1 00:00:14,440 --> 00:00:15,920 ಕಾಯಿಸಿದ್ದಕ್ಕೆ ಕ್ಷಮಿಸು. 2 00:00:16,000 --> 00:00:17,600 ಈ ಹಿಂದೆ 3 00:00:18,160 --> 00:00:19,680 ನೀನಿದಕ್ಕೆ ಬೆಲೆ ತೆರುವೆ. 4 00:00:21,200 --> 00:00:22,960 ಇಂದು ಮ್ಯಾಂಟಿಕೋರ್ ಇಟಲಿಯ ಪುನರ್ಜನ್ಮ. 5 00:00:25,160 --> 00:00:26,120 ಏನಾಯಿತು? 6 00:00:33,360 --> 00:00:36,440 ನೀನು ಈ ಸಂದೇಶ ಕೇಳುತ್ತಿರುವೆ ಎಂದರೆ, ನಾನು ಬದುಕಿಲ್ಲ. 7 00:00:38,680 --> 00:00:40,680 ಈಗ ನಮ್ಮ ಬಳಿ ಶಸ್ತ್ರವಿದೆ, ಹಾಗಾಗಿ 8 00:00:40,760 --> 00:00:41,920 ಎಲ್ಲವೂ ಬದಲಾಗಲಿವೆ. 9 00:00:42,000 --> 00:00:44,040 ನಾನು ಕಣ್ಮರೆಯಾಗಬೇಕು. 10 00:00:45,360 --> 00:00:47,960 ಈ ಸಲ ನಾವು ನಿಜವಾಗಿಯೂ ಜಗತ್ತನ್ನು ಬದಲಾಯಿಸಬಹುದು. 11 00:00:53,560 --> 00:00:56,120 ನಾನು ಡಿಯಾನಾ ಕವಲಿಯಾರಿ, ಸಿಟಡೆಲ್ ಏಜೆಂಟ್ 12 00:00:56,240 --> 00:00:59,400 ಮತ್ತು ಮ್ಯಾಂಟಿಕೋರ್ ಆಪರೇಟಿವ್ ಏಜೆಂಟ್ 3-0-8. 13 00:01:00,680 --> 00:01:04,280 ದಯವಿಟ್ಟು ಯಾರಾದರೂ ಉತ್ತರಿಸಿ. ಉಳಿದಿರೋದು ನಾನು ಮಾತ್ರ ಅಲ್ಲ ಅಂತ ಹೇಳಿ. 14 00:01:09,160 --> 00:01:12,040 ಸಿಟಡೆಲ್ ವಿರುದ್ಧದ ದಾಳಿಯ ನಂತರದ 19 ನೇ ದಿನ. 15 00:01:12,120 --> 00:01:16,040 ಮಾಂಟಿಕೋರ್ ಇಟಲಿಗೆ ಸಹಭಾಗಿಗಳಿಂದ ಭಾರೀ ನಿರ್ಬಂಧಗಳಿವೆ. 16 00:01:16,120 --> 00:01:19,280 ಸಿಟಡೆಲ್ನಿಂದ ತಂತ್ರಜ್ಞಾನ ಕದ್ದು ಬಚ್ಚಿಟ್ಟಿದ್ದು ಇವರಿಗೆ ಗೊತ್ತಾಯ್ತು. 17 00:01:19,680 --> 00:01:22,840 ಆ ತಂತ್ರಜ್ಞಾನ ಮ್ಯಾಂಟಿಕೋರ್ ಫ್ರಾನ್ಸ್, ಜರ್ಮನಿಯ ಕೈಯಲ್ಲಿದೆ. 18 00:01:25,240 --> 00:01:27,560 ಅದನ್ನು ನಾಶಮಾಡಲು ನಾನು ಎಲ್ಲವನ್ನೂ ಮಾಡಿದೆ. 19 00:01:27,680 --> 00:01:29,080 ನಿರ್ವಹಿಸಿದೆನೇನೋ ಗೊತ್ತಿಲ್ಲ, 20 00:01:29,160 --> 00:01:30,920 ಅದನ್ನು ಮರುನಿರ್ಮಿಸಲು ಸಾಧ್ಯವಾದರೆ. 21 00:01:32,760 --> 00:01:34,880 ನಾನು ಈಗ ಮ್ಯಾಂಟಿಕೋರನ್ನು ಬಿಡಲು ಆಗದು. 22 00:01:36,000 --> 00:01:38,440 ನಿರ್ಬಂಧಗಳ ನಂತರ, ಇನ್ನಷ್ಟು ನಿಯಂತ್ರಿಸುತ್ತಿದ್ದಾರೆ. 23 00:01:41,680 --> 00:01:44,040 ದಯವಿಟ್ಟು ಯಾರಾದರೂ ಉತ್ತರಿಸಿ. 24 00:01:45,800 --> 00:01:48,800 ನಾನು ಮಾತ್ರ ಉಳಿದಿರೋದು ಅನ್ನೋದನ್ನ ಊಹಿಸಿಕೊಳ್ಳಲೂ ನನಗಾಗಲ್ಲ. 25 00:01:49,560 --> 00:01:52,720 ಈ ಸಾಧನವನ್ನು ನನ್ನ ಮನೆಯಲ್ಲಿ ಇರಿಸುವುದು ಮರಣದಂಡನೆಯಂತೆ. 26 00:01:55,560 --> 00:01:57,240 ದಯವಿಟ್ಟು ಯಾರಾದರೂ ಉತ್ತರಿಸಿ. 27 00:03:08,760 --> 00:03:13,880 ಸಿಟಡೆಲ್ ಡಿಯಾನಾ 28 00:03:47,240 --> 00:03:49,320 ಮಾರಾಟಕ್ಕೆ ಇದೆ 29 00:04:09,440 --> 00:04:10,280 ಮತ್ತು ಇದು? 30 00:04:11,400 --> 00:04:12,760 ನನಗೊಂದು ಕಾಪಿ ಮಾಡಿಕೊಂಡೆ. 31 00:04:14,320 --> 00:04:16,000 ಅಪ್ಪ-ಅಮ್ಮನ ಮನೆಯ ನೆನಪಾಗುತ್ತೆ. 32 00:04:19,480 --> 00:04:22,600 ಅಂದಹಾಗೆ, ನನಗೊಂದು ಶಿಪ್ಪಿಂಗ್ ಕಂಪನಿ ಸಿಕ್ಕಿತು. 33 00:04:23,000 --> 00:04:25,240 ನೀನು ನಿರ್ಧರಿಸಿದ ನಂತರ ಎಲ್ಲವನ್ನೂ ಕಳಿಸುವೆ. 34 00:04:25,360 --> 00:04:26,800 - ಧನ್ಯವಾದ. - ತೊಂದರೆಯಿಲ್ಲ. 35 00:04:26,920 --> 00:04:30,440 - ಮನೆ ಮಾರಾಟವಾಗುತ್ತದೆ ಅನಿಸುತ್ತಾ? - ಹೌದು. 36 00:04:31,080 --> 00:04:32,080 ಅನಿಸುತ್ತೆ. 37 00:04:33,360 --> 00:04:34,240 ಆಮೇಲೆ? 38 00:04:37,160 --> 00:04:38,000 ಗೊತ್ತಿಲ್ಲ. 39 00:04:38,800 --> 00:04:41,800 ನಿನಗೆ ಬೇಕಾದಾಗಲೆಲ್ಲಾ ಒಂದು ಕೊಠಡಿ ಇದೆ. ಕಾಯುತ್ತಿರುತ್ತೇವೆ. 40 00:04:44,200 --> 00:04:46,160 - ಎದೊ ಸಂಪರ್ಕಕ್ಕೆ ಬಂದಿದ್ದನಾ? - ಇಲ್ಲ. 41 00:04:48,240 --> 00:04:49,800 ಅದು ಎಂದಿಗೂ ಆಗಿಬರುತ್ತಿರಲಿಲ್ಲ. 42 00:04:51,000 --> 00:04:52,240 ನಿನ್ನ ಕೆಲಸದ ಕಾರಣದಿಂದನಾ? 43 00:04:52,320 --> 00:04:53,200 ಸಾಕಷ್ಟು ಕಾರಣಗಳು. 44 00:04:56,720 --> 00:04:57,920 ನಿನ್ನ ಬಗ್ಗೆ ಹೆಮ್ಮೆ ಇದೆ. 45 00:04:58,360 --> 00:05:01,520 ನಮ್ಮ ಹೆತ್ತವರಿಗೆ ನ್ಯಾಯ ಕೊಡಿಸಿದ್ದಕ್ಕೆ ಧನ್ಯವಾದ. 46 00:05:02,440 --> 00:05:03,640 ಸದ್ಯ ನೀನು ಹೊರಬಂದೆ. 47 00:05:05,080 --> 00:05:06,760 ನನಗೂ ನಿನ್ನ ಬಗ್ಗೆ ಹೆಮ್ಮೆ ಇದೆ. 48 00:05:07,240 --> 00:05:11,040 ಇದಕ್ಕಾಗಿ ಇಷ್ಟು ದೊಡ್ಡ ಬೆಲೆ ತೆರಬೇಕಾಗಿದ್ದಕ್ಕೆ ಕ್ಷಮಿಸು. 49 00:05:13,360 --> 00:05:17,000 ಅರ್ಥವಾಗುತ್ತೆ. ನಿಜ ತಿಳಿಯುವವರೆಗೂ ನೀನು ನಿಲ್ಲುತ್ತಿರಲಿಲ್ಲ. 50 00:05:21,680 --> 00:05:22,600 ಹೋಗೋಣ. 51 00:05:40,080 --> 00:05:41,120 ನಾವು ಆರಾಮಾಗಿರ್ತೀವಾ? 52 00:05:45,000 --> 00:05:46,400 ತುಂಬಾ ಚೆನ್ನಾಗಿರ್ತೀವಿ. 53 00:05:55,720 --> 00:05:56,880 ಬಾಯ್, ದೊಡ್ಡಮ್ಮ. 54 00:05:56,960 --> 00:05:58,360 ಬಾಯ್, ಚಿನ್ನ! 55 00:06:34,280 --> 00:06:35,560 ದಿನ 32, 56 00:06:36,200 --> 00:06:38,000 ಸಿಟಡೆಲ್ ವಿರುದ್ಧದ ದಾಳಿಯ ನಂತರ. 57 00:06:39,840 --> 00:06:44,000 ಇದು ಸ್ಪಷ್ಟವಾಗಿದೆ, ನಿರ್ಬಂಧಗಳನ್ನ ಹೇರಿದಮೇಲೆ, ಎತ್ತೊರೆ ಝಾನಿಯ ಏಕೈಕ ಉದ್ದೇಶವು 58 00:06:44,080 --> 00:06:47,320 ದೇಶವನ್ನು ಸಂಪೂರ್ಣವಾಗಿ ಅಸ್ಥಿರಗೊಳಿಸುವುದೆಂದು. 59 00:06:47,640 --> 00:06:51,800 ಸಂಸ್ಥೆಯು ಹಲವಾರು ಅಪರಾಧ ಸಂಸ್ಥೆಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ. 60 00:06:52,280 --> 00:06:54,920 ವಿರೋಧ ಪಕ್ಷದ ರಾಜಕಾರಣಿಗಳನ್ನು ಬ್ಲಾಕ್ ಮೇಲ್ ಮಾಡಿ, 61 00:06:56,080 --> 00:06:59,440 ಮಿಲಿಟರಿ ಮತ್ತು ಕಾನೂನು ಇಲಾಖೆಗಳಿಂದ ಗುತ್ತಿಗೆಗಳನ್ನು ಪಡೆಯುತ್ತಿದ್ದಾನೆ. 62 00:07:01,280 --> 00:07:04,560 ನಮ್ಮಂಥ ಏಜೆಂಟರಿಗೆ ಇನ್ನು ಯಾವುದೇ ಸ್ವಾತಂತ್ರ್ಯವಿಲ್ಲ. 63 00:07:05,040 --> 00:07:06,280 ನಾವು ಅವರ ಸಶಸ್ತ್ರ ಶಾಖೆ. 64 00:07:11,120 --> 00:07:12,600 ನನಗೆ ಇನ್ನು ನಿದ್ದೆ ಬರಲ್ಲ. 65 00:07:14,040 --> 00:07:16,480 ನಮ್ಮವರಲ್ಲೊಬ್ಬರು ಈಗಲೂ ನನ್ನ ಸಂದೇಶವನ್ನು 66 00:07:16,840 --> 00:07:18,400 ಕೇಳಿಬರುತ್ತಾರೆಂದು ನಂಬುವೆನು. 67 00:07:22,760 --> 00:07:23,680 ನನಗೆ ಭಯವಾಗಿದೆ. 68 00:07:26,760 --> 00:07:28,040 ಮತ್ತು ಒಂಟಿಯಾಗಿರುವೆನು. 69 00:08:09,680 --> 00:08:10,680 ಹಲೋ. 70 00:08:11,600 --> 00:08:12,680 ಒಳಗೆ ಬರಬಹುದೇ? 71 00:08:13,240 --> 00:08:14,080 ಖಂಡಿತ. 72 00:08:16,400 --> 00:08:17,360 ಹೊರಗೆ ಇರಿ. 73 00:08:30,040 --> 00:08:31,000 ನಾನು ಯಾರು ಗೊತ್ತಾ? 74 00:08:32,000 --> 00:08:32,800 ಹಾಂ. 75 00:08:34,880 --> 00:08:37,040 ನಿನಗೆ ಕೆಲವು ಪ್ರಶ್ನೆಗಳನ್ನ ಕೇಳಬೇಕಷ್ಟೇ. 76 00:08:37,680 --> 00:08:39,240 ಎಲ್ಲಾ ಹೇಗೆ ನಡೆಯಿತೆಂದು ತಿಳಿಯಲು. 77 00:08:42,840 --> 00:08:44,880 ಸಿಟಡೆಲ್ ಏಜೆಂಟನೊಬ್ಬ ಅವನಿಗೆ ಗುಂಡಿಟ್ಟ. 78 00:08:45,760 --> 00:08:47,080 ಅವನಿಗೆ ಏಕಾಏಕಿ ಹೊಡೆದುಬಿಟ್ಟ. 79 00:08:50,280 --> 00:08:51,640 ನಿಮ್ಮಣ್ಣನ ಗಮನ ತಪ್ಪಿಸಿದರು. 80 00:08:53,000 --> 00:08:54,160 ಯಾವುದರಿಂದ? 81 00:08:55,520 --> 00:08:57,440 ಸಿಟಡೆಲ್ ತಂತ್ರಜ್ಞಾನದಿಂದ. 82 00:09:00,320 --> 00:09:03,520 ಆತ ಅಷ್ಟಾಗಿ ಪರಿಚಿತನಲ್ಲ, ಅವನ ಜೊತೆ ಕೆಲವೇ ಕಾರ್ಯಾಚರಣೆ ಮಾಡಿದ್ದೆ. 83 00:09:06,080 --> 00:09:07,520 ಆದರೆ ಅವನೊಬ್ಬ ನಾಯಕನಾಗಿದ್ದ. 84 00:09:09,960 --> 00:09:11,520 ದಾಳಿಯನ್ನ ನೀನು ಒಪ್ಪಿದೆಯಾ? 85 00:09:12,520 --> 00:09:13,760 ಆದೇಶಗಳನ್ನು ಪಾಲಿಸುತ್ತೇನೆ. 86 00:09:15,480 --> 00:09:16,400 ಬೇರೇನೂ ಇಲ್ಲ. 87 00:09:17,520 --> 00:09:18,760 ನಾನು ಅದನ್ನು ಒಪ್ಪಲಿಲ್ಲ. 88 00:09:19,720 --> 00:09:21,400 ಅದು ಈ ರೀತಿ ನಡೆಯಬಾರದಿತ್ತು. 89 00:09:22,880 --> 00:09:24,720 ಮ್ಯಾಂಟಿಕೋರ್ ಈ ರೀತಿ ಇರಬಾರದು. 90 00:09:43,960 --> 00:09:45,480 ಏನನ್ನ ನಿರೀಕ್ಷಿಸೋದೆಂದು ಗೊತ್ತು. 91 00:09:54,760 --> 00:09:55,760 ವುಲ್ಫ್ಗ್ಯಾಂಗ್. 92 00:09:59,080 --> 00:10:00,160 ಸೆಸಿಲ್, ಹೇಗಿದ್ದೀಯಾ? 93 00:10:04,760 --> 00:10:06,000 ಅಷ್ಟೊಂದು ಮಾತಾಡಲ್ಲ. 94 00:10:07,000 --> 00:10:08,320 ಒಳಗೆ ಹೋಗೋಣ್ವಾ? 95 00:10:08,400 --> 00:10:10,360 ಇಂದು ನಾವು ಚರ್ಚಿಸಲು ಬಹಳಷ್ಟಿದೆ. 96 00:10:38,000 --> 00:10:41,080 ಈ ವಾರಗಟ್ಟಲೆ ವಿರಾಮವು ಎಲ್ಲರಿಗೂ ಪ್ರಯೋಜನ ಆಗಿದೆ ಅಂದುಕೊಳ್ಳುವೆ. 97 00:10:41,600 --> 00:10:43,040 ಪರಿಸ್ಥಿತಿಯನ್ನ ತಿಳಿಗೊಳಿಸಲು. 98 00:10:46,520 --> 00:10:49,040 ಅಸ್ತ್ರದ ಹೆಸರು "ಜುಪಿಟರ್." 99 00:10:50,520 --> 00:10:52,000 ಮತ್ತು ಅದು ಪೂರ್ಣಗೊಂಡಿದೆ. 100 00:10:52,080 --> 00:10:54,040 ಜುಪಿಟರ್ ಮ್ಯಾಂಟಿಕೋರ್ ಯೂರೋಪಿನ ಭವಿಷ್ಯ. 101 00:10:54,480 --> 00:10:57,600 ಸಾರ್ವಜನಿಕ ನೀರಿನ ಸರಬರಾಜನ್ನು ಬಳಸಿ ನಾವದನ್ನು ಹರಡುತ್ತೇವೆ. 102 00:10:58,160 --> 00:10:59,840 ಬೇಗ ಪ್ರಾಥಮಿಕ ಪರೀಕ್ಷೆ ನಡೆಸಿ 103 00:10:59,920 --> 00:11:02,760 ಪ್ರಸರಣ ಗುಣಾಂಕವನ್ನು ಲೆಕ್ಕಾಚಾರ ಮಾಡಿ, 104 00:11:03,120 --> 00:11:05,320 ನಂತರ ನಾವು ಉತ್ಪಾದನೆಯನ್ನು ಆರಂಭಿಸಿ, 105 00:11:05,680 --> 00:11:08,280 ಸಂಪೂರ್ಣ ಜನಸಂಖ್ಯೆಯನ್ನು ತಲುಪುವವರೆಗೆ ಸತತ ಅಲೆಗಳಲ್ಲಿ 106 00:11:09,600 --> 00:11:11,360 ಹೆಚ್ಚಿನದನ್ನು ಬಿಡುಗಡೆ ಮಾಡೋಣ. 107 00:11:12,040 --> 00:11:14,040 ಈಗ ಅಸ್ತ್ರ ನಿಮ್ಮದೇ ಆಗಿರುವುದರಿಂದ 108 00:11:14,480 --> 00:11:17,040 ನಮ್ಮ ಮತ್ತು ನಮ್ಮ ಏಜೆನ್ಸಿಗಳ ಗತಿಯೇನು? 109 00:11:17,120 --> 00:11:19,960 ಎದೊಆರ್ಡೊ, ನಮ್ಮ ನಿರ್ಧಾರವನ್ನು ಅವರಿಗೆ ಹೇಳುವೆಯಾ? 110 00:11:20,440 --> 00:11:24,880 ಜುಪಿಟರ್ ಪ್ರವೇಶವನ್ನ ಯುರೋಪಿಯನ್ ಕೌನ್ಸಿಲ್ ನಡುವೆ ಹಂಚಿಕೊಳ್ಳಲಾಗುವುದೆಂದು ನಿರ್ಧರಿಸಿದೆವು. 111 00:11:25,880 --> 00:11:27,080 ಆದರೆ ಒಂದು ಷರತ್ತು. 112 00:11:28,680 --> 00:11:31,040 ಮೊದಲ ವಿಶ್ಲೇಷಣೆಯ ಹಕ್ಕು ಮ್ಯಾಂಟಿಕೋರ್ ಇಟಲಿಯದು. 113 00:11:31,480 --> 00:11:33,360 - ಯಾವುದರದ್ದು? - ಡೇಟಾದು. 114 00:11:34,680 --> 00:11:37,120 ಕೋಟ್ಯಾಂತರ ಡೇಟಾ ತುಣುಕುಗಳಿಗೆ ಪ್ರವೇಶ ಸಿಗುತ್ತೆ. 115 00:11:37,640 --> 00:11:40,560 ಪ್ರತಿ ಏಜೆನ್ಸಿ ಅವನ್ನು ತಾವೇ ವ್ಯಾಖ್ಯಾನಿಸುವುದನ್ನು ತಡೆಯಲು, 116 00:11:41,360 --> 00:11:42,920 ನಾವು ಮೊದಲು ಪರಿಶೀಲಿಸುತ್ತೇವೆ. 117 00:11:46,040 --> 00:11:48,120 ನಿಮಗೆ ಸೂಕ್ತವಾದದ್ದನ್ನು ನಮಗೆ ತಿಳಿಸುವಿರಿ. 118 00:11:48,560 --> 00:11:51,080 ಹಂಚಿಕೊಳ್ಳುವ ನಿಮ್ಮ ಕಲ್ಪನೆಯು ಸದಾ ಆಕರ್ಷಕ. 119 00:11:51,600 --> 00:11:54,440 ಮೂರನೆಯ ಅಂಶದ ಮೇಲೂ ನಮಗೆ ವಿಶೇಷ ನಿಯಂತ್ರಣ ಇರಲಿದೆ. 120 00:11:57,120 --> 00:11:58,200 ಮೂರನೇ ಮೂಲಧಾತುನಾ? 121 00:11:59,200 --> 00:12:00,680 ಅಸ್ತ್ರದ ಇಟಾಲಿಯನ್ ಭಾಗ. 122 00:12:05,200 --> 00:12:06,640 ಕಾರ್ಯನಿರ್ವಹಿಸುತ್ತಿದ್ದೀವಾ? 123 00:12:08,520 --> 00:12:10,280 ಖಂಡಿತವಾಗಿ. ಬಹುಮಟ್ಟಿಗೆ. 124 00:12:10,360 --> 00:12:14,600 ಸೂಕ್ತ ಸಮಯಕ್ಕೆ ಹೆಚ್ಚಿನ ವಿವರಗಳನ್ನ ಪಡೆಯುವಿರಿ. ಈಗ ನಾವೆಲ್ಲರೂ ಒಪ್ಪುತ್ತೇವೆಯೇ ನೋಡೋಣ. 125 00:12:15,080 --> 00:12:15,920 [ಜರ್ಮನ್ನಿನಲ್ಲಿ] ಹೌದು... 126 00:12:17,440 --> 00:12:19,360 ನಮಗೆ ಆಯ್ಕೆ ಇದೆಯೇನೋ ಎಂಬಂತೆ. 127 00:12:20,840 --> 00:12:22,840 [ಫ್ರೆಂಚಲ್ಲಿ] ಹೊಸ ಮ್ಯಾಂಟಿಕೋರ್ ಯುರೋಪ್ ರಚನೆ. 128 00:12:24,200 --> 00:12:26,960 ಎಲ್ಲಾ ಏಜೆನ್ಸಿಗಳೂ ಸಮಾನವೇ. ಇತರರಿಗಿಂತ ಸ್ವಲ್ಪ ಹೆಚ್ಚು. 129 00:12:27,600 --> 00:12:30,200 ಅದೇ ಪ್ರಜಾಪ್ರಭುತ್ವದ ತಳಹದಿಯಲ್ಲವೇ? 130 00:12:40,320 --> 00:12:43,720 ಏನು ಹೇಳುತ್ತೀರೆಂದು ನನಗೆ ಮೊದಲೇ ಮಾಹಿತಿ ನೀಡದಿರೋದು ಅಭ್ಯಾಸವಾಗ್ತಿದೆ. 131 00:12:43,800 --> 00:12:47,040 ಸಭೆಗಳು ಜಾಝ್ ಸಂಗೀತದಂತೆ, ಲಯದೊಂದಿಗೆ ಸಾಗಬೇಕು. 132 00:12:47,120 --> 00:12:48,320 ನವೀನ ಪರಿಹಾರಗಳಿರಬೇಕು. 133 00:12:48,840 --> 00:12:50,440 ನೀವು ಕೇಳೋದು ಶಾಸ್ತ್ರೀಯ ಸಂಗೀತ. 134 00:12:50,840 --> 00:12:53,480 - ಅವರಿಗೆ ಹೇಳಲು ಇದು ಸೂಕ್ತ ಸಮಯವಾಗಿತ್ತು. - ನಿಮ್ಮ ಪ್ರಕಾರ. 135 00:12:53,560 --> 00:12:55,000 ನನ್ನ ಪ್ರಕಾರವಲ್ಲ. 136 00:12:55,080 --> 00:12:57,680 ಇದು ಕಾರ್ಯಸಾಧ್ಯವೆಂದು ಲಘುವಾಗಿ ಪರಿಗಣಿಸುತ್ತಿದ್ದೀರಿ. 137 00:12:57,760 --> 00:13:00,280 ನನ್ನ ಜೊತೆ ಮಾತಾಡಿದ್ದರೆ, ಹಾಗಲ್ಲ ಅಂತ ತಿಳಿಯುತ್ತಿತ್ತು. 138 00:13:01,800 --> 00:13:02,880 ಹಾಗಲ್ವಾ? 139 00:13:02,960 --> 00:13:05,440 ಸಿಟಡೆಲ್ ಉತ್ಪನ್ನದ ಒಳಗೆ ನಾವು ಸೃಷ್ಟಿಸಿರುವ 140 00:13:06,440 --> 00:13:08,000 ಮೂಲಧಾತುವನ್ನು ಸೇರಿಸಬೇಕು. 141 00:13:08,440 --> 00:13:11,200 ಎಷ್ಟು ತಾಂತ್ರಿಕ ಮಾರ್ಪುಕಗಳಿವೆ ಎಂದು ನಿಮಗೆ ಗೊತ್ತಾ? 142 00:13:11,280 --> 00:13:15,000 ಇದು ಕೋಣೆಯಲ್ಲಿ ಪೀಠೋಪಕರಣಗಳನ್ನ ಸ್ಥಳಾಂತರಿಸುವ ಹಾಗಲ್ಲ. 143 00:13:15,400 --> 00:13:17,440 ಇದು ಹೇಗೆಂದರೆ, ಒಗಟನ್ನು ಬೇರ್ಪಡಿಸಿ, 144 00:13:17,880 --> 00:13:20,120 ಇನ್ನೊಂದರ 100 ತುಣುಕುಗಳನ್ನು ಸೇರಿಸಿ, 145 00:13:20,640 --> 00:13:23,400 ಚಿತ್ರವು ಮೂಲಚಿತ್ರಕ್ಕೆ ಹೊಂದಿಕೆಯಾಗಬೇಕೆಂದು ನಿರೀಕ್ಷಿಸೋದು. 146 00:13:23,480 --> 00:13:27,080 ತಾಂತ್ರಿಕ ತೊಂದರೆಯಿಂದಾಗಿ ಎಂದಿಗೂ ಬಿಟ್ಟುಕೊಡಬಾರದು. 147 00:13:28,200 --> 00:13:29,960 ನಿನಗೇನು ತೊಂದರೆ ಕೊಡುತ್ತಿದೆ ಹೇಳು. 148 00:13:31,960 --> 00:13:33,080 ಮೂರನೇ ಮೂಲಧಾತು. 149 00:13:34,240 --> 00:13:35,120 ಕೊಲ್ಲಲು ಇದೆ. 150 00:13:39,000 --> 00:13:40,040 ಹೌದು, ಗೊತ್ತು. 151 00:13:40,560 --> 00:13:43,560 ಅದು ಏನು ಮಾಡಬಲ್ಲದೆಂದು ಗೊತ್ತು. ಎಷ್ಟು ಅಪಾಯಕಾರಿ ಎಂದು ಗೊತ್ತು. 152 00:13:44,040 --> 00:13:45,040 ತಪ್ಪು ತಿಳಿದಿರುವೆ. 153 00:13:46,400 --> 00:13:50,360 ಇದರಷ್ಟು ನಿಖರವಾದ ಅಸ್ತ್ರ ಬೇರೆ ಯಾವುದೂ ಇಲ್ಲ. 154 00:13:51,160 --> 00:13:53,840 ಯಾವುದೇ ಅಕ್ಕ-ಪಕ್ಕದ ಹಾನಿ ಇರಲ್ಲ, ಕೇವಲ ಗುರಿಗಳಷ್ಟೇ. 155 00:13:54,600 --> 00:13:56,320 ಇತಿಹಾಸದಲ್ಲಿ ಒಬ್ಬರನ್ನು ಕೊಲ್ಲಲು 156 00:13:56,400 --> 00:13:59,200 ಲಕ್ಷಾಂತರ ಮಂದಿಯನ್ನು ಕೊಂದ ಉದಾಹರಣೆಗಳನ್ನು ಕೊಡಬೇಕೇ? 157 00:13:59,680 --> 00:14:01,560 ಇಲ್ಲ. ಖಂಡಿತವಾಗಲೂ ಇಲ್ಲ. 158 00:14:02,720 --> 00:14:03,720 ಎದೊಆರ್ಡೊ... 159 00:14:06,400 --> 00:14:07,680 ನಿನಗೆ ಈಗ ಅಧಿಕಾರವಿದೆ. 160 00:14:08,840 --> 00:14:10,720 ಅದರ ಅರ್ಥ ಏನೆಂದು ತಿಳಿದುಕೋ. 161 00:14:37,320 --> 00:14:39,440 ನಿನ್ನ ಹೆಸರು ನಮ್ಮ ಡೇಟಾಬೇಸಲ್ಲಿಲ್ಲ, 162 00:14:39,520 --> 00:14:41,840 ಮತ್ತು ನಮ್ಮ ಸಹಯೋಗದ ಯಾವುದೇ ಕುರುಹು ಇಲ್ಲ. 163 00:14:42,320 --> 00:14:45,400 ನನಗೆ ಭರವಸೆ ಕೊಡುವ ಒಂದು ವಿಷಯವೆಂದರೆ ನೀನಿನ್ನೂ ಅಲ್ಲಿರುವುದು. 164 00:14:45,480 --> 00:14:47,960 ಶತ್ರುವಿನ ರೇಖೆಯ ಹಿಂದೆ ಉಳಿದ ಕೊನೆಯವಳು ನೀನೇ, 165 00:14:48,040 --> 00:14:50,000 ಮತ್ತು ನೀನು ತುಂಬಾ ಧೈರ್ಯದಿಂದಿರಬೇಕು. 166 00:14:51,520 --> 00:14:53,680 - ನಿನ್ನ ಹೆಸರು ನಮ್ಮ... - ಕ್ಷಮಿಸಿ. 167 00:14:53,760 --> 00:14:56,080 ...ಮತ್ತು ನಮ್ಮ ಸಹಯೋಗದ ಯಾವುದೇ ಕುರುಹು ಇಲ್ಲ. 168 00:15:27,240 --> 00:15:28,400 ಆಫೀಸಿಗೆ ಹೋಗೋಣ. 169 00:15:29,960 --> 00:15:30,800 ಖಚಿತವಾಗಲೂ? 170 00:15:38,680 --> 00:15:41,560 - ನನ್ನ ಚಾಲಕರು, ಏಜೆಂಟರು ಎಲ್ಲಿ? - ಅವರು ಮಲಗಿದ್ದಾರೆ ಬಿಡು. 171 00:15:41,640 --> 00:15:43,240 ಎದೊ, ಕ್ಷಮಿಸು, ಇದು ತಮಾಷೆಯಷ್ಟೇ. 172 00:15:43,320 --> 00:15:45,000 ನಿನಗೆ ಬೇಕಾದುದನ್ನು ನಾನು ಕೊಟ್ಟೆ! 173 00:15:45,600 --> 00:15:48,840 ಕೋಟಿ ಕೋಟಿ ಕೊಟ್ಟೆ, ನೀನು ಸ್ವತಂತ್ರಳು, ಹೊರಡಬಹುದು. ಬೇರೇನು ಬೇಕು? 174 00:15:49,240 --> 00:15:51,000 ನಿನಗೇಕೆ ನನ್ನ ಮೇಲೆ ಕೋಪ? 175 00:15:51,080 --> 00:15:52,760 ನೀನು ಒಂದು ತಿಂಗಳು ಕಣ್ಮರೆಯಾದೆ. 176 00:15:57,240 --> 00:15:58,440 ಆದರೂ ಹಿಂತಿರುಗಿದ್ದೇನೆ. 177 00:15:59,640 --> 00:16:01,200 ಮನಸ್ಸನ್ನು ಏಕೆ ಬದಲಾಯಿಸಿದೆ? 178 00:16:05,720 --> 00:16:07,800 ನಾವು ಹೇಳಿದರ ಬಗ್ಗೆ ನಾನು ಯೋಚಿಸಿದೆ. 179 00:16:09,800 --> 00:16:12,280 ಸಾಮಾನ್ಯ ಜೀವನದೊಂದಿಗೆ ಸಂತೋಷವಾಗಿರುವಂತೆ ನಟಿಸಬಹುದು, 180 00:16:13,000 --> 00:16:17,600 ಒಳ್ಳೆಯ ಕೆಲಸ, ಒಳ್ಳೆಯ ಮನೆ, ಆದರೆ ಸತ್ಯವೇನೆಂದರೆ ನಮಗೆ ಹೆಚ್ಚು ಬೇಕು. 181 00:16:20,560 --> 00:16:21,760 ನನಗೆ ಇನ್ನಷ್ಟು ಬೇಕು. 182 00:16:25,320 --> 00:16:27,040 "ಇನ್ನಷ್ಟು" ಅಂದರೆ ಏನು? 183 00:16:31,880 --> 00:16:32,880 ನಿನ್ನ ಜೊತೆ ಇರೋದು. 184 00:17:38,280 --> 00:17:40,240 ಫ್ರಾನ್ಸಲ್ಲಾದ ಕಾರ್ಯಾಚರಣೆಯ ನಂತರ, 185 00:17:40,760 --> 00:17:42,800 ನಾವು ಇಲ್ಲಿ ಮಲಗಿದ್ದೆವು, ತಾನೇ? 186 00:17:43,400 --> 00:17:44,920 ನೀನು ಮಲಗಿದ್ದೆ, ನನಗಾಗಲಿಲ್ಲ. 187 00:17:46,760 --> 00:17:47,680 ಹಾಗಾಗಿ ನಾನು ಎದ್ದೆ, 188 00:17:48,480 --> 00:17:51,280 ಮತ್ತು ಅಸ್ತ್ರದ ಡೇಟಾ ಇರುವ ಆ ಸಾಧನವನ್ನು ನೋಡಿದೆ. 189 00:17:52,960 --> 00:17:54,000 ನನಗೆ ಖಚಿತವಾಗಿತ್ತು... 190 00:17:54,640 --> 00:17:56,080 ಅಂದರೆ, ನನಗೆ ಖಚಿತವಾಗಿದೆ 191 00:17:57,240 --> 00:17:58,560 ಅದು ಅಪಾಯಕಾರಿ ಎಂದು. 192 00:17:59,720 --> 00:18:01,280 ಅದನ್ನು ತೆಗೆದುಕೊಳ್ಳಬಹುದಿತ್ತು. 193 00:18:02,200 --> 00:18:03,640 ಅದನ್ನು ನಾಶಮಾಡಲು ಬಯಸಿದೆಯಾ? 194 00:18:11,920 --> 00:18:15,320 ಅದರಿಂದ ನಮ್ಮಿಬ್ಬರಿಗೂ ತೊಂದರೆ ಆಗಬಹುದೆಂದು ಗೊತ್ತಿತ್ತು, 195 00:18:16,160 --> 00:18:19,000 ಮತ್ತು ಮ್ಯಾಂಟಿಕೋರ್ ಬೇರೆ ಏನಾದರೂ ಕಂಡುಹಿಡಿಯುತ್ತಿತ್ತು. 196 00:18:20,480 --> 00:18:23,080 ಹಾಗಾಗಿ ಅದನ್ನು ಅಲ್ಲೇ ಬಿಟ್ಟುಹೋದೆ. 197 00:18:23,640 --> 00:18:24,960 ಇದನ್ನ ನನಗೇಕೆ ಹೇಳುತ್ತಿರುವೆ? 198 00:18:26,560 --> 00:18:28,560 ಯಾಕೆಂದರೆ ನಾನು ಯಾರೆಂದು ನಿನಗೆ ತಿಳಿಯಬೇಕು. 199 00:18:30,720 --> 00:18:33,000 ಜಗತ್ತನ್ನು ಸುರಕ್ಷಿತ ಸ್ಥಳವನ್ನಾಗಿಸಲು 200 00:18:34,160 --> 00:18:37,200 ಹೋರಾಡುವ ಪ್ರಯತ್ನವನ್ನು ನಾನು ನಿಲ್ಲಿಸಲಾರೆ. 201 00:18:38,200 --> 00:18:41,560 ಆದರೆ ಅದನ್ನು ನಿನ್ನೊಂದಿಗೆ ಮಾತ್ರ ಮಾಡಬಲ್ಲೆ ಅನ್ಸುತ್ತೆ. 202 00:18:42,880 --> 00:18:44,000 ಅಷ್ಟೇ. 203 00:18:57,200 --> 00:18:59,160 ಮ್ಯಾಂಟಿಕೋರ್ ನಿನ್ನ ಹೆತ್ತವರನ್ನು ಕೊಂದರು. 204 00:19:04,640 --> 00:19:08,960 ನಮ್ಮ ಏಜೆನ್ಸಿ ಓಟಿ9732 ವಿಮಾನವನ್ನು ಉರುಳಿಸಿತು, ಅಲ್ಲಿ ಒಬ್ಬ... 205 00:19:10,000 --> 00:19:11,240 ಸಿಟಡೆಲ್ ಏಜೆಂಟ್ ಇದ್ದರು. 206 00:19:14,560 --> 00:19:16,160 ಸಿಸಿಲಿಯಲ್ಲಿ ಹೇಳಬೇಕೆಂದುಕೊಂಡೆ, 207 00:19:17,880 --> 00:19:18,960 ಆದರೆ ಹೇಳಲಾಗಲಿಲ್ಲ. 208 00:19:21,960 --> 00:19:24,280 ನಾನು ಯಾರೆಂದು ನಿನಗೂ ಸಹ ತಿಳಿಯಬೇಕು. 209 00:19:32,560 --> 00:19:34,400 ನಿರ್ಧಾರದಲ್ಲಿ ಭಾಗವಹಿಸಿದ್ದೆಯಾ? 210 00:19:35,160 --> 00:19:36,440 ಹಾಗೆ ಯೋಚಿಸಲೂಬೇಡ. 211 00:19:41,160 --> 00:19:42,160 ನನ್ನನ್ನು ಕ್ಷಮಿಸು. 212 00:20:05,080 --> 00:20:08,160 8 ವರ್ಷಗಳ ಹಿಂದೆ 213 00:20:34,000 --> 00:20:35,560 ಝಾನಿ ಮನೆತನ 214 00:21:36,320 --> 00:21:38,280 ಅವನನ್ನ ಬಿಡು, ಕಾರ್ಯನಿರತನಾಗಿರಬೇಕು. 215 00:21:38,320 --> 00:21:39,560 ಅದು ಅವನಂತಲ್ಲ. 216 00:21:41,400 --> 00:21:43,560 ಅವನಿಗೆ ಇಷ್ಟು ತುರ್ತಾಗಿ ಹೇಳುವುದೇನಿದೆ? 217 00:21:44,400 --> 00:21:45,320 ನಿನಗೆ ಗೊತ್ತಾ? 218 00:21:47,760 --> 00:21:51,400 ನಮಗೆ ಯಾರನ್ನಾದರೂ ಯಾವ ಸಮಯದಲ್ಲಾದರೂ ನಿಯಂತ್ರಿಸುವ ಶಕ್ತಿ ಸಿಗಲಿದೆ, 219 00:21:51,480 --> 00:21:53,440 ಅವರ ಜೀವನದ ಆರಂಭದಿಂದ ಅಂತ್ಯದವರೆಗೂ. 220 00:21:54,280 --> 00:21:55,280 ಹೇಗೆ? 221 00:21:55,360 --> 00:21:58,320 ಫ್ರೆಂಚ್ ಅರ್ಧವು ಸೂಕ್ಷ್ಮದರ್ಶಕ ಪ್ರತಿಬಂಧಕ ವ್ಯವಸ್ಥೆಯಾಗಿ 222 00:21:58,840 --> 00:22:01,680 ಜರ್ಮನ್ ಅರ್ಧಕ್ಕೆ ಸೇರಿಸಲಾಗಿದ್ದು, ಜೈವಿಕ ತಂತ್ರಜ್ಞಾನದ ಘಟಕ 223 00:22:01,760 --> 00:22:04,040 ಮಾನವ ದೇಹದಲ್ಲಿ ಹುದುಗಿಸಲಾಗುವಂತೆ ಇದೆ. 224 00:22:04,120 --> 00:22:05,400 ಪರಾವಲಂಬಿ ಜೀವಿಯಂತೆನಾ? 225 00:22:06,840 --> 00:22:09,040 ಫೋನ್ ಕದ್ದಾಲಿಸಿ ಕಂಪ್ಯೂಟರ್ ಹ್ಯಾಕ್ ಮಾಡಬೇಕಿಲ್ಲ, 226 00:22:09,120 --> 00:22:11,320 ಜನರೇ ಸ್ವತಃ ಮಾಹಿತಿಯ ಮೂಲವಾಗಿರುತ್ತಾರೆ. 227 00:22:12,360 --> 00:22:13,840 ಅವರೇ ಮಾಹಿತಿವಾಹಕರು. 228 00:22:14,240 --> 00:22:17,360 ಅವರೆಲ್ಲರ ಡೇಟಾ ನಮ್ಮ ನಿಯಂತ್ರಣದಲ್ಲಿರುತ್ತದೆ. 229 00:22:19,840 --> 00:22:22,440 ಡಿಯಾನಾ,ಇದೊಂದು ಅಗಾಧ ಶಕ್ತಿ ಎಂದು ನನಗೆ ಗೊತ್ತು. 230 00:22:23,200 --> 00:22:24,440 ಇದನ್ನು ಸರಿಯಾಗಿ ಬಳಸಿದರೆ, 231 00:22:25,600 --> 00:22:28,160 ಶಾಂತಿ ಹಾಗೂ ಸುರಕ್ಷತೆಯನ್ನ ಕಾಪಾಡುವ ಅವಕಾಶವಿರುತ್ತೆ. 232 00:22:28,240 --> 00:22:32,600 ಎಲ್ಲಕ್ಕಿಂತ ಹೆಚ್ಚಾಗಿ, ನಾವು ಯಾವಾಗಲೂ ಆಗಿರಬಹುದಾಗಿದ್ದ ಏಜೆನ್ಸಿಯಾಗಬಹುದು. 233 00:22:36,960 --> 00:22:39,160 ಆದರೆ ಅದು ನನ್ನ ತಂದೆಗೆ ಸಾಕಾಗಲಿಲ್ಲ. 234 00:22:39,240 --> 00:22:42,160 ಆದ್ದರಿಂದ ಮೂರನೇ ಮೂಲಧಾತು ಸೇರಿಸಲು ಪರಿಗಣಿಸುತ್ತಿದ್ದೇವೆ. 235 00:22:44,280 --> 00:22:46,120 ಇದೊಂದು ದೂರದಿಂದ ಕೊಲ್ಲುವ ವಿಧಾನ. 236 00:22:53,400 --> 00:22:54,600 ನೀನು ತಯಾರಿಸಿದೆಯಾ? 237 00:22:54,680 --> 00:22:56,040 ನನ್ನ ಕೆಲಸ ಅಸ್ತ್ರವಿನ್ಯಾಸ. 238 00:22:57,440 --> 00:23:00,200 ಯಾರದೇ ಸಾವು-ಬದುಕನ್ನು ಮ್ಯಾಂಟಿಕೋರ್ ನಿರ್ಧರಿಸಬಹುದು. 239 00:23:00,760 --> 00:23:03,160 ಯಾವುದೇ ಕ್ಷಣದಲ್ಲಿ ಗುಂಡಿ ಒತ್ತಿದರೆ, 240 00:23:03,240 --> 00:23:06,000 ಆ ವ್ಯಕ್ತಿ ತಕ್ಷಣವೇ ಸಹಜ ಸಾವನ್ನಪ್ಪುತ್ತಾರೆ. 241 00:23:07,520 --> 00:23:09,240 ಇದು ಪರಮಾಣು ಬಾಂಬ್ ಇದ್ದಂತೆ. 242 00:23:11,320 --> 00:23:14,360 ಇವೆಲ್ಲವೂ ಗುಂಡಿಯನ್ನು ಒತ್ತುವವರ ಮೇಲೆ ಅವಲಂಬಿಸುತ್ತೆ. 243 00:23:17,400 --> 00:23:20,280 ಅದನ್ನು ಸೇರಿಸಲು ನಿನ್ನ ತಂದೆ ಖಂಡಿತ ಒತ್ತಾಯಿಸುತ್ತಿದ್ದಾರೆ. 244 00:23:26,280 --> 00:23:28,480 ಇದೇನು? ವಿಚಿತ್ರ ಆಕಾರ ಹೊಂದಿದೆ. 245 00:23:32,760 --> 00:23:35,240 ಇದು ನಾನು ವಾಸಿಸುತ್ತಿದ್ದ ಮನೆಯದ್ದು. 246 00:23:37,160 --> 00:23:38,440 ಅದೃಷ್ಟಕ್ಕಾಗಿ. 247 00:23:39,640 --> 00:23:42,080 ನಿನ್ನ ಬಗ್ಗೆ ತಿಳಿಯಬೇಕಾದ ಇನ್ನೂ ಬಹಳಷ್ಟು ವಿಷಯಗಳಿವೆ. 248 00:23:48,520 --> 00:23:51,600 ಮೊದಲಿಗೆ, ಎಲ್ಲಾ ಭರವಸೆಗಳು ಮತ್ತು ಹಣದ ರಾಶಿಯೊಂದಿಗೆ ಹೊರಡುತ್ತಾಳೆ. 249 00:23:51,680 --> 00:23:53,640 ಈಗ ವಾಪಸ್ ಬರಬೇಕೆನ್ನುತ್ತಾಳೆ. 250 00:23:55,360 --> 00:23:58,280 ಪ್ಯಾರಿಸ್ಸಿನಲ್ಲಿ ಅಷ್ಟೆಲ್ಲಾ ಅಪಾಯದ ನಂತರ ಬಿಡುವು ಬೇಕಿತ್ತು. 251 00:23:59,200 --> 00:24:01,720 ಅವಳಿಂದ ನಮಗೇನು ಸಿಕ್ಕಿತೆಂದು ನಿಮಗೆ ನೆನಪಿಸಬೇಕಾ? 252 00:24:03,240 --> 00:24:04,520 ರಾತ್ರಿ ಅವಳೊಂದಿಗಿದ್ದೆಯಾ? 253 00:24:05,560 --> 00:24:06,440 ಹೌದು. 254 00:24:07,040 --> 00:24:08,040 ಅದಕ್ಕೆ ಒಗ್ಗಿಕೊಳ್ಳಿ. 255 00:24:09,120 --> 00:24:10,200 ಈಗ ಎಲ್ಲಿದ್ದಾಳೆ? 256 00:24:10,920 --> 00:24:14,160 ಜುಪಿಟರಿನ ಮೊದಲ ಪ್ರಸರಣ ಪರೀಕ್ಷೆ ನಡೆಸಲು ತಯಾರಿ ನಡೆಸುತ್ತಿದ್ದಾಳೆ. 257 00:24:14,240 --> 00:24:16,200 ನಿನ್ನೆ ಅವಳಿಗೆ ಎಲ್ಲವನ್ನೂ ಹೇಳಿದೆ. 258 00:24:18,040 --> 00:24:19,120 ಹಾಗೆ ಸುಮ್ಮನೆ? 259 00:24:19,480 --> 00:24:20,640 ನನ್ನನ್ನು ಕೇಳದೆಯೇ? 260 00:24:21,600 --> 00:24:25,520 ಅಪ್ಪ, ಒಂದನ್ನು ಅರ್ಥಮಾಡಿಕೊಳ್ಳಿ, ನಾನು ನಿಮ್ಮ ಅನುಮತಿ ಕೇಳುತ್ತಿಲ್ಲ. 261 00:24:26,560 --> 00:24:28,640 - ನಿಮ್ಮಂತೆ ನನಗೂ ಅಧಿಕಾರವಿದೆ. - ಅದೇನೇ. 262 00:24:29,360 --> 00:24:30,360 ನನ್ನಂತೆಯೇ ಇದೆ. 263 00:24:37,280 --> 00:24:38,880 ಎಲ್ಲವನ್ನೂ ನೀನಾಗಿಯೇ ಮಾಡುತ್ತಿರುವೆ. 264 00:24:41,040 --> 00:24:42,280 ಮತ್ತೆ ಮೂರನೆಯ ಮೂಲಧಾತು? 265 00:24:43,160 --> 00:24:44,240 ಬಹುತೇಕ ಮುಗಿದಿದೆ. 266 00:24:46,600 --> 00:24:48,280 ನಾನು ಈಗ ಕರೆ ಮಾಡಬೇಕು. 267 00:24:48,360 --> 00:24:49,880 ಶಸ್ತ್ರಾಸ್ತ್ರ ಕಾನೂನು ಬರಲಿದೆ, 268 00:24:49,960 --> 00:24:52,280 ಆದರೆ ಆ ಮೂರ್ಖ ಮಂತ್ರಿಯನ್ನು ಪುಸಲಾಯಿಸಬೇಕು. 269 00:25:32,920 --> 00:25:35,600 ಇದರಲ್ಲಿ ಒಂದು ಕೋಟಿ ಜುಪಿಟರ್ ಕಣಗಳಿವೆ. 270 00:25:35,680 --> 00:25:37,480 ಮೊದಲ ಪರೀಕ್ಷೆಗೆ ಒಂದು ಸಣ್ಣ ಮೊತ್ತ. 271 00:25:39,480 --> 00:25:40,440 ಸಣ್ಣದಾ? 272 00:25:40,520 --> 00:25:42,840 ಒಂದು ಭಾಗ ಮಾತ್ರ ಪರೀಕ್ಷಾರ್ಥಿಗಳನ್ನು ತಲುಪುತ್ತೆ. 273 00:25:42,920 --> 00:25:44,960 ಎಷ್ಟು? ನಾವು ಕಂಡುಹಿಡಿಯುತ್ತೇವೆ. 274 00:25:45,560 --> 00:25:49,920 ಒಳಗೆ ಅವುಗಳನ್ನು ಸಕ್ರಿಯಗೊಳಿಸಲು ಕೋಡ್ ಇದೆ. ಅದನ್ನು ನೆನಪಿಟ್ಟುಕೊಂಡು ನಾಶಮಾಡು. 275 00:25:51,040 --> 00:25:52,760 ಅದು ನಮ್ಮಿಬ್ಬರಿಗೆ ಮಾತ್ರ ಗೊತ್ತು. 276 00:25:57,960 --> 00:26:00,480 ಕುಟುಂಬ ಬೇಗ ಬೆಳೆಯಬಹುದೆಂದು ಅನಿಸುತ್ತೆ. 277 00:26:01,880 --> 00:26:02,760 ನಿಜವಾಗಲೂ? 278 00:26:03,360 --> 00:26:05,480 ನಡೆದದ್ದು ಅವನೂ ಊಹಿಸಲು ಸಾಧ್ಯವಾಗದ ಹಾಗೆ 279 00:26:05,560 --> 00:26:07,640 ಅವರಿಬ್ಬರನ್ನು ಒಟ್ಟಾಗಿ ಸೇರಿಸಿದೆ. 280 00:26:08,400 --> 00:26:10,360 ಅವನೊಂದಿಗೆ ನಿನಗೆ ಸಮತೋಲನ ಬೇಕೆಂದರೆ, 281 00:26:10,440 --> 00:26:12,200 ಅವರ ಸಂಬಂಧವನ್ನ ಒಪ್ಪಿಕೊಳ್ಳಬೇಕು. 282 00:26:13,040 --> 00:26:14,880 ನನಗೆ ಆ ಹುಡುಗಿ ಇಷ್ಟವಿಲ್ಲ. 283 00:26:16,040 --> 00:26:17,360 ಅವಳ ಬಗ್ಗೆ ಏನೋ ಇದೆ. 284 00:26:18,480 --> 00:26:20,280 ಅವಳು ಏನೋ ಮುಚ್ಚಿಡುತ್ತಿದ್ದಾಳೆ. 285 00:26:22,080 --> 00:26:23,080 ಅವಳು ಗೂಢಚಾರಿ. 286 00:26:23,760 --> 00:26:25,600 - ವಿಷಯ ಮುಚ್ಚಿಡುವುದು ಅವಳ ಕೆಲಸ. - ಅರೆ. 287 00:26:26,560 --> 00:26:28,000 ಅದರರ್ಥ ನಿಂಗೊತ್ತು, ಜೂಲಿಯಾ. 288 00:26:29,800 --> 00:26:32,040 ಅವನ ಕಿವಿಯಲ್ಲಿ ಆಕೆ ಪಿಸುಗುಡೋದು ಈಗಾಗಲೇ ಕಾಣುತ್ತೆ, 289 00:26:33,400 --> 00:26:34,480 ಸಲಹೆಗಳನ್ನು. 290 00:26:37,720 --> 00:26:39,040 [ಆಂಗ್ಲದಲ್ಲಿ] ನಾನೆಂದಾದರೂ ಪಿಸುಗುಟ್ಟಿದೆನಾ? 291 00:26:40,200 --> 00:26:42,080 ಸಾಮಾನ್ಯ ಧ್ವನಿಯಲ್ಲಿ ಮಾತಾಡ್ತೀನಿ. 292 00:26:42,440 --> 00:26:43,960 ನಿನ್ನನ್ನ ಅವಳಿಗೆ ಹೋಲಿಸಬೇಡ. 293 00:26:44,040 --> 00:26:44,920 [ಇಟಾಲಿಯನ್] ಯಾಕೆ? 294 00:26:45,000 --> 00:26:46,560 ಏಕೆಂದರೆ ನೀನು ಕುಟುಂಬದವಳು. 295 00:26:47,040 --> 00:26:47,960 ಹೌದು. 296 00:26:48,640 --> 00:26:51,600 ಎದೊ ಪ್ಯಾರಿಸ್ಸಿನಿಂದ ಜೀವಂತವಾಗಿ ಹಿಂದಿರುಗಿದ್ದಕ್ಕೆ ಇದ್ದೇನೆ. 297 00:26:52,520 --> 00:26:53,760 [ಆಂಗ್ಲದಲ್ಲಿ] ನಿನ್ನೊಂದಿಗೆ ಮಾತನಾಡಬಲ್ಲೆ. 298 00:26:54,680 --> 00:26:56,000 ಆದರೆ ನೀನು ಯಾವಾಗಲೂ ಕೇಳಲ್ಲ. 299 00:26:56,880 --> 00:26:58,960 ಇತ್ತೀಚಿನ ಘಟನೆಗಳು ಅವನ್ನು ಸ್ಪಷ್ಟಪಡಿಸಿವೆ. 300 00:27:01,040 --> 00:27:02,320 ನಿನಗೆ ಸಂದೇಹಗಳಿಲ್ವಾ? 301 00:27:04,280 --> 00:27:05,120 ಒಂದೂ ಇಲ್ವಾ? 302 00:27:05,920 --> 00:27:09,240 [ಇಟಾಲಿಯನ್ನಲ್ಲಿ] ಎಷ್ಟೋ ವರ್ಷಗಳ ನಂತರ ಎದೊನ ನಾನು ಹೀಗೆ ನೋಡುತಿದ್ದೇನೆ. 303 00:27:09,880 --> 00:27:10,960 ಅಂದರೆ ಹೇಗೆ? 304 00:27:11,600 --> 00:27:12,480 ಖುಷಿಯಾಗಿ. 305 00:27:23,800 --> 00:27:25,520 ಹಂತ ಮೂರು 306 00:27:31,960 --> 00:27:34,040 ಭಾಗ ಕಾಣೆಯಾಗಿದೆ 307 00:27:34,600 --> 00:27:36,960 ಸಂಪೂರ್ಣಗೊಂಡಿದೆ 308 00:27:37,040 --> 00:27:39,040 ಸಂಪೂರ್ಣಗೊಂಡಿದೆ 309 00:27:54,040 --> 00:27:56,520 ಮೂರನೇ ಮೂಲಧಾತು ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ. 310 00:27:56,600 --> 00:27:58,280 ಅದನ್ನು ಮಾಸ್ಟರ್ ಕಾಪಿಗೆ ಸೇರಿಸಿದೆ. 311 00:27:58,360 --> 00:27:59,360 ಒಳ್ಳೆಯ ಕೆಲಸ! 312 00:28:00,040 --> 00:28:01,280 ಅದು ಅದ್ಭುತ, ಎದೊ. 313 00:28:02,040 --> 00:28:02,880 ಧನ್ಯವಾದಗಳು. 314 00:28:02,960 --> 00:28:06,600 ನಿನ್ನಂತಲ್ಲದೇ, ನಿನ್ನ ಯಶಸ್ಸಿನ ಬಗ್ಗೆ ನಾನೆಂದಿಗೂ ಸಂಶಯಪಟ್ಟಿಲ್ಲ. 315 00:28:06,680 --> 00:28:08,280 ಮತ್ತು ಅದು ಸುಲಭವಲ್ಲ ಎಂದು ಬಲ್ಲೆ. 316 00:28:08,760 --> 00:28:10,720 ನಾನು ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ. 317 00:28:12,800 --> 00:28:14,320 ನನ್ನ ಒಂದೇ ವಿಷಾದ ಏನೆಂದರೆ 318 00:28:14,400 --> 00:28:16,320 ನಮ್ಮ ದೊಡ್ಡ ಯಶಸ್ಸನ್ನು 319 00:28:17,760 --> 00:28:20,080 ಅಂತಹ ಉದ್ವಿಗ್ನ ದಿನದಂದು ಸಾಧಿಸಲಾಯಿತು. 320 00:28:20,480 --> 00:28:21,640 ಆದರೆ ಅದು ಪರವಾಗಿಲ್ಲ. 321 00:28:22,240 --> 00:28:25,560 ಈಗ ನೀನು 3-0-8 ಗೆ ನನಗಿಂತ ಹತ್ತಿರವಾಗಿದ್ದೀಯ. 322 00:28:25,640 --> 00:28:27,120 ಅವಳೊಂದಿಗೆ ಆಚರಿಸಲು ಬಯಸುತ್ತೀಯ. 323 00:28:27,200 --> 00:28:31,040 ಅವಳು ನಿನಗೆ ಅಷ್ಟೊಂದು ಮುಖ್ಯವಾಗಿದ್ದರೆ, ಅವಳನ್ನು ನಾನು ಒಪ್ಪುಲು ಸಿದ್ಧ. 324 00:28:32,160 --> 00:28:33,640 ಅವಳನ್ನ ಡಿಯಾನಾ ಎಂದು ಕರೆಯಲು. 325 00:28:36,640 --> 00:28:37,480 ಧನ್ಯವಾದ. 326 00:28:39,200 --> 00:28:40,320 ನಮ್ಮ ವಿಷಯದಲ್ಲಿ, 327 00:28:41,320 --> 00:28:43,120 ನಾವು ಸಮತೋಲನವನ್ನ ಕಂಡುಕೊಳ್ಳಬೇಕು. 328 00:28:44,120 --> 00:28:47,600 ಈಗ ನೀನು ಅಧಿಕಾರದಲ್ಲಿರೋದರಿಂದ, ಅದನ್ನ ಕಂಡುಕೊಳ್ಳುವೆ ಅಂದುಕೊಳ್ತೀನಿ. 329 00:28:54,400 --> 00:28:56,640 ಈಗ ನಿಮಗೆ ಜುಪಿಟರ್ ಕೋಡ್ ಕಳಿಸಲಿದ್ದೇನೆ. 330 00:28:56,720 --> 00:28:58,480 ನಿಮ್ಮ ಬಳಿಯೂ ಇರುವುದು ಸರಿಯೇ. 331 00:28:59,440 --> 00:29:00,480 ಆದರೆ ಒಂದು ಷರತ್ತು. 332 00:29:02,320 --> 00:29:03,440 ನೀನು ಎಂದಿಗೂ ಬಿಡಲ್ಲ. 333 00:29:04,960 --> 00:29:07,400 ನಿಮ್ಮಮ್ಮ ಹೇಳಿದ್ದು ನಿಜ, ನೀನು ನನ್ನಂತೆಯೇ. ಏನು ಬೇಕು? 334 00:29:07,920 --> 00:29:10,000 ಮ್ಯಾಂಟಿಕೋರ್ ಇಟಲಿಯ ಮ್ಯಾನೇಜರ್ ಆಗಿ ಡಿಯಾನಾ. 335 00:29:12,280 --> 00:29:13,680 ಮತೇಓನ ಬದಲಾಯಿಸೋದಾ? 336 00:29:14,160 --> 00:29:16,400 ಮತೇಓ 13 ವರ್ಷಗಳಿಂದ ನಿರ್ವಹಿಸುತ್ತಿದ್ದಾನೆ. 337 00:29:16,480 --> 00:29:17,600 ಈಗ ಬದಲಾವಣೆಯ ಸಮಯ. 338 00:29:22,920 --> 00:29:25,400 ನಿಮ್ಮ ಸಂಬಂಧವು ಅಷ್ಟು ಮಹತ್ವದ್ದಾಗಿದ್ದರೆ, 339 00:29:26,680 --> 00:29:28,400 ಅವಳು ಏಜೆನ್ಸಿಯನ್ನೂ ನಿರ್ವಹಿಸಲಿ. 340 00:29:29,520 --> 00:29:30,880 ಮತೇಓ ಜೊತೆ ಮಾತಾಡುವೆ. 341 00:29:31,280 --> 00:29:32,600 ಮಾತು ಕೊಡುತ್ತೀರಾ? 342 00:29:32,680 --> 00:29:33,760 ಮಾತು ಕೊಡುವೆ. 343 00:29:34,280 --> 00:29:36,320 ಇಂದು ರಾತ್ರಿ ಅದನ್ನು ಅಧಿಕೃತಗೊಳಿಸೋಣ. 344 00:29:45,160 --> 00:29:46,240 ಈಗ ನಿಮಗೆ ಕಳುಹಿಸಿದೆ. 345 00:29:47,080 --> 00:29:48,120 ಆಮೇಲೆ ಸಿಗೋಣ. 346 00:30:05,280 --> 00:30:06,480 ಮತೇಓ. 347 00:30:06,560 --> 00:30:09,600 3-0-8 ರ ಸಂವಹನ ಸಂಕೇತಗಳನ್ನು ನಿರ್ಬಂಧಿಸು. 348 00:30:09,680 --> 00:30:13,480 ನನಗೆ ಕೋಡ್ ಸಿಕ್ಕಿವೆ, ಆದರೆ ಕಾರ್ಯವಿಧಾನವನ್ನು ಮರೆತರೆ ಅವು ನಿಷ್ಪ್ರಯೋಜಕ. 349 00:30:14,760 --> 00:30:16,040 ಅವಳು ಕೆಲಸ ಮಾಡಲಿ. 350 00:30:17,160 --> 00:30:18,560 ಆಮೇಲೇನು ಮಾಡಬೇಕು ನಿಂಗೊತ್ತು. 351 00:30:21,600 --> 00:30:22,600 ಅವನು ಏನು ಮಾಡಬೇಕು? 352 00:30:25,600 --> 00:30:26,560 ಎತ್ತೊರೆ. 353 00:30:27,760 --> 00:30:30,120 ಮಗನ ಮೇಲಿನ ಪ್ರೀತಿಯು ನಿನಗೆ ಮಂಕು ಕವಿದಿದೆ. 354 00:30:30,600 --> 00:30:32,240 ನೀನು ನೇರವಾಗಿ ಆಲೋಚಿಸುತ್ತಿಲ್ಲ. 355 00:30:45,680 --> 00:30:48,800 ಜಲಸ್ಥಾವರ ನಂ. 14 356 00:31:16,240 --> 00:31:17,360 ಇಲ್ಲಿ ಕಾವಲು ಕಾಯಿರಿ. 357 00:31:27,400 --> 00:31:29,400 ಅಪ್ಪನ ಜೊತೆ ಮಾತಾಡಿದೆ, ಅಮ್ಮ. 358 00:31:30,560 --> 00:31:32,560 ನಾವು ಒಪ್ಪಂದ ಮಾಡಿಕೊಂಡೆವು. 359 00:31:35,040 --> 00:31:36,400 [ಆಂಗ್ಲದಲ್ಲಿ] ಅವರನ್ನ ತಡೆಯಲು ಯತ್ನಿಸಿದೆ. 360 00:31:38,520 --> 00:31:39,640 ನಿಜವಾಗಿ ಯತ್ನಿಸಿದೆ. 361 00:31:42,120 --> 00:31:43,200 ನನ್ನನ್ನು ಕ್ಷಮಿಸು. 362 00:31:44,840 --> 00:31:46,160 ಏನು ಹೇಳುತ್ತಿದ್ದೀಯ? 363 00:31:47,280 --> 00:31:49,640 [ಇಟಾಲಿಯನ್ನಲ್ಲಿ] ಅವಳಿಗಾಗಿ ಇನ್ನೇನೂ ಮಾಡಲಾಗದು. 364 00:32:11,120 --> 00:32:12,000 ಮತೇಓ. 365 00:32:13,680 --> 00:32:16,040 ನಾನು ಈಗಲೇ ಡಿಯಾನಾ ಜೊತೆ ಮಾತನಾಡಬೇಕು. 366 00:32:21,720 --> 00:32:22,880 ನನ್ನ ಮಾತು ಕೇಳಿಸಿತಾ? 367 00:32:24,560 --> 00:32:25,600 ಉತ್ತರಿಸು. 368 00:32:27,320 --> 00:32:29,920 ನೀರು ಸರಬರಾಜಿಗೆ ಅದೇ ಪ್ರವೇಶದ ಹಂತ. 369 00:32:40,920 --> 00:32:42,160 ಉತ್ತರಿಸು! 370 00:32:43,440 --> 00:32:44,920 ಮತೇಓ, ಉತ್ತರಿಸು! ಛೇ! 371 00:33:21,920 --> 00:33:24,480 - ಇದು ನೀರಿಗೆ ಬಿದ್ದರೆ ಕರಗಿಹೋಗುತ್ತಾ? - ಹೌದು. 372 00:33:26,800 --> 00:33:29,160 ಸಂಸತ್ತಿನ ಸದಸ್ಯರ ನಡುವೆ ಬಹುತೇಕ ಆಕ್ರಮಣಕಾರಿ, 373 00:33:29,240 --> 00:33:31,320 ತೀವ್ರ ಚರ್ಚೆಗೆ ನಾವು ಸಾಕ್ಷಿಯಾದೆವು. 374 00:33:31,400 --> 00:33:34,960 ಬಹುಪಾಲು ನಾಯಕರು ಒಗ್ಗಟ್ಟಾಗಿ ಕಾಣಲಿಲ್ಲ. 375 00:33:35,040 --> 00:33:37,800 ವಾಸ್ತವವಾಗಿ, ಶಸ್ತ್ರಾಸ್ತ್ರಗಳನ್ನ ಉದಾರಗೊಳಿಸುವ ಕಾನೂನಿಗೆ 376 00:33:37,880 --> 00:33:41,640 ಮತ ಚಲಾಯಿಸಿದ ನಂತರ, ಸರ್ಕಾರವು ತತ್ತರಿಸುತ್ತಿದೆ. 377 00:33:41,720 --> 00:33:43,960 ಅವರ ಕೆಲಸ ಮಾಡಿದರು, ಆದರೆ ಅವರ ಕಥೆ ಮುಗಿಯಿತು. 378 00:33:44,040 --> 00:33:45,440 ಅವರನ್ನ ಒದ್ದು ಆಚೆ ಹಾಕೋಣ. 379 00:33:46,360 --> 00:33:50,320 ಜುಪಿಟರಿನೊಂದಿಗೆ ನಾವು ಮಾಡುವ ಕೆಲಸಕ್ಕಾಗಿ ನಮಗೆ ಹೊಸ ಸರ್ಕಾರ ಬೇಕು. 380 00:33:52,640 --> 00:33:53,720 ಹೌದು. 381 00:33:54,520 --> 00:33:56,240 ನಮಗೆ ಆಯೋಜನಾತ್ಮಕ ಬೆಂಬಲ ಬೇಕು. 382 00:33:59,280 --> 00:34:00,320 ನಿಮ್ಮಮ್ಮ? 383 00:34:01,040 --> 00:34:02,280 ಆಕೆ ತೋಟದಲ್ಲಿರಬೇಕು. 384 00:34:03,640 --> 00:34:04,680 ಪರೀಕ್ಷೆಯ ಸುದ್ದಿ? 385 00:34:05,160 --> 00:34:06,000 ನಡೆಯುತ್ತಿದೆ. 386 00:34:08,080 --> 00:34:12,280 ಮೊದಲ ಅಲೆಯಲ್ಲಿ ನಾವು ಎಷ್ಟು ಜನರನ್ನು ತಲುಪಬಹುದೆಂದು ನೋಡಲು ನನಗೆ ಕುತೂಹಲ. 387 00:34:16,760 --> 00:34:17,600 ನನಗೂ ಅಷ್ಟೇ. 388 00:34:22,160 --> 00:34:24,200 ಸಕ್ರಿಯಗೊಳಿಸುವ ಕೋಡ್ ಹಾಕುತ್ತಿದ್ದೇನೆ. 389 00:34:28,160 --> 00:34:29,000 ಸರಿ. 390 00:34:29,960 --> 00:34:32,160 ಕಣಗಳು ಸಕ್ರಿಯಗೊಂಡು ಹರಡುತ್ತಿವೆ. 391 00:35:02,360 --> 00:35:04,000 ಒಂದು ವಿಷಯ ಮರೆತಿದ್ದೆ, ಅಪ್ಪ. 392 00:35:06,640 --> 00:35:09,480 ಇಂದು, ಮೂರನೇ ಧಾತುವಿನೊಂದಿಗೆ ಮೊದಲ ಮಾದರಿಯನ್ನ ತಯಾರಿಸಿದೆ. 393 00:35:09,560 --> 00:35:11,840 - ಒಳ್ಳೇದು. - ನಿಮಗಿಷ್ಟ ಆಗುತ್ತಂತ ಗೊತ್ತಿತ್ತು. 394 00:35:12,840 --> 00:35:14,840 ನೀರು ಕುಡಿದಷ್ಟು ಸುಲಭವಾಗಿತ್ತು. 395 00:35:33,080 --> 00:35:34,120 ಅದನ್ನು ಮಾಡಬೇಡ. 396 00:35:35,000 --> 00:35:36,640 ಇದು ನರಮಂಡಲದ ಮೇಲೆ ಪರಿಣಾಮ ಬೀರುತ್ತೆ. 397 00:35:37,640 --> 00:35:39,160 ನಿಮಗೆ ಯಾವ ನೋವೂ ಆಗಲ್ಲ. 398 00:35:58,160 --> 00:35:59,640 ನಿನ್ನ ಒಳಿತಿಗಾಗಿಯೇ ಮಾಡಿದೆ. 399 00:36:01,040 --> 00:36:02,800 ಅವಳಲ್ಲಿ ಏನೋ ತಪ್ಪಿದೆ. 400 00:36:02,880 --> 00:36:05,320 ಆಕೆ ನಿನ್ನನ್ನ ಕುರುಡು ಮಾಡದಿದ್ದರೆ ನಿನಗೆ ಕಾಣ್ತಿತ್ತು. 401 00:36:15,680 --> 00:36:16,920 ಬುದ್ದಿ ಉಪಯೋಗಿಸು. 402 00:36:17,640 --> 00:36:19,480 ಮತೇಓಗೆ ಕರೆ ಮಾಡಿ. ಈಗಲೇ. 403 00:36:20,280 --> 00:36:21,320 ಎದೊಆರ್ಡೊ. 404 00:36:21,400 --> 00:36:22,400 ಮುಚ್ಚಿಡುತ್ತಿದ್ದಾಳೆ. 405 00:36:22,480 --> 00:36:24,000 ಏನೋ ಗೊತ್ತಿಲ್ಲ, ಆದರೆ ನಿಜ. 406 00:36:24,080 --> 00:36:24,920 ಅವನಿಗೆ ಕರೆ ಮಾಡಿ. 407 00:36:26,280 --> 00:36:27,360 ಇಲ್ಲವೇ ಸಾಯುತ್ತೀರಿ. 408 00:36:34,000 --> 00:36:35,040 ಮಾಡಲ್ಲ. 409 00:36:36,520 --> 00:36:37,840 ನೀನು ಒಬ್ಬ ಝಾನಿ. 410 00:36:37,920 --> 00:36:40,080 ಕಠಿಣ ನಿರ್ಧಾರಗಳನ್ನು ಮಾಡಲು ನೀನು ಕಲಿಯಬೇಕು. 411 00:36:45,040 --> 00:36:46,400 ನೀನು ನನ್ನಂತೆ, ಎದೊಆರ್ಡೊ. 412 00:36:46,880 --> 00:36:49,000 ಇಲ್ಲ, ನಾನು ನಿಮ್ಮಂತೆ ಅಲ್ಲ. 413 00:38:30,760 --> 00:38:31,800 ಹಾಯ್, ಡಿಯಾನಾ. 414 00:40:11,760 --> 00:40:13,760 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 415 00:40:13,840 --> 00:40:15,840 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ