1 00:00:06,083 --> 00:00:09,958 ಪ್ರೀವಿಯಸ್ಲಿ ಆನ್ ಫಾಲೌಟ್ 2 00:00:17,458 --> 00:00:19,250 ನಿಲ್ಲು! ಲೂಸಿ! 3 00:00:20,000 --> 00:00:21,583 ನನ್ನ ತಂದೆಯನ್ನು ಹುಡುಕುತ್ತಿರುವೆ. 4 00:00:22,250 --> 00:00:23,750 ನೀನೇ ನನ್ನ ಪ್ರಪಂಚ. 5 00:00:24,750 --> 00:00:27,208 ಮೊಲ್ಡೆವರ್ ಎಂಬ ಮಹಿಳೆ ಅವರನ್ನು ಅಪಹರಿಸಿದಳು. 6 00:00:27,625 --> 00:00:28,875 ನೀನು ಮನೆಗೆ ಹೋಗಬೇಕು. 7 00:00:28,958 --> 00:00:31,458 ವಾಲ್ಟ್ ನಿವಾಸಿಗಳು ಇಲ್ಲಿ ಬೇಗ ಕೊಲ್ಲಲ್ಪಡುತ್ತಾರೆ. 8 00:00:32,540 --> 00:00:35,250 ನೀವು ನಿಯಮಗಳ, ಕಾನೂನುಗಳ ಪ್ರಪಂಚದಿಂದ ಬಂದವರು. 9 00:00:35,291 --> 00:00:38,250 ಈ ಜಾಗಕ್ಕೆ ಅವೆಲ್ಲಾ ಬೇಕಾಗಿಲ್ಲ. 10 00:00:39,083 --> 00:00:40,541 ನನ್ನ ತಂದೆ ಇಲ್ಲದೆ ನಾನು ಹಿಂತಿರುಗಲ್ಲ. 11 00:00:40,625 --> 00:00:42,958 ಹಾಗಾದರೆ, ನೀನು ಬದಲಾಗಬೇಕು. 12 00:00:44,833 --> 00:00:46,333 ಒಂದು ಕೆಲಸ ಬಂದಿದೆ. 13 00:00:47,291 --> 00:00:50,833 ಯಾರೋ ಎಂಕ್ಲೆವೆನಿಂದ ತಪ್ಪಿಸಿಕೊಂಡಿದ್ದಾರೆ. 14 00:00:51,375 --> 00:00:52,416 ಗುರಿ 15 00:00:52,500 --> 00:00:55,291 ಮತ್ತು ಆ ಗುರಿಯ ಹತ್ತಿರ 16 00:00:55,375 --> 00:00:57,708 ನಮ್ಮ ದೇಶವನ್ನು ಹಾನಿ ಮಾಡುವಂತಹ 17 00:00:58,875 --> 00:01:00,375 ಅಥವಾ ಉಳಿಸುವಂತಹ 18 00:01:02,750 --> 00:01:04,250 ಸಮರ್ಥ ವಸ್ತು ಇದೆ. 19 00:01:07,375 --> 00:01:08,250 ಎಲ್ಲಿದೆ? 20 00:01:08,333 --> 00:01:10,500 ಜನರನ್ನು ಈ ರೀತಿ ನಡೆಸಿಕೊಳ್ಳಬಾರದು. 21 00:01:12,125 --> 00:01:13,416 ಹೌದೇ, ಯಾಕೆ? 22 00:01:15,083 --> 00:01:16,541 ಬಂಗಾರದ ನಿಯಮದಿಂದಾಗಿ. 23 00:01:17,500 --> 00:01:20,291 "ನಿಮ್ಮನ್ನು ಹೇಗೆ ನಡೆಸಿಕೊಳ್ಳಬೇಕೋ, ಹಾಗೇ ನಡೆಸಿಕೊಳ್ಳಿ." 24 00:01:23,333 --> 00:01:24,958 ನೀನು ಏನು? 25 00:01:25,666 --> 00:01:27,458 ನಾನು ನೀನೇ, ಚಿನ್ನ. 26 00:01:35,333 --> 00:01:38,000 ಸ್ವಲ್ಪ ಸಮಯ ಸಾಗಲಿ, ಗೊತ್ತಾಗುತ್ತೆ. 27 00:01:38,666 --> 00:01:40,125 ವಾಲ್ಟ್-ಟೆಕ್ 28 00:01:40,791 --> 00:01:43,291 ವಾಲ್ಟ್-ಟೆಕ್ ಅಮೆರಿಕದ ಅತಿದೊಡ್ಡ ಕಂಪನಿ. 29 00:01:43,375 --> 00:01:46,583 ಜಗತ್ತಿನ ಅಂತ್ಯವನ್ನು ಮಾರಿ ತುಂಬಾ ಹಣ ಗಳಿಸಬಹುದು ಅವರು. 30 00:01:46,666 --> 00:01:48,583 -ಏನು ಸಹಾಯ? -ಇದು ಆಲಿಸುವಿಕೆ ಸಾಧನ. 31 00:01:48,666 --> 00:01:50,250 ನನ್ನ ಹೆಂಡತಿಯನ್ನು ಕದ್ದಾಲಿಸಬೇಕ? 32 00:01:50,583 --> 00:01:52,833 ನನ್ನ ಪ್ರೀತಿಪಾತ್ರರು, ಅಂದರೆ ನೀನು ಮತ್ತು ಜೇನಿ, 33 00:01:52,916 --> 00:01:54,708 ನಿರ್ವಹಣೆಗಿರುವ ವಿಶೇಷ ವಾಲ್ಟ್ ನಲ್ಲಿ ಜಾಗ ಪಡೆಯಲು 34 00:01:54,791 --> 00:01:58,583 ನಾನು ಏನು ಮಾಡಲೂ ಸಿದ್ಧ. 35 00:02:00,166 --> 00:02:03,000 ಅಮೆರಿಕ ಸಂಪನ್ಮೂಲದ ಮೇಲೆ ಯುದ್ಧ ಮಾಡಲಾರಂಭಿಸಿದೆ. 36 00:02:03,083 --> 00:02:05,416 ವಾಲ್ಟ್-ಟೆಕ್ ಆ ಯುದ್ಧವನ್ನು ಕೊನೆಗೊಳಿಸುವ ಸಾಧನ ಕೊಂಡಿತು. 37 00:02:05,500 --> 00:02:08,500 ಕೋಲ್ಡ್ ಫ್ಯೂಷನ್, ಅನಂತ ಶಕ್ತಿ. 38 00:02:12,416 --> 00:02:14,625 ಪರಮಾಣು ಸ್ಫೋಟ ದುರಂತವೇ, 39 00:02:14,708 --> 00:02:16,375 ಆದರೆ ಅವಕಾಶ ಕೂಡ. 40 00:02:17,541 --> 00:02:19,000 ಮತ್ತು ಯುದ್ಧ… 41 00:02:21,708 --> 00:02:23,250 ಯುದ್ಧವು ಎಂದಿಗೂ ಬದಲಾಗುವುದಿಲ್ಲ. 42 00:02:29,208 --> 00:02:30,583 ನೀರಿನ ಚಿಪ್ ನಾಶವಾಗಿದೆ. 43 00:02:30,666 --> 00:02:34,166 ವಾಲ್ಟ್ ನಲ್ಲಿ ಕೇವಲ ನಮಗೆಲ್ಲರಿಗೂ ಎರಡು ತಿಂಗಳಿಗಾಗುವಷ್ಟು ನೀರು ಮಾತ್ರ ಇದೆ, 44 00:02:34,250 --> 00:02:36,750 ನಾವು ಅದೃಷ್ಟವಂತರು. 45 00:02:36,958 --> 00:02:40,666 ಮೂರು ವಾಲ್ಟ್ ಗಳು ಬೆದರಿಕೆಗಳನ್ನು ತಡೆಗಟ್ಟಲು ಬೇರೆಯಾದವು. 46 00:02:40,750 --> 00:02:43,791 ವಿಚಿತ್ರ ಅಲ್ಲವೇ, ಯಾವಾಗಲೂ 31 ರಿಂದಲೇ ಮೇಲ್ವಿಚಾರಕರು ಗೆಲ್ಲುವುದು? 47 00:02:44,041 --> 00:02:45,541 ಸ್ಟೆಫ್ ವಾಲ್ಟ್ 31 ರವಳು. 48 00:02:48,041 --> 00:02:50,875 ನಮ್ಮಲ್ಲಿ ಕೆಲವರು ಹೊಸ ಜೀವನ ಆರಂಭಿಸಲು 49 00:02:50,958 --> 00:02:52,583 ವಾಲ್ಟ್ 32 ಗೆ ಹೋಗುತ್ತಾರೆ. 50 00:02:57,875 --> 00:03:00,125 ನನ್ನ ತಂದೆ ಇಲ್ಲಿಯವರ? 51 00:03:02,250 --> 00:03:05,333 ಇದು ಬಡ್'ಸ್ ಬಡ್ಸ್, ಗೆಳೆಯರು . 52 00:03:05,416 --> 00:03:08,333 ತರಬೇತಿ ಪಡೆದ ಮೇಲ್ವಿಚಾರಣೆಗೊಂಡ 53 00:03:08,416 --> 00:03:10,333 ಕಿರಿಯ ನಿರ್ವಾಹಕ ಸಿಬ್ಬಂದಿ. 54 00:03:10,416 --> 00:03:12,125 ಹ್ಯಾಂಕ್ ಮ್ಯಾಕ್ಲೀನ್ ಪ್ರವೇಶ:2077-ನಿರ್ಗಮನ:2268 55 00:03:12,208 --> 00:03:15,000 ಯಾಕೆಂದರೆ ಮಾನವರ ಭವಿಷ್ಯ ಒಂದರ ಮೇಲೇ ಆಧಾರಿತ. 56 00:03:16,125 --> 00:03:17,208 ನಿರ್ವಹಣೆ. 57 00:03:17,291 --> 00:03:18,750 ನಾನು ಮನೆಗೆ ಹಿಂದಿರುಗಬೇಕು. 58 00:03:19,416 --> 00:03:20,291 ಇಲ್ಲ! 59 00:03:23,875 --> 00:03:26,000 ನಾನು ಟೈಟಸ್ ಅಲ್ಲ. ಮ್ಯಾಕ್ಸಿಮಸ್. 60 00:03:26,458 --> 00:03:29,583 ಈ ಕವಚದ ಹಿಂದಿನ ಮಾಲೀಕನ ಹೆಸರು ಟೈಟಸ್. 61 00:03:32,833 --> 00:03:34,208 ನೀನು ಒಳ್ಳೆಯವನು. 62 00:03:34,541 --> 00:03:36,000 ವೇಸ್ಟ್ ಲ್ಯಾಂಡ್ ದರಿದ್ರ ಜಾಗ. 63 00:03:40,333 --> 00:03:41,541 ಬ್ರದರ್ ಹುಡ್. 64 00:03:42,958 --> 00:03:44,875 ಅವರು ಇದನ್ನು ಹುಡುಕುವುದನ್ನು ನಿಲ್ಲಿಸಲ್ಲ. 65 00:03:50,208 --> 00:03:51,333 ನನಗಾಗಿ ಬಾ. 66 00:03:52,458 --> 00:03:53,541 ಬರುವೆ. 67 00:04:03,125 --> 00:04:04,791 ನನ್ನ ತಂದೆಯನ್ನು ಹಿಂದಿರುಗಿಸು. 68 00:04:05,916 --> 00:04:07,291 ಆದರೆ ಮೊದಲು, 69 00:04:08,791 --> 00:04:10,916 ನಿನ್ನ ತಂದೆ ನಿಜವಾಗಿ ಯಾರು ಎಂದು ಹೇಳಲೇ? 70 00:04:12,791 --> 00:04:14,416 ಶೇಡಿ ಸ್ಯಾಂಡ್ಸ್. 71 00:04:15,416 --> 00:04:18,707 ನಿನ್ನ ತಂದೆ ಆ ನಗರವನ್ನು ಸುಟ್ಟು ಹಾಕಿದನು. 72 00:04:21,750 --> 00:04:23,250 ಯಾರಾದರೂ ಜೀವಂತ ಉಳಿದರೇ? 73 00:04:26,332 --> 00:04:27,375 ನಾನುಳಿದೆ. 74 00:04:27,457 --> 00:04:28,750 ಹಾಲಿನ ಬಾಟಲಿಗಳು 75 00:04:29,957 --> 00:04:32,457 ಬೇರೆ ಬೇರೆ ಜಾತಿಗಳು ಅಂತ್ಯವಿಲ್ಲದ ಜಗಳ, 76 00:04:32,541 --> 00:04:35,207 ಅಂತ್ಯವಿಲ್ಲದ ಯುದ್ಧದಲ್ಲೇ 77 00:04:35,291 --> 00:04:39,207 ಇರುವುದೇ ಜಗತ್ತಿನ ಸಮಸ್ಯೆಯಾದರೆ, ಆ ಜಾತಿಗಳನ್ನು ನಾಶ ಮಾಡುವುದೇ ಒಳ್ಳೆಯದಲ್ಲವೇ? 78 00:04:39,916 --> 00:04:41,666 ಜಗತ್ತನ್ನು ನಮ್ಮದಾಗಿಸಿಕೊಳ್ಳಲು. 79 00:04:42,457 --> 00:04:44,000 ನಮಗೆ ಬೇಕಾದಂತೆ ರೂಪಿಸಲು. 80 00:04:51,541 --> 00:04:53,875 ಈ ಜಾಗ ಜನರಿಗೆ ಏನು ಮಾಡುತ್ತದೆ ನೋಡಿದೆಯಾ? 81 00:04:57,041 --> 00:04:59,457 ನಾನು 200 ವರ್ಷ ಕಾದಿರುವೆ 82 00:05:00,166 --> 00:05:03,583 ಯಾರ ಬಳಿಯಾದರೂ ಇದೊಂದು ಪ್ರಶ್ನೆ ಕೇಳಲು. 83 00:05:05,583 --> 00:05:07,458 ನನ್ನ ಕುಟುಂಬ ಎಲ್ಲಿದೆ? 84 00:05:14,750 --> 00:05:18,832 ಹಂದಿಯನ್ನು ಎಲ್ಲಿ ಹೋಗುತ್ತಿದೆ ಎಂದು ಕೇಳುವುದಕ್ಕಿಂತ ಅದರ ಹಿಂದೆ ಹೋಗುವುದು ಸುಲಭ. 85 00:05:21,625 --> 00:05:23,166 ಈಗ ನೀವು ಅವನೊಂದಿಗೆ ಇಲ್ಲಿ ಉಳಿಯಬಹುದು. 86 00:05:23,250 --> 00:05:25,791 ಅಥವಾ ನೀನು ನಿನ್ನ ತಯಾರಕರನ್ನು ನೋಡಲು ಬರಬಹುದು. 87 00:05:33,957 --> 00:05:35,000 ಸರಿ. 88 00:05:40,916 --> 00:05:44,957 ನೈಟ್ ಮ್ಯಾಕ್ಸಿಮಸ್ ಗೆ ಜಯವಾಗಲಿ. ನೈಟ್ ಮ್ಯಾಕ್ಸಿಮಸ್ ಗೆ ಜಯವಾಗಲಿ. 89 00:05:45,041 --> 00:05:46,750 ನೈಟ್ ಮ್ಯಾಕ್ಸಿಮಸ್ ಗೆ ಜಯವಾಗಲಿ. 90 00:05:47,666 --> 00:05:49,500 ನೀನು ವೇಸ್ಟ್ ಲ್ಯಾಂಡ್ ಅನ್ನು ನೋಡಿದರೆ 91 00:05:50,291 --> 00:05:51,875 ಅವ್ಯವಸ್ಥೆ ಕಾಣುತ್ತದೆ. 92 00:05:54,207 --> 00:05:56,416 ಆದರೆ ಯಾರಾದರೂ ಅದನ್ನು ನಿಯಂತ್ರಿಸುತ್ತಿರುತ್ತಾರೆ. 93 00:06:13,250 --> 00:06:17,916 ದ ಮ್ಯಾನ್ ಹು ನ್ಯೂ 94 00:06:31,082 --> 00:06:33,166 ನಿಮ್ಮ ದಿನವನ್ನು ಉತ್ತಮವಾಗಿಸಲು ನಾನು ಸಹಾಯ ಮಾಡಲೇ? 95 00:06:37,541 --> 00:06:39,250 ರೊಬ್ ಕೋ ವಿರುದ್ಧ ಯೂನಿಯನ್ ಮುಷ್ಕರ ರೋಬೋಟ್=ರೋಗ 96 00:06:39,332 --> 00:06:42,332 ನೋಡಿ, ರೊಬ್ ಕೋ ಇಂಡಸ್ಟ್ರೀಸ್‌ನಲ್ಲಿ ನಮ್ಮ ಪ್ರಾಥಮಿಕ ಕಾಳಜಿ 97 00:06:42,416 --> 00:06:45,666 ಕೆಲಸದ ಸ್ಥಳದಲ್ಲಿ ಹೆಚ್ಚು ದಕ್ಷತೆ ತರುವುದು. 98 00:06:46,250 --> 00:06:48,207 ಹೆಚ್ಚಿನ ಅಂತರರಾಷ್ಟ್ರೀಯ ವಿವಾದಗಳನ್ನು ಬಗೆಹರಿಸುವಲ್ಲಿ 99 00:06:48,291 --> 00:06:50,750 ಅಮೇರಿಕದ ಸರ್ಕಾರಕ್ಕೆ ಸಹಾಯ ಬೇಕಿದ್ದಲ್ಲಿ… 100 00:06:50,832 --> 00:06:52,791 ರಾಬರ್ಟ್ ಹೌಸ್ ಸ್ಥಾಪಕರು - ರೊಬ್ ಕೋ ಇಂಡಸ್ಟ್ರೀಸ್ 101 00:06:52,875 --> 00:06:54,332 …ಯಾರನ್ನು ಕರೆಯಬೇಕೆಂದು ಅವರಿಗೆ ಗೊತ್ತು. 102 00:06:54,416 --> 00:06:56,250 ದರಿದ್ರ ಜಿಗಣೆ ಅವನು. 103 00:06:57,582 --> 00:06:59,416 ನಾವು ಈ ಮೂರ್ಖ ಶಿಖಾಮಣಿಗೆ ಮತ ಹಾಕಲಿಲ್ಲ. 104 00:07:00,791 --> 00:07:01,791 ನಾವೇ ಹಾಕಿದ್ದು. 105 00:07:10,541 --> 00:07:12,875 ಖರ್ಚು ಮಾಡುವ ಪ್ರತಿ ಡಾಲರ್ ಒಂದು ಮತದಂತೆ. 106 00:07:13,875 --> 00:07:15,541 ಮತ್ತು ಅಲ್ಲಿರೋ ಆ ವ್ಯಕ್ತಿಯ ಬಳಿ, 107 00:07:16,250 --> 00:07:20,750 ವಾಷಿಂಗ್ಟನ್‌ನಲ್ಲಿರೋ ಎಲ್ಲಾ ಹೆಡ್ಡ ರಾಜಕಾರಣಿಗಳಿಗಿಂತ ಹೆಚ್ಚಿನ ಮತ ಇದೆ. 108 00:07:23,250 --> 00:07:25,125 ನೀನೇನು ಅವನ ದೊಡ್ಡ ಅಭಿಮಾನಿನಾ? 109 00:07:29,375 --> 00:07:30,250 ಹೌದು. 110 00:07:31,791 --> 00:07:33,207 ಹೌದು ಅಂತ ನನ್ನ ಅನಿಸಿಕೆ. 111 00:07:35,457 --> 00:07:37,957 ಮತ್ತು ಅಮೇರಿಕಾದ ಜನರೇ ಅವನಿಗೆ ತಮ್ಮ ಸಂಪತ್ತಿನ 112 00:07:38,041 --> 00:07:40,500 ಹೆಚ್ಚಿನ ಭಾಗ ಕೊಡಲು ಸಿದ್ಧರಿದ್ದರೆ, ಅದು… 113 00:07:41,666 --> 00:07:44,041 ಅದು, ನಿಜ ಹೇಳಬೇಕೆಂದರೆ, ಕೆಟ್ಟ ವಿಷಯ ಆಗಿರಲಿಕ್ಕಿಲ್ಲ, ಅಲ್ವಾ? 114 00:07:45,707 --> 00:07:48,125 ನಿನ್ನ ಉದ್ಯೋಗ ಏನು, ಗೆಳೆಯ? 115 00:07:50,041 --> 00:07:51,082 ನಿರ್ಮಾಣ. 116 00:07:52,957 --> 00:07:55,625 ಅಂದರೆ ನೀನು ಎಚ್ ಅಂಡ್ ಎಚ್ ನೇಲ್ ಗನ್ ಬಳಸುತ್ತೀಯ ಅನಿಸುತ್ತೆ. 117 00:07:56,666 --> 00:07:57,957 ಅದೊಂದು ಅದ್ಭುತ ಯಂತ್ರ. 118 00:07:59,207 --> 00:08:02,291 ಕೈಯಲ್ಲಿ ಮೃದು. ಸಲೀಸು ಕೆಲಸ. 119 00:08:02,375 --> 00:08:04,750 ಹಳೆಯ ಸುತ್ತಿಗೆಯನ್ನು ಬಳಸಿ ಹೊಡೆಯುವುದಕ್ಕಿಂತ ಉತ್ತಮ, ಅಲ್ವಾ? 120 00:08:05,666 --> 00:08:07,333 ನೀವು ಕೃತಜ್ಞರಾಗಿರುತ್ತೀರಿ ಅಂದುಕೊಂಡೆ. 121 00:08:09,166 --> 00:08:10,000 ಕೃತಜ್ಞ. 122 00:08:11,750 --> 00:08:13,625 ನೀನು ತಪ್ಪು ಬಾರಲ್ಲಿರುವೆ ಅನಿಸುತ್ತೆ, ಗೆಳೆಯ. 123 00:08:16,916 --> 00:08:18,207 ಅಳಿವು. 124 00:08:20,082 --> 00:08:21,082 ಅದು ತುಂಬಾ ದೊಡ್ಡ ವಿಷಯ. 125 00:08:22,332 --> 00:08:24,375 ಗೊತ್ತಾ, ನಿಮ್ಮ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸುತ್ತೇನೆ, 126 00:08:24,957 --> 00:08:27,582 ಆದರೆ ಅನಿವಾರ್ಯ ಘಟನೆಗಳಿಂದ ಚಕಿತರಾಗುವಷ್ಟು 127 00:08:27,666 --> 00:08:29,957 ಮಂದ ಬುದ್ಧಿಯನ್ನು ಊಹಿಸಿಕೊಳ್ಳುವುದು ಸ್ವಲ್ಪ ಕಷ್ಟ. 128 00:08:39,082 --> 00:08:42,250 ಮುಖಕ್ಕೆ ಗುದ್ದು. ನನಗೆ ಮಜಾ ಬರಬಹುದು ಅನಿಸುತ್ತೆ. 129 00:08:50,750 --> 00:08:54,208 ನಾನು ಹೇಳಿದ್ದು ಹೆಚ್ಚಾಗಿ ತಪ್ಪಾಗಲ್ಲ. ಆದರೆ, ಇರಲಿ, ಮುಂದುವರೆಯೋಣ. 130 00:09:03,875 --> 00:09:08,291 ಅದು 3.1 ಕೋಟಿ ಡಾಲರ್. 131 00:09:12,000 --> 00:09:16,875 ಈಗ, ಇಷ್ಟು ಹಣಕ್ಕಾಗಿ ನೀವು ಏನೆಲ್ಲಾ ಮಾಡಲು ಸಿದ್ಧ? 132 00:09:20,041 --> 00:09:21,041 ಏನೂ ಹೊಳೆಯುತ್ತಿಲ್ವಾ? 133 00:09:22,000 --> 00:09:24,583 ಹೂಂ, ಆಶ್ಚರ್ಯ ಏನಿಲ್ಲ. ನಾನೇ ಉಪಾಯ ಹೇಳುವೆ. 134 00:09:34,915 --> 00:09:38,665 ನನಗೆ ಇದನ್ನು ನಿನ್ನ ಕತ್ತಿನ ಹಿಂಭಾಗದಲ್ಲಿ ಹಾಕಲು ಅನುಮತಿ ಕೊಡು. 135 00:09:40,083 --> 00:09:41,165 ಏನಿದು? 136 00:09:44,208 --> 00:09:47,333 ಇದು ಒಂದು ರೀತಿಯ ಮಾರುಕಟ್ಟೆ ವಿಶ್ಲೇಷಣೆ ಅಂದುಕೋ. 137 00:09:48,208 --> 00:09:52,750 ನಾನು ಕೇಳುತ್ತಿರೋದು ಇಷ್ಟೇ, ಇದನ್ನು ನಿನ್ನ ಕತ್ತಿನ ಹಿಂಭಾಗಕ್ಕೆ ಸಿಕ್ಕಿಸಿಕೋ, 138 00:09:52,833 --> 00:09:55,750 ಮತ್ತು ಅಲ್ಲಿರೋ ಅಷ್ಟೂ ಹಣ ನಿನ್ನದಾಗುತ್ತೆ. 139 00:09:57,250 --> 00:09:59,625 ನೀನು ಎಂದಿಗೂ ಬಳಸದ ಆ ಕೈಗಳನ್ನು ನಾನು ಮುರಿದರೆ ಹೇಗಿರುತ್ತೆ? 140 00:09:59,708 --> 00:10:01,708 ನಿನಗೆ ವ್ಯತ್ಯಾಸ ಆಗುತ್ತಾ ನೋಡೋಣ. 141 00:10:01,791 --> 00:10:03,416 ಆಮೇಲೆ ನಾವು ಇವನ ಹಣ ಎತ್ತಿಕೊಳ್ಳೋಣ. 142 00:10:03,500 --> 00:10:05,750 -ಈ ದರಿದ್ರ ಶ್ರೀಮಂತರು ತುಂಬಾ-- -ಸರಿ… 143 00:10:25,375 --> 00:10:27,541 ಒಂದು ಸಣ್ಣ ಉಪಕಾರ ಮಾಡು. 144 00:10:29,416 --> 00:10:30,833 ನಿನ್ನ ಸ್ನೇಹಿತರನ್ನು ತೊಲಗಿಸು. 145 00:10:36,290 --> 00:10:38,540 ಬಿಲ್? ಬಿಲ್? 146 00:10:44,165 --> 00:10:46,415 ನೀವೆಲ್ಲಾ ಎಚ್ ಅಂಡ್ ಎಚ್ ನೇಲ್ ಗನ್ ಬಳಸುತ್ತೀರಿ. 147 00:10:48,625 --> 00:10:49,790 ನಿಮಗದರ ಬಗ್ಗೆ ಖುಷಿ ಇರಬೇಕು. 148 00:10:51,375 --> 00:10:52,540 ಇದೆಲ್ಲದಕ್ಕೂ ನೀವು ಪಾವತಿಸಿದಿರಿ. 149 00:11:37,750 --> 00:11:42,583 ಜಗತ್ತು ಅಂತ್ಯವಾಗಬಹುದು, ಆದರೆ ಪ್ರಗತಿ ಮುಂದುವರಿಯುತ್ತದೆ. 150 00:11:48,708 --> 00:11:55,665 ಫಾಲ್ ಔಟ್ 151 00:12:06,791 --> 00:12:08,291 ಖಾನ್‌ಗಳೇ! 152 00:12:08,375 --> 00:12:09,208 ನೋ ವ್ಯಾಕ್ 153 00:12:09,291 --> 00:12:12,000 ಇವತ್ತು ನಿಮಗಾಗಿ ಏನೋ ನಿಜಕ್ಕೂ ರೋಮಾಂಚಕಾರಿಯಾದದ್ದು ಇದೆ. 154 00:12:18,541 --> 00:12:22,750 ನಿಮ್ಮ ಅಜ್ಜ-ಅಜ್ಜಿಯರು ಹುಟ್ಟುವ ಮೊದಲಿಂದಲೂ ಈ ಬೇವರ್ಸಿ ಖಾನ್‌ಗಳನ್ನ ಪೀಡಿಸುತ್ತಿದ್ದಾನೆ. 155 00:12:23,500 --> 00:12:24,916 ಮತ್ತು ಇವತ್ತು… 156 00:12:27,166 --> 00:12:30,875 ಯಾರೋ ಬೌಂಟಿ ಬೇಟೆಗಾರರು ಇವನನ್ನು ನಮ್ಮ ಮಡಿಲಿಗೆ ತಂದು ಹಾಕಿದರು. 157 00:12:31,666 --> 00:12:33,125 ಈಗ ಸೇಡು ತೀರಿಸಿಕೊಳ್ಳೋ ಸಮಯ. 158 00:12:35,665 --> 00:12:37,040 ಇದರ ಬಗ್ಗೆ ನಿನಗೆ ಹೇಗನಿಸುತ್ತಿದೆ? 159 00:12:51,375 --> 00:12:52,958 ಅದು ಮೊದಲು ಒಂದು ಅಂಗಡಿಯಾಗಿತ್ತಲ್ವಾ? 160 00:12:54,833 --> 00:12:58,915 ನಾನು ಸುಮಾರು 25 ವರ್ಷಗಳ ಹಿಂದೆ ಅಲ್ಲಿ ಒಂದು ಸೋಡಾ ಬಾಟಲಿ ಖರೀದಿಸಿದ್ಧೆ ಅನಿಸುತ್ತೆ. 161 00:12:59,000 --> 00:13:00,458 ಮುಗಿಯಿತಾ ನಿನ್ನ ಮಾತು? 162 00:13:01,333 --> 00:13:04,083 -ನಮಗೆ ನ್ಯಾಯ ಸಿಕ್ಕಿದೆ-- -ಡಾರ್ಲಾಗಾಗಿ! 163 00:13:04,166 --> 00:13:06,583 ಆ ಕೌಂಟರ್ ಹಿಂದೆ ಇದ್ದ ಮಹಿಳೆ, ಆಕೆಯ ಹೆಸರು ಡಾರ್ಲಾ. 164 00:13:06,666 --> 00:13:09,083 ಆಕೆ ಒಳ್ಳೆಯ ವ್ಯಕ್ತಿಯಾಗಿದ್ದಳು, 165 00:13:10,541 --> 00:13:13,333 ನೀವು ಸಮವಸ್ತ್ರಧಾರಿ ಬೇವರ್ಸಿಗಳು ಬರುವವರೆಗೆ. 166 00:13:15,916 --> 00:13:19,666 ಸರಿ, ನಿಮ್ಮ ಜೊತೆ ಮಾತಾಡಿದ್ದು ಖುಷಿಯಾಯಿತು, ಆದರೆ ನಿಮಗೆ ಅಭ್ಯಂತರವಿಲ್ಲದಿದ್ದರೆ, 167 00:13:20,500 --> 00:13:22,208 ನಾನು ಮುಂದುವರೆಸಲು ಸಿದ್ಧನಿದ್ದೇನೆ. 168 00:13:24,833 --> 00:13:27,666 ನಾನು ಹೇಳಿದ್ದು ಕೇಳದಿದ್ದರೆ, ಜೋರಾಗಿ ಹೇಳುವೆ. 169 00:13:28,708 --> 00:13:30,958 "ನಾನು ಮುಂದುವರೆಸಲು ಸಿದ್ಧನಿದ್ದೇನೆ" ಅಂದೆ. 170 00:13:37,583 --> 00:13:39,290 ಮುಂದುವರೆಸಲು ಸಿದ್ಧ! 171 00:13:46,458 --> 00:13:47,665 ಥತ್. 172 00:13:58,040 --> 00:13:59,375 ಹಾಯ್. ಇಲ್ಲಿ ಕೇಳಿ. 173 00:14:00,083 --> 00:14:02,541 ಹಾಯ್. ಕೇಳಿ. ಕ್ಷಮಿಸಿ. 174 00:14:02,625 --> 00:14:04,291 ನನ್ನ ಹಾಗೂ ನನ್ನ ಪ್ರಯಾಣ ಸಂಗಾತಿಯ ನಡುವಿನ 175 00:14:04,375 --> 00:14:06,833 ವಾದವನ್ನು ನೀವು ಇತ್ಯರ್ಥಪಡಿಸುವಿರಿ ಎಂದುಕೊಳ್ಳುವೆ. 176 00:14:06,916 --> 00:14:10,833 ನಾವು ನನ್ನ ತಂದೆಯನ್ನು ಹುಡುಕುತ್ತಿದ್ದೇವೆ, ಅವರು ಒಳ್ಳೆಯವರಲ್ಲ, 177 00:14:10,916 --> 00:14:13,875 ಮತ್ತು ಈ ಪ್ರಯಾಣದಲ್ಲಿ, ನಮಗೆ ಆಹಾರ ಮತ್ತು ಸರಬರಾಜುಗಳು ಬೇಕಿತ್ತು. 178 00:14:13,958 --> 00:14:17,083 ನಿಮ್ಮನ್ನು ಸುಮ್ಮನೆ ಬಿಟ್ಟು, ಈ ತೊಂದರೆಗೆ ಸಿಲುಕದಿರುವುದು ಮೊದಲ ಉಪಾಯವಾಗಿತ್ತು. 179 00:14:17,166 --> 00:14:20,625 ಆದರೆ ನಾವು ಅದನ್ನು ಪ್ರಯತ್ನಿಸಿದ್ಧೇವೆ, ಆದರೆ ನಾನು ಹಸಿವಿನಿಂದ ಸಾಯುವವಳಿದ್ದೆ. 180 00:14:21,333 --> 00:14:24,458 ಅವನ ಉಪಾಯ, ಅಂದರೆ ಎರಡನೇ ಉಪಾಯ, ನಾನು ಅವನನ್ನು ನಿಮಗೆ ಒಪ್ಪಿಸಿದರೆ 181 00:14:24,541 --> 00:14:27,750 ಅವನಿಗಾಗಿ ಇರುವ ಬಹುಮಾನವನ್ನು ನನಗೆ ಕೊಡಲು ನೀವು ನಿಮ್ಮ ತಿಜೋರಿಯನ್ನು ತೆರೆಯುವಿರಿ. 182 00:14:27,833 --> 00:14:28,916 ಗುಂಡು ಹಾರಿಸು! 183 00:14:29,000 --> 00:14:31,916 ಉಪಾಯ ಇದ್ದದ್ದು, ನಾನು ಅವನನ್ನು ಮುಕ್ತಗೊಳಿಸಿ, ಅವನು ನಿಮ್ಮ ಅಸ್ತ್ರಗಳನ್ನು ತಗೊಂಡು, 184 00:14:32,000 --> 00:14:34,833 ನಮಗೆ ತಪ್ಪಿಸಿಕೊಳ್ಳಲು ಅಗತ್ಯವಿರುವಷ್ಟೇ ಹಿಂಸೆಯನ್ನು ಬಳಸೋದು ಅಂತ. 185 00:14:34,915 --> 00:14:37,625 ನನ್ನ ಇಲ್ಲಿಯವರೆಗಿನ ಅನುಭವದಲ್ಲಿ, ಅದು… 186 00:14:38,540 --> 00:14:41,125 ಅದು ಅತಿಯಾದ ಹಿಂಸೆ. ಹಾಗಾಗಿ… 187 00:14:41,708 --> 00:14:44,125 ನೀವು ಮೂರನೇ ಉಪಾಯವನ್ನು ಒಪ್ಪುವಿರಿ ಅಂತ ನಿಜಕ್ಕೂ ಆಶಿಸುವೆ. 188 00:14:46,500 --> 00:14:47,708 ಮೂರನೇ ಉಪಾಯ ಏನು? 189 00:14:50,875 --> 00:14:51,958 ನಮ್ಮನ್ನು ಹೋಗಲು ಬಿಟ್ಟುಬಿಡಿ. 190 00:14:53,625 --> 00:14:55,000 ನೀವು ನೀಡಿದ ಕ್ಯಾಪ್ಸ್ ನಮ್ಮ ಬಳಿ ಇರಲಿ. 191 00:14:55,583 --> 00:14:58,165 ನಿಜ ಹೇಳಬೇಕೆಂದರೆ, ನಮ್ಮ ಉಳಿವಿಗಾಗಿ ನಮಗದು ನಿಜವಾಗಿಯೂ ಬೇಕು. 192 00:15:02,041 --> 00:15:04,833 ಹಾಗೇ ಒಂದು ಪ್ರಶ್ನೆ, ನಾನು "ದಯವಿಟ್ಟು" ಎಂದರೆ ಪ್ರಯೋಜನ ಆಗುತ್ತಾ? 193 00:15:08,125 --> 00:15:10,666 ಹುಡುಗಿಯನ್ನು ಕೊಂದವನಿಗೆ ತಿನ್ನಲು ನಾಯಿ ಸಿಗುತ್ತೆ. 194 00:15:12,583 --> 00:15:13,416 ಸರಿ, ಹಾಗಾದರೆ. 195 00:15:20,291 --> 00:15:21,125 ದೇವರೇ. 196 00:15:30,000 --> 00:15:30,833 ಥತ್! 197 00:15:39,540 --> 00:15:41,165 ದರಿದ್ರ ಅನನುಭವಿ. 198 00:15:51,583 --> 00:15:53,415 ಶರಣಾಗುವ ಮುನ್ನ ಸಾಯಲು ಸಿದ್ಧ! 199 00:17:16,000 --> 00:17:17,833 ನನಗೆ ಗೊತ್ತು, ನೀನು ಜನರ ಮಂಡಿಗೆ, ಕುಂಡಿಗೆ 200 00:17:18,708 --> 00:17:21,290 ಗುಂಡು ಹೊಡೆದು ಸಹಾಯ ಮಾಡುತ್ತಿರುವೆ ಅಂತ ಅಂದುಕೊಂಡಿದ್ದೀಯ. 201 00:17:22,665 --> 00:17:24,750 ಆದರೆ ನಿಜ ಹೇಳಬೇಕೆಂದರೆ, ಅದು ನಿಜ ಅಲ್ಲ. 202 00:17:24,833 --> 00:17:27,290 ಜನರನ್ನು ಕೊಲ್ಲದಿದ್ದಕ್ಕೆ ನಾನು ಕ್ಷಮೆಯಾಚಿಸಲ್ಲ. 203 00:17:31,416 --> 00:17:33,208 ಸರಿ, ನನಗೆ ಮುಖ್ಯವಾದದ್ದು… 204 00:17:34,291 --> 00:17:36,166 ನೀನು ಆ ಹಗ್ಗಕ್ಕೆ ಗುಂಡು ಹೊಡೆಯೋದು. 205 00:17:44,125 --> 00:17:45,333 ಸರಿ, ನಾನು ಹೊಡೆದೆ, ತಾನೇ? 206 00:18:28,125 --> 00:18:29,750 ಅದಿನ್ನೂ ಹಳೆಯ ಫೋಟೋಗಳಂತೆಯೇ ಕಾಣುತ್ತೆ. 207 00:18:33,750 --> 00:18:35,250 ಬಾಂಬುಗಳನ್ನ ಬೀಳೋ ಮುಂಚೆ ಹೊಡೆದುರುಳಿಸಿದರು. 208 00:18:36,666 --> 00:18:37,958 ಅಂದರೆ, ಹೆಚ್ಚಿನವುಗಳನ್ನ. 209 00:18:41,875 --> 00:18:43,625 ಹೂಂ, ಅವರು ಲಾಸ್ ವೇಗಸ್‌ಗೆ ಹೀಗೆ ಮಾಡಿದರೆಂದರೆ, 210 00:18:43,708 --> 00:18:45,791 ಅಮೆರಿಕಾಗೆ ಹೀಗೆ ಯಾಕೆ ಮಾಡಲು ಆಗಲಿಲ್ಲ? 211 00:18:47,541 --> 00:18:49,416 ಯಾಕೆಂದರೆ "ಅವರು" ಅಂತ ಯಾರೂ ಇರಲಿಲ್ಲ. 212 00:18:50,125 --> 00:18:51,125 ಅವನು ಮಾತ್ರ ಇದ್ದದ್ದು. 213 00:18:52,250 --> 00:18:54,291 ರಾಬರ್ಟ್ ಹೌಸ್ ಎಂಬ ಹೆಸರಿನ ವ್ಯಕ್ತಿ. 214 00:18:56,333 --> 00:18:58,916 ಬಹುಶಃ ನಿನ್ನ ಕುಟುಂಬ ಅಲ್ಲಿಗೆ ಹೋಗಿದ್ದರೆ, ಅವರಲ್ಲಿ ಸುರಕ್ಷಿತವಾಗಿರುತ್ತಾರೆ. 215 00:18:59,833 --> 00:19:01,541 ರಾಬರ್ಟ್ ಹೌಸ್ ಹತ್ತಿರ ಎಲ್ಲಿಯೂ ಸುರಕ್ಷಿತವಲ್ಲ. 216 00:19:07,833 --> 00:19:09,625 ನನ್ನ ಅಪ್ಪ ಯಾಕೆ ಲಾಸ್ ವೇಗಸ್‌ಗೆ ಹೋಗಿರಬಹುದು? 217 00:19:39,791 --> 00:19:42,500 ಪ್ರಪಂಚದ ಅಂತ್ಯದೊಂದಿಗೆ ನಾವು ಬಹಳಷ್ಟು ಗಳಿಸಬಹುದು. 218 00:19:49,958 --> 00:19:52,000 ಫಲಿತಾಂಶ ಗ್ಯಾರಂಟಿ ಹೇಗೆ ನೀಡುವಿರಿ? 219 00:19:52,083 --> 00:19:52,916 ರೊಬ್ ಕೋ 220 00:19:54,958 --> 00:19:57,083 ನಾವೇ ಬಾಂಬ್ ಹಾಕುವ ಮೂಲಕ. 221 00:20:05,125 --> 00:20:06,208 ಜೇನಿ? 222 00:20:06,291 --> 00:20:07,291 ಚಿನ್ನ. 223 00:20:07,375 --> 00:20:08,875 -ಜೇನಿ? -ಅಪ್ಪ! 224 00:20:08,958 --> 00:20:09,791 -ಹೇ! -ಅಪ್ಪ. 225 00:20:09,875 --> 00:20:11,000 ಹೇ! ಹೇ! ಹೇ! 226 00:20:15,916 --> 00:20:19,500 ನನ್ನ ಮಾತು ಕೇಳು. ನೀನು ನಿನ್ನ ಕೋಣೆಗೆ ಹೋಗು, ಸರಿನಾ? 227 00:20:19,583 --> 00:20:22,250 ಹೋಗಿ ನಿನ್ನ ಮೂರು ನೆಚ್ಚಿನ ಬಟ್ಟೆಗಳನ್ನು ಮತ್ತು ನಿನ್ನ ನೆಚ್ಚಿನ ಆಟಿಕೆಯನ್ನು 228 00:20:22,333 --> 00:20:23,875 ತಗೊಂಡು ಬಾ. ಸರಿನಾ? 229 00:20:24,750 --> 00:20:26,125 ನನ್ನನ್ನ ಇಲ್ಲೇ ಮತ್ತೆ ಭೇಟಿಯಾಗು. 230 00:20:27,916 --> 00:20:28,750 ಸರಿ, ಹೋಗು. 231 00:20:54,833 --> 00:20:56,000 ಎಲ್ಲಿಗೆ ಹೋಗುತ್ತಿದ್ದೇವೆ, ಅಪ್ಪ? 232 00:21:02,375 --> 00:21:05,708 ಬೇಕರ್ಸ್ ಫೀಲ್ಡ್. ನಾವು ಬೇಕರ್ಸ್ ಫೀಲ್ಡ್‌ಗೆ ಹೋಗುತ್ತಿದ್ದೇವೆ, ಚಿನ್ನ. ಸರಿನಾ? 233 00:21:08,000 --> 00:21:09,291 ಮತ್ತು ಅಮ್ಮ? 234 00:21:10,291 --> 00:21:11,583 ಅವಳೂ ನಮ್ಮ ಜೊತೆ ಬರುತ್ತಾಳಾ? 235 00:21:11,666 --> 00:21:14,500 ದಯವಿಟ್ಟು ಗಮನಿಸಿ, ಲಾಸ್ ಏಂಜಲೀಸ್ ಕೌಂಟಿಯ 236 00:21:14,583 --> 00:21:17,458 ಸಿವಿಲ್ ಅಲರ್ಟ್ ಪ್ರಸಾರ ವ್ಯವಸ್ಥೆ ಪರೀಕ್ಷೆ ಹತ್ತು ಸೆಕೆಂಡುಗಳಲ್ಲಿ ಪ್ರಾರಂಭವಾಗುತ್ತದೆ. 237 00:21:21,625 --> 00:21:23,458 ನಡಿ, ನಡಿ, ನಡಿ, ನಡಿ, ನಡಿ. 238 00:21:27,500 --> 00:21:31,416 ವಾಲ್ಟ್-ಟೆಕ್ ಇಂಡಸ್ಟ್ರೀಸ್ 239 00:21:45,791 --> 00:21:47,333 ದೇವರೇ, ಇದು ಆಗುತ್ತಿದೆ! 240 00:21:47,416 --> 00:21:48,625 ಒಳಗೆ ಹೋಗಿ! 241 00:21:51,666 --> 00:21:55,041 ಪರೀಕ್ಷೆ ಪ್ರಾರಂಭ. ಮತ್ತೆ ಹೇಳುತ್ತಿದ್ದೇನೆ. ಇದೊಂದು ಪರೀಕ್ಷೆ. 242 00:21:55,666 --> 00:21:56,916 ಇದು ಒಂದು ಪರೀಕ್ಷೆ ಅಷ್ಟೇ. 243 00:21:57,541 --> 00:22:00,125 ನಾವು ಈಗಲೇ ಹೋಗಬೇಕು. ನಾವೆಲ್ಲರೂ ಸಾಯುತ್ತೇವೆ! 244 00:22:01,250 --> 00:22:02,208 ಅಪ್ಪ, ಭಯವಾಗುತ್ತಿದೆ. 245 00:22:04,041 --> 00:22:05,250 -ಇಲ್ಲಿ ಬಾ. -ನನಗೆ ಭಯವಾಗುತ್ತಿದೆ. 246 00:22:05,333 --> 00:22:06,666 ಪರವಾಗಿಲ್ಲ. ಪರವಾಗಿಲ್ಲ. 247 00:22:14,083 --> 00:22:19,833 ವಾಲ್ಟ್-ಟೆಕ್ ಇಂಡಸ್ಟ್ರೀಸ್‌ನೊಂದಿಗೆ 'ನಿಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸಿ' 248 00:22:19,916 --> 00:22:21,791 ಕೂಪರ್ ಹಾವರ್ಡ್ 249 00:22:23,458 --> 00:22:24,291 ಪರವಾಗಿಲ್ಲ. 250 00:22:26,333 --> 00:22:27,166 ಪರವಾಗಿಲ್ಲ. 251 00:22:54,333 --> 00:22:57,750 ನಾವು ಸಮಸ್ಯಾತ್ಮಕ ದರದಲ್ಲಿ ನಮ್ಮ ನೀರನ್ನು ಖಾಲಿ ಮಾಡುತ್ತಿದ್ದೇವೆ. 252 00:22:57,833 --> 00:23:01,375 ಹಾಗಾದರೆ ನಾವು ಬಿಡಿಭಾಗಗಳಿಂದ ನಿರ್ಮಿಸಿದ ತಾತ್ಕಾಲಿಕ ನೀರಿನ ಫಿಲ್ಟರ್‌ಗಳಿಗೆ 253 00:23:01,458 --> 00:23:03,041 ವಿದ್ಯುತ್ ಅನ್ನು ಮರುಹಂಚಬೇಕು. 254 00:23:04,458 --> 00:23:05,666 ಹೇ, ಕೇಳಿ. 255 00:23:07,458 --> 00:23:08,583 ಏನಾದರೂ ಬೇಕಿತ್ತಾ, ರೆಜ್? 256 00:23:09,041 --> 00:23:10,250 ನೊರ್ಮನನ್ನ ನೋಡಿದ್ದೀರಾ? 257 00:23:10,333 --> 00:23:13,208 ನೊರ್ಮನನ್ನ ವಾಲ್ಟ್ ಮೂವತ್ತೊಂದಕ್ಕೆ ನಾಯಕತ್ವ ವಿನಿಮಯ ಕಾರ್ಯಕ್ರಮಕ್ಕಾಗಿ 258 00:23:13,291 --> 00:23:14,750 ಕಳಿಸಲಾಗಿದೆ. 259 00:23:14,833 --> 00:23:16,958 ನನ್ನನ್ನು ಹೊರತುಪಡಿಸಿ ಜಗತ್ತಲ್ಲಿ ಎಲ್ಲರೂ ಮೇಲೇರುತ್ತಿದ್ದಾರೆ. 260 00:23:17,666 --> 00:23:21,875 ರೆಜ್, ಈ ಸಮುದಾಯವು ಯಾವಾಗಲೂ ಬದುಕಲು ಏನು ಬೇಕೋ ಅದನ್ನು ಮಾಡಿದೆ. 261 00:23:23,250 --> 00:23:24,333 ಅದು ನಿಜವೇ ಅನಿಸುತ್ತೆ. 262 00:23:25,083 --> 00:23:26,708 ನೀವೆಲ್ಲಾ ಏನು ಕೆಲಸ ಮಾಡುತ್ತಿದ್ದೀರಿ? 263 00:23:26,791 --> 00:23:27,791 ನೀರಿನ ಚಿಪ್. 264 00:23:28,458 --> 00:23:31,416 ನಾವು ಬದುಕುಳಿಯಲು ಅದು ಬೇಕು. ಆದರೆ ಅದು ಹಾಳಾಗಿದೆ. 265 00:23:31,500 --> 00:23:33,541 ಓಹ್, ಹೌದು, ಸರಿ, ಅದು. 266 00:23:35,666 --> 00:23:37,000 ನನ್ನ ಸಹಾಯ ಬೇಕಿದ್ದರೆ ಹೇಳಿ. 267 00:23:37,083 --> 00:23:38,625 ನಾನು ಎಂಜಿನಿಯರ್ ಅಲ್ಲ, ಆದರೆ… 268 00:23:39,958 --> 00:23:43,125 ಕಾರ್ಯಕ್ರಮ ಯೋಜನೆಯಲ್ಲಿ ಪಿಎಚ್‌ಡಿ ಪಡೆದ ವ್ಯಕ್ತಿ ಏನೆಲ್ಲಾ ಮಾಡಬಲ್ಲನೆಂದು ತಿಳಿದು ಆಶ್ಚರ್ಯಪಡು-- 269 00:23:46,416 --> 00:23:48,791 ಬಹುಶಃ ನೀನು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು. 270 00:23:48,875 --> 00:23:50,625 ಒಂದು ಕ್ಲಬ್ ಥರ ಏನಾದರೂ ಪ್ರಾರಂಭಿಸು. 271 00:23:50,708 --> 00:23:51,583 ಕ್ಲಬ್ಬಾ? 272 00:23:53,166 --> 00:23:54,000 ಎಂತಹ ಕ್ಲಬ್? 273 00:23:54,083 --> 00:23:56,083 ನಾವು ಇತ್ತೀಚೆಗೆ ಬಹಳಷ್ಟು ಕಷ್ಟ ಅನುಭವಿಸಿದ್ಧೇವೆ. 274 00:23:56,166 --> 00:23:58,291 ಬಹುಶಃ ನೀನು ಜನರಿಗಾಗಿ 275 00:23:58,375 --> 00:24:02,541 ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಗುಂಪನ್ನು ಪ್ರಾರಂಭಿಸಬಹುದು. 276 00:24:02,625 --> 00:24:04,083 ಎಂತಹ ಭಾವನೆಗಳು? 277 00:24:05,125 --> 00:24:07,791 ಅವಮಾನ. ನಿಷ್ಪ್ರಯೋಜಕತೆ. 278 00:24:07,875 --> 00:24:08,958 ನನಗೆ ನಿಷ್ಪ್ರಯೋಜಕತೆ ಅನಿಸಲ್ಲ. 279 00:24:10,166 --> 00:24:11,416 ಆದರೆ ಅವಮಾನ ಇಷ್ಟ ಆಯಿತು. 280 00:24:12,750 --> 00:24:13,958 ಅವಮಾನ, ಅದರ ಮೇಲೆ ಕೆಲಸ ಮಾಡಬಹುದು. 281 00:24:15,250 --> 00:24:18,083 ತಿಂಡಿಗಳಿಗೆ ಖಂಡಿತ ನನಗೆ ಹಣ ಬೇಕಾಗುತ್ತೆ. 282 00:24:18,166 --> 00:24:22,666 ಸರಬರಾಜು ವಿನಂತಿಯನ್ನು ಕಳಿಸು, ನಾನದಕ್ಕೆ ಸಹಿ ಹಾಕುವೆ. 283 00:24:26,958 --> 00:24:28,291 ನಾಯಕತ್ವ ತುಂಬಾ ಕಷ್ಟ. 284 00:24:29,750 --> 00:24:31,458 ನಿನಗದರ ಅರ್ಧವೂ ಗೊತ್ತಿಲ್ಲ. 285 00:24:32,666 --> 00:24:34,250 ಹಾಗಾಗಿ ನಾನು ಏನೇನು ಎದುರಿಸಬೇಕು ನೋಡಿದೆಯಾ? 286 00:24:34,333 --> 00:24:36,750 33ರಲ್ಲಿ, ನಾನು ನನ್ನ ಕೋಣೆಯನ್ನು ಬಿಟ್ಟು, 287 00:24:36,833 --> 00:24:39,291 ಬಲ ತಿರುವು ತಗೊಂಡು, ಲಿಫ್ಟ್‌ಗಾಗಿ ಮತ್ತೊಂದು ಬಲ ತಿರುವು ತಗೋಬೇಕು. 288 00:24:39,375 --> 00:24:44,083 ಇಲ್ಲಿ 32ರಲ್ಲಿ, ಮೊದಲು ಎಡಕ್ಕೆ ಆಮೇಲೆ ಲಿಫ್ಟ್‌ಗಾಗಿಯೂ ಎಡಕ್ಕೆ. 289 00:24:44,166 --> 00:24:47,833 ಹೌದು. ಮತ್ತೊಮ್ಮೆ, ಇಲ್ಲಿ ಎಲ್ಲವೂ ಉಲ್ಟಾ ಇದೆ. 290 00:24:47,916 --> 00:24:50,041 ಹಾಗಾಗಿ ಎಲ್ಲವನ್ನೂ ನೀವು ಮಾಡುತ್ತಿದ್ದಿದ್ದರ ವಿರುದ್ಧವಾಗಿ ಮಾಡಿ. 291 00:24:51,708 --> 00:24:53,208 ಅದು ಅಷ್ಟು ಸರಳ ಅಲ್ಲ ಅನಿಸುತ್ತೆ. 292 00:24:54,833 --> 00:24:55,666 ಅಷ್ಟು ಸರಳವೇ. 293 00:24:56,333 --> 00:24:59,916 ಈಗ, ನೋಡಿ, ನಿಮ್ಮ ಓವೆರ್ಸೀರ್ ಆಗಿ, ನಾನು ಕೇಳಬೇಕು, 294 00:25:00,833 --> 00:25:04,666 ಇದರ ಬಗ್ಗೆ ನಾನು ನಿಮಗಾಗಿ ಏನಾದರೂ ಮಾಡಬಹುದಾ? 295 00:25:04,750 --> 00:25:06,708 ನನ್ನಿಂದ ಏನಾದರೂ ಆಗಬೇಕಾ? 296 00:25:07,958 --> 00:25:09,041 ಫಲಕಗಳು. 297 00:25:09,833 --> 00:25:12,250 ಇಲ್ಲ, ಅದು ವಿವಾದಾತ್ಮಕವಾಗಬಹುದು. 298 00:25:12,333 --> 00:25:15,583 ಬಹುಶಃ ನೀವು ಫಲಕಗಳ ವಿಷಯದ ಕುರಿತು ಒಂದು ಕಾರ್ಯಸಾಧ್ಯತಾ ಅಧ್ಯಯನವನ್ನು 299 00:25:15,666 --> 00:25:17,583 ನಿಯೋಜಿಸಬಹುದು. 300 00:25:27,083 --> 00:25:28,833 ಚೆಟ್, ನಿನ್ನ ಹೆಂಡತಿ ಅದ್ಭುತ. 301 00:25:28,916 --> 00:25:30,416 ನಾವು ಮದುವೆಯಾಗಿಲ್ಲ. 302 00:25:30,500 --> 00:25:32,333 ಮತ್ತು ಮಗು ಸುಂದರ. 303 00:25:32,416 --> 00:25:33,458 ನನ್ನದಲ್ಲ. 304 00:25:33,541 --> 00:25:34,916 ನನಗೆ ಎಂದಿಗೂ ಕುಟುಂಬವಿರಲಿಲ್ಲ. 305 00:25:35,916 --> 00:25:36,750 ಏನಾಯಿತು? 306 00:25:36,833 --> 00:25:38,041 ಜೀವನವೇ ಹಾಗೆ ಅನಿಸುತ್ತೆ. 307 00:25:39,250 --> 00:25:41,041 ಇಲ್ಲಿ ವಿಷಯಗಳು ಬೇಗನೆ ಸಾಗುತ್ತವೆ. 308 00:25:41,625 --> 00:25:43,458 ನನಗೂ ಯಾವ ಕುಟುಂಬವೂ ಇಲ್ಲ, ಡೇವಿ. 309 00:25:43,541 --> 00:25:45,083 ಸರಿ, ಮಜಾ ಮಾಡು. 310 00:25:49,250 --> 00:25:50,375 ಈ ಕಡೆ. ಹೂಂ. 311 00:25:58,125 --> 00:25:59,083 ಓಹ್, ನೀನಾ? 312 00:26:00,958 --> 00:26:03,666 ಆ ಡೇವಿ, ಅಂದರೆ… 313 00:26:04,958 --> 00:26:07,833 ದೇವರು ಅವನನ್ನು ಚೆನ್ನಾಗಿ ಇಟ್ಟಿರಲಿ, ಆದರೆ, ಗೊತ್ತಲ್ಲಾ… 314 00:26:10,958 --> 00:26:14,083 ನನಗಾಗಿ ಯಾವುದಾದರೂ ಕೆಲಸ ನಿಯೋಜಿಸಲು ತಯಾರಾಗಿದ್ದೀಯಾ ಅಂತ ಕೇಳಲು ಬಂದೆ, ಅಷ್ಟೇ. 315 00:26:14,166 --> 00:26:17,208 ಯಾಕೆಂದರೆ, ಅದು, ಎಲ್ಲರಿಗೂ ಏನಾದರೂ ಒಂದು ಕೆಲಸ ಇದೆ. 316 00:26:18,083 --> 00:26:22,083 ನಿನಗಿನ್ನೂ ಯಾರೂ ಗೇಟ್ ಕೀಪರ್ ಸಿಕ್ಕಿಲ್ಲವಾದರೆ, ನನಗೆ ಅನುಭವವಿದೆ. 317 00:26:22,875 --> 00:26:25,083 ಚೆಟ್, ನನಗೆ ತುಂಬಾ ಕೆಲಸ ಇದೆ. 318 00:26:25,166 --> 00:26:27,125 ಮತ್ತು ಮಗುವನ್ನ ನೋಡಿಕೊಳ್ಳಲು ನನಗೆ ಯಾರಾದರೂ ಬೇಕು, 319 00:26:27,208 --> 00:26:28,500 ಅವನು ನಿನಗೆ ಒಗ್ಗಿಕೊಂಡಿದ್ದಾನೆ. 320 00:26:29,166 --> 00:26:33,416 ಆದರೆ ಅವನು ನನ್ನ ಮಗುವಲ್ಲ. 321 00:26:34,500 --> 00:26:37,083 ಎಲ್ಲರೂ ಅವನು ನನ್ನ ಮಗ ಎಂಬಂತೆ ವರ್ತಿಸುತ್ತಿದ್ದಾರೆ. 322 00:26:37,166 --> 00:26:38,375 ಚೆಟ್… 323 00:26:38,458 --> 00:26:40,708 ಕಡೇ ಪಕ್ಷ ಅವನಿಗೊಂದು ಹೆಸರಿಡುವ ಬಗ್ಗೆಯಾದರೂ ಯೋಚಿಸುವೆಯಾ? 324 00:26:40,791 --> 00:26:43,875 ಯಾಕೆಂದರೆ ನೆರೆಹೊರೆಯವರು ಅವನನ್ನು ಚೆಟ್ ಜೂನಿಯರ್ ಅಂತ ಕರೆಯಲು ಪ್ರಾರಂಭಿಸಿದ್ದಾರೆ. 325 00:26:43,958 --> 00:26:45,583 ಅದನ್ನೇ ಮುಂದುವರೆಸೋಣ, ಹಾಗಾದರೆ. 326 00:26:45,666 --> 00:26:49,625 ಅದು, ನೋಡು, ಚೆಟ್ ಜೂನಿಯರ್ ನನ್ನ ಅಪ್ಪನ ಹೆಸರಾಗಿತ್ತು. 327 00:26:49,708 --> 00:26:51,833 ಅದು ನನಗೆ ಒಂದು ರೀತಿಯ ವೈಯಕ್ತಿಕ ವಿಷಯ, 328 00:26:51,916 --> 00:26:54,416 ಜೀರುಂಡೆಗಳ ಕ್ಷಾಮದಲ್ಲಿ ಅವರು ಹಸಿವಿನಿಂದ ಸಾಯುವುದನ್ನು ನೋಡಿದ್ದೆ. 329 00:26:56,416 --> 00:27:00,083 ಚೆಟ್, ನಾವು ವಾದ ಮಾಡುತ್ತಿದ್ದೇವಾ? 330 00:27:03,958 --> 00:27:05,083 ಚೆಟ್ ಜೂನಿಯರ್ ಅಂತಲೇ ಇರಲಿ. 331 00:27:14,875 --> 00:27:16,916 ಕಂಪ್ಯೂಟರ್ ಬಳಸಲು ಗೊತ್ತಾ ನಿನಗೆ? 332 00:27:18,375 --> 00:27:20,000 ಅದು ನೊರ್ಮ ಕೆಲಸ ಆಗಿತ್ತು. 333 00:27:20,083 --> 00:27:22,250 ಬಹುಶಃ ನೀನವನನ್ನು ಟರ್ಮಿನಲ್‌ನಲ್ಲಿ ಕೇಳಬಹುದು. 334 00:27:22,333 --> 00:27:23,916 ಒಳ್ಳೆಯ ಉಪಾಯ. 335 00:27:24,000 --> 00:27:26,833 ನಾನು ಇನ್ನೊಂದು ವಾಲ್ಟ್‌ಗೆ ಸಂದೇಶ ಕಳಿಸುವೆ. 336 00:27:37,833 --> 00:27:40,125 ಸರಿ. ಸರಿ. 337 00:27:47,541 --> 00:27:48,958 ಇಂಟರ್-ವಾಲ್ಟ್ ಸಂವಹನಗಳು ನಿಷ್ಕ್ರಿಯವಾಗಿವೆ 338 00:27:49,041 --> 00:27:50,791 ಅಯ್ಯೋ, ದೇವರೇ! 339 00:27:51,583 --> 00:27:54,750 ಇಲ್ಲ, ಇಲ್ಲ, ಇಲ್ಲ, ಇಲ್ಲ! "ಇಂಟರ್-ವಾಲ್ಟ್ ಸಂವಹನಗಳು ನಿಷ್ಕ್ರಿಯವಾಗಿವೆಯಾ"? 340 00:27:55,166 --> 00:27:57,541 ನೋಡೋಣ. ಎಲ್ಲಿದ್ದಾನೆ ಇವನು? 341 00:27:58,125 --> 00:28:01,291 ಎಲ್ಲಿ… ಎಲ್ಲಿದ್ದೀಯಾ? ಇರು ಬಂದೆ, ಇದೆ ನಿನಗೆ. 342 00:28:01,375 --> 00:28:02,750 ಬಂದೆ ಇರು! 343 00:28:03,458 --> 00:28:04,541 ಈಗಲೇ ಬಂದೆ! 344 00:28:05,291 --> 00:28:07,625 ದೇವರೇ! ಏನಿದು ಅವ್ಯವಸ್ಥೆ? 345 00:28:07,708 --> 00:28:10,791 ನೀನು ನಿಜಕ್ಕೂ ಅಸಹ್ಯ ಪ್ರಾಣಿ ಅಲ್ವಾ? 346 00:28:11,291 --> 00:28:13,625 ಹೂಂ, ನಾನಿದನ್ನು ಶುಚಿಗೊಳಿಸುವೆ ಅಂದುಕೊಳ್ಳಬೇಡ. 347 00:28:18,166 --> 00:28:20,875 ಸರಿ, ನಿನಗೆ ನೀರು ಸಿಕ್ಕಿದೆ, ಆದರೆ ಊಟ ಇಲ್ಲ. 348 00:28:20,958 --> 00:28:23,166 ಸಾಯಲು ಹಸಿವು ತುಂಬಾ ಕೆಟ್ಟ ದಾರಿ. 349 00:28:24,875 --> 00:28:27,333 ನಾನು ನಿನಗೆ ನೀನೇ ಆರಿಸಿಕೊಂಡದ್ದಕ್ಕಿಂತ 350 00:28:27,416 --> 00:28:29,625 ಹೆಚ್ಚು ಗೌರವಾನ್ವಿತ ಪರಿಹಾರ ನೀಡುತ್ತಿದ್ದೇನೆ, ಹ್ಯಾಂಕ್ ಪುತ್ರನೇ. 351 00:28:30,416 --> 00:28:32,500 ನಿನ್ನ ತಂದೆಯ ಕ್ರಯೋ ಪಾಡ್ ಒಳಗೆ ಹೋಗು. 352 00:28:33,541 --> 00:28:35,125 ನಾನು ನಿನ್ನ ಬಂಧಿಯಾಗಲ್ಲ. 353 00:28:35,583 --> 00:28:37,750 ನೀನು ಈಗಾಗಲೇ ನನ್ನ ಬಂಧಿ ಆಗಿದ್ದೀಯ. 354 00:28:37,833 --> 00:28:41,708 ಮೇಲ್ಮೈ ಮತ್ತೆ ಆವರಿಸಿಕೊಳ್ಳುವಷ್ಟು ಸುರಕ್ಷಿತ ಆಗುವವರೆಗೆ ಕಾಯಬೇಕಷ್ಟೇ ನೀನು, 355 00:28:41,791 --> 00:28:44,583 ಮತ್ತು ನಾವು ರೆಕ್ಲಮೇಷನ್ ಡೇಗಾಗಿ ಮೇಲೆ ಹೋಗಬಹುದು. 356 00:28:45,250 --> 00:28:46,541 ಮತ್ತು ಅದು ಯಾವಾಗ? 357 00:28:46,625 --> 00:28:49,583 ಮೇಲ್ಮೈಯಲ್ಲಿ ನಮ್ಮ ಜತೆ ಭಿನ್ನಾಭಿಪ್ರಾಯ ಇರುವವರು ಯಾರೂ ಉಳಿದಿಲ್ಲ ಎನ್ನುವಾಗ. 358 00:28:51,791 --> 00:28:53,208 ಅಥವಾ ನೀನು ನನ್ನನ್ನ ಮನೆಗೆ ಹೋಗಬಿಡಬಹುದು. 359 00:28:54,375 --> 00:28:56,000 ನಾನು ಕಾಣೆಯಾಗಿದ್ದೇನೆ ಅಂತ ಜನರು ಗಮನಿಸುತ್ತಾರೆ. 360 00:28:56,791 --> 00:28:58,500 ನಮ್ಮಲ್ಲಿ ಎಲ್ಲದಕ್ಕೂ ಒಂದು ವಿಧಿವಿಧಾನ ಇದೆ. 361 00:28:58,583 --> 00:29:00,791 ಯಾರಾದರೂ ವಾಲ್ಟ್‌ನಿಂದ ಕಾಣೆಯಾಗುವ ಸನ್ನಿವೇಶವೂ ಸೇರಿದಂತೆ. 362 00:29:00,875 --> 00:29:02,708 ನಿನ್ನ ಓವೆರ್ಸೀರ್ ಅದನ್ನು ನೋಡಿಕೊಳ್ಳುತ್ತಾರೆ. 363 00:29:02,791 --> 00:29:04,500 ಯಾರೂ ನಿನ್ನನ್ನು ಹುಡುಕಿ ಬರುತ್ತಿಲ್ಲ. 364 00:29:05,458 --> 00:29:08,708 ಇನ್ನೂ ಸ್ವಲ್ಪ ಹಸಿವು ಹೆಚ್ಚಾದಾಗ ನಿನಗೆ ಸ್ವಲ್ಪ ಬುದ್ಧಿ ಬರಬಹುದು. 365 00:29:09,666 --> 00:29:12,333 ಕತ್ತಲೆಯಲ್ಲಿ ಹೇಗೆ ಊಟ ಹುಡುಕುವೆ ನೋಡೋಣ. 366 00:29:15,916 --> 00:29:17,500 ನೀನು ನನ್ನ ಪ್ರಪಂಚದಲ್ಲಿ ಇರೋದು. 367 00:29:18,625 --> 00:29:22,791 ಈ ಮೂರು ವಾಲ್ಟ್‌ಗಳು ದಶಕಗಳ ಕಾರ್ಯತಂತ್ರದ ಫಲಿತಾಂಶ. 368 00:29:22,875 --> 00:29:26,208 ಯುದ್ಧಪೂರ್ವದ ನೂರಾರು ಜಾಣ ತಲೆಗಳ ಸಂಯೋಜಿತ ಪ್ರಯತ್ನಗಳು 369 00:29:26,291 --> 00:29:29,000 ಸಫಲ ನಾಗರಿಕತೆಯ ಎಲ್ಲಾ ಸಂಪನ್ಮೂಲಗಳೊಂದಿಗೆ. 370 00:29:29,750 --> 00:29:33,666 ನೀನು ತಪ್ಪು ಹಜಾರಕ್ಕೆ ನಡೆದು ಬಂದ ಒಬ್ಬ ಅತೃಪ್ತ ವ್ಯಕ್ತಿ ಅಷ್ಟೇ. 371 00:29:34,666 --> 00:29:37,041 ಲಂಬ ಏಕೀಕರಣದ ಇತಿಹಾಸದಲ್ಲೇ ನಡೆದಿರುವ ಅತ್ಯಂತ ಶ್ರೇಷ್ಠ ಸಾಧನೆಯ ವಿರುದ್ಧ 372 00:29:37,125 --> 00:29:39,083 ನೀನು ಏನು ತಾನೇ ಮಾಡಬಲ್ಲೆ? 373 00:29:40,541 --> 00:29:42,041 ಒಪ್ಪಿಕೋ, ಹ್ಯಾಂಕ್ ಪುತ್ರನೇ, 374 00:29:43,375 --> 00:29:44,916 ಇದು ನಿನ್ನ ಸಾಮರ್ಥ್ಯ ಮೀರಿದ್ದು, 375 00:29:46,333 --> 00:29:48,708 ಮತ್ತು ಯಾರೂ ನಿನ್ನನ್ನು ಉಳಿಸಲು ಬರುತ್ತಿಲ್ಲ. 376 00:30:02,750 --> 00:30:07,625 ಹ್ಯಾಂಕ್ ಮ್ಯಾಕ್ಲೀನ್ ಎಕ್ಸಿಕ್ಯುಟಿವ್ ಅಸಿಸ್ಟೆಂಟ್ 377 00:30:24,333 --> 00:30:27,958 ಅಂದರೆ, ನನ್ನ ಅಪ್ಪ ನಿನ್ನನ್ನು ನಿನ್ನ ಕುಟುಂಬದ ಬಳಿಗೆ ಒಯ್ಯುತ್ತಾರೆ ಅನಿಸುತ್ತಾ ನಿನಗೆ? 378 00:30:28,666 --> 00:30:31,458 ಅಂದರೆ ನಿನ್ನ ಕುಟುಂಬ 200 ವರ್ಷಗಳ ನಂತರವೂ ಜೀವಂತವಾಗಿದೆ ಅಂತ ನೀನು ಅಂದುಕೊಂಡಿದ್ದೀಯ, 379 00:30:31,541 --> 00:30:33,291 ಮತ್ತು ನನ್ನನ್ನು ಆಶಾವಾದಿ ಅನ್ನುತ್ತೀಯ. 380 00:30:40,250 --> 00:30:41,208 ನಿನ್ನ ಅಪ್ಪ… 381 00:30:42,583 --> 00:30:44,625 ಯಾವಾಗಲೂ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಿರುತ್ತಾರೆ. 382 00:31:10,875 --> 00:31:13,250 ಪ್ರತಿದಿನ ತಾಜಾವಾಗಿ ತಯಾರಿಸಲಾಗುತ್ತದೆ 383 00:31:13,333 --> 00:31:15,708 ಜಸ್ಟ್ ಅಹೆಡ್ ಈಟ್ಸ್ 384 00:31:15,791 --> 00:31:18,250 ಸೂಪ್ ಬಿಸಿ-ಬಿಸಿ, ರುಚಿ-ರುಚಿ 385 00:31:18,333 --> 00:31:20,083 ಅವನು ಇಲ್ಲಿಂದ ಹೋಗುವುದನ್ನು ಅವಳು ನೋಡಿರಬಹುದು. 386 00:31:24,500 --> 00:31:26,333 ನಾವವಳನ್ನು ಕೇಳಿ ನೋಡಬಹುದು. 387 00:31:33,333 --> 00:31:35,250 ಇಲ್ಲಿ ಕೇಳಿ. ನಮಸ್ಕಾರ. 388 00:31:36,541 --> 00:31:38,500 ನನಗೆ ಒಂದು ಬಟ್ಟಲು… 389 00:31:38,583 --> 00:31:40,583 ಚಿಗಟ ಸೂಪ್ 2 ಕ್ಯಾಪ್ಸ್ 390 00:31:42,083 --> 00:31:43,083 ಚಿಗಟ ಸೂಪ್ ಬೇಕು. 391 00:31:44,541 --> 00:31:45,541 ಖಂಡಿತ. 392 00:31:50,458 --> 00:31:53,625 ಮತ್ತೆ, ನೀವೇನಾದರೂ ಇಲ್ಲಿ ಒಬ್ಬ ವ್ಯಕ್ತಿ ಹೋಗು… 393 00:32:03,833 --> 00:32:05,916 ಬೇಕಾದರೆ ನನ್ನ ಬಳಿ ಕೆಲವು ಬಿಸ್ಕತ್ತುಗಳು ಇವೆ. 394 00:32:06,791 --> 00:32:08,333 ಅವು ನನ್ನ ಇನ್ನೊಂದು ಪ್ಯಾಂಟ್‌ನಲ್ಲಿವೆ. 395 00:32:10,708 --> 00:32:11,791 ಪರವಾಗಿಲ್ಲ, ಆದರೆ… 396 00:32:12,666 --> 00:32:14,375 ಬಿಸಿ ಇರುವಾಗಲೇ ತಿನ್ನು, ಹುಡುಗಿ. 397 00:32:25,583 --> 00:32:28,875 ಹೂಂ. ಮತ್ತೆ ನೀವೇನಾದರೂ ಇಲ್ಲಿ ಒಬ್ಬ ವ್ಯಕ್ತಿ… 398 00:32:28,958 --> 00:32:34,541 ಲೋಹದಿಂದ ಮಾಡಿದ ಒಂದು ರೀತಿಯ ದೊಡ್ಡ ಉಡುಪಿನಲ್ಲಿ ಹಾದುಹೋಗುವುದನ್ನು ನೋಡಿದಿರಾ? 399 00:32:34,625 --> 00:32:36,166 ಅವನು ನನ್ನ ಮಗನನ್ನು ಕರೆದುಕೊಂಡು ಹೋದ. 400 00:32:37,416 --> 00:32:38,583 ಖಂಡಿತ ನಿಮ್ಮ ಮಗನಿಗೆ ಏನೂ-- 401 00:32:38,666 --> 00:32:39,875 ಸತ್ತುಹೋಗಿದನೆ. 402 00:32:39,958 --> 00:32:41,875 ಇಲ್ಲ, ಅದು ನಮಗೆ ಗೊತ್ತಿಲ್ಲ. 403 00:32:41,958 --> 00:32:42,833 ಇಲ್ಲ. 404 00:32:42,916 --> 00:32:45,916 ಸತ್ತಿರುತ್ತಾನೆ. ನನ್ನ ವಿಧಿಯೇ ಹಾಗೆ. 405 00:32:47,541 --> 00:32:49,166 ಬೇವರ್ಸಿ ನನ್ನ ಸಾಲ ತೀರಿಸಬೇಕಿತ್ತು. 406 00:32:52,250 --> 00:32:55,958 ಬೇಜಾರಾಯಿತು… ನಿಮ್ಮ ಹಣದ ಬಗ್ಗೆ ಕೇಳಿ. 407 00:32:56,041 --> 00:32:57,541 ಅವನು ಆ ಕಡೆ ಹೋದ. 408 00:32:58,541 --> 00:32:59,375 ಧನ್ಯವಾದ. 409 00:33:03,541 --> 00:33:07,125 ಶವದ ಮೇಲೇನಾದರೂ ಹಣ ಸಿಕ್ಕರೆ, ಅದು ನನ್ನದು. 410 00:33:11,791 --> 00:33:12,625 ಒಂದು ಪ್ರಶ್ನೆ. 411 00:33:13,500 --> 00:33:16,166 ನಿನ್ನ ತಂದೆ ಸಿಕ್ಕ ನಂತರ ನೀನು ಏನು ಮಾಡಬೇಕು ಅಂದುಕೊಂಡಿರುವೆ? 412 00:33:17,041 --> 00:33:18,541 ಎಂದಿನಂತೆಯಾ? 413 00:33:19,208 --> 00:33:23,291 ನೀನು ಕುಂಡಿಗೆ ಗುಂಡು ಹೊಡೆದು, ತಲೆಗೆ ಗುಂಡು ಹೊಡೆಯಲು ನನಗೆ ಬಿಡುವೆಯಾ? 414 00:33:25,833 --> 00:33:29,041 ಇಲ್ಲ, ನಾನು… ನಾನು ಅವರಿಂದ ನ್ಯಾಯ ಕೇಳುತ್ತೇನೆ. 415 00:33:31,416 --> 00:33:33,125 ಅವನು ಅದಕ್ಕೆ ಅರ್ಹ ಅಂತ ಅನಿಸುತ್ತಾ ನಿನಗೆ? 416 00:33:33,208 --> 00:33:35,666 ಎಲ್ಲರೂ ಅದಕ್ಕೆ ಅರ್ಹರು ಎಂಬ ನಂಬಿಕೆಯಲ್ಲೇ ನಾನು ಬೆಳೆದಿರೋದು, 417 00:33:35,750 --> 00:33:38,500 ಹಾಗಾಗಿ ತಾವು ಹೇಗೆ ವರ್ತಿಸುತ್ತೇವೆ ಅನ್ನೋದು ಮುಖ್ಯ ಅಂತ ಜನರಿಗೆ ಗೊತ್ತಿರುತ್ತೆ, 418 00:33:38,583 --> 00:33:40,041 ಮತ್ತು ಅವರು ಭರವಸೆಯನ್ನು ಬಿಟ್ಟುಕೊಡಲ್ಲ. 419 00:33:40,625 --> 00:33:44,166 ಅಂದರೆ, ನಿನಗೆ ಭರವಸೆಯೇ ಇಲ್ಲ ಅನ್ನುತ್ತೀಯ ನೀನು, ಆದರೆ ಒಳಗೆಲ್ಲೋ ಅದು ಇನ್ನೂ ಇದೆ. 420 00:33:46,791 --> 00:33:49,458 ಸರಿ, ಇದನ್ನು ನಿನಗೆ ಹೇಳಲು ಬೇಜಾರಾಗುತ್ತಿದೆ, ಚಿನ್ನ, 421 00:33:49,541 --> 00:33:51,500 ಆದರೆ ನೀನು ಬೆಳೆದ ರೀತಿ ನಿಜವಲ್ಲ. 422 00:33:53,125 --> 00:33:56,166 ಅದು ನನಗೆ ಗೊತ್ತು, ಆದರೆ ನಿನ್ನ ಪರ್ಯಾಯವನ್ನು ನೋಡು. 423 00:33:58,833 --> 00:34:00,583 ನಾನು ಉದಾಹರಣೆಯಾಗಿರಲು ನೋಡುತ್ತಿದ್ದೇನೆ ಅಷ್ಟೇ. 424 00:34:07,875 --> 00:34:09,166 ಸ್ಟಾರ್‌ಲೈಟ್ ಡ್ರೈವ್-ಇನ್ ಥಿಯೇಟರ್ 425 00:34:09,250 --> 00:34:11,875 ಡಬಲ್ ಫೀಚರ್ 630 ಎಂ: ಅ ಮ್ಯಾನ್ ಅಂಡ್ ಹಿಸ್ ಡಾಗ್3 - ಕೂಪರ್ ಹೊವಾರ್ಡ್ 426 00:34:49,291 --> 00:34:50,291 ಸಮತಾವಾದಿಯನ್ನು ಚಚ್ಚಿ! 427 00:34:50,375 --> 00:34:51,791 ಅವರು ಆ ಮೇಜಿನ ಸುತ್ತಲೂ ಕೂತು 428 00:34:51,875 --> 00:34:53,750 ಪ್ರಪಂಚದ ಅಂತ್ಯದ ಬಗ್ಗೆ 429 00:34:53,833 --> 00:34:56,458 ಒಂದು ಹೊಸ ವ್ಯವಹಾರ ತಂತ್ರ ಎಂಬಂತೆ ಮಾತಾಡುತ್ತಿದ್ದರು. 430 00:34:57,083 --> 00:34:59,250 ಏನೋ ಆಸಕ್ತಿದಾಯಕವಾದದ್ದು ಕೇಳ್ಪಟ್ಟೆ ಅನಿಸುತ್ತೆ ನೀನು. 431 00:35:00,625 --> 00:35:01,833 ಏನು, ನಿನಗೆ ಗೊತ್ತಿತ್ತಾ? 432 00:35:03,291 --> 00:35:04,708 ಮತ್ತು ಈಗ ನಿನಗೂ ಗೊತ್ತು. 433 00:35:04,791 --> 00:35:07,000 ಹಾಗಾದರೆ, ಅದರ ಬಗ್ಗೆ ಏನು ಮಾಡೋದು? 434 00:35:07,958 --> 00:35:10,000 "ಅದರ ಬಗ್ಗೆ ಏನು ಮಾಡೋದು?" ಅಂದರೆ ಏನರ್ಥ? 435 00:35:10,083 --> 00:35:13,375 ನಾನು ನಿನಗೆ ಹೇಳಿದ್ದೆ, ನಾನು ಗೂಢಚಾರನಲ್ಲ. ನಾನು ಸಮತಾವಾದಿ ಅಲ್ಲ. 436 00:35:13,458 --> 00:35:17,166 ನಾನು ಒಬ್ಬ ಕುದುರೆಗಳು ಮತ್ತು ಕಾರುಗಳನ್ನು ಇಷ್ಟಪಡೋ ಹಾಲಿವುಡ್ ನಟ ಅಷ್ಟೇ. 437 00:35:17,250 --> 00:35:19,750 ಮತ್ತು ನೀನು ಒಬ್ಬ ಖ್ಯಾತ ವ್ಯಕ್ತಿ ಕೂಡ, 438 00:35:20,333 --> 00:35:22,583 ಮತ್ತು ಖ್ಯಾತಿ ಒಂದು ಅಪರೂಪದ ಶಕ್ತಿ. 439 00:35:22,666 --> 00:35:24,833 ನನಗೆ ಕೂರಲು ಸಿಗದ ಸಭೆಗಳಲ್ಲಿ ನೀನು ಕೂರಬಹುದು. 440 00:35:24,916 --> 00:35:26,625 ನಾನು ಎಂದೂ ಭೇಟಿಯಾಗಲು ಸಾಧ್ಯವಾಗದ ಜನರನ್ನು ಭೇಟಿ-- 441 00:35:26,708 --> 00:35:28,375 ಎಂತಹ ಜನರನ್ನು ಭೇಟಿ ಆಗೋದು? 442 00:35:30,541 --> 00:35:32,416 ನಿನಗೆ ರಾಬರ್ಟ್ ಹೌಸ್‌ನ ಪರಿಚಯವಿದೆಯಾ? 443 00:35:34,541 --> 00:35:37,666 ಹೂಂ, ನನಗವನ ಪರಿಚಯವಿದೆ. 444 00:35:37,750 --> 00:35:39,458 ಅರ್ಧ ಲಾಸ್ ವೇಗಸ್ ಅವನಿಗೆ ಸೇರಿದ್ದು. 445 00:35:39,541 --> 00:35:43,583 ಅವನು ಲಾಸ್ ವೇಗಸ್‌ನಲ್ಲಿ ನಿನ್ನ ಹೆಂಡತಿಯ ಪ್ರಸ್ತಾಪಗಳನ್ನು ಅನುಸರಿಸಲು ಸಾಕಾಗುವಷ್ಟು 446 00:35:44,666 --> 00:35:49,166 ಸ್ಫೋಟಕ ಶಕ್ತಿ ಇರುವ ಖಾಸಗಿ ಒಡೆತನದ ಕ್ಷಿಪಣಿ ವ್ಯವಸ್ಥೆಯನ್ನು ಸಹ ನಿರ್ಮಿಸುತ್ತಿದ್ದಾನೆ. 447 00:35:50,916 --> 00:35:52,541 ಬಾಂಬ್‌ಗಳು ಬೀಳುವಾಗ, 448 00:35:52,625 --> 00:35:55,583 ಗುಂಡಿ ಒತ್ತೋ ಕೈಗಳು ರಾಬರ್ಟ್ ಹೌಸ್‌ನದ್ದಾಗಿರುತ್ತೆ. 449 00:35:58,291 --> 00:36:01,916 ಅಮೆರಿಕಾದ ಅತ್ಯಂತ ಶ್ರೀಮಂತ ವ್ಯಕ್ತಿಯ ಮೇಲೆ ಕಣ್ಣಿಡಲು ಹೇಳುತ್ತಿದ್ದೀಯಾ ನನಗೆ? 450 00:36:03,625 --> 00:36:04,666 ಕಣ್ಣಿಡಲು ಹೇಳುತ್ತಿಲ್ಲ. 451 00:36:11,791 --> 00:36:12,625 ನೀನು ಹೇಳುತ್ತಿರೋದು… 452 00:36:13,958 --> 00:36:16,041 ಕೋಲ್ಡ್ ಫ್ಯೂಷನ್ ಅನ್ನು ರಾಬರ್ಟ್ ಹೌಸ್‌ಗೆ ಮಾರಲು 453 00:36:16,125 --> 00:36:19,333 ನಿನ್ನ ಹೆಂಡತಿ ಮುಂದಿನ ವಾರ ವೇಗಸ್‌ಗೆ ಹೋಗುತ್ತಿದ್ದಾಳೆ. 454 00:36:20,250 --> 00:36:23,791 ಆಗ ಆ ಗುಂಡಿಯನ್ನು ಒತ್ತಲು ಬೇಕಿರೋ ಎಲ್ಲವೂ ಅವನ ಬಳಿ ಇರುತ್ತೆ, 455 00:36:23,875 --> 00:36:25,291 ನೀನವನನ್ನು ತಡೆಯದ ಹೊರತು. 456 00:36:25,791 --> 00:36:27,166 ನಿನ್ನ ಹೆಂಡತಿ ಜೊತೆ ಚೆನ್ನಾಗಿರು 457 00:36:28,125 --> 00:36:29,750 ಮತ್ತು ಆ ವೇಗಸ್ ಪ್ರವಾಸಕ್ಕೆ ಹೋಗು. 458 00:36:33,833 --> 00:36:34,791 ಎಲ್ಲಿ ಹೋಗುತ್ತಿದ್ದೀಯಾ? 459 00:36:35,791 --> 00:36:38,375 ಮನೆಗೆ, ಅದು ಇನ್ನೂ ಇರುವಾಗಲೇ. 460 00:36:38,958 --> 00:36:40,708 ಜಗತ್ತು ಬೆಂಕಿಯಲ್ಲಿ ಹೊತ್ತು ಉರಿವಾಗ, ಕಡೇ ಪಕ್ಷ 461 00:36:41,375 --> 00:36:43,125 ನಿನ್ನ ಕೈ ರಕ್ತಮಯವಲ್ಲ ಅಂತ ನಿನಗೆ ಗೊತ್ತಿರುತ್ತೆ. 462 00:36:53,000 --> 00:36:54,000 ಜೇನಿ, ಹೋಗೋಣ. 463 00:36:54,750 --> 00:36:56,375 ಇಲ್ಲ. ಬಾ. ಬಾ. 464 00:37:01,333 --> 00:37:04,625 ವ್ಯವಹಾರ ಸುದ್ದಿಗಳಲ್ಲಿ, ವೆಸ್ಟ್-ಟೆಕ್‌ರ ಇತ್ತೀಚಿನ ಜೈವಿಕ ಉತ್ಪನ್ನಗಳು 465 00:37:04,708 --> 00:37:08,500 ಚರ್ಮದ ಆರೈಕೆಯ ದಿಕ್ಕೇ ಬದಲಿಸಬಹುದು ಎಂಬ ವರದಿಗಳ ನಡುವೆ ಅವರ ಷೇರುಗಳು ಮೇಲೇರಿವೆ, 466 00:37:09,041 --> 00:37:11,291 ಮತ್ತು ರೊಬ್ ಕೋ ಮಾಲೀಕ ರಾಬರ್ಟ್ ಹೌಸ್ 467 00:37:11,375 --> 00:37:14,833 ತೀವ್ರಗೊಳ್ಳುತ್ತಿರುವ ಯುದ್ಧದ ಕುರಿತು ಅವರ ಇಂದಿನ ಟೀಕೆಗಳೊಂದಿಗೆ ಕೋಲಾಹಲವನ್ನು ಸೃಷ್ಟಿಸಿದ್ದಾರೆ. 468 00:37:14,916 --> 00:37:16,833 ಗ್ಯಾಲಕ್ಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು, 469 00:37:16,916 --> 00:37:20,791 ಪ್ರಶ್ನೆ ಜಗತ್ತು ಕೊನೆಗೊಳ್ಳುತ್ತದೆಯೇ ಎಂಬುದು ಅಲ್ಲ, 470 00:37:20,875 --> 00:37:23,416 ಯಾರ ಕೈಯಿಂದ ಎಂಬುದಷ್ಟೇ ಇರಬಹುದು ಎಂದು ಹೇಳಿದ್ದಾರೆ. 471 00:37:23,875 --> 00:37:27,000 ನಮ್ಮ ಪ್ರಾಯೋಜಕರ ಮಾತಿನ ನಂತರ ಆ ಕಥೆಯ ಕುರಿತು ಇನ್ನಷ್ಟು. 472 00:37:33,500 --> 00:37:35,750 ಆಹಾ ರುಚಿಕರ ಮೊಟ್ಟೆಗಳು! 473 00:38:01,541 --> 00:38:02,375 ಮನೆಗೆ ಸ್ವಾಗತ. 474 00:38:18,583 --> 00:38:20,750 ಹೂಂ, ನಿನ್ನ ಅಪ್ಪ ಇಲ್ಲಿಗೆ ಬಂದು ಹೋದಂತಿದೆ. 475 00:38:25,583 --> 00:38:27,458 ಇಂತಹ ವಾಲ್ಟ್ ಅನ್ನು ನಾನು ಹಿಂದೆಂದೂ ನೋಡಿಲ್ಲ. 476 00:38:31,500 --> 00:38:33,541 ನನ್ನ ಪ್ರಕಾರ ಇದೂ ಎಲ್ಲದರಂತೆಯೇ ಇದೆ. 477 00:38:35,208 --> 00:38:36,791 ನೀನು ಬಹಳಷ್ಟು ವಾಲ್ಟ್‌ಗಳಿಗೆ ಹೋಗಿದ್ದೀಯಾ? 478 00:38:42,791 --> 00:38:43,833 ನಿನಗೆ ಇಷ್ಟ ಆಗುತ್ತೇನೋ. 479 00:38:47,541 --> 00:38:51,708 ಪ್ರತಿ ಬಾರಿ ಈ ಕಾಂಕ್ರೀಟ್ ಚಿಕ್ಕ ಪೆಟ್ಟಿಗೆಗಳೊಳಗೆ ಹೆಜ್ಜೆ ಇಟ್ಟಾಗಲೂ, 480 00:38:53,166 --> 00:38:55,583 ನನ್ನ ಹೆಂಡತಿಗೂ ಮತ್ತು ನನ್ನ ಮಗಳಿಗೂ 481 00:38:55,666 --> 00:38:57,125 ಏನಾಯಿತು ಅಂತ ಕೊನೆಗೂ ತಿಳಿಯಬಹುದೇನೋ… 482 00:38:58,083 --> 00:38:59,458 ಅಂತ ಸಮಾಧಾನ ಮಾಡಿಕೊಳ್ಳುತ್ತೇನೆ. 483 00:39:01,333 --> 00:39:04,416 ಅವರು ಬದುಕಿದ್ದಾರೋ… ಸತ್ತಿದ್ದಾರೋ ಅಥವಾ… 484 00:39:06,166 --> 00:39:07,583 ಅದಕ್ಕಿಂತ ಕೆಟ್ಟದೇನಾದರೂ. 485 00:39:10,458 --> 00:39:11,291 ಹೂಂ. 486 00:39:13,083 --> 00:39:14,666 ನನಗೆ ಪ್ರಯೋಗಗಳ ಬಗ್ಗೆ ಗೊತ್ತು. 487 00:39:15,666 --> 00:39:16,916 ನಾನು ವಾಲ್ಟ್ ನಾಲ್ಕಕ್ಕೆ ಹೋಗಿದ್ದೆ. 488 00:39:18,250 --> 00:39:20,458 ಹೂಂ, ವಾಲ್ಟ್ ನಾಲ್ಕು ಎಷ್ಟೋ ಉತ್ತಮ. 489 00:39:21,750 --> 00:39:24,291 ನಿಜ ಹೇಳಬೇಕೆಂದರೆ, ನಾನು ಬಂದ ಸ್ಥಳಕ್ಕಿಂತ ಅದು ಸ್ವಲ್ಪ ವಿಚಿತ್ರವಾಗಿತ್ತು. 490 00:39:27,500 --> 00:39:28,583 ಹಾಗೋ? 491 00:39:29,541 --> 00:39:32,166 ವಾಲ್ಟ್ ನಾಲ್ಕರಲ್ಲಿ ಎಷ್ಟು ಪಟ್ಟಣಗಳನ್ನು ನಾಶಮಾಡಿದರು? 492 00:39:37,500 --> 00:39:38,333 ಅದನ್ನು ತಗೆ. 493 00:39:42,333 --> 00:39:44,958 ಪಿಪ್-ಬಾಯ್ ರಿಮೋಟ್ ಲಿಂಕ್ 494 00:39:54,708 --> 00:39:56,416 ನನ್ನಪ್ಪ ನಿಜವಾಗಿಯೂ ಅಲ್ಲಿದ್ದಾರೆ ಅಂತ ಅನಿಸುತ್ತಾ? 495 00:39:56,500 --> 00:39:57,958 ಅವನು ಒಳಬಂದ ಜಾಡು ಇದೆ. 496 00:39:59,458 --> 00:40:01,041 ಹೊರ ಹೋದ ಜಾಡೂ ಇದೆ. 497 00:40:07,541 --> 00:40:09,000 ಆದರೆ ನನಗೆ ಕುತೂಹಲ ಏನೆಂದರೆ… 498 00:40:10,750 --> 00:40:12,500 ಅವನು ಬಂದಿದ್ದಾದರೂ ಯಾಕೆ ಅಂತ. 499 00:40:21,541 --> 00:40:23,166 ಈಗ, ನಿನಗೂ ಸ್ವಲ್ಪ ಕುತೂಹಲ ಇದೆ ಅಲ್ವಾ? 500 00:40:48,375 --> 00:40:50,791 ನೀವು ವಾಲ್ಟ್‌ನಲ್ಲಿ ಹುಟ್ಟಿದ್ದು ನಿಮ್ಮ ತಪ್ಪಲ್ಲ. 501 00:40:51,708 --> 00:40:52,875 ಈಗ ಅದನ್ನೇ ನೀವು ಹೇಳಿ. 502 00:40:52,958 --> 00:40:56,000 ನಾನು ವಾಲ್ಟ್‌ನಲ್ಲಿ ಹುಟ್ಟಿದ್ದು ನನ್ನ ತಪ್ಪಲ್ಲ. 503 00:40:56,083 --> 00:40:58,958 ಮತ್ತು ನಿಮ್ಮ ಹೆತ್ತವರು ಸಂಬಂಧಿಕರಾಗಿದ್ದರು ಅಥವಾ ಆಗಿದ್ದಾರೆ ಎಂಬುದು ನಿಮ್ಮ ತಪ್ಪಲ್ಲ. 504 00:40:59,041 --> 00:41:00,916 -ನನ್ನ ಹೆತ್ತವರು ಸಂಬಂಧಿಕರಾಗಿದ್ದರು… -ಸಂಬಂಧಿಕರು 505 00:41:01,000 --> 00:41:03,541 -ಅಥವಾ ಆಗಿದ್ದಾರೆ ಅನ್ನೋದು ನನ್ನ ತಪ್ಪಲ್ಲ. -…ಅನ್ನೋದು ನನ್ನ ತಪ್ಪಲ್ಲ. 506 00:41:08,125 --> 00:41:10,000 ಜೋರಾಗಿ ಹೇಳಿದಾಗ ಸಮಾಧಾನ ಆಗುತ್ತೆ, ಅಲ್ವಾ? 507 00:41:11,916 --> 00:41:14,291 ಅದಿನ್ನೂ ಮೊದಲ ಹೆಜ್ಜೆ ಅಷ್ಟೇ. ನನ್ನನ್ನು ನಂಬಿ. 508 00:41:15,041 --> 00:41:17,166 ಇದನ್ನು ಮೀರಿ ಹೊರಬಂದವನು ನಾನು, 509 00:41:17,250 --> 00:41:20,250 ನಿಮ್ಮ ಕುಟುಂಬ ವೃಕ್ಷವನ್ನಾಧರಿಸಿ ಜನರು ನಿಮ್ಮನ್ನು ಕೀಳಾಗಿ ನೋಡುತ್ತಿದ್ದಾರಾ ಅನ್ನೋ 510 00:41:20,333 --> 00:41:22,083 ಪ್ರಶ್ನೆ ಮೂಡಿದಾಗ ಹೇಗಿರುತ್ತೆ ಅಂತ ಗೊತ್ತು. 511 00:41:22,166 --> 00:41:24,375 ಸಾಮಾನ್ಯ ವ್ಯಕ್ತಿಗೆ ಕಾಲ್ಬೆರಳ ಉಗುರು ಒಳಗೆ ಬೆಳೆಯಬಹುದು 512 00:41:24,458 --> 00:41:27,000 ಆದರೆ ಆಗ ಅದು ಕೇವಲ ಒಳಗೆ ಬೆಳೆದ ಕಾಲ್ಬೆರಳ ಉಗುರು. 513 00:41:27,666 --> 00:41:28,583 ಆದರೆ ನಾವು… 514 00:41:30,750 --> 00:41:34,208 ಇದು ಹಾಳಾದ ಅನುವಂಶೀಯತೆಯಿಂದಲೇ ಅಂತ ಪ್ರಶ್ನಿಸಿಕೊಳ್ಳಬೇಕು. 515 00:41:35,416 --> 00:41:37,333 ನಾನು ಹಾಳು ಎಂಬಂತೆ. 516 00:41:39,333 --> 00:41:42,958 ಹಾಗಾಗಿ ನಾವು ನಿಯಮಗಳನ್ನು ಬದಲಾಯಿಸಲಿದ್ದೇವೆ, ಅಲ್ವಾ? 517 00:41:45,375 --> 00:41:48,291 ವಾಲ್ಟ್‌ನಲ್ಲಿ ಅಂತಃಜಾತಿ ಸಂತಾನೋತ್ಪತ್ತಿ ಇಲ್ಲ. ಆದರೆ ನಾವದನ್ನು ಬದಲಾಯಿಸಲಿದ್ದೇವಲ್ವಾ? 518 00:41:49,375 --> 00:41:52,250 ಇಲ್ಲ, ಇದು ಅದರ ಬಗ್ಗೆ ಅಲ್ಲ. 519 00:41:52,333 --> 00:41:56,041 ನಿಯಮಗಳು ಒಳ್ಳೆಯವೇ, ಆದರೆ ಅದರರ್ಥ ನಾವು ಅಂತಃಜಾತಿಯ ಮಕ್ಕಳು ಎಂಬ ಮಾತ್ರಕ್ಕೆ 520 00:41:56,125 --> 00:41:58,416 ನಾವು ಕೆಟ್ಟದಾಗಿ ಭಾವಿಸಬೇಕಿಲ್ಲ ಅಂತ. ಅರ್ಥ ಆಯಿತಾ? 521 00:42:00,166 --> 00:42:01,166 ನಡಿ. 522 00:42:09,291 --> 00:42:11,291 -ನನಗೆ ಒಂದು ಪ್ರಶ್ನೆ ಇದೆ. -ಹೂಂ, ಮೆರಿಯನ್. 523 00:42:11,375 --> 00:42:13,291 ನನಗೆ ಧೂಳಿನಿಂದ ಸ್ವಲ್ಪ ಅಲರ್ಜಿ ಇದೆ. 524 00:42:14,166 --> 00:42:17,500 ಮತ್ತು ಕೆಲವೊಮ್ಮೆ ಇದು ನನ್ನ ತಂದೆಯ ತಪ್ಪಾ ಅಂತ ನನ್ನಲ್ಲಿ ಪ್ರಶ್ನೆ ಮೂಡುತ್ತೆ, 525 00:42:17,583 --> 00:42:21,291 ಯಾಕೆಂದರೆ ಅವರು ತಮ್ಮ ಸೋದರಸಂಬಂಧಿ ಅಂದರೆ ನನ್ನ ತಾಯಿಯನ್ನು ಪ್ರೀತಿಸುತ್ತಿದ್ದರು. 526 00:42:21,375 --> 00:42:24,708 ಇದಕ್ಕೆಲ್ಲಾ ಜೈವಿಕ ಸಂಬಂಧವಿದೆಯಾ ಅನ್ನೋದೇ ನನ್ನ ಪ್ರಶ್ನೆ. 527 00:42:26,416 --> 00:42:29,125 ನಾನು ತಳಿಶಾಸ್ತ್ರದ ಅಧ್ಯಯನ ಮಾಡಿಲ್ಲ, ಹಾಗಾಗಿ… 528 00:42:29,916 --> 00:42:32,666 -ಹೂಂ, ಸರಿ. -ಖಂಡಿತ ಅದು ಅವರ ತಪ್ಪಾಗಿರಬಹುದು. 529 00:42:33,333 --> 00:42:34,166 ನನಗೆ ಗೊತ್ತಿತ್ತು! 530 00:42:34,708 --> 00:42:36,416 ಒಳ್ಳೆ ತಿಂಡಿ, ಅಂದಹಾಗೆ. 531 00:42:38,333 --> 00:42:40,625 ನನಗನಿಸುತ್ತಿತ್ತು, ನನ್ನಮ್ಮ ನನ್ನನ್ನು ವೈರಿಯಂತೆ ನೋಡುತ್ತಾಳೆ ಅಂತ, 532 00:42:40,708 --> 00:42:43,250 ಅವಳ ತಾಯಿ ಜೊತೆ ಅವಳು ಹಾಗೇ ಇದ್ದದ್ದು, 533 00:42:43,333 --> 00:42:46,041 ಅವಳಿಗೂ ನನ್ನ ತಂದೆಯ ಮೇಲೆ ಪ್ರೀತಿ ಇತ್ತು, ಇವನೂ ಅವಳ ಐದನೇ ಸೋದರಸಂಬಂಧಿ. 534 00:42:46,125 --> 00:42:48,916 ಎಲ್ಲಾ ಐದನೇ ಸೋದರಸಂಬಂಧಿಗಳು ಎರಡನೇ ಸೋದರಸಂಬಂಧಿಗಳಿಗೆ ನಾಲ್ಕನೇ ಸೋದರಸಂಬಂಧಿಗಳು. 535 00:42:49,458 --> 00:42:51,000 ಅಂದರೆ, ಇದು ನಿಜಕ್ಕೂ… 536 00:42:53,333 --> 00:42:54,333 ಭವಿಷ್ಯಕ್ಕೆ ಸ್ವಾಗತ! 537 00:42:54,416 --> 00:42:56,041 ಪ್ರಿ-ಇಂಟರ್ವಾಲ್ಟ್-ಟ್ರೇಡ್ ತಿಂಡಿ & ತಯಾರಿ ಕಿಟ್ 538 00:42:59,958 --> 00:43:01,541 ಇನ್ನು ಹೆಚ್ಚು ಸಮಯ ಹಿಡಿಯಲ್ಲ. 539 00:43:04,166 --> 00:43:07,833 ನಿನಗೆ ತುಂಬಾ ಹಸಿವು ಮತ್ತು ಬಾಯಾರಿಕೆಯಾಗಿರಬೇಕು. 540 00:43:08,666 --> 00:43:11,833 ಅಷ್ಟು ಒಳ್ಳೆಯ ಕ್ರಯೋ ಪಾಡ್ ನೀನು ಬರುವೆ ಅಂತ ಕಾಯುತ್ತಿರುವಾಗ 541 00:43:11,916 --> 00:43:13,833 ಯಾಕೆ ಹಿಂಸೆ ಪಡುತ್ತಿರುವೆ? 542 00:43:15,041 --> 00:43:16,250 ನನ್ನ ತಂದೆ ಎಂತಹವರಾಗಿದ್ದರು? 543 00:43:18,375 --> 00:43:19,583 ಮಹತ್ವಾಕಾಂಕ್ಷಿ. 544 00:43:21,416 --> 00:43:22,791 ಹಾಗಾದರೆ ಅವರಿಲ್ಲಿ ಯಾಕೆ ಇದ್ದರು? 545 00:43:23,041 --> 00:43:24,833 ಹೂಂ, ಆ ದಿನಗಳಲ್ಲಿ 546 00:43:24,916 --> 00:43:27,291 ಬಡ್'ಸ್ ಬಡ್ಸ್ ಆಗಿರೋದು ಅತ್ಯಂತ ಉನ್ನತ ಸ್ಥಾನವಾಗಿತ್ತು. 547 00:43:27,750 --> 00:43:29,791 ಫ್ರೆಸ್ನೋದಷ್ಟು ದೂರದಿಂದ ಅರ್ಜಿ ಸಲ್ಲಿಸಲು ಜನ ಬರುತ್ತಿದ್ದರು. 548 00:43:31,083 --> 00:43:33,958 ಅದನ್ನು ತಿನ್ನುವುದು ಒಳ್ಳೆಯ ಉಪಾಯ ಅನಿಸಬಹುದು, ಆದರೆ ಅದು ವಿಷಕಾರಿ. 549 00:43:34,041 --> 00:43:36,333 ನಿಧಾನವಾಗಿ, ನರಳುತ್ತಾ ಸಾಯವೆ. 550 00:43:37,041 --> 00:43:38,583 ನಿನಗೆ ಕ್ರಯೋಗೆ ಹೋಗಲು ಇಷ್ಟವಿಲ್ಲದಿದ್ದರೆ, 551 00:43:38,666 --> 00:43:41,083 ಇದನ್ನು ನಿನಗೆ ಚುಚ್ಚಲು ನನಗೆ ಅನುಮತಿ ಕೊಡು. 552 00:43:41,666 --> 00:43:45,208 ನಿಜಕ್ಕೂ ನಮ್ಮಿಬ್ಬರಿಗೂ ತುಂಬಾ ಸುಲಭವಾಗುತ್ತೆ. 553 00:43:46,500 --> 00:43:47,500 ಅದು ಏನು ಮಾಡುತ್ತೆ? 554 00:43:47,583 --> 00:43:50,458 ನಿನ್ನನ್ನು ಕೊಲ್ಲುತ್ತೆ. ಬೇಗ, ನೋವಿಲ್ಲದೆ. 555 00:43:50,833 --> 00:43:53,875 ನಿನ್ನ ದೇಹ ಬೇಗನೆ ಕೊಳೆಯುತ್ತೆ, ಮಣ್ಣಾಗಿ ಹೋಗುತ್ತೆ, 556 00:43:53,958 --> 00:43:56,250 ಮತ್ತು ವಾತಾಯನ ವ್ಯವಸ್ಥೆಯ ಮೂಲಕ ಸಾಗಿ, 557 00:43:56,333 --> 00:43:59,166 ಕೊನೆಗೆ ನಿನ್ನ ಮನೆಯ ಜೋಳದ ಹೊಲಗಳಿಗೆ ಸೇರಿ ಹೋಗುತ್ತೆ. 558 00:43:59,250 --> 00:44:01,208 ಯೋಚಿಸಿ ನೋಡಿದರೆ, ಅಷ್ಟು ಕೆಟ್ಟದ್ದಲ್ಲ. 559 00:44:01,291 --> 00:44:05,458 ಆಗ ನೀನು ಜೀವನದ ಎಲ್ಲಾ ತಲೆನೋವುಗಳನ್ನು ಎದುರಿಸಬೇಕಾಗಿರಲ್ಲ. 560 00:44:06,458 --> 00:44:09,416 ಹಾಗಾಗಿ ನಿನ್ನ ಬಳಿ ಎರಡು ತರ್ಕಬದ್ಧ ಆಯ್ಕೆಗಳಿವೆ. 561 00:44:10,000 --> 00:44:13,083 ನಿನ್ನ ತಂದೆಯ ಪಾಡ್‌ಗೆ ಹೋಗು… ಅಥವಾ ಸಾಯಿ. 562 00:44:14,708 --> 00:44:17,166 ನೀನು ಹೇಳಿದ್ದು ಸರಿ. ನನ್ನ ಬಳಿ ಎರಡು ತರ್ಕಬದ್ಧ ಆಯ್ಕೆಗಳಿವೆ. 563 00:44:22,083 --> 00:44:23,916 ಆದರೆ ಬೇಕಾದಷ್ಟು ತರ್ಕರಹಿತ ಆಯ್ಕೆಗಳಿವೆ. 564 00:44:25,708 --> 00:44:26,708 ಏನು ಮಾಡುತ್ತಿದ್ದೀಯಾ? 565 00:44:27,833 --> 00:44:30,791 ಎಲ್ಲವೂ ಸರಿಯಾಗಿ ನಡೆಯಲು ಇನ್ನೂರು ವರ್ಷಗಳ ಯೋಜನೆ. 566 00:44:30,875 --> 00:44:33,208 ನನ್ನನ್ನು ಕೇಳಿದರೆ, ಅದು ಅತಿಯಾದ ಕೆಲಸ ಅಂತ ಅನಿಸುತ್ತೆ. 567 00:44:33,291 --> 00:44:35,083 ಅಲ್ಲೇ ನಿಲ್ಲು. ಅಲ್ಲೇ ನಿಲ್ಲು. 568 00:44:36,375 --> 00:44:38,791 ನನ್ನ ಪ್ರಕಾರ ಯೋಜನೆಗಳಿಗೆ ನಾವು ಸ್ವಲ್ಪ ಹೆಚ್ಚೇ ಮಹತ್ವ ಕೊಡುತ್ತೇವೆ. 569 00:44:40,416 --> 00:44:41,708 ಇಲ್ಲ, ಇಲ್ಲ, ಇಲ್ಲ, ಇರು. 570 00:44:41,791 --> 00:44:43,875 ನಿನ್ನನ್ನು ಬೆದರಿಸಲು ನನಗದು ಬೇಕು. ಏನು ಮಾಡುತ್ತಿದ್ದೀಯಾ? 571 00:44:44,583 --> 00:44:46,291 -ಎಲ್ಲರನ್ನೂ ಕರಗಿಸುತ್ತಿರುವೆ. -ಏನು? 572 00:44:46,375 --> 00:44:48,708 ಇಲ್ಲ, ಹಾಗೆ ಎಲ್ಲರನ್ನೂ ಕರಗಿಸಕೂಡದು. 573 00:44:51,958 --> 00:44:55,166 ಇಲ್ಲ, ಇಲ್ಲ, ಇಲ್ಲ. ಅವರು ಪ್ರತಿ 30 ವರ್ಷಗಳಿಗೊಮ್ಮೆ ಹೊರಬರಬೇಕು. 574 00:44:55,250 --> 00:44:57,666 ಇದು ಒಂದು ದೃಢವಾದ ಯೋಜನೆಯೂ ಅಲ್ಲ. ಇದು ಅವ್ಯವಸ್ಥೆ. 575 00:44:57,750 --> 00:44:59,583 ನಿಜ. ಯೋಜನೆಗಳು ಕಠಿಣ. 576 00:45:00,708 --> 00:45:01,666 ಆದರೆ ಅವ್ಯವಸ್ಥೆ… 577 00:45:02,708 --> 00:45:03,708 ಅವ್ಯವಸ್ಥೆ ಸುಲಭ. 578 00:45:45,541 --> 00:45:47,583 ಜಾಕೆಟ್ ಚೆನ್ನಾಗಿ ಹೊಂದುತ್ತಿಲ್ಲ. 579 00:45:53,916 --> 00:45:56,625 ವಾಲ್ಟ್-ಟೆಕ್ ತಮ್ಮ ವಾಲ್ಟ್‌‌ನಲ್ಲಿ ಸಮತಾವಾದಿಗಳನ್ನು ಯಾಕೆ ಅನುಮತಿಸಿದರು? 580 00:45:58,083 --> 00:45:59,750 ಅವರು ಹಾಗೆ ಮಾಡಿದರು ಅಂತ ನನಗೆ ಖಚಿತವಿಲ್ಲ. 581 00:46:13,541 --> 00:46:17,500 ಮಾನವಕುಲ ಮಾನವನಿಗಿಂತ ಹೆಚ್ಚು ಮುಖ್ಯ. 582 00:46:24,125 --> 00:46:27,333 ಈ ಇಬ್ಬರು ಸಹಯೋಗಿಗಳಾಗಿದ್ದು ವೈಯಕ್ತಿಕ ಸಹಕಾರದ ಮೂಲಕ. 583 00:46:34,291 --> 00:46:37,250 ನಮ್ಮ ಶತ್ರು ಸಾವಿನ ಅಪಾಯದ ಉತ್ಪನ್ನ ಆಯ್ಕೆ ಮಾಡಿದ್ದಾನೆ 584 00:46:37,333 --> 00:46:39,208 ಜನರ ಆಸಕ್ತಿಯ ಮೂಲಕ… 585 00:46:39,958 --> 00:46:43,083 ನಮಗೆ ಉತ್ಪನ್ನಕ್ಕಿಂತ ಮಾನವ ಮುಖ್ಯ. 586 00:46:53,666 --> 00:46:54,916 ಇವರು ಅಮೆರಿಕನ್ನರು. 587 00:46:56,625 --> 00:46:58,708 ವಾಲ್ಟ್ ಇವರನ್ನು ಸಮತಾವಾದಿಯರನ್ನಾಗಿ ಮಾಡಿತು. 588 00:47:10,208 --> 00:47:14,125 ಕ್ರಾಂತಿಗಾಗಿ ಸಾವು ನಿಷ್ಪ್ರಯೋಜಕವಲ್ಲ. 589 00:47:21,083 --> 00:47:22,500 ರೊಬ್ ಕೋ ಇಂಡಸ್ಟ್ರೀಸ್ ಆಪರೇಟಿಂಗ್ ಸಿಸ್ಟಂ 590 00:47:26,958 --> 00:47:30,833 ಮಾನವಕುಲ ಮಾನವನಿಗಿಂತ ಹೆಚ್ಚು ಮುಖ್ಯ. 591 00:47:33,708 --> 00:47:36,375 ಡೇಟಾ ಲಭ್ಯವಿಲ್ಲ. ಟರ್ಮಿನಲ್ ಲಾಕ್ ಆಗಿದೆ ಡಿವಿ-ಆರ್ಕ್ ಡ್ರೈವ್ ತೆಗೆದುಹಾಕಲಾಗಿದೆ 592 00:47:38,083 --> 00:47:39,625 ನನ್ನ ಅಪ್ಪ ಡ್ರೈವ್ ತೆಗೆದರು. 593 00:48:13,250 --> 00:48:14,875 ಶುಗರ್ ಬಾಂಬ್ಸ್ ಉಪಾಹಾರ ಧಾನ್ಯಗಳು 594 00:48:41,166 --> 00:48:42,625 ಓ, ಹಲೋ, ಶುಗರ್ ಬಾಂಬ್. 595 00:48:47,541 --> 00:48:50,208 ನಿನ್ನ ಅಪ್ಪ ಪ್ರಯೋಗಕ್ಕಾಗಿ ಇವನನ್ನು ಎತ್ತಿಕೊಂಡ ಅನಿಸುತ್ತೆ. 596 00:48:55,666 --> 00:48:56,958 ನಿನಗೇನು ಬೇಕು? 597 00:48:59,000 --> 00:49:03,833 ನಾನು… ಎಲ್ಲವನ್ನೂ… ಸರಿಪಡಿಸುತ್ತೇನೆ. 598 00:49:04,958 --> 00:49:07,291 ಮನೆಗೆ ಹೋಗು… 599 00:49:08,583 --> 00:49:09,875 ಶುಗರ್ ಬಾಂಬ್. 600 00:49:11,166 --> 00:49:12,333 ಮನೆಗೆ ಹೋಗು. 601 00:49:14,375 --> 00:49:15,250 ಮನೆಗೆ ಹೋಗು! 602 00:49:17,875 --> 00:49:19,000 ಮನೆಗೆ… 603 00:49:50,958 --> 00:49:53,541 ನಿನ್ನ ಅಪ್ಪ ಮುಂಚೆ ಇವುಗಳನ್ನು ಬಳಸೋದನ್ನ ಎಂದಾದರೂ ನೋಡಿದ್ದೀಯಾ? 604 00:49:55,291 --> 00:49:56,166 ಇಲ್ಲ. 605 00:49:58,708 --> 00:50:00,166 ಅವನ ಸಲಹೆಯನ್ನು ಕೇಳಲಿರುವೆಯಾ? 606 00:50:04,000 --> 00:50:05,500 ಅವರು ಜನರನ್ನು ನೋಯಿಸೋದನ್ನ ನಿಲ್ಲಿಸಲ್ಲ. 607 00:50:06,916 --> 00:50:08,208 ಹೂಂ, ಅದು ನಿಜವೇ. 608 00:50:12,458 --> 00:50:14,041 ಸರಿ, ಹಾಗಾದರೆ ನಾವು ಹೊರಡೋದು ಒಳ್ಳೆಯದು. 609 00:50:45,125 --> 00:50:51,875 ವಾಲ್ಟ್-ಟೆಕ್ 610 00:51:08,958 --> 00:51:15,583 ವಾಲ್ಟ್-ಟೆಕ್ ಕಾರ್ಪೊರೇಷನ್ 611 00:51:40,750 --> 00:51:41,750 ನೀವು… 612 00:51:42,791 --> 00:51:47,833 ನಾಲ್ಕು ಲಕ್ಷ ಅರವತ್ತೆರಡು ಸಾವಿರ, ಮುನ್ನೂರ ಹನ್ನೊಂದು ಓದದ ಸಂದೇಶಗಳನ್ನು ಹೊಂದಿದ್ದೀರಿ. 613 00:51:49,333 --> 00:51:50,583 ಶುರು ಮಾಡೋಣ. 614 00:52:50,500 --> 00:52:55,416 ಜಾಗತಿಕ ಸಂವಹನಗಳು 615 00:53:20,375 --> 00:53:23,500 ನಾನು ಹ್ಯಾಂಕ್ ಮ್ಯಾಕ್ಲೀನ್ ಕರ್ತವ್ಯಕ್ಕೆ ವರದಿ ಮಾಡುತ್ತಿದ್ದೇನೆ, ಸರ್. 616 00:53:26,375 --> 00:53:28,708 ವಾಲ್ಟ್-ಟೆಕ್‌ನಲ್ಲಿ ಯಾರಿಗೂ ನಾನು ಇಲ್ಲಿರುವುದು ತಿಳಿದಿಲ್ಲ. 617 00:53:31,333 --> 00:53:34,041 ಮತ್ತು ವಾಲ್ಟ್-ಟೆಕ್‌ನಲ್ಲಿರುವ ಯಾರಿಗೂ ಈಗ ಏನೂ ತಿಳಿದಿಲ್ಲ. 618 00:53:37,166 --> 00:53:38,833 ನಾನಿನ್ನೂ ಜೀವಂತವಾಗಿರೋದು ನಿಮಗೆ ತಿಳಿಸಬೇಕಿತ್ತು. 619 00:53:40,916 --> 00:53:41,916 ನೀವೂ ಇದ್ದೀರಿ ಅಂದುಕೊಳ್ಳುವೆ. 620 00:53:42,791 --> 00:53:46,041 ಅದರ ಬಗ್ಗೆ ಸಂಶಯ ಏನಿಲ್ಲ. 621 00:53:46,125 --> 00:53:51,791 ಎಲ್ಲಾ ಸಂಭಾವ್ಯ ಆಕಸ್ಮಿಕಗಳ ಮೂಲಕ ಹೇಗೆ ಬದುಕೋದು ಅಂತ ಲೆಕ್ಕ ಹಾಕುತ್ತಾ ತುಂಬಾ ಸಮಯ ಕಳೆದಿದ್ದೀರಿ. 622 00:53:56,041 --> 00:53:57,208 ನಾನು ಕಾರ್ಯನಿರತವಾಗಿದ್ದೆ. 623 00:53:57,791 --> 00:53:59,791 ಈ ದಿನಗಳಲ್ಲಿ ನಾನು ವೇಗಸ್‌ನಲ್ಲಿದ್ದೇನೆ, 624 00:53:59,875 --> 00:54:02,125 ಅಸಲಿಗೆ ನಿಮ್ಮ ಹಳೆಯ ಮೈದಾನದಲ್ಲಿ. 625 00:54:03,125 --> 00:54:05,416 ನೀವೆಲ್ಲರೂ ನಿಲ್ಲಿಸಿದ್ದಲ್ಲಿಂದ ಮುಂದುವರಿಸಲು ನೋಡುತ್ತಿದ್ದೇನೆ. 626 00:54:08,083 --> 00:54:10,208 ಒಂದೆರಡು ವಾಲ್ಟ್ ಪ್ರಯೋಗಗಳು 627 00:54:10,291 --> 00:54:11,708 ಅಡೆತಡೆ ಕಂಡಂತೆ ಕಾಣುತ್ತಿವೆ. 628 00:54:13,666 --> 00:54:17,125 ಮೆದುಳಿನ ಕಂಪ್ಯೂಟರ್ ಇಂಟರ್ಫೇಸ್‌ನಲ್ಲಿ ಇಪ್ಪತ್ತನಾಲ್ಕು ಪ್ರಗತಿ ಸಾಧಿಸಿದೆ. 629 00:54:20,083 --> 00:54:22,875 ಇದು, ಚಿಕ್ಕದಾಗಿಸುವಿಕೆ. 630 00:54:26,333 --> 00:54:28,166 ಇದಕ್ಕೆ ಬೇಕಾಗಿರುವುದು ಸಂಯೋಜನೆ, ಅಷ್ಟೇ, 631 00:54:29,291 --> 00:54:31,666 ಮತ್ತು ನನಗೆ ವಿಶ್ವಾಸವಿದೆ ನಾನು ಪರಿಶ್ರಮ ಹಾಕಿದರೆ, 632 00:54:31,750 --> 00:54:33,125 ಇದನ್ನೆಲ್ಲಾ ನಿಮ್ಮ ಬಳಿ ತರಬಲ್ಲೆ. 633 00:54:35,250 --> 00:54:38,166 ನಂತರ ನಾವು ಕೊನೆಗೆ ನನ್ನ ಬಡ್ತಿಯ ಬಗ್ಗೆ ಮಾತಾಡಬಹುದು. 634 00:54:44,291 --> 00:54:46,375 ನೀವು ಪ್ರಾರಂಭಿಸಿದ ಕೆಲಸವನ್ನು ನಾನು ಪೂರ್ಣಗೊಳಿಸುತ್ತೇನೆ. 635 00:54:47,500 --> 00:54:51,208 ಮತ್ತು ಇದೆಲ್ಲಾ ಮುಗಿದಾಗ, ನೀವು ಸಹಾಯಕ್ಕಾಗಿ ನನ್ನನ್ನು ಬೇಡಿಕೊಳ್ಳುತ್ತೀರಿ. 636 00:55:16,625 --> 00:55:19,000 ಬೇಸ್ಡ್ ಆನ್ ದ ವಿಡಿಯೋ ಗೇಮ್ ಸೀರಿಸ್ ಫಾಲೌಟ್ 637 00:56:18,125 --> 00:56:22,041 ಫಾಲ್ ಔಟ್ ಈ ಸೀಸನ್‌ನಲ್ಲಿ 638 00:56:22,833 --> 00:56:23,833 ಒಟ್ಟಿಗೆ, 639 00:56:25,375 --> 00:56:26,916 ನಾವು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. 640 00:56:30,375 --> 00:56:33,291 ಈ… ಪತನಗೊಂಡ ಜಗತ್ತನ್ನು ಉತ್ತಮಗೊಳಿಸುತ್ತೇವೆ. 641 00:56:35,625 --> 00:56:37,125 ಅಡಚಣೆಗಾಗಿ ಕ್ಷಮಿಸಿ. 642 00:56:39,208 --> 00:56:41,666 ನಾವು ಅಂತರ್ಯುದ್ಧದ ಬಗ್ಗೆ ಚರ್ಚಿಸುತ್ತಿದ್ದೇವೆಂದು ತಿಳಿದು ಬಂದಿತು. 643 00:56:46,250 --> 00:56:47,833 ಕಾಮನ್ವೆಲ್ತ್ ನಮ್ಮೆಲ್ಲರನ್ನೂ ಕೊಲ್ಲಲಿದೆ. 644 00:56:47,916 --> 00:56:49,000 ನಾನು ಅದನ್ನು ತಡೆಯಬಲ್ಲೆ. 645 00:56:50,708 --> 00:56:51,791 ನಾವು ಯಾವಾಗಲೂ ಏನು ಹೇಳೋದು? 646 00:56:51,875 --> 00:56:54,916 -"ಹೆಚ್ಚಿನ ಮಕ್ಕಳು ಈ ವಯಸ್ಸಲ್ಲಿ… -…ಈ ವಯಸ್ಸಲ್ಲಿ ಸತ್ತಿರುತ್ತಾರೆ!" 647 00:56:57,916 --> 00:56:59,583 ನಾನು ಯಾರಿಗಾಗಿಯೋ ಹುಡುಕುತ್ತಿದ್ದೇನೆ. 648 00:56:59,666 --> 00:57:01,583 ಅವನು ಸಿಕ್ಕಿದರೆ ಅವನಿಗೆ ಏನು ಮಾಡುವೆ? 649 00:57:01,666 --> 00:57:03,500 ಏನು ಹೇಳುವೆ, ಮಿಸ್ ಮ್ಯಾಕ್ಲೀನ್? 650 00:57:05,541 --> 00:57:08,000 ನಿನ್ನ ಕುಟುಂಬ ಇನ್ನೂ ಅಲ್ಲಿ ಇರಬಹುದು. 651 00:57:08,541 --> 00:57:11,958 ಆದರೆ ನೀನು ಎಂತಹ ವ್ಯಕ್ತಿ ಆಗಿಹೋಗಿದ್ದೀಯ ಎಂಬುದನ್ನು ಅವರು ಖಂಡಿತ ಸಹಿಸಲ್ಲ. 652 00:57:14,416 --> 00:57:16,041 ಸಮ್ಮೇಳನ ಕೊಠಡಿ 653 00:57:18,958 --> 00:57:21,541 ನನಗಿಂತ ಕೆಟ್ಟ ಜನ ಅಲ್ಲಿ ಹೊರಗಿದ್ದಾರೆ, ಕೂಪ್. 654 00:57:23,958 --> 00:57:26,000 ಆದರೆ ವೇಗಸ್‌ನಲ್ಲಿ ಏನು ಹೇಳುತ್ತಾರೆ ಗೊತ್ತಲ್ಲಾ, 655 00:57:26,958 --> 00:57:29,958 ಅಂತಿಮವಾಗಿ ಎಲ್ಲರೂ ವಿಜೇತರೇ. 656 00:57:30,625 --> 00:57:33,125 ನನ್ನ ಅನುಭವದಲ್ಲಿ ಸೋಲೂ ಹಾಗೇ. 657 00:57:33,583 --> 00:57:35,000 ಒಬ್ಬ ಮನುಷ್ಯನನ್ನು ಬಿಟ್ಟು. 658 00:57:39,208 --> 00:57:40,458 ಮಿ.ಹಾವರ್ಡ್, 659 00:57:41,708 --> 00:57:44,750 ನೀವು ನನ್ನನ್ನು ಕೊಲ್ಲಲು ವೇಗಸ್‌ಗೆ ಬಂದಿರುವಿರಿ ಅಂತ ನನಗೆ ಗೊತ್ತು. 660 00:57:47,166 --> 00:57:48,291 ನಿಜ ತಾನೇ? 661 00:57:50,791 --> 00:57:54,000 ಮತ್ತು ಜಗತ್ತಿನ ಅಂತ್ಯದಲ್ಲಿ ನಿಮ್ಮ ಪಾತ್ರ ಏನು ಅಂತ ನನಗೆ ಇನ್ನೂ ತಿಳಿದಿಲ್ಲ, 662 00:57:54,083 --> 00:57:55,666 ಆದರೆ ಖಂಡಿತ ಏನೋ ಇದೆ. 663 00:57:59,750 --> 00:58:01,083 ನೀನು ನಮಗೆ ಸಹಾಯ ಮಾಡದಿದ್ದರೆ, 664 00:58:01,166 --> 00:58:04,208 ಇನ್ನು ಮುಂದೆ ವಾಲ್ಟ್ 33 ಇರಲ್ಲ. 665 00:58:05,000 --> 00:58:06,208 ಅಪ್ಪ, ನನ್ನ ಮಾತು ಕೇಳುತ್ತಿದ್ದರೆ… 666 00:58:07,000 --> 00:58:08,291 ನಮ್ಮ ವಾಲ್ಟ್‌ಗೆ ಏನಾಗಲಿದೆ? 667 00:58:22,125 --> 00:58:24,375 ಅನುಸರಣೆ 668 00:58:27,000 --> 00:58:28,375 ನನ್ನ ಮುದ್ದು ಕಂದ. 669 00:59:55,291 --> 00:59:57,291 ಉಪ ಶೀರ್ಷಿಕೆ ಅನುವಾದ: ಅನುರಾಧ 670 00:59:57,375 --> 00:59:59,375 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ