1 00:00:01,000 --> 00:00:03,720 ಈ ಸಂಚಿಕೆಯು ಆತ್ಮಹತ್ಯೆ ಸೇರಿದಂತೆ ಸೂಕ್ಷ್ಮ ಭಾವನೆಗಳ ವಿಷಯಗಳನ್ನು ಒಳಗೊಂಡಿದೆ. 2 00:00:03,800 --> 00:00:04,960 ವೀಕ್ಷಕರ ವಿವೇಚನೆ ಅಗತ್ಯ. 3 00:00:10,520 --> 00:00:11,960 - ಲ್ಯಾಜರಸ್‌! - ಇಲ್ಲ. ನೀವು ಈಗಲೇ 4 00:00:12,040 --> 00:00:13,920 ಅರ್ಲೋ ಜೋನ್ಸ್ ಕೋಣೆಗೆ ಹೋಗಿ 5 00:00:14,320 --> 00:00:15,800 ಅವನು ಅಲ್ಲಿದ್ದಾನಾ ಅಂತ ನನಗೆ ಹೇಳಿ. 6 00:00:15,880 --> 00:00:17,120 ಅವನು ಬದುಕಿದ್ದಾನಾ? 7 00:00:21,320 --> 00:00:24,120 ಸಿಸಿ ಅರ್ನಾಲ್ಡ್‌ ಅವರ ದ ಜುನಿಪರ್‌ ಬುಶ್‌: ದ ಲಾಸ್‌ ಆಫ್‌ ಇನ್ನೋಸೆನ್ಸ್ 8 00:00:26,960 --> 00:00:30,520 ಡಾ. ಲ್ಯಾಜ್, ಅವನು ಇಲ್ಲಿದ್ದಾನೆ. ತನ್ನ ಕೋಣೆಯಲ್ಲಿ. 9 00:01:05,040 --> 00:01:11,040 ಹರ್ಲಾನ್‌ ಕೊಬೆನ್ಸ್ ಲ್ಯಾಜರಸ್‌ 10 00:01:56,600 --> 00:01:59,240 ನಮ್ಮ ಕೊನೆಯ ಸಮಾಲೋಚನೆಯ ದಿನದಂದು ನನ್ನ ತಂದೆ ತೀರಿಕೊಂಡರು. 11 00:02:00,240 --> 00:02:04,560 ನೀನು ದೇವರ ಜೊತೆ ಮಾತಾಡುತ್ತಿದ್ದೆ, ದೇವರು ನಾನು ನಕಲಿ ಎಂದ ಅಂತ ನೀನು ಹೇಳಿದ ದಿನ. 12 00:02:05,480 --> 00:02:06,840 ನನಗೆ ಶಿಕ್ಷೆ ನೀಡುವಂತೆ ಅವನನ್ನ ಕೇಳಿದೆ, 13 00:02:07,560 --> 00:02:09,120 ಅವನದನ್ನು ಮಾಡುತ್ತೇನೆ ಎಂದ ಅಂತ ಹೇಳಿದೆ. 14 00:02:10,120 --> 00:02:11,960 ಕೇವಲ ನಿನಗಾಗಿ ಹಾಗೆ ಮಾಡುವನು ಅಂತ. 15 00:02:15,840 --> 00:02:16,680 ಮಾಡಿದನಾ? 16 00:02:21,880 --> 00:02:23,680 ಅಥವಾ ಭೂಮಿಯ ಮೇಲಿರುವ ಯಾರೋ ಮಾಡಿದರಾ? 17 00:02:25,480 --> 00:02:29,520 ನನ್ನ ತಂದೆ ಕಚೇರಿಯಲ್ಲಿ ತಲೆಗೆ ಗುಂಡೇಟಿನಿಂದಾಗಿ ಸಾವನ್ನಪ್ಪಿದರು, 18 00:02:29,600 --> 00:02:30,840 ಮತ್ತು ನನಗೆ ಈಗಷ್ಟೇ ಗೊತ್ತಾಯಿತು... 19 00:02:30,920 --> 00:02:32,240 ನೀನವರ ರೋಗಿಯಾಗಿದ್ದೆ ಅಂತ. 20 00:02:32,320 --> 00:02:33,600 ಅವರ ಕೆಲಸದ ಸ್ಥಳ ನಿನಗೆ ಗೊತ್ತಿತ್ತು. 21 00:02:36,960 --> 00:02:39,640 ನೀನು ನನ್ನ ತಂದೆಯ ಕೊಲೆ ಮಾಡಿಸಿದೆಯಾ, ವಿಕೃತ ದುಷ್ಟನೇ? 22 00:02:50,680 --> 00:02:54,240 ದೇವರು ನಿಗೂಢ ರೀತಿಯಲ್ಲಿ ಕೆಲಸ ಮಾಡುತ್ತಾನೆ. 23 00:02:57,120 --> 00:02:58,000 ನಿನಗೆ ಹೇಗೆ ಗೊತ್ತಾಯಿತು? 24 00:03:00,680 --> 00:03:02,720 ನಿನಗೆ ಹೇಗೆ ಗೊತ್ತಾಯಿತು? 25 00:03:24,480 --> 00:03:27,120 ನೀನು ಬಂಧಿತನಾಗುವ ಮೊದಲು ನನ್ನ ತಂದೆಯನ್ನು ಭೇಟಿ ಮಾಡಿದ್ದೆ. 26 00:03:28,920 --> 00:03:30,720 "ಪ್ರತೀಕಾರ ನನ್ನದು" ಅಂತ ಅವರಿಗೆ ಹೇಳಿದೆ. 27 00:03:32,280 --> 00:03:34,360 ಅದು ನಿನಗೆ ಹೇಗೆ ಗೊತ್ತಾಯಿತು? 28 00:03:35,920 --> 00:03:38,120 ಬಹುಶಃ ದೇವರ ಜೊತೆ ನೀನೊಬ್ಬನೇ ಅಲ್ಲ ಮಾತಾಡೋದು. 29 00:03:39,560 --> 00:03:41,640 ನಾನು ನಿನ್ನ ತಂದೆಯನ್ನು ಭೇಟಿ ಮಾಡಿದ್ದೆ, ಹೌದು. 30 00:03:42,960 --> 00:03:46,760 ಪೊಲೀಸರು ನನ್ನನ್ನು ತಡೆಯುವ ಮೊದಲು ಸ್ವಲ್ಪ ರಕ್ತವನ್ನು ಸಹ ಬರಿಸಿದೆ. 31 00:03:48,720 --> 00:03:50,120 ಅವನು ದುರ್ಬಲ ಮನುಷ್ಯನಾಗಿದ್ದ, 32 00:03:51,000 --> 00:03:52,720 ನನ್ನ ನಂಬಿಕೆಗೆ ದ್ರೋಹ ಬಗೆದ. 33 00:03:54,680 --> 00:03:57,640 ನನ್ನ ಆಸೆಗಳ ಬಗ್ಗೆ ನಾನವನಿಗೆ ಹೇಳಿದೆ ಮತ್ತು ಅವನದನ್ನು ಪೊಲೀಸರಿಗೆ ಹೇಳಿದ. 34 00:03:57,720 --> 00:03:59,960 ಹಾಗಾಗಿ, ಅವನು ಸತ್ತಿದ್ದಕ್ಕೆ ನನಗೆ ಬೇಜಾರಿದೆಯಾ? 35 00:04:02,240 --> 00:04:03,200 ಇಲ್ಲ. 36 00:04:04,360 --> 00:04:08,800 ಆದರೆ ನಾನು ಇಲ್ಲಿಂದ ಕೊಲೆ ವ್ಯವಸ್ಥೆ ಮಾಡಿಸಿರಬಹುದು ಅಂತ ನಿನಗನಿಸಿದರೆ... 37 00:04:10,160 --> 00:04:13,640 "ಆಸೆಗಳು" ಎಂದರೆ ನಾಲ್ಕು ಮಹಿಳೆಯರ ಅತ್ಯಾಚಾರ ಮಾಡಿ ಕೊಲೆ ಮಾಡೋ ಆಸೆಗಳಾ? 38 00:04:14,600 --> 00:04:16,560 ನಿನ್ನ ಅಪ್ಪನಿಗೂ ನಾನು ಅರ್ಥ ಆಗಲಿಲ್ಲ. 39 00:04:18,000 --> 00:04:21,040 ತಂದೆಯಂತೆಯೇ ಮಗ. 40 00:04:21,680 --> 00:04:23,360 ನನಗೆ ಅರ್ಥ ಆಗಲ್ಲ ಅಂದುಕೊಂಡೆಯಾ? 41 00:04:27,280 --> 00:04:28,720 ನನಗೆ ನೀನು ಚೆನ್ನಾಗಿ ಅರ್ಥ ಆಗಿರುವೆ. 42 00:04:34,160 --> 00:04:35,440 ಇಮೋಜಿನ್ ಕಾರ್ಸ್‌ವುಡ್‌. 43 00:04:36,000 --> 00:04:36,840 ಡಾಕ್ಟರ್‌. 44 00:04:40,240 --> 00:04:42,400 ಅವಳಿಗೆ ನನ್ನ ತಂದೆಯ ಜೊತೆ ಸಂಬಂಧ ಇತ್ತು. 45 00:04:42,480 --> 00:04:45,920 ನಾನು ಅವಳನ್ನು ಕೊಲ್ಲಲಿಲ್ಲ. 46 00:04:46,360 --> 00:04:52,200 ನಾನು ನಿನಗೂ ಮೊದಲೇ ಹೇಳಿದ್ದೆ. ಎಲ್ಲರಿಗೂ ಹೇಳಿದೆ, ನಾನವಳನ್ನು ಕೊಂದಿಲ್ಲ. 47 00:04:52,280 --> 00:04:54,720 ಆದರೆ ನೀವು ಯಾರೂ ಕೇಳಲಿಲ್ಲ. 48 00:04:54,800 --> 00:04:56,920 ಅಪರಾಧ ನಡೆದ ಸ್ಥಳದಲ್ಲಿ ನಿನ್ನ ಡಿಎನ್ಎ ತುಂಬಿತ್ತು. 49 00:04:57,000 --> 00:04:59,240 ನನ್ನನ್ನು ಸಿಕ್ಕಿಹಾಕಿಸಿದರು. 50 00:04:59,320 --> 00:05:00,600 ಓಹ್, ಹೌದು. ಸರಿ, ಖಂಡಿತ. 51 00:05:02,960 --> 00:05:05,200 ಅದು ನನ್ನಷ್ಟೇ ನಿನಗೂ ಗೊತ್ತು, ಡಾಕ್ಟರ್. 52 00:05:05,280 --> 00:05:07,200 ಇಮೊಜಿನ್ ಮೇಲೆ ಅತ್ಯಾಚಾರ ನಡೆದಿಲ್ಲ. 53 00:05:07,640 --> 00:05:09,960 ಮತ್ತು ನಿನಗೆ ನನ್ನ ಬಗ್ಗೆ ಗೊತ್ತು, 54 00:05:10,040 --> 00:05:14,800 ನನ್ನ ಮಾದರಿ ಹಾಗಲ್ಲ, ಇದು ನನ್ನ ಮಾದರಿಯಂತಿಲ್ಲ. 55 00:05:14,880 --> 00:05:20,560 ನನ್ನ ಅಪರಾಧಗಳನ್ನು ಸಾಬೀತುಪಡಿಸಲು ಆಗಲಿಲ್ಲ ಅಂತ ನನ್ನನ್ನು ಜೈಲಿಗೆ ಹಾಕಲು ದಾರಿ ಹುಡುಕಿದರು. 56 00:05:23,200 --> 00:05:27,200 ಗಂಡ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ. 57 00:05:30,680 --> 00:05:32,200 ಮತ್ತು ಅವಳಿಗದು ತಿಳಿದಿತ್ತು. 58 00:05:34,040 --> 00:05:35,040 ಯಾರಿಗೆ? 59 00:05:36,440 --> 00:05:38,320 ಅಪರಾಧಿ ಅಂತ ತೀರ್ಪು ಬಂದಾಗ, 60 00:05:39,120 --> 00:05:42,680 ನಾನು ಪ್ರಮುಖ ಪತ್ತೇದಾರಿ ಕಡೆಗೆ ನೋಡಿದೆ, ಮತ್ತು ನನಗೆ ಏನು ಕಂಡಿತು ಗೊತ್ತಾ? 61 00:05:45,320 --> 00:05:47,200 ಅವಳು ನಗುತ್ತಿದ್ದಳು. 62 00:05:49,040 --> 00:05:51,240 ಚೆನ್ನಾಗಿ ಕೆಲಸ ಮಾಡಿದೆ ಎಂಬ ನಗು ಅಲ್ಲ. 63 00:05:51,320 --> 00:05:54,360 ತಪ್ಪಿಸಿಕೊಂಡೆ ಎಂಬ ನಗು. 64 00:06:08,280 --> 00:06:09,800 ಕೆಂಪ್ಬರ್ನ್‌ ಸುರಕ್ಷಿತ ಆಸ್ಪತ್ರೆ ಜೋನ್ಸ್‌ 65 00:06:18,080 --> 00:06:19,720 {\an8}ತನಿಖಾಧಿಕಾರಿ: ಡಿಟೆಕ್ಟೀವ್‌ ಆಲಿಸನ್‌ ಬ್ರೌನ್‌ 66 00:06:19,800 --> 00:06:20,720 {\an8}ಸಹಿ ಏ. ಬ್ರೌನ್‌ 67 00:06:20,800 --> 00:06:22,440 ಯಾಕೆಂದರೆ ನಾನು ನಿನ್ನನ್ನ ಹಿಂಬಾಲಿಸುತ್ತಿದ್ದೆ. 68 00:06:22,960 --> 00:06:25,800 ನನಗೆ ನಿನ್ನ ಮೇಲೆ ನಂಬಿಕೆ ಇರಲಿಲ್ಲ. ಈಗಲೂ ಇಲ್ಲ. 69 00:06:29,400 --> 00:06:30,640 ಮಾರ್ಗೊ ಮೆಕಿಂಟೈರ್‌. 70 00:06:31,120 --> 00:06:33,360 ನಾನು ಗಾಯಗಳನ್ನು ನೋಡಿದೆ, ಮತ್ತು ನೀನು ನನ್ನನ್ನು ಕೇಳಿದ್ದು ಸಂತೋಷ. 71 00:06:33,840 --> 00:06:36,840 ಅದು ವಿಶೇಷ, ಖಂಡಿತ ಸಂಗ್ರಹ ಯೋಗ್ಯ. 72 00:06:36,920 --> 00:06:38,720 ಅಪರೂಪ, ಅಂತಹ ಅಸ್ತ್ರ. 73 00:06:38,800 --> 00:06:40,240 ಮೊದಲು ಎಲ್ಲಾದರೂ ನೋಡಿದ್ದೀಯಾ? 74 00:06:40,320 --> 00:06:42,800 ಮೊದಲಿಗೆ ನಾನು ಇಲ್ಲ ಅಂದುಕೊಂಡೆ, ಆದರೆ ಆಮೇಲೆ ಒಂದು ಪ್ರಕರಣ ನೆನಪಾಯಿತು, 75 00:06:42,880 --> 00:06:45,440 ಒಂದು ಅಸಭ್ಯ ಲಂಡನ್ ಗ್ಯಾಂಗ್ ಅನ್ನು ಒಳಗೊಂಡಿದ್ದದ್ದು. 76 00:06:45,520 --> 00:06:48,000 ತರಕಾರಿ ಕತ್ತರಿಸಿದಂತೆ ವೈರಿಗಳನ್ನು ಕತ್ತರಿಸುತ್ತಿದ್ದರು. 77 00:06:48,800 --> 00:06:51,000 ಆದರೆ ಅದು ಯಾವಾಗ ಅಂತ ನೆನಪಿಸಿಕೊಳ್ಳಲು ತುಂಬಾ ತಲೆ ಕೆಡಿಸಿಕೊಂಡೆ. 78 00:06:52,280 --> 00:06:54,920 ಊಹೆ ಅಷ್ಟೇ, ಮಾರ್ಕ್, ಆದರೆ ಬಹುಶಃ ನೀನು ಲಂಡನ್‌ನಲ್ಲಿ ಇದ್ದಾಗ. 79 00:06:56,480 --> 00:06:59,120 ಹೌದು. 2016. 80 00:07:01,800 --> 00:07:04,520 ಅದು ನಿನ್ನ ಅಸ್ತ್ರ. ಮಸ್ತಾಗಿದೆ, ಅಲ್ವಾ? 81 00:07:05,360 --> 00:07:06,560 ದೇವರೇ. 82 00:07:06,640 --> 00:07:10,080 ಮಾರ್ಗೊಳನ್ನ ಕೊಂದ ಚಾಕು ಹೀಗೆ ಕಾಣುತ್ತೆ. 83 00:07:10,160 --> 00:07:11,800 ಅವು ಬ್ರೆಜಿಲ್‌ನಿಂದ ಅಕ್ರಮವಾಗಿ ಆಮದು ಆಗುತ್ತವೆ. 84 00:07:11,880 --> 00:07:12,720 ಡಿ. ಆಲಿಸನ್‌ ಬ್ರೌನ್‌ 85 00:07:12,800 --> 00:07:15,320 ಡಾರ್ಕ್ ವೆಬ್‌ನಲ್ಲಿ ಒಂದು ಮಾರುಕಟ್ಟೆ. ಡ್ರ್ಯಾಗನ್ ಅಪೆಕ್ಸ್ ಅಂತ. 86 00:07:15,400 --> 00:07:19,320 ಆರು ತಿಂಗಳ ಹಿಂದೆ ಕೋಳಿ ಲಾರಿಯ ಹಿಂಭಾಗದಿಂದ 400 ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು, 87 00:07:19,400 --> 00:07:21,960 ಇದನ್ನು ಸಾಕ್ಷಿ ಲಾಕರ್‌ನಿಂದ ತೆಗೆದೆ. 88 00:07:22,040 --> 00:07:23,280 ಒಳ್ಳೆಯ ಕೆಲಸ, ಸೆತ್. 89 00:07:25,600 --> 00:07:26,880 ವಿಚಿತ್ರ ಅನಿಸಲ್ವಾ... 90 00:07:28,000 --> 00:07:29,560 ಒಬ್ಬ ವ್ಯಕ್ತಿ ಆತ್ಮಹತ್ಯೆಯಿಂದ ಸಾಯುತ್ತಾನೆ, 91 00:07:29,640 --> 00:07:32,160 ಆಮೇಲೆ ಸ್ವಲ್ಪವೇ ಸಮಯದಲ್ಲಿ ಅವನ ಸಹಾಯಕಿಯ ಕೊಲೆ ಆಗುತ್ತೆ. 92 00:07:33,520 --> 00:07:34,360 ಹೌದು, ವಿಚಿತ್ರವೇ. 93 00:07:35,520 --> 00:07:36,640 ಏನಾದರೂ ಸಿದ್ಧಾಂತ ಇದೆಯಾ? 94 00:07:36,720 --> 00:07:37,560 ನನಗೆ ಗೊತ್ತು... 95 00:07:39,240 --> 00:07:40,320 ಡಾ. ಎಲ್ ಅವರದು... 96 00:07:41,480 --> 00:07:43,120 ಅದು ಆತ್ಮಹತ್ಯೆ ಅಂತ ಗೊತ್ತು, ಆದರೆ... 97 00:07:44,880 --> 00:07:48,000 ಆ ಗುಂಡೇಟಿನ ಅವಶೇಷಗಳ ವರದಿಯನ್ನು ನಾವು ಮತ್ತೊಮ್ಮೆ ನೋಡಬೇಕು ಅನಿಸುತ್ತೆ. 98 00:08:01,320 --> 00:08:03,520 ಹೇ. ಬಂದಿದ್ದಕ್ಕೆ ಧನ್ಯವಾದ. 99 00:08:04,640 --> 00:08:07,360 ನಿನ್ನ ಸತ್ತ ತಂದೆಯ ಕಚೇರಿಗೆ ಹಳೆಯ ಫೈಲ್‌ಗಳನ್ನು ನೋಡಲು ಬಂದಿದ್ದಕ್ಕಾ? 100 00:08:07,440 --> 00:08:10,640 ಇಂತಹ ಆಕರ್ಷಕ ಎರಡನೇ ಡೇಟ್‌ಗೆ ಹೇಗೆ ಬೇಡ ಎನ್ನಲಿ? 101 00:08:11,320 --> 00:08:15,720 ನಾನು ನನ್ನ ತಂಗಿಯನ್ನು ಕರೆಯುವವನಿದ್ದೆ, ಆದರೆ ನನಗೆ ನಿನ್ನ ವಸ್ತುನಿಷ್ಠತೆ ಬೇಕು. 102 00:08:15,800 --> 00:08:17,960 - ಎಂತಹ ಅದ್ಭುತ ವಿಷಯ. - ಹೂಂ, ಕ್ಷಮಿಸು. 103 00:08:18,040 --> 00:08:20,160 ಕ್ಷಮಿಸು, ನಾನು ಕೇಕ್ ತಂದೆ. 104 00:08:21,040 --> 00:08:22,600 ಇದಪ್ಪಾ ಮಾತು ಎಂದರೆ. 105 00:08:23,640 --> 00:08:26,320 ಮತ್ತೆ, ಇಲ್ಲಿ, ಈ ಫೈಲ್‌ಗಳಲ್ಲಿ ನಾವು ಏನನ್ನು ಹುಡುಕುತ್ತಿದ್ದೇವೆ? 106 00:08:26,400 --> 00:08:30,120 ನನ್ನ ತಂದೆಯ ಕಕ್ಷಿದಾರರ ಮೇಲಿನ ಡಿಟೆಕ್ಟೀವ್‌ ಆಲಿಸನ್‌ ಬ್ರೌನ್‌ ತನಿಖೆಗಳಲ್ಲಿ 107 00:08:30,200 --> 00:08:31,800 ಏನಾದರೂ ಅಸಾಮಾನ್ಯ ಕಾಣುತ್ತಾ ಅಂತ. 108 00:08:34,440 --> 00:08:35,280 ಇಮೊಜಿನ್‌ಗೆ ನ್ಯಾಯ ಕೊಡಿ 109 00:08:35,360 --> 00:08:38,600 ಅರ್ಲೋ ಜೋನ್ಸ್ ಒಬ್ಬ ಕ್ರೂರ ಕೊಲೆಗಾರ. ಇಮೊಜಿನ್ ಕಾರ್ಸ್‌ವುಡ್ ಅವನ ಬಲಿಪಶುಗಳಲ್ಲೊಬ್ಬಳು. 110 00:08:38,680 --> 00:08:39,520 ಹೆಸರು ಕೆಸಾಂಡ್ರಾ 111 00:08:39,600 --> 00:08:40,440 ಮನೋವೈದ್ಯಕೀಯ ವರದಿ 112 00:08:41,960 --> 00:08:44,000 ನನಗೆ ಮತ್ತೆ ಆ ಆಲೋಚನೆಗಳು ಬರುತ್ತಿವೆ. 113 00:08:46,800 --> 00:08:48,400 ಕೆಸಾಂಡ್ರಾ ರೋಡ್ಸ್‌ ಕೊಲೆಗಾರ ಪಲಾಯನಗೈದಿರುವ ಶಂಕೆ 114 00:08:48,480 --> 00:08:49,320 ಡಿ. ಬ್ರೌನ್‌ ಅವರಿಂದ 115 00:08:49,400 --> 00:08:50,240 ಗೆಳೆಯ ನೀಲ್ ಮೇಲೆ ಆರೋಪ 116 00:08:50,320 --> 00:08:52,360 {\an8}ಆಲಿಸನ್‌ ಬ್ರೌನ್‌ 117 00:08:53,720 --> 00:08:54,560 ಹೆಸರು ಹ್ಯಾರಿ ನ್ಯಾಶ್‌ 118 00:08:54,640 --> 00:08:55,960 ಮನೋವೈದ್ಯಕೀಯ ವರದಿ ಡಾ. ಲ್ಯಾಜರಸ್‌ 119 00:08:56,040 --> 00:08:57,640 ಅದು ಸರಿಯಾದ ಕೆಲಸ ಅಂತ ನೀವು ನನಗೆ ಹೇಳಿದಿರಿ. 120 00:08:57,720 --> 00:09:00,040 ಪೊಲೀಸರ ಬಳಿ ಹೋಗಲು ನೀವೇ ನನಗೆ ಪ್ರೋತ್ಸಾಹ ನೀಡಿದ್ದು. 121 00:09:01,280 --> 00:09:03,120 ಕೊಲೆಗಾಗಿ ಶಿಶುಕಾಮಿ ಪಾದ್ರಿಯ ಬಂಧನ 122 00:09:03,200 --> 00:09:06,200 ನಾನದನ್ನು ಮಾಡಲಿಲ್ಲ. ನಾನು ಹ್ಯಾರಿಯನ್ನು ಕೊಲ್ಲಲಿಲ್ಲ. ನಾನು ಕೊಲ್ಲಲಿಲ್ಲ. 123 00:09:07,720 --> 00:09:09,400 ಕ್ಷಮಿಸು, ಹ್ಯಾರಿನಾ? ಅದು ಯಾರು? 124 00:09:09,480 --> 00:09:10,760 ಹ್ಯಾರಿ ನ್ಯಾಶ್‌. 125 00:09:14,480 --> 00:09:16,240 ಹ್ಯಾರಿ ನ್ಯಾಶ್‌ ನ್ಯಾಯದ ಭರವಸೆ ನೀಡಿದ ಪೊಲೀಸರು 126 00:09:17,880 --> 00:09:18,760 ಅವಳು ಸುಳ್ಳು ಹೇಳಿದಳು. 127 00:09:19,840 --> 00:09:22,120 ಅವಳಿಗೆ ಹ್ಯಾರಿ ಬಗ್ಗೆ ಗೊತ್ತಿತ್ತು, ಅದು ಅವಳದೇ ಕೇಸ್. 128 00:09:22,200 --> 00:09:23,720 ಹ್ಯಾರಿ ನ್ಯಾಶ್ ಕೊಲೆ. 129 00:09:23,800 --> 00:09:26,040 ಅವಳು ಮೃತನ ಬಗ್ಗೆ ಎಂದೂ ಕೇಳೇ ಇಲ್ಲ ಎಂದಳು. 130 00:09:26,120 --> 00:09:29,040 ಮತ್ತು ಆರೋಪಿ ತಾನು ಕೊಲೆ ಮಾಡಿಲ್ಲ ಅಂತಲೇ ಹೇಳುತ್ತಿದ್ದರು... ಇರು. 131 00:09:34,240 --> 00:09:37,400 - ಲ್ಯಾಜ್? - ಅಲ್ಫೀ, ಹಾಯ್. ಒಂದು ಚಿಕ್ಕ ಪ್ರಶ್ನೆ. 132 00:09:38,040 --> 00:09:40,200 ಪಾದ್ರಿ ಫ್ರಾಂಕ್ ಆತ್ಮಹತ್ಯೆ ವಿಡಿಯೋ. 133 00:09:40,280 --> 00:09:43,000 ಅದನ್ನು ಯಾರಿಗೆ ನೀಡಿದೆ ಅಂತ ನಿನಗೆ ನೆನಪಿದೆಯಾ? ಯಾವ ಅಧಿಕಾರಿಗೆ? 134 00:09:43,680 --> 00:09:46,760 ಹೂಂ, ಡಿಟೆಕ್ಟೀವ್‌ ಆಲಿಸನ್‌ ಬ್ರೌನ್‌‌ಗೆ. 135 00:09:49,200 --> 00:09:51,520 ನಾನು ಹುಚ್ಚನಾಗುತ್ತಿದ್ದೇನಾ ಅಥವಾ ಇದು ನಿಜಕ್ಕೂ ಅನುಮಾನಾಸ್ಪದವಾ? 136 00:09:51,600 --> 00:09:55,080 - ಅವಳು ಯಾಕದನ್ನು ಮುಚ್ಚಿಡಬೇಕು? - ಇನ್ನೆಷ್ಟು ಇಂತಹವು ಇರಬಹುದು? 137 00:10:00,880 --> 00:10:01,720 ಪೊಲೀಸ್. 138 00:10:03,120 --> 00:10:06,440 ಈ ಮನೆಯಲ್ಲಿ ಅಲೌಕಿಕ ಚಟುವಟಿಕೆ ನಡೆಯುತ್ತಿದೆ ಅಂತ ವರದಿ ಬಂದಿದೆ. 139 00:10:06,520 --> 00:10:09,800 ನಾನು ಒಳಗೆ ಬಂದು... ಪರಿಶೀಲಿಸಿದರೆ ಅಭ್ಯಂತರವಿಲ್ಲ ತಾನೇ? 140 00:10:10,320 --> 00:10:11,480 ಒಳಗೆ ಬಾ. 141 00:10:17,200 --> 00:10:21,280 ನೀನು ಇಲ್ಲೇನು ಮಾಡುತ್ತಿದ್ದೀಯಾ? ಇನ್ನು 15 ನಿಮಿಷದಲ್ಲಿ ಕಕ್ಷಿದಾರರು ಬರಲಿದ್ದಾರೆ. 142 00:10:21,360 --> 00:10:23,080 ಏನೂ ಇಲ್ಲ. ನಿನ್ನನ್ನು ನೋಡಲು ಬಂದೆ. 143 00:10:25,320 --> 00:10:26,480 ನನಗೂ ನಿನ್ನನ್ನು ನೋಡಬೇಕಿತ್ತು. 144 00:10:30,280 --> 00:10:31,560 ಹದಿನೈದು ನಿಮಿಷ ಅಂದೆ ಅಲ್ವಾ? 145 00:10:41,400 --> 00:10:43,480 - ನಿನ್ನ ಸೋದರ. - ಅವನಿಗೇನು ಬೇಕಂತೆ? 146 00:10:43,560 --> 00:10:44,640 ಸುಮ್ಮನೆ ನಿರ್ಲಕ್ಷಿಸುವೆ. 147 00:10:47,480 --> 00:10:48,360 ಉತ್ತರಿಸಿಬಿಡು. 148 00:10:51,360 --> 00:10:52,560 ಹಾಯ್, ಗೆಳೆಯ. 149 00:11:02,400 --> 00:11:03,240 ಮತ್ತೆ? 150 00:11:11,240 --> 00:11:12,800 ನಾನೊಂದು ಮಾತು ಹೇಳುವೆ, 151 00:11:12,880 --> 00:11:15,840 ಮತ್ತು ನೆನಪಿರಲಿ, 30 ವರ್ಷಗಳ ನಮ್ಮ ಸ್ನೇಹದ ಆಧಾರದ ಮೇಲೆ, 152 00:11:15,920 --> 00:11:18,920 ನಾನು ನಿಜವಾಗಿಯೂ ನಂಬದ ಹೊರತು ಇದನ್ನು ನಿನಗೆ ಹೇಳುತ್ತಿರಲಿಲ್ಲ. 153 00:11:21,280 --> 00:11:22,120 ಕೇಳುತ್ತಿದ್ದೇನೆ. 154 00:11:25,960 --> 00:11:27,880 ಡಿಟೆಕ್ಟೀವ್‌ ಬ್ರೌನ್‌ ನನ್ನ ತಂದೆಯನ್ನ ಕೊಂದಿರಬಹುದು. 155 00:11:36,720 --> 00:11:38,720 ಓಲ್ಸೆನ್ ನಿನ್ನ ತಂದೆಯನ್ನು ಕೊಂದ ಹಾಗಾ? 156 00:11:38,800 --> 00:11:42,120 - ಬಿಲ್ಲಿ ನಿನ್ನ ತಂದೆಯನ್ನು ಕೊಂದ ಹಾಗಾ? - ನನ್ನ ಮಾತು ಕೇಳು, ಸರಿನಾ? ಕೇಳು. 157 00:11:43,240 --> 00:11:46,120 ಅವಳು ಹಲವಾರು ಜನರನ್ನು ಕೊಲೆ ಆರೋಪದಲ್ಲಿ ಸಿಲುಕಿಸಿದ್ದಾಳಂತ ನನಗನಿಸುತ್ತೆ. 158 00:11:46,200 --> 00:11:49,000 ತನ್ನ ಜಾಡನ್ನು ಮುಚ್ಚಿಡಲು ಮಾರ್ಗೊಳನ್ನೂ ಸಹ ಅವಳೇ ಕೊಂದಿರಬಹುದು ಅನಿಸುತ್ತೆ. 159 00:11:49,080 --> 00:11:51,320 - ದೆವ್ವ ನಿನಗೆ ಇದನ್ನು ಹೇಳಿತಾ? - ಸೆತ್, ನಾನು ತಮಾಷೆ ಮಾಡುತ್ತಿಲ್ಲ! 160 00:11:51,400 --> 00:11:55,240 ಗಾಳಿಯಲ್ಲಿ ತೇಲಿ ಬಂದು ನನ್ನ ಬಾಸ್ ಕೊಲೆಗಾತಿ ಅಂದಿತಾ? 161 00:11:55,320 --> 00:11:56,760 ಕೊಲೆಗಾತಿ, ಲ್ಯಾಜ್. 162 00:11:57,880 --> 00:11:59,840 ನಿಜವಾಗಲೂ? ಅವರೊಬ್ಬ ಪ್ರಶಂಸನೀಯ ಪೊಲೀಸ್. 163 00:11:59,920 --> 00:12:01,760 ಏನು ಹೇಳುತ್ತಿದ್ದೀಯಾ ನೀನು? 164 00:12:01,840 --> 00:12:06,320 ನನ್ನ ತಂದೆಯ ಹಲವಾರು ಕಕ್ಷಿದಾರರು ಸತ್ತಿದ್ದಾರೆ ಅಥವಾ ಜೈಲಿನಲ್ಲಿದ್ದಾರೆ, ಇದು ಕಾಕತಾಳೀಯ ಅಲ್ಲ. 165 00:12:06,400 --> 00:12:08,840 ನಿನ್ನ ತಂದೆ ಬಳಿ ಬರುತ್ತಿದ್ದವರು ಸಮಸ್ಯೆಯಿದ್ದ ಜನರು, ಲ್ಯಾಜ್. 166 00:12:08,920 --> 00:12:11,000 ಅವರದು ಮಕ್ಕಳ ಆಟದ ಕೇಂದ್ರ ಅಲ್ಲ. 167 00:12:11,080 --> 00:12:12,080 ಇವನ್ನು ಓದು. 168 00:12:13,280 --> 00:12:14,800 ನಾನಿದೆಲ್ಲಾ ಮಾಡಲ್ಲ. 169 00:12:14,880 --> 00:12:17,600 ಮಾಡಲೇಬೇಕು, ಯಾಕೆಂದರೆ ನಿನ್ನ ಬಾಸ್ ಭ್ರಷ್ಟೆ ಮತ್ತು ನೀನವರನ್ನು ಪ್ರಶ್ನಿಸಬೇಕು. 170 00:12:17,680 --> 00:12:19,360 - ಅವನ್ನು ಓದು. - ನಾನವನ್ನು ಓದಲ್ಲ. 171 00:12:19,440 --> 00:12:22,400 - ಸುಮ್ಮನೆ ಓದು! - ನಾನವನ್ನು ಓದಲ್ಲ! 172 00:12:22,480 --> 00:12:25,160 - ನನ್ನ ಕೆಲಸ ಹೋಗುತ್ತೆ! - ನಿನಗೆ ಅದಷ್ಟೇನಾ ಮುಖ್ಯ? 173 00:12:26,720 --> 00:12:28,800 - ಎಲ್ಲಿಗೆ ಹೋಗುತ್ತಿದ್ದೀಯಾ? - ಇದು ಅತಿ ಆಯಿತು. 174 00:12:31,520 --> 00:12:33,640 - ಸೆತ್‌. ಕೇಳು. - ಇಲ್ಲ. 175 00:12:33,720 --> 00:12:36,240 ನೀನು ಇಲ್ಲಿಗೆ ಹಿಂತಿರುಗಿದಾಗಿನಿಂದ ಗದ್ದಲ ಎಬ್ಬಿಸುತ್ತಿದ್ದೀಯ, 176 00:12:36,320 --> 00:12:39,080 ಮತ್ತು ನಿನ್ನ ತಂದೆಯ ಸಾವಿಗೆ ಅರ್ಥ ಹುಡುಕಲು ಕಥೆ ಕಟ್ಟುತ್ತಿದ್ದೀಯ. 177 00:12:39,160 --> 00:12:41,480 ಇದುವರೆಗೆ ದೆವ್ವಗಳು ಕಾಣುತ್ತಿದ್ದವು, ಈಗ ಸುಳ್ಳುಗಳು ಕಾಣುತ್ತಿವೆ! 178 00:12:41,560 --> 00:12:43,640 ನಿನಗೆ ಸಹಾಯ ಬೇಕು, ಲ್ಯಾಜ್! 179 00:12:44,120 --> 00:12:46,800 ನಾನು ಅವಳನ್ನು ಹುಡುಕಿ ಸತ್ಯ ಏನಂತ ಕೇಳುತ್ತೇನೆ. 180 00:12:46,880 --> 00:12:48,600 ಇಲ್ಲ. ನೀನು ಅಂತದ್ದೇನೂ ಮಾಡಲ್ಲ. 181 00:12:48,680 --> 00:12:50,800 ನಾವು ಜೆನ್ನಾ ಜೊತೆ ಮಾತಾಡಲು ನಿನ್ನ ಮನೆಗೆ ಹೋಗುತ್ತಿದ್ದೇವೆ. 182 00:12:50,880 --> 00:12:54,000 ನಿನಗೆ ವೈದ್ಯಕೀಯ ಸಹಾಯ ಕೊಡಿಸುತ್ತೇವೆ, ಯಾಕೆಂದರೆ ಇದು ಅತಿ ಆಯಿತು-- 183 00:12:55,280 --> 00:12:57,800 ನನಗೆ ಸಹಾಯ ಬೇಕು. ಸರಿನಾ? ನಿನ್ನಿಂದ. 184 00:12:57,880 --> 00:12:59,640 ನಿನ್ನಿಂದ! ನನ್ನ ಹಳೆಯ ಸ್ನೇಹಿತನಿಂದ! 185 00:12:59,720 --> 00:13:03,440 ನನ್ನನ್ನು ನಂಬಿ ನನ್ನ ಜೊತೆ ಬಾ, ಅವಳನ್ನು ಪ್ರಶ್ನಿಸೋಣ! 186 00:13:04,040 --> 00:13:05,760 ನನ್ನಿಂದ ಅದು ಆಗಲ್ಲ, ಕಣೋ. ನಾನು... 187 00:13:07,440 --> 00:13:09,240 ನಾನು ಬ್ರೌನ್‌‌ಗೆ ಕರೆ ಮಾಡಿ ನಿನ್ನ ಬಗ್ಗೆ ಎಚ್ಚರಿ-- 188 00:13:17,320 --> 00:13:19,600 - ನೀನು ಯಾಕೆ ಪೊಲೀಸ್ ಆದೆ? - ಬಿಡು ನನ್ನನ್ನು. 189 00:13:19,680 --> 00:13:21,280 ನೀನು ಯಾಕೆ ಪೊಲೀಸ್ ಆಗಿದ್ದು? 190 00:13:21,360 --> 00:13:22,920 ಲ್ಯಾಜ್, ದೇವರ ಮೇಲಾಣೆ, ಲ್ಯಾಜ್... 191 00:13:23,000 --> 00:13:26,160 ನಾನು ಹೇಳುವೆ, ತಪ್ಪುಗಳನ್ನು ಸರಿಪಡಿಸಲು. 192 00:13:26,240 --> 00:13:27,840 ಕೊಲೆಗಾರರನ್ನು ಬಂಧಿಸಲು. ಸರಿನಾ? 193 00:13:27,920 --> 00:13:30,200 ಫೈಲ್‌ಗಳನ್ನು ಓದಿ, ನಾನು ತಪ್ಪು ಅಂತ ಹೇಳು ನೋಡೋಣ. 194 00:13:32,080 --> 00:13:34,400 ಸರಿ. ಸರಿ. 195 00:14:06,760 --> 00:14:07,720 ಆಸಕ್ತಿದಾಯಕ ಸ್ಥಳ. 196 00:14:09,040 --> 00:14:10,600 ಠಾಣೆಯಿಂದ ಹೊರಬರಲು ಒಂದು ನೆಪ ಅಷ್ಟೇ. 197 00:14:11,520 --> 00:14:12,720 ಕಾಫಿ ತರಿಸಲಾ? 198 00:14:13,520 --> 00:14:14,360 ಪರವಾಗಿಲ್ಲ. 199 00:14:15,680 --> 00:14:16,800 ಏನು ವಿಷಯ? 200 00:14:18,360 --> 00:14:21,320 ನಿನ್ನ ತಂದೆಯ ಸಾವಿನ ಬಗ್ಗೆ ಏನೋ ಮಾಹಿತಿ ಇದೆ ಅಂತ ಸೆತ್ ಹೇಳಿದ. 201 00:14:22,840 --> 00:14:23,680 ಹೌದು. 202 00:14:30,640 --> 00:14:34,600 ಕೆಸಾಂಡ್ರಾ ರೋಡ್ಸ್‌ ಪ್ರಕರಣದಲ್ಲಿ ನೀವು ಹಿರಿಯ ತನಿಖಾಧಿಕಾರಿಯಾಗಿದ್ದಿರಿ. 203 00:14:36,200 --> 00:14:37,960 ಅದಕ್ಕೂ, ನಿನ್ನ ತಂದೆ ಸಾವಿಗೂ ಏನು ಸಂಬಂಧ? 204 00:14:38,040 --> 00:14:42,080 ಮತ್ತು ಅವಳ ಕೊಲೆ ದೇಶ ಬಿಟ್ಟು ಓಡಿಹೋದ ಅವಳ ಸಂಗಾತಿ ನೀಲ್ ಮಾಡಿದ್ದು ಅನ್ನೋದು 205 00:14:42,160 --> 00:14:43,880 ನಿಮ್ಮ ಬಲವಾದ ನಂಬಿಕೆಯಾಗಿತ್ತು. 206 00:14:43,960 --> 00:14:44,800 ಹೌದು. 207 00:14:45,400 --> 00:14:50,080 ಇತ್ತೀಚೆಗೆ ನೀವು ಇಮೊಜಿನ್ ಕಾರ್ಸ್‌ವುಡ್‌ ಕೊಲೆ ತನಿಖೆಯ ನೇತೃತ್ವ ವಹಿಸಿದಿರಿ, 208 00:14:50,160 --> 00:14:52,320 ಮತ್ತು ಅರ್ಲೋ ಜೋನ್ಸ್‌‌ಗೆ ಶಿಕ್ಷೆ ಆಯಿತು. 209 00:14:52,760 --> 00:14:54,680 ಇದು ಎಲ್ಲಿಗೆ ಹೋಗುತ್ತಿದೆಯೋ ನನಗೆ ಗೊತ್ತಾಗುತ್ತಿಲ್ಲ. 210 00:14:54,760 --> 00:14:57,600 ಅರ್ಲೋ ಜೋನ್ಸ್‌ ಆ ನಿರ್ಣಯವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾನೆ. 211 00:14:58,360 --> 00:15:00,200 ಅರ್ಲೋ ಜೋನ್ಸ್‌, ಆ ಸರಣಿ ಕೊಲೆಗಾರನಾ? 212 00:15:00,880 --> 00:15:04,160 ಇಬ್ಬರೂ ನನ್ನ ತಂದೆಗೆ ಸಂಬಂಧ ಪಟ್ಟವರು. 213 00:15:05,520 --> 00:15:08,080 ಅರ್ಲೋ, ಒಬ್ಬ ರೋಗಿಯಾಗಿ, ಇಮೊಜಿನ್, ಒಬ್ಬ ಪ್ರೇಯಸಿಯಾಗಿ. 214 00:15:09,160 --> 00:15:10,560 ಮತ್ತು ಅವರಷ್ಟೇ ಅಲ್ಲ. 215 00:15:12,440 --> 00:15:16,440 ಹ್ಯಾರಿ ನ್ಯಾಶ್ ಕೊಲೆಗೆ ಶಿಕ್ಷೆಗೊಳಗಾದ ಪಾದ್ರಿ ಫ್ರಾಂಕ್, 216 00:15:16,520 --> 00:15:19,360 ಅವರು ಸಾಯುವ ಮೊದಲು ಒಂದು ವಿಡಿಯೋ ಮಾಡಿದರು, ತಾನು ನಿರಪರಾಧಿ ಎನ್ನುತ್ತಾ, 217 00:15:19,440 --> 00:15:21,760 ಹ್ಯಾರಿಯ ಕೊಲೆಗಾರ ಇನ್ನೂ ತಲೆಮರೆಸಿಕೊಂಡಿದ್ದಾನೆ ಎನ್ನುತ್ತಾ. 218 00:15:22,480 --> 00:15:26,560 ಅವರ ಮನೋವೈದ್ಯರು ಆ ವೀಡಿಯೊವನ್ನು ನಿಮಗೆ ಕೊಟ್ಟರು, 219 00:15:26,640 --> 00:15:28,840 ಮತ್ತು ನೀವು ಅದರ ಬಗ್ಗೆ ಏನೂ ಮಾಡಲಿಲ್ಲ. 220 00:15:30,080 --> 00:15:30,920 ಇದರಲ್ಲಿ, 221 00:15:32,160 --> 00:15:33,320 ನನಗೆ ವ್ಯತ್ಯಾಸಗಳು ಕಂಡುಬಂದವು. 222 00:15:34,000 --> 00:15:35,640 ನೀವು ತನಿಖೆ ನಡೆಸುತ್ತಿದ್ದ ಕೊಲೆ ಪ್ರಕರಣಗಳಲ್ಲಿ 223 00:15:35,720 --> 00:15:40,160 ಅತ್ಯಂತ ಅಸಂಭವ ಸಂಬಂಧಗಳು, ಸಂಶಯಾಸ್ಪದ ಪುರಾವೆಗಳು ಇವೆ. 224 00:15:40,240 --> 00:15:45,080 ಇವೆಲ್ಲವೂ ನನ್ನ ತಂದೆಯ ರೋಗಿಗಳು ಅಥವಾ ಅವರಿಗೆ ತಿಳಿದಿರುವ ಜನರನ್ನು ಒಳಗೊಂಡಿವೆ. 225 00:15:48,240 --> 00:15:49,720 ನಿನ್ನ ಪ್ರಶ್ನೆ ಏನು? 226 00:15:51,520 --> 00:15:54,800 ನನಗನಿಸುತ್ತೆ, ನೀವು ನನ್ನ ತಂದೆಯ ಮನೋವೈದ್ಯಕೀಯ ಅಭ್ಯಾಸವನ್ನು ಬಳಸಿಕೊಂಡು, 227 00:15:54,880 --> 00:15:57,640 ಸಮಸ್ಯೆಯಿರುವ ಜನರನ್ನು ಹುಡುಕಿ, 228 00:15:57,720 --> 00:16:00,920 ನಿಮ್ಮ ಅಪರಾಧಗಳಿಗೆ ಅವರನ್ನು ಬಲಿಪಶುಗಳನ್ನಾಗಿ ಬಳಸುತ್ತಿದ್ದಿರಿ ಅಂತ. 229 00:16:02,160 --> 00:16:03,600 ಮತ್ತು ನನ್ನ ತಂದೆಗೆ ಇದು ಗೊತ್ತಾಗಿ, 230 00:16:04,840 --> 00:16:06,240 ನಿಮ್ಮನ್ನು ಇದರ ಬಗ್ಗೆ ಪ್ರಶ್ನಿಸಿದಾಗ, 231 00:16:08,240 --> 00:16:10,000 ನೀವವರನ್ನು ಕೊಂದಿರಿ ಅಂತ. 232 00:16:13,600 --> 00:16:14,440 ಹಾಗೋ. 233 00:16:18,680 --> 00:16:22,640 ಸರಿ, ತುಂಬಾ... ತುಂಬಾ ಚೆನ್ನಾಗೇ ಕಥೆ ಹೆಣೆದಿರುವೆ. 234 00:16:24,480 --> 00:16:25,600 ನೀನಿದನ್ನು ಒಪ್ಪಿದೆಯಾ? 235 00:16:27,400 --> 00:16:29,440 ನೀವು ಇದರ ಬಗ್ಗೆ ಏನು ಹೇಳುತ್ತೀರಿ ಅನ್ನೋ ಕುತೂಹಲ ಖಂಡಿತ ಇದೆ. 236 00:16:29,520 --> 00:16:31,760 ಆಮೇಲೇನು? ನನ್ನನ್ನು ಬಂಧಿಸುವೆಯಾ? 237 00:16:33,400 --> 00:16:35,600 ನಾನು ನಿನ್ನ ಹಿರಿಯ ಅಧಿಕಾರಿ ಅಂತ ನಿನಗೆ ನೆನಪಿಸಬೇಕಿಲ್ಲ, ಅಲ್ವಾ? 238 00:16:35,680 --> 00:16:36,760 ಹೂಂ. ನನಗದು ಗೊತ್ತು. 239 00:16:37,320 --> 00:16:42,520 ಮತ್ತು ಹೀಗೆ... ಹೇಳದೇ ಕೇಳದೆ ಮುಖಾಮುಖಿ ಪ್ರಶ್ನಿಸೋದು ತುಂಬಾ ಅನುಚಿತ. 240 00:16:50,440 --> 00:16:52,240 ನನಗೊಂದು ಲೋಟ ನೀರು ತರುವೆಯಾ, ದಯವಿಟ್ಟು? 241 00:17:08,080 --> 00:17:10,200 ಜೋಲ್, ನಾನು ನಿನ್ನ ತಂದೆಯನ್ನು ತುಂಬಾ ಪ್ರೀತಿಸುತ್ತಿದ್ದೆ. 242 00:17:10,280 --> 00:17:11,520 ...ಮತ್ತು ಒಂದು ಲೋಟ ನೀರು ಕೊಡಿ. 243 00:17:13,560 --> 00:17:16,000 ನಿಂಬೆ ಹನಿ ಕೇಕ್. ಇದು ಅಜ್ಜಿಯ ನೆನಪು ತರಿಸುತ್ತೆ. 244 00:17:16,080 --> 00:17:21,840 ಈ ಭೂಮಿಯ ಮೇಲಿನ ಅತ್ಯುತ್ತಮವಾದ ನಿಂಬೆ ಹನಿ ಕೇಕ್ ಅವರದ್ದೇ. 245 00:17:21,920 --> 00:17:23,480 ನೀವಿನ್ನೂ ನನ್ನ ಕೈರುಚಿ ನೋಡಿಲ್ಲ, ಗೆಳೆಯ. 246 00:17:26,000 --> 00:17:27,000 ಸೆತ್‌! 247 00:17:28,120 --> 00:17:29,680 ಪೊಲೀಸ್! ಬ್ಯಾಕಪ್ ಬೇಕು. 248 00:17:31,360 --> 00:17:32,560 ಸೆತ್‌! ಆರಾಮಿದ್ದೀಯಾ? 249 00:17:33,400 --> 00:17:34,240 ಪೊಲೀಸರಿಗೆ ಕರೆ ಮಾಡಿ! 250 00:17:34,320 --> 00:17:35,400 ಅವರೇ ಪೊಲೀಸ್. 251 00:17:35,480 --> 00:17:38,480 ಪೊಲೀಸರಿಗೆ ಕರೆ ಮಾಡಿ! ನಾನು ಏನು ಮಾಡಲಿ? ಹೇಗೆ ಸಹಾಯ ಮಾಡಲಿ? 252 00:17:38,560 --> 00:17:39,680 ಅವಳನ್ನು ಹಿಡಿ. 253 00:17:39,760 --> 00:17:40,600 ಇವನನ್ನು ನೋಡಿಕೊಳ್ಳಿ. 254 00:18:03,040 --> 00:18:04,040 ಬೇಗ. 255 00:18:17,320 --> 00:18:18,320 ಛೇ. 256 00:18:59,600 --> 00:19:00,600 ಹೇ. 257 00:20:03,880 --> 00:20:04,720 ಆರಾಮಿದ್ದೀಯಾ? 258 00:20:10,840 --> 00:20:13,080 ಯಾರಾದರೂ ಬಂದು ಹೇಳಿಕೆ ತಗೋತಾರೆ. ಹಾಗಾಗಿ, ನೀನು... 259 00:20:13,680 --> 00:20:14,920 ನೀನು ಗೊತ್ತಿರೋದು ಹೇಳು. 260 00:20:15,800 --> 00:20:18,320 ನಿನಗವಳ ಮೇಲೆ ಅನುಮಾನ ಬಂತು, ನನ್ನ ಬಳಿ ಹೇಳಿಕೊಂಡೆ. 261 00:20:20,200 --> 00:20:21,800 ಆಮೇಲೆ ಅವಳು ನನಗೆ ಟೇಸರ್ ಮಾಡಿದಳು. 262 00:20:24,640 --> 00:20:25,480 ಧನ್ಯವಾದ, ಗೆಳೆಯ. 263 00:20:27,680 --> 00:20:29,520 ನನಗೆ ಇನ್ನೂ ಏನೂ ಅರ್ಥವಾಗುತ್ತಿಲ್ಲ. 264 00:20:30,640 --> 00:20:32,920 ಇದಕ್ಕೆ ಅರ್ಥವೇ ಇಲ್ಲ. 265 00:20:34,720 --> 00:20:35,560 ಆದರೆ... 266 00:20:37,560 --> 00:20:39,000 ನಿನ್ನನ್ನು ಅನುಮಾನಿಸಿದೆ, ಕ್ಷಮಿಸು. 267 00:20:46,040 --> 00:20:49,320 ಆದರೂ ನಿನಗೆ ಸಮಾಲೋಚನೆ ಬೇಕು ಅಂತ ನನಗನಿಸುತ್ತೆ, ಲ್ಯಾಜ್. ಇದೆಲ್ಲವೂ... 268 00:20:51,600 --> 00:20:52,640 ತುಂಬಾ ಕಷ್ಟ ಆಗಿರಬೇಕು, ಕಣೋ. 269 00:20:55,520 --> 00:20:59,840 ಕ್ಷಮಿಸು, ನಾನು ವಾಪಸ್ ಬಂದಾಗಿನಿಂದ ನಿನಗೆ ಕಷ್ಟವೇ ಕೊಡುತ್ತಿದ್ದೇನೆ. 270 00:20:59,920 --> 00:21:00,760 ಇಲ್ಲ, ಹಾಗೇನಿಲ್ಲ. 271 00:21:02,200 --> 00:21:03,040 ಹೂಂ, ಕೊಡುತ್ತಿದ್ದೀಯ. 272 00:21:07,040 --> 00:21:08,640 ಆದರೂ ನೀನು ಹಿಂತಿರುಗಿದ್ದು ಸಂತೋಷ. 273 00:21:09,800 --> 00:21:13,000 ಮತ್ತು ನಿನ್ನ ಆಕರ್ಷಕ ಸೋದರಿ ಮತ್ತೆ ಜೊತೆಯಾದಳು... 274 00:21:14,640 --> 00:21:16,120 - ಹಾಗಾಗಿ ಒಳ್ಳೆಯದೇ, ಅಲ್ವಾ? - ಹೌದೇನೋ. 275 00:21:18,240 --> 00:21:20,640 ಅವಳನ್ನು ಚೆನ್ನಾಗಿ ನೋಡಿಕೋ, ಸರಿನಾ? ನೀವಿಬ್ಬರೂ... 276 00:21:22,120 --> 00:21:23,160 ಒಂದಾದರೆ. 277 00:21:23,720 --> 00:21:24,560 ಹೂಂ. 278 00:21:24,640 --> 00:21:27,040 ನಿನ್ನ ಜೊತೆ ಗುದ್ದಾಡಲು ಇಷ್ಟ ಇಲ್ಲ ನನಗೆ. 279 00:21:28,880 --> 00:21:30,240 ನಾನು ನಿನ್ನನ್ನು ಸಲೀಸಾಗಿ ಸೋಲಿಸುವೆ. 280 00:21:31,760 --> 00:21:34,240 ನಿನ್ನ ಕಾಲ್ಪನಿಕ ಸ್ನೇಹಿತರು ನಿನ್ನ ಬೆಂಬಲಕ್ಕೆ ಬರದಿದ್ದರೆ. 281 00:21:34,720 --> 00:21:35,560 ಅಥವಾ ಟೇಸರ್. 282 00:21:39,040 --> 00:21:42,160 ತಮಾಷೆಯಾಗಿತ್ತು. ಕೊನೆಗೂ ಹಾಸ್ಯ ಮಾಡಲು ಕಲಿತೆ ನೀನು. 283 00:21:42,240 --> 00:21:43,080 ಹೂಂ. 284 00:21:44,160 --> 00:21:46,640 ಅದಕ್ಕೇ ನಿನ್ನ ತಂಗಿಗೆ ನಾನು ಅಷ್ಟು ಇಷ್ಟ. ಆಮೇಲೆ ಸಿಗೋಣ, ಗೆಳೆಯ. 285 00:21:51,440 --> 00:21:53,480 ಜೋಲ್‌, ಇದನ್ನು ಮುಂದುವರಿಸಬೇಡ. 286 00:21:57,160 --> 00:21:59,480 ನನಗೆ ಇದನ್ನು ಬಳಸಲು ಇಷ್ಟ ಇಲ್ಲ. 287 00:22:00,040 --> 00:22:02,720 ನನ್ನನ್ನು ನಂಬು, ಇದು ನಿನಗೆ ತುಂಬಾ ನೋವು ನೀಡುತ್ತೆ. 288 00:22:03,680 --> 00:22:04,880 ಇದನ್ನು ಬಿಟ್ಟುಬಿಡು. 289 00:22:06,280 --> 00:22:09,600 ಈಗಲೇ ನಿಲ್ಲಿಸಿದರೆ, ತುಂಬಾ ನೋವು ಕಡಿಮೆ ಆಗುತ್ತೆ. 290 00:22:11,560 --> 00:22:12,760 ನಾನು ಹಾಗೆ ಮಾಡಲ್ಲ. 291 00:22:12,840 --> 00:22:15,560 ದಯವಿಟ್ಟು, ದಯವಿಟ್ಟು, ಸುಮ್ಮನೆ ಮನೆಗೆ ಹೋಗು. 292 00:22:15,640 --> 00:22:16,800 ಇದನ್ನು ಬಿಟ್ಟುಬಿಡು. 293 00:22:17,560 --> 00:22:18,520 ನನ್ನಿಂದ ಆಗಲ್ಲ. 294 00:22:55,560 --> 00:22:56,400 ಹಲೋ. 295 00:22:57,400 --> 00:22:58,360 ಹಾಯ್. 296 00:22:58,440 --> 00:23:01,960 ಇದು ಸ್ವಲ್ಪ ವಿಚಿತ್ರ ಅಂತ ನನಗೆ ಗೊತ್ತು, ಆದರೆ... ನನಗೆ ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕಿತ್ತು. 297 00:23:03,200 --> 00:23:05,760 ನನ್ನ ತಂದೆ ಜೋಲ್‌ ಲ್ಯಾಜರಸ್‌ ಬಗ್ಗೆ. 298 00:23:06,680 --> 00:23:08,960 ನೀವಿಬ್ಬರೂ... ಸ್ವಲ್ಪ ಹತ್ತಿರ ಅಂತ ನನಗೆ ಗೊತ್ತು. 299 00:23:10,280 --> 00:23:11,880 ನೀನು ಐಡೆನ್‌, ಅಲ್ವಾ? 300 00:23:11,960 --> 00:23:14,440 ಅವನು ನಿನ್ನ ಬಗ್ಗೆ ಹೇಳಿದ್ದಾನೆ. 301 00:23:14,520 --> 00:23:15,840 ಈಗ ಮಾತಾಡಬಹುದಾ? 302 00:23:18,720 --> 00:23:21,200 ಖಂಡಿತ. ಖಂಡಿತ, ಒಳಗೆ ಬಾ. 303 00:23:32,200 --> 00:23:34,160 ನನಗೆ ನನ್ನ ಬಗ್ಗೆ ಮಾತಾಡೋದು ಇಷ್ಟವಿಲ್ಲ. 304 00:23:34,240 --> 00:23:35,200 ನನಗೂ ಕೂಡ. 305 00:23:36,160 --> 00:23:37,800 ತುಂಬಾ ಜನರಿಗೆ ಅದರಿಂದ ಇರಸು ಮುರಸು ಆಗುತ್ತೆ. 306 00:23:38,680 --> 00:23:39,960 ಅದು ಹಾಗಲ್ಲ. ಅದು, ನಾನು... 307 00:23:40,920 --> 00:23:42,520 ನಾನು ಜನರನ್ನು ನಂಬಲ್ಲ. 308 00:23:43,280 --> 00:23:47,920 ಮೊದಲೂ ಜನರಿಗೆ ಕೆಲ ವಿಷಯಗಳನ್ನು ಹೇಳಿದ್ದೇನೆ, ಆದರೆ ಅವರು ಅವನ್ನು ರಹಸ್ಯವಾಗಿಟ್ಟಿರಲಿಲ್ಲ. 309 00:23:48,000 --> 00:23:50,480 ಸರಿ, ನಾನು ನಿನಗೆ ಮಾತು ಕೊಡುವೆ, ನೀನು ಇಲ್ಲಿ ಏನೇ ಹೇಳಿದರೂ... 310 00:23:51,640 --> 00:23:52,640 ಅದು ನಮ್ಮ ನಡುವೆಯೇ ಇರುತ್ತೆ. 311 00:23:54,400 --> 00:23:55,840 ನನ್ನ ಮೇಲಾಣೆ. 312 00:24:14,920 --> 00:24:18,440 ಡಾಕ್ಟರ್‌ ಜಾನಥನ್ ಲ್ಯಾಜರಸ್‌ - ಮನೋವೈದ್ಯರು 313 00:25:01,440 --> 00:25:02,440 ಆಲಿಸನ್‌. 314 00:25:09,160 --> 00:25:10,440 ನಾವು ಮಾತಾಡಬೇಕು. 315 00:25:13,160 --> 00:25:14,000 ನನಗೆ ಗೊತ್ತು... 316 00:25:15,680 --> 00:25:16,920 ನೀನು ಮಾಡಿದ್ದು ನನಗೆ ಗೊತ್ತು... 317 00:25:18,160 --> 00:25:19,200 ನಾವು ಮಾಡಿದ್ದು. 318 00:25:24,280 --> 00:25:26,040 ನಾನು ಎಂತಹ ಪೆದ್ದುತನ ಮಾಡಿದೆ. 319 00:25:32,720 --> 00:25:36,640 ಮನೋವಿಜ್ಞಾನದಲ್ಲಿ ನಾವು ಅಪರಾಧ ಪ್ರಜ್ಞೆಯನ್ನು "ಅನುಪಯುಕ್ತ ಭಾವನೆ" ಅಂತ ಕರೆಯುತ್ತೇವೆ. 320 00:25:36,720 --> 00:25:40,280 ಪಶ್ಚಾತ್ತಾಪ ನಮ್ಮ ಮಾನವೀಯತೆಯನ್ನು ತೋರಿಸುತ್ತದೆ, ಆದರೆ ಅಪರಾಧಿ ಭಾವನೆ ವಿಷಕಾರಿ. 321 00:25:40,360 --> 00:25:42,480 - ಅದು ನಮ್ಮನ್ನ ತಿಂದು ಹಾಕುತ್ತೆ. - ನಿನಗೆ ಅಪರಾಧಿ ಭಾವನೆ ಬರಲ್ವಾ? 322 00:25:43,760 --> 00:25:44,960 ಸ್ವಲ್ಪವೂ ಇಲ್ಲ. 323 00:25:45,680 --> 00:25:48,440 ಇಷ್ಟೂ ವರ್ಷ ಪ್ರಕರಣಗಳನ್ನು ಮುಚ್ಚಲು ನನಗೆ ಸಹಾಯ ಮಾಡುತ್ತಿದ್ದೀಯ ಅಂದುಕೊಂಡಿದ್ದೆ. 324 00:25:49,000 --> 00:25:52,160 ಅವರು ಜೈಲಲ್ಲಿರಬೇಕು, ಅದಕ್ಕೇ ವ್ಯವಸ್ಥೆಗೆ ಮೋಸ ಮಾಡುತ್ತಿದ್ದೇವೆ ಅಂತ. 325 00:25:52,240 --> 00:25:54,240 - ಅದು ನಿಜವೇ. - ಯಾರ ಪ್ರಕಾರ? 326 00:25:55,200 --> 00:25:56,600 ಮಹಾನ್ ಮನೋವೈದ್ಯನ ಪ್ರಕಾರನಾ? 327 00:25:57,200 --> 00:26:02,480 ನಾಟಕ ಬೇಡ. ನಿನಗೆ ಪ್ರತಿಫಲಗಳು ಸಿಕ್ಕಿವೆ, ಆಲಿಸನ್‌. 328 00:26:02,560 --> 00:26:04,880 ಪುರಸ್ಕಾರಗಳು, ಪ್ರಶಂಸೆಗಳು. 329 00:26:05,600 --> 00:26:08,000 ಆ ವಿಷಯದಲ್ಲಿ ನೀನು ಯಾವಾಗಲೂ ತುಂಬಾ ಮಹತ್ವಾಕಾಂಕ್ಷೆಯುಳ್ಳವಳಾಗಿದ್ದೆ. 330 00:26:08,080 --> 00:26:11,200 ಪೊಲೀಸ್ ಕೆಲಸಕ್ಕೆ ಪ್ರಶಸ್ತಿ ನೀಡುವುದು ನನಗೆ ಮೊದಲಿಂದಲೂ ವಿಚಿತ್ರವೆನಿಸುತ್ತೆ. 331 00:26:11,280 --> 00:26:13,240 ಅದು ಬಹುತೇಕ ಅಸಭ್ಯ. 332 00:26:14,840 --> 00:26:16,320 ನೀನು ನನ್ನ ಗೆಳೆಯ ಅಂದುಕೊಂಡಿದ್ದೆ. 333 00:26:19,040 --> 00:26:22,720 ಆದರೆ ನೀನು ನಿನ್ನ ಕೆಲಸ ಮಾಡಿಸಿಕೊಳ್ಳಲು ನನಗೆ ಮೋಸ ಮಾಡಿದೆ, ನನ್ನ ಅಹಂನಿಂದಾಗಿ ನಾನು ಒಪ್ಪಿದೆ. 334 00:26:26,960 --> 00:26:28,360 ನೀನು ಇಮೊಜಿನ್‌ನ ಕೊಂದೆ. 335 00:26:29,080 --> 00:26:31,040 ನಿರಾಕರಿಸಬೇಡ, ನೀನು ಹಾಗೆ ಮಾಡಿದ್ದೀಯಾ ಅಂತ ನನಗೆ ಗೊತ್ತು. 336 00:26:31,120 --> 00:26:33,440 ಆಮೇಲೆ ಕೊಲೆಗಾರ ಅರ್ಲೋ ಜೋನ್ಸ್‌ ಅಂತ ನನ್ನನ್ನು ನಂಬುವಂತೆ ಮಾಡಿದೆ. 337 00:26:36,920 --> 00:26:38,360 ನಾನು ಇಮೊಜಿನ್‌ನ ಪ್ರೀತಿಸುತ್ತಿದ್ದೆ... 338 00:26:39,240 --> 00:26:40,640 ಮತ್ತು ಅವಳು ಅಸ್ವಸ್ಥಳಾಗಿದ್ದಳು. 339 00:26:40,720 --> 00:26:44,000 ಅವಳು ಸಾಯುತ್ತಿದ್ದಳು ಮತ್ತು ಅದರ ಬಗ್ಗೆ ಭಯಭೀತಳಾಗಿದ್ದಳು. 340 00:26:44,480 --> 00:26:46,440 ಅದಕ್ಕೆ ಅವಳ ಕತ್ತು ಹಿಸುಕಿ ಕೊಂದೆಯಾ? 341 00:26:46,520 --> 00:26:48,800 ನಾನವಳ ದುಃಖವನ್ನು ಕೊನೆಗೊಳಿಸಿದೆ. 342 00:26:51,040 --> 00:26:52,360 ನಿನಗದನ್ನೇ ಹೇಳಿಕೊಳ್ಳುತ್ತೀಯಾ? 343 00:26:55,360 --> 00:26:57,080 ಕೆಲವು ಜನರಿಗೆ ಕೆಲವು ಸಮಯ, ಅಲಿಸನ್, 344 00:26:57,160 --> 00:27:01,520 ಇಲ್ಲಿ ಉಳಿದು, ಕಾಲ ಕಳೆಯುವುದು, ಲೋಕ ಬಿಟ್ಟು ಹೋಗುವುದಕ್ಕಿಂತ ಹೆಚ್ಚು ನೋವುಂಟುಮಾಡುತ್ತೆ. 345 00:27:04,160 --> 00:27:05,000 ಮತ್ತು ಉಳಿದವರು. 346 00:27:06,080 --> 00:27:07,000 ಉಳಿದವರಿಗೆ ಹೇಗೆ? 347 00:27:08,480 --> 00:27:11,800 ಪಾದ್ರಿ ಫ್ರಾಂಕ್ ಬಾರ್ನ್‌ವೇ ಆತ್ಮಹತ್ಯೆಗೆ ಮುನ್ನ ಒಂದು ರೆಕಾರ್ಡಿಂಗ್ ಬಿಟ್ಟು ಹೋದರು, 348 00:27:11,880 --> 00:27:15,400 ಹ್ಯಾರಿ ನ್ಯಾಶ್ ಕೊಲೆಯಲ್ಲಿ ತಾನು ನಿರಪರಾಧಿ ಎನ್ನುತ್ತಾ. 349 00:27:15,480 --> 00:27:18,760 ಸೂಚನೆಗಳು ಇದ್ದವು, ನಾನವನ್ನು ನೋಡಬೇಕಿತ್ತು, ಆದರೆ ನನ್ನ ತಲೆ ಬೇರೆಡೆ ಇತ್ತು. 350 00:27:19,880 --> 00:27:24,160 ನಿನ್ನ ಮೇಲೆ ಅನುಮಾನ ಬರದಿರಲು ನನಗೆ ಮಾಹಿತಿ ನೀಡುತ್ತಿದ್ದೀಯ. 351 00:27:27,720 --> 00:27:29,880 ಆಲಿಸನ್‌, ನಿನಗೆ ಗೊತ್ತೇ ಇಲ್ಲ. 352 00:27:29,960 --> 00:27:32,160 ನನ್ನ ಕಚೇರಿಗೆ ಬರುವ ಕೆಲವು ಕಕ್ಷಿದಾರರು 353 00:27:32,240 --> 00:27:36,120 ತೀವ್ರವಾಗಿ ಆಘಾತಕ್ಕೊಳಗಾದ ಜನರು, ಆಳವಾದ ಸಮಸ್ಯೆಗಳಿರುವ ಜೀವನವನ್ನು ಹೊಂದಿರುವವರು. 354 00:27:36,960 --> 00:27:38,600 ಅವರು ಮುರಿದ ಹೂದಾನಿಯಂತೆ. 355 00:27:38,680 --> 00:27:42,240 ನೀನದನ್ನು ಮತ್ತೆ ಅಂಟಿಸಬಹುದು, ಮತ್ತು ದೂರದಿಂದ ಅದು ಸಾಮಾನ್ಯವಾಗಿ ಕಾಣಿಸಬಹುದು, 356 00:27:42,320 --> 00:27:45,360 ಆದರೆ ಹತ್ತಿರದಿಂದ ಅದು ಒಡೆದಿರೋದು ಗೊತ್ತಾಗೇ ಆಗುತ್ತೆ. 357 00:27:45,440 --> 00:27:47,360 ಹೇಗೆ ಬೇಕಾದರೂ ಸಮರ್ಥಿಸಿಕೋ. 358 00:27:47,440 --> 00:27:49,560 ನೀನವರನ್ನು ಕೊಂದೆ, ಜಾನಥನ್. 359 00:27:49,640 --> 00:27:53,280 ಮತ್ತು ನಿನ್ನ ಅಪರಾಧಗಳಿಗೆ ನನ್ನಿಂದ ಮುಗ್ಧ ಜನರಿಗೆ ಶಿಕ್ಷೆ ಕೊಡಿಸಿದೆ. 360 00:27:56,480 --> 00:27:57,920 ಹಾಗಾದರೆ ನಿನ್ನ ಪ್ರಕಾರ... 361 00:27:59,040 --> 00:28:00,200 ಏನು? 362 00:28:00,280 --> 00:28:02,680 ನಾವು ತಪ್ಪೊಪ್ಪಿಕೊಳ್ಳಬೇಕಾ? 363 00:28:04,240 --> 00:28:07,360 ನಾವಿಬ್ಬರೂ ಆ ಜೈಲುಗಳನ್ನು ನೋಡಿದ್ದೇವೆ, ಆಲಿಸನ್‌. 364 00:28:07,440 --> 00:28:10,720 ದಿನಕ್ಕೆ ಇಪ್ಪತ್ತೆರಡು ಗಂಟೆಗಳ ಕಾಲ ಕೋಣೆಯೊಳಗೆ, ಇರಿಯುತ್ತಾ, ಮುರಿಯುತ್ತಾ. 365 00:28:10,800 --> 00:28:15,960 ನಾವು ಎರಡು ನಿಮಿಷವೂ ಇರಲು ಆಗಲ್ಲ. ಮತ್ತು, ನೀನು, ಭ್ರಷ್ಟ ಪೊಲೀಸ್, ಹಾಳಾಗಿಹೋಗುವೆ. 366 00:28:21,480 --> 00:28:23,320 ನಾನಿದನ್ನು ಸುಮ್ಮನೆ ಬಿಡಲು ಆಗಲ್ಲ. 367 00:28:25,840 --> 00:28:27,360 ನಿನಗೆ ಅರ್ಥ ಆಗುತ್ತೆ, ಅಲ್ವಾ? 368 00:28:35,640 --> 00:28:36,480 ಆಗುತ್ತೆ. 369 00:28:38,960 --> 00:28:40,480 ನಿನ್ನಿಂದ ಅದು ಆಗಲ್ಲ. 370 00:28:42,840 --> 00:28:44,960 ಹಾಗಾದರೆ, ನಿನ್ನ ಪ್ರಸ್ತಾಪ ಏನು, ಆಲಿಸನ್‌? 371 00:28:49,280 --> 00:28:50,760 ನಾವು ಬೇರೆ ದಾರಿ ತಗೋಬಹುದು. 372 00:29:06,640 --> 00:29:07,640 ನೀನೊಂದು ಪತ್ರ ಬರೆಯಬಹುದು. 373 00:29:10,200 --> 00:29:11,240 ವಿದಾಯ ಹೇಳುತ್ತಾ. 374 00:29:17,320 --> 00:29:18,960 ಏನೋ ಹೇಳಿದೆಯಲ್ಲಾ? 375 00:29:20,600 --> 00:29:22,360 ಲೋಕ ಬಿಟ್ಟು ಹೋಗಬಹುದು. 376 00:29:25,360 --> 00:29:26,760 ಆಗ ನಿನ್ನ ರಹಸ್ಯ ನಿನ್ನ ಜೊತೆಯೇ... 377 00:29:28,840 --> 00:29:29,760 ಸಮಾಧಿಯಾಗುತ್ತೆ. 378 00:29:35,680 --> 00:29:40,160 ಅದು... ನನಗಿಂತ ಹೆಚ್ಚು ನಿನಗೆ ಅನುಕೂಲಕರವಾದ ಮಾರ್ಗ. 379 00:29:42,160 --> 00:29:43,600 ಹೂದಾನಿಯಲ್ಲಿನ ಆ ಬಿರುಕುಗಳು... 380 00:29:45,680 --> 00:29:47,440 ಸಟನ್ ಸತ್ತಾಗ ನಿನ್ನಲ್ಲಿ ಮೂಡಿದವು. 381 00:29:49,840 --> 00:29:51,680 ಅವುಗಳನ್ನು ಎಂದಿಗೂ ಸರಿ ಮಾಡಲು ಆಗಲ್ಲ, ಅಲ್ವಾ? 382 00:30:10,000 --> 00:30:12,440 ನಾನು ಇದನ್ನು ನಿನ್ನ ಮೇಲೆ ಬಳಸಲ್ಲ ಅಂತ ಹೇಗೆ ಖಚಿತವಾಗಿದ್ದೀಯಾ? 383 00:30:42,280 --> 00:30:44,320 ನೀನು ಒಳ್ಳೆಯ ಸ್ನೇಹಿತೆಯಾಗಿದ್ದೆ, ಆಲಿಸನ್‌. 384 00:30:47,840 --> 00:30:49,200 ಕೆಟ್ಟ ಸಮಯದಲ್ಲಿ... 385 00:30:51,080 --> 00:30:52,520 ಯಾವಾಗಲೂ ಜೊತೆ ನಿಂತೆ. 386 00:31:01,600 --> 00:31:03,240 ನಾನು ಸಟನ್‌ನ ನೋಡಬಹುದು ಅನಿಸುತ್ತಾ? 387 00:31:05,640 --> 00:31:06,760 ಆ ಆಶಯ ಇದೆ. 388 00:31:10,040 --> 00:31:10,880 ನಿನಗನಿಸುತ್ತಾ? 389 00:31:12,520 --> 00:31:13,360 ನನಗೆ ಗೊತ್ತಿಲ್ಲ. 390 00:31:14,440 --> 00:31:15,400 ನನಗೆ ಗೊತ್ತಿಲ್ಲ. 391 00:31:17,000 --> 00:31:20,160 ಆದರೆ ಕನಿಷ್ಠ ಪಕ್ಷ ಇನ್ನು ಅವಳ ನೆನಪು ಕಾಡಲ್ಲ. 392 00:31:23,280 --> 00:31:24,440 ಅದು ಸಾಕು. 393 00:31:27,600 --> 00:31:29,160 ಬೇರೆ ದಾರಿ ಇದ್ದರೆ ಚೆನ್ನಾಗಿರುತ್ತಿತ್ತು. 394 00:31:30,800 --> 00:31:31,800 ಆದರೆ ಇಲ್ಲ. 395 00:31:33,040 --> 00:31:33,880 ಅಲ್ವಾ? 396 00:31:42,760 --> 00:31:44,400 ನಾನು ಒಂಟಿಯಾಗಿರಬೇಕು. 397 00:31:45,640 --> 00:31:46,840 ನಾನು ಹೊರಗೆ ಕಾಯುವೆ. 398 00:31:51,080 --> 00:31:51,920 ಹೋಗುತ್ತಿರುವೆ. 399 00:31:54,640 --> 00:31:56,640 ಮತ್ತು... ಧನ್ಯವಾದ. 400 00:31:58,640 --> 00:31:59,760 ನಿನ್ನ ಪರಿಚಯ... 401 00:32:01,360 --> 00:32:02,920 ಸಂತೋಷ ತಂದಿತು. 402 00:32:35,720 --> 00:32:36,600 ಕರೆ... ಜೋಲ್‌ 403 00:32:46,880 --> 00:32:50,240 ಒಳಬರುವ ಕರೆ - ಅಪ್ಪ ಫೋನ್ ನಂಬರ್ - 07700 900824 404 00:32:52,200 --> 00:32:53,720 ಡಾ. ಜೋಲ್‌ ಲ್ಯಾಜರಸ್‌ ಅನ್ನು ತಲುಪಿದ್ದೀರಿ. 405 00:32:53,800 --> 00:32:55,400 ದಯವಿಟ್ಟು ಸ್ವರದ ನಂತರ ಸಂದೇಶ ನೀಡಿ. 406 00:33:48,640 --> 00:33:53,480 ಇದಿನ್ನೂ ಮುಗಿದಿಲ್ಲ 407 00:34:21,200 --> 00:34:23,800 ನೀನು ಅದನ್ನೆಲ್ಲಾ ಕೇಳಬೇಕಾಯಿತು, ಕ್ಷಮಿಸು, 408 00:34:24,480 --> 00:34:27,880 ಆದರೆ ಈ ಕೋಣೆಯಲ್ಲಿ ನಡೆಯುವ ಎಲ್ಲವನ್ನೂ ನಾನು ರೆಕಾರ್ಡ್ ಮಾಡುತ್ತೇನೆ ಅಂತ ಗೊತ್ತಲ್ಲಾ? 409 00:34:29,480 --> 00:34:30,480 ಅವಳು ನನ್ನನ್ನು ಕೊಂದಳು. 410 00:34:33,160 --> 00:34:34,560 ನನಗೆ ಬೇರೆ ಆಯ್ಕೆ ಕೊಡಲಿಲ್ಲ. 411 00:34:39,000 --> 00:34:40,080 ನೀವು ಕೊಂದಿರಿ. 412 00:34:41,200 --> 00:34:44,000 ನಾನು ಅವರನ್ನು ನೋವಿನಿಂದ ಮುಕ್ತಗೊಳಿಸಿದೆ. 413 00:34:44,480 --> 00:34:46,920 ಮತ್ತು ನಾನು ಎಲ್ಲರನ್ನೂ ಅವರ ಅಪಾಯದಿಂದ ಮುಕ್ತಗೊಳಿಸಿದೆ. 414 00:34:47,000 --> 00:34:51,080 ನೀನು ಕೆಸಾಂಡ್ರಾಳನ್ನು ಭೇಟಿಯಾದೆ. ಅವಳು ಅವನನ್ನು ನನ್ನ ಕಚೇರಿಯಲ್ಲಿ ಕೊಂದಳು. 415 00:34:51,720 --> 00:34:54,120 ನನ್ನ ಕಚೇರಿಯಲ್ಲಿ ಮೃತ ದೇಹವನ್ನು ಹೇಗೆ ಬಿಡಲಿ ನಾನು, ಹಾಗಾಗಿ, 416 00:34:54,200 --> 00:34:55,280 ಅವನನ್ನು ಸರಿಸಲು ಸಹಾಯ ಮಾಡಿದೆ. 417 00:34:55,360 --> 00:34:59,560 ಆದರೆ ಅಂತಹ ವ್ಯಕ್ತಿ ರಹಸ್ಯವನ್ನು ಇಟ್ಟುಕೊಳ್ಳುವ ಸಾಧ್ಯತೆ ಎಷ್ಟು? 418 00:34:59,640 --> 00:35:01,760 ಅಥವಾ ಮತ್ತೆ ಕೊಲ್ಲದಿರುವ ಸಾಧ್ಯತೆ? 419 00:35:01,840 --> 00:35:03,480 ಹಾಗಾಗಿ, ಅವಳು ನನ್ನ ಮೊದಲ ಬಲಿಪಶು. 420 00:35:05,560 --> 00:35:06,400 ಮತ್ತು ಹ್ಯಾರಿ? 421 00:35:06,880 --> 00:35:09,280 ನಾವು ಮಾತಾಡುತ್ತಿದ್ದೇವೆ ಅಂತ ಗೊತ್ತಾದರೆ ಅವನು ಏನು ಮಾಡುತ್ತಾನೆ ಗೊತ್ತಾ? 422 00:35:09,360 --> 00:35:11,840 ಹಾನಿ ಆಗಿಯಾಗಿತ್ತು, ಹೇಳಿಕೊಂಡಿದ್ದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. 423 00:35:11,920 --> 00:35:14,560 ಮಗನೇ, ಸತ್ಯವು ಯಾವಾಗಲೂ ನಿನ್ನನ್ನು ಮುಕ್ತಗೊಳಿಸಲ್ಲ. 424 00:35:15,240 --> 00:35:19,920 ನಾನು ನನ್ನ ಇಡೀ ಜೀವನ ಇದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕಳೆದೆ. 425 00:35:21,160 --> 00:35:25,400 ಮತ್ತು ಹೆಚ್ಚಿನ ಜನರಿಗೆ ಸಹಾನುಭೂತಿ, ನೈತಿಕತೆ, 426 00:35:25,480 --> 00:35:27,960 ಸರಿ-ತಪ್ಪುಗಳ ಸ್ವಲ್ಪ ಪ್ರಜ್ಞೆ ಇರುತ್ತೆ, ಅದೆಷ್ಟೇ ವಿಕೃತವಾಗಿದ್ದರೂ ಸಹ. 427 00:35:28,040 --> 00:35:32,080 ಅದು ಬಿಟ್ಟು... ಉಳಿದವರೂ ಇದ್ದಾರೆ. 428 00:35:33,160 --> 00:35:35,760 ಸರಿಪಡಿಸಲು ಮೀರಿದವರು. 429 00:35:35,840 --> 00:35:38,320 ಸ್ಥಿತಿ ಪೂರ್ತಿ ಕೆಟ್ಟವರು. 430 00:35:38,400 --> 00:35:42,360 "ತ್ಯಜಿಸಿದ ಭಾವನೆ ಬರಲು ಬಿಡಬೇಡ. ಒಂದು ಕ್ಷಣವೂ" ಅನ್ನುತ್ತಿದ್ದಿರಿ. ಅದು ಏನಾಯಿತು? 431 00:35:42,440 --> 00:35:45,920 ನಾನವರನ್ನು ತ್ಯಜಿಸಲಿಲ್ಲ, ನಾನವರನ್ನು ಉಳಿಸಿದೆ. 432 00:35:46,000 --> 00:35:48,160 ಸ್ವಯಂ ಸಮರ್ಥನೆಯ ಕಟ್ಟುಕಥೆ. ನೀವು... 433 00:35:48,600 --> 00:35:51,560 ನೀವು ಕೊಲ್ಲೋ ಗೀಳಿಗೆ ವಶವಾದಿರಿ. 434 00:35:51,640 --> 00:35:53,240 ನಿಮಗದರ ರುಚಿ ಹಿಡಿದಿತ್ತು. 435 00:35:56,200 --> 00:35:57,040 ಬಹುಶಃ. 436 00:35:59,560 --> 00:36:00,640 ಆದರೆ ಯಾಕೆ? 437 00:36:02,360 --> 00:36:04,960 ದೇವರೇ, ಯಾಕೆ ಅಪ್ಪ? ಯಾಕೆ? 438 00:36:06,200 --> 00:36:09,280 ಸಟನ್ ನಂತರ, ನನ್ನಲ್ಲಿ ಏನೋ ಮುಚ್ಚಿಕೊಂಡಿತು. 439 00:36:10,000 --> 00:36:11,640 ನಾನು ವಿಷಯಗಳನ್ನು ವಿಭಿನ್ನವಾಗಿ ನೋಡತೊಡಗಿದೆ. 440 00:36:13,520 --> 00:36:15,400 ನೀವು ಜನರನ್ನು ಕೊಂದಿರಿ. 441 00:36:16,720 --> 00:36:17,720 ದೇವರೇ. 442 00:36:18,840 --> 00:36:23,560 ದೇವರೇ, ಅದು ಹೇಗೆಂದು ನಮಗೆ ಗೊತ್ತು, ಅಲ್ವಾ? ನಮಗೆ ತಿಳಿದಿದೆ! 443 00:36:23,640 --> 00:36:27,640 ನನಗೆ ನನ್ನದೇ ಆದ ನೋವು ಇತ್ತು! ನಾನು ನನ್ನ ಮಗುವನ್ನು ಕಳೆದುಕೊಂಡಿದ್ದೆ! 444 00:36:28,120 --> 00:36:31,600 ಅತ್ಯಂತ ಕೆಟ್ಟ ರೀತಿಯಲ್ಲಿ! 445 00:36:32,200 --> 00:36:35,800 ಆದರೆ ನಾನು ನಿಮ್ಮನ್ನು ಪ್ರೀತಿಸುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ನಿಮ್ಮಿಬ್ಬರನ್ನೂ. 446 00:36:37,360 --> 00:36:42,320 ಮತ್ತು ಆ ಕೊನೆಯ ದಿನ, ನಾನು ಮಾತಾಡಬೇಕೆಂದುಕೊಂಡ ಏಕೈಕ ವ್ಯಕ್ತಿ ನೀನು. 447 00:36:50,840 --> 00:36:52,120 ಏನು ಹೇಳಬೇಕೆಂದಿದ್ದಿರಿ? 448 00:36:53,000 --> 00:36:55,920 ಹೂಂ, ನಾನು... ನಾನು ಪ್ರಯತ್ನಿಸುತ್ತಿದ್ದೆ... 449 00:36:56,720 --> 00:37:00,400 ನಾನು ಏನೇ ಆಗಿರಲಿ, ನೀನು ನನ್ನ ಮಗ, ಮತ್ತು ಯಾವಾಗಲೂ ನಾನು ನಿನ್ನನ್ನ ಪ್ರೀತಿಸುತ್ತೇನೆ 450 00:37:01,200 --> 00:37:04,720 ಅಂತ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದೆ. 451 00:37:10,400 --> 00:37:13,880 ನನಗೆ ನನ್ನ ತಂದೆ ವಾಪಸ್ ಬೇಕಿದ್ದರಷ್ಟೇ. 452 00:37:16,480 --> 00:37:18,280 ಅಷ್ಟೇ ನನಗೆ ಬೇಕಿದ್ದದ್ದು. 453 00:37:26,200 --> 00:37:27,520 ಆ ಚಿತ್ರ... 454 00:37:28,280 --> 00:37:33,600 ನನ್ನ ಆತ್ಮಹತ್ಯೆ ಪತ್ರದಲ್ಲಿ, ಆ ಚಿಹ್ನೆಯ ಅರ್ಥ ನಿನಗೇನು ಅಂತ ಗೊತ್ತಾ? 455 00:37:36,040 --> 00:37:37,160 ಇಲ್ಲ. 456 00:37:39,160 --> 00:37:43,160 ಸಮಯವು ರೇಖೀಯವಲ್ಲ, ಚಕ್ರೀಯ. 457 00:37:44,640 --> 00:37:47,880 ಪುತ್ರರು ತಂದೆಯಾಗುತ್ತಾರೆ, ಜೋಲ್. 458 00:37:47,960 --> 00:37:49,200 ಅದು ಅವರ ರಕ್ತದಲ್ಲೇ ಇದೆ. 459 00:37:55,480 --> 00:37:58,200 - ಇಲ್ಲ. - ಇತಿಹಾಸ ಪುನರಾವರ್ತನೆಯಾಗೇ ಆಗುತ್ತೆ, 460 00:37:58,280 --> 00:38:00,240 ನಾವು ಮಾದರಿಯನ್ನು ಮುರಿಯದ ಹೊರತು. 461 00:38:02,360 --> 00:38:05,520 ಇಲ್ಲ, ಅಪ್ಪ. ನೀವು ಸರಿಯಿರಲಿಲ್ಲ. 462 00:38:10,960 --> 00:38:15,200 ನಾನು ನನ್ನ ಇಡೀ ಜೀವನ ನಿಮ್ಮಂತೆ ಆಗಲು ಪ್ರಯತ್ನಿಸಿದೆ. 463 00:38:16,320 --> 00:38:17,440 ಆದರೆ ಇನ್ನಲ್ಲ. 464 00:38:26,600 --> 00:38:27,720 ಇನ್ನಲ್ಲ. 465 00:38:34,640 --> 00:38:35,920 ಹಾಗಾದರೆ ನನ್ನನ್ನು ಹೋಗಲು ಬಿಡು. 466 00:38:38,840 --> 00:38:39,680 ಮಾದರಿಯನ್ನು ಮುರಿ. 467 00:38:45,840 --> 00:38:46,680 ಹೋಗಿಬರುವೆ, ಮಗನೇ. 468 00:38:51,760 --> 00:38:52,680 ಬಾಯ್, ಅಪ್ಪ. 469 00:40:47,160 --> 00:40:48,600 ಹಂತಕ ಬಿಡುಗಡೆ ಸುಳಿವಿಲ್ಲ ಎಂದ ಪೊಲೀಸ್ 470 00:40:51,600 --> 00:40:53,680 ಇದಿನ್ನೂ ಮುಗಿದಿಲ್ಲ. 471 00:40:54,760 --> 00:40:55,760 ಮುಗಿಯಿತು. 472 00:41:25,000 --> 00:41:26,040 ಹಾಯ್, ನಾನು ಲೌರಾ. 473 00:41:26,120 --> 00:41:28,160 ದಯವಿಟ್ಟು ಸಂದೇಶ ಕಳಿಸಿ, ನಾನು ನಿಮಗೆ ಉತ್ತರಿಸುವೆ. 474 00:41:29,280 --> 00:41:31,480 ಹಾಯ್, ಲೌರಾ, ನಾನು. 475 00:41:34,240 --> 00:41:35,480 ನಾನು ನಿನ್ನನ್ನು ನೋಡಬೇಕು. 476 00:42:05,160 --> 00:42:06,680 ಕೆಸಾಂಡ್ರಾ ರೋಡ್ಸ್‌, 27ನೇ ಮೇ 1999 477 00:42:06,760 --> 00:42:09,040 ನಾನು ಅವನ ಸತ್ತ ಮುಖವನ್ನು ನೋಡುತ್ತೇನೆ. 478 00:42:09,120 --> 00:42:11,600 ನಾನವನಿಗೆ ಹೊಡೆದ ಸ್ಥಳದಿಂದ ಅವನ ತಲೆಯಿಂದ ರಕ್ತ ಸುರಿಯುತ್ತಿರುತ್ತೆ, 479 00:42:11,680 --> 00:42:15,640 ನಾನವನು ನೆಲದ ಮೇಲೆ ಬಿದ್ದಿರೋದನ್ನ ದಿಟ್ಟಿಸಿ ನೋಡುತ್ತೇನೆ ಮತ್ತು ನನಗೆ... ಏನೂ ಅನಿಸಲ್ಲ. 480 00:42:16,440 --> 00:42:18,600 ಸಂತೋಷವೂ ಅಲ್ಲ, ಸಮಾಧಾನವೂ ಅಲ್ಲ, ಏನೂ ಇಲ್ಲ. 481 00:42:24,960 --> 00:42:26,680 ಅದು ಸರಿಯಾದ ಕೆಲಸ ಅಂತ ನೀವು ನನಗೆ ಹೇಳಿದಿರಿ. 482 00:42:26,760 --> 00:42:29,040 ಪೊಲೀಸರ ಬಳಿ ಹೋಗಲು ನೀವೇ ನನಗೆ ಪ್ರೋತ್ಸಾಹ ನೀಡಿದ್ದು. 483 00:42:29,800 --> 00:42:31,680 ಆದರೆ ನಾನು ಸಿದ್ಧನಿರಲಿಲ್ಲ ಅಂತ ಹೇಳಿದ್ದೆ! 484 00:42:31,760 --> 00:42:32,800 ಅರ್ಲೋ ಜೋನ್ಸ್, 27ನೇ ಮೇ 2023 485 00:42:33,760 --> 00:42:36,120 ದೇವರು ನನ್ನ ಬಳಿಗೆ ಬಂದು, 486 00:42:36,200 --> 00:42:38,840 ಅವನ ಬದಲು "ಶಿಕ್ಷೆ ವಿಧಿಸಲು" ನನಗೆ ಹೇಳಿದ. 487 00:42:38,920 --> 00:42:42,240 ನಾನು, "ಸಂತೋಷದಿಂದ" ಅಂದೆ. 488 00:42:44,520 --> 00:42:47,440 ಈ ಕೋಣೆಯಲ್ಲಿ ನಡೆಯುವ ಎಲ್ಲವನ್ನೂ ನಾನು ರೆಕಾರ್ಡ್ ಮಾಡುತ್ತೇನೆ ಅಂತ ಗೊತ್ತಲ್ಲಾ? 489 00:42:50,360 --> 00:42:51,200 ಜೋಲ್, 1ನೇ ಸೆಪ್ 1998 490 00:42:51,280 --> 00:42:52,720 ಕ್ಷಮಿಸಿ, ಅಪ್ಪ. 491 00:42:53,840 --> 00:42:55,720 ಕ್ಷಮಿಸಿ, ಒಂದು ಕ್ಷಣ ಮಾತಾಡಬಹುದಾ? 492 00:42:57,720 --> 00:43:00,920 ಪುತ್ರರು ತಂದೆಯಾಗುತ್ತಾರೆ, ಜೋಲ್. 493 00:43:01,000 --> 00:43:02,560 ಅದು ಅವರ ರಕ್ತದಲ್ಲೇ ಇದೆ. 494 00:43:47,480 --> 00:43:48,320 ಲೌರಾ? 495 00:43:52,480 --> 00:43:53,480 ಲೌರಾ? 496 00:44:01,240 --> 00:44:02,080 ಲೌರಾ? 497 00:44:46,680 --> 00:44:47,840 ಕ್ಷಮಿಸಿ. 498 00:45:45,120 --> 00:45:47,120 ಉಪ ಶೀರ್ಷಿಕೆ ಅನುವಾದ: ಅನುರಾಧ 499 00:45:47,200 --> 00:45:49,200 ಸೃಜನಶೀಲ ಮೇಲ್ವಿಚಾರಕರು ಮಧುರಾ ಸುಬ್ರಹ್ಮಣ್ಯ