1 00:00:12,388 --> 00:00:14,306 ಹಿಂದಿನದರಲ್ಲಿ 2 00:00:14,390 --> 00:00:15,391 ಅಯ್ಯೋ! 3 00:00:15,474 --> 00:00:16,308 ಏನಾದರೂ ಸಿಕ್ಕಿತಾ? 4 00:00:16,392 --> 00:00:19,520 ಒಡೆಸಾ ಕಾರ್ಯಕ್ರಮ. ಇದು ಥಾಮಸ್ ಗೊಡೊಲ್ಕಿನ್‌ನ ಕಲ್ಪನೆ. 5 00:00:19,603 --> 00:00:23,232 ನನ್ನ ಕೆಲಸವು ವರ್ಷಗಟ್ಟಲೆ ನಡೆಸಿದ ಸಂಶೋಧನೆಯ ಸಂಗ್ರಹ. 6 00:00:23,315 --> 00:00:24,400 ದೇವರೇ! 7 00:00:24,483 --> 00:00:27,403 ಸರಿಯಾದ ಪ್ರಮಾಣದ ಒತ್ತಡದಲ್ಲಿ ನಿಮ್ಮೆಲ್ಲರ ಮಟ್ಟವೂ ಏರಬಹುದು. 8 00:00:29,405 --> 00:00:30,239 -ಮರೀ! ಮರೀ! -ಮರೀ! 9 00:00:30,322 --> 00:00:31,532 ನಾನು ನಿನ್ನ ಅಸ್ತ್ರವಾಗಲ್ಲ. 10 00:00:31,615 --> 00:00:34,285 ನನಗೆ ನೀನು ಅಸ್ತ್ರ ಆಗೋದು ಬೇಡ. 11 00:00:34,368 --> 00:00:35,786 -ಆ್ಯನಬೆತ್? -ಮರೀ? 12 00:00:35,870 --> 00:00:37,621 ನೀನು ಮೋಕ್ಷ. 13 00:00:38,456 --> 00:00:40,082 ಅವಳು ತನ್ನ ತಂಗಿಯನ್ನು ಮತ್ತೆ ಬದುಕಿಸಿದಳು. 14 00:00:40,166 --> 00:00:41,083 ಹೇಗೆ ಮಾಡಿದೆ? 15 00:00:41,167 --> 00:00:42,918 ಅದನ್ನು ಸರಿಪಡಿಸಿದೆ. 16 00:00:44,378 --> 00:00:47,214 ಸೈಫರ್ ಮನೆಯಲ್ಲಿ ಅಧಿಕ ಒತ್ತಡದ ಕೊಠಡಿಯಲ್ಲಿ ಒಬ್ಬ ಹಣ್ಣು ಹಣ್ಣು ಮುದುಕ ಇದ್ದಾನೆ. 17 00:00:47,298 --> 00:00:50,718 ಆ ಕೋಣೆಯಲ್ಲಿ ಸೈಫರ್ ಇಟ್ಟುಕೊಂಡಿದ್ದ ವ್ಯಕ್ತಿ ಥಾಮಸ್ ಗೊಡೊಲ್ಕಿನ್ ಅಂತ ನಮಗೆ ಅನಿಸುತ್ತೆ. 18 00:00:50,801 --> 00:00:51,677 ಥತ್! 19 00:00:51,761 --> 00:00:55,556 ಈ ಶಾಲೆ, ಇದು ಸಾಧಾರಣತೆಯ ಸ್ಮಾರಕವಾಗಿ ಹೋಗಿದೆ. 20 00:00:56,140 --> 00:00:59,351 ಹಾಗಾಗಿ ಈ ಹಿಂಡನ್ನು ಕುಗ್ಗಿಸುವುದು ನನ್ನ ಧ್ಯೇಯ. 21 00:01:00,269 --> 00:01:01,270 ಏನಿದು? 22 00:01:01,353 --> 00:01:04,105 ನನ್ನ ಶಕ್ತಿಗಳಿಂದ, ಅವನು ನನ್ನನ್ನು ನಿಯಂತ್ರಿಸದಂತೆ ತಡೆಯಲು ನನಗೆ ಸಾಧ್ಯ. 23 00:01:04,190 --> 00:01:05,733 ನಮ್ಮಲ್ಲಿ ಯಾರನ್ನೂ ನಿಯಂತ್ರಿಸದಂತೆ ಬಹುಶಃ. 24 00:01:05,816 --> 00:01:08,110 ಗೊಡೊಲ್ಕಿನ್ ಎಲ್ಲದಕ್ಕೂ ಕೀಲಿಕೈಯಾಗಿರಬಹುದು. 25 00:01:08,194 --> 00:01:11,697 ನಾನು ಮಾತ್ರ ಗೊಡೊಲ್ಕಿನ್ ಅನ್ನು ಎಬ್ಬಿಸಿ ಸೈಫರ್ ಅನ್ನು ತಡೆಯಬಲ್ಲೆ. 26 00:01:11,781 --> 00:01:13,824 ನಾನು ಅವನಲ್ಲ! ನಾನು ಅವನಲ್ಲ! 27 00:01:13,908 --> 00:01:15,534 ನಾವು ಹೋಗಬೇಕು, ಈಗಲೇ. 28 00:01:15,618 --> 00:01:16,827 ಅವನು ಸೈಫರ್. 29 00:01:16,911 --> 00:01:18,913 ದೇವರುಗಳು ಈ ಭೂಮಿಯಲ್ಲಿ ನಡೆಯಬೇಕೆಂಬುದು ನಮ್ಮ ಆಸೆ, 30 00:01:18,996 --> 00:01:20,372 ಸರ್ಕಸ್ ಹುಚ್ಚರಲ್ಲ. 31 00:01:20,956 --> 00:01:23,167 ಸರಿ, ಮುಂದಿನವರು ಯಾರು? 32 00:01:58,244 --> 00:01:59,537 ಬೇಗ, ಬೇಗ. 33 00:02:26,730 --> 00:02:29,191 ಜನರೇಶನ್ ವಿ 34 00:02:36,073 --> 00:02:37,575 ಕಾರ್ಪೆಟ್ ಬಗ್ಗೆ ಕ್ಷಮೆ ಇರಲಿ. 35 00:02:38,158 --> 00:02:39,618 ಪರವಾಗಿಲ್ಲ. ಅದು… 36 00:02:40,536 --> 00:02:41,829 ಬಹುಶಃ ಪರವಾಗಿಲ್ಲ. 37 00:02:47,293 --> 00:02:48,668 ಇದು ಹೇಗೆ ಸಾಧ್ಯ? 38 00:02:48,752 --> 00:02:51,338 ಸೈಫರ್ ಜನರನ್ನು ನಿಯಂತ್ರಿಸಲು ಸಾಧ್ಯವೆಂದರೆ, ಇಷ್ಟೂ ಸಮಯ 39 00:02:51,422 --> 00:02:53,340 ಅವನು ಇವನನ್ನು ನಿಯಂತ್ರಿಸುತ್ತಿದ್ದಿರಬೇಕು… 40 00:02:53,424 --> 00:02:55,968 ಡಗ್. ನಾನು ಡಗ್. ಹಾಯ್. 41 00:02:57,261 --> 00:02:59,305 ಏನಾಗುತ್ತಿದೆ ಅಂತ ನನಗೆ ಗೊತ್ತಿಲ್ಲ. 42 00:03:00,139 --> 00:03:02,474 ಆದರೆ ಇದು ನಿಜವಾಗಿದ್ದರೆ, ಎಲ್ಲಾ ಮಾಡಿದ್ದು ಗೊಡೊಲ್ಕಿನ್ ಎಂದರ್ಥ. 43 00:03:02,558 --> 00:03:04,476 60 ವರ್ಷಗಳ ಹಿಂದೆ ಸತ್ತು ಹೋದವನು. 44 00:03:04,560 --> 00:03:06,312 ಮತ್ತು ಈಗ 100 ವರ್ಷ ಆಗಿರಬೇಕಾದವನು. 45 00:03:06,395 --> 00:03:07,855 ಅವನು ಯಾಕೆ ಅಷ್ಟು ಚಿಕ್ಕವನಂತೆ ಇದ್ದ? 46 00:03:09,315 --> 00:03:13,485 ಸೋಲ್ಜರ್ ಬಾಯ್ ಮತ್ತು ಸ್ಟಾರ್ಮ್ಫ್ರಂಟ್ ತಗೊಂಡ ವಿಯನ್ನೇ ಅವನೂ ತಗೊಂಡ. 47 00:03:13,569 --> 00:03:14,737 ಅದನ್ನು ವಿ-ಒನ್ ಅನ್ನುತ್ತಾರೆ. 48 00:03:14,820 --> 00:03:17,573 -ಹಾಗಾಗಿ, ಅವನಿಗೆ ವಯಸ್ಸಾಗಲ್ಲ. -ಆದರೆ ನಿನಗೆ ವಯಸ್ಸಾಗುತ್ತಾ? 49 00:03:17,656 --> 00:03:19,700 ನಾನು ಎರಡನೇ ಕೈಗೊಂಬೆ. 50 00:03:19,783 --> 00:03:22,828 ಮೊದಲನೆಯವನು ಸತ್ತ. 51 00:03:25,706 --> 00:03:27,917 ಒಳ್ಳೆಯ ಸುದ್ದಿ, ವಿಕೋಡಿನ್ ಇದೆ. 52 00:03:28,000 --> 00:03:30,210 ಕೆಟ್ಟ ಸುದ್ದಿ, ಆರು ವರ್ಷಗಳ ಹಿಂದೆ ಅವಧಿ ಮೀರಿದೆ. 53 00:03:30,753 --> 00:03:31,587 ಮತ್ತು ಮಂಜುಗಡ್ಡೆ. 54 00:03:32,630 --> 00:03:34,590 ಧನ್ಯವಾದ. 55 00:03:35,507 --> 00:03:36,675 ದೇವರೇ! 56 00:03:37,343 --> 00:03:40,596 ಮರೀ, ನೀನೇನು ಮಾಡಬಹುದು ನೋಡು. 57 00:03:41,722 --> 00:03:42,973 ಇರಲಿ… 58 00:03:43,057 --> 00:03:48,687 ಅದು 96ರ ಸಮಯ ಮತ್ತು ನನಗೆ ಕೆಲಸ ಸಿಗುತ್ತಿತ್ತು, ವಿಸಿಆರ್‌ಗಳ ದುರಸ್ತಿ ಮಾಡಲು ನೋಡುತ್ತಿದ್ದೆ, 59 00:03:48,771 --> 00:03:50,397 ಮತ್ತು ನನಗೆ ಒಬ್ಬ ವ್ಯಕ್ತಿಯಿಂದ ಕರೆ ಬಂತು. 60 00:03:50,481 --> 00:03:53,192 ಅವರ ಮನೆಗೆ ಹೋದೆ. ಡಾ. ಫೀಲ್ಡರ್. 61 00:03:53,275 --> 00:03:56,820 ಅವರು ಮುದುಕ, ಆದರೆ ಒಳ್ಳೆಯ ಮನುಷ್ಯ. 62 00:03:56,904 --> 00:03:58,530 ಅಜ್ಜನಂತೆ. 63 00:03:58,614 --> 00:04:01,033 ನನ್ನ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರು. 64 00:04:01,116 --> 00:04:05,704 ಅಂದರೆ, ನನ್ನ ಕುಟುಂಬ ಮತ್ತು ನನ್ನ ಸ್ನೇಹಿತರ ಬಗ್ಗೆ. ಮತ್ತು, ಅದು… 65 00:04:06,288 --> 00:04:08,874 ಅದು ಏನೆಂದರೆ, ನನಗೆ ಜೀವನ ಅಂತ ಇರಲಿಲ್ಲ. 66 00:04:08,958 --> 00:04:11,460 ನನ್ನ ಹೆತ್ತವರು ಆಗಲೇ ಹೋಗಿದ್ದರು. 67 00:04:12,419 --> 00:04:14,964 ನನ್ನಿಂದ ಇನ್ನು ಹೆಚ್ಚು ಆಗಲ್ಲ. 68 00:04:15,506 --> 00:04:16,464 ನಾನು ತುಂಬಾ… 69 00:04:17,841 --> 00:04:19,969 ಗೊಡೊಲ್ಕಿನ್ ಅನ್ನು ಸರಿ ಮಾಡಿ. ನಾನು, ನಾನು… 70 00:04:20,052 --> 00:04:21,803 ಕೆಲವು ಗಂಟೆಗಳಲ್ಲಿ ಮತ್ತೆ ಪ್ರಯತ್ನಿಸುವೆ. 71 00:04:21,887 --> 00:04:23,263 ಪ್ರಯತ್ನಿಸಿದ್ದಕ್ಕಾಗಿ ಧನ್ಯವಾದ. 72 00:04:24,890 --> 00:04:27,559 ಆಮೇಲೆ ಗೊಡೊಲ್ಕಿನ್, ನನ್ನ ತಲೆಯೊಳಗೆ ತೂರಿದ, 73 00:04:27,643 --> 00:04:31,230 ಮತ್ತು ಅವನು ನನ್ನಿಂದ ಮಾಡಿಸಿದ ಮೊದಲ ಕೆಲಸ, ಡಾ. ಫೀಲ್ಡರ್ ಅವರ ಕೊಲೆ, 74 00:04:32,982 --> 00:04:35,567 ಮತ್ತು, ನಾನು ಬರಿ ಕೈಗಳಿಂದಲೇ ಅವರನ್ನು ಉಸಿರುಗಟ್ಟಿಸಿದೆ. 75 00:04:38,779 --> 00:04:40,781 ನನಗೆ ಅವರ ಮೇಲೆ ತುಂಬಾ ಕನಿಕರವಾಯಿತು. 76 00:04:40,864 --> 00:04:43,075 ಮತ್ತು ನಾನು ಪ್ರಯತ್ನಿಸಿದೆ, ಗೊತ್ತಾ, ತಡೆಯಲು ಪ್ರಯತ್ನಿಸಿದೆ. 77 00:04:43,158 --> 00:04:46,745 ಆದರೆ ನಾನು ನನ್ನ ಮನಸ್ಸಿನೊಳಗೇ ಒಂದು ಪೆಟ್ಟಿಗೆಯಲ್ಲಿ ಸಿಲುಕಿಕೊಂಡಂತೆ ಇತ್ತು. 78 00:04:46,829 --> 00:04:48,956 ನಿಮ್ಮ ಸ್ವಂತ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಂತೆ. 79 00:04:51,834 --> 00:04:55,504 ಅವನು ಯಾರನ್ನಾದರೂ ನಿಯಂತ್ರಿಸಬಹುದಾದರೆ, ಅವನು ಮರೀಯನ್ನೇ ಯಾಕೆ ನಿಯಂತ್ರಿಸಲಿಲ್ಲ, 80 00:04:55,587 --> 00:04:57,423 ವಾರಗಳ ಹಿಂದೆಯೇ ಅವನನ್ನ ಗುಣಪಡಿಸುವಂತೆ ಯಾಕೆ ಮಾಡಲಿಲ್ಲ? 81 00:04:59,299 --> 00:05:01,260 ಅವನಿಗೆ ಆಗಲ್ಲ. ಅವಳು ತುಂಬಾ ಶಕ್ತಿಶಾಲಿ. 82 00:05:01,343 --> 00:05:02,177 ಇಲ್ಲ. 83 00:05:03,470 --> 00:05:04,513 ನಾನಷ್ಟು ಶಕ್ತಿಶಾಲಿ ಅಲ್ಲ. 84 00:05:04,596 --> 00:05:07,891 ಹೌದು, ನೀನು ಎಲ್ಮೈರಾದಲ್ಲಿದ್ದಾಗ ಅವನು ಹಲವಾರು ಬಾರಿ ಪ್ರಯತ್ನಿಸಿದ. 85 00:05:08,475 --> 00:05:09,435 ಆದರೆ… 86 00:05:09,518 --> 00:05:11,520 ಅವನು ಒಂದು ವಿಷಯದಲ್ಲಿ ಸುಳ್ಳು ಹೇಳುತ್ತಿರಲಿಲ್ಲ, ಒಡೆಸಾ, 87 00:05:11,603 --> 00:05:14,982 ಅದು ನಿಜವಾಗಿಯೂ ನಿನ್ನನ್ನು ಬೇರೆಯದೇ ಮಟ್ಟದಲ್ಲಿ ಇರಿಸಿತು. 88 00:05:24,575 --> 00:05:25,826 ಅವನಿಗೆ ವೈದ್ಯರ ಅವಶ್ಯಕತೆ ಇದೆ. 89 00:05:25,909 --> 00:05:28,454 -ಆಂಬ್ಯುಲೆನ್ಸ್‌ ಕರೆಸಬೇಕಾ? -ಇಲ್ಲ, ಅದು ತುಂಬಾ ಅಪಾಯಕಾರಿ. 90 00:05:29,079 --> 00:05:32,249 ವೈಟ್ ಪ್ಲೇನ್ಸ್‌ನಲ್ಲಿ ಒಬ್ಬ ಸ್ನೇಹಿತನಿದ್ದಾನೆ. ನಾನು ಅವನನ್ನು ನಂಬುತ್ತೇನೆ. 91 00:05:32,832 --> 00:05:33,667 ಇವನನ್ನು ಕರೆದೊಯ್ಯುವೆ. 92 00:05:33,751 --> 00:05:35,586 ನೀವು ಕ್ಯಾಂಪಸ್‌ಗೆ ಹೋಗಿ, ಕಣ್ಣಿಗೆ ಬೀಳದಂತಿರಿ. 93 00:05:35,669 --> 00:05:38,130 ಒಂದು ವಿಷಯ ಹೇಳುವೆ. ಏನೇ ಆಗಲಿ, 94 00:05:38,213 --> 00:05:40,507 ನೀವು ನನಗಾಗಿ ಮಾಡಿದ್ದಕ್ಕೆ ನಾನು ಚಿರಋಣಿ. 95 00:05:41,091 --> 00:05:42,676 ನಿಮಗೆ ಗೊತ್ತಿಲ್ಲ. 96 00:05:42,760 --> 00:05:45,304 ನಾನು ತಪ್ಪಿಸಿಕೊಳ್ಳುತ್ತೇನೆಂದು ಎಂದಿಗೂ ಯೋಚಿಸಿರಲಿಲ್ಲ. 97 00:06:17,961 --> 00:06:20,589 ದೇವರೇ, ಇದು… 98 00:06:22,424 --> 00:06:23,634 ಇದು ಅದ್ಭುತವಾಗಿದೆ. 99 00:06:23,717 --> 00:06:26,512 ನೀನು ಎಷ್ಟೊಂದು ಇನ್ನೂ ನೋಡಿಲ್ಲ. ಬೋಬಾ ಪ್ರಯತ್ನಿಸಿ ನೋಡು. 100 00:06:26,595 --> 00:06:30,349 ಹಾಂ, ಅವು ಈ ಚಿಕ್ಕ, ಅಸಹ್ಯಕರ ಸ್ಕ್ವಿಡ್ ವೃಷಣಗಳಂತೆ. 101 00:06:31,016 --> 00:06:32,183 ಧನ್ಯವಾದ. 102 00:06:36,647 --> 00:06:38,190 ಎಷ್ಟು ಮೃದುವಾಗಿದೆ. 103 00:06:39,233 --> 00:06:41,735 -ಮುಟ್ಟಿ ನೋಡು. -ಹೌದು, ನೂಲುಗಳು ಹೆಚ್ಚಿವೆ. 104 00:06:41,819 --> 00:06:43,278 ಎಲ್ಲವೂ ತುಂಬಾ ಚೆನ್ನಾಗಿದೆ. 105 00:06:44,947 --> 00:06:46,824 ನೀನೂ ಚೆನ್ನಾಗಿದ್ದೀಯ. 106 00:06:48,033 --> 00:06:49,784 ನೀನು ತುಂಬಾ ಸಮಯದಿಂದ ಏನನ್ನೂ ಮುಟ್ಟಿಲ್ಲ ಅಷ್ಟೇ. 107 00:06:50,786 --> 00:06:53,122 ಅಷ್ಟು ವರ್ಷಗಳು. ಏನೂ ಇಲ್ಲದೆ. 108 00:06:53,205 --> 00:06:55,249 ಕಾಂಡೋಮ್ ಒಳಗೆ ವಾಸಿಸಿದಂತೆ. 109 00:06:58,168 --> 00:06:59,086 ಮತ್ತು ಈಗ, 110 00:07:00,379 --> 00:07:02,297 ಎಲ್ಲವನ್ನೂ ಮತ್ತೆ ಅನುಭವಿಸಲು ಆಗೋದು… 111 00:07:06,885 --> 00:07:08,387 ಜೀವನ ಒಂದು ಪವಾಡ. 112 00:07:09,596 --> 00:07:10,556 ಹೂಂ. 113 00:07:11,682 --> 00:07:12,850 ನೀನು ಹೇಳಿದ್ದು ಸರಿ… 114 00:07:13,767 --> 00:07:15,018 ಎಲ್ಲದರ ಬಗ್ಗೆಯೂ. 115 00:07:16,145 --> 00:07:18,897 ಸ್ಟಾರ್ಲೈಟ್‌ಗೆ ಕಾಣುವಂತೆ ಒಡೆಸಾವನ್ನು ಇರಿಸಿದ್ದು. 116 00:07:18,981 --> 00:07:21,400 ಮರೀಯನ್ನು ಮತ್ತೆ ಶಾಲೆಗೆ ಕಳಿಸಿದ್ದು. 117 00:07:22,192 --> 00:07:25,154 ನೀನು ಹೇಳಿದಂತೆಯೇ ಪ್ರತಿ ನಡೆಯೂ ನಡೆಯುತ್ತಿದೆ. 118 00:07:26,029 --> 00:07:28,866 ನಾನು ಅಷ್ಟು ಅದ್ಭುತ. 119 00:07:31,785 --> 00:07:32,619 ಮತ್ತೆ, 120 00:07:33,162 --> 00:07:36,415 ಅವರು ನನ್ನನ್ನು ಈ ಟವರ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಇಟ್ಟಿದ್ದಾರೆ. 121 00:07:37,166 --> 00:07:38,625 -ದುಃಸ್ವಪ್ನ. -ಹೌದು. 122 00:07:39,376 --> 00:07:41,128 ಆದರೆ ಅಷ್ಟು ಕೆಟ್ಟದಾಗಿಲ್ಲ. 123 00:07:41,628 --> 00:07:42,880 ತುಂಬಾ ದೊಡ್ಡದಿದೆ. 124 00:07:44,298 --> 00:07:46,758 ನಾನು ಬಾಲ್ಯದಿಂದಲೂ ಯಾರೊಂದಿಗೂ ವಾಸಿಸಿಲ್ಲ, 125 00:07:47,885 --> 00:07:51,638 ಆದರೆ ನಿನಗೆ ಬೇಕಾದರೆ, ನಿನಗಾಗಿ ಜಾಗ ಮಾಡಿಕೊಡುವೆ. 126 00:07:57,811 --> 00:07:59,855 ಅಥವಾ ಬೇಡ ಬಿಡು. 127 00:08:01,982 --> 00:08:03,525 ನಾನು ನಿನ್ನನ್ನು ಈ ರೀತಿ ಎಂದೂ ನೋಡಿಲ್ಲ. 128 00:08:04,902 --> 00:08:06,445 ಇಷ್ಟು ದುರ್ಬಲ. 129 00:08:09,406 --> 00:08:11,283 ನಿಜ ಹೇಳಬೇಕೆಂದರೆ, ಮೂಡ್ ಹಾಳಾಯಿತು. 130 00:08:11,366 --> 00:08:12,618 ಹಾಳಾಗಿ ಹೋಗು. 131 00:08:13,952 --> 00:08:16,496 ಜೆಸ್ಸಿಕಾ, ನೀನು ನನಗೆ ತುಂಬಾ ಸಂತೋಷ ನೀಡುತ್ತೀಯ. 132 00:08:19,582 --> 00:08:21,376 ಖಂಡಿತ ನಾನು ನಿನ್ನ ಜೊತೆ ಬಂದು ಇರುತ್ತೇನೆ. 133 00:08:21,460 --> 00:08:23,921 ನಾವು ಎಂದಿಗೂ ಬಳಸದ ಒಂದು ಪೆಲೋಟಾನ್ ಅನ್ನು ಖರೀದಿಸಬಹುದು. 134 00:08:24,004 --> 00:08:27,216 ದಿ ಸೆವೆನ್ ಸಮಾವೇಶದ ಮೇಜಿನ ಮೇಲೆ ಮೊಲಗಳಂತೆ ಸೆಕ್ಸ್ ಮಾಡಬಹುದು. 135 00:08:27,674 --> 00:08:28,926 ಅದು ನನಗೂ ಬೇಕು. 136 00:08:30,928 --> 00:08:33,804 ಆದರೆ, ನಿನ್ನನ್ನು ಹೋಮ್ಲ್ಯಾಂಡರ್‌ಗೆ ಪರಿಚಯಿಸಲು ಒಂದು ದಾರಿ ಹುಡುಕಬೇಕು. 137 00:08:34,306 --> 00:08:35,890 ಅವನಿಗೆ ಬೆದರಿಕೆ ಆಗದಂತೆ. 138 00:08:35,974 --> 00:08:38,227 ಅವನಿಗೆ ಅಚ್ಚರಿಗಳು ಆಗಲ್ಲ. 139 00:08:38,809 --> 00:08:40,020 ನಿನಗೆ ಏನು ಬೇಕೋ ಅದು. 140 00:08:41,480 --> 00:08:43,440 ನನಗೆ ಕಲಿಸಲು ಇನ್ನೂ ಒಂದು ತರಗತಿ ಇದೆ. 141 00:08:43,523 --> 00:08:44,900 ಇರು. ಏನು? 142 00:08:44,983 --> 00:08:47,027 ಮೊದಲು, ನಾನು ಉಚ್ಚೆ ಹೊಯ್ಯಲು ಹೋಗುತ್ತೇನೆ. 143 00:08:47,110 --> 00:08:49,404 ಶೌಚಾಲಯದಲ್ಲಿ. ಡಯಾಪರ್‌ನಲ್ಲಿ ಅಲ್ಲ. 144 00:08:49,988 --> 00:08:52,908 ನನ್ನ ಸ್ವಂತ ಶಿಶ್ನವನ್ನು ನನ್ನ ಕೈಯಲ್ಲಿ ಹಿಡಿದುಕೊಂಡು. 145 00:08:54,368 --> 00:08:56,119 ದೇವರೇ, ಎಂತಹ ಅದ್ಭುತ ಲೋಕ. 146 00:08:56,203 --> 00:08:57,663 ತರಗತಿ ಅಂದೆಯಾ? 147 00:08:59,748 --> 00:09:00,791 ಯಾಕೆ? 148 00:09:00,874 --> 00:09:03,669 ಈ ಸ್ಥಳದಿಂದ ನಿನಗೆ ಬೇಕಾದ ಎಲ್ಲವೂ ನಿನಗೆ ಸಿಕ್ಕಿದೆ. 149 00:09:04,920 --> 00:09:05,963 ಎಲ್ಲವೂ ಅಲ್ಲ. 150 00:09:06,838 --> 00:09:08,674 ಥಾಮಸ್, ನನಗೆ ಕೆಲಸವಿದೆ. 151 00:09:08,757 --> 00:09:10,008 ನಮಗೆ ಕೆಲಸವಿದೆ. 152 00:09:10,592 --> 00:09:12,094 ಯಾವುದು ಹೆಚ್ಚು ಮುಖ್ಯ? 153 00:09:13,387 --> 00:09:14,429 ನಾನು ನಿನಗೆ ತೋರಿಸುವೆ. 154 00:09:18,934 --> 00:09:21,770 ಮತ್ತೆ, ಯಾರಾದರೂ ಇದ್ದಾರಾ ಸಂಪರ್ಕಿಸಬಹುದಾದವರು? 155 00:09:22,854 --> 00:09:24,940 ಸಂಬಂಧಿಕರು, ಸ್ನೇಹಿತರು, ಸಹಾಯ ಮಾಡಬಹುದಾದ ಯಾರಾದರೂ? 156 00:09:25,023 --> 00:09:26,316 ಬಹುಶಃ ಇಲ್ಲ. 157 00:09:26,775 --> 00:09:27,776 ಅದು ಹೇಗಿರುತ್ತೆ? 158 00:09:27,859 --> 00:09:31,321 "ಹೇ, ನೀನು 30 ವರ್ಷಗಳಿಂದ ನೋಡದೇ ಇರುವ ವ್ಯಕ್ತಿಯನ್ನು ನೋಡಿಕೊಳ್ಳಲು ಬಯಸುತ್ತೀಯಾ?" 159 00:09:31,405 --> 00:09:32,990 ಯಾರಾದರೂ ಕರೆ ಮಾಡಬಹುದಾದವರು ಇರಲೇಬೇಕು. 160 00:09:33,949 --> 00:09:35,450 ನಾನು ಜನರಿಗೆ ಹಿಂಸೆ ನೀಡಿದ್ದೇನೆ. 161 00:09:37,369 --> 00:09:38,996 ನಿಜವಾದ ಚಿತ್ರಹಿಂಸೆ. 162 00:09:39,913 --> 00:09:41,081 ಅದು ನೀನಲ್ಲ. 163 00:09:41,832 --> 00:09:42,790 ಅದು ಗೊಡೊಲ್ಕಿನ್. 164 00:09:43,625 --> 00:09:45,877 ಹೂಂ. ಆದರೆ ನನ್ನಂತೆಯೇ ಅನಿಸಿತು. 165 00:09:48,964 --> 00:09:50,882 ನಿಮಗೆ ಆಂಡ್ರೆ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿತ್ತು. 166 00:09:54,136 --> 00:09:56,305 ಕ್ಷಮಿಸಿ, ತಲೆ ಕೆಡಿಸಲು ಹೇಳಲಿಲ್ಲ. ನಾನು… 167 00:09:56,388 --> 00:09:58,598 ನಿಮಗೆ ತಿಳಿದಿರಬೇಕು ಅಂದುಕೊಂಡೆ. 168 00:10:00,309 --> 00:10:01,435 ಹೇಳು. 169 00:10:03,395 --> 00:10:05,314 ಅಂದರೆ, ನನಗೆ ಆ ಹುಡುಗ ತುಂಬಾ ಇಷ್ಟ ಇದ್ದ. 170 00:10:06,440 --> 00:10:10,193 ಗೊಡೊಲ್ಕಿನ್‌ಗೆ ತುಂಬಾ ಕಿರಿಕಿರಿ ಮಾಡುತ್ತಿದ್ದ. 171 00:10:10,277 --> 00:10:12,571 ಅವನ ತಲೆ ಕೆಡಿಸಲು ದಾರಿ ಹುಡುಕುತ್ತಿದ್ದ. 172 00:10:12,654 --> 00:10:18,118 ಮತ್ತು ಹೇಗೋ ಒಮ್ಮೆ ಅವನ ಕಾಫಿಯಲ್ಲಿ ಉಚ್ಚೆ ಹೊಯ್ದಿದ್ದ. 173 00:10:18,201 --> 00:10:21,997 ಇಂದಿಗೂ, ಹೇಗೆಂದು ನನಗೆ ಗೊತ್ತಿಲ್ಲ. 174 00:10:22,080 --> 00:10:25,834 ಬಹುಶಃ ಗಾರ್ಡ್‌‌ನಿಂದ ಮಾಡಿಸಿದನೋ ಏನೋ? ಅದು … 175 00:10:25,917 --> 00:10:27,669 ಅದ್ಭುತ ವೀರ. 176 00:10:28,337 --> 00:10:31,214 ಅದು 1,000% ನನ್ನ ಮಗನೇ. 177 00:10:31,298 --> 00:10:32,299 ಅಲ್ವಾ? 178 00:10:32,799 --> 00:10:34,217 ಪೂರ್ತಿ ನಿರ್ಭೀತನಾಗಿದ್ದ. 179 00:10:34,301 --> 00:10:37,804 ಅವನು ತನ್ನ ಸ್ನೇಹಿತರ ಸಲುವಾಗಿ ಎಲ್ಲವನ್ನೂ ಪಣಕ್ಕಿಟ್ಟ. 180 00:10:41,641 --> 00:10:45,145 ನಿಮ್ಮ ಮಗ ನಾನು ನೋಡಿದ ಅತ್ಯಂತ ಶ್ರೇಷ್ಠ ವೀರ. 181 00:10:45,937 --> 00:10:46,980 ತುಂಬಾ ಖುಷಿ ಆಯಿತು ಕೇಳಿ. 182 00:11:22,015 --> 00:11:24,684 ಅಂದರೆ, ಅದಂತೂ ಸ್ಪಷ್ಟ. 183 00:11:24,768 --> 00:11:27,229 -ಮರೀ ಹೋಗಬೇಕು. -ಎಲ್ಲಿಗೆ? 184 00:11:28,063 --> 00:11:30,399 ನನಗೆ ಗೊತ್ತಿಲ್ಲ, ಇಲ್ಲಿ ಬಿಟ್ಟು ಎಲ್ಲಿಗಾದರೂ. 185 00:11:31,191 --> 00:11:33,777 ಅಂದರೆ, ಗೊಡೊಲ್ಕಿನ್ ಅವಳನ್ನು ನಿಯಂತ್ರಿಸಬೇಕು ಅಂತಿದ್ದಾನೆ. 186 00:11:34,319 --> 00:11:36,446 ಅಂದರೆ, ಅವಳ ತಲೆ ಒಳಗೆ ಹೋಗಬೇಕೆಂದಿದ್ದಾನೆ. 187 00:11:36,530 --> 00:11:39,116 ಅವನು ಶಾಶ್ವತವಾಗಿ ಅವಳೊಳಗೆ ಇರಬಹುದು. 188 00:11:44,454 --> 00:11:46,164 ಬಚ್ಚಲುಮನೆಯಲ್ಲಿ ಬದಲಾಯಿಸಿಕೋ. 189 00:11:46,748 --> 00:11:47,999 ಹಜಾರದ ಪಕ್ಕದಲ್ಲಿದೆ. 190 00:11:48,290 --> 00:11:49,918 ಸರಿ. ಧನ್ಯವಾದ. 191 00:11:52,003 --> 00:11:53,880 ಮರೀ, ಏನು ಮಾಡಬೇಕೆಂದಿದ್ದೀಯಾ? 192 00:11:53,964 --> 00:11:56,550 ನೀವು ಹೇಳಿದಂತೆ ಮಾಡುವೆ. 193 00:11:56,633 --> 00:11:58,635 ಗೊಡೊಲ್ಕಿನ್ ನಿನ್ನನ್ನು ನಿಯಂತ್ರಿಸೋದು ನನಗೆ ಬೇಡ. 194 00:11:58,718 --> 00:12:00,929 -ನನಗೂ. -ಅವನು ಈಗಾಗಲೇ ಅಲ್ಲಿದ್ದ. 195 00:12:02,556 --> 00:12:05,475 ನಾನು ತುಂಬಾ ವಿಶೇಷ ಅಂತ ನನಗೆ ಭ್ರಮೆ ಮೂಡಿಸಿದ, 196 00:12:05,559 --> 00:12:08,061 ನಾನು ವಿಶೇಷ ಅವತಾರ ಎಂಬಂತೆ. 197 00:12:10,105 --> 00:12:11,773 ಮತ್ತು ನಾನದನ್ನು ನಂಬಿದೆ. 198 00:12:13,358 --> 00:12:15,152 ನಾನು ವಿಶೇಷವಲ್ಲ. 199 00:12:15,735 --> 00:12:19,531 ನಾನು ಎಂದಿಗೂ ದುಃಖಿಯಾದಾಗ ತನ್ನನ್ನು ತಾನೇ ಕತ್ತರಿಸಿಕೊಳ್ಳುವ ಹುಡುಗಿಯಷ್ಟೇ. 200 00:12:19,614 --> 00:12:21,074 ಸುಮ್ಮನಿರು. 201 00:12:21,158 --> 00:12:22,534 ಹೇ. 202 00:12:22,617 --> 00:12:24,161 ನೀವು ಇಲ್ಲದೇ ಇದ್ದಿದ್ದರೆ, 203 00:12:24,244 --> 00:12:27,706 ನಾನು ಬಹುಶಃ ವಾಂತಿ ಮಾಡುತ್ತಾ 16 ಪಿಜ್ಜಾಗಳನ್ನು ತಿನ್ನುತ್ತಿರುತ್ತಿದ್ದೆ. 204 00:12:27,789 --> 00:12:32,961 ಮತ್ತು ಛೇ, ಛೇ, ಥತ್. ಅದನ್ನು ಹೇಳುತ್ತಿರುವಾಗಲೂ, ನನ್ನ ಮೆದುಳಿನ ಒಂದು ಭಾಗ, 205 00:12:33,545 --> 00:12:35,547 "ಹುಡುಗಿ, ಅದು ಒಳ್ಳೆಯ ಉಪಾಯ, ಮಾಡು" ಎನ್ನುತ್ತಿದೆ. 206 00:12:35,630 --> 00:12:37,466 ಹೇ. ನೀನು ಹಾಗೆ ಮಾಡಲ್ಲ. 207 00:12:38,049 --> 00:12:38,925 ನಾನು ಮಾಡಿದೆ. 208 00:12:41,386 --> 00:12:42,429 ಎಲ್ಮೈರಾದಲ್ಲಿ. 209 00:12:46,349 --> 00:12:47,184 ನೀನದನ್ನು ನೋಡಿದೆ. 210 00:12:50,687 --> 00:12:51,897 ನಾವು ತಲೆಕೆಟ್ಟವರು. 211 00:12:55,233 --> 00:12:56,359 ನಾವೆಲ್ಲರೂ. 212 00:12:56,443 --> 00:12:59,321 ಆದರೆ ಈ ಹೊರೆಯನ್ನು ಹೊರಲು 213 00:12:59,404 --> 00:13:02,449 ನಮಗೆ ಸಹಾಯ ಮಾಡಲು ಜನರಿದ್ದಾರೆ. 214 00:13:03,867 --> 00:13:05,660 ಅಂದರೆ, ನಾವೆಲ್ಲಾ ಒಂದು ರೀತಿಯ… 215 00:13:07,162 --> 00:13:08,580 ಮುದ್ದಾದ ಪುಟ್ಟ 216 00:13:09,748 --> 00:13:11,166 ತಲೆಕೆಟ್ಟ ಕುಟುಂಬ. 217 00:13:12,542 --> 00:13:14,294 ಮತ್ತು ನಾವು ಒಟ್ಟಿಗೆ ಇರುತ್ತೇವೆ. 218 00:13:16,046 --> 00:13:17,839 ಸರಿ. ಅಪ್ಪಿಕೊಳ್ಳೋಣ. 219 00:13:17,923 --> 00:13:20,050 ನಾವು ಅಪ್ಪಿಕೊಳ್ಳುತ್ತಿದ್ದೇವಾ? ದೇವರೇ. 220 00:13:20,133 --> 00:13:22,594 ಇದು ಮೂರು ಜನರ ಸೆಕ್ಸ್‌ಗೆ ಒಂದು ಹೆಜ್ಜೆ ಹತ್ತಿರ. ಚೆನ್ನಾಗನಿಸುತ್ತಿದೆ. 221 00:13:22,677 --> 00:13:23,929 -ಇಲ್ಲ. -ದೇವರೇ. 222 00:13:24,012 --> 00:13:26,223 ನನಗೆ… ನನಗೆ… ಬೇಡ, ಧನ್ಯವಾದ. 223 00:13:26,306 --> 00:13:27,599 ನಿನಗಾಗಿ ನಾವು ಇದ್ದೇವೆ. 224 00:13:28,350 --> 00:13:31,102 ನಾನು… ಹೋಗಿ ಸಂಡಾಸು ಮಾಡಿ ಬರುವೆ. 225 00:13:31,186 --> 00:13:33,188 ನಾವು ದಾರಿ ಹುಡುಕುತ್ತೇವೆ, ಸರಿನಾ? 226 00:13:41,071 --> 00:13:41,905 ಹೇ. 227 00:13:45,116 --> 00:13:46,034 ಕ್ಷಮಿಸು. 228 00:13:46,701 --> 00:13:47,744 ಇರಲಿ. 229 00:13:49,120 --> 00:13:50,288 ನಿಜವಾಗಲೂ. 230 00:14:02,342 --> 00:14:03,718 ದೇವರೇ. 231 00:14:10,642 --> 00:14:11,685 ಕ್ಷಮಿಸು. 232 00:14:11,768 --> 00:14:12,936 ದೇವರೇ. 233 00:14:13,019 --> 00:14:14,020 ನಾನು ಕ್ಷಮಿಸಿದೆ. 234 00:14:14,646 --> 00:14:15,564 ಮರೀ. 235 00:14:21,069 --> 00:14:22,153 ಧನ್ಯವಾದ. 236 00:14:25,574 --> 00:14:26,575 ಥಾಮಸ್ ಗೊಡೊಲ್ಕಿನ್ 237 00:14:26,658 --> 00:14:29,202 ಮರ್ತ್ಯರು ದೇವರುಗಳಾಗುವ ಮಾರ್ಗ ಇಲ್ಲಿಯೇ ಪ್ರಾರಂಭವಾಗುತ್ತದೆ. 238 00:14:35,834 --> 00:14:37,127 ಶುಭೋದಯ. 239 00:14:37,210 --> 00:14:39,004 ನಾನು ಥಾಮಸ್ ಗೊಡೊಲ್ಕಿನ್. 240 00:14:39,087 --> 00:14:43,258 ನೀವು ನನ್ನನ್ನು ಚೌಕಟ್ಟಿನಲ್ಲಿರುವ ನನ್ನ ಸ್ಮಾರಕ ಪ್ರತಿಮೆಯಿಂದ ಗುರುತಿಸಬಹುದು, 241 00:14:43,341 --> 00:14:45,969 ಅಥವಾ ಅಕ್ಷರಶಃ ಎಲ್ಲದರಲ್ಲೂ ನನ್ನ ಹೆಸರು ಇರುವುದರಿಂದ, 242 00:14:46,678 --> 00:14:48,847 ಅಥವಾ ನನ್ನ ಸಾವಿನ ಸುಳ್ಳು ವರದಿಗಳಿಂದ. 243 00:14:48,930 --> 00:14:51,016 ದೇವರೇ. 244 00:14:51,099 --> 00:14:54,311 ಇಷ್ಟು ವರ್ಷಗಳಲ್ಲಿ ನನ್ನ ಬಗ್ಗೆ ಅನೇಕ ಸುಳ್ಳುಗಳನ್ನು ಹೇಳಲಾಗಿದೆ, 245 00:14:54,394 --> 00:14:56,104 ಹಾಗಾಗಿ ನಾನು ಎಲ್ಲಾ ಸ್ಪಷ್ಟಪಡಿಸುವೆ. 246 00:14:56,187 --> 00:14:59,274 ನಾನು ಹೆಮ್ಮೆಯ ಸೂಪರ್‌ಹೀರೋ, 247 00:15:00,317 --> 00:15:03,445 ಮತ್ತು ನಾನು ಒಂದು ಭಯಾನಕ ತಪ್ಪನ್ನು ಸರಿಪಡಿಸಲು ಬಂದಿದ್ದೇನೆ. 248 00:15:03,528 --> 00:15:05,572 ಹೋಮ್ಲ್ಯಾಂಡರ್‌ಗೆ ಹೇಳುವ ರೀತಿ ಅದಲ್ಲ. 249 00:15:05,655 --> 00:15:10,744 ಈ ವಿಶ್ವವಿದ್ಯಾಲಯ, ನನ್ನ ವಿಶ್ವವಿದ್ಯಾಲಯ, ನಿಮ್ಮನ್ನು ವಿಫಲಗೊಳಿಸಿದೆ, ಅದು ಇಂದಿಗೆ ಕೊನೆ. 250 00:15:10,827 --> 00:15:12,245 ತಕ್ಷಣದಿಂದ ಜಾರಿಗೆ ಬರುವಂತೆ, 251 00:15:12,329 --> 00:15:15,415 ಎಲ್ಲಾ ವಿದ್ಯಾರ್ಥಿಗಳ ಶ್ರೇಯಾಂಕಗಳನ್ನು ಶೂನ್ಯಕ್ಕೆ ಮರುಹೊಂದಿಸಲಾಗಿದೆ. 252 00:15:15,498 --> 00:15:19,919 ಮತ್ತು ನಾನು ನನ್ನ ಸುಧಾರಿತ ಸೆಮಿನಾರ್ ಅನ್ನು ಇಲ್ಲಿನ ಪ್ರತಿ ವಿದ್ಯಾರ್ಥಿಗೂ ತೆರೆಯುತ್ತಿರುವೆ. 253 00:15:20,003 --> 00:15:22,464 ವಾಹ್, ಹಾಂ. 254 00:15:22,547 --> 00:15:26,593 ನಿಮ್ಮಲ್ಲಿ ಪ್ರತಿಯೊಬ್ಬರೂ, ನಿಮ್ಮ ಶಕ್ತಿ ಅಥವಾ ಮೇಜರ್ ಅನ್ನು ಲೆಕ್ಕಿಸದೆ, 255 00:15:27,177 --> 00:15:29,512 ಮೊದಲ ಹತ್ತು ಸ್ಥಾನ ಸೇರಲು ಅವಕಾಶವಿದೆ. 256 00:15:29,596 --> 00:15:33,975 ಅದರ ಜೊತೆ ಬರುವ ಎಲ್ಲಾ ಜಾಹೀರಾತುಗಳು ಮತ್ತು ನಗರೀ ಒಪ್ಪಂದದ ಅವಕಾಶಗಳೊಂದಿಗೆ. 257 00:15:34,059 --> 00:15:37,395 ಮತ್ತು ದಿ ಸೆವೆನ್ ಸೇರಲು ಒಂದು ಹೆಜ್ಜೆ ಹತ್ತಿರ ಆಗುವ ಅವಕಾಶ. 258 00:15:37,479 --> 00:15:38,897 ನಂಬಲಸಾಧ್ಯ. 259 00:15:38,980 --> 00:15:41,399 ನಿಮ್ಮ ಆಹ್ವಾನಗಳು ಶೀಘ್ರದಲ್ಲೇ ನಿಮ್ಮ ಇನ್‌ಬಾಕ್ಸ್ ತಲುಪಲಿವೆ. 260 00:15:41,483 --> 00:15:46,029 ಈ ಸಂಸ್ಥೆಗೆ ಇದು ಒಂದು ಒಳ್ಳೆಯ ದಿನ. 261 00:15:46,112 --> 00:15:50,617 ಮತ್ತು ಕೆಲವು ಅದೃಷ್ಟವಂತರಿಗೆ, ನಿಜವಾಗಿಯೂ ಅಸಾಧಾರಣರಾಗುವ ಅವಕಾಶ. 262 00:15:51,201 --> 00:15:52,327 ಇದನ್ನು ನೋಡಿದಿರಾ? 263 00:15:52,410 --> 00:15:53,620 ಏನು? ಇಲ್ಲ. ನಾವು… 264 00:15:53,703 --> 00:15:55,789 ಒಂದು ಸೆಮಿನಾರ್. ಗೊಡೊಲ್ಕಿನ್ ಎಲ್ಲರನ್ನೂ ಆಹ್ವಾನಿಸಿದ್ದಾನೆ. 265 00:15:55,872 --> 00:15:57,290 ಅವನು ಏನು ಮಾಡುತ್ತಿದ್ದಾನೆ? 266 00:15:59,250 --> 00:16:01,086 ಇದು ಒಂದು ಬಲೆ, ಖಂಡಿತ. 267 00:16:01,169 --> 00:16:03,213 ಹೌದು. ಆದರೆ ಯಾವುದಕ್ಕೆ ಬಲೆ? 268 00:16:03,296 --> 00:16:04,506 ನಿನಗೆ. 269 00:16:04,589 --> 00:16:08,968 ಇರು. ಹಾಗಾದರೆ, ಏನು? ಮರೀ ಕಾಪಾಡಲು ಬರುತ್ತಾಳಂತ ಎಲ್ಲರನ್ನೂ ಸೆಮಿನಾರ್‌ಗೆ ಕರೆಯುವನಾ? 270 00:16:09,052 --> 00:16:10,845 ಅವಳು ಖಂಡಿತ ಹೋಗಲ್ಲ. 271 00:16:10,929 --> 00:16:15,392 ನನಗೆ ಗೊತ್ತಿರೋದು ಒಂದೇ, ನಾನು ವಿಶೇಷ ಅವತಾರ ಅಲ್ಲ, ಹಾಗಾಗಿ… 272 00:16:16,768 --> 00:16:19,813 ನಾವು ಏನೇ ಮಾಡಿದರೂ, ಒಟ್ಟಿಗೆ ಮಾಡೋಣ. 273 00:16:19,896 --> 00:16:22,273 ಅವನು ಏನೇ ಯೋಜಿಸುತ್ತಿದ್ದರೂ, ಈ ಎಲ್ಲಾ ಜನರು ಅಪಾಯದಲ್ಲಿದ್ದಾರೆ. 274 00:16:22,357 --> 00:16:23,692 ನಾವು ಎಲ್ಲರಿಗೂ ಎಚ್ಚರಿಕೆ ನೀಡಬೇಕು. 275 00:16:23,775 --> 00:16:24,734 ಹೇಗೆ? 276 00:16:27,487 --> 00:16:28,405 ಹೇಗೆಂದು ನನಗೆ ಗೊತ್ತು. 277 00:16:28,488 --> 00:16:30,073 ನಾನು ಮರೀ ಮೊರೊ. 278 00:16:30,824 --> 00:16:33,743 ಮತ್ತು ಇದು ಗಾಡ್ ಯುನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ, 279 00:16:33,827 --> 00:16:37,747 ಥಾಮಸ್ ಗೊಡೊಲ್ಕಿನ್ ಸೆಮಿನಾರ್‌ಗೆ ಹೋಗುವ ಮೂಲಕ ಶ್ರೇಯಾಂಕ ಏರುತ್ತಾರೆ ಎಂದು ಭಾವಿಸುವ ಎಲ್ಲರಿಗೂ. 280 00:16:37,831 --> 00:16:39,374 ಅವನನ್ನು ನಂಬಬೇಡಿ. 281 00:16:39,457 --> 00:16:40,959 ಹೋಗಬೇಡಿ. 282 00:16:41,042 --> 00:16:44,379 ಯಾವುದೇ ವರ್ಗ, ಯಾವುದೇ ಶ್ರೇಣಿ ನಿಮ್ಮ ಜೀವಕ್ಕಿಂತ ಮಿಗಿಲಲ್ಲ. 283 00:16:48,049 --> 00:16:50,552 ನಿಮ್ಮಲ್ಲಿ ಯಾರಿಗಾದರೂ ಸೆಮಿನಾರ್‌ಗೆ ಆಹ್ವಾನ ಸಿಕ್ಕಿತಾ? 284 00:16:50,635 --> 00:16:52,971 ಬಾಂಡೇಜ್ ಬೇಬೀಸ್ ಕೆಲಸ ಮಾಡುವಾಗ ಮಾತಾಡುವಂತಿಲ್ಲ. 285 00:16:53,054 --> 00:16:54,931 ನಿನಗದು ಗೊತ್ತಿರಬೇಕು, ಸ್ಯಾಮ್. 286 00:16:55,014 --> 00:16:58,184 ರೂಫಸ್, ನೀನು ಸೆಮಿನಾರ್‌ಗೆ ಹೋಗುವಂತಿಲ್ಲ, ಸರಿನಾ? ಅದು ತುಂಬಾ ಅಪಾಯಕಾರಿ. 287 00:16:58,268 --> 00:17:00,729 ನಿನ್ನ ಮಾತು ಯಾಕೆ ಯಾರಾದರೂ ಕೇಳಬೇಕು? 288 00:17:00,812 --> 00:17:03,273 ನಿನಗೆ ನೀಡಿದ ಹೊಸ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ. 289 00:17:03,898 --> 00:17:05,650 ನಿಜವಾಗಲೂ? 290 00:17:05,733 --> 00:17:07,819 ಸಾವಿರ ವರ್ಷದ ವ್ಯಕ್ತಿ ಸಮಾಧಿಯಿಂದ ಎದ್ದು, 291 00:17:07,902 --> 00:17:10,320 ಎಲ್ಲರನ್ನೂ ವಶಪಡಿಸಿಕೊಳ್ಳುತ್ತಾನೆ, ನೀನು ಇಷ್ಟು ಸಮಾಧಾನದಲ್ಲಿದ್ದೀಯಾ? 292 00:17:10,405 --> 00:17:13,199 -ಗೊಡೊಲ್ಕಿನ್ ನಮಗೆ ಏನು ಮಾಡುತ್ತಾನೆ? -ನಾವು ಅವನಿಗಾಗಿ ಮರೀಯನ್ನು ತರಬೇಕೆಂದವನ ಆಸೆ, 293 00:17:13,282 --> 00:17:15,117 ಅದನ್ನು ಸಾಧ್ಯವಾಗಿಸಲು ಅವನು ಏನು ಬೇಕಾದರೂ ಮಾಡುತ್ತಾನೆ… 294 00:17:15,201 --> 00:17:16,618 ಹಾಗಾಗಿ ಹೋಗಬೇಡಿ. 295 00:17:17,328 --> 00:17:20,205 ದೇವರೇ, ಕ್ಷಮಿಸು ಕಣೋ, ಇದು ಹೀಗೆ ಆಗಬೇಕೆಂದು ನಾನು ಬಯಸಿರಲಿಲ್ಲ, 296 00:17:20,290 --> 00:17:23,417 ಆದರೆ ನಿನ್ನ ಸ್ವಂತ ಸುರಕ್ಷತೆಗಾಗಿ, ನಾನು ನಿಮ್ಮನ್ನು… 297 00:17:26,421 --> 00:17:29,424 ಯಾವುದೇ ಶಕ್ತಿ ಇಲ್ಲ, ಮೂರ್ಖರೇ! 298 00:17:29,507 --> 00:17:31,342 ಲ್ಯಾನ್ಸ್! ನೀನು ಮೋಸ ಮಾಡುತ್ತಿದ್ದೀಯ ಅಂತ ಗೊತ್ತು… 299 00:17:31,426 --> 00:17:33,136 ಬೇವರ್ಸಿ. 300 00:17:34,012 --> 00:17:35,263 ಅವನು ನಶೆ ಬರಿಸಿದ. 301 00:17:37,724 --> 00:17:39,476 ಹೇ, ನಿನ್ನ ಮುಖದ ಮೇಲೆ ಶಿಶ್ನ ಇದೆ. 302 00:17:40,226 --> 00:17:41,352 ನಿನ್ನ ಮುಖದಲ್ಲೂ, ಸ್ಯಾಮ್. 303 00:17:44,606 --> 00:17:46,274 -ಏನು, ಆಟಗಾರರೇ? -ಥತ್. 304 00:17:46,858 --> 00:17:49,444 ಏನಪ್ಪಾ? ನೀನು ಹೋಗಲಿಲ್ವಾ? 305 00:17:49,527 --> 00:17:52,071 ನನಗೆ ಇಡೀ ಸೆಮಿನಾರ್ ವಿಷಯ ಅನುಮಾನಾಸ್ಪದವಾಗಿ ಕಂಡಿತು. 306 00:17:52,155 --> 00:17:53,698 ನಿಮ್ಮ ಜೊತೆ ಸಮಯ ಕಳೆಯೋಣ ಅಂದುಕೊಂಡೆ. 307 00:17:53,782 --> 00:17:56,075 ಆದರೂ ಶಿಶ್ನ ಬರೆಯುವಾಗ ಏನೂ ಮಾಡಲಿಲ್ವಾ? 308 00:17:56,159 --> 00:17:57,619 ಅದು ನನ್ನ ಅತ್ಯುತ್ತಮ ಕೆಲಸಗಳಲ್ಲಿ ಒಂದು. 309 00:17:58,912 --> 00:18:00,538 ಏನು ಹೇಳಲಿ? 310 00:18:01,456 --> 00:18:02,832 ನನಗೆ ನಾವು ತುಂಬಾ ಇಷ್ಟ. 311 00:18:03,416 --> 00:18:04,709 ಮತ್ತು ನನಗೆ ನಮ್ಮ ಬಗ್ಗೆ ಗೊತ್ತು… 312 00:18:05,668 --> 00:18:08,004 ಒಳಗಿಂದ ಹೊರಗೆ, ಪೂರ್ತಿಯಾಗಿ. 313 00:18:08,087 --> 00:18:11,966 ಸೂಪರ್‌ಹ್ಯೂಮನ್ಸ್ ಏನು ಮಾಡಬಹುದಂತ ನನಗೆ ಗೊತ್ತು. 314 00:18:12,801 --> 00:18:15,428 ನಾವು ಇನ್ನೂ ಬಹಳ ಎತ್ತರಕ್ಕೆ ತಲುಪಬೇಕಿದೆ. 315 00:18:16,262 --> 00:18:19,015 ನೀನು ರೂಫಸ್, ಒಬ್ಬ ಸೈಕಿಕ್. 316 00:18:19,098 --> 00:18:22,018 ನಿಜ ಹೇಳಬೇಕೆಂದರೆ, ಸರ್, ನಾನು ಸ್ವಲ್ಪ ಪಾಲಿಮ್ಯಾತ್… 317 00:18:22,101 --> 00:18:25,313 ತನ್ನ ಸಹ-ವಿದ್ಯಾರ್ಥಿಗಳ ಮೇಲೆ ತನ್ನ ಶಕ್ತಿಯನ್ನು ಬಳಸಿ 318 00:18:25,396 --> 00:18:27,482 ಸ್ವಂತ ಲೈಂಗಿಕ ತೃಪ್ತಿ ಪಡೆಯುವವ. 319 00:18:27,565 --> 00:18:31,152 -ಇಲ್ಲ, ನಾನು ಎಂದಿಗೂ… -ಈಗ ಇಲ್ಲ, ಸರ್. ಅವನಿಗೆ ಶಿಶ್ನ ಇಲ್ಲ. 320 00:18:32,153 --> 00:18:33,363 ಸ್ಪಷ್ಟವಾಗಿ ಹೇಳುತ್ತೇನೆ, 321 00:18:34,572 --> 00:18:36,866 ನಿಮ್ಮನ್ನು ಈ ಸೆಮಿನಾರ್‌ಗೆ ಆಹ್ವಾನಿಸಿರುವುದು 322 00:18:37,492 --> 00:18:39,744 ನೀವು ಅಸಾಧಾರಣರು ಎಂಬ ಕಾರಣಕ್ಕಾಗಿ ಅಲ್ಲ, 323 00:18:40,411 --> 00:18:44,457 ನೀವು ವಿಫಲರು ಎಂಬ ಕಾರಣಕ್ಕೆ. 324 00:18:47,126 --> 00:18:50,964 ನಿಮಗೆ ನೀಡಲಾದ ಉಡುಗೊರೆಗಳಿಗೆ ಅನರ್ಹರು ಎಂಬ ಕಾರಣಕ್ಕೆ. 325 00:18:51,506 --> 00:18:54,300 ಈ ಸಂಸ್ಥೆಗೆ ಅನರ್ಹರು. 326 00:18:54,884 --> 00:18:58,930 ನೀವು ಸಂತೃಪ್ತರಾಗಿದ್ದೀರಿ, ನಿಮ್ಮ ಶಕ್ತಿಯನ್ನು ಲೈಂಗಿಕತೆಗಾಗಿ, ಹಣಕ್ಕಾಗಿ ಬಳಸಿದ್ದೀರಿ. 327 00:18:59,013 --> 00:19:00,181 ಒಳಬರುವ ಕರೆ ಹೋಮ್ಲ್ಯಾಂಡರ್ 328 00:19:00,265 --> 00:19:01,266 ಲೈಕ್‌ಗಳಿಗಾಗಿ ಬಳಸಿದ್ದೀರಿ. 329 00:19:01,766 --> 00:19:04,227 ನಾಚಿಕೆಗೇಡು. 330 00:19:04,811 --> 00:19:09,482 ಮತ್ತು ಈಗ, ನೀವು ನಮ್ಮ ನಡುವೆ ನಿಮ್ಮ ಸ್ಥಾನವನ್ನು ಗಳಿಸಬೇಕು. 331 00:19:10,108 --> 00:19:12,068 ನೀವು ನಮ್ಮಲ್ಲಿ ಸೇರಿದವರು ಎಂದು ಸಾಬೀತುಪಡಿಸಿ, 332 00:19:13,403 --> 00:19:15,238 ಅಥವಾ ಪ್ರಯತ್ನಿಸುತ್ತಾ ಸಾಯಿರಿ. 333 00:19:15,321 --> 00:19:17,949 ಏನು ಮಾಡುತ್ತಿದ್ದೀಯಾ? 334 00:19:18,032 --> 00:19:19,701 ಒಂದು ಸರಳ ಪರೀಕ್ಷೆ. 335 00:19:20,535 --> 00:19:24,956 ನಾನು ಆ ಗುಂಡಿಯನ್ನು ಒತ್ತಲು ಪ್ರಯತ್ನಿಸುತ್ತೇನೆ. 336 00:19:25,832 --> 00:19:31,337 ಮತ್ತು ನೀವು ಹೇಗಾದರೂ ನನ್ನನ್ನು ತಡೆಯಬೇಕು. 337 00:19:38,094 --> 00:19:39,387 ಲೀಸಾ ಹೆನ್ನಿಂಗ್. 338 00:19:40,471 --> 00:19:46,144 ಸದ್ಯಕ್ಕೆ 32 ನೇ ಸ್ಥಾನದಲ್ಲಿರುವೆ ಮತ್ತು ಇಂಪ್ರೊವ್ ಪರಿಚಯದಲ್ಲಿ ಫೇಲಾಗುತ್ತಿರುವೆ. 339 00:19:53,359 --> 00:19:54,569 ಏನಿದು, ಡೇನಿಯಲ್? 340 00:19:54,652 --> 00:19:57,405 ಅವನು ನನ್ನ ತಲೆಯಲ್ಲಿದ್ದು, ನನ್ನನ್ನು ನಿಯಂತ್ರಿಸುತ್ತಿದ್ದ. 341 00:20:12,545 --> 00:20:13,504 ಇದು ಹಾಳಾಗಲಿ. 342 00:20:43,076 --> 00:20:45,286 ಸರಿ, ಬಹುಶಃ ಮುಂದಿನ ಗುಂಪು ಉತ್ತಮ ಕೆಲಸ ಮಾಡಬಹುದು. 343 00:20:45,995 --> 00:20:48,373 ಅವನು ಅವರನ್ನು ಕೊಲ್ಲುತ್ತಿದ್ದಾನೆ. ಅಲ್ಲಿಗೆ ಹೋಗಬೇಡಿ! 344 00:20:48,831 --> 00:20:51,668 ಅವನು ಅವರನ್ನು ಕೊಲ್ಲುತ್ತಿದ್ದಾನೆ! ಅವರನ್ನು ಕೊಲ್ಲುತ್ತಿದ್ದಾನೆ. 345 00:20:51,751 --> 00:20:54,087 -ಹೇ, ಏನಾಗುತ್ತಿದೆ? -ಗೊಡೊಲ್ಕಿನ್ ಸೆಮಿನಾರ್ ಕೋಣೆಯಲ್ಲಿ, 346 00:20:54,170 --> 00:20:57,090 ಅವನು ಎಲ್ಲರನ್ನೂ ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡುತ್ತಿದ್ದಾನೆ. ಅವನು ಹುಚ್ಚ. 347 00:20:59,926 --> 00:21:01,803 -ಹಿಂಡನ್ನು ಕುಗ್ಗಿಸುವುದು. -ಏನು? 348 00:21:01,886 --> 00:21:04,722 ಎಲ್ಲಾ ದುರ್ಬಲ, ನಿಷ್ಪ್ರಯೋಜಕ ಸೂಪ್ಸ್‌ನ ಕೊಲ್ಲಬೇಕೆಂದಿದ್ದಾನಂತ ಪೋಲಾರಿಟಿ ಹೇಳಿದರು, 349 00:21:04,806 --> 00:21:06,557 ಅದಕ್ಕೇ ಅವನು ಸೆಮಿನಾರ್ ಅನ್ನು ತೆರೆದಿದ್ದು. 350 00:21:06,641 --> 00:21:09,268 ಒಂದೊಂದೇ ಗುಂಪನ್ನು ಅವನು ನಾಶ ಮಾಡುತ್ತಾ ಹೋಗುತ್ತಾನೆ. 351 00:21:09,352 --> 00:21:11,562 ನೀನು ಅವರನ್ನು ಉಳಿಸಲು ಬರದ ಹೊರತು. 352 00:21:13,481 --> 00:21:14,649 ಜೋರ್ಡನ್, 353 00:21:15,233 --> 00:21:17,193 ನೋಡು, ಒಂದು ಸಾಧ್ಯತೆ ಇದೆ ಅಂತ ನನಗೆ ಗೊತ್ತು. ಅಂದರೆ… 354 00:21:18,111 --> 00:21:22,907 ನಿನ್ನನ್ನು ಬಿಟ್ಟು ಹೋಗಿದ್ದಕ್ಕೆ ನೀನು ನನ್ನನ್ನು ಎಂದಿಗೂ ಕ್ಷಮಿಸದಿರುವ… 355 00:21:23,491 --> 00:21:24,909 ನಿಜಕ್ಕೂ ದೊಡ್ಡ ಸಾಧ್ಯತೆ ಇದೆ. 356 00:21:25,410 --> 00:21:27,412 -ಅದೂ ಎರಡು ಬಾರಿ. ಮತ್ತು… -ಮರೀ, ನಾನು… 357 00:21:28,579 --> 00:21:29,622 ನಿನ್ನನ್ನು ಕ್ಷಮಿಸುತ್ತೇನೆ. 358 00:21:30,206 --> 00:21:31,666 ನಿಜವಾಗಲೂ? 359 00:21:31,749 --> 00:21:33,501 ಆದರೆ ನಾವು ಒಟ್ಟಿಗೆ ಇರಲು ಸಾಧ್ಯವಿಲ್ಲ. 360 00:21:35,420 --> 00:21:36,462 ಏನು? 361 00:21:38,756 --> 00:21:40,508 ಮರೀ, ಇದು ಕೆಲಸ ಮಾಡಲ್ಲ. 362 00:21:45,096 --> 00:21:47,015 ನಾವು ಯಾವಾಗಲೂ ಒಂದೇ ಜಾಗಕ್ಕೆ ಬಂದು ನಿಲ್ಲುತ್ತೇವೆ. 363 00:21:47,098 --> 00:21:50,727 -ಇಲ್ಲ. -ಮತ್ತು ನನಗೆ ನಿನ್ನ ಮೇಲೆ ಕೋಪ ಇಷ್ಟ ಇಲ್ಲ. 364 00:21:52,770 --> 00:21:55,732 ಆದರೆ ನಿನ್ನ ಸ್ನೇಹಿತರಾಗಿರಲು ಇಷ್ಟ ಪಡುವೆ. 365 00:21:56,607 --> 00:22:00,236 ಜೋರ್ಡನ್, ಸ್ವಲ್ಪ ಇರು. ನಾವು… 366 00:22:00,987 --> 00:22:02,280 ಮರೀ! 367 00:22:02,363 --> 00:22:04,198 ನೀನು ಆ ಬೆತ್ತಲೆ ವ್ಯಕ್ತಿಯನ್ನು ನೋಡಿದೆಯಾ? 368 00:22:07,827 --> 00:22:10,872 -ಆ್ಯನಬೆತ್, ನಿನಗೆ ಇನ್ನೂ ಏನಾದರೂ ಕಂಡಿತಾ? -ಹೊಸದೇನೂ ಇಲ್ಲ. 369 00:22:10,955 --> 00:22:13,416 ಸರಿ, ನೀನು ಇಲ್ಲಿಂದ ಹೊರಡಬೇಕು. 370 00:22:15,251 --> 00:22:16,711 ಇದು ಸುರಕ್ಷಿತವಲ್ಲ. 371 00:22:16,794 --> 00:22:19,589 ನನ್ನ ಜೀವನದುದ್ದಕ್ಕೂ ನಾನು ಈ ದರ್ಶನಗಳಿಂದ ಓಡಿಹೋಗುತ್ತಿದ್ದೇನೆ. 372 00:22:19,672 --> 00:22:23,301 ಬಹುಶಃ ಅದು ತಪ್ಪಾಗಿರಬಹುದು, ಬಹುಶಃ ನಾನು ಅದರ ಕಡೆಗೆ ಓಡಬೇಕು. 373 00:22:23,384 --> 00:22:26,512 ಯಾವುದರ ಕಡೆಗೆ ಓಡಬೇಕು? ಗೊಡೊಲ್ಕಿನ್ ಮರೀಯನ್ನು ನಿಯಂತ್ರಿಸಲು ಬಿಡಲು ಆಗಲ್ಲ. 374 00:22:26,596 --> 00:22:28,181 -ಹೇ, ಕೇಳಿ! -ಹೇ! 375 00:22:30,141 --> 00:22:32,268 -ನಾವು ನಿಮ್ಮನ್ನು ಹುಡುಕುತ್ತಿದ್ದೆವು. -ಒಂದು ಉಪಾಯ ಇದೆ. 376 00:22:37,315 --> 00:22:38,691 ಅದನ್ನು ನೋಡಿದೆಯಾ? 377 00:22:38,775 --> 00:22:40,860 ನಾನು ಅವರೆಲ್ಲರನ್ನೂ ನಿಯಂತ್ರಿಸುತ್ತಿದ್ದೆ. 378 00:22:40,943 --> 00:22:44,113 ನಾನು ಒಂದೇ ಬಾರಿಗೆ ಇಬ್ಬರಿಗಿಂತ ಹೆಚ್ಚು ಜನರನ್ನು ಇದುವರೆಗೂ ನಿಯಂತ್ರಿಸಲು ಆಗಿರಲಿಲ್ಲ. 379 00:22:44,906 --> 00:22:47,617 ದೇವರೇ. ನನಗೆ ಬಾಯಾರಿಕೆಯಾಗಿದೆ. 380 00:22:52,580 --> 00:22:53,456 ಏನು ಮಾಡುತ್ತಿದ್ದೀಯಾ? 381 00:22:57,210 --> 00:22:58,711 ಅದು ಅದ್ಭುತವಾಗಿತ್ತು. 382 00:22:59,295 --> 00:23:00,671 ಕಠಿಣ ಪರಿಶ್ರಮ. 383 00:23:00,755 --> 00:23:03,508 ಸ್ವಲ್ಪ ಭಯಾನಕವೂ ಕೂಡ. ಆದರೆ ರೋಮಾಂಚಕ. 384 00:23:04,258 --> 00:23:05,843 ಅದರ ಒತ್ತಡ. 385 00:23:05,927 --> 00:23:08,012 ಥಾಮಸ್, ನನಗೆ ಉತ್ತರಿಸು. 386 00:23:12,433 --> 00:23:13,643 ಕಲಿಯುತ್ತಿದ್ದೇನೆ. 387 00:23:13,726 --> 00:23:15,895 ನನ್ನ ಸ್ವಂತ ತತ್ವಗಳನ್ನು ನನ್ನ ಮೇಲೇ ಅನ್ವಯಿಸಿಕೊಳ್ಳುತ್ತಿದ್ದೇನೆ. 388 00:23:15,978 --> 00:23:18,523 ನಾನು ನನ್ನ ಸ್ವಂತ ವಿಕಾಸವನ್ನು ವೇಗಗೊಳಿಸುತ್ತಿದ್ದೇನೆ. 389 00:23:19,315 --> 00:23:20,858 -ಯಾಕೆ? -ನಮಗಾಗಿ. 390 00:23:20,942 --> 00:23:21,984 ಕಟ್ಟುಕಥೆ. 391 00:23:22,944 --> 00:23:25,863 ಇದು ನಮ್ಮ ಯೋಜನೆಯ ಭಾಗವಲ್ಲ. 392 00:23:26,447 --> 00:23:29,325 ಇಲ್ಲ, ಕಟ್ಟುಕಥೆ ಅಲ್ಲ. ನಾನಿದನ್ನು ನಮ್ಮ ಭವಿಷ್ಯಕ್ಕಾಗಿ ಮಾಡುತ್ತಿದ್ದೇನೆ. 393 00:23:29,408 --> 00:23:31,160 ಒಮ್ಮೆ ನಾನು ಸಾಕಷ್ಟು ಶಕ್ತಿಶಾಲಿಯಾದ ಮೇಲೆ, 394 00:23:32,453 --> 00:23:34,288 ನಾನು ಅವಳನ್ನು ನಿಯಂತ್ರಿಸಲು ಸಾಧ್ಯವಾಗುತ್ತೆ. 395 00:23:35,623 --> 00:23:38,042 ಮೊರೊ? ಯಾಕೆ? 396 00:23:38,584 --> 00:23:39,460 ಅದು… 397 00:23:40,503 --> 00:23:43,548 ನಾನು ಒಡೆಸಾ ಮಗುವನ್ನು ನಿಯಂತ್ರಿಸುವಷ್ಟು ಬಲಶಾಲಿಯಾದರೆ, 398 00:23:43,631 --> 00:23:46,175 ಇನ್ನೊಂದನ್ನು ನಿಯಂತ್ರಿಸುವಷ್ಟು ಬಲಶಾಲಿಯಾಗಿದ್ದೇನೆ ಎಂದರ್ಥ. 399 00:23:47,802 --> 00:23:48,928 ಹೋಮ್ಲ್ಯಾಂಡರ್. 400 00:23:51,472 --> 00:23:52,473 ಇಲ್ಲ. 401 00:23:53,850 --> 00:23:54,976 ಅದನ್ನು ಮಾಡಲು ಯಾವ ಕಾರಣವೂ ಇಲ್ಲ. 402 00:23:55,059 --> 00:23:56,602 ಬಹಳಷ್ಟು ಕಾರಣಗಳಿವೆ. 403 00:23:56,686 --> 00:23:58,146 ಈ ಶಾಲೆಯನ್ನು ನೋಡು. 404 00:23:58,229 --> 00:24:02,608 ಶ್ರೇಷ್ಠ ಜೀವಿಗಳೆಂದು ಹೇಳಲಾಗುವ ಈ ನಿಷ್ಪ್ರಯೋಜಕ ಉದಾಹರಣೆಗಳನ್ನು ನೋಡು. 405 00:24:02,692 --> 00:24:05,111 ಮತ್ತು ಇದು ಇಲ್ಲಿ ಮಾತ್ರವಲ್ಲ. ಎಲ್ಲೆಡೆ ಇದೆ. 406 00:24:05,194 --> 00:24:06,154 -ಸರಿ. -ಪೂರ್ತಿ ವಾಟ್. 407 00:24:06,237 --> 00:24:11,159 ನಾವು ಇಷ್ಟು ದಿನ ತಡೆಹಿಡಿಯಲ್ಪಟ್ಟಿರುವುದಕ್ಕೆ ಏಕೈಕ ಕಾರಣ ಹೋಮ್ಲ್ಯಾಂಡರ್. 408 00:24:11,242 --> 00:24:13,119 ನೀನು ನಿನಗೆ ಏನು ಮಾಡಿಕೊಳ್ಳುತ್ತಿದ್ದೀಯ, ನೋಡು. 409 00:24:13,202 --> 00:24:16,539 -ನಿನ್ನ ಕೈಗಳನ್ನು ನೋಡು. ನಿನ್ನ… -ಓಷನ್‌ಲ್ಯಾಂಡ್ ಡಾಲ್ಫಿನ್ ಕೆಯ್ಯುವ 410 00:24:16,622 --> 00:24:18,499 ದಿ ಡೀಪ್ ಯಾಕೆ ದಿ ಸೆವೆನ್‌ನಲ್ಲಿದ್ದಾನೆ? 411 00:24:18,583 --> 00:24:20,918 ಅಥವಾ ಫೈರ್‌ಕ್ರ್ಯಾಕರ್‌ನಂತಹ ದರಿದ್ರ ಸ್ಫೋಟಕ ವ್ಯಕ್ತಿ? 412 00:24:21,002 --> 00:24:25,548 ಹೋಮ್ಲ್ಯಾಂಡರ್ ತುಂಬಾ ನಾಜೂಕು, ಅವನು ತುಂಬಾ ದುರ್ಬಲ, 413 00:24:25,631 --> 00:24:29,260 ಅವನು ಯಾವುದೇ ಸ್ಪರ್ಧೆಯನ್ನು ಸಹಿಸಲ್ಲ. 414 00:24:29,343 --> 00:24:31,804 ಅದಕ್ಕಾಗಿ, ನಾವು ಸಾಧಾರಣತೆಯನ್ನು ಅಳವಡಿಸಿಕೊಳ್ಳಬೇಕಾಯಿತು, 415 00:24:31,888 --> 00:24:34,432 ನವೀನ ಕಾರ್ಯಗಳನ್ನು ಆಚರಿಸಲು. 416 00:24:35,349 --> 00:24:36,309 ಆದರೆ ಇನ್ನಿಲ್ಲ. 417 00:24:36,392 --> 00:24:40,771 ಇಲ್ಲ. ನಮ್ಮ, ನಮ್ಮ ಯೋಜನೆ. 418 00:24:40,855 --> 00:24:44,692 ಎರಡನೇ ಹಂತ ನೆನಪಿದೆಯಾ? ಹೋಮ್ಲ್ಯಾಂಡರ್ ಅದರಲ್ಲಿ ಪ್ರಮುಖ ಭಾಗ. 419 00:24:45,401 --> 00:24:46,569 ನನಗೆ ಗೊತ್ತು… 420 00:24:47,528 --> 00:24:49,322 ಆದರೆ ನನ್ನ ಯೋಜನೆ ಅದಕ್ಕಿಂತ ಉತ್ತಮವಾಗಿದೆ. 421 00:24:50,281 --> 00:24:53,951 ಥಾಮಸ್, ನನಗೆ ಇದನ್ನು ಅಪಾಯಕ್ಕೆ ಒಡ್ಡಲು ಇಷ್ಟ ಇಲ್ಲ. 422 00:24:54,535 --> 00:24:59,665 ನಾವು ಇಷ್ಟೆಲ್ಲಾ ಎದುರಿಸಿದ ನಂತರ, ಇಷ್ಟೆಲ್ಲಾ ಅಡೆತಡೆಗಳನ್ನು ಜಯಿಸಿದ ನಂತರ, 423 00:24:59,749 --> 00:25:01,792 ನಾನು ಇದನ್ನು ಒಟ್ಟಿಗೆ ಮಾಡಲು ಬಯಸುತ್ತೇನೆ. 424 00:25:02,627 --> 00:25:05,463 ನಿನ್ನೊಂದಿಗೆ, ಎಲ್ಲವನ್ನೂ. 425 00:25:08,174 --> 00:25:09,550 ನಿನಗೂ ಅದೇ ಬೇಕು, ಅಲ್ವಾ? 426 00:25:15,014 --> 00:25:16,474 ನಮಗೆ ಸಂಗೀತ ಬೇಕು. 427 00:25:46,671 --> 00:25:49,298 ನಾನು ಹೇಳುತ್ತಿರುವುದು, ಅಂತ್ಯ ನಿಜವಾಗಿಯೂ ಅಷ್ಟು ಚೆನ್ನಾಗಿರಲಿಲ್ಲ ಅಂತ. 428 00:25:49,382 --> 00:25:50,758 ನೀನು ಏಲಿಯನ್ ರಾಣಿಯನ್ನು ಕೊಂದೆ, 429 00:25:50,841 --> 00:25:53,302 ಇದು ಇನ್ನು ಮುಂದೆ ಮೊಟ್ಟೆಗಳು ಹೊರಬರುವುದನ್ನು ತಡೆಯಬೇಕಿತ್ತು, 430 00:25:53,386 --> 00:25:57,223 ಏಕೆಂದರೆ ಆಕೆಯ ಉಸಿರಲ್ಲಿ ಇದ್ದ ಹೆಚ್ಚಿನ ಮಟ್ಟದ ಅಮೋನಿಯಾ ಮೊಟ್ಟೆಯ ಚೀಲಗಳನ್ನು ಪೋಷಿಸುತ್ತಿತ್ತು. 431 00:25:57,306 --> 00:25:59,684 ಇದನ್ನು ಎರಡನೇ ಚಿತ್ರದಲ್ಲಿ ತೋರಿಸಿದ್ದರು. 432 00:26:00,851 --> 00:26:03,980 ಹೂಂ. ಅಂದರೆ, ಇಲ್ಲ. ಅಂದರೆ, ಅರ್ಥ ಆಯಿತು. 433 00:26:04,063 --> 00:26:05,356 ನೋಡು, ನನಗೆ ಅರ್ಥ ಆಗುತ್ತೆ. 434 00:26:05,439 --> 00:26:08,025 ಖಂಡಿತ, ನಿಮ್ಮ ಸ್ಟುಡಿಯೋ ಹುಡುಗರೆಲ್ಲರೂ, 435 00:26:08,109 --> 00:26:09,777 "ಮುಂದಿನ ಭಾಗಕ್ಕಾಗಿ ಬೀಜ ನೆಡಬೇಕು" ಎನ್ನುತ್ತಾರೆ. 436 00:26:10,361 --> 00:26:13,489 ಆದರೆ ಅದು ನಿಮ್ಮ ಅಭಿಮಾನಿ ಬಳಗಕ್ಕೆ ಒಂದು ರೀತಿಯ ಅಪಚಾರ ಎಂದು ನನಗೆ ಅನಿಸುತ್ತೆ, 437 00:26:13,572 --> 00:26:17,034 ಮತ್ತು ಒಳ್ಳೆಯ ಕಥೆಯೂ ಅಲ್ಲ ಅಂತ. 438 00:26:17,785 --> 00:26:20,037 ಹಾಗಾದರೆ, ನೀನು ಈಗ ಮಾತಾಡಬಹುದಾ? 439 00:26:21,414 --> 00:26:24,542 ನೋವಾರ್, ನೀನು ಹೋಗಬಹುದು. 440 00:26:24,625 --> 00:26:27,545 ಹೇ. ಹೇ, ನಾನವನನ್ನು ಪರಿಶೀಲಿಸುತ್ತಿದ್ದೆ ಅಷ್ಟೇ. 441 00:26:27,628 --> 00:26:28,796 ತೊಲಗು ಇಲ್ಲಿಂದ. 442 00:26:29,255 --> 00:26:30,256 ಖಂಡಿತ. 443 00:26:32,216 --> 00:26:33,676 ಭೇಟಿಯಾಗಿ ಹೆಮ್ಮೆ ಆಯಿತು. 444 00:26:41,726 --> 00:26:44,061 ಸೇಜ್, ನೀನು ನನ್ನನ್ನು ಬಂಧಿಸುವ ಅಗತ್ಯವಿರಲಿಲ್ಲ. 445 00:26:44,645 --> 00:26:45,521 ಹೂಂ, 446 00:26:46,188 --> 00:26:48,816 ನೋಡು, ನಾನು ಮೊದಲೇ ಹೇಳಿದಂತೆ, 447 00:26:49,400 --> 00:26:51,235 ಇದೆಲ್ಲವೂ ಒಂದು ದೊಡ್ಡ ತಪ್ಪು ತಿಳುವಳಿಕೆ ಅಷ್ಟೇ. 448 00:26:51,319 --> 00:26:54,196 -ನಾನು ಅವನನ್ನು ಆಸ್ಪತ್ರೆಗೆ ಒಯ್ಯುತ್ತಿದ್ದೆ… -ಅವಳು ನಿನ್ನನ್ನು ಸರಿಪಡಿಸಿದಳು. 449 00:26:54,905 --> 00:26:55,740 ನನಗೆ… 450 00:26:55,823 --> 00:26:57,992 ನಿನ್ನ ಬಲಭಾಗದ ಪಾರ್ಶ್ವವಾಯು ಹೋಗಿದೆ, 451 00:26:58,075 --> 00:27:00,202 ನಿನ್ನ ಬಲಗೈಯ ನಡುಕ ಕೂಡ ಮಾಯವಾಗಿದೆ. 452 00:27:01,829 --> 00:27:03,080 ಅದು ತಪ್ಪಾಗಿತ್ತು. 453 00:27:05,875 --> 00:27:07,877 ನೀನು ದುರ್ಬಲನಾಗಿದ್ದಾಗ ಹೆಚ್ಚು ಬಲಶಾಲಿಯಾಗಿದ್ದೆ. 454 00:27:09,170 --> 00:27:14,425 ಕಳೆದುಕೊಳ್ಳಲು ಏನೂ ಇಲ್ಲದ ಮನುಷ್ಯನಿಗಿಂತ ಹೆಚ್ಚು ಶಕ್ತಿಶಾಲಿ ಯಾರೂ ಇಲ್ಲ. 455 00:27:18,054 --> 00:27:19,305 ಹೆಂಡತಿಯನ್ನು ಪ್ರೀತಿಸುತ್ತಿದ್ದೆಯಾ? 456 00:27:19,889 --> 00:27:20,765 ಏನು? 457 00:27:20,848 --> 00:27:25,061 ಕ್ಯಾನ್ಸರ್, ಅಲ್ವಾ? ಆಮೇಲೆ ನಿನ್ನ ಮಗನನ್ನು ಕಳೆದುಕೊಂಡೆ. 458 00:27:30,066 --> 00:27:33,986 ಅಷ್ಟು ನೋವು ನಿನಗೆ ಯಾಕೆ ಬೇಕಿತ್ತು? 459 00:27:34,070 --> 00:27:38,074 ನಾನು ನಿನ್ನ ಜೊತೆ ನನ್ನ ಮಗನ ಬಗ್ಗೆ ಅಥವಾ ನನ್ನ ಹೆಂಡತಿಯ ಬಗ್ಗೆ ಮಾತಾಡುತ್ತಿಲ್ಲ. 460 00:27:39,241 --> 00:27:41,952 ನೀನು ಆದರೂ ಸಾಯುವೆ, ಪೊಲಾರಿಟಿ. 461 00:27:42,036 --> 00:27:43,621 ಇವತ್ತಲ್ಲ ಅಷ್ಟೇ. 462 00:27:45,623 --> 00:27:48,209 ಹೇಗೂ ಅದು ಮುಖ್ಯವಲ್ಲ. 463 00:27:49,251 --> 00:27:50,753 ಎಲ್ಲವೂ ಒಂದೇ ರೀತಿ ಕೊನೆಯಾಗೋದು. 464 00:28:44,557 --> 00:28:46,725 ವ್ಯಾನ್ಸ್, ನನ್ನ ಮುಂದಿನ ತರಗತಿ ಎಲ್ಲಿದೆ? 465 00:28:48,978 --> 00:28:49,937 ವ್ಯಾನ್ಸ್! 466 00:28:59,155 --> 00:29:03,033 ಒಳಗೆ ಬನ್ನಿ. ಸಾಕಷ್ಟು ಜಾಗ ಇದೆ. ಬನ್ನಿ. 467 00:29:11,667 --> 00:29:16,088 ಸ್ಪಷ್ಟವಾಗಿ, ನಾನು ನಿಮ್ಮೆಲ್ಲರ ಜೊತೆ ತುಂಬಾ ಮೃದುವಾಗಿ ವರ್ತಿಸುತ್ತಿದ್ದೇನೆ. 468 00:29:17,214 --> 00:29:19,133 ಹಾಗಾಗಿ ನಾವು ಒತ್ತಡವನ್ನು ಹೆಚ್ಚಿಸಬೇಕಾಗಿದೆ. 469 00:29:20,801 --> 00:29:21,969 ವ್ಯಾನ್ಸ್. 470 00:29:23,053 --> 00:29:26,557 ಸೆಮಿನಾರ್‌ಗೆ ಇನ್ನೂ ಒಬ್ಬ ವಿದ್ಯಾರ್ಥಿ ಇದ್ದಾರೆ. 471 00:29:43,491 --> 00:29:46,285 ಮರೀ, ನೀನು ಬೇಗ ಬಂದೆ. 472 00:29:46,911 --> 00:29:48,954 ನಾವು ನಿನಗಾಗಿ ಇನ್ನೂ ತಯಾರಿಲ್ಲ. 473 00:29:49,038 --> 00:29:52,082 ಇನ್ನೊಂದೆರಡು ಗಂಟೆ ಬಿಟ್ಟು ಬರುವೆಯಾ? 474 00:29:52,917 --> 00:29:54,710 ನೀನು ಎಲ್ಲರನ್ನೂ ಹೋಗಲು ಬಿಟ್ಟರೆ, 475 00:29:55,711 --> 00:29:57,046 ನಾನು ನಿನ್ನನ್ನು ಕೊಲ್ಲಲ್ಲ. 476 00:29:57,129 --> 00:30:01,217 ಅದು, ತುಂಬಾ ಒಳ್ಳೆಯ ಕೊಡುಗೆ ಅನಿಸುತ್ತೆ. 477 00:30:02,635 --> 00:30:04,053 ಏನು ಹೇಳುತ್ತೀರಿ, ಮಕ್ಕಳಾ? 478 00:30:05,930 --> 00:30:09,391 ಅಂದಹಾಗೆ, ನೀನು ನಿನ್ನ ಕೈಗಳನ್ನು ಯಾಕೆ ಬಳಸುತ್ತೀಯ ಅಂತ ನನಗೆ ಸಂಪೂರ್ಣವಾಗಿ ಅರ್ಥವಾಯಿತು. 479 00:30:10,976 --> 00:30:12,937 ಅದು ಸಹಾಯ ಮಾಡಲ್ಲ, ಆದರೆ… 480 00:30:16,649 --> 00:30:20,027 ಚೆನ್ನಾಗಿ ಅನಿಸುತ್ತೆ. 481 00:30:45,594 --> 00:30:46,845 -ಜೋರ್ಡನ್, ಈಗ! -ಥತ್! 482 00:30:49,974 --> 00:30:51,475 ದೇವರೇ! 483 00:30:51,559 --> 00:30:53,018 ಅಯ್ಯೋ, ದೇವರೇ! 484 00:30:54,770 --> 00:30:56,146 ದೇವರೇ! 485 00:31:43,569 --> 00:31:45,070 ಅವನನ್ನು ಹಿಡಿದುಕೋ, ಆ್ಯಲಿ! 486 00:31:47,281 --> 00:31:48,657 ಹಾರ್ಪರ್, ಈಗ! 487 00:31:51,327 --> 00:31:52,244 ಅದು ಕೆಲಸ ಮಾಡಿತಾ? 488 00:31:55,122 --> 00:31:56,498 ನನಗೆ ಅವನ ಶಕ್ತಿ ಇದೆ. 489 00:31:56,957 --> 00:31:59,710 ನಾನು ಅವನನ್ನು ನಿಯಂತ್ರಿಸುತ್ತಿದ್ದೇನೆ. ದೇವರೇ! 490 00:32:08,510 --> 00:32:10,012 ಹೇ, ಕೇಳಿ. 491 00:32:10,095 --> 00:32:12,681 ನಾನು ಅವರನ್ನು ನಿಯಂತ್ರಿಸುತ್ತಿದ್ದೇನಾ? 492 00:32:12,765 --> 00:32:13,682 ಹೌದು! 493 00:32:14,767 --> 00:32:16,518 ಈಗ ಅವರನ್ನು ನಿಯಂತ್ರಿಸಬೇಡ. 494 00:32:20,481 --> 00:32:22,024 ದೇವರೇ, ಅದು ಕೆಲಸ ಮಾಡಿತು. 495 00:32:22,107 --> 00:32:23,651 ನಾವು ಎಲ್ಲರನ್ನೂ ಇಲ್ಲಿಂದ ಹೊರಗೆ ಒಯ್ಯಬೇಕು. 496 00:32:23,734 --> 00:32:26,278 ಅವನು ಸಹಜ ಸ್ಥಿತಿಗೆ ಮರಳಲು 50 ಸೆಕೆಂಡುಗಳಿವೆ. ಬೇಗ ಮಾಡೋಣ! 497 00:32:26,362 --> 00:32:28,739 -ಎಲ್ಲರೂ ಹೊರಗೆ! -ಬನ್ನಿ. ಇಲ್ಲಿಂದ ಹೋಗೋಣ. 498 00:32:28,822 --> 00:32:30,407 ಬನ್ನಿ. ಹೋಗೋಣ. 499 00:32:31,450 --> 00:32:33,077 ನೀವು ನನ್ನನ್ನು ಉಳಿಸಿದಿರಿ. 500 00:32:33,160 --> 00:32:34,244 ಬನ್ನಿ, ಹೋಗೋಣ. 501 00:32:57,351 --> 00:32:58,644 ನಾವು ನಿನ್ನನ್ನು ಸೋಲಿಸಿದೆವು. 502 00:33:02,189 --> 00:33:03,399 ನಾವೆಲ್ಲರೂ. 503 00:33:07,069 --> 00:33:08,821 ನಿಷ್ಪ್ರಯೋಜಕರೂ ಕೂಡ. 504 00:33:30,050 --> 00:33:30,968 ಧನ್ಯವಾದ. 505 00:33:53,157 --> 00:33:55,492 ವಿಕಾಸದ ಕೀಲಿಕೈ ಏನು ಗೊತ್ತಾ? 506 00:33:56,785 --> 00:33:57,870 -ಒತ್ತಡ. -ಒತ್ತಡ. 507 00:33:58,912 --> 00:34:00,998 ಎಷ್ಟೆಂದರೂ, ಅದೇ ವಜ್ರಗಳನ್ನು ಮಾಡೋದು. 508 00:34:01,665 --> 00:34:02,624 ಮರೀ? 509 00:34:27,608 --> 00:34:28,692 ದೇವರೇ. 510 00:34:29,275 --> 00:34:30,485 ಇದೇ. 511 00:34:31,779 --> 00:34:32,946 ಇದೇ ಕಂಡಿದ್ದು. 512 00:34:33,447 --> 00:34:34,739 ಇಲ್ಲಿಂದ ಹೋಗು, ಆ್ಯನಬೆತ್. 513 00:34:34,822 --> 00:34:37,242 ಇಲ್ಲ, ಆ್ಯನಬೆತ್. ಇರು. 514 00:34:39,328 --> 00:34:40,161 ಅವಳನ್ನು ಬಿಡು! 515 00:34:51,965 --> 00:34:53,132 ನನ್ನ ಸ್ನೇಹಿತರೇ. 516 00:34:54,592 --> 00:34:59,014 ಈಗ ಕಠಿಣ ಆಯ್ಕೆಗಳ ಸಮಯ. 517 00:35:04,937 --> 00:35:10,567 ನಿಮ್ಮಲ್ಲಿ ಹೆಚ್ಚಿನವರು ಸೂಪರ್-ಎಬ್ಲ್ಡ್ ಸಾಮರ್ಥ್ಯದ 518 00:35:10,651 --> 00:35:12,778 ಪರಿಪೂರ್ಣ ಮಾದರಿಗಳು. 519 00:35:13,320 --> 00:35:16,657 ಆದರೆ, ನಾನು ಸಂಪೂರ್ಣವಾಗಿ ಪ್ರಾಮಾಣಿಕವಾಗಿ ಹೇಳುವುದಾದರೆ, 520 00:35:16,740 --> 00:35:20,410 ನಾನು ಇದುವರೆಗೆ ಭೇಟಿಯಾದ ಅತಿ ಕೆಟ್ಟ ಪ್ರೀಕಾಗ್ ನೀನು. 521 00:35:21,703 --> 00:35:23,705 ಮತ್ತು ನೀನು ಇಲ್ಲಿ ಓದುವುದೂ ಇಲ್ಲ, ಚಿನ್ನ. 522 00:35:25,999 --> 00:35:27,793 ದರಿದ್ರ ಬೇವರ್ಸಿ! 523 00:35:28,544 --> 00:35:30,045 ನಾನು ನಿನ್ನನ್ನು ಕೊಲ್ಲುತ್ತೇನೆ. 524 00:35:30,629 --> 00:35:35,050 ಮತ್ತು ದೌರ್ಬಲ್ಯಕ್ಕಿಂತ ಕೆಟ್ಟದಾದ ಏಕೈಕ ವಿಷಯ… 525 00:35:38,971 --> 00:35:40,305 ದ್ರೋಹ. 526 00:35:40,389 --> 00:35:43,976 ನೀವೆಲ್ಲರೂ ನಿಮ್ಮ ರೀತಿಯವರಿಗೆ ದ್ರೋಹ ಮಾಡಿದ್ದೀರಿ. 527 00:35:48,063 --> 00:35:50,524 ಈ ಶಾಲೆಯಲ್ಲಿ ನಿಮಗೆ ಜಾಗವಿಲ್ಲ… 528 00:35:52,985 --> 00:35:54,403 ಅಥವಾ ಮುಂಬರಲಿರುವ ಪ್ರಪಂಚದಲ್ಲಿ. 529 00:35:55,863 --> 00:35:56,864 ಮರೀ! 530 00:36:03,203 --> 00:36:04,079 ಮರೀ! 531 00:37:05,265 --> 00:37:06,808 ಅದು ಆಂಡ್ರೆಗಾಗಿ. 532 00:37:10,979 --> 00:37:13,440 ಮಟ್ಟ ಹೆಚ್ಚಿಸಿದ್ದಕ್ಕೆ ಧನ್ಯವಾದಗಳು, ಹುಚ್ಚ. 533 00:37:16,276 --> 00:37:17,361 ವಾಟ್ ಬರುತ್ತಿದೆ. 534 00:37:20,072 --> 00:37:21,865 ಹೆಚ್ಚು ಸಮಯವಿಲ್ಲ. ನೀವು ಈಗಲೇ ಹೋಗಬೇಕು. 535 00:37:21,949 --> 00:37:25,911 ಇಲ್ಲಿ ನಡೆದ ಮತ್ತೊಂದು ಹತ್ಯಾಕಾಂಡಕ್ಕಾಗಿ, ಗೊಡೊಲ್ಕಿನ್‌ಗಾಗಿ ವಾಟ್‌ಗೆ ಒಂದು ಬಲಿಪಶು ಬೇಕು. 536 00:37:25,994 --> 00:37:27,454 ದೂಷಿಸಲು ಯಾವುದೇ ಮಾನವ ಡೀನ್ ಇಲ್ಲ 537 00:37:27,537 --> 00:37:29,665 ಮತ್ತು ವಾಟ್ ಈಗಾಗಲೇ ನಿಮ್ಮನ್ನು ಸ್ಟಾರ್ಲೈಟರ್‌ಗಳು ಎಂದುಕೊಂಡಿದೆ. 538 00:37:29,748 --> 00:37:31,750 ಇಲ್ಲ. ನೋಡಿ, 539 00:37:32,292 --> 00:37:34,002 ನಾನು ಓಡಲು ಪ್ರಯತ್ನಿಸಿದೆ. 540 00:37:34,086 --> 00:37:36,171 ನಾವೆಲ್ಲರೂ ಪ್ರಯತ್ನಿಸಿದ್ದೇವೆ. ನಾವು ಎಲ್ಲಿಗೂ ಹೋಗುತ್ತಿಲ್ಲ. 541 00:37:36,254 --> 00:37:39,841 ನೀವೆಲ್ಲರೂ ಅಮೂಲ್ಯವಾದ ಪಾಠಗಳನ್ನು ಕಲಿತಿದ್ದು ಸಂತೋಷ, ಆದರೆ ನನಗೆ ವಾದ ಮಾಡಲು ಸಮಯವಿಲ್ಲ. 542 00:37:39,925 --> 00:37:41,385 ನಿಮ್ಮ ಬಳಿ ಸಮಯವಿಲ್ಲ. 543 00:37:41,468 --> 00:37:44,846 ನೀವು ನನ್ನನ್ನು ನಂಬಬೇಕು ಅಷ್ಟೇ. ಇಲ್ಲಿ ಉಳಿಯುವುದು ಆಯ್ಕೆಯಲ್ಲ. 544 00:37:44,930 --> 00:37:48,809 ನೀವು ಹೋಗಬೇಕು. ಒಟ್ಟಿಗೆ. ಈಗಲೇ! 545 00:37:54,856 --> 00:37:56,149 ನಾವು ಹಿಂತಿರುಗುತ್ತೇವಾ? 546 00:37:56,233 --> 00:37:57,401 ಯೋಚನೆಯೂ ಮಾಡಬೇಡಿ. 547 00:38:02,614 --> 00:38:03,657 ನಮ್ಮ ಜೊತೆ ಬನ್ನಿ. 548 00:38:04,741 --> 00:38:05,909 ನಾನು ಇಲ್ಲೇ ಇರಲೇಬೇಕು. 549 00:38:05,993 --> 00:38:07,995 ಅಂದರೆ, ಇದು ಆತ್ಮಹತ್ಯಾ ಕಾರ್ಯಾಚರಣೆ. 550 00:38:09,204 --> 00:38:10,163 ಆಗಿತ್ತು… 551 00:38:11,373 --> 00:38:14,167 ಹಿಂದೆ ಆತ್ಮಹತ್ಯಾ ಕಾರ್ಯಾಚರಣೆ ಆಗಿತ್ತು. 552 00:38:15,002 --> 00:38:16,461 ಆದರೆ ಈಗ, 553 00:38:17,671 --> 00:38:20,215 ಆಂಡ್ರೆ ಇಲ್ಲದೆ ನಾನು ಹೇಗೆ ಮುಂದುವರಿಯಬೇಕೆಂದು ನನಗೆ ತಿಳಿದಿಲ್ಲ, 554 00:38:21,133 --> 00:38:22,509 ಆದರೆ ನಾನು ಮುಂದುವರಿಯುತ್ತೇನೆ. 555 00:38:25,178 --> 00:38:27,472 ನಾನು ಇಲ್ಲಿರುವವರೆಗೂ ಅವನು ನನ್ನ ಜೊತೆ ಇರುತ್ತಾನೆ. 556 00:38:30,434 --> 00:38:31,476 ಎಮ್ಮಾ, 557 00:38:33,145 --> 00:38:34,438 ನೀನು ನನಗೆ ಅವಕಾಶ ನೀಡಬೇಕು. 558 00:38:37,691 --> 00:38:38,817 ನಾನು ಸಂಪರ್ಕದಲ್ಲಿರುತ್ತೇನೆ. 559 00:38:40,527 --> 00:38:41,737 ನನ್ನಾಣೆ. 560 00:38:47,409 --> 00:38:49,286 ಅವನಿಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇರುತ್ತಿತ್ತು. 561 00:38:59,963 --> 00:39:02,758 -ನಾನು ಬರಲು ಆಗಲ್ಲ. ಅದು ನನ್ನ ತಂಗಿ ಮತ್ತು… -ಖಂಡಿತ. 562 00:39:07,846 --> 00:39:10,891 ಎಲ್ಲವನ್ನೂ ಹಾಳು ಮಾಡಿ. 563 00:39:20,567 --> 00:39:22,778 ಇಲ್ಲಿ ನಿಲ್ಲಿಸಬಹುದಾ? ನನಗೆ ಸ್ವಲ್ಪ ತಾಜಾ ಗಾಳಿ ಬೇಕು. 564 00:39:22,861 --> 00:39:24,488 ಇದೇ ದಾರಿಯಲ್ಲಿ ಮುಂದುವರೆಯಬೇಕು, ಅಷ್ಟೇ. 565 00:39:24,571 --> 00:39:26,990 ನನಗೆ ಹಾಗನಿಸಲ್ಲ ಎಮ್ಮಾ. ನೀನು ನನ್ನ ಜೇಬಿನಲ್ಲಿ ಇದ್ದೆ ಅಂತ ನನಗೆ ಖಚಿತ. 566 00:39:27,074 --> 00:39:29,159 ಇನ್ನಷ್ಟು ಪಶ್ಚಿಮಕ್ಕೆ ಹೋಗಬೇಕು, ಪಕ್ಕಾ. 567 00:39:29,242 --> 00:39:33,330 ಸರಿ. ಯಾರಿಗಾದರೂ ಸ್ಟಾನ್ ಎಡ್ಗರ್ ಅನ್ನು ಹೇಗೆ ಸಂಪರ್ಕಿಸುವುದು ಎಂದು ತಿಳಿದಿದೆಯಾ? 568 00:39:33,413 --> 00:39:36,583 ಖಂಡಿತ ಗೊತ್ತಿಲ್ಲ, ಆದರೆ ನನಗೆ ಬೇಗ ಬಚ್ಚಲುಮನೆ ಬೇಕಾಗುತ್ತೆ. 569 00:39:36,666 --> 00:39:38,210 -ನಾನು ಈಗಲೇ ಹೋಗುತ್ತೇನೆ. -ನಾನೂ ಕೂಡ. 570 00:39:39,377 --> 00:39:41,755 ಅನ್ಯಾಯ. ಇದು ಸರಿಯಲ್ಲ. 571 00:39:45,884 --> 00:39:48,470 ನೀನು, ಸ್ಯಾಮ್ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದೀರಿ ಅನಿಸುತ್ತೆ… 572 00:39:48,553 --> 00:39:49,971 ಇಲ್ಲ. ಇಲ್ಲ. 573 00:39:51,306 --> 00:39:53,308 ನಾನು ಸ್ಯಾಮ್ ಜೊತೆ ಇಲ್ಲ. 574 00:39:54,142 --> 00:39:55,811 ನಾನು ಯಾರ ಜೊತೆಯೂ ಇಲ್ಲ. 575 00:40:02,400 --> 00:40:04,569 ನಾವು ನಿನ್ನನ್ನು ಖಂಡಿತವಾಗಿ ಪಾಮ್ ಬಳಿ 576 00:40:05,779 --> 00:40:07,197 ಬಿಡೋದು ಬೇಡವಾ? 577 00:40:07,781 --> 00:40:09,407 ಗೊಡೊಲ್ಕಿನ್ ಸತ್ತಿದ್ದಾನೆ. 578 00:40:09,491 --> 00:40:12,661 ಯಾರೂ ನಿನ್ನನ್ನು ಹುಡುಕುತ್ತಿಲ್ಲ. ನೀನು ನಿನ್ನ ಜೀವನಕ್ಕೆ ಹಿಂತಿರುಗಬಹುದು. 579 00:40:13,662 --> 00:40:15,163 ನನ್ನನ್ನು ದೂರ ತಳ್ಳುತ್ತಿದ್ದೀಯಾ? 580 00:40:15,747 --> 00:40:17,457 ನನಗೆ ನೀನು ಸುರಕ್ಷಿತವಾಗಿರಬೇಕಷ್ಟೇ. 581 00:40:20,293 --> 00:40:22,420 ಮತ್ತು ನೀನು ನಮ್ಮೊಂದಿಗೆ ಇದ್ದರೆ ಅದು ಆಗದಿರಬಹುದು. 582 00:40:24,965 --> 00:40:25,882 ನನ್ನ ಜೊತೆ ಇದ್ದರೆ. 583 00:40:27,425 --> 00:40:28,260 ನಾನು ಇರುತ್ತೇನೆ. 584 00:40:31,179 --> 00:40:34,141 ನಿಮಗೆ ಸಿಗಬಹುದಾದ ಎಲ್ಲಾ ಸಹಾಯವೂ ಬೇಕು, ಹಾಗಾಗಿ… 585 00:40:36,726 --> 00:40:37,602 ನಿನ್ನಿಂದಲಾ? 586 00:40:38,395 --> 00:40:40,939 ನೀನು ನೋಡಿದ್ದೆಲ್ಲಾ ಉಪಯೋಗವಿಲ್ಲದ್ದು. 587 00:40:42,899 --> 00:40:43,733 ಒರಟಿ. 588 00:40:43,817 --> 00:40:45,652 ಹೂಂ, ನೋಡೋಣ. 589 00:40:52,200 --> 00:40:53,785 ನೀನು ಒಬ್ಬ ಯೋಧೆ, ಮರೀ. 590 00:40:59,124 --> 00:41:00,250 ಏನಿದು? 591 00:41:05,088 --> 00:41:06,131 ಅವಳು ಇಲ್ಲಿದ್ದಾಳೆ. 592 00:41:14,472 --> 00:41:16,558 ದೇವರೇ. ಸ್ಟಾರ್ಲೈಟ್. 593 00:41:16,641 --> 00:41:17,976 ಅವಳಿಗೆ ಆ್ಯನಿ ಅಂತ ಕರೆಯೋದು ಇಷ್ಟ. 594 00:41:18,059 --> 00:41:20,020 ಹೇ, ನಾನು ಗೊಡೊಲ್ಕಿನ್ ಬಗ್ಗೆ ಕೇಳಿದೆ. 595 00:41:20,103 --> 00:41:24,441 ದರಿದ್ರ ಸೇಜ್, ಒಡೆಸಾದ ಎಲ್ಲಾ ಮಾಹಿತಿ ಸೋರಿಕೆ ಮಾಡಿದಳು, ಮತ್ತು ನಾನು ಮೋಸಹೋದೆ. 596 00:41:24,524 --> 00:41:27,402 ನೀನದನ್ನು ಅರಿತುಕೊಳ್ಳದಿದ್ದರೆ, ನಾವು ಈಗ ತುಂಬಾ ಕಷ್ಟದಲ್ಲಿ ಇರುತ್ತಿದ್ದೆವು. 597 00:41:27,485 --> 00:41:28,695 ಆದರೆ ಮೆಚ್ಚಿದೆ. 598 00:41:28,778 --> 00:41:30,155 ನಮ್ಮಲ್ಲಿ ಬಹಳಷ್ಟು ಜನ. 599 00:41:31,698 --> 00:41:32,824 ನೀನು ನಮಗೆ ಉಪಯೋಗಕ್ಕೆ ಬರಬಹುದು. 600 00:41:32,908 --> 00:41:34,075 ಯಾವುದಕ್ಕೆ? 601 00:41:35,035 --> 00:41:36,661 ಪ್ರತಿರೋಧಕ್ಕೆ ಸೇರುವೆಯಾ? 602 00:41:41,625 --> 00:41:43,835 ನಾವು ಈಗಾಗಲೇ ಒಂದು ಪ್ರತಿರೋಧದಲ್ಲಿದ್ದೇವೆ. 603 00:41:46,129 --> 00:41:48,757 ಆದರೆ, ಹೂಂ, ಇಲ್ಲ, ಒಂದು ರೀತಿಯ ವಿಲೀನದಂತೆ. 604 00:41:50,008 --> 00:41:51,176 ನಮ್ಮನ್ನು ಹೇಗೆ ಹುಡುಕಿದೆ? 605 00:41:51,259 --> 00:41:52,636 ಸರಳ ಗ್ರಿಡ್ ಹುಡುಕಾಟ. 606 00:41:52,719 --> 00:41:55,305 ವಿಶ್ವವಿದ್ಯಾಲಯದ ಸುತ್ತ ಇನ್ನೂರು ಚದರ ಮೈಲಿಗಳು. 607 00:41:55,388 --> 00:41:57,974 ಮೂವತ್ತು ನಿಮಿಷ… ಹಿಡಿಯಿತು. 608 00:42:02,270 --> 00:42:04,481 ಸರಿ, ಹಾಗಾದರೆ, ಇದೆಲ್ಲಾ, 609 00:42:04,564 --> 00:42:07,275 ಎಲ್ಲರೂ ಸುತ್ತಲೂ ನಿಂತು ಸಮಾಧಾನವಾಗಿ ಮಾತಾಡುತ್ತಿರೋದು, 610 00:42:07,359 --> 00:42:09,027 ನಾನು ಮೊದಲು ನಿಲ್ಲಿಸುವೆ. 611 00:42:09,110 --> 00:42:10,737 ನೀವು ಈಗ ದಂಗೆಕೋರರು. 612 00:42:11,238 --> 00:42:12,280 ಹಾಗೇ ವರ್ತಿಸಿ. 613 00:44:28,917 --> 00:44:30,919 ಉಪ ಶೀರ್ಷಿಕೆ ಅನುವಾದ: ಅನುರಾಧ 614 00:44:31,002 --> 00:44:33,004 ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ