1 00:00:06,040 --> 00:00:06,880 ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ. 2 00:00:06,960 --> 00:00:07,800 ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ. 3 00:00:07,880 --> 00:00:08,720 ಯಾವುದೇ ಸಾಮ್ಯತೆ ಕಾಕತಾಳೀಯ. ಸಂಭಾಷಣೆ ಅಥವಾ ಪಾತ್ರ 4 00:00:08,800 --> 00:00:09,640 ಅವಮಾನಿಸುವ ಉದ್ದೇಶ ಹೊಂದಿಲ್ಲ. 5 00:00:09,720 --> 00:00:10,520 LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ. 6 00:00:10,640 --> 00:00:11,480 ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ. 7 00:00:11,520 --> 00:00:12,400 ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು 8 00:00:12,480 --> 00:00:13,320 ಮಾಟಮಂತ್ರ ಇತ್ಯಾದಿ ಉತ್ತೇಜಿಸದು. 9 00:00:13,400 --> 00:00:14,560 ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು ಅಮೆಝಾನ್ ಬೆಂಬಲಿಸದು. 10 00:00:14,640 --> 00:00:15,920 ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ. ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ. 11 00:00:24,200 --> 00:00:25,280 ಯೆಸ್! 12 00:00:31,320 --> 00:00:34,320 ನೀಲಗಿರಿ ವ್ಯಾಲಿ ಸ್ಕೂಲ್, ಊಟಿ ಸೆಪ್ಟೆಂಬರ್ 2022 13 00:00:43,160 --> 00:00:45,040 ಡೀನ್ ಇನ್ನೂ ಹೊರಬಂದಿಲ್ಲ. 14 00:00:45,120 --> 00:00:48,280 ಲಗೇಜನ್ನು ರಾತ್ರಿಯೇ ಹೊಸ ಸ್ಟಾಫ್ ಕ್ವಾರ್ಟರ್ಸಿಗೆ ಕಳಿಸಿದ್ದೇವೆ, 15 00:00:48,360 --> 00:00:50,120 ಆದರೆ ರಾತ್ರಿಯಿಡೀ ಅವರಿಲ್ಲೇ ಇದ್ದರು. 16 00:00:50,200 --> 00:00:52,600 -ಅವರಿಗೆ ಬಿಟ್ಟು ಹೋಗಲು ಮನಸ್ಸಿಲ್ಲ. -ಹೌದು. 17 00:00:53,320 --> 00:00:55,960 -ಗುಡ್ ಮಾರ್ನಿಂಗ್, ಸರ್. -ಗುಡ್ ಮಾರ್ನಿಂಗ್. 18 00:00:59,360 --> 00:01:01,920 ಡೀನ್ ಸತ್ಯಾನ್ಶು ವ್ಯಾಸ್ ಬಂಗಲೆ ನಂ. 8 19 00:01:07,560 --> 00:01:08,440 ಡೀನ್ ವ್ಯಾಸ್. 20 00:01:23,320 --> 00:01:24,400 ಡೀನ್ ವ್ಯಾಸ್? 21 00:01:36,680 --> 00:01:37,840 ಡೀನ್ ವ್ಯಾಸ್? 22 00:02:24,840 --> 00:02:27,400 ನೀಲಗಿರಿ ಕಣಿವೆ - ಅರಣ್ಯ ಪ್ರದೇಶ ಅತಿಕ್ರಮಣ ನಿಷಿದ್ಧ - ಅಪಾಯ 23 00:03:19,160 --> 00:03:20,920 ಹೇ, ಚಂದ್ರ ಪ್ರಕಾಶ್. ಸರ್? 24 00:03:22,480 --> 00:03:25,600 ಏನಾಯಿತು? ಭೂತ ನೋಡಿದಂತೆ ಕಾಣುತ್ತಿದ್ದೀರಿ. 25 00:03:25,680 --> 00:03:26,960 ಡೀನ್ ವ್ಯಾಸ್... 26 00:03:30,160 --> 00:03:31,400 ಇನ್ನಿಲ್ಲ. 27 00:04:11,000 --> 00:04:14,280 ಅಧೂರ 28 00:04:17,760 --> 00:04:21,000 3 ತಿಂಗಳ ನಂತರ ಪ್ರಸ್ತುತ ದಿನ 29 00:04:21,080 --> 00:04:23,800 V ಬಾಯ್ಸ್ ಡಾರ್ಮಿಟರಿ 30 00:05:38,160 --> 00:05:41,000 ಸಾರ್ಥಕ್, ನನ್ನನ್ನು ಹೊರಗೆ ಬಿಡು. ನಾನೇನೂ ಹೇಳುವುದಿಲ್ಲ. 31 00:05:41,080 --> 00:05:44,440 ದಯವಿಟ್ಟು, ಕಬೀರ್, ಹೊರಗೆ ಹೋಗಲು ಬಿಡು. ಉಸಿರಾಡಲು ಆಗುತ್ತಿಲ್ಲ. 32 00:05:44,520 --> 00:05:47,520 ಸಾರ್ಥಕ್, ದಯವಿಟ್ಟು. ನಾ... ನಾನು ಏನೂ ಹೇಳುವುದಿಲ್ಲ. 33 00:05:47,920 --> 00:05:50,120 ಸಾರ್ಥಕ್, ದಯವಿಟ್ಟು. ಯಾರಿಗೂ ಹೇಳುವುದಿಲ್ಲ. 34 00:05:50,200 --> 00:05:53,360 ನನ್ನನ್ನು ಹೊರಗೆ ಬಿಡಿ! ದಯವಿಟ್ಟು, ಸಾರ್ಥಕ್, ನಾನು ದೂರು ನೀಡೆನು. 35 00:05:53,440 --> 00:05:55,080 ಹೊರಗೆ ಬಿಡಿ! ಉಸಿರಾಡಲು ಆಗುತ್ತಿಲ್ಲ! 36 00:05:55,160 --> 00:05:57,480 ಏನಾಯಿತು, ವೇದಾಂತ್? ಪ್ಯಾಂಟ್ ಒದ್ದೆ ಮಾಡಿದೆಯಾ? 37 00:05:59,400 --> 00:06:01,240 ಅಮೆರಿಕಾದಿಂದ ಡೈಪರ್ ತಂದಿಲ್ಲವೇ? 38 00:06:02,720 --> 00:06:04,800 ಸಾರ್ಥಕ್, ದಯವಿಟ್ಟು, ಉಸಿರಾಡಲು ಆಗುತ್ತಿಲ್ಲ. 39 00:06:04,880 --> 00:06:07,040 ಹೊರಗೆ ಬಿಡಿ. ಉಸಿರಾಡಲು ಆಗುತ್ತಿಲ್ಲ. 40 00:06:07,120 --> 00:06:09,800 ಶುಭರಾತ್ರಿ. ಚೆನ್ನಾಗಿ ನಿದ್ದೆ ಮಾಡು. 41 00:06:09,880 --> 00:06:12,560 ಸಾರ್ಥಕ್, ಕಬೀರ್, ದಯವಿಟ್ಟು! 42 00:06:12,640 --> 00:06:14,160 ದಯವಿಟ್ಟು ನನ್ನ ಹೊರಗೆ ಬಿಡಿ. 43 00:06:14,720 --> 00:06:16,160 ಅವನಿಗೇನಾದರೂ ಆದರೆ ಏನು ಮಾಡುವುದು? 44 00:06:16,240 --> 00:06:18,000 ನೀನೆಷ್ಟು ಪುಕ್ಕಲ, ಕಬೀರ್. 45 00:06:18,080 --> 00:06:19,200 ಇಲ್ಲ, ನಾನು ಹಾಗಿಲ್ಲ. 46 00:06:19,280 --> 00:06:21,280 ಅಮಾನತುಗೊಳ್ಳುವುದು ನನಗೆ ಬೇಕಿಲ್ಲ. 47 00:06:21,720 --> 00:06:23,480 ಯಾರಾದರೂ ಕಂಡುಹಿಡಿದರೆ ಏನು ಮಾಡುವುದು? 48 00:06:23,920 --> 00:06:25,120 ಯಾರು ಕಂಡುಹಿಡಿಯುತ್ತಾರೆ? 49 00:06:25,200 --> 00:06:27,600 ಹೊರಗೆ ಬಂದ ನಂತರ ಆತ ಯಾರಿಗಾದರೂ ಹೇಳಬಹುದು. 50 00:06:28,080 --> 00:06:29,160 ಸರಿ. 51 00:06:29,960 --> 00:06:31,440 ಇವನನ್ನೂ ಒಳಗೆ ಹಾಕೋಣ. 52 00:06:32,040 --> 00:06:33,840 ದಯವಿಟ್ಟು! 53 00:06:36,720 --> 00:06:37,880 ನಾನು ಏನೂ ಹೇಳುವುದಿಲ್ಲ. 54 00:06:37,960 --> 00:06:40,680 ಸಾರ್ಥಕ್, ದಯವಿಟ್ಟು, ನಾನು ದೂರುವುದಿಲ್ಲ. 55 00:06:40,760 --> 00:06:43,200 ನನ್ನನ್ನು ಹೊರಗೆ ಬಿಡು. ಉಸಿರಾಡಲು ಆಗುತ್ತಿಲ್ಲ. 56 00:06:48,080 --> 00:06:50,320 ಸಾರ್ಥಕ್! ದಯವಿಟ್ಟು ಹೊರಗೆ ಬಿಡು. 57 00:06:54,720 --> 00:06:56,480 ಇಲ್ಲಿ ಕೇಳು, ವೇದಾಂತ್. 58 00:06:56,560 --> 00:07:00,360 ಡೀನ್ ವ್ಯಾಸ್ ಅವರ ಭೂತ ಪ್ರತಿ ರಾತ್ರಿ ಹಾಸ್ಟೆಲಿನಲ್ಲಿ ಅಡ್ಡಾಡುತ್ತದೆ. 59 00:07:00,880 --> 00:07:04,640 ನೀನೇನೇ ಮಾಡು, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡ. 60 00:07:28,360 --> 00:07:29,400 ದಯವಿಟ್ಟು... 61 00:07:40,080 --> 00:07:41,000 ಹಲೋ? 62 00:07:50,360 --> 00:07:51,800 ಕಬೀರ್, ನೀನಾ? 63 00:07:51,880 --> 00:07:54,480 ಕಬೀರ್, ದಯವಿಟ್ಟು, ನನಗೆ ಉಸಿರಾಡಲು ಆಗುತ್ತಿಲ್ಲ. 64 00:07:54,560 --> 00:07:56,720 ನನಗೆ ಭಯವಾಗುತ್ತಿದೆ. ನನ್ನನ್ನು ಹೊರಗೆ ಬಿಡು. 65 00:08:00,720 --> 00:08:02,560 ನೀನೇಕೆ ಅಲ್ಲಿ ಸುಮ್ಮನೆ ನಿಂತಿರುವೆ? 66 00:08:02,640 --> 00:08:04,960 ನನಗೆ ಸಹಾಯ ಮಾಡು. ನಾನು ಇಲ್ಲಿ ಸಾಯುತ್ತೇನೆ. 67 00:08:05,040 --> 00:08:06,200 ಸಹಾಯ ಮಾಡು. 68 00:09:11,400 --> 00:09:13,240 ನನ್ನ ಮಾತಿನ ಅರ್ಥ ಅದಲ್ಲ. 69 00:09:13,320 --> 00:09:16,840 ಅವನು ಒಳ್ಳೆಯ ವಿದ್ಯಾರ್ಥಿ, ಆದರೆ ಇಲ್ಲಿ ಬೇರೆ ಸಮಸ್ಯೆಗಳಿವೆ. 70 00:09:16,880 --> 00:09:19,120 ಆಸ್ತಿ ಸಮಸ್ಯೆ ಇತ್ಯರ್ಥಕ್ಕೆ ಇಲ್ಲಿಗೆ ಬಂದಿದ್ದೇವೆ. 71 00:09:19,200 --> 00:09:21,480 ತೆರಳುವ ಮುನ್ನ ವೇದಾಂತನನ್ನು ನೋಡಲು ಬಂದೆವು, 72 00:09:22,200 --> 00:09:25,640 ಆದರೆ ನೀವು ದೂರುಗಳ ಪಟ್ಟಿಯನ್ನೇ ತೆರೆದಿದ್ದೀರಿ. 73 00:09:25,720 --> 00:09:26,760 ಮಿ. ಮಲಿಕ್... 74 00:09:31,120 --> 00:09:33,760 ನನ್ನ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದೇನೆ ಅಷ್ಟೇ. 75 00:09:35,040 --> 00:09:36,640 ವೇದಾಂತ್ ಇಲ್ಲಿ ಖುಷಿಯಾಗಿಲ್ಲ. 76 00:09:36,760 --> 00:09:39,160 ಹಾಸ್ಟೆಲಿನಿಂದ ಓಡಿ ಹೋಗಲು ಯತ್ನಿಸುತ್ತಾನೆ, 77 00:09:39,240 --> 00:09:40,720 ಸರಿಯಾಗಿ ತಿನ್ನುವುದಿಲ್ಲ, 78 00:09:40,760 --> 00:09:42,120 ಪ್ರತಿ ದಿನ ಅಳುತ್ತಾನೆ, 79 00:09:42,200 --> 00:09:43,320 ಹಾಸಿಗೆ ಒದ್ದೆ ಮಾಡ್ತಾನೆ. 80 00:09:44,200 --> 00:09:45,400 ನಾನು ಕೂಡ ಇಲ್ಲಿಯೇ ಕಲಿತೆ. 81 00:09:46,160 --> 00:09:48,520 ಬೋರ್ಡಿಂಗ್ ಶಾಲೆಯ ಮೊದಲ ವರ್ಷ ಅಷ್ಟು ಸುಲಭವಲ್ಲ. 82 00:09:49,320 --> 00:09:52,520 ನೀವು ಪ್ರತಿ ಅಳುವ ಮಗುವನ್ನು ಮನೆಗೆ ಕಳಿಸಲು ಆರಂಭಿಸಿದರೆ, 83 00:09:52,600 --> 00:09:54,720 ನಿಮ್ಮ ಶಾಲೆ ಖಾಲಿಯಾಗುತ್ತದೆ. 84 00:09:54,760 --> 00:09:56,240 ಶಾಲೆಯ ಬ್ಯಾಂಕ್ ಖಾತೆ ಕೂಡ. 85 00:09:57,240 --> 00:10:00,880 ನಂತರ ನೀವು ನಿರ್ದೇಶಕ ಮಂಡಳಿಗೆ ವಿವರಿಸಬಹುದು ಹೊಸ ಬ್ಲಾಕ್ ನ ಕೆಲಸ 86 00:10:00,960 --> 00:10:03,120 ಆರಂಭಗೊಳ್ಳುವ ಮುನ್ನವೇ ಏಕೆ ನಿಂತಿತೆಂದು. 87 00:10:03,200 --> 00:10:06,120 ಮಿ. ಮಲಿಕ್, ಈ ರೀತಿ ಹೇಳಲು ಪ್ರಯತ್ನಿಸುತ್ತೇನೆ. 88 00:10:07,160 --> 00:10:11,240 ವೇದಾಂತ್ ಇತರ ಅಳುವ ಮಕ್ಕಳಂತೆ ಅಲ್ಲ. 89 00:10:12,200 --> 00:10:14,160 ಆತ ಅತಿ ಸೂಕ್ಷ್ಮ ಬಾಲಕ. 90 00:10:15,720 --> 00:10:16,880 ಇಂತಹ ಮಕ್ಕಳಿಗಾಗಿ... 91 00:10:17,000 --> 00:10:18,400 ಶಾಲೆಯು ಕೌನ್ಸೆಲರ್ ಹೊಂದಿದೆ. 92 00:10:19,880 --> 00:10:20,760 ಸಾಕು! 93 00:10:26,320 --> 00:10:28,120 ಮರಳಿ ಸ್ವಾಗತ! 94 00:10:28,200 --> 00:10:30,640 ನಿಮ್ಮ 2007 ಬ್ಯಾಚಿನ ಪುನರ್ಮಿಲನ ನಾಳೆ ಇದೆಯಲ್ಲವೇ? 95 00:10:32,440 --> 00:10:35,120 ಹೌದು, ನಾವು ಬಹಳ ಉತ್ಸುಕರಾಗಿದ್ದೇವೆ. 96 00:10:35,600 --> 00:10:38,840 -ಮಿಸೆಸ್ ಮಲಿಕ್, ನನಗೆ ಅನಿಸುತ್ತದೆ, ನಾವು... -ನಿಮಗೆ ಗೊತ್ತಾ, ಡೀನ್? 97 00:10:38,880 --> 00:10:42,240 ತಲೆತಲಾಂತರಗಳಿಂದ ನಮ್ಮ ಮಕ್ಕಳನ್ನು ಇಲ್ಲಿಗೇ ಕಳಿಸುತ್ತಿದ್ದೇವೆ. 98 00:10:42,320 --> 00:10:43,760 ಏಕೆಂದರೆ ಇದು ನಮ್ಮ ಗುರುತು. 99 00:10:44,360 --> 00:10:45,440 ನಮ್ಮ ಪರಂಪರೆ. 100 00:10:46,520 --> 00:10:51,760 ನನ್ನ ಮಗ ಯಾವುದೋ ಅಗ್ಗದ ಬೆಡ್ ಶೀಟಿನಲ್ಲಿ ಮೂತ್ರ ಮಾಡುವ ಬಗ್ಗೆ ನೀವು ಚಿಂತಿಸುತ್ತಿದ್ದರೆ, 101 00:10:52,440 --> 00:10:56,120 ನೀವು ನಿಮ್ಮ ನೌಕರಿ ಮತ್ತು ಶಾಲೆಯ ಖ್ಯಾತಿಯನ್ನು ಕಳೆದುಕೊಳ್ಳಬಹುದು. 102 00:10:56,600 --> 00:10:58,840 ನಾಳೆಯ ದಿನಕ್ಕೆ ಶುಭವಾಗಲಿ. ಧನ್ಯವಾದ. 103 00:10:58,920 --> 00:11:01,080 ಮಿ. ಕೆ. ಸಿ. ಸ್ವಾಮಿ ಡೀನ್ 104 00:11:16,720 --> 00:11:18,880 ನಿಮ್ಮಲ್ಲಿ ಯಾರಾದರೂ ಆತನನ್ನು ಹೊರಗೆ ಬಿಟ್ಟಿರಾ? 105 00:11:18,960 --> 00:11:19,960 ನನಗೆ ಹೇಳಿ. 106 00:11:20,760 --> 00:11:22,520 ನಾನಲ್ಲ. ನಾನಲ್ಲ. 107 00:11:22,600 --> 00:11:24,480 ಮತ್ತೆ ಅವನು ಹೇಗೆ ಹೊರಬಂದ? 108 00:11:43,280 --> 00:11:44,120 ಆರ್ಕೈವ್ ಕೊಠಡಿ 109 00:11:44,200 --> 00:11:45,680 ಸಾರ್ಥಕ್, ದಯವಿಟ್ಟು ಹೊರಗೆ ಬಿಡು. 110 00:11:45,760 --> 00:11:48,800 ಸಾರ್ಥಕ್, ನಾನೇನೂ ಮಾಡಲಿಲ್ಲ. ಸಾರ್ಥಕ್, ದಯವಿಟ್ಟು. 111 00:12:22,040 --> 00:12:24,960 ನೀಲಗಿರಿ ವ್ಯಾಲಿ ಸ್ಕೂಲ್ ವಾರ್ಷಿಕ ಪುಸ್ತಕ 2007 112 00:12:30,200 --> 00:12:32,480 2007 ರ ಬ್ಯಾಚ್ 113 00:12:32,560 --> 00:12:36,120 ಎಡದಿಂದ ಬಲಕ್ಕೆ. ರಜತ್ ಸಿನ್ಹಾ, ಅಧಿರಾಜ್ ಜೈಸಿಂಗ್, ದೇವ್ ಪ್ರತಾಪ್ ಜಮ್ವಾಲ್ 114 00:12:44,240 --> 00:12:46,640 ವೇದಾಂತ್. 115 00:12:53,080 --> 00:12:55,120 ವೇದಾಂತ್, ನೀನು ಇಲ್ಲಿದ್ದೀಯಾ? 116 00:12:55,760 --> 00:12:57,920 ಹೆತ್ತವರಿಗೆ ಗುಡ್ ಬೈ ಹೇಳುವುದಿಲ್ಲವೇ? 117 00:12:58,000 --> 00:13:00,000 ಬಾ, ಹೋಗೋಣ. 118 00:13:13,240 --> 00:13:16,280 ಅಮೆರಿಕನ್ ಕಾಲೇಜ್ ಆಫ್ ಮಾಡರ್ನ್ ಸ್ಟಡೀಸ್ ಬೋಸ್ಟನ್ 119 00:13:16,920 --> 00:13:18,600 "ನನ್ನ ಸ್ವಂತ ಸೋದರನನ್ನು ಕೊಂದೆ. " 120 00:13:22,680 --> 00:13:24,680 ಅರ್ಜುನನ ತಪ್ಪಿತಸ್ಥ ಭಾವನೆ ಸುಡುತ್ತಿತ್ತು. 121 00:13:24,760 --> 00:13:27,480 ಅಷ್ಟಕ್ಕೂ, ಕರ್ಣ ಅವನ ಸೋದರನಾಗಿದ್ದ. 122 00:13:27,920 --> 00:13:29,640 ಅದಕ್ಕೆ ಕೃಷ್ಣ ದೇವರು ಹೇಳಿದರು, 123 00:13:30,600 --> 00:13:33,680 "ಮನಃಸಾಕ್ಷಿಯ ತಪ್ಪಿತಸ್ಥ ಭಾವನೆ ಕಬ್ಬಿಣದಲ್ಲಿರುವ ತುಕ್ಕಿನಂತೆ. " 124 00:13:34,880 --> 00:13:37,920 ಅದು ನಿಮ್ಮಲ್ಲಿದ್ದಷ್ಟೂ ನಿಮ್ಮನ್ನು ನಾಶಗೊಳಿಸುತ್ತದೆ. 125 00:13:38,000 --> 00:13:39,360 ಆದರೆ ಇಲ್ಲಿ ಹೇಳಿರುವುದು, 126 00:13:39,440 --> 00:13:43,600 "ಹಿಡಿದಿಟ್ಟುಕೊಂಡಿರುವ ಎಲ್ಲವನ್ನೂ ನೀವು ಬಿಟ್ಟುಬಿಡಬೇಕು. " 127 00:13:44,280 --> 00:13:46,280 ಅವನೇಕೆ ಅದನ್ನು ಹಾಗೆಯೇ ಬಿಟ್ಟುಬಿಡಲಿಲ್ಲ? 128 00:13:47,360 --> 00:13:48,800 ಏಕೆಂದರೆ ಕೆಲವೊಮ್ಮೆ... 129 00:13:50,160 --> 00:13:52,400 ನಾವು ಮಾಡುವ ತಪ್ಪುಗಳು ಗಂಭೀರವಾಗಿರುತ್ತವೆ. 130 00:13:54,680 --> 00:13:57,000 ನಾವು ಉಂಟು ಮಾಡಿದ ನೋವು, ಶಾಶ್ವತವಾಗಿರುತ್ತದೆ. 131 00:14:06,400 --> 00:14:08,320 ನೀವು ಹೊರಡುವ ಮುನ್ನ ಒಂದು ಜ್ಞಾಪನೆ. 132 00:14:08,400 --> 00:14:10,880 ನಾಳೆಯಿಂದ ಮುಂದಿನ ವಾರದ ತನಕ ನಾನಿಲ್ಲಿರುವುದಿಲ್ಲ. 133 00:14:10,960 --> 00:14:12,760 ಮಿಸ್ ಸ್ಮಿತ್ ಇರುತ್ತಾರೆ. 134 00:14:12,840 --> 00:14:14,640 ನೀವೆಲ್ಲಿ ಹೋಗುತ್ತಿರುವಿರಿ, ಮಿ. ಜೆ? 135 00:14:14,720 --> 00:14:15,600 ಭಾರತಕ್ಕೆ. 136 00:14:15,680 --> 00:14:18,520 -ಮದುವೆಯಾಗಲೇ? -ಏನು? ಇಲ್ಲ. 137 00:14:19,080 --> 00:14:22,160 ನೀವು ಯಾವತ್ತೂ ರಜೆ ಮಾಡಿಲ್ಲ. ಇದು ಏನಾದರೂ ವಿಶೇಷವಾಗಿರಬೇಕು. 138 00:14:22,240 --> 00:14:25,040 ಪ್ರೌಢಶಾಲೆಯ ಪುನರ್ಮಿಲನಕ್ಕಾಗಿ ಭಾರತಕ್ಕೆ ಹೋಗುತ್ತಿದ್ದೇನೆ. 139 00:14:25,120 --> 00:14:27,640 ನಾನು 15 ವರ್ಷಗಳಿಂದ ಮನೆಗೆ ಹೋಗಿಲ್ಲ. 140 00:14:28,200 --> 00:14:29,160 ಆದರೆ ಏಕೆ? 141 00:14:31,360 --> 00:14:34,360 ಶುಕ್ರವಾರ ರಾತ್ರಿ ಕಳೆಯಲು ನಿಮಗೆ ಏನಾದರೂ ಒಳ್ಳೆಯದು ಇರಬಹುದು. 142 00:14:36,480 --> 00:14:37,880 ಚೆನ್ನಾಗಿ ಸಮಯ ಕಳೆಯಿರಿ. 143 00:14:37,960 --> 00:14:38,920 -ಧನ್ಯವಾದ. -ಬೈ. 144 00:14:53,240 --> 00:14:54,080 ಯಾರು? 145 00:14:59,640 --> 00:15:00,680 ಯಾರದು? 146 00:15:26,800 --> 00:15:29,040 ಯೆಸ್, ನಿಮ್ಮಲ್ಲಿ ಮತ್ತೆ ಮಾತನಾಡುವೆ. 147 00:15:30,960 --> 00:15:32,720 ಶುಭ ಸಂಜೆ, ಮಿ. ಜೆ. 148 00:15:38,520 --> 00:15:39,360 ಹಲೋ. 149 00:15:39,440 --> 00:15:41,200 ಮಿಸೆಸ್ ಸಿನ್ಹಾ ಇಲ್ಲಿ. 150 00:15:41,280 --> 00:15:43,320 ನೀಲಗಿರಿ ಸ್ಕೂಲಿನ ಅಡ್ಮಿನ್ ಮುಖ್ಯಸ್ಥೆ. 151 00:15:43,400 --> 00:15:44,760 ಮೇಡಂ, ಹೇಳಿ. 152 00:15:44,840 --> 00:15:47,600 ನಮ್ಮ ಸ್ವಾಗತ ಸಮಾರಂಭ 1:00 ಗಂಟೆಗೆ ಆರಂಭಗೊಳ್ಳುತ್ತದೆ. 153 00:15:48,000 --> 00:15:52,440 ನಿಮ್ಮ ಫ್ಲೈಟ್ ವಿಳಂಬಗೊಂಡಲ್ಲಿ, ದಯವಿಟ್ಟು ನಮಗೆ ತಿಳಿಸಿ. 154 00:15:52,520 --> 00:15:54,960 ಮೇಡಂ. ನೀವು ನಿನಾದ್ ರಮನ್ ಜೊತೆ ಮಾತನಾಡಿದಿರಾ? 155 00:15:56,200 --> 00:15:58,000 ಅವರೂ ಯು. ಎಸ್ ನಲ್ಲಿ ಇದ್ದಾರೆಯೇ? 156 00:15:59,000 --> 00:16:01,560 ನನಗೆ ಖಚಿತವಿಲ್ಲ. 157 00:16:01,640 --> 00:16:07,640 ಕ್ಷಮಿಸಿ, ಭಾರತದ ಹೊರಗಿರುವ ಹಳೆ ವಿದ್ಯಾರ್ಥಿಗಳ ಪಟ್ಟಿ ಮಾತ್ರ ನನ್ನ ಬಳಿ ಇದೆ. 158 00:16:08,160 --> 00:16:09,000 ಧನ್ಯವಾದ. 159 00:16:12,400 --> 00:16:16,640 ಹೇ, ಅಧಿರಾಜ್. ಕೊನೆ ಕ್ಷಣದಲ್ಲಿ ಭೇಟಿ ರದ್ದು ಮಾಡಿದ್ದಕ್ಕೆ ಕ್ಷಮೆಯಿರಲಿ. 160 00:16:16,720 --> 00:16:19,520 ನಿನ್ನ ಫ್ಲೈಟಿಗಿಂತ ಮುನ್ನ ನಿನಗೆ ನೆನಪಿಸಲು ಬಯಸುವೆ 161 00:16:19,600 --> 00:16:23,920 ನಿನ್ನ ಆತಂಕ ಸಮಸ್ಯೆಯ ಔಷಧಿಯ ಹೊಸ ಪ್ರಮಾಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾದೀತು. 162 00:16:24,000 --> 00:16:27,880 ನಿನಗೆ ಯಾವುದೇ ಭ್ರಮೆ ಅಥವಾ ವಾಕರಿಕೆಯ ಅನುಭವವಾದರೆ, 163 00:16:27,960 --> 00:16:30,080 ತಕ್ಷಣ ನನಗೆ ಕರೆ ಮಾಡು, ದಯವಿಟ್ಟು. 164 00:16:30,160 --> 00:16:32,680 ನೆನಪಿಡು, ಒಳ್ಳೆಯ ನೆನಪುಗಳ ಮೇಲೆ ಮಾತ್ರ ಗಮನವಿರಲಿ, 165 00:16:32,760 --> 00:16:33,720 ನಿನ್ನ ಸ್ನೇಹಿತರು, 166 00:16:33,800 --> 00:16:37,040 ಶಾಲೆಯೇ ನಿನ್ನ ಮನೆಯೆಂದು ಹೇಳುವವನು ನೀನು. 167 00:16:37,120 --> 00:16:38,640 ಜಾಗ್ರತೆ ವಹಿಸು. 168 00:16:41,600 --> 00:16:44,520 ಶಾಲೆಯ ಕೊನೆಯ ದಿನ 169 00:16:48,920 --> 00:16:49,920 ಆದಿ! 170 00:16:55,440 --> 00:16:58,080 ಹಾಯ್. ಕ್ಷಮಿಸು. ಕ್ಷಮಿಸು. 171 00:16:58,160 --> 00:17:01,000 ನನಗೆ ಹೇಳದೆ ಅಮೆರಿಕಾದ ಕಾಲೇಜಿಗೆ ನೀನು ಅರ್ಜಿ ಸಲ್ಲಿಸಿದೆ. 172 00:17:01,080 --> 00:17:03,280 ಈಗ ಮತ್ತೆ ನನ್ನನ್ನು ಕಾಯಿಸುತ್ತಿದ್ದೀಯಾ? 173 00:17:04,120 --> 00:17:06,560 ಅಧಿರಾಜ್, ನೀನು ಕೊಟ್ಟ ಮಾತನ್ನು ಮರೆತೆಯಾ? 174 00:17:06,640 --> 00:17:07,520 ಖಂಡಿತ ಇಲ್ಲ. 175 00:17:08,280 --> 00:17:11,520 ಈ ವಾರದ ಪ್ರತಿ ಕ್ಷಣ ನಿನ್ನೊಂದಿಗೆ ಕಳೆಯಬೇಕು ಅಂತಿದ್ದೆ, ನಿಜವಾಗಲೂ. 176 00:17:11,560 --> 00:17:14,000 ಈಜು ಅಭ್ಯಾಸ ತಡವಾಯಿತು, 177 00:17:14,080 --> 00:17:17,440 ನಂತರ ಬ್ಯಾಡ್ಜ್ ಪಡೆಯಬೇಕಿತ್ತು, ನಂತರ ಡೀನ್ ಇಲ್ಲಿಗೆ ಕಳಿಸಿದರು. 178 00:17:17,960 --> 00:17:19,640 ಸುಮ್ಮನೆ ಜಂಭ ಕೊಚ್ಚಿಕೊಳ್ಳಬೇಡ. 179 00:17:19,720 --> 00:17:21,680 ನನ್ನ ಬ್ಯಾಡ್ಜ್ ಕೂಡ ವಿಶೇಷವಾಗಿದೆ. 180 00:17:24,080 --> 00:17:25,920 ಬ್ಯಾಡ್ಜ್ ಮಾತ್ರ ಅಲ್ಲ, ಮಾಲ್ವಿಕ. 181 00:17:26,320 --> 00:17:28,320 ನಿನ್ನ ಪ್ರತಿ ಅಂಶವೂ ವಿಶೇಷ. 182 00:17:29,280 --> 00:17:30,800 ನೀನು ನಿಜವಾಗಿಯೂ ಸ್ಟಾರ್. 183 00:17:33,080 --> 00:17:35,320 ಹುಡುಗಿ, ನಿನ್ನ ಅಪ್ಪ ಇಲ್ಲಿರಬಹುದು. 184 00:17:35,440 --> 00:17:37,320 ಅವರು ರಾಜೀನಾಮೆ ಪತ್ರ ನೀಡಿದ್ದಾರೆ. 185 00:17:37,880 --> 00:17:39,240 ಇದು ಅವರಿಗೂ ಕೊನೆಯ ವಾರ. 186 00:17:39,720 --> 00:17:43,680 ಹುಡುಗರ ಶಾಲೆಯಲ್ಲಿ ಕಲಿಯಬೇಕಾಯಿತು ಅಂತ ಅವರನ್ನು ಶಿಕ್ಷಿಸಬೇಕು ಅಂತಿದ್ದೀಯ ಗೊತ್ತು. 187 00:17:43,760 --> 00:17:45,680 ಆದರೆ ನನ್ನನ್ನು ಶಿಕ್ಷಿಸಬೇಡ. 188 00:17:45,760 --> 00:17:47,000 ಆದಿ, ಹೋಗಬೇಡ. 189 00:17:47,080 --> 00:17:49,240 ಅದು ಸ್ಕಾಲರ್ಶಿಪ್ ಮಾತ್ರ. ದೊಡ್ಡ ವಿಷಯ ಏನಲ್ಲ. 190 00:17:49,320 --> 00:17:50,240 ಮಾಲ್ವಿಕ. 191 00:17:52,920 --> 00:17:54,720 ಸರಿ. ನನಗೆ ಮೋಸ ಮಾಡಬೇಡ. 192 00:17:55,520 --> 00:17:56,560 ನನಗೆ ಸಾಯಬೇಕಾ? 193 00:18:10,320 --> 00:18:11,720 ನಿಲ್ಲಿಸಿ. 194 00:18:11,800 --> 00:18:12,680 ಇದೇನು ತಮಾಷೆಯಲ್ಲ. 195 00:18:12,760 --> 00:18:14,080 ಇದು ತಮಾಷೆನೇ. 196 00:18:14,720 --> 00:18:16,760 ತಮಾಷೆಯಾಗಿರುವುದರಿಂದ ನಾವು ನಗುತ್ತಿದ್ದೇವೆ. 197 00:18:18,960 --> 00:18:21,560 ಶಾಲೆಯ ಕೊನೆಯ ವಾರ. ಪಾರ್ಥನನ್ನು ಈಗಲಾದರೂ ಸುಮ್ಮನೆ ಬಿಡು. 198 00:18:21,680 --> 00:18:24,320 ಇದು ಕೊನೆಯ ವಾರ, ಅದಕ್ಕೇ ಅವನನ್ನು ಬಿಡ್ತಾ ಇಲ್ಲ. 199 00:18:26,800 --> 00:18:30,000 ಹೇ, ಆದಿ, ಕ್ಲಾಸ್ ಫೋಟೋಗೆ ನೀನು ತಡವಾದರೆ, 200 00:18:30,080 --> 00:18:32,520 ಕೋಚ್ ಗ್ಯಾಸ್ ತುಂಬಾ ಬೇಜಾರು ಮಾಡ್ಕೋತಾರೆ. 201 00:18:32,560 --> 00:18:35,280 -ನನ್ನ ಹುಡುಗ! -ನನ್ನ ಹುಡುಗ! 202 00:18:36,320 --> 00:18:38,240 ಚಿಂತಿಸಬೇಡ. ಶುಭವಾಗಲಿ, ದೇವ್. 203 00:18:38,320 --> 00:18:40,320 -ದೇವಿ ಪ್ರಸಾದ್, ಇಲ್ಲಿ ಬಾ. -ಏನು ಹೇಳಿ. 204 00:18:40,440 --> 00:18:41,680 ದೇವ್ ಪದವಿ ಪಡೆದಾಯಿತು. 205 00:18:41,760 --> 00:18:44,800 ಈಗ ಸಣ್ಣ ಕೆಲಸಗಳಿಗೆ ದೊಡ್ಡ ಟಿಪ್ಸ್ ಯಾರು ಕೊಡುತ್ತಾರೆ? 206 00:18:44,880 --> 00:18:46,640 ಶಿಕ್ಷಕರ ಮುಂದೆ ಹೇಳಬೇಡಿ. 207 00:18:46,720 --> 00:18:49,400 ನೀವು ಹೇಗಿದ್ದರೂ ಹೋಗುತ್ತೀರಿ, ನನ್ನ ಕೆಲಸ ಹೋಗುತ್ತೆ. 208 00:18:49,480 --> 00:18:51,240 ಕೇಳು, ನನಗೊಂದು ಐಡಿಯಾ ಇದೆ. 209 00:18:51,320 --> 00:18:53,880 ದೇವ್ ಜೊತೆ ಆತನ ಖಾಸಗಿ ಸೇವಕನಾಗಿ ಕಾಲೇಜಿಗೆ ಹೋಗು. 210 00:18:53,960 --> 00:18:55,560 ತುಂಬಾ ಬೇಜಾರು ಮಾಡುತ್ತೀರಿ. 211 00:18:55,640 --> 00:18:57,880 -ಹೇ, ಎಲ್ಲಿಗೆ ಹೋಗುತ್ತಿರುವೆ? -ಇಲ್ಲಿ ಕೇಳು... 212 00:18:58,720 --> 00:19:01,320 ಸರಿ, ಬನ್ನಿ, ಹುಡುಗರೇ. ಮಳೆ ಬರುವ ಮುನ್ನ ಸಿದ್ಧರಾಗಿ. 213 00:19:01,400 --> 00:19:03,920 -ಹೇ, ದೇವ್. -ಹೇಗಿದ್ದೀಯ? ಹೇಗಿದ್ದೀಯ? 214 00:19:04,880 --> 00:19:06,800 ಸರಿ. ಕೌನ್ಸಿಲ್ ಸದಸ್ಯರು, ಮೊದಲ ಸಾಲು. 215 00:19:06,880 --> 00:19:08,880 ದಂಡಪಿಂಡಗಳು, ಹಿಂದಿನ ಸಾಲು. 216 00:19:08,960 --> 00:19:10,040 ಹೇಗಿದ್ದೀಯ? 217 00:19:12,680 --> 00:19:13,920 ನನ್ನ ಹುಡುಗ. 218 00:19:20,040 --> 00:19:21,240 ನಿನಾದ್ ಎಲ್ಲಿ? 219 00:19:21,320 --> 00:19:22,440 ನನಗೆ ಗೊತ್ತಿಲ್ಲ. 220 00:19:24,440 --> 00:19:27,680 ನೀನು ಸ್ವೋರ್ಡ್ ಆಫ್ ಆನರ್, ಅವಳು ಶಿಕ್ಷಕರ ಮಗಳು. 221 00:19:27,760 --> 00:19:31,240 ದೇವ್ ಪ್ರತಾಪ್ ಜಮ್ವಾಲ್ ಆಗಿಯೂ ನಿನಗೆ ನಮ್ಮ ಬಗ್ಗೆ ಉರಿ? 222 00:19:32,560 --> 00:19:34,680 -ರೆಡಿ? -ಸರ್! 223 00:19:34,760 --> 00:19:36,960 -ನಿನಾದ್ ಬಂದಿಲ್ಲ. -ಯಾರಿಗೂ ತೊಂದರೆಯಿಲ್ಲ. 224 00:19:37,040 --> 00:19:39,080 ಅವನು ಕ್ಲಾಸ್ ಫೋಟೋದಲ್ಲೂ ಇರಕೂಡದು. 225 00:19:39,200 --> 00:19:40,960 -ಬೇಜವಾಬ್ದಾರ. -ಸರಿಯಾಗಿ ಹೇಳಿದಿರಿ. 226 00:19:45,040 --> 00:19:47,880 ನಿನಾದ್, ಬೇಗ ಬಾ, ನಾವು ನಿನಗಾಗಿ ಕಾಯುತ್ತಿದ್ದೇವೆ. 227 00:19:53,240 --> 00:19:56,320 ನಿನಾದ್, ಬಾ, ಬೇಗ. ಎಲ್ಲರೂ ನಿನಗಾಗಿ ಕಾಯುತ್ತಿದ್ದಾರೆ. 228 00:19:56,440 --> 00:19:57,560 ನಿನಾದ್, ಬೇಗ ಬಾ. 229 00:20:02,800 --> 00:20:05,760 -ಬೇಗ! -ಬಾರೋ, ಇಡೀ ದಿನ ಕಾಯಕ್ಕಾಗಲ್ಲ. 230 00:20:07,320 --> 00:20:08,280 ಏನಿದು? 231 00:20:08,320 --> 00:20:09,640 ಹೇ, ಇಲ್ಲಿ ಬಾ. 232 00:20:09,720 --> 00:20:11,960 -ಅವನು ಯಾವಾಗಲೂ ತಡ. -ಹೋಗು. 233 00:20:13,240 --> 00:20:14,080 ಹೋಗು. 234 00:20:14,200 --> 00:20:15,080 ಹೇ! 235 00:20:17,320 --> 00:20:19,280 ನಿನ್ಸ್, ನೀನು ನನ್ನ ಜಾಗದಲ್ಲಿರುವೆ. 236 00:20:19,320 --> 00:20:20,640 -ಕ್ಷಮಿಸು. -ಪರವಾಗಿಲ್ಲ, ಬಾ. 237 00:20:23,040 --> 00:20:24,640 ಮೇಕಪ್ ಮಾಡ್ಕೋತಿದ್ಯಾ? 238 00:20:26,720 --> 00:20:29,920 ಇದನ್ನು ನೋಡಿ! ನಿನಾದ್ ನ ಗಂಡ! 239 00:20:30,000 --> 00:20:31,000 ರಹಸ್ಯಮಯಿ ಹುಡುಗ. 240 00:20:31,080 --> 00:20:32,520 ಸುಮ್ಮನೆ ಏನೇನೋ ಹೇಳಬೇಡ. 241 00:20:33,000 --> 00:20:34,040 ಇರಲಿ ಬಿಡೋ. 242 00:20:34,560 --> 00:20:35,640 -ದೇವ್. -ನಿರ್ಲಕ್ಷಿಸು. 243 00:20:35,720 --> 00:20:37,800 -ಇವನಿಗೇಕೆ ಸಿಟ್ಟು? -ನನ್ನನ್ನು ಎಳೆಯಬೇಡ ಇದಕ್ಕೆ. 244 00:20:37,920 --> 00:20:41,400 ಅಧಿರಾಜ್, ನಿನಾದ್ ಮತ್ತು ಮಾಲ್ವಿಕ ನಡುವೆ ಏನೇನೋ ಆಗಿದೆ ಈಗಾಗಲೇ. 245 00:20:43,680 --> 00:20:47,440 ಆದು, ನಾನಿಲ್ಲದೆ ಫೋಟೋ ತೆಗೆಯಲು ನೀನು ಬಿಡುವುದಿಲ್ಲ ಅಂತ ಗೊತ್ತಿತ್ತು. 246 00:20:47,520 --> 00:20:48,320 ಯಾವತ್ತೂ ಇಲ್ಲ. 247 00:20:50,200 --> 00:20:51,560 ಸರಿ, ರೆಡಿ? 248 00:20:51,640 --> 00:20:52,680 ಹೂಂ, ಸರ್. 249 00:20:52,760 --> 00:20:53,880 ಮೂರು... 250 00:20:57,400 --> 00:20:58,240 ಎರಡು... 251 00:21:02,920 --> 00:21:04,320 ಒಂದು... 252 00:21:35,920 --> 00:21:37,200 ಪ್ರತಿ ದಿನ! 253 00:21:37,800 --> 00:21:39,480 ಎಲ್ಲರನ್ನೂ ಅಮಾನತುಗೊಳಿಸಬೇಕು-- 254 00:21:55,800 --> 00:21:59,600 ಡೀನ್ ಸತ್ಯಾನ್ಶು ವ್ಯಾಸ್ ಭೂತದ ಬಗ್ಗೆ ಎಚ್ಚರಿಕೆ 255 00:22:28,640 --> 00:22:30,120 ಅಪಾಯ 256 00:23:12,480 --> 00:23:17,240 ಹತ್ತು ನಾಯಿಮರಿಗಳನ್ನು ಸಣ್ಣ ಚೂರುಗಳಾಗಿ ಕತ್ತರಿಸಿದ್ದ ಎಂದು ಕುಮಾರನ್ ಹೇಳಿದರು. 257 00:23:17,320 --> 00:23:19,200 ಅವನೊಬ್ಬ ಸೈಕೋ. 258 00:23:19,800 --> 00:23:21,280 ಕುಮಾರನ್ ಸುಳ್ಳುಗಾರ. 259 00:23:22,040 --> 00:23:23,240 ನೀನು ನೋಡಿದೆಯಾ? 260 00:23:23,920 --> 00:23:25,120 ವೇದಾಂತ್ ಒಬ್ಬ ಪುಕ್ಕಲ. 261 00:23:25,200 --> 00:23:26,960 ಅವನು ಕೊಂದಿರಲು ಸಾಧ್ಯವಿಲ್ಲ. 262 00:23:27,040 --> 00:23:29,480 ಅವನಲ್ಲ, ಡೀನ್ ವ್ಯಾಸ್. 263 00:23:30,320 --> 00:23:31,440 ಅವನನ್ನು ನೋಡು. 264 00:23:31,880 --> 00:23:35,880 ಡೀನ್ ವ್ಯಾಸರ ಭೂತ ಅವನೊಳಗೆ ಸೇರಿ ಆ ನಾಯಿಮರಿಗಳನ್ನು ಕೊಂದಿದೆ. 265 00:23:36,360 --> 00:23:37,760 ಇನ್ನು ಯಾರನ್ನು ಕೊಲ್ಲುತ್ತಾನೋ? 266 00:23:40,040 --> 00:23:40,880 ಶುಭೋದಯ. 267 00:23:42,040 --> 00:23:43,600 ಶುಭೋದಯ, ಮಿಸ್ ಸುಪ್ರಿಯಾ. 268 00:23:44,200 --> 00:23:47,000 ಅತ್ಯುತ್ತಮ ಶಾಲೆಯಲ್ಲಿ ನೀವು ಕಲಿಯುವುದು ಇದೇನಾ? 269 00:23:49,240 --> 00:23:50,080 ತರಗತಿಗೆ ಹೋಗಿ. 270 00:23:58,800 --> 00:24:00,840 ತಲೆಗೆ ಏಟಾಗಿದೆಯಾ? ತೋರಿಸು. 271 00:24:01,520 --> 00:24:03,080 ತಲೆಗೆ ಪೆಟ್ಟಾಗಿಲ್ಲ. 272 00:24:03,160 --> 00:24:05,160 ನಾನು ಎರಡು ನಿಮಿಷಗಳಲ್ಲಿ ಬರುತ್ತೇನೆ. ಸರಿನಾ? 273 00:24:28,320 --> 00:24:31,920 ಮಿ. ಮನೋಹರ್, ನೀವು ಆ ಮನೆಯ ವಾರ್ಡನ್. 274 00:24:32,720 --> 00:24:36,640 ವೇದಾಂತ್ ಹಾಸ್ಟೆಲಿನಿಂದ ಮಧ್ಯರಾತ್ರಿ ಓಡಿಹೋದಾಗ ನಿಮಗೆ ಹೇಗೆ ಗೊತ್ತಾಗಲಿಲ್ಲ? 275 00:24:36,720 --> 00:24:37,880 ಡೀನ್, ದಯವಿಟ್ಟು. 276 00:24:38,320 --> 00:24:40,400 ಅವನಿಂದ ಬಹಳ ರಾತ್ರಿ ನಿದ್ದೆಗೆಟ್ಟಿದ್ದೇನೆ... 277 00:24:40,480 --> 00:24:44,080 ಈ ಶಾಲೆಯ ಪ್ರತಿ ಮಗುವಿನ ಸುರಕ್ಷತೆ ನಮ್ಮ ಜವಾಬ್ದಾರಿಯಾಗಿದೆ. 278 00:24:46,600 --> 00:24:49,520 ಮಿಸೆಸ್ ಸಿನ್ಹಾ, ನಿರ್ಮಾಣ ಸ್ಥಳದ ಸುತ್ತ ಬೇಲಿ ಹಾಕಿ. 279 00:24:49,600 --> 00:24:52,720 -ಸರಿ, ಸರ್. -ಇಲ್ಲಿ ನಡೆದ ಈ ವಿಪತ್ತಿನ ಬಗ್ಗೆ 280 00:24:52,800 --> 00:24:54,400 ನಿಮಗೇನನಿಸುತ್ತದೆ? 281 00:24:55,680 --> 00:24:59,720 ಎಲ್ಲರೂ ಆ ಹತ್ತು ವರ್ಷದ ವಿದ್ಯಾರ್ಥಿ ಬಗ್ಗೆ ಮಾತಾಡುತ್ತಿದ್ದಾರೆ, 282 00:24:59,800 --> 00:25:01,680 ಅಸಹಾಯಕ ನಾಯಿಮರಿಗಳನ್ನು ಕೊಂದವನ ಬಗ್ಗೆ. 283 00:25:01,760 --> 00:25:04,520 ಸುದ್ದಿ ಹಬ್ಬಿಸುವ ಮೊದಲು ಯಾರಾದರೂ ಅವನನ್ನು ಕೇಳಿದಿರಾ? 284 00:25:04,600 --> 00:25:07,120 ಅವನು ಅವುಗಳನ್ನು ಕೊಂದ ಎಂದು ನಿಮಗೆ ಹೇಗೆ ಗೊತ್ತು? 285 00:25:07,680 --> 00:25:11,440 ನನ್ನಲ್ಲಿ ಉತ್ತರಗಳಿಲ್ಲದ ಹಲವು ಪ್ರಶ್ನೆಗಳಿವೆ. 286 00:25:12,400 --> 00:25:15,160 ನೀವು ಹೇಳಿ, ಹುಡುಗ ಹಾಸ್ಟೆಲಿನಿಂದ ಏಕೆ ಹೊರಗೋಡಿದ? 287 00:25:15,240 --> 00:25:18,560 ಅಷ್ಟು ತಡರಾತ್ರಿ ಡೀನ್ ವ್ಯಾಸ್ ಬಂಗಲೆಯಲ್ಲಿ ಅವನೇನು ಮಾಡುತ್ತಿದ್ದ? 288 00:25:18,640 --> 00:25:22,040 ಅವನು ಹಾಸ್ಟಲ್ನಲ್ಲಿ ಖುಷಿಯಾಗಿಲ್ಲ, ಅದಕ್ಕೆ ಅಲ್ಲಿಂದ ಹೊರಗೆ ಓಡಿದ. 289 00:25:22,120 --> 00:25:24,600 ಆ ರಾಡ್ ಆವನ ಕೈಯಲ್ಲಿ ಹೇಗೆ ಬಂತು? 290 00:25:24,680 --> 00:25:29,640 ಅವನು ಒಬ್ಬ ಮಗು, ಕುತೂಹಲವಿರುತ್ತೆ. ಸೈಟಲ್ಲಿ ಸಿಕ್ಕಿರಬೇಕು, ಎತ್ತಿಕೊಂಡಿರಬೇಕು. 291 00:25:29,720 --> 00:25:33,280 ಅವನು ಅವುಗಳನ್ನು ಕೊಲ್ಲದೇ ಇದ್ದರೆ, ಆ ನಾಯಿಮರಿಗಳು ಹೇಗೆ ಸತ್ತವು? 292 00:25:33,360 --> 00:25:37,680 -ಅವುಗಳ ಮೇಲೆ ಏನಾದರೂ ಬಿದ್ದಿರಬಹುದು. -ವೇದಾಂತ್ ಮೇಲೆ ಬೀಳದೇ ಇದ್ದುದು ಪುಣ್ಯ. 293 00:25:37,760 --> 00:25:38,800 ಅದೇ. 294 00:25:38,880 --> 00:25:40,840 ಹಾಗಾಗಿದ್ದರೆ ಜೈಲಲ್ಲಿರುತ್ತಿದ್ದೆವು. 295 00:25:43,320 --> 00:25:48,120 ತಮ್ಮ 15 ವರ್ಷದ ಪುನರ್ಮಿಲನಕ್ಕೆ 30 ಹಳೆ ವಿದ್ಯಾರ್ಥಿಗಳು ನಾಳೆ ಬರುತ್ತಿದ್ಧಾರೆ. 296 00:25:48,200 --> 00:25:50,000 ಅವರಲ್ಲಿ ಹೆಚ್ಚಿನವರು ವಿವಿಐಪಿಗಳು. 297 00:25:50,480 --> 00:25:52,920 -ನೋಡಿ, ನನಗೆ ಬೇಕಾಗಿರುವುದು... -ಚಂದ್ರ ಪ್ರಕಾಶ್, 298 00:25:53,720 --> 00:25:55,960 ನೀವು ಇಲ್ಲಿ ಐದು ವರ್ಷ ಕಲಿಸಿದ್ದೀರಿ ಅಲ್ಲವೇ? 299 00:25:56,040 --> 00:25:57,000 ಹೌದು. 300 00:25:57,080 --> 00:26:00,160 ಹಾಗಿದ್ದರೆ ನಾಳಿನ ಸಮಾರಂಭದ ಮಹತ್ವ ನಿಮಗೆ ಗೊತ್ತಿರಬೇಕು. 301 00:26:00,240 --> 00:26:01,720 -ಹೌದು. -ನನ್ನದೊಂದು ಮನವಿ. 302 00:26:02,200 --> 00:26:03,680 ಈ ಅಸಂಬದ್ಧ ಮಾತುಗಳು ಸಾಕು! 303 00:26:04,840 --> 00:26:06,240 ಎಲ್ಲರೂ ಕೆಲಸಕ್ಕೆ ಹಿಂತಿರುಗೋಣ. 304 00:26:06,320 --> 00:26:07,720 ಧನ್ಯವಾದ. ಅಷ್ಟೇ. 305 00:26:11,600 --> 00:26:14,440 ಮಿಸ್ ಘೋಷ್, ನಿಮ್ಮ ಬಳಿ ಸ್ವಲ್ಪ ಮಾತನಾಡಬಹುದೇ? 306 00:26:14,520 --> 00:26:18,200 ಕುಮಾರನ್, ನಿರ್ಮಾಣದ ಸೈಟಿಗೆ ಹೋಗಿ ಸೆಕ್ಯುರಿಟಿಯನ್ನು ಕರೆ. 307 00:26:18,640 --> 00:26:21,000 ಮನೋಹರ್, ನೀನು ಕೂಡ ನನ್ನ ಜೊತೆ ಬಾ. 308 00:26:21,080 --> 00:26:25,720 ವೇದಾಂತ್ ಹೆತ್ತವರ ಮನವೊಲಿಸಲು ನನ್ನಿಂದಾದಷ್ಟು ಪ್ರಯತ್ನಿಸಿದೆ, ಆದರೆ... 309 00:26:27,440 --> 00:26:32,600 ಹೀಗೆ ಬಲವಂತ ಮಾಡಿ ಮಗುವನ್ನು ಬೋರ್ಡಿಂಗ್ ಸ್ಕೂಲಿಗೆ ಕಳಿಸುವುದು? 310 00:26:33,680 --> 00:26:35,160 ಇದು ಸರಿಯಲ್ಲ. 311 00:26:35,680 --> 00:26:38,000 ಏನೇ ಆಗಲಿ, ಶಾಲೆಯ ಕೌನ್ಸೆಲರ್ ಆಗಿ, 312 00:26:38,080 --> 00:26:41,360 ನೀವು ಅವನಿಗೆ ಬುದ್ಧಿ ಹೇಳಬೇಕು, ಅವನಿಲ್ಲಿರುವವರೆಗೂ, 313 00:26:41,440 --> 00:26:43,280 ಚೆನ್ನಾಗಿ ವರ್ತಿಸುವುದನ್ನು ಕಲಿಯಬೇಕು. 314 00:26:43,360 --> 00:26:45,920 ಅವನು ಮೌನವಾಗಿರುವ ಮಗು, ಡೈನಿಂಗ್ ಹಾಲಿನಲ್ಲಿ ನೋಡಿದ್ದೀನಿ. 315 00:26:46,000 --> 00:26:48,360 ಅವನಷ್ಟಕ್ಕೇ, ಒಬ್ಬನೇ ಕುಳಿತುಕೊಳ್ಳುತ್ತಾನೆ. 316 00:26:49,080 --> 00:26:52,480 ಮೊದಲು ಅವನ ಜೊತೆ ಮಾತಾಡಿ ಅವನನ್ನು ಸ್ವಲ್ಪ ಅರ್ಥಮಾಡಿಕೊಳ್ಳುತ್ತೇನೆ. 317 00:26:52,560 --> 00:26:55,480 ಹೌದು, ಖಂಡಿತ. ನಿಮ್ಮ ಕೆಲಸ ಹೇಗೆ ಮಾಡಬೇಕೆಂದು ನಾನು ಹೇಳಬೇಕಾಗಿಲ್ಲ. 318 00:26:55,560 --> 00:27:00,840 ಆದರೆ ಎಲ್ಲಾ ಪುನರ್ಮಿಲನದ ಚುಟವಟಿಕೆಗಳಿಂದ ವೇದಾಂತನನ್ನು ದೂರವಿರಿಸಲು ನಿರ್ಧರಿಸಿದ್ದೇನೆ. 319 00:27:00,920 --> 00:27:04,280 ಅವನು ತರಗತಿಯಿಂದ ನೇರವಾಗಿ ನಿಮ್ಮ ಕಚೇರಿಗೆ, ನಂತರ ಡಾರ್ಮಿಟರಿಗೆ ಹೋಗಬೇಕು. 320 00:27:04,600 --> 00:27:06,560 ಅದು ಪರಿಸ್ಥಿತಿಯನ್ನು ಬಿಗಡಾಯಿಸಬಹುದು. 321 00:27:06,640 --> 00:27:10,800 ಹೌದು, ಸುಪ್ರಿಯಾ, ಆದರೆ ನಾನು ಸಮಸ್ಯೆ ಮೈಮೇಲೆ ಎಳೆದುಕೊಳ್ಳಲು ಬಯಸಲ್ಲ, 322 00:27:10,880 --> 00:27:14,400 ಅದು ಕೂಡ ವಿವಿಐಪಿಗಳಿರುವಾಗ. ಅರ್ಥ ಆಯಿತಾ? 323 00:27:15,080 --> 00:27:17,760 -ಸರಿ. ಧನ್ಯವಾದಗಳು. -ಧನ್ಯವಾದಗಳು. 324 00:27:29,000 --> 00:27:30,760 ನಾವು ನಮ್ಮ ತಪ್ಪುಗಳನ್ನು ಮರೆಯಬಹುದು, 325 00:27:31,480 --> 00:27:34,680 ಆದರೆ ನಮ್ಮ ತಪ್ಪುಗಳು ನಮ್ಮನ್ನು ಯಾವತ್ತೂ ಮರೆಯುವುದಿಲ್ಲ. 326 00:27:36,200 --> 00:27:37,840 ಡೀನ್ ವ್ಯಾಸ್ ಸತ್ತಂದಿನಿಂದ, 327 00:27:37,920 --> 00:27:41,600 ಶಾಲೆಯಲ್ಲಿ ಹೋಮ ಮಾಡಿಸಬೇಕು ಎಂದು ನಾನು ಒತ್ತಾಯಿಸುತ್ತಿದ್ದೇನೆ. 328 00:27:41,680 --> 00:27:44,400 -ಅವರ ತಿರುಚಿದ ಮೃತದೇಹ... -ಮಿ. ಚಂದ್ರ ಪ್ರಕಾಶ್, 329 00:27:44,480 --> 00:27:49,280 ಅವರಿಗೆ ಹೃದಯಾಘಾತವಾಗಿತ್ತು, ಹಾಗಾದಾಗ ಮೃತದೇಹ ತಿರುಚುತ್ತದೆ ಎಂದು ವೈದ್ಯರೂ ಹೇಳಿದ್ದರು. 330 00:27:49,360 --> 00:27:50,600 ನೀವು ನೋಡಿದ್ದಿರಾ? 331 00:27:51,680 --> 00:27:52,760 ಇಲ್ಲ ತಾನೇ? 332 00:27:54,160 --> 00:27:55,560 ನಾನು ನೋಡಿದ್ದೆ. 333 00:27:57,680 --> 00:28:01,480 ಯಾರಾದರೂ ಸಾಯುತ್ತಿರುವುದನ್ನು ಯಾವತ್ತಾದರೂ 334 00:28:01,560 --> 00:28:03,800 ಕಣ್ಣೆದುರು ನೋಡಿದ್ದೀರಾ? 335 00:28:22,000 --> 00:28:23,240 ಅನಕ್ಷರಸ್ಥರು. 336 00:28:35,720 --> 00:28:38,120 ಧ್ರುವ್, ನಿನ್ನ ಲೆಗ್ ಪೀಸ್ ನನಗೆ ಕೊಡು. 337 00:28:39,280 --> 00:28:40,840 ನನ್ನ ಜಿಲೇಬಿ ನಿನಗೆ ಕೊಡುತ್ತೇನೆ. 338 00:28:40,920 --> 00:28:41,760 ಸಾಧ್ಯವಿಲ್ಲ. 339 00:28:51,680 --> 00:28:53,080 ಸಾರ್ಥಕ್. ಸೈಕೋ. 340 00:28:56,320 --> 00:28:58,040 ಅವನು ನಾಯಿಮರಿ ಕೊಂದವ! 341 00:29:00,560 --> 00:29:02,160 ನಾಯಿಮರಿ ಕೊಂದವ ಬರುತ್ತಿದ್ದಾನೆ. 342 00:29:21,040 --> 00:29:23,000 ಕೇಳ್ರೋ, ನನಗಿನ್ನೂ ಅರ್ಥವಾಗುತ್ತಿಲ್ಲ. 343 00:29:23,400 --> 00:29:26,120 ಆ ರಾತ್ರಿ ಲಾಕರಿನಿಂದ ಅವನು ಹೇಗೆ ಹೊರಬಂದ? 344 00:29:26,560 --> 00:29:28,920 ನಾನಲ್ಲ. ನಾನೀಗಾಗಲೇ ನಿನಗೆ ಹೇಳಿದ್ದೇನೆ. 345 00:29:29,920 --> 00:29:31,960 ವಾರ್ಡನ್ ಮನೋಹರ್ ಇರಬೇಕು? 346 00:29:33,560 --> 00:29:37,200 ಹಾಗಾದರೆ ಅವನು ಇನ್ನೂ ನಮ್ಮ ಬಗ್ಗೆ ವಾರ್ಡನಿಗೆ ಹೇಳಿಲ್ಲ. 347 00:29:37,680 --> 00:29:39,800 ಹಾಗಾಗಿದ್ದರೆ ಅಮಾನತುಗೊಳ್ಳುತ್ತಿದ್ದೆವು. 348 00:29:39,880 --> 00:29:41,520 ಅವನು ದೂರು ಕೊಡದೆ ಇದ್ದರೆ ಒಳ್ಳೆಯದು. 349 00:29:43,640 --> 00:29:45,800 ಚಿಂತಿಸಬೇಡ, ಅವನು ಹಾಗೆ ಮಾಡಲ್ಲ. 350 00:29:46,680 --> 00:29:48,560 ಚಾಡಿಕೋರರಿಗೆ ಏನಾಗುತ್ತೆ ತೋರಿಸ್ತೀನಿ. 351 00:30:01,640 --> 00:30:04,560 ಬೇಗ! ಐದು ನಿಮಿಷಗಳಲ್ಲಿ ದೀಪ ಆರಿಸಲಾಗುತ್ತದೆ! 352 00:30:12,280 --> 00:30:13,720 ಮಿ. ಮನೋಹರ್! ಸರ್! 353 00:30:13,800 --> 00:30:15,040 ವಾರ್ಡನ್ 354 00:30:16,160 --> 00:30:17,840 -ಏನಾಯಿತು? -ಸರ್, ವೇದಾಂತ್! 355 00:30:18,560 --> 00:30:20,640 -ಸರ್, ಬೇಗ ಬನ್ನಿ. ದಯವಿಟ್ಟು-- -ಹೋಗೋಣ. 356 00:30:20,720 --> 00:30:22,040 ಸರಿಯಿರಿ. ಮಕ್ಕಳೇ, ಸರಿಯಿರಿ. 357 00:30:22,120 --> 00:30:22,960 ಸರ್, ವೇದಾಂತ್... 358 00:30:23,040 --> 00:30:25,200 ವೇದಾಂತನಿಗೆ ಸಾರ್ಥಕ್ ಕಿರುಕುಳ ಕೊಡ್ತಿದ್ದಾನೆ. 359 00:30:26,040 --> 00:30:27,200 ಹುಡುಗರ ಶೌಚಾಲಯ 360 00:30:27,360 --> 00:30:28,720 ಸಾರ್ಥಕ್, ಬಾಗಿಲು ತೆರೆ! 361 00:30:29,920 --> 00:30:31,560 ಸಾರ್ಥಕ್, ಬಾಗಿಲು ತೆರೆ! 362 00:30:33,320 --> 00:30:34,400 ವೇದಾಂತ್! 363 00:30:34,480 --> 00:30:36,560 ವೇದಾಂತ್, ಅಳಬೇಡ. ನಾವೆಲ್ಲ ಇಲ್ಲಿದ್ದೇವೆ. 364 00:30:37,240 --> 00:30:40,440 ಸಾರ್ಥಕ್, ಬಾಗಿಲು ತೆರೆ. ಇಲ್ಲದಿದ್ದರೆ, ವಜಾಗೊಳಿಸುತ್ತೇವೆ ನಿನ್ನನ್ನು! 365 00:30:40,520 --> 00:30:43,560 ಧ್ರುವ್, ಹೋಗಿ ಕುಮಾರನ್ನ ಕರೆದುಕೊಂಡು ಬಾ. 366 00:31:22,320 --> 00:31:23,640 ವೇದಾಂತ್, ಏನಾಗಿಲ್ಲ ತಾನೇ? 367 00:31:28,640 --> 00:31:29,640 ಸಾರ್ಥಕ್ ಎಲ್ಲಿ? 368 00:31:30,480 --> 00:31:31,440 ನನಗೆ ಗೊತ್ತಿಲ್ಲ. 369 00:31:50,640 --> 00:31:51,480 ಸಾರ್ಥಕ್? 370 00:31:58,880 --> 00:32:00,080 ಏನಾಯಿತು, ಸಾರ್ಥಕ್? 371 00:32:01,440 --> 00:32:02,960 ಸಾರ್ಥಕ್ ಸುಸು ಮಾಡಿಕೊಂಡ. 372 00:32:04,440 --> 00:32:05,680 ಸುಮ್ಮನಿರಿ, ಹುಡುಗರೇ. 373 00:32:08,680 --> 00:32:10,360 ಸಾರ್ಥಕ್, ವೇದಾಂತ್ ಏನು ಮಾಡಿದ? 374 00:32:14,440 --> 00:32:15,960 ಅವನು ವೇದಾಂತ್ ಅಲ್ಲ. 375 00:32:49,760 --> 00:32:52,320 ಮಹಿಳೆಯರೇ, ಮಹನೀಯರೇ, ಕ್ಯಾಪ್ಟನ್ ಮಾತನಾಡುತ್ತಿರುವುದು, 376 00:32:52,400 --> 00:32:56,880 ಪ್ರಯಾಣ ಆರಾಮವಾಗಿತ್ತು ಎಂದು ಆಶಿಸುವೆ. ನಾವು ಶೀಘ್ರ ಬೆಂಗಳೂರಿನಲ್ಲಿ ಇಳಿಯಲಿದ್ದೇವೆ. 377 00:32:56,960 --> 00:32:59,120 ಸೀಟ್ ಬೆಲ್ಟ್ ಹಾಕಿಕೊಳ್ಳಿ. ಧನ್ಯವಾದ. 378 00:33:02,200 --> 00:33:04,640 ಗುರಿಗೆ ಹೊಡೆಯಿರಿ ಮತ್ತು ಬಹುಮಾನ ಗೆಲ್ಲಿ! 379 00:33:07,560 --> 00:33:09,080 ಇವರು ವಿಜೇತರಾಗಿದ್ದಾರೆ! 380 00:33:15,560 --> 00:33:17,120 ನನಗೆ ಲೈಟ್ ಆನ್ ಇರಬೇಕು. 381 00:33:17,200 --> 00:33:19,080 ಖಂಡಿತ, ಸರ್. ಕ್ಷಮಿಸಿ. 382 00:33:19,800 --> 00:33:23,360 -ಬೇರೆ ಏನಾದರೂ ಸಹಾಯ ಬೇಕೇ? -ಹೌದು. ನನಗೆ ಸ್ವಲ್ಪ ನೀರು ಸಿಗಬಹುದೇ? 383 00:34:28,560 --> 00:34:30,640 20 ಕಿಲೋಮೀಟರ್ ನೇರ ಹೋಗಿ. 384 00:34:30,760 --> 00:34:34,760 ನೀವು 17 ನಿಮಿಷಗಳಲ್ಲಿ ನೀಲಗಿರಿ ವ್ಯಾಲಿ ಸ್ಕೂಲ್ ತಲುಪುತ್ತೀರಿ. 385 00:34:37,360 --> 00:34:39,800 ನೀಲಗಿರಿ ವ್ಯಾಲಿ ಸ್ಕೂಲ್ 20 ಕಿಮೀ 386 00:34:39,880 --> 00:34:43,440 ನಿರ್ಗಮನ ಇಲ್ಲ. ಅವನಿಗೆ ಹೊರಬರಲು ಸಾಧ್ಯವಿಲ್ಲ, ನನ್ನಂತೆ. 387 00:34:43,520 --> 00:34:45,000 ನಾನಿಲ್ಲಿ ಸಿಕ್ಕಿಬಿದ್ದಿದ್ದೇನೆ. 388 00:34:47,280 --> 00:34:48,840 ಎಪಿಯು 389 00:34:51,960 --> 00:34:54,520 ಅವನಿಗೆ ಹೊರಬರಲು ಸಾಧ್ಯವಿಲ್ಲ, ನನ್ನ ಹಾಗೆ. 390 00:35:00,960 --> 00:35:02,160 ಎಲ್ಲಿ ಸಿಕ್ಕಿಬಿದ್ದಿರುವೆ? 391 00:35:03,600 --> 00:35:05,480 ಇಲ್ಲಿ ಸಿಕ್ಕಿಬಿದ್ದಿದ್ದೇನೆ! 392 00:35:09,440 --> 00:35:11,120 ನೀನು ಬಿಟ್ಟರೆ ನಾನು ಸಹಾಯ ಮಾಡಬಲ್ಲೆ. 393 00:35:12,120 --> 00:35:13,480 ಜೊತೆಯಾಗಿ ನಾವು ಹೊರಬರಬಹುದು. 394 00:35:25,800 --> 00:35:29,000 ವೇದಾಂತ್, ಒಂದು ನಿಮಿಷ. ಈಗ ಬರುತ್ತೇನೆ. 395 00:35:29,080 --> 00:35:30,280 ಒಬ್ಬನೇ ಇರುವೆಯಲ್ಲ? 396 00:35:30,960 --> 00:35:32,320 ನಾನು ಒಬ್ಬನೇ ಇಲ್ಲ. 397 00:35:44,640 --> 00:35:45,520 ಅದು ನಿಜ. 398 00:35:46,280 --> 00:35:48,480 ನೀನು ಅವನಿಗೆ ಸಹಾಯ ಮಾಡಬಹುದಲ್ಲವೇ? 399 00:36:28,800 --> 00:36:32,880 ನಾನು ಕಲಿತ ಶಾಲೆಯಿದು. ನೀಲಗಿರಿ ವ್ಯಾಲಿ ಶಾಲೆಯಲ್ಲಿ! 400 00:36:36,360 --> 00:36:37,560 ಸ್ವಾಗತ, ಸುಯಾಶ್. 401 00:36:37,640 --> 00:36:39,520 ನಾನು ಕೆಸಿ ಸ್ವಾಮಿ. ನಾನು ಈಗಿನ ಡೀನ್. 402 00:36:39,600 --> 00:36:41,160 -ಹಾಯ್. -ನೀವು ಬಂದಿದ್ದು ಖುಷಿಯಾಗಿದೆ. 403 00:36:41,280 --> 00:36:42,280 -ಹಲೋ, ಸ್ವಾಗತ. -ಹಾಯ್. 404 00:36:42,360 --> 00:36:45,360 ನಿಮ್ಮ ಆಟೋಗ್ರಾಫ್ ಪಡೆಯಲು ವಿದ್ಯಾರ್ಥಿಗಳು ಕಾತರರಾಗಿದ್ದಾರೆ. 405 00:36:45,680 --> 00:36:48,480 ನಿಮ್ಮನ್ನು ಟಿವಿಯಲ್ಲಿ ನೋಡಲು ನಮಗೆ ತುಂಬ ಹೆಮ್ಮೆಯಿದೆ. 406 00:36:49,200 --> 00:36:52,080 ಧನ್ಯವಾದ. ನನ್ನ ಗರ್ಲ್ ಫ್ರೆಂಡ್ ನ್ಯಾನ್ಸಿ. ಟಾಲಿವುಡ್ ಸ್ಟಾರ್. 407 00:36:52,160 --> 00:36:55,560 ಇವರು ಯಾರಿಗೆ ತಿಳಿದಿಲ್ಲ? ನೀವು ಸ್ಟಾರ್ ಆಗಿದ್ದರೆ, ಆಕೆ ಸೂಪರ್ ಸ್ಟಾರ್. 408 00:36:55,640 --> 00:36:56,640 ರಜತ್! 409 00:37:00,480 --> 00:37:02,160 -ಹೇಗಿರುವೆ? -ಹೇಗಿದ್ದೀ, ಬ್ರೋ? 410 00:37:02,200 --> 00:37:05,320 ನಿನ್ನನ್ನು ನೋಡಿ ಭಾರೀ ಖುಷಿಯಾಯಿತು. 411 00:37:06,160 --> 00:37:07,120 ಹೇಳು, ಬ್ರೋ. 412 00:37:07,160 --> 00:37:08,600 ಮೋಸಗಾರ. 413 00:37:08,960 --> 00:37:11,840 ಸೋಶಿಯಲ್ ಮೀಡಿಯಾದಲ್ಲಿ ಸೇಲ್ಸ್ ಬಿಡ್ ಫೋಟೋ ತುಂಬಿಸಿರುವೆ. 414 00:37:11,920 --> 00:37:13,480 ಎಷ್ಟು ವಾಟರ್ ಪ್ಯುರಿಫೈರ್ ಮಾರಿದೆ? 415 00:37:13,560 --> 00:37:14,760 ನಾನು ಮೋಸಗಾರನಾ? 416 00:37:14,840 --> 00:37:16,920 ನೀನು ಸಮಾರಂಭಗಳಲ್ಲಿ ಉಚಿತವಾಗಿ ನರ್ತಿಸ್ತೀಯಾ? 417 00:37:17,000 --> 00:37:17,960 ಇಲ್ಲ. 418 00:37:18,480 --> 00:37:19,760 ನ್ಯಾನ್ಸಿ, ರಜತ್. 419 00:37:19,840 --> 00:37:21,840 -ಹಾಯ್. -ನ್ಯಾನ್ಸಿ, ನನ್ನ ಗರ್ಲ್ ಫ್ರೆಂಡ್. 420 00:37:21,920 --> 00:37:22,800 ಆಕೆಗೆ ಗೊತ್ತಾ? 421 00:37:23,520 --> 00:37:24,360 ನಿನಗೆ ಗೊತ್ತು. 422 00:37:24,760 --> 00:37:25,600 ಹೌದು. 423 00:37:25,640 --> 00:37:27,000 ಟ್ರಸ್ಟೀ ಬಂದರು. 424 00:37:39,160 --> 00:37:40,320 ಮರಳಿ ಸ್ವಾಗತ. 425 00:37:43,200 --> 00:37:45,000 -ಮಿ. ದೇವ್ ಪ್ರತಾಪ್ ಜಮ್ವಾಲ್. -ಡೀನ್ ಸ್ವಾಮಿ. 426 00:37:45,080 --> 00:37:47,160 ಮಿಸೆಸ್ ಜಮ್ವಾಲ್. ನೀವು ಬಂದಿದ್ದು ಸಂತೋಷ. 427 00:37:47,280 --> 00:37:49,040 -ಧನ್ಯವಾದ. -ಖುಷಿಯಾಗಿದೆ. 428 00:37:49,120 --> 00:37:50,080 ಪ್ರಕಾಶ್. ಬೇಗ. 429 00:37:50,160 --> 00:37:51,040 ಖಂಡಿತ. 430 00:37:53,080 --> 00:37:55,960 ನಿರ್ದೇಶಕರ ಮಂಡಳಿಗೆ ಬಹಳ ನಿರೀಕ್ಷೆಗಳಿವೆ. 431 00:37:56,640 --> 00:37:59,160 ಟ್ರಸ್ಟೀಗಳ ಜೊತೆ ಮಾತನಾಡುತ್ತಿದ್ದೇನೆ, 432 00:37:59,200 --> 00:38:02,960 ಶಾಲೆಗೆ ಹೊಸ ದೃಷ್ಟಿಕೋನ ಬೇಕೆಂಬುದು ನಮ್ಮ ಅನಿಸಿಕೆ. 433 00:38:03,640 --> 00:38:06,160 ಇದನ್ನು ಈಡೇರಿಸುವ ಪ್ರಯತ್ನದಲ್ಲಿದ್ದೇನೆ. 434 00:38:06,200 --> 00:38:07,280 ಒಂದು ನಿಮಿಷ. 435 00:38:07,360 --> 00:38:08,640 ಇಲ್ಲಿ ಬಾ. 436 00:38:12,000 --> 00:38:15,400 -ಹಾಯ್, ಹೇಗಿರುವೆ? -ಚೆನ್ನಾಗಿದ್ದೇನೆ, ನೀನು? 437 00:38:15,480 --> 00:38:18,440 "ಹೊಸ ದೃಷ್ಟಿಕೋನ"! ಅವರಪ್ಪನ ರೀತಿಯೇ ಮಾತನಾಡುತ್ತಾರೆ. ಅಲ್ಲವೇ? 438 00:38:18,520 --> 00:38:22,800 "ನಮಗೆ ದೇವನಿಂದ ಬಹಳ ನಿರೀಕ್ಷೆಗಳಿವೆ. ಅವನು ಮುಂದಿನ ಸಿಎಂ ಆಗುತ್ತಾನೆ. " 439 00:38:22,880 --> 00:38:25,920 ನನ್ನ ಕೆಲಸದಿಂದ ನಿಮ್ಮ ಅಪ್ಪನಿಗೆ ಖುಷಿಯಾಗಿರಬೇಕು ಅನಿಸುತ್ತದೆ. 440 00:38:26,000 --> 00:38:29,520 ಅವರ ನಾಯಕತ್ವದಿಂದಾಗಿ ಈ ಹೊಸ ಘಟಕ ಶುರುವಾಗಿದೆ. 441 00:38:29,600 --> 00:38:30,600 ಅದನ್ನು ನೋಡುವಿರಾ? 442 00:38:30,640 --> 00:38:31,520 ಹೌದು, ಖಂಡಿತ. 443 00:38:31,600 --> 00:38:33,040 ಅದಕ್ಕೆ ಏರ್ಪಾಟು ಮಾಡುತ್ತೇನೆ. 444 00:38:33,120 --> 00:38:34,760 ಮತ್ತು ಮಿಸೆಸ್ ಜಮ್ವಾಲ್? 445 00:38:35,600 --> 00:38:37,760 -ಸುಮ್ಮನಿರು. -ನೀನು ಕೂಡ ಹಳೆ ವಿದ್ಯಾರ್ಥಿ, 446 00:38:37,840 --> 00:38:41,800 ಈ ಶಾಲೆಯಲ್ಲಿ ನಿನ್ನ ಹೆಸರು ಮಾಲ್ವಿಕ ಸೇಠ್ ಅಂತ ಅವರಿಗೆ ಹೇಳು. 447 00:38:42,760 --> 00:38:46,080 ಜಮ್ವಾಲ್ ಹೆಸರೇ ಹಾಗೆ, ಕೇಳಿ ಜನರು ಮಾಲ್ವಿಕ ಹೆಸರು ಮರೆತುಬಿಡುತ್ತಾರೆ. 448 00:38:46,160 --> 00:38:48,040 ಓಹ್! ಪಾಪದ ಶ್ರೀಮಂತ ಹುಡುಗಿ! 449 00:38:48,840 --> 00:38:52,640 ನನಗೆ ನೆನಪಿರುವುದು ಅಧಿರಾಜನನ್ನು ಬೆರಳ ತುದಿಯಲ್ಲಿ ಆಡಿಸಿದ ಮಾಲ್ವಿಕ. 450 00:38:55,000 --> 00:38:55,880 ಹೌದು. 451 00:38:56,520 --> 00:38:57,360 ಹೌದು. 452 00:39:00,040 --> 00:39:00,960 ಆದಿ. 453 00:39:02,440 --> 00:39:05,080 -ಹೇಗಿರುವೆ, ದೇವ್? -ಚೆನ್ನಾಗಿದ್ದೇನೆ. ಹೋಗೋಣವೇ? 454 00:39:07,080 --> 00:39:09,760 ನೀನು ಮದುವೆಗೆ ಬರಲಿಲ್ಲ. ನಿನ್ನನ್ನು ಮಿಸ್ ಮಾಡಿಕೊಂಡೆವು. 455 00:39:09,840 --> 00:39:10,680 ಹೌದು... 456 00:39:11,480 --> 00:39:14,080 ನಿನ್ನ ಅಜ್ಜನ ಬಗ್ಗೆ ತಿಳಿದು ಬೇಜಾರಾಯಿತು. 457 00:39:15,040 --> 00:39:16,200 ನೀನು ಚೆನ್ನಾಗಿರುವೆ ತಾನೇ? 458 00:39:19,080 --> 00:39:22,640 ಈ ವ್ಯಕ್ತಿಗೆ ಮಾತು ನಿಲ್ಲಿಸಲು ಗೊತ್ತಿಲ್ಲ ಇವನಿಗೆ ಮಾತು ಬರುತ್ತಿಲ್ಲ. 459 00:39:22,760 --> 00:39:24,640 ಇಲ್ಲಿ ತಲೆ ಸರಿಯಿರುವವರು ನಾವು ಮಾತ್ರಾನಾ? 460 00:39:24,680 --> 00:39:26,480 ನೀವಿಬ್ಬರು ಯಾವತ್ತೂ ಸರಿಯಿರಲಿಲ್ಲ. 461 00:39:29,400 --> 00:39:31,080 -ಹೇಗಿರುವೆ? -ಏನು ಸಮಾಚಾರ? 462 00:39:32,320 --> 00:39:34,000 ನಿನ್ನನ್ನು ನೋಡಿ ಖುಷಿಯಾಯಿತು. 463 00:39:35,560 --> 00:39:37,320 -ನ್ಯಾನ್ಸಿ, ಅದು ದೇವ್. -ಹಾಯ್. 464 00:39:37,840 --> 00:39:38,640 ಹಾಯ್. 465 00:39:41,080 --> 00:39:42,360 ಹೇಗಿರುವೆ, ದೇವ್? 466 00:40:06,480 --> 00:40:09,200 ನಿನಾದ್ 467 00:40:19,160 --> 00:40:21,120 ಎಲ್ಲರೂ ನಿಮ್ಮ ಜಾಗದಲ್ಲಿ ನಿಲ್ಲಿ. 468 00:40:21,160 --> 00:40:23,680 ಹೇಗಿರುವೆ? ಹದಿನೈದು ವರ್ಷಗಳಾದವು. 469 00:40:23,800 --> 00:40:24,760 ನೀನು ಹೇಗಿರುವೆ? 470 00:40:25,320 --> 00:40:27,960 ನಿನ್ನ ಬೆಸ್ಟ್ ಫ್ರೆಂಡ್ ನಿನಾದ್ ಹೇಗಿದ್ದಾನೆ? 471 00:40:28,040 --> 00:40:31,920 ಆ ಕೊನೆಯ ದಿನದ ನಾಟಕದ ನಂತರ ನಿನ್ನ ಪ್ರೇಮಿಯ ಕೋಪ ತಣ್ಣಗಾಗಿಸಿದೆಯಾ? 472 00:40:32,000 --> 00:40:35,160 15 ವರ್ಷಗಳಲ್ಲಿ ನಿನ್ನ ಜೀವನದಲ್ಲಿ ಏನಾದರೂ ಬೇರೆ ಆಸಕ್ತಿಯ ವಿಷಯವಿರಬೇಕು? 473 00:40:35,280 --> 00:40:38,080 ಅಂದ್ರೆ... ಇಲ್ಲ. 474 00:40:39,440 --> 00:40:43,280 2007 ರ ಬ್ಯಾಚ್ ಪುನರ್ಮಿಲನ 475 00:40:52,160 --> 00:40:54,040 ದಯವಿಟ್ಟು ಬನ್ನಿ, ವಿದ್ಯಾರ್ಥಿಗಳೇ. 476 00:40:54,120 --> 00:40:55,480 ಪ್ರಕಾಶ್, ಸಿದ್ಧವಾಗಿರುವೆಯಾ? 477 00:40:58,160 --> 00:40:59,880 ಹುಡುಗರೇ, ಬನ್ನಿ, ದಯವಿಟ್ಟು. 478 00:41:00,640 --> 00:41:03,120 ನಿಲ್ಲಿ, ನಿಮ್ಮ ಫೋಟೋ ಸೆಷನ್. 479 00:41:03,160 --> 00:41:05,600 ನಿನಗೆ ಪಾಠ ಹೇಳಬಲ್ಲೆ. ಕಮಾನ್. 480 00:41:05,640 --> 00:41:09,200 ಹಾಗಿದ್ದರೆ ಅವಳನ್ನು ಹೇಗೆ ಸೆಳೆದೆ? 481 00:41:10,000 --> 00:41:10,920 ಹೇಗೆ? 482 00:41:19,680 --> 00:41:23,320 ಸರಿ, 2007ರ ಬ್ಯಾಚ್. ಫೋಟೋ ತೆಗೆಯುವ ಸಮಯ. 483 00:41:30,160 --> 00:41:31,080 ಮೂರು... 484 00:41:31,800 --> 00:41:35,680 ಆದು, ನಾನಿಲ್ಲದೆ ಫೋಟೋ ತೆಗೆಯಲು ನೀನು ಬಿಡುವುದಿಲ್ಲ ಅಂತ ಗೊತ್ತಿತ್ತು. 485 00:41:35,800 --> 00:41:36,800 ಎರಡು... 486 00:41:38,000 --> 00:41:39,320 ಒಂದು... 487 00:41:39,920 --> 00:41:41,320 ಮತ್ತೆ... 488 00:41:44,320 --> 00:41:45,280 ಅಯ್ಯೋ. 489 00:41:46,120 --> 00:41:47,440 -ಏನಿದು. -ಡೀನ್, ಏನಾಯಿತು? 490 00:41:47,520 --> 00:41:49,200 -ಓಹ್, ದೇವರೇ. -ಮಾಲ್ವಿಕ. 491 00:41:49,320 --> 00:41:50,160 ಏನಾಯಿತು? 492 00:41:50,280 --> 00:41:51,520 ಎಲ್ಲರೂ, ಹಿಂದೆ ಹೋಗಿ. 493 00:41:51,600 --> 00:41:53,160 -ರಜತ್, ಏನಾಗಿಲ್ಲ ತಾನೇ? -ಹಿಂದೆ! 494 00:41:53,200 --> 00:41:54,920 -ನ್ಯಾನ್ಸಿ. -ದಯವಿಟ್ಟು ಸರಿಯಿರಿ. 495 00:41:55,000 --> 00:41:56,560 ದಯವಿಟ್ಟು ಈ ಬದಿಗೆ ಬನ್ನಿ. 496 00:42:00,160 --> 00:42:01,360 ಯಾರಿಗೂ ಏನಾಗಿಲ್ಲ ತಾನೇ? 497 00:42:04,400 --> 00:42:07,080 ಮಿ. ಮನೋಹರ್, ಮೇಲೆ ಹೋಗಿ ನೋಡಿ. 498 00:42:07,160 --> 00:42:08,040 ಸರಿ. 499 00:42:08,120 --> 00:42:10,320 ಅವರನ್ನು ಒಳಗೆ ಕರೆದುಕೊಂಡು ಹೋಗಿ. 500 00:42:20,200 --> 00:42:21,680 ಆದು! 501 00:42:53,000 --> 00:42:54,080 ದಾಖಲೆ ಕೊಠಡಿ 502 00:42:59,400 --> 00:43:01,840 ವಾರ್ಷಿಕ ಪುಸ್ತಕ 503 00:45:14,560 --> 00:45:16,560 ಸೃಜನಶೀಲ ಮೇಲ್ವಿಚಾರಕರು ಸುಜಿತ್ ವೆಂಕಟರಾಮಯ್ಯ