಗೆ ಈಥನ್ ಜೈಲಿಗೆ ಹೋಗಲು ನಾನು ಬಿಡುತ್ತಿರಲಿಲ್ಲ. 197 00:11:24,333 --> 00:11:25,333 ದೇವರೇ, ನಿಕ್ಕಿ. 198 00:11:26,333 --> 00:11:27,500 ನೀವು ಅಲ್ಲಿ ಆರಾಮವಾಗಿದ್ದೀರಾ? 199 00:11:30,791 --> 00:11:31,875 ಹಾಂ. 200 00:11:34,958 --> 00:11:35,791 ಸರಿ. 201 00:11:39,250 --> 00:11:40,583 ಚಿಂತಿಸಬೇಡ, ಎಲ್ಲ ಸರಿಹೋಗುತ್ತೆ. 202 00:11:52,083 --> 00:11:56,208 ಆಡಮ್‌ನ ತಾಯಿ ಡೆಬ್ಬಿ ಮ್ಯಾಕಿಂಟಾಷ್‌ರ ಮೇಲೆ ಸಣ್ಣ ಪುಟ್ಟ ಅಪರಾಧಗಳ ದೊಡ್ಡ ಪಟ್ಟಿಯೇ ಇದೆ. 203 00:11:56,916 --> 00:11:58,165 ಆಕೆಯ ಬಗ್ಗೆ ಏನೋ ಆಕರ್ಷಕ ವಿಷಯವಿದೆ. 204 00:11:58,166 --> 00:12:01,665 ನೀಚ ಅವಕಾಶವಾದಿಯೊಬ್ಬಳು ತನ್ನ ಏಕೈಕ ಮಗನ ಸಾಮಾಜಿಕ ಭದ್ರತಾ ಸಂಖ್ಯೆಯನ್ನು ಬಳಸಿ, 205 00:12:01,666 --> 00:12:03,874 ಹಲವಾರು ಮೋಸದ ಬ್ಯಾಂಕ್ ಖಾತೆಗಳನ್ನು ತೆರೆದಳು. 206 00:12:03,875 --> 00:12:05,124 ಬುದ್ಧಿವಂತೆ ಕೂಡ. 207 00:12:05,125 --> 00:12:06,790 ಬಾಡಿಗೆ ಕಚೇರಿಯವರ ಪ್ರಕಾರ, 208 00:12:06,791 --> 00:12:10,290 ಒಬ್ಬಳು ಹೊಂಬಣ್ಣದ ಕೂದಲಿನ ಹೆಂಗಸು ವಾರಕ್ಕೆ ಒಂದೆರಡು ಸಲ ದಿನಸಿ ಸಾಮಾನುಗಳೊಂದಿಗೆ ಬರುತ್ತಾಳೆ. 209 00:12:10,291 --> 00:12:12,999 - ನಿಕ್ಕಿ ಇಷ್ಟು ವರ್ಷ ನಿಷ್ಠೆಯಿಂದ ಇದ್ದಳೇ? - ಹಾಗೆ ಕಾಣುತ್ತಿದೆ. 210 00:12:13,000 --> 00:12:14,458 ಒಂದೆರಡು ಗಂಟೆಗಳಲ್ಲಿ ವಿಮಾನ ಹತ್ತುವೆನು. 211 00:12:16,541 --> 00:12:18,874 ಡೆಬ್ಬಿಯವರ ಎಲ್ಲಾ ಫೋನ್‌ಗಳು ಸಂಪರ್ಕ ಕಡಿತಗೊಂಡಿವೆ. 212 00:12:18,875 --> 00:12:21,000 - ಲಿಯುಗೆ ಗೊತ್ತಾ? - ಸಮಯ ಬಂದಾಗ ಆತನಿಗೆ ತಿಳಿಯುತ್ತೆ. 213 00:12:23,583 --> 00:12:26,375 - ಏನು? - ಹೋಗಬೇಕಾದ ದಾರಿ ಬಹಳ ದೂರವಿರುವಂತೆ ಕಾಣುತ್ತಿದೆ. 214 00:12:28,333 --> 00:12:30,416 ಆರಂಭಕ್ಕೆ ಹಿಂತಿರುಗುವುದು. ಅದೊಂದೇ ದಾರಿ. 215 00:12:30,791 --> 00:12:33,165 ಆತ ಸಾಯಲಿ ಅಂತ ಎಲ್ಲರೂ ಬಯಸಿದ ವ್ಯಕ್ತಿಯನ್ನು ಹುಟ್ಟುಹಾಕಿದವರು ಯಾರು? 216 00:12:33,166 --> 00:12:35,250 ಅವನು ಅಸಲಿಗೆ ಯಾರು ಎಂದು ನಮಗೆ ತಿಳಿದೇ ಇಲ್ಲ. 217 00:12:35,666 --> 00:12:37,040 ಅವನು ಕೊಲೆಗಾರನಲ್ಲ. 218 00:12:37,041 --> 00:12:40,582 ನಾನು ಫ್ರಾನ್‌ಗೆ ಹೇಳಿ ನಿಕ್ಕಿಳ ಸಿಗರೇಟ್ ಬಟ್‌ನಿಂದ ಅವಳ ಡಿಎನ್‌ಎ ತೆಗೆಸಿಕೊಳ್ಳುತ್ತಿರುವೆ, 219 00:12:40,583 --> 00:12:41,915 ಆ ವ್ಯಸನಿಗಳ ಸಭೆಯಲ್ಲಿ ಸಿಕ್ಕಿದ್ದು. 220 00:12:41,916 --> 00:12:45,625 ಒಹಾಯೋದ ಸ್ಥಳೀಯ ದಾಖಲೆ ಪರಿಶೀಲಿಸುತ್ತಿದ್ದೇವೆ, ಅವಳ ಫೋನ್ ದಾಖಲೆ ತೆಗೆಸುತ್ತಿದ್ದೇವೆ. 221 00:12:46,791 --> 00:12:47,791 ನಿನಗೆ ಏನು ಸಿಕ್ಕಿತು? 222 00:12:48,583 --> 00:12:50,082 ಎಫ್‌ಬಿಐ ಆಡಮ್‌ನ ಮೇಲೆ ಕಣ್ಣಿಟ್ಟಿತ್ತು. 223 00:12:50,083 --> 00:12:52,707 ಅವನು ಅವರ ಜೊತೆ ಕೆಲಸ ಮಾಡುತ್ತಿದ್ದ. ಆಮೇಲೆ ಮಾಡಲ್ಲ ಅಂತ ನಿರ್ಧರಿಸಿದ. 224 00:12:52,708 --> 00:12:55,541 ಆದರೆ ಬಹುಶಃ ಜೆಂಟ್ರಿ ಸಂಸ್ಥೆಯಲ್ಲಿರುವ ಎಲ್ಲರಿಗೂ ಸ್ಪಷ್ಟ ಸಂದೇಶವನ್ನು 225 00:12:55,916 --> 00:12:57,415 ಇನ್ನೂ ಕಳುಹಿಸುತ್ತಿರಬಹುದು. 226 00:12:57,416 --> 00:13:01,000 "ನಮ್ಮ ವಿರುದ್ಧ ಹೋದರೆ, ನಾವು ನಿಮ್ಮ ಮನೆಗೆ ಬಂದು ನಿಮ್ಮನ್ನು ನಡುಮನೆಯಲ್ಲೇ ಸಾಯಿಸುತ್ತೇವೆ." 227 00:13:03,291 --> 00:13:04,583 ಇದನ್ನು ಒಪ್ಪಿಕೊಳ್ಳಲು ನನಗೆ ಇಷ್ಟವಿಲ್ಲ. 228 00:13:05,125 --> 00:13:05,957 ನನಗೆ ಇದು ಇಷ್ಟವಾಯಿತು. 229 00:13:05,958 --> 00:13:06,875 ಹಾಂ. 230 00:13:07,958 --> 00:13:10,874 ನನಗೆ ಈಗ ಎಫ್‌ಬಿಐ ಜೊತೆ ನೇರ ಸಂಪರ್ಕ ಸಿಕ್ಕಿದೆ. 231 00:13:10,875 --> 00:13:13,707 ಆಡಮ್ ಜೊತೆ ಕೈಗೂಡಿಸಿದ್ದ ಏಜೆಂಟ್, ನನ್ನನ್ನು ಆಡಿಸುತ್ತಿದ್ದಾನೆಂದು ಭಾವಿಸುತ್ತಾನೆ. 232 00:13:13,708 --> 00:13:15,125 ಈತ ಅರ್ಧಂಬರ್ಧ ಮೋಸಗಾರ. 233 00:13:15,791 --> 00:13:16,708 ಲಿಯುಗೆ ಗೊತ್ತಾ? 234 00:13:17,916 --> 00:13:19,416 ಸಮಯ ಬಂದಾಗ ಆತನಿಗೆ ತಿಳಿಯುತ್ತೆ. 235 00:13:21,708 --> 00:13:23,416 ಹಾಗಾದರೆ ಅದನ್ನೇ ನೀನು ಮುಚ್ಚಿಟ್ಟಿದ್ದಿದ್ದು. 236 00:13:24,791 --> 00:13:25,625 ಅಂದರೆ... 237 00:13:26,583 --> 00:13:28,666 ಒಂದು ನಿಮಿಷ ಅಲ್ಲಿ ಸ್ವಲ್ಪ ಆತಂಕವಾಯಿತು. 238 00:13:29,333 --> 00:13:31,833 ನನ್ನ ಕೋಪದಿಂದ ನಿನ್ನ ಗೌರವಕ್ಕೆ ಧಕ್ಕೆ ಬರಬಹುದೆಂದು. 239 00:13:33,166 --> 00:13:35,208 ಸರಿ, ನಿನ್ನನ್ನು ಹೆಮ್ಮೆಪಡಿಸಲು ಪ್ರಯತ್ನ ಮಾಡುತ್ತೇನೆ. 240 00:13:40,166 --> 00:13:41,458 - ಹೇ. - ಹಾಯ್. 241 00:13:45,375 --> 00:13:46,291 ಸರಿ. 242 00:13:46,750 --> 00:13:47,666 ಸರಿ. 243 00:13:48,500 --> 00:13:49,416 ಧನ್ಯವಾದ. 244 00:13:50,000 --> 00:13:53,165 - ಬಗ್ ಸ್ಪ್ರೇ, ಸಾನಿಟೈಸರ್, ಸನ್ಸ್ಕ್ರೀನ್, ನೀರು. - ಹಾಂ, ಹಾಂ. 245 00:13:53,166 --> 00:13:54,415 ಸರಿ. ನನಗೆ ತಿಳಿಯಿತು. 246 00:13:54,416 --> 00:13:55,333 ತುಂಬಾ ಒಳ್ಳೆಯದು. 247 00:14:00,583 --> 00:14:01,749 ನಿಮ್ಮ ದಿನ ಚೆನ್ನಾಗಿರಲಿ. 248 00:14:01,750 --> 00:14:03,333 ಆದರೆ ನಿನ್ನ ಫೋನನ್ನು ಹತ್ತಿರವೇ ಇಟ್ಟುಕೋ. 249 00:14:03,916 --> 00:14:05,999 ಸೌಂಡ್ ಮತ್ತು ವೈಬ್ರೇಟ್. ಎರಡೂ ಇರಲಿ. 250 00:14:06,000 --> 00:14:07,082 ಅದನ್ನು ಚಾಲೂನಲ್ಲೇ ಇಟ್ಟಿರು. 251 00:14:07,083 --> 00:14:08,000 ನನಗೆ ಅರ್ಥವಾಯಿತು. 252 00:14:08,625 --> 00:14:09,540 ಸಿದ್ಧನಾದೆ. 253 00:14:09,541 --> 00:14:11,832 ರಾತ್ರಿ ಊಟಕ್ಕೆ ಏನಾದರೂ ವಿಶೇಷ ಅಡುಗೆ ಮಾಡುತ್ತೇನೆ. 254 00:14:11,833 --> 00:14:13,083 - ಅದ್ಬುತ. - ಹೌದು. 255 00:14:13,583 --> 00:14:16,832 ಹೇ. ಹತ್ತಿರದಲ್ಲೇ ಇರು. ನಾನು ಹೇಳಿದ ತಕ್ಷಣ, ನೀನು ಅಲ್ಲಿಗೆ ಹೋಗಬೇಕು. 256 00:14:16,833 --> 00:14:18,582 - ನಾನು ಅಲ್ಲಿಗೆ ಹೋಗುತ್ತೇನೆ. - ಸರಿ. 257 00:14:18,583 --> 00:14:20,375 - ಬಾಯ್. - ನಿಮ್ಮಿಬ್ಬರನ್ನೂ ಪ್ರೀತಿಸುತ್ತೇನೆ. 258 00:14:32,458 --> 00:14:33,415 ಹಾಯ್. 259 00:14:33,416 --> 00:14:36,749 ಪುಸ್ತಕ ಒಪ್ಪಂದಕ್ಕಾಗಿ ಬಹಳ ದೊಡ್ಡ ಮೊತ್ತದ ಬಗ್ಗೆ ಚರ್ಚಿಸಲಾಗುತ್ತಿದೆ. 260 00:14:36,750 --> 00:14:39,957 ನಮ್ಮ ಉನ್ನತ ಶ್ರೇಣಿಯ ಮುದ್ರಣವು ಬೃಹತ್ ಮೊದಲ ಆವೃತ್ತಿಯೊಂದಿಗೆ ಬಿಡುಗಡೆಯಾಗಲಿದೆ. 261 00:14:39,958 --> 00:14:41,332 ಅದ್ಭುತವಾದ ವಿಷಯ. 262 00:14:41,333 --> 00:14:43,083 ಕಡಿಮೆ ಅಂದರೂ ಏಳು ಅಂಕಿಗಳಷ್ಟು ಇರುತ್ತೆ. 263 00:14:44,541 --> 00:14:47,041 ನೀನು ಜೊತೆಗೂಡಿ ಮಾಡಿದರೆ ಇನ್ನೂ ಜಾಸ್ತಿ ಸಿಗುತ್ತೆ. 264 00:14:47,708 --> 00:14:50,208 ನಿನಗೆ ನಿಕ್ಕಿ ಜೊತೆ ಆ ಬಗ್ಗೆ ಮಾತಾಡುವ ಅವಕಾಶ ಸಿಕ್ಕಿತೇ? 265 00:14:51,625 --> 00:14:56,165 ಹಾಂ, ಇಲ್ಲ. ಆ ನಿರ್ದಿಷ್ಟ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ಸಿಕ್ಕಿಲ್ಲ. ಇಲ್ಲ. 266 00:14:56,166 --> 00:14:59,124 ಹಾಗಾದರೆ ದಯವಿಟ್ಟು ಸಮಯ ಮಾಡಿಕೋ. 267 00:14:59,125 --> 00:15:00,290 ಮತ್ತು ಬಿಲ್‌ಗಾಗಿಯೂ ಕೂಡ. 268 00:15:00,291 --> 00:15:01,541 ಈಗಾಗಲೇ ಅವನ ಜೊತೆ ಮಾತಾಡಿದೆ. 269 00:15:01,958 --> 00:15:03,666 ನೀನು ಬಿಲ್ ಜೊತೆ ಇದನ್ನು ಸರಿಪಡಿಸಿಕೊಳ್ಳಬೇಕು. 270 00:15:04,125 --> 00:15:06,665 ಇಲ್ಲದಿದ್ದರೆ, ಇದೆಲ್ಲವೂ ವ್ಯರ್ಥ. 271 00:15:06,666 --> 00:15:09,499 ಅಂದರೆ ನೀವು ಅವನ ಕಡೆ ಇದ್ದೀರ ಮತ್ತು ನಿಮಗೆ ನಾನು ಆಡಮ್‌ಗೆ ಏನಾಯಿತೆಂದು 272 00:15:09,500 --> 00:15:10,749 ತಿಳಿದುಕೊಳ್ಳುವುದು ಇಷ್ಟವಿಲ್ಲ. 273 00:15:10,750 --> 00:15:13,915 ಆದರೆ ನೀವು ಯಾವುದೋ ಕಥೆಯನ್ನು ಮಾರಾಟ ಮಾಡಲು ಬಹಳ ಉತ್ಸುಕರಾಗಿದ್ದೀರ. 274 00:15:13,916 --> 00:15:18,250 ಅಂದರೆ ನಾವು ಇತರರನ್ನು ನಮ್ಮ ಷರತ್ತುಗಳ ಮೇರೆಗೆ ಮಾತ್ರ ಆಹ್ವಾನಿಸುತ್ತೇವೆ. 275 00:15:18,750 --> 00:15:21,374 ಕೌಟುಂಬಿಕ ವಿಚಾರಗಳು ಕುಟುಂಬದ ಒಳಗೇ ಇರಬೇಕು. 276 00:15:21,375 --> 00:15:24,790 ಮತ್ತು ನನ್ನ ಗಂಡನ ಕೊಲೆಯು ಕೌಟುಂಬಿಕ ವಿಷಯವಲ್ಲವೇ? 277 00:15:24,791 --> 00:15:28,458 ಅದು ಇತ್ತೀಚೆಗೆ ನೀನು ಕುಟುಂಬವೆಂದರೆ ಏನೆಂದು ತಿಳಿದುಕೊಂಡಿದ್ದೀಯ ಎಂಬುದರ ಮೇಲೆ ಅವಲಂಬಿಸುತ್ತೆ. 278 00:15:28,958 --> 00:15:31,791 ಮತ್ತು ಆ ಬೋಳಿಮಗ ಯಾರಿಗೂ ಕುಟುಂಬದವನಾಗಿರಲಿಲ್ಲ. 279 00:15:32,500 --> 00:15:34,291 ನಿಕೋಲ್ ಜೊತೆ ಅದರ ಬಗ್ಗೆ ಮಾತಾಡು. 280 00:15:34,708 --> 00:15:36,166 ಅವಳಿಗಾಗಿ ಒಂದು ಸಂಪೂರ್ಣ ಹೊಸ ಜೀವನ. 281 00:15:38,541 --> 00:15:40,250 ಅಯ್ಯೋ, ದೇವರೇ, ಛೇ. 282 00:15:59,375 --> 00:16:00,457 - ಹಾಯ್. - ಹಾಯ್. 283 00:16:00,458 --> 00:16:01,541 ಏನು ನಡೆಯುತ್ತಿದೆ? 284 00:16:04,083 --> 00:16:05,125 ಬಿಲ್ ನನ್ನನ್ನು ವಜಾ ಮಾಡಿದ. 285 00:16:05,958 --> 00:16:07,750 - ಆ ಬೋಳಿಮಗ. - ಹೌದು. 286 00:16:08,083 --> 00:16:11,040 ನಮ್ಮಿಬ್ಬರಿಗೂ ಪರಿಚಯವಿದ್ದ ಗೆಳೆಯ ಏಜೆಂಟ್ ಒಲಿವೆರೋನಿಂದ ಇನ್ನೊಂದು ಕಡೆಯಿಂದ ಮೋಸ ಹೋದೆ. 287 00:16:11,041 --> 00:16:12,041 ಇರು, ಇರು. 288 00:16:13,083 --> 00:16:14,333 ನಿನಗೆ ಅವನು ಹೇಗೆ ಗೊತ್ತು? 289 00:16:15,416 --> 00:16:17,916 ಆಡಮ್ ಸತ್ತಾಗಿನಿಂದ ಅವನು ನನಗೆ ಬೆದರಿಕೆ ಒಡ್ಡುತ್ತಿದ್ದಾನೆ. 290 00:16:18,500 --> 00:16:19,540 ಅವನು... 291 00:16:19,541 --> 00:16:22,500 ಜೆಂಟ್ರಿ ಗ್ರೂಪ್ ಜೊತೆಗಿನ ನನ್ನ ಸಂಬಂಧವನ್ನು ನನ್ನ ವಿರುದ್ಧ ಬಳಸುವುದಾಗಿ ಹೇಳಿದ. 292 00:16:22,958 --> 00:16:24,665 ನನ್ನನ್ನ ಅವರ ಜೊತೆ ಸೇರುವಂತೆ ಒತ್ತಾಯಿಸ್ತಿದ್ದಾನೆ. 293 00:16:24,666 --> 00:16:27,082 ಅವರು ಸ್ವಲ್ಪ ಮಟ್ಟಿಗೆ ಒಳ್ಳೆಯವರು ಅಂದುಕೊಂಡಿದ್ದೆ. 294 00:16:27,083 --> 00:16:29,582 ಕೊನೆಗೆ ಗೊತ್ತಾಗಿದ್ದು, ಇಲ್ಲ, ಅವರು ಇನ್ನೂ ಕೆಟ್ಟವರು. 295 00:16:29,583 --> 00:16:31,541 ಮತ್ತು ಅವರಿಗೆ ಬೇಕಿರುವುದನ್ನು ನಾನು ಕೊಡಲಾಗುತ್ತಿಲ್ಲ. 296 00:16:34,500 --> 00:16:35,332 ಸರಿ. 297 00:16:35,333 --> 00:16:37,083 ಸರಿ, ನಾನು ನಿನಗೆ ಹೇಗೆ ಸಹಾಯ ಮಾಡಬಹುದು? 298 00:16:38,958 --> 00:16:42,083 ಎಫ್‌ಬಿಐಗೆ ಆಡಮ್ ಹತ್ತಿರ ಜೆಂಟ್ರಿ ಬಗ್ಗೆ ಏನಿತ್ತೋ ಅದು ಬೇಕು. 299 00:16:44,791 --> 00:16:45,958 ಆಡಮ್ ಹತ್ತಿರ ಏನಿತ್ತು? 300 00:16:46,833 --> 00:16:47,999 ಸಾಕ್ಷಿ. 301 00:16:48,000 --> 00:16:51,250 ಅವರು ಒಂದು ಯೋಜನೆಯನ್ನು ಅಷ್ಟು ಬೇಗ ಮತ್ತು ಕಡಿಮೆ ಖರ್ಚಲ್ಲಿ ಹೇಗೆ ಕಟ್ಟಬಹುದು ಎಂದು. 302 00:16:52,375 --> 00:16:54,125 ಏನು ಮಾತಾಡುತ್ತಿದ್ದೀಯೋ ನನಗೆ ಅರ್ಥವಾಗುತ್ತಿಲ್ಲ. 303 00:16:55,791 --> 00:16:56,625 ಕ್ಲೋಯಿ. 304 00:16:57,166 --> 00:16:59,665 ನೀನು ಒಂದೆರಡು ತಿಂಗಳಲ್ಲಿ ಕ್ರೀಡಾಂಗಣವನ್ನು ನಿರ್ಮಿಸಬಹುದು, 305 00:16:59,666 --> 00:17:04,416 ನಿನಗೆ ಅನಿಯಮಿತ ಕಾರ್ಮಿಕರು ಮತ್ತು ಯಾವುದೇ ನಿಯಮಗಳು ಇಲ್ಲದಿದ್ದರೆ. 306 00:17:05,083 --> 00:17:07,457 ಒಬ್ಬ ಕೆಲಸಗಾರ ಒಂದು ದಿನ ಕೆಲಸದಲ್ಲಿ ಸತ್ತರೆ, 307 00:17:07,458 --> 00:17:09,915 ಮರುದಿನ ಅವನ ಜಾಗಕ್ಕೆ ಹತ್ತು ಜನ ಸಿದ್ಧರಿರುತ್ತಾರೆ. 308 00:17:09,916 --> 00:17:11,999 ಅವರು ಏನು ಮಾಡುತ್ತಿದ್ದಾರೆಂದು ಸುಳ್ಳು ಹೇಳಿದರೂ ಸಹ, 309 00:17:12,000 --> 00:17:14,583 ಅವರು ಅಲ್ಲಿಗೆ ಹೋದಾಗ ಅವರ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಳ್ಳುತ್ತಾರೆ. 310 00:17:18,625 --> 00:17:19,583 ಓಹ್, ದೇವರೇ. 311 00:17:20,541 --> 00:17:22,041 ಅದು ಮಾನವ ಕಳ್ಳಸಾಗಣೆ. 312 00:17:22,708 --> 00:17:24,291 ಅದು ಸಾಲಕ್ಕೆ ಸಿಲುಕಿದ ಕೂಲಿ ಕೆಲಸ. 313 00:17:25,041 --> 00:17:26,416 ಇದು ಉದ್ದೇಶಪೂರ್ವಕವಲ್ಲದ ಕೊಲೆ. 314 00:17:27,000 --> 00:17:28,000 ಓಹ್, ದೇವರೇ. 315 00:17:29,541 --> 00:17:31,290 ಅದು ನಿಜಕ್ಕೂ ಭಯಾನಕವಾಗಿದೆ. 316 00:17:31,291 --> 00:17:32,332 ಬ್ರಾಡಾಕ್ ಅಂಡ್ ಬ್ರಾಡಾಕ್ 317 00:17:32,333 --> 00:17:35,625 ಸಂಸ್ಥೆಯು ಆ ನೀಚರಿಗೆ ತಮ್ಮ ಹಿಡುವಳಿ ರಚನೆಗಳನ್ನು ಬೆಳೆಸಲು ಸಹಾಯ ಮಾಡಿದರು. 318 00:17:36,291 --> 00:17:38,249 ನಮ್ಮಲ್ಲಿ ಹೆಚ್ಚಿನವರಿಗೆ ಅದರ ಅಸಲಿ ಕಷ್ಟ ಗೊತ್ತಿರಲಿಲ್ಲ. 319 00:17:38,250 --> 00:17:40,083 ಸಂಸ್ಥೆಯ ಒಳಗಿದ್ದವರು, ಬಿಲ್... 320 00:17:41,458 --> 00:17:42,541 ಕಡೆಗೆ, ಆಡಮ್‌ಗೂ... 321 00:17:43,791 --> 00:17:44,666 ಅವರಿಗೆ ತಿಳಿದಿತ್ತು. 322 00:17:45,625 --> 00:17:48,415 ನೋಡು, ಎಫ್‌ಬಿಐನವರ ಪ್ರಕರಣ ಮುಗಿದಿದೆ, ಆದರೆ ಜೆಂಟ್ರಿ ಬುದ್ಧಿವಂತರು. 323 00:17:48,416 --> 00:17:51,291 ಅವರ ಕೆಟ್ಟ ಹಿಡುವಳಿಗಳನ್ನು ಇತರ ಪಾಲುದಾರರಿಗೆ ಹೊರಗುತ್ತಿಗೆ ನೀಡಲಾಯಿತು... 324 00:17:51,958 --> 00:17:52,791 ಬಿಲ್‌ನಂಥವರಿಗೆ. 325 00:17:53,458 --> 00:17:57,249 ಮತ್ತು ಅವರಲ್ಲಿ ಹೆಚ್ಚಿನವರು, ಬಿಲ್‌ನಂತೆ ಹಣಕ್ಕೆ ಮಾರಾಟವಾಗಲು ಖುಷಿಪಡುತ್ತಾರೆ. 326 00:17:57,250 --> 00:18:01,165 ಮತ್ತು ಎಫ್‌ಬಿಐ ಜೊತೆ ಕೆಲಸ ಮಾಡಲು ಸಿದ್ಧರಿದ್ದ ಕೆಲವೇ ಕೆಲವರಲ್ಲಿ ಆಡಮ್ ಒಬ್ಬನೇ? 327 00:18:01,166 --> 00:18:04,125 ನನಗೆ ಗೊತ್ತಿಲ್ಲ. ಅವನ ವಿವೇಚನೆಯು ಅವನ ದುರಾಸೆಯನ್ನು ಮೀರಿಸಿತೆಂದು ಭಾವಿಸುವೆ. 328 00:18:04,750 --> 00:18:08,583 ಆದರೆ ಆಡಮ್‌ಗೆ ನನಗೆ ಸಿಗದಿದ್ದ ವಿಷಯಗಳು ಲಭ್ಯವಿದ್ದವು. 329 00:18:09,166 --> 00:18:11,499 ಸರಿ, ಆದರೆ ಅವರಿಗೆ ಸಂಬಂಧಿಸಿದ ಅವನ ಕಡತಗಳಲ್ಲಿ ಏನೂ ಇರಲಿಲ್ಲ. 330 00:18:11,500 --> 00:18:13,750 ಅವನ ಕಂಪ್ಯೂಟರ್‌ನಲ್ಲಿದ್ದದ್ದೆಲ್ಲಾ ಆಗಲೇ ಅಳಿಸಿಹಾಕಲಾಗಿತ್ತು. 331 00:18:14,166 --> 00:18:15,874 ಇಲ್ಲ, ಆದರೆ ಅವನು ಜಾಗರೂಕನಾಗಿದ್ದ. 332 00:18:15,875 --> 00:18:18,583 ಅವನು ಎಲ್ಲದಕ್ಕೂ ಒಂದು ದಾಖಲೆ ಇಟ್ಟಿರುತ್ತಿದ್ದ. 333 00:18:18,958 --> 00:18:20,165 ಅವನು ದಾಖಲೆಗಳನ್ನು ಇಟ್ಟಿದ್ದ. 334 00:18:20,166 --> 00:18:21,874 ಜೆಂಟ್ರಿಯ ಎಲ್ಲದರ ಬಗ್ಗೆಯೂ ಅವನ ಬಳಿ ದಾಖಲೆಗಳಿದ್ದವು. 335 00:18:21,875 --> 00:18:23,415 - ಸರಿ. - ಅದು ಅವನ ಖಚಿತತೆ ಆಗಿತ್ತು. 336 00:18:23,416 --> 00:18:25,666 ಅವುಗಳನ್ನು ಮುದ್ರಿಸಿ, ಆ ಹಳೇ ಬ್ರೀಫ್‌ಕೇಸ್‌ನಲ್ಲಿ ಇಡುತ್ತಿದ್ದ. 337 00:18:25,958 --> 00:18:28,875 ಇಲ್ಲ, ಅಲ್ಲಿ ಯಾವುದೇ ಕಡತಗಳು ಇರಲಿಲ್ಲ. ಬರೀ ಒಂದು ಬಂದೂಕು ಇತ್ತು. 338 00:18:31,958 --> 00:18:34,625 ಅವನು ಕೊಲೆಯಾದ ರಾತ್ರಿ ಅವನು ಹೊತ್ತೊಯ್ದಿದ್ದ ಅದೇ ಬಂದೂಕು. 339 00:18:37,916 --> 00:18:39,041 ನೋಡು, ಕ್ಲೋಯಿ. 340 00:18:39,833 --> 00:18:42,000 ಒಲಿವೆರೋ, ಅವನು... 341 00:18:42,375 --> 00:18:44,166 ನನ್ನನ್ನು ವಕೀಲ ವೃತ್ತಿಯಿಂದ ತೆಗೆಸಿಹಾಕುತ್ತಾನೆ ಅಥವಾ, 342 00:18:44,666 --> 00:18:46,000 ನನಗೆ ಗೊತ್ತಿಲ್ಲ, ಬಹುಶಃ ಸಾಯಿಸಬಹುದು. 343 00:18:46,458 --> 00:18:47,750 ಅವನು ನನ್ನ ಮನೆಗೆ ಬರುತ್ತಾನೆ. 344 00:18:49,000 --> 00:18:50,500 ನನಗೆ ಇಲ್ಲಿ ಬಹಳ ಭಯವಾಗುತ್ತಿದೆ, ಕ್ಲೋ. 345 00:18:51,041 --> 00:18:54,374 ನಾನು ನನ್ನ ಜಾಗದಲ್ಲಿ ಕ್ಯಾಮೆರಾಗಳನ್ನು ಹಾಕಿಸಿ, ಅವುಗಳನ್ನು ನಕಲಿ ಬಂಡೆಗಳೊಳಗೆ ಇಟ್ಟೆ. 346 00:18:54,375 --> 00:18:55,499 ಛೇ. 347 00:18:55,500 --> 00:18:59,874 ಆದರೆ ಜೆಂಟ್ರಿಗೆ ನಾನು ಮತ್ತು ಆಡಮ್ ಎಫ್‌ಬಿಐ ಜೊತೆ ಕೆಲಸ ಮಾಡುತ್ತಿದ್ದೇವೆಂದು ಗೊತ್ತಾದರೆ, 348 00:18:59,875 --> 00:19:02,499 ಈ ಬೋಳಿಮಗನ ಪ್ರಕರಣಕ್ಕೆ ನೆರವಾಗಲು ನನಗೆ ಇಷ್ಟವಿಲ್ಲದಿದ್ದರೂ, 349 00:19:02,500 --> 00:19:04,166 ಅವರು ಕಾರ್ಯನಿರ್ವಹಿಸುತ್ತಿರುವವರೆಗೆ... 350 00:19:06,875 --> 00:19:08,333 ನಮ್ಮಿಬ್ಬರಿಗೂ ಅಪಾಯವಿದೆ. 351 00:19:13,125 --> 00:19:13,958 ಸರಿ. 352 00:19:20,208 --> 00:19:23,290 ಎಫ್‌ಬಿಐ ಕ್ವೀನ್ಸ್ ಕೌಂಟಿ ಕ್ಷೇತ್ರ ಕಚೇರಿ, ನಾಗರಿಕ ದೂರುಗಳ ಇಲಾಖೆ. 353 00:19:23,291 --> 00:19:25,332 ಎಲ್ಲಾ ಕರೆಗಳು ಕಟ್ಟುನಿಟ್ಟಾಗಿ ಗೌಪ್ಯವಾಗಿರುತ್ತವೆ. 354 00:19:25,333 --> 00:19:26,250 ಹಾಂ... 355 00:19:26,750 --> 00:19:31,540 ನಾನು ವಿಶೇಷ ಏಜೆಂಟ್ ಎಡ್ವರ್ಡ್ ಒಲಿವೆರೋ ಬಗ್ಗೆ ಅನಾಮಧೇಯ ದೂರು ದಾಖಲಿಸಲು ಬಯಸುತ್ತೇನೆ. 356 00:19:31,541 --> 00:19:33,250 ಸರಿಯಾದ ಜಾಗಕ್ಕೆ ಕರೆ ಮಾಡಿದ್ದೇನಾ? 357 00:19:33,583 --> 00:19:35,000 ಹೌದು, ನಾನು ಕೇಳಿಸಿಕೊಳ್ಳುತ್ತಿದ್ದೇನೆ. 358 00:19:36,916 --> 00:19:42,082 ಏಜೆಂಟ್ ಒಲಿವೆರೋ ದೈಹಿಕವಾಗಿ ಆಕ್ರಮಣಕಾರಿ ಹಾಗೂ ಲೈಂಗಿಕವಾಗಿ ಅನುಚಿತವಾಗಿ ನನ್ನ ಜೊತೆ ವರ್ತಿಸಿದ. 359 00:19:42,083 --> 00:19:44,582 ನಾವು ಒಂದು ಕೇಸ್ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಭೇಟಿಯಾದೆವು, 360 00:19:44,583 --> 00:19:46,458 ಮತ್ತು ಅವನು ಹುಚ್ಚಾಬಟ್ಟೆಯಾಗಿ ಮತ್ತು... 361 00:19:47,166 --> 00:19:48,125 ನಿಂದನೀಯವಾಗಿ ವರ್ತಿಸಿದ. 362 00:19:48,958 --> 00:19:51,082 ನಾವು ಈ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. 363 00:19:51,083 --> 00:19:52,582 ನಮ್ಮನ್ನು ಸಂಪರ್ಕಿಸಿದ್ದಕ್ಕಾಗಿ ಧನ್ಯವಾದ. 364 00:19:52,583 --> 00:19:53,541 ಧನ್ಯವಾದ. 365 00:19:58,916 --> 00:20:00,041 ಮಿಶೆಲ್ ಸ್ಯಾಂಡರ್ಸ್‌ಗೆ ಕರೆ ಮಾಡು. 366 00:20:04,958 --> 00:20:05,832 ಹಲೋ, ಕ್ಲೋಯಿ. 367 00:20:05,833 --> 00:20:06,875 ಮಿಶೆಲ್. 368 00:20:07,375 --> 00:20:09,000 ಜೇಕ್ ಇಂದು ನನ್ನ ಮನೆಗೆ ಬಂದು ಹೋದ. 369 00:20:10,750 --> 00:20:14,166 - ಸರಿ. - ಅವನು ಬಹಳ ಹೆದರಿದಂತೆ ಕಾಣುತ್ತಿದ್ದ. 370 00:20:14,666 --> 00:20:16,790 ಅವನಿಗೆ ಏನಾಗಬಹುದು ಎಂಬ ಭಯವೂ ಇತ್ತು. 371 00:20:16,791 --> 00:20:18,374 ಆ ದಾಖಲೆಗಳನ್ನು ಹುಡುಕಲು ಅವನಿಗೆ ನೆರವಾಗುವೆ. 372 00:20:18,375 --> 00:20:20,250 ಈ ಜನ ಅವನಿಗೆ ತೊಂದರೆ ಕೊಡದಂತಿರಲು ಏನಾದರೂ ಮಾಡಬೇಕು. 373 00:20:20,750 --> 00:20:21,666 ಯಾರು ಆ ಜನ? 374 00:20:24,500 --> 00:20:27,749 ಜೇಕ್ ಕೂಡ ಆಡಮ್ ಕೈಗೂಡಿಸಿದ್ದ ಅದೇ ಎಫ್‌ಬಿಐ ಏಜೆಂಟ್ ಜೊತೆ ಕೈಗೂಡಿಸಿದ್ದ. 375 00:20:27,750 --> 00:20:29,166 ಜೆಂಟ್ರಿ ಗ್ರೂಪ್ ಬಗ್ಗೆ ಮಾಹಿತಿ ನೀಡುವುದು. 376 00:20:29,666 --> 00:20:30,749 ಥತ್. 377 00:20:30,750 --> 00:20:34,540 ಕ್ಲೋಯಿ, ನೀವಾಗಲೀ ಜೇಕ್ ಆಗಲೀ ಇಬ್ಬರೂ ನನ್ನ ಕಕ್ಷಿದಾರರಲ್ಲ. 378 00:20:34,541 --> 00:20:37,790 ಹಾಗಾಗಿ, ನೀವು ನನಗೆ ಏನು ಹೇಳುತ್ತಿದ್ದೀರೋ, ಅದನ್ನು ನನಗೆ ಹೇಳಬಾರದು. 379 00:20:37,791 --> 00:20:40,208 ನೀವು ಅವನನ್ನು ಗೆಳೆಯನೆಂದು ಪರಿಗಣಿಸಿದ್ದೀರ ಅಂದುಕೊಂಡೆ. 380 00:20:41,250 --> 00:20:42,166 ಹೌದು, ಪರಿಗಣಿಸುತ್ತೇನೆ. 381 00:20:43,000 --> 00:20:45,000 ಹಾಗಾಗಿ ಅವನಿಂದ ದೂರ ಇರಿ. 382 00:20:55,791 --> 00:20:57,708 ಈ ಸ್ಥಳದ ಬಗ್ಗೆ ಒಬ್ಬರು ಸ್ನೇಹಿತರು ನನಗೆ ಹೇಳಿದರು. 383 00:20:58,166 --> 00:21:01,541 ನೀರು ಒಳಗೆ ಬಂದಾಗ, ಮಾರ್ಗವು ಕಣ್ಮರೆಯಾಗುತ್ತದೆ. 384 00:21:03,791 --> 00:21:07,583 ಹಾಗಾದರೆ ನ್ಯಾಯಾಲಯದಲ್ಲಿದ್ದ ಆ ಎತ್ತರದ, ಅಂದವಾಗಿದ್ದವಳು ಯಾರು? 385 00:21:11,000 --> 00:21:12,166 ನಾನು ಅದನ್ನು ಕಂಡುಹಿಡಿದುಬಿಟ್ಟೆ. 386 00:21:12,958 --> 00:21:13,791 ಹೌದು. 387 00:21:14,375 --> 00:21:16,125 ನಾವು ಪರಸ್ಪರ ಸಂದೇಶ ಕಳುಹಿಸುತ್ತಿದ್ದೆವು. 388 00:21:16,666 --> 00:21:17,916 ಮತ್ತು ಅವಳು... 389 00:21:19,041 --> 00:21:21,499 ಬಹುಶಃ ಇವತ್ತು ರೈಲಿನಲ್ಲಿ ಬರುವ ಬಗ್ಗೆ ಯೋಚಿಸುತ್ತಿದ್ದಳು. 390 00:21:21,500 --> 00:21:23,915 - ಇವತ್ತು, ನಿಜವಾಗಲೂ? - ಹೌದು, ಅವಳ ಹೆಸರು ಹೆಲೆನ್. 391 00:21:23,916 --> 00:21:25,124 ಹೆಲೆನ್. 392 00:21:25,125 --> 00:21:27,416 ನಿನ್ನ ಬಳಿ ಅವಳನ್ನು ಕರೆತರಲು ಕಾರ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. 393 00:21:29,208 --> 00:21:31,458 ನಿಜವೇನೆಂದರೆ, ಅದಕ್ಕೆಲ್ಲಾ ಸಿದ್ಧನಿದ್ದೀನೋ ಇಲ್ವೋ ಗೊತ್ತಿಲ್ಲ. 394 00:21:36,500 --> 00:21:38,375 ನಿನ್ನೆ ರಾತ್ರಿ ತಲೆಗೆ ತುಂಬಿಕೊಳ್ಳಲು ಬಹಳ ಇತ್ತು. 395 00:21:39,000 --> 00:21:41,500 ಇಲ್ಲ ಎಂದು ಸುಳ್ಳು ಹೇಳಲು ಯಾರೂ ನಿನಗೆ ಹೇಳುತ್ತಿಲ್ಲ, ಸರಿನಾ? 396 00:21:42,291 --> 00:21:43,125 ಹಾಂ. 397 00:21:44,625 --> 00:21:46,833 ನನಗೆ ಇಡೀ ದಿನ ಹೊಟ್ಟೆ ನೋವು ಇತ್ತು. 398 00:21:48,250 --> 00:21:49,875 ನನಗೆ... ನನಗೆ ಅಮ್ಮನ ಮೇಲೆ ಕೋಪ ಇದೆ. 399 00:21:51,083 --> 00:21:53,541 ಅದು ನನಗೆ ಈಗ ಅರಿವಾಯಿತು ಅಷ್ಟೇ. 400 00:21:56,291 --> 00:21:58,791 ಆಕೆ ನಿಮ್ಮನ್ನು ಬಿಟ್ಟು ಆತನನ್ನು ಆರಿಸಿಕೊಂಡಳು. 401 00:21:59,208 --> 00:22:00,290 ಅದು ಸರಿ ಇಲ್ಲ. 402 00:22:00,291 --> 00:22:04,165 ಕಂದ, ಆಕೆ ನಿನಗೆ ಒಳ್ಳೆಯದೇ ಮಾಡುತ್ತಿದ್ದಳೆಂದು ಅಂದುಕೊಂಡಿದ್ದಳು ಎಂದು ನಿಜಕ್ಕೂ ಭಾವಿಸುತ್ತೇನೆ. 403 00:22:04,166 --> 00:22:05,583 ನನಗೋ ಅಥವಾ ಆಕೆಗೋ? 404 00:22:08,291 --> 00:22:10,041 ಪೂರ್ತಿ ಅವಸ್ಥೆಗಾಗಿದೆ. 405 00:22:15,583 --> 00:22:17,333 ನೀವು ಇಲ್ಲಿಯೇ ಉಳಿಯಲಿದ್ದೀರಾ? 406 00:22:18,208 --> 00:22:19,791 ನಿಮಗೊಬ್ಬ ಗೆಳೆಯ ಸಿಕ್ಕಿರೋದನ್ನ ನೋಡಿದರೆ. 407 00:22:20,208 --> 00:22:21,250 ಇನ್ನೂ ಖಚಿತವಿಲ್ಲ. 408 00:22:23,583 --> 00:22:26,499 ನೀವು ಓಹಾಯೋದಲ್ಲಿ ಇಡೀ ಜೀವನ ಕಳೆದಿದ್ದೀರೆಂದು ಗೊತ್ತು. 409 00:22:26,500 --> 00:22:29,708 ಅದು ಜೀವನವಾಗಿರಲಿಲ್ಲ, ಅರ್ಥವಾಯಿತಾ? 410 00:22:31,583 --> 00:22:35,791 ನಿನ್ನ ಜೊತೆ ಇಲ್ಲಿರಬೇಕೆಂದು ನನಗೆ ಅನಿಸದ ದಿನವೇ ಇಲ್ಲ. 411 00:22:40,125 --> 00:22:41,333 ಅದು ಈಗಲೂ ನಿಜ. 412 00:22:44,666 --> 00:22:45,541 ಸರಿ. 413 00:22:49,291 --> 00:22:50,415 ನಾನು... 414 00:22:50,416 --> 00:22:51,916 ಅದು ಯಾವಾಗಲೂ ನಮ್ಮ ಕೈಯಲ್ಲಿರುವುದಿಲ್ಲ. 415 00:22:53,375 --> 00:22:54,375 ಹೌದು. 416 00:23:01,250 --> 00:23:02,791 ಓಹ್, ಹಲೋ. 417 00:23:03,791 --> 00:23:05,749 ನೀನು ನನ್ನ ಸಲಹೆಯಂತೆ ಮಾಡಿದ್ದಕ್ಕೆ ಖುಷಿಯಾಯಿತು. 418 00:23:05,750 --> 00:23:07,250 ನೀನು ಮೀನು ಹಿಡಿಯೋದು ನನಗೆ ಗೊತ್ತಿರಲಿಲ್ಲ. 419 00:23:07,833 --> 00:23:08,832 ಹೌದು. 420 00:23:08,833 --> 00:23:12,541 ಅಷ್ಟೇನೂ ಪ್ರತಿಫಲವಿಲ್ಲದಿದ್ದರೂ ಪದೇ ಪದೇ ಮಾಡಿದ್ದನ್ನೇ ಮಾಡುವಂತಹ ಮೂರ್ಖ ನಾನು. 421 00:23:13,500 --> 00:23:14,333 ಹಾಯ್. 422 00:23:15,500 --> 00:23:16,457 ನಾನು ಕೆನ್. 423 00:23:16,458 --> 00:23:17,541 ಈಥನ್. 424 00:23:17,958 --> 00:23:19,916 - ಇವನು ನನ್ನ ಮಗ. - ಹೌದು. 425 00:23:20,541 --> 00:23:22,125 - ಭೇಟಿಯಾಗಿ ಸಂತೋಷವಾಯಿತು. - ಹೌದು. 426 00:23:23,625 --> 00:23:26,125 ನೀವು ಇಲ್ಲಿಯೇ ಇದ್ದು ಪ್ರಯತ್ನಿಸಲು ಬಯಸುವಿರಾ? 427 00:23:27,000 --> 00:23:28,666 ನನ್ನ ಕಾರಿನ ಕೀಲಿಗಳನ್ನು ಕೇಳುತ್ತಿದ್ದೀಯಾ? 428 00:23:29,375 --> 00:23:30,291 ಹೌದು. 429 00:23:31,916 --> 00:23:32,875 ಖಂಡಿತ. 430 00:23:33,583 --> 00:23:34,541 ಮಜಾ ಮಾಡು. 431 00:23:35,041 --> 00:23:36,291 ನಿಮ್ಮನ್ನ ಭೇಟಿಯಾಗಿ ಖುಷಿಯಾಯಿತು, ಕೆನ್. 432 00:23:41,083 --> 00:23:42,041 ಹೆಲೆನ್. 433 00:23:44,833 --> 00:23:47,125 - ಮನೆಗೆ ಹೇಗೆ ಹೋಗುತ್ತೀಯಾ? - ಏನು ಗೊತ್ತಾ? 434 00:23:47,541 --> 00:23:49,208 ನಿನ್ನ ಜೊತೆ ಮನೆಗೆ ಬರುತ್ತೇನೆ ಅನಿಸುತ್ತಿದೆ. 435 00:23:50,125 --> 00:23:52,790 - ನನಗೆ ಅದು ಇಷ್ಟ. ಮೊದಲು ಮೀನು ಹಿಡಿಯೋಣ್ವಾ? - ನಾನು... 436 00:23:52,791 --> 00:23:54,000 ಪ್ರಯತ್ನಿಸು. 437 00:23:57,166 --> 00:23:59,249 ನಿನ್ನ ಹತ್ತಿರ ಮುಚ್ಚಿಡಲು ಬಯಸುವ ದಾಖಲೆಗಳಿವೆ. 438 00:23:59,250 --> 00:24:00,208 ನೀನು ಯೋಚಿಸುವುದು... 439 00:24:01,875 --> 00:24:02,750 ಕಚೇರಿ. 440 00:24:08,000 --> 00:24:11,916 ಬಹುಶಃ ನಿನ್ನ ಹೆಂಡತಿಗೆ ತಿಳಿಯದೆ ನೀನು ರಹಸ್ಯ ಕೋಣೆ ಮಾಡಿಸಿಕೊಂಡಿರಬಹುದು. 441 00:24:12,791 --> 00:24:14,583 ದಾಖಲೆಗಳನ್ನು ತಿಜೋರಿಯಲ್ಲಿ ಬಚ್ಚಿಡುತ್ತೀಯ. 442 00:24:31,083 --> 00:24:32,083 ಸ್ಥಿರಾಸ್ತಿ ನಿರ್ವಹಣೆಯ ಕಡತ 443 00:24:36,375 --> 00:24:39,458 ಬಹುಶಃ ನೀನು ದಾಖಲೆಗಳನ್ನು ಆ ಋತುವಿನಲ್ಲಿ ಬಳಸದ ಹೊದಿಕೆಗಳಲ್ಲಿ ಬಚ್ಚಿಡಬಹುದು. 444 00:24:40,250 --> 00:24:44,416 ಕಾಲರ್ ಇರುವ ಬಹಳಷ್ಟು ಅಂಗಿಗಳ ಮಧ್ಯದಲ್ಲಿ ಅವುಗಳನ್ನು ಬಚ್ಚಿಡುತ್ತೀಯ. 445 00:24:51,875 --> 00:24:53,208 ಸರಿ. 446 00:25:18,125 --> 00:25:20,083 ಕಡತಗಳನ್ನು ಬಿಡುತ್ತೀಯ, ಗನ್ ತೆಗೆದುಕೊಳ್ತೀಯ. 447 00:25:20,875 --> 00:25:23,791 ನೀನು ಹೆದರಿದ್ದೆ, ನೀನು ಒಪ್ಪಿಕೊಂಡಿದ್ದನ್ನು ಮಾಡದಿದ್ದರೆ ಒಲಿವೆರೋ 448 00:25:24,500 --> 00:25:28,540 {\an8}ಏನು ಮಾಡುತ್ತಾನೋ ಮತ್ತು ನೀನು ಜೆಂಟ್ರಿಯಲ್ಲೇ ಇದ್ದರೆ ಅವರು ನಿನಗೆ ಏನು ಮಾಡುತ್ತಾರೋ ಎಂದು. 449 00:25:28,541 --> 00:25:30,415 {\an8}ಮತ್ತು ಜೆಂಟ್ರಿಯಿಂದ ಸಿಗುವುದನ್ನೆಲ್ಲಾ ಪಡೆದುಕೋ. 450 00:25:30,416 --> 00:25:33,082 ಎಷ್ಟು ದೊಡ್ಡ ಬೇಡಿಕೆ ಇರುತ್ತೋ, ಅಷ್ಟು ದೊಡ್ಡ ಬೆಲೆ ತೆರಬೇಕಾಗುತ್ತೆ. 451 00:25:33,083 --> 00:25:35,499 ಮತ್ತು ನೀನು ನನಗೆ ಹಣವನ್ನು ನನ್ನ ಖಾಸಗಿ ಖಾತೆಗೆ ಜಮಾ ಮಾಡಬೇಕು. 452 00:25:35,500 --> 00:25:37,208 - ಸರಿ. ಮಾಡುತ್ತೇನೆ. - ಎಂಥಾ ನೀಚ ಬಿಲ್! 453 00:25:40,000 --> 00:25:42,875 ರೋಡ್ರಿಗಸ್‌ನ ಕೆಲಸ ಹೋಯಿತು. ಅವನಿಂದ ಇನ್ಮುಂದೆ ನಿನಗೆ ಸಮಸ್ಯೆ ಬರಲ್ಲ. 454 00:25:45,083 --> 00:25:46,915 ಇಲ್ಲ, ನೀನು ಬೇಡದವರನ್ನು ತೊಡೆದುಹಾಕು. 455 00:25:46,916 --> 00:25:48,749 ಏಕೆಂದರೆ ನಿನ್ನ ಕಡೆಯಿಂದ ಯಾರೋ ದೃಢಪಡಿಸಿದ್ದಾರೆ, 456 00:25:48,750 --> 00:25:51,208 ಆಡಮ್ ಫೆಡ್ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದನೆಂದು. 457 00:25:52,666 --> 00:25:54,625 ಸರಿ, ಮಾಹಿತಿ ನೀಡಲು ಅವನು ಈಗ ಬದುಕಿಲ್ಲ, ಅಲ್ವಾ? 458 00:25:56,958 --> 00:25:59,416 ಅವಳು ಗೊಂದಲದಲ್ಲಿದ್ದಾಳೆ. ಅವಳಿಗೆ ಸರಿಯಾಗಿ ಯೋಚಿಸಲು ಆಗುತ್ತಿಲ್ಲ. 459 00:26:01,250 --> 00:26:02,333 ನಾನು ನೋಡಿಕೊಳ್ಳುತ್ತೇನೆ. 460 00:26:03,250 --> 00:26:05,083 ನಾನು ಅದನ್ನು ನೋಡಿಕೊಳ್ಳುತ್ತೇನೆ ಅಂದೆ. 461 00:26:17,750 --> 00:26:19,083 ಇವತ್ತು ಆಗುವುದಿಲ್ಲ. 462 00:26:19,791 --> 00:26:22,165 ನಿಮಗೆ ಹುಷಾರಿಲ್ಲವೇ, ಮಿಸ್ಟರ್. ಬ್ರಾಡಾಕ್? 463 00:26:22,166 --> 00:26:24,582 ಜೆಂಟ್ರಿ ಸಂಬಂಧಿತ ಪ್ರಕರಣದ ಕಡತಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. 464 00:26:24,583 --> 00:26:28,415 ನಿನ್ನ ತಲೆಯೊಳಗೆ ಬುದ್ಧಿ ಇದೆಯಾ ಅಥವಾ ಕೂದಲಿನ ಬುಡವೇ ಮೆದುಳಿಗೂ ಹಬ್ಬಿದೆಯಾ? 465 00:26:28,416 --> 00:26:31,499 ಸಮನ್ಸ್ ಇಲ್ಲದೆ ನಿಮಗೆ ಏನೂ ಸಿಗುವುದಿಲ್ಲ ಎಂದು ನಾನು ಹೇಳಿದ್ದೆ. 466 00:26:31,500 --> 00:26:33,582 ಬಹುಶಃ ನಾವು ಕಚೇರಿಯ ಮಹಡಿಯಲ್ಲಿ ಮಾತನಾಡಬಹುದು. 467 00:26:33,583 --> 00:26:37,625 ಕೇಳಿಸಿಕೋ, ಅಪರಾಧ ಧಾರಾವಾಹಿಗಳಲ್ಲಿ ಬರುವಂತಹ ನಿನ್ನ ಈ ನಟನೆಯು ಕಳಪೆ ಅಷ್ಟೇ ಅಲ್ಲ, 468 00:26:38,166 --> 00:26:40,291 ಅದು ತುಂಬಾನೇ ಹಳತಾಗಿದೆ. 469 00:26:41,000 --> 00:26:42,916 ಅದು ಬಹಳ ಹಿಂದೆಯೇ ಬಳಸಲು ಲಾಯಕ್ಕಿಲ್ಲದಾಗಿದೆ. 470 00:26:43,666 --> 00:26:44,583 ನಿನ್ನದು ಮುಗಿಯಿತು. 471 00:26:45,083 --> 00:26:47,915 ನೀನು ನಿನ್ನ ಪೋಷಕರು ಇಟ್ಟಿದ್ದ ಯಾವುದೋ ತಿಂಡಿ ಅಂಗಡಿಗೋ ಮಾರುಕಟ್ಟೆಗೋ ಹಿಂತಿರುಗಬೇಕು-- 472 00:26:47,916 --> 00:26:49,166 ಅಲ್ಲ, ಅದು ಉಪಾಹಾರ ಗೃಹ. 473 00:26:51,750 --> 00:26:53,415 ನಿನ್ನ ದಾರಿ ಬದಲಾಯಿಸಲು ಸಿದ್ಧನಿದ್ದರೆ, 474 00:26:53,416 --> 00:26:56,708 ನಿನ್ನಂತಹ ಚೆಲುವ ಇತರ ಮಾರುಕಟ್ಟೆಗಳಲ್ಲಿ ಬಹಳಷ್ಟು ಹಣ ಗಳಿಸಬಹುದು. 475 00:26:58,000 --> 00:26:59,541 ಹಾಗಾದರೆ ನೀವು ನನ್ನನ್ನು ಆಹ್ವಾನಿಸಲಿದ್ದೀರಾ? 476 00:27:01,666 --> 00:27:03,250 ನಾನು ಸಮನ್ಸ್ ಜೊತೆ ವಾಪಸ್ ಬರುತ್ತೇನೆ. 477 00:27:07,791 --> 00:27:09,583 ನಾನು ಇಂದು ಮನೆಯಿಂದಲೇ ಕೆಲಸ ಮಾಡುತ್ತೇನೆ. 478 00:27:11,291 --> 00:27:12,583 ಸರಿ, ಸರ್. 479 00:27:20,000 --> 00:27:21,916 ಇಲ್ಲಿ ಪರಿಮಳ ತುಂಬಾ ಚೆನ್ನಾಗಿದೆ. 480 00:27:22,541 --> 00:27:23,375 ಓಹ್, ಹೌದಾ? 481 00:27:24,750 --> 00:27:25,666 ಎಂಥಹ ಪರಿಮಳ? 482 00:27:28,333 --> 00:27:29,291 ನಿನ್ನಂತೆ. 483 00:27:30,791 --> 00:27:32,708 ಸನ್ ಟ್ಯಾನ್ ಲೋಷನ್ ಮತ್ತು ಸಾಗರ. 484 00:27:35,000 --> 00:27:36,249 ಇವರು ನಿಮ್ಮಮ್ಮನಾ? 485 00:27:36,250 --> 00:27:38,000 ಟಿಜುವಾನಾದಲ್ಲಿ ನಿನ್ನನ್ನು ಕಾಪಾಡಿದವರು? 486 00:27:40,458 --> 00:27:41,291 ಸುಂದರವಾಗಿದ್ದಾರೆ. 487 00:27:49,625 --> 00:27:50,541 ಆರಾಮವಾಗಿದ್ದೀಯಾ? 488 00:27:51,750 --> 00:27:54,375 ಅದು, ನಿನಗೆ ಗೊತ್ತಲ್ವಾ, ಆ ಪತ್ತೇದಾರ್ಥಿ ಎಲ್ಲಾ ಕಡೆಯೂ ಇರುತ್ತಾಳೆ. 489 00:27:56,125 --> 00:27:58,750 ಅವಳು ಇಷ್ಟು ದೂರ ಪ್ರಯಾಣಿಸಿ ಬರುತ್ತಾಳೆಂದರೆ ನಾನು ನಂಬುವುದಿಲ್ಲ. 490 00:28:02,416 --> 00:28:03,291 ಇಲ್ಲಿ ನಾನೊಬ್ಬನೇ. 491 00:28:06,416 --> 00:28:09,166 ಬರೀ... ನಾವು. 492 00:28:23,291 --> 00:28:24,500 ನನಗೆ ಮಲಗುವ ಕೋಣೆ ತೋರಿಸು. 493 00:28:38,875 --> 00:28:40,458 ನಾನು ಕೇಳಲು ಕಾಯುತ್ತಿದ್ದೆ. 494 00:28:41,416 --> 00:28:45,416 ಇದು ಏನು? 495 00:28:45,875 --> 00:28:47,083 ಇದು ಏನೆಂದು ನಿನಗೆ ಅನಿಸುತ್ತದೆ? 496 00:28:51,375 --> 00:28:54,625 ಇದು ಬ್ರೆಡ್‌ ಇಡುವ ಪೆಟ್ಟಿಗೆಗಿಂತ ದೊಡ್ಡದೇನಾದರೂ ಸೂಚಿಸುತ್ತಾ? 497 00:28:56,291 --> 00:28:59,000 ಸಹಾಯಕ್ಕಾಗಿ ಕೂಗುವುದು ಬ್ರೆಡ್‌‌ನ ಪೆಟ್ಟಿಗೆಗಿಂತ ದೊಡ್ಡದೇ? 498 00:29:01,541 --> 00:29:03,291 ಇಂಥದ್ದೇ ನಮ್ಮಪ್ಪನಿಗೂ ಇತ್ತು. 499 00:29:07,291 --> 00:29:08,457 ಇದು... 500 00:29:08,458 --> 00:29:10,041 ಇದೊಂದು ಸೈನಿಕರ ಗುರುತಿನ ಪಟ್ಟಿ. 501 00:29:11,416 --> 00:29:12,791 ಆತನದರಲ್ಲಿ ಮಾತ್ರ ಬರಹ ಇತ್ತು. 502 00:29:13,666 --> 00:29:16,958 ವಿಯೆಟ್ನಾಂನಲ್ಲಿ ನಿಧನರಾದ ಆತನ ಸ್ನೇಹಿತನ ಹೆಸರು ಮತ್ತು ಗುರುತಿನ ಸಂಖ್ಯೆ. 503 00:29:19,666 --> 00:29:22,416 ಬಾಲ್ಯದಲ್ಲಿ ಅದಷ್ಟೇ ನನಗೆ ತಿಳಿದದ್ದು, ಏಕೆಂದರೆ ಆತ ಆ ಬಗ್ಗೆ ಎಂದಿಗೂ ಹೇಳಲಿಲ್ಲ. 504 00:29:23,291 --> 00:29:27,416 ಮತ್ತು ಆ ಭಾವನೆ ನನ್ನ ದೇಹದ ಮೇಲೆ ಎಂದಿಗೂ ಹಚ್ಚೆಯಾಗಿ ಉಳಿಯಬೇಕು ಅನಿಸಿತು. 505 00:29:28,166 --> 00:29:29,499 ಈಗ ಅದರಲ್ಲಿ ಒಳ್ಳೆಯ ಜಾಗವಿದೆ, 506 00:29:29,500 --> 00:29:32,458 ನಾನು ಇಷ್ಟಪಡುವ ಯಾವುದೇ ನಿರಾಶೆ ಅಥವಾ ಪಶ್ಚಾತ್ತಾಪ ಸೂಚಿಸುವ ಹಚ್ಚೆ ಹಾಕಿಸಲು. 507 00:29:34,208 --> 00:29:35,083 ಮುಂದೊಂದು ದಿನ. 508 00:29:36,708 --> 00:29:37,541 ಹಾಗಾದರೆ... 509 00:29:38,625 --> 00:29:39,833 ಬ್ರೆಡ್‌‌ನ ಪೆಟ್ಟಿಗೆಗಿಂತ ದೊಡ್ಡದು. 510 00:29:41,583 --> 00:29:42,541 ಹೌದು. 511 00:29:49,666 --> 00:29:50,541 ಕೇಳು... 512 00:29:53,708 --> 00:29:56,124 ನಾನು ಸ್ವಲ್ಪ ದಿನ ಮನೆಗೆ ವಾಪಸ್ಸು ಹೋಗಬೇಕಾಗಬಹುದು ಅನಿಸುತ್ತೆ. 513 00:29:56,125 --> 00:29:57,250 ಕ್ಲೀವ್‌ಲ್ಯಾಂಡ್‍ಗೆ ವಾಪಸ್ಸು. 514 00:30:00,750 --> 00:30:02,125 ನಾನು ಅದರ ಬಗ್ಗೆ ಆಲೋಚಿಸುತ್ತಿದ್ದೆ. 515 00:30:05,291 --> 00:30:06,875 ಈಥನ್‌ನನ್ನು ನಿನ್ನ ಜೊತೆ ಕರೆದೊಯ್ಯುವೆಯಾ? 516 00:30:10,708 --> 00:30:11,708 ಅದು ಅವನಿಗೆ ಬಿಟ್ಟದ್ದು. 517 00:30:15,833 --> 00:30:16,833 ಸರಿ... 518 00:30:17,416 --> 00:30:18,541 ಇದನ್ನು ನಿರೀಕ್ಷಿಸಿರಲಿಲ್ಲ. 519 00:30:20,708 --> 00:30:21,750 ಏನು? 520 00:30:25,916 --> 00:30:26,916 ನನಗೆ ನಿನ್ನ ಅಗಲಿಕೆ ಕಾಡುತ್ತೆ. 521 00:30:32,583 --> 00:30:33,665 ಇಲ್ಲ. 522 00:30:33,666 --> 00:30:34,625 ಇಲ್ಲ, ಅದು... 523 00:30:35,833 --> 00:30:36,874 ಅದು ನನ್ನ ತಂಗಿ, 524 00:30:36,875 --> 00:30:40,083 ಮತ್ತು ತ್ವರಿತವಾಗಿ ಪ್ರತಿಕ್ರಿಯಿಸುವ ಬಗ್ಗೆ ಅವಳು ಬಹಳ ಕಟ್ಟುನಿಟ್ಟು. 525 00:30:44,500 --> 00:30:45,333 ಹಲೋ. 526 00:30:50,125 --> 00:30:51,458 ಹೌದು. 527 00:30:53,416 --> 00:30:54,499 ಸರಿ, ಅದ್ಭುತ. 528 00:30:54,500 --> 00:30:55,833 ಹೌದು, ನಾನು ಈಗಲೇ ಹೋಗಬಲ್ಲೆ. 529 00:30:57,333 --> 00:30:58,250 ಸರಿ. 530 00:30:59,291 --> 00:31:00,125 ಸರಿ, ಬಾಯ್. 531 00:31:09,166 --> 00:31:11,125 ನನ್ನನ್ನು ಒಂದು ಜಾಗಕ್ಕೆ ಕಾರಿನಲ್ಲಿ ಕರೆದೊಯ್ಯುವೆಯಾ? 532 00:31:12,250 --> 00:31:15,875 ನನ್ನ ಮಗ ತನ್ನ ಗೆಳತಿಯನ್ನು ಸಂಭೋಗಿಸಲು ನನ್ನ ಮೃತ ಮಾಜಿ ಪತಿಯ ಕಾರನ್ನು ಕೊಂಡೊಯ್ದ. 533 00:31:27,708 --> 00:31:30,499 ಓಹ್, ದೇವರೇ, ಕ್ಲೋಯಿ. 534 00:31:30,500 --> 00:31:32,207 - ಹಾಯ್. - ಒಳಗೆ ಬಾ, ಒಳಗೆ ಬಾ. 535 00:31:32,208 --> 00:31:33,166 ಧನ್ಯವಾದ. 536 00:31:35,291 --> 00:31:36,499 ನಿನ್ನ ನೆನಪಾಗುತ್ತಿತ್ತು. 537 00:31:36,500 --> 00:31:37,583 ನನಗೂ ನಿನ್ನ ನೆನಪಾಗುತ್ತಿತ್ತು. 538 00:31:42,666 --> 00:31:46,000 ನಾನು ಇದನ್ನು ನೋಡಿದೆ, ಮತ್ತು ನಿನಗೆ ಇದು ಅಗತ್ಯವಿದೆ ಎಂದು ನನಗೆ ಬಹಳ ಬಲವಾಗಿ ಅನಿಸಿತು. 539 00:31:47,541 --> 00:31:48,416 ಸರಿ. 540 00:31:49,041 --> 00:31:53,000 ಮತ್ತು ಇದು ನನ್ನ ತಪ್ಪೊಪ್ಪಿಗೆಯ ರೀತಿ. 541 00:31:54,333 --> 00:31:56,083 ಆತ ನಿನ್ನನ್ನು ನೋಡಿ ಬಹಳ ಖುಷಿಪಡುತ್ತಾನೆ. 542 00:31:57,041 --> 00:32:00,291 ನೀನು ಒಂದು ಹೆಜ್ಜೆ ಮುಂದಿಟ್ಟರೆ, ಆತನೂ ಕೂಡ ಮುಂದಿಡುತ್ತಾನೆ. 543 00:32:01,208 --> 00:32:02,790 - ಧನ್ಯವಾದ. - ಆತ ಕಚೇರಿಯಲ್ಲಿದ್ದಾನೆ. 544 00:32:02,791 --> 00:32:03,708 ಸರಿ. 545 00:32:10,250 --> 00:32:11,541 ಅದು ಬಹಳ ಚೆನ್ನಾಗಿದೆ. 546 00:32:12,583 --> 00:32:14,083 ನೀನು ಬರುತ್ತೀಯ ಅಂದುಕೊಂಡಿರಲಿಲ್ಲ. 547 00:32:17,083 --> 00:32:19,833 ನಾನು ಕ್ಷಮೆ ಕೇಳಬೇಕೆಂದಿದ್ದೆ. 548 00:32:20,958 --> 00:32:22,291 ಆ ದಿನ ಹಾಗೆ ನಡೆದುಕೊಂಡಿದ್ದಕ್ಕೆ. 549 00:32:23,208 --> 00:32:26,000 ಆದರೆ, ನಿನ್ನ ಮನಸ್ಸಿನಲ್ಲಿ ಏನೇನೋ ಗೊಂದಲಗಳು ತುಂಬಿಕೊಂಡಿವೆ. 550 00:32:27,791 --> 00:32:29,583 ಮತ್ತು ಇದು ಆ ಕ್ಷಮೆಯಾಚನೆಯ ಒಂದು ಭಾಗ. 551 00:32:31,333 --> 00:32:33,999 ಆಡಮ್ ಬಳಿ ಇದ್ದ ಜೆಂಟ್ರಿ ಗ್ರೂಪ್‌ಗೆ ಸಂಬಂಧಿಸಿದ ಎಲ್ಲಾ ಕಡತಗಳು, 552 00:32:34,000 --> 00:32:36,832 ಎಫ್‌ಬಿಐ ಹುಡುಕುತ್ತಿರುವ ಎಲ್ಲವೂ. 553 00:32:36,833 --> 00:32:40,166 ನನಗೆ ಅದರ ಜೊತೆಯಾಗಲೀ, ಎಫ್‌ಬಿಐ ಜೊತೆಯಾಗಲೀ ಯಾವುದೇ ಸಂಬಂಧ ಬೇಡ. 554 00:32:42,208 --> 00:32:43,415 ನೀನು ಹೀಗೇಕೆ ಮಾಡುತ್ತಿದ್ದೀಯಾ? 555 00:32:43,416 --> 00:32:44,958 ನನಗೆ ಹೀಗೆ ಬದುಕಲು ಇಷ್ಟವಿಲ್ಲ. 556 00:32:45,875 --> 00:32:48,625 ನಾನು ಸದಾ ಭಯದಲ್ಲಿರುತ್ತೇನೆ, ಮುಂದಿನವಳು ನಾನೇ ಎಂದು ಚಿಂತಿಸುತ್ತಿರುತ್ತೇನೆ. 557 00:32:49,625 --> 00:32:53,125 ಆಡಮ್‌ಗೆ ಏನು ಗೊತ್ತಿತ್ತೋ, ಅದರಿಂದಾಗಿಯೇ ಅವನು ಸತ್ತ. 558 00:32:54,791 --> 00:32:56,458 ಅದು ನನ್ನ ಕುಟುಂಬದ ಬಳಿ ಸುಳಿಯುವುದು ಬೇಡ. 559 00:32:57,125 --> 00:32:59,000 ಹಾಗೆ ಅದು ಸುಳಿಯಬೇಕೆನ್ನಲು ಯಾವುದೇ ಕಾರಣವಿಲ್ಲ. 560 00:33:04,333 --> 00:33:08,125 ನಾನು ಇಷ್ಟಪಡುವ ಕೆಲಸ ಮಾಡಲು ನಾನು ಹಿಂತಿರುಗಬೇಕಾಗಿದೆ. 561 00:33:10,500 --> 00:33:14,916 ಆದರೆ ಮೊದಲು, ನಾನು ನನ್ನ ಕುಟುಂಬವನ್ನು ಮತ್ತೆ ಒಟ್ಟುಗೂಡಿಸಬೇಕಾಗಿದೆ. 562 00:33:15,791 --> 00:33:17,250 ಅಕ್ಕನನ್ನು ಜೊತೆಗೆ ಇರಿಸಿಕೊಳ್ಳೋದಾ? 563 00:33:18,958 --> 00:33:20,958 ಹೌದು, ಅಲ್ಲಿಯೂ ಶಾಂತಿ ನೆಲೆಸುವಂತೆ ಮಾಡುವುದು. ಅಂದರೆ... 564 00:33:22,500 --> 00:33:23,541 ಅದೇ ಏಕೈಕ ಮಾರ್ಗ. 565 00:33:25,875 --> 00:33:27,000 ಮತ್ತು ಅದು ಮುಗಿದ ನಂತರ, 566 00:33:27,958 --> 00:33:30,750 ನಾನು ನನ್ನ ಇನ್ನೊಂದು ಕುಟುಂಬವನ್ನು ಕೂಡ ಮತ್ತೆ ಒಟ್ಟುಗೂಡಿಸಬಹುದು. 567 00:33:32,333 --> 00:33:33,208 ನೀನು... 568 00:33:34,125 --> 00:33:35,208 ಮತ್ತು ಕ್ಯಾಥರೀನ್. 569 00:33:38,333 --> 00:33:42,000 ಇನ್ಮುಂದೆ ನನ್ನ ನಿಷ್ಠೆಯನ್ನು ನಿಮಗೆ ಅರ್ಪಸಿದ್ದೇನೆ ಎಂದುಕೊಳ್ಳಿ. 570 00:33:42,833 --> 00:33:44,833 ನಿನಗೆ ಗೊತ್ತಾ, ನೀನು ಮೊದಲಿನಿಂದಲೂ ನನ್ನ ನೆಚ್ಚಿನವಳು. 571 00:33:45,416 --> 00:33:46,666 ಕ್ಯಾಥರೀನ್‌ಗೆ ಹೇಳಬೇಡ. 572 00:33:48,125 --> 00:33:49,791 ನೆನಪಿಗೋಸ್ಕರ ಪಾನೀಯ ಕುಡಿಯೋಣ. 573 00:33:51,875 --> 00:33:53,750 ನನ್ನನ್ನು ಬಿಟ್ಟು ನೀನು ಕುಡಿ. ನಾನು ಬೇಗ ಹೊರಡಬೇಕು. 574 00:33:54,083 --> 00:33:57,875 ನಾನು ನನ್ನ ಅಕ್ಕನಿಗೆ ಸ್ವಲ್ಪ ಆರ್ಥಿಕ ಭದ್ರತೆ ಸಿಗುವಂತೆ ಏನು ಮಾಡುವುದೆಂದು ನೋಡುತ್ತಿದ್ದೇನೆ. 575 00:33:58,291 --> 00:33:59,666 ಅದು ನಿನ್ನ ದೊಡ್ಡ ಗುಣ. 576 00:34:02,333 --> 00:34:04,165 ಆದರೆ ಕೆಲವೇ ದಿನಗಳಲ್ಲಿ ನಗರಕ್ಕೆ ಹಿಂತಿರುಗುತ್ತೇನೆ. 577 00:34:04,166 --> 00:34:05,249 ರಾತ್ರಿಭೋಜನ ಮಾಡೋಣ. 578 00:34:05,250 --> 00:34:07,208 - ಹಾಂ. - ನಿನ್ನ ಹಾಗೂ ಚಕ್‌ ನಡುವಿನ ಪ್ರಣಯ ಕೆಡಿಸುವೆನು. 579 00:34:09,750 --> 00:34:10,625 ಬಾಯ್. 580 00:34:25,583 --> 00:34:27,166 ಅವಳು ಈಗಷ್ಟೇ ನನ್ನ ಮನೆಗೆ ಬಂದಿದ್ದಳು. 581 00:34:28,041 --> 00:34:29,125 ನೀನು ಎಲ್ಲಿದ್ದೀಯಾ? 582 00:34:38,416 --> 00:34:39,916 ಡಿಟೆಕ್ಟಿವ್ ಮ್ಯಾಟ್ ಬೋವೆನ್? 583 00:34:40,791 --> 00:34:42,166 ಹೊರಗಡೆಯಿಂದ ಊಟ ತರಿಸಿದಿರಾ? 584 00:34:51,750 --> 00:34:52,833 ಧನ್ಯವಾದ. 585 00:34:58,458 --> 00:34:59,375 ಅಪ್ಪ, ನಾನು ಹೋಗಬೇಕು. 586 00:34:59,916 --> 00:35:00,916 ಯಾವಾಗಲೂ ಹಾಗೇ. 587 00:35:01,583 --> 00:35:04,500 ನನ್ನ ಬಳಿ ಒಂದು ದೊಡ್ಡ ವಿಷಯವಿದೆ. ವಿಳಾಸ ಕಳುಹಿಸುತ್ತಿದ್ದೇನೆ. ನನಗೆ ಕರೆ ಮಾಡು. 588 00:35:12,708 --> 00:35:14,208 - ಮೆಕೇಬ್ ನೀವೇನಾ? - ಜೆರ್ರಿ. 589 00:35:15,041 --> 00:35:17,208 ಚೆನ್ನಾಗಿದೆ. ಅದು ನನಗೋಸ್ಕರನಾ? 590 00:35:18,541 --> 00:35:19,957 ನಿಮ್ಮ ತಂಗಿ ಹೇಳಿದ್ದು ಸರಿ ಇತ್ತು. 591 00:35:19,958 --> 00:35:22,707 ಈ ಪ್ರಕರಣದ ಬಗ್ಗೆ ಆನ್‌ಲೈನ್‌ನಲ್ಲಿ ಹೆಚ್ಚು ಮಾಹಿತಿ ಇಲ್ಲ. 592 00:35:22,708 --> 00:35:23,832 ಹಾಂ, ನಾನೇ ಅದನ್ನ ಆಕೆಗೆ ಹೇಳಿದೆ. 593 00:35:23,833 --> 00:35:27,375 ಅಥವಾ ಅದಕ್ಕೂ ಡಿಟೆಕ್ಟಿವ್ ಗಿಡ್ರಿಗೂ ನಿರ್ದಿಷ್ಟವಾಗಿ ಯಾವ ಸಂಬಂಧವೂ ಇಲ್ಲ. 594 00:35:28,000 --> 00:35:28,915 ಛೇ. 595 00:35:28,916 --> 00:35:33,665 ಆದರೆ, ಕೆಲವು ಅಧಿಕೃತ ಸಂಸ್ಥೆಯ ದತ್ತಾಂಶಗಳಲ್ಲಿ ಆ ದಾಖಲೆಗಳಿವೆ. 596 00:35:33,666 --> 00:35:34,583 ಗುಪ್ತಪಡಿಸಲಾಗಿದೆ. 597 00:35:35,291 --> 00:35:36,541 ಆದರೆ ನಾನು ಸ್ವಲ್ಪ ಕೈಚಳಕ ತೋರಿಸಿದೆ. 598 00:35:41,541 --> 00:35:43,749 ಆ ದಿನ ಡಿಟೆಕ್ಟಿವ್ ಗಿಡ್ರಿ ಘಟನಾ ಸ್ಥಳಕ್ಕೆ ಬಂದಿದ್ದಳು, 599 00:35:43,750 --> 00:35:47,625 ಅದೇ ಹೆಸರಿನ ಮತ್ತು ಅದೇ ಜನಾಂಗದ ವ್ಯಕ್ತಿಯನ್ನು ಹುಡುಕಿಕೊಂಡು. 600 00:35:51,000 --> 00:35:53,624 ಅವಳು ಒಬ್ಬ ನಿರಪರಾಧಿ ಕಪ್ಪು ಜನಾಂಗದವನಿಗೆ ಭಯಾನಕವಾಗಿ ಹೊಡೆದಿದ್ದಳೇ? 601 00:35:53,625 --> 00:35:55,207 ಮತ್ತು ಅದನ್ನು ಮುಚ್ಚಿಹಾಕಿಬಿಟ್ಟರೇ? 602 00:35:55,208 --> 00:35:57,375 ಅದರಲ್ಲಿ ಯಾವುದೂ ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಲ್ಲ. 603 00:35:57,833 --> 00:36:00,790 ಪೊಲೀಸ್ ಉನ್ನತಾಧಿಕಾರಿಗಳು ಅದು ಅಲ್ಲಿಗೆ ಬರುವ ಮೊದಲೇ ಅದನ್ನು ಮುಚ್ಚಿಹಾಕಿವರು. 604 00:36:00,791 --> 00:36:03,582 ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ನಿಪುಣರು. ನೀಚರು. 605 00:36:03,583 --> 00:36:06,583 ಆದರೆ, ಕಾನೂನು ನ್ಯಾಯಾಲಯವು ಅಷ್ಟೇನೂ ಮುಖ್ಯವಾದದ್ದಲ್ಲ. 606 00:36:07,000 --> 00:36:10,041 ಇದನ್ನು ಅಲ್ಲಿಂದ ತಂದುಕೊಟ್ಟಿದ್ದಕ್ಕೆ ಬಹಳ ಧನ್ಯವಾದ... 607 00:36:10,958 --> 00:36:13,082 ನೀವು ಇಂಥವನ್ನು ಎಲ್ಲಿಂದ ಪಡೆಯುವಿರೆಂಬುದು ನನಗೆ ಬೇಕಾಗಿಲ್ಲ. 608 00:36:13,083 --> 00:36:15,957 ನಿಜವಾಗಲೂ ಯಾವುದೂ ಎಂದಿಗೂ ಕಣ್ಮರೆಯಾಗುವುದಿಲ್ಲ. 609 00:36:15,958 --> 00:36:18,125 ನಮ್ಮಲ್ಲಿ ಹೆಚ್ಚಿನವರಿಗೆ ಇದು ದುರದೃಷ್ಟಕರ. 610 00:36:19,666 --> 00:36:21,541 ನಿಮ್ಮ ಜೊತೆ ವ್ಯವಹಾರ ಮಾಡಿ ಖುಷಿಯಾಯಿತು, ಜೆರ್ರಿ. 611 00:36:28,166 --> 00:36:30,000 ಹೇ, ನಿನ್ನ ಕಡೆಯವನು ಕೆಲಸ ಮುಗಿಸಿದ. ಹಾಗಾಗಿ... 612 00:36:31,125 --> 00:36:33,541 ನಾನು ಈಗ ಅವಳ ಬಳಿಗೆ ಹೋಗುತ್ತಿದ್ದೇನೆ. ನೀನು ಎಲ್ಲಿದ್ದೀಯಾ? 613 00:36:34,583 --> 00:36:36,874 ಆಮೇಲೆ ಹೇಳುತ್ತೇನೆ. ನಾನು ಮನೆಗೆ ಹೋಗುತ್ತಿದ್ದೇನೆ. 614 00:36:36,875 --> 00:36:39,749 ಆಮೇಲೆ ಅಂದರೆ ಏನು? ನನಗೆ ಭಯವಾಗುತ್ತಿದೆ. 615 00:36:39,750 --> 00:36:44,083 ನ್ಯಾನ್ಸಿ ನನ್ನನ್ನು ಹಿಂಬಾಲಿಸೋದು ರೂಢಿಯಾಗಿದೆ. ಆಕೆ ಎಲ್ಲಿದ್ದಾಳೋ ತಿಳಿಯದೆಂದರೆ ಚಿಂತೆ ಆಗ್ತಿದೆ. 616 00:36:49,833 --> 00:36:51,541 ಬೋವೆನ್ 617 00:37:15,541 --> 00:37:16,832 ಡೆಬ್ಬಿ ಮ್ಯಾಕಿಂಟಾಷ್? 618 00:37:16,833 --> 00:37:19,791 ನಾನು ಡಿಟೆಕ್ಟಿವ್ ನ್ಯಾನ್ ಗಿಡ್ರಿ. ನಿಮ್ಮ ಮಗ ಆಡಮ್ ಕೇಸಿನ ತನಿಖೆಯಲ್ಲಿದ್ದೇನೆ. 619 00:37:20,958 --> 00:37:21,791 ಓಹ್, ಹೌದು. 620 00:37:23,000 --> 00:37:25,916 ನಿನ್ನನ್ನು ಟಿವಿಯಲ್ಲಿ ನೋಡಿದೆ, ನ್ಯಾಯಾಲಯದ ಆಚೆ. 621 00:37:27,125 --> 00:37:29,250 ಅದನ್ನೆಲ್ಲಾ ನೋಡಿದ್ದು ನಿಮಗೆ ಕಷ್ಟ ಅನಿಸಿರಬೇಕು. 622 00:37:29,750 --> 00:37:31,041 ಜನರಿಗೆ ಅದು ಬಹಳ ಇಷ್ಟವಾಯಿತು. 623 00:37:31,416 --> 00:37:33,000 ಅವರಿಗೆ ತೃಪ್ತಿ ಸಿಗಲು ಇನ್ನೂ ಬೇಕಿತ್ತು. 624 00:37:33,875 --> 00:37:37,749 ಅಂತಹ ಒಂದು ಕಥೆ, ಏನನ್ನು ನಿರೀಕ್ಷಿಸುತ್ತೀರಾ? ಡೇನಿಯಲ್ ಸ್ಟೀಲ್‌ರ ಕಾದಂಬರಿಯಂತಿದೆ. 625 00:37:37,750 --> 00:37:39,291 'ಆ ಸಹೋದರಿಯರು' ಕಾದಂಬರಿ. 626 00:37:41,125 --> 00:37:43,791 ನಾನು ಒಳಗೆ ಬಂದರೆ ಅಭ್ಯಂತರವಿಲ್ಲವೇ? ಒಂದು ನಿಮಿಷ ನಿಮ್ಮ ಜೊತೆ ಮಾತಾಡಬಹುದೇ? 627 00:37:45,125 --> 00:37:47,125 ನೀನು ನನ್ನನ್ನು ಸ್ವಲ್ಪ ದೂರ ತಳ್ಳಬೇಕಾಗುತ್ತೆ. 628 00:37:55,041 --> 00:37:56,291 ನಿಮ್ಮ ಗಾಡಿ ನ್ಯೂಟ್ರಲ್ ಇದೆಯಾ? 629 00:37:58,833 --> 00:38:02,166 ಅವನು ತುಂಬಾ ಉದ್ವಿಗ್ನನಾಗಿದ್ದನು, ನನ್ನ ಮಗ. 630 00:38:03,500 --> 00:38:05,208 ವಿಷಯಗಳು ಹೇಗಿರಬೇಕು ಎನ್ನುವುದರ ಬಗ್ಗೆ. 631 00:38:06,083 --> 00:38:08,540 ಆ ವಿಷಯದಲ್ಲಿ ನಮ್ಮ ಅಭಿಪ್ರಾಯ ಒಂದೇ ರೀತಿ ಇರಲಿಲ್ಲ. 632 00:38:08,541 --> 00:38:11,041 ನನ್ನ ಕೆಲವು ಆಯ್ಕೆಗಳು ಅವನಿಗೆ ಇಷ್ಟವಾಗಲಿಲ್ಲ. 633 00:38:11,708 --> 00:38:14,790 ಅವನ ಬಳಿ ಸಾಮಾಜಿಕ ಭದ್ರತಾ ಸಂಖ್ಯೆಯೂ ಸಹ ಇಲ್ಲವೆಂದು ನಾನು ಹೇಳಿದ್ದರೂ ಸಹ, 634 00:38:14,791 --> 00:38:15,875 ಅದು ನನ್ನಿಂದಲೇ ಸಿಕ್ಕಿದ್ದು. 635 00:38:18,208 --> 00:38:20,124 ನಾವು ತುಂಬಾ ದಿನಗಳಿಂದ ಮಾತಾಡಿರಲಿಲ್ಲ. 636 00:38:20,125 --> 00:38:22,207 ಒಬ್ಬರೇ ಮಾಡಿದ್ದು ತುಂಬಾ ಕಷ್ಟ ಅನಿಸಿರಬೇಕು. 637 00:38:22,208 --> 00:38:23,583 ತಂದೆ ಜೈಲಿನಲ್ಲಿ ಹಾಗೂ ಇತರ ಕಷ್ಟಗಳು. 638 00:38:25,333 --> 00:38:29,208 ಕ್ಯಾನ್ಸರ್ ಆ ಸೂಳೆಮಗನ ಜೀವ ತೆಗೆಯುವ ಎರಡು ವಾರ ಮುಂಚೆ ಅವನನ್ನು ಬಿಡುಗಡೆ ಮಾಡಿದರು. 639 00:38:30,625 --> 00:38:33,332 ನನ್ನ ಮೂಲಗಳ ಪ್ರಕಾರ ಆತ ಜೈಲಿನಲ್ಲಿ ಸತ್ತನು. 640 00:38:33,333 --> 00:38:34,916 ಹೌದು. ಮತ್ತೆ ತಪ್ಪು. 641 00:38:35,458 --> 00:38:38,583 ಅವನು ಆಡಮ್‌ಗೆ ಕರೆ ಮಾಡಿದ. ಅವನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 642 00:38:39,500 --> 00:38:40,791 ನನ್ನ ತೋಳುಗಳಲ್ಲಿ ಪ್ರಾಣ ಬಿಟ್ಟ. 643 00:38:41,458 --> 00:38:42,833 ನೀವು ಹಾಗೂ ಮಾಜಿ ಪತಿ ಮತ್ತೆ ಒಂದಾದ್ರಾ? 644 00:38:43,916 --> 00:38:44,875 ಖಂಡಿತಾ ಇಲ್ಲ. 645 00:38:46,666 --> 00:38:48,500 ಇಲ್ಲ, ನಾವು ಪರಸ್ಪರ ದ್ವೇಷಿಸುತ್ತಿದ್ದೆವು, ಆದರೆ... 646 00:38:50,916 --> 00:38:53,999 ಆತ ಜೈಲಿನ ವಾಸನೆ ಹೊಡೆಯುತ್ತಾ ಒಬ್ಬಂಟಿಯಾಗಿ ಸಾಯಲು ನನಗೆ ಬಿಡಲಾಗಲಿಲ್ಲ. 647 00:38:54,000 --> 00:38:56,790 ಹಾಗಾಗಿ, ನನಗೆ ಸಾಧ್ಯವಾದುದನ್ನು ಮಾಡಿದೆ. 648 00:38:56,791 --> 00:38:59,749 ನಾನು ಆತನ ಉಗುರುಗಳನ್ನು ಕತ್ತರಿಸಿ, 649 00:38:59,750 --> 00:39:02,333 ಆತನ ತಲೆಯ ಮೇಲೆ ಉಳಿದಿದ್ದ ಆ ಮೂರು ಕೂದಲನ್ನು ಬಾಚಿದೆ. 650 00:39:03,708 --> 00:39:07,000 ಆತ ಸಾಯುವ ಮುನ್ನ ತನ್ನ ಮೊಮ್ಮಗನನ್ನು ಭೇಟಿಯಾಗಲು ಬಯಸಿದ್ದ. 651 00:39:07,458 --> 00:39:09,166 ಆತನಿಗೆ ಆಡಮ್‌ನಿಂದ ಎಂದಿಗೂ ಪ್ರತಿಕ್ರಿಯೆ ಬರಲಿಲ್ಲ. 652 00:39:12,541 --> 00:39:14,916 ನಿರ್ದಿಷ್ಟ ರೀತಿಯ ವ್ಯಕ್ತಿ ಕುಟುಂಬದ ಸಂಬಂಧ ಕಡಿದುಕೊಳ್ಳುವರು. 653 00:39:15,916 --> 00:39:19,208 ನಾನು ಈಥನ್‌ನನ್ನು ಎತ್ತುಕೊಂಡಿದ್ದು ಅವನು ಮಗುವಾಗಿದ್ದಾಗ ಮಾತ್ರ. 654 00:39:20,083 --> 00:39:21,291 ಆ ಎಲ್ಲಾ ತೊಂದರೆ ಶುರುವಾಗುವ ಮುಂಚೆ. 655 00:39:22,625 --> 00:39:25,166 ಈಜುಕೋಳದ ಬಳಿ ಏನಾಯಿತು? ನಿಕ್ಕಿ ವಿಷಯದಲ್ಲಿ? 656 00:39:27,083 --> 00:39:27,916 ಹೌದು. 657 00:39:29,291 --> 00:39:30,790 ಈ ಇಡೀ ಊರು ಅವಳನ್ನ ಚೆನ್ನಾಗಿ ಬೈದರು. 658 00:39:30,791 --> 00:39:32,750 ಅದರಿಂದ ಹೊರಗೆ ಬರುವುದು ಅಷ್ಟು ಸುಲಭ ಅಲ್ಲ. 659 00:39:34,208 --> 00:39:36,541 ಯಾವಾಗಲೂ ಎಲ್ಲದರಲ್ಲೂ ಪರಿಪೂರ್ಣವಾಗಿರುವ ತಾಯಿ ಇದ್ದರೆ ತೋರಿಸು. 660 00:39:37,166 --> 00:39:38,750 ಯಾರೂ ತಮ್ಮ ಮಗುವಿಗೆ ನೋವು ಕೊಡಲು ಬಯಸಲ್ಲ. 661 00:39:39,750 --> 00:39:40,875 ನಮ್ಮಿಂದ ತಪ್ಪುಗಳಾಗುತ್ತವೆ. 662 00:39:42,291 --> 00:39:43,665 {\an8}ನಿಕ್ಕಿಳ ಡಿಎನ್‌ಎ ಹೊಂದುತ್ತೆ. ಓಹಾಯೋದ ಡೇಟಾ. 663 00:39:43,666 --> 00:39:46,457 {\an8}ಖಚಿತವಾಗಿ ಈ ಕೇಸೀಸ್ ಹಾಗೂ ಆಂಡ್ರಿಯಾಸ್‌ನಂಥವರು ಹುಚ್ಚರಾಗಿ ನಿಯಂತ್ರಣ ತಪ್ಪಿ, 664 00:39:46,458 --> 00:39:48,415 ತಮ್ಮ ಶಿಶುಗಳನ್ನು ತೊಟ್ಟಿಯಲ್ಲಿ ಮುಳುಗಿಸುವರು. 665 00:39:48,416 --> 00:39:49,790 ಆದರೆ ನಿಕ್ಕಿ ಅಂಥವಳಲ್ಲ. 666 00:39:49,791 --> 00:39:51,415 ಆಡಮ್ ಮ್ಯಾಕಿಂಟಾಷ್‌ನ ಬಟ್ಟೆಗೆ ಹೊಂದಿಸಿ ನೋಡು. 667 00:39:51,416 --> 00:39:52,583 ಈಗಲೂ ನಿಕ್ಕಿಳನ್ನು ಭೇಟಿಯಾಗುವಿರಾ? 668 00:39:53,583 --> 00:39:56,208 ಅವಳು ಸೋಮವಾರ ಮತ್ತು ಗುರುವಾರ ನನಗೆ ಆಹಾರ ತಂದುಕೊಡುತ್ತಾಳೆ, 669 00:39:56,666 --> 00:39:59,541 ಏಕೆಂದರೆ ನನಗೆ ಅಷ್ಟು ಸುಲಭವಾಗಿ ಓಡಾಡಲು ಸಾಧ್ಯವಾಗುವುದಿಲ್ಲ. 670 00:40:00,083 --> 00:40:02,166 ಏಕೆಂದರೆ ನನ್ನ ಪರವಾನಗಿ ಇನ್ನೂ ಅನಿಶ್ಚಿತತೆಯಲ್ಲಿದೆ. 671 00:40:02,583 --> 00:40:03,583 ಹಾಂ. 672 00:40:05,000 --> 00:40:06,958 ಆದರೆ ಆಡಮ್‌ನ ಘಟನೆ ನಡೆದಾಗಿನಿಂದ ಭೇಟಿಯಾಗಿಲ್ಲ ತಾನೆ? 673 00:40:07,833 --> 00:40:09,000 ಅವಳು ವಾಪಸ್ಸು ಬಂದಳು. 674 00:40:09,791 --> 00:40:12,749 ಅವಳು ಹೇಳಿದ್ದ ಸಮಯಕ್ಕೆ ಬರಲಿಲ್ಲ. ಅವಳು ನಾನು ಹೇಳಿದ್ದ ಕೆನೆ ಕೂಡ ತರಲಿಲ್ಲ. 675 00:40:12,750 --> 00:40:13,832 ನೀವು ಹೇಳಿದ್ದ ಕೆನೆ? 676 00:40:13,833 --> 00:40:14,750 ದಪ್ಪ ಕೆನೆ. 677 00:40:15,666 --> 00:40:16,500 ಜೆಲ್-ಓ ಜೊತೆ ತಿನ್ನಲು. 678 00:40:17,166 --> 00:40:18,083 ಅಟ್ಕಿನ್ಸ್ ಪಥ್ಯ ಮಾಡುವೆಯಾ? 679 00:40:20,666 --> 00:40:22,291 ಅವಳು ತನ್ನ ಫೋನನ್ನೂ ಇಲ್ಲೇ ಬಿಟ್ಟು ಹೋದಳು. 680 00:40:23,625 --> 00:40:24,583 ಇದು ಯಾವಾಗ ಆಗಿತ್ತು? 681 00:40:25,541 --> 00:40:27,125 ಅದು ಸಂಭವಿಸಿದ ಹಿಂದಿನ ದಿನ. 682 00:40:28,125 --> 00:40:30,582 ಅದನ್ನು ಯಾವಾಗ ತೆಗೆದುಕೊಂಡಳೋ ಗೊತ್ತಿಲ್ಲ, ಏಕೆಂದರೆ ಆಕೆ ವಾಪಸ್ ಬಂದಾಗ, 683 00:40:30,583 --> 00:40:32,916 ಅವರು ಅದಕ್ಕೆ ಕರೆ ಮಾಡಿ ಹೇಳಿದರೆಂದು ಅಂದಳು. 684 00:40:34,708 --> 00:40:36,375 ಮತ್ತು ಆಗಲೇ ಅವಳು ನನಗೆ ಹೇಳಿದ್ದು. 685 00:40:41,500 --> 00:40:43,582 ಹೇ, ನೀನು ನನಗೆ ಏನು ಹೇಳಿದೆ? 686 00:40:43,583 --> 00:40:45,166 ನ್ಯೂಯಾರ್ಕ್‌ನಲ್ಲಿನ ಪೊಲೀಸರು 687 00:40:46,083 --> 00:40:47,583 ಕರೆ ಮಾಡಿ ಹೇಳಿದರು... 688 00:40:50,166 --> 00:40:51,207 ಆಡಮ್ ಕೊಲ್ಲಲ್ಪಟ್ಟಿದ್ದಾನೆ. 689 00:40:51,208 --> 00:40:53,000 ಕೊಲ್ಲಲ್ಪಟ್ಟನೇ? ಹೇಗೆ ಕೊಲ್ಲಲ್ಪಟ್ಟ? 690 00:40:53,750 --> 00:40:54,999 ಅವನಿಗೆ ಚೂರಿ ಇರಿತವಾಗಿತ್ತು. 691 00:40:55,000 --> 00:40:56,790 ಕೊಲೆಯಾದನೇ? ನನ್ನ ಮಗ? ಕೊಲೆಯಾದನೇ? 692 00:40:56,791 --> 00:40:58,749 ಇಲ್ಲ, ಇಲ್ಲ, ಇಲ್ಲ. ಅದು ಅಸಾಧ್ಯ. 693 00:40:58,750 --> 00:41:00,457 ನನಗೆ ಬಹಳ ದುಃಖವಾಗಿದೆ. 694 00:41:00,458 --> 00:41:01,916 ನೀನು ದೊಡ್ಡ ಸುಳ್ಳಿ. 695 00:41:03,166 --> 00:41:05,707 ನಾನು ಒಂದೇ ಒಂದು ಮಾತನ್ನೂ ನಂಬಲ್ಲ. ನನ್ನ ಮನೆಯಿಂದ ಆಚೆ ಹೋಗು. 696 00:41:05,708 --> 00:41:08,250 ನೀನು ನನ್ನ ಮನೆಯಿಂದ ಈಗಲೇ ಆಚೆ ತೊಲಗು! 697 00:41:08,750 --> 00:41:11,083 ಆ ಕಟ್ಟುಕಥೆಯೊಂದಿಗೆ ಇಲ್ಲಿಗೆ ಬರುತ್ತೀಯ. ಹೋಗು! 698 00:41:18,250 --> 00:41:20,833 ಆದರೆ ಆ ಮಧ್ಯಾಹ್ನದ ಹೊತ್ತಿಗೆ, ಅದು ಎಲ್ಲಾ ಸುದ್ದಿವಾಹಿನಿಯಲ್ಲೂ ಬಂದಿತ್ತು. 699 00:41:23,208 --> 00:41:26,416 ಆಕೆಗೆ ಕರೆ ಮಾಡುತ್ತಲೇ ಇದ್ದೆ, ಸಂದೇಶ ಕಳುಹಿಸುತ್ತಿದ್ದೆ, ಆದರೆ ಉತ್ತರಿಸುತ್ತಿರಲಿಲ್ಲ. 700 00:41:27,833 --> 00:41:29,041 ಶುರುವಿನಲ್ಲಿ ಅಷ್ಟಾಗಿ ಇರಲಿಲ್ಲ. 701 00:41:33,291 --> 00:41:35,791 ಜನರು ನಿಮ್ಮನ್ನು ಬೇಸರಗೊಳಿಸಲು ಎಲ್ಲಾ ಥರದ ದಾರಿಗಳನ್ನು ಹುಡುಕುವರು. 702 00:41:38,500 --> 00:41:41,083 ಹಾಗಾದರೆ ಆಡಮ್ ಕೊಲೆಯಾದ ದಿನ ನಿಕ್ಕಿ ಇಲ್ಲಿದ್ದಳು. 703 00:41:41,875 --> 00:41:43,874 ಆಕೆ ಹಿಂತಿರುಗುವಳೆಂದು ನಿರೀಕ್ಷಿಸಿದಿರಿ, ಆದರೆ ಆಕೆ ಬರಲಿಲ್ಲ, 704 00:41:43,875 --> 00:41:45,916 ಆಕೆ ತನ್ನ ಫೋನನ್ನು ಇಲ್ಲಿಯೇ ಬಿಟ್ಟು ಹೋಗಿದ್ದರೂ ಸಹ, 705 00:41:46,750 --> 00:41:48,208 ಮತ್ತು ಅದು ರಾತ್ರಿಯಿಡೀ ಇಲ್ಲಿಯೇ ಇತ್ತು. 706 00:41:49,500 --> 00:41:53,750 ಆಕೆ ಹಿಂತಿರುಗಿದಾಗ, ಆಡಮ್‌ಗೆ ಚೂರಿ ಇರಿತವಾಗಿದೆ ಎಂದು ನಿಮಗೆ ಹೇಳಿದಳು. 707 00:41:54,875 --> 00:41:56,750 ಇದು ಆಗಿದ್ದು ಮಧ್ಯಾಹ್ನ ಎಂದು ಹೇಳುತ್ತೀರಾ? 708 00:41:58,750 --> 00:41:59,999 ಏನು ಮಾಡುತ್ತಿದ್ದೀಯಾ? 709 00:42:00,000 --> 00:42:01,540 ಒಂದು ಹೇಳಿಕೆಯನ್ನು ಒಟ್ಟುಗೂಡಿಸುತ್ತಿದ್ದೇನೆ, 710 00:42:01,541 --> 00:42:04,000 ಆ ವಿವರಗಳನ್ನು ದೃಢೀಕರಿಸಿ ನೀವು ಸಹಿ ಮಾಡಬಹುದು. 711 00:42:07,791 --> 00:42:09,458 ನಾನು ನಿನಗೆ ಏನನ್ನೂ ಹೇಳಿಲ್ಲ. 712 00:42:26,875 --> 00:42:28,541 ನಾಯಿ ಇಷ್ಟೊತ್ತಿಗೆ ಹೋಗಿರುತ್ತೆ ಅಂದುಕೊಂಡೆ. 713 00:42:29,125 --> 00:42:33,250 ಫ್ರಾಂಜೆನ್ ನನಗೆ ಇಷ್ಟವಾಗಲು ಶುರುವಾದ, ಹಾಗಾಗಿ ಅವನಿಗೆ ಗೆಳೆಯನನ್ನು ಖರೀದಿಸಿದೆ. ವಿಂಟರ್. 714 00:42:34,916 --> 00:42:36,040 ಅದು ಹಾಗೆಯೇ ನಡೆಯುವುದು. 715 00:42:36,041 --> 00:42:36,958 ಹಾಯ್, ವಿಂಟರ್. 716 00:42:37,583 --> 00:42:38,500 ಸರಿ. 717 00:42:41,041 --> 00:42:45,125 ನನಗೆ ಇದನ್ನು ಎಲ್ಲೆಡೆ ಹಬ್ಬಿಸಬೇಕು. ಆದಷ್ಟು ಕೆಟ್ಟವಳಂತೆ ಬಿಂಬಿಸುವ ರೀತಿಯಲ್ಲಿ. 718 00:42:48,750 --> 00:42:49,833 ನಿಮಗದು ಇಷ್ಟವಾಗುತ್ತೆ. 719 00:42:51,708 --> 00:42:52,957 ಇದೊಂದು ಉಡುಗೊರೆಯಂತೆ. 720 00:42:52,958 --> 00:42:56,625 ನಾಗರಿಕ ದೂರು ಪರಿಶೀಲನಾ ಮಂಡಳಿ 721 00:42:59,375 --> 00:43:01,374 ಹೌದು. ನನಗೆ ಗೊತ್ತು. 722 00:43:01,375 --> 00:43:03,665 ಇದರಿಂದ ನೀನು ಬಹಳಷ್ಟು ಪೊಲೀಸರನ್ನು ಕೆರಳಿಸಲಿದ್ದೀಯ. 723 00:43:03,666 --> 00:43:04,832 ಹೊಸ ವಿಷಯ ಏನಾದರೂ ಇದೆಯಾ? 724 00:43:04,833 --> 00:43:07,541 ಇದು ಓಹಾಯೋ ಅಲ್ಲ, ನಿಕೋಲ್. 725 00:43:08,958 --> 00:43:09,958 ತಿಳಿಯಿತು. 726 00:43:12,041 --> 00:43:14,290 ಬಹುಶಃ ನೀವು ಅಂತ್ಯಕ್ರಿಯೆಗೆ ಬಂದಿದ್ದ ಆ ವರದಿಗಾರ ಸಿದ್‌ನನ್ನು ಬಳಸಬಹುದು. 727 00:43:14,291 --> 00:43:17,665 ಆತ ಪ್ರಶ್ನಾರ್ಹ ಮೂಲಗಳಿಂದ ಬಂದ ಮಾಹಿತಿಯನ್ನು ಪ್ರಕಟಿಸಲು ಹಿಂಜರಿಯಲ್ಲ ಅಂತ ಕಾಣುತ್ತೆ. 728 00:43:17,666 --> 00:43:18,791 ನಿಜ. 729 00:43:20,958 --> 00:43:22,875 ಇವತ್ತು. ಈಗಲೇ. 730 00:43:24,708 --> 00:43:25,541 ದಯವಿಟ್ಟು. 731 00:43:28,458 --> 00:43:29,458 ಮತ್ತು ಧನ್ಯವಾದ. 732 00:43:30,500 --> 00:43:32,624 ಇದು ನಿಮಗೂ ಒಳ್ಳೆಯದು, ಅಲ್ವಾ? 733 00:43:32,625 --> 00:43:35,457 ನೀವು ಕ್ಲೋಯಿಗಾಗಿ ಏನೇ ಪುನರಾಗಮನ ಅಭಿಯಾನ ನಡೆಸುತ್ತಿದ್ದರೂ ಅದಕ್ಕೆ ಒಳ್ಳೆಯದು. 734 00:43:35,458 --> 00:43:37,958 ದಯವಿಟ್ಟು ಮತ್ತು ಧನ್ಯವಾದ. 735 00:43:38,750 --> 00:43:41,374 ನಾನು ನೀಡಿದ್ದ ಪ್ರಸ್ತಾವನೆ ಬಗ್ಗೆ ಏನಾದರೂ ಆಲೋಚನೆ ಮಾಡಿದ್ದೀಯಾ? 736 00:43:41,375 --> 00:43:44,290 ಕ್ಲೋಯಿ ನಿನಗೆ ಖಂಡಿತ ಹೇಳಿರುತ್ತಾಳೆ. ಅವರು ದೊಡ್ಡ ಮೊತ್ತ ನೀಡುವ ಮಾತುಕತೆಯಲ್ಲಿದ್ದಾರೆ. 737 00:43:44,291 --> 00:43:46,375 ಮತ್ತು ನೀನು ನಿನ್ನ ಎಟ್ಸಿ ಆನ್ಲೈನ್ ಅಂಗಡಿ ಮುಚ್ಚಬಹುದು. 738 00:43:46,875 --> 00:43:49,749 ಏಕೆಂದರೆ ಅದಕ್ಕೆ ನೀವಿಬ್ಬರೂ ಬೇಕು, 739 00:43:49,750 --> 00:43:52,666 ಒಟ್ಟಾಗಿ ಸೇರಿ ಪುಸ್ತಕ ಬರೆಯಲು. 740 00:43:56,291 --> 00:43:59,791 ನೀವೇನು ಮಾತಾಡುತ್ತಿದ್ದೀರೆಂದು ನನಗೆ ಸ್ವಲ್ಪ ಗೊತ್ತಿದ್ದರೂ ನಾನು ಕುತೂಹಲ ತೋರಿಸುತ್ತಿದ್ದೆ. 741 00:44:06,750 --> 00:44:09,250 ಇದು ಬಿಲ್ ಬ್ರಾಡಾಕ್‌ನ ಗೃಹ ಕಚೇರಿಗೆ ತ್ವರಿತ ವಾರಂಟ್. 742 00:44:10,125 --> 00:44:12,625 ಮತ್ತು ಅಗೋ ನಿನ್ನ ಸಹಾಯಕ್ಕೆ ಬಂದವರು, 12ನೇ ಠಾಣೆ. 743 00:44:13,041 --> 00:44:13,915 ಈಗ, ಎಲ್ಲವೂ ಯಶಸ್ವಿಯಾದರೆ, 744 00:44:13,916 --> 00:44:17,415 ನೀನು ಅವರ ಠಾಣೆಯನ್ನೂ ಸಹ ಪಕ್ಕದ ಪ್ರವೇಶ ದ್ವಾರದ ಮೂಲಕ ಬಳಸಬಹುದೆಂದು ಅವರು ಹೇಳಿದರು. 745 00:44:17,416 --> 00:44:20,041 ನಾವೆಲ್ಲರೂ ಇದನ್ನ ಆದಷ್ಟು ಸದ್ದಿಲ್ಲದೇ ಮಾಡಬಯಸುವುದು ಅವರಿಗೆ ಅರ್ಥವಾಗಿದೆ. 746 00:44:20,583 --> 00:44:22,291 ಧನ್ಯವಾದಗಳು. ಎಲ್ಲವೂ ಅದರೊಳಗೆ ಇರಬೇಕು. 747 00:44:26,208 --> 00:44:27,791 ನಿನಗೆ ಇದು ಹೇಗೆ ಸಿಕ್ಕಿತು? 748 00:44:28,083 --> 00:44:31,582 ನಾನು ಅಲ್ಲಿಗೆ ಹೋಗಿದ್ದನ್ನು ತಿಳಿದಮೇಲೆ ಆ ಕಚೇರಿಯಿಂದ ಯಾರೋ ಸಂಪರ್ಕಿಸಿದರು. 749 00:44:31,583 --> 00:44:34,708 ಅವನ ಗೃಹ ಕಚೇರಿಯನ್ನೂ ಸಹ ನೋಡಲು ನನಗೆ ಆಸಕ್ತಿ ಇರಬಹುದು ಎಂದು ಭಾವಿಸಿದ. 750 00:44:36,125 --> 00:44:38,083 ಅವು ನಿಮಗೆ ಎಷ್ಟು ಮುಖ್ಯವೆಂದು ಸ್ಪಷ್ಟವಾಗಿರುವುದರಿಂದ, 751 00:44:38,500 --> 00:44:43,041 ನಮ್ಮ ಗುರಿಗಳನ್ನು ಸಾಧಿಸುವಲ್ಲಿ ನಾವು ಪರಸ್ಪರ ನೆರವಾಗಬಹುದೆಂದು ನಾನು ಭಾವಿಸಿದೆ. 752 00:44:45,125 --> 00:44:46,875 ಏನಾದರೂ ಬೇಕಿದ್ದಲ್ಲಿ ಸಮೀಪದಲ್ಲೇ ಇರುತ್ತೇನೆ. 753 00:44:47,500 --> 00:44:48,500 ನನಗೆ ಬೇಕಾಗಲ್ಲ. 754 00:45:03,333 --> 00:45:04,957 - ಹಲೋ? - ಚಾರ್ಲ್ಸ್ ಬ್ರಾಡಾಕ್? 755 00:45:04,958 --> 00:45:06,457 ಡಿಟೆಕ್ಟಿವ್ ಬೋವೆನ್. 756 00:45:06,458 --> 00:45:09,375 ನಿಮ್ಮ ಗಂಡನ ಗೃಹ ಕಚೇರಿಯನ್ನು ಶೋಧಿಸಲು ನನ್ನ ಬಳಿ ವಾರಂಟ್ ಇದೆ. ಹೋಗೋಣ. 757 00:45:13,208 --> 00:45:15,041 ಇದೇನು ಅಸಂಬದ್ಧ? 758 00:45:21,625 --> 00:45:22,999 ತ್ವರಿತವಾಗಿ ಜಾರಿಗೊಳಿಸಲಾಗಿದೆ. 759 00:45:23,000 --> 00:45:25,040 ಯಾವುದೋ ಬಲವಾದ ಕಾರಣವಿರಬೇಕು. 760 00:45:25,041 --> 00:45:26,749 ನೀವು ಠಾಣೆಯಲ್ಲಿ ಮಾತಾಡುವುದು ಉತ್ತಮ. 761 00:45:26,750 --> 00:45:28,499 12ನೇ ಠಾಣೆಯಲ್ಲಿ ಬಳಸಲು ನಮಗೆ ಜಾಗವಿದೆ. 762 00:45:28,500 --> 00:45:29,540 ಆಹಾ, ಎಂಥಾ ಕಾಳಜಿ! 763 00:45:29,541 --> 00:45:31,083 ಡಿಟೆಕ್ಟಿವ್ ಬೋವೆನ್? 764 00:45:32,875 --> 00:45:34,375 ಮೊಲದ ಮಾಂಸ ಮತ್ತು ತರಕಾರಿ ಭಕ್ಷ್ಯ 765 00:45:50,500 --> 00:45:51,375 ನಿಕ್ಕಿ? 766 00:46:35,250 --> 00:46:36,582 ನೀನು ಎಲ್ಲಿಗೆ ಹೋಗಿದ್ದೆ? 767 00:46:36,583 --> 00:46:40,040 ನನ್ನನ್ನ ಆಪತ್ಭಾಂಧವಳು ಅನ್ನಿರಿ, ಲಿಯು, ಏಕೆಂದರೆ ನಮ್ಮನ್ನ ತೊಂದರೆಯಿಂದ ಈಗಷ್ಟೇ ಕಾಪಾಡಿದೆನು. 768 00:46:40,041 --> 00:46:43,749 ಕೊಲೆಯಾದ ರಾತ್ರಿ ನಿಕ್ಕಿ ಮ್ಯಾಕಿಂಟಾಷ್ ಫೋನನ್ನು ಕ್ಲೀವ್‌ಲ್ಯಾಂಡ್‌ನಲ್ಲೇ ಬಿಟ್ಟು ಹೋಗಿದ್ದಳು. 769 00:46:43,750 --> 00:46:47,249 ಆಡಮ್‌ನ ತಾಯಿ ಡೆಬ್ಬಿ ಮ್ಯಾಕಿಂಟಾಷ್‌ಗೆ ಹೇಳಿದಳು, ಅಂದಹಾಗೆ, ಆಕೆ ಇನ್ನೂ ಜೀವಂತವಾಗಿದ್ದಾಳೆ, 770 00:46:47,250 --> 00:46:49,165 ಆಡಮ್‌ಗೆ ಚೂರಿ ಇರಿತವಾಗಿದೆ ಎಂದು. 771 00:46:49,166 --> 00:46:51,540 ಆದರೆ ನಾವು ನಿಕ್ಕಿಗೆ ಆ ಮಾಹಿತಿ ಕೊಡಲೇ ಇಲ್ಲ. 772 00:46:51,541 --> 00:46:53,249 ಈ ಹೇಳಿಕೆಯನ್ನು ಫೋನ್ ಮೂಲಕ ಕೊಟ್ಟರೇ? 773 00:46:53,250 --> 00:46:55,415 ಇಲ್ಲ. ಆಕೆಯನ್ನು ಖುದ್ದಾಗಿ ಭೇಟಿಯಾಗಲು ಬಂದೆ, ಲಿಯು. 774 00:46:55,416 --> 00:46:56,915 ದೇವರೇ, ನ್ಯಾನ್. 775 00:46:56,916 --> 00:46:59,790 ನಾವು ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿದ್ದೇವೆ, 776 00:46:59,791 --> 00:47:02,165 ಆದರೆ ಓಹಾಯೋದ ದತ್ತಾಂಶದಲ್ಲಿರುವ ಡಿಎನ್‌ಎ, 777 00:47:02,166 --> 00:47:04,707 ನಿಕ್ಕಿಯನ್ನು ಈ ಹಿಂದೆಯೂ ಬಂಧಿಸಲಾಗಿತ್ತು, ಆಶ್ಚರ್ಯವೇನಿಲ್ಲ, 778 00:47:04,708 --> 00:47:07,290 ನಾನು ಅವಳಿಂದ ಕದ್ದಿದ್ದ ಸಿಗರೇಟ್ ಬಟ್‌ಗೆ ಅದು ಹೊಂದಿಕೆಯಾಗುತ್ತದೆ. 779 00:47:07,291 --> 00:47:10,249 ಎಷ್ಟು ಬಾಜಿ ಕಟ್ಟುತ್ತೀರಾ? ಕೊಲೆಯಾದ ರಾತ್ರಿ ಆಡಮ್ ಧರಿಸಿದ್ದ ಬಟ್ಟೆಯ ಮೇಲೆ 780 00:47:10,250 --> 00:47:11,582 ಆ ಡಿಎನ್‌ಎ ಸಿಗುತ್ತೆ ಅಂತೀನಿ. 781 00:47:11,583 --> 00:47:14,124 ಫ್ರಾನ್ ಅದನ್ನು ಖಚಿತಪಡಿಸಲು ಕಾಯುತ್ತಿರುವೆ, ಸಧ್ಯದಲ್ಲೇ ಬರಬಹುದು. 782 00:47:14,125 --> 00:47:16,749 ಆದರೆ ನಾನೀಗ ಆ ಮನೆಗೆ ಹೋಗುತ್ತಿರುವೆ, ಹಾಗಾಗಿ ನಾವು ಅಲ್ಲಿ ಸಿಗೋಣ. 783 00:47:16,750 --> 00:47:18,624 - ಇಲ್ಲ, ನೀನು ಅಲ್ಲಿಗೆ ಹೋಗುವಂತಿಲ್ಲ. - ಏನು? 784 00:47:18,625 --> 00:47:19,916 ನೀನು ಇಂಟರ್ನೆಟ್ ನೋಡಿಲ್ಲವೇ? 785 00:47:20,291 --> 00:47:23,416 ನನ್ನ ಫೋನ್ ಈಗಷ್ಟೇ ಚಾರ್ಜ್ ಆಯಿತು. ತಕ್ಷಣ ಮೊದಲಿಗೆ ನಿಮಗೆ ಕರೆ ಮಾಡಿದೆ. ಏನು-- 786 00:47:25,500 --> 00:47:27,582 "ಆಕ್ರಮಣಶೀಲತೆಯ ಇತಿಹಾಸವಿರುವ ಪತ್ತೇದಾರ್ಥಿ." 787 00:47:27,583 --> 00:47:28,666 ಓಹ್, ಇಲ್ಲ. 788 00:47:29,416 --> 00:47:30,540 ಛೇ! 789 00:47:30,541 --> 00:47:33,249 - ಇಲ್ಲ. - ವರ್ಷಗಳ ಹಿಂದಿನ ನಿನ್ನ ತಪ್ಪುಗಳೆಲ್ಲ, ನ್ಯಾನ್, 790 00:47:33,250 --> 00:47:34,707 ಎಲ್ಲೆಡೆ ಸುದ್ದಿ ಹಬ್ಬಿದೆ. 791 00:47:34,708 --> 00:47:35,832 ಛೇ. 792 00:47:35,833 --> 00:47:37,832 ನೀನು ಪ್ರಕರಣದಿಂದ ಹೊರಗಿದ್ದೀಯ, ಅಧಿಕೃತವಾಗಿ. 793 00:47:37,833 --> 00:47:39,207 ಆದರೆ, ಲಿಯು, ಅವಳನ್ನು ಪತ್ತೆ ಮಾಡಿದೆ. 794 00:47:39,208 --> 00:47:40,458 ಇಲ್ಲ, ನೀನು ಮಾಡಲಿಲ್ಲ. 795 00:47:40,916 --> 00:47:43,124 ಅದು ನಂಬಲರ್ಹವಲ್ಲದ, ದುಃಖಿತ ತಾಯಿಯಿಂದ ಬಂದ ಗಾಳಿಮಾತು, 796 00:47:43,125 --> 00:47:45,166 ಅದೂ ನ್ಯಾಯವ್ಯಾಪ್ತಿಯಲ್ಲಿರದ ಪತ್ತೇದಾರ್ಥಿಯಿಂದ. 797 00:47:45,625 --> 00:47:49,124 ನಮಗೆ ಡಿಎನ್ಎ ಹೊಂದಾಣಿಕೆ ಸಿಕ್ಕಿರುವಾಗ, ಅವಳು ದಾಖಲೆಯಲ್ಲಿ ಇರುವುದು ಮುಖ್ಯವಾಗಲ್ಲ. 798 00:47:49,125 --> 00:47:50,957 ನಾನು ಲ್ಯಾಬ್ ಪರೀಕ್ಷೆಗಳನ್ನ ನಿಲ್ಲಿಸಿದೆ, ನ್ಯಾನ್. 799 00:47:50,958 --> 00:47:53,250 ಏನು? ದಯವಿಟ್ಟು, ಬೇಡ. ದಯವಿಟ್ಟು, ಬೇಡ. 800 00:47:54,000 --> 00:47:56,625 ರಜೆಯಲ್ಲಿರುವ ಸಿಬ್ಬಂದಿ ತಾಂತ್ರಿಕ ವಿನಂತಿಗಳನ್ನು ಮಾಡಲು ಸಾಧ್ಯವಿಲ್ಲ. 801 00:47:57,333 --> 00:48:00,165 ರಜೆಯ ಮೇಲೆ? ಲಿಯು, ಬೇಡ. 802 00:48:00,166 --> 00:48:02,750 ನನ್ನನ್ನು ರಜೆಯ ಮೇಲೆ ಇಡಬೇಡಿ, ದಯವಿಟ್ಟು, ನಾನು ರಜೆ ಮೇಲೆ ಇರಲಾರೆ. 803 00:48:04,125 --> 00:48:07,082 ಮತ್ತು ಇದಲ್ಲದೆ, ನಾವು ಈಗಾಗಲೇ ಒಬ್ಬ ಅನುಮಾನಿತ ವ್ಯಕ್ತಿಯನ್ನು ಕರೆತಂದಿದ್ದೇವೆ. 804 00:48:07,083 --> 00:48:08,208 ಯಾರು? 805 00:48:09,625 --> 00:48:11,333 ಹಾಗಾದರೆ, ನೀವು ಹೊರಡುತ್ತಿದ್ದೀರಾ? 806 00:48:12,166 --> 00:48:14,083 ಬಹುಶಃ, ನನಗೆ ಗೊತ್ತಿಲ್ಲ. ನನಗೆ ಹೋಗಲು ಇಷ್ಟವಿಲ್ಲ. 807 00:48:14,791 --> 00:48:16,041 ನನಗೆ ನಿಜವಾಗಲೂ ಹೋಗಲು ಇಷ್ಟವಿಲ್ಲ. 808 00:48:16,958 --> 00:48:17,999 ಹಾಂ. 809 00:48:18,000 --> 00:48:20,165 ಆದರೆ ನನಗೆ ಬೇರೆ ಆಯ್ಕೆ ಇಲ್ಲದಿರಬಹುದು. 810 00:48:20,166 --> 00:48:21,458 ಕೆಲವೊಮ್ಮೆ ನಾನು... 811 00:48:22,541 --> 00:48:25,165 ನಾನು ಅಲ್ಲಿಯೇ ಒಳಗಡೆ ಇರಬೇಕಿತ್ತೇನೋ ಎಂದು ಅನಿಸುತ್ತಿತ್ತು, 812 00:48:25,166 --> 00:48:26,625 ಅಂದರೆ, ಜೈಲಿನಲ್ಲಿ. 813 00:48:28,208 --> 00:48:29,208 ಏನು? 814 00:48:29,583 --> 00:48:32,416 ನನಗೆ ಅನಿಸಿತು, ಬಹುಶಃ ಅದಕ್ಕಾಗಿಯೇ ನಾನು ಒಳಗಡೆ ಸ್ವಲ್ಪಮಟ್ಟಿಗೆ 815 00:48:33,333 --> 00:48:36,000 ಸಮಾಧಾನದ ಭಾವನೆ ಅನುಭವಿಸಿದೆ ಎಂದು. 816 00:48:37,416 --> 00:48:39,416 ಬಹುಶಃ ನನಗೆ ಹಾಗೆ ಆಗಲೇಬೇಕಿತ್ತೇನೋ ಎಂಬಂತೆ ಅನಿಸಿತು. 817 00:48:41,625 --> 00:48:42,458 ಈಥನ್, 818 00:48:43,583 --> 00:48:45,083 ಹಾಗೆ ಯೋಚಿಸುವುದನ್ನು ನಿಲ್ಲಿಸು. 819 00:48:47,375 --> 00:48:48,500 ನಿಮಗೆ ಅದು ಅರ್ಥವಾಗಲ್ಲ. 820 00:48:55,708 --> 00:48:57,458 ಕೆವಿನ್‌ನ ಭೇಟಿಯ ನಂತರ, ನಾನು ಮನೆಗೆ ಬಂದೆ. 821 00:48:58,166 --> 00:48:59,375 ನಾನು ಬಟ್ಟೆ ಬದಲಾಯಿಸಬೇಕಿತ್ತು. 822 00:49:00,208 --> 00:49:03,499 ನಾನು ಒಳಗೆ ಹೋದಾಗ, ಏನೋ ತಪ್ಪಾಗಿದೆ ಎಂದು ನನಗೆ ತಿಳಿದಿತ್ತು. 823 00:49:03,500 --> 00:49:05,375 ಆಮೇಲೆ ಆತನನ್ನು ನೋಡಿದೆ. 824 00:49:06,166 --> 00:49:08,165 - ಅಮ್ಮಾ? - ನನ್ನ ಮೊದಲ ಆಲೋಚನೆ ಅಮ್ಮನನ್ನ ಹುಡುಕಬೇಕೆಂಬುದು. 825 00:49:08,166 --> 00:49:09,749 ಆಕೆ ಚೆನ್ನಾಗಿದ್ದಾಳಾ? ಆಕೆಗೆ ಹೊಡೆದನೇ? 826 00:49:09,750 --> 00:49:12,458 - ಅಮ್ಮಾ? - ನಾನು ಕೂಗಿದಾಗ, ಆಕೆ ಅಲ್ಲಿರಲಿಲ್ಲ. 827 00:49:12,875 --> 00:49:15,458 ಆಗ ನನಗೆ ಅನಿಸಿದ್ದು, "ಆಕೆ ಅದನ್ನು ಮಾಡಿದರು. 828 00:49:16,000 --> 00:49:17,749 ಆಕೆ ಆತನನ್ನು ಇರಿದು ಕೊಂದುಬಿಟ್ಟರು." ಎಂದು. 829 00:49:17,750 --> 00:49:20,708 ಆಗ ನಾನು ಅಂದುಕೊಂಡೆ, "ನಾನು ಆಕೆಯನ್ನು ರಕ್ಷಿಸಬೇಕು" ಎಂದು. 830 00:49:21,250 --> 00:49:24,415 ಹಾಗಾಗಿ ನಾನು ಕಚೇರಿಗೆ ಹೋದೆ, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದೆ, 831 00:49:24,416 --> 00:49:26,333 ಯಾರೋ ಒಳನುಗ್ಗಿದಂತೆ ಕಾಣುವಂತೆ ಮಾಡಿದೆ. 832 00:49:26,916 --> 00:49:28,916 ಕಿಟಕಿ ಒಡೆದು, ಕೈಗೆ ಸಿಕ್ಕಿದ್ದೆಲ್ಲಾ ತೆಗೆದುಕೊಂಡೆ. 833 00:49:29,500 --> 00:49:32,125 ಮತ್ತು ನಾನು ಹೊರಗೆ ಹೋಗುತ್ತಿರುವಾಗ, ಆತ ಮಾತಾಡಿದ್ದು ಕೇಳಿಸಿತು. 834 00:49:35,208 --> 00:49:36,790 ನಾನು ಯಾರನ್ನಾದರೂ ಕರೆಯಬಹುದಿತ್ತು. 835 00:49:36,791 --> 00:49:39,000 ಒಂದು ಆಂಬ್ಯುಲೆನ್ಸ್. ಆತನಿಗೆ ನಾನು ನೆರವಾಗಬಹುದಿತ್ತು. ಆದರೆ... 836 00:49:40,291 --> 00:49:41,416 ನಾನು ಸುಮ್ಮನೆ ಹೋಗಿಬಿಟ್ಟೆ. 837 00:49:45,166 --> 00:49:47,666 ನಾನು ಈಗ ಅದರ ಬಗ್ಗೆ ಯೋಚಿಸಿದಾಗ... 838 00:49:51,041 --> 00:49:52,125 ಹಾಗೆ ಮಾಡಿದ್ದು ಸರಿ ಅನಿಸುತ್ತೆ. 839 00:49:54,416 --> 00:49:56,416 ಆಕೆಯನ್ನು ರಕ್ಷಿಸಲು ನಾನು ಹಾಗೆ ಮತ್ತೆ ಮಾಡಿರುತ್ತಿದ್ದೆ. 840 00:50:00,416 --> 00:50:02,083 ಕೊಲೆಗಾರರೆಲ್ಲರೂ ಒಂದೇ ಥರ ಇರುತ್ತಾರೆ. 841 00:50:11,916 --> 00:50:13,416 ನೀವು ಬರಬೇಕೆಂದು ನಾನು ಬಯಸಿದ್ದೆ. 842 00:50:17,416 --> 00:50:19,375 ನೀವು ಹೊರಡುವಂತಿದ್ದರೆ, ನಾನೂ ನಿಮ್ಮ ಜೊತೆ ಬರುತ್ತೇನೆ. 843 00:51:34,833 --> 00:51:36,375 ಹಲೋ. ನಾವು ಮನೆಗೆ ಬಂದೆವು. 844 00:51:36,958 --> 00:51:38,750 ಸರಿಯಾದ ಹೊತ್ತಿಗೆ ಬಂದಿರಿ. ಊಟ ಸಿದ್ಧವಾಗಿದೆ. 845 00:51:39,875 --> 00:51:40,708 ದಿನ ಚೆನ್ನಾಗಿತ್ತಾ? 846 00:51:43,416 --> 00:51:44,750 ಹೌದು. 847 00:51:45,666 --> 00:51:46,625 ನೀನು? 848 00:51:47,500 --> 00:51:48,500 ಕಾರ್ಯನಿರತಳಾಗಿದ್ದೆ. 849 00:51:50,500 --> 00:51:52,000 ಅವನು ಯಾಕೆ ಹೀಗೆ ಆಡುತ್ತಿದ್ದಾನೆ? 850 00:51:54,458 --> 00:51:55,708 ಅವನು ಹೊರಡಲು ಬಯಸುತ್ತಾನೆ, ಕ್ಲೋ. 851 00:51:57,083 --> 00:51:58,624 ನನ್ನ ಜೊತೆ ಓಹಾಯೋಗೆ ಹಿಂತಿರುಗಲು. 852 00:51:58,625 --> 00:52:00,040 ಆದರೆ ನೀನು ಹೋಗುತ್ತಿಲ್ಲ. 853 00:52:00,041 --> 00:52:02,583 ನನಗೆ ಗೊತ್ತಿಲ್ಲ. ನನಗನಿಸುತ್ತೆ, ಅದು ಸರಿ ಇರಬಹುದೆಂದು, ನಿಜವಾಗಲೂ. 854 00:52:04,750 --> 00:52:07,374 ಈ ರೀತಿ ಯೋಚಿಸಲು ಏನು ಕಾರಣ? 855 00:52:07,375 --> 00:52:09,583 ಪುಸ್ತಕದ ವ್ಯವಹಾರದ ಬಗ್ಗೆ ಕ್ಯಾಥರೀನ್ ನನಗೆ ಹೇಳಿದಳು. 856 00:52:13,291 --> 00:52:15,083 ನಾನು ಅದರ ಬಗ್ಗೆ ನಿನಗೆ ಇನ್ನೂ ಹೇಳಲಿಲ್ಲ, 857 00:52:15,666 --> 00:52:18,290 ಏಕೆಂದರೆ ನಾವು ಈ ಎಲ್ಲಾ ಇತರ ವಿಷಯಗಳನ್ನು ನಿಭಾಯಿಸುತ್ತಿದ್ದೆವು. 858 00:52:18,291 --> 00:52:22,083 ನನಗೆ ಆ ಎಲ್ಲಾ ಹೇಳಿಕೆ ನೀಡಿ ದುಡ್ಡು ಮಾಡಲು ಇಷ್ಟವಿಲ್ಲ. 859 00:52:23,916 --> 00:52:27,541 ನೀನು ಯಾರಿಗೆ ನಿಷ್ಠಳಾಗಿದ್ದೀಯ ಎಂಬುದು ನನಗೆ ಮುಖ್ಯ. 860 00:52:28,750 --> 00:52:30,415 ಯಾರ ಜೊತೆಗಿದ್ದೀಯ, ಯಾರನ್ನು ಬೆಂಬಲಿಸುತ್ತೀಯ, 861 00:52:30,416 --> 00:52:34,124 ಏಕೆಂದರೆ ಅದು ನಾನು, ನೀನು, ನಾವು, ಇದು, ಈಥನ್ ಅಷ್ಟೇ ಆಗಿರಬೇಕು, 862 00:52:34,125 --> 00:52:37,958 ನೂರಕ್ಕೆ ನೂರು, ಇಲ್ಲದಿದ್ದರೆ ನಮ್ಮ ಕಥೆ ಮುಗಿಯಿತು. 863 00:52:40,541 --> 00:52:44,916 ನನಗೆ ನೀನು ಮತ್ತು ಈಥನ್ ಬಿಟ್ಟರೆ ಬೇರೆ ಯಾರೂ ಇಲ್ಲ. 864 00:52:45,916 --> 00:52:49,458 ನಮ್ಮ ಜೀವನ ಇಲ್ಲಿ ಒಟ್ಟಿಗೆ ಇರುವುದೇ ನನಗೆ ಮುಖ್ಯವಾಗಿರುವುದು. ಸರಿನಾ? 865 00:52:50,208 --> 00:52:53,541 ನಿನ್ನನ್ನು ಎಷ್ಟು ನೆನಸಿಕೊಂಡಿದ್ದೇನೆಂದು ನಿನಗೆ ಗೊತ್ತಿಲ್ಲ. 866 00:52:53,875 --> 00:52:57,499 ಪ್ರಭಾವಶಾಲಿ ವಕೀಲ ಹಾಗೂ ನಗರದ ಗಣ್ಯ ವ್ಯಕ್ತಿ ಬಿಲ್ ಬ್ರಾಡಾಕ್‌ರನ್ನು ಅವರ ವೆಸ್ಟ್ ವಿಲೇಜ್ 867 00:52:57,500 --> 00:53:01,165 ಟೌನ್‌ಹೌಸ್‌ನಿಂದ ಕೈಕೋಳ ಧರಿಸಿ ಹೊರಬರುತ್ತಿರುವುದು ಕಂಡುಬಂದಿತೆಂದು ವರದಿ ಬರುತ್ತಿವೆ. 868 00:53:01,166 --> 00:53:04,124 ಬ್ರಾಡಾಕ್‌ರನ್ನು ಈಸ್ಟ್ ಹ್ಯಾಂಪ್ಟನ್‌ನ ಒಬ್ಬ ಪತ್ತೇದಾರ ದಸ್ತಗಿರಿ ಮಾಡಿದ್ದು, 869 00:53:04,125 --> 00:53:07,165 ಅಲ್ಲಿಯ ಬ್ರಾಡಾಕ್‌ರ ಸಂಸ್ಥೆಯ ವಕೀಲರಲ್ಲೊಬ್ಬರಾದ ಆಡಮ್ ಮ್ಯಾಕಿಂಟಾಷ್‌ರನ್ನು 870 00:53:07,166 --> 00:53:09,290 {\an8}ಈ ಬೇಸಿಗೆಯಲ್ಲಿ ಭೀಕರವಾಗಿ ಕೊಲ್ಲಲಾಗಿತ್ತು. 871 00:53:09,291 --> 00:53:13,208 {\an8}ಮ್ಯಾಕಿಂಟಾಷ್‌ರ ಸ್ವಂತ ಮಗನನ್ನು ಇತ್ತೀಚೆಗೆ ತಂದೆಯ ಕೊಲೆ ಆರೋಪದಿಂದ ಖುಲಾಸೆಗೊಳಿಸಲಾಯಿತು, 872 00:53:14,041 --> 00:53:17,290 ಪ್ರಕರಣವು ಪರಿಹರಿಸಲ್ಪಡದೆ ಉಳಿದಿತ್ತು, ಈಗ ನೋಡಿದರೆ ಹಾಗನಿಸುತ್ತಿಲ್ಲ. 873 00:53:17,291 --> 00:53:19,958 ತೆರೆದುಕೊಳ್ಳುತ್ತಿರುವ ಈ ಕಥೆಯ ಬಗ್ಗೆ ಇನ್ನಷ್ಟು ತಿಳಿಯೋಣ ವಿರಾಮದ ನಂತರ. 874 00:53:22,208 --> 00:53:23,457 ನೀವು ಆರಾಮವಾಗಿದ್ದೀರಾ? 875 00:53:23,458 --> 00:53:24,541 ಊಟಕ್ಕೆ ತಯಾರಾ? 876 00:53:25,500 --> 00:53:26,707 ನಾವು ಕೂರಬೇಕು. 877 00:53:26,708 --> 00:53:27,708 ಹೌದು. 878 00:53:39,208 --> 00:53:41,207 {\an8}ಮತ್ತೊಮ್ಮೆ, ಇದು ಕೆಲವೇ ಕ್ಷಣಗಳ ಹಿಂದೆ, 879 00:53:41,208 --> 00:53:45,207 {\an8}ಈಸ್ಟ್ ಹ್ಯಾಂಪ್ಟನ್ ಪೊಲೀಸರು ಬಿಲ್ ಬ್ರಾಡಾಕ್‌ರನ್ನು ವಶಕ್ಕೆ ಪಡೆದರು. 880 00:53:45,208 --> 00:53:46,500 ಪತ್ರಿಕಾ ಮಾಧ್ಯಮವನ್ನು ಕರೆಸಿದ್ದೀಯ. 881 00:53:47,375 --> 00:53:49,250 ಧೈರ್ಯ ಮಾಡಿದೆ, ಆದರೆ ನಿಜಕ್ಕೂ ಮೂರ್ಖತನ. 882 00:53:49,833 --> 00:53:53,207 ಆಡಮ್ ಮ್ಯಾಕಿಂಟೋಷ್ ಪ್ರಕರಣದಲ್ಲಿ ಮಿಸ್ಟರ್ ಬ್ರಾಡಾಕ್ ಒಬ್ಬ ಅನುಮಾನಿತ ವ್ಯಕ್ತಿ, 883 00:53:53,208 --> 00:53:55,833 ಆದರೆ ಅವರು ನಡೆಯುತ್ತಿರುವ ಹಲವಾರು ತನಿಖೆಗಳಲ್ಲೂ ಶಾಮೀಲಾಗಿದ್ದಾರೆ. 884 00:54:38,791 --> 00:54:41,499 ವರದಿಗಳ ಪ್ರಕಾರ, ಪೊಲೀಸರು ಬ್ರಾಡಾಕ್‌ರವರ ಮನೆಯ ಮೇಲೆ ದಾಳಿ ನಡೆಸಿದರು... 885 00:54:41,500 --> 00:54:45,582 ಚೆನ್ನಾಗಿದೆ, ಎಲ್ಲವನ್ನೂ ನೀನು ತಪ್ಪಾಗಿ ತಿಳಿದುಕೊಂಡಿರುವುದು. ದಡ್ಡ. 886 00:54:45,583 --> 00:54:47,957 ಬಿಲ್ ಬ್ರಾಡಾಕ್, ಪ್ರಭಾವಶಾಲಿ ವಕೀಲ, 887 00:54:47,958 --> 00:54:50,957 {\an8}ಆಡಮ್ ಮ್ಯಾಕಿಂಟಾಷ್ ಕೊಲೆಗಾಗಿ ಬಂಧನಕ್ಕೆ ಒಳಪಡಿಸಲಾಗಿದೆ. 888 00:54:50,958 --> 00:54:52,375 ಪುಟ್ಟ, ಓಹ್, ಪುಟ್ಟ. 889 00:54:53,083 --> 00:54:54,458 ಪುಟ್ಟ, ಓಹ್, ಪುಟ್ಟ. 890 00:54:58,750 --> 00:55:00,625 ಸೂಳೆಮಗನೇ. 891 00:55:08,791 --> 00:55:09,625 ಜೇಕ್? 892 00:55:11,625 --> 00:55:13,624 ನಿನಗೆ ಅರ್ಸಾ ಮೇಜರ್ ಕಾಣುತ್ತಿದೆ, ಅಲ್ವಾ? 893 00:55:13,625 --> 00:55:15,291 ಹೌದು, ನನಗೆ ಕಾಣುತ್ತಿದೆ. 894 00:55:17,166 --> 00:55:18,750 ಇವತ್ತು ನಾವು ಮಾಡಿದ್ದು ಅದನ್ನೇ. 895 00:55:20,541 --> 00:55:22,083 ಸಮುದ್ರತೀರದಲ್ಲಿ ಧೂಮಪಾನ ಮಾಡಿದೆವು. 896 00:55:22,958 --> 00:55:24,000 ಬೆಂಕಿ ಹಾಕಿದೆವು. 897 00:55:24,500 --> 00:55:25,833 ನಕ್ಷತ್ರಪುಂಜದತ್ತ ನೋಡಿದೆವು. 898 00:55:27,083 --> 00:55:28,291 ಅದೇ ಕಥೆ. 899 00:55:38,041 --> 00:55:39,875 ನೀನಿಲ್ಲದೆ ನನ್ನ ಜೀವನದಲ್ಲಿ ಯಾವ ಕಥೆಯೂ ಅಲ್ಲ. 900 00:55:43,750 --> 00:55:45,666 ಹೇಳುವಷ್ಟು ಚೆನ್ನಾಗಿರುವಂಥದ್ದು ಇಲ್ಲವೇ ಇಲ್ಲ. 901 00:55:53,333 --> 00:55:54,375 ನಾವು ಹೇಗೆ ಪ್ರಾರಂಭಿಸಬೇಕು? 902 00:56:25,375 --> 00:56:27,250 "ಈಗ ನಾನು ನಿದ್ರಿಸಲು ಮಲಗುತ್ತಿದ್ದೇನೆ." 903 00:56:29,958 --> 00:56:32,208 "ನನ್ನ ಪ್ರಾಣವನ್ನು ರಕ್ಷಿಸಲು ಭಗವಂತನನ್ನು ಪ್ರಾರ್ಥಿಸುತ್ತೇನೆ." 904 00:56:35,250 --> 00:56:37,375 "ಮತ್ತು ನಾನು ಎಚ್ಚರಗೊಳ್ಳುವ ಮೊದಲು ಸತ್ತರೆ..." 905 00:56:42,833 --> 00:56:44,958 "ನನ್ನ ಪ್ರಾಣವನ್ನು ತೆಗೆದುಕೊಳ್ಳುವಂತೆ ಕರ್ತನನ್ನು ಪ್ರಾರ್ಥಿಸುವೆ." 906 00:58:33,958 --> 00:58:35,957 ಉಪ ಶೀರ್ಷಿಕೆ ಅನುವಾದ: ರಘುನಂದನ್ ಬಿ. ಎಸ್. 907 00:58:35,958 --> 00:58:38,041 ಸೃಜನಶೀಲ ಮೇಲ್ವಿಚಾರಕರು ಮಧುರಾ ಸುಬ್ರಹ್ಮಣ್ಯ