1 00:00:10,678 --> 00:00:12,555 ನಾನು ಸುಳ್ಳು ಹೇಳುತ್ತಲೇ ಇರಲು ಆಗಲ್ಲ. 2 00:00:12,638 --> 00:00:14,390 ಹೌದು, ನಿನ್ನಿಂದ ಆಗುತ್ತೆ. 3 00:00:14,473 --> 00:00:16,892 ವೈಸ್ ನನ್ನನ್ನು ಹಿಂಬಾಲಿಸದೆ ಸುಮ್ಮನೆ ಬಿಡುವಂತೆ ನೀನು ಹೇಳಬೇಕು. 4 00:00:16,976 --> 00:00:18,185 ಏನಿದು! 5 00:00:18,269 --> 00:00:21,522 ನೀನು ಮತ್ತೆ ಅವಳ ಹತ್ತಿರ ಸುಳಿದರೆ, ನಿನ್ನ ಕಥೆ ಮುಗಿಸಿಬಿಡುತ್ತೇನೆ! 6 00:00:22,523 --> 00:00:24,442 ಇತ್ತೀಚೆಗೆ ನನಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ. 7 00:00:24,525 --> 00:00:26,026 ನೀನು ಏನು ಆಲೋಚಿಸುತ್ತಿದ್ದೆ? 8 00:00:26,110 --> 00:00:27,778 ನಾನು ಅದನ್ನು ಪತ್ರದಲ್ಲಿ ಬರೆಯಲು ನೋಡಿದೆ. 9 00:00:27,862 --> 00:00:29,113 ಆತ ಇದನ್ನು ತೆರೆದು ನೋಡುವನೇ? 10 00:00:29,196 --> 00:00:30,531 ಶೇನ್‌ಗೆ ನಾನು ಗೊತ್ತು. 11 00:00:30,614 --> 00:00:33,659 ನಾನು ಅದನ್ನು ಜೋರಾಗಿ ಓದುತ್ತೇನೆ. ಮತ್ತು ಮುಂದಿನ ತೀರ್ಮಾನ ಅವನ ಕೈಯಲ್ಲಿದೆ. 12 00:00:33,743 --> 00:00:37,204 ಆಲಿವರ್ ಸೇಂಟ್ ಲೆಡ್ಜರ್ ನನ್ನ ತಂಗಿಯೊಂದಿಗೆ ವಾಸಿಸುತ್ತಿದ್ದಾನೆ. 13 00:00:37,288 --> 00:00:38,122 ಮೇಗನ್? 14 00:00:38,205 --> 00:00:41,375 ಅವನಿಗೆ ಕರೆ ಮಾಡು. ನೀನು ಸರಿಪಡಿಸಲೇಬೇಕಾದ ಕೆಲವು ಮೂರ್ಖತನದ ತಪ್ಪುಗಳನ್ನು ಆಕೆ ಮಾಡಿದ್ದಾಳೆ. 15 00:00:41,459 --> 00:00:42,543 ಆಲಿವರ್? ಅವಳು ಮೇಗನ್ ಮಾರ್ಟಿನ್. 16 00:00:42,626 --> 00:00:43,586 ಟ್ರಾಸ್ಲ್ರ್ ಸೈಕೋಥೆರಪಿ 17 00:00:43,669 --> 00:00:45,463 ಅವಳು ಮತ್ತು ಅವಳ ಇಡೀ ಕುಟುಂಬವೇ ಹುಚ್ಚರು. 18 00:00:45,713 --> 00:00:46,881 ನನ್ನನ್ನು ಕ್ಷಮಿಸು. 19 00:00:46,964 --> 00:00:50,217 ನಿನ್ನ ಅಣ್ಣ ಯಾವುದೇ ತಪ್ಪು ಮಾಡಿರಲಿಲ್ಲ. ಮಾಡಿದವನು ನಾನು. 20 00:00:50,718 --> 00:00:52,428 ನೀನದನ್ನು ನನಗೆ ಹೇಳುವುದು ನನಗೆ ಬಹಳ ಅಗತ್ಯವಿತ್ತು. 21 00:00:52,511 --> 00:00:54,346 ಮತ್ತು ನಿನ್ನನ್ನು ಅಷ್ಟೊಂದು ಪ್ರೀತಿಸುವೆ. 22 00:00:54,430 --> 00:00:55,639 ನಿನ್ನನ್ನು ಅಷ್ಟೊಂದು ಪ್ರೀತಿಸುವೆ. 23 00:00:56,307 --> 00:01:00,227 ನಮಗೆ ಅನಿಸುತ್ತಾ, ಮೇಗನ್ ಮಾರ್ಟಿನ್ ಅಲಿಯಾಸ್ ಸಿಯಾರ ವೈಸ್ ಜಗತ್ತಿನಲ್ಲಿ ಎಲ್ಲೋ 24 00:01:00,311 --> 00:01:02,813 ಆಲಿವರ್ ಕೆನಡಿಯ ಜೊತೆಗೆ ಅಥವಾ ಒಬ್ಬಳೇ ಇದ್ದಾಳೆಂದು? 25 00:01:14,909 --> 00:01:19,497 137 ದಿನಗಳ ಹಿಂದೆ 26 00:01:26,170 --> 00:01:28,714 ಜಪ್ತಿಗೂ ಮುನ್ನ ಸಂಧಾನದ ಬಗ್ಗೆ ಆ ವ್ಯಕ್ತಿಯ ಬಳಿ ನೀನು ಕೇಳಿದೆಯಾ ಅಥವಾ… 27 00:01:28,798 --> 00:01:30,090 ಆಸ್ತಿ ಜಪ್ತಿ ಮಾಡುವ ಉದ್ದೇಶದ ಸೂಚನೆ 28 00:01:30,174 --> 00:01:31,592 ಅದರ ಅರ್ಥವೇನೆಂದೂ ನನಗೆ ತಿಳಿದಿಲ್ಲ. 29 00:01:31,675 --> 00:01:35,095 ಬ್ಯಾಂಕ್ ನಮಗೆ ಏನಾದರೂ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಬೇಕಿತ್ತು, 30 00:01:35,179 --> 00:01:37,056 ಅವರು ಮನೆಯನ್ನು ಹರಾಜಿಗೆ ಇಡುವ ಮೊದಲು. 31 00:01:37,139 --> 00:01:38,808 ಬ್ಯಾಂಕಿನವರು ಅಂಥ ವಿಷಯದಲ್ಲಿ ಬಹಳ ಉದಾರವಂತರಲ್ಲವೇ! 32 00:01:38,890 --> 00:01:41,602 ಇದು ಉದಾರತೆಯ ವಿಷಯವಲ್ಲ, ಅಮ್ಮ, ಇದು ಕಾನೂನು. ಹಾಗಾಗಿ… 33 00:01:41,685 --> 00:01:43,187 ನಾಟಿಂಗ್ ಹಿಲ್‌ನ ವುಲ್ಫ್ ಗ್ರೇ ಬಳಿ ಆಲಿವರ್ 34 00:01:43,270 --> 00:01:45,439 ಜನರನ್ನು ಬೀದಿಪಾಲು ಮಾಡುವುದರಲ್ಲೇ ಅವರಿಗೆ ಖುಷಿ. 35 00:01:45,523 --> 00:01:46,357 ಅದು ನಿಜವಲ್ಲ. 36 00:01:46,440 --> 00:01:48,067 ಅವರ ಪರವಾಗಿ ವಾದ ಮಾಡುವುದನ್ನು ನಿಲ್ಲಿಸುವೆಯಾ? 37 00:01:48,150 --> 00:01:50,902 ಆತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿಲ್ಲ ಎಂಬ ವದಂತಿ ವದಂತಿಯಲ್ಲ. ಬಾಸ್ಟನ್‌ನಲ್ಲಿದ್ದಾನೆ. 38 00:01:50,985 --> 00:01:52,947 ಮನೆ ಅವರ ಪಾಲಾಗುತ್ತಿದೆ. ನಾವೆಲ್ಲಿಗೆ ಹೋಗುವುದು? 39 00:02:22,393 --> 00:02:23,853 ಅತ್ಯಮೂಲ್ಯ ಆಟಗಾರ ಶೇನ್ ಮಾರ್ಟಿನ್ 40 00:02:26,814 --> 00:02:29,191 ಆಲಿವರ್ ಸೇಂಟ್ ಲೆಡ್ಜರ್ 41 00:02:29,275 --> 00:02:32,069 "ಟಿಕೆಟ್ ಕೊಳ್ಳಿ, ಪ್ರಯಾಣ ಕೈಗೊಳ್ಳಿ…" ಹಂಟರ್ ಎಸ್. ಥಾಂಪ್ಸನ್ 42 00:04:10,834 --> 00:04:16,839 56 ಡೇಸ್ 43 00:04:18,007 --> 00:04:22,137 ಟುಡೇ 44 00:04:23,472 --> 00:04:24,807 ಲೈನಸ್ ಇದನ್ನು ಮಾಡಿದ್ದು. 45 00:04:26,684 --> 00:04:28,018 ಅವನೇ ಎಂದು ನನಗೆ ಗೊತ್ತು. 46 00:04:29,311 --> 00:04:30,396 ನೀನು ಅವನ ಮುಖ ನೋಡಿದೆಯಾ? 47 00:04:30,479 --> 00:04:32,856 ಇಲ್ಲ. ಆದರೆ ಅದು ಅವನ ಕಾರು. 48 00:04:32,940 --> 00:04:36,568 ಕಳೆದ ವರ್ಷ ಜಾತ್ರೆ ಮೈದಾನದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿದ್ದ ಕಾರು ಅದೇ. 49 00:04:36,652 --> 00:04:38,237 ನಾನು ಅವನನ್ನು ಕಂಡಿದ್ದು ಆಗಲೇ. 50 00:04:38,320 --> 00:04:43,450 ಅವನು ಅದನ್ನು ಮಾಡಿಲ್ಲ ಎಂದು ಹೇಳಿದ್ದ, ಆದರೆ ಮಾಡಿದದ್ದು ಅವನೇ… ಎಂದು ಅವನ ನಡೆ ಹೇಳುತ್ತಿತ್ತು. 51 00:04:45,327 --> 00:04:48,414 ಈ ಬಾರಿ, ಗುಂಡು ಹೊಡೆದವನು ಕೆಲಸಕ್ಕೆ ಆಯ್ದುಕೊಂಡ ಆಯುಧ ಸರಿಯಾಗಿರಲಿಲ್ಲ. 52 00:04:51,125 --> 00:04:55,462 ಆತ 'ದಿ ಕ್ರಾಸಿಂಗ್ಸ್'ನಲ್ಲಿ ಮಕ್ಕಳಿಗೆ ಡ್ರಗ್ಸ್ ಮಾರುತ್ತಿದ್ದಾನೆಂದು ಈಗ ನನಗೆ ಹೇಳುತ್ತಿದ್ದೀಯಾ? 53 00:04:55,546 --> 00:04:58,632 ಹಾಂ. ಹೌದು, ಅವನು ಮಾರುತ್ತಾನೆ. ಆದರೆ ವಿಷಯ ಅದಲ್ಲ. 54 00:04:58,716 --> 00:05:00,592 ಇದ್ಯಾವುದೂ ಆ ಕೇಸ್‌ಗೆ ಸಂಬಂಧಿಸಿದ್ದಲ್ಲ, ಕಾರ್ಲ್. 55 00:05:02,469 --> 00:05:06,598 ಅವನು ನನ್ನನ್ನು ಸಾಯಿಸಲಿದ್ದಾನೆ. ನಾನು ಎಂತಹ ದಡ್ಡಿ! 56 00:05:06,682 --> 00:05:09,810 ಇಲ್ಲ. ಇಲ್ಲ, ಹಾಗೆ ಹೇಳಬೇಡ. ನೀನು ದಡ್ಡಿಯಲ್ಲ. 57 00:05:10,978 --> 00:05:12,146 ಶವಪರೀಕ್ಷಕರ ಕರೆ ಬಂತು. 58 00:05:13,689 --> 00:05:14,857 ರೇರ್ಡಾನ್. 59 00:05:15,816 --> 00:05:17,109 ಹಾಂ, ನಾವು ಅಲ್ಲಿಗೆ ಬರುತ್ತೇವೆ. 60 00:05:19,153 --> 00:05:21,905 ಪ್ರಾಥಮಿಕ ಮರಣೋತ್ತರ ಪರೀಕ್ಷೆ ನಾಳೆ ಬೆಳಿಗ್ಗೆ 8:00 ಗಂಟೆಗೆ ಸಿದ್ಧವಾಗುತ್ತದೆ. 61 00:05:24,783 --> 00:05:27,995 ಮಿಚ್, ಬಂದು ರೇರ್ಡಾನ್‌ಳನ್ನು ಕರೆದೊಯ್ಯಿ. 62 00:05:29,204 --> 00:05:31,081 ನೀನು ಅಲ್ಲಿಗೆ ತಲುಪಿದ ಮೇಲೆ ಮನೆ ಪೂರ್ತಿ ತಪಾಸಣೆ ಮಾಡು. 63 00:05:31,165 --> 00:05:35,127 ಆಮೇಲೆ ನೀನು ಫ್ರೆಡ್ಡಿಗೆ ಕರೆ ಮಾಡು, ರಾತ್ರಿಯಿಡೀ ಮನೆ ಮೇಲೆ ನಿಗಾ ಇಡಲು ಅವನಿಗೆ ಹೇಳು. 64 00:05:35,210 --> 00:05:39,381 -ಇಲ್ಲ, ನನಗೆ ಅದರ ಅಗತ್ಯವಿಲ್ಲ. -ಇಲ್ಲ, ಕೇಳು… ನಿನಗೆ ಅದರ ಅಗತ್ಯವಿದೆ. 65 00:05:40,966 --> 00:05:41,884 ಬನ್ನಿ. 66 00:05:42,885 --> 00:05:43,927 ಧನ್ಯವಾದಗಳು. 67 00:05:56,523 --> 00:06:02,529 ಡೇ 34 68 00:06:26,303 --> 00:06:27,930 ಹಾಗಾದರೆ ಈಗ ನಿನ್ನನ್ನು ಮೇಗನ್ ಎಂದು ಕರೆಯಬೇಕೇ? 69 00:06:29,264 --> 00:06:30,224 ಹಾಗೆ ಕರೆಯಲು ಇಷ್ಟವೇ? 70 00:06:31,558 --> 00:06:32,392 ಅಷ್ಟೇನಿಲ್ಲ. 71 00:06:32,476 --> 00:06:34,645 ಇಲ್ಲವೇ? ಸರಿ. 72 00:06:35,145 --> 00:06:36,230 ಅದು ಬಹುಶಃ ಒಳ್ಳೆಯದೇ. 73 00:06:36,313 --> 00:06:38,941 ವಿಚಿತ್ರ ಅಂದ್ರೆ, ಈಗ ನಾನೇ 'ಸಿಯಾರ'ಗೆ ಒಗ್ಗಿಕೊಂಡಂತೆ ಅನಿಸುತ್ತೆ. 74 00:06:39,566 --> 00:06:41,443 ಗೊತ್ತಾ, ನೀನು ನನಗೆ ನೆನಪಿದ್ದೀಯ. 75 00:06:41,527 --> 00:06:42,778 ಸ್ವಲ್ಪ ಮಸುಕಾಗಿ. 76 00:06:42,861 --> 00:06:44,404 ಹಾಂ, ನಾನೆಂದಿಗೂ ನಿಮ್ಮ ಮನೆಗೆ ಬಂದಿರಲಿಲ್ಲ, 77 00:06:44,488 --> 00:06:47,658 ಆದರೆ ಒಮ್ಮೆ ನಿನ್ನನ್ನು ನೋಡಿದ್ದು ನೆನಪಿದೆ… ಕಾರಿನಿಂದ. 78 00:06:47,741 --> 00:06:51,453 ನೀನು ಜಲ್ಲಿಕಲ್ಲುಗಳ ದಾರಿಯಲ್ಲಿ ಸ್ಕೂಟರ್ ಓಡಿಸಲು ಪ್ರಯತ್ನಿಸುತ್ತಿದ್ದೆ. 79 00:06:51,995 --> 00:06:54,832 ನಿಮ್ಮ ಪೋಷಕರು ಮನೆಯ ಮುಂಭಾಗದಲ್ಲಿ ಒಂದು ದೊಡ್ಡ ಹೊಂಡ ತೋಡಿ, 80 00:06:54,915 --> 00:06:56,667 ಅದರಲ್ಲಿ ಈಜುಕೊಳ ಕಟ್ಟಲು ಪ್ರಯತ್ನಿಸಿದ್ದರೇ? 81 00:06:56,750 --> 00:06:58,836 ಹೌದು, ನಿನಗದು ನೆನಪಿದೆ ಎಂಬುದನ್ನು ನಂಬಲಾಗುತ್ತಿಲ್ಲ. 82 00:06:58,919 --> 00:07:01,588 ನಿಮ್ಮಕ್ಕ ನಮಗೆ ಗಾಂಜಾ ಮಾರುತ್ತಿದ್ದಳು. ಶೈಲ. 83 00:07:02,047 --> 00:07:04,007 ಆಕೆ ಬಹುಶಃ ಅದನ್ನು ನನ್ನ ತಂದೆಯಿಂದ ಕದ್ದಿರಬೇಕು. 84 00:07:05,551 --> 00:07:08,053 ಅವಳು ಈಗಲೂ ಮನೆಯಲ್ಲೇ ಇದ್ದಾಳೆ, ಆದರೆ ನಮ್ಮಪ್ಪ ಹೋಗಿ ಬಹಳ ದಿನಗಳಾದವು. 85 00:07:09,388 --> 00:07:10,514 ಎಂದಾದರೂ ಆತನ ಜೊತೆ ಮಾತಾಡುವೆಯಾ? 86 00:07:11,598 --> 00:07:16,728 ಗೊತ್ತಲ್ಲ, ಕ್ರಿಸ್‌ಮಸ್, ಹುಟ್ಟುಹಬ್ಬ, ಅದು ಇದು ಅಂತ. ಆತನಿಗೆ ನೆನಪಿದ್ದರೆ ಮಾತ್ರ. 87 00:07:19,314 --> 00:07:20,983 ನಿಮ್ಮಪ್ಪನ ಸಾವಿನ ಬಗ್ಗೆ ನನಗೆ ಬಹಳ ವಿಷಾದವಿದೆ. 88 00:07:21,775 --> 00:07:24,653 ನಾನು ಅವರನ್ನು ಕಳೆದುಕೊಂಡಿಲ್ಲ, ಹಾಗೆ ನೋಡಿದರೆ, ಅವರು ಎಂದಿಗೂ ನನ್ನ ಜೊತೆಗಿರಲಿಲ್ಲ. 89 00:07:27,531 --> 00:07:28,365 ಆಲಿವರ್! 90 00:07:29,950 --> 00:07:31,076 ಆಲಿವರ್, ಇದು ನಾನು! 91 00:07:34,079 --> 00:07:34,997 ಆಲಿವರ್! 92 00:07:36,832 --> 00:07:37,666 ಆಲಿವರ್! 93 00:07:39,835 --> 00:07:40,961 ಆಲಿವರ್! 94 00:07:43,797 --> 00:07:47,509 ಸದ್ಯ, ದೇವರೇ! ನನಗೆ ತುಂಬಾ ಚಿಂತೆಯಾಗಿತ್ತು. ನಿನ್ನ ಫೋನ್ ಸ್ವಿಚ್ ಆಫ್ ಆಗಿದೆ. 95 00:07:47,593 --> 00:07:48,760 ಹೌದು, ನಾನೇ ಆಫ್ ಮಾಡಿದೆ. 96 00:07:49,553 --> 00:07:50,470 ನೀನು ಆಫ್ ಮಾಡಿದೆಯಾ? 97 00:07:52,639 --> 00:07:54,474 ಅಸಲಿಗೆ ಇಲ್ಲೇನು ನಡೆಯುತ್ತಿದೆ? 98 00:07:55,100 --> 00:07:56,435 ಇವಳೇಕೆ ಇಲ್ಲಿದ್ದಾಳೆ, ಆಲಿವರ್? 99 00:07:58,187 --> 00:08:00,272 ಆಕೆ ನನ್ನ ಪ್ರೇಯಸಿ, ಡಾನ್. ಆಕೆ ಇಲ್ಲೇ ವಾಸಿಸುವುದು. 100 00:08:03,400 --> 00:08:04,234 ಸರಿ. 101 00:08:05,944 --> 00:08:07,446 ನನ್ನನ್ನು ಒಳಗೆ ಕರೆಯುವುದಿಲ್ಲವೇ? 102 00:08:15,787 --> 00:08:16,788 ಹೇ… 103 00:08:18,165 --> 00:08:19,124 ಜಾಗ ಚೆನ್ನಾಗಿದೆ. 104 00:08:19,666 --> 00:08:22,294 ಆಲಿವರ್ ಸೇಂಟ್ ಲೆಡ್ಜರ್‌ಗೆ ಎಲ್ಲವೂ ಅತ್ಯುತ್ತಮವಾದದ್ದೇ ಬೇಕು. 105 00:08:25,088 --> 00:08:26,381 ನೀನೇ ಮೇಗನ್ ಇರಬೇಕು. 106 00:08:27,382 --> 00:08:31,178 ಮೇಗನ್ ಮಾರ್ಟಿನ್, ನಾನು ಡಾನ್ ಟ್ರಾಕ್ಸ್ಲರ್. ನಾವು ಫೋನ್ನಲ್ಲಿ ಮಾತಾಡಿದ್ದೇವೆ ಅನಿಸುತ್ತೆ. 107 00:08:31,261 --> 00:08:34,431 ಇಲ್ಲ, ನೀವು ಯಾರೆಂದು ನನಗೆ ಗೊತ್ತು. ನಮ್ಮಕ್ಕ ನಿಮ್ಮ ಬಗ್ಗೆ ಹೇಳಿದ್ದಾಳೆ. 108 00:08:34,514 --> 00:08:35,765 ಓಹ್, ಅರ್ಥವಾಯಿತು. 109 00:08:36,767 --> 00:08:38,184 ಒಂದು ವೇಳೆ ನೀನು ಅವಳಂತೆಯೇ ಆಗಿದ್ದರೆ, 110 00:08:38,268 --> 00:08:40,895 ಆಲಿವರ್ ಗಂಭೀರ ಸಮಸ್ಯೆಗೆ ಸಿಲುಕಿಕೊಂಡಿದ್ದಾನೆ ಎಂದೇ ಅರ್ಥ. 111 00:08:40,979 --> 00:08:44,191 ಡಾನ್, ಇದಕ್ಕೂ ಅವಳಿಗೂ ಯಾವುದೇ ಸಂಬಂಧವಿಲ್ಲ. 112 00:08:45,234 --> 00:08:46,401 ನಾನು… 113 00:08:48,111 --> 00:08:50,697 ಏನು ನಡೆಯುತ್ತಿತ್ತು ಎಂಬುದನ್ನು ನಾನು ನಿಮಗೆ ಮೊದಲೇ ಹೇಳಿರಬೇಕಿತ್ತು. 114 00:08:50,781 --> 00:08:52,699 ಏನು ನಡೆಯುತ್ತಿತ್ತು? ಏನು ನಡೆಯುತ್ತಿದೆ? 115 00:08:53,742 --> 00:08:57,162 ನನಗೆ ತಿಳಿದ ಮಟ್ಟಿಗೆ, ಈ ಮಹಿಳೆ ಬೇರೊಂದು ಹೆಸರಿನಲ್ಲಿ ನಿನ್ನ ಬದುಕಿನೊಳಗೆ ನುಸುಳಿದ್ದಾಳೆ, 116 00:08:57,246 --> 00:08:59,623 -ಕೆಜಿಬಿ ಏಜೆಂಟ್ ತರಹ… -ಅದು ಸ್ವಲ್ಪ ಹೆಚ್ಚಾಯಿತು. 117 00:08:59,706 --> 00:09:01,416 …ಮತ್ತು ಇದು ನಿನ್ನ ಪ್ರತಿಕ್ರಿಯೆಯೇ? 118 00:09:01,500 --> 00:09:04,461 ನೀನು ಫೋನ್ ಸ್ವಿಚ್ ಆಫ್ ಮಾಡಿ, ಅವಳಿಗೆ ಉಪಹಾರ ಮಾಡಿಕೊಡುತ್ತಿದ್ದೀಯಾ? 119 00:09:06,088 --> 00:09:07,881 ಅಸಲಿಗೆ, ಅವಳೇ ಉಪಹಾರ ತಯಾರಿಸಿದ್ದು. 120 00:09:08,799 --> 00:09:12,678 ನೀನು ನ್ಯಾರಗ್ಯಾನ್ಸೆಟ್ ಬಿಡುವ ಬಗ್ಗೆ ನಾನು ಮತ್ತು ನಿಮ್ಮ ತಂದೆ ಮೊದಲು ಚರ್ಚಿಸಿದಾಗ, 121 00:09:12,761 --> 00:09:14,471 ನಿರಂತರವಾದ ಅಪವಾದಗಳಿಂದ ತಪ್ಪಿಸಿಕೊಳ್ಳಲು, 122 00:09:14,554 --> 00:09:17,891 ಬೇರೊಂದು ಹೆಸರಿನಲ್ಲಿ ಬದುಕುವುದರ ಅಪಾಯಗಳ ಬಗ್ಗೆ ನಾನು ಆತನಿಗೆ ಎಚ್ಚರಿಸಿದ್ದೆ. 123 00:09:19,184 --> 00:09:24,523 ಆ ಒಂದು ಭಯಾನಕ ತಪ್ಪು ನಿನ್ನ ಅಸ್ತಿತ್ವವನ್ನೇ ಇಲ್ಲವಾಗಿಸಿತು. 124 00:09:25,148 --> 00:09:26,775 ನನ್ನ ಆ ಭಯಗಳಲ್ಲಿ ಕೆಲವು ವಾಸ್ತವಿಕವಾಗಿದ್ದವು. 125 00:09:26,858 --> 00:09:31,238 ನಿನಗೆ ಕೆಲಸ ಹೇಗೆ ಸಿಗುತ್ತದೆ? ಗೊತ್ತಲ್ಲವೇ? ಕುಟುಂಬ ಮಾಡಿಕೊಳ್ಳುವುದು ಹೇಗೆ? 126 00:09:33,407 --> 00:09:34,658 ಸಾಮಾನ್ಯ ಜೀವನ ನಡೆಸುವ ಬಗ್ಗೆ. 127 00:09:37,411 --> 00:09:39,788 ಆದರೆ ನಾನು ಈ ರೀತಿಯ ಯಾವುದನ್ನೂ ಊಹಿಸಿರಲಿಲ್ಲ. 128 00:09:40,956 --> 00:09:45,085 ಇದರಲ್ಲಿ ಭಾಗಶಃ ನನ್ನದೂ ತಪ್ಪಿದೆ ಎಂದು ಹೇಳುವ ರೀತಿ ಇದು. 129 00:09:45,168 --> 00:09:46,962 "ಭಾಗಶಃ" ನಿಮ್ಮ ತಪ್ಪೇ? 130 00:09:47,045 --> 00:09:50,799 ನನಗೆ ನನ್ನ ಕಕ್ಷಿದಾರನ ಜೊತೆ ಏಕಾಂತದ ಅಗತ್ಯವಿದೆ, ನಿಮಗೆ ಅಭ್ಯಂತರವಿಲ್ಲದಿದ್ದರೆ? 131 00:09:50,882 --> 00:09:54,136 ಹೇ, ನೀವು ನನಗೆ ಏನೇ ಹೇಳಬೇಕಿದ್ದರೂ, ಅವಳ ಮುಂದೆಯೇ ಹೇಳಬಹುದು. 132 00:09:54,219 --> 00:09:56,722 ಇಲ್ಲ, ಪರವಾಗಿಲ್ಲ. ನನಗೆ ಇದೆಲ್ಲವನ್ನೂ ಕೇಳಬೇಕಾಗಿಲ್ಲ. 133 00:10:05,981 --> 00:10:06,815 ಕುಳಿತುಕೊಳ್ಳೋಣ. 134 00:10:11,111 --> 00:10:11,945 ಬೇಡ. 135 00:10:13,822 --> 00:10:14,656 ಬೇಡ. 136 00:10:15,574 --> 00:10:17,409 ಇದನ್ನು ಇಲ್ಲೇ ಮುಗಿಸೋಣ. 137 00:10:17,492 --> 00:10:19,870 ನಾನು ಇನ್ನು ಮುಂದೆ ನಿಮ್ಮ ಕಕ್ಷಿದಾರನಲ್ಲ. 138 00:10:21,413 --> 00:10:23,707 ವರ್ಷಗಳ ಕಾಲ ನೀವು ನನ್ನನ್ನು ನಂಬಿಸಿದ್ದಿರಿ, 139 00:10:23,790 --> 00:10:26,543 ನನ್ನನ್ನು ನಿಜವಾಗಲೂ ಅರ್ಥಮಾಡಿಕೊಂಡ ಏಕೈಕ ವ್ಯಕ್ತಿ ನೀವೇ ಎಂದು. 140 00:10:26,626 --> 00:10:28,462 ನನ್ನನ್ನು ಒಂಟಿಯಾಗಿ ಮತ್ತು ಭಯದಲ್ಲಿ ಇರಿಸಿದಿರಿ. 141 00:10:30,881 --> 00:10:31,798 ಸಿಯಾರ… 142 00:10:33,216 --> 00:10:34,509 ಆಕೆ ನನ್ನನ್ನು ಪೂರ್ತಿ ಅರಿತಿದ್ದಾಳೆ. 143 00:10:35,052 --> 00:10:37,054 ಅಂದರೆ, ಎಲ್ಲವೂ. ನನ್ನ ಬಗ್ಗೆ ಎಲ್ಲವೂ. 144 00:10:38,889 --> 00:10:39,973 ಮತ್ತು ಆಕೆ ಇನ್ನೂ ಇಲ್ಲಿದ್ದಾಳೆ. 145 00:10:40,057 --> 00:10:43,935 ಹಾಂ, ಅವಳ ಹೆಸರು ಸಿಯಾರ ಅಲ್ಲ. ಮತ್ತು ಅವಳು ಇಲ್ಲಿರುವುದು ನಿನ್ನ ಹಣಕ್ಕಾಗಿ. 146 00:10:44,019 --> 00:10:47,189 ಇಲ್ಲ. ಇಲ್ಲ, ಡಾನ್, ಅವಳು ಹಾಗಲ್ಲ. 147 00:10:47,731 --> 00:10:49,107 ತಮಾಷೆ ಮಾಡುತ್ತಿದ್ದೀಯಾ? 148 00:10:49,191 --> 00:10:50,942 ನೀವು ಇಲ್ಲಿರುವುದು ನನ್ನ ಹಣಕ್ಕಾಗಿ ಅಲ್ಲವೇ? 149 00:10:53,862 --> 00:10:54,988 ಹೌದಲ್ಲವೇ? 150 00:10:55,072 --> 00:11:00,494 ಅಂದರೆ, ಕನಿಷ್ಠ ಪಕ್ಷ, ಆಕೆ ನನ್ನ ಮಾನಸಿಕ ಅಸ್ಥಿರತೆಯಲ್ಲಿ ಲಾಭ ಹುಡುಕುತ್ತಿಲ್ಲ. 151 00:11:01,995 --> 00:11:07,501 ದೇವರೇ, ನನಗೆ ತುಂಬಾ ನಿರಾಳವಾಗಿದೆ… 152 00:11:08,627 --> 00:11:10,295 ನಮ್ಮಿಬ್ಬರದೂ ಕೊನೆಗೂ ಮುಗಿಯಿತು ಎಂದು. 153 00:11:10,379 --> 00:11:12,923 ನಮ್ಮಿಬ್ಬರ ಕಥೆ ಮುಗಿಯಿತು, ಮತ್ತು ನಿನ್ನ ಸಹವಾಸ ಸಾಕು. 154 00:11:13,006 --> 00:11:15,133 ಹಾಗಾದರೆ ನಾನು ನಿನಗೆ ಎಚ್ಚರಿಕೆ ನೀಡಲೇಬೇಕು, 155 00:11:15,217 --> 00:11:17,636 ನಾನು ಪೊಲೀಸರಿಗೆ ಸತ್ಯ ಹೇಳಲೇಬೇಕಾದ ಅನಿವಾರ್ಯತೆ ಇದೆ. 156 00:11:23,058 --> 00:11:24,309 ನಿನಗಿದು ನೆನಪಿದೆಯೇ? 157 00:11:25,102 --> 00:11:27,896 ಇದು ನಿನ್ನ ಪ್ರೇಯಸಿಯ ಅಣ್ಣನಿಗೆ ನೀನು ಬರೆದ ಪತ್ರ, 158 00:11:27,979 --> 00:11:29,773 ನೀನು ಪೌಲ್‍ನನ್ನು ಕೊಂದೆ ಎಂಬ ತಪ್ಪೊಪ್ಪಿಗೆ ಪತ್ರ. 159 00:11:29,856 --> 00:11:31,400 ಅದನ್ನು ಇನ್ನೂ ಇಟ್ಟುಕೊಂಡಿದ್ದೀಯಾ? 160 00:11:32,609 --> 00:11:34,861 ನೀನದನ್ನು ಅವನಿಗೆ ಕಳಿಸಲೇ ಇಲ್ವಾ? ಅದನ್ನು ಇಟ್ಟುಕೊಂಡುಬಿಟ್ಟೆಯಾ! 161 00:11:34,945 --> 00:11:36,696 ನಿನ್ನನ್ನು ಕಾಪಾಡಲು ನೋಡುತ್ತಿದ್ದೆ, ಕಾಪಾಡಿದೆ ಕೂಡ. 162 00:11:36,780 --> 00:11:38,740 ನೀನು ನಿನ್ನನ್ನು ಕಾಪಾಡಿಕೊಳ್ಳಲು ನೋಡುತ್ತಿದ್ದೆ! 163 00:11:38,824 --> 00:11:40,992 ನೀನು ನನ್ನನ್ನು ನಿನ್ನ ಸ್ವಾರ್ಥಕ್ಕೆ ಬಳಸಿಕೊಂಡೆ… ವರ್ಷಗಳ ಕಾಲ. 164 00:11:41,076 --> 00:11:43,412 ನನಗೆ ಹಾಗೆ ಮಾಡಿದೆ, ನಂತರ ಶೇನ್‍ಗೂ ಹಾಗೆ ಮಾಡಿದೆ, 165 00:11:43,495 --> 00:11:45,247 ಮತ್ತು ಅವನ ಇಡೀ ಕುಟುಂಬಕ್ಕೂ ಹಾಗೆ ಮಾಡಿದೆ. 166 00:11:45,330 --> 00:11:49,835 ನಾವೆಲ್ಲಾ ನಿನ್ನ ಸುಳ್ಳಿನ ಮಧ್ಯೆ ಬದುಕಿದ್ದೀವಿ. ನಿನಗೆ ಅನುಕೂಲವಾದ ವಾಸ್ತವದಲ್ಲಿ. 167 00:11:49,918 --> 00:11:51,670 ನನ್ನಲ್ಲಿ ಯಾವುದೇ ದುರುದ್ದೇಶಗಳಿರಲಿಲ್ಲ, 168 00:11:51,753 --> 00:11:56,341 ಹಾಗೂ ನನ್ನ ಹೊಣೆ ನಿನ್ನ ಹಾಗೂ ನಿನ್ನ ತಂದೆ ಬಗ್ಗೆ ಮಾತ್ರ ಆಗಿತ್ತು. ಬೇರೆ ಯಾರ ಬಗ್ಗೆಯೂ ಅಲ್ಲ. 169 00:11:56,425 --> 00:12:00,220 ಏನು ಗೊತ್ತಾ, ಈಗ, ಚಿಕಿತ್ಸಕರ ಸಲಹೆ ಇಲ್ಲದೆ, 170 00:12:00,303 --> 00:12:03,890 ನೀನು ನಿನಗೆ ಮತ್ತು ಇತರರಿಗೆ ಅಪಾಯಕಾರಿ ಎಂದು ನಂಬಲು ನನ್ನ ಹತ್ತಿರ ಕಾರಣಗಳಿವೆ. 171 00:12:03,974 --> 00:12:05,600 ನನ್ನ ಹತ್ತಿರ ಸಾಕಷ್ಟು ಸಾಕ್ಷ್ಯಗಳಿವೆ. 172 00:12:05,684 --> 00:12:11,022 ಇದು ಮಾತ್ರವಲ್ಲ, ವರ್ಷಗಟ್ಟಲೆ ನಡೆದ ನಮ್ಮ ಮಾತುಕತೆ ರೆಕಾರ್ಡ್ ಆಗಿವೆ. 173 00:12:12,232 --> 00:12:13,066 ತೆಗೆದುಕೋ. 174 00:12:15,277 --> 00:12:16,194 ಕೇಳಿಸಿಕೋ. 175 00:12:16,278 --> 00:12:21,199 "ನಿನ್ನನ್ನು ಬಲಿಪಶು ಮಾಡಲು ಕಟ್ಟಿದ ಈ ಸುಳ್ಳಿನ ಬದುಕನ್ನು ಮುಂದುವರಿಸಲು ನನ್ನಿಂದ ಸಾಧ್ಯವಿಲ್ಲ." 176 00:12:21,283 --> 00:12:24,453 ಏಕೆ ಹೀಗೆ ಮಾಡುತ್ತಿದ್ದೀಯ, ಡಾನ್? ನಾನು ಜೈಲಿಗೆ ಹೋಗಬೇಕೆಂದು ಬಯಸುತ್ತೀಯಾ? 177 00:12:24,536 --> 00:12:27,873 "ನಾನು ಮಾಡಿದ ಅಪರಾಧಕ್ಕೆ ಪೂರ್ತಿ ಹೊಣೆ ನಾನೇ ಹೊರಬೇಕು, 178 00:12:27,956 --> 00:12:30,959 ನನ್ನ ಮಿತಿಮೀರಿದ ಕೋಪದ ಹೊರತಾಗಿ, ಆ ಅಪರಾಧಕ್ಕೆ ಕಾರಣ ಬೇರೇನೂ ಆಗಿರಲಿಲ್ಲ--" 179 00:12:32,627 --> 00:12:35,338 ಇಟ್ಟುಕೋ. ನನ್ನ ಬಳಿ ಇನ್ನೊಂದು ಪ್ರತಿಯಿದೆ. 180 00:12:38,300 --> 00:12:39,801 ಪರಿಸ್ಥಿತಿ ಇಲ್ಲಿಗೆ ಬಂದಿದ್ದಕ್ಕೆ ಬೇಸರವಿದೆ. 181 00:12:41,636 --> 00:12:45,140 ಇಲ್ಲ, ನಿನಗೆ ವಿಷಾದವಿಲ್ಲ, ಇದಿದ್ದರೆ ನೀನು ಇಷ್ಟು ತಯಾರಾಗಿ ಬರುತ್ತಿರಲಿಲ್ಲ. 182 00:12:47,434 --> 00:12:48,393 ನಿಜ. 183 00:12:49,936 --> 00:12:51,646 ನಿಜ, ನಿಜ, ನಿಜ. 184 00:12:53,648 --> 00:12:57,235 ಏನು ಗೊತ್ತಾ, ನೀನು ಯೋಚಿಸಿ ನೋಡಿದರೆ, ಇದನ್ನು ಬಗೆಹರಿಸಲು ಇನ್ನೊಂದು ದಾರಿಯಿದೆ. 185 00:12:57,903 --> 00:12:59,404 ನಿನ್ನನ್ನು ಒಂದು ಪ್ರಶ್ನೆ ಕೇಳುತ್ತೇನೆ. 186 00:13:00,447 --> 00:13:03,283 ನಾನು ನಿನಗೆ ನೀಡಿದ ಎಲ್ಲಾ ಸಾಧನಗಳ ಮೌಲ್ಯವೇನು, 187 00:13:03,366 --> 00:13:06,411 ನಿನ್ನ ಜೀವನವನ್ನು ನಿರ್ವಹಿಸಲು ನೀನು ಇಂದಿಗೂ ಬಳಸುವ ಆ ಸಾಧನಗಳದ್ದು? 188 00:13:08,038 --> 00:13:09,831 ಗೊತ್ತಿಲ್ಲ. ನೀನೇ ಹೇಳು, ಡಾನ್. 189 00:13:11,875 --> 00:13:13,502 ಐದು ಮಿಲಿಯನ್ ಡಾಲರ್? 190 00:13:15,170 --> 00:13:16,713 ಹತ್ತು ಮಿಲಿಯನ್ ಡಾಲರ್? 191 00:13:16,796 --> 00:13:18,715 ನೀನು ಇಡೀ ದಿನ ಉಸಿರು ಬಿಗಿಹಿಡಿದುಕೊಂಡೇ ಇರುತ್ತಿದ್ದೆ, 192 00:13:18,798 --> 00:13:21,843 ಒಂದು ವೇಳೆ ಉಸಿರಾಟದ ಮೂಲಭೂತ ಕ್ರಿಯೆಯನ್ನು ನಾನು ನಿನಗೆ ಕಲಿಸದಿದ್ದರೆ. 193 00:13:21,927 --> 00:13:23,595 ಅದು ಮಾತ್ರವಲ್ಲ, ಇದರ ಬಗ್ಗೆ ಯೋಚಿಸು, 194 00:13:23,678 --> 00:13:27,557 ಇಷ್ಟು ವರ್ಷ ನೀನು ನನಗೆ ಹೊರೆಯಾಗಿದ್ದೆಯಲ್ಲ, ಅದರ ಮೌಲ್ಯವೇನು? 195 00:13:27,641 --> 00:13:32,312 ಅಥವಾ ನಿನ್ನ ಅನರ್ಹ ಸ್ವಾತಂತ್ರ್ಯದ ಜೀವನಕ್ಕೆ ಪ್ರತಿಯಾಗಿ ನನ್ನ ಮೌನದ ಮೌಲ್ಯವೇನು? 196 00:13:39,069 --> 00:13:40,529 ಅವನನ್ನು ನಂಬಲು ಆಗಲ್ಲ. 197 00:14:14,396 --> 00:14:15,230 ಟುಡೇ 198 00:14:15,313 --> 00:14:17,315 ಸಾವಿಗೆ ಕಾರಣ ಸರಳವಾದ ಬಲವಾದ ಪೆಟ್ಟು. 199 00:14:17,399 --> 00:14:20,026 ತಲೆಗೆ ಬಿದ್ದ ಏಟಿನಿಂದ ತಲೆಬುರುಡೆಯ ಮೂಳೆ ಮುರಿತ ಉಂಟಾಗಿದೆ, 200 00:14:20,110 --> 00:14:21,653 ಇದರಿಂದ ರಕ್ತಸ್ರಾವವಾಗಿದೆ. 201 00:14:21,736 --> 00:14:24,364 ಬಿಸಿಯಿಂದಾಗಿ ರಾಸಾಯನಿಕ ವಿಘಟನೆ ಹೆಚ್ಚಾಗಿದೆ, 202 00:14:24,447 --> 00:14:26,658 ಆದರೆ ಸಮಯವೇ ಅದನ್ನು ಅಷ್ಟು ಹದಗೆಡಿಸಿದೆ. 203 00:14:27,576 --> 00:14:29,202 ಇದು ಯಾವಾಗ ಸಂಭವಿಸಿದ್ದು? 204 00:14:29,869 --> 00:14:31,204 ಒಂದೆರಡು ವಾರಗಳ ಹಿಂದೆ? 205 00:14:31,288 --> 00:14:33,540 ದೇಹ ಕೊಳೆತುಹೋಗಿರುವುದರಿಂದ ನಿಖರವಾಗಿ ಊಹಿಸುವುದು ಕಷ್ಟ. 206 00:14:34,290 --> 00:14:36,668 ಆದರೆ ಒಂದು ಒಳ್ಳೆಯ ಸುದ್ದಿಯಿದೆ. 207 00:14:37,836 --> 00:14:39,504 ಆ ಡಿಎನ್‌ಎ ಡೇಟಾಬೇಸ್‌ನಲ್ಲಿ ಮೊದಲೇ ಇತ್ತು. 208 00:14:42,716 --> 00:14:46,595 ಡೇನಿಯಲ್ ಟ್ರಾಕ್ಸ್ಲರ್. ಇವನು ನ್ಯಾರಗ್ಯಾನ್ಸೆಟ್‌ನ ಒಬ್ಬ ಮನಶಾಸ್ತ್ರಜ್ಞ. 209 00:14:46,678 --> 00:14:48,221 ಅಂದರೆ, ಆಗಿದ್ದ. 210 00:14:48,305 --> 00:14:50,015 ಅವನು ಫೆಡರಲ್ ಪೊಲೀಸರ ನಿಗಾದಲ್ಲಿದ್ದ, 211 00:14:50,098 --> 00:14:52,809 ಎರಡು ವರ್ಷಗಳ ಹಿಂದೆಯೇ ಪರವಾನಗಿ ಕಳೆದುಕೊಂಡಿದ್ದ, 212 00:14:52,892 --> 00:14:55,979 ಕದ್ದ ಪ್ರೊಪೊಫೋಲ್ ಅನ್ನು ರಾಜ್ಯದ ಗಡಿ ದಾಟಿಸಲು ದಾದಿಯೊಬ್ಬಳಿಗೆ ಹಣ ನೀಡಿದ್ದಕ್ಕಾಗಿ. 213 00:14:56,980 --> 00:14:58,898 ಹಾಗಾಗಿ, ಅವನು ಪರವಾನಗಿ ಇಲ್ಲದೆ ಕೆಲಸ ಮಾಡುತ್ತಿದ್ದಾನೆ. 214 00:14:58,982 --> 00:15:01,443 ಅಸಲಿಗೆ ಅವನ ಹತ್ತಿರ ಮೊದಲೇ ಸರಿಯಾದ ಪರವಾನಗಿ ಇರಲಿಲ್ಲ. 215 00:15:01,526 --> 00:15:03,361 ಇವನು ಪಿಹೆಚ್‍ಡಿ ಮಾಡಿಲ್ಲ, ಇವನೊಬ್ಬ ವಂಚಕ. 216 00:15:03,445 --> 00:15:05,447 ಸರಿ. ಅವನ ಕಾರು ಈ ಊರಿನಲ್ಲಿದೆ. 217 00:15:05,530 --> 00:15:09,200 ಅದು ಕಳೆದ ತಿಂಗಳು 18ರಿಂದಲೂ ಜಪ್ತಿ ಕೇಂದ್ರದಲ್ಲೇ ಬಿದ್ದಿದೆ. 218 00:15:09,284 --> 00:15:10,535 ನೀನು ಅಲ್ಲಿಗೆ ಹೋಗಬೇಕೇ? 219 00:15:11,036 --> 00:15:12,704 ನಾನು ವಾಪಸ್ ದಿ ಕ್ರಾಸಿಂಗ್ಸ್‌ಗೆ ಹೋಗಿ, 220 00:15:12,787 --> 00:15:14,623 18ನೇ ತಾರೀಖಿನ ಕಣ್ಗಾವಲು ದೃಶ್ಯಾವಳಿ ನೋಡುತ್ತೇನೆ. 221 00:15:14,706 --> 00:15:18,251 ಸಿಎಸ್ಆರ್‌ರನ್ನು ಕರೆಸಿ, ಅಲ್ಲಿ ರಕ್ತ ಪತ್ತೆಗಾಗಿ ನೆಲದ ಮೇಲೆ ಲುಮಿನಾಲ್ ಸ್ಪ್ರೇ ಮಾಡಿಸುತ್ತೇನೆ. 222 00:15:18,335 --> 00:15:21,171 ಸರಿ. ನಾನು ಶೇನ್‍ನ ತಂಗಿ ಮೇಗನ್ ಬಗ್ಗೆ ಮಾಹಿತಿ ಕಲೆಹಾಕುತ್ತೇನೆ. 223 00:15:21,254 --> 00:15:24,174 ನಾವಿಲ್ಲಿ ಸೇಂಟ್ ಲೆಡ್ಜರ್ ಬಗ್ಗೆ ಮಾತಾಡುತ್ತಿದ್ದೇವೆ. ಆ ಮಕ್ಕಳು ಇನ್ನು ಸಿಗಲ್ಲ. 224 00:15:24,257 --> 00:15:25,258 ಒಂದು ನಿಮಿಷ. 225 00:15:26,509 --> 00:15:28,678 ಏನಾಯಿತೆಂದು ಕೇಳ್ಪಟ್ಟೆ, ನಿನಗೇನೂ ಆಗಿಲ್ಲ ಅಂತ ಖುಷಿಯಾಯಿತು. 226 00:15:29,846 --> 00:15:31,181 ನಾವು ಆಮೇಲೆ ಈ ಬಗ್ಗೆ ಮಾತಾಡಬೇಕಿದೆ. 227 00:15:37,228 --> 00:15:38,647 ಆಕೆಗೆ ಏನು ಹೇಳುತ್ತೀಯಾ? 228 00:15:41,983 --> 00:15:43,860 ಗೊತ್ತಿಲ್ಲ. ಸತ್ಯವನ್ನೇ? 229 00:15:46,696 --> 00:15:48,907 ಅದು ನಿನಗೆ ಈಗ ನೆರವಾಗುವುದೋ ಇಲ್ಲವೋ ಗೊತ್ತಿಲ್ಲ. 230 00:15:48,990 --> 00:15:52,035 ಹಾಂ, ಆದರೆ ನಾನು ಹೇಳಲೇಬೇಕು. ನೆರವಾಗದಿದ್ದರೂ ಸರಿ. 231 00:15:57,040 --> 00:15:58,917 ಇಲ್ಲಿ ನೀನು ನನಗೆ ಒಂದು ಸಹಾಯ ಮಾಡುತ್ತೀಯಾ? 232 00:16:02,003 --> 00:16:03,963 ನೀನು ಅಂಥದ್ದನ್ನು ಏಕೆ ಮಾಡಿದೆ? 233 00:16:05,882 --> 00:16:07,592 ನನಗೆ ಅರ್ಥಮಾಡಿಕೊಳ್ಳಲು ನಿನ್ನ ಸಹಾಯ ಬೇಕು. 234 00:16:08,259 --> 00:16:09,135 ಇಲ್ಲ, ನಿನಗೆ ಬೇಡ. 235 00:16:09,803 --> 00:16:12,806 ನಿನಗೆ ಅರ್ಥವಾಗುತ್ತದೆ. ಎಲ್ಲರಿಗಿಂತ ಹೆಚ್ಚಾಗಿ ನಿನಗೆ ಅರ್ಥವಾಗುತ್ತದೆ. 236 00:16:20,355 --> 00:16:21,439 ನಿನಗೆ ನಿನ್ನ ಮೇಲೇ ಸಾಕಾಗಿದೆ. 237 00:16:25,610 --> 00:16:26,695 ಅಷ್ಟೇ ಸಾಕಾ? 238 00:16:30,824 --> 00:16:31,658 ಹೌದು. 239 00:16:37,664 --> 00:16:38,498 ಹೌದು. 240 00:16:47,382 --> 00:16:48,717 ಹೇ, ನನಗೆ… 241 00:16:50,009 --> 00:16:51,594 ಒಂದು ವಿಷಯದಲ್ಲಿ ನಿನ್ನ ಸಹಾಯ ಬೇಕು. 242 00:16:56,307 --> 00:16:58,727 ನಿನ್ನ ಆ ಪೋಲಿ ಪ್ರಿಯಕರನ ಕುತ್ತಿಗೆಯಿಂದ ಕಿತ್ತುಕೊಂಡೆ. 243 00:16:58,810 --> 00:16:59,811 ಅವನನ್ನು ಹಾಗೆ ಕರೆಯಬೇಡ. 244 00:16:59,894 --> 00:17:02,480 ಅದನ್ನು ನನ್ನ ಕಣ್ಣೆದುರು ತರಬೇಡ. ಅದನ್ನು ಎಸೆದುಬಿಡು. 245 00:17:03,732 --> 00:17:05,483 ನನಗೆ ಆಮೇಲೆ ಇದರ ಅವಶ್ಯಕತೆ ಬರಬಹುದು. 246 00:17:05,567 --> 00:17:06,568 ಯಾತಕ್ಕಾಗಿ? 247 00:17:10,571 --> 00:17:14,367 ಡೇ 34 248 00:17:14,659 --> 00:17:15,910 ನಾವೀಗ ಏನು ಮಾಡುವುದು? 249 00:17:17,369 --> 00:17:18,371 ಯೋಚಿಸುತ್ತಿದ್ದೇನೆ. 250 00:17:22,459 --> 00:17:24,544 ನಾನು ಒಂದು ಫೋನ್ ಮಾಡಬೇಕು. ನನಗೊಬ್ಬ ಗೊತ್ತು. 251 00:17:28,464 --> 00:17:31,926 ನನಗೂ ಒಬ್ಬರು ಗೊತ್ತು. ಆದರೆ ಆಕೆ ಮಹಿಳೆ. 252 00:17:37,515 --> 00:17:39,309 ಥತ್, ಅದು ನನ್ನ ತಂಗಿ. ಛೇ. 253 00:17:39,392 --> 00:17:41,519 -ಬಿಡು ಅವಳನ್ನು. ಬಾ… -ಇಲ್ಲ, ನಾನು ಮಾತಾಡಲೇಬೇಕು. 254 00:17:41,603 --> 00:17:43,188 ಇರೋ ಲೋ. ಥತ್! 255 00:17:45,482 --> 00:17:47,442 ಹಾಂ, ತಾಳು, ತಾಳು, ಮೆಗ್. 256 00:17:50,361 --> 00:17:52,489 ಹಾಂ. ಏನದು? 257 00:17:55,909 --> 00:17:58,286 ಹೇ, ಸಮಾಧಾನ, ಸಮಾಧಾನ! ನಿಧಾನ. ನೀನು ಏನು… 258 00:18:03,333 --> 00:18:05,001 ಸರಿ, ಮೆಗ್. ನಾನು ಹೇಳುವುದನ್ನು ಕೇಳು. 259 00:18:05,084 --> 00:18:06,252 ಹೇ… 260 00:18:06,336 --> 00:18:08,463 ನಿನಗೆ ನನ್ನ ಸಹಾಯ ಬೇಕೋ ಬೇಡವೋ? 261 00:18:10,131 --> 00:18:11,049 ಸರಿ. 262 00:18:12,759 --> 00:18:15,386 ನಿನಗೆ ನೆನಪಿದೆಯೇ, ಐದು ವರ್ಷಗಳ ಹಿಂದೆ 263 00:18:15,470 --> 00:18:18,723 ಕ್ಯಾಸ್ಕೋ ಬೇ ಹತ್ತಿರ ಆಂಡ್ರ್ಯೂ ಡೆಲಾನಿ ಆ ಏಡಿ ಬಲೆಗಳನ್ನು ಕದ್ದಿದ್ದು? 264 00:18:19,891 --> 00:18:22,310 ಅವನ ಹೆಣ ಸ್ನಾನತೊಟ್ಟಿಯಲ್ಲಿ ಸಿಕ್ಕಿತು. 265 00:18:23,269 --> 00:18:27,899 ಅವನನ್ನು ಕೊಂದವರು ಓವನ್ ಕ್ಲೀನರ್ ಹಾಕಿ ಎಲುಬು ಮಾತ್ರ ಉಳಿಯುವಂತೆ ಕರಗಿಸಿಬಿಟ್ಟಿದ್ದರು, 266 00:18:27,982 --> 00:18:30,944 ಅಥವಾ ಬಹುಶಃ ಡ್ರೈನ್ ಕ್ಲೀನರ್ ಅಥವಾ ಬ್ಲೀಚ್ ಇರಬಹುದು. 267 00:18:31,027 --> 00:18:32,487 ಬಹುಶಃ ಅದೆಲ್ಲದರ ಮಿಶ್ರಣವಿರಬಹುದು, 268 00:18:32,570 --> 00:18:33,655 ಆದರೆ ಯಾರಿಗೂ ಗೊತ್ತಿಲ್ಲ, 269 00:18:33,738 --> 00:18:37,408 ಏಕೆಂದರೆ ಅಂಗಡಿಯಿಂದ ಆ ವಸ್ತುಗಳನ್ನು ಖರೀದಿಸದೇ ಇರುವಷ್ಟು ಅವರು ಬುದ್ಧಿವಂತರಾಗಿದ್ದರು. 270 00:18:38,451 --> 00:18:41,746 ಅದು ಬೇಗ ಆಗಲಿ ಅಂತ ಅವರು ಹೀಟರ್ ಆನ್ ಮಾಡಿದ್ದರು. 271 00:18:43,081 --> 00:18:45,333 ಒಂದು ವಾರದೊಳಗೆ ಅವನ ಸುಳಿವೇ ಇರಲಿಲ್ಲ. 272 00:18:47,168 --> 00:18:49,629 ಹೆಣವನ್ನು ಗುರುತಿಸಲು ಪೊಲೀಸರಿಗೆ ತುಂಬಾ ಸಮಯ ಹಿಡಿಯಿತು, 273 00:18:49,712 --> 00:18:52,090 ಏಕೆಂದರೆ ಅವರು ಅಲ್ಲಿ ಬೇರೆ ವಸ್ತುಗಳನ್ನು ಕೂಡ ಬಿಟ್ಟು ಹೋಗಿದ್ದರು. 274 00:18:52,173 --> 00:18:55,426 ಉದಾಹರಣೆಗೆ, ಅವನದಲ್ಲದ ಬಟ್ಟೆಗಳನ್ನು ಮತ್ತು ಇತರೆ ವಸ್ತುಗಳನ್ನು. 275 00:18:57,178 --> 00:18:59,389 ಅವನು ಯಾರೆಂದು ಅವರು ಕಂಡುಹಿಡಿಯುವ ಹೊತ್ತಿಗೆ, 276 00:18:59,472 --> 00:19:01,140 ಯಾರಿಗೂ ಅದರ ಬಗ್ಗೆ ಕಾಳಜಿ ಇರಲಿಲ್ಲ, ಸರಿನಾ? 277 00:19:02,517 --> 00:19:05,353 ಏಕೆಂದರೆ ಆತನಿಗೆ ಆ ಸ್ಥಿತಿ ಬರಲೇಬೇಕಿತ್ತು. 278 00:19:07,021 --> 00:19:08,815 ಕೊಂದವನು ಸಿಕ್ಕಿಬಿದ್ದನೇ? 279 00:19:09,399 --> 00:19:11,776 ಅವನು ಓಡಿಹೋದ. ಅವನು ಎಲ್ಲಿದ್ದಾನೋ ಯಾರಿಗೂ ಗೊತ್ತಿಲ್ಲ. 280 00:19:17,365 --> 00:19:18,867 ಏನಾಗಲಿದೆಯೋ ನನಗೆ ಗೊತ್ತಿಲ್ಲ. 281 00:19:18,950 --> 00:19:20,827 ನೋಡು, ಮೆಗ್, ನೀನು ಇನ್ನು ಆ ಫೋನ್ ಬಳಸುವಂತಿಲ್ಲ. 282 00:19:20,910 --> 00:19:24,372 ನಿನಗೆ ಬಳಸಿ ಬಿಸಾಡುವ ಫೋನ್ ಅಗತ್ಯವಿದೆ. ಮತ್ತು ನಿನಗೆ ಗೊತ್ತು, ನೀನು ಮನೆಗೆ ಬರುವಂತಿಲ್ಲ. 283 00:19:24,455 --> 00:19:25,582 ಹಾಂ, ನನಗೆ ಗೊತ್ತು. 284 00:19:28,668 --> 00:19:30,128 ನನಗೆ ಕರೆ ಮಾಡು, ಸರಿನಾ? 285 00:19:30,211 --> 00:19:31,212 ಮಾಡುತ್ತೇನೆ. 286 00:19:58,907 --> 00:20:01,492 ನನಗನಿಸುತ್ತೆ, ಈ ವಿಷಯದಲ್ಲಿ ನನಗಿಂತ ನೀನೇ ಜಾಣ ಎಂದು. 287 00:20:01,576 --> 00:20:04,454 ನನ್ನ ಸಮಸ್ಯೆಗಳಿಂದ ಓಡಿಹೋಗುವುದರಲ್ಲಾ? ಹೌದು, ನಾನು ಅದರಲ್ಲಿ ಪರಿಣತ. 288 00:20:05,413 --> 00:20:08,124 ಆ ತಿಜೋರಿಯಿಂದ ಎಲ್ಲವನ್ನೂ ಹೊರ ತೆಗೆಯುತ್ತೀಯಾ, ದಯವಿಟ್ಟು? 289 00:20:08,666 --> 00:20:11,127 ಕೋಡ್ 13-73-24. 290 00:20:12,295 --> 00:20:14,213 -ನಿನಗೆ ಗೊತ್ತಾಯಿತೇ? ಸರಿ. -ಹೌದು. 291 00:20:18,551 --> 00:20:19,677 ಹೇ, ಸೈಕ್ಸ್. 292 00:20:20,511 --> 00:20:22,430 ಹಾಂ, ನನಗೊಂದು ಉಪಕಾರ ಆಗಬೇಕು. 293 00:20:24,015 --> 00:20:26,851 ಇಂದು ಯಾರನ್ನಾದರೂ ಮಾರ್ಷ್‌ಫೀಲ್ಡ್‌ನಲ್ಲಿ ನನ್ನನ್ನು ಭೇಟಿಯಾಗಲು ಕಳಿಸುವೆಯಾ? 294 00:20:28,102 --> 00:20:29,687 ಹಾಂ. ಹೌದು. 295 00:20:31,314 --> 00:20:34,525 ಹಾಂ, ಹೊಸ ಆರಂಭ, ಆದರೆ ಒಬ್ಬಳು ಸ್ನೇಹಿತೆಯನ್ನು ಕರೆತರುತ್ತಿದ್ದೇನೆ. 296 00:20:36,903 --> 00:20:38,947 ಹಾಂ, ನಾವಿಬ್ಬರೂ ಸ್ವಲ್ಪ ಕಾಲ ದೂರ ಹೋಗಬೇಕಿದೆ. 297 00:20:39,030 --> 00:20:40,198 ಎಷ್ಟು ಕಾಲ ಅಂತ ಗೊತ್ತಿಲ್ಲ. 298 00:20:40,823 --> 00:20:41,658 ಹೌದು. 299 00:20:42,283 --> 00:20:43,368 ಹೌದು. 300 00:20:44,285 --> 00:20:45,328 ಧನ್ಯವಾದಗಳು. 301 00:20:46,329 --> 00:20:47,664 ಸರಿ, ನಾವು ಅಲ್ಲಿಗೆ ತಲುಪುತ್ತೇವೆ. 302 00:20:49,123 --> 00:20:50,583 5:00 ಗಂಟೆಗೆ, ತಿಳಿಯಿತು. 303 00:20:53,795 --> 00:20:56,756 ಎಲ್ಲವನ್ನೂ ಮರೆತು ಹೊಸದಾಗಿ ಶುರುಮಾಡುವುದೇ ಇದಕ್ಕೆ ಸರಿಯಾದ ದಾರಿ. 304 00:20:56,839 --> 00:20:59,342 ಅತ್ಯಗತ್ಯವಾದದ್ದನ್ನಷ್ಟೇ ಇಟ್ಟುಕೋ, ಉಳಿದಿದ್ದನ್ನು ಆಮೇಲೆ ಖರೀದಿಸಬಹುದು. 305 00:20:59,425 --> 00:21:03,596 ಆದರೆ ನನ್ನ ಪ್ರಕಾರ, ನೀನು ಹೋಗಿ ನಿಮ್ಮಕ್ಕನನ್ನು ಭೇಟಿಯಾಗಬೇಕು. ವಿದಾಯ ಹೇಳು. 306 00:21:03,680 --> 00:21:05,139 ಅದು ಪರವಾಗಿಲ್ವಾ? ನಾನು ಹಾಗೆ ಮಾಡಬಹುದಾ? 307 00:21:05,223 --> 00:21:06,975 ಈ ಮೊದಲು ಭೇಟಿಯಾದ ಜಾಗದಲ್ಲಿ ಮಾತ್ರ ಭೇಟಿಯಾಗಬೇಡ. 308 00:21:07,058 --> 00:21:09,811 -ಎಲ್ಲಿಗೆ ಹೋಗಲಿದ್ದೀಯ ಅಂತ ಆಕೆಗೆ ಹೇಳಬೇಡ. -ಎಲ್ಲಿಗೆ ಎಂದು ನನಗೇ ಗೊತ್ತಿಲ್ಲ. 309 00:21:09,894 --> 00:21:11,688 ನಿನಗೆ ಗೊತ್ತಾಗುತ್ತದೆ, ಇಂದು ಸಂಜೆ. 310 00:21:12,271 --> 00:21:15,358 ಸಂಜೆ 5:00 ಗಂಟೆಗೆ ನನಗೆ ಮಾರ್ಷ್‌ಫೀಲ್ಡ್ ಬಳಿ ಸಿಗು, ಸರಿನಾ? 311 00:21:15,441 --> 00:21:18,403 ಲೋಗನ್‌ನಿಂದ ಬಸ್ ಸಿಗುತ್ತೆ, ಅದು ನಿನ್ನನ್ನು ನೇರವಾಗಿ ಅಲ್ಲಿಗೆ ತಲುಪಿಸುತ್ತದೆ. 312 00:21:18,486 --> 00:21:19,529 ಮಾರ್ಷ್‌ಫೀಲ್ಡ್ ಅಂದರೆ ಏನು? 313 00:21:19,612 --> 00:21:21,239 ಅದು ಖಾಸಗಿ ವಿಮಾನಗಳ ಚಿಕ್ಕ ವಿಮಾನ ನಿಲ್ದಾಣ. 314 00:21:21,322 --> 00:21:23,491 ಹ್ಯಾಂಗರ್ 36ರಲ್ಲಿ ನನ್ನ ವಿಮಾನವಿದೆ. 315 00:21:24,867 --> 00:21:28,162 ಇದನ್ನು ತೆಗೆದುಕೋ. ನನ್ನನ್ನು ಭೇಟಿಯಾದಾಗ ಇದನ್ನು ತಾ. 316 00:21:28,871 --> 00:21:29,872 ಆದರೆ ಅದು ನಿನ್ನ ಬ್ಯಾಗು. 317 00:21:29,956 --> 00:21:32,625 ಹಾಂ, ಪರವಾಗಿಲ್ಲ. ಆಯ್ತಾ? ನಿನ್ನನ್ನು ನಂಬುತ್ತೇನೆ. 318 00:21:47,265 --> 00:21:48,141 ಟುಡೇ 319 00:21:48,224 --> 00:21:49,892 ಅಪರಾಧ ನಡೆದ ದಿನ ನಮಗೆ ಸಿಕ್ಕಿದ್ದು ಇದಿಷ್ಟು. 320 00:21:49,976 --> 00:21:53,438 ಒಂದು ತಿಂಗಳ ವಿಡಿಯೋವನ್ನು ಮುಂದೆ ಓಡಿಸಬಹುದು ಎಂದು ಜನ ಅಂದುಕೊಳ್ಳುತ್ತಾರೆ, ಆದರೆ ಆಗಲ್ಲ. 321 00:21:53,521 --> 00:21:56,232 ಆ ಕ್ಷಣವನ್ನು ಬದುಕಲು ಎಷ್ಟು ಸಮಯ ಬೇಕೋ ನೋಡಲೂ ಅಷ್ಟೇ ಸಮಯ ಬೇಕಾಗುತ್ತದೆ. 322 00:21:56,315 --> 00:21:57,734 ಇದು ಜೀವನದ ಒಂದು ರೂಪಕವಿದ್ದಂತೆ. 323 00:21:57,817 --> 00:22:00,862 ಎಷ್ಟೇ ದೀರ್ಘವಾಗಿದ್ದರೂ, ಅದು ವೇಗವಾಗಿರುತ್ತೆ. ಕಣ್ಣು ಮಿಟುಕಿಸಿದರೊಳಗೆ ಕಳೆದುಹೋಗುತ್ತದೆ. 324 00:22:04,073 --> 00:22:05,116 ಹೇ, ನಿಮಗೆ ಅನಿಸುತ್ತಾ… 325 00:22:07,201 --> 00:22:09,078 ನಾನು ಒಳ್ಳೆಯ ಪೊಲೀಸ್ ಆಗಬಹುದಾ? 326 00:22:11,122 --> 00:22:12,081 ನಿನಗೆ ಪೊಲೀಸ್ ಆಗಬೇಕೇ? 327 00:22:12,165 --> 00:22:13,374 ಇಲ್ಲ. ಇಲ್ಲ. 328 00:22:15,084 --> 00:22:17,754 ಬಹುಶಃ. ನಾನು ಇಂದಿನವರೆಗೂ ಅದರ ಬಗ್ಗೆ ಯೋಚಿಸಿರಲಿಲ್ಲ. 329 00:22:17,837 --> 00:22:20,173 ತಪ್ಪು ತಿಳಿಬೇಡಿ, ನನಗೆ ಪೊಲೀಸರನ್ನು ಕಂಡರೆ ಆಗಲ್ಲ. ಆದರೆ ನೀವು ಭಿನ್ನ. 330 00:22:20,631 --> 00:22:21,799 ಏನು ಗೊತ್ತಾ, ನೀವು… 331 00:22:22,633 --> 00:22:24,302 ನೀನು ನನ್ನ ಅಭಿಪ್ರಾಯವನ್ನೇ ಬದಲಿಸಿಬಿಟ್ಟಿರಿ. 332 00:22:24,385 --> 00:22:26,220 ಗೊತ್ತಲ್ಲಾ, ಬಹುಶಃ ಅವರೆಲ್ಲರೂ ಕೆಟ್ಟವರಲ್ಲ. 333 00:22:27,138 --> 00:22:29,390 ನಿಮಗೆ ಯಾವಾಗಲೂ ಡಿಟೆಕ್ಟಿವ್ ಆಗಬೇಕೆಂಬ ಆಸೆ ಇತ್ತಾ? 334 00:22:29,474 --> 00:22:31,684 ನನಗೆ ಈಗ ಡಿಟೆಕ್ಟಿವ್ ಆಗಲು ಇಷ್ಟವಿದೆಯಾ ಅಂತಲೂ ಗೊತ್ತಿಲ್ಲ. 335 00:22:31,768 --> 00:22:33,603 -ನಿಜವಾಗಲೂ? -ಖಂಡಿತ ಹೌದು. 336 00:22:33,686 --> 00:22:35,772 ನಾನು ನಿನ್ನಂತೆಯೇ ಪೊಲೀಸರನ್ನು ದ್ವೇಷಿಸುತ್ತಾ ಬೆಳೆದವನು. 337 00:22:36,606 --> 00:22:39,067 ಆಕಸ್ಮಿಕವಾಗಿ ಭದ್ರತಾ ಸಿಬ್ಬಂದಿಯ ಕೆಲಸ ಸಿಕ್ಕಿತು, 338 00:22:39,150 --> 00:22:42,236 ಅಲ್ಲಿ ಒಳ್ಳೆಯ ಉದ್ದೇಶಕ್ಕೆ ಪೊಲೀಸ್ ಕೆಲಸಕ್ಕೆ ಸೇರಿದ್ದ ಮಾಜಿ ಪೊಲೀಸರ ಜೊತೆ ಕೆಲಸ ಮಾಡಿದೆ. 339 00:22:42,320 --> 00:22:44,614 ಸತ್ಯ, ನ್ಯಾಯ, ಅಂತಹ ವಿಷಯಗಳು. 340 00:22:44,697 --> 00:22:49,994 ಮತ್ತು ಬಿಪಿಡಿ ಸಂಘಟಿತ ಸಂಸ್ಥೆಯಾಗಿದೆ, ಹಾಗಾಗಿ ಒಮ್ಮೆ ಪ್ರಯತ್ನಿಸಿ ನೋಡೋಣ ಅಂದುಕೊಂಡೆ. 341 00:22:50,078 --> 00:22:51,204 ಅದು ಮುಖ್ಯ. 342 00:22:51,788 --> 00:22:53,623 ಒಂದೆರಡು ಬಡ್ತಿಗಳ ನಂತರ, ಈಗ ಇಲ್ಲಿದ್ದೇನೆ. 343 00:22:53,706 --> 00:22:58,419 ಈಗ, ನನ್ನ ಸಹೋದ್ಯೋಗಿ ಗೊತ್ತಲ್ಲಾ? ಆಕೆಗೆ ಸದಾ ಡಿಟೆಕ್ಟಿವ್ ಆಗಬೇಕೆಂಬ ಆಸೆ ಇತ್ತು. 344 00:22:58,503 --> 00:22:59,670 ಅವಳು ಚಿಕ್ಕವಳಿದ್ದಾಗಿನಿಂದಲೂ. 345 00:23:02,840 --> 00:23:03,925 ಆಕೆ ಒಳ್ಳೆಯವರು. 346 00:23:06,761 --> 00:23:07,887 ಹೌದು, ಅವಳು ಹಾಗೇ. 347 00:23:13,476 --> 00:23:14,477 ಈ ವ್ಯಕ್ತಿ ನಿನಗೆ ಗೊತ್ತಾ? 348 00:23:18,064 --> 00:23:22,151 ಬೇಡ, ಮಗಾ. ನನಗೆ ಸುಳ್ಳು ಹೇಳಬೇಡ, ಮಾರಾಯ. ಇಷ್ಟೆಲ್ಲಾ ಆದಮೇಲಂತೂ ಖಂಡಿತಾ ಬೇಡ. 349 00:23:24,821 --> 00:23:25,822 ಮಾರಾಯ, ಅವನು ಫಿಂಚ್. 350 00:23:27,824 --> 00:23:30,243 ನನಗೆ ಬೇಕಾದ ನಶೆಯ ವಸ್ತುಗಳು ಅಲ್ಲಿ ಸಿಗುತ್ತವೆ, 351 00:23:30,326 --> 00:23:32,161 ಆದರೆ ನಾನು ಹೇಳಿದೆ ಎಂದು ಅವನಿಗೆ ಹೇಳಬೇಡಿ. 352 00:23:32,245 --> 00:23:34,580 ಇಲ್ಲ, ಇಲ್ಲ. ನೀನು ಅವನನ್ನು ಇಲ್ಲಿ ನೋಡಿದ್ದೀಯಾ? 353 00:23:36,249 --> 00:23:37,375 ಹೌದು. 354 00:23:37,458 --> 00:23:39,752 ಅವನ ಬಳಿ ಪ್ರೊಪೊಫೋಲ್ ಚುಚ್ಚುಮದ್ದು ಇರುವುದನ್ನು ನೋಡಿದ್ದೀಯಾ? 355 00:23:40,378 --> 00:23:42,964 ಅದೆಲ್ಲಾ ನನಗೆ ಗೊತ್ತಿಲ್ಲಪ್ಪ. ಅದು ನನ್ನ ವಿಷಯವೇ ಅಲ್ಲ. 356 00:23:43,047 --> 00:23:44,215 ಆದರೆ ನಿನಗದು ಸುಳ್ಳು ಅನಿಸಲ್ಲ. 357 00:23:44,298 --> 00:23:46,884 ಇಲ್ಲಿ ನಡೆಯುತ್ತಿರುವುದನ್ನೆಲ್ಲಾ ನೋಡಿದಮೇಲೆ, ಎಲ್ಲವನ್ನೂ ನಿಜವೆಂದು ನಂಬುವೆ. 358 00:23:46,968 --> 00:23:50,263 ಹೌದು. ಇವರಲ್ಲಿ ಅವನನ್ನು ಎಲ್ಲಿ ಹುಡುಕಬಹುದೆಂದು ನಿನಗೆ ಗೊತ್ತಾ? 359 00:23:53,224 --> 00:23:54,100 ಬಹುಶಃ. 360 00:23:55,685 --> 00:23:58,813 ಕೇಳು, ಯಾರಿಗೂ ಗೊತ್ತಾಗದ ಹಾಗೆ ನೀನು ಅವನನ್ನು ಹುಡುಕಿಕೊಟ್ಟರೆ, 361 00:24:00,148 --> 00:24:01,566 ನೀನು ನನ್ನ ಮಾಹಿತಿದಾರ ಆಗುತ್ತೀಯ. 362 00:24:02,150 --> 00:24:05,236 ಅಂದರೆ, ಅದು ಪೊಲೀಸ್ ಅಲ್ಲ, ಆದರೆ ಪೊಲೀಸರಿಗೆ ಹತ್ತಿರವಿದ್ದಂತೆ. 363 00:24:07,029 --> 00:24:09,657 -ಅದು ಸ್ವಲ್ಪ ಭಯಾನಕ ವಿಷಯ. -ಇದು ಭಯಾನಕ ಕೆಲಸ. 364 00:24:09,740 --> 00:24:11,200 ನಾನು ಹಾಗೆ ಮಾಡಿದರೆ… 365 00:24:11,993 --> 00:24:13,870 ನನಗೆ ಹಣ ಸಿಗುತ್ತದಾ? 366 00:24:13,953 --> 00:24:15,037 -ಥತ್, ಕೆವಿನ್. -ಏನು? 367 00:24:15,121 --> 00:24:17,790 -ನಿನ್ನ ನಡೆಯನ್ನ ಸುಲಭವಾಗಿ ಊಹಿಸಬಹುದು-- -ಸದಾ ಒಂದೇ ಥರ ಇರುತ್ತೇನೆ ಅಷ್ಟೇ. 368 00:24:17,874 --> 00:24:20,293 -ನಾವಿಬ್ಬರೂ ಸ್ನೇಹದ ಹಂತದಲ್ಲಿದ್ದೀವಿ. -ನಾನು ನಂಬಲರ್ಹ. 369 00:24:20,376 --> 00:24:21,502 ಹೊಟ್ಟೆಪಾಡು ನೋಡಬೇಕು. 370 00:24:23,004 --> 00:24:26,674 ನನಗೆ ನಿನ್ನ ಮೇಲೆ ಕೋಪ ಇಲ್ಲ. ತಾಳು, ಸ್ವಲ್ಪ ಇರು, ಅಲ್ಲಿಗೇ ನಿಲ್ಲಿಸು. 371 00:24:27,592 --> 00:24:28,843 ಅದು ಫಿಂಚ್ ಅಲ್ಲ. 372 00:24:28,926 --> 00:24:33,055 ಇಲ್ಲ, ಇಲ್ಲ. ಆತ ಡಾಕ್ಟರ್ ಡಾನ್, ತಲೆ ತಿನ್ನುವ ಮನುಷ್ಯ, 373 00:24:33,139 --> 00:24:36,058 ಸ್ನಾನತೊಟ್ಟಿಯತ್ತ ತನ್ನ ಕೊನೆಯ ಲಿಫ್ಟ್ ಪ್ರಯಾಣ ಮಾಡುತ್ತಿದ್ದಾನೆ. 374 00:24:36,142 --> 00:24:38,936 ಬೆಳಿಗ್ಗೆ 7:48ಕ್ಕೆ ಐದನೇ ಮಹಡಿಯಲ್ಲಿದ್ದಂತಿದೆ, 375 00:24:39,020 --> 00:24:41,105 ವಸತಿ 11 ಅದೇ ಮಹಡಿಯಲ್ಲಿರುವುದು. 376 00:24:41,189 --> 00:24:43,608 -ಅದನ್ನು ನನಗೆ ಪ್ರಿಂಟ್ ಮಾಡಿ ಕೊಡು. ಸರಿನಾ? -ಹಾಂ. 377 00:24:43,691 --> 00:24:47,361 ಹೌದು ಸರ್, ಕೊನೆಗೂ ಇವತ್ತು ಒಂದು ಒಳ್ಳೆಯ ದಿನವಾಗಲಿದೆ. 378 00:24:47,445 --> 00:24:49,739 -ಎಲ್ಲಿಗೆ ಹೋಗುತ್ತಿದ್ದೀರಿ? -ನಾನೊಂದು ಕೆಲಸ ಮುಗಿಸಬೇಕಾಗಿದೆ. 379 00:24:49,822 --> 00:24:52,658 ಆದರೆ ನೀನು ಏನು ಮಾಡಬೇಕೆಂದು ಈಗಾಗಲೇ ಗೊತ್ತಿದೆ. ಅಲ್ವಾ, ಡೆಪ್ಯುಟಿ ಕೆವ್? 380 00:24:53,910 --> 00:24:55,036 ಹೌದು ಸರ್, ಗೊತ್ತು. 381 00:24:55,786 --> 00:24:56,621 ಹಾಂ, ನಿನಗೆ ಗೊತ್ತು. 382 00:25:00,208 --> 00:25:01,375 "ಡೆಪ್ಯೂಟಿ ಕೆವ್." 383 00:25:03,961 --> 00:25:07,673 ಸರಿ, ಸಮಾಧಾನ. ಸ್ವಲ್ಪ ಶಾಂತವಾಗಿರು. 384 00:25:08,591 --> 00:25:12,136 ಡೇ 34 385 00:25:50,675 --> 00:25:53,094 ಏನು ಹೇಳುವುದೋ ತಿಳಿಯುತ್ತಿಲ್ಲ. ಇದೆಲ್ಲವೂ ವಿಚಿತ್ರವಾಗಿದೆ. 386 00:25:54,845 --> 00:25:55,721 ಹೌದು. 387 00:25:58,432 --> 00:25:59,684 ಆ ಸೂಟ್‌ಕೇಸ್‌ನಲ್ಲಿ ಏನಿದೆ? 388 00:26:00,768 --> 00:26:04,188 ಇದು ಆಲಿವರ್‌ನದ್ದು. ಇದರಲ್ಲಿ ಅವನ ಎಲ್ಲಾ ವಸ್ತುಗಳಿವೆ, ಜೊತೆಗೆ ನನ್ನವೂ ಇವೆ. 389 00:26:05,815 --> 00:26:08,067 ಅವನನ್ನು 5:00 ಗಂಟೆಗೆ ಭೇಟಿಯಾಗಲಿದ್ದೇನೆ, 390 00:26:08,150 --> 00:26:10,486 ಆದರೆ ಅದಕ್ಕೂ ಮೊದಲು ನಿನ್ನನ್ನು ನೋಡಬೇಕು ಎಂದುಕೊಂಡೆ. 391 00:26:12,905 --> 00:26:14,115 ಎಲ್ಲಿಗೆ ಹೋಗಲಿದ್ದೀರಿ? 392 00:26:16,909 --> 00:26:18,661 ಅಲ್ಲಿಗೆ ಹೋದ ಮೇಲೆ ತಿಳಿಸುತ್ತೇನೆ. 393 00:26:23,833 --> 00:26:25,084 ನಂಬಲಾಗುತ್ತಿಲ್ಲ. 394 00:26:26,752 --> 00:26:28,629 ಡಾನ್ ದರಿದ್ರ ಟ್ರಾಕ್ಸ್ಲರ್. 395 00:26:32,466 --> 00:26:33,676 ಅವನು ಸಾಯಲೇಬೇಕಿತ್ತು. 396 00:26:34,302 --> 00:26:35,386 ನಿನಗದು ಗೊತ್ತು. 397 00:26:37,054 --> 00:26:38,472 ನಿನಗೆ ಏನು ನೆನಪಿದೆಯೋ ಗೊತ್ತಿಲ್ಲ, 398 00:26:38,556 --> 00:26:41,058 ಆದರೆ ಆತ ಸತ್ತು ಮಣ್ಣಾಗುವುದೇ ಅವನಿಗೆ ಸರಿಯಾದ ಶಿಕ್ಷೆ. 399 00:26:42,935 --> 00:26:46,772 ನನಗೆ ನೆನಪಿದೆ, ನೀನು ಅವನನ್ನು ಎಷ್ಟು ದ್ವೇಷಿಸುತ್ತಿದ್ದೆ ಎಂದು, 400 00:26:49,275 --> 00:26:52,486 ಮತ್ತು ಅವನು ನಿನ್ನ ವಿರುದ್ಧ ನಿರ್ಬಂಧಕಾಜ್ಞೆ ತೆಗೆದುಕೊಂಡಿದ್ದ ಎಂದು. 401 00:26:57,491 --> 00:26:58,534 ಹೌದು. 402 00:26:59,577 --> 00:27:02,788 ಇಂದು ಬೆಳಿಗ್ಗೆ ಆತ ಆಲಿವರ್‌ನನ್ನು ನೋಡಲು ಬಂದಾಗ, 403 00:27:02,872 --> 00:27:06,459 ಶೇನ್‌ಗೆ ಆಲಿವರ್ ಬರೆದಿದ್ದ ಈ ಪತ್ರವನ್ನು ತಂದಿದ್ದ. 404 00:27:12,757 --> 00:27:14,842 ಎಲ್ಲದಕ್ಕೂ ತಾನೇ ಜವಾಬ್ದಾರಿ ತೆಗೆದುಕೊಳ್ಳಲು ಅವನು ಬಯಸಿದ್ದ, 405 00:27:14,925 --> 00:27:16,677 ಆದರೆ ಡಾನ್ ಹಾಗೆ ಮಾಡಲು ಬಿಡಲಿಲ್ಲ. 406 00:27:19,305 --> 00:27:20,389 ನೀನು ಹೇಳಿದ್ದು ಸರಿಯಾಗಿತ್ತು. 407 00:27:22,224 --> 00:27:25,353 ಮತ್ತು ನಾನು ಆಲಿವರ್‌ನ ಪರವಾಗಿ ಸಬೂಬುಗಳನ್ನು ಹೇಳುತ್ತಿಲ್ಲ, ಖಂಡಿತ ಇಲ್ಲ. 408 00:27:28,022 --> 00:27:31,942 ಮತ್ತು ಅವನನ್ನು ದ್ವೇಷಿಸುವುದನ್ನು ನಿಲ್ಲಿಸಿದ್ದು ನನಗೆ ನೆಮ್ಮದಿ ನೀಡಿದೆ ಎಂದುಕೊಳ್ಳುತ್ತೇನೆ. 409 00:27:40,409 --> 00:27:42,912 -ನಿನ್ನ ಪ್ರಕಾರ, ನಾನು ಹುಚ್ಚಿ ಅಂತ ಗೊತ್ತು-- -ನನಗೆ ಗೊತ್ತು, ನೀನು ಹುಚ್ಚಿ. 410 00:27:46,248 --> 00:27:47,875 ಆದರೆ ನೀನು ಏನು ಮಾಡಬೇಕಿತ್ತೋ ಅದನ್ನೇ ಮಾಡಿದೆ. 411 00:27:52,088 --> 00:27:53,964 ನೀನು ಹೋಗಬೇಕಾಗಿ ಬಂದಿದ್ದಕ್ಕೆ ನನಗೆ ಬೇಸರವಿದೆ. 412 00:27:55,841 --> 00:27:56,967 ಅಮ್ಮನಿಗೆ ಏನು ಹೇಳಿದೆ? 413 00:27:58,969 --> 00:28:00,054 ಇನ್ನೂ ಏನೂ ಇಲ್ಲ. 414 00:28:01,514 --> 00:28:03,974 ಗೊತ್ತಲ್ಲಾ, ಆಕೆ ಈಗ ಸಂಪೂರ್ಣ ಹೊಸ ವ್ಯಕ್ತಿಯಾಗಿದ್ದಾರೆ, 415 00:28:04,058 --> 00:28:06,143 ಈಗ ಆಕೆ ಬೀದಿಗೆ ಬೀಳುವ ಭಯವಿಲ್ಲದ ಕಾರಣ. 416 00:28:10,564 --> 00:28:11,899 ನನ್ನ ಪ್ರಕಾರ, ಆಕೆಗೆ ಅರ್ಥವಾಗುತ್ತದೆ. 417 00:28:13,192 --> 00:28:16,779 ಶೇನ್ ತರಹ ನೀನೂ ಜೈಲಿಗೆ ಹೋಗುವುದು ನಮ್ಮಿಬ್ಬರಿಗೂ ಇಷ್ಟವಿಲ್ಲ. 418 00:28:20,741 --> 00:28:22,910 ಸಿಯಾರಳಿಗೆ ಇದೇ ಸರಿಯಾದ ದಾರಿ ಎಂದು ನನಗೆ ಗೊತ್ತು. 419 00:28:25,955 --> 00:28:27,957 ಕಷ್ಟದ ವಿಷಯವೆಂದರೆ, ಇನ್ಮುಂದೆ ಮೇಗನ್ ಸಿಗುವುದಿಲ್ಲ. 420 00:28:29,333 --> 00:28:31,794 -ಅದು ನಿಜವಲ್ಲ. -ಹೌದು, ಅದು ನಿಜ. 421 00:28:32,920 --> 00:28:34,588 ನೀನು ಈಗಾಗಲೇ ಹೋಗಿಬಿಟ್ಟಿದ್ದೀಯ. 422 00:28:35,381 --> 00:28:37,174 ಹಾಗಾದರೆ ನಾವಿಬ್ಬರೂ ಏಕೆ ಹೋಗಬಾರದು? 423 00:28:38,551 --> 00:28:43,848 ನಿನಗೆ ಗೊತ್ತಲ್ಲ? ಬರೀ ನೀನು ಮತ್ತು ನಾನು, ಇದೆಲ್ಲದರಿಂದ ದೂರ ಹೋಗಬಹುದು. 424 00:28:43,931 --> 00:28:46,559 ನೀನು ಪ್ರೌಢಶಾಲೆಯಲ್ಲಿ ಹೇಳುತ್ತಿದ್ದೆಯಲ್ಲ, ಹಾಗೆಯೇ ಇರುತ್ತದೆ, ಅಲ್ವಾ? 425 00:28:46,642 --> 00:28:49,353 ಬೇರೆ ಎಲ್ಲಾದರೂ ಹೊಸ ಜೀವನ ಆರಂಭಿಸೋಣ, ಎಲ್ಲಾದರೂ ಉತ್ತಮವಾದ ಜಾಗದಲ್ಲಿ. 426 00:28:50,855 --> 00:28:53,816 ಹೊಸ ಮರ್ಸಿಡಿಸ್ ಕಾರು ಕೊಳ್ಳುವಷ್ಟು ಹಣ ಆ ಬ್ಯಾಗಿನಲ್ಲಿದೆ, ಮತ್ತು-- 427 00:28:53,899 --> 00:28:55,693 ನಿಲ್ಲಿಸು. ಸುಮ್ಮನಿರು, ಆಯ್ತಾ? 428 00:28:57,570 --> 00:28:58,612 ಇದು ನೋವು ಕಡಿಮೆ ಮಾಡುತ್ತಿಲ್ಲ. 429 00:29:06,287 --> 00:29:07,913 ನಾನು ಮನೆಗೆ ಹೋಗಬೇಕು. 430 00:29:10,916 --> 00:29:15,963 ಆದರೆ ನೀನು ಎಲ್ಲೇ ಇದ್ದರೂ, ನಾನು ನಿನ್ನನ್ನು ನೋಡಲು ಬರುತ್ತೇನೆ. 431 00:29:16,922 --> 00:29:18,007 ಮಾತು ಕೊಡುತ್ತೀಯಾ? 432 00:29:19,884 --> 00:29:20,759 ಹೌದು. 433 00:29:22,344 --> 00:29:23,304 ಹೌದು. 434 00:29:25,306 --> 00:29:27,433 ನಿನಗೆ ಪ್ರಥಮ ದರ್ಜೆಯ ಟಿಕೆಟ್ ಕೊಡಿಸುತ್ತೇನೆ. 435 00:29:27,516 --> 00:29:29,685 ಸಾಮಾನ್ಯ ದರ್ಜೆಯ ಟಿಕೆಟ್ ಸಾಕು. 436 00:29:54,668 --> 00:29:55,503 ಹೇ. 437 00:29:57,213 --> 00:29:58,047 ಹೇ. 438 00:30:01,509 --> 00:30:02,343 ಹೇಗಿದ್ದೀರಿ? 439 00:30:04,720 --> 00:30:05,846 ಚೆನ್ನಾಗಿಲ್ಲ. 440 00:30:10,559 --> 00:30:11,393 ಹೌದು. 441 00:30:13,604 --> 00:30:14,438 ಹೌದು. 442 00:30:18,651 --> 00:30:21,070 ನಾನು ಧನ್ಯವಾದ ಹೇಳಲು ಬಂದೆ… 443 00:30:23,155 --> 00:30:24,198 ಎಲ್ಲದಕ್ಕೂ. 444 00:30:25,533 --> 00:30:26,534 ನೀವು… 445 00:30:27,618 --> 00:30:30,996 ಸದಾ ನನ್ನನ್ನು ನೋಡಿಕೊಂಡಿದ್ದೀರಿ. ನನ್ನನ್ನು ಮನೆಯವರಂತೆ ನಡೆಸಿಕೊಂಡಿದ್ದೀರಿ, ಹಾಗೂ-- 446 00:30:31,080 --> 00:30:32,039 ನೀನು ಮನೆಯವನೇ. 447 00:30:35,334 --> 00:30:40,005 ನಾನು ಇಲ್ಲಿಗೆ ಬಂದಿದ್ದು, ಮತ್ತು… 448 00:30:40,798 --> 00:30:42,925 ನಿಮ್ಮ ಹತ್ತಿರ ಕೆಲಸ ಮಾಡಿದ್ದು, ಆಲಿಸನ್‍ಗೆ ಇಷ್ಟವಿರಲಿಲ್ಲ, 449 00:30:43,008 --> 00:30:45,219 ಮತ್ತು ಅದು ನಿಮ್ಮ ದಾಂಪತ್ಯದಲ್ಲಿ ಸಾಕಷ್ಟು ಒತ್ತಡ ತಂದಿತ್ತು, 450 00:30:45,302 --> 00:30:49,223 ಮತ್ತು ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. 451 00:30:49,306 --> 00:30:53,185 ನಾನು… ಕ್ಷಮಿಸಿ ಎಂದು ಹೇಳಬೇಕಿತ್ತು. 452 00:30:58,232 --> 00:31:00,067 ಆಕೆ ನನ್ನ ಬಗ್ಗೆ ಹೇಳಿದ್ದು ಸರಿಯಿತ್ತೇನೋ, ಗೊತ್ತಲ್ಲ? 453 00:31:00,150 --> 00:31:02,069 ಬಹುಶಃ, ಆಕೆ ನನ್ನ ಬಗ್ಗೆ ಹೇಳಿದ್ದು ಸರಿಯಿರಬಹುದು. 454 00:31:02,152 --> 00:31:03,112 ಏನು ನಡೆಯುತ್ತಿದೆ? 455 00:31:21,589 --> 00:31:25,009 ಟುಡೇ 456 00:31:34,059 --> 00:31:40,065 ಸಾಕ್ಷ್ಯ ಕೊಠಡಿ 457 00:31:41,692 --> 00:31:44,695 ಹಾಗಾದರೆ, ಆತ ನಿನಗೆ ಉಡುಗೊರೆಗಳನ್ನು ಕೊಟ್ಟಮೇಲೆ, ನೀನು ಅವನ ಜೊತೆ ಮಲಗಿದೆ. 458 00:31:44,778 --> 00:31:50,326 ಹೌದು, ಕೇಳಲು ಅದು ಇನ್ನೂ ಕೆಟ್ಟದಾಗಿದೆ, ಆದರೆ, ಹಾಂ, ಹೌದು, ಅದು ನಿಜ. 459 00:31:50,409 --> 00:31:53,829 ನಾನು ಅವನನ್ನು ಮೊದಲು ಭೇಟಿಯಾಗಿದ್ದು ಅವನ ವಸತಿಯಲ್ಲಿ. 460 00:31:56,290 --> 00:32:01,545 ನಾನು ಅಲ್ಲಿಗೆ ಹೋಗಿದ್ದು ವಿಚಾರಣೆಗೆ, ಆದರೆ ಅವನು ನನ್ನ ಜೊತೆ ಸರಸವಾಡುತ್ತಿದ್ದ, 461 00:32:01,629 --> 00:32:05,966 ಹಾಗಾಗಿ, ಅವನ ಆ ಸನ್ನೆಗಳನ್ನ ನೋಡಿ, ಅವನಿಗೆ ಏನು ಬೇಕೆಂದು ನನಗೆ ಗೊತ್ತಾಯಿತು. 462 00:32:06,550 --> 00:32:08,761 ನಾನು ಯಾರ ಕೈಗೊಂಬೆಯೂ ಆಗಿರಲಿಲ್ಲ. ನಾನು ಕೇವಲ… 463 00:32:13,432 --> 00:32:15,851 ನನಗೆ ಅನಿಸಿತು, ನಾನು ಸಾಕು ಎಂದು ಹೇಳಿದರೆ, 464 00:32:15,934 --> 00:32:18,437 ಅವನು ಹೆದರುತ್ತಾನೆ, ಮತ್ತು ನನ್ನನ್ನು ಬಿಟ್ಟುಬಿಡುತ್ತಾನೆ ಎಂದು. 465 00:32:18,520 --> 00:32:22,316 ಆದರೆ, ಹೌದು, ಅವನು ಹಾಗೆ ಮಾಡಲ್ಲ ಅಂತ ಈಗ ನನಗೆ ಗೊತ್ತಾಯಿತು, 466 00:32:22,399 --> 00:32:24,485 ಮತ್ತು ಈಗ ಹೆದರುವ ಸರದಿ ನನ್ನದು. 467 00:32:32,826 --> 00:32:34,828 ವೈಸ್ ಜೊತೆ ಮಾತಾಡುತ್ತೇನೆ, ಅಷ್ಟೇ ನಾನು ಹೇಳಬಲ್ಲೆ. 468 00:32:34,912 --> 00:32:38,499 ಆದರೆ ನಿನ್ನ ಜೀವನವಿಡೀ ನಿನ್ನ ಮನೆಯ ಮುಂದೆ ಕಾರು ನಿಲ್ಲಿಸಿ ಕಾಯಲು ನಮ್ಮಿಂದಾಗಲ್ಲ. 469 00:32:38,582 --> 00:32:40,501 ನನಗೆ ಗೊತ್ತು. ಅದು ನನ್ನ ಸಮಸ್ಯೆ, ನಿಮ್ಮದಲ್ಲ. 470 00:32:41,126 --> 00:32:44,213 ಅಷ್ಟರೊಳಗೆ, ಕಾನಲಿ ಜೊತೆ ಮಾತಾಡಿ ರಾಜಿ ಮಾಡಿಕೊಂಡರೆ ನಿನಗೆ ಒಳ್ಳೆಯದು. 471 00:32:45,464 --> 00:32:46,882 ಅದು ನನ್ನ ಕೈಯಲಿಲ್ಲ. 472 00:32:46,965 --> 00:32:49,843 ಅವನು ಹಗೆತನ ಸಾಧಿಸುವವನಲ್ಲ, ನಿನ್ನ ಮೇಲಂತೂ ಅಲ್ಲ. 473 00:32:49,927 --> 00:32:53,055 ಅವನು ತುಂಬಾ ಒಳ್ಳೆಯವನು, ಲೀ. ಅವನ ಜಾಗ ತುಂಬಲು ಯಾರಿಂದಲೂ ಆಗಲ್ಲ. 474 00:32:54,723 --> 00:32:56,308 ನನಗೆ ಗೊತ್ತು. 475 00:32:56,392 --> 00:32:59,978 ನಾವೆಲ್ಲರೂ ಇಲ್ಲಿ ಬಯಸುವುದು ಒಂದನ್ನೇ. ಹೋಗಿ ಕೆಲಸ ನೋಡು. 476 00:33:00,437 --> 00:33:01,647 ಸರಿ. 477 00:33:01,730 --> 00:33:02,773 ಕೊನೆಯ ಉಪಕಾರ? 478 00:33:03,315 --> 00:33:05,693 ಇಲಾಖೆಯವರು ನಿನ್ನ ಬೆನ್ನು ಬೀಳದಂತೆ ನೋಡಿಕೊಳ್ಳುವುದನ್ನು ಬಿಟ್ಟು? 479 00:33:07,736 --> 00:33:10,322 ಕಾರ್ಲ್ ಹಾಗೂ ನಾನು ದಿ ಕ್ರಾಸಿಂಗ್ಸ್ ಕೇಸನ್ನು ಬೇರೆಯವರಿಗೆ ನೀಡಬೇಕೆಂದಿದ್ದೇವೆ. 480 00:33:10,948 --> 00:33:11,990 ಕೇಸ್ ಮುಗಿಸೋದರಲ್ಲಿದ್ದಿರಲ್ವಾ? 481 00:33:12,074 --> 00:33:13,075 ಹೌದು, ಹತ್ತಿರವಿದ್ದೇವೆ. 482 00:33:13,158 --> 00:33:16,286 ಆದರೆ ಶಂಕಿತರಲ್ಲಿ ಒಬ್ಬನ ಜೊತೆ ನನಗೆ ಸಂಬಂಧವಿದೆ. 483 00:33:17,913 --> 00:33:19,164 ಫಿಂಚ್ ಒಬ್ಬ ಶಂಕಿತ. 484 00:33:20,708 --> 00:33:21,834 ಇರಬಹುದು. 485 00:33:32,636 --> 00:33:35,889 ಅಲ್ಲಿ ಆ ಕಂಬದ ತುದಿಯಲ್ಲಿ ಕಪ್ಪು ಹಕ್ಕಿ ಇದೆಯಲ್ಲ, ನಿನಗೆ ಕಾಣಿಸುತ್ತಿದೆಯಾ? 486 00:33:35,973 --> 00:33:36,807 ಹಾಂ, ಕಾಣಿಸುತ್ತಿದೆ. 487 00:33:36,890 --> 00:33:37,808 ಹೌದಾ? 488 00:33:37,891 --> 00:33:38,851 ಅದರ ಮುಖ ಕಾಣಿಸುತ್ತಿದೆ. 489 00:33:39,601 --> 00:33:41,019 -ವಿಕಾರವಾಗಿದೆ, ಅಲ್ವಾ? -ಹಾಂ. 490 00:33:41,103 --> 00:33:43,397 ಹಾಂ. ಬೇರೆ ಏನು ಕಾಣಿಸುತ್ತಿದೆ? 491 00:33:44,106 --> 00:33:45,065 ವಿಮಾನ. 492 00:33:46,442 --> 00:33:47,276 ಹೇ, ಮಕ್ಕಳೇ. 493 00:33:48,527 --> 00:33:51,989 ಹಾಯ್, ಆಂಟಿ ಲೀ. ಅಪ್ಪ ತಮ್ಮ ಹಳೆಯ ಬೈನಾಕ್ಯುಲರ್ಸ್ ತೆಗೆದುಕೊಳ್ಳಲು ಹೇಳಿದರು. 494 00:33:53,198 --> 00:33:54,992 ಅದು ನನ್ನ ಹಳೆಯ ಬೈನಾಕ್ಯುಲರ್ಸ್. 495 00:33:56,285 --> 00:33:57,494 ನಾನದನ್ನು ತೆಗೆದುಕೊಳ್ಳಬಹುದೇ? 496 00:33:57,578 --> 00:33:59,037 ಅಂದರೆ, ನನಗೆ ಬೇರೆ ದಾರಿ ಇದೆಯಾ? 497 00:34:00,873 --> 00:34:02,875 ನಾನು ಮುಂದಿನ ಬಾಗಿಲು ಬೀಗ ಹಾಕಿದೆ. ಅದು ತೆರೆದಿತ್ತು. 498 00:34:03,333 --> 00:34:04,501 ನನ್ನ ಫ್ರಿಡ್ಜ್ ಕೂಡ ತೆರೆದಿತ್ತಾ? 499 00:34:05,836 --> 00:34:07,296 ನಿನಗೆ ವೆನ್ಮೋದಲ್ಲಿ ಹಣ ಕಳಿಸುತ್ತೇನೆ. 500 00:34:07,671 --> 00:34:09,130 ನಿನಗೊಂದು ಹಾಟ್ ಡಾಗ್ ಮಾಡಿಕೊಡಲಾ? 501 00:34:11,175 --> 00:34:12,259 ಹಾಗಾದರೆ, ಅದು ಹೇಗೆ ನಡೆಯಿತು? 502 00:34:13,010 --> 00:34:14,803 ಮೊದಲು ನೀನು ಹೇಳು. 503 00:34:15,679 --> 00:34:16,597 ಚೆನ್ನಾಗಿ ನಡೆಯಿತು. 504 00:34:16,929 --> 00:34:20,184 ರುಸೋ ಪ್ರಕರಣವನ್ನು ಫ್ಲಿನ್ ಶಾನನ್‌ಗೆ ವರ್ಗಾಯಿಸಲು ಒಪ್ಪಿದಳು. 505 00:34:21,726 --> 00:34:23,603 ಆತ ಡಿಟೆಕ್ಟಿವ್ ಆದಾಗ ನೀನು ಅವನನ್ನು ಏನೆಂದು ಕರೆದಿದ್ದೆ? 506 00:34:23,687 --> 00:34:25,731 ಅವನನ್ನು 'ಸೋಮಾರಿ ಗೂಬೆ' ಎಂದಿದ್ದೆ ಅನಿಸುತ್ತೆ. 507 00:34:25,813 --> 00:34:27,024 ಹೌದು, ಹೌದು. 508 00:34:27,107 --> 00:34:29,693 ಹೇ, ಕೇಳು, ಆತ ಹೆಚ್ಚು ಪ್ರಶ್ನೆಗಳನ್ನು ಕೇಳುವುದಿಲ್ಲ. 509 00:34:30,194 --> 00:34:31,360 ಈ ಕೆಲಸಕ್ಕೆ ಅವನೇ ಅತ್ಯಂತ ಸೂಕ್ತ. 510 00:34:31,445 --> 00:34:33,489 ಈ ವಿಷಯದಲ್ಲಿ, ಮತ್ತು ಇದೊಂದೇ ಸಲ, ಅವನೇ ಸೂಕ್ತ. 511 00:34:36,074 --> 00:34:39,870 ಅಂದರೆ, ಟ್ರಾಕ್ಸ್ಲರ್ ಕಟ್ಟಡದೊಳಗೆ ಹೋಗುತ್ತಾನೆ, ಹೊರಗೆ ಬರುವುದೇ ಇಲ್ಲ. 512 00:34:40,829 --> 00:34:45,208 ಅವನನ್ನು ಕೊಂದಿದ್ದು ಯಾರು, ನಮ್ಮ ಹುಡುಗನಾ ಅಥವಾ ಆ ಹುಡುಗಿನಾ? 513 00:34:45,292 --> 00:34:46,627 ಮೇಗನ್ ಮಾರ್ಟಿನ್ನೇ ಕೊಂದದ್ದು. 514 00:34:47,585 --> 00:34:48,587 ಏಕೆ ಹಾಗೆ ಹೇಳುತ್ತೀಯಾ? 515 00:34:48,670 --> 00:34:50,547 ಟ್ರಾಕ್ಸ್ಲರ್ ಸೇಂಟ್ ಲೆಡ್ಜರ್‌ನ ಮನೋವೈದ್ಯ. 516 00:34:50,630 --> 00:34:55,427 ಆತನಿಗೆ ಇವನ ಬಗ್ಗೆ ತುಂಬಾ ಗೊತ್ತಿತ್ತು. ಅದು ಅವನ ಸ್ವಾತಂತ್ರ್ಯಕ್ಕೆ ಅಪಾಯವಾಗಿತ್ತು. 517 00:34:55,511 --> 00:34:57,094 ಹಾಂ, ಅದಕ್ಕೆ ಅವನೇ ಕೊಂದಿದ್ದು ಅನಿಸುತ್ತೆ. 518 00:34:57,179 --> 00:34:58,180 ಇಲ್ಲ. 519 00:35:00,182 --> 00:35:01,183 ಇದು ಅವಳೇ. 520 00:35:02,643 --> 00:35:03,560 ನನ್ನನ್ನು ನಂಬು. 521 00:35:05,270 --> 00:35:06,605 ಆಕೆ ಅವನನ್ನ ಕಳೆದುಕೊಳ್ಳಲು ಬಯಸಲಿಲ್ಲ. 522 00:35:08,732 --> 00:35:11,235 -ಯಾವ ಮಾಹಿತಿಯ ಆಧಾರದ ಮೇಲೆ ಹೇಳುವೆ? -ಊಹೆ. 523 00:35:12,569 --> 00:35:13,987 ನನ್ನ ಊಹೆ ಸದಾ ಸರಿ ಅಂತ ನಿನಗೆ ಗೊತ್ತು. 524 00:35:15,239 --> 00:35:16,323 ಸರಿ. 525 00:35:28,043 --> 00:35:30,546 ಹೇ, ನೋಡು, ಬಹುಶಃ ನಾನು ಕೇಳುವುದು ಸರಿಯಲ್ಲವೇನೋ, 526 00:35:32,381 --> 00:35:34,258 ಆದರೆ ನಾನು ಕೇಳಲೇಬೇಕು. 527 00:35:34,341 --> 00:35:37,678 ನಾವು ಪ್ರತಿದಿನ ಕೆಲಸಕ್ಕೆ ಬರುವ ಈ ಜಾಗದಲ್ಲಿ ಇರುವುದು ತುಂಬಾ ದುಃಖಕರವಾಗಿದೆ, 528 00:35:37,761 --> 00:35:40,848 ಆದರೆ ನೀನು, "ನನ್ನಿಂದ ಆಗಲ್ಲ, ಲೀಜ್, 529 00:35:40,931 --> 00:35:43,684 ನಾನು ಇಲ್ಲಿಂದ ಹೋಗಬೇಕು. ನನಗೆ ಈ ಜಾಗ ಇಷ್ಟವಿಲ್ಲ." ಎನ್ನುತ್ತಿದ್ದೆ. 530 00:35:45,310 --> 00:35:47,396 ಕಾರ್ಲ್, ನೀನು… 531 00:35:51,316 --> 00:35:52,276 ನನಗೆ ಅರ್ಥವಾಗುತ್ತೆ. 532 00:35:54,403 --> 00:35:55,487 ಸರಿನಾ? ನನಗೆ ಅರ್ಥವಾಗುತ್ತೆ. 533 00:35:56,530 --> 00:35:58,657 ಆದರೆ, ನನಗೆ ತಿಳಿಯಬೇಕು… 534 00:36:00,951 --> 00:36:02,327 ನೀನು ಏನು ಮಾಡಲಿದ್ದೀಯ ಎಂದು. 535 00:36:16,383 --> 00:36:20,053 ನಾನು ಗ್ರಿಲ್ ಮೇಲೆ ಈ ಹಾಟ್ ಡಾಗ್ ಹಾಕಿ, ಸೀದುಹೋಗುವಂತೆ ಮಾಡುತ್ತೇನೆ, 536 00:36:20,929 --> 00:36:22,264 ನಿನಗೆ ಇಷ್ಟವಾಗುವ ಹಾಗೆ. 537 00:36:25,267 --> 00:36:26,101 ಹೌದಾ? 538 00:36:26,184 --> 00:36:27,144 ಹೌದು. 539 00:36:28,562 --> 00:36:32,482 ನಾನು ಇದರ ಮೇಲೆ ಬನ್ ಇಟ್ಟು, ಅದನ್ನೂ ಸೀದುಹೋಗುವಂತೆ ಮಾಡುತ್ತೇನೆ. 540 00:36:34,526 --> 00:36:35,903 ಏಕೆಂದರೆ ನಿನಗೆ ಹಾಗಿದ್ದರೆ ಇಷ್ಟ. 541 00:36:38,989 --> 00:36:40,657 ಮತ್ತು ನಿನಗೆ ಬೇಕಾದದ್ದು ನಿನಗೆ ಸಿಗುತ್ತದೆ. 542 00:36:44,244 --> 00:36:45,120 ಒಳ್ಳೆಯದು. 543 00:36:46,288 --> 00:36:47,748 ಮತ್ತು ಅದನ್ನು ಮರೆಯಬೇಡ. 544 00:36:54,796 --> 00:36:58,675 ಡೇ 34 545 00:37:01,303 --> 00:37:05,682 ಬಾಸ್ಟನ್ ಪೊಲೀಸ್ 546 00:37:08,894 --> 00:37:11,021 ಇದನ್ನು ಮಾಡಲು ಖಚಿತವಾಗಿ ಬಯಸುತ್ತೀಯಾ? 547 00:37:12,356 --> 00:37:13,440 ಹೌದು. 548 00:37:14,858 --> 00:37:15,734 ಸಿಯಾರ… 549 00:37:17,903 --> 00:37:21,740 ಮೇಗನ್‍ಗೆ ಅವಳ ಜೀವನ ಮತ್ತೆ ಸಿಗಬೇಕು. 550 00:37:21,823 --> 00:37:23,325 ಆದರೆ ಈ ಬಾರಿ ಇದು ನಿನ್ನ ತಪ್ಪಲ್ಲ. 551 00:37:23,408 --> 00:37:24,242 ಹೌದು. 552 00:37:25,452 --> 00:37:26,453 ಎಲ್ಲವೂ ನನ್ನದೇ ತಪ್ಪು. 553 00:37:28,497 --> 00:37:31,667 ನನಗೆ ಗೊತ್ತು, ನಿನ್ನ ಪ್ರಕಾರ, ನೀನು ಅವಳಿಗಾಗಿ ನಿನ್ನನ್ನು ತ್ಯಾಗ ಮಾಡುವ ಮೂಲಕ 554 00:37:31,750 --> 00:37:33,293 ಪಾಪಗಳನ್ನ ತೊಳೆದುಕೊಳ್ಳುತ್ತಿರುವೆ ಎಂದು, 555 00:37:33,377 --> 00:37:36,713 ಆದರೆ ಅವಳಿಗೆ ಬೇಕಾಗಿರುವುದು ಇದೇನಾ? 556 00:37:41,927 --> 00:37:42,928 ನನ್ನನ್ನು ನೋಡು. 557 00:37:44,304 --> 00:37:45,806 ವಿಷಯಗಳು ಯಾವಾಗಲೂ ಸುಲಭವಾಗಿರಲಿಲ್ಲ, 558 00:37:46,765 --> 00:37:51,520 ಆದರೆ ಆಲಿಸನ್ ಜೊತೆಗಿದ್ದುದು ನನ್ನ ಜೀವನದ ಅತ್ಯುತ್ತಮ ಸಂಗತಿಯಾಗಿತ್ತು. 559 00:37:52,437 --> 00:37:54,481 ನಾನು ಅದನ್ನು ಎಂದಿಗೂ ಬಿಟ್ಟುಕೊಡುತ್ತಿರಲಿಲ್ಲ. 560 00:37:55,482 --> 00:37:57,859 ಅದೇ ಸರಿಯಾದ ಕೆಲಸವೆಂದು ನನಗೆ ಅನ್ನಿಸಿದ್ದರೂ ಸಹ. 561 00:38:04,700 --> 00:38:08,537 ಹೇ. ಧನ್ಯವಾದ. ಎಲ್ಲದಕ್ಕೂ. 562 00:38:17,379 --> 00:38:18,255 ಹೇ. 563 00:38:19,464 --> 00:38:22,300 ಕಾನೂನು ತನಿಖೆ ಶುರುವಾದಾಗ, ನಾವಿಬ್ಬರೂ ಭೇಟಿಯೇ ಆಗಿಲ್ಲ ಎನ್ನುತ್ತೇನೆ. 564 00:38:25,512 --> 00:38:26,680 ಮತ್ತೆ ಸಿಗೋಣ. 565 00:39:20,525 --> 00:39:22,152 ಮಿಸ್ ವೈಸ್? 566 00:39:22,235 --> 00:39:23,111 ಹಾಂ? 567 00:39:23,195 --> 00:39:24,905 ಮಿಸ್ಟರ್ ಸೇಂಟ್ ಲೆಡ್ಜರ್ ತಡವಾಗಿ ಬರುವ ಹಾಗಿದೆ. 568 00:39:24,988 --> 00:39:27,657 ನೀವು ವಿಮಾನ ಹತ್ತುತ್ತೀರಾ? ಇದು ಹೊರಡುವ ಸಮಯ. 569 00:39:29,910 --> 00:39:33,121 ನನಗೆ ಒಂದೆರಡು ನಿಮಿಷ ಕೊಡುವಿರಾ? ಏಕೆಂದರೆ ಆತ ನನಗೆ ಇನ್ನೂ ಕರೆ ಮಾಡಿಲ್ಲ. 570 00:39:34,581 --> 00:39:37,292 ಅಸಲಿಗೆ, ಮತ್ತು, ಇದು ತಮಾಷೆಯ ಪ್ರಶ್ನೆಯಾಗಿ ಕಾಣಿಸಬಹುದು, 571 00:39:37,375 --> 00:39:42,047 ಆದರೆ ನಮ್ಮ ವಿಮಾನ ಎಲ್ಲಿಗೆ ಹೋಗುತ್ತಿದೆ ಎಂದು ನಿಮಗೆ ಗೊತ್ತೇ? 572 00:39:42,881 --> 00:39:45,217 ರೇಕ್ಯಾವಿಕ್. ಮುಂಚೆ ಅಲ್ಲಿಗೆ ಹೋಗಿದ್ದೀರಾ? 573 00:39:47,385 --> 00:39:50,180 ಹೋಗಿದ್ದೇನೆ, ಹೌದು. 574 00:39:50,263 --> 00:39:53,058 ನಾವು ಸಾಮಾನ್ಯವಾಗಿ ಕ್ರಿಸ್‌ಮಸ್‍ಗೆ ಹೋಗುತ್ತೇವೆ, ತುಂಬಾ ಸುಂದರವಾಗಿರುತ್ತದೆ. 575 00:39:54,726 --> 00:39:56,353 ನಿಮಗೆ ಅಲ್ಲಿ ಮನೆ ಇದೆಯಾ? 576 00:39:56,436 --> 00:39:59,022 ಇದೆ. ಇದೆ. 577 00:40:00,065 --> 00:40:02,400 ಅಂದರೆ, ಅದು ನಮ್ಮ ಮನೆ ಅನಿಸುತ್ತೆ. 578 00:40:03,610 --> 00:40:06,571 ನನಗೆ ಗೊಂದಲವಾಗುತ್ತದೆ. ನಾನು ಅಲ್ಲೇ ಇರುತ್ತೇನೆ. 579 00:40:06,655 --> 00:40:07,823 ಧನ್ಯವಾದಗಳು. 580 00:40:46,444 --> 00:40:47,529 ತಡವಾಗಿದ್ದಕ್ಕೆ ಕ್ಷಮಿಸು. 581 00:40:47,612 --> 00:40:49,030 ಓಹ್, ದೇವರೇ. 582 00:40:49,865 --> 00:40:52,409 ಸಧ್ಯ, ದೇವರೇ! ನೀನು ನನ್ನನ್ನು ಹೆದರಿಸಿಬಿಟ್ಟೆ. 583 00:40:53,493 --> 00:40:55,328 ಹೌದಾ? ನಾನು ಬರಲ್ಲ ಎಂದುಕೊಂಡೆಯಾ? 584 00:40:56,621 --> 00:40:58,415 ಇಲ್ಲ, ಬರುತ್ತೀಯಾ ಎಂದು ಗೊತ್ತಿತ್ತು. 585 00:41:03,753 --> 00:41:08,216 -ಹಾಗಾದರೆ, ರೇಕ್ಯಾವಿಕ್‍ಗಾ? -ಹೌದು. 586 00:41:08,300 --> 00:41:11,553 ಬಿಸಿನೀರಿನ ಬುಗ್ಗೆಯ ಮೇಲೆ ನನಗೊಂದು ಸ್ವಂತ ಜಾಗ ಇದೆ. 587 00:41:11,636 --> 00:41:14,639 ಮಿಷೆಲಿನ್ ಬಾಣಸಿಗ, ಖಾಸಗಿ ಭದ್ರತೆ, ಪಂಚತಾರಾ ಸೌಲಭ್ಯಗಳಿರಲಿವೆ. 588 00:41:14,723 --> 00:41:16,516 ಅದ್ಭುತವಾಗಿದೆ. 589 00:41:17,893 --> 00:41:19,102 ನಿನಗೇನು ಅನಿಸುತ್ತೆ? 590 00:41:23,064 --> 00:41:24,316 ನನಗನಿಸುತ್ತೆ… 591 00:41:26,902 --> 00:41:30,363 ಕೇಳಲು ಅಪ್ಪಟ ನರಕದಂತೆ ಇದೆ ಅಂತ. 592 00:41:31,448 --> 00:41:34,326 ನನ್ನನ್ನು ಕ್ಷಮಿಸು. ಅದು ನನಗೆ ಆಗಿಬರುವುದಿಲ್ಲ. 593 00:41:34,409 --> 00:41:37,287 ಸರಿ. ಹಾಗಾದರೆ, ನಾವು ರೇಕ್ಯಾವಿಕ್‍ಗೆ ಹೋಗಬೇಕೆಂದಿಲ್ಲ. 594 00:41:38,788 --> 00:41:39,915 ನಿನಗೆ ಎಲ್ಲಿಗೆ ಹೋಗಬೇಕು? 595 00:41:55,013 --> 00:41:56,806 ಅಮ್ಮ 596 00:42:00,477 --> 00:42:05,190 ಪ್ರೀತಿಯ ಅಮ್ಮ, ನಾನು ಆಲಿವರ್‌ನನ್ನು ಕ್ಷಮಿಸಿದಂತೆ ನೀವು ಸಹ ನನ್ನನ್ನು ಕ್ಷಮಿಸುವಿರೆಂದು ಭಾವಿಸುವೆ. 597 00:42:05,273 --> 00:42:07,651 ಅವನು ನಾವಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ನಮ್ಮಂತೆಯೇ ಇದ್ದಾನೆ. 598 00:42:07,734 --> 00:42:10,862 ಡಿಟೆಕ್ಟಿವ್ ಫ್ಲಿನ್ ಶ್ಯಾನನ್ 599 00:42:13,281 --> 00:42:14,950 ಪ್ರತಿಯೊಬ್ಬರಲ್ಲೂ ರಹಸ್ಯಗಳಿವೆ. 600 00:42:17,077 --> 00:42:18,828 ಪ್ರತಿಯೊಬ್ಬರೂ ಸುಳ್ಳು ಹೇಳುತ್ತಾರೆ. 601 00:42:20,830 --> 00:42:24,626 ಯಾವ ಕಾರಣಕ್ಕೋ ಗೊತ್ತಿಲ್ಲ, ಇತ್ತೀಚೆಗೆ ಅದೃಷ್ಟ ನನ್ನ ಕಡೆ ಇರುವಂತಿದೆ. 602 00:42:26,211 --> 00:42:28,672 ಬಹುಶಃ ಈ ವಿಶ್ವವು ಕರ್ಮ ಸಿದ್ಧಾಂತವನ್ನು ನಂಬುತ್ತದೆ. 603 00:42:34,261 --> 00:42:36,346 ನನ್ನ ತಪ್ಪುಗಳಿಗೆ ಆಲಿವರ್ ಬೆಲೆ ತೆತ್ತನೇ? 604 00:42:36,429 --> 00:42:39,015 ಕ್ರೂರ ಸೀಪೋರ್ಟ್ ಕೊಲೆಗಾಗಿ ಡ್ರಗ್ ವ್ಯಾಪಾರಿ ಬಂಧನ 605 00:42:39,099 --> 00:42:40,892 ಅವನ ತಪ್ಪುಗಳಿಗೆ ನಾನು ಬೆಲೆ ತೆತ್ತೆನೆಂದು ಗೊತ್ತು. 606 00:42:41,643 --> 00:42:42,852 ನಾವೂ ಸಹ. 607 00:42:43,812 --> 00:42:45,438 ವರ್ಷಗಟ್ಟಲೆ ಅದಕ್ಕಾಗಿ ಬೆಲೆ ತೆತ್ತಿದ್ದೇವೆ. 608 00:42:49,609 --> 00:42:52,195 ಕ್ರಿಸ್ಟಿನ್ ಮಾರ್ಟಿನ್ ಅವರಿಗೆ ಪಾವತಿಸಿ ಎರಡು ಮಿಲಿಯನ್ ಡಾಲರ್ 609 00:42:52,279 --> 00:42:56,449 ಆದರೆ ಈಗ, ನಾವೆಲ್ಲರೂ ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ನೀವು ಒಪ್ಪುವಿರೆಂದು ಭಾವಿಸುತ್ತೇನೆ. 610 00:43:16,678 --> 00:43:19,139 ಕೆಲವರು ಒಟ್ಟಿಗೆ ಇರಲೆಂದೇ ಹುಟ್ಟಿರುತ್ತಾರೆ. 611 00:43:20,265 --> 00:43:22,600 ಎಂತಹ ಕೆಟ್ಟ ಸಂದರ್ಭಗಳಿದ್ದರೂ ಸಹ. 612 00:43:36,740 --> 00:43:38,533 ನಾನು ಆಲಿವರ್‌ನನ್ನು ಹುಡುಕಿಕೊಂಡು ಬಂದಾಗ, 613 00:43:38,616 --> 00:43:41,202 ನಾವು ಎಂದಿಗೂ ಊಹಿಸಿರಲಿಲ್ಲ, ಇಂದು ಈ ಹಂತಕ್ಕೆ ಬಂದು ತಲುಪುವೆವು ಎಂದು. 614 00:43:42,704 --> 00:43:46,458 ಇಲ್ಲಿಗೆ ತಲುಪಲು ಎಂತಹ ಕತ್ತಲೆ ಮತ್ತು ತಿರುವುಗಳ ಹಾದಿಯನ್ನು ನಾವು ಕ್ರಮಿಸುತ್ತೇವೆ ಎಂದು. 615 00:43:46,541 --> 00:43:49,794 ಅವನು ತನ್ನ ಮನಸ್ಸಿನ ಮಾತು ಕೇಳಲು ಎಲ್ಲಾ ಅಪಾಯದ ಸೂಚನೆಗಳನ್ನು ಕಡೆಗಣಿಸಿದ. 616 00:43:49,878 --> 00:43:53,965 ಹಾಗೂ ಭವಿಷ್ಯ ವಿಭಿನ್ನವಾಗಿರುತ್ತದೆಂದು ಭಾವಿಸಿ, ನಾನು ಹಿಂದೆ ನಡೆದದ್ದನ್ನು ಕಡೆಗಣಿಸಿದೆ. 617 00:43:54,049 --> 00:43:57,719 ಈ ಎಲ್ಲಾ ತಪ್ಪುಗಳು ಒಂದು ಸರಿಯಾದ ದಾರಿಯನ್ನು ಮಾಡಬಲ್ಲವು ಎಂದು ಭಾವಿಸಿದ್ದು ನಮ್ಮ ಮುಗ್ಧತೆ. 618 00:43:57,802 --> 00:44:00,180 ಆದರೆ ಈ ಬಾರಿ, ಹಾಗೆಯೇ ಆಯಿತು. 619 00:44:00,805 --> 00:44:04,559 ಎಲ್ಲರೂ ನನ್ನನ್ನು ಹುಚ್ಚಿ ಎನ್ನುತ್ತಾರೆ, ಆದರೆ, ನಿಜ ಹೇಳಬೇಕೆಂದರೆ, ಅವನೂ ಹುಚ್ಚನೇ. 620 00:44:08,229 --> 00:44:10,648 ಕೆಲವೊಮ್ಮೆ ನಾನು ನಮ್ಮ ಮುದ್ದಾದ ಮಗು ಶೇನ್‍ನನ್ನು ನೋಡಿ, 621 00:44:10,732 --> 00:44:11,858 ಅವನನ್ನು ಕೇಳುತ್ತೇನೆ, 622 00:44:13,735 --> 00:44:18,531 "ನೀನು ನಿಮ್ಮಮ್ಮನ ತರಹ ಹುಚ್ಚನಾ, ಅಥವಾ ನಿಮ್ಮಪ್ಪನ ತರಹ ಹುಚ್ಚನಾ?" ಎಂದು. 623 00:44:21,368 --> 00:44:24,079 ನಾಳೆ ಏನಾಗುತ್ತದೆಂದು ನೋಡಲು ಕಾತರಳಾಗಿದ್ದೇನೆ. 624 00:44:24,162 --> 00:44:27,540 ಮತ್ತು ಅದರ ಮಾರನೇ ದಿನ, ಮತ್ತು ಅದರ ಮಾರನೇ ದಿನ. 625 00:44:34,047 --> 00:44:36,299 ಪ್ರೀತಿಯಿಂದ, ನಾನು. 626 00:46:39,130 --> 00:46:41,132 ಉಪ ಶೀರ್ಷಿಕೆ ಅನುವಾದ: ಮಾಲತಿ ಉಮೇಶ್ ಗೌಡ 627 00:46:41,216 --> 00:46:43,218 ಸೃಜನಶೀಲ ಮೇಲ್ವಿಚಾರಕರು: ಅಭಿಜಿತ್ ರ