1 00:00:06,000 --> 00:00:06,840 ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ. 2 00:00:06,920 --> 00:00:07,760 ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ. 3 00:00:07,840 --> 00:00:08,680 ಯಾವುದೇ ಸಾಮ್ಯತೆ ಕಾಕತಾಳೀಯ. ಸಂಭಾಷಣೆ ಅಥವಾ ಪಾತ್ರ 4 00:00:08,760 --> 00:00:09,600 ಅವಮಾನಿಸುವ ಉದ್ದೇಶ ಹೊಂದಿಲ್ಲ. 5 00:00:09,680 --> 00:00:10,520 LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ. 6 00:00:10,600 --> 00:00:11,440 ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ. 7 00:00:11,520 --> 00:00:12,360 ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು 8 00:00:12,440 --> 00:00:13,280 ಮಾಟಮಂತ್ರ ಇತ್ಯಾದಿ ಉತ್ತೇಜಿಸದು. 9 00:00:13,360 --> 00:00:14,520 ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು ಅಮೆಝಾನ್ ಬೆಂಬಲಿಸದು. 10 00:00:14,600 --> 00:00:15,880 ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. 11 00:00:27,480 --> 00:00:28,720 ಹೇ, ಆ ಸದ್ದನ್ನು ನಿಲ್ಲಿಸು. 12 00:00:29,680 --> 00:00:34,200 -ದೊಡ್ಡ ಟ್ರಕ್ ಬೇಕೆಂದು ನಾನು ಹೇಳಿದ್ದೆ. -ಅದಕ್ಕೆ ನಿನ್ನ ಅಪ್ಪ ಹಣ ನೀಡುವರೇ? 13 00:00:34,280 --> 00:00:35,120 ಅತ್ತ ಸರಿ! 14 00:00:39,080 --> 00:00:41,360 ತುಂಬಾ ಜಾಗವಿದೆ. ಫ್ಲ್ಯಾಶ್ ಲೈಟ್ ತನ್ನಿ. 15 00:00:44,160 --> 00:00:45,000 ಇಲ್ಲಿ ಹಾಕು. 16 00:00:47,080 --> 00:00:48,000 ಪೆದ್ದ. 17 00:00:53,920 --> 00:00:57,400 -ಮಿ. ದೇವಿ ಪ್ರಸಾದ್! -ವಿಕ್ಕಿ, ಬಾಗಿಲು ತೆರೆ! 18 00:00:58,000 --> 00:01:01,240 -ಏನಾಯಿತು? -ಬಾಗಿಲು ತೆರೆಯಿರಿ. 19 00:01:01,320 --> 00:01:02,240 ಏನಾಗಿಲ್ಲ ತಾನೇ? 20 00:01:58,360 --> 00:01:59,200 ಸರ್! 21 00:01:59,280 --> 00:02:02,000 ಒಳಗೆ ಬಂಧಿ ಆಗಿದ್ದಿರಾ? ತೆರೆಯಲು ಪ್ರಯತ್ನಿಸುತ್ತಿದ್ದೆವು. 22 00:02:06,360 --> 00:02:08,400 ಏನಾಯಿತು, ಮಿ. ದೇವಿ ಪ್ರಸಾದ್? 23 00:02:08,480 --> 00:02:10,400 ಕತ್ತಲಿನಲ್ಲಿ ಭಯವಾಗಿರಬೇಕು. 24 00:02:52,920 --> 00:02:56,520 ಅಧೂರ 25 00:02:59,680 --> 00:03:01,440 ಅಲ್ಲಿ ನಾನು ಏನೋ ನೋಡಿದೆ ಮತ್ತು... 26 00:03:01,560 --> 00:03:04,160 ನೋಡಿ, ನನಗೆ ಹೇಳಬೇಕಾಗಿದ್ದನ್ನು ನಾನು ಹೇಳಿದ್ದೇನೆ. 27 00:03:13,600 --> 00:03:14,920 -ರಜತ್. -ಅದು ತುಂಬಾ ಕೆಟ್ಟದ್ದು... 28 00:03:15,400 --> 00:03:16,480 ಸೈಫ್, ಜಾಗ್ರತೆ. 29 00:03:17,280 --> 00:03:19,320 ಜಾಗ್ರತೆಯಿರಲಿ. 30 00:03:21,680 --> 00:03:24,440 ನೀನು ಈ ಕಡೆ ತಿರುಗು. ಅಲ್ಲಿಂದ ಹೋಗು. 31 00:03:29,600 --> 00:03:31,800 -ಕ್ಷಮಿಸು! -ರಜತ್, ತಲೆ ಕೆಟ್ಟಿದೆಯೇ? 32 00:03:31,880 --> 00:03:33,480 ನನ್ನನ್ನು ಕ್ಷಮಿಸು! 33 00:03:33,560 --> 00:03:35,360 ರಜತ್, ಏನು ಮಾಡುತ್ತಿರುವೆ? 34 00:03:41,720 --> 00:03:42,760 ಮಿ. ಜೈಸಿಂಗ್? 35 00:03:45,120 --> 00:03:47,480 ನಿಮ್ಮ ಸಹೋದ್ಯೋಗಿಗೆ ಎಲ್ಲಾ ಹೇಳಿದೆ, ಸರ್. 36 00:03:48,200 --> 00:03:51,480 ನಿಮ್ಮ ಮತ್ತು ರಜತ್ ಹೊರತಾಗಿ ಬೇರೆ ಯಾರಾದರೂ ಇಲ್ಲಿದ್ದರೇ? 37 00:03:55,560 --> 00:03:56,840 ಯಾರನ್ನಾದರೂ ನೋಡಿದಿರಾ? 38 00:03:58,120 --> 00:03:59,200 ತುಂಬಾ ಕತ್ತಲಿತ್ತು. 39 00:04:00,120 --> 00:04:01,880 -ಕೇಳಿಸಿತಾ... -ಏನಿದು? 40 00:04:01,960 --> 00:04:03,920 ರಜತನನ್ನು ಉಳಿಸಲು ನೀವು ಯತ್ನಿಸಲಿಲ್ಲವೇ? 41 00:04:04,000 --> 00:04:06,240 ಖಂಡಿತ ಪ್ರಯತ್ನ ಪಟ್ಟೆ! ಇದೆಂತಹ ಪ್ರಶ್ನೆ? 42 00:04:06,320 --> 00:04:09,280 ದಯವಿಟ್ಟು ಅದನ್ನು ವಾಪಸ್ ನೀಡಿ. ಮುಖ್ಯವಾದ ಕರೆ ಮಾಡಲಿಕ್ಕಿದೆ. 43 00:04:09,960 --> 00:04:11,720 ಆತಂಕದ ಔಷಧಿ ತೆಗೆದುಕೊಳ್ಳುತ್ತೀರಲ್ಲ? 44 00:04:13,720 --> 00:04:18,080 ನಿಮ್ಮ ಮತ್ತು ನಿಮ್ಮ ಬ್ಯಾಚ್ಮೇಟ್ಗಳ ಎಲ್ಲಾ ಸಂಗತಿ ನನಗೆ ಗೊತ್ತು. 45 00:04:18,600 --> 00:04:20,960 ನನಗೆ ತಿಳಿದಿಲ್ಲದೇ ಇರುವುದನ್ನು ತಿಳಿಯುವೆ. 46 00:04:21,480 --> 00:04:23,000 ರಜತ್ ನಿಜವಾಗಿ ಹೇಗೆ ಸತ್ತ ಎಂದು. 47 00:04:23,680 --> 00:04:28,200 ಅಥವಾ ಸುಯಾಶ್ ಕಿಸೆಯಲ್ಲಿ ಪತ್ತೆಯಾದ ಆ ಚೀಟಿಗಳನ್ನು ಯಾರು ಬರೆದರೆಂದು. 48 00:04:30,920 --> 00:04:33,360 ಇಲ್ಲವೇ, ನೀವಾಗಿಯೇ ನನಗೆ ಹೇಳಬಹುದು. 49 00:04:35,240 --> 00:04:37,080 ಆಫೀಸರ್ ಬೇಡಿ, ಎಕ್ಸ್ಕ್ಯೂಸ್ ಮಿ. 50 00:04:37,160 --> 00:04:41,240 ಇವರು ವಿಕಾಸ್ ವಿರ್ಮಾನಿ, ನೀಲಗಿರಿ ವ್ಯಾಲಿ ಸ್ಕೂಲಿನ ಕಾನೂನು ಸಲಹೆಗಾರರು. 51 00:04:41,360 --> 00:04:45,360 ನಿಮಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆಂದು ನೆನಪಿಸಲು ಬಯಸುವೆ ಆಫೀಸರ್ ಬೇಡಿ. 52 00:04:45,880 --> 00:04:49,440 ನಿಮ್ಮ ವಿನಂತಿಯಂತೆ ಇಂದು ಅಪರಾಹ್ನ, ಎಲ್ಲಾ ಸಿಬ್ಬಂದಿಗಳು, 53 00:04:49,520 --> 00:04:52,120 ಮತ್ತು ಹಳೆವಿದ್ಯಾರ್ಥಿಗಳು ನಿಮ್ಮೊಂದಿಗೆ ಮಾತನಾಡುವರು. 54 00:04:52,200 --> 00:04:55,520 ಆದರೆ ಈ ರೀತಿ ನಮ್ಮ ಕ್ಲೈಂಟುಗಳಿಗೆ ನೀವು ಕಿರುಕುಳ ನೀಡುವಂತಿಲ್ಲ... 55 00:04:55,600 --> 00:04:56,440 ಸರ್! 56 00:04:56,520 --> 00:04:58,360 ಇನ್ನೊಂದು ಹೆಣ ಸಿಕ್ಕಿದೆ. ಇಲ್ಲಿ ಬನ್ನಿ! 57 00:04:58,720 --> 00:05:02,760 -ಹೌದು ಸರ್. -ಕಬೀರ್, ಮನೋಜ್, ಇಲ್ಲಿ ಬನ್ನಿ. 58 00:05:02,800 --> 00:05:04,080 ಅಬುಗೆ ಹೊರಬರಲು ಸಹಾಯ ಮಾಡಿ. 59 00:05:06,640 --> 00:05:08,640 -ಅಬು, ಅದನ್ನು ಅಗೆ. -ಆಯಿತು ಸರ್. 60 00:05:08,720 --> 00:05:10,080 ಅಗೆಯುವುದನ್ನು ಪ್ರಾರಂಭಿಸಿ. 61 00:05:12,160 --> 00:05:13,040 ಅದನ್ನು ಹೊರತೆಗೆಯಿರಿ. 62 00:05:14,480 --> 00:05:15,560 ಅಗೆಯಿರಿ, ಅಗೆಯಿರಿ. 63 00:05:18,200 --> 00:05:19,080 ಆಯಿತು. 64 00:05:19,720 --> 00:05:21,080 ಅದನ್ನು ಹೊರತೆಗೆಯಿರಿ. 65 00:05:21,160 --> 00:05:22,680 ನೀವು ಈ ಸ್ಲ್ಯಾಬ್ ತೆಗೆಯಿರಿ. 66 00:05:23,360 --> 00:05:24,360 ಅದನ್ನು ಹೊರತೆಗೆಯಿರಿ. 67 00:05:25,360 --> 00:05:28,400 ಆ ಕಡೆ ಕೂಡ ಅಗೆಯಿರಿ. ಹೌದು, ಹಿಂದಿನಿಂದ ಕೂಡ. 68 00:05:32,200 --> 00:05:33,360 ಹಗ್ಗ ಹೊರತೆಗೆಯಿರಿ. 69 00:05:39,000 --> 00:05:40,600 ಅದು ಶಾಲಾ ಸಮವಸ್ತ್ರ. 70 00:05:40,680 --> 00:05:42,400 ಅದು ವಿದ್ಯಾರ್ಥಿಯೊಬ್ಬನ ಹೆಣವಾಗಿರಬೇಕು. 71 00:05:44,600 --> 00:05:46,240 ಕಳೇಬರವನ್ನು ಎಚ್ಚರಿಕೆಯಿಂದ ತೆಗೆಯಿರಿ. 72 00:05:47,280 --> 00:05:48,760 ಹೋಗಿ ಸಾಕ್ಷ್ಯದ ಚೀಲಗಳನ್ನು ತನ್ನಿ. 73 00:05:50,480 --> 00:05:53,240 ಜಾಗ್ರತೆ, ಜಾಗ್ರತೆ. 74 00:05:56,640 --> 00:05:58,000 ಮಣ್ಣು ತೆಗೆಯಿರಿ. 75 00:06:11,000 --> 00:06:11,920 ಮಣ್ಣು ತೆರವುಗೊಳಿಸಿ. 76 00:06:47,720 --> 00:06:51,520 ಸರ್, ಹೊಸ ವಿಂಗಿನಲ್ಲಿ ಏನೋ ನಡೆದಿದೆ. 77 00:06:51,600 --> 00:06:53,360 ಅಲ್ಲಿ ಹುಡುಗನೊಬ್ಬನ ಮೃತದೇಹ ಪತ್ತೆಯಾಗಿದೆ. 78 00:06:55,760 --> 00:06:58,680 ಯಾರ ಹೆಣ ಎಂದು ತಿಳಿದಿಲ್ಲ, ಆದರೆ ಇದೆ. 79 00:07:38,400 --> 00:07:39,240 ಆದು! 80 00:07:48,320 --> 00:07:49,160 ನಿನಾದ್! 81 00:08:19,960 --> 00:08:23,760 ನಾವು ನರರೋಗತಜ್ಞರನ್ನು ನೋಡಬೇಕು. ನಾನು ಡಾ. ಗೋಮ್ಸ್ ಜೊತೆ ಮಾತನಾಡಿದೆ. 82 00:08:24,320 --> 00:08:26,160 ಅವರ ಆಸ್ಪತ್ರೆ ಮಾರ್ಕೆಟ್ ರಸ್ತೆಯಲ್ಲಿದೆ. 83 00:08:26,640 --> 00:08:28,640 ಇವತ್ತೇ ವೇದಾಂತನನ್ನು ಕರೆದುಕೊಂಡು ಹೋಗಬೇಕು. 84 00:08:29,120 --> 00:08:33,920 -ಡೀನ್ ಬಳಿ ಮಾತನಾಡುವೆ. -ಅವರಿಗೆ ವೇದಾಂತ್ ಬಗ್ಗೆ ಯೋಚಿಸಲು ಸಮಯವಿಲ್ಲ. 85 00:08:34,760 --> 00:08:36,400 ನೀನು ಈ ನಿರ್ಧಾರ ತೆಗೆದುಕೊಳ್ಳಬೇಕು. 86 00:08:37,520 --> 00:08:41,000 ಇಲ್ಲೇನು ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. 87 00:08:41,760 --> 00:08:44,320 ಇಂದು ವಿದ್ಯಾರ್ಥಿಯೊಬ್ಬನ ಹೆಣ ಪತ್ತೆಯಾಗಿದೆ. 88 00:08:44,400 --> 00:08:47,240 ವರ್ಷಗಳಿಂದ ವಿದ್ಯಾರ್ಥಿಯೊಬ್ಬ ಕಾಣೆಯಾಗಿದ್ದರೆ, 89 00:08:48,080 --> 00:08:50,240 ಯಾರೂ ಏಕೆ ಅದರ ಬಗ್ಗೆ ಮಾತನಾಡಿಲ್ಲ? 90 00:08:52,880 --> 00:08:56,640 ನಾನು ಗೇಟ್ ಪಾಸ್ ಮತ್ತು ಕಾರಿನ ವ್ಯವಸ್ಥೆ ಮಾಡುತ್ತೇನೆ. 91 00:08:57,160 --> 00:08:58,520 -ಇನಸ್ಪೆಕ್ಟರ್. -ಹೇಳಿ. 92 00:08:58,600 --> 00:09:01,280 ದಯವಿಟ್ಟು ನನ್ನ ಜೊತೆ ಬನ್ನಿ, ನಿಮಗೆ ಕಾಗದಪತ್ರ ನೀಡುವೆ. 93 00:09:31,640 --> 00:09:32,480 ಏನಾಯಿತು? 94 00:09:34,720 --> 00:09:35,520 ಏನಾಯಿತು ನಿನಗೆ? 95 00:09:49,160 --> 00:09:51,840 -ಪೋಷಕರೊಂದಿಗೆ ಡೀನ್ ಮಾತನಾಡುತ್ತಾರೆ. -ಸರಿ. 96 00:09:51,880 --> 00:09:53,360 ನಮಗೆ ಸ್ವಲ್ಪ ಸಮಯ ನೀಡಿ. 97 00:09:53,440 --> 00:09:55,520 ಹೌದು, ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. 98 00:09:55,640 --> 00:09:57,880 ಆಫೀಸರ್ ಬೇಡಿ, ದಯವಿಟ್ಟು ಅರ್ಥಮಾಡಿಕೊಳ್ಳಿ. 99 00:09:58,000 --> 00:09:59,880 ಮಕ್ಕಳನ್ನು ಮನೆಗೆ ಕಳಿಸುವುದು ನನ್ನ ಆದ್ಯತೆ. 100 00:10:00,000 --> 00:10:02,640 ಹೆತ್ತವರು, ಮಂಡಳಿ ಸದಸ್ಯರಿಂದ ನನಗೆ ಒತ್ತಡವಿದೆ. 101 00:10:02,760 --> 00:10:05,520 ಮಕ್ಕಳು, ಹಳೆ ವಿದ್ಯಾರ್ಥಿಗಳನ್ನು ಇಲ್ಲಿ ಹೇಗೆ ಇರಿಸುವುದು? 102 00:10:05,600 --> 00:10:07,840 ನೀವೆಲ್ಲರೂ ಇದಕ್ಕೆ ಜವಾಬ್ದಾರರು, ಮಿ. ಸ್ವಾಮಿ. 103 00:10:08,400 --> 00:10:12,320 ತನಿಖೆ ಪೂರ್ಣಗೊಳ್ಳುವ ತನಕ ಯಾರೂ ತೆರಳುವಂತಿಲ್ಲ. ಸ್ಪಷ್ಟವಾಯಿತೇ? 104 00:10:12,400 --> 00:10:13,760 -ಆಯಿತು. -ಸರ್. 105 00:10:15,320 --> 00:10:16,160 ಮಿಸೆಸ್. ಸಿನ್ಹಾ? 106 00:10:16,240 --> 00:10:20,520 ನೀಲಗಿರಿಯ 100 ಕಿಮೀ ವ್ಯಾಪ್ತಿಯಲ್ಲಿ ಕಳೆದ 10 ರಿಂದ 15 ವರ್ಷಗಳಲ್ಲಿ 107 00:10:20,600 --> 00:10:25,000 ನಾಪತ್ತೆಯಾದ 14 ರಿಂದ 20 ವರ್ಷದೊಳಗಿನ ಎಲ್ಲಾ ಪುರುಷರ ಪಟ್ಟಿ ನನಗೆ ಬೇಕು. 108 00:10:25,080 --> 00:10:26,000 ಸರ್. 109 00:10:28,040 --> 00:10:30,960 -ಹಳೆವಿದ್ಯಾರ್ಥಿಗಳನ್ನು ವಿಚಾರಿಸುತ್ತಿರುವಿರಾ? -ಹೌದು, ಸರ್. 110 00:10:31,080 --> 00:10:33,200 ನಿಮಗೆ ಅರ್ಥವಾಗುತ್ತಿಲ್ಲ. ನನಗೆ ಮನೆಗೆ ಹೋಗಬೇಕು. 111 00:10:33,280 --> 00:10:35,200 ಶಸ್ತ್ರಕ್ರಿಯೆ ಇದೆ. ನಾನು ಅಲ್ಲಿರಬೇಕು. 112 00:10:35,280 --> 00:10:38,240 ಅದು ಬಹಳ ಮುಖ್ಯ. ಈಗಾಗಲೇ ನಿಮಗೆ ಅದನ್ನು ಹೇಳಿದ್ದೇನೆ. 113 00:10:38,320 --> 00:10:41,120 ನಾನು ಅಪ್ಪನ ಜೊತೆ ಮಾತನಾಡಿದೆ. ಅವರು ಕಾರು ಕಳಿಸುತ್ತಾರೆ. 114 00:10:42,720 --> 00:10:45,160 -ಹೂಂ ಸರ್. -ಆಫೀಸರ್ ಬೇಡಿ, ಏನು ನಡೆಯುತ್ತಿದೆ? 115 00:10:45,240 --> 00:10:47,880 ಮಕ್ಕಳನ್ನು, ಹಳೆವಿದ್ಯಾರ್ಥಿಗಳನ್ನು ಹೀಗೆ ಇರಿಸಲು ಸಾಧ್ಯವಿಲ್ಲ. 116 00:10:48,000 --> 00:10:50,520 ಸರ್, ಎರಡು ಆತ್ಮಹತ್ಯೆಗಳು ಮತ್ತು ಈಗ ಒಂದು ಹೆಣ. 117 00:10:51,880 --> 00:10:54,720 ತನಿಖೆಗೆ ಒಂದು ಪ್ರಕ್ರಿಯೆ ಇದೆ ಎಂದು ನಿಮಗೆ ಗೊತ್ತಿದೆಯಲ್ಲ. 118 00:10:54,760 --> 00:10:56,880 ನಮ್ಮ ವಕೀಲರು ಬರುತ್ತಿದ್ದಾರೆ. ಚಿಂತಿಸಬೇಡ. 119 00:10:56,960 --> 00:10:58,520 ಸಂಜೆಯೊಳಗೆ ಹೋಗೋಣ. 120 00:10:58,600 --> 00:10:59,960 ಮಕ್ಕಳು ಹೋಗಬಹುದು. 121 00:11:00,920 --> 00:11:05,000 ಆದರೆ ಸಿಬ್ಬಂದಿ ಮತ್ತು ಹಳೆವಿದ್ಯಾರ್ಥಿಗಳನ್ನು ಹೋಗಲು ಬಿಟ್ಟರೆ, 122 00:11:06,240 --> 00:11:08,480 ಪ್ರಕರಣ ಕೈತಪ್ಪುವುದು ಸರ್. 123 00:11:09,200 --> 00:11:10,760 ಮಾಲ್ವಿಕ ಜಾಮ್ವಾಲ್. ಬನ್ನಿ. 124 00:11:10,840 --> 00:11:13,960 ಡೀನ್, ವಿದ್ಯಾರ್ಥಿಗಳನ್ನು ಕಳಿಸಲು ನೀವು ಏರ್ಪಾಟು ಮಾಡಬಹುದು. 125 00:11:14,680 --> 00:11:15,520 ಇರು. 126 00:11:15,600 --> 00:11:17,000 ಬಹಳ ಧನ್ಯವಾದ, ಆಫೀಸರ್. 127 00:11:17,080 --> 00:11:18,920 ಆದರೆ ಹಳೆವಿದ್ಯಾರ್ಥಿಗಳು, ಸಿಬ್ಬಂದಿಗಳಲ್ಲ. 128 00:11:20,480 --> 00:11:22,280 ಮಿ. ಅಯ್ಯರ್, ಮಿಸ್ ನೇಹಾ, ನೀವಿಬ್ರು ಬನ್ನಿ. 129 00:11:22,360 --> 00:11:24,720 ನಮ್ಮ ಸ್ನೇಹಿತನನ್ನು ಕಳೆದುಕೊಂಡು 12 ಗಂಟೆಗಳೂ ಆಗಿಲ್ಲ. 130 00:11:25,320 --> 00:11:30,000 ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ನಾವ್ಯಾರೂ ಇಲ್ಲ. 131 00:11:30,560 --> 00:11:32,880 ನಿಮಗೆ ನಿಮ್ಮ ತನಿಖೆಯದ್ದೇ ಚಿಂತೆ. 132 00:11:33,640 --> 00:11:36,840 ಕ್ಯಾಂಪಸ್ಸಿನಲ್ಲಿ ಹುಡುಗನೊಬ್ಬನ ಮೃತದೇಹ ದೊರೆತಿದೆ ಎಂದರೆ ಏನರ್ಥ? 133 00:11:36,920 --> 00:11:38,200 ನೀವು ಹೇಳಿ. 134 00:11:39,640 --> 00:11:41,600 ಹೇಗಿದ್ದರೂ ಜಾಮ್ವಾಲ್ ಕುಟುಂಬದವರಿಗೆ 135 00:11:42,400 --> 00:11:44,080 ಇತರರಿಗೆ ಕೆಲಸ ಹೇಳಿಕೊಡಲು ಇಷ್ಟ. 136 00:11:44,560 --> 00:11:45,920 ಸರಿ ತಾನೇ? 137 00:11:46,000 --> 00:11:48,120 ನನ್ನ ಉಪನಾಮೆಯ ಹಿಂದೆ ಬಿದ್ದಿದ್ದೀರಿ. 138 00:11:49,160 --> 00:11:54,200 ಖಂಡಿತ, ಈ ಪ್ರಕರಣಕ್ಕೆ ಜಾಮ್ವಾಲ್ ಹೆಸರು ಸೇರಿಸಿದರೆ ಇದನ್ನು ದೊಡ್ಡದಾಗಿಸಬಹುದು. 139 00:11:54,280 --> 00:11:57,640 ಅದೇ ಕಾರಣದಿಂದ ಹುಡುಗನ ಸಾವಿನ ಮೇಲೆ ಗಮನ ಹರಿಸುವ ಬದಲು, 140 00:11:57,720 --> 00:12:00,760 ನೀವು ಆತ್ಮಹತ್ಯೆಯೊಂದನ್ನು ಕೊಲೆ ಎಂದು ಬಿಂಬಿಸಲು ನಿಂತಿದ್ದೀರಿ. 141 00:12:00,840 --> 00:12:02,200 ಮಿ. ಜಾಮ್ವಾಲ್. 142 00:12:02,280 --> 00:12:06,440 ನನ್ನ ಕುಟುಂಬ ಹೆಸರನ್ನು ನೀವು ಮರೆತ ನಂತರ, ನಿಮಗೆ ನೆನಪಾಗಬಹುದು 143 00:12:07,000 --> 00:12:09,760 ಈ ಮಕ್ಕಳ ರಕ್ಷಣೆಯೂ ನಿಮ್ಮ ಕರ್ತವ್ಯವೆಂದು. 144 00:12:11,680 --> 00:12:13,760 -ಮಿ. ಜಾಮ್ವಾಲ್. -ವಿಚಾರಣೆ ನಿಲ್ಲಿಸಿ. 145 00:12:13,840 --> 00:12:15,960 ಆಫೀಸರ್ ಬೇಡಿ ಮಕ್ಕಳನ್ನು ಮನೆಗೆ ಕಳಿಸಲು 146 00:12:16,040 --> 00:12:18,640 ಒಪ್ಪಿದ್ದಾರೆಂದು ನಿಮಗೆ ಹೇಳಲು ಪ್ರಯತ್ನಿಸುತ್ತಿದ್ದೆ. 147 00:12:23,360 --> 00:12:24,840 ನೀವು ಮರೆತಿರುವಂತಿದೆ 148 00:12:24,920 --> 00:12:26,680 ನಾವು ಮೂರ್ಖರಲ್ಲವೆಂದು. 149 00:12:28,080 --> 00:12:29,840 ಮ್ಯಾಜಿಸ್ಟ್ರೇಟ್ ಬಳಿ ಮಾತನಾಡಿದ್ದೇನೆ. 150 00:12:30,520 --> 00:12:31,720 ನನಗೆ ಕೋರ್ಟ್ ಆದೇಶವಿದೆ. 151 00:12:33,240 --> 00:12:34,320 ಸಿಬ್ಬಂದಿ... 152 00:12:35,440 --> 00:12:36,600 ಮತ್ತು ಹಳೆವಿದ್ಯಾರ್ಥಿಗಳು 153 00:12:38,320 --> 00:12:40,480 ಈ ಕ್ಯಾಂಪಸ್ ತೊರೆಯುವಂತಿಲ್ಲ. 154 00:12:42,960 --> 00:12:45,160 ನಿಮಗೇನು ಬೇಕೋ ಮಾಡಿ. 155 00:12:45,240 --> 00:12:47,000 ಈ ವಿಚಾರಣೆ ನಡೆಯುವುದಿಲ್ಲ. 156 00:12:54,280 --> 00:12:56,080 ಒಳ್ಳೆ ಸುದ್ದಿ. ನಮಗೆ ಅನುಮತಿ ದೊರಕಿದೆ. 157 00:13:00,160 --> 00:13:01,000 ಸುಪ್ರಿಯ. 158 00:13:04,160 --> 00:13:05,600 ಪತ್ತೆಯಾದ ಮೃತದೇಹ 159 00:13:06,720 --> 00:13:07,800 ನಿನಾದನದ್ದಾಗಿರಬೇಕು. 160 00:13:08,560 --> 00:13:12,520 ನೀನು ಹಾಗೆ ಯೋಚಿಸುವೆ ಎಂದು ಗೊತ್ತಿತ್ತು. ಅವನು ಬಸ್ಸಿನಿಂದ ಕಾಣೆಯಾದ ಎಂದು ಹೇಳಿದ್ದೆ. 161 00:13:12,600 --> 00:13:14,920 -ಶಾಲೆಯಲ್ಲಿ ಹೇಗೆ ಪತ್ತೆಯಾದ? -ಯಾರು ನೋಡಿದ್ದರು? 162 00:13:15,000 --> 00:13:15,840 ವ್ಯಾಸ್? 163 00:13:17,160 --> 00:13:18,800 ಈ ಕುರಿತು ನನ್ನ ಮಾತು ಸರಿ. 164 00:13:19,480 --> 00:13:20,720 ವೇದಾಂತ್ ಬೇರಾರೂ ಅಲ್ಲ... 165 00:13:23,000 --> 00:13:23,920 ನಿನಾದ್. 166 00:13:24,840 --> 00:13:26,160 ಅಧಿರಾಜ್! 167 00:13:27,680 --> 00:13:29,560 ನಿನ್ನಿಂದ ಕೂಡ ಭೂತಗಳ ಬಗ್ಗೆ ಮಾತು? 168 00:13:30,480 --> 00:13:31,840 ನಿನಗೆ ಕಾಣುವುದಿಲ್ಲವೇ? 169 00:13:33,800 --> 00:13:34,920 ಅವನಿಗೆ ಎಲ್ಲಾ ಗೊತ್ತಿದೆ. 170 00:13:35,720 --> 00:13:36,760 ಅವನು ಎಲ್ಲಾ ಮಾಡಬಲ್ಲ. 171 00:13:37,360 --> 00:13:38,560 ನಿನಗೆ ಹಾಗೆ ಅನಿಸಿಲ್ಲವೇ? 172 00:13:44,520 --> 00:13:46,480 ತಜ್ಞರ ಬಳಿ ಕೊಂಡೊಯ್ಯುತ್ತಿದ್ದೇನೆ. 173 00:13:46,560 --> 00:13:47,400 ಸುಪ್ರಿಯ. 174 00:13:48,160 --> 00:13:49,880 ಈ ರೀತಿ ಅವನನ್ನು ಉಳಿಸಲು ಸಾಧ್ಯವಿಲ್ಲ! 175 00:13:57,600 --> 00:13:59,480 ಈಜುವಾಗ ನನಗೆ ಗಾಯವಾಗಲಿಲ್ಲ. 176 00:13:59,560 --> 00:14:01,960 ನಿನಾದ್ ನನ್ನ ಜೊತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದ. 177 00:14:02,480 --> 00:14:04,480 ನಿನಾದನಿಗೂ ಇಂತಹುದೇ ಹುಟ್ಟು ಗುರುತು ಇತ್ತು. 178 00:14:19,000 --> 00:14:20,520 ಅವನಿಗೂ ಇದೆ ಅಲ್ಲವೇ? 179 00:14:23,240 --> 00:14:24,800 ಇದನ್ನು ಹೇಗೆ ವಿವರಿಸುವಿರಿ? 180 00:14:25,320 --> 00:14:27,600 ನನ್ನ, ವೇದಾಂತನ ಕೈಯಲ್ಲಿ ನಿನಾದನ ಹುಟ್ಟುಗುರುತು. 181 00:14:28,120 --> 00:14:30,160 -ಅದು ಕಾಕತಾಳೀಯ. -ಮತ್ತೆ ಶ್ಯಾಡೊ ಬಾಯ್? 182 00:14:30,240 --> 00:14:32,360 ವೇದಾಂತನಿಗೆ ಗ್ರಾಫಿಕ್ ಕಾದಂಬರಿ ಹೇಗೆ ಸಿಕ್ಕಿತು? 183 00:14:32,440 --> 00:14:33,400 ನೀನೇ ಹೇಳು. 184 00:14:33,480 --> 00:14:36,000 ಏಕೆಂದರೆ ಅದು ನನ್ನ ಕಥೆಯಲ್ಲ, ನಿನಾದನ ಕಥೆ! 185 00:14:37,360 --> 00:14:40,320 ವೇದಾಂತ್ ಅದನ್ನು ನಂಬಿದ್ದಾನೆ ಯಾಕೆಂದರೆ ನಿನಾದ್ ಅವನಿಗಾಗಿ ಇದ್ದಾನೆ! 186 00:14:45,800 --> 00:14:48,840 ಈ ಜಗತ್ತಿನಲ್ಲಿ ಕೆಲ ವಿಷಯಗಳನ್ನು ವಿವರಿಸಲಾಗದು, ಸುಪ್ರಿಯ. 187 00:14:52,200 --> 00:14:54,320 ನಾನು ಒಮ್ಮೆ ನಿನಾದನನ್ನು ಒಂಟಿಯಾಗಿ ಬಿಟ್ಟೆ. 188 00:14:55,240 --> 00:14:58,600 ಈ ಬಾರಿ ಒಂಟಿಯಾಗಿ ಬಿಡುವುದಿಲ್ಲ. ಅವನಿಗಾಗಿ ಹೋರಾಡುತ್ತೇನೆ. 189 00:15:00,200 --> 00:15:01,120 ಅಧಿರಾಜ್, ನಿಲ್ಲು! 190 00:15:01,200 --> 00:15:02,040 ನಿನಾದ್! 191 00:15:02,480 --> 00:15:04,080 -ಅಧಿರಾಜ್, ನಿಲ್ಲು! -ನಿನಾದ್! 192 00:15:04,840 --> 00:15:06,000 ನಿನಾದ್! 193 00:15:06,080 --> 00:15:08,440 -ನನ್ನನ್ನು ಹೋಗಲು ಬಿಡಿ! -ದಯವಿಟ್ಟು, ಸರ್. 194 00:15:08,520 --> 00:15:11,080 -ನೀವು ಹೋಗುವಂತಿಲ್ಲ. ಒಂದು ನಿಮಿಷ. -ನಿನಾದ್! 195 00:15:11,160 --> 00:15:12,960 -ನನ್ನ ಮಾತು ಕೇಳಿ. ಸರ್! -ನನ್ನನ್ನು ಹೋಗಲು ಬಿಡಿ. 196 00:15:13,760 --> 00:15:14,720 ನಿನಾದ್! 197 00:15:16,520 --> 00:15:17,480 ನಾನಿಲ್ಲಿದ್ದೇನೆ! 198 00:15:17,560 --> 00:15:20,000 ಈ ಬಾರಿ ನಿನ್ನನ್ನು ಕೈಬಿಡುವುದಿಲ್ಲ! 199 00:15:20,080 --> 00:15:22,840 ನಿನಗೇನಾಗಿತ್ತು ಎಂದು ತಿಳಿಯುವ ತನಕ ನಾನು ಬಿಡುವುದಿಲ್ಲ. 200 00:15:29,840 --> 00:15:30,680 ಆರಾಮಿರುವೆಯಾ? 201 00:15:35,520 --> 00:15:38,400 ಮಿಸ್, ಅಭಿ ಯಾರು? 202 00:15:43,160 --> 00:15:45,400 ನನ್ನ ಮನೆಯ ಫೋಟೋದಲ್ಲಿ ಅವನ ಹೆಸರು ನೋಡಿದೆಯಾ? 203 00:15:46,040 --> 00:15:46,920 ಅವನು ನನ್ನ ಮಗ. 204 00:15:50,480 --> 00:15:53,200 ನಿಮ್ಮನ್ನು ನಂಬಬಾರದು ಎಂದು ಅವನು ಹೇಳುತ್ತಿದ್ದಾನೆ 205 00:15:53,720 --> 00:15:57,440 ಏಕೆಂದರೆ ಅಭಿಗೆ ಮಾಡಿದಂತೆ ನೀವು ನನಗೂ ಮಾಡಬಹುದು. 206 00:15:58,720 --> 00:15:59,600 ನೀವೇನು ಮಾಡಿದಿರಿ? 207 00:16:06,760 --> 00:16:08,680 ಮಿ. ಚೌಹಾನ್ ಅವರ ಪುಸ್ತಕದಂಗಡಿ ಗೊತ್ತೇ? 208 00:16:08,760 --> 00:16:11,640 ಬಸ್ ಟಿಕೆಟುಗಳನ್ನು ಪಡೆಯಲು ಅವರ ಅಂಗಡಿಯಲ್ಲಿ 30 ನಿಮಿಷಗಳಲ್ಲಿರಿ. 209 00:16:13,480 --> 00:16:16,680 ಅನುಮತಿ ಸ್ಲಿಪ್ ಪಡೆದುಕೊಳ್ಳಿ. ಶಾಲೆಯಿಂದ ಹೊರಹೋಗಲು ಅದು ಬೇಕು. 210 00:16:16,760 --> 00:16:17,600 ಆಯಿತು ಮೇಡಮ್. 211 00:16:17,680 --> 00:16:20,360 ಮಿ. ಚಂದ್ರ ಪ್ರಕಾಶ್, ಅವರಿಗೆ ಗೇಟ್ ಪಾಸ್ ನೀಡಿ. 212 00:16:23,480 --> 00:16:24,640 ಮಿ. ಚಂದ್ರ ಪ್ರಕಾಶ್? 213 00:16:25,120 --> 00:16:26,440 ಎಲ್ಲಿದ್ದೀರಿ? 214 00:16:26,520 --> 00:16:27,560 ಏನು? 215 00:16:28,920 --> 00:16:34,080 ನೀವು ನೋಡಿದ್ದು ಡೀನ್ ವ್ಯಾಸ್ ಅವರ ಭೂತವಲ್ಲ, ಹುಡುಗನದ್ದು ಎಂದು ಅನಿಸುತ್ತದೆ. 216 00:16:34,800 --> 00:16:36,240 ಅದು ಹಲವು ವರ್ಷಗಳ ಹಿಂದೆ. 217 00:16:36,840 --> 00:16:38,560 ನಾನು ಶಾಲೆಗೆ ಆಗಷ್ಟೇ ಸೇರಿದ್ದೆ. 218 00:16:38,640 --> 00:16:42,520 ನಮ್ಮ ಒಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಅವನ ಹೆತ್ತವರು ಪ್ರತಿದಿನ ಬರುತ್ತಿದ್ದರು, 219 00:16:43,040 --> 00:16:46,480 ಅವನನ್ನು ಹುಡುಕಲು. ಅವನು ನಮ್ಮ ಬಸ್ ಹತ್ತಿದ್ದ, ಆದರೆ ಮನೆ ತಲುಪಲಿಲ್ಲ. 220 00:16:46,560 --> 00:16:48,680 ಅವನ ಹೆಸರು ನೆನಪಾಗುತ್ತಿಲ್ಲ. 221 00:16:51,960 --> 00:16:54,000 ಮಿ. ಚಂದ್ರ ಪ್ರಕಾಶ್! ಅರೆ! 222 00:17:16,680 --> 00:17:17,560 ಹೋಮೋ! 223 00:17:17,640 --> 00:17:19,960 ನೀನು ಮಾಲ್ವಿಕಾ ಅಳುವಂತೆ ಮಾಡಿದೆ. 224 00:17:20,520 --> 00:17:22,920 ನಿನಗೆ ಪಾಠ ಕಲಿಸಬೇಕಿದೆ. 225 00:17:25,080 --> 00:17:27,760 ಎಲ್ಲರೂ ನಿನ್ನನ್ನು ಮರೆಯುತ್ತಾರೆ. 226 00:17:28,320 --> 00:17:29,400 ಹೋಯಿತು. 227 00:17:45,560 --> 00:17:48,480 ಒಂದು ದಿನ ನನ್ನಂತೆ ನೀನೂ ಶಕ್ತಿಹೀನನಾಗುವೆ ದೇವ್. 228 00:17:49,160 --> 00:17:53,760 ನೀನು, ನಿನ್ನ ಹೆಸರು, ನಿನ್ನ ಕುಟುಂಬ, ನಿನ್ನ ರಕ್ಷಕರಿಗೂ ನಿನ್ನನ್ನು ಉಳಿಸಲು ಆಗದು! 229 00:17:56,440 --> 00:17:58,560 ಆ ದಿನ ನೋಡಲು ನೀನಿರುವುದಿಲ್ಲ. 230 00:18:43,000 --> 00:18:45,720 ಅಧಿರಾಜ್, ಎದ್ದೇಳು. 231 00:18:47,480 --> 00:18:48,320 ಏಳು. 232 00:18:49,240 --> 00:18:50,160 ಬಾ. 233 00:18:55,760 --> 00:18:57,240 ನಾನು ಸಹ ಹುಡುಕುತ್ತಿದ್ದೇನೆ. 234 00:18:57,720 --> 00:18:58,560 ನಿನಾದನನ್ನು. 235 00:19:01,240 --> 00:19:02,080 ಬಾ. 236 00:19:02,720 --> 00:19:03,760 ಬಾ! 237 00:19:11,160 --> 00:19:14,560 ಆ ದಿನದಿಂದ, ನಾನು ಆ ಹೆಸರಿನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿಲ್ಲ. 238 00:19:15,320 --> 00:19:16,160 ನಿನಾದ್. 239 00:19:17,200 --> 00:19:19,920 ನೀನು ಅವನ ದಾಖಲೆಗಳಿಗಾಗಿ ಹುಡುಕುತ್ತಿದ್ದೆ. 240 00:19:21,040 --> 00:19:22,080 ನನ್ನ ಸ್ನೇಹಿತನಾಗಿದ್ದ. 241 00:19:23,000 --> 00:19:25,800 ಶಾಲೆಯ ಕೊನೆಯ ದಿನ ನಾವೆಲ್ಲರೂ ಮನೆಗೆ ವಾಪಸಾದೆವು. 242 00:19:29,680 --> 00:19:31,040 ಅವನು ಹೋಗಲಿಲ್ಲ. 243 00:19:32,240 --> 00:19:34,800 ಹೊಸ ವಿಂಗಿನ ಜಾಗದಲ್ಲಿ ಮೃತದೇಹ ಪತ್ತೆಯಾಗಿದ್ದು, 244 00:19:36,400 --> 00:19:37,680 ಅದು ಅವನದ್ದೆಂದು ಗೊತ್ತು. 245 00:19:39,040 --> 00:19:40,720 ಈಗ ಎಲ್ಲಾ ಅರ್ಥವಾಗುತ್ತಿದೆ. 246 00:19:42,440 --> 00:19:46,640 ಈ ಎಲ್ಲಾ ಘಟನೆಗಳು ಆ ಕಟ್ಟಡಕ್ಕೆ ಹೇಗೆ ನಂಟು ಹೊಂದಿವೆ ಎಂದು. 247 00:19:48,200 --> 00:19:51,720 ಮತ್ತು ಹೊಸ ವಿಂಗ್ ನಿರ್ಮಾಣಕ್ಕೆ ಡೀನ್ ವ್ಯಾಸ್ ಏಕೆ ವಿರೋಧಿಸಿದ್ದರೆಂದು. 248 00:19:53,000 --> 00:19:55,320 ನಿನಾದನನ್ನು ಅಲ್ಲಿ ಹೂತಿದ್ದು ಅವರಿಗೆ ತಿಳಿದಿತ್ತು. 249 00:19:57,000 --> 00:20:01,560 ಆ ರಾತ್ರಿ ಕಾಡಿನಲ್ಲಿ ಅವರು ಅಲೆಯುತ್ತಿದ್ದುದನ್ನು ಶಾಲೆಯ ಕಾವಲುಗಾರರು ನೋಡಿದ್ದರು. 250 00:20:02,320 --> 00:20:06,720 ಬೆಳಿಗ್ಗೆ, ಕಾಡಿನ ಹಾದಿನಲ್ಲಿ ಮಣ್ಣು ಮತ್ತು ಫ್ಲ್ಯಾಶ್ ಲೈಟ್ ನೋಡಿದ್ದೆ. 251 00:20:07,280 --> 00:20:08,400 ಅವರಿಗೆ ಭಯವಾಗಿತ್ತು. 252 00:20:09,640 --> 00:20:12,000 ಮರುದಿನ ಹೊಸ ವಿಂಗ್ ಕಾಮಗಾರಿ ಆರಂಭಗೊಳ್ಳಲಿತ್ತು. 253 00:20:13,080 --> 00:20:15,080 ನಿನಾದನ ಮೃತದೇಹ ಸಾಗಿಸಲು ಯತ್ನಿಸಿದ್ದರು. 254 00:20:16,160 --> 00:20:19,040 ಆದರೆ ಅವರು ನಿನಾದನ ಆತ್ಮವನ್ನು ಎಬ್ಬಿಸಿ ಬಿಟ್ಟರು. 255 00:20:20,160 --> 00:20:22,880 ಕೋಪೋದ್ರಿಕ್ತ ಆತ್ಮ, 256 00:20:23,480 --> 00:20:27,280 15 ವರ್ಷಗಳಿಂದ ಸೇಡಿಗಾಗಿ ಕಾಯುತ್ತಿದ್ದ ಆತ್ಮ. 257 00:20:28,800 --> 00:20:31,400 ನಿನಾದ್ ತನ್ನನ್ನು ಹಿಂಸಿಸಿದವರನ್ನು ಶಿಕ್ಷಿಸುತ್ತಿದ್ದಾನೆ. 258 00:20:31,920 --> 00:20:37,080 ಡೀನ್, ಸುಯಾಶ್, ರಜತ್, ಎಲ್ಲರೂ ಹೇಗೋ ಶಾಮೀಲಾಗಿದ್ದಾರೆ. 259 00:20:38,320 --> 00:20:41,000 ಇದರ ಬಗ್ಗೆ ನಾನು ಹೇಳಿದರೆ ನನಗೆ ಹುಚ್ಚು ಅಂದುಕೊಳ್ಳುತ್ತಾರೆ. 260 00:20:42,560 --> 00:20:44,080 ನೀನು ಮಹಾಭಾರತ ಓದಿರುವೆಯಾ? 261 00:20:45,080 --> 00:20:48,640 ನಮಗೆ ಜೀವನದಲ್ಲಿ ಎರಡು ಆಯ್ಕೆಗಳಿವೆ. 262 00:20:50,680 --> 00:20:54,320 ನಾವು ನಮ್ಮ ಸನ್ನಿವೇಶಗಳನ್ನು ಒಪ್ಪಿಕೊಳ್ಳಬೇಕು, ಅಥವಾ... 263 00:20:54,400 --> 00:20:57,040 ಅವುಗಳನ್ನು ಬದಲಾಯಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು. 264 00:20:58,640 --> 00:21:01,760 ನಿನಾದನನ್ನು ಅರ್ಥಮಾಡಿಕೊಳ್ಳಬಲ್ಲವನು ನೀನು ಮಾತ್ರ ಅಧಿರಾಜ್. 265 00:21:03,480 --> 00:21:04,320 ಅದನ್ನು ಯೋಚಿಸು. 266 00:21:05,200 --> 00:21:08,920 ಆ ದಿನ ನಿನಾದನೊಂದಿಗೆ ಏನಾಯಿತು? 267 00:21:11,080 --> 00:21:13,240 ವ್ಯಾಸ್ ಬಸ್ ನಿಲ್ದಾಣಕ್ಕೆ ಕರೆದೊಯ್ದಿಲ್ಲ. 268 00:21:16,320 --> 00:21:20,440 ನಿನಾದನ ಬಸ್ ಟಿಕೆಟ್ ಖರೀದಿಸಿದವರಿಗೆ ಅವನು ಬಸ್ ಹತ್ತುವುದಿಲ್ಲ ಎಂದು ಗೊತ್ತಿತ್ತು. 269 00:21:21,320 --> 00:21:24,680 ಈ ಸತ್ಯವನ್ನು ಬೆಳಕಿಗೆ ತರುವುದು ಈಗ ನಿನ್ನ ಜವಾಬ್ದಾರಿ. 270 00:21:28,160 --> 00:21:29,640 ನನಗೆ ಇಲ್ಲಿಂದ ಹೋಗಬೇಕಿದೆ. 271 00:21:33,560 --> 00:21:34,400 ಗೇಟ್ ಪಾಸ್ 272 00:21:34,480 --> 00:21:37,480 ಸರ್, ಮಕ್ಕಳಿಗೆ ಬಸ್ ಟಿಕೆಟ್ ಖರೀದಿಸಬೇಕು. 273 00:21:38,160 --> 00:21:39,000 ಅಂಗಡಿಯಿಂದ. 274 00:21:39,560 --> 00:21:41,320 ಏನಿದು? 275 00:21:41,400 --> 00:21:43,880 ಸಾಮಾನು ಇಳಿಸಲು ಸಮಯವಿರಲಿಲ್ಲ. 276 00:21:44,400 --> 00:21:45,640 ತೆರೆಯಿರಿ. 277 00:21:47,520 --> 00:21:48,760 ಚಲಾಯಿಸು. ಹೋಗೋಣ. 278 00:21:50,080 --> 00:21:52,280 ಪೊಲೀಸ್ 279 00:21:58,760 --> 00:22:02,360 ದೇವಿ ಪ್ರಸಾದ್, ಶಾಲೆಯಲ್ಲಿ ಏನೋ ನಡೆದಿದೆ. 280 00:22:02,440 --> 00:22:04,480 ಇನ್ನೊಬ್ಬ ಹಳೆ ವಿದ್ಯಾರ್ಥಿಯ ಆತ್ಮಹತ್ಯೆ. 281 00:22:04,560 --> 00:22:07,680 ಅಷ್ಟೇ ಅಲ್ಲ. ಅವರಿಗೆ ಒಂದು ಮೃತದೇಹ ಕೂಡ ಸಿಕ್ಕಿದೆ. 282 00:22:07,760 --> 00:22:10,920 ಅದು ಒಬ್ಬ ವಿದ್ಯಾರ್ಥಿಯದ್ದು ಎಂದು ಹೇಳಲಾಗಿದೆ. 283 00:22:11,040 --> 00:22:14,920 ಕ್ಯಾಂಪಸ್ಸಿಗೆ ಪ್ರವೇಶ, ನಿರ್ಗಮನವನ್ನು ಕೋರ್ಟ್ ನಿಷೇಧಿಸಿದೆ. 284 00:22:15,720 --> 00:22:16,560 ದೇವಿ ಪ್ರಸಾದ್ 285 00:22:16,640 --> 00:22:19,800 ಹಳೆ ವಿದ್ಯಾರ್ಥಿಗಳ ಹೆಸರುಗಳೆಲ್ಲ ಕೋರ್ಟ್ ಆದೇಶದಲ್ಲಿದೆ ಅಂದುಕೊಳ್ಳುವೆ. 286 00:22:19,880 --> 00:22:21,440 ನಾವು ಕೆಲಸ ಮಾಡುತ್ತಿದ್ದೇವೆ ಸರ್. 287 00:22:21,520 --> 00:22:22,360 ಮಿ. ಜಾಮ್ವಾಲ್... 288 00:22:26,160 --> 00:22:27,000 ಮಿ. ಜಾಮ್ವಾಲ್? 289 00:22:27,920 --> 00:22:31,880 ನಿಮ್ಮನ್ನು ಕ್ಯಾಂಪಸ್ಸಿನಿಂದ ಹೇಗಾದರೂ ಹೊರಗೆ ಕಳುಹಿಸುತ್ತೇವೆ. ಚಿಂತಿಸಬೇಡಿ. 290 00:22:33,920 --> 00:22:37,920 ಡೀನ್ ಸ್ವಾಮಿ, ನನಗೆ ಚಿಂತೆಯಿಲ್ಲ. ಭಯದಿಂದ ತಪ್ಪಿಸಿಕೊಳ್ಳುತ್ತಿಲ್ಲ. 291 00:22:38,440 --> 00:22:40,480 ಆಫೀಸರ್ ಬೇಡಿ ಎದುರೇ ಹೋಗುತ್ತೇನೆ. 292 00:22:41,720 --> 00:22:43,160 ನಿಲ್ಲಿಸಲು ಅವರು ಪ್ರಯತ್ನಿಸಲಿ. 293 00:22:48,640 --> 00:22:51,560 ಏನೂ ಆಗಲ್ಲ, ಭಯ ಬೇಡ. 294 00:22:51,640 --> 00:22:53,760 ಇದು ಸುರಕ್ಷಿತವಾಗಿರುತ್ತೆ. 295 00:22:54,280 --> 00:22:57,720 ಎಲ್ಲವೂ ಸರಿಯಾಗುತ್ತೆ ಎಂದು ನಂಬುವುದು ಮುಖ್ಯ. 296 00:22:57,800 --> 00:23:00,280 ಕುಳಿತುಕೊಳ್ಳಿ. ಸ್ವಲ್ಪ ಹೊತ್ತಿನಲ್ಲಿ ಬರುವೆ. 297 00:23:12,400 --> 00:23:15,320 "ಮೊರ್ಸ್ ನಾನ್ ಎಸ್ಟ್ ಫಿನಿಸ್. " 298 00:23:18,080 --> 00:23:19,760 ಸಾವು ಅಂತ್ಯವಲ್ಲ. 299 00:23:20,720 --> 00:23:22,800 ನನ್ನ ಮಗಳು ತೀರಿ ಹೋದ ಮೇಲೆ, 300 00:23:23,440 --> 00:23:24,960 ನಾನೂ ಹತಾಶಳಾಗಿದ್ದೆ. 301 00:23:26,680 --> 00:23:28,520 ಆಗ ನನಗೆ ಅರ್ಥವಾಗಿರಲಿಲ್ಲ, 302 00:23:29,640 --> 00:23:31,360 ಆದರೆ ಈಗ ನಾನು ನಂಬುತ್ತೇನೆ. 303 00:23:32,920 --> 00:23:34,800 "ಸಾವು ಅಂತ್ಯವಲ್ಲ. " 304 00:23:42,920 --> 00:23:45,280 ಮಾತನಾಡಬೇಕೆಂದು ಯಾವತ್ತಾದರೂ ಅನಿಸಿದರೆ... 305 00:23:49,720 --> 00:23:50,640 ನನ್ನೊಂದಿಗೆ ಅಲ್ಲ. 306 00:23:51,840 --> 00:23:54,400 ನೀವು ಕಳೆದುಕೊಂಡಿರುವವರೊಂದಿಗೆ. 307 00:23:56,120 --> 00:23:58,960 ನಿಮ್ಮ ಸಂದೇಶವನ್ನು ಅವರಿಗೆ ತಲುಪಿಸಬಲ್ಲೆ. 308 00:24:09,440 --> 00:24:10,280 ಸುಪ್ರಿಯ? 309 00:24:11,000 --> 00:24:11,920 ಸುಪ್ರಿಯ. 310 00:24:13,960 --> 00:24:14,800 ಸುಪ್ರಿಯ. 311 00:24:15,600 --> 00:24:19,520 ಮುಗಿಯಿತು. ನಮ್ಮ ನರ್ಸರಿ ಪೂರ್ಣಗೊಂಡಿದೆ. 312 00:24:19,600 --> 00:24:23,080 -ಅದ್ಭುತವಾಗಿದೆ. ಇದು ನಿನಗೆ. -ಧನ್ಯವಾದ. 313 00:24:26,760 --> 00:24:28,480 ಸುಪ್ರಿಯ ಘೋಷ್ ಅನಿರುದ್ಧ್ ಸೆನ್ - ಅಭಿ 314 00:24:28,560 --> 00:24:30,440 ಓಹ್, ನನ್ನ ಮಗು. 315 00:24:30,520 --> 00:24:32,320 ಓಹ್, ಚಿನ್ನಾ! 316 00:24:32,400 --> 00:24:34,600 ನಿನ್ನ ಕೈ ಇಷ್ಟು ಪುಟ್ಟದಾಗಿವೆ, ಮಗು. 317 00:24:35,520 --> 00:24:37,000 ಕ್ಯಾಮೆರಾ ನೋಡು. 318 00:24:37,080 --> 00:24:40,840 ರೆಡಿ? ಮೂರು, ಎರಡು, ಒಂದು, ಸ್ಮೈಲ್! 319 00:24:41,600 --> 00:24:43,040 ಚೆನ್ನಾಗಿದೆ. 320 00:24:43,720 --> 00:24:44,560 ಸುಪ್ರಿಯ. 321 00:24:48,680 --> 00:24:49,680 ಸುಪ್ರಿಯ? 322 00:24:52,680 --> 00:24:53,520 ಸುಪ್ರಿಯ? 323 00:24:56,760 --> 00:24:58,320 ಏನಾಯಿತು? 324 00:25:01,040 --> 00:25:01,960 ಬಾಯ್ಮುಚ್ಚು. 325 00:25:02,960 --> 00:25:04,000 ಏಕೆ ರೇಗಾಡುತ್ತಿರುವೆ? 326 00:25:13,720 --> 00:25:15,800 ನನಗೆ ನಿನ್ನ ಮತ್ತು ಅಭಿಯದ್ದೇ ಚಿಂತೆ. 327 00:25:16,200 --> 00:25:19,040 ಇವು ಪೋಸ್ಟ್ ಪಾರ್ಟಂ ಡಿಪ್ರೆಶನ್ ನ ಗಂಭೀರ ಲಕ್ಷಣಗಳು. 328 00:25:19,120 --> 00:25:21,600 -ಮನಃಶಾಸ್ತ್ರಜ್ಞರನ್ನು ನೋಡಬೇಕು. -ನಾನು ಅವನ ತಾಯಿ! 329 00:25:21,680 --> 00:25:23,240 ನಾನು ಮಾಡುತ್ತಿರುವುದು ನಂಗೊತ್ತು. 330 00:25:47,080 --> 00:25:51,200 ಸುಪ್ರಿಯ, ಅಭಿ ಎಲ್ಲಿ? ಮಲಗಿದ್ದಾನೆಯೇ? 331 00:25:51,280 --> 00:25:52,880 ಅಭಿ, ಮಗ? 332 00:25:53,280 --> 00:25:55,240 ನನ್ನ ಮಗು. 333 00:25:56,160 --> 00:25:57,640 ಅಭಿ, ಮಗನೇ! 334 00:26:01,040 --> 00:26:01,880 ಅಭಿ? 335 00:26:05,400 --> 00:26:06,240 ಅಭಿ? 336 00:26:11,800 --> 00:26:13,160 ಅಭಿ. 337 00:26:14,840 --> 00:26:16,000 ಅಭಿ... 338 00:26:18,960 --> 00:26:19,800 ಅಭಿ! 339 00:26:20,920 --> 00:26:21,760 ಸುಪ್ರಿಯ! 340 00:26:22,840 --> 00:26:24,280 ನೀನೇನು ಮಾಡಿದೆ? 341 00:26:24,360 --> 00:26:25,240 ಅಭಿ, ನನ್ನ ಮಗ! 342 00:26:34,560 --> 00:26:35,400 ಅಭಿ! 343 00:26:36,000 --> 00:26:36,840 ಅಭಿ! 344 00:26:38,160 --> 00:26:40,080 ಏನಾಯಿತು? ಛೇ! 345 00:26:40,680 --> 00:26:41,520 ಛೆ! 346 00:26:44,920 --> 00:26:46,240 ಅಭಿ! 347 00:26:52,280 --> 00:26:56,000 ಅನಿ, ಸರ್! ಅನಿ, ಸರ್! ಅನಿ, ಸರ್! 348 00:26:56,080 --> 00:26:58,800 -ಸಹಾಯಕ್ಕಾಗಿ ಯಾರನ್ನಾದರೂ ಕರೆಯಿರಿ! -ಸುಪ್ರಿಯ ಮೇಡಂ! 349 00:26:58,880 --> 00:27:00,240 ಸುಪ್ರಿಯ ಮೇಡಂ! 350 00:27:29,840 --> 00:27:31,560 ಧನ್ಯವಾದ ಮೇಡಂ. 351 00:27:31,640 --> 00:27:33,040 ಚೌಹಾನ್ 352 00:27:33,120 --> 00:27:34,040 ಮಿ. ಚೌಹಾನ್. 353 00:27:34,120 --> 00:27:36,960 -ಹೇಳಿ. -ಅಧಿರಾಜ್ ಜೈಸಿಂಗ್, 2007 ಬ್ಯಾಚ್. 354 00:27:37,440 --> 00:27:39,120 -ಕ. ಜೈಸಿಂಗ್ ಅವರ ಮೊಮ್ಮಗ? -ಹೌದು. 355 00:27:39,680 --> 00:27:42,840 ನಿಮ್ಮಲ್ಲಿ ಒಂದು ವಿಷಯ ಕೇಳಬೇಕು. ನಿನಾದ್ ರಮನ್ ನ ನೆನಪಿದೆಯೇ? 356 00:27:43,480 --> 00:27:44,600 ನನ್ನ ಬ್ಯಾಚಿನಲ್ಲಿದ್ದ. 357 00:27:45,160 --> 00:27:46,480 -ಮಿ. ರಮಣ್ ಅವರ ಮಗ. -ಹೌದು. 358 00:27:47,240 --> 00:27:49,920 ಅವನು ಮಾಡಿದ್ದು ತಪ್ಪು, ಮನೆಯಿಂದ ಓಡಿ ಹೋಗಬಾರದಿತ್ತು. 359 00:27:50,680 --> 00:27:55,120 ಕೊನೆಯ ದಿನ, ನನ್ನ ಅಂಗಡಿಗೆ ರಿಬ್ಬನ್ ಮತ್ತು ಇತರ ವಸ್ತು ಖರೀದಿಸಲು ಬಂದಿದ್ದ. 360 00:27:55,920 --> 00:27:57,440 ಅದರ ಹಣ ಇನ್ನೂ ಬಾಕಿ ಇರಿಸಿದ್ದಾನೆ. 361 00:27:58,200 --> 00:28:01,520 ಮಿ. ರಮಣ್ ಅದನ್ನು ಪಾವತಿಸುವುದಾಗಿ ಹೇಳಿದರು, ನಾನು ನಿರಾಕರಿಸಿದೆ. 362 00:28:02,040 --> 00:28:03,440 ನಿನಾದ್ ಪಾವತಿಸಬೇಕು ನನಗೆ. 363 00:28:04,840 --> 00:28:08,640 ಮಿ. ಚೌಹಾನ್, ಅವರು ಆಗ ಬಸ್ ಟಿಕೆಟುಗಳನ್ನು ನಿಮ್ಮಿಂದ ಖರೀದಿಸುತ್ತಿದ್ದರೇ? 364 00:28:08,720 --> 00:28:09,560 ಹೌದು, ಖಂಡಿತ. 365 00:28:09,640 --> 00:28:12,040 ನಿನಾದನ ಟಿಕೆಟನ್ನೂ ಇಲ್ಲಿಂದಲೇ ಖರೀದಿಸಿದ್ದರೇ? 366 00:28:12,120 --> 00:28:14,640 ಹೌದು. ಅದನ್ನು ಖರೀದಿಸಲು ದೇವಿ ಪ್ರಸಾದ್ ಬಂದಿದ್ದ. 367 00:28:15,400 --> 00:28:18,800 ನನಗೆ ನೆನಪಿದೆ, ಏಕೆಂದರೆ ಅವನಿಗೆ ಒಂದು ಅಪಘಾತವಾಗಿತ್ತು. 368 00:28:19,520 --> 00:28:20,920 ಮೈ ತುಂಬಾ ಮಣ್ಣಿತ್ತು, 369 00:28:21,000 --> 00:28:22,640 ಮತ್ತು ಕುಂಟುತ್ತಿದ್ದ. 370 00:28:23,360 --> 00:28:25,480 ನಾನು ಖರೀದಿಸಲಿಲ್ಲ. ಕೋಚ್ ವ್ಯಾಸ್ ಕರೆದೊಯ್ದರು. 371 00:28:25,560 --> 00:28:29,080 ಟಿಕೆಟ್ ಯಾರೋ ಖರೀದಿಸಿದ್ದರು. ಆ ದಿನ ಕೋಚ್ ವ್ಯಾಸ್ ನನ್ನನ್ನು ಹೊರ ಕಳಿಸಿದ್ದರು. 372 00:28:29,160 --> 00:28:31,560 ವಾಪಸ್ ಬರುವಾಗ ಅಪಘಾತವಾಗಿತ್ತು. 373 00:28:31,640 --> 00:28:35,080 ಡೀನ್ ವ್ಯಾಸ್ ಅದೃಷ್ಟದ ಬ್ಯಾಚ್ ಎಂದು ಉಲ್ಲೇಖಿಸುತ್ತಿದ್ದರೆಂದು ಕೇಳಿದ್ದೆ. 374 00:28:35,160 --> 00:28:37,800 ನಿಮ್ಮ ಪದವಿ ಮುಗಿದ ಕೂಡಲೇ ಅವರನ್ನು ಡೀನ್ ಆಗಿ ಆರಿಸಲಾಗಿತ್ತು. 375 00:28:37,880 --> 00:28:40,280 ನೀನು ದೇವಿ ಪ್ರಸಾದನನ್ನು ನೋಡಿದೆಯಾ? ಆತ ಈಗ ಕೇಟರರ್. 376 00:28:40,360 --> 00:28:43,960 ಡೀನ್, ಸುಯಾಶ್, ರಜತ್, ಎಲ್ಲರೂ ಹೇಗೋ ಶಾಮೀಲಾಗಿದ್ದಾರೆ. 377 00:28:44,040 --> 00:28:46,880 ನೀನು ಸ್ವಾರ್ಡ್ ಆಫ್ ಆನರ್, ಅವಳು ಶಿಕ್ಷಕರ ಮಗಳು. 378 00:28:46,960 --> 00:28:50,080 ದೇವ್ ಪ್ರತಾಪ್ ಜಮ್ವಾಲ್ ಆಗಿಯೂ ನಿನಗೆ ನಮ್ಮ ಬಗ್ಗೆ ಉರಿ? 379 00:28:50,160 --> 00:28:52,040 ದೇವ್ ಪದವಿ ಪಡೆದಾಯಿತು. 380 00:28:52,120 --> 00:28:55,080 ಈಗ ಸಣ್ಣ ಕೆಲಸಗಳಿಗೆ ದೊಡ್ಡ ಟಿಪ್ಸ್ ಯಾರು ಕೊಡುತ್ತಾರೆ? 381 00:28:56,240 --> 00:28:58,800 ನಿನ್ನ ಶೂಗಳನ್ನು ಇಂದು ಯಾರೂ ಪರಿಶೀಲಿಸುವುದಿಲ್ಲ! 382 00:28:58,880 --> 00:29:00,280 ಇವತ್ತೂ ಬಂಕ್ ಮಾಡ್ತೀಯಾ? 383 00:29:02,120 --> 00:29:05,560 ಆ ದಿನ ನಿನಾದನೊಂದಿಗೆ ಏನಾಯಿತು? 384 00:29:05,640 --> 00:29:07,320 ನಿನಗೆ ಯಾವತ್ತೂ ಮಾಲ್ವಿಕ ಬೇಕಿದ್ದಳು. 385 00:29:07,400 --> 00:29:09,840 ಆದರೆ ಮಾಲ್ವಿಕಾಗೆ ಅಧಿರಾಜ್ ಬೇಕಿದ್ದ. 386 00:29:10,400 --> 00:29:13,080 ಹೃದಯ ಚೂರಾಗಿದ್ದ ಮಾಲ್ವಿಕಳನ್ನು ಕೂಡ ಪುಸಲಾಯಿಸಿದ್ದೆ. 387 00:29:13,160 --> 00:29:16,920 ನಾವು ಅದನ್ನು ಕೊನೆಯ ದಿನ ನೋಡಿದ್ದೆವು. ಮಾಲ್ವಿಕಳ ಕಣ್ಣೀರನ್ನು ದೇವ್ ಒರಸುತ್ತಿದ್ದ. 388 00:29:17,000 --> 00:29:20,120 "ಮಾಲ್ವಿಕ ಅಳುವಂತೆ ಮಾಡಿದ ನಿನಾದನಿಗೆ ನಾನು ಶಿಕ್ಷಿಸುತ್ತೇನೆ!" 389 00:29:20,800 --> 00:29:23,080 ನೀನು ಮಾಲ್ವಿಕ ಅಳುವಂತೆ ಮಾಡಿದೆ. 390 00:29:23,160 --> 00:29:25,560 ನಿನಗೆ ಪಾಠ ಕಲಿಸಬೇಕಿದೆ. 391 00:30:03,160 --> 00:30:04,320 ಬೇಗ! 392 00:30:04,400 --> 00:30:07,800 ಇಲ್ಲಿಂದ ಹೊರಹೋಗು! 393 00:30:55,720 --> 00:31:00,320 ನಾಯಿಗೆ ಪಾಠ ಕಲಿಸಬೇಕಿತ್ತು, ಅದಕ್ಕೆ ನಾಯಿಮರಿಗಳು ಸಾಯಬೇಕಾಯಿತು, ಮಿಸ್. 394 00:31:04,560 --> 00:31:05,400 ವೇದಾಂತ್? 395 00:31:06,560 --> 00:31:09,560 ಅವರಿಗೆ ಪಾಠ ಕಲಿಸಬೇಕಿದೆ. 396 00:31:14,160 --> 00:31:16,680 ವೇದಾಂತನಿಂದ ದೂರವಿರಿ. 397 00:32:09,880 --> 00:32:11,000 ಓದುವ ಕೊಠಡಿ 398 00:32:25,920 --> 00:32:28,400 ನಾಳೆ ಬೆಳಿಗ್ಗೆ ಎಲ್ಲರೂ ಮನೆಗೆ ಹೋಗಬಹುದು. 399 00:32:28,840 --> 00:32:29,960 ಈ ಜನರನ್ನು ಹೊರತುಪಡಿಸಿ. 400 00:32:30,760 --> 00:32:35,080 ಪಾರ್ಥ್, ಇಮಾದ್, ತೇನ್ ಸಿಂಗ್, ಅಧಿರಾಜ್, ದೇವ್, ಮಾಲ್ವಿಕ. 401 00:32:35,160 --> 00:32:36,640 ಆದರೆ ಸರ್, ಯಾವ ಆಧಾರದ ಮೇಲೆ? 402 00:32:37,360 --> 00:32:39,320 ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. 403 00:32:39,400 --> 00:32:42,240 -ಮಾಲ್ವಿಕ! ನಾವು ಹೊರಡಬೇಕು. -ಏನಾಯಿತು ದೇವ್? 404 00:32:42,320 --> 00:32:43,560 ಎಲ್ಲಿಗೆ ಹೋಗುತ್ತಿರುವೆ? 405 00:32:43,640 --> 00:32:45,680 -ನಿನ್ನ ಹೆಸರು ಪಟ್ಟಿಯಲ್ಲಿದೆ. -ಪರವಾಗಿಲ್ಲ. 406 00:32:45,760 --> 00:32:46,640 ಜಾಮ್ವಾಲ್. 407 00:32:47,320 --> 00:32:48,440 ನಿನ್ನನ್ನು ಬಂಧಿಸುವೆ. 408 00:32:48,920 --> 00:32:50,720 ಏಕೆ? ನಾನೇನು ಮಾಡಿದೆ? 409 00:32:51,240 --> 00:32:52,760 ನಾವೇನು ಮಾಡಿದ್ದೇವೆ? 410 00:32:53,600 --> 00:32:58,440 ಸಾಮಾನ್ಯ ಅಧಿಕಾರಿಯೊಬ್ಬರ ಠೊಳ್ಳು ಬೆದರಿಕೆಗಳಿಗೆ ಭಯ ಪಡುವ ಅಗತ್ಯವಿಲ್ಲ. 411 00:32:58,960 --> 00:33:03,000 ಐದು ನಿಮಿಷಗಳಲ್ಲಿ ಇಲ್ಲಿಗೆ ಕಾರು ಬರುತ್ತದೆ. ಮಾತನಾಡದೆ ಕಾರು ಹತ್ತಿಬಿಡು. 412 00:33:04,400 --> 00:33:06,160 ನಮ್ಮ ವಕೀಲರು ಅವರೊಂದಿಗೆ ವ್ಯವಹರಿಸುವರು. 413 00:33:11,840 --> 00:33:16,160 ಪೊಲೀಸರು ಗೇಟಿನಲ್ಲಿ ಕಾರುಗಳನ್ನು ಪರಿಶೀಲಿಸುತ್ತಿದ್ದಾರೆ. ಅಡ್ಮಿನ್ ಬ್ಲಾಕ್ ಈಕಡೆ. 414 00:33:16,720 --> 00:33:18,680 -ಹೋಗಿ, ಜಾಗ್ರತೆ. -ಧನ್ಯವಾದ. 415 00:33:21,720 --> 00:33:24,000 -ಎಲ್ಲಾ ಅಧಿಕಾರಿಗಳು ಗೇಟಿನಲ್ಲಿರಬೇಕು. -ಸರ್. 416 00:33:25,640 --> 00:33:27,000 ನಮ್ಮನ್ನು ತಡೆಯಲು ಆಗಲ್ಲ. 417 00:33:28,240 --> 00:33:31,120 ಕಾರು ತರುತ್ತೇನೆ. ಇಲ್ಲಿಯೇ ಇರು. ಸರಿ ತಾನೇ? 418 00:33:36,200 --> 00:33:37,040 ಆಫೀಸರ್, 419 00:33:37,720 --> 00:33:40,640 ಗೇಟಿನಿಂದ ಹೊರಗೆ ಅಥವಾ ಒಳಗೆ ಯಾರೂ ಹೋಗದಂತೆ ನೋಡಿಕೊಳ್ಳಿ. 420 00:33:41,520 --> 00:33:43,960 ಅಗತ್ಯ ಬಿದ್ದರೆ, ಬಂಧಿಸಿ. 421 00:33:50,640 --> 00:33:51,560 ಹಲೋ, ಸುಪ್ರಿಯ? 422 00:33:52,840 --> 00:33:54,360 ಸುಪ್ರಿಯ, ಸುಪ್ರಿಯ? 423 00:33:56,120 --> 00:34:00,800 ದೇವ್ ಪ್ರತಾಪ್ ಜಾಮ್ವಾಲ್ ಶಾಲೆಯ ಹೊರಗೆ ಕಾಲಿಡಲು ಸಾಧ್ಯವಿಲ್ಲ. 424 00:34:00,880 --> 00:34:03,640 ಸ್ವಲ್ಪ ಹೊತ್ತಿನಲ್ಲಿ ಅವರ ಚಾಲಕ ಬರುವರೆಂದು ನಮಗೆ ಮಾಹಿತಿಯಿದೆ. 425 00:34:03,720 --> 00:34:05,840 ಕಾರುಗಳನ್ನು ಶಾಲೆಯ ಒಳಗೆ ಬಿಡಬೇಡಿ. 426 00:34:05,920 --> 00:34:08,840 ಮತ್ತೆ ಹೇಳುತ್ತಿದ್ದೇನೆ, ಕಾರುಗಳನ್ನು ಶಾಲೆಯ ಒಳಗೆ ಬಿಡಬೇಡಿ. 427 00:34:09,840 --> 00:34:11,840 ದೇವ್! ನಿಲ್ಲು, ದೇವ್! 428 00:34:13,600 --> 00:34:14,640 ನಿಲ್ಲು, ದೇವ್! 429 00:34:16,120 --> 00:34:18,840 ಗೇಟಿನಿಂದ ಹೊರಗೆ ಕಾಲಿಟ್ಟರೆ ನೀನು ಸಾಯುವೆ. 430 00:34:19,920 --> 00:34:22,600 ನೀನು ಕೂಡ ಅವನನ್ನು ನೋಡಿದೆಯಲ್ಲ. ಅದಕ್ಕೆ ಓಡಿ ಹೋಗುತ್ತಿರುವೆ. 431 00:34:24,040 --> 00:34:28,320 ಸುಯಾಶ್, ರಜತ್ ಮತ್ತು ನೀನು ಆ ದಿನ ನಿನಾದನಿಗೆ ಹೊಡೆದದ್ದೇ ಅಲ್ಲದೆ ಅವನನ್ನು ಸಾಯಿಸಿದಿರಿ. 432 00:34:28,840 --> 00:34:31,080 ಅದಕ್ಕೆ ವ್ಯಾಸ್ ಬಳಿ ಓಡಿ ಬಂದೆಯಾ? 433 00:34:31,560 --> 00:34:33,160 ನಕಲಿ ಸ್ಲಿಪ್ಗೆ ಸಹಿ ಮಾಡಲು ಅಲ್ಲ, 434 00:34:33,680 --> 00:34:35,800 ಬದಲು ನೀನು ಮಾಡಿದ್ದನ್ನು ಮರೆಮಾಚಲು! 435 00:34:37,280 --> 00:34:39,520 ದೇವ್, ಎಲ್ಲರೆದುರು ಒಪ್ಪಿಕೊ. 436 00:34:40,000 --> 00:34:41,440 ಇಲ್ಲ ಅವನು ಸಾಯಿಸುತ್ತಾನೆ. 437 00:34:46,320 --> 00:34:47,560 ನಾನೇನೂ ಮಾಡಲಿಲ್ಲ. 438 00:34:48,840 --> 00:34:50,320 ನಿನಗೆ ಹುಚ್ಚು. 439 00:34:51,560 --> 00:34:52,920 ನನಗೆ ಹುಚ್ಚು ಎಂದಾದರೆ, 440 00:34:54,680 --> 00:34:57,440 ನೀನು ಶಾಲೆಯ ಗೇಟಿನ ಹೊರಗೆ ಕಾಲಿಟ್ಟು ತೋರಿಸು. 441 00:34:58,120 --> 00:34:58,960 ಅಲ್ಲಿ! 442 00:35:00,040 --> 00:35:01,200 ನನ್ನ ಕಾರುಗಳು ಬಂದವು. 443 00:35:01,800 --> 00:35:02,640 ನೋಡುತ್ತಿರು. 444 00:35:18,360 --> 00:35:20,640 ಏನಾಯಿತು? 445 00:36:13,640 --> 00:36:15,840 ಸರ್, ಕೂಡಲೇ ಗೇಟ್ ಹತ್ತಿರ ಬನ್ನಿ. 446 00:36:49,480 --> 00:36:52,400 ಮಿ. ಮನೋಹರ್. ಮಕ್ಕಳ ಬಳಿ ಹೋಗಿ. ಎಲ್ಲರೂ ಒಳಗೆ ಹೋಗಿ. ಬೇಗ. 447 00:36:57,440 --> 00:36:58,280 ದೇವ್! 448 00:37:04,160 --> 00:37:05,040 ದೇವ್! 449 00:39:06,160 --> 00:39:08,160 ಉಪ ಶೀರ್ಷಿಕೆ ಅನುವಾದ: ಜಯಶ್ರೀ 450 00:39:08,200 --> 00:39:10,200 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ