1 00:00:07,091 --> 00:00:11,137 ಈಗಲೇ 1319 ಗ್ರೇಸ್ಟೋನ್ ಅವೆನ್ಯೂನಲ್ಲಿ ನನ್ನನ್ನು ಭೇಟಿಯಾಗು. 2 00:00:11,220 --> 00:00:13,931 -ಅಲ್ಲಿ ಏನಿದೆ? -ನಮ್ಮ ಪ್ರತಿಯೊಬ್ಬ ಕೊಲೆ ಸಂತ್ರಸ್ತೆಯ 3 00:00:14,014 --> 00:00:17,977 ಕರೆಗಳಿಗೆ ಉತ್ತರಿಸಿದ 911 ಆಪರೇಟರ್‌ನ ಮನೆ. 4 00:00:18,060 --> 00:00:21,147 ನಾನು ಹತ್ತು ನಿಮಿಷದಲ್ಲಿ ಬರುವೆ. ನಾನಿಲ್ಲದೆ ಏನೂ ಮಾಡಬೇಡಿ. 5 00:00:22,940 --> 00:00:24,483 ಬೇಡ! ಬೇಡ! 6 00:00:28,237 --> 00:00:29,363 ಸ್ಕಾರ್ಪೆಟ್ಟದ ಹಿಂದಿನ ಸಂಚಿಕೆಯಲ್ಲಿ 7 00:00:29,447 --> 00:00:32,116 ಗ್ವೆನ್ ಹೇನಿ, ವಯಸ್ಸು 33. ಥೋರ್ ಲ್ಯಾಬ್ಸ್‌ನಲ್ಲಿ ಜೀವವೈದ್ಯಕೀಯ ತಂತ್ರಜ್ಞೆ. 8 00:00:32,198 --> 00:00:34,118 ಕೆಟಲ್ ಬೆಲ್ ಬೆರಳಚ್ಚು ವರದಿಯಲ್ಲಿ ಒಬ್ಬರ ಹೆಸರಿದೆ. 9 00:00:34,201 --> 00:00:35,870 -ಯಾರದು? -ಮ್ಯಾಟ್ ಪೀಟರ್ಸೆನ್. 10 00:00:35,953 --> 00:00:38,748 ಗ್ವೆನ್ ಹೇನಿಯ ಸಾವಿನಲ್ಲಿ ಪೀಟರ್ಸೆನ್ ಪಾತ್ರವಿಲ್ಲ ಅಂತ ನಿನಗೆ ತಿಳಿದಿತ್ತು 11 00:00:38,831 --> 00:00:41,542 ಆದರೂ ನೀನು ನನಗೆ ಏನೂ ಹೇಳಲಿಲ್ಲ. ನಾನು ನಿನ್ನನ್ನು ಕೇಳಿದಾಗ ಸುಳ್ಳು ಹೇಳಿದೆ. 12 00:00:41,625 --> 00:00:44,253 -ಪೀಟರ್ಸೆನ್ ಪ್ರಕರಣದಲ್ಲಿ ಏನಾಯಿತು? -ಇದು ಎಲ್ಲಿಂದ ಬರುತ್ತಿದೆ? 13 00:00:44,336 --> 00:00:46,922 ನನ್ನಿಂದ ಬರುತ್ತಿದೆ. ನಾನು, ನಿನ್ನ ಗಂಡ. 14 00:00:47,006 --> 00:00:48,799 ಅಂದು ನಾನು ನಿನ್ನ ಮನೆಗೆ ಬಂದಾಗ 15 00:00:48,883 --> 00:00:51,343 ನಿನ್ನ ಪರದೆಯ ಮೇಲೆ ಏನಿದೆ ಅಂತ ನೋಡಿದೆ. 16 00:00:51,427 --> 00:00:54,054 ಪ್ರತಿಯೊಬ್ಬರೂ ದುಃಖವನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತಾರೆ. 17 00:00:54,138 --> 00:00:55,473 ನನ್ನ ಆಯ್ಕೆಯಾಗಿರಲಿಲ್ಲ. 18 00:00:55,556 --> 00:00:56,724 ಏನು ನಿನ್ನ ಆಯ್ಕೆ ಆಗಿರಲಿಲ್ಲ? 19 00:00:56,807 --> 00:00:57,933 ಇಲ್ಲಿರುವುದು. 20 00:00:58,017 --> 00:01:00,227 ನೀನು ಮಾಡುವ ಎಲ್ಲವನ್ನೂ ಬೆಂಬಲಿಸಲು ನಾನು ಪ್ರಯತ್ನಿಸುತ್ತಿದ್ದೇನೆ 21 00:01:00,311 --> 00:01:03,105 ಮತ್ತು ನಿನಗೆ ಬೇಕಾದದ್ದು ನೀನು ಪಡೆಯಲಿ ಅಂತಲೇ ನನ್ನ ಆಸೆ. 22 00:01:03,189 --> 00:01:05,608 ಮತ್ತು ನೀನು ಈಗ ಮನೆಯಿಂದ ಹೊರಹೋಗಬೇಕು ಎಂದು ನಾನು ಬಯಸುತ್ತೇನೆ. 23 00:01:05,691 --> 00:01:08,486 ನಿನಗವನ ಜಾಡು ಸಿಗುವಂತೆ ಹೊಂದಿಸುತ್ತಿದ್ದೀಯಾ? 24 00:01:08,569 --> 00:01:09,695 ಇದೊಂದು ಬಲೆ. 25 00:01:09,779 --> 00:01:13,657 ಅಂದರೆ, ಯಾರಾದರೂ ಆಂಟಿ ಕೇ ಫೈಲ್‌ಗಳನ್ನು ಪ್ರವೇಶಿಸಲು ನೋಡಿದರೆ, ನನಗೆ ಸೂಚನೆ ಬರುತ್ತೆ. 26 00:01:13,741 --> 00:01:17,828 ಕ್ಯಾಮಿ ರಮಾಡ ಸತ್ತಿದ್ದಾಳೆ ಮತ್ತವಳ ಕುಟುಂಬಕ್ಕೆ ಎಂದಿಗೂ ನಿಜ ಏನು ಅಂತ ತಿಳಿಯಲ್ಲ. 27 00:01:17,912 --> 00:01:21,164 ಈ ಕಥೆ ಪತ್ರಿಕೆಗಳಲ್ಲಿ ಬರೋದನ್ನ ನೋಡಲು ರೆಡ್ಡಿ ಅಥವಾ ರಾಜ್ಯಪಾಲರಿಗೆ ಇಷ್ಟವಿಲ್ಲ. 28 00:01:21,248 --> 00:01:23,501 ಪ್ರವಾಸೋದ್ಯಮಕ್ಕೆ ಇದು ಕೆಟ್ಟದು. ರಾಜ್ಯಕ್ಕೆ ಇದು ಕೆಟ್ಟದು. 29 00:01:23,584 --> 00:01:25,336 ರೆಡ್ಡಿಗೆ ನಿವೃತ್ತರಾಗುವ ಯೋಜನೆಯೇ ಇರಲಿಲ್ಲ. 30 00:01:25,419 --> 00:01:28,047 ಬಹುಶಃ ಅವರು ಮೊದಲಿಂದಲೂ ಆರೋಗ್ಯ ಆಯುಕ್ತರಾಗಲು ಪ್ರಯತ್ನಿಸುತ್ತಿದ್ದರು. 31 00:01:28,130 --> 00:01:29,840 ಇದು ಚರ್ಮದ ಕಸಿಯಂತೆ ಕಾಣುತ್ತದೆ. 32 00:01:29,924 --> 00:01:31,967 ಗ್ವೆನ್ ಹೇನಿಯ ಕಾಲಿನಲ್ಲಿದ್ದಂತಹುದ್ದೇ. 33 00:01:32,051 --> 00:01:33,093 ಇಬ್ಬರ ಮೇಲೂ ಚರ್ಮದ ಕಸಿ. 34 00:01:33,176 --> 00:01:34,678 ಕೊಲೆಗಳಿಗೆ ಸಂಬಂಧವಿದೆ. 35 00:01:34,762 --> 00:01:37,139 ನೀವು ಕಟ್ಟಡವನ್ನು ತೊರೆಯಬೇಕು. 36 00:01:37,223 --> 00:01:39,642 ನಾವಿಲ್ಲಿ ಹುಡುಕುತ್ತಿರೋದು ಒಬ್ಬ ಸರಣಿ ಹಂತಕನನ್ನು. 37 00:01:39,725 --> 00:01:41,977 ಮತ್ತು, ಡಾಕ್, ಅವನನ್ನು ಹುಡುಕುತ್ತಿರೋದು ನಾವು ಮಾತ್ರ. 38 00:01:54,490 --> 00:01:58,160 ಸ್ಕಾರ್ಪೆಟ್ಟ 39 00:01:58,244 --> 00:02:00,204 ಪೆಟ್ರೀಶಿಯ ಕಾರ್ನ್ವೆಲ್ ಅವರ ಕಾದಂಬರಿಗಳನ್ನು ಆಧರಿಸಿದೆ 40 00:02:18,764 --> 00:02:20,975 ಅದನ್ನು ಕಂಡುಹಿಡಿದವರು ಡಾಕ್ಟರ್, 41 00:02:22,518 --> 00:02:23,978 ಈ 911 ಕರೆಗಳ ಬಗ್ಗೆ. 42 00:02:24,061 --> 00:02:26,689 ಇದು ಡಾ. ಸ್ಕಾರ್ಪೆಟ್ಟ, ಮುಖ್ಯ ವೈದ್ಯಕೀಯ ಪರೀಕ್ಷಕಿ ಕಂಡುಕೊಂಡದ್ದಾ? 43 00:02:27,398 --> 00:02:28,232 ಹೌದು. 44 00:02:31,986 --> 00:02:34,488 ಅವರು ನನಗೆ ಕರೆ ಮಾಡಿ, ವಿಳಾಸವನ್ನು ಹೇಳಿದರು, 45 00:02:34,572 --> 00:02:37,491 ಮತ್ತು ನಾನು ಇಲ್ಲಿಗೆ ಬಂದಾಗ, ಮಹಿಳೆಯೊಬ್ಬರು ಸಂಕಷ್ಟದಲ್ಲಿರುವುದು ಕೇಳಿತು. 46 00:02:37,575 --> 00:02:38,576 ಎಂತಹ ಸಂಕಷ್ಟ? 47 00:02:39,201 --> 00:02:40,661 ಭಯಂಕರವಾಗಿ ಕಿರುಚುತ್ತಿದ್ದರು. 48 00:02:40,744 --> 00:02:42,413 ಇಲ್ಲ! ಬೇಡ! 49 00:02:45,958 --> 00:02:47,668 ನಾನು ಒಳಗೆ ಹೋದೆ. 50 00:02:47,751 --> 00:02:51,547 ಅವನು ಅನಿರೀಕ್ಷಿತವಾಗಿ ನನ್ನ ಮೇಲೆ ದಾಳಿ ಮಾಡಿದ… ಮತ್ತು ನಾವು ಹೋರಾಡಿದೆವು. 51 00:02:53,757 --> 00:02:54,633 ರಕ್ಷಿಸಿಕೊಳ್ಳಬೇಕಿತ್ತು. 52 00:03:01,390 --> 00:03:04,226 ಹಾಗಾಗಿ, ನಾನು ಅವನ ಮೇಲೆ ಗುಂಡು ಹಾರಿಸಿದೆ. 53 00:03:04,310 --> 00:03:06,729 ತೊಲಗು! ಹೋಗು ಹೊರಗೆ! 54 00:03:11,734 --> 00:03:12,943 -ಆರಾಮಿದ್ದೀರಾ, ಡಾಕ್ಟರ್? -ಹಾಂ. 55 00:03:14,278 --> 00:03:16,030 ಡಿಟೆಕ್ಟಿವ್ ಮರಿನೋ ತೊಂದರೆಯಲ್ಲಿದ್ದಾರಾ? 56 00:03:16,655 --> 00:03:18,324 ಅದು ಸ್ವಯಂರಕ್ಷಣೆಯ ದಾಳಿಯಾಗಿದ್ದರೆ, ಏನೂ ಆಗಲ್ಲ. 57 00:03:25,247 --> 00:03:27,291 ಅವನು ಸತ್ತಿದ್ದು ಒಳ್ಳೆಯದೇ. 58 00:03:27,374 --> 00:03:29,001 ದರಿದ್ರ ಕೊಲೆಗಾರ. 59 00:03:29,084 --> 00:03:30,294 ಆ ಮಹಿಳೆಯರಿಗೆ ಅವನು ಮಾಡಿದ್ದು… 60 00:03:35,716 --> 00:03:36,884 ಧನ್ಯವಾದ, ಅಧಿಕಾರಿ ರಯಾನ್. 61 00:03:36,966 --> 00:03:39,845 ಎಂತಹ ಗೊಂದಲಮಯ ಸನ್ನಿವೇಶವಾಗಿದ್ದರೂ, ನಾವವನನ್ನು ಹಿಡಿದಿದ್ದೇವೆ. 62 00:03:39,929 --> 00:03:41,555 ಕೊಲೆಗಾರನ ಆತಂಕ ಇನ್ನಿಲ್ಲ. 63 00:03:41,639 --> 00:03:43,974 -ಪತ್ರಿಕಾಗೋಷ್ಠಿಗಾಗಿ ಅಭ್ಯಾಸ ಮಾಡುತ್ತಿದ್ದೀಯಾ? -ಇಲ್ಲ. 64 00:03:46,602 --> 00:03:47,811 ಆದರೆ ನೀನು ಮಾಡಬೇಕು. 65 00:03:47,895 --> 00:03:50,606 ನೀನು ಇದನ್ನು ಭೇದಿಸಿದ್ದು ಅಂದ ಪೀಟ್. ನಿನಗೆ ಸಂಪೂರ್ಣ ಶ್ರೇಯ ನೀಡುತ್ತಿದ್ದಾನೆ. 66 00:03:50,689 --> 00:03:54,902 ಇಲ್ಲ, ಇಲ್ಲ, ಇಲ್ಲ. ನಾನು ಕೇವಲ… ಧ್ವನಿಯ ಬಗ್ಗೆ ಕಂಡುಹಿಡಿದೆ, 67 00:03:54,985 --> 00:03:56,779 ಅವರೆಲ್ಲರೂ 911ಗೆ ಕರೆ ಮಾಡಿದ್ದರು ಅಂತ, ಮತ್ತದು… 68 00:03:56,862 --> 00:03:59,198 ಅಂದರೆ, ಮೂಲತಃ ಸಂಪೂರ್ಣ ವಿಷಯ. 69 00:03:59,823 --> 00:04:02,701 ನಾನು ಅವನನ್ನು ಶವಾಗಾರಕ್ಕೆ ಒಯ್ಯಬೇಕು. ಇಲ್ಲಿ ಈಗ ಗುಂಪುಗೂಡಲಿದೆ. 70 00:04:02,785 --> 00:04:04,078 ಹೂಂ, ಹಾಗೆ ಮಾಡು. 71 00:04:05,245 --> 00:04:08,499 ಹೇ. ಒಳ್ಳೆಯ ಕೆಲಸ, ಡಾ. ಸ್ಕಾರ್ಪೆಟ್ಟ. 72 00:04:09,249 --> 00:04:11,752 ಡಿಟೆಕ್ಟಿವ್ ಮರಿನೋಗೆ ಏನಾಗಲಿದೆ? 73 00:04:11,835 --> 00:04:14,922 ಆಂತರಿಕ ವ್ಯವಹಾರಗಳ ವಿಭಾಗದವರು ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. 74 00:04:15,005 --> 00:04:17,507 ಚಿಂತಿಸಬೇಡ, ಈ ನೀಚನಿಗಾಗಿ ಅವನನ್ನು ಅವರು ಜೈಲಿಗೆ ಹಾಕಲು ನೋಡುತ್ತಿಲ್ಲ. 75 00:04:17,591 --> 00:04:21,011 ಅವನ ಕಥೆಯನ್ನು ಅವರು ಒಪ್ಪಿದರೆ… ಅವನಿಗೆ ಏನೂ ಆಗಲ್ಲ. 76 00:04:28,727 --> 00:04:30,646 ದೇವರೇ, ಪೀಟ್. 77 00:04:30,729 --> 00:04:32,523 ಹಾಗೆ ಮಾಡಲು ನಾನು ನಿನ್ನನ್ನು ಕೇಳಲಿಲ್ಲ. 78 00:04:33,565 --> 00:04:36,360 ನನಗೆ ಕಿರುಚಾಟ ಕೇಳಿತು, ನಾನು ಮಾಡಿದ್ದನ್ನು ಮಾಡಲು ನನಗೆ ಸಂಪೂರ್ಣ ಹಕ್ಕಿದೆ. 79 00:04:36,443 --> 00:04:39,405 ಆದರೆ ಇಲ್ಲಿಗೆ ಬರಲು ನಿಮಗೆ ಯಾವುದೇ ಕಾರಣವಿರಲಿಲ್ಲ. 80 00:04:39,488 --> 00:04:40,781 ನನಗಾಗಿ ಕಾಯಿರಿ ಅಂತ ನಾನು ಹೇಳಿದ್ದೆ. 81 00:04:40,864 --> 00:04:42,324 ನಾನು ಪರಿಶೀಲಿಸುತ್ತಿದ್ದೆ ಅಷ್ಟೇ. 82 00:04:43,117 --> 00:04:44,743 "ಆಕೆ ಪರಿಶೀಲಿಸುತ್ತಿದ್ದರಷ್ಟೇ, ಯುವರ್ ಆನರ್. 83 00:04:44,827 --> 00:04:47,955 ಮುಖ್ಯ ವೈದ್ಯಕೀಯ ಪರೀಕ್ಷಕಿಯಾಗಿ ಅದು ಆಕೆಯ ಕೆಲಸ ಅಲ್ವಾ?" 84 00:04:48,038 --> 00:04:50,916 ನಾನು ನಿನಗಾಗಿ ಕಾಯುತ್ತಿದ್ದೆ, ಆದರೆ ಆಮೇಲೆ ನನಗೆ ಕಿರುಚಾಟ ಕೇಳಿತು. 85 00:04:51,000 --> 00:04:53,377 ಟೇಪ್‌ನಿಂದ ಬಂದ್ದದ್ದು. ನೋಡಿ, ಈಗ ವಾಪಸ್ ತೆಗೆದುಕೊಳ್ಳಲು ಆಗಲ್ಲ. 86 00:04:53,460 --> 00:04:55,587 ನಿಮ್ಮ, ನನ್ನ ಅಂತ್ಯವಾಗುತ್ತೆ, ವೃತ್ತಿಜೀವನ ನಾಶವಾಗುತ್ತೆ. 87 00:04:55,671 --> 00:04:56,922 ನಾವು ಸುಳ್ಳು ಹೇಳುತ್ತಿದ್ದೇವೆ. 88 00:04:57,006 --> 00:05:00,217 ನಾನು ನಿಮಗಾಗಿ ಮೂರು ಗುಂಡುಗಳನ್ನು ಅವನ ಕತ್ತಿಗೆ ಹೊಡೆದಾಗಲೇ ಅದು ಆಗಿ ಹೋಗಿದೆ. 89 00:05:00,300 --> 00:05:01,802 ಹಾಗೆ ಮಾಡಲು ನಾನು ನಿನ್ನನ್ನು ಕೇಳಲಿಲ್ಲ. 90 00:05:01,885 --> 00:05:03,053 ನೀವು ಇಲ್ಲಿಗೆ ಬರಬಾರದಿತ್ತು. 91 00:05:03,137 --> 00:05:05,305 ಆ ಕ್ಷಣದಿಂದಲೇ, ನಮ್ಮ ಹಣೆಬರಹ ಬರೆದಾಗಿತ್ತು. 92 00:05:05,389 --> 00:05:08,142 ಈಗ ನಾನು ಕೊಂದ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ನಾನೇ ಮಾಡಬೇಕು… 93 00:05:09,226 --> 00:05:11,103 ಮತ್ತು ನನ್ನ ಸಂಶೋಧನೆಗಳ ಬಗ್ಗೆ ಸುಳ್ಳು ಹೇಳಬೇಕು. 94 00:05:11,937 --> 00:05:13,188 ನಾವು ಇದನ್ನು ಮಾಡುವಂತಿಲ್ಲ. 95 00:05:13,272 --> 00:05:15,441 -ನಾನು ಇದನ್ನು ನಿಮಗಾಗಿ ಮಾಡಿದೆ, ಡಾಕ್ಟರ್. -ಯಾಕೆ? 96 00:05:15,524 --> 00:05:17,651 ಎಲ್ಲದಕ್ಕೂ ಒಪ್ಪಿಕೊಳ್ಳಿ ಮತ್ತು ನಾವಿಬ್ಬರೂ ಚೆನ್ನಾಗಿರುತ್ತೇವೆ. 97 00:05:17,735 --> 00:05:19,570 -ನಾವು ಹೀರೋಗಳಾಗುತ್ತೇವೆ. -"ಹೀರೋಗಳಾ?" 98 00:05:19,653 --> 00:05:22,072 ನನಗೆ ಹೀರೋ ಆಗಲು ಇಷ್ಟವಿಲ್ಲ. ನನಗೆ ಜೈಲಿಗೆ ಹೋಗಲು ಇಷ್ಟವಿಲ್ಲ. 99 00:05:22,156 --> 00:05:23,699 ನನಗೆ ನನ್ನ ಕೆಲಸವನ್ನು ಉಳಿಸಿಕೊಳ್ಳಬೇಕು. 100 00:05:23,782 --> 00:05:25,534 ಈಗ ನಾವು ಇಷ್ಟೆಲ್ಲಾ ಮುಚ್ಚಿಹಾಕಬೇಕು. 101 00:05:27,161 --> 00:05:28,537 ನೀನೊಬ್ಬ ದಡ್ಡ ಮೂರ್ಖ. 102 00:05:30,039 --> 00:05:31,290 ಸುಮ್ಮನೆ ಕಥೆ ಹೇಳಿ. 103 00:05:36,545 --> 00:05:37,546 ಹಾಳಾಗಿ ಹೋಗು. 104 00:05:52,269 --> 00:05:54,521 ನೀವು ಎಂದಾದರೂ ನನ್ನನ್ನ ಎಲ್ಲಿಗಾದರೂ ಕರೆದೊಯ್ದಿದ್ದೀರಾ? ಎಂದಾದರೂ? 105 00:05:55,439 --> 00:05:58,484 ತಮಾಷೆ ಮಾಡುತ್ತಿದ್ದೀಯಾ? ಅಷ್ಟೇನಾ ನಿನಗೆ ಹೇಳಲು ಇರೋದು? 106 00:06:00,778 --> 00:06:02,279 ಜಾಮೀನಿನ ಮೇಲೆ ಬಿಡಿಸಿದ್ದಕ್ಕಾಗಿ ಧನ್ಯವಾದ? 107 00:06:02,905 --> 00:06:05,908 ದೇವರೇ! ಇದು ಗಂಭೀರ ವಿಷಯ. 108 00:06:05,991 --> 00:06:12,414 ನೀನು ಅತಿ ಮಾಡುತ್ತೀಯ. ತುಂಬಾ ಅತಿ ಮಾಡುತ್ತೀಯ, ಪೀಟ್. ಯಾವಾಗಲೂ. 109 00:06:12,498 --> 00:06:16,043 ಅದು ನಿಜ. ಯಾರೂ ಕಾಳಜಿ ವಹಿಸದ ವಿಷಯವನ್ನು ಸಾಬೀತುಪಡಿಸಲು 110 00:06:16,126 --> 00:06:18,128 ಯಾರೂ ಕೇಳದೇ ಇದ್ದರೂ ನಾನು ಹೋರಾಡಿ ಸಾಯುವೆ. 111 00:06:18,212 --> 00:06:21,215 ಹೌದು, ಮತ್ತು ಅದಕ್ಕಾಗಿ ಬೆಲೆ ತೆರುವವಳು ನಾನು. 112 00:06:21,298 --> 00:06:23,092 ಈಗಿನ ಬಗ್ಗೆ ಮಾತಾಡುತ್ತಿದ್ದೀರಾ ಅಥವಾ ಗತದ ಬಗ್ಗೆನಾ? 113 00:06:23,175 --> 00:06:25,969 ನಾನು ಎಲ್ಲದರ ಬಗ್ಗೆ ಮಾತಾಡುತ್ತಿದ್ದೇನೆ! ಎಲ್ಲದರ ಬಗ್ಗೆ. 114 00:06:26,053 --> 00:06:27,805 ನೀನು ಕೆಟ್ಟದ್ದನ್ನು ಇನ್ನಷ್ಟು ಹದಗೆಡಿಸುತ್ತೀಯ. 115 00:06:33,685 --> 00:06:35,395 -ನನ್ನ ಅರ್ಥ ಅದಲ್ಲ. -ಇಲ್ಲ, ಪರವಾಗಿಲ್ಲ. 116 00:06:35,479 --> 00:06:37,356 -ಇಲ್ಲ, ನನ್ನರ್ಥ ಅದಲ್ಲ. -ಅದೇ ನಿಮ್ಮರ್ಥ. ಪರವಾಗಿಲ್ಲ. 117 00:06:37,439 --> 00:06:39,108 -ಪರವಾಗಿಲ್ಲ. -ಇಲ್ಲ. ನೀನು ಕೇಳಿಸಿಕೊಳ್ಳಬೇಕು… 118 00:06:39,191 --> 00:06:40,901 ಇಪ್ಪತ್ತು ವರ್ಷಗಳ ಕಾಲ ಸಿಡುಕಿನ ಮೂರ್ಖನಾಗಿದ್ದೆ. 119 00:06:43,070 --> 00:06:45,864 ನನ್ನ ತಪ್ಪುಗಳನ್ನು ಇಪ್ಪತ್ತು ವರ್ಷಗಳಿಂದ ಸರಿಪಡಿಸುತ್ತಿದ್ದೀರಿ. ಅರ್ಥವಾಗುತ್ತೆ. 120 00:06:45,948 --> 00:06:50,494 ಆದರೂ, ಕೊನೆಯಲ್ಲಿ ಎಲ್ಲವೂ ಸರಿಯಾಗಿದೆ ಅಂತ ನನಗನಿಸುತ್ತೆ, ಅಲ್ವಾ? 121 00:06:51,203 --> 00:06:55,207 ನಾವು ಮಾಡಿದ ಎಲ್ಲಾ ಒಳ್ಳೆಯದು, ಮತ್ತು ಕೆಟ್ಟದ್ದು, ಮತ್ತು ಅದರ ನಡುವಿನದು. 122 00:06:57,501 --> 00:06:59,795 ಹೌದು. ಹೌದು, ಖಂಡಿತವಾಗಿಯೂ. 123 00:07:01,713 --> 00:07:03,382 ಖಂಡಿತ ಕೆಟ್ಟದ್ದಕ್ಕಿಂತ ಒಳ್ಳೆಯದೇ ಹೆಚ್ಚು. 124 00:07:03,465 --> 00:07:04,383 ಹೌದು. 125 00:07:09,721 --> 00:07:12,599 ಕೇಳಿ, ನಾವು ಈ ವಿಷಯಗಳನ್ನೆಲ್ಲಾ ಹಿಂದಿಕ್ಕಿ, 126 00:07:12,683 --> 00:07:14,726 ಮತ್ತೆಂದೂ ಹಿಂದಿರುಗಿ ನೋಡದೇ ಮುಂದೆ ಸಾಗಿಬಿಡೋಣ. 127 00:07:23,527 --> 00:07:24,653 ಹೂಂ. 128 00:07:26,113 --> 00:07:27,698 ಹೂಂ, ನಾವದನ್ನು ಮಾಡಬಹುದು. 129 00:07:28,782 --> 00:07:29,783 ಮಾಡಬಹುದು. 130 00:07:35,414 --> 00:07:38,917 ಆ ಚರ್ಮದ ಕಸಿಯನ್ನು ನಿಮಗೆ ಡಾ. ಕಮಿನ್ಸ್ಕಿ ಬಳಿ ಒಯ್ಯಲು ಸಾಧ್ಯವಾಯಿತಾ? 131 00:07:39,001 --> 00:07:41,128 ಹಾಂ, ಹೌದು. ಹೌದು, ನಾನು ಒಯ್ದೆ. 132 00:07:41,211 --> 00:07:46,008 ಮತ್ತು ಸಹಾಯ ಬೇಕಾದರೆ ಅಧಿಕಾರಿ ಫ್ರೂಗ್‌ಗೆ ಕರೆ ಮಾಡಲು ಹೇಳಿದೆ. 133 00:07:46,091 --> 00:07:48,802 -ಸರಿ, ನಾನು ಒಳಗೆ ಹೋಗಿ ಪರಿಣಾಮವನ್ನೆದುರಿಸಬೇಕು. -ಹೂಂ. 134 00:07:48,886 --> 00:07:49,970 ಸರಿ. 135 00:08:16,079 --> 00:08:18,498 ಜನರು - ಬೆಂಟನ್ ಅಲೆಕ್ಸಾಂಡ್ರಿಯ, ವರ್ಜೀನಿಯಾ 136 00:08:18,582 --> 00:08:21,919 ಪ್ರಸ್ತುತ 137 00:08:51,323 --> 00:08:52,324 ಹಾಯ್. 138 00:08:53,617 --> 00:08:54,451 ಹಾಯ್. 139 00:08:55,118 --> 00:08:56,787 ಏನಾದರೂ ಬೇಕಾ? 140 00:09:30,696 --> 00:09:35,867 ಹೇ, ಅಷ್ಟೇನೂ ಕೆಟ್ಟದ್ದಲ್ಲದ ಆ ಬಾಟಲಿಗೆ ಏನಾಯಿತು? 141 00:09:36,743 --> 00:09:38,704 ನಾನದನ್ನು ತರುವವಳಿದ್ದೆ, 142 00:09:38,787 --> 00:09:43,500 ಆದರೆ ನೀನು ಕುಡಿಯುವುದನ್ನು ನಾನು ಎಂದೂ ನೋಡಿಲ್ಲ ಅಂತ ಆಮೇಲೆ ಹೊಳೆಯಿತು. 143 00:09:43,583 --> 00:09:45,294 ನೀನು ಕುಡುಕಿ ಅಲ್ಲ. 144 00:09:46,044 --> 00:09:47,421 ನಾನು ಕುಡಿಯುತ್ತೇನೆ. 145 00:09:48,171 --> 00:09:49,006 ನಾನು ಕುಡಿಯುತ್ತೇನೆ. 146 00:09:49,840 --> 00:09:53,552 ಕುಡುಕರ ಗುಂಪಿನಲ್ಲಿದ್ದರೆ ಅದರಿಂದ ದೂರ ಇರುತ್ತೇನೆ ಅಷ್ಟೇ. 147 00:09:56,596 --> 00:09:57,431 ನಿನ್ನ ಅಮ್ಮನಾ? 148 00:09:58,348 --> 00:09:59,808 ಮತ್ತು ನನ್ನ ಚಿಕ್ಕಮ್ಮ. 149 00:10:00,559 --> 00:10:02,019 ಶ್ರೇಷ್ಠ ವೈದ್ಯೆ. 150 00:10:04,896 --> 00:10:08,233 ಮತ್ತು ಬೆನ್‌ಗೆ ಸ್ಕಾಚ್ ಇಷ್ಟ. ನಿಜಕ್ಕೂ ಉತ್ತಮವಾಗಿರೋದು. 151 00:10:08,317 --> 00:10:09,318 ಖಂಡಿತ. 152 00:10:15,032 --> 00:10:16,366 ಏನು? 153 00:10:16,450 --> 00:10:17,617 ಏನೂ ಇಲ್ಲ. 154 00:10:21,371 --> 00:10:22,372 ಛೇ. 155 00:10:23,373 --> 00:10:24,249 ಏನು? 156 00:10:25,459 --> 00:10:28,378 ಏನೂ… ಇಲ್ಲ! 157 00:10:29,921 --> 00:10:31,256 -ಸರಿ. -ನಾನು… 158 00:10:33,216 --> 00:10:34,760 ನಾನು ಹೋಗಬೇಕು. 159 00:10:35,344 --> 00:10:37,220 ನಾನು… ನಾನು… 160 00:10:38,347 --> 00:10:40,599 ನಾನು ಹೋಗಬೇಕು. ನಾನು… 161 00:10:40,682 --> 00:10:42,309 ಹೌದು, ನಾನು ಹೋಗಬೇಕು. 162 00:10:42,392 --> 00:10:44,519 ಸರಿ, ಯಾಕೆ ಅಂತ ಕೇಳಬಹುದಾ? 163 00:10:44,603 --> 00:10:48,148 ನನ್ನನ್ನು ಕ್ಷಮಿಸು, ಸರಿನಾ? ನಾನು ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದೇನೆ. 164 00:10:48,857 --> 00:10:51,151 ನನ್ನ ಚಿಕ್ಕಮ್ಮ ಈಗಷ್ಟೇ ನಾನು ಮನೆ ಬಿಟ್ಟು ಹೋಗಬೇಕೆಂದು ಹೇಳಿದರು, 165 00:10:51,234 --> 00:10:53,737 ಮತ್ತು ಜಾನೆಟ್ ನನ್ನ ಮೇಲೆ ತುಂಬಾ ಕೋಪಗೊಂಡಿದ್ದಾಳೆ, ಹಾಗಾಗಿ… 166 00:10:53,820 --> 00:10:54,654 ಜಾನೆಟ್? 167 00:10:54,738 --> 00:10:57,115 ನೋಡು, ನಾನು ಏನೋ ವಿಚಿತ್ರವಾಗಿ ವರ್ತಿಸುತ್ತಿದ್ದೇನೆ ಎಂಬಂತೆ ಆಡಬೇಡ. 168 00:10:57,199 --> 00:11:01,370 ನೀನು ಇನ್ನೂ ನಿನ್ನ ಸತ್ತ ಹೆಂಡತಿ ಜೊತೆ ಅವಳು ಬದುಕಿದ್ದಾಳೆ ಎಂಬಂತೆ ಮಾತಾಡುತ್ತಿದ್ದೀಯ. 169 00:11:01,953 --> 00:11:03,538 ಹೌದು, ಅದಕ್ಕೆ… 170 00:11:03,622 --> 00:11:07,000 ಹಾಗಾಗಿ, ನೀನು ಒಂದು ರೀತಿಯಲ್ಲಿ, ವಿಚಿತ್ರವಾದದ್ದನ್ನೇ ಮಾಡುತ್ತಿರೋದು. 171 00:11:07,084 --> 00:11:08,835 -ಸರಿ. -ಆದರೆ, 172 00:11:08,919 --> 00:11:12,506 ಬದುಕದಿರಲು ನೆಪವಾಗಿ ನೀನು ನಿನ್ನ ನೋವನ್ನು ಬಳಸುತ್ತಿರಬಹುದು. 173 00:11:12,589 --> 00:11:15,384 ನಾನು ಏನನ್ನು ಅನುಭವಿಸುತ್ತಿದ್ದೇನೆ ಅಂತ ನಿನಗೆ ಗೊತ್ತಿಲ್ಲ, ಸರಿನಾ? 174 00:11:15,467 --> 00:11:18,678 ತಮಾಷೆಯಾಗಿದೆ. ಇಂದು ಬೆಳಿಗ್ಗೆ ನನ್ನನ್ನು ಅಮಾನತುಗೊಳಿಸಿದರು ಅಂತ ನಿನಗೆ ಗೊತ್ತಾ? 175 00:11:18,762 --> 00:11:19,846 -ಏನು? -ಹೌದು. 176 00:11:20,430 --> 00:11:24,935 ಹೌದು, ಆ ದಿನ ನಿನ್ನ ದೊಡ್ಡ ಟ್ರಕ್‌ನಲ್ಲಿ ನಾವು ಮಾಡಿದ ಆ ಸಣ್ಣ ಪ್ರಯಾಣಕ್ಕಾಗಿ. 177 00:11:25,018 --> 00:11:26,686 ಸರಿ, ಇದು ಖಂಡಿತ ಹುಚ್ಚುತನ. 178 00:11:26,770 --> 00:11:30,023 ಹೂಂ, ಆದರೆ ನಮ್ಮಲ್ಲಿ ಕೆಲವರಿಗೆ ನಿಯಮಗಳಿರುವ ನಿಜವಾದ ಉದ್ಯೋಗಗಳಿವೆ. 179 00:11:30,107 --> 00:11:33,527 ಹೌದು, ನಾವೆಲ್ಲರೂ ಶ್ರೀಮಂತ ಸ್ವತಂತ್ರ ಪ್ರವೀಣರಲ್ಲ 180 00:11:33,610 --> 00:11:35,195 ಇಷ್ಟ ಬಂದದ್ದನ್ನು ಮಾಡಿಕೊಂಡಿರಲು. 181 00:11:35,278 --> 00:11:39,408 ನಾನು ಹಾಗೇನೇ. ನಾನು ಅಕ್ಷರಶಃ ಹಾಗೇನೇ. 182 00:11:39,491 --> 00:11:42,369 ನಿನ್ನ ಜೀವನದಲ್ಲಿ ನಡೆಯುತ್ತಿರುವ ಕೆಟ್ಟ ವಿಷಯಗಳಿಗೆ ನನ್ನನ್ನು ದೂಷಿಸಬೇಡ. 183 00:11:42,452 --> 00:11:44,454 -ಯಾಕೆ ದೂಷಿಸಬಾರದು? ಅದಕ್ಕೆ ನೀನೇ ಕಾರಣ. -ಸುಮ್ಮನಿರು. 184 00:11:44,538 --> 00:11:47,249 ಹೇ, ದರಿದ್ರದವಳೇ! ಅವರು ನನ್ನನ್ನು ಕೆಲಸದಿಂದ ತೆಗೆದುಹಾಕಬಹುದು! 185 00:11:47,833 --> 00:11:51,002 ನನಗೆ ಈ ಕೆಲಸ ಬೇಕು. ನೀನು ಹಾಗೇ, ಇಲ್ಲಿಂದ ಹೊರನಡೆದು ಬಿಡುತ್ತೀಯಾ? 186 00:11:54,589 --> 00:11:55,424 ಹೌದು. 187 00:12:00,762 --> 00:12:02,806 ಹೌದು, ಅವಳು ಅದನ್ನು ಡಾ. ಡೆಬ್ಬೀಗೆ ಕೊಟ್ಟಳು. 188 00:12:03,557 --> 00:12:06,685 ಹೌದು, ಥೋರ್ ಚಂದ್ರನ ಮೇಲೆ ತಯಾರಿಸುತ್ತಿದ್ದ ನಕಲಿ ಚರ್ಮ ಅದು ಎಂದು ನನಗೆ ಖಚಿತವಿದೆ. 189 00:12:07,894 --> 00:12:10,313 ಫೆಡರಲ್ ಅಧಿಕಾರಿಗಳು ಈ ಜಿಂಕ್ಸ್ ಸ್ಲೇಟರ್‌ನನ್ನು ಬಂಧಿಸಿದರು. 190 00:12:11,815 --> 00:12:16,069 ಹೌದು, ಗ್ವೆನ್ ಹೇನಿಯ ಕೊಲೆಗಾಗಿ. ಅವನು ಅವಳ ಪ್ರಿಯಕರನಾಗಿದ್ದ. 191 00:12:17,487 --> 00:12:19,573 ಅವನೇ ಅದನ್ನು ಮಾಡಿದ್ದಾನೆ ಅಂತ ಅವಳು ಅಂದುಕೊಳ್ಳಲ್ಲ. 192 00:12:20,407 --> 00:12:22,951 ಕ್ಯಾಮಿ ರಮಾಡಳನ್ನು ಕೊಲ್ಲಲು ಪ್ರಿಯಕರನಿಗೆ ಯಾವುದೇ ಕಾರಣವಿರಲಿಲ್ಲ. 193 00:12:24,202 --> 00:12:28,331 ಸರಣಿ ಹಂತಕನಿದ್ದಾನೆ ಅಂತ ಡಾ. ಸ್ಕಾರ್ಪೆಟ್ಟ ನಂಬಿದ್ದಾಳೆ, 194 00:12:28,415 --> 00:12:31,918 ಮತ್ತು, ಎಲ್ವಿನ್, ಅವಳು ಹೇಳುತ್ತಿರುವುದು ಸರಿಯಾಗಿದ್ದರೆ… ಅದು ನಮ್ಮ ತಪ್ಪು. 195 00:12:32,002 --> 00:12:33,503 ನನ್ನ ಮೇಲೆ ಕೂಗಾಡಬೇಡ. 196 00:12:35,005 --> 00:12:36,673 ನನ್ನ ಮೇಲೆ ಕೂಗಾಡಬೇಡ! 197 00:12:40,552 --> 00:12:43,013 ಹೌದು, ಮುಂದೆ ಏನು ಮಾಡಬೇಕಂತ ನನಗೆ ಗೊತ್ತು. 198 00:12:43,847 --> 00:12:46,266 ಮುಖ್ಯ ವೈದ್ಯಕೀಯ ಪರೀಕ್ಷಕರು 199 00:12:52,814 --> 00:12:53,940 ಅದು ನಿಜಾನಾ? 200 00:12:56,318 --> 00:12:57,319 ಯಾವುದು? 201 00:12:57,402 --> 00:12:59,529 ನೀವದನ್ನು ಬಗೆಹರಿಸಿದ್ದು? ನೀವು ಕೊಲೆಗಾರನನ್ನು ಹಿಡಿದಿದ್ದು? 202 00:12:59,613 --> 00:13:01,031 ಎಲ್ಲರೂ ಅದನ್ನೇ ಹೇಳುತ್ತಿದ್ದಾರೆ. 203 00:13:02,616 --> 00:13:04,534 ಇಲ್ಲ. ಅದು ನಾನಲ್ಲ. 204 00:13:06,495 --> 00:13:10,332 ಹೇ, ನೀವು ನನ್ನನ್ನು ನಂಬಬಹುದು ಅಂತ ನಿಮಗೆ ಗೊತ್ತಲ್ವಾ? ನಾರಿ ಶಕ್ತಿ? 205 00:13:13,835 --> 00:13:15,420 ಶವ ಮೇಜಿನ ಮೇಲಿದೆಯಾ? 206 00:13:16,713 --> 00:13:18,757 ಹೌದು, ಮೇಡಮ್. ನಾನು ಅದನ್ನೇ ಹೇಳಲು ಬಂದಿದ್ದು. 207 00:13:19,341 --> 00:13:22,010 ರಾಯ್ ಮೆಕ್ಕೊರ್ಕಲ್ ಶವವನ್ನು ಮರಣೋತ್ತರ ಪರೀಕ್ಷೆಯ ಕೋಣೆಯಲ್ಲಿ ಇಟ್ಟಾಗಿದೆ. 208 00:13:22,093 --> 00:13:23,720 -ಧನ್ಯವಾದ, ಮೇಡಮ್. -ಅದ್ಭುತ. 209 00:14:23,572 --> 00:14:30,370 ಮೃತರು 33 ವರ್ಷದ, ಬಿಳಿಬಣ್ಣದ… ಪುರುಷ. 210 00:14:35,584 --> 00:14:37,919 ಡಿಟೆಕ್ಟಿವ್ ಮರಿನೋ ಅವರನ್ನು ಹುಡುಕುತ್ತಿದ್ದೇನೆ. ಪೀಟ್ ಮರಿನೋ? 211 00:14:38,003 --> 00:14:38,920 ಅವರು ಲಭ್ಯವಿಲ್ಲ. 212 00:14:39,004 --> 00:14:41,172 -ಲಭ್ಯವಿಲ್ಲ ಅಂದರೆ ಏನರ್ಥ? -ಏಜೆಂಟ್ ವೆಸ್ಲಿ! 213 00:14:42,132 --> 00:14:44,551 ಮಿಸ್ಟರ್ ಬೋಲ್ಟ್ಸ್. ಯಾರನ್ನೋ ಬಂಧಿಸಿದ್ದೀರಂತೆ. 214 00:14:44,634 --> 00:14:48,013 ಹೂಂ, ಅದು ಆಗಲಿಲ್ಲ. ಡಾ. ಸ್ಕಾರ್ಪೆಟ್ಟ ಶಂಕಿತನನ್ನು ಗುರುತಿಸಿದರು, 215 00:14:48,096 --> 00:14:51,349 ಡಿಟೆಕ್ಟಿವ್ ಮರಿನೋ ಅವನನ್ನು ಬಂಧಿಸಲು ಹೋದರು ಮತ್ತು… 216 00:14:52,517 --> 00:14:54,102 ಅವನ ದೇಹಕ್ಕೆ ಗುಂಡುಗಳನ್ನು ಹೊಡೆದರು. 217 00:14:54,185 --> 00:14:55,270 ಡಿಟೆಕ್ಟಿವ್ ಮರಿನೋ ಎಲ್ಲಿ? 218 00:14:55,353 --> 00:14:57,689 ಆಂತರಿಕ ವ್ಯವಹಾರಗಳ ವಿಭಾಗದವರು ಅವರ ವಿಚಾರಣೆ ನಡೆಸುತ್ತಿದ್ದಾರೆ. 219 00:14:58,940 --> 00:14:59,941 ಅದು ಸ್ವಯಂರಕ್ಷಣಾ ದಾಳಿಯಾ? 220 00:15:01,276 --> 00:15:02,277 ಕಾದು ನೋಡಬೇಕು. 221 00:15:03,361 --> 00:15:04,195 ಆಬ್ಬಿ. 222 00:15:06,698 --> 00:15:08,158 ಬಿಡು, ಆಬ್ಬಿ. 223 00:15:11,786 --> 00:15:14,289 ನಾವು ಹಳೆಯದನ್ನು ಮರೆಯುವ ಸಮಯ ಬಂದಿದೆ ಅಂತ ನಿನಗನಿಸಲ್ವಾ? 224 00:15:19,169 --> 00:15:20,128 ಇದು ನಿಜಾನಾ? 225 00:15:21,338 --> 00:15:23,214 ನನ್ನ ಸಹೋದರಿಯ ಕೊಲೆಗಾರ ಸತ್ತಿದ್ದಾನಾ? 226 00:15:24,257 --> 00:15:25,342 ಹೌದು, ಅದು ನಿಜ. 227 00:15:29,137 --> 00:15:32,724 ಮತ್ತು ನಾನು ಮರೆಯುತ್ತಿರೋದು ಒಂದೇ ವಿಷಯವನ್ನು, ನೀನು ಮನುಷ್ಯ ಅನ್ನೋದನ್ನು. 228 00:15:35,060 --> 00:15:36,227 ನೀನು ನನಗೇನು ಮಾಡಿದೆ ಗೊತ್ತು, 229 00:15:38,021 --> 00:15:39,356 ಮತ್ತು ನಾನು ಸೇಡು ತೀರಿಸಿಕೊಳ್ಳುವೆ. 230 00:15:41,858 --> 00:15:44,444 ನಾನು ಬಂದಾಗ ಮಹಿಳೆಯೊಬ್ಬರು ಕಿರುಚುವುದನ್ನು ಕೇಳಿದೆ… 231 00:15:44,527 --> 00:15:47,113 ಮತ್ತು ಡಾ. ಸ್ಕಾರ್ಪೆಟ್ಟ ನಿಮಗೆ ವಿಳಾಸ ನೀಡಿದ ನಂತರ ಇದು ನಡೆದಿದ್ದಾ? 232 00:15:47,197 --> 00:15:49,949 ನನಗೆ ಡಾ. ಸ್ಕಾರ್ಪೆಟ್ಟ ಅವರಿಂದ ವಿಳಾಸ ಸಿಕ್ಕಿದ್ದು. 233 00:15:50,033 --> 00:15:52,994 911 ಟೇಪ್‌ಗಳನ್ನು ಪರಿಶೀಲಿಸಲು ನಾನು ಅವರನ್ನು ರವಾನೆ ಕೇಂದ್ರದಲ್ಲಿ ಬಿಟ್ಟೆ. 234 00:15:53,745 --> 00:15:56,456 ಮತ್ತು ಇದು ಸಾಮಾನ್ಯವಾಗಿ ವೈದ್ಯಕೀಯ ಪರೀಕ್ಷಕರ ಕೆಲಸಾನಾ? 235 00:15:56,539 --> 00:15:57,707 ಹೆಚ್ಚಾಗಿ ಅಲ್ಲ. 236 00:15:57,790 --> 00:16:00,126 ಹೇಗೋ, ನಾನು ಆ ವಿಳಾಸಕ್ಕೆ ಹೋದೆ, 237 00:16:00,210 --> 00:16:02,212 ಮನೆಯೊಳಗಿನಿಂದ ಮಹಿಳೆಯ ಕಿರುಚಾಟ ಕೇಳಿತು, 238 00:16:02,295 --> 00:16:04,506 ಏನಾಗುತ್ತಿದೆ ಅಂತ ತಿಳಿಯುವಷ್ಟರಲ್ಲಿ, ಅವನು ನನ್ನ ಮೇಲೆ ಎರಗಿದ. 239 00:16:05,340 --> 00:16:07,008 ರಾಯ್ ಮೆಕ್ಕೋರ್ಕಲ್ ನಿಮ್ಮ ಮೇಲೆ ದಾಳಿ ಮಾಡಿದನಾ? 240 00:16:07,092 --> 00:16:10,512 ಅವನು ನನ್ನನ್ನು ಒಳಗೆ ಎಳೆದೊಯ್ದನು, ಅಲ್ಲಿ ನನಗೆ ಮಹಿಳೆಯ ಕಿರುಚಾಟ ಟಿವಿಯಿಂದ ಬರುತ್ತಿದೆ 241 00:16:10,595 --> 00:16:11,888 ಅಂತ ಗೊತ್ತಾಯಿತು. 242 00:16:32,617 --> 00:16:36,705 ಸಾವಿಗೆ ಕಾರಣ, ಕತ್ತಿಗೆ ಮೂರು ಗುಂಡೇಟುಗಳು… 243 00:16:37,288 --> 00:16:39,749 ಸಣ್ಣ-ಕ್ಯಾಲಿಬರ್ ಗುಂಡುಗಳಿಂದ ಉಂಟಾಗಿರುವಂತಹವು. 244 00:16:43,086 --> 00:16:46,715 ಕತ್ತಿನ ಭಾಗ ಜರ್ಜರಿತವಾಗಿದೆ, 245 00:16:46,798 --> 00:16:48,925 ಉಸಿರಿನ ಕೊಳವೆ ಜಜ್ಜಲ್ಪಟ್ಟಿದೆ, 246 00:16:49,008 --> 00:16:55,974 ಪಿಂಗಾಣಿ ತಟ್ಟೆಯಂತಹ ಯಾವುದೋ ವಸ್ತುವಿನಿಂದ ಉಂಟಾದ ಆಘಾತವನ್ನು ಸೂಚಿಸುತ್ತಿದೆ. 247 00:16:57,475 --> 00:17:00,061 ನನ್ನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಬಾಸ್. ಅಭಿನಂದನೆ ಹೇಳಲು ಬಂದೆ, 248 00:17:00,145 --> 00:17:01,980 ಮುಖಾಮುಖಿಯಾಗಿ, ಖಾಸಗಿಯಾಗಿ. 249 00:17:04,691 --> 00:17:06,734 ಕತ್ತಿನ ಮೇಲಿನ ಗಂಭೀರ ಗಾಯವಿದೆ. 250 00:17:08,194 --> 00:17:13,366 ಡಿಟೆಕ್ಟಿವ್ ಮರಿನೋ ಅದನ್ನು ನಾಶಮಾಡಲು ನೋಡಿದಂತಿದೆ… 251 00:17:13,450 --> 00:17:14,992 ಮಾಸ್ಕ್ ಧರಿಸುವಿರಾ, ಡಾ. ರೆಡ್ಡಿ? 252 00:17:15,076 --> 00:17:16,786 ಅಗತ್ಯವಿಲ್ಲ, ನಾನು ಇಲ್ಲಿ ಉಳಿಯುತ್ತಿಲ್ಲ. 253 00:17:17,328 --> 00:17:21,915 ನಮ್ಮ ಗೌರವಾನ್ವಿತ ನಾಯಕಿಗೆ ಅದೃಷ್ಟದ ಹಾರೈಕೆಯನ್ನು ಸಲ್ಲಿಸುತ್ತಿದ್ದೇನಷ್ಟೇ. 254 00:17:24,794 --> 00:17:25,878 ಸುಳಿವು ಸಿಕ್ಕಿತಾ, ಲೂಲು? 255 00:17:26,921 --> 00:17:28,590 ಯಾರೋ ಗಾಳಕ್ಕೆ ಸಿಕ್ಕಿಬಿದ್ದಿದ್ದಾರೆ. 256 00:17:28,673 --> 00:17:31,926 ವಿಚಿತ್ರವೆಂದರೆ, ಅವರು ಆಂಟಿ ಕೇ ಕಚೇರಿಯವರು. 257 00:17:33,678 --> 00:17:36,890 ಹೇ, ಕೇಳು. ನಮ್ಮ ಬಳಿ ದೊಡ್ಡ ಸುದ್ದಿಯಿದೆ. 258 00:17:36,973 --> 00:17:39,225 ಹೂಂ, ನಾನು ಬಟ್ಟೆ ಬದಲಾಯಿಸಿ ಬರುವೆ. 259 00:17:41,019 --> 00:17:42,312 ಹುಡುಗಿ ಹತ್ತಿರದಲ್ಲಿದ್ದಾಳೆ. 260 00:17:42,395 --> 00:17:45,315 ನಿನ್ನ ಕಂಪ್ಯೂಟರ್ ಅನ್ನು ಯಾರು ಹ್ಯಾಕ್ ಮಾಡುತ್ತಿದ್ದಾರೆ ಅಂತ ಅವಳಿಗೆ ಗೊತ್ತು. 261 00:17:45,398 --> 00:17:46,483 ಏನಿದು? 262 00:17:50,111 --> 00:17:52,989 -ಏನಾಯಿತು? -ದೇವರೇ! ಅಯ್ಯೋ, ದೇವರೇ! 263 00:17:53,072 --> 00:17:55,909 ದೇವರೇ, ಕೇ, ನೀನು ನನ್ನನ್ನು ಹೆದರಿಸುತ್ತಿದ್ದೀಯ. 264 00:17:58,244 --> 00:18:00,246 -ನಾನು ಈಗಷ್ಟೇ ಒಬ್ಬ ಮನುಷ್ಯನನ್ನು ಕೊಂದೆ. -ಏನು? 265 00:18:02,373 --> 00:18:05,502 ಆ ಕೊಲೆಗಾರ, ನಾನು ಅವನನ್ನು ಕೊಂದೆ. 266 00:18:05,585 --> 00:18:06,920 ಒಂದು ತಟ್ಟೆ ಬಳಸಿ ಕೊಂದೆ. 267 00:18:08,463 --> 00:18:11,341 ನನಗೆ ಉಸಿರಾಡಲು ಆಗುತ್ತಿಲ್ಲ. ನನಗೆ ಉಸಿರಾಡಲು ಆಗುತ್ತಿಲ್ಲ. 268 00:18:11,424 --> 00:18:13,301 ಅದನ್ನು ಮುಚ್ಚಿಹಾಕಲು ಯಾರೋ ಅವನಿಗೆ ಗುಂಡು ಹೊಡೆದರು. 269 00:18:13,384 --> 00:18:14,886 -ಯಾರು? -ಅದು ಮುಖ್ಯವಲ್ಲ. 270 00:18:14,969 --> 00:18:16,137 ಅದು ಮುಖ್ಯ ಅನಿಸುತ್ತೆ. 271 00:18:16,221 --> 00:18:18,473 ಈಗ ನಾನು ಹೋಗಿ ವೀರೆಯಂತೆ ಸನ್ಮಾನಗೊಳ್ಳಬೇಕು 272 00:18:18,556 --> 00:18:20,892 ಮತ್ತು ಪ್ರಕರಣವನ್ನು ಭೇದಿಸಿದ ಕೀರ್ತಿಯನ್ನು ಪಡೆಯಬೇಕು. 273 00:18:20,975 --> 00:18:24,813 ಮತ್ತು ಇದು ನನ್ನ ಅಂತ್ಯ, ಮತ್ತು ನನ್ನ ವೃತ್ತಿಜೀವನದ ಅಂತ್ಯ ಅಂತ ನನಗನಿಸುತ್ತೆ. 274 00:18:24,896 --> 00:18:26,981 ಮತ್ತು ಇದು ನಿಯಂತ್ರಣವಿಲ್ಲದ ರೈಲಿನಂತಿದೆ. 275 00:18:27,065 --> 00:18:29,734 ಹೇ. ಹೇ, ನನ್ನನ್ನು ನೋಡು. 276 00:18:30,318 --> 00:18:33,446 ನಿನ್ನ ಬಳಿ ವೈದ್ಯಕೀಯ ಪದವಿ ಇದೆ, ಕಾನೂನು ಪದವಿ ಇದೆ. 277 00:18:33,530 --> 00:18:36,115 ಇವೆಲ್ಲದಕ್ಕೂ ನೀನು ತುಂಬಾ ಹಣ ಖರ್ಚು ಮಾಡಿದ್ದೀಯ, ಮತ್ತು ಯಾತಕ್ಕಾಗಿ? 278 00:18:36,825 --> 00:18:40,703 ಒಂದು ಕೆಟ್ಟ ಕೆಲಸ ಮತ್ತು ಒಂದು ಕೆಟ್ಟ ಜೀವನಕ್ಕಾಗಾ? ಕೇಳು. 279 00:18:40,787 --> 00:18:44,290 ಕೇಳು, ಕೇ, ಹೋಗಿ ಸ್ವಲ್ಪ ಶ್ರೇಯ ತೆಗೆದುಕೋ. 280 00:18:53,758 --> 00:18:55,468 ಆದರೆ ನಾನವನನ್ನು ಕೊಂದೆ. 281 00:18:56,302 --> 00:18:59,639 ಅದಕ್ಕೇನೀಗ? ಅವನು ಸಾಯಲೇಬೇಕಿತ್ತು. 282 00:19:01,683 --> 00:19:02,517 ಅದು ತಪ್ಪು. 283 00:19:02,600 --> 00:19:04,435 ಅವನು ನಾಲ್ಕು ಮಹಿಳೆಯರನ್ನು ಕೊಂದನು. 284 00:19:04,519 --> 00:19:05,854 -ಐದು. -ಐದು! 285 00:19:06,896 --> 00:19:10,859 ಅವನು ಒಬ್ಬ ಅಸಹ್ಯಕರ, ಹೇಸಿಗೆಯ ಕೊಲೆಗಾರನಾಗಿದ್ದ ಮತ್ತು ಅವನನ್ನು ತಡೆಯಬೇಕಿತ್ತು. 286 00:19:10,942 --> 00:19:13,736 ನೀನದನ್ನು ಮಾಡಿದೆ. ನೀನದನ್ನು ಮಾಡಿದೆ. 287 00:19:13,820 --> 00:19:16,865 ದೇವರು ನಿನಗೆ ನೀಡಿದ ಬುದ್ಧಿವಂತಿಕೆಗೆ ಸ್ವಲ್ಪ ಶ್ರೇಯ ತಗೋ. 288 00:19:17,615 --> 00:19:19,868 ನಿಜ ಹೇಳುವೆ, ಅದನ್ನು ಆನಂದಿಸು. 289 00:19:23,079 --> 00:19:25,707 ನೀನು ಕೇ ಸ್ಕಾರ್ಪೆಟ್ಟ. 290 00:19:27,292 --> 00:19:29,043 ಅದನ್ನು ಎಂದಿಗೂ ಮರೆಯಬೇಡ. 291 00:19:37,176 --> 00:19:39,053 -ನಿನ್ನನ್ನು ಬಂಧಿಸಿದರಾ? -ಹೌದು. 292 00:19:39,137 --> 00:19:40,847 ಒಬ್ಬ ವ್ಯಕ್ತಿಯನ್ನು ಹೊಡೆದದ್ದಕ್ಕಾಗಿ? 293 00:19:41,598 --> 00:19:42,765 ಒಬ್ಬ ಶಂಕಿತನನ್ನು. 294 00:19:44,809 --> 00:19:50,815 ಮತ್ತು ನೀನು ಕೋಪದಲ್ಲಿ ರೆಸ್ಟೋರೆಂಟ್‌ನಲ್ಲಿ ನನ್ನನ್ನು ಬಿಟ್ಟುಹೋದ ದಿನವೇ ಇದು ನಡೆದದ್ದಾ? 295 00:19:50,899 --> 00:19:53,276 ಅದನ್ನು ಮತ್ತೆ ಯಾಕೆ ನೆನಪಿಸಿಕೊಳ್ಳಬೇಕು? ನೋಡು, ಇದೊಂದು ಸರಳ ವಿಷಯ. 296 00:19:53,359 --> 00:19:55,612 ಆ ವ್ಯಕ್ತಿ ದೀರ್ಘವಾದ, ಅಪರಾಧ ದಾಖಲೆಯನ್ನು ಹೊಂದಿರುವ ಸೈಕೋ. 297 00:19:55,695 --> 00:19:57,447 ಈ ಆರೋಪ ಮಾನ್ಯವಾಗಲ್ಲ. 298 00:19:58,406 --> 00:19:59,490 ಅದು ನಿನಗೆ ಹೇಗೆ ಗೊತ್ತು? 299 00:19:59,574 --> 00:20:02,368 -ಯಾಕೆಂದರೆ ನನಗೆ ಈ ವಿಷಯಗಳ ಬಗ್ಗೆ ಗೊತ್ತು. -ಅದು ನಿನಗೆ ಹೇಗೆ ಗೊತ್ತು, ಪೀಟರ್? 300 00:20:02,452 --> 00:20:03,995 ಏನು? ಯಾಕೆಂದರೆ ನಾನು ಪೊಲೀಸ್. 301 00:20:04,078 --> 00:20:05,705 -ಅದೊಂದು ಅಪರಾಧ. -ಅದು ಅಪರಾಧವಲ್ಲ. 302 00:20:05,788 --> 00:20:08,666 -ಅದು ಸಾಬೀತಾಗದ ಹೊರತು ಅಪರಾಧವಲ್ಲ. -ಅದು ಅಪರಾಧ. 303 00:20:08,750 --> 00:20:09,584 ಸರಿ. 304 00:20:11,044 --> 00:20:11,878 ಏನೂ ಆಗಲ್ಲ. 305 00:20:12,670 --> 00:20:13,796 ಆಗುತ್ತೆ. ನಾನು ಹೋಗುತ್ತಿದ್ದೇನೆ. 306 00:20:13,880 --> 00:20:15,089 ಏನು ಗೊತ್ತಾ? ನನಗೆ ಸಾಕಾಗಿದೆ. 307 00:20:15,173 --> 00:20:18,301 -ಏನರ್ಥ? ನನ್ನನ್ನ ಬಿಟ್ಟು ಹೋಗುತ್ತಿದ್ದೀಯಾ? -ಇಲ್ಲ. ನಾವು ಹೋಗುತ್ತಿದ್ದೇವೆ. ಇಂದು ರಾತ್ರಿ. 308 00:20:18,384 --> 00:20:20,094 -ನಾನು ಹೋಟೆಲ್‌ಗೆ ಹೋಗುತ್ತಿದ್ದೇನೆ. -ಏನು? 309 00:20:20,178 --> 00:20:22,263 ನಾವು ಹೋಟೆಲ್‌ಗೆ ಹೋಗುತ್ತಿದ್ದೇವೆ. ನಾನು ಪ್ಯಾಕ್ ಮಾಡುವೆ. 310 00:20:22,347 --> 00:20:23,389 -ಚಿನ್ನ. -ನನಗೆ ಸಾಕಾಗಿದೆ! 311 00:20:24,390 --> 00:20:26,684 -ಛೇ! ಥತ್! -ಥತ್! ಅಯ್ಯೋ! ಏನಾಯಿತು? 312 00:20:26,768 --> 00:20:28,061 ಏನದು? ಹಲೋ? 313 00:20:28,603 --> 00:20:29,604 ಲೂಸಿ? ಚಿನ್ನ? 314 00:20:29,687 --> 00:20:31,648 -ಛೇ! -ಛೇ. ಛೇ. ಛೇ. 315 00:20:31,731 --> 00:20:34,025 -ಹೇ, ಇದು ಬೆಂಟನ್‌ನ ಒಳ್ಳೆಯ ಮದ್ಯ. -ಏನಾಯಿತು? 316 00:20:34,108 --> 00:20:36,152 -ಏನಿಲ್ಲ. ದೇವರೇ. -ನೀನು ಆರಾಮಿದ್ದೀಯಾ? 317 00:20:36,235 --> 00:20:40,531 ನಾನಾ? ಬಂಧನಕ್ಕೊಳಗಾದವರು ನೀವು. ನಾನು ನಿಮ್ಮನ್ನು ಜಾಮೀನಿನ ಮೇಲೆ ಬಿಡಿಸಿದೆ. 318 00:20:40,615 --> 00:20:41,616 ಧನ್ಯವಾದ ಬೇಕಿಲ್ಲ. 319 00:20:41,699 --> 00:20:44,160 -ಸರಿ. -ಅವರು ಶ್ರೇಯ ತೆಗೆದುಕೊಂಡಿರಬೇಕಲ್ಲಾ? 320 00:20:44,243 --> 00:20:46,579 ಅವರು ಅಂದರೆ ಯಾರು? ಡಾಕ್ಟರಾ? 321 00:20:46,663 --> 00:20:51,042 ಹೌದು. ನಿಮಗಾಗಿ ಕಾಯುತ್ತಿದ್ದಾಗ ನಾವಿಬ್ಬರೂ ಜಗಳವಾಡಿದೆವು 322 00:20:51,125 --> 00:20:55,672 ಮತ್ತು ನಾನು ಅಲ್ಲಿಂದ ಹೊರಟೆ ಯಾಕೆಂದರೆ ಅವರು… ತುಂಬಾ ಕೆಟ್ಟವರು. 323 00:20:55,755 --> 00:20:59,258 ಇರು. ಒಂದು ನಿಮಿಷ. "ಜಗಳ?" "ಕೆಟ್ಟವಳು?" ಎಲ್ಲ ಹೇಳು. 324 00:20:59,342 --> 00:21:03,012 ಹೌದು. ಆಂಟಿ ನಿಮ್ಮ ರಾಗವನ್ನೇ ಹಾಡಲಾರಂಭಿಸಿದರು ಮತ್ತು ನನ್ನನ್ನು ಮನೆಯಿಂದ ಹೊರಹೋಗಲು ಹೇಳಿದರು. 325 00:21:03,096 --> 00:21:04,597 ನನ್ನನ್ನು ಮನೆಯಿಂದ ಹೊರಹೋಗುವಂತೆ ಹೇಳಿದರು. 326 00:21:04,681 --> 00:21:07,016 ಬಹುಶಃ ಇದೆಲ್ಲದರ ಬಗ್ಗೆ ಮಾತಾಡಲು ಇದು ಸೂಕ್ತ ಸಮಯವಲ್ಲ. 327 00:21:07,100 --> 00:21:09,686 -ಸುಮ್ಮನಿರಿ. -ನಿನಗೆ ಸಂಘರ್ಷವೇ ಇಷ್ಟವಿಲ್ಲ. 328 00:21:09,769 --> 00:21:11,604 ಅದು ನಿನ್ನ ಮುಷ್ಟಿಯಿಂದ ಅಲ್ಲದಿದ್ದರೆ. 329 00:21:11,688 --> 00:21:14,399 ಸರಿ, ಅದು ನಿಜವಲ್ಲ, ಸರಿನಾ? ಬಹುಶಃ ಮೊದಲ ಭಾಗ ಅಷ್ಟೇ ಸರಿ. 330 00:21:14,482 --> 00:21:15,984 ಸರಿ. ನಾನು ಹೋಗುವೆ. 331 00:21:16,067 --> 00:21:17,276 ಇರು. ನೀನು ಎಲ್ಲಿಗೆ ಹೊರಟೆ? 332 00:21:17,360 --> 00:21:18,778 ಇನ್ನೊಂದು ಬಾಟಲಿ ತರಲು. 333 00:21:18,861 --> 00:21:22,865 ಇಲ್ಲ, ಇಲ್ಲ. ಚಿನ್ನ, ಚಿನ್ನ, ನಾವು ಇಂದು ರಾತ್ರಿ ಹೋಟೆಲ್‌ಗೆ ಹೋಗಲಿದ್ದೇವೆ, 334 00:21:22,949 --> 00:21:24,826 ಪೀಟರ್ ಮತ್ತು ನಾನು. ನಿನಗೆ ಒಂದು ಕೋಣೆ ತಗೊಳ್ಳೋಣ. 335 00:21:24,909 --> 00:21:26,661 -ಪಕ್ಕದಲ್ಲೇ ಇರುವಂತಹದ್ದಲ್ಲ. -ಹೋಗುತ್ತಿದ್ದೇವಾ? 336 00:21:28,079 --> 00:21:29,205 ನೀನದನ್ನು ನಂಬಲೇಬೇಕು. 337 00:21:33,376 --> 00:21:38,047 ಹೀಗೆ ಮಧ್ಯರಾತ್ರಿ ಪ್ಯಾಕ್ ಮಾಡಿಕೊಂಡು ಮನೆಯಿಂದ ಹೋಗುವುದು ವಿಚಿತ್ರವೆನಿಸುತ್ತಿದೆ. 338 00:21:38,131 --> 00:21:39,132 ಅಪರಾಧಿಯಂತೆ ಅನಿಸುತ್ತಿದೆ. 339 00:21:39,215 --> 00:21:41,134 ಈಗಷ್ಟೇ ಬಂಧನಕ್ಕೊಳಗಾದವನು ನೀನು. 340 00:21:41,217 --> 00:21:42,343 ಅದನ್ನು ಸಾಕು ಮಾಡುವೆಯಾ? 341 00:21:42,427 --> 00:21:44,053 -ದಯವಿಟ್ಟು? ನಾನು ತಾಳ್ಮೆ ಕಳೆದುಕೊಂಡೆ. -ಸರಿ. 342 00:21:44,137 --> 00:21:45,888 -ಕೆಲವೊಮ್ಮೆ ಆಗುತ್ತೆ. -ಸರಿ. ಅದು ನಿನ್ನ ತಪ್ಪಲ್ಲ. 343 00:21:46,681 --> 00:21:47,849 ಹೌದಾ? ಮತ್ತೆ ಯಾರ ತಪ್ಪು? 344 00:21:47,932 --> 00:21:49,017 ನನ್ನ ತಂಗಿಯದ್ದು. 345 00:21:49,100 --> 00:21:53,604 ಈ ಮನೆಯಲ್ಲಿರುವ ಪ್ರತಿಯೊಬ್ಬರ ಮೇಲೂ ಅವಳು ಹಾನಿಕಾರಕ ಪ್ರಭಾವ ಬೀರುತ್ತಾಳೆ. 346 00:21:53,688 --> 00:21:59,068 ಅವಳಿಂದ ನನ್ನಂತಹವಳ ಉತ್ಸಾಹವೂ ಕಡಿಮೆಯಾಗುತ್ತೆ ಗೊತ್ತಾ? 347 00:21:59,152 --> 00:22:02,321 ಪೀಟರ್, ನನಗೆ ಸಾಕಾಗಿದೆ. ಸಾಕು. 348 00:22:02,405 --> 00:22:05,783 ಇದು ನನ್ನ ಪ್ರಿಯನಿಗೆ ಜೈಲು ಶಿಕ್ಷೆಯಲ್ಲಿ ಕೊನೆಗೊಳ್ಳುವ ಮೊದಲು 349 00:22:05,867 --> 00:22:08,411 ಅಥವಾ ನನ್ನ ಮಗಳು ಹುಚ್ಚಾಸ್ಪತ್ರೆ ಸೇರುವಂತಾಗುವ ಮೊದಲು. ನಾವು ಹೋಗೋಣ. 350 00:22:08,494 --> 00:22:11,372 -ಪ್ಯಾಕ್ ಮಾಡು. ಯಾರಿಗೆ? -ನಾವು ಹೋಗುವ ಮೊದಲು ಕನಿಷ್ಠ ಅವಳಿಗೆ ಹೇಳೋಣಾ? 351 00:22:12,540 --> 00:22:15,251 ನನ್ನ ತಂಗಿಗಾ? ಅವಳ ಬಗ್ಗೆ ಏನು ನಿನ್ನ ಗೀಳು? 352 00:22:15,334 --> 00:22:17,086 ನನಗೆ ಅವಳ ಬಗ್ಗೆ ಗೀಳಿಲ್ಲ. 353 00:22:18,671 --> 00:22:21,174 ಗೊತ್ತಾ, ಜಾನೆಟ್ ಪ್ರಕಾರ ನಿನಗೆ… 354 00:22:21,257 --> 00:22:24,385 -ಹಾಂ? -…ಅವಳ ಮೇಲೆ ಪ್ರೀತಿ ಇದೆ. 355 00:22:24,469 --> 00:22:27,847 ನಿಜವಾಗಿಯೂ, ಜಾನೆಟ್? ರೋಬೋಟ್ ಜಾನೆಟ್ ನನಗೆ… ಚಿನ್ನ, ಇದೆಂತಹ ಹುಚ್ಚುತನ. 356 00:22:28,931 --> 00:22:30,183 ಅದು ನಿಜವಾಗಿಯೂ ಹುಚ್ಚುತನವಾ? 357 00:22:30,266 --> 00:22:33,811 ನೀನವಳನ್ನು ನಾಯಿಯಂತೆ ಹಿಂಬಾಲಿಸುತ್ತೀಯ. 358 00:22:33,895 --> 00:22:36,105 ಅವಳಿಗಾಗಿ ಮಾಡಿದಷ್ಟೂ ನಿನಗೆ ಸಾಕಾಗಲ್ಲ. 359 00:22:36,189 --> 00:22:40,943 ಅವಳಿಗೆ ಮುಂದೆ ಏನು ಬೇಕಾಗಬಹುದು ಎಂದು ಊಹಿಸುವ ಗೌರವಕ್ಕಾಗಿಯಾದರೂ 360 00:22:41,027 --> 00:22:45,364 ಅವಳ ಜೊತೆ ಇದ್ದರೆ ಸಾಕು ಎಂಬಂತೆ ಆಡುತ್ತೀಯ. 361 00:22:45,448 --> 00:22:48,201 -ಸಾಕು ನಿಲ್ಲಿಸು, ಸರಿನಾ? ಹುಚ್ಚಾಗಿ ಆಡಬೇಡ. -ನಿಜವಾಗಲೂ? 362 00:22:51,329 --> 00:22:53,873 ನನಗೆ ಎಚ್ಚರಿಕೆಗಳು ಇಷ್ಟವಾಗಲ್ಲ. ನನಗೆ ಎಚ್ಚರಿಕೆಗಳನ್ನು ಕೊಡಬೇಡ. 363 00:22:53,956 --> 00:22:56,959 ನಾನೂ ಎಚ್ಚರಿಕೆಗಳನ್ನು ಕೊಡಲ್ಲ, ಆದರೆ ಯಾರಾದರೂ… 364 00:22:57,043 --> 00:22:59,545 ಯಾರಾದರೂ ಆಯ್ಕೆ ಮಾಡಲೇಬೇಕು. 365 00:23:00,088 --> 00:23:03,341 -ಏನು? ಅಂದರೆ ನಾನಾ? -ಹೌದು, ಬೇವರ್ಸಿ, ನೀನೇ! 366 00:23:03,424 --> 00:23:07,178 ನೀನು ಆಯ್ಕೆ ಮಾಡಬೇಕು! ನಾನು ಬೇಕಾ ಅಥವಾ ಅವಳು ಬೇಕಾ! 367 00:23:43,381 --> 00:23:46,217 ಬಿ 368 00:23:59,230 --> 00:24:00,439 ಬೆಂಟನ್? 369 00:24:03,192 --> 00:24:04,026 ಬೆಂಟನ್? 370 00:24:05,444 --> 00:24:06,404 ಅಯ್ಯೋ. 371 00:24:10,158 --> 00:24:11,826 ನೀನು ಇಲ್ಲಿ ಉಳಿದುಕೊಂಡಿರುವೆಯಾ? 372 00:24:11,909 --> 00:24:14,287 ಇಲ್ಲ. ಇಲ್ಲ. 373 00:24:15,371 --> 00:24:19,125 ಇಲ್ಲ, ನಾನು ಎಕೋನೊ ಲಾಡ್ಜ್‌ನಲ್ಲಿದ್ದೇನೆ. 374 00:24:20,418 --> 00:24:21,836 ಈ ಟ್ರಕ್ ಏನು? 375 00:24:22,670 --> 00:24:24,797 ಜಿಂಕ್ಸ್‌ನ ವಿಚಾರಣೆ ನಡೆಸಲು ನಾವು ಅವನನ್ನು ಇಲ್ಲಿರಿಸಿದ್ದೆವು. 376 00:24:31,345 --> 00:24:32,471 ನಾವು ಅಂದರೆ ಯಾರು? 377 00:24:33,431 --> 00:24:34,682 ಟ್ರಾನ್ ಮತ್ತು ನಾನು. 378 00:24:34,765 --> 00:24:36,058 ಟ್ರಾನ್ ಇಲ್ಲಿಗೆ ಬಂದಿದ್ದಳಾ? 379 00:24:36,809 --> 00:24:38,311 -ಹೌದು. ಆಗಾಗ ಅಷ್ಟೇ. -ಸರಿ. 380 00:24:38,394 --> 00:24:39,312 ನಮ್ಮ ಮನೆಗೂ ಕರೆದಿದ್ದೆ. 381 00:24:39,395 --> 00:24:41,480 ಹೂಂ, ತಾಂತ್ರಿಕವಾಗಿ, ಇದು ನಮ್ಮ ಮನೆಯಲ್ಲ. 382 00:24:41,564 --> 00:24:43,566 -ಇದೊಂದು ಟ್ರಕ್ ಅಷ್ಟೇ. -ಏನೇ ಇರಲಿ, ಅವಳಿಲ್ಲಿ ಇದ್ದಳು. 383 00:24:44,525 --> 00:24:49,447 ಅಂದರೆ, ನೀನು ಶಂಕಿತನೊಬ್ಬನನ್ನು ದಿನಗಟ್ಟಲೆ ಇಲ್ಲಿ, ನಮ್ಮ ಮನೆಯಲ್ಲಿ ಕೂಡಿಹಾಕಿದ್ದೆ. 384 00:24:49,530 --> 00:24:50,573 ಟ್ರಕ್‌ನಲ್ಲಿ. 385 00:24:53,826 --> 00:24:55,995 ದೇವರೇ. ಎಷ್ಟೊಂದು ರಹಸ್ಯಗಳಿವೆ, ಬೆಂಟನ್. 386 00:24:56,078 --> 00:24:58,372 ರಹಸ್ಯಗಳ ಮೇಲೆ ರಹಸ್ಯಗಳು. 387 00:24:58,456 --> 00:25:00,249 ನಿನ್ನಲ್ಲೂ ಒಂದು ರಹಸ್ಯವಿದೆ ಅನಿಸುತ್ತೆ, ಕೇ. 388 00:25:04,837 --> 00:25:07,006 ನೀವವನಿಗೆ ಏನು ಮಾಡಿದಿರಿ? ಜಿಂಕ್ಸ್ ಸ್ಲೇಟರ್ ಈಗ ಎಲ್ಲಿದ್ದಾನೆ? 389 00:25:07,089 --> 00:25:08,758 ಬಂಧನದಲ್ಲಿದ್ದಾನೆ. ಕೊಲೆ ಆರೋಪದ ಮೇಲೆ. 390 00:25:08,841 --> 00:25:10,384 ಗ್ವೆನ್ ಹೇನಿಯ ಕೊಲೆ. 391 00:25:10,468 --> 00:25:13,054 ಹಾಗಾದರೆ, ನೀವು ಅವನನ್ನು ಬಲಿಯಾಗಿಸುತ್ತಿದ್ದೀರಾ? 392 00:25:13,137 --> 00:25:16,015 -ಮರಿನೋ ಹೇಳಿದ್ದು ಸರಿ. ಅವನು ನಿಮ್ಮ ಬಲಿಪಶು. -ಮರಿನೋ, 393 00:25:16,098 --> 00:25:18,267 ಮರಿನೋ, ಮರಿನೋ. ಮರಿನೋ ಏನು ಯೋಚಿಸುತ್ತಾನೆ ಅನ್ನೋದು 394 00:25:18,351 --> 00:25:20,061 -ನನಗೆ ಬೇಕಿಲ್ಲ. -ಮತ್ತೆ ಗ್ವೆನ್ ಹೇನಿ? 395 00:25:20,144 --> 00:25:22,605 -ಅವಳ ಸಾವಿನ ತನಿಖೆ ನಿಲ್ಲಿಸು. -ಮತ್ತು ಕ್ಯಾಮಿ ರಮಾಡ? 396 00:25:22,688 --> 00:25:25,107 -ಅದು ಮುಗಿದಿದೆ. ಜಿಂಕ್ಸ್ ಕೊಲೆಗಾರ. ಅಷ್ಟೇ. -ಅವಳನ್ನು ಕೊಂದವರು ಯಾರು? 397 00:25:25,191 --> 00:25:27,235 -ಅದು ತಪ್ಪು. -ನಿನಗೆ ಎಚ್ಚರಿಕೆ ನೀಡಲು ನೀನು ಹೇಳಿದ್ದೆ, 398 00:25:27,318 --> 00:25:28,361 ಎಚ್ಚರಿಕೆ ನೀಡುತ್ತಿದ್ದೇನೆ. 399 00:25:28,444 --> 00:25:32,531 ಸಾಕು ನಿಲ್ಲಿಸು. ಗ್ವೆನ್ ಕಥೆ, ಕ್ಯಾಮಿ ರಮಾಡ ಕಥೆ, ಎಲ್ಲವನ್ನೂ ನಿಲ್ಲಿಸು. 400 00:25:32,615 --> 00:25:34,659 ತಡವಾಗುವ ಮೊದಲೇ ಎಲ್ಲವನ್ನೂ ನಿಲ್ಲಿಸು. 401 00:25:34,742 --> 00:25:36,994 ತಡವಾಗುವ ಮೊದಲಾ? ನನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ! 402 00:25:37,078 --> 00:25:40,456 ನೀನು ಯಾರು? ಹೇಳು, ನೀನು ಯಾರು? 403 00:25:43,668 --> 00:25:45,086 ಯಾರು ನೀನು? 404 00:25:45,169 --> 00:25:47,630 -ಯಾರು ನೀನು, ಬೆಂಟನ್? -ಇಲ್ಲ, ಬೇಡ, ನೀನು-- 405 00:26:01,727 --> 00:26:04,689 ನಿನ್ನ ಮುಂದೆ ಸಂಪೂರ್ಣ ಪ್ರಾಮಾಣಿಕನಾಗಿ ಹೇಳುವೆ, ಕೇ. ನನ್ನಲ್ಲಿ… 406 00:26:07,024 --> 00:26:10,945 ನನ್ನಲ್ಲಿ ಕೆಲವು… ವಿಚಿತ್ರ ನಡವಳಿಕೆಗಳಿವೆ… 407 00:26:11,028 --> 00:26:14,365 -ಬೆಂಟನ್. -ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಇವೆ ಮತ್ತು… 408 00:26:14,448 --> 00:26:15,658 -ಸಾಕು ನಿಲ್ಲಿಸು. -ಇಲ್ಲ. 409 00:26:15,741 --> 00:26:19,036 ಕೆಲವು ಜೀವಿಗಳು ನರಳುವುದನ್ನು ನೋಡಲು ನನಗೆ ಇಷ್ಟ. 410 00:26:20,538 --> 00:26:25,042 ಮತ್ತು ನಾನು ಈ ವಿಷಯಗಳನ್ನು ತುಂಬಾ ಸಮಯದಿಂದ ಬಚ್ಚಿಟ್ಟಿದ್ದೇನೆ, ಇದನ್ನು ಹೇಳೋದು ಮುಖ್ಯ… 411 00:26:25,126 --> 00:26:27,336 ನಾನು ಇದನ್ನು ನಿನ್ನ ಮುಂದೆ ಬಿಚ್ಚಿಡಬೇಕು. 412 00:26:29,297 --> 00:26:31,632 ನಾನು ಒಳ್ಳೆಯ ವ್ಯಕ್ತಿಯಾಗಲು ಬಯಸುತ್ತೇನೆ. 413 00:26:32,883 --> 00:26:34,385 ನಾನು ನನ್ನನ್ನು ತೋರಿಸಿಕೊಳ್ಳಬೇಕು. 414 00:26:35,136 --> 00:26:37,680 -ಸರಿ. -ನನ್ನ ನಿಜವಾದ ಸ್ವರೂಪವನ್ನು ನಿನಗೆ ತೋರಿಸಬೇಕು. 415 00:26:37,763 --> 00:26:40,474 ಮುಂದುವರೆ. ನನ್ನನ್ನು ನೋಯಿಸಬೇಕಾ ನಿನಗೆ? 416 00:26:41,225 --> 00:26:42,893 ಅದೇನಾ ನಿನಗೆ ಬೇಕಿರೋದು? ನನಗೆ ಹೊಡೆಯುವೆಯಾ? 417 00:26:42,977 --> 00:26:45,229 -ನೀನೆಷ್ಟು ಕೆಟ್ಟವನು ಅಂತ ಮನವರಿಕೆ ಮಾಡಿಸಬೇಕಾ? -ದೇವರೇ. 418 00:26:45,313 --> 00:26:48,357 ನನಗೆ ಗೊತ್ತು. ನೀನು ಯಾರಂತ ನನಗೆ ಗೊತ್ತು. 419 00:26:48,441 --> 00:26:51,485 ಇಲ್ಲ! ನಿನಗೆ ಗೊತ್ತಿಲ್ಲ! ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. 420 00:26:52,069 --> 00:26:54,280 ನಾನು ರಾಕ್ಷಸರನ್ನು ನೋಡಿದ್ದೇನೆ, ಎಲ್ಲವನ್ನೂ ನೋಡಿದ್ದೇನೆ. 421 00:26:54,363 --> 00:26:56,615 ಮತ್ತು ನೀನು ಎಷ್ಟು ಮನಗೆಟ್ಟಿದ್ದೀಯೋ, ನಾನೂ ಅಷ್ಟೇ ಕೆಟ್ಟಿದ್ದೇನೆ. 422 00:26:56,699 --> 00:26:58,284 ಹಾಗಾಗಿ ಬಾ, ತೋರು ನಿನ್ನ ರೌದ್ರರೂಪ. 423 00:26:58,367 --> 00:27:01,287 ತೋರಿಸು ನೀನೆಷ್ಟು… ಎಷ್ಟು ಕೆಟ್ಟವನು ಅಂತ. 424 00:27:02,371 --> 00:27:04,373 ನೀನು ಕೆಟ್ಟವನು ಅಂತ ಮನವರಿಕೆ ಮಾಡಿಸು. 425 00:27:05,416 --> 00:27:07,293 ನೀನು ಯಾರಂತ ನನಗೆ ಗೊತ್ತು. 426 00:27:08,210 --> 00:27:09,337 -ಇಲ್ಲ. -ಪರವಾಗಿಲ್ಲ. 427 00:27:10,212 --> 00:27:14,216 -ಇಲ್ಲ, ನಿನಗೆ ಗೊತ್ತಿಲ್ಲ. ಸಾಕು ನಿಲ್ಲಿಸು. -ನನಗೆ ಗೊತ್ತು. ಪರವಾಗಿಲ್ಲ. 428 00:27:14,300 --> 00:27:15,176 ನಿಲ್ಲಿಸು. 429 00:27:15,259 --> 00:27:16,344 ಯಾಕೆ? 430 00:27:16,427 --> 00:27:19,180 ನಿಲ್ಲಿಸು. ನಿಲ್ಲಿಸು. 431 00:27:20,514 --> 00:27:21,557 ನಿಲ್ಲಿಸು. 432 00:27:32,568 --> 00:27:33,861 ನನಗೆ ವಿಚ್ಛೇದನ ಬೇಕು. 433 00:27:49,502 --> 00:27:50,878 ನಿನಗೆ ಸಿಗುತ್ತೆ. 434 00:28:22,827 --> 00:28:25,162 ಛೇ. ನನ್ನನ್ನು ಕ್ಷಮಿಸು. 435 00:28:26,956 --> 00:28:30,126 ನಾನು ಆಗಲೇ ಕೋಪಗೊಂಡಿದ್ದಕ್ಕೆ ನನ್ನನ್ನು ಕ್ಷಮಿಸು. 436 00:28:32,128 --> 00:28:33,379 ಅದು ಏನೆಂದರೆ… 437 00:28:35,214 --> 00:28:37,216 ಆ "ಇರುವಾಗಲೇ ಅವರನ್ನು ಪ್ರೀತಿಸಿ" ಅನ್ನೋ ಹುಚ್ಚುತನ 438 00:28:37,299 --> 00:28:41,846 ನನಗೆ ನಿನ್ನ ಮೇಲೆ ಪ್ರೀತಿ ಇಲ್ಲ ಅಂತ ನೀನು ಅಂದುಕೊಂಡಿರುವೆ ಅನಿಸುವಂತೆ ಮಾಡಿತು. 439 00:28:44,598 --> 00:28:48,269 ನನ್ನ ಅಸ್ತಿತ್ವದ ಪ್ರತಿ ಕಣದಿಂದಲೂ ನಾನು ನಿನ್ನನ್ನು ಪ್ರೀತಿಸಿದೆ ಅಂತ ನಿನಗೆ ಗೊತ್ತು. 440 00:28:52,440 --> 00:28:53,816 ರಕ್ತನಾಳದ ಊತ. 441 00:28:55,192 --> 00:28:56,694 ಹೇಗೆ? 442 00:29:04,452 --> 00:29:07,580 ನಿಜ ಏನೆಂದರೆ, ಈ ಬ್ಲೇಯ್ಸ್ ಫ್ರೂಗ್, 443 00:29:09,457 --> 00:29:12,293 ಇದೇ ಮೊದಲ ಬಾರಿಗೆ ನನಗೆ… 444 00:29:13,377 --> 00:29:19,967 ಈ ಕೋಣೆಯ ಹೊರಗೂ ನನಗೊಂದು ಜೀವನ ಇದೆ, ನನಗಾಗಿ ಯಾರೋ ಇದ್ದಾರೆ 445 00:29:20,050 --> 00:29:22,386 ಎಂಬ ಭಾವನೆ ನೀಡಿದಳು. 446 00:29:30,603 --> 00:29:31,896 ಜಾನೆಟ್? 447 00:29:34,982 --> 00:29:37,693 ಜಾನೆಟ್, ನೀನು ನಿಜವಾಗಿಯೂ ನನ್ನೊಂದಿಗೆ ಮಾತಾಡಲ್ವಾ? 448 00:29:39,820 --> 00:29:40,905 ಚಿನ್ನ… 449 00:29:43,157 --> 00:29:45,159 ನನ್ನ ಜೊತೆ ಮಾತಾಡಬೇಕು ಅಂದಿದ್ದೆ, ಮಾತಾಡುತ್ತಿದ್ದೇನೆ. 450 00:29:50,831 --> 00:29:53,626 ಎಲ್ಲಿದ್ದೀಯಾ? 451 00:29:56,420 --> 00:29:57,296 ಚಿನ್ನ? 452 00:30:04,595 --> 00:30:05,429 ಇಲ್ಲ. 453 00:30:11,268 --> 00:30:13,103 ಅಯ್ಯೋ ದೇವರೇ. 454 00:30:13,729 --> 00:30:15,272 ಇಲ್ಲ, ಇಲ್ಲ, ಇಲ್ಲ. 455 00:30:15,940 --> 00:30:18,776 ಇಲ್ಲ. ಚಿನ್ನ, ವಾಪಸ್ ಬಾ! ದಯವಿಟ್ಟು? 456 00:30:18,859 --> 00:30:22,154 ದಯವಿಟ್ಟು, ಜಾನೆಟ್. ವಾಪಸ್ ಬಾ. 457 00:30:23,906 --> 00:30:26,408 ಜಾನೆಟ್! ಇಲ್ಲ, ಇಲ್ಲ, ಇಲ್ಲ. 458 00:30:29,703 --> 00:30:33,874 ನಾನು ಒಂದು ದೊಡ್ಡ ಕೋಣೆ ಬುಕ್ ಮಾಡಿದ್ದೇನೆ… 459 00:30:35,501 --> 00:30:36,752 ಹರ್ಮಿಟೇಜ್ ಹೋಟೆಲ್. 460 00:30:38,003 --> 00:30:38,921 ಲೂಸಿ, ಏನಾಯಿತು? 461 00:30:48,806 --> 00:30:50,224 ಅವಳು ಹೋದಳು. 462 00:31:07,074 --> 00:31:08,075 ಕಂದ… 463 00:31:29,221 --> 00:31:31,682 ಹೇ, ಯಾರಾದರೂ ಮನೆಯಲ್ಲಿದ್ದೀರಾ? 464 00:31:35,269 --> 00:31:36,979 ಯಾರಾದರೂ ಮನೆಯಲ್ಲಿದ್ದೀರಾ? 465 00:31:38,022 --> 00:31:40,608 ಥತ್. ಹಲೋ? 466 00:31:52,578 --> 00:31:53,954 ಉಸಿರಾಡು, ಉಸಿರಾಡು. 467 00:31:58,459 --> 00:32:03,922 ನಿನಗೆ ಗೊತ್ತಾ, ಜಾನೆಟ್ ಆ ರೀತಿ ಮಾಡಬಹುದು… 468 00:32:07,801 --> 00:32:10,095 ಅವಳಿಗೆ ಹೀಗೆ ಮಾಡಲು ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. 469 00:32:11,555 --> 00:32:13,098 ಅವಳಿಗೆ ಹೀಗೆ ಮಾಡಿಕೊಳ್ಳಲು ಆಗಲ್ಲ. 470 00:32:14,725 --> 00:32:19,396 ಮಾಡಿಕೊಳ್ಳಲು ಆಗಲ್ಲ… ಏನು? ಅಂದರೆ, ಏನು, ನೀನು ಏನು ಹೇಳುತ್ತಿದ್ದೀಯ? 471 00:32:19,480 --> 00:32:20,356 ಅದು… 472 00:32:21,440 --> 00:32:25,903 ಒಂದು ಸುರಕ್ಷತಾ ವ್ಯವಸ್ಥೆ ಇತ್ತು, ಪರಮಾಣು ಬಾಂಬ್‌ಗಳಿಗೆ ಇರುತ್ತಲ್ಲಾ, ಅಂತಹುದು. 473 00:32:28,197 --> 00:32:30,491 ಪ್ರತಿಯೊಬ್ಬರೂ ತಮ್ಮದೇ ಆದ ಕೀಲಿಯನ್ನು ತಿರುಗಿಸಬೇಕು. 474 00:32:37,039 --> 00:32:38,540 ಅಂದರೆ, ಕೀಲಿಯನ್ನು ಯಾರು ತಿರುಗಿಸಿದರು? 475 00:32:39,875 --> 00:32:42,586 ನೀನು ತಿರುಗಿಸಲಿಲ್ಲ. ಅಲ್ವಾ, ಅಮ್ಮ? 476 00:32:43,879 --> 00:32:46,632 -ಇಲ್ಲ! ಇಲ್ಲ. -ನನಗದನ್ನು ಸಹಿಸಲು ಆಗಲ್ಲ… 477 00:32:46,715 --> 00:32:50,678 -ಲೂಸಿ. ಲೂಸಿ. ಲೂಸಿ? -ಈಗಲೇ. ನೀನು ನನಗೆ ಸುಳ್ಳು ಹೇಳುತ್ತಿದ್ದರೆ… 478 00:32:50,761 --> 00:32:54,056 ನನ್ನ ಜೀವದ ಮೇಲಾಣೆ. 479 00:32:54,848 --> 00:32:58,936 ನನ್ನ ತಾಯಿಯ ಜೀವದ ಮೇಲಾಣೆ. ನನ್ನ ತಂಗಿಯ ಮೇಲಾ… 480 00:33:02,398 --> 00:33:05,234 -ಇರು. ಏನು? ಏನು? -ನನ್ನ ತಂಗಿ, ನನ್ನ ತಂಗಿ. 481 00:33:07,528 --> 00:33:10,030 ನನ್ನ ತಂಗಿ ಮತ್ತು ನಾನು ಕೊನೆಗೂ… 482 00:33:11,073 --> 00:33:15,244 ಜೀವನದಲ್ಲಿ ಮೊದಲ ಬಾರಿಗೆ ಒಂದು ವಿಷಯದ ಬಗ್ಗೆ ಒಪ್ಪಿಕೊಂಡೆವು. 483 00:33:17,496 --> 00:33:18,372 ಏನದು? 484 00:33:23,419 --> 00:33:25,087 ಜಾನೆಟ್ ನಿನಗೆ ಸರಿಯಲ್ಲ ಅನ್ನೋದು. 485 00:33:35,389 --> 00:33:37,558 -ಇಲ್ಲ. ಲೂಸಿ. -ಜಾನೆಟ್ ನನಗೆ ಒಳ್ಳೆಯವಳಲ್ವಾ? 486 00:33:37,641 --> 00:33:39,601 -ಸಮಾಧಾನ. -ನೀವದನ್ನು ಮಾಡಿದ್ದರೆ, ಹೇಳಿಬಿಡಿ. 487 00:33:39,685 --> 00:33:41,061 -ಏನು ಮಾಡಿದ್ದರೆ? -ಸಮಾಧಾನ! 488 00:33:41,145 --> 00:33:42,438 ನೀವವಳನ್ನು ಆಫ್ ಮಾಡಿದಿರಾ? 489 00:33:42,521 --> 00:33:43,856 -ಲೂಸಿ. -ನೀವವಳನ್ನು ಆಫ್ ಮಾಡಿದಿರಾ? 490 00:33:43,939 --> 00:33:46,191 ನಾನೇ ಅಲ್ಲಿಗೆ ತಲುಪಲು ಬಿಡಲು ಆಗಲಿಲ್ವಾ ನಿಮಗೆ! ಇಲ್ಲ! ಆಗಲಿಲ್ವಾ? 491 00:33:46,275 --> 00:33:48,569 ಬರೀ ಹೊರಹೋಗುವಂತೆ ಹೇಳಲಿಲ್ಲ, ನೀವೇ ನನ್ನ ಬದಲು ಅದನ್ನು ಮಾಡಿದಿರಿ! 492 00:33:48,652 --> 00:33:51,655 ನಿಮ್ಮ ರಕ್ಷಕಿಯಂತಹ ನಾಟಕದೊಂದಿಗೆ ನಿಮಗೆ ಇದನ್ನೂ ಸಹ ಮಾಡಬೇಕಾಗಿತ್ತು! 493 00:33:51,739 --> 00:33:53,657 ನೀವಾ ಜಾನೆಟ್‌ನ ಕೊಂದಿದ್ದು? 494 00:33:53,741 --> 00:33:55,909 -ನೀವವಳನ್ನು ಆಫ್ ಮಾಡಿದಿರಾ? -ಇಲ್ಲ, ಖಂಡಿತ ಇಲ್ಲ. ಇಲ್ಲ. 495 00:33:55,993 --> 00:33:58,203 ನಾನು ಎಂದಿಗೂ, ಎಂದಿಗೂ ಹಾಗೆ ಮಾಡುತ್ತಿರಲ್ಲ. 496 00:33:58,287 --> 00:34:00,414 -ಲೂಸಿ… -ನಾನು ನಿಮ್ಮನ್ನು ನಂಬಲ್ಲ! 497 00:34:00,497 --> 00:34:03,208 -ಬೇಡ… ಮಾತಾಡಬೇಡ… -ಬಾಯಿ ಮುಚ್ಚಿ! 498 00:34:03,292 --> 00:34:05,919 ನೀವಿಬ್ಬರೂ. ಇದು ನಿಮ್ಮ ದುರಹಂಕಾರ! 499 00:34:06,003 --> 00:34:09,172 ನೀವು ನನ್ನಲ್ಲಿ ಕಾಣುವುದು ನಿಮ್ಮನ್ನು ಮಾತ್ರ! 500 00:34:09,255 --> 00:34:13,135 ಎಂದಿಗೂ, ನಿಜವಾಗಿಯೂ ನನ್ನನ್ನು ನೋಡಲು ಸಮಯ ತೆಗೆದುಕೊಳ್ಳದ ಇಬ್ಬರು ಬಿಳಿಯ ಮಹಿಳೆಯರಿಂದ 501 00:34:14,636 --> 00:34:18,599 ಬೆಳೆಸಲ್ಪಟ್ಟಿದ್ದು ನನಗೆ ಎಷ್ಟು ಕಷ್ಟ ಕೊಟ್ಟಿದೆ ಗೊತ್ತಾ? 502 00:34:18,681 --> 00:34:20,476 ನನ್ನನ್ನು ನಿಜವಾಗಿ ಅರ್ಥಮಾಡಿಕೊಂಡ… 503 00:34:22,143 --> 00:34:23,645 ಏಕೈಕ ವ್ಯಕ್ತಿಯನ್ನು ನಾನು ಕಳೆದುಕೊಂಡೆ. 504 00:34:26,732 --> 00:34:29,985 ಮತ್ತು ನಿಮ್ಮಲ್ಲಿ ಒಬ್ಬರು ಅವಳನ್ನು ನನ್ನಿಂದ ಕಿತ್ತುಕೊಂಡಿರಿ ಅಂತ ನನಗೆ ಖಚಿತವಾಗಿ ಗೊತ್ತು. 505 00:34:33,030 --> 00:34:34,739 ಕೇಳು, ಲೂಸ್. ಲೂಸ್. 506 00:34:34,822 --> 00:34:36,408 ಲೂಸಿ, ಕೇಳಿಲ್ಲಿ. 507 00:34:36,492 --> 00:34:38,034 ಸರಿ, ಇದು… 508 00:34:53,801 --> 00:34:55,677 ಅವಳು ಹೀಗಂದುಕೊಂಡಿದ್ದಾಳೆ ಅಂತ ಗೊತ್ತಿತ್ತಾ? 509 00:34:57,304 --> 00:34:59,556 ಇಲ್ಲ. ಇಲ್ಲ, ಖಂಡಿತ ನನಗೆ ಗೊತ್ತಿರಲಿಲ್ಲ. 510 00:35:03,894 --> 00:35:05,729 ಬ್ಯಾಗ್‌ಗಳು ಸಿದ್ಧವಾಗಿವೆ. 511 00:35:05,813 --> 00:35:07,564 ಹೂಂ. ನಾವು ಹೋಗುತ್ತಿದ್ದೇವೆ. 512 00:35:08,857 --> 00:35:10,317 -ಈಗಲೇ ಹೋಗುತ್ತಿದ್ದೀರಾ? -ಹೌದು. 513 00:35:11,068 --> 00:35:11,902 ಹೌದು. 514 00:35:11,985 --> 00:35:14,446 -ಮತ್ತು ನೀನೂ ಇದರಲ್ಲಿ ಭಾಗಿಯಾ? -ನಾನು ಯಾವುದರಲ್ಲೂ ಭಾಗಿಯಲ್ಲ. 515 00:35:14,530 --> 00:35:16,907 ನಿನಗೆ ತಿಳಿಯಲೇಬೇಕೆಂದರೆ, ಅವನು ನನಗೆ ಎಚ್ಚರಿಕೆ ನೀಡಿದ್ದಾನೆ. 516 00:35:16,990 --> 00:35:18,867 -ಅಂದರೆ, ನೀನವನನ್ನು ಒತ್ತಾಯಿಸುತ್ತಿದ್ದೀಯಾ? -ಇಲ್ಲ. 517 00:35:18,951 --> 00:35:20,577 ಎಚ್ಚರಿಕೆ ನೀಡೋದು ಒಂದು ಆಯ್ಕೆ, ಕೇ. 518 00:35:20,661 --> 00:35:23,163 -ಹೆಚ್ಚಿನ ಪರಿಣಾಮಗಳೊಂದಿಗೆ ಅಷ್ಟೇ. -ನೀನಿದನ್ನು ಆಗಲು ಬಿಟ್ಟೆಯಾ? 519 00:35:23,247 --> 00:35:25,874 -ಬಾಯಿ ಮುಚ್ಚು. -ನನ್ನ ಹೆಂಡತಿಯನ್ನು ಹೋಟೆಲ್‌ಗೊಯ್ಯುತ್ತಿದ್ದೇನೆ. 520 00:35:25,958 --> 00:35:28,210 ಅದಕ್ಕಿಂತ ಹೆಚ್ಚು ಬೇರೇನೂ ಆಗಬೇಕಿಲ್ಲ ಇದು. 521 00:35:28,293 --> 00:35:30,671 -ಇಲ್ಲ, ಇದು ಅದಕ್ಕಿಂತ ಹೆಚ್ಚು. ತುಂಬಾ ಹೆಚ್ಚು. -ನಿಜವಾಗಲೂ? 522 00:35:30,754 --> 00:35:33,048 -ನಿಜವಾಗಲೂ? ಮತ್ತು ನಿನ್ನ ಪತಿ ಎಲ್ಲಿದ್ದಾನೆ? -ಹೌದು. 523 00:35:33,131 --> 00:35:35,467 ಅವನು ಟ್ರಕ್ ಹಿಂದೆ ಕೂತು ಶಂಕಿತರ ವಿಚಾರಣೆ ನಡೆಸುತ್ತಿದ್ದಾನೆ. 524 00:35:35,551 --> 00:35:36,927 -ಎಲ್ಲಿ? -ಪೀಟ್. 525 00:35:37,010 --> 00:35:38,387 ಆಯ್ಕೆ ಮಾಡು. ಈಗಲೇ. 526 00:35:38,470 --> 00:35:42,641 ನನ್ನನ್ನು ನೋಡು. ಈ ಕೊಲೆಗಳನ್ನು ಮುಚ್ಚಿಹಾಕಲಾಗುತ್ತಿದೆಯೋ ಇಲ್ವೋ 527 00:35:42,724 --> 00:35:44,643 ಎಂಬುದರ ಬಗ್ಗೆ ಕಾಳಜಿ ವಹಿಸುವ ಏಕೈಕ ವ್ಯಕ್ತಿ ನಾನು. 528 00:35:44,726 --> 00:35:46,270 ಹಾಳಾಗಿ ಹೋಗು, ಕೇ. 529 00:35:46,353 --> 00:35:48,397 ಸರಿ. ಏನು ಗೊತ್ತಾ? ನಾನು ನನ್ನ ಹೆಂಡತಿ ಜೊತೆ ಹೋಗಬೇಕು. 530 00:35:48,480 --> 00:35:52,025 ಡಾ. ಕಮಿನ್ಸ್ಕಿ ಬಳಿ ಜೈವಿಕ-ಸಂಶ್ಲೇಷಿತ ಚರ್ಮದ ಕಸಿಯ ಬಗ್ಗೆ ಮಾಹಿತಿ ಇದೆ. 531 00:35:52,109 --> 00:35:54,987 ಹಾಗಾಗಿ, ನಿನಗೂ ಗೊತ್ತು, ನಾವಿದನ್ನು ಮಾಡಲೇಬೇಕು. ನೀನು ಮತ್ತು ನಾನು. 532 00:35:55,070 --> 00:35:57,531 ಇನ್ನೂ ಕೊಲೆಗಾರ ಹೊರಗಿದ್ದಾನೆ, ಪೀಟ್. 533 00:35:57,614 --> 00:35:58,907 ನನಗೆ ಗಾಡಿ ಕೀಗಳು ಬೇಕು. 534 00:35:58,991 --> 00:36:01,326 ನಾನು… ಕೇಳು. ನನಗೆ ನಿನ್ನ ಅವಶ್ಯಕತೆಯಿದೆ. 535 00:36:01,410 --> 00:36:02,452 ನನಗೆ ಕೀಗಳು ಬೇಕು. 536 00:36:10,460 --> 00:36:11,420 ಸರಿ. 537 00:36:11,503 --> 00:36:12,337 ಪೀಟರ್! 538 00:36:30,689 --> 00:36:31,773 ಥತ್. 539 00:36:49,249 --> 00:36:50,250 ನೀನೇನು ಮಾಡಿದೆ ಅಂತ ಗೊತ್ತು. 540 00:36:50,876 --> 00:36:51,710 ಏನು ಹೇಳುತ್ತಿದ್ದೀರಿ? 541 00:36:51,793 --> 00:36:53,503 ಏನೂ ಗೊತ್ತಿಲ್ಲದಂತೆ ಆಡಬೇಡ, ಮ್ಯಾಗಿ. 542 00:36:53,587 --> 00:36:55,714 ಹ್ಯಾಕ್ ಅಂದರೇನು ಅಂತಲೇ ಗೊತ್ತಿಲ್ಲದಂತೆ ನಟಿಸಬೇಡ, 543 00:36:55,797 --> 00:36:58,800 ಅದೂ ನೀನೇ ಆ ಕೆಲಸವನ್ನು ಪೂರ್ತಿಯಾಗಿ ಮಾಡಿರುವಾಗ. 544 00:36:58,884 --> 00:36:59,843 ಇಲ್ಲ, ನಾನೇನೂ ಮಾಡಲಿಲ್ಲ. 545 00:36:59,927 --> 00:37:01,929 ಒಂದು ನಿಮಿಷ ಇರಿ, ಚೀಫ್. ಆರೋಪಗಳು ಬೇಡ. 546 00:37:02,012 --> 00:37:03,305 ನಿನ್ನನ್ನು ವಜಾ ಮಾಡುತ್ತಿರುವೆ. 547 00:37:04,264 --> 00:37:07,309 ನಾನೇನೂ ಮಾಡಲಿಲ್ಲ. ನನ್ನ ಮೇಲಾಣೆ, ನಾನು ಗೊತ್ತಿಲ್ಲದಂತೆ ನಟಿಸುತ್ತಿಲ್ಲ. 548 00:37:07,392 --> 00:37:09,144 ಇಲ್ಲ, ಇಲ್ಲ, ಇಲ್ಲ. ಚಿಂತಿಸಬೇಡ. 549 00:37:10,020 --> 00:37:12,773 ಯಾಕೆಂದರೆ ನೀನು ಮತ್ತು ನಾನು, ಏನಾದರೂ ಮಾಡೋಣ. 550 00:37:13,732 --> 00:37:14,900 ಹೇ. ಕೇ? 551 00:37:16,693 --> 00:37:18,278 -ಹೇ. -ಆರಾಮಿದ್ದೀಯಾ? ಹೇ. 552 00:37:19,154 --> 00:37:20,238 ಏನಾಯಿತು? 553 00:37:20,322 --> 00:37:22,616 ಮರಿನೋನ ತನಿಖೆ ನಡೆಯುತ್ತಿದೆ. ಏನು, ನೀನಿದನ್ನು ಬಗೆಹರಿಸಿದ್ದಾ? 554 00:37:22,699 --> 00:37:23,992 ಹೌದನಿಸುತ್ತೆ. ನಾನು ಹೋಗಬೇಕು. 555 00:37:24,076 --> 00:37:27,371 ಹೌದನಿಸುತ್ತಾ? ಏನಾಯಿತು, ಕೇ? ನೀನು ನನಗೆ ಯಾಕೆ ಕರೆ ಮಾಡಲಿಲ್ಲ? 556 00:37:27,454 --> 00:37:29,164 ಕರೆ ಮಾಡಿದೆ. ಸಂದೇಶ ಕಳಿಸಿದೆ. 557 00:37:29,247 --> 00:37:30,207 ಏನಾಯಿತು? 558 00:37:30,791 --> 00:37:32,834 ಅದು… ಅದೆಲ್ಲವೂ ನಿಜಕ್ಕೂ… 559 00:37:34,127 --> 00:37:35,504 ಮೊದಲಿಂದ ಹೇಳು. 560 00:37:46,473 --> 00:37:49,142 ಹೇ. ಇಲ್ಲಿ ಬಾ. 561 00:38:04,908 --> 00:38:06,451 ನನಗೆ ನೀನು ಬೇಕು. 562 00:38:56,710 --> 00:38:58,170 ಯು.ಎಸ್. ನಾಣ್ಯಗಳು ಮಾತ್ರ 563 00:39:12,017 --> 00:39:17,814 ಕೇ ಸ್ಕಾರ್ಪೆಟ್ಟ, ಎಂಡಿ 564 00:39:40,587 --> 00:39:42,631 ಬಹುಶಃ ನಾವು ಒಟ್ಟಿಗೆ ಹೊರಗೆ ಹೋಗಬಾರದು. 565 00:39:44,633 --> 00:39:45,467 ಹೂಂ. 566 00:40:03,735 --> 00:40:04,861 ಹೊರಗೆ ಸಿಗೋಣ, ಕೇ. 567 00:40:16,331 --> 00:40:17,833 ನೀನವನಿಗೆ ಎಂದಿಗೂ ಹೇಳಬಾರದು. 568 00:40:20,418 --> 00:40:21,253 ಎಂದೆಂದಿಗೂ. 569 00:41:23,982 --> 00:41:26,151 ದ ಹರ್ಮಿಟೇಜ್ ಹೋಟೆಲ್ 570 00:42:44,229 --> 00:42:45,397 ಇದು ಚೆನ್ನಾಗಿದೆ. 571 00:42:47,983 --> 00:42:48,984 ಡಾ. ಡೆಬ್ಬೀ ಅವರಿಂದ. 572 00:42:50,443 --> 00:42:53,154 ಅವರು ನಿಮಗೆ ತಿಳಿಸುವಂತೆ ಹೇಳಿದರು, ಕ್ಯಾಮಿ ಮತ್ತು ಗ್ವೆನ್ ದೇಹಗಳ… 573 00:42:54,030 --> 00:42:55,865 ಜೈವಿಕ-ಸಂಶ್ಲೇಷಿತ ಚರ್ಮ… 574 00:42:56,616 --> 00:42:57,492 ಒಂದೇ ಆಗಿವೆಯಂತೆ. 575 00:42:58,576 --> 00:43:01,079 ನೀವು ಈಗ ನನಗೆ ಸಹಾಯ ಮಾಡುತ್ತಿದ್ದೀರಿ ಅಂತ ನಾನು ನಂಬಬೇಕಾ, ಮ್ಯಾಗಿ? 576 00:43:01,162 --> 00:43:02,831 ನಾನು ಮೊದಲಿಂದಲೂ ನಿಮಗೆ ಸಹಾಯ ಮಾತ್ರ ಮಾಡಿರೋದು. 577 00:43:03,915 --> 00:43:04,833 ನಿಮಗೆ ಏನು ಬೇಕು? 578 00:43:04,916 --> 00:43:07,127 ಅವರನ್ನು ಸೋಲಿಸಲು ನಿಮಗೆ ಬೇಕಾದ ಎಲ್ಲವೂ ನನ್ನ ಬಳಿ ಇದೆ. 579 00:43:07,210 --> 00:43:08,211 ಯಾರನ್ನು? 580 00:43:08,295 --> 00:43:10,338 ರೆಡ್ಡಿಯವರನ್ನು. 581 00:43:10,422 --> 00:43:11,840 ನೀವು ಏನು ಮಾಡಿದಿರಿ ಅಂತ ನನಗೆ ಗೊತ್ತು. 582 00:43:12,549 --> 00:43:15,051 ನೀವಿಬ್ಬರೂ ಕೊಲೆಯನ್ನು ಮುಚ್ಚಿಹಾಕಿದ್ದೀರಿ ಅಂತ ನನಗೆ ಗೊತ್ತು. 583 00:43:15,969 --> 00:43:18,513 ಮತ್ತು ನೀವು ಏನು ಮಾಡಿದಿರಿ ಅಂತ ನನಗೆ ಗೊತ್ತು. ನೀವು ಕೊಲೆ ಮಾಡಿದ್ದೀರಿ. 584 00:43:20,265 --> 00:43:21,725 ಮತ್ತು ಬೇರೆಯವರನ್ನು ಅದಕ್ಕೆ ದೂಷಿಸಿದಿರಿ. 585 00:43:22,809 --> 00:43:27,856 ಆ ಅಸ್ತ್ರವನ್ನು 25 ವರ್ಷಗಳಿಂದ ಹಿಡಿದಿಟ್ಟುಕೊಂಡಿದ್ದೀರಾ? 586 00:43:29,274 --> 00:43:30,358 ಅದರಲ್ಲಿ ನಾನು ಪರಿಣಿತೆ. 587 00:43:34,362 --> 00:43:35,697 ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದೇನೆ. 588 00:43:35,780 --> 00:43:39,951 ಅಥವಾ… ಇದು ಆರಂಭವಾಗಿರಬಹುದು, ಒಂದು ಸುಂದರವಾದ… 589 00:43:40,035 --> 00:43:41,745 ಏನು, ಸ್ನೇಹಾನಾ? ಹೇಗೆ? 590 00:43:41,828 --> 00:43:44,873 ನನ್ನ ಬಳಿ ಸಾಕ್ಷ್ಯವಿದೆ. ಅವನು ಮಾಡಿದ ಪ್ರತಿಯೊಂದು ಕೆಟ್ಟ ಕೆಲಸದ ಸಾಕ್ಷ್ಯ. 591 00:43:44,956 --> 00:43:45,915 ಎಲ್ಲ ಅಪರಾಧಗಳ ಸಾಕ್ಷ್ಯ. 592 00:43:45,999 --> 00:43:47,208 ನೀವು ನಿಜಕ್ಕೂ ಇದನ್ನು ಮಾಡುವಿರಾ? 593 00:43:47,292 --> 00:43:49,711 ನಾನು ಮಾಡದ ಯಾವುದೋ ಕೆಲಸಕ್ಕೆ ತಪ್ಪೊಪ್ಪಿಕೊಂಡೆ, 594 00:43:50,378 --> 00:43:53,923 ಮತ್ತು ನನಗೆ ತಿಳಿಯುವ ಮೊದಲೇ, ನಾನು ಕುತ್ತಿಗೆಯವರೆಗೆ ಸಿಲುಕಿದ್ದೆ. 595 00:43:54,007 --> 00:43:55,842 ಖಂಡಿತ, ನೀವೂ ಅದನ್ನೇ ಮಾಡಿದ್ದು. 596 00:43:55,925 --> 00:43:58,511 ಮತ್ತು ನಿಮ್ಮನ್ನು ಹ್ಯಾಕ್ ಮಾಡಿದ್ದು ನಾನಲ್ಲ. ಎಲ್ವಿನ್ ಮಾಡಿದ್ದು. 597 00:43:58,595 --> 00:44:00,013 ಯಾಕೆ? 598 00:44:00,096 --> 00:44:02,682 ನೀವು ಎಂದಿಗೂ ನನ್ನನ್ನು ನಂಬಬಾರದು ಅಂತ. 599 00:44:02,766 --> 00:44:06,019 ಹೇಗೇ ಪ್ರಾರಂಭವಾಗಿರಲಿ, ಅದು ವಿಭಿನ್ನವಾಗಿ ಕೊನೆಗೊಳ್ಳಬಹುದು ಮತ್ತು ಕೊನೆಗೊಳ್ಳಬೇಕು. 600 00:44:06,102 --> 00:44:10,190 ನಾನು ನಿಮಗೆ ಸಾಬೀತುಪಡಿಸುವೆ. ಆ ನೀಚನನ್ನು ಹಿಡಿಯಲು ನಿಮಗೆ ಬೇಕಾದ ಎಲ್ಲವನ್ನೂ ತಂದುಕೊಡುವೆ. 601 00:44:10,273 --> 00:44:13,526 ನನ್ನನ್ನು ನೀವು ರಕ್ಷಿಸಿ, ನಿಮ್ಮನ್ನು ನಾನು ರಕ್ಷಿಸುವೆ. 602 00:44:21,368 --> 00:44:22,243 ಸರಿ. 603 00:44:23,536 --> 00:44:24,412 ಅದ್ಭುತ. 604 00:44:26,414 --> 00:44:27,916 ನೀನು ಹುಚ್ಚಿ. 605 00:45:32,188 --> 00:45:34,065 -ಹೇ, ಬ್ಲೇಯ್ಸ್. -ಹೇ. ಅಡಚಣೆಗಾಗಿ ಕ್ಷಮಿಸಿ, 606 00:45:34,149 --> 00:45:35,775 ಆದರೆ ನಾನು ಗ್ವೆನ್ ಹಾಗೂ ಕ್ಯಾಮಿಗೆ ಚರ್ಮದ ಕಸಿ 607 00:45:35,859 --> 00:45:38,945 ಎಲ್ಲಿಂದ ಸಿಕ್ಕಿತು ಎಂಬ ಬಗ್ಗೆ ಡಾ. ಕಮಿನ್ಸ್ಕಿಅವರ ಜೊತೆ ಕೆಲಸ ಮಾಡುತ್ತಿದ್ದೇನೆ. 608 00:45:39,028 --> 00:45:40,447 -ಅವರಿಬ್ಬರು… -ಮತ್ತೆ ಹೇಳು. 609 00:45:40,530 --> 00:45:42,740 …ಒಂದೇ ಪರೀಕ್ಷಾ ಗುಂಪಿನಲ್ಲಿದ್ದರು, ಥೋರ್‌ನಲ್ಲಿ. 610 00:45:42,824 --> 00:45:45,452 -ನನಗೇನೂ ಕೇಳುತ್ತಿಲ್ಲ…ಮತ್ತೆ ಹೇಳು. -ಅದರಲ್ಲಿ ಬೇರೆ ಯಾರಿದ್ದರು ಗೊತ್ತಾ? 611 00:45:45,535 --> 00:45:46,828 ಬ್ಲೇಯ್ಸ್, ನನಗೆ ಕೇಳುತ್ತಿಲ್ಲ. 612 00:45:46,911 --> 00:45:48,580 ಪರೀಕ್ಷಾ ಗುಂಪಿನಲ್ಲಿ ಬೇರೆ ಯಾರಿದ್ದರು ಗೊತ್ತಾ? 613 00:45:48,663 --> 00:45:49,581 ಯಾರು? 614 00:45:52,041 --> 00:45:53,209 ಯಾರು? 615 00:45:53,293 --> 00:45:55,628 ಅವನು ಅವರನ್ನು ಭೇಟಿಯಾಗಿದ್ದೇ ಹಾಗೆ. ಅವರು ಒಂದೇ ಗುಂಪಿನಲ್ಲಿದ್ದರು. 616 00:45:55,712 --> 00:45:56,546 ಹಲೋ… 617 00:46:14,189 --> 00:46:16,816 ಚಪ್ಪಟೆಯಾಗುವರೆಗೂ ಅದನ್ನು ವಾಪಸ್ ತರಬೇಡ. 618 00:46:16,900 --> 00:46:17,734 ಸರಿ, ಸರ್. 619 00:46:18,485 --> 00:46:22,071 ಆಗೋ ಬಂದಳು. ಆ ನಾಣ್ಯದೊಂದಿಗೆ ನಿನ್ನ ಅಂಕಲ್ ಹೇಳಿದಂತೆ ಮಾಡು. 620 00:46:23,781 --> 00:46:24,949 ಸರಿ, ಸರ್. 621 00:46:25,033 --> 00:46:26,034 ನಮ್ಮ ಬಗ್ಗೆ ಯೋಚಿಸಬೇಡ. 622 00:46:46,387 --> 00:46:47,222 ಹೇ, ಡಾಕ್ಟರ್. 623 00:46:53,853 --> 00:46:55,438 ನನ್ನ ನಾಣ್ಯ ನಿಮಗೆ ಸಿಕ್ಕಂತಿದೆ. 624 00:46:57,774 --> 00:47:00,985 ಅದು ತುಂಬಾ ವಿಶೇಷವಾದುದು. ಅದು ನಾನು ಹುಟ್ಟಿದ ವರ್ಷದ್ದು. 625 00:47:07,534 --> 00:47:08,451 ಅಧಿಕಾರಿ ರಯಾನ್. 626 00:47:14,207 --> 00:47:16,834 ಆ ರೀತಿ ನಾನು ಮೊದಲು ನೋಡಿದ್ದು ಲೋರಿ ದೇಹದಲ್ಲೇ. 627 00:47:17,418 --> 00:47:21,631 ಆ ರಕ್ತ, ಆ ನೈಜತೆ. ಅದು ನನ್ನನ್ನು ಬದಲಾಯಿಸಿತು. 628 00:47:22,674 --> 00:47:24,384 ನಾನು ಕ್ಯಾಮಿಯೊಂದಿಗೆ ಅವಾಂತರ ಮಾಡಿಕೊಂಡೆ. 629 00:47:24,926 --> 00:47:27,136 ಆದರೆ ಗ್ವೆನ್? ಅದನ್ನು ಪರಿಪೂರ್ಣವಾಗಿ ಮಾಡಿದೆ. 630 00:47:27,220 --> 00:47:30,223 ಸರಿಯಾದ ಹುಡುಗಿಯನ್ನು ಮೆಚ್ಚಿಸಲು ನಾನದನ್ನು ಮಾಡಿದೆ. 631 00:47:31,766 --> 00:47:32,850 ಅದು ನೀವೇ. 632 00:48:12,473 --> 00:48:13,516 ಛೇ. 633 00:48:16,561 --> 00:48:17,395 ಇಲ್ಲ! 634 00:48:20,231 --> 00:48:21,441 ಯಾರಾದರೂ ಕಾಪಾಡಿ! 635 00:48:31,117 --> 00:48:33,161 ಇಲ್ಲಿ ಮೇಲೆ! ದಯವಿಟ್ಟು! ದಯವಿಟ್ಟು! 636 00:48:38,082 --> 00:48:40,418 ಹೋರಾಡೋದನ್ನ ನಿಲ್ಲಿಸು, ಆಗ ನೋವಾಗಲ್ಲ. 637 00:48:53,598 --> 00:48:55,308 ನಮ್ಮಲ್ಲಿ ಕೆಲವರಿಗೆ ಹೊರಗಡೆ ಗಾಯಗಳಿವೆ. 638 00:48:55,892 --> 00:48:57,185 ಮತ್ತು ಕೆಲವರಿಗೆ ಒಳಗಡೆ. 639 00:49:06,569 --> 00:49:07,403 ನನಗೆ ಎರಡೂ ಕಡೆ ಇವೆ. 640 00:49:51,823 --> 00:49:53,658 ಡಾ. ಕೇ ಸ್ಕಾರ್ಪೆಟ್ಟ 641 00:52:13,214 --> 00:52:14,215 ಇಲ್ಲ. 642 00:52:22,473 --> 00:52:23,683 ಇಲ್ಲ. 643 00:52:24,684 --> 00:52:28,771 ಸ್ಕಾರ್ಪೆಟ್ಟ 644 00:54:10,790 --> 00:54:12,792 ಉಪ ಶೀರ್ಷಿಕೆ ಅನುವಾದ: ಅನುರಾಧ 645 00:54:12,875 --> 00:54:14,877 ಸೃಜನಶೀಲ ಮೇಲ್ವಿಚಾರಕರು ಮಧುರಾ ಸುಬ್ರಹ್ಮಣ್ಯ