1 00:00:06,006 --> 00:00:08,551 ಈ ಹಿಂದೆ ಸ್ಪೈಡರ್-ನುಆನಲ್ಲಿ 2 00:00:09,051 --> 00:00:12,345 ಸಿಲ್ವರ್‌ಮೇನ್. 30 ವರ್ಷಗಳಿಂದ ಅಪರಾಧಗಳ ಆಯೋಜಕ. 3 00:00:12,346 --> 00:00:15,181 ಒಂದೆರಡು ರಾತ್ರಿಗಳ ಹಿಂದೆ, ಯಾರೋ ಅವನ ಬಂಗಲೆಗೆ ಬೆಂಕಿ ಹಚ್ಚಿದ. 4 00:00:15,182 --> 00:00:16,099 ಆಡಿಸನ್! 5 00:00:16,100 --> 00:00:18,685 ನನ್ನನ್ನ ಹೀಗೇ ಹಿಂಬಾಲಿಸುತ್ತಾ ಇದ್ದರೆ, ಪರಿಣಾಮ ನೆಟ್ಟಗಿರಲ್ಲ. 6 00:00:18,686 --> 00:00:20,688 ಇವನಲ್ಲಿ ಅಲೌಕಿಕ ಶಕ್ತಿ ಇದೆಯಾ? ಇವನು ನಿನ್ನ ಹಾಗಾ? 7 00:00:22,690 --> 00:00:24,607 ಒಂದು ಉಪಕಾರ ಮಾಡು, ಅದನ್ನು ಪ್ರಕಟಿಸಬೇಡ. 8 00:00:24,608 --> 00:00:26,901 ಡಾನಗಲ್ ಜೀವ ಹೋಗೋ ಮುಂಚೆ ಅವನಿಗೆ ಎಚ್ಚರಿಕೆ ನೀಡಬೇಕು. 9 00:00:26,902 --> 00:00:28,361 ಇಷ್ಟು ಸಾಕು. 10 00:00:28,362 --> 00:00:29,863 ಇದು ಎಲ್ಲರಿಗೂ ಉಚಿತವಾಗಿರುತ್ತೆ. 11 00:00:29,864 --> 00:00:31,906 ಜನರಿಗೆ ಅವರ ರಕ್ಷಕ ಬೇಕು. 12 00:00:31,907 --> 00:00:33,491 ಯಾರಾದರೂ ಸಿಗುತ್ತಾರೆ ಬಿಡು. 13 00:00:33,492 --> 00:00:35,202 ರೂಬಿ ಬದುಕಿದ್ದಿದ್ದರೆ ಏನು ಹೇಳುತ್ತಿದ್ದಳೋ. 14 00:00:36,328 --> 00:00:37,747 ನಾನು ಈಗ ಆ ವ್ಯಕ್ತಿಯಲ್ಲ. 15 00:00:38,664 --> 00:00:40,373 ಇದು ಯಾರು ಅಂತ ಗೊತ್ತಾ? 16 00:00:40,374 --> 00:00:43,084 ಆಕೆ ಕ್ಯಾಟ್ ಹಾರ್ಡಿ. ದಿ ಆಲ್ಕೋವ್‌ನ ಪ್ರಮುಖ ತಾರೆ. 17 00:00:43,085 --> 00:00:44,586 ಮಾತಾಡಲೂ ಎಲ್ಲಾದರೂ ಜಾಗವಿದೆಯಾ? 18 00:00:44,587 --> 00:00:45,712 - ವ್ಯವಹಾರದ ಬಗ್ಗೆ. - ಫ್ಲಿಂಟ್? 19 00:00:45,713 --> 00:00:47,923 ನನಗೆ ಜನರನ್ನು ನೋಯಿಸಲು ಇಷ್ಟ ಇಲ್ಲ. 20 00:00:53,220 --> 00:00:55,180 - ಅವನಿಗೇನೂ ಮಾಡಬೇಡಿ. - ಏನು ಇದೆಲ್ಲಾ? 21 00:00:55,181 --> 00:00:56,973 ದಯವಿಟ್ಟು ಇಲ್ಲಿಂದ ಹೊರಟುಹೋಗಿ. 22 00:00:56,974 --> 00:00:59,893 ಜನ ತಮ್ಮ ನಿಜರೂಪ ಏನು ಅಂತ ನಿಮಗೆ ತಿಳಿಸಿದಾಗ, ಅದಕ್ಕೆ ಕಿವಿ ಕೊಡಬೇಕು. 23 00:00:59,894 --> 00:01:01,479 - ಇವರ ನಿಜರೂಪ ಏನು? - ನಿವೃತ್ತ ರೂಪ. 24 00:01:02,605 --> 00:01:04,064 ನಾನು ಇವರಿಗೆ ಕೆಲಸ ಕೊಡಲು ಬಂದೆ. 25 00:01:04,648 --> 00:01:06,984 ನೆನ್ನೆ ರಾತ್ರಿ ನೀವು ನೋಡಿದ ನನ್ನ ಗೆಳೆಯ ಕಣ್ಮರೆಯಾಗಿದ್ದಾನೆ. 26 00:01:34,220 --> 00:01:35,929 ಫ್ಲಿಂಟ್ ನಿಮ್ಮ ಅಂಗರಕ್ಷಕ ಅಂದಿದ್ದಿರಿ. 27 00:01:35,930 --> 00:01:40,016 ಹೌದು. ನನ್ನನ್ನು ರಕ್ಷಿಸುತ್ತಾನೆ. ನಿಷ್ಠಾವಂತ. ಇತ್ತೀಚೆಗೆ ಅಂತಹವರು ಸಿಗೋದು ಕಷ್ಟ. 28 00:01:40,017 --> 00:01:42,853 ನಿಜವೇ. ನನ್ನ ಗಂಡನನ್ನೂ ನಾನು ಅದಕ್ಕೇ ಮದುವೆಯಾಗಿದ್ದು. 29 00:01:43,896 --> 00:01:45,980 ಇನ್ನೇನು ಗೊತ್ತು ಅವನ ಬಗ್ಗೆ? ಕುಟುಂಬ, ಸ್ನೇಹಿತರು ಯಾರಾದರೂ? 30 00:01:45,981 --> 00:01:48,234 ಅವನ ವೈಯಕ್ತಿಕ ಜೀವನದ ಬಗ್ಗೆ ನನಗೆ ಏನೂ ಗೊತ್ತಿಲ್ಲ. 31 00:01:48,734 --> 00:01:49,693 ಅವನ ವಿಳಾಸ ಗೊತ್ತು. 32 00:01:50,861 --> 00:01:53,989 ಅವನು ಮರಳಿನ ರಾಕ್ಷಸ ಆದ ಬಗ್ಗೆ ನಾವು ಮಾತಾಡಲಿದ್ದೇವಾ? 33 00:01:55,908 --> 00:01:57,076 ನನಗೆ ಗೊತ್ತಿರೋದು ಅವಳಿಗೂ ಗೊತ್ತು. 34 00:01:58,494 --> 00:02:00,453 ಇದೆಲ್ಲಾ ಶುರುವಾಗಿದ್ದು ಆರು ತಿಂಗಳ ಹಿಂದೆ. 35 00:02:00,454 --> 00:02:04,250 ಮೊದಲು ಕಡಿಮೆಯಿತ್ತು, ಆಮೇಲೆ ಜಾಸ್ತಿ ಆಗುತ್ತಾ ಹೋಯಿತು. 36 00:02:05,042 --> 00:02:07,252 ಪ್ರತಿ ಬಾರಿಯೂ ಹೀಗಾದ ಮೇಲೆ ಮರೆತು ಹೋಗುತ್ತಾನಾ? 37 00:02:07,253 --> 00:02:08,254 ಯಾವಾಗಲೂ ನೆನಪಿರುತ್ತೆ, 38 00:02:08,838 --> 00:02:11,131 ತಲೆಗೆ ಕಬ್ಬಿಣದಿಂದ ಏಟು ಬೀಳದಿದ್ದರೆ. 39 00:02:12,091 --> 00:02:15,802 ಅಷ್ಟೇನಾ? ಅವನು ಮರಳಾಗಿ ಹೋದನಾ? ಮರಳೇ ತಾನೇ ಅದು? 40 00:02:15,803 --> 00:02:17,554 ಅದು ದೊಡ್ಡ ವಿಷಯ ಅಲ್ವಾ? 41 00:02:17,555 --> 00:02:20,223 ಮತ್ತೆ, ಹೀಗೆ ಯಾಕೆ ಆಗುತ್ತಿರಬಹುದು ಅಂತ ನಿಮಗೆ ಸುಳಿವಿದೆಯಾ? 42 00:02:20,224 --> 00:02:21,933 ಮುಂದುವರಿಯಲು ಬೇಕಾದಷ್ಟು ಮಾಹಿತಿ ಇಲ್ಲ. 43 00:02:21,934 --> 00:02:23,727 ಅದಕ್ಕೇ ತಾನೇ ಅಷ್ಟು ಹಣ ಕೊಡುತ್ತಿರೋದು? 44 00:02:24,311 --> 00:02:26,730 ನೀವು ತನಿಖಾಧಿಕಾರಿ. ತನಿಖೆ ಮಾಡಿ. 45 00:02:28,274 --> 00:02:32,735 ಕಲಾವಿದ ಬರೀ ಗಾಳಿಯಲ್ಲಿ ಚಿತ್ರ ಬಿಡಿಸಲು ಆಗಲ್ಲ. ಅವನಿಗೆ ಕಾಗದ, ಕುಂಚ, ಬಣ್ಣ, ಎಲ್ಲಾ ಬೇಕಿರುತ್ತೆ. 46 00:02:32,736 --> 00:02:35,154 ನಾನು ವಿಷಯ ಮುಚ್ಚಿಡುತ್ತಿದ್ದೇನೆ ಅನ್ನುತ್ತಿದ್ದೀರಾ? 47 00:02:35,155 --> 00:02:37,782 - ಹೌದು ಅನಿಸುತ್ತೆ. - ಯಾಕೆ ಹಾಗೆ ಅನಿಸುತ್ತಿದೆ? 48 00:02:37,783 --> 00:02:39,826 - ಇಷ್ಟು ವರ್ಷಗಳ ಅನುಭವದಿಂದ. - ಗ್ರಾಹಕರ ಜೊತೆಗಿನ ಅನುಭವನಾ? 49 00:02:39,827 --> 00:02:41,745 ಅಲ್ಲ… ಮಹಿಳೆಯರ ಜೊತೆಗಿನ ಅನುಭವ. 50 00:02:43,330 --> 00:02:46,792 ನಿಮ್ಮ ಜೊತೆ ಮಾತಾಡಿ ಮಜ ಬರುತ್ತಿದೆ, ಆದರೆ ನನಗೆ ಮಾಡಲು ಬೇರೆ ಕೆಲಸ ಇದೆ. 51 00:02:48,085 --> 00:02:49,670 ನಿಮ್ಮ ಕಲೆ ಶುರುಮಾಡಿ, ಮಿ. ರೈಲಿ. 52 00:02:58,721 --> 00:03:01,849 - ಏನು ಹೇಳುವೆ? - ನಿನಗೆ ತಣ್ಣನೆ ನೀರಿನ ಸ್ನಾನ ಬೇಕೇನೋ ಅನ್ನುವೆ. 53 00:03:02,516 --> 00:03:03,767 ನನಗಂತೂ ಬೇಕು. 54 00:03:07,104 --> 00:03:09,231 ನೀನು ಹೇಳಿದ್ದು ಸರಿ. ಅವಳು ಏನೋ ಮುಚ್ಚಿಡುತ್ತಿದ್ದಾಳೆ. 55 00:03:09,857 --> 00:03:11,150 ಎಲ್ಲಾ ಮೋಜಿನ ವ್ಯಕ್ತಿಗಳು ಹೀಗೇನೇ. 56 00:03:11,775 --> 00:03:14,819 ನಾನು ಫ್ಲಿಂಟ್ ಮನೆ ಪರಿಶೀಲಿಸಿ ನೋಡುವೆ. ನೀನು ಯಾಕೆ-- 57 00:03:14,820 --> 00:03:16,280 ಕ್ರಿಮಿನಲ್ ರೆಕಾರ್ಡ್ಸ್ ಪಡೆಯಬೇಕಾ? 58 00:03:16,947 --> 00:03:19,616 ಹೂಂ. ಸರಿಯಾದ ತನಿಖೆ ಅಂತ ಸಿಗದೆ ತುಂಬಾ ಸಮಯ ಕಳೆದಿದೆ, 59 00:03:19,617 --> 00:03:20,784 ಆದರೂ ಪರವಾಗಿಲ್ಲ. 60 00:03:22,453 --> 00:03:24,371 ಹಿಲ್‌ಹರ್ಸ್ಟ್ ಹೋಟೆಲ್ 61 00:03:27,166 --> 00:03:28,500 ದಿ ಹಿಲ್‌ಹರ್ಸ್ಟ್ ಹೋಟೆಲ್ 62 00:04:01,533 --> 00:04:04,286 ನಾಳೆ ಬಂದರಿನ ಬಳಿ ಹೊಸ ಪೂರೈಕೆದಾರನನ್ನು ಭೇಟಿಯಾಗಲಿದ್ದೇನೆ. 63 00:04:05,621 --> 00:04:06,455 ಕೆನಡಾದವನು. 64 00:04:07,247 --> 00:04:09,583 - ನೀವು ಅದನ್ನು ನನಗೆ ಹೇಳಿರಲಿಲ್ಲ. - ಈಗ ಹೇಳುತ್ತಿದ್ದೇನೆ. 65 00:04:11,085 --> 00:04:14,672 ನಿಮ್ಮನ್ನು ಕೊಲ್ಲಲು ನೋಡಿದವರು ಯಾರು ಅಂತ ತಿಳಿಯೋವರೆಗೆ ಹೊರಗೆ ಹೋಗದಿರೋದು ಒಳ್ಳೇದು ನೀವು. 66 00:04:15,255 --> 00:04:16,423 ನಾನೆಲ್ಲಿಗೆ ಬೇಕೋ ಹೋಗುತ್ತೇನೆ. 67 00:04:17,007 --> 00:04:18,174 ಅಗೌರವ ತೋರಲು ಅಲ್ಲ, 68 00:04:18,175 --> 00:04:21,053 ಆದರೆ ನೀವು ನನಗೆ ಸಂಬಳ ನೀಡೋದು ನನ್ನ ರೂಪ ಅಥವಾ ಗುಣ ನೋಡಿ ಅಲ್ಲ. 69 00:04:21,637 --> 00:04:24,973 ನೀವು ನನಗೆ ಸಂಬಳ ನೀಡೋದು ನಿಮ್ಮನ್ನು ಜೀವಂತವಾಗಿಡಲು. ಅಲ್ಲಿಗೆ ಹೋಗಬೇಡಿ. 70 00:04:24,974 --> 00:04:28,394 ನೀವು ಸತ್ತರೆ ನನಗೆ ಲಾಭವಾಗುವಂತಿದ್ದರೆ, ನಾನೇ ಹತ್ತು ವರ್ಷ ಮುಂಚೆ ಕೊಂದಿರುತ್ತಿದ್ದೆ. 71 00:04:28,894 --> 00:04:31,479 ನಾನು ಯಾವುದರಲ್ಲಿ ಯೋಗ್ಯ, ಯಾವುದರಲ್ಲಿ ಅಲ್ಲ ಅಂತ ನನಗೆ ಗೊತ್ತು. 72 00:04:31,480 --> 00:04:33,607 ಮತ್ತು ನೀವು ಜೀವಂತವಾಗಿರಬೇಕು, ಅಧಿಕಾರದಲ್ಲಿರಬೇಕು. 73 00:04:34,233 --> 00:04:36,193 ಹಾಗಾಗಿ ದಯವಿಟ್ಟು ನನ್ನ ಮಾತು ಕೇಳಿ, 74 00:04:36,819 --> 00:04:39,654 ಮೊದಲು ನಾನು ಬಂದರಿಗೆ ಹೋಗುವೆ, ಅಲ್ಲಿ ಎಲ್ಲವೂ ಸರಿಯಿದ್ದರೆ, 75 00:04:39,655 --> 00:04:42,533 ನಂತರ ನೀವು ಮುನ್ನುಗ್ಗಿ ಬಂದು ನಿಮ್ಮ ಪ್ರತಿಭೆಯ ಪ್ರದರ್ಶನ ಮಾಡಬಹುದು. 76 00:04:44,201 --> 00:04:45,035 ಮುಗಿಯಿತಾ ನಿನ್ನದು? 77 00:04:48,580 --> 00:04:50,665 ಆ ವ್ಯಕ್ತಿ ಹೊರಗಿದ್ದಾನೆ ಎಂಬುದು ಸಮಸ್ಯೆಯಲ್ಲ. 78 00:04:50,666 --> 00:04:53,627 ಅವರು ನನ್ನನ್ನೇ ಮುಗಿಸಬಹುದು ಅಂದುಕೊಂಡಿದ್ದೇ ಸಮಸ್ಯೆ. 79 00:04:54,211 --> 00:04:58,215 ದ ಸ್ಪೈಡರ್ ಕಣ್ಮರೆಯಾದಾಗಿನಿಂದ ವಿಷಯಗಳು ಚೆನ್ನಾಗಿ ನಡೆಯುತ್ತಿದ್ದವು. 80 00:04:58,716 --> 00:05:02,761 ಯಾರೋ ನಾನು ಮೈಮರೆತಿದ್ದೇನೆ, ಮೆತ್ತಗಾಗಿದ್ದೇನೆ ಅಂದುಕೊಂಡಿರಬೇಕು. 81 00:05:03,637 --> 00:05:04,763 ನೀನೂ ಹಾಗೇ ಅಂದುಕೊಂಡಿರುವಂತಿದೆ. 82 00:05:06,557 --> 00:05:08,392 ನನ್ನನ್ನು ಸುಲಭವಾಗಿ ಮುಗಿಸಬಹುದು ಅಂದುಕೊಂಡಿದ್ದೀಯ. 83 00:05:09,393 --> 00:05:13,354 ನಿನಗೂ ಆಡಿಸನ್‌ನಂತೆ ಬೆಂಕಿ ಕಾರುವ ಶಕ್ತಿ ಇದ್ದಿದ್ದರೆ, ಆಗುತ್ತಿತ್ತೇನೋ. 84 00:05:13,355 --> 00:05:16,400 ಎಂತಹ ಅದ್ಭುತ ಶಕ್ತಿ ಅದು. 85 00:05:17,067 --> 00:05:20,611 ಈಗ ನೋಡಿದರೆ, ಫ್ಲಿಂಟ್ ಕಣ್ಮರೆಯಾಗಿದ್ದಾನೆ. 86 00:05:20,612 --> 00:05:22,865 ಇತ್ತೀಚೆಗೆ ವಿಚಿತ್ರವಾಗಿ ಆಡುತ್ತಿದ್ದ. 87 00:05:23,574 --> 00:05:25,659 ಈಗ, ಇವೆರಡೂ ವಿಷಯಗಳಿಗೆ ಏನಾದರೂ ಸಂಬಂಧ ಇದ್ದರೆ… 88 00:05:26,702 --> 00:05:27,661 ಫ್ಲಿಂಟ್‌ನನ್ನು ಹುಡುಕು. 89 00:05:32,416 --> 00:05:34,084 ಮತ್ತು ಹುಡುಗರಿಗೆ ಆ ತನಿಖಾಧಿಕಾರಿ, ಯಾರವನು… 90 00:05:34,752 --> 00:05:35,586 ರೈಲಿ. 91 00:05:36,086 --> 00:05:37,421 …ಸಿಕ್ಕಿದಾಗ, ಸೀದಾ ನನ್ನ ಬಳಿ ತರಲಿ. 92 00:06:54,164 --> 00:06:56,916 {\an8}ಮಾರ್ವೆಲ್ ಕಾಮಿಕ್ಸ್ ಆಧಾರಿತ 93 00:06:56,917 --> 00:07:01,046 "ಸ್ಪೈಡರ್-ನುಆ" 94 00:07:33,954 --> 00:07:35,163 ಕೆಚಪ್ 95 00:07:35,164 --> 00:07:35,998 ಅದ್ಭುತ. 96 00:07:47,843 --> 00:07:49,468 ಹಾಯ್, ನಾನು ರಾಬಿ ರಾಬರ್ಟ್ಸನ್. 97 00:07:49,469 --> 00:07:52,138 ಮಿಸ್ಟರ್ ರಾಬರ್ಟ್ಸನ್, ನಿಮಗೆ ಎಷ್ಟು ಸಲ ಹೇಳಲಿ? 98 00:07:52,139 --> 00:07:54,182 ನಿಮ್ಮ ಮುಂಚಿನ ಕೆಲಸ ನಿಮಗೆ ಮತ್ತೆ ಸಿಗಲ್ಲ. 99 00:07:54,183 --> 00:07:56,976 ವಾಲ್ಟರ್ಸ್ 'ಗೆಜೆಟ್‌'ನಲ್ಲಿನ ನನ್ನ ಹೊಸ ಲೇಖನ ನೋಡಿದರಾ ಗೊತ್ತಿಲ್ಲ, 100 00:07:56,977 --> 00:07:58,728 - ಆದರೆ ನಾನು… ನಾನು-- - ಮಿಸ್ಟರ್ ರಾಬರ್ಟ್ಸನ್, 101 00:07:58,729 --> 00:08:02,356 - ಈ ಮಾತು ಮುಂದುವರೆಸಿ ಉಪಯೋಗವಿಲ್ಲ. - ನಾನು ಒಮ್ಮೆ ಅವರ ಜೊತೆ ಮಾತಾಡಬೇಕು. 102 00:08:02,357 --> 00:08:04,609 - ಮಿ. ರಾಬರ್ಟ್ಸನ್, ದಯವಿಟ್ಟು. - ಆದರೆ ಒಮ್ಮೆ ನೀವು-- 103 00:08:04,610 --> 00:08:06,777 - ಒಂದು ಅವಕಾಶ ನೀಡಿದರೆ-- - ನಾನೀಗ ಫೋನ್ ಇಡಲಿದ್ದೇನೆ. 104 00:08:06,778 --> 00:08:10,364 ನಿಜಕ್ಕೂ ಅದ್ಭುತ ಸುದ್ದಿ ಸಿಕ್ಕಿದೆ! ಇಷ್ಟು ದೊಡ್ಡ ಸುದ್ದಿ ಸಿಗದೆ ವರ್ಷಗಳೇ ಕಳೆದಿವೆ. 105 00:08:10,365 --> 00:08:12,576 ದ ಸ್ಪೈಡರ್ ನಂತರದ ಅತಿ ದೊಡ್ಡ ಸುದ್ದಿ ಇದೇ! 106 00:08:15,287 --> 00:08:18,248 ನನ್ನಾಣೆ, ಅವರ ಸಮಯ ವ್ಯರ್ಥ ಆಗಲ್ಲ. 107 00:08:21,752 --> 00:08:22,920 ಏನು ಮಾಡಲು ಆಗುತ್ತೋ ನೋಡುವೆ. 108 00:08:25,589 --> 00:08:26,423 ಧನ್ಯವಾದ. 109 00:08:27,507 --> 00:08:28,342 ಧನ್ಯವಾದ. 110 00:08:31,094 --> 00:08:32,221 ಫ್ಲಿಂಟ್ ಮಾರ್ಕೋ? 111 00:08:32,888 --> 00:08:33,972 ನಿಮಗಾಗಿ ಏನೋ ಬಂದಿದೆ. 112 00:08:34,598 --> 00:08:35,641 ಮನೆಯಲ್ಲಿ ಯಾರಾದರೂ ಇದ್ದೀರಾ? 113 00:09:13,262 --> 00:09:14,846 ಮೂಸ್-ಅರ್ಗೋನ್, ಫ್ರಾನ್ಸ್ 114 00:09:22,646 --> 00:09:23,689 ಫ್ಲಿಂಟ್. 115 00:09:28,402 --> 00:09:29,236 ಆಡಿಸನ್! 116 00:09:33,365 --> 00:09:35,950 ಫ್ಲಿಂಟ್? ನಾನು ವಿನ್‌ಸ್ಟನ್. 117 00:09:35,951 --> 00:09:37,577 ಸಿಲ್ವರ್‌ಮೇನ್ ನಿನ್ನ ಜೊತೆ ಮಾತಾಡಬೇಕಂತೆ. 118 00:09:38,370 --> 00:09:39,454 ನನಗೆ ಕೀಲಿಗಳನ್ನು ಕೊಡು. 119 00:09:52,801 --> 00:09:53,719 ಮಲಗುವ ಕೋಣೆ ನೋಡು. 120 00:10:47,647 --> 00:10:48,648 ಜಾಗ ಚೆನ್ನಾಗಿದೆ. 121 00:10:50,650 --> 00:10:52,611 ಹೂಂ, ನನಗೆ ಇಷ್ಟು ಆಡಂಬರ ಇಷ್ಟ ಆಗಲ್ಲ. 122 00:10:53,737 --> 00:10:55,530 ಯಾಕಿಷ್ಟು ಆಡಂಬರ ಅಂತ ನನಗೆ ಗೊತ್ತು. 123 00:10:56,823 --> 00:10:58,867 - ಯಾಕೆ? - ಹೋಗೋಣ. 124 00:10:59,701 --> 00:11:01,744 ಅವನಿಗೆ ಹೊಸ ಹುಡುಗಿ ಸಿಕ್ಕಿರಬಹುದು ಅನ್ನುವೆಯಾ? 125 00:11:01,745 --> 00:11:04,039 ಅದಕ್ಕೇ ಅವನು ಇತ್ತೀಚೆಗೆ ಜೂಜಾಡಲು ಬರುತ್ತಿಲ್ವಾ? 126 00:11:20,180 --> 00:11:21,973 ಜಾನೆಟ್! ತುಂಬಾ ಸಮಯ ಆಯಿತು ನೋಡಿ. 127 00:11:22,724 --> 00:11:24,600 ನೀನು ಬುದ್ಧಿ ಬಂದು ಕೆಲಸ ಬಿಟ್ಟಿರುತ್ತೀಯ ಅಂದುಕೊಂಡೆ. 128 00:11:24,601 --> 00:11:28,063 ಇಲ್ಲ, ಇಲ್ಲ, ಹ್ಯಾಂಕ್. ನಾನು ಮುಂಚಿನಂತೆಯೇ ಇದ್ದೇನೆ, ದಡ್ಡಿಯಾಗಿ. 129 00:11:30,190 --> 00:11:33,692 {\an8}ಇವನ್ನು ತಂದೆ. ಇನ್ನೂ ಇದರ ರುಚಿ ಇಷ್ಟ ಅದುಕೊಳ್ಳುವೆ. 130 00:11:33,693 --> 00:11:35,362 ಬಕ್ಲಿ ಬ್ರೋಸ್. ಸಿದ್ಧ ತಿನಿಸುಗಳ ಮಳಿಗೆ 131 00:11:38,949 --> 00:11:40,950 ನನ್ನ ಹೆಂಡತಿ ಇವುಗಳನ್ನು ತಿನ್ನಬೇಡ ಅಂದಿದ್ದಾಳೆ. 132 00:11:40,951 --> 00:11:45,122 - ಸರಿ, ಹಾಗಾದರೆ-- - ಹೇ! ಆದರೆ ನೀನು ನನ್ನ ಹೆಂಡತಿ ಅಲ್ಲ. 133 00:11:47,207 --> 00:11:49,208 - ಹೆಸರು? - ಫ್ಲಿಂಟ್ ಮಾರ್ಕೋ. 134 00:11:49,209 --> 00:11:52,461 ಸರಿ, ಈಗ ಬಂದೆ. ಇದನ್ನು ಮುಟ್ಟುವ ಧೈರ್ಯವೂ ಮಾಡಬೇಡ. 135 00:11:52,462 --> 00:11:54,589 ಲಂಚ ಅಂತ ಕೊಟ್ಟ ಮೇಲೆ ಅದನ್ನು ಮುಟ್ಟಬಾರದು. 136 00:11:56,466 --> 00:11:58,175 ಜಾನೆಟ್, ನೋಡಿ ಖುಷಿಯಾಯಿತು. 137 00:11:58,176 --> 00:11:59,636 ಹೇ, ಚಾರ್ಲಿ, ಹೇಗಿದ್ದೀಯಾ? 138 00:12:03,056 --> 00:12:05,600 ನಮ್ಮ ಮಿಸ್ಟರ್ ಮಾರ್ಕೋ ಪ್ರಸಿದ್ಧ ಮನುಷ್ಯ. 139 00:12:06,101 --> 00:12:09,353 ಬ್ರೂಕ್ಲಿನ್‌ನಲ್ಲಿ ಬೆಳೆದ ಕಾರ್ಮಿಕ ವರ್ಗದವನು, ಯಾವುದೇ ನಿರೀಕ್ಷೆಯಿಲ್ಲದೆ ಬಂದವನು. 140 00:12:09,354 --> 00:12:11,605 ಮೊದಲು ಸಣ್ಣ ಅಪರಾಧಗಳು, ಆಮೇಲೆ ದೊಡ್ಡವು. 141 00:12:11,606 --> 00:12:14,316 ಬಂಧನ, ಬಂಧನ, ಬಂಧನ. 142 00:12:14,317 --> 00:12:16,945 - ಈಗ ಯಾರ ಚೇಲಾ ಗೊತ್ತಾ? - ಸಿಲ್ವರ್‌ಮೇನ್. 143 00:12:17,821 --> 00:12:20,157 ನಾನು ಫ್ಲಿಂಟ್‌ನ ಮನೆಯಲ್ಲಿದ್ದಾಗ ಆ ವಿನ್‌ಸ್ಟನ್ ಬಂದಿದ್ದ. 144 00:12:20,991 --> 00:12:23,326 - ನೀನು ಕಪಾಟಿನಲ್ಲಿ ಅಡಗಿ ಕೂತೆಯಾ? - ಕಪಾಟಿನಲ್ಲಿ ಅಡಗಿ ಕೂತೆ. 145 00:12:25,120 --> 00:12:28,205 "ಮೂಸ್-ಅರ್ಗೋನ್." ನೀನೂ ಅದರಲ್ಲಿ ಹೋರಾಡಿದ್ದೆ ತಾನೇ? 146 00:12:28,206 --> 00:12:30,791 ಹೌದು, ಯುದ್ಧದ ಅತಿ ದೊಡ್ಡ ಕದನ. 147 00:12:30,792 --> 00:12:32,293 ನಾವು ಲಕ್ಷಾಂತರ ಮಂದಿ ಇದ್ದೆವು. 148 00:12:32,294 --> 00:12:34,588 - ಇರು. ಅದು-- - ಆಡಿಸನ್. 149 00:12:35,213 --> 00:12:39,383 - ಯುದ್ಧದಲ್ಲಿ ಒಟ್ಟಿಗೆ ಇದ್ದರನಿಸುತ್ತೆ. - ಇದನ್ನೇನಾ ಕ್ಯಾಟ್ ನಿನ್ನಿಂದ ಮುಚ್ಚಿಟ್ಟಿದ್ದು? 150 00:12:39,384 --> 00:12:42,386 ಫ್ಲಿಂಟ್‌ಗೆ ಅಲೌಕಿಕ ಶಕ್ತಿ ಇರೋ ಗೆಳೆಯ ಇದ್ದಾನೆ ಅಂತ ಪಕ್ಕಾ ಅವಳಿಗೆ ಗೊತ್ತಿತ್ತು. 151 00:12:42,387 --> 00:12:44,889 ಗೊತ್ತು. ಆದರೆ ಅವಳು ನನಗೆ ಯಾಕೆ ಹೇಳಲಿಲ್ಲ ಅನ್ನೋದೇ ಗೊತ್ತಾಗುತ್ತಿಲ್ಲ. 152 00:12:44,890 --> 00:12:46,765 ಬಹುಶಃ ನೀನು ತನಿಖೆ ಒಪ್ಪಿಕೊಳ್ಳಲ್ಲ ಅಂದುಕೊಂಡಿರಬೇಕು. 153 00:12:46,766 --> 00:12:48,268 ಅದು ನಿಜ, ಒಪ್ಪಿಕೊಳ್ಳುತ್ತಿರಲಿಲ್ಲ. 154 00:12:53,773 --> 00:12:58,612 ಆಲ್ಕೋವ್ 155 00:13:24,387 --> 00:13:27,516 - ನಾನು ಈ ಮುಂಚೆ ಅದನ್ನು ಕೇಳಿಲ್ಲ. - ಕೇಳಿರಲಿಕ್ಕಿಲ್ಲ. 156 00:13:28,558 --> 00:13:29,518 ಅದು ನನ್ನ ಸಂಯೋಜನೆ. 157 00:13:31,978 --> 00:13:34,064 ಇವತ್ತು ಫ್ಲಿಂಟ್ ಮನೆಗೆ ಹೋಗಿದ್ದೆ. 158 00:13:36,733 --> 00:13:37,817 ಇದು ಏನಿರಬಹುದು ಗೊತ್ತಾ? 159 00:13:38,360 --> 00:13:39,611 ಯುದ್ಧದಲ್ಲಿದ್ದ ಅಂತ ಗೊತ್ತಿತ್ತು. 160 00:13:40,695 --> 00:13:42,572 ಎಷ್ಟು ಚಿಕ್ಕ ಯುವಕನಾಗಿದ್ದ ಅಲ್ವಾ? 161 00:13:43,114 --> 00:13:46,451 ಮತ್ತು ಈ ಹುಡುಗ? ಇವನನ್ನು ನೋಡಿದ್ದೀಯಾ? ಇಲ್ಲಿರುವ ಈ ಪುಟ್ಟ ಯುವಕ? 162 00:13:46,993 --> 00:13:49,454 ಎಂದಾದರೂ ಆಲ್ಕೋವ್ ಕಡೆ ಬಂದು ಮಾರ್ಕೋನನ್ನ ಭೇಟಿಯಾಗಿದ್ದಿದೆಯಾ? 163 00:13:51,373 --> 00:13:52,457 ಹಿಂದೆಂದೂ ಅವನನ್ನು ನೋಡಿಲ್ಲ. 164 00:13:53,833 --> 00:13:56,461 ಅವನ ಹೆಸರು… ಆಡಿಸನ್. 165 00:13:57,462 --> 00:13:59,297 ಅವನೇ ಸಿಲ್ವರ್‌ಮೇನ್ ಬಂಗಲೆ ಸುಟ್ಟುಹಾಕಿದ್ದು. 166 00:14:00,257 --> 00:14:03,343 ಈಗ ಸತ್ತಿದ್ದಾನೆ. ಅವನಿಗೆ ಗುಂಡು ಹಾರಿಸಿದ ತನಿಖಾಧಿಕಾರಿ ಕೂಡ ಸತ್ತು ಹೋದ. 167 00:14:04,177 --> 00:14:05,011 ಏನು ಮಾಡಲು ಆಗುತ್ತೆ? 168 00:14:06,179 --> 00:14:07,681 ಪ್ರಪಂಚ ಹಾಗೇನೇ, ತುಂಬಾ ಅಪಾಯಕಾರಿ. 169 00:14:12,269 --> 00:14:15,187 - ಒತ್ತಡದಲ್ಲೂ ತುಂಬಾ ತಾಳ್ಮೆ ತೋರುತ್ತೀಯ. - ನನಗೆ ಎಂತಹ ಒತ್ತಡ? 170 00:14:15,188 --> 00:14:18,482 - ಅವನು ಸಿಲ್ವರ್‌ಮೇನ್‌ಗೆ ಕೆಲಸ ಮಾಡೋದು ಹೇಳಿಲ್ಲ. - ಹೇಳಿದ್ದರೆ ತನಿಖೆ ತಗೊಳ್ಳುತ್ತಿದ್ದೆಯಾ? 171 00:14:18,483 --> 00:14:21,152 - ನನಗೆ ಅಚ್ಚರಿಗಳು ಇಷ್ಟ ಆಗಲ್ಲ. - ಹಾಗಾದರೆ ಹುಟ್ಟುಹಬ್ಬಕ್ಕೆ ಅಚ್ಚರಿ ಕೊಡಲ್ಲ. 172 00:14:25,240 --> 00:14:26,949 ಈ ಜಾಗ ನನ್ನ ಹೆಸರಲ್ಲಿದೆ, 173 00:14:26,950 --> 00:14:29,244 ಆದರೆ ಇದು ಸಿಲ್ವರ್‌ಮೇನ್‌ಗೆ ಸೇರಿದ್ದಂತ ಎಲ್ಲರಿಗೂ ಗೊತ್ತು. 174 00:14:29,953 --> 00:14:32,454 ಮತ್ತು ಫ್ಲಿಂಟ್ ಅವನ ಹೂಡಿಕೆಯನ್ನು ಕಾಪಾಡುತ್ತಿದ್ದ. 175 00:14:32,455 --> 00:14:34,332 - ನಿನ್ನಲ್ಲಿ ಮಾಡಿದ ಹೂಡಿಕೆನಾ? - ಹೌದು, ಅದೇ ಹೂಡಿಕೆ. 176 00:14:35,792 --> 00:14:38,919 ಈ ಕ್ಲಬ್ ನಡೆಯೋದು ಇಲ್ಲಿಗೆ ಬರೋ ಜನರಿಂದ, 177 00:14:38,920 --> 00:14:40,839 ಮತ್ತು ಅವರಿಗೆ ನಾನು ಕೊಡೋದು ಬೇಕು. 178 00:14:44,217 --> 00:14:46,011 ನನ್ನನ್ನು ಪಡೆಯಲು ನೋಡುತ್ತಿದ್ದೀರಾ, ರೈಲಿ? 179 00:14:46,511 --> 00:14:48,178 ಪಡೆಯಲು? 180 00:14:48,179 --> 00:14:49,014 ನನ್ನ ಅರ್ಥಮಾಡಿಕೊಳ್ಳಲು. 181 00:14:49,723 --> 00:14:51,181 ನಿಮಗೆ ನನ್ನ ಮನಸ್ಸು ಅರ್ಥ ಆದಂತಿದೆ. 182 00:14:51,182 --> 00:14:53,309 ಹಲವು ವರ್ಷಗಳ ಅನುಭವ. 183 00:14:53,310 --> 00:14:55,604 ಬರೋ ಎಲ್ಲರ ಮನಸ್ಸು ಅರ್ಥ ಮಾಡಿಕೊಳ್ಳುತ್ತೀರಾ? 184 00:14:57,272 --> 00:14:58,314 ನೀವು ಸ್ವಾರಸ್ಯಕರ ಮನುಷ್ಯ. 185 00:14:58,315 --> 00:14:59,733 ಹೌದಾ? ಯಾಕೆ ಹಾಗನಿಸಿತೋ? 186 00:15:00,358 --> 00:15:03,236 ಅಂದು ರಾತ್ರಿ ಭೇಟಿಯಾದಾಗ, ನೀವು ಹೇಡಿ ಅಂತ ಹೇಳಿಕೊಂಡಿರಿ. 187 00:15:03,862 --> 00:15:05,989 ಆದರೆ ನೀವು ತುಂಬಾ ಧೈರ್ಯವಂತರಂತೆ ಕಾಣುತ್ತೀರಿ. 188 00:15:06,948 --> 00:15:08,158 ಎಂತಹ ಕಪಟ ಹೊಗಳಿಕೆ. 189 00:15:09,034 --> 00:15:12,537 - ನನಗೆ ಅರ್ಥವಾಯಿತು. - ನಾನು ಸನ್ನಿವೇಶಕ್ಕೆ ತಕ್ಕಂತೆ ಮಾತಾಡುತ್ತೇನೆ. 190 00:15:13,163 --> 00:15:17,333 ನೋಡಿ, ನನಗೆ ಸಿಲ್ವರ್‌ಮೇನ್ ಜೊತೆಗೂ ವ್ಯವಹಾರ ಇದೆ, ನಿಮ್ಮ ಜೊತೆಗೂ ಇದೆ. 191 00:15:17,334 --> 00:15:18,877 ಆದರೆ ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. 192 00:15:19,461 --> 00:15:22,339 ಈಗ ಹಣ ಹಿಂದಿರುಗಿಸುವ ಆಲೋಚನೆ ಬಿಟ್ಟು ತನಿಖೆ ಮುಂದುವರೆಸುತ್ತೀರಾ? 193 00:15:23,548 --> 00:15:24,758 ಅಥವಾ ನೀವು ನಿಜಕ್ಕೂ ಹೇಡಿನಾ? 194 00:15:25,467 --> 00:15:27,052 ಇಲ್ಲ, ನಾನು ತನಿಖೆ ಮುಂದುವರಿಸುತ್ತೇನೆ. 195 00:15:27,969 --> 00:15:29,095 ನಾನು ಧೈರ್ಯವಂತ ಎಂಬ ಕಾರಣಕ್ಕಲ್ಲ. 196 00:15:30,221 --> 00:15:31,056 ಮತ್ತೆ, ಯಾಕೆ? 197 00:15:31,640 --> 00:15:33,807 ಒಬ್ಬ ಗಾಯಕಿಗೆ ಎಲ್ಲಾ ರಾಗಗಳು ಗೊತ್ತಿರಬೇಕು. 198 00:15:33,808 --> 00:15:37,145 ಹಾಗೇ ನನಗೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಬೇಕು. 199 00:16:37,080 --> 00:16:37,914 ಇದು… 200 00:16:39,541 --> 00:16:40,582 ಟಾಯಿ ಚಿ. 201 00:16:40,583 --> 00:16:42,292 ಹೂಂ, ಟಾಯಿ ಚಿ. 202 00:16:42,293 --> 00:16:43,545 ಇದು ಒಳ್ಳೆಯದು. 203 00:16:44,045 --> 00:16:47,840 ಉಸಿರಾಟಕ್ಕೆ, ಮನಶ್ಶಾಂತಿಗೆ ಒಳ್ಳೆಯದು. 204 00:16:47,841 --> 00:16:48,675 ನೀವೂ ಮಾಡಿ ನೋಡಿ. 205 00:16:50,093 --> 00:16:52,761 ನೀನು ಏನು ಹೇಳುತ್ತಿದ್ದೀಯೋ ಅರ್ಥ ಆಗುತ್ತಿಲ್ಲ. 206 00:16:52,762 --> 00:16:53,972 ನಮಗದು ಬೇಕೂ ಇಲ್ಲ. 207 00:17:02,230 --> 00:17:03,856 ಟೋಸ್ಟರ್ ಎಸೆದೆಯಾ? ನಿಜಕ್ಕೂ? 208 00:17:03,857 --> 00:17:05,859 ಅಷ್ಟು ಜೋರಾಗಿ ಎಸೆಯಬಾರದಿತ್ತು. 209 00:17:16,161 --> 00:17:18,371 - ನಡಿ! - ಬಾ, ಹೋಗೋಣ. 210 00:17:27,547 --> 00:17:29,715 ನನ್ನನ್ನು ಯಾಕೆ ಕರೆದುಕೊಂಡು ಹೋಗುತ್ತಿದ್ದೀರ? 211 00:17:29,716 --> 00:17:31,425 ಸಿಲ್ವರ್‌ಮೇನ್ ನಿನ್ನನ್ನು ನೋಡಬೇಕಂತೆ. 212 00:17:31,426 --> 00:17:33,635 ಅದು ಗೊತ್ತಾಯಿತು, ಯಾಕೆ ಅಂತ ಕೇಳಿದ್ದು ನಾನು. 213 00:17:33,636 --> 00:17:35,512 "ಯಾಕೆ" ಅಂತ ನಮಗೆ ಗೊತ್ತಿರಲ್ಲ. 214 00:17:35,513 --> 00:17:38,767 ಬಾಸ್‌ನಿಂದ ನೀನು ಹಣ ಕೀಳಲು ನೋಡದಿದ್ದಿದ್ದರೆ ಕರೆಸಿಕೊಳ್ಳುತ್ತಿರಲಿಲ್ಲವೇನೋ. 215 00:17:39,267 --> 00:17:42,478 ಡಾನಗಲ್. ಅವನ ಹಣ ಕೀಳೋ ಯೋಜನೆಗೂ ನನಗೂ ಯಾವ ಸಂಬಂಧವೂ ಇರಲಿಲ್ಲ. 216 00:17:42,479 --> 00:17:44,146 ನಾನು ಅವನಿಗೆ ಬೇಡ ಅಂದಿದ್ದೆ. 217 00:17:44,147 --> 00:17:46,774 ನಾನು ಹೇಳಿದಂತೆ, ಬಾಸ್‌ಗೆ ನಿನ್ನ ಜೊತೆ ಬರೀ ಮಾತಾಡಬೇಕಂತೆ. 218 00:17:46,775 --> 00:17:50,444 ನಿಮ್ಮ ಬಾಸ್‌ನ ಮನೆಯನ್ನು ಸುಡಲು ಆಡಿಸನ್‌ನನ್ನು ಯಾರು ನೇಮಿಸಿಕೊಂಡಿದ್ದು ಅಂತಲೂ ನನಗೆ ಗೊತ್ತಿಲ್ಲ. 219 00:17:50,445 --> 00:17:51,987 ನಿನಗೆ ಏನೂ ಗೊತ್ತಿಲ್ವಾ, ಅಲ್ವಾ? 220 00:17:51,988 --> 00:17:54,114 ಅದು ತಪ್ಪು ವ್ಯಾಕರಣ. ಇರಲಿ ಬಿಡು. 221 00:17:54,115 --> 00:17:57,493 - ಕೇಳಿ, ನಾನು ಒಳ್ಳೆಯ ತನಿಖಾಧಿಕಾರಿ ಅಲ್ಲ. - ಹಾಗಾದರೆ ನಿನಗೆ ಯಾವ ಚಿಂತೆಯೂ ಬೇಕಿಲ್ಲ. 222 00:17:57,494 --> 00:17:58,745 ಡಾನಗಲ್‌ಗೂ ಅದನ್ನೇ ಹೇಳಿದಿರಾ? 223 00:17:59,370 --> 00:18:01,456 ಹೌದು. ಅದನ್ನೇ ಹೇಳಿದ್ದೆವು. 224 00:18:01,956 --> 00:18:04,125 ಅಂದಹಾಗೆ, ಮೂಗಿಗೆ ಗುದ್ದಿದ್ದಕ್ಕೆ ಕ್ಷಮೆ ಇರಲಿ. 225 00:18:04,709 --> 00:18:05,543 ನನಗಾ? 226 00:18:06,044 --> 00:18:06,878 ಅವನಿಗೆ ಗುದ್ದಿದ್ದು. 227 00:18:12,675 --> 00:18:13,885 ಇಳಿ ಕೆಳಗೆ! 228 00:18:21,309 --> 00:18:22,185 ಎಲ್ಲಿ ಹೋದ? 229 00:18:22,852 --> 00:18:23,770 ಆ ಕಡೆ ಬಗ್ಗಿ ನೋಡು. 230 00:18:30,944 --> 00:18:32,611 ಬಾಸ್‌ಗೆ ಕೋಪ ಬರುತ್ತೆ. 231 00:18:32,612 --> 00:18:34,364 ಹೌದು,ಅವನನ್ನು ಕರೆತರಲು ಹೇಳಿದ್ದರು. 232 00:18:35,824 --> 00:18:36,866 ಕಾರ್ ಹತ್ತು ನಡಿ! 233 00:18:37,742 --> 00:18:38,785 ಶತದಡ್ಡ. 234 00:18:47,168 --> 00:18:49,003 ಎಲ್ಲೆಡೆ ಸಂಕಷ್ಟ ಇದೆ. 235 00:18:49,879 --> 00:18:54,633 {\an8}ಆದರೆ ನಗರದ ಸಾಮರ್ಥ್ಯ ಇರೋದು, ಅವರು ಕಷ್ಟವನ್ನು ಹೇಗೆ ಎದುರಿಸುತ್ತಾರೆ ಎಂಬುದರಲ್ಲಿ. 236 00:18:54,634 --> 00:18:57,219 {\an8}- ಇದು ಟೊಪೀಕಾ ಅಥವಾ ಕಾಲಮಜೂ ಅಲ್ಲ. - ನಾನು ನಿಮ್ಮನ್ನು ನಂಬಲ್ಲ. 237 00:18:57,220 --> 00:18:58,470 {\an8}ಮೇಯರ್ ಮೋರಿಸ್‌ಗೆ ಮತ್ತೆ ನಿಮ್ಮ ಮತ 238 00:18:58,471 --> 00:18:59,680 {\an8}ಇದು ನ್ಯೂ ಯಾರ್ಕ್. 239 00:18:59,681 --> 00:19:04,143 {\an8}ನಾವು ಈ ಅಲೆಯ ವಿರುದ್ಧ ಕೈ-ಕೈ ಹಿಡಿದು ನಿಲ್ಲುತ್ತೇವೆ. 240 00:19:05,186 --> 00:19:07,604 ನಮ್ಮ ನಗರದಲ್ಲಿ ಸಾಕಷ್ಟು ದುಡ್ಡಿದ್ದಾಗ ಎಲ್ಲಾ ಸುಲಭವಾಗಿತ್ತು… 241 00:19:07,605 --> 00:19:08,772 ಇಲ್ಲಿ ಏನು ಸುದ್ದಿ ಇದೆ? 242 00:19:08,773 --> 00:19:10,023 ಕುಡಿಯೋಣ 243 00:19:10,024 --> 00:19:13,277 "ಹತಾಶ ಮೋರಿಸ್‌ರ ಹಳಸು ಭಾಷಣ." 244 00:19:13,278 --> 00:19:17,490 "ಮ"ಯಿಂದ ಹೆಚ್ಚು ಚೆನ್ನಾಗಿರುತ್ತೆ. "ಮೇಯರ್ ಮೋರಿಸ್‌ರ ಮಾತಲ್ಲಿ ಮೌಲ್ಯವಿಲ್ಲ." 245 00:19:18,074 --> 00:19:20,033 ಆ ಹಡ್ಸನ್ ಮೊದಲೇ ಸರಿಯಿಲ್ಲ, 246 00:19:20,034 --> 00:19:22,327 ಈಗ ನೋಡಿದರೆ ಮೋರಿಸ್ ವಿರುದ್ಧ ಗೆಲ್ಲುವಂತೆ ಕಾಣುತ್ತಿದ್ದಾನೆ. 247 00:19:22,328 --> 00:19:25,206 ಕೆಲವೊಮ್ಮೆ ಬೇರೆ ಹಾವಿಗೆ ಹಾಲೆರೆಯಬೇಕಾಗುತ್ತದೆ. 248 00:19:25,915 --> 00:19:28,751 ಮತ್ತೆ, ನಿನ್ನ ಮುಖಕ್ಕೆ ಏನಾಯಿತು ಹೇಳುವೆಯಾ? 249 00:19:29,460 --> 00:19:32,213 ಆಡಿಸನ್ ಬಗ್ಗೆ ಲೇಖನ ಬರೆಯದಿರು ಅಂತಷ್ಟೇ ಹೇಳುವೆ. 250 00:19:34,048 --> 00:19:35,048 ಸಿಲ್ವರ್‌ಮೇನ್ ಮಾಡಿಸಿದನಾ? 251 00:19:35,049 --> 00:19:36,842 ಆಡಿಸನ್ ಬಗ್ಗೆ ಹುಚ್ಚನಂತೆ ಹುಡುಕುತ್ತಿದ್ದಾನೆ. 252 00:19:36,843 --> 00:19:40,597 ಅವನ ಮೇಲೆ ಯಾರು ದಾಳಿ ಮಾಡಿದ್ದು ಎಂದು ತಿಳಿಯಬೇಕೆಂದಿದ್ದಾನೆ, ಹಾಗಾಗಿ ಜಾಗ್ರತೆ. 253 00:19:41,180 --> 00:19:43,683 ನಾನಲ್ಲ ಮುಖಕ್ಕೆ ಗುದ್ದಿಸಿಕೊಂಡಿರುವವನು. 254 00:19:44,559 --> 00:19:46,269 ಇದಕ್ಕೆ ಮುಂಚೇನೂ ಅವನ ಹುಡುಗರ ಜೊತೆ ಕಾದಾಡಿದ್ದೇನೆ. 255 00:19:46,728 --> 00:19:48,937 ಮುಖವಾಡ ಮತ್ತು ಕನ್ನಡಕದ ಹಿಂದಿನಿಂದ, 256 00:19:48,938 --> 00:19:51,773 ನ್ಯೂ ಯಾರ್ಕ್ ನಗರದ ಹೀರೋ ಆಗಿ. 257 00:19:51,774 --> 00:19:52,817 ಆದರೆ ಬೆನ್ ರೈಲಿ ಆಗಲ್ಲ. 258 00:19:53,318 --> 00:19:54,943 ಏನು ಗೊತ್ತಾ? ಅದನ್ನು ಕೊಡಿ. 259 00:19:54,944 --> 00:19:56,904 ನಾನು ಈಗಲೇ ಘೋಷಣೆ ಮಾಡುತ್ತಿರುವೆ. 260 00:19:56,905 --> 00:19:57,863 {\an8}ನಿರ್ಬಂಧ ನಿಲ್ಲಿಸಿ 261 00:19:57,864 --> 00:20:02,869 {\an8}ನಿಜ. ನಾನು ಚುನಾವಣೆ ಗೆದ್ದು ಬಂದರೆ ನಿರ್ಬಂಧವೇ ಇರೋದಿಲ್ಲ. 262 00:20:03,453 --> 00:20:06,663 - ಜನರಿಗೇನು ಕೇಳಬೇಕು ಅಂತ ಅವನಿಗೆ ಗೊತ್ತು. - ದೇವರೇ ನನಗೆ ಸಾಕ್ಷಿ, 263 00:20:06,664 --> 00:20:08,833 ಮದ್ಯದ ಹರಿವು ಎಂದೂ ನಿಲ್ಲಲ್ಲ! 264 00:20:10,043 --> 00:20:13,004 ನೋಡು, ನಾನಿಷ್ಟೇ ಹೇಳುತ್ತಿರೋದು, ಈಗಾಗಲೇ ಸಿಲ್ವರ್‌ಮೇನ್ ವಿರುದ್ಧ ನಿಂತಿದ್ದೀಯ. 265 00:20:13,504 --> 00:20:15,465 ಮುಖವಾಡ ಧರಿಸು ಇಲ್ಲವೇ ಮಡಿ ಎಂಬಂತಾದರೆ 266 00:20:15,965 --> 00:20:17,674 ಮುಖವಾಡ ಧರಿಸೋದೇ ಮೇಲು, ಅಲ್ವಾ? 267 00:20:17,675 --> 00:20:20,135 ನಗರದ ಜನರಿಗೂ ಸಹಾಯ ಆಗುತ್ತೆ. 268 00:20:20,136 --> 00:20:21,595 ಬಿಡು, ರಾಬಿ. 269 00:20:21,596 --> 00:20:22,554 ಮತ್ತೆ ಆ ವಿಷಯ ಬೇಡ. 270 00:20:22,555 --> 00:20:24,473 - ಇದಾದ ಮೇಲೆ ನಾನೇನು ಮಾಡುತ್ತೇನೆ ಗೊತ್ತಾ? - ಏನು? 271 00:20:24,474 --> 00:20:25,308 ಹೀಗೇ ಚೆಲುವನಾಗಿರೋದು. 272 00:20:25,892 --> 00:20:27,936 ಆಮೇಲೆ ಆಡಿಸನ್ ಮೇಲೆ ಲೇಖನ ಬರೆಯುತ್ತೇನೆ. 273 00:20:28,728 --> 00:20:31,189 ಲೇಖನ ಬರೆಯೋದೇ ನನ್ನ ಹೊಟ್ಟೆಪಾಡು, ಗೆಳೆಯ. 274 00:20:33,691 --> 00:20:35,777 ನಾನು ಆ ಕೆನಡಾದವರ ಬಗ್ಗೆ ಯೋಚಿಸುತ್ತಿದ್ದೆ. 275 00:20:37,070 --> 00:20:38,529 ನಾನು ಅದನ್ನು ನೋಡಿಕೊಳ್ಳಬೇಕಾ? 276 00:20:39,030 --> 00:20:40,031 ಇಲ್ಲ, ನಾನೇ ನೋಡಿಕೊಳ್ಳುವೆ. 277 00:20:41,407 --> 00:20:42,742 ಯೋಜನೆ ಬದಲಾಗಲ್ಲ, ಆದರೆ… 278 00:20:44,160 --> 00:20:45,995 ನನಗಿಂತ ಮುಂಚೆ ನೀನು ಹೋಗು. ಜಾಗ ಪರಿಶೀಲಿಸು. 279 00:20:52,377 --> 00:20:54,503 ಇದು ಸುಂದರವಾಗಿ ಕಾಣುತ್ತಿದೆ. 280 00:20:54,504 --> 00:20:56,089 ಏನನ್ನುವೆ, ವಿನ್‌ಸ್ಟನ್? 281 00:20:57,340 --> 00:20:58,757 ನನಗೆ ಫ್ಯಾಷನ್ ಅರ್ಥ ಆಗಲ್ಲ. 282 00:20:58,758 --> 00:21:00,885 ಆದರೆ ಎಲ್ಲವೂ ಸ್ವಲ್ಪ… 283 00:21:02,011 --> 00:21:03,011 ಹಳತರಂತೆ ಅನಿಸುತ್ತೆ. 284 00:21:03,012 --> 00:21:05,682 ವಿನ್‌ಸ್ಟನ್, ನಿನಗೆ ಅವಳನ್ನು ಕಂಡರೆ ಏನಾದರೂ ಕೋಪಾನಾ? 285 00:21:07,517 --> 00:21:11,229 ಇಲ್ಲ, ಆದರೆ ಗೊಂಬೆಗಳಿಗೆ ಬಟ್ಟೆ ಹಾಕುವುದಕ್ಕಿಂತ ಹೆಚ್ಚು ಮುಖ್ಯ ಕೆಲಸಗಳು ಇವೆ ಅನಿಸುತ್ತೆ. 286 00:21:12,355 --> 00:21:14,524 ಆದರೆ ಫ್ಯಾಶನ್ ಮತ್ತು ಅಭಿರುಚಿ ಬಗ್ಗೆ ಗಮನವೂ ಮುಖ್ಯ. 287 00:21:15,274 --> 00:21:16,525 ಅದನ್ನು ಖರೀದಿಸಿ. 288 00:21:16,526 --> 00:21:17,735 ನಿನಗೂ ಇಷ್ಟ ಆಯಿತು ತಾನೇ? 289 00:21:18,820 --> 00:21:21,072 - ನಿಜ ಹೇಳಬೇಕೆಂದರೆ, ಇದು-- - ಹೂಂ, ಇರಲಿ. ಅದ್ಭುತವಾಗಿದೆ. 290 00:21:40,466 --> 00:21:42,802 ಇಲ್ಲಿ ಕೇಳಿ, ಆಡಿಸನ್ ಅವರ ಮನೆ ಎಲ್ಲಿರೋದು? 291 00:21:55,815 --> 00:21:56,649 ಮಿಸಸ್ ಆಡಿಸನ್. 292 00:22:20,715 --> 00:22:22,633 ಜೇಮ್ಸ್ ಆಡಿಸನ್ 293 00:22:28,681 --> 00:22:29,682 ಯಾರು ನೀನು? 294 00:22:34,729 --> 00:22:36,689 - ಹಲೋ, ಅಣ್ಣ. - ನನಗೆ ನಿನ್ನ "ಹಲೋ" ಬೇಕಿಲ್ಲ. 295 00:22:37,231 --> 00:22:38,399 ನಾನು ಏನೋ ಪ್ರಶ್ನೆ ಕೇಳಿದೆ. 296 00:22:39,108 --> 00:22:40,192 ಖಂಡಿತ. 297 00:22:40,193 --> 00:22:44,155 ನಿನಗಿರೋ ಕೋಪ ನೋಡಿದರೆ, ಉತ್ತರ ಕೊಟ್ಟರೆ 298 00:22:44,822 --> 00:22:45,740 ನನಗೇ ಒಳ್ಳೆಯದು ಅನಿಸುತ್ತೆ 299 00:22:46,324 --> 00:22:47,533 ವೇರಾ ಆಡಿಸನ್ ಅವರು ಬೇಕಿತ್ತು. 300 00:22:48,367 --> 00:22:50,495 - ಎಲ್ಲಿದ್ದಾರೆ ಗೊತ್ತಾ? - ಯಾಕೆ ಗೊತ್ತಾಗಬೇಕು ನಿನಗೆ? 301 00:22:50,995 --> 00:22:54,916 ಅದು, ನಾನು ಜೇಮ್ಸ್ ಆಡಿಸನ್ ಸಾವಿನ ಮೇಲೆ ಲೇಖನ ಬರೆಯುತ್ತಿರುವ ಪತ್ರಕರ್ತ. 302 00:22:56,000 --> 00:22:57,502 ಅವನ ವಿಧವೆಯ ಹತ್ತಿರ ಮಾತಾಡಬೇಕಿತ್ತು. 303 00:23:01,089 --> 00:23:02,256 ಜಿಮ್ಮಿ ಸತ್ತುಹೋದನಾ? 304 00:23:04,634 --> 00:23:06,677 ಕ್ಷಮಿಸು. ನೀವು ಗೆಳೆಯರಾಗಿದ್ದಿರಾ? 305 00:23:08,262 --> 00:23:09,347 ಹೇಗೆ ಸತ್ತ? 306 00:23:10,598 --> 00:23:12,058 ಅದು, ಒಂದು ಸ್ಫೋಟ ಆಯಿತು… 307 00:23:14,060 --> 00:23:15,770 ಸ್ಟಾಂಡರ್ಡ್ ಆಯಿಲ್ ಡಿಪೊ ಬಳಿ. 308 00:23:16,813 --> 00:23:18,230 ಅವನ ಬಗ್ಗೆ ಯಾಕೆ ಬರೆಯುತ್ತಿದ್ದೀಯ? 309 00:23:18,231 --> 00:23:21,067 ಅದು, ಅವನು ಸಾಯುವ ಮುಂಚೆ, ಒಂದು ತಪ್ಪು ಮನೆಗೆ ಬೆಂಕಿ ಹಚ್ಚಿದ್ದ. 310 00:23:21,567 --> 00:23:22,401 ಯಾರ ಮನೆಗೆ? 311 00:23:23,152 --> 00:23:23,986 ಸಿಲ್ವರ್‌ಮೇನ್ ಮನೆಗೆ. 312 00:23:32,620 --> 00:23:35,373 - ಇಲ್ಲಿಂದ ಹೊರಡು. - ಇರು, ಇರು, ಇರು. 313 00:23:36,290 --> 00:23:38,959 ಆಡಿಸನ್ ಸುಮ್ಮನೆ ಹೋಗಿ ನಗರದ ಅತ್ಯಂತ ಅಪಾಯಕಾರಿ ಮನುಷ್ಯನ ಮನೆಗೆ 314 00:23:38,960 --> 00:23:41,963 ಬೆಂಕಿ ಹಚ್ಚುವ ಬಗ್ಗೆ ಯೋಚಿಸಲಿಲ್ಲ. ಅವನಿಗೆ ಯಾರೋ ಅದಕ್ಕೆ ಹಣ ನೀಡಿದ್ದರು. 315 00:23:42,630 --> 00:23:45,508 ಅವನು ನಿನ್ನ ಗೆಳೆಯನಾಗಿದ್ದ, ಹಾಗಾಗಿ ಕೆಟ್ಟ ವ್ಯಕ್ತಿ ಅಲ್ಲ ಅಂದುಕೊಳ್ಳುವೆ. 316 00:23:46,175 --> 00:23:47,134 ಅವನಿಗೆ ಏನೋ ರೋಗ ಇತ್ತು. 317 00:23:47,135 --> 00:23:50,679 ಇಂತಹ ಸಮಯದಲ್ಲಿ ಬದುಕುಳಿಯಲು ಅಂತಹ ರೋಗಗಳನ್ನು ಬಳಸಿಕೊಳ್ಳಬೇಕಾಗುತ್ತೆ. 318 00:23:50,680 --> 00:23:54,099 - ಅವರ ರೋಗವೇ ಅವರನ್ನು ನಾಶ ಮಾಡುವವರೆಗೆ. - ಒಂದು ನಿಮಿಷ. ರೋಗ ಅಂದರೆ, ಎಂತಹ ರೋಗ? 319 00:23:54,100 --> 00:23:55,476 ಅವನಿಗೆ ಹಣ ಕೊಟ್ಟವರು ಯಾರೋ ಗೊತ್ತಿಲ್ಲ. 320 00:23:57,270 --> 00:23:59,856 ಆದರೆ ಹಾಂ, ಅವನ ಹೆಂಡತಿಗೆ ಗೊತ್ತಿರಬಹುದು. 321 00:24:00,356 --> 00:24:01,983 ಆಕೆ ಎಲ್ಲಿ ಸಿಗಬಹುದು ಗೊತ್ತಾ? 322 00:24:02,608 --> 00:24:03,734 ಜೆಫ್ರಿ ಹೋಟೆಲ್‍ಗೆ ಹೋಗಿ ನೋಡು. 323 00:24:04,318 --> 00:24:06,361 ಹಣ ಸಿಕ್ಕಾಗೆಲ್ಲಾ ಅವರು ಅಲ್ಲಿಗೆ ಹೋಗುತ್ತಿದ್ದರು. 324 00:24:06,362 --> 00:24:08,614 ಹಿಂದಿರುಗಿ ಬರುವಷ್ಟರಲ್ಲಿ ಹಣ ಖಾಲಿಯಾಗಿರುತ್ತಿತ್ತು. 325 00:24:09,907 --> 00:24:10,908 ಹುಡುಕಿ ನೋಡು. 326 00:24:11,659 --> 00:24:12,493 ಧನ್ಯವಾದ. 327 00:24:13,619 --> 00:24:14,704 ಆಕೆಯನ್ನು ಭೇಟಿಯಾಗಿ ನೋಡುವೆ. 328 00:24:17,832 --> 00:24:19,124 ಬಿ. ರೈಲಿ ಖಾಸಗಿ ತನಿಖಾಧಿಕಾರಿ 329 00:24:19,125 --> 00:24:22,043 ಹೇಳಿದೆನಲ್ಲಾ? ಅವನು ಇತ್ತೀಚೆಗೆ ಕಚೇರಿಗೆ ಬರೋದೇ ಇಲ್ಲ. 330 00:24:22,044 --> 00:24:23,754 ಅವನು ಕೊನೆ ಬಾರಿ ಯಾವಾಗ ಬಂದಿದ್ದು ಅಂತಲೂ ನೆನಪಿಲ್ಲ. 331 00:24:24,338 --> 00:24:26,549 ಹೂಂ, ಇದರಿಂದ ನೆನಪಾಗಬಹುದು. 332 00:24:27,258 --> 00:24:28,968 ದಯವಿಟ್ಟು ಕೇಳಿ, ನಾನು ನಿಜ ಹೇಳುತ್ತಿದ್ದೇನೆ. 333 00:24:31,512 --> 00:24:33,014 ಅದು ನಿಜವಾದರೆ, ನಿನಗೇನೆ ಒಳ್ಳೆಯದು. 334 00:24:34,182 --> 00:24:35,057 ನಾವು ಮತ್ತೆ ಬರುತ್ತೇವೆ. 335 00:24:50,656 --> 00:24:53,159 ಜಾನೆಟ್! ಅವರು ನಿನಗೆ ಏನಾದರೂ ಮಾಡಿದರಾ? 336 00:24:54,535 --> 00:24:57,538 ಇಲ್ಲ, ಈ ಸಲ ಏನೂ ಮಾಡಲಿಲ್ಲ. ಆದರೆ ಮತ್ತೆ ಬರುತ್ತಾರಂತೆ. 337 00:24:58,998 --> 00:25:00,583 ಬೆನ್, ನನಗೆ ಬಂದೂಕು ತೋರಿದರು. 338 00:25:01,584 --> 00:25:03,627 ನನಗೂ ಡಾನಗಲ್ ಗತಿ ಕಾಣಿಸುತ್ತಾರೆ ಎಂದರು. 339 00:25:03,628 --> 00:25:06,379 ನೀನು ಎಲ್ಲಿದ್ದೀಯ ಅಂತ ಅವರಿಗೆ ಹೇಳದಿದ್ದರೆ, 340 00:25:06,380 --> 00:25:08,716 ಇಬ್ಬರೂ ಒಟ್ಟಿಗೆ ಯಮಲೋಕ ಸೇರುತ್ತೇವೆ ಅಂದರು. 341 00:25:09,884 --> 00:25:10,718 ಏನದರ ಅರ್ಥ? 342 00:25:12,053 --> 00:25:13,304 ಅದರರ್ಥ ಡಾನಗಲ್ ಸತ್ತಿದ್ದಾನೆ ಅಂತ. 343 00:25:14,263 --> 00:25:15,389 ಸಿಲ್ವರ್‌ಮೇನ್ ಅವನನ್ನು ಕೊಂದ. 344 00:25:16,265 --> 00:25:17,641 ಆದರೆ ನಾನಿದನ್ನು ನೋಡಿಕೊಳ್ಳುತ್ತೇನೆ. 345 00:25:17,642 --> 00:25:21,229 ರೂಬಿ ಸತ್ತಾಗಿನಿಂದ, ನೀನು ಸರಿಯಾಗುತ್ತೀಯ ಅಂತ ನಾನು ಕಾಯುತ್ತಲೇ ಇದ್ದೇನೆ. 346 00:25:21,729 --> 00:25:24,941 ನಿನ್ನೊಳಗೆ ಅವಿತಿರುವ ವ್ಯಕ್ತಿಯನ್ನ ಹೊರತರುವೆ ಅಂತ. 347 00:25:25,900 --> 00:25:26,734 ಐದು ವರ್ಷಗಳು ಕಳೆದಿವೆ… 348 00:25:28,945 --> 00:25:29,946 ಇಲ್ಲಿಗೆ ಮುಕ್ತಾಯ ಆಗಲಿದೆ. 349 00:25:31,113 --> 00:25:34,241 ಜಾನೆಟ್, ಮನೆಗೆ ಹೋಗು, ವಿಶ್ರಾಂತಿ ತಗೋ, 350 00:25:34,242 --> 00:25:36,911 ನಿನಗೆ ಆರಾಮೆನಿಸುತ್ತೆ. ಎಲ್ಲವೂ ಸರಿಯಾದಾಗ ನಾನು ನಿನಗೆ ಕರೆ ಮಾಡುವೆ. 351 00:25:38,079 --> 00:25:39,288 ಹೂಂ, ನಾನು ಮನೆಗೆ ಹೋಗುವೆ. 352 00:25:41,332 --> 00:25:42,708 ಆದರೆ ವಾಪಸ್ ಬರಲ್ಲ. 353 00:25:43,542 --> 00:25:45,543 ನನಗೆ ನಿನ್ನ ಬಗ್ಗೆ ಕಾಳಜಿ ಇದೆ, ಬೆನ್. 354 00:25:45,544 --> 00:25:46,504 ತುಂಬಾನೇ. 355 00:25:48,839 --> 00:25:50,383 ಆದರೆ ನಿನಗಾಗಿ ಜೀವ ಕೊಡುವಷ್ಟು ಅಲ್ಲ. 356 00:25:51,467 --> 00:25:52,301 ಜಾನೆಟ್. 357 00:25:54,011 --> 00:25:54,887 ಜಾನೆಟ್! 358 00:26:37,346 --> 00:26:41,350 ನಿರ್ವಹಣೆ 359 00:26:44,979 --> 00:26:48,315 ಹಲೋ! ನಾನು ನಿರ್ವಹಣೆ ವಿಭಾಗದ ಪೀಟ್. ಸೋರಿಕೆ ಬಗ್ಗೆ ಕ್ಷಮೆ ಇರಲಿ. ಏನೂ ತೊಂದರೆ ಇಲ್ಲ. 360 00:26:48,316 --> 00:26:52,319 ನಾನು… ಕೆಳಗಿನ ಘಟಕ ನೋಡಲು ಆಗುತ್ತಿಲ್ಲ. ಪೂರ್ತಿ ಗಲೀಜಾಗಿದೆ. ಎಲ್ಲೆಡೆ ನೀರು ತುಂಬಿದೆ. 361 00:26:52,320 --> 00:26:54,112 - ಏನಾಯಿತು? - ಏನೋ ಸೋರುತ್ತಿದೆ ಅಂತೆ. 362 00:26:54,113 --> 00:26:55,822 ಎಲ್ಲವನ್ನೂ ಚೆನ್ನಾಗಿ ಜೋಡಿಸಿದ್ದೀರ. 363 00:26:55,823 --> 00:26:57,991 ಆದರೆ, ಆ ಮೇಜನ್ನು ಕಿಟಕಿಯ ಬಳಿ ಇಟ್ಟರೆ, 364 00:26:57,992 --> 00:27:00,119 ಊಟಕ್ಕೆ ಒಳ್ಳೆಯ ಬೆಳದಿಂಗಳು ಸಿಗುತ್ತೆ. 365 00:27:00,703 --> 00:27:02,996 - ನಾನೂ ಹೇಳಿದ್ದೆ. - ನೀವು ಮೊದಲು ಇಲ್ಲಿಗೆ ಬಂದಿದ್ದೀರಾ? 366 00:27:02,997 --> 00:27:05,290 ನನಗೆ ಈ ಮನೆಗಳ ಬಗ್ಗೆ ಗೊತ್ತು. 367 00:27:05,291 --> 00:27:06,417 ಶೌಚ ಆ ಕಡೆನಾ? 368 00:27:26,145 --> 00:27:28,314 ಏನು ಸುಮ್ಮನೆ ನಿಂತಿದ್ದೀಯ? ಏನಾದರೂ ಹೇಳು. 369 00:27:29,148 --> 00:27:31,484 ಕೇಳಿ, ನೀವು ಏನು ದುರಸ್ತಿ ಮಾಡುತ್ತಿದ್ದೀರ? 370 00:27:32,568 --> 00:27:36,906 ಹಾಂ! ಸಮಸ್ಯೆ ಏನು ಅಂತ ಗೊತ್ತಾಯಿತು. ಸೋರುತ್ತಿದ್ದ ಪೈಪು ಸಿಕ್ಕಿತು. 371 00:27:37,490 --> 00:27:40,993 ಸ್ವಲ್ಪ ವಕ್ರವಾಗಿ ಹೊಂದಿಸಿದ್ದಾರೆ. 372 00:28:03,516 --> 00:28:05,601 ಕೇಳಿ, ಅಲ್ಲಿ ಏನು ಮಾಡುತ್ತಿದ್ದೀರಾ? 373 00:28:06,811 --> 00:28:09,522 ನನ್ನ ಅಸ್ತಿತ್ವಾನೇ ಅಲ್ಲಾಡಿ ಹೋಗುತಿದೆ ಎಂದು ಅನಿಸುತಿದೆ. 374 00:28:11,190 --> 00:28:12,274 ನನ್ನ ಶೌಚ ನೋಡಿಯಾ? 375 00:28:30,126 --> 00:28:32,002 ಅವನು ಕೊಳಾಯಿಗಾರ ಅಲ್ಲ ಅನಿಸುತ್ತೆ. 376 00:28:44,140 --> 00:28:45,558 ದ ಜೆಫ್ರಿ ಹೋಟೆಲ್ ಬಿಳಿಯರಿಗೆ ಮಾತ್ರ 377 00:28:54,692 --> 00:28:55,651 ಮೆಟ್ಟಿಲು ಎಡಕ್ಕಿವೆ. 378 00:28:57,903 --> 00:28:59,113 ಧನ್ಯವಾದ. 379 00:29:00,781 --> 00:29:01,781 ನಿಮಗೂ ಧನ್ಯವಾದ. 380 00:29:01,782 --> 00:29:02,616 ವಿತರಕರ ಪ್ರವೇಶ 381 00:29:05,035 --> 00:29:05,870 ಮಿಸಸ್ ಆಡಿಸನ್? 382 00:29:09,790 --> 00:29:10,791 ನಾನು ಏನೂ ತರಿಸಿಕೊಳ್ಳಲಿಲ್ಲ. 383 00:29:11,375 --> 00:29:13,461 ನನ್ನ ಹೆಸರು ರಾಬಿ ರಾಬರ್ಟ್ಸನ್. ನಾನೊಬ್ಬ ಪತ್ರಕರ್ತ. 384 00:29:14,545 --> 00:29:18,173 ಒಂದು-- ಒಂದು ನಿಮಿಷ, ಒಂದು ನಿಮಿಷ. ನನಗೆ… ನನಗೆ ನಿಮ್ಮ ಜೊತೆ ಮಾತಾಡಬೇಕಷ್ಟೇ. 385 00:29:18,174 --> 00:29:20,758 ನೀನು ಈಗಲೇ ಇಲ್ಲಿಂದ ಹೋಗದಿದ್ದರೆ ನಾನು ಕಿರುಚಿಕೊಳ್ಳುವೆ. 386 00:29:20,759 --> 00:29:23,428 ಬಿಳಿಯರ ಕೋಣೆಗೆ ಕಪ್ಪು ಜನಾಂಗದವರು ಬಂದ ಬಗ್ಗೆ ಕಿರುಚಿಕೊಂಡರೆ 387 00:29:23,429 --> 00:29:25,097 ಮುಂದೇನಾಗುತ್ತೆ ಗೊತ್ತಲ್ಲಾ? 388 00:29:26,974 --> 00:29:28,392 ಅಸಲಿಗೆ, ನಿಮ್ಮ ಗಂಡನಿಗೆ 389 00:29:29,059 --> 00:29:32,312 ಯಾರೋ ನೀಡಿದ ಹಣವನ್ನು ನೀವಿಲ್ಲಿ ದುಂದಾಗಿ ಖರ್ಚು ಮಾಡುತ್ತಿರೋದು, 390 00:29:32,313 --> 00:29:35,441 ನಗರದ ಅತ್ಯಂತ ಅಪಾಯಕಾರಿ ವ್ಯಕ್ತಿಗೆ ಗೊತ್ತಾಗೋದು 391 00:29:35,941 --> 00:29:40,237 ನಿಮಗೆ ಒಳ್ಳೆಯದಲ್ಲ ಅಂದುಕೊಳ್ಳುವೆ. 392 00:29:40,821 --> 00:29:42,113 ಹಾಗಾಗಿ, ಬೇಕಾದರೆ ಕಿರುಚಿಕೊಳ್ಳಿ. 393 00:29:42,114 --> 00:29:44,741 ಬೇಕಾದರೆ ನಾನೇ ಕಿರುಚುವೆ. ನನ್ನ ಧ್ವನಿ ತುಂಬಾ ಜೋರು ಕೂಡ. 394 00:29:44,742 --> 00:29:45,868 ದೂರದವರೆಗೆ ಹೋಗುತ್ತೆ. 395 00:30:09,391 --> 00:30:10,601 ಅಷ್ಟೇನಾ? 396 00:30:11,101 --> 00:30:12,436 - ಏನರ್ಥ? - ಅಳು, ಶೋಕ ಏನೂ ಇಲ್ವಾ? 397 00:30:13,020 --> 00:30:14,730 ಈಗಷ್ಟೇ ನಿಮ್ಮ ಗಂಡ ಸತ್ತುಹೋದರು ಅಂತ ಹೇಳಿದೆ. 398 00:30:15,439 --> 00:30:17,316 ಜನರು ಬೇರೆ ಬೇರೆ ರೀತಿಯಲ್ಲಿ ಶೋಕ ಆಚರಿಸುತ್ತಾರೆ. 399 00:30:19,568 --> 00:30:20,653 ನಿಮಗೆ ಈಗಾಗಲೇ ಗೊತ್ತಿತ್ತು. 400 00:30:22,863 --> 00:30:26,283 ಜೇಮ್ಸ್ ಒಳ್ಳೆಯ ವ್ಯಕ್ತಿ ಏನಲ್ಲ, ಆದರೆ ಬಿಟ್ಟು ಒಡಿ ಹೋಗುವವನೂ ಅಲ್ಲ. 401 00:30:26,867 --> 00:30:29,703 ಅವನು ಅಂದು ರಾತ್ರಿ ಬರದಾಗಲೇ ಗೊತ್ತಾಯಿತು, ಅವನು ಇನ್ನು ಎಂದೂ ಬರಲ್ಲ ಅಂತ. 402 00:30:30,287 --> 00:30:32,580 - ಅವನು ಯಾವಾಗಿನಿಂದ ಬೆಂಕಿ ಕಾರುತ್ತಿದ್ದ? - ಆರು ತಿಂಗಳಿಂದ. 403 00:30:32,581 --> 00:30:35,291 ಅಚಾನಕ್ಕಾಗಿ ಅವನಿಗೆ ಆ ಶಕ್ತಿ ಇರೋದು ತಿಳಿಯಿತು. 404 00:30:35,292 --> 00:30:36,919 ಸಿಲ್ವರ್‌ಮೇನ್ ಕೆಲಸ ಅವನಿಗೆ ಕೊಟ್ಟಿದ್ದು ಯಾರು? 405 00:30:38,212 --> 00:30:41,298 ನಾನು ಕಿರುಚಲಿಲ್ಲ ಎಂಬ ಮಾತ್ರಕ್ಕೆ ಎಲ್ಲ ಹೇಳುತ್ತೇನೆ ಅಂತ ಅರ್ಥ ಅಲ್ಲ. 406 00:30:42,216 --> 00:30:43,508 ನನಗೆ ತಿಳಿದ ಮಟ್ಟಿಗೆ, 407 00:30:43,509 --> 00:30:46,011 ಜೇಮ್ಸ್ ತಾನು ತೋಡಿದ ಸಮಾಧಿಗೆ ತಾನೇ ಸೇರಿಕೊಂಡ, ಅಷ್ಟೇ. 408 00:31:03,070 --> 00:31:04,655 ಭೂತಬಂಗಲೆಯಂತಿದೆ. 409 00:31:05,406 --> 00:31:06,490 ಭೂತಬಂಗಲೆಯೇ ಇದು. 410 00:31:09,285 --> 00:31:10,494 ಭೂತ ಅಂದಾಗ ನೆನಪಾಯಿತು… 411 00:31:12,746 --> 00:31:13,956 ಜಿಮ್ಮಿ ಆಡಿಸನ್ ಸತ್ತಿದ್ದಾನೆ. 412 00:31:14,832 --> 00:31:15,666 ಏನು? 413 00:31:16,875 --> 00:31:17,959 ಯಾವಾಗ? 414 00:31:17,960 --> 00:31:20,879 ಒಂದೆರಡು ದಿನಗಳ ಹಿಂದೆ. ಅವನ ಬಗ್ಗೆ ಕೇಳುತ್ತಾ ಯಾವುದೋ ಪತ್ರಕರ್ತ ಬಂದಿದ್ದ. 415 00:31:21,380 --> 00:31:23,340 ಸಿಲ್ವರ್‌ಮೇನ್‌ನ ಕೊಲೆಗೆ ಯಾರವನಿಗೆ ಹಣ ನೀಡಿದ್ದಂತ ಕೇಳಿದ. 416 00:31:27,303 --> 00:31:30,180 - ನಿನಗೆ ಗೊತ್ತಿರಲಿಲ್ಲ. - ಗೊತ್ತಿದ್ದಿದ್ದರೆ ನಾನವನನ್ನು ತಡೆಯುತ್ತಿದ್ದೆ. 417 00:31:39,189 --> 00:31:42,109 ಫ್ಲಿಂಟ್… ನಿನಗೆ ಹುಷಾರಿರುವಂತಿಲ್ಲ. 418 00:31:43,569 --> 00:31:44,570 ಮತ್ತೆ ಹಾಗೇ ಆಯಿತು. 419 00:31:45,821 --> 00:31:47,281 ಈ ಬಾರಿ ಪೂರ್ತಿ ಬದಲಾದೆ. 420 00:31:47,906 --> 00:31:48,949 ವಾಪಸ್ ಬದಲಾಗಲೇ ಇಲ್ಲ. 421 00:31:49,742 --> 00:31:50,618 ಪೂರ್ತಿಯಾಗಿ ಅಂತೂ ಅಲ್ಲ. 422 00:31:52,828 --> 00:31:54,121 ಆ ವೈದ್ಯರು ಹೇಳಿದಂತೆಯೇ. 423 00:31:55,289 --> 00:31:56,457 ನಮ್ಮ ಸಮಯ ಮೀರುತ್ತಿದೆ. 424 00:31:58,709 --> 00:31:59,960 ಅದೂ ವೇಗವಾಗಿ. 425 00:32:01,128 --> 00:32:02,504 ನಾವು ಅನುಭವಿಸಿದ ಎಲ್ಲದರ ನಂತರ… 426 00:32:05,341 --> 00:32:07,176 ನಮಗೆಲ್ಲರಿಗೂ ಈಗಲಾದರೂ ಒಳ್ಳೆಯದಾಗಬೇಕು. 427 00:32:08,594 --> 00:32:11,263 ಇಲ್ಲಿಂದ ಹೋಗೋಣ. ನೀನು ನನ್ನ ಮನೆಯಲ್ಲಿ ಇರಬಹುದು. 428 00:32:12,181 --> 00:32:13,932 ನಾವು ಈಗ ಒಟ್ಟಿಗೆ ಇದ್ದರೇನೇ ಒಳ್ಳೆಯದು. 429 00:32:16,310 --> 00:32:17,144 ಹೂಂ. 430 00:32:18,479 --> 00:32:21,939 ಎಲ್ಲ ಪೆಟ್ಟಿಗೆಯನ್ನು ಪರಿಶೀಲಿಸಬೇಕಾ? ಯಾಕೆ ನಾವು ಕೆನಡಾದವರು ಅಂತಲಾ? 431 00:32:21,940 --> 00:32:23,608 ಹೂಂ, ನೀವು ಕೆನಡಾದವರು ಅಂತಲೇ. 432 00:32:23,609 --> 00:32:25,818 ಅಲ್ಲ! ನಮ್ಮ ಬಾಸ್‌ಗೆ ಯಾರ ಮೇಲೂ ನಂಬಿಕೆ ಇಲ್ಲ. 433 00:32:25,819 --> 00:32:26,862 ನನ್ನ ಮೇಲೂ ಸಹ. 434 00:32:27,488 --> 00:32:29,239 ಅದಕ್ಕೇ ಅವರು ಇನ್ನೂ ಈ ನಗರವನ್ನು ಆಳುತ್ತಿರೋದು. 435 00:32:29,990 --> 00:32:33,242 ಎಲ್ಲ ಸರಿಯಾಗಿದೆ, ಬಾಸ್. ನೀವು ಈಗ ಬರಬಹುದು. 436 00:32:33,243 --> 00:32:34,828 ಸರಿ. ಬರುತ್ತಿದ್ದೇನೆ. 437 00:33:08,654 --> 00:33:09,530 ಏನದು? 438 00:33:16,286 --> 00:33:17,496 ಹೇ, ಹೋಗಿ ನೋಡು! 439 00:33:17,996 --> 00:33:19,289 ಹೋಗು! ಹೋಗು, ಹೋಗು, ಹೋಗು! 440 00:33:21,208 --> 00:33:22,418 ಅವನು ಗಾಡಿಯ ಮೇಲಿದ್ದಾನೆ. 441 00:33:27,965 --> 00:33:28,882 ಗುಂಡು ಹಾರಿಸಿ! 442 00:33:40,269 --> 00:33:41,228 ಹಲೋ. 443 00:34:00,873 --> 00:34:02,124 ಎಲ್ಲಿ ಹೋದ? 444 00:34:09,923 --> 00:34:11,133 ಆ ಕಡೆ. 445 00:34:13,302 --> 00:34:14,553 ಇಲ್ಲಿ ಬಾ. 446 00:34:16,221 --> 00:34:17,055 ಧನ್ಯವಾದ. 447 00:34:21,143 --> 00:34:22,519 ನಿಮ್ಮ ಗುಂಡುಗಳು ಖಾಲಿಯೇ ಆಗಲ್ವಾ? 448 00:34:23,228 --> 00:34:24,271 ಓಹ್, ಆಗುತ್ತೆ! 449 00:34:34,239 --> 00:34:36,825 ಏನು ಮುಖ ನೋಡುತ್ತಿದ್ದೀರಿ? 450 00:34:38,702 --> 00:34:41,454 - ನೀನು ಮೊದಲು. - ಇಲ್ಲ, ಇಲ್ಲ, ನೀನು ಮೊದಲು. 451 00:34:41,455 --> 00:34:42,664 ಇಳಿಯಿರಿ ಕೆಳಗೆ! 452 00:34:52,925 --> 00:34:54,009 ಒಂದು ಹೆಜ್ಜೆಯೂ ಮುಂದಿಡಬೇಡ. 453 00:34:57,846 --> 00:34:59,598 ನೋಡಿದಿರಾ? ಟಾಯಿ ಚಿ. 454 00:35:12,611 --> 00:35:13,737 ತುಂಬಾ ಸಮಯ ಆಯಿತು. 455 00:35:14,321 --> 00:35:16,990 ನಾನಿಲ್ಲದೆ ಚೆನ್ನಾಗಿ ಬೆಳೆದಿದ್ದೀಯ, ಅಲ್ವಾ? 456 00:35:17,574 --> 00:35:21,078 ನೀನೂ ಸುಪಾರಿ ಕೊಲೆಗಳನ್ನು ಮಾಡುತ್ತೀಯ ಅಂತ ಗೊತ್ತಿರಲಿಲ್ಲ. ಯಾರು ಈ ಕೆಲಸ ವಹಿಸಿದವರು? 457 00:35:21,578 --> 00:35:24,456 ನಾನು ಯಾರಿಗೂ ಕೆಲಸ ಮಾಡಲ್ಲ. ಬೆನ್ ರೈಲಿಯ ಸಲುವಾಗಿ ಬಂದಿದ್ದೇನೆ. 458 00:35:25,415 --> 00:35:26,541 ಆ ತನಿಖಾಧಿಕಾರಿಯೇ? 459 00:35:26,542 --> 00:35:28,752 ಹೂಂ, ಹೌದು. ಅವನದೊಂದು ಋಣ ತೀರಿಸುವುದಿದೆ. 460 00:35:29,336 --> 00:35:31,420 ಕ್ಷಮಿಸು. ನಾನೊಬ್ಬ. ನಿನಗೆ ಕುಡಿಯಲು ಏನಾದರೂ ಬೇಕಾ? 461 00:35:31,421 --> 00:35:34,507 ಇಲ್ಲ! ಆದರೆ ನೀನು ಮತ್ತು ನಿನ್ನ ಗೂಂಡಾಗಳು ರೈಲಿಯಿಂದ ದೂರ ಇರಿ. 462 00:35:34,508 --> 00:35:36,425 ನಿನ್ನನ್ನ ಯಾರು ಕೊಲ್ಲಬೇಕೆಂದಿರೋದು ಅವನಿಗೆ ಗೊತ್ತಿಲ್ಲ. 463 00:35:36,426 --> 00:35:39,929 ಅವನ ಕಾರ್ಯದರ್ಶಿಗೆ ಬೆದರಿಸಿ ನಿನಗೆ ಏನೂ ಸಿಗಲ್ಲ. 464 00:35:39,930 --> 00:35:43,058 ಅಂದರೆ, ಅವನನ್ನು ಅವನ ಪಾಡಿಗೆ ಬಿಟ್ಟರೆ ಸಾಕಾ? 465 00:35:43,642 --> 00:35:47,144 ಯಾಕೆಂದರೆ ಮುಂಚೆ ನೀನು ನನ್ನನ್ನು ನನ್ನ ಪಾಡಿಗೆ ಬಿಡುತ್ತಿರಲಿಲ್ಲ. 466 00:35:47,145 --> 00:35:50,439 ನಿನಗೆ ನಾನು ಹೇಳಿದ್ದು ಅರ್ಥ ಆಗುತ್ತಿಲ್ಲ ಅನಿಸುತ್ತೆ, ಸಿಲ್ವರ್‌ಮೇನ್. 467 00:35:50,440 --> 00:35:52,692 ಇದೊಮ್ಮೆ ಅಷ್ಟೇ ನಾನು ಎಚ್ಚರಿಕೆ ಕೊಡೋದು. 468 00:35:52,693 --> 00:35:58,198 ನೀನು ರೈಲಿ ಅಥವಾ ಅವನ ಜನರ ತಂಟೆಗೆ ಹೋದರೆ, ನಿನ್ನನ್ನು ಕೊಂದು ಹಾಕುವೆ. 469 00:36:49,833 --> 00:36:52,627 - ರೈಲಿ. - ಅದು ನೀನಾ? ನೀನಾ ಮಾಡಿದ್ದು? 470 00:36:52,628 --> 00:36:54,086 ಏನು ಮಾತಾಡುತ್ತಿದ್ದೀಯ? 471 00:36:54,087 --> 00:36:55,797 ನೀನು ಸಿಲ್ವರ್‌ಮೇನ್‌ನ ಕಾರು ತಡೆದೆಯಾ? 472 00:36:56,465 --> 00:36:57,882 ಅದರ ಬಗ್ಗೆ ನಿನಗೆ ಸುದ್ದಿ ಬಂತಾ? 473 00:36:57,883 --> 00:36:59,800 ಹೂಂ, ಒಂದು ಕೆಟ್ಟ ಸುದ್ದಿ ಇದೆ. 474 00:36:59,801 --> 00:37:02,011 ಸಿಲ್ವರ್‌ಮೇನ್‌ನನ್ನು ಹಿಡಿಯಲು ಪೊಲೀಸರು ಬಲೆ ಹಾಕಿದ್ದರು. 475 00:37:02,012 --> 00:37:04,472 ಯಾವುದೋ ಮದ್ಯದ ವಹಿವಾಟಿನ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತ್ತು. 476 00:37:04,473 --> 00:37:07,391 ಯಾರೋ ಸಿಲ್ವರ್‌ಮೇನ್‌ನ ಮದ್ಯದ ವಿನಿಮಯದ ಬಗ್ಗೆ ಮಾಹಿತಿ ಕೊಟ್ಟಿದ್ದರಾ? 477 00:37:07,392 --> 00:37:09,810 ಹೌದು, ಅವನ ಹತ್ತಾರು ಹುಡುಗರನ್ನು ಹಿಡಿದು ಹಾಕಿದ್ದಾರೆ. 478 00:37:09,811 --> 00:37:13,272 ವಿನಿಮಯದ ಮಧ್ಯದಲ್ಲಿ ಅವನನ್ನು ಹಿಡಿಯುವವರಿದ್ದರು, ಆದರೆ ಅವನು ಬರಲೇ ಇಲ್ಲ. 479 00:37:13,273 --> 00:37:15,983 ಅವನು ಯಾಕೆ ಬರಲಿಲ್ಲ ಅಂತ ಅವರಿಗೆ ಗೊತ್ತಾ? 480 00:37:15,984 --> 00:37:16,943 ಇಲ್ಲ, ಚಿಂತಿಸಬೇಡ. 481 00:37:16,944 --> 00:37:21,114 ಯಾರೋ ಅವನನ್ನು ತಡೆದರು ಅಂತ ಪೊಲೀಸರಿಗೆ ಗೊತ್ತು, ಆದರೆ ಅದು ನೀನು ಅಂತ ಗೊತ್ತಿಲ್ಲ. 482 00:37:21,698 --> 00:37:24,158 ನಾನು ಹೊರಡಬೇಕು. ಫೋನ್ ಬೂತಲ್ಲಿ ಸಾಯೋಕೆ ಇಷ್ಟ ಇಲ್ಲ ನನಗೆ. 483 00:37:24,159 --> 00:37:25,160 ಹೋಗೋಣ! 484 00:37:51,019 --> 00:37:52,896 ನಾನು ಏನು ಮಾಡಿಬಿಟ್ಟೆ? 485 00:40:05,570 --> 00:40:07,655 ಉಪ ಶೀರ್ಷಿಕೆ ಅನುವಾದ: ಅನುರಾಧ 486 00:40:07,656 --> 00:40:09,658 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ