1 00:00:24,958 --> 00:00:25,958 ಒಳಗೆ ಬಾ. 2 00:00:32,290 --> 00:00:33,416 ಒಳಗೆ ಬಾರೋ! 3 00:00:40,916 --> 00:00:41,916 ಅಮ್ಮ. 4 00:00:42,041 --> 00:00:43,625 -ಸುಂದರ್-- -ಅಮ್ಮ, ದಯವಿಟ್ಟು! 5 00:00:43,708 --> 00:00:45,708 ನಿಂಗೇನೋ ಹೇಳಬೇಕು. ದಯವಿಟ್ಟು ಕುಳಿತುಕೋ. 6 00:00:50,041 --> 00:00:51,791 ನಮ್ಮ ಸಮಸ್ಯೆ ಏನು ಗೊತ್ತಾ? 7 00:00:51,875 --> 00:00:54,708 ಒಬ್ಬ ವ್ಯಕ್ತಿಯನ್ನು ನಾಯಕನನ್ನಾಗಿಸಿ ಪೀಠದ ಮೇಲೆ ಇರಿಸುತ್ತೇವೆ. 8 00:01:00,583 --> 00:01:02,375 ನಿನ್ನ ಕೋಪ ನನಗೆ ಅರ್ಥವಾಗುತ್ತಮ್ಮ. 9 00:01:02,458 --> 00:01:06,833 ನಾವು ನಾಯಕ ಎಂದುಕೊಳ್ಳುವವರು ಯಾವಾಗಲೂ ಪರಿಪೂರ್ಣವಾಗಿರಬೇಕೆಂದು ಬಯಸುತ್ತೇವೆ. 10 00:01:06,875 --> 00:01:07,958 ಇಲ್ಲದೇ ಹೋದಲ್ಲಿ? 11 00:01:10,708 --> 00:01:13,333 ಅಪ್ಪನೂ ಮನುಷ್ಯನೇ ತಾನೇ, ಅಮ್ಮ? ತಪ್ಪು ಮಾಡಿದ್ದಾರೆ. 12 00:01:14,708 --> 00:01:16,333 ಅವರು ಒಪ್ಪಿಕೊಳ್ಳುತ್ತಿರಲಿಲ್ಲ. 13 00:01:16,375 --> 00:01:19,125 ಆದರೆ ಒಂದು ತಪ್ಪು ಅವರನ್ನು ಕೆಟ್ಟವರನ್ನಾಗಿ ಮಾಡುವುದಿಲ್ಲ. 14 00:01:22,625 --> 00:01:24,041 ನಿನಗೆ ಗೊತ್ತಿತ್ತೋ ಗೊತ್ತಿಲ್ಲ. 15 00:01:24,958 --> 00:01:27,166 ಧಾಮು ತನ್ನ ಮಗನೆಂದು ಅಪ್ಪನಿಗೇ ತಿಳಿದಿಲ್ಲ. 16 00:01:27,666 --> 00:01:28,875 ಧಾಮು ಅವರಿಗೆ ಹೇಳಲಿಲ್ಲ. 17 00:01:36,208 --> 00:01:37,208 ನನ್ನಪ್ಪ... 18 00:01:38,083 --> 00:01:39,958 ತಪ್ಪು ಮಾಡಿದ ಒಳ್ಳೆಯ ವ್ಯಕ್ತಿಯಾಗಿದ್ದರು. 19 00:01:40,666 --> 00:01:41,666 ಅಷ್ಟೇ. 20 00:01:45,000 --> 00:01:46,000 ಅಮ್ಮ... 21 00:01:47,625 --> 00:01:51,916 ...ಆ ಒಂದು ತಪ್ಪು ನೀನು ಅವರ ಜೊತೆ ಇದ್ದ 36 ವರ್ಷಗಳಿಗೆ ಕಳಂಕವಾಗಬಾರದು. 22 00:02:10,333 --> 00:02:11,333 ಅಮ್ಮ. 23 00:02:24,375 --> 00:02:25,416 -ರಾಜಿ? -ಹಾಂ, ಮೇಡಂ. 24 00:02:25,500 --> 00:02:26,666 -ವನಿತಾ? -ಹಾಂ, ಮೇಡಂ. 25 00:02:26,750 --> 00:02:28,125 -ವಿಜಯಲಕ್ಷ್ಮಿ? -ಇದ್ದೀನಿ. 26 00:02:38,041 --> 00:02:40,416 ಬಾಗಿಲು ತೆಗೆಯಿರಿ! ಮುಖ್ಯವಾದ ಫೋನ್ ಮಾಡಬೇಕು! 27 00:02:45,208 --> 00:02:47,666 ಏಯ್! ಏನು ಬೇಕು ಅಂತ ಹೀಗೆ ಕಿರುಚುತ್ತಿದ್ದೀಯಾ? 28 00:02:48,208 --> 00:02:50,583 ಮುಖ್ಯವಾದ ಕರೆ ಮಾಡಬೇಕು. ದಯವಿಟ್ಟು ಫೋನ್ ಕೊಡಿ! 29 00:02:50,666 --> 00:02:54,333 -ಫೋನ್‌ ಇಲ್ಲ! ಎಲ್ಲಾ ದುರಸ್ತಿಯಲ್ಲಿವೆ! ನಡಿ. -ವಾರ್ಡನ್ ಫೋನ್ ಬಳಸಬಹುದಾ? 30 00:02:54,416 --> 00:02:56,291 ಅವರೇ ಇಲ್ಲಿಲ್ಲ. ಫೋನ್ ಹೇಗೆ ಬಳಸುತ್ತೀಯಾ? 31 00:02:56,375 --> 00:03:00,291 ಏಯ್, ಇವಳನ್ನು ಕರೆದುಕೊಂಡು ಹೋಗು. ಫೋನ್ ಬೇಕಂತೆ! 32 00:03:00,375 --> 00:03:02,291 ಇವತ್ತು ಯಾರೂ ಸೆಲ್ ಬಿಟ್ಟು ಹೋಗಬಾರದು! 33 00:03:02,375 --> 00:03:03,958 -ಏಯ್, ಜಯಂತಿ! -ಏಯ್, ಏನಾಯ್ತು? 34 00:03:04,041 --> 00:03:06,041 -ಬಾಗಿಲು ಏಕೆ ತೆಗೆದಿದೆ? -ಏನೋ ತಪ್ಪಾಗುತ್ತಿದೆ! 35 00:03:06,125 --> 00:03:07,875 ನಾನು ಈಗಲೇ ಸಕ್ಕರೆಗೆ ಹೇಳಬೇಕು! 36 00:03:21,291 --> 00:03:24,125 ನಿನ್ನ ರಾಕ್ಷಸನ ಮುಖವನ್ನು ಮರೆಯಬೇಡ. 37 00:04:23,332 --> 00:04:25,457 ಪ್ರತಿ ವರ್ಷವೂ ಇದೇ ಸಮಸ್ಯೆ! 38 00:04:25,541 --> 00:04:26,957 ಯಾರು ಇದನ್ನು ಕೇಳುತ್ತಾರೆ? 39 00:04:27,041 --> 00:04:29,541 ಅವರು ತುಕಡಿ ಬರುತ್ತದೆ ಎಂದು ಹೇಳುತ್ತಾರೆ! 40 00:04:29,625 --> 00:04:31,250 ಕಡೆಗೆ ಏನೂ ಬರುವುದಿಲ್ಲ! 41 00:04:31,332 --> 00:04:32,916 ಎರಡು ಲಕ್ಷ ಜನ ಬಂದಿದ್ದಾರೆ! 42 00:04:33,000 --> 00:04:35,582 ಕೇವಲ 50 ಸಿಬ್ಬಂದಿಯೊಂದಿಗೆ ನಾವು ಹೇಗೆ ನಿಭಾಯಿಸುವುದು? 43 00:04:35,666 --> 00:04:36,875 ಫೋನ್ ಇಡೋ, ಬೋಳಿಮಗನೇ! 44 00:04:39,250 --> 00:04:42,916 ಹಾಂ, ಹೇಳು. ನನ್ನ ತಲೆ ಸಿಡಿದು ಹೋಗುತ್ತಿದೆ. 45 00:04:44,541 --> 00:04:46,375 ಸರ್, ಆ 10%. 46 00:04:47,416 --> 00:04:49,041 ನಾವು ಇನ್ನೂ ಅದಕ್ಕೆ ಉತ್ತರಿಸಿಲ್ಲ. 47 00:04:49,957 --> 00:04:52,041 ಈ ಬೀಗ ಹಾಕಿದ ಕಪಾಟಿನ ಬಗ್ಗೆ. 48 00:04:52,791 --> 00:04:54,041 ಯಾರು ಹಾಕಿರಬಹುದು? 49 00:04:56,250 --> 00:04:58,207 ಮುತ್ತು ಬೀಗ ಹಾಕಿರಲು ಸಾಧ್ಯವಿಲ್ಲ. 50 00:04:58,291 --> 00:05:00,375 ಯಾಕೆಂದರೆ ಅವಳು ಕಪಾಟಿನ ಒಳಗಿದ್ದಳು. 51 00:05:00,458 --> 00:05:04,416 ಚೆಲ್ಲಪ್ಪ ಸರ್ ಕಪಾಟಿಗೆ ಬೀಗ ಹಾಕಿ ಸ್ವತಃ ಗುಂಡು ಹೊಡೆದುಕೊಳ್ಳಲು ಸಾಧ್ಯವಿಲ್ಲ. 52 00:05:04,500 --> 00:05:06,833 ಏಕೆಂದರೆ ಗನ್ ಕಪಾಟಿನಲ್ಲಿ ಮುತ್ತು ಹತ್ತಿರ ಇತ್ತು. 53 00:05:11,041 --> 00:05:14,458 ನೀವು ಷರ್ಲಾಕ್ ಹೋಮ್ಸ್ ಚಲನಚಿತ್ರ ನೋಡಿದ್ದೀರಾ? 54 00:05:15,458 --> 00:05:18,916 ಅದರಲ್ಲಿ "ಸಾಧ್ಯವಿಲ್ಲದಿರುವ ವಿಷಯಗಳನ್ನು ತೆಗೆದುಹಾಕಿದರೆ 55 00:05:19,000 --> 00:05:23,375 "ಉಳಿದಿರುವುದು ಎಷ್ಟೇ ಅಸಾಧ್ಯವಾದರೂ, ಅದೇ ನಿಜವಾಗಿರುತ್ತದೆ" ಎಂದು ಹೇಳಿದ್ದಾರೆ! 56 00:05:23,457 --> 00:05:26,666 ಸಕ್ಕರೆ, ಈ ಸಿನಿಮಾ ಸಂಭಾಷಣೆಯನ್ನು ಕೇಳಲು ನನಗೆ ಸಾಧ್ಯವಿಲ್ಲ! 57 00:05:28,000 --> 00:05:28,916 ಸರ್. 58 00:05:30,957 --> 00:05:35,082 ಕೊಲೆ ನಡೆದ ಇಷ್ಟು ದಿನ, ಬೀಗ ಹಾಕಿದ್ದು ಯಾರು ಅಂತ ಯೋಚಿಸುತ್ತಿದ್ದೆ. 59 00:05:36,541 --> 00:05:37,832 ಈಗ ಹೊಳೆಯಿತು. 60 00:05:38,791 --> 00:05:41,875 ನಾವು ಒಳಗಡೆ ಬಂದಾಗ ಕಪಾಟಿನ ಬೀಗ ಹಾಕಿರದಿದ್ದರೆ? 61 00:05:43,707 --> 00:05:46,916 ನಾವು ಒಳಗಡೆ ಬಂದ ಮೇಲೆ ಯಾರಾದರೂ ಬಾಗಿಲಿಗೆ ಬೀಗ ಹಾಕಿದ್ದರೆ? 62 00:05:49,250 --> 00:05:54,000 ಮೊದಲು ಬಾಗಿಲು ಒಡೆದು ಒಳಗಡೆ ಬಂದಿದ್ದು ನೀವು ಮತ್ತೆ ನಾನು. 63 00:05:55,791 --> 00:05:57,582 ಒಂದೋ ನೀವು ಮಾಡಿರಬೇಕು, 64 00:05:59,000 --> 00:06:00,500 ಅಥವಾ ನಾನು ಮಾಡಿರಬೇಕು. 65 00:06:03,833 --> 00:06:05,458 ಅಗುಳಿ... 66 00:06:08,875 --> 00:06:10,083 ...ನಾನು ಹಾಕಲಿಲ್ಲ. 67 00:06:15,916 --> 00:06:17,000 ಹಾಗಾದರೆ ನೀವೇ ಅಲ್ವಾ? 68 00:06:22,207 --> 00:06:25,625 ಅವರಿವರಿಗೆ ಹೇಳಿ ಕೊನೆಗೆ ನನ್ನ ಮೇಲೇ ಬಂದೆಯಾ? 69 00:06:30,166 --> 00:06:31,166 ಸಕ್ಕರೆ. 70 00:06:32,082 --> 00:06:33,541 ನೀನು ತುಂಬಾ ಯೋಚಿಸುತ್ತೀಯಾ. 71 00:06:37,082 --> 00:06:38,750 ಹಾಗಾದರೆ, ಅದು ನೀವೇ! 72 00:07:00,333 --> 00:07:01,958 ಬನ್ನಿ. ಸ್ಟೇಷನ್‍ಗೆ ಹೋಗೋಣ. 73 00:07:57,250 --> 00:07:59,082 ಏಯ್, ಪುಟಾಣಿಗಳಾ! ಬೇಡ! 74 00:08:03,125 --> 00:08:04,250 ಮೂರ್ತಿ, ನೀನು? 75 00:08:04,875 --> 00:08:07,250 -ನೀನು ಹೇಗೆ ಇಲ್ಲಿ? -ಗಾಬರಿಯಾಗದೆ ನನ್ನ ಮಾತು ಕೇಳಿ. 76 00:08:07,333 --> 00:08:11,000 ಏಯ್, ಮೊದಲು ಈ ಸುರಂಗದ ಬಗ್ಗೆ ನಿನಗೆ ಹೇಗೆ ಗೊತ್ತೆಂದು ಹೇಳು? 77 00:08:11,708 --> 00:08:12,833 ಮೊದಲು ಅದನ್ನು ಹೇಳು. 78 00:08:13,875 --> 00:08:16,250 ಸರ್, ಈ ಮಾನವ ಕಳ್ಳಸಾಗಣೆಯ ಕೇಸ್ ಬಿಡಿ. 79 00:08:17,082 --> 00:08:20,625 ಅದನ್ನು ಬಿಟ್ಟರೆ ನಿಮಗೆ ಒಳ್ಳೆಯದು ಮತ್ತು ಸುರಕ್ಷಿತವೂ ಕೂಡ. 80 00:08:21,082 --> 00:08:23,916 ಅದೊಂದು ದೊಡ್ಡ ಜಾಲ, ಸರ್. 81 00:08:24,875 --> 00:08:28,250 ಕಣ್ಣಿದೆ ಅಂತ ಎಲ್ಲವನ್ನೂ ನೋಡಬೇಕಾಗಿಲ್ಲ, ಸರ್. 82 00:08:28,332 --> 00:08:29,707 ಕೆಲವನ್ನ ಕಂಡೂ ಕಾಣದಂತಿರಬೇಕು. 83 00:08:29,791 --> 00:08:31,582 ನನಗೆ ನಿನ್ನ ಸಲಹೆ ಬೇಕಾಗಿಲ್ಲ. 84 00:08:31,666 --> 00:08:33,790 ಈ ಸುರಂಗದ ಬಗ್ಗೆ ಯಾವಾಗಿನಿಂದ ಗೊತ್ತು? ಹೇಳು. 85 00:08:34,500 --> 00:08:36,625 ಹೇಳು! ಎಷ್ಟು ದಿನಗಳಿಂದ ಗೊತ್ತು? 86 00:08:37,375 --> 00:08:38,375 ದಿನಗಳಲ್ಲ, ಸರ್. 87 00:08:39,415 --> 00:08:40,665 ವರ್ಷಗಳಿಂದ ಗೊತ್ತು. 88 00:08:45,790 --> 00:08:48,833 ಹಾಗಾದರೆ ಈ ಕೆಲವು ವರ್ಷಗಳಿಂದ ಅದನ್ನ ನಿರ್ಲಕ್ಷಿಸಿದ್ದೀಯಾ. 89 00:08:49,625 --> 00:08:50,540 ಇಲ್ಲ ಸರ್, ನಾನು... 90 00:08:51,583 --> 00:08:52,875 ನೀವು ಅಂದುಕೊಂಡ ಹಾಗೆ ಇಲ್ಲ. 91 00:08:53,665 --> 00:08:56,040 ಹಾಗೇನೂ ಇಲ್ಲ, ಸರ್. ಸ್ವಲ್ಪ ಅರ್ಥಮಾಡಿಕೊಳ್ಳಿ, ಸರ್. 92 00:08:57,040 --> 00:08:58,250 ನಾಶಪಡಿಸುತ್ತೇನೆ. 93 00:08:59,415 --> 00:09:01,833 ಈ ಬೃಹತ್ ಜಾಲವನ್ನು ಅದರ ಬೇರು ಸಮೇತ ಕೀಳುತ್ತೇನೆ! 94 00:09:03,041 --> 00:09:06,041 ನೀವೆಲ್ಲಾ ಕಂಬಿ ಎಣಿಸಿ ಗಂಜಿ ತಿನ್ನುವಂತೆ ಮಾಡುತ್ತೇನೆ! 95 00:09:07,333 --> 00:09:11,416 ನಿಮ್ಮ ಯಜಮಾನಿ ಸರೋಜಾಗೆ ಗರಿಷ್ಠ ಶಿಕ್ಷೆ ಕೊಡಿಸುತ್ತೇನೆ. 96 00:09:12,250 --> 00:09:13,250 ಸರೋಜಾ? 97 00:09:13,791 --> 00:09:15,333 ಸರೋಜಾ ಬಗ್ಗೆ ನಿಮಗೇನು ಗೊತ್ತು? 98 00:09:18,625 --> 00:09:21,250 10 ವರ್ಷಗಳಿಂದ ಈ ಕೇಸ್ ಮೇಲೆ ಕೆಲಸ ಮಾಡುತ್ತಿದ್ದೇನೆ, ಮೂರ್ತಿ! 99 00:09:22,041 --> 00:09:25,416 ಅವಳ ವಿಷಯಗಳೆಲ್ಲವೂ ನನಗೆ ಚೆನ್ನಾಗಿ ಗೊತ್ತು. 100 00:09:26,541 --> 00:09:27,541 ಸರೋಜಾ! 101 00:09:28,458 --> 00:09:33,375 ಸತ್ತು ಹೋದ ಅವಳ ಪತಿಯ ಎಂಎಲ್ಎ ಪ್ರಭಾವ ಬಳಸಿ, ಅವಳು ಈ ವ್ಯಾಪಾರ ಪ್ರಾರಂಭಿಸಿದಳು. 102 00:09:34,290 --> 00:09:36,290 ಅವಳಿಗೆ ಇದೇ ಮುಖ್ಯವಾದ ಕೆಲಸ. 103 00:09:36,958 --> 00:09:41,333 ಹೀಗಿದ್ದರೂ ತಾನೇನೋ ದೊಡ್ಡ ವ್ಯಾಪಾರಿಯಂತೆ ಸೋಗು ಹಾಕುತ್ತಾಳೆ. 104 00:09:43,415 --> 00:09:47,625 ಈಗ, ರಾಜಕೀಯ ಹಗರಣದಲ್ಲಿ ಜೈಲು ಸೇರಿರುವ ನಾಟಕವಾಡುತ್ತಿದ್ದಾಳೆ! 105 00:09:49,875 --> 00:09:53,040 ಅದು ಹೇಗೋ ತಾನೇ ಈ ಮಾನವ ಕಳ್ಳಸಾಗಣೆಯ ಮುಖ್ಯಸ್ಥೆ ಎನ್ನುವುದನ್ನು 106 00:09:53,125 --> 00:09:57,125 ಯಾರಿಗೂ ತಿಳಿಯದ ಹಾಗೆ ಮರೆಮಾಡಿದ್ದಾಳೆ. 107 00:09:58,125 --> 00:10:03,083 ನಿಜ ಹೇಳಬೇಕೆಂದರೆ, ಅವಳ ಮೇಲೆ ನನಗೆ ಮೊದಲು ಸಂದೇಹ ಬಂದಿದ್ದು ಹೇಗೆ ಗೊತ್ತಾ? 108 00:10:05,083 --> 00:10:06,083 ನಿನ್ನಿಂದಾಗಿ. 109 00:10:06,458 --> 00:10:08,875 ನನ್ನಿಂದ? ನಾನೇನು ಮಾಡಿದೆ? 110 00:10:10,333 --> 00:10:13,541 ನೀನೇನು ಮಾಡಬಹುದೆಂದು ಪ್ರಿಯಮ್ವದಾ ಕೇಸಿನಲ್ಲಿ ನೋಡಿದ್ದೆ. 111 00:10:13,958 --> 00:10:17,916 ಪ್ರಿಯಮ್ವದಾ ಮತ್ತು ಸರೋಜಾರಂಥ ಶಕ್ತಿಶಾಲಿ ಹೆಂಗಸರ ಎದುರು, 112 00:10:18,000 --> 00:10:20,166 ನೀನು ವಿಧೇಯ ಮಗುವಾಗುತ್ತೀಯ. 113 00:10:20,250 --> 00:10:21,583 ಅದೇ ನಿನ್ನ ದೌರ್ಬಲ್ಯ! 114 00:10:22,416 --> 00:10:23,333 ಅದಕ್ಕೇನು, ಸರ್? 115 00:10:24,208 --> 00:10:26,083 ನನಗೆ ಗೊತ್ತಿತ್ತು, ನಿನ್ನ ಸಹಾಯವಿಲ್ಲದೇ, 116 00:10:26,166 --> 00:10:28,750 ಕಾಳಿಪಟ್ನಂನಿಂದ ಮಕ್ಕಳನ್ನು ಸಾಗಿಸಲು ಸಾಧ್ಯವಿರಲಿಲ್ಲ. 117 00:10:31,375 --> 00:10:33,875 ನಂತರ ನಾನು ನಿನ್ನ ಬಗ್ಗೆ ವಿಚಾರಿಸಿದೆ, 118 00:10:34,833 --> 00:10:38,665 ನಿನಗೂ ಸರೋಜಾಗೂ ಅಕ್ರಮ ಸಂಬಂಧವಿರುವುದು ತಿಳಿಯಿತು. 119 00:10:47,083 --> 00:10:48,708 ನಾಳೆ ನಾನು ಜೈಲಿಗೆ ಹೋಗುತ್ತೇನೆ. 120 00:10:50,458 --> 00:10:52,208 ಬರಲು ಕನಿಷ್ಠ ವರ್ಷವಾದರೂ ಆಗುತ್ತದೆ. 121 00:10:58,958 --> 00:11:00,166 ನಾನಿದ್ದೀನಲ್ಲ? 122 00:11:00,583 --> 00:11:01,958 ಹೇಗೋ, ಹೊರಗೆ ತರುತ್ತೇನೆ. 123 00:11:02,583 --> 00:11:03,583 ಒಂದು ವರ್ಷವೆಲ್ಲ... 124 00:11:06,041 --> 00:11:07,916 ನಿನಗೆ ನನ್ನನ್ನು ಹೊರತರಲು ಸಾಧ್ಯವಿಲ್ಲ. 125 00:11:16,708 --> 00:11:19,791 ಈ ಒಂದು ವರ್ಷ, ನೀನು ಇಲ್ಲಿರುವ ಎಲ್ಲವನ್ನೂ ನೋಡಿಕೋ. 126 00:11:25,583 --> 00:11:27,041 ವ್ಯಾಪಾರ ನಿಧಾನಗೊಳ್ಳಬಾರದು. 127 00:11:40,915 --> 00:11:42,958 ನೀನು ನನಗಾಗಿ ಇದನ್ನು ಮಾಡುತ್ತೀಯಲ್ಲ? 128 00:11:48,750 --> 00:11:52,750 ಆಗ ನಾನು ಸರೋಜಾಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದೆ. 129 00:11:55,083 --> 00:11:56,250 ಆಗ ನನಗೆ ತಿಳಿಯಿತು, 130 00:11:57,250 --> 00:11:59,625 ನಾನು ಹುಡುಕುತ್ತಿದ್ದಿದ್ದು ರಾಕ್ಷಸನಲ್ಲ, 131 00:12:00,291 --> 00:12:01,500 ರಾಕ್ಷಸಿ! 132 00:12:09,875 --> 00:12:13,791 ನೀನು ಒಂದಿಷ್ಟು ತಪ್ಪು ಮಾಡಿದ್ದರೂ, ಒಳ್ಳೆಯ ಪೊಲೀಸ್ ಅಂತ ಅಂದುಕೊಂಡಿದ್ದೆ! 133 00:12:16,333 --> 00:12:18,291 ಎಲ್ಲಾ ತಿಳಿದುಕೊಂಡಿರಾ? 134 00:12:22,125 --> 00:12:26,458 ಚೆಲ್ಲಪ್ಪ ಸರ್, ಒಂದು ನಿಮಿಷ ನನ್ನ ಸ್ಥಾನದಲ್ಲಿ ನಿಂತು ಯೋಚಿಸಿ. 135 00:12:27,416 --> 00:12:29,666 ಸರೋಜಾ ಮೋಡಿಮಾಡುವ ಸುಂದರಿ. 136 00:12:30,833 --> 00:12:31,750 ಗತ್ತಿದೆ! 137 00:12:32,333 --> 00:12:38,040 ಎಂಎಲ್‍ಎ ಪತ್ನಿ. ಅವಳ ದಾರಿಯೇ ಬೇರೆ. ಆದರೆ ನಾನು? ಒಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿ. 138 00:12:38,125 --> 00:12:40,625 ಹೊಟ್ಟೆ ಮುಂದೆ ಬಂದಿರೋ ಒಬ್ಬ ಮಧ್ಯವಯಸ್ಕ. 139 00:12:41,250 --> 00:12:43,333 ಅವಳಲ್ಲಿ ನಾನೆಲ್ಲಿ? 140 00:12:44,208 --> 00:12:47,958 ಅಂಥ ಒಬ್ಬಳು ಹೆಣ್ಣು ತಾನಾಗಿಯೇ ನನ್ನನ್ನು ಇಷ್ಟಪಟ್ಟರೆ, 141 00:12:48,040 --> 00:12:50,125 ನಾನೇನು ಮಾಡಬೇಕು? ನೀವೇ ಹೇಳಿ! 142 00:12:51,040 --> 00:12:52,040 ಹೇಳಿ, ಸರ್! 143 00:12:54,665 --> 00:12:56,665 ಅವಳು ಮಾಟಗಾತಿ, ಚೆಲ್ಲಪ್ಪ ಸರ್! 144 00:12:57,875 --> 00:12:59,875 ಅವಳೇನೇ ಹೇಳಿದರೂ ನಾನು ಮಾಡುತ್ತೇನೆ! 145 00:13:02,916 --> 00:13:05,208 ಇದು ಬರೀ ಸೆಕ್ಸ್ ಅಥವಾ ಹಣಕ್ಕೆ ಸಂಬಂಧಿಸಿದ್ದಲ್ಲ. 146 00:13:06,375 --> 00:13:09,583 ಅವಳು ನನ್ನನ್ನು ತಿರುಗಿ ನೋಡಿದರೂ ನನಗೆ ಅದೇ ವಿಶೇಷ. 147 00:13:10,291 --> 00:13:11,333 ಸಂತೋಷ! 148 00:13:12,041 --> 00:13:13,250 ಅಷ್ಟು ಸಾಕು! 149 00:13:14,500 --> 00:13:16,500 ಅದಕ್ಕೆ ಅವಳು ನನ್ನನ್ನು ಬಳಸಿಕೊಂಡರೂ ಸರಿ! 150 00:13:17,333 --> 00:13:20,125 ಕನಿಷ್ಠ, ಇದಕ್ಕಾದರೂ ಅವಳು ನನ್ನನ್ನು ಬಳಸಿಕೊಳ್ಳುತ್ತಾಳೆ! 151 00:13:24,375 --> 00:13:27,083 ಈ ವಯಸ್ಸಿನಲ್ಲೂ ನಿನಗೆ ಇದೆಲ್ಲಾ ಬೇಕಾ? 152 00:13:27,166 --> 00:13:29,208 ಅದೆಲ್ಲ ಬಿಡಿ, ಸಾರ್. 153 00:13:29,291 --> 00:13:31,333 ಇದಕ್ಕೆಲ್ಲ ಸಾಕ್ಷಿ ಇದೆಯಾ? 154 00:13:31,416 --> 00:13:33,875 ಸಾಕ್ಷಿ ಇಲ್ಲದೇ, ಯಾವ ತಪ್ಪೂ ಸಾಬೀತಾಗುವುದಿಲ್ಲ. 155 00:13:33,958 --> 00:13:35,500 ಸಾಬೀತುಪಡಿಸಲು ನಾವು ಬಿಡುತ್ತೀವಾ? 156 00:13:36,665 --> 00:13:40,790 ಮೂರ್ತಿ, ಸಾಕ್ಷಿಯಿಲ್ಲದೆ ಇದನೆಲ್ಲ ನಾನು ನಿನಗೆ ಹೇಳುತ್ತಿದ್ದೇನೆ ಅಂದುಕೊಂಡೆಯಾ? 157 00:13:42,208 --> 00:13:43,875 ಕಣ್ಣಾರೆ ನೋಡಿದ ಸಾಕ್ಷಿಯಿದೆ! 158 00:13:45,000 --> 00:13:46,165 ಎಂಥಾ ಪೋಲೀಸ್ ನೀನು! 159 00:13:48,208 --> 00:13:49,750 ಸರಿ. ತಡವಾಗುತ್ತಿದೆ. 160 00:13:50,458 --> 00:13:52,250 ಹೊರಡು. ನನಗೆ ಸ್ವಲ್ಪ ಕೆಲಸವಿದೆ. 161 00:15:49,083 --> 00:15:51,290 ಸುಳಲ್ - THE VORTEX 162 00:15:51,375 --> 00:15:53,208 ಭ್ರಮೆಗಳು ಮತ್ತು ಮೋಸಗಳು 163 00:15:53,290 --> 00:15:58,083 ಗಾಯಗಳು ಅನೇಕ, ಸುಳಿಯು ಹೇಳುತಿದೆ 164 00:15:59,333 --> 00:16:01,250 ಗಾಯಗಳು ಅನೇಕ, ಸುಳಿಯು ಹೇಳುತಿದೆ 165 00:16:01,333 --> 00:16:06,000 ಅಳುಗಳು ಅನೇಕ, ಸುಳಿಯು ಹೇಳುತಿದೆ 166 00:16:07,083 --> 00:16:10,708 ಬದುಕಿಗೆ ಜಯವಿಲ್ಲವೇ? 167 00:16:11,250 --> 00:16:14,833 ಬದುಕಿಗೆ ಜಯವಿಲ್ಲವೇ? 168 00:16:14,916 --> 00:16:17,958 ಓಹ್, ಸುಳಿಯೇ! 169 00:16:18,041 --> 00:16:23,291 ನೆರಳುಗಳೊಳಗೆ ಸುತ್ತುವ ಕರಿನೆರಳು 170 00:16:23,375 --> 00:16:29,208 ಒಳಗಿನ ಗುಟ್ಟುಗಳು ಹೊರಬರಲು 171 00:16:30,125 --> 00:16:31,291 ಓ, ದೇವರೇ? 172 00:16:31,375 --> 00:16:33,915 ಓಹ್, ಸುಳಿಯೇ! 173 00:16:34,000 --> 00:16:39,290 ನೆರಳುಗಳೊಳಗೆ ಸುತ್ತುವ ಕರಿನೆರಳು 174 00:16:39,375 --> 00:16:45,375 ಒಳಗಿನ ಗುಟ್ಟುಗಳು ಹೊರಬರಲು 175 00:16:45,458 --> 00:16:46,665 ಓ, ದೇವರೇ? 176 00:16:54,500 --> 00:16:57,000 ಭಕ್ತರೇ, ದಯವಿಟ್ಟು ನಿಲ್ಲಬೇಡಿ. ಚಲಿಸುತ್ತಿರಿ. 177 00:16:57,083 --> 00:16:59,458 ಲಕ್ಷಾಂತರ ಭಕ್ತರು ನಿಮ್ಮ ಹಿಂದಿದ್ದಾರೆ. 178 00:17:31,833 --> 00:17:34,666 -ಕೆಳಗಿಳಿ! ಕೆಳಗಿಳಿ! -ಅಣ್ಣ, ಯಾಕಿಷ್ಟು ತಡ? 179 00:17:34,750 --> 00:17:36,375 ಏಯ್, ಬಡ್ಡಿಮಗನೆ! 180 00:17:36,458 --> 00:17:38,833 ಹಬ್ಬದಲ್ಲಿ ಜನರ ಮಧ್ಯೆ ಬರುವುದು ಸುಲಭವಲ್ಲ. 181 00:17:38,916 --> 00:17:40,166 -ಕರೆದುಕೊಂಡು ಹೋಗು! -ಸರಿ. 182 00:17:40,250 --> 00:17:41,875 ಆಗಲೇ ಹಗಲಾಗಿದ್ದಕ್ಕೆ ಕೇಳಿದೆ. 183 00:17:41,958 --> 00:17:44,000 ಹಗಲಿನಲ್ಲಿ ಸರಕು ಲೋಡ್ ಮಾಡುವುದು ಕಷ್ಟ. 184 00:17:44,083 --> 00:17:45,500 ಏನು ಮಾಡೋದು? ಮಾಡಲೇಬೇಕು. 185 00:17:59,750 --> 00:18:01,083 ಡಬ್ಲೂ5 ರಿಮಾಂಡ್ ಕೈದಿಗಳು 186 00:18:32,583 --> 00:18:34,375 ಇಂದು ಒಬ್ಬ ಹುಡುಗಿಯೂ ಬದುಕಿರಬಾರದು. 187 00:18:34,458 --> 00:18:36,958 ನಿಮ್ಮ ಮನೆಗಳಿಗೆ ಹಣ ಕಳುಹಿಸಲಾಗಿದೆ. ಎಚ್ಚರಿಕೆ! 188 00:18:37,041 --> 00:18:38,750 ನಾವು ನೋಡಿಕೊಳ್ಳುತ್ತೇವೆ. ಹೋಗಿ. 189 00:18:38,833 --> 00:18:40,625 ಏಯ್, ಆ ದೊಣ್ಣೆಗಳನ್ನ ತಾ. 190 00:18:48,083 --> 00:18:49,083 ಬನ್ನಿ! 191 00:18:51,041 --> 00:18:53,750 -ಉಳಿದವರು ಎಲ್ಲಿ? -ಅಲ್ಲಿದ್ದಾರೆ. ಎಲ್ಲಾ ತಯಾರಾಗಿದೆ. 192 00:19:01,416 --> 00:19:03,875 ಆ ಎಂಟು ಹುಡುಗಿಯರೂ ಸಂಬಲೂರು ಎಸ್.ಐ ಜೊತೆ ಮಾತನಾಡಿದ್ದಾರೆ. 193 00:19:05,166 --> 00:19:07,375 ಅವರು ಚಿಕ್ಕವರಾಗಿದ್ದಾಗ ನನ್ನ ಮುಖ ನೋಡಿದ್ದಾರೆ. 194 00:19:09,208 --> 00:19:10,500 ಚೆಲ್ಲಪ್ಪನ ಸಾಕ್ಷಿಗಳು. 195 00:19:13,208 --> 00:19:14,583 ಸುಮ್ಮನಿರುವುದು ವ್ಯರ್ಥ. 196 00:19:15,750 --> 00:19:17,083 ನಾಳೆ ವಾರ್ಡನ್ ರಜೆ. 197 00:19:20,750 --> 00:19:22,541 ನಾಳೆ ಆ ಎಂಟು ಹುಡುಗಿಯರನ್ನ ಮುಗಿಸೋಣ. 198 00:20:01,000 --> 00:20:02,000 ಏಯ್. 199 00:20:05,250 --> 00:20:06,416 ಏನಾಯ್ತು? 200 00:20:06,500 --> 00:20:08,625 ರಕ್ತ ಬರುತ್ತಿದೆ! ಆಸ್ಪತ್ರೆಗೆ ಹೋಗೋಣ! 201 00:20:08,708 --> 00:20:09,791 ನೀನು ಯಾಕೆ ಬಂದೆ, ಅಣ್ಣ? 202 00:20:09,875 --> 00:20:13,458 ಇವನ ಅಪ್ಪನೇ ಆ ಕಳ್ಳಸಾಗಣೆದಾರರ ಕೊನೆಯ ಕೆಲಸ ಮಾಡಬೇಕು. 203 00:20:13,541 --> 00:20:17,291 ಅವರು ಬಂದಾಗ ನನ್ನಪ್ಪ ಮನಸು ಬದಲಾಯಿಸಿ ನಿರಾಕರಿಸಿದ. 204 00:20:17,375 --> 00:20:19,750 -ಏಮೇಲೆ ಏನಾಯ್ತು? -ಅವರು ಅವನನ್ನು ಹೊಡೆದು, 205 00:20:19,833 --> 00:20:23,166 ಅವನ ದೋಣಿ ತೆಗೆದುಕೊಂಡು ಅವರೇ ಸಮುದ್ರಕ್ಕೆ ಹೋದರು. 206 00:20:23,916 --> 00:20:27,125 -ಇದು ಆಗಿದ್ದು ಯಾವಾಗ? -ಈಗಷ್ಟೇ, ಸುಮಾರು 15 ನಿಮಿಷಗಳ ಹಿಂದೆ! 207 00:20:28,000 --> 00:20:30,000 ಮೊದಲು, ಆಸ್ಪತ್ರೆಗೆ ಹೋಗೋಣ! 208 00:20:30,083 --> 00:20:32,000 ನೀನು ಆ ಸರಕು ನೋಡಿದ್ದೀಯಾ? 209 00:20:32,083 --> 00:20:33,583 ಇಬ್ಬರು ಚಿಕ್ಕ ಹುಡುಗಿಯರು. 210 00:20:34,083 --> 00:20:35,333 ಎಂಟರಿಂದ ಹತ್ತು ವರ್ಷದವರು. 211 00:20:35,958 --> 00:20:38,166 ಬಟ್ಟೆಯಿಂದ ಕೈ ಮತ್ತು ಕಣ್ಣು ಕಟ್ಟಿದ್ದರು. 212 00:20:40,166 --> 00:20:41,875 -ಬಾ! -ಎಲ್ಲಿ ಹೋಗುತ್ತಿದ್ದೀಯಾ? 213 00:20:48,208 --> 00:20:50,458 ಗಾಂಧಾರಿ, ಬಾ! ನಾವು ಈಗಲೇ ಹೊರಡಬೇಕು! 214 00:20:50,541 --> 00:20:52,791 ಹೇಳೋದು ಕೇಳು! ಬನ್ನಿ! ಏನು ನೋಡುತ್ತಿದ್ದೀರಿ! 215 00:20:52,875 --> 00:20:54,458 -ನೀನೂ ಬಾ, ಸಂಧಾನಂ! -ಎಲ್ಲಿಗೆ? 216 00:20:54,541 --> 00:20:56,125 -ನಡಿ! ನನ್ನ ಮಾತು ಕೇಳಿ! -ಏನು? 217 00:20:56,208 --> 00:20:57,291 ಉಳಿದವರು ಎಲ್ಲಿ? 218 00:20:58,250 --> 00:21:01,916 ಏಯ್! ಬೇಗ ಬಾ! ಇದನ್ನು ಬಿಟ್ಟು ಬಾ. 219 00:21:02,000 --> 00:21:04,333 -ಬನ್ನಿ! ನನ್ನ ಮಾತು ಕೇಳಿ! -ಎಲ್ಲಿ ಹೋಗ್ತಾ ಇದೀಯಾ? 220 00:21:06,250 --> 00:21:07,291 ಬಾ, ಬಾ, ಬಾ! 221 00:21:10,875 --> 00:21:13,666 -ಏನಾಯ್ತು? -ಗೊತ್ತಿಲ್ಲ, ಕೇಳಿದರೂ ಏನೂ ಹೇಳ್ತಾ ಇಲ್ಲ! 222 00:21:13,750 --> 00:21:15,166 ಏನಾಯ್ತು, ನಂದಿನಿ? 223 00:21:15,916 --> 00:21:18,791 ಈ ಕಟ್ಟಡದೊಳಗೇ ಇರಿ. ನೀವು ಇಲ್ಲಷ್ಟೇ ಸುರಕ್ಷಿತವಾಗಿರುತ್ತೀರಿ. 224 00:21:18,875 --> 00:21:20,333 ಏನಾಯಿತು? ಅದನ್ನ ಮೊದಲು ಹೇಳು! 225 00:21:21,375 --> 00:21:25,166 ಸರೋಜಾಗೆ ನಿಮ್ಮ ಬಗ್ಗೆ ತಿಳಿದಿದೆ. ನಿಮ್ಮನ್ನು ಕೊಲ್ಲಲು ಹೆಂಗಸರು ಬರುತ್ತಿದ್ದಾರೆ. 226 00:21:30,958 --> 00:21:32,708 ನಾನು ಹೇಳುವವರೆಗೂ ಇಲ್ಲೇ ಅಡಗಿರಿ. 227 00:21:32,791 --> 00:21:34,375 ವಾರ್ಡನ್ ಬೇರೆ ಇಲ್ಲ. 228 00:21:34,458 --> 00:21:36,375 ಅಲ್ಲಿಯವರೆಗೂ ಅಡಗಿಕೊಳ್ಳುವುದೊಂದೇ ದಾರಿ. 229 00:21:36,916 --> 00:21:38,375 ಬ್ಲಾಕ್ ಎಲ್ಲಾ ಹುಡುಕುತ್ತಾರೆ. 230 00:21:39,416 --> 00:21:42,000 ನೀವಿಲ್ಲಿದ್ದರೆ, ಅವರು ನಿಮ್ಮನ್ನು ಹುಡುಕಲು ಸಾಧ್ಯವಿಲ್ಲ. 231 00:21:44,500 --> 00:21:45,625 ಏನು ಮಾಡಲಿ? 232 00:21:49,666 --> 00:21:52,083 ಏಯ್, ಮಾತು ಕೇಳಿ. ಹೊರಗೆ ಹೋಗೋದು ಅಪಾಯಕಾರಿ. 233 00:21:52,750 --> 00:21:54,625 ಯಾಕೆ ಶರಣಾದೆವು ಅಂತ ಕೇಳಿದ್ದೆಯಲ್ಲ? 234 00:21:55,541 --> 00:21:56,791 ರಾಕ್ಷಸಿಯನ್ನು ಕೊಲ್ಲೋಕೆ! 235 00:21:56,875 --> 00:21:58,666 ಅವಳು ನೀವಂದುಕೊಂಡ ಹಾಗೆ ಇಲ್ಲ! 236 00:21:58,750 --> 00:22:01,333 ಏಯ್, ನಾವೇನು ಮಾಡುತ್ತಿದ್ದೇವೆಂದು ನಮಗೆ ಗೊತ್ತು! 237 00:22:01,416 --> 00:22:04,833 -ನಮ್ಮನ್ನು ತಡೆಯೋಕೆ ನೋಡಬೇಡ! -ನನ್ನ ಮಾತು ಕೇಳಿ! ಮುಪ್ಪಿ, ನೀನಾದರೂ-- 238 00:22:04,916 --> 00:22:06,375 ನಾವಿದನ್ನು ಮಾಡಲೇಬೇಕು. 239 00:22:06,458 --> 00:22:08,250 ನಮ್ಮ ಚೆಲ್ಲಪ್ಪರಿಗೆ! ನಮ್ಮ ನಾಗಮ್ಮನಿಗೆ! 240 00:22:08,666 --> 00:22:12,125 -ದೇವರೇ! ಮುಪ್ಪಿ. ನನ್ನ ಮಾತು ಕೇಳು! -ಬಾಗಿಲಿಗೆ ಬೀಗ ಹಾಕು! 241 00:22:12,208 --> 00:22:14,541 ನಿಮ್ಮ ಕೋಪ ನಿಮ್ಮನ್ನು ನಾಶ ಮಾಡುತ್ತದೆ! ಹೋಗಬೇಡಿ! 242 00:22:14,625 --> 00:22:16,666 ನೀನು ನಿನ್ನ ರಾಕ್ಷಸನನ್ನು ಕೊಂದೆ! 243 00:22:16,750 --> 00:22:19,458 -ನಮ್ಮನ್ನ ಯಾಕೆ ತಡೆಯುತ್ತಿದ್ದೀಯಾ? -ಇದು ನಮ್ಮ ಸೇಡಿನ ಸಮಯ! 244 00:22:20,625 --> 00:22:21,625 ನಾಚಿ. 245 00:22:29,291 --> 00:22:31,583 -ಅವರು ದೂರ ಹೋಗಿರಬಹುದಾ? -ಹಿಡಿಯಬಹುದು ಬಿಡು! 246 00:22:31,666 --> 00:22:36,166 ದೋಣಿ ಶುರು ಮಾಡು ಅಂದೆನಲ್ಲ. ಏನು ಮಾಡುತ್ತಿದ್ದೀರಿ? 247 00:22:36,250 --> 00:22:38,125 ಏಯ್! ಬೇಗ ಹೋಗು! 248 00:22:39,666 --> 00:22:40,916 ಏಯ್, ಚಾರ್ಲಿ, ಬೇಗ ನಡಿ! 249 00:22:59,041 --> 00:23:00,083 ಹಲೋ! 250 00:23:01,166 --> 00:23:03,125 ಹಲೋ? ಕೇಳಿಸುತ್ತಿದೆಯಾ? 251 00:23:04,083 --> 00:23:05,500 ಅಪ್ಪ ಮಾತಾಡುತ್ತಿದ್ದೇನೆ. 252 00:23:07,000 --> 00:23:08,916 ಸ್ವಲ್ಪ ದಿನ ವಿದೇಶಕ್ಕೆ ಹೋಗುತ್ತಿದ್ದೇನೆ. 253 00:23:09,000 --> 00:23:10,458 ನನ್ನ ಬಗ್ಗೆ ತುಂಬಾ ಕೇಳುತ್ತೀಯಾ. 254 00:23:11,416 --> 00:23:12,625 ಒಂದು ಮಾತ್ರ ನೆನಪಿಟ್ಟುಕೋ. 255 00:23:13,541 --> 00:23:14,875 ನೀನೇ ನನ್ನ ಜಗತ್ತು! 256 00:23:15,666 --> 00:23:16,500 ಹಲೋ. 257 00:23:30,500 --> 00:23:32,125 ಕೈದಿಗಳು ಸರಿಯಾಗಿ ಕೇಳಿಸಿಕೊಳ್ಳಿ. 258 00:23:32,208 --> 00:23:34,666 ನಿಯಮ ಪಾಲಿಸುವವರನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು. 259 00:23:34,750 --> 00:23:36,583 ಮುರಿದರೆ, ಶಿಕ್ಷೆ ಕಠಿಣವಾಗಿರುತ್ತದೆ. 260 00:23:36,666 --> 00:23:40,041 ಏಯ್, ಮಾತಾಡ್ತಾ ಇದ್ದಾಗ ನಿರ್ಲಕ್ಷ್ಯ ಮಾಡುತ್ತಿದ್ದೀಯಾ? 261 00:23:40,416 --> 00:23:42,416 ಮತ್ತೆ ಹೇಳಲ್ಲ. 262 00:23:42,500 --> 00:23:43,708 ಸರಿಯಾಗಿ ವರ್ತಿಸಿ. 263 00:23:44,333 --> 00:23:45,625 ಯಾರು ಮಾತನಾಡುತ್ತಿದ್ದಾರೆ? 264 00:23:45,708 --> 00:23:48,125 ಅಮುತವಳ್ಳಿ, ಕರ್ಪಗಂ, ಮೀನಾಚ್ಚಿ... 265 00:23:48,208 --> 00:23:50,541 ರೋಲ್ ಕಾಲ್ ನಂತರ ಬಂದು ನನ್ನನ್ನು ನೋಡಿ. 266 00:23:52,166 --> 00:23:53,541 ಅರ್ಥವಾಯಿತಾ-- 267 00:24:07,583 --> 00:24:08,916 ಓಡಿ! ಓಡಿ! 268 00:24:47,541 --> 00:24:48,541 ಏಯ್! 269 00:27:01,541 --> 00:27:04,083 ಫರ್ನಾಂಡಿಸ್ ಅಣ್ಣ, ಬೈನಾಕ್ಯುಲರ್ ಇದೆಯಾ? 270 00:27:04,166 --> 00:27:05,458 ಅದು ಅಲ್ಲೇ ಇದೆ! 271 00:27:07,250 --> 00:27:08,333 ಹೌದು. 272 00:27:24,208 --> 00:27:25,916 ಅಲ್ಲಿ ನೋಡಿ! ಆ ಕಡೆ! 273 00:27:26,000 --> 00:27:27,875 -ನಡಿ, ನಡಿ, ಹೋಗೋಣ. ಬೇಗ. -ಹೋಗಿ! 274 00:28:18,333 --> 00:28:21,333 ಅವನು ಬಂದ, ಬಂದ 275 00:28:21,416 --> 00:28:23,375 ಇದು ಆರಂಭವಷ್ಟೇ 276 00:28:23,458 --> 00:28:24,375 ರಾಕ್ಷಸ. 277 00:28:24,458 --> 00:28:27,541 ಸಾವಿನ ಬಾಗಿಲು ತೆರೆಯುತ್ತೇವೆ 278 00:28:27,625 --> 00:28:30,000 ನಿನ್ನ ದೇಹವನ್ನು ಚೂರಾಗಿಸುತ್ತೇವೆ 279 00:28:30,083 --> 00:28:33,208 ಕೋಪವು ಆಳವಾಗಿ ಉರಿಯುತ್ತಿದೆ 280 00:28:33,291 --> 00:28:36,291 ತಡೆಯಿರದ ಹೊಡೆತಗಳೊಂದಿಗೆ ತುಂಡಾಗುತ್ತಿದೆ 281 00:28:36,375 --> 00:28:39,250 ಪದಗಳು ಮತ್ತು ಕೆಲಸಗಳಲ್ಲಿ ಹೆಮ್ಮೆಯಿದೆ 282 00:28:39,333 --> 00:28:42,416 ನರಗಳಲ್ಲಿ ಬೆಂಕಿ ದೇಹವನ್ನು ಸುಡುತ್ತಿದೆ 283 00:28:42,500 --> 00:28:45,291 ಧೂಳಾಗಿ ಹೋಗುವವನು ಬರುತ್ತಿದ್ದಾನೆ 284 00:28:45,375 --> 00:28:47,958 ಧೂಳಾಗಿ ಹೋಗುವವನು ಬರುತ್ತಿದ್ದಾನೆ 285 00:28:48,041 --> 00:28:51,041 ಧೂಳಾಗಿ ಹೋಗುವವನು ಬರುತ್ತಿದ್ದಾನೆ 286 00:28:51,125 --> 00:28:54,416 ಯಾರು ಪ್ರಯತ್ನಿಸಿದರೂ ಈ ಯುದ್ಧ ನಿಲ್ಲದು 287 00:28:54,500 --> 00:28:57,583 ಅಹಂಕಾರ ತಲೆಬಾಗಲಿದೆ 288 00:29:00,416 --> 00:29:03,291 ದುಷ್ಟರ ಸಂಹಾರ ನಡೆಯಲಿದೆ 289 00:29:06,416 --> 00:29:09,416 ಗುಡುಗು ಪ್ರಪಂಚದಾದ್ಯಂತ ಪ್ರತಿಧ್ವನಿಸಲಿದೆ 290 00:29:34,541 --> 00:29:37,750 ರಾಕ್ಷಸ ಸಂಹಾರ 291 00:29:37,833 --> 00:29:39,000 ಬಾ. 292 00:29:56,125 --> 00:30:00,208 ಬಾ ಇಲ್ಲಿ ನಾನು ನಿನ್ನನ್ನು ಚೂರಾಗಿಸುತ್ತೇನೆ 293 00:30:01,000 --> 00:30:02,250 ಬಾ ಇಲ್ಲಿ 294 00:30:02,333 --> 00:30:06,583 ಬಾಣಗಳು ಎದೆ ಸೀಳಲಿವೆ 295 00:30:06,666 --> 00:30:07,916 ಬಾ ಇಲ್ಲಿ 296 00:31:48,541 --> 00:31:51,375 ಬಂತು ಬಂತು ನೋಡು 297 00:31:51,458 --> 00:31:54,125 ಇದು ಆರಂಭವಷ್ಟೇ 298 00:31:54,208 --> 00:31:57,375 ಸಾವಿನ ಸರಣಿ ಬರಲಿದೆ 299 00:31:57,458 --> 00:32:00,250 ದೇಹವು ಚೂರು ಚೂರಾಗಲಿದೆ 300 00:32:00,333 --> 00:32:03,083 ಕ್ರೋಧಾಗ್ನಿ ಒಳಗೆ ಉರಿಯುತ್ತಿದೆ 301 00:32:03,166 --> 00:32:06,208 ತಡೆಯಿಲ್ಲದ ಹೊಡೆತಗಳೊಂದಿಗೆ ಕತ್ತರಿಸುತ್ತ 302 00:32:06,291 --> 00:32:09,166 ಪದಗಳು ಮತ್ತು ಕೆಲಸಗಳಲ್ಲಿ ಹೆಮ್ಮೆ ಹೊಳೆಯುತ್ತಿದೆ 303 00:32:09,250 --> 00:32:12,416 ನರದಲ್ಲಿನ ಬೆಂಕಿ ಇಡೀ ದೇಹವನ್ನು ಸುಡುತ್ತಿದೆ 304 00:32:12,500 --> 00:32:15,208 ಧೂಳಾಗುವವನು ಬರುತ್ತಿದ್ದಾನೆ 305 00:32:15,291 --> 00:32:18,291 ಧೂಳಾಗುವವನು ಬರುತ್ತಿದ್ದಾನೆ 306 00:32:18,375 --> 00:32:21,333 ಧೂಳಾಗುವವನು ಬರುತ್ತಿದ್ದಾನೆ 307 00:32:21,416 --> 00:32:24,541 ಯಾರೇ ಪ್ರಯತ್ನಿಸಿದರೂ ಈ ಯುದ್ಧ ನಿಲ್ಲದು 308 00:32:24,625 --> 00:32:27,333 ಧೂಳಾಗುವವನು ಬರುತ್ತಿದ್ದಾನೆ 309 00:32:27,416 --> 00:32:30,291 ಧೂಳಾಗುವವನು ಬರುತ್ತಿದ್ದಾನೆ 310 00:32:30,375 --> 00:32:33,333 ಧೂಳಾಗುವವನು ಬರುತ್ತಿದ್ದಾನೆ 311 00:32:33,416 --> 00:32:36,250 ಯಾರೇ ಪ್ರಯತ್ನಿಸಿದರೂ ಈ ಯುದ್ಧ ನಿಲ್ಲದು 312 00:32:36,333 --> 00:32:39,541 ಅಹಂಕಾರ ತಲೆಬಾಗಲಿದೆ 313 00:32:42,500 --> 00:32:45,458 ದುಷ್ಟ ಸಂಹಾರ ಪ್ರಾರಂಭವಾಗಿದೆ 314 00:32:48,458 --> 00:32:51,208 ಗುಡುಗು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಿದೆ 315 00:33:29,250 --> 00:33:32,041 -ಏಯ್! ಅವರನ್ನು ಕರೆದುಕೊಂಡು ಬಾ. -ಬಾ, ಬಾ. 316 00:33:36,208 --> 00:33:37,208 ಏಯ್! 317 00:33:41,958 --> 00:33:43,750 ಏಯ್! ಏನು ಮಾಡುತ್ತಿದ್ದೀರಾ? 318 00:33:44,541 --> 00:33:46,708 ಅವರು ದೋಣಿಯಲ್ಲಿಲ್ಲದಿದ್ದರೆ ನಾವೇ ಸುರಕ್ಷಿತ. 319 00:33:46,791 --> 00:33:49,083 ಸಿಕ್ಕಿಬಿದ್ದರೂ ಕೇಸ್ ನಡೆಯಲ್ಲ. ಏಯ್! ಕಟ್ಟೋ! 320 00:33:50,458 --> 00:33:53,333 ಅವರು ಮಕ್ಕಳು. ತುಂಬಾ ಪಾಪ ಮಾಡಬೇಡಿ. 321 00:33:53,416 --> 00:33:54,708 ಏಯ್, ಮೂರ್ತಿ! 322 00:33:54,791 --> 00:33:57,625 ನೀನೂ ಇದೇ ವ್ಯಾಪಾರದಲ್ಲಿದ್ದರೂ ಸಂತನಂತೆ ಮಾತಾಡುತ್ತೀಯಾ? 323 00:33:58,416 --> 00:33:59,416 ಕಟ್ಟಿರೋ. 324 00:33:59,875 --> 00:34:01,208 ಬೇಗ ಹೋಗಿ, ಬೇಗ ಹೋಗಿ! 325 00:34:36,791 --> 00:34:38,291 ನಿಲ್ಲಿಸಿ! 326 00:35:07,375 --> 00:35:10,083 ಎದ್ದೇಳು! ಎದ್ದೇಳು! ಬೇಗ! 327 00:35:11,000 --> 00:35:13,125 ಬೇಗ! ಒಳಗೆ ಹೋಗು! 328 00:35:14,458 --> 00:35:15,416 ಒಳಗೆ ಹೋಗು! 329 00:35:24,083 --> 00:35:25,875 ಏಯ್, ಹೊರಗೆ ಎಸೆಯೋ. 330 00:35:30,291 --> 00:35:31,791 -ಏಯ್! -ಬೋಳಿ ಮಕ್ಕಳಾ! 331 00:35:31,875 --> 00:35:34,083 -ಆ ಮಕ್ಕಳು! -ಬೇಗ ತಿರುಗಿ! 332 00:35:34,333 --> 00:35:36,625 -ನಡಿ, ನಡಿ! -ಹತ್ತಿರ ಹೋಗಿ, ಅಣ್ಣ! 333 00:35:37,458 --> 00:35:38,291 ಏಯ್! ಏಯ್! 334 00:35:39,291 --> 00:35:40,458 ಬೇಗ! 335 00:35:43,791 --> 00:35:45,083 ತಮ್ಮಾ! ತಮ್ಮಾ! ತಮ್ಮಾ! 336 00:36:26,416 --> 00:36:29,333 ದಯವಿಟ್ಟು ನನ್ನ ಮಾತು ಕೇಳಿ! 337 00:36:32,416 --> 00:36:37,333 ಇನ್ನೊಂದು ಜೀವ ತೆಗೆದ ಪಾಪಪ್ರಜ್ಞೆ ಪ್ರತಿದಿನ ನಿಮ್ಮನ್ನು ಕಾಡುತ್ತದೆ! 338 00:36:41,958 --> 00:36:44,625 ಅದು ಹೇಗಿರುತ್ತದೆಂದು ನನಗೆ ಚೆನ್ನಾಗಿ ಗೊತ್ತು! 339 00:36:49,875 --> 00:36:53,125 ಅದರಿಂದ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ! 340 00:36:57,125 --> 00:36:59,625 ಬೇಡ, ಮಾಡಬೇಡಿ! 341 00:37:00,333 --> 00:37:01,416 ದಯವಿಟ್ಟು! 342 00:37:02,458 --> 00:37:03,541 ಬೇಡ! 343 00:37:14,250 --> 00:37:15,833 ಆ ರಾಕ್ಷಸಿ ಸಾಯಲೇಬೇಕು! 344 00:37:16,416 --> 00:37:18,291 ಅಡ್ಡ ಬರಬೇಡ, ನಂದಿನಿ! 345 00:37:27,125 --> 00:37:28,000 ಬೇಡ! 346 00:37:29,708 --> 00:37:30,833 ನನ್ನ ಮಾತು ಕೇಳು! 347 00:37:31,666 --> 00:37:35,125 ಚೆಲ್ಲಪ್ಪ ಮತ್ತು ನಾಗಮ್ಮನಿಗೆ ನೀವು ಕೊಲೆಗಾರರಾಗುವುದು ಬೇಕಿರಲಿಲ್ಲ! 348 00:37:36,500 --> 00:37:39,583 ಅವರು ತಮ್ಮ ಪ್ರಾಣ ಕೊಟ್ಟು ನಿಮ್ಮನ್ನು ಯಾಕೆ ಕಾಪಾಡಿದರು? 349 00:37:46,125 --> 00:37:48,125 ನೀವು ಚೆನ್ನಾಗಿ ಬಾಳಬೇಕು ಅಂತಲ್ಲವೇ? 350 00:37:49,375 --> 00:37:51,708 ನಿಮ್ಮ ಬದುಕು ಚೆನ್ನಾಗಿರಲಿ ಎಂದು. 351 00:39:08,000 --> 00:39:09,000 ನಾಗಮ್ಮ. 352 00:39:21,125 --> 00:39:22,125 ಇಲ್ಲಿ ಬನ್ನಿ. 353 00:39:24,000 --> 00:39:26,083 ನಾನು ನಾಗಮ್ಮನಿಗೆ ಮಾತು ಕೊಟ್ಟಿದ್ದೇನೆ. 354 00:39:27,291 --> 00:39:28,583 ನಿಮ್ಮ ಆರೈಕೆ ಮಾಡುತ್ತೇನೆ. 355 00:39:32,166 --> 00:39:33,916 ಅಪ್ಪ! 356 00:40:48,125 --> 00:40:50,625 ಪುಟ್ಟ! ಏಯ್! 357 00:42:01,125 --> 00:42:03,875 ಕೊನೆಯ ದಿನ, ಸೂರಸಂಹಾರದ ನಂತರ 358 00:42:03,958 --> 00:42:08,750 ಲಕ್ಷಾಂತರ ಜನರು ತಮ್ಮ ವೇಷ ಕಳಚಿಟ್ಟು ಸಮುದ್ರದಲ್ಲಿ ಸ್ನಾನ ಮಾಡುತ್ತಾರೆ. 359 00:42:08,833 --> 00:42:11,083 ಇಷ್ಟು ದಿನ ಈ ವೇಷ ಹಾಕುವುದಕ್ಕಿಂತ, 360 00:42:11,166 --> 00:42:13,875 ಕಡೆಯ ದಿನ ಅದನ್ನು ತೆಗೆಯುವುದೇ ಹೆಚ್ಚು ವಿಶೇಷ. 361 00:42:15,583 --> 00:42:18,083 ನೀರಲ್ಲಿ ಕೊಚ್ಚಿಹೋಗುವುದು ಅವರ ವೇಷವಷ್ಟೇ ಅಲ್ಲ. 362 00:42:18,166 --> 00:42:20,041 ಅದರ ಜೊತೆ ಅವರ ಆಕ್ರೋಶ, 363 00:42:20,125 --> 00:42:23,208 ಅಸೂಯೆ, ತಪ್ಪಿತಸ್ಥ ಭಾವನೆ, ಪಾಪಗಳು ಮತ್ತು ಅಹಂಕಾರ. 364 00:42:23,291 --> 00:42:25,375 ನಮ್ಮೊಳಗಿರುವ ಎಲ್ಲಾ ದುರ್ಗುಣಗಳು. 365 00:42:26,291 --> 00:42:30,166 ಸೂರಸಂಹಾರ ಎಂದರೆ ಈ ವೇಷವನ್ನು ಕಳಚಿ ಎಸೆದು 366 00:42:30,250 --> 00:42:31,791 ಹೊಸ ಜೀವನವನ್ನು ಪ್ರಾರಂಭಿಸುವುದು. 367 00:42:35,000 --> 00:42:36,666 ಗೌರಿ ಅಕ್ಕ, ಚೆನ್ನಾಗಿ ಸೇರಿಸು! 368 00:42:36,750 --> 00:42:38,916 -ಆಗಷ್ಟೇ ಒಳ್ಳೆಯ ಬಣ್ಣ ಬರುತ್ತದೆ! -ಒಂದು ನಿಮಿಷ! 369 00:42:39,000 --> 00:42:40,208 ರಿಜಿಸ್ಟರ್‌ನಲ್ಲಿದೆ! 370 00:43:00,416 --> 00:43:02,083 ಮೇಡಂ! ಬೇಗ! 371 00:43:02,833 --> 00:43:04,166 ಎಷ್ಟು ಹೊತ್ತು ಕಾಯಬೇಕು? 372 00:43:14,083 --> 00:43:17,083 ಈ ನ್ಯಾಯಾಲಯಕ್ಕೆ ಸಂಕೀರ್ಣ ಪರಿಸ್ಥಿತಿ ಎದುರಾಗಿದೆ. 373 00:43:17,583 --> 00:43:21,000 ಪ್ರಕರಣದ ವಿಚಾರಣೆಯ ಸಮಯದಲ್ಲಿ, ವಕೀಲರಾದ ಚೆಲ್ಲಪ್ಪ ನಿಧನರಾದರು. 374 00:43:21,083 --> 00:43:25,166 ಹೈಕೋರ್ಟ್‌ನೊಂದಿಗೆ ಚರ್ಚಿಸಿದ ನಂತರ, ನಾವು ಒಂದು ನಿರ್ಧಾರಕ್ಕೆ ಬಂದಿದ್ದೇವೆ. 375 00:43:26,166 --> 00:43:30,416 ಗೌರವಾನ್ವಿತ ನ್ಯಾಯವಾದಿ ಚೆಲ್ಲಪ್ಪ ಅವರ ಅಂತಿಮ ವಾದವನ್ನು ಸಲ್ಲಿಸಿರುವುದರಿಂದ 376 00:43:30,875 --> 00:43:34,125 ಈ ನ್ಯಾಯಾಲಯ ತನ್ನ ತೀರ್ಪನ್ನು ಘೋಷಿಸಲು ನಿರ್ಧರಿಸಿದೆ. 377 00:43:34,833 --> 00:43:36,083 ಅದನ್ನು ಆಧರಿಸಿ, 378 00:43:36,166 --> 00:43:40,791 ಎಲ್ಲಾ ಆರೋಪಗಳಿಂದಲೂ ನಂದಿನಿಯವರನ್ನು ಮುಕ್ತಗೊಳಿಸಲಾಗಿದೆ. 379 00:43:51,166 --> 00:43:54,541 ಇನ್ನೊಂದು ಕಡೆ, ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ 380 00:43:54,625 --> 00:43:58,750 ತನ್ನ ಸರ್ವೀಸ್ ರಿವಾಲ್ವರ್‌ನ ನಿರ್ಲಕ್ಷ್ಯದ ನಿರ್ವಹಣೆಗಾಗಿ 381 00:43:59,250 --> 00:44:02,875 ಪೊಲೀಸ್ ಅಧಿಕಾರಿ ಸಕ್ಕರೆ ಅಲಿಯಾಸ್ ಚಕ್ರವರ್ತಿಯವರನ್ನು ಪೊಲೀಸ್ ಪಡೆಯಿಂದ 382 00:44:02,958 --> 00:44:05,875 ಅಮಾನತುಗೊಳಿಸಬೇಕೆಂದು ನ್ಯಾಯಾಲಯವು ಶಿಫಾರಸ್ಸು ಮಾಡುತ್ತದೆ. 383 00:44:14,041 --> 00:44:16,666 ನಾನು ಈ ಕೇಸ್‌ನಿಂದ ಬಿಡುಗಡೆಯಾದ ಮೇಲೆ, 384 00:44:16,750 --> 00:44:18,750 ಈ ಹೊರೆ ಇಳಿಯುತ್ತದೆ ಎಂದುಕೊಂಡಿದ್ದೆ. 385 00:44:19,583 --> 00:44:20,958 ಆದರೆ ನಿನಗೊಂದು ಗೊತ್ತಾ? 386 00:44:22,583 --> 00:44:27,708 ಆ ಪಾಪಪ್ರಜ್ಞೆ ಕಾಡುತ್ತಲೇ ಇರುತ್ತದೆ, ಅದು ಹೋಗುವುದಿಲ್ಲ. 387 00:44:30,208 --> 00:44:31,750 ಇದರ ಜೊತೆ ನಾನು ಹೇಗೆ ಬದುಕಲಿ? 388 00:44:32,875 --> 00:44:37,291 ಏನೇ ಹೇಳಿದರೂ ನಾನು ಒಂದು ಜೀವ ತೆಗೆದವಳು. 389 00:44:38,833 --> 00:44:40,625 ನಾನೂ ಕೆಟ್ಟವಳಲ್ಲವಾ, ಸಕ್ಕರೆ? 390 00:44:43,208 --> 00:44:46,416 ಜಗತ್ತಿನಲ್ಲಿ ಬರೀ ಕೆಟ್ಟವರು ಮತ್ತು ಒಳ್ಳೆಯವರು ಮಾತ್ರವೇ ಇಲ್ಲ. 391 00:44:47,958 --> 00:44:51,875 ಒಬ್ಬ ಪೋಲೀಸ್ ಆಗಿ ಕೆಟ್ಟದ್ದನ್ನು ಅಳಿಸಿ ಪಾಪ ನಿವಾರಿಸುವುದು ನನ್ನ ಕೆಲಸ ಎಂದು ನಂಬಿದ್ದೆ. 392 00:44:56,000 --> 00:45:00,208 ಆದರೆ ಇದೇ ಜಗತ್ತಿನಲ್ಲಿ ಒಳ್ಳೆಯವರು, ಒಳ್ಳೆಯದು ಇದೆ ಅನ್ನೋದನ್ನ ನಾವು ಮರೆಯುತ್ತೇವೆ, ಅಲ್ವಾ? 393 00:45:05,375 --> 00:45:07,875 ಎಲ್ಲರೂ ಒಳ್ಳೆಯವರಾಗಲು ಸಾಧ್ಯವಿದೆ. 394 00:45:10,583 --> 00:45:12,458 ರಾಕ್ಷಸಿಗೆ ನಾಗಮ್ಮನಂತೆ, 395 00:45:13,208 --> 00:45:15,958 ಮೂರ್ತಿಯಂತಹವರಿಗೆ ಚೆಲ್ಲಪ್ಪ ಸರ್ ಅಂಥವರು ಇದ್ದಾರೆ, ಅಲ್ವಾ? 396 00:45:18,166 --> 00:45:20,291 ಫರ್ನಾಂಡಿಸ್, ತಮ್ಮವರನ್ನು ನೋಡಿಕೊಳ್ಳುತ್ತಾರೆ. 397 00:45:22,041 --> 00:45:27,875 ಧಾಮು, ಕುಟುಂಬ ಒಡೆಯುವುದನ್ನು ತಡೆಯಲು ತನ್ನ ತಂದೆ ಯಾರೆಂದು ಹೇಳಲಿಲ್ಲ. 398 00:45:29,041 --> 00:45:32,541 ಏನು ಹೇಳೋಕೆ ನೋಡುತ್ತಿದ್ದೇನೆ ಅಂದರೆ ಈ ಜಗತ್ತು ಅಷ್ಟೇನೂ ಕೆಟ್ಟದಲ್ಲ. 399 00:45:33,583 --> 00:45:35,250 ಒಳ್ಳೆಯವರೂ ಬೇಕಾದಷ್ಟು ಇದ್ದಾರೆ. 400 00:45:37,250 --> 00:45:38,458 ಅವರಲ್ಲಿ ನೀನೂ ಒಬ್ಬಳು. 401 00:45:40,083 --> 00:45:41,083 ನಂಬು. 402 00:47:06,583 --> 00:47:08,583 ಉಪ ಶೀರ್ಷಿಕೆ ಅನುವಾದ: ರಾಜು 403 00:47:08,666 --> 00:47:10,666 ಸೃಜನಶೀಲ ಮೇಲ್ವಿಚಾರಕರು: ವಿವೇಕ್