1 00:00:06,000 --> 00:00:06,840 ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ. 2 00:00:06,920 --> 00:00:07,760 ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ. 3 00:00:07,840 --> 00:00:08,680 ಯಾವುದೇ ಸಾಮ್ಯತೆ ಕಾಕತಾಳೀಯ. ಸಂಭಾಷಣೆ ಅಥವಾ ಪಾತ್ರ 4 00:00:08,760 --> 00:00:09,600 ಅವಮಾನಿಸುವ ಉದ್ದೇಶ ಹೊಂದಿಲ್ಲ. 5 00:00:09,680 --> 00:00:10,520 LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ. 6 00:00:10,600 --> 00:00:11,440 ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ. 7 00:00:11,520 --> 00:00:12,360 ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು 8 00:00:12,440 --> 00:00:13,280 ಮಾಟಮಂತ್ರ ಇತ್ಯಾದಿ ಉತ್ತೇಜಿಸದು. 9 00:00:13,360 --> 00:00:14,520 ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು ಅಮೆಝಾನ್ ಬೆಂಬಲಿಸದು. 10 00:00:14,600 --> 00:00:15,880 ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. 11 00:00:16,880 --> 00:00:22,280 ವಿದ್ಯಾರ್ಥಿಗಳೇ, ಸರಳ ಮುಚ್ಚಿದ ವಸ್ತುವಿನ ಸುತ್ತಲಿನ ಅಂತರವನ್ನು ಏನನ್ನುತ್ತಾರೆ? 12 00:00:22,360 --> 00:00:24,120 ನಾನು ಐದು ನಿಮಿಷಗಳಲ್ಲಿ ವಾಪಸಾಗುವೆ. 13 00:00:24,200 --> 00:00:26,760 ಏನಾದರೂ ತರಲೆ ಮಾಡಿದರೆ, ನಿಮ್ಮನ್ನು ಶಿಕ್ಷಿಸಲಾಗುವುದು. 14 00:00:32,280 --> 00:00:34,960 ಸಾರ್ಥಕ್! 15 00:00:37,280 --> 00:00:38,360 ಇವನಿಗೇನಾಯಿತು? 16 00:00:38,960 --> 00:00:41,560 ಗೊತ್ತಿಲ್ಲ. ಆ ದಿನದಿಂದ ಆಘಾತದಿಂದಿದ್ದಾನೆ. 17 00:00:42,720 --> 00:00:44,880 ಸೈಕೋ ಅವನಿಗೆ ಏನಾದರೂ ಮಾಡಿದನೇ? 18 00:00:46,880 --> 00:00:47,720 ಒಂದು ಐಡಿಯಾ ಇದೆ. 19 00:00:50,440 --> 00:00:51,440 ಸಾರ್ಥಕ್. 20 00:00:52,000 --> 00:00:53,440 ನಾನು ಏನು ಮಾಡಬಲ್ಲೆ ನೋಡು. 21 00:00:55,280 --> 00:00:56,600 ಬ್ರೋ, ಅದ್ಭುತ. 22 00:00:58,160 --> 00:01:00,280 ಬರೆಯುವುದನ್ನು ನಿಲ್ಲಿಸು, ಪುಸ್ತಕದ ಹುಳು! 23 00:01:00,360 --> 00:01:01,960 ಅವನು ಬರೆಯಲಿ, ಬ್ರೋ. 24 00:01:02,040 --> 00:01:04,160 ಇದನ್ನು ನೋಡಿದ್ರೆ ಅವನ ಪ್ಯಾಂಟ್ ಒದ್ದೆಯಾಗುತ್ತೆ. 25 00:01:24,760 --> 00:01:25,800 ಧ್ರುವ್! 26 00:01:36,280 --> 00:01:40,800 ನೀನು ತರಲೆ ಮಾಡಿದರೆ ನಿನ್ನನ್ನು ಶಿಕ್ಷಿಸಲಾಗುವುದು. 27 00:02:17,520 --> 00:02:20,040 ಅಧೂರಾ 28 00:02:23,520 --> 00:02:26,160 ಆ ಮಗುವಿದ್ದಲ್ಲಿ ವಿಚಿತ್ರ ಸಂಗತಿಗಳು ನಡೆಯುತ್ತಲೇ ಇರುತ್ತವೆ. 29 00:02:26,280 --> 00:02:29,160 ಮೊದಲು ಆ ನಾಯಿಮರಿಗಳು, ಈಗ ಈ ಹುಡುಗ. 30 00:02:29,680 --> 00:02:31,320 ಮುಂದೆ ನಮಗೇನು ಕಾದಿದೆಯೋ. 31 00:02:31,400 --> 00:02:32,880 ನಿನಗೆ ಕಣ್ಣು ಕಾಣಿಸುವುದಿಲ್ಲವೇ? 32 00:02:34,160 --> 00:02:35,160 ನೀನು! 33 00:03:11,520 --> 00:03:12,440 ಸ್ವಾಗತ ಓಲ್ಡ್ ಬಾಯ್ಸ್ 34 00:03:12,520 --> 00:03:13,760 ಹೇ, ಸಂಗೀತಕಾರ, ಹಲೋ! 35 00:03:14,520 --> 00:03:16,280 -ಸಂಗೀತಕಾರ? -ಏನು ಹುಚ್ಚ? 36 00:03:16,360 --> 00:03:17,400 ತಲೆ ಕೆಟ್ಟಿದೆಯೇ? 37 00:03:17,840 --> 00:03:19,760 ಇಷ್ಟು ಕೋಪ ಯಾಕೆ ನಿನಗೆ? 38 00:03:20,920 --> 00:03:22,320 ನಾನು ತಮಾಷೆ ಮಾಡಿದ್ದು ಕಣೋ. 39 00:03:22,400 --> 00:03:25,240 ರಾತ್ರಿಯಿಡೀ ಎಲ್ಲರೂ ಒಬ್ಬರನ್ನೊಬ್ಬರು ಪ್ರ್ಯಾಂಕ್ ಮಾಡುತ್ತಿದ್ದರು. 40 00:03:25,320 --> 00:03:27,520 ಅದಕ್ಕೆ ಸುಯಾಶ್ ಇನ್ನೂ ಮಲಗಿರೋದು ಅಲ್ವಾ? 41 00:03:27,600 --> 00:03:29,280 ನಾವು ನಾಟಕ ರಿಹರ್ಸಲ್ ಮಾಡಬೇಕು. 42 00:03:29,360 --> 00:03:30,640 ಆತ ಬೇಗ ಮಲಗಲು ಹೋಗಿದ್ದ. 43 00:03:30,720 --> 00:03:33,600 ಆತನ ಸುಂದರಿಯಂತೂ ಓಡಿಹೋದಳು, ಸುಂದರ ನಿದ್ದೆಯಾದರೂ ಬೇಕಲ್ಲ ಅವನಿಗೆ. 44 00:03:36,520 --> 00:03:37,800 ಇದನ್ನು ಯಾರು ಮಾಡಿದ್ದು? 45 00:03:38,360 --> 00:03:39,640 ನೀವು ಯಾರಾದರೂ ಮಾಡಿದಿರಾ? 46 00:03:40,640 --> 00:03:42,120 ಬ್ರೋ, ಸಮಾಧಾನ. ಏನಿದು? 47 00:03:43,360 --> 00:03:44,600 ಶ್ಯಾಡೋ ಬಾಯ್ 48 00:03:48,680 --> 00:03:49,920 ಏನಿದು? 49 00:03:52,200 --> 00:03:54,560 ರಜತ್ ಇದನ್ನು ಮಾಡಿರಲು ಸಾಧ್ಯವಿಲ್ಲ, 50 00:03:54,640 --> 00:03:57,000 ಏಕೆಂದರೆ ಅವನಿಗೆ ಪುಸ್ತಕಗಳನ್ನು ಮುಟ್ಟಲೂ ಆಗೋದಿಲ್ಲ. 51 00:03:59,440 --> 00:04:02,120 ಮಚ್ಚ, ನಿಜವಾಗಿಯೂ ಏನೋ ಇದೆ. 52 00:04:02,200 --> 00:04:03,280 ಮುಟ್ಟಿ ನೋಡು. 53 00:04:11,880 --> 00:04:12,840 ಓಹ್ ದೇವರೇ. 54 00:04:13,760 --> 00:04:14,920 ನಿನಗೆ ಮಾತ್ರ ಕಣೋ! 55 00:04:15,000 --> 00:04:16,000 ಅದನ್ನು ವಾಪಸ್ ಕೊಡು. 56 00:04:24,000 --> 00:04:25,480 ನನಗೆ ಈ ಧ್ವನಿಗಳು ಕೇಳಿಸುತ್ತವೆ. 57 00:04:26,200 --> 00:04:27,120 ಏನೇನೋ ಕಾಣಿಸುತ್ತವೆ. 58 00:04:27,200 --> 00:04:29,520 -ತಲೆ ಹಾಳಾಗ್ತಿದೆ, ಡಾಕ್ಟರ್. -ನನ್ನ ಮಾತು ಕೇಳು. 59 00:04:29,600 --> 00:04:31,800 ವಿಪರೀತವಾಗುತ್ತಿದ್ದರೆ, ವಾಪಸ್ ಬಂದು ಬಿಡು. 60 00:04:31,880 --> 00:04:33,560 ವಾಪಸ್ ಬರಲು ಸಾಧ್ಯವಿಲ್ಲ, ಡಾಕ್ಟರ್. 61 00:04:34,200 --> 00:04:38,360 ಈ ರೀಯುನಿಯನ್ ಮೇಲೆ ತುಂಬ ನಿರೀಕ್ಷೆಯಿತ್ತು. ಆತ ಇಲ್ಲಿ ಇಲ್ಲ. ನಿನಾದ್ ಬರಲಿಲ್ಲ. 62 00:04:38,480 --> 00:04:41,680 ಅಧಿರಾಜ್, ನಾವು ವೀಡಿಯೋ ಕಾಲ್ ಮಾಡೋಣ. ಅಡ್ಡಪರಿಣಾಮ ಇರಬಹುದು. 63 00:04:41,760 --> 00:04:43,240 ಆತ ಇನ್ನೂ ನನ್ನನ್ನು ಕ್ಷಮಿಸಿಲ್ಲ. 64 00:04:43,360 --> 00:04:47,160 ನೀನು ಅರಸುತ್ತಿರುವ ಮುಕ್ತಾಯ ನಿನಾದ್ ಅಲ್ಲ, ಅದು ನಿನ್ನಲ್ಲಿದೆ... 65 00:04:52,920 --> 00:04:54,080 ನಾನು. 66 00:04:55,360 --> 00:04:59,240 ಕ್ಷಮಿಸು, ನಾನು ಕದ್ದು ಕೇಳುತ್ತಿರಲಿಲ್ಲ. ನೀನು ಹೇಗಿರುವೆ ಎಂದು ತಿಳಿಯಲು ಬಂದೆ. 67 00:05:00,240 --> 00:05:01,320 ನಿನಗೆ ಆತಂಕವಿದೆಯೇ? 68 00:05:08,000 --> 00:05:09,600 ನಿನಗೆ ಇದು ನೆನಪಿದೆಯೇ, ಮಾಲ್ವಿಕ? 69 00:05:11,720 --> 00:05:12,920 ನಿನಾದನ ಗ್ರಾಫಿಕ್ ಕಾದಂಬರಿ. 70 00:05:16,320 --> 00:05:17,920 ನಾನು ಹುಚ್ಚನಲ್ಲ ಎಂದು ಹೇಳು. 71 00:05:18,000 --> 00:05:21,560 ಅವರೇನು ಎಂದು ನಿನಗೆ ಗೊತ್ತು. ಮರೆತುಬಿಡು. ಅದೊಂದು ಪ್ರ್ಯಾಂಕ್ ಅಷ್ಟೇ. 72 00:05:21,640 --> 00:05:23,040 ಸರಿ, ಅದೊಂದು ಪ್ರ್ಯಾಂಕ್. 73 00:05:23,800 --> 00:05:25,200 ಆದರೆ ಅವನೇಕೆ ಬರಲಿಲ್ಲ? 74 00:05:26,360 --> 00:05:28,720 ಆದಿ, 15 ವರ್ಷಗಳ ಹಿಂದೆ ನೀನು ಒಂದು ತಪ್ಪು ಮಾಡಿದೆ. 75 00:05:29,160 --> 00:05:31,280 ಅದನ್ನು ವಾಪಸ್ ಪಡೆಯವಂತಿದ್ದರೆ ಪಡೆಯುತ್ತಿದ್ದೆ. 76 00:05:31,360 --> 00:05:34,040 ಅದಕ್ಕಾಗಿ ಎಷ್ಟು ಸಮಯ ನಿನ್ನನ್ನು ನೀನೇ ದಂಡಿಸುವೆ? 77 00:05:36,440 --> 00:05:38,680 ಅವನೇಕೆ ಬರಲಿಲ್ಲ ಎಂಬುದು ಮುಖ್ಯವಲ್ಲ. 78 00:05:38,760 --> 00:05:39,920 ಅದನ್ನು ಬಿಟ್ಟು ಬಿಡು. 79 00:05:40,000 --> 00:05:41,640 ಬಿಡಲು ಆಗಲ್ಲ ಮಾಲ್ವಿಕ. 80 00:05:42,320 --> 00:05:44,000 ಪ್ರೀತಿಸಿದ ಎಲ್ಲರನ್ನೂ ಕಳೆದುಕೊಂಡೆ. 81 00:05:45,080 --> 00:05:46,760 ಅವರನ್ನು ವಾಪಸ್ ತರಲು ಸಾಧ್ಯವಿಲ್ಲ. 82 00:05:48,200 --> 00:05:50,080 ಆದರೆ ನಿನಾದನನ್ನು ವಾಪಸ್ ತರಬಲ್ಲೆ. 83 00:05:54,240 --> 00:05:55,280 ನನಗೆ ಉತ್ತರಗಳು ಬೇಕು. 84 00:06:02,840 --> 00:06:04,560 ಶಾಸ್ತ್ರಗಳಲ್ಲಿ ಹೇಳಲಾಗಿದೆ. 85 00:06:05,080 --> 00:06:08,480 ಆತ್ಮಗಳು ಒಂದು ದೇಹದಿಂದ ಇನ್ನೊಂದಕ್ಕೆ ಪ್ರಯಾಣಿಸುತ್ತವೆ ಎಂದು. 86 00:06:09,160 --> 00:06:10,720 ಅವುಗಳನ್ನು ಕತ್ತರಿಸಲಾಗದು, 87 00:06:11,280 --> 00:06:13,120 ಬೆಂಕಿಯೂ ಅವುಗಳನ್ನು ಸುಡದು. 88 00:06:14,480 --> 00:06:19,000 ನಾವು ಸಾಯುತ್ತೇವೆ, ಆದರೆ ನಮ್ಮ ಆತ್ಮಗಳು ಶಾಶ್ವತ. 89 00:06:23,040 --> 00:06:24,680 ನಾವು ಸಾಯುವಾಗ, ನಾವು ಸಾಯುತ್ತೇವೆ. 90 00:06:25,440 --> 00:06:26,560 ಅಷ್ಟೇ. 91 00:06:29,880 --> 00:06:31,400 ಇಂಗ್ಲಿಷಿನಲ್ಲಿ ಒಂದು ಮಾತಿದೆ. 92 00:06:32,280 --> 00:06:35,520 "ಪ್ರತಿಯೊಂದೂ ಸೈದ್ಧಾಂತಿಕವಾಗಿ ಅಸಾಧ್ಯ, 93 00:06:36,080 --> 00:06:37,040 ಅದನ್ನು ಮಾಡುವ ತನಕ. " 94 00:06:38,120 --> 00:06:40,720 ಓರ್ವ ಮನಃಶಾಸ್ತ್ರಜ್ಞೆಯಾಗಿ, ನಿಮಗೆ ತಿಳಿದಿರಬಹುದು 95 00:06:40,800 --> 00:06:45,360 ಅಸಾಧ್ಯವೂ ಸಾಧ್ಯವಾಗಬಹುದೆಂದು ವಿಜ್ಞಾನವೂ ಹೇಳುತ್ತದೆ. 96 00:06:47,320 --> 00:06:51,040 ಆದರೆ ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದಾಗ ಮಾತ್ರ ನೀವು ಅದನ್ನು ನಂಬುತ್ತೀರಿ. 97 00:06:53,720 --> 00:06:56,800 ಅಂದರೆ ನೀವು ಡೀನ್ ವ್ಯಾಸ್ ಅವರ ಆತ್ಮವನ್ನು ನೋಡಿದ್ದೀರಾ? 98 00:06:58,200 --> 00:07:01,880 ನಾನು ನೋಡಿದ್ದನ್ನು ನನಗೆ ವಿವರಿಸಲು ಯಾವತ್ತೂ ಸಾಧ್ಯವಾಗದು, 99 00:07:01,960 --> 00:07:03,320 ನನಗೂ ಅರ್ಥವಾಗದು. 100 00:07:03,400 --> 00:07:04,520 ಆದರೆ ಇಂದು, 101 00:07:04,600 --> 00:07:06,560 ನಿಮ್ಮ ತರಗತಿಯಲ್ಲಿ ನಡೆದಿರುವುದು... 102 00:07:06,640 --> 00:07:09,080 ಒಬ್ಬ ವಿದ್ಯಾರ್ಥಿ ಕಂಪಾಸಿನಿಂದ ಸ್ವತಃ ಚುಚ್ಚಿಕೊಂಡ. 103 00:07:09,680 --> 00:07:14,480 ಶುದ್ಧೀಕರಣ ಪ್ರಕ್ರಿಯೆ ನಡೆಸದೆ ನಾವು ತಪ್ಪು ಮಾಡುತ್ತಿದ್ದೇವೆ. 104 00:07:15,160 --> 00:07:17,080 ನಿನಾದ್ ರಮನ್, 2007. 105 00:07:19,800 --> 00:07:21,640 ಇದೇ ಹೆಸರೆಂದು ಖಚಿತವಾಗಿರುವೆಯಾ? 106 00:07:21,720 --> 00:07:23,840 ಹೌದು, ಮ್ಯಾʼಮ್. ಖಂಡಿತ. 107 00:07:25,240 --> 00:07:26,840 ಸರ್ವರ್ ಡೌನ್ ಇದೆ ಎನಿಸುತ್ತದೆ. 108 00:07:29,080 --> 00:07:31,760 ಆದರೆ ವಿದ್ಯಾರ್ಥಿ ರೆಕಾರ್ಡುಗಳ ಫೈಲ್ ಏನಾದರೂ ಇರಬೇಕಲ್ಲ? 109 00:07:31,840 --> 00:07:32,840 ಹೌದು, ಇದೆ. 110 00:07:32,920 --> 00:07:36,680 2010 ಬ್ಯಾಚಿಗಿಂತ ಹಿಂದಿನ ಎಲ್ಲಾ ರೆಕಾರ್ಡುಗಳು ಆರ್ಕೈವ್ ಕೊಠಡಿಯಲ್ಲಿದೆ. 111 00:07:37,240 --> 00:07:38,960 ಇಂದು ಅಡ್ಮಿನ್ಗೆ ತುಂಬ ಕೆಲಸವಿದೆ. 112 00:07:39,600 --> 00:07:41,400 ಸಿಬ್ಬಂದಿಯಿಂದ ಇಂದು ಪ್ರದರ್ಶನವಿದೆ. 113 00:07:42,200 --> 00:07:43,040 ಧನ್ಯವಾದ. 114 00:07:49,400 --> 00:07:50,480 ಮತ್ತೆ ಸಿಗುವೆ. ಬೈ. 115 00:07:53,800 --> 00:07:57,120 ಹಳೆ ಫೈಲುಗಳಲ್ಲಿ ಏನಾದರೂ ವಿಳಾಸ ಅಥವಾ ಫೋನ್ ನಂಬರ್ ಸಿಗಬಹುದು. 116 00:07:57,200 --> 00:08:01,200 2010 ಗಿಂತ ಹಿಂದಿನ ರೆಕಾರ್ಡುಗಳು ಆರ್ಕೈವ್ ಕೊಠಡಿಯಲ್ಲಿವೆ ಎಂದು ಅಡ್ಮಿನ್ ಹೇಳಿದರು. 117 00:08:01,760 --> 00:08:04,360 ಆದರೆ ಇಂದು ಎಲ್ಲರಿಗೂ ನಾಟಕದ ಅಭ್ಯಾಸವಿದೆ. ಅದಕ್ಕೆ... 118 00:08:06,600 --> 00:08:07,560 ಏನಾಯಿತು? 119 00:08:08,720 --> 00:08:09,800 ನೆನ್ನೆ ರಾತ್ರಿ, 120 00:08:11,240 --> 00:08:13,960 ಹೆದರಿದ ವೇದಾಂತ್ ಒಬ್ಬನೇ ಕುಳಿತಿದ್ದು ನೋಡಿ... 121 00:08:14,760 --> 00:08:17,960 ಡೈನಿಂಗ್ ಹಾಲಿನಲ್ಲಿ, ತಿನ್ನದೇ, ಯಾರಲ್ಲಿಯೂ ಮಾತಾಡದೇ, 122 00:08:20,360 --> 00:08:21,800 ನನಗೆ ನಿನಾದ್ ನ ನೆನಪಾಯಿತು. 123 00:08:23,760 --> 00:08:24,840 ಶ್ಯಾಡೋ ಬಾಯ್. 124 00:08:26,960 --> 00:08:28,520 ನಾನಿಲ್ಲಿಗೆ ಅವನಿಗಾಗೇ ಬಂದಿದ್ದು. 125 00:08:30,880 --> 00:08:34,040 ಆದರೆ ನನ್ನಿಂದಾಗಿಯೇ ಅವನು ಇಲ್ಲಿ ಬಂದಿಲ್ಲ ಅನಿಸುತ್ತೆ. 126 00:08:35,160 --> 00:08:39,280 ಸುಪ್ರಿಯ, ನಿಮ್ಮ ಜೀವನದ ಅತಿ ದೊಡ್ಡ ತಪ್ಪನ್ನು ಸರಿಪಡಿಸುವ ಅವಕಾಶ ಸಿಕ್ಕಿದರೆ ಹೇಗಿರುತ್ತದೆ? 127 00:08:40,520 --> 00:08:42,880 ನಿನಾದನೊಂದಿಗೆ ಮಾತನಾಡುವುದು ನನಗಿರುವ ಆ ಅವಕಾಶ. 128 00:08:44,480 --> 00:08:45,400 ನನಗೆ ಸಹಾಯ ಮಾಡಿ. 129 00:08:47,840 --> 00:08:48,720 ದಯವಿಟ್ಟು. 130 00:08:49,200 --> 00:08:50,360 ಅವನ ಪೂರ್ಣ ಹೆಸರೇನು? 131 00:08:51,480 --> 00:08:52,600 ನಿನಾದ್ ರಮನ್. 132 00:09:02,520 --> 00:09:04,600 ನೀನು ಮತ್ತೆ ಅದನ್ನೇ ಮಾಡಿದೆ, ಅಲ್ಲವೇ? 133 00:09:05,720 --> 00:09:06,720 ಏನು? 134 00:09:07,480 --> 00:09:09,720 ಭಾವಾತ್ಮಕ ಕಥೆ ಹೇಳಿ ನನ್ನ ಪುಸಲಾಯಿಸಿದೆ. 135 00:09:09,760 --> 00:09:11,320 ನೀನು ಚಾಲೂ ಇದ್ದೀಯ. ಬಾ, ಹೋಗೋಣ. 136 00:09:12,400 --> 00:09:13,480 ಧನ್ಯವಾದ. 137 00:09:14,040 --> 00:09:15,040 ಸಾರ್ಥಕ್! 138 00:09:15,720 --> 00:09:17,000 ಹೇ, ಸಾರ್ಥಕ್. 139 00:09:17,520 --> 00:09:20,000 ಧ್ರುವನಿಗೆ ಬ್ಯಾಂಡೇಜ್ ಹಾಕುತ್ತಿದ್ದಾರೆ. ಬೇಗ ಹೋಗು! 140 00:09:32,200 --> 00:09:34,400 ಮಿಸ್. ಧ್ರುವ ಮಾಡಿಕೊಂಡಿದ್ದಲ್ಲ ಇದು. 141 00:09:45,160 --> 00:09:46,240 ಹೂಂ ಸಾರ್ಥಕ್, ಏನು... 142 00:09:50,000 --> 00:09:53,160 ಡಾಕ್ಟರ್ ನಿನ್ನನ್ನು ಸಂಜೆ ನೋಡುತ್ತಾರೆ. ಸರಿನಾ? ವಿಶ್ರಾಂತಿ ತಗೋ. 143 00:09:57,400 --> 00:09:59,200 ಆಸ್ಪತ್ರೆ 144 00:10:20,040 --> 00:10:21,040 ಸುಯಾಶ್? 145 00:10:27,080 --> 00:10:28,080 ದೇವರೇ! 146 00:10:28,640 --> 00:10:30,160 ಮಚ್ಚ, ನಿಜವಾಗಲೂ? 147 00:10:30,240 --> 00:10:32,440 ಕಾರಿಡಾರುಗಳಲ್ಲೂ ಭಯ ಹುಟ್ಟಿಸುತ್ತಿರುವೆಯಾ? 148 00:10:32,520 --> 00:10:33,760 -ಏನು? -ಸರಿಯಾಗಿರೋದು ಕಲಿ! 149 00:10:34,320 --> 00:10:36,640 -ಅಸಹ್ಯ. -ನಿನಗೇಕೆ ಇಷ್ಟು ಸಿಟ್ಟು? 150 00:10:37,280 --> 00:10:39,040 ಎಲ್ಲರೂ ಮಕ್ಕಳಂತೆ ವರ್ತಿಸುತ್ತಾರೆ. 151 00:10:47,520 --> 00:10:48,520 ಸುಯಾಶ್? 152 00:11:09,440 --> 00:11:10,640 ಎಲ್ಲಿ ಹೋದ ಇವ? 153 00:11:16,280 --> 00:11:17,320 ಗುಡ್ ಮಾರ್ನಿಂಗ್. 154 00:11:17,400 --> 00:11:21,760 ಇಂದು ನಿಮಗಾಗಿ ನಿಮ್ಮ ಮೆಚ್ಚಿನ ಶಿಕ್ಷಕರು ನಾಟಕ ಪ್ರದರ್ಶಿಸಲಿದ್ದಾರೆ. 155 00:11:22,480 --> 00:11:26,200 ನಾಟಕದ ಹೆಸರು "ನಾವು ಫೇಲ್ ಆದರೆ?" 156 00:11:26,280 --> 00:11:27,440 ನೀಲ್ಗಿರಿ ವ್ಯಾಲಿ ಸ್ಕೂಲ್ 157 00:11:27,520 --> 00:11:29,840 ಇನ್ನು ಹೆಚ್ಚು ಹೊತ್ತು ಕಾಯದೇ, 158 00:11:29,920 --> 00:11:31,320 ಆರಂಭಿಸೋಣ. 159 00:11:31,400 --> 00:11:33,680 ಹೇ, ಚೋಮು ಚಂದ್ರ ಇಂಗ್ಲಿಷ್ ಮಾತನಾಡುತ್ತಿದ್ದಾನೆ. 160 00:11:35,240 --> 00:11:38,480 ಇವು ನಿನ್ನ ಸಾಲುಗಳು. ನಾನು ಒಳಗೆ ಬಂದು ಇದನ್ನು ಹೇಳುತ್ತೇನೆ. ಅಷ್ಟೇ. 161 00:11:38,560 --> 00:11:40,600 ನನಗೆ ಸಾಕಾಯಿತು. 162 00:11:42,080 --> 00:11:43,400 ಎಲ್ಲಾ ಕೋಣೆ ಹುಡುಕಿದೆ. 163 00:11:43,880 --> 00:11:46,520 ಸುಯಾಶ್ ಸಿಗಲಿಲ್ಲ. ಅವನೆಲ್ಲಿದ್ದಾನೆ ಗೊತ್ತಿಲ್ಲ. 164 00:11:48,000 --> 00:11:50,120 ಏನು ನಿನ್ನ ಮಾತಿನ ಅರ್ಥ? 165 00:11:50,200 --> 00:11:51,800 ಇದನ್ನು ನೋಡು, ಏನು ನಡೆಯುತ್ತಿದೆ? 166 00:11:51,880 --> 00:11:53,920 -ದೇವ್, ಏನಾದರೂ ಮಾಡುವೆಯಾ? -ಕರೆ ಮಾಡುತ್ತೇನೆ. 167 00:11:54,000 --> 00:11:55,160 ನೋಡು. ಮಾಲು. 168 00:11:55,600 --> 00:11:57,880 ದೊಡ್ಡದಾಗುತ್ತಿದೆ ಅನಿಸುತ್ತೆ. ಅವನಿಗೆ ತೋರಿಸು. 169 00:11:58,400 --> 00:11:59,920 -ನೋಡು. -ಮೊದಲು ಕೈ ತೊಳೆ. 170 00:12:00,000 --> 00:12:01,040 ಛೀ! 171 00:12:01,360 --> 00:12:02,240 ಈ ವ್ಯಕ್ತಿ... 172 00:12:02,320 --> 00:12:05,200 -ಏನೋ ನೆಟ್ವರ್ಕ್ ಸಮಸ್ಯೆ. -ಆತ ನ್ಯಾನ್ಸಿ ಹಿಂದೆ ಹೋಗಿರಬೇಕು. 173 00:12:05,280 --> 00:12:06,880 ನಮಗೆ ಹೇಳಿ ಹೋಗಬೇಕಿತ್ತಲ್ಲ. 174 00:12:06,960 --> 00:12:08,960 ವ್ಹಾ! ಹಳೆ ಮಾಲ್ವಿಕ ವಾಪಸಾಗಿದ್ದಾಳೆ. 175 00:12:09,040 --> 00:12:11,040 ಹೇ! ಸಮಾಧಾನ. 176 00:12:11,560 --> 00:12:12,400 ಮಾಲ್ವಿಕ. 177 00:12:12,960 --> 00:12:15,560 ನಾಟಕದಲ್ಲಿ ಸುಯಾಶ್ ಸ್ಥಾನವನ್ನು ಬೇರೆ ಯಾರಾದರೂ ತುಂಬಬಹುದೇ? 178 00:12:18,360 --> 00:12:19,360 ಯಾರಾದರೂ ಇದ್ದಾರೆಯೇ? 179 00:12:31,120 --> 00:12:32,080 ನಾನು ಹೇಳಿದೆನಲ್ಲ, 180 00:12:32,760 --> 00:12:35,000 ಇದನ್ನು ಮಾಡಲು ಜೊತೆಗೆ ಯಾರಾದರೂ ಬೇಕು ಅಂತ. 181 00:12:35,840 --> 00:12:37,600 ದೇವರೇ! ಇವುಗಳಿಗೆ ಲೇಬಲ್ ಕೂಡ ಮಾಡಿಲ್ಲ. 182 00:12:38,000 --> 00:12:40,960 ಸಿಬ್ಬಂದಿಗಳು ನಾಟಕದಲ್ಲಿ ವ್ಯಸ್ತರಾಗಿದ್ದಾರೆ. 183 00:12:41,640 --> 00:12:42,800 ಎಲ್ಲಿಂದ ಆರಂಭಿಸೋಣ? 184 00:12:44,600 --> 00:12:46,360 ನಾನು ಇಲ್ಲಿಂದ ಆರಂಭಿಸುತ್ತೇನೆ. 185 00:12:46,440 --> 00:12:47,920 ನೀನೇಕೆ ನಾಟಕದಲ್ಲಿಲ್ಲ? 186 00:12:48,440 --> 00:12:51,880 ಸ್ಟಾಫ್ ರೂಮಿನಲ್ಲಿ ಅವರೊಂದಿಗೆ ಎರಡು ನಿಮಿಷವಿದ್ದರೆ ನನ್ನ ತಲೆ ಹಾಳಾಗುತ್ತದೆ. 187 00:12:52,440 --> 00:12:53,920 ಅವರೊಂದಿಗೆ ನಾಟಕ ಹೇಗೆ ಮಾಡುವುದು? 188 00:12:54,400 --> 00:12:56,880 ನೀಲ್ಗಿರಿ ವ್ಯಾಲಿ ಸ್ಕೂಲಿನ ದೊಡ್ಡ ಅಭಿಮಾನಿನಾ? 189 00:12:57,920 --> 00:12:59,800 ಹಳೆ ವಿದ್ಯಾರ್ಥಿಗಳಂತಲ್ಲ. 190 00:13:01,440 --> 00:13:03,960 ನೀವು ಶಾಲೆಯ ಬಗ್ಗೆ ಅಭಿಮಾನದ ಮಾತು ಆಡುತ್ತೀರಿ. 191 00:13:04,040 --> 00:13:06,000 ಇಲ್ಲಿ ಎಲ್ಲವೂ ಪರಿಪೂರ್ಣವಾಗಿರುವಂತೆ. 192 00:13:07,680 --> 00:13:11,520 ಜಗತ್ತಿನಿಂದ ದೂರ, ಬೆಟ್ಟದ ತುತ್ತತುದಿಯಲ್ಲಿ, ಇಂತಹ ಥರಗಟ್ಟುವ ಚಳಿಯಲ್ಲಿ. 193 00:13:11,640 --> 00:13:14,120 ಅದರ ಜೊತೆಗೆ ಸಿಬ್ಬಂದಿಗಳ ಮೂರ್ಖತನ. 194 00:13:14,800 --> 00:13:17,720 ಭೂತಗಳು, ದೆವ್ವಗಳು, ಹೋಮಗಳು... ಹವನಗಳಂತೆ 195 00:13:19,160 --> 00:13:20,160 ಅಧಿರಾಜ್? 196 00:13:32,920 --> 00:13:34,040 ಅಧಿರಾಜ್? 197 00:13:41,760 --> 00:13:42,880 ಅಧಿರಾಜ್! 198 00:13:51,400 --> 00:13:52,360 ಅಧಿರಾಜ್! 199 00:13:57,920 --> 00:13:58,800 ಬೂ! 200 00:14:03,880 --> 00:14:04,960 ಭಯ ಪಡಿಸಿದೆ ನೀನು! 201 00:14:05,560 --> 00:14:08,560 ಮೂರ್ಖ ಶಿಕ್ಷಕರು ಮಾತ್ರ ಭೂತಗಳಿಗೆ ಭಯ ಪಡುತ್ತಾರೆ ಅಂದುಕೊಂಡಿದ್ದೆ. 202 00:14:10,200 --> 00:14:11,280 ಇದು ಕೇವಲ 203 00:14:11,840 --> 00:14:14,400 ಹುಚ್ಚು ನೀಲ್ಗಿರಿ ವ್ಯಾಲಿ ಸ್ಕೂಲ್ ಪ್ರ್ಯಾಂಕ್. 204 00:14:14,480 --> 00:14:17,960 ಇಂತಹ ಪ್ರ್ಯಾಂಕುಗಳಿಂದಾಗಿಯೇ ಬೋರ್ಡಿಂಗ್ ಶಾಲೆಗಳಿಗೆ ಕೌನ್ಸೆಲರುಗಳು ಬೇಕು. 205 00:14:18,760 --> 00:14:21,000 ಬಾಲ್ಯದ ನೋವುಗಳನ್ನು ನಾವು ಯಾವತ್ತೂ ಮರೆಯುವುದಿಲ್ಲ. 206 00:14:22,120 --> 00:14:25,600 ಬಾಲ್ಯದ ಗಾಯಗಳನ್ನು ಗುಣಪಡಿಸಲು ವಯಸ್ಕರು ಮನಃಶಾಸ್ತ್ರಜ್ಞರ ಬಳಿ ಹೋಗುತ್ತಾರೆ. 207 00:14:27,600 --> 00:14:30,200 ನನ್ನನ್ನು ನಂಬಿ, ನನಗಿಂತ ಚೆನ್ನಾಗಿ ಅದು ಯಾರಿಗೂ ಗೊತ್ತಿಲ್ಲ. 208 00:14:32,160 --> 00:14:34,080 10 ವರ್ಷ ಆದಾಗ ಹೆತ್ತವರನ್ನು ಕಳೆದುಕೊಂಡೆ. 209 00:14:37,800 --> 00:14:38,920 ನನ್ನನ್ನು ಕ್ಷಮಿಸಿ. 210 00:14:42,000 --> 00:14:43,200 ನನ್ನ ಬಗ್ಗೆ ಸಾಕು. 211 00:14:44,160 --> 00:14:48,160 ಜಗತ್ತಿನಿಂದ ದೂರ ಇಲ್ಲಿ, ಈ ಥರಗಟ್ಟುವ ಚಳಿಯ ಜಾಗದಲ್ಲಿ ನೀವೇಕೆ... 212 00:14:48,720 --> 00:14:50,560 ಶಾಲೆಯ ಕೌನ್ಸಲರ್ ಆಗಿದ್ದೀರಿ? 213 00:14:51,280 --> 00:14:53,080 ಯಾರಿಂದ ದೂರ ಓಡುತ್ತಿದ್ದೀರಿ? 214 00:14:57,680 --> 00:15:00,240 ಕ್ಷಮಿಸಿ, ಅದು ತೀರಾ ವೈಯಕ್ತಿಕ ಅಲ್ಲವೆಂದು ಅಂದುಕೊಂಡಿರುವೆ. 215 00:15:01,480 --> 00:15:02,480 ಇಲ್ಲ. 216 00:15:04,320 --> 00:15:05,440 ನನ್ನ ಮಗ, ಅಭಿ, 217 00:15:06,760 --> 00:15:08,080 ಅವನಿಗೆ ಐದು ವರ್ಷ ವಯಸ್ಸು. 218 00:15:09,440 --> 00:15:10,920 ಅವನು ಅಪ್ಪನ ಜೊತೆಗಿದ್ದಾನೆ. 219 00:15:12,960 --> 00:15:17,400 ಆರ್ಥಿಕವಾಗಿ ಸಕ್ಷಮ ಎಂದು ನ್ಯಾಯಾಲಯದಲ್ಲಿ ಸಾಬೀತು ಪಡಿಸಲು ಆಗದೆ ಅವನ ಕಸ್ಟಡಿ ಕಳೆದುಕೊಂಡೆ. 220 00:15:17,880 --> 00:15:19,200 ಬಹುಶಃ ಈ ಉದ್ಯೋಗದಿಂದ... 221 00:15:20,080 --> 00:15:21,640 ಮಗನನ್ನು ಆಗಾಗ ಭೇಟಿಯಾಗುತ್ತೀರಾ? 222 00:15:28,080 --> 00:15:29,200 ಬೇಕಾದಷ್ಟoತೂ ಇಲ್ಲ. 223 00:15:32,680 --> 00:15:34,480 ಬನ್ನಿ, ಆ ಫೈಲ್ ಹುಡುಕೋಣ. 224 00:16:06,600 --> 00:16:08,280 ರಮನ್ ನಿನಾದ್ ಬ್ಯಾಚ್ 2007 225 00:16:14,880 --> 00:16:15,760 ವಿದ್ಯಾರ್ಥಿ ವಿವರ 226 00:16:29,120 --> 00:16:31,040 ವಿಷಯ: ರಜೆಗಾಗಿ ಅರ್ಜಿ 227 00:16:33,440 --> 00:16:34,400 ಉಪಯೋಗವಿಲ್ಲ. 228 00:16:37,840 --> 00:16:39,240 ನಿಮಗೆ ಏನಾದರೂ ಸಿಕ್ಕಿತೇ? 229 00:16:41,960 --> 00:16:43,480 -ಸಿಕ್ಕಿತು. -ನಿಜವಾಗಿಯೂ? 230 00:16:50,480 --> 00:16:54,560 ಪ್ರಸ್ತುತ ವಿಳಾಸ, ರಮನ್ ಕೆಫೆ. ಆದರೆ 2007 ರಿಂದ ಬದಲಾಗಿಲ್ಲ. 231 00:16:54,640 --> 00:16:56,480 ರಮನ್ ಕೆಫೆ ಹಲ ವರ್ಷಗಳ ಹಿಂದೆ ಮುಚ್ಚಿದೆ. 232 00:16:57,160 --> 00:16:59,080 ಎರಡನೇ ವಿಳಾಸ ಕೋಟಗಿರಿಯಲ್ಲಿದೆ. 233 00:17:00,000 --> 00:17:03,400 ಅವನ ಅಜ್ಜಅಜ್ಜಿಯ ಮನೆ. ರಜೆಯ ಸಮಯದಲ್ಲಿ ಅವನಲ್ಲಿಗೆ ಹೋಗುತ್ತಿದ್ದ. 234 00:17:03,920 --> 00:17:06,200 ಅವರಿಗೆ ನಿನಾದ್ ಬಗ್ಗೆ ಏನಾದರೂ ತಿಳಿದಿರಬಹುದು. 235 00:17:07,240 --> 00:17:10,160 ಅಥವಾ ನಿನಾದ್ ಕೂಡ ಅಲ್ಲಿ ನಿನಗೆ ಸಿಗಬಹುದು. 236 00:17:13,320 --> 00:17:15,400 ಕೋಟಗಿರಿ ಒಂದು ಗಂಟೆ ದೂರವಿದೆ ಅಷ್ಟೇ. 237 00:17:17,680 --> 00:17:18,520 ಹೌದು. 238 00:17:24,240 --> 00:17:26,720 ನಾವು ಫೇಲ್ ಆದರೆ? 239 00:17:28,560 --> 00:17:33,400 ಡೀನ್ ವ್ಯಾಸ್ ಪ್ರತಿಮೆ ಅನಾವರಣಕ್ಕೆ ಎಲ್ಲರೂ ಸಂಜೆ 5 ಗಂಟೆಗೆ ಚೌಹಾನ್ ಲಾನ್ಸಿನಲ್ಲಿ ಭೇಟಿಯಾಗೋಣ. 240 00:17:33,480 --> 00:17:34,680 ಧನ್ಯವಾದಗಳು. 241 00:17:40,920 --> 00:17:43,080 ಬನ್ನಿ ಎಲ್ಲರೂ, ಕೊನೆಯ ರಾತ್ರಿ. ಕುಡಿಯೋಣ. 242 00:17:43,200 --> 00:17:44,560 -ಆದರೆ... -ಕಮಾನ್! 243 00:17:44,680 --> 00:17:46,960 ಹೇ! ನಾನು ನಿನಗೆ ವಿಸ್ಕಿ ಕುಡಿಸುವೆ. 244 00:17:47,040 --> 00:17:48,320 -ಖಂಡಿತವಾಗಿಯೂ? -ಬಾ. 245 00:17:48,960 --> 00:17:51,080 ಬೇಗ. ಆತ ಉಚಿತ ವಿಸ್ಕಿ ನೀಡುತ್ತಿದ್ದಾನೆ! 246 00:17:52,440 --> 00:17:53,280 ಹೇ. 247 00:17:53,320 --> 00:17:54,760 ಅದೊಂದು ಪೆದ್ದು ನಾಟಕ. 248 00:17:55,440 --> 00:17:56,280 ಏನಾದರೇನು? 249 00:17:57,000 --> 00:18:00,160 "ಪೆದ್ದು ನಾಟಕ. " ನಾಟಕ ಪೆದ್ದು. ನಾನು ಕೂಡ ಪೆದ್ದು. ಅಲ್ಲವೇ? 250 00:18:00,800 --> 00:18:02,280 ನನ್ನ ಮಾತಿನ ಅರ್ಥ ಅದಲ್ಲ. 251 00:18:03,040 --> 00:18:04,800 ನಿನ್ನ ಮಾತಿನ ನಿಜವಾದ ಅರ್ಥ ಅದೇ. 252 00:18:04,920 --> 00:18:07,720 ನಾನಿಲ್ಲಿಗೆ ಬರಲೇಬಾರದಾಗಿತ್ತು. ಏಕೆ ನನ್ನನ್ನು ಕರೆತಂದೆ? 253 00:18:07,800 --> 00:18:09,680 ಟ್ರಸ್ಟೀಯನ್ನು ನೋಡಲು ಬಂದಿದ್ಧಾರೆ. 254 00:18:09,760 --> 00:18:12,200 -ಯಾರೂ ನನಗೆ ಬೆಲೆ ನೀಡುತ್ತಿಲ್ಲ. -ಸರಿ, ನಾನು... 255 00:18:12,320 --> 00:18:16,760 ಈಗ ಸಮಯವಿಲ್ಲ ಇದಕ್ಕೆ. ಡೀನ್ ಸ್ವಾಮಿಯನ್ನು ಭೇಟಿಯಾಗಬೇಕು. ಆಮೇಲೆ ಮಾತಾಡುವೆ. 256 00:18:27,040 --> 00:18:28,320 ದೇವ್, ಹೋಗು ಇಲ್ಲಿಂದ. 257 00:18:39,000 --> 00:18:40,480 ದೇವ್, ನಾನು... 258 00:19:45,160 --> 00:19:46,920 ಕ್ಷಮಿಸು! ಏನೂ ಆಗಿಲ್ಲ ತಾನೇ? 259 00:19:48,440 --> 00:19:50,400 ಏನಾಯಿತು? ಹೆದರಿರುವಂತೆ ಕಾಣುತ್ತಿರುವೆ. 260 00:19:51,560 --> 00:19:52,960 ಏನಾಗಿಲ್ಲ ತಾನೇ, ಮಾಲ್ವಿಕ? 261 00:19:56,320 --> 00:19:57,760 ನಿನಗೂ ಪ್ರ್ಯಾಂಕ್ ಮಾಡಿದರೇ? 262 00:20:03,520 --> 00:20:04,720 ಪ್ರ್ಯಾಂಕ್ ಮಾಡಿದರೇ? 263 00:20:05,320 --> 00:20:06,320 ಅದೇ ಇರಬೇಕು. 264 00:20:08,080 --> 00:20:09,400 ಈ ಹುಡುಗರು... 265 00:20:10,280 --> 00:20:11,280 ನೀನೆಲ್ಲಿದ್ದೆ? 266 00:20:11,320 --> 00:20:13,280 ಫೋನ್ ಏಕೆ ಸ್ವೀಕರಿಸಲಿಲ್ಲ? 267 00:20:13,320 --> 00:20:15,080 ಶಾಲೆಯ ಕೊನೆಯ ದಿನ ನೆನಪಿದೆಯೇ? 268 00:20:17,520 --> 00:20:18,760 ಈ ಪತ್ರವನ್ನು ನೋಡು. 269 00:20:19,960 --> 00:20:21,320 ಇದು ನಿನಾದನ ಕೈಬರಹ. 270 00:20:22,040 --> 00:20:26,520 ಅಜ್ಜನಿಗೆ ದಿಢೀರ್ ಅಸೌಖ್ಯ, ಅವನನ್ನು ರಾತ್ರಿಯೇ ಬಸ್ಸಿನಲ್ಲಿ ಕೋಟಗಿರಿಗೆ ಬಿಡುವಂತೆ 271 00:20:26,560 --> 00:20:30,560 ಅವನ ಹೆತ್ತವರು ಶಾಲೆಗೆ ಮನವಿ ಮಾಡಿದ್ದಾರೆಂದು, ಅಲ್ಲಿ ಅವರು ಕಾಯುತ್ತಿದ್ದಾರೆಂದು, 272 00:20:30,640 --> 00:20:32,240 ಅವನು ಬರೆದಿದ್ದಾನೆ. 273 00:20:32,320 --> 00:20:35,080 ಬಸ್ಸಿನಲ್ಲಿ ಕೂರಿಸುವ ಕೆಲಸ ಕೋಚ್ ವ್ಯಾಸ್ ಗೆ ವಹಿಸಲಾಗಿತ್ತು. 274 00:20:35,200 --> 00:20:39,200 ಪತ್ರಕ್ಕೆ ಸಹಿ ಮತ್ತು ಸ್ಟ್ಯಾಂಪ್ ಹಾಕಿ ಅವರು ಅವನ ಕಸ್ಟಡಿ ಪಡೆದುಕೊಂಡರು. 275 00:20:39,280 --> 00:20:41,760 ಅವರು ನಿನಾದನ ಹೆತ್ತವರ ಜೊತೆ ಮಾತಾಡಿದರು ಎಂದಿದೆ. 276 00:20:41,800 --> 00:20:43,200 ಸರಿ, ಅದಕ್ಕೆ? 277 00:20:43,280 --> 00:20:46,560 ನಿನಾದ್ ಅಜ್ಜನಿಗೆ ಹುಷಾರಿಲ್ಲದಿದ್ದರೆ ಅವನು ನನಗೆ ಹೇಳುತ್ತಿದ್ದ. 278 00:20:46,640 --> 00:20:49,320 ಹೌದು, ಆದರೆ ಅವನು ಹೇಳಿಲ್ಲ. ನಿಮಗಿಬ್ಬರಿಗೂ ಜಗಳವಾಗಿತ್ತಲ್ಲವೇ? 279 00:20:50,280 --> 00:20:52,800 ಕಾರು ಕಳಿಸಲು ಅವರು ನನ್ನ ಅಜ್ಜನಿಗೆ ಹೇಳಬಹುದಾಗಿತ್ತು. 280 00:20:52,920 --> 00:20:57,400 ಅವನ ಹೆತ್ತವರು ಬಡ ಕೆಫೆ ಮಾಲೀಕರಾಗಿದ್ದರು. ನಿನ್ನ ಅಜ್ಜ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದರು. 281 00:20:57,480 --> 00:21:00,080 ಅವರಿಂದ ಸಹಾಯ ಪಡೆಯಲು ಇವರು ಹಿಂಜರಿಸಿರಬಹುದು. 282 00:21:00,160 --> 00:21:02,280 -ಏನೋ ಸರಿ ಇಲ್ಲ ಇಲ್ಲಿ. -ಎಲ್ಲಾ ಸರಿ ಇದೆ! 283 00:21:03,560 --> 00:21:05,800 ಇದು ಅವನ ಕೈಬರಹ, ಆದಿ. 284 00:21:07,280 --> 00:21:09,240 ಇದರಲ್ಲಿ ನಿನಗೆ ಏನು ಸರಿಕಾಣುತ್ತಿಲ್ಲ? 285 00:21:10,160 --> 00:21:13,200 ಬೈ ಹೇಳದೆ ಹೋದನೆಂಬುದೇ? ನಿನ್ನನ್ನು ಮರೆತನೆಂಬುದೇ? 286 00:21:13,960 --> 00:21:16,040 ನಿನ್ನನ್ನು ಭೇಟಿಯಾಗಲು ಬರಲಿಲ್ಲ ಎಂಬುದೇ? 287 00:21:18,800 --> 00:21:21,280 ನೀನೂ ನನ್ನ ಜೊತೆ ಅದೇ ತಾನೇ ಮಾಡಿದ್ದು? 288 00:21:26,560 --> 00:21:28,240 ತಮಾಷೆ ಏನೆಂದು ಗೊತ್ತೇ ನಿನಗೆ? 289 00:21:29,280 --> 00:21:33,320 15 ವರ್ಷಗಳ ಹಿಂದೆ ನಾನು ನೀನು ಬೇರೆಯಾದ ಸ್ಥಳದಲ್ಲೇ ನಾವು ಈಗ ನಿಂತಿದ್ದೇವೆ, 290 00:21:35,760 --> 00:21:39,320 ನಮ್ಮಿಬ್ಬರ ನಡುವೆ ಅವನು ಬರಲಿಲ್ಲ ಎಂದು ನನಗೆ ಗೊತ್ತು, ಏಕೆಂದರೆ ನಿಮ್ಮಿಬ್ಬರ ನಡುವೆ 291 00:21:42,760 --> 00:21:43,880 ನಾನು ಬಂದಿದ್ದು. 292 00:21:48,880 --> 00:21:50,080 ನನ್ನನ್ನು ಕ್ಷಮಿಸು. 293 00:21:53,600 --> 00:21:54,800 ಆದರೆ... 294 00:21:57,360 --> 00:21:58,880 ಇದು ನನಗೆ ಮುಖ್ಯ. 295 00:22:00,240 --> 00:22:01,320 ನಾನು ಹೋಗಬೇಕು... 296 00:22:05,520 --> 00:22:06,640 ನಾನು ಕೋಟಗಿರಿಗೆ ಹೋಗುವೆ. 297 00:22:13,720 --> 00:22:15,080 ರಾತ್ರಿಯೊಳಗೆ ಬರುತ್ತೇನೆ. 298 00:22:26,760 --> 00:22:31,240 ಕೋಟಗಿರಿ 299 00:22:52,520 --> 00:22:54,520 -ನಾವು ಮಾಡಿದ ಆ ಡೆಲಿವರಿ... -ರಮನ್ ಅಂಕಲ್! 300 00:23:08,640 --> 00:23:09,640 ಅಧಿರಾಜ್? 301 00:23:10,120 --> 00:23:11,120 ಹೇ! 302 00:23:13,120 --> 00:23:14,560 ಹೇಗಿರುವೆ, ಮಗನೇ? 303 00:23:15,320 --> 00:23:16,600 ಎಷ್ಟು ವರ್ಷಗಳಾಯಿತು! 304 00:23:18,680 --> 00:23:21,400 ಅಂಕಲ್, ನಿನಾದ್ ಎಲ್ಲಿದ್ದಾನೆ? ಅವನನ್ನು ನೋಡಲು ಬಂದಿದ್ದೇನೆ. 305 00:23:22,600 --> 00:23:23,600 ಅವನೆಲ್ಲಿದ್ದಾನೆ? 306 00:23:24,760 --> 00:23:25,800 ನಿನಗೆ ಗೊತ್ತಿಲ್ಲವೇ? 307 00:23:27,400 --> 00:23:28,320 ನಿನಾದ್... 308 00:23:30,080 --> 00:23:32,600 15 ವರ್ಷಗಳಿಂದ ನಾಪತ್ತೆಯಾಗಿದ್ದಾನೆ, ಮಗಾ. 309 00:23:37,480 --> 00:23:38,720 ನಾಪತ್ತೆ ಅಂದರೆ? 310 00:23:39,400 --> 00:23:42,320 ಆ ದಿನ ನಿನಾದ್ ಮತ್ತು ನಿನಗಾಗಿ ನಾವು ಕಾಯುತ್ತಿದ್ದೆವು. 311 00:23:43,400 --> 00:23:45,960 ತಡವಾದಾಗ, ನಿನ್ನ ಅಜ್ಜನಿಗೆ ಕರೆ ಮಾಡಿದೆವು. 312 00:23:46,840 --> 00:23:50,200 ನೀನು ಮನೆಗೆ ತಲುಪಿರುವೆ ಆದರೆ ತುಂಬಾ ಸಿಟ್ಟಿನಲ್ಲಿರುವೆ ಎಂದರು. 313 00:23:50,280 --> 00:23:52,920 ನಿನಾದ್ ಬೈ ಹೇಳದೆ ಹೇಗೆ ಹೋದನೆಂದು. 314 00:23:54,480 --> 00:23:55,800 ನಾವು ಶಾಲೆಗೆ ಕರೆ ಮಾಡಿದೆವು. 315 00:23:56,280 --> 00:23:58,040 ನಿನಾದ್ ಎಲ್ಲಿ ಎಂದು ಕೇಳಿದೆವು. 316 00:23:58,120 --> 00:24:00,720 ಬದಲಿಗೆ ಅವರು ನಮ್ಮ ಮೇಲೆ ರೇಗಾಡಿದರು. 317 00:24:02,480 --> 00:24:06,000 "ನಿನಾದ್ ಅಜ್ಜನಿಗೆ ಹುಷಾರಿಲ್ಲ. 318 00:24:06,080 --> 00:24:08,800 ಕೋಟಗಿರಿಗೆ ತುರ್ತಾಗಿ ಹೋಗಬೇಕು. 319 00:24:08,880 --> 00:24:13,080 ಕೋಟಗಿರಿಗೆ ಹೋಗುವ ಬಸ್ಸಿನಲ್ಲಿ ಕೂರಿಸಿ, ಅಲ್ಲಿಂದ ಕರ್ಕೊಂಡು ಹೋಗುತ್ತೀವಿ" ಅಂದಿರಿ. 320 00:24:13,160 --> 00:24:15,560 ನಿನಾದನ ಪತ್ರವನ್ನೂ ಅವರು ನನಗೆ ತೋರಿಸಿದರು. 321 00:24:16,920 --> 00:24:18,080 ಇದೇ ಪತ್ರವನ್ನಾ? 322 00:24:22,080 --> 00:24:24,480 ಈ ಪತ್ರ ನನಗೆ ಇನ್ನೂ ಅರ್ಥವಾಗುತ್ತಿಲ್ಲ. 323 00:24:25,480 --> 00:24:27,320 ಇದು ನಿನಾದನ ಕೈಬರಹ. 324 00:24:27,400 --> 00:24:29,240 ಆದರೆ ನಿನಾದ್ ಇದನ್ನೇಕೆ ಬರೆಯುತ್ತಾನೆ? 325 00:24:31,400 --> 00:24:33,520 ಅಜ್ಜನಿಗೆ ಹುಷಾರಿತ್ತು. 326 00:24:34,000 --> 00:24:35,600 ಹುಷಾರಿಲ್ಲದೇ ಇದ್ದರೂ, 327 00:24:35,680 --> 00:24:37,640 ನಿನಾದನನ್ನು ಬಿಟ್ಟು ನಾವೇಕೆ ಹೋಗುತ್ತೇವೆ? 328 00:24:38,920 --> 00:24:41,920 ಮತ್ತು ವ್ಯಾಸ್ ಅವರಿಗೆ ಅವನನ್ನು ನೋಡಿಕೊಳ್ಳಲು ಹೇಳುತ್ತಿರಲಿಲ್ಲ. 329 00:24:42,000 --> 00:24:42,960 ಖಂಡಿತ ಇಲ್ಲ. 330 00:24:44,000 --> 00:24:47,080 ಅಜ್ಜನಿಗೆ ಎಲ್ಲವೂ ತಿಳಿದಿತ್ತು ಆದರೆ ನನಗೆ ಏನನ್ನೂ ಹೇಳಲಿಲ್ಲ. 331 00:24:48,640 --> 00:24:50,640 ಇಷ್ಟು ವರ್ಷ ನನ್ನಿಂದ ಮುಚ್ಚಿಟ್ಟಿದ್ದರು. 332 00:24:51,120 --> 00:24:52,120 ಏಕೆ? 333 00:24:52,200 --> 00:24:56,200 ಅಧಿರಾಜ್, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ನೀನು ಬಹಳಷ್ಟು ಕಳೆದುಕೊಂಡಿದ್ದೆ. 334 00:24:56,840 --> 00:24:59,920 ನಿನಾದನನ್ನೂ ಕಳೆದುಕೊಂಡರೆ ನೀನು ಸಂಪೂರ್ಣವಾಗಿ ಮುರಿದುಬೀಳುತ್ತಿದ್ದೆ. 335 00:25:06,400 --> 00:25:08,040 ಅವನು ಹೇಗೆ ಹೀಗೆ ನಾಪತ್ತೆಯಾದ? 336 00:25:09,400 --> 00:25:11,840 ಶಾಲೆಯಲ್ಲಿ ಯಾರಿಗೂ ಈ ಬಗ್ಗೆ ಏನೂ ತಿಳಿದಿಲ್ಲ. 337 00:25:11,920 --> 00:25:14,480 ನೀವು ತನಿಖೆ ಯಾಕೆ ಮಾಡಿಸಲಿಲ್ಲ? 338 00:25:15,040 --> 00:25:16,160 ನಾವು ಮಾಡಿಸಿದೆವು! 339 00:25:17,200 --> 00:25:19,000 ನಾವು ಎಲ್ಲವನ್ನೂ ಮಾಡಿಸಿದೆವು, ಅಧಿರಾಜ್. 340 00:25:20,440 --> 00:25:23,240 ತನಿಖೆಗಾಗಿ ಎಸ್ಎಸ್ಪಿ ಅನಿಲ್ ಜೋಷಿ ಅವರನ್ನು ನಿಯೋಜಿಸಲಾಗಿತ್ತು. 341 00:25:23,840 --> 00:25:28,960 ಎಫೈಆರ್, ನಾಪತ್ತೆ ವರದಿ. ಊಟಿಯಾದ್ಯಂತ ಖುದ್ದಾಗಿ ನನ್ನ ಮಗನ ಫೋಟೋ ಅನ್ನು 342 00:25:29,040 --> 00:25:30,480 ಪ್ರತಿ ಗೋಡೆಯಲ್ಲಿ ಅಂಟಿಸಿದೆ. 343 00:25:31,600 --> 00:25:33,520 ನಿನಾದ್ ಹತ್ತಿದ್ದ ಬಸ್ಸಿನ ಚಾಲಕನನ್ನು 344 00:25:34,520 --> 00:25:36,320 ಕೂಡ ಮಾತನಾಡಿಸಿದ್ದೆವು. 345 00:25:37,560 --> 00:25:41,480 ಕೋಟಗಿರಿಯಿಂದ ಕೆಲವು ಸ್ಟಾಪ್ ಮುಂಚೆ ನಿನಾದ್ ಬಸ್ಸಿನಿಂದ ಇಳಿದ ಎಂದು ಅವನು ಹೇಳಿದ. 346 00:25:42,720 --> 00:25:45,720 ಅವನನ್ನು ತಡೆಯಲು ನೋಡಿದಾಗ ಹೊಡೆದಾಡಿದ ಅವನು ಎಂದು ಹೇಳಿದರು. 347 00:25:46,840 --> 00:25:48,960 ಶಾಲೆಯಲ್ಲೂ ತನಿಖೆ ನಡೆಸಿದರು. 348 00:25:49,520 --> 00:25:54,000 ಕೋಚ್ ವ್ಯಾಸ್ ಅವರನ್ನೂ ಪ್ರಶ್ನಿಸಿದರು. ಆದರೆ ಅವರು ಈ ಪತ್ರವನ್ನಷ್ಟೇ ತೋರಿಸಿದರು. 349 00:25:55,800 --> 00:25:57,320 ಪೊಲೀಸರು ಅವರನ್ನು ನಂಬಿದರು. 350 00:25:58,840 --> 00:26:03,120 ಶಾಲೆಯವರು ಪ್ರತಿ ದಿನ ಶಾಲೆಗೆ ಬಂದು ರಂಪಾಟ ಮಾಡಬೇಡಿ ಎಂದರು. 351 00:26:03,960 --> 00:26:06,520 ಶಾಲೆಯವರ ಒತ್ತಡಕ್ಕೆ ಮಣಿದು 352 00:26:06,600 --> 00:26:08,720 ಪೊಲೀಸರೂ ನಿನಾದ್ ಪ್ರಕರಣವನ್ನು ಮುಚ್ಚಿದರು. 353 00:26:09,800 --> 00:26:12,400 ನಿನಾದ್ ನಾಪತ್ತೆಯಾಗಿಲ್ಲ. 354 00:26:14,280 --> 00:26:15,560 ಅವನೇ ಓಡಿ ಹೋದ ಎಂದರು. 355 00:26:16,600 --> 00:26:18,640 ಸಾಧ್ಯವಿರುವ ಎಲ್ಲವನ್ನೂ ಮಾಡಿದೆವು. 356 00:26:19,800 --> 00:26:21,600 ಇದ್ದೆಲ್ಲಾ ಹಣ ಖರ್ಚು ಮಾಡಿದೆವು. 357 00:26:22,400 --> 00:26:24,080 ರಮನ್ ಕೆಫೆ ಮಾರಾಟ ಮಾಡಿದೆವು. 358 00:26:26,120 --> 00:26:28,480 ಆದರೆ ನನಗಿನ್ನೂ ಒಂದು ವಿಚಾರ ಅರ್ಥವಾಗಿಲ್ಲ. 359 00:26:28,600 --> 00:26:31,000 ನಿನಾದನ ಜೊತೆ ಅಂದು ಏನಾಯಿತು? 360 00:26:32,440 --> 00:26:35,680 ಯಾಕೆ ನಮ್ಮನ್ನೆಲ್ಲ ಬಿಟ್ಟು ಓಡಿ ಹೋದ? 361 00:27:24,360 --> 00:27:28,920 ಫೋಟೋಗಳು 50 ಸೆಕೆಂಡುಗಳಲ್ಲಿ ನಿಮ್ಮ ಫೋಟೋ ತೆಗೆಯಿರಿ 362 00:27:38,600 --> 00:27:40,440 -ಬಾ ಒಂದು ಫೋಟೋ ತಗೊಳ್ಳೋಣ. -ಆದು! 363 00:27:41,000 --> 00:27:42,680 -ಫೋಟೋ ನಂತರ ತೆಗೆಯಬಹುದು. -ಏಕೆ? 364 00:27:42,760 --> 00:27:45,000 ಲಿಂಗ್ಸ್ ಗೆ 2 ಗಂಟೆಯೊಳಗೆ ಕರ್ಕೊಂಡು ಹೋಗ್ಬೇಕು. 365 00:27:45,080 --> 00:27:45,920 ಆದರೆ ಏಕೆ? 366 00:27:46,000 --> 00:27:47,040 ಶಾಲೆಯ ಕೊನೆಯ ದಿನ 367 00:27:47,120 --> 00:27:50,080 ನಾನು ಬಾಯಿಬಿಟ್ಟರೆ, ನಿನ್ನ ಗರ್ಲ್ ಫ್ರೆಂಡ್ ನನ್ನ ಕೊಲ್ಲುತ್ತಾಳೆ. 368 00:27:51,360 --> 00:27:52,760 ದರ್ಬಾರ್ ತೋರಿಸುತ್ತಾಳೆ. 369 00:27:53,240 --> 00:27:55,600 ಸರ್ಪ್ರೈಸ್ ಡೇಟ್ ಆಯೋಜಿಸಿದ್ದಾಳೆ. 370 00:27:55,680 --> 00:27:58,040 ಉಡುಗೊರೆಗೆ ರಿಬ್ಬನ್ ಕೂಡ ನಾನೇ ಖರೀದಿಸುವಂತೆ ಮಾಡಿದಳು. 371 00:27:59,080 --> 00:27:59,960 ಅಯ್ಯೋ! 372 00:28:00,560 --> 00:28:03,880 ತುಂಬಾ ಹೇಳಿಬಿಟ್ಟೆ. ಆಕೆಯನ್ನು ಭೇಟಿಯಾದಾಗ ಅಚ್ಚರಿಗೊಂಡಂತೆ ನಟಿಸು. 373 00:28:04,960 --> 00:28:05,880 ನಿನಾದ್. 374 00:28:07,520 --> 00:28:09,560 ನನಗೆ ಕೂಡ ಬೇಸರವಾಗಬೇಕು ಅಲ್ಲವೇ? 375 00:28:09,640 --> 00:28:11,800 ನಾನು ಮಾಲ್ವಿಕಳಿಂದ ದೂರ ಹೋಗುತ್ತಿರುವೆ ಎಂದು? 376 00:28:12,760 --> 00:28:14,320 ನಾನು ಆಕೆಯನ್ನು ಪ್ರೀತಿಸುತ್ತೇನೆ. 377 00:28:15,640 --> 00:28:18,680 ಆದರೆ, ಆಕೆಯಷ್ಟು ದುಃಖ ನನಗೇಕೆ ಆಗುತ್ತಿಲ್ಲ? 378 00:28:21,520 --> 00:28:22,520 ಆದು, 379 00:28:23,760 --> 00:28:25,680 ಹೋಗುತ್ತಿರುವವನು ಎಂದೂ ದುಃಖಿಯಲ್ಲ. 380 00:28:26,520 --> 00:28:28,560 ಬಾಕಿ ಉಳಿಯುವ ವ್ಯಕ್ತಿ ದುಃಖಿ. 381 00:28:31,200 --> 00:28:33,680 ಮತ್ತೆ ನೀನು ದುಃಖಪಡುವ ಅಗತ್ಯವಿಲ್ಲ, ಬ್ರೋ. 382 00:28:34,760 --> 00:28:37,080 ನೀನು ಈಗಾಗಲೇ ಬಹಳಷ್ಟು ದುಃಖ ಅನುಭವಿಸಿರುವೆ. 383 00:28:37,760 --> 00:28:39,800 ಈಗ ನೀನು ಖುಷಿಯಾಗಿರುವ ಸಮಯ. 384 00:28:40,320 --> 00:28:42,120 ಅಮೆರಿಕಾದಲ್ಲಿ ಪಾರ್ಟಿ ಮಾಡು. 385 00:28:43,400 --> 00:28:44,560 ಮಿಸ್ ಮಾಡಿಕೊಳ್ಳುವೆ. 386 00:28:45,080 --> 00:28:46,200 ನನ್ನ ನೋಡಲು ಬರುವೆಯಾ? 387 00:28:46,280 --> 00:28:49,160 -ಖಂಡಿತ, ನೀನು ನನಗೆ ಟಿಕೆಟ್ ಖರೀದಿಸುವೆಯಲ್ಲ? -ಹೋಗೋ! 388 00:28:49,240 --> 00:28:52,160 ನಿನ್ನ ಗ್ರಾಫಿಕ್ ಕಾದಂಬರಿ ಐಡಿಯಾ ಬಹಳಷ್ಟು ದುಡ್ಡು ತರಬಹುದು. 389 00:28:52,240 --> 00:28:53,720 ನಿನ್ನ ಸ್ವಂತ ವಿಮಾನ ಖರೀದಿಸು. 390 00:28:56,040 --> 00:28:58,400 ಬಾ, ಇನ್ನೂ ಸಮಯ ಉಳಿದಿದೆ. 391 00:28:59,960 --> 00:29:02,160 ಮತ್ತೆ ಯಾವಾಗ ಭೇಟಿಯಾಗುವೆವು ಗೊತ್ತಿಲ್ಲ. 392 00:29:03,600 --> 00:29:06,040 ಕನಿಷ್ಠ ಈ ರೀತಿ ನಿನ್ನ ಮುಖ ನೆನಪಿಡುವೆ. 393 00:29:06,120 --> 00:29:07,640 ಅತಿಯಾಗಿ ಯೋಚಿಸಬೇಡ, ಬಾ! 394 00:29:12,720 --> 00:29:13,920 ಬಾ! 395 00:30:11,280 --> 00:30:12,680 ಆದು, ಕೇಳು! 396 00:30:12,760 --> 00:30:15,080 -ಕೇಳು. -ನೀನು ನನಗೆ ಕಿಸ್ ಮಾಡಲು ನೋಡಿದೆಯಾ? 397 00:30:16,160 --> 00:30:17,960 ನಿನಗೇನಾಗಿದೆ? 398 00:30:18,520 --> 00:30:20,640 ಆದು, ಇಲ್ಲಿ ರಂಪ ಮಾಡುವುದು ಬೇಡ. 399 00:30:21,320 --> 00:30:22,160 ಓಹ್, ದೇವರೇ. 400 00:30:24,520 --> 00:30:25,600 ಆದು, ನನ್ನ ಮಾತು ಕೇಳು! 401 00:30:26,560 --> 00:30:27,880 ನನ್ನ ಮಾತು ಕೇಳು, ದಯವಿಟ್ಟು. 402 00:30:27,960 --> 00:30:29,440 ಆದು, ತಪ್ಪು ತಿಳಿಯಬೇಡ... 403 00:30:30,280 --> 00:30:32,720 ಆದು. ತಪ್ಪು ತಿಳಿಯಬೇಡ. ನನ್ನ ಮಾತು ಕೇಳು! 404 00:30:32,800 --> 00:30:33,880 ಆದು, ನನ್ನ ಮಾತು ಕೇಳು. 405 00:30:34,360 --> 00:30:35,320 ಆದು! 406 00:30:35,400 --> 00:30:37,320 -ಆದಿ! -ನನ್ನ ಮಾತು ಕೇಳು, ದಯವಿಟ್ಟು. 407 00:30:39,080 --> 00:30:40,040 ನಿನಾದ್! 408 00:30:40,120 --> 00:30:42,680 ಮಾಲ್ವಿಕ, ಕ್ಷಮಿಸು. ಕರೆದುಕೊಂಡು ಬರ್ತೀನಿ ಅವನನ್ನು. 409 00:30:42,760 --> 00:30:43,800 ಆದು! 410 00:30:46,760 --> 00:30:48,080 ಆದು, ನನ್ನ ಮಾತು ಕೇಳು! 411 00:30:50,040 --> 00:30:51,000 ಆದು. 412 00:30:51,080 --> 00:30:54,360 ವಿವರಿಸಲು ಅವಕಾಶ ನೀಡು. ನನ್ನ ಮಾತು ಕೇಳು. ಕ್ಷಮಿಸು, ಆದು. 413 00:30:54,880 --> 00:30:55,760 ಆದು! 414 00:31:00,600 --> 00:31:01,760 ಹೇ, ಹೋಮೊ! 415 00:31:05,080 --> 00:31:07,200 -ದಯವಿಟ್ಟು! -ಯಾಕೆ ಹೀಗೆ ಮಾಡಿದೆ, ನಿನಾದ್? 416 00:31:07,960 --> 00:31:09,720 ಬೆಸ್ಟ್ ಫ್ರೆಂಡ್ ಎಂದು ತಿಳಿದಿದ್ದೆ. 417 00:31:09,800 --> 00:31:12,480 ಇಷ್ಟು ಸಮಯ... 418 00:31:15,400 --> 00:31:16,520 ಆದು, ದಯವಿಟ್ಟು ಕೇಳು. 419 00:31:17,200 --> 00:31:18,520 ಆದು, ವಿವರಿಸಲು ಅವಕಾಶ ನೀಡು! 420 00:31:18,600 --> 00:31:22,280 ಈಗ ಭಾಷಣ ಮಾಡಲು ಕೂಡ ನನಗೆ ನಾಚಿಕೆಯಾಗುತ್ತಿದೆ! 421 00:31:24,080 --> 00:31:25,640 ನನ್ನ ಭಾಷಣ ಎಲ್ಲಿಟ್ಟೆ ನಾನು? 422 00:31:29,200 --> 00:31:30,440 ನನ್ನ ಭಾಷಣ ಎಲ್ಲಿದೆ? 423 00:31:30,960 --> 00:31:33,320 ನನ್ನ ಭಾಷಣ ಎಲ್ಲಿದೆ? ನನ್ನಿಂದ ದೂರವಿರು! 424 00:31:34,480 --> 00:31:36,800 ನೀನು ಹಾಗೇಕೆ ಮಾಡಿದೆ? ಏನು ಯೋಚಿಸಿ ಮಾಡಿದೆ? 425 00:31:37,280 --> 00:31:39,320 -ಕೊನೆಯ ದಿನ ಅದೂ? -ಅದಕ್ಕೇ ಹಾಗೆ ಮಾಡಿದೆ! 426 00:31:40,400 --> 00:31:43,440 ನಾವು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ ಎಂದು ನನಗೆ ಅನಿಸಿತು. 427 00:31:44,320 --> 00:31:48,240 ನನ್ನ ಭಾವನೆ ತಿಳಿಯದೆ ನೀನು ಹೋಗುವುದು ನನಗೆ ಬೇಡವಾಗಿತ್ತು, ಆದು. 428 00:31:49,200 --> 00:31:50,080 ಆದು, ಕ್ಷಮಿಸು. 429 00:31:50,160 --> 00:31:52,760 -ಬಹುಶಃ ನಾನು ಮೊದಲೇ ಹೇಳಬೇಕಿತ್ತು... -ಬಹುಶಃ? 430 00:31:53,400 --> 00:31:54,720 ಬಹುಶಃ, ನಿನಾದ್? 431 00:31:55,560 --> 00:31:57,160 ನಿನಗೆ ಅರ್ಥವಾಗುವುದು ಅಂದುಕೊಂಡೆ. 432 00:31:58,880 --> 00:32:01,800 -ನೀನು ಹಾಗೇ ಹೋಗಲು... -ದೂರವಿರು, ಹೋಮೊ! 433 00:32:10,840 --> 00:32:12,400 ನೀನು ಕೂಡ ಬೇರೆಯವರಂತೆಯೇ. 434 00:32:14,720 --> 00:32:17,600 ನಾವು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ ಅಂದುಕೊಂಡೆ. 435 00:32:19,480 --> 00:32:20,480 ಈಗ ಅನ್ನಿಸ್ತಾ ಇದೆ 436 00:32:22,320 --> 00:32:23,600 ಅದೇ ಒಳ್ಳೆಯದು ಅಂತ. 437 00:32:25,200 --> 00:32:26,160 ಸರಿ. 438 00:33:05,320 --> 00:33:06,880 ಚೆನ್ನಾಗಿ ಹಾಡುತ್ತಿದ್ದಾರಲ್ಲ? 439 00:33:20,080 --> 00:33:21,480 ಮಾಲ್ವಿಕ, ನಾನು... 440 00:33:22,280 --> 00:33:23,480 ದೇವ್! 441 00:33:23,560 --> 00:33:25,400 ನಾನು ಹಾಗೆಲ್ಲ ಹೇಳಬಾರದಾಗಿತ್ತು. 442 00:33:26,560 --> 00:33:29,440 ನೀನು ನನ್ನ ಪ್ರೀತಿಸುವೆ ಗೊತ್ತು. ಅದಕ್ಕೇ ನಾನು ಬಂದಿದ್ದು. 443 00:33:31,360 --> 00:33:32,680 ಅದರ ಬಗ್ಗೆ ಯೋಚಿಸುವುದೂ ಬೇಡ. 444 00:33:40,120 --> 00:33:41,400 ಆಕಾಶ! 445 00:33:44,920 --> 00:33:46,400 ಮಿ. ಜಾಮ್ವಾಲ್, ದಯವಿಟ್ಟು. 446 00:33:47,600 --> 00:33:48,560 ಧನ್ಯವಾದ. 447 00:34:17,440 --> 00:34:18,480 ರಜತ್. 448 00:34:30,640 --> 00:34:32,000 -ಸುಯಾಶ್! -ಸುಯಾಶ್! 449 00:34:32,080 --> 00:34:33,640 ಸುಯಾಶ್, ಕೆಳಗೆ ಬಾ! 450 00:34:33,760 --> 00:34:35,120 ಸುಯಾಶ್, ಕೆಳಗೆ ಬಾ! 451 00:34:35,640 --> 00:34:37,160 -ಸುಯಾಶ್! -ಕೆಳಗೆ ಬಾ! 452 00:34:38,200 --> 00:34:39,440 ಸುಯಾಶ್! 453 00:35:07,640 --> 00:35:10,160 ಮಕ್ಕಳೇ! ಒಳಗೆ ಹೋಗಿ! 454 00:35:10,280 --> 00:35:11,480 -ಶಿಕ್ಷಕರೇ! -ಬನ್ನಿ! 455 00:35:43,000 --> 00:35:44,000 ಮಿ. ಜಾಮ್ವಾಲ್, 456 00:35:44,440 --> 00:35:46,640 -ಎಸ್ಎಸ್ಪಿ ಜೋಷಿಗೆ ಮಾತನಾಡಬೇಕಂತೆ. -ಖಂಡಿತ. 457 00:35:47,200 --> 00:35:49,520 ಪರವಾಗಿಲ್ಲ. ನಿನ್ನೊಂದಿಗೆ ನಾನಿದ್ದೇನೆ. 458 00:36:02,120 --> 00:36:03,320 ಇದು ಹೇಗೆ ನಡೆಯಿತು? 459 00:36:03,800 --> 00:36:05,440 ಇಡೀ ದಿನ ಕಾಣಿಸಲಿಲ್ಲ. 460 00:36:05,520 --> 00:36:07,280 ನ್ಯಾನ್ಸಿ ಹಿಂದೆ ಹೋದ ಅಂದುಕೊಂಡೆವು. 461 00:36:07,360 --> 00:36:08,840 ಆತ ಕ್ಲಾಕ್ ಟವರಿನಲ್ಲಿದ್ದ. 462 00:36:09,640 --> 00:36:11,800 ಜೆನಿಟರ್ ಯಿಂದ ಬೀಗದ ಕೈ ತೆಗೆದುಕೊಂಡಿದ್ದ. 463 00:36:11,880 --> 00:36:13,680 ಅಲ್ಲಿ ಕುಡಿಯಲು ಬಯಸಿದ್ದ. 464 00:36:16,640 --> 00:36:20,000 ಕಳೆದ ರಾತ್ರಿ ಆತನಿಗೆ ಹಾಗೆಲ್ಲಾ ನಾನು ಹೇಳಬಾರದಾಗಿತ್ತು. 465 00:36:20,600 --> 00:36:23,960 ದಬ್ಬಾಳಿಕೆ ಹೇಗಿರುತ್ತೆ ನನಗೆ ಗೊತ್ತು. ಆದರೆ ನಾನೇ ಅವನಿಗೆ ಹಾಗೆ ಮಾಡಿದೆ. 466 00:36:24,040 --> 00:36:25,400 ಆತ ಖಿನ್ನನಾಗಿದ್ದ ಮತ್ತು... 467 00:37:03,680 --> 00:37:06,760 ಹೋಮೊ 468 00:37:44,400 --> 00:37:45,360 ಛೇ. 469 00:37:48,400 --> 00:37:49,480 ಛೇ. 470 00:38:05,440 --> 00:38:06,640 ವೇದಾಂತ್! 471 00:38:15,160 --> 00:38:17,520 ಆದು, ನಾನು ತಿರುಗಿ ಹೋರಾಡುತ್ತಿದ್ದೇನೆ. 472 00:40:38,440 --> 00:40:40,440 ಅನುವಾದಿಸಿದವರು : ಜಯಶ್ರೀ 473 00:40:40,520 --> 00:40:42,520 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ