1 00:00:11,541 --> 00:00:15,666 ಕಾಲ ಮತ್ತು ಸ್ಥಳದ ಸಂಯೋಜನೆ ದ್ರವದಂತೆ ಎಂಬ ಸಿದ್ಧಾಂತವಿದೆ. 2 00:00:15,666 --> 00:00:19,375 ಕಾಲ. ಈ ನೆಲದ ಅಡಿ ಅದೇ ಹರಿಯುತ್ತಿದೆ ಎಂದು ನನ್ನ ನಂಬಿಕೆ. 3 00:00:20,708 --> 00:00:23,791 ನಾನು ಚಿಕ್ಕವನಿದ್ದಾಗ ಯಾಕೆ ಓಡಿಹೋಗಿದ್ದೆ ಅಂತ ನಿನಗೆ ಹೇಳಿಲ್ಲ. 4 00:00:23,791 --> 00:00:26,750 ಅಪ್ಪ, ನಾನು ಬೇಟೆಗೆ ಹೋಗಿದ್ವಿ. ಅದು ಆಕಸ್ಮಿಕವಾಗಿತ್ತು. 5 00:00:26,750 --> 00:00:29,750 - ಮತ್ತು ಅದು ಯಾವಾಗ? - 1886. 6 00:00:29,750 --> 00:00:33,166 ಜಾಯ್ ಸ್ಪಂದಿಸದಿರುವುದರಿಂದ ನಾನಲ್ಲಿಗೆ ಹೋಗಬೇಕಿದೆ, ಸೆಸಿಲಿಯಾ. 7 00:00:33,291 --> 00:00:36,541 - ಆಕೆ ಎಲ್ಲಿ? - ಆಕೆ ಕರೆಗಳನ್ನು ಉತ್ತರಿಸುತ್ತಿಲ್ಲ. 8 00:00:36,666 --> 00:00:38,458 ರೋವರ್ ಇಂದಲೂ ಉತ್ತರವಿಲ್ಲ. 9 00:00:38,458 --> 00:00:40,000 ನಿಲ್ಲಿ! 10 00:00:41,208 --> 00:00:42,625 ಶೊಶೋನಿ. 11 00:00:42,625 --> 00:00:44,125 ನಾನು ಮಿತ್ರೆ. 12 00:00:45,041 --> 00:00:47,250 ನಾನು ಮನೆಗೆ ಹೋಗಲ್ಲ, ಅಲ್ವಾ? 13 00:00:47,250 --> 00:00:49,458 ಈಗ ಇದು ನಿನ್ನ ಮನೆಯಲ್ಲದಿರಬಹುದು. ಆದರೆ... 14 00:00:49,458 --> 00:00:51,500 ಇರೋಕೆ ಇದು ಒಳ್ಳೆ ಜಾಗ. 15 00:00:52,625 --> 00:00:55,583 ಅಮ್ಮ, ನೋಡು. ಇದು ಅಮ್ಮ ಜಾಯ್. ನೋಡು! 16 00:01:07,625 --> 00:01:09,708 ರಾಯಲ್, ಗಲ್ಲ ಮೇಲೆತ್ತು! 17 00:01:11,416 --> 00:01:13,708 ಯಾರ ಕಣ್ಣಲ್ಲೂ ಕಣ್ಣಿಟ್ಟು ನೋಡಲು ನಾಚಿಕೆಪಡಬೇಡ. 18 00:01:15,166 --> 00:01:17,375 ಈ ಜನರಿಗೆ ಅನುಕೂಲ ಹೆಚ್ಚಿದೆ, 19 00:01:17,375 --> 00:01:19,458 ಆದರೂ ನಾವೆಲ್ಲಾ ಒಂದೇ ದೇವರ ಮಕ್ಕಳು. 20 00:01:20,416 --> 00:01:23,625 ಮತ್ತೆ ಇಂಜನ್ಸು? ಅವರಿಗೆ ದೇವರಿಲ್ಲ ಅಂತ ಹೇಳಿದ್ರಿ. 21 00:01:23,625 --> 00:01:27,500 ರಾಯಲ್ ಸಮ್ನರ್, ಒಬ್ಬ ಬಿಳಿಯ ವ್ಯಕ್ತಿಯನ್ನು ಎಂದಿಗೂ ಇಂಡಿಯನ್ ಅಂದುಕೊಳ್ಳಬೇಡ. 22 00:01:39,333 --> 00:01:40,541 ಜೆ.ಬಿ.! 23 00:01:41,750 --> 00:01:43,375 ನಾನು ನಿನಗೆ ಏನು ಹೇಳಿದ್ದೆ? 24 00:01:43,375 --> 00:01:47,791 ನೀನು ಹಿಂತಿರುಗುವೆ ಎಂದು. ಮತ್ತು ನೀನು ಬಂದಿದ್ದೀಯಾ. 25 00:01:47,791 --> 00:01:50,833 ಅದರ ಅರ್ಥ ನೀನು ಭೂಮಿ ಮೇಲೆ ಇಳಿದು ನಾನು ಕೇಳಿದ್ದನ್ನು ತಂದುಕೊಡು. 26 00:01:51,958 --> 00:01:54,583 ಹೊಸದಾಗಿ ದುಡ್ಡು ಸಿಕ್ಕವನ ಗತ್ತೇ ಗತ್ತು. 27 00:02:01,041 --> 00:02:02,250 ಇದು ಕೊಟ್ಟಿಗೆಯಲ್ಲ, ರಾಯಲ್. 28 00:02:13,791 --> 00:02:16,875 - ಹೊಂದುತ್ತಾ ನೋಡೋಣ. - ನನಗಲ್ಲ. 29 00:02:18,208 --> 00:02:20,125 ರಾಯಲ್, ಬಾ ಕೂರು. 30 00:02:23,125 --> 00:02:25,208 ಅವನಿನ್ನೂ ಹುಡುಗ. ಅವನಿಗೆ ದೊಡ್ಡದಾಗುತ್ತವೆ. 31 00:02:25,208 --> 00:02:26,875 ಬೆಳೆಯುತ್ತಾನೆ ಬಿಡಿ. 32 00:02:30,875 --> 00:02:33,000 ಹೇ, ಅದು ಅವನ ಕೆಲಸ. 33 00:02:37,208 --> 00:02:39,375 ಹೌದು. ಅದು ನನ್ನ ಕೆಲಸ. 34 00:03:08,708 --> 00:03:11,666 ಹುಡುಗನೇ, ಹೇಗನಿಸುತ್ತೆ? 35 00:03:13,625 --> 00:03:15,083 ತುಂಬಾ ದೊಡ್ಡದಾಗಿವೆ. 36 00:03:18,166 --> 00:03:23,083 ಸರಿ, ಎದ್ದು ಓಡಾಡು, ಎಷ್ಟು ಜಾರುತ್ತೆ ನೋಡೋಣ. 37 00:03:28,166 --> 00:03:31,291 - ದಪ್ಪ ಸಾಕ್ಸ್ ಬೇಕಾಗಬಹುದು. - ಅವನ ಅಮ್ಮ ಹೊಲಿಯುತ್ತಾಳೆ. 38 00:03:37,833 --> 00:03:39,541 ನಿನ್ನೊಂದಿಗೆ ವ್ಯಾಪಾರ ಸಂತೋಷವಾಯಿತು. 39 00:03:45,750 --> 00:03:47,166 ಲೀವೈ. 40 00:03:50,083 --> 00:03:52,458 ಕ್ಷಮಿಸಿ, ಕಡಿಮೆ ಕೊಟ್ಟಿದ್ದೀರಿ. 41 00:03:55,125 --> 00:03:56,833 ಇಲ್ಲವಲ್ಲ. 42 00:03:56,833 --> 00:03:58,208 ಬೆಲೆಗಳು ಏರಿದವು. 43 00:04:01,041 --> 00:04:03,375 {\an8}ಸೂಚನೆ ಬೆಲೆಗಳು ಹೆಚ್ಚಿವೆ 44 00:04:05,291 --> 00:04:08,125 - ಅಲ್ಲಿರೋದು... - ನನ್ನ ಹತ್ರ ಸರಿಯಾಗಿ ಮಾತಾಡು. 45 00:04:11,125 --> 00:04:12,666 ನನ್ ಮಗನಿಗೆ ಅವಮಾನ ಮಾಡ್ತಿದ್ದೀಯಾ? 46 00:04:12,666 --> 00:04:14,166 ಇಲ್ಲ, ಹಾಗೇನಿಲ್ಲ. 47 00:04:14,166 --> 00:04:16,250 ವ್ಯಾಪಾರ ನಿಧಾನ, ಆದ್ದರಿಂದ ಬೆಲೆ ಏರಿತು! 48 00:04:24,791 --> 00:04:26,416 ಇಲ್ಲೇ ಇರು. 49 00:04:45,041 --> 00:04:46,875 ಮೂಲೆಯಲ್ಲಿ ಕುಳಿತುಕೋ. 50 00:05:11,416 --> 00:05:13,458 ನಿನಗೆ ಇದನ್ನು ಹೇಳಲು ಕಷ್ಟವಾಗುತ್ತದೆ. 51 00:05:14,291 --> 00:05:16,208 ಆದರೆ, ಹೌದು. 52 00:05:16,208 --> 00:05:18,708 ಮೈಕಲ್ ಜಾಕ್ಸನ್ ಜಗತ್ತಿನ ಅತಿ ದೊಡ್ಡ ಪಾಪ್ ಸ್ಟಾರ್. 53 00:05:19,666 --> 00:05:21,333 ಜೆಪ್ಪೆಲಿನ್ ಗಿಂತ ದೊಡ್ಡವನಾ? 54 00:05:22,583 --> 00:05:24,500 - ದ ಬೀಟಲ್ಸ್? - ಬೀಟಲ್ಸ್ ನ ಮೀರಿಸಿದ. 55 00:05:25,875 --> 00:05:27,666 ಪಾಲ್ ಕೋಪಗೊಂಡ. ಯೋಚಿಸು. 56 00:05:29,500 --> 00:05:31,125 ಹೇಗೆ? 57 00:05:31,125 --> 00:05:34,916 ಅವನೊಬ್ಬ ಮುದ್ದಾದ ಹುಡುಗ, ಆದರೆ ತನ್ನ ಇಲಿಗೆ ಪ್ರೇಮಗೀತೆ ಹಾಡಿದ. 58 00:05:34,916 --> 00:05:36,708 ಬೆನ್. ನನಗೆ ಗೊತ್ತು. 59 00:05:39,125 --> 00:05:42,208 ಇದನ್ನು ನಾಲ್ಕು ವರ್ಷಗಳು ನನಗೆ ಹೇಳದೆ ಇದ್ದೆಯಾ? 60 00:05:42,208 --> 00:05:44,083 ನೀನು ತಡೆದುಕೊಳ್ಳಲ್ಲ ಅಂದುಕೊಂಡೆ. 61 00:05:45,750 --> 00:05:47,041 ಬೇವರ್ಸಿ. 62 00:06:07,375 --> 00:06:10,750 ಈಗಲಾದರೂ ಹಿರಿಯರ ಬಳಿ ಮಾತನಾಡಬಾರದೇ? ಇದು ಹದಗೆಡುತ್ತಿದೆ. 63 00:06:12,708 --> 00:06:15,083 ನನ್ನ ವಿನಂತಿಗೆ ನೀನು ಒಪ್ಪಿದಾಗ ಮಾತಾಡುತ್ತೇನೆ. 64 00:06:17,666 --> 00:06:19,375 ಅಲ್ಲಿವರೆಗೆ, ನಾನು ಬಲಶಾಲಿಯಾಗಿರಬೇಕು. 65 00:06:20,666 --> 00:06:22,625 ಬಲ ಹಾಳಾಗಲಿ. 66 00:06:22,625 --> 00:06:24,583 ಅವರಿಗೆ ನೀನು ಜೀವಂತವಾಗಿರಬೇಕು. 67 00:06:30,666 --> 00:06:32,416 ಜಾಯ್, ನನ್ನೊಳಗೆ ಕ್ಯಾನ್ಸರ್ ಹರಡಿದೆ. 68 00:06:33,458 --> 00:06:35,875 ಅಷ್ಟೆಲ್ಲಾ ವರ್ಷಗಳು ದಾದಿಯಾಗಿ ದುಡಿದ ಮೇಲೆ, 69 00:06:35,875 --> 00:06:37,541 ಏನಾಗುತ್ತೆ ಅಂತ ನನಗೆ ಗೊತ್ತಿದೆ. 70 00:06:39,166 --> 00:06:42,333 ನೋಡು, ನನ್ನ ಜೊತೆ ನಾಲ್ಕು ವರ್ಷ ಇದ್ದೀಯ. 71 00:06:42,333 --> 00:06:44,875 ನನಗೆ ಗೊತ್ತಿದ್ದೆಲ್ಲ ನಿನಗೆ ಗೊತ್ತು. 72 00:06:44,875 --> 00:06:46,583 ಕ್ರಮ್ ಬಂದಿದ್ದಾರೆ! 73 00:06:49,208 --> 00:06:50,791 ಹೋಗುತ್ತೀಯಾ? 74 00:06:53,583 --> 00:06:54,958 ಹಾಂ. 75 00:06:57,375 --> 00:06:59,208 ಆದರೆ ನಾನು ನಿನ್ನ ಸ್ಥಾನ ಪಡೆಯೋಕಾಗಲ್ಲ. 76 00:07:00,583 --> 00:07:01,750 ನಾನಾಗಲಾರೆ. 77 00:07:03,041 --> 00:07:04,666 ನೀನು ಮನೆಗೆ ಹೋಗಲಿರುವುದರಿಂದಲೇ? 78 00:07:15,250 --> 00:07:18,291 - ಶುಭೋದಯ, ಜಾಯ್. - ದೂರದ ಪ್ರಯಾಣವೇ? 79 00:07:18,291 --> 00:07:20,041 ಒಂಥರಾ ಹಾಗೇನೇ. 80 00:07:20,041 --> 00:07:22,083 ಅವು ಆಟಿಕೆಗಳಲ್ಲ. ಧನ್ಯವಾದ. 81 00:07:22,083 --> 00:07:24,000 ನಮ್ಮ ಗೆಳತಿ ಹೇಗಿದ್ದಾಳೆ? 82 00:07:24,000 --> 00:07:26,583 ಹೋರಾಡುತ್ತಿದ್ದಾಳೆ. ಸಾಧ್ಯವಾದಷ್ಟು. 83 00:07:28,250 --> 00:07:31,041 - ಹೆಚ್ಚು ಸಮಯವಿಲ್ಲ. - ಕೇಳಿ ಬೇಜಾರಾಯ್ತು. 84 00:07:32,250 --> 00:07:35,500 ಫಾಲಿಂಗ್ ಸ್ಟಾರ್ ಯಾವಾಗಲೂ ತನ್ನ ಜನರಿಗಾಗಿ ತುಂಬಾ ಮಾಡಿದ್ದಾಳೆ. 85 00:07:35,500 --> 00:07:37,833 ಈ ಬದಲಾವಣೆಗಳನ್ನು ಎಷ್ಟೋ ಸುಲಭವಾಗಿಸಿದ್ದಾಳೆ. 86 00:07:37,833 --> 00:07:40,125 ಹೌದು. ಸುಲಭ ಅಂತೂ ಇರಲಿಲ್ಲ. 87 00:07:41,166 --> 00:07:43,250 ಅದೇ ಅವಳನ್ನು ಕೊಲ್ಲುತ್ತಿದೆ ಅಂತ ಅನಿಸುತ್ತೆ. 88 00:07:44,791 --> 00:07:47,125 ನೀನು ನಿರ್ಧಾರ ಮಾಡಿದೆಯಾ? 89 00:07:47,125 --> 00:07:49,416 ನಮ್ಮ ಹೊಸ ಸಂವಹನ ಅಧಿಕಾರಿ ಆಗುವೆಯಾ, ಇಲ್ಲವಾ ಅಂತ? 90 00:07:51,708 --> 00:07:55,125 ಕ್ರಮ್ ಅವರೇ, ಹೊರಡೋಣ. ಬಿಸಿಲು ಸೂಕ್ತವಾಗಿದೆ. 91 00:09:21,041 --> 00:09:22,625 ಹಿಂತಿರುಗಿ ಹೋಗೋಣ. 92 00:09:22,625 --> 00:09:23,875 ಬಾ. 93 00:09:23,875 --> 00:09:25,958 ಇಲ್ಲ! ಈ ಭೂಮಿ ನಮ್ಮದೂ ಕೂಡ! 94 00:10:14,750 --> 00:10:16,416 ಓಡಿ ಹೋಗಿ! 95 00:10:17,250 --> 00:10:18,750 ದರಿದ್ರ ಕಾಡು ಪ್ರಾಣಿಗಳೆ! 96 00:10:33,708 --> 00:10:35,125 ಸರಿ. 97 00:10:37,166 --> 00:10:38,833 ಎದ್ದೇಳು. ಬಾ. 98 00:10:43,666 --> 00:10:47,625 ಖಾಸಗಿ ಪ್ರದೇಶ ಅತಿಕ್ರಮ ಪ್ರವೇಶ ನಿಷೇಧಿಸಿದೆ 99 00:10:53,166 --> 00:10:56,166 - ನಿಮ್ಮ ಕೂದಲನ್ನು ಸರಿಪಡಿಸಬಹುದೇ? - ಬೇಕಾಗಿಲ್ಲ. 100 00:10:59,125 --> 00:11:00,750 ನಾನು ಬೇಡ ಅಂದೆ. 101 00:11:00,750 --> 00:11:02,583 ಬೇಡ ಎಂದಳು. 102 00:11:02,583 --> 00:11:04,291 ಒಂದು ನಿಮಿಷ ಇರಿ, ಸಲ್ಲಿ. 103 00:11:09,000 --> 00:11:11,750 ಇಂಥ ಕ್ಷಣಗಳ ಪ್ರಾಮುಖ್ಯತೆ ಏನಂತ ಗೊತ್ತಾ? 104 00:11:11,750 --> 00:11:13,208 ದಯಮಾಡಿ ತಿಳಿಸಿ. 105 00:11:13,208 --> 00:11:16,041 ಇವುಗಳನ್ನು ಈ ದೇಶಕ್ಕೆ ಬರುವ ಹೆಚ್ಚಿನ ಜನರು ನೋಡುತ್ತಾರೆ 106 00:11:16,041 --> 00:11:18,416 ಮತ್ತು ನಿಮ್ಮ ಕಥೆಗಳು ಜನಜನಿತವಾಗುತ್ತವೆ, 107 00:11:18,416 --> 00:11:23,875 ಆಮೇಲೆ ಮೂಲನಿವಾಸಿಗಳು ಮತ್ತು ಬೆಳೆಗಾರರ ನಡುವಿನ ಕಲಹ ಕೊನೆಗೊಳ್ಳುತ್ತದೆ. 108 00:11:25,583 --> 00:11:28,000 ಈ ಕಷ್ಟದ ಕಾಲ ತಾತ್ಕಾಲಿಕವಷ್ಟೇ, ಜಾಯ್. 109 00:11:29,375 --> 00:11:31,875 ನೀವು ನೋಡುವ ಭವಿಷ್ಯ, 110 00:11:31,875 --> 00:11:35,166 ನೀವು ಅಂದುಕೊಂಡಿದ್ದಕ್ಕಿಂತ ಕೆಟ್ಟದಾಗಿ ನಡೆಯುತ್ತೆ. 111 00:11:35,166 --> 00:11:37,416 ಇದನ್ನು ನಿರಾಶಾವಾದ ಎಂದು ಹೇಳುತ್ತಾರೆ. 112 00:11:37,416 --> 00:11:39,000 ನಾನು ಬಂದ ಕಡೆಯಂತೂ ಅಲ್ಲ. 113 00:11:39,958 --> 00:11:41,250 ಕಾಲವೇ ನಿರ್ಣಯಿಸುತ್ತೆ. 114 00:11:42,250 --> 00:11:44,041 ಆದರೆ ಆ ದಿನ ಬರುವ ತನಕ... 115 00:11:48,333 --> 00:11:50,625 ನಿಮ್ಮ ಜನ ಮತ್ತು ಬೆಳೆಗಾರರ ನಡುವೆ ಶಾಂತಿ ಕಾಪಾಡಲು 116 00:11:50,625 --> 00:11:52,916 ನಾವು ಎಲ್ಲವನ್ನೂ ಮಾಡುತ್ತೇವೆ. 117 00:11:53,875 --> 00:11:56,000 ಈಗ ಇಲ್ಲಿ ಬಂದ ಕೆಲಸ ಮಾಡೋಣ, ಮಿ. ಸಲ್ಲಿವನ್. 118 00:12:01,708 --> 00:12:04,708 ಅದ್ಭುತ. ಎಲ್ಲರೂ ನಗಿ. 119 00:12:05,333 --> 00:12:07,125 ಶೊಶೋನಿ ಆಗಿರುವುದು ಹೆಮ್ಮೆ! 120 00:12:24,208 --> 00:12:27,958 ಔಟರ್ ರೇಂಜ್ 121 00:12:59,666 --> 00:13:02,041 ನಿನಗೀಗ ಅಮ್ಮನ ಕಳೆ ಬಂದಿದೆ. 122 00:13:09,000 --> 00:13:10,666 ನೀನು ವಾಪಸ್ ಹೋದರೆ, 123 00:13:13,166 --> 00:13:14,958 ಅದು ಹೇಗಿರುತ್ತೆ ಅನ್ಸುತ್ತೆ? 124 00:13:16,625 --> 00:13:18,041 ನನಗೆ ಗೊತ್ತಿಲ್ಲ. 125 00:13:19,166 --> 00:13:22,666 ನಾನು ಆ ವಿವರಗಳ ಬಗ್ಗೆ ಹೆಚ್ಚು ಯೋಚಿಸಿದಾಗಲೆಲ್ಲಾ ಬೇಜಾರಾಗುತ್ತೆ. 126 00:13:24,416 --> 00:13:25,833 ಏಕೆ? 127 00:13:27,208 --> 00:13:28,416 ಕಾಲ. 128 00:13:29,625 --> 00:13:31,166 ಕಾಯುವುದಿಲ್ಲ. 129 00:13:32,625 --> 00:13:35,458 ರೋಸ್ ಗೆ ಈಗ 11 ವರ್ಷ. 130 00:13:36,500 --> 00:13:37,958 ಮಾರ್ಥಾ ಮರೆತು ಸಾಗಿರಬಹುದು. 131 00:13:39,125 --> 00:13:41,041 ನಾನು ಹೇಳಿದರೆ ಅವರು ನಂಬುತ್ತಾರಾ? 132 00:13:42,375 --> 00:13:44,083 ನಾನು ಹುಚ್ಚಿ ಅಂದುಕೊಳ್ಳುತ್ತಾರಾ? 133 00:13:45,083 --> 00:13:46,375 ಪ್ರೀತಿ. 134 00:13:47,083 --> 00:13:48,583 ನಿಜವಾದ ಪ್ರೀತಿ. 135 00:13:49,958 --> 00:13:52,000 ಅವೆಲ್ಲವನ್ನೂ ದಾಟಿ ಹೋಗುತ್ತದೆ. 136 00:13:56,166 --> 00:13:58,250 ನಾವು ಒಳ್ಳೆಯ ಜಾಗದಲ್ಲಿ ಇರಲಿಲ್ಲ ಅಷ್ಟೇ. 137 00:14:02,458 --> 00:14:04,458 ಸ್ವಲ್ಪ ಕಾಲದ ಹಿಂದೆ, ಒಬ್ಬ ಪಾದ್ರಿ 138 00:14:05,666 --> 00:14:07,208 ನಮ್ಮನ್ನು ಉದಾಹರಣೆಯಾಗಿ ತೋರಿಸಿದ. 139 00:14:08,458 --> 00:14:11,416 ಯಾಕೆಂದರೆ ನಾವಿಬ್ಬರು ಹೆಂಗಸರು ಪ್ರೀತಿಸುತ್ತಿದ್ದೆವು. 140 00:14:12,500 --> 00:14:13,666 ಕುಟುಂಬವಾಗಿದ್ದೆವು. 141 00:14:15,000 --> 00:14:18,083 ಆ ಸೂಳೇಮಗ ಇಡೀ ಸಭೆಯ ಮುಂದೆ ನಿಂತಿದ್ದ. 142 00:14:18,083 --> 00:14:20,208 ತಮ್ಮನ್ನು ಕಾಪಾಡಲು ನನ್ನನ್ನು ನಂಬಿದ್ದ ಜನ. 143 00:14:22,708 --> 00:14:24,416 ನಾನು ಮಾತೇ ಆಡಲಿಲ್ಲ. 144 00:14:28,208 --> 00:14:29,875 ಯಾಕೆಂದರೆ ನಾನು ಶೆರಿಫ್ ಆಗಬೇಕಿತ್ತು. 145 00:14:32,958 --> 00:14:34,458 ಮಾರ್ಥಾ ಏನು ಹೇಳಿದಳು? 146 00:14:36,791 --> 00:14:38,083 ನನಗೆ ನೆನಪಿಲ್ಲ. 147 00:14:38,875 --> 00:14:41,000 ನೀನು ಅಷ್ಟು ಸುಲಭವಾಗಿ ಸುಳ್ಳು ಹೇಳುವವಳಾದರೆ, 148 00:14:42,958 --> 00:14:45,958 ನೀನು ಚಿಂತಿಸಬೇಕಿರುವುದು ಕಾಲದ ಬಗ್ಗೆ ಅಲ್ಲ. 149 00:14:48,500 --> 00:14:49,833 ನನಗೆ ಗೊತ್ತು. 150 00:14:50,625 --> 00:14:52,000 ಜಾಯ್. 151 00:14:54,166 --> 00:14:56,375 ನೀನು ಅದೇ ವ್ಯಕ್ತಿಯಲ್ಲ. 152 00:14:58,666 --> 00:15:03,625 ನೀನು ಮನೆಗೆ ಹೋದಾಗ, ಮಾರ್ಥಾಗೆ ಅದು ಕಾಣುತ್ತೆ. 153 00:15:06,250 --> 00:15:08,416 ಫ್ಲವರ್ಸ್ ನ ಹೊತ್ತೊಯ್ದರು! 154 00:15:09,458 --> 00:15:11,750 ಫ್ಲವರ್ಸ್ ನ ಹೊತ್ತೊಯ್ದರು! 155 00:15:12,583 --> 00:15:15,166 ಫ್ಲವರ್ಸ್ ನ ಹೊತ್ತೊಯ್ದರು! 156 00:15:16,125 --> 00:15:19,583 ಫ್ಲವರ್ಸ್! ಫ್ಲವರ್ಸ್ ನ ಹೊತ್ತೊಯ್ದರು! 157 00:15:19,583 --> 00:15:20,500 ಯಾರು? 158 00:15:22,250 --> 00:15:23,708 ಬಿಳಿ ಪುರುಷರು! 159 00:15:23,708 --> 00:15:26,041 ಮರಗಳನ್ನು ಕಡಿದಿರುವ ಜಾಗದಲ್ಲಿ ಇರುವವರು! 160 00:15:27,000 --> 00:15:28,625 ನೀವು ಅಲ್ಲಿಗೆ ಯಾಕೆ ಹೋಗಿದ್ರಿ? 161 00:15:28,625 --> 00:15:31,291 ನಾವು ಏನಾದರೂ ಸಾಧಿಸಬೇಕೆಂದಿದ್ದೆವು! 162 00:15:31,750 --> 00:15:34,583 ಎಲ್ಲರಿಗೂ ಆಹಾರ ತರಬೇಕೆಂದಿದ್ದೆವು. 163 00:15:37,458 --> 00:15:41,625 ಆ ಗಂಡಸರು, ನಮಗೆ ಕಾಣದಂತೆ ಬಂದರು. 164 00:15:44,458 --> 00:15:46,208 ಯೋಧರು ಬೇಟೆಗೆ ಹೋಗಿದ್ದಾರೆ. 165 00:15:47,291 --> 00:15:51,250 ರಾತ್ರಿನೇ ಬರೋದು. ಅಷ್ಟೊತ್ತಿಗೆ ಫ್ಲವರ್ಸ್ ನ ಕಳೆದುಕೊಳ್ಳುತ್ತೇವೆ. 166 00:15:55,041 --> 00:15:59,125 ನನಗವಳು ಸಿಕ್ಕಾಗ, ನನ್ನನ್ನು ತಡೆಯಲು ಎಲ್ಲವನ್ನೂ ಮಾಡುತ್ತಾರೆ. 167 00:16:00,708 --> 00:16:02,500 ಅವರಿಗೆ ಬಿಡಬೇಡ. 168 00:16:28,708 --> 00:16:30,125 ಮೌಂಟನ್ ಲಯನ್! 169 00:16:30,125 --> 00:16:32,333 ವೇಗದ ಕುದುರೆಯೊಂದನ್ನು ತಾ! 170 00:17:30,333 --> 00:17:32,166 ನಾನು ಪಶ್ಚಿಮದ ಕಡೆಗೆ 171 00:17:34,166 --> 00:17:35,833 ನೋಡಿದಾಗ 172 00:17:38,291 --> 00:17:40,833 ನನಗೊಂದು ಭಾವನೆ ಮೂಡುತ್ತೆ 173 00:17:42,708 --> 00:17:48,541 ಮತ್ತು ಹೊರಡುವುದಕ್ಕೆ 174 00:17:51,791 --> 00:17:53,208 ನನ್ನ ಆತ್ಮವು ರೋಧಿಸುತ್ತಿದೆ. 175 00:17:57,541 --> 00:18:01,333 ನೀನು ಹೋಗಬಹುದಾದ ಎರಡು ಮಾರ್ಗಗಳಿವೆ, 176 00:18:02,333 --> 00:18:04,041 ಆದರೆ ಮುಂದೆ ಒಂದು ದಿನ, 177 00:18:04,041 --> 00:18:08,375 ನಿನ್ನ ಮಾರ್ಗವನ್ನು ಬದಲಾಯಿಸಲು ಇನ್ನೂ ಸಮಯವಿರುತ್ತದೆ. 178 00:19:48,791 --> 00:19:50,500 ಸರಿ. 179 00:20:20,250 --> 00:20:21,083 ಹೇ! 180 00:21:10,583 --> 00:21:11,875 ಹೇ! 181 00:21:22,416 --> 00:21:24,458 ನೀನು ಏನು ಹೇಳ್ತಿದ್ದೀಯೋ ಗೊತ್ತಿಲ್ಲ. ಹೇ! 182 00:21:32,333 --> 00:21:35,958 ಹೇ! ನೀನು ಏಬೆಲ್ ನ ಪಿಟೀಲು ಮುರಿದರೆ, ಅವನು ನಿನಗೆ ಚಾಕು ಹಾಕುತ್ತಾನೆ. 183 00:21:40,083 --> 00:21:41,791 ಇನ್ನು ಆಟ ಸಾಕು, ಶೆಲ್ಟನ್. 184 00:21:48,041 --> 00:21:50,458 ನಿಮಗೆ ಒಂದೇ ಅವಕಾಶ, ಅವಳನ್ನು ನನ್ನಡೆ ಕಳಿಸಿ. 185 00:21:52,041 --> 00:21:55,375 ಹೇ, ನೀನು ನೋಡೋಕೆ ಗಂಡಸಿನ ಹಾಗಿದ್ದೀಯಾ. ನಿನ್ನ ಧ್ವನಿ ಹಾಗಿಲ್ಲ. 186 00:22:00,166 --> 00:22:02,875 ಹಾಗಿದ್ದರೂ, ನಿಮ್ಮೆಲ್ಲರನ್ನು ಹಾಗೇ ಕೊಲ್ಲುವೆ. 187 00:22:19,208 --> 00:22:20,625 ಛೆ! 188 00:22:30,916 --> 00:22:33,791 ಇಲ್ಲ, ಅಯ್ಯೋ. ಥತ್! 189 00:22:38,250 --> 00:22:40,125 ನಾವು ಹೋಗಬೇಕು. ಈಗಲೇ. 190 00:22:53,583 --> 00:22:56,166 ಅವಳಿಗಾಗಿ ಬರುತ್ತೇನೆ, ನಿನಗಾಗಿಯೂ ಸಹ! 191 00:22:56,875 --> 00:22:58,416 ನಿಮಗೆ ತುಂಬಾ ರಕ್ತಸ್ರಾವವಾಗುತ್ತಿದೆ. 192 00:22:58,875 --> 00:23:00,916 ನೀವು ಕೊನೆಯದಾಗಿ ಕೇಳೋದು ನನ್ನ ಧ್ವನಿಯನ್ನೇ! 193 00:23:04,166 --> 00:23:05,541 ಓಡಿ! 194 00:23:22,291 --> 00:23:23,958 ಹಿಡ್ಕೋ, ಫ್ಲವರ್ಸ್! 195 00:23:23,958 --> 00:23:25,541 ಧನ್ಯವಾದ. 196 00:23:38,083 --> 00:23:39,666 ತಗೊಳ್ಳಿ. 197 00:23:39,666 --> 00:23:41,083 ಆ ಶೂಗಳು ಹೇಗಿವೆ? 198 00:23:42,541 --> 00:23:43,625 ನೋಯುತ್ತವೆ. 199 00:23:44,708 --> 00:23:46,041 ಸರಿಹೊಂದುವಷ್ಟು ಬೆಳೆಯುವೆ. 200 00:23:47,291 --> 00:23:49,083 ಸ್ವಲ್ಪ ನೋವು ನಿನಗೆ ಒಳ್ಳೆಯದೇ. 201 00:23:50,166 --> 00:23:51,708 ಅದು ಗಂಡಸಾಗುವುದರ ಭಾಗ. 202 00:24:11,333 --> 00:24:13,125 ಇಜ್ಜೀ, ಒಳಗೆ ಹೋಗು. 203 00:24:13,125 --> 00:24:15,958 ನಮಸ್ಕಾರ, ತಾಯಿ. ಸಮ್ನರ್ ಅವರೇ. 204 00:24:15,958 --> 00:24:18,208 ತೋಟಕ್ಕೆ ಹೋಗು, ಇದು ನಿನಗೆ ಸಂಬಂಧಿಸಿದ್ದಲ್ಲ. 205 00:24:18,208 --> 00:24:19,708 ಇದೇನಾ ಹಸು? 206 00:24:20,708 --> 00:24:23,166 ಅದೇ. ಡೈಸಿ. 207 00:24:29,083 --> 00:24:30,875 ಲೀವೈ, ಏನು ನಡೆಯುತ್ತಿದೆ ಇಲ್ಲಿ? 208 00:24:38,916 --> 00:24:42,291 ನಿನ್ನ ಮಗನ ಶೂಗಳಿಗಾಗಿ ನಿನ್ನ ಗಂಡನಿಗೆ ಹಣ ಬೇಕಿತ್ತು. 209 00:24:42,291 --> 00:24:45,041 ನೋಡಿ, ಬ್ಯಾಂಕಿನವರು ಆಕಳನ್ನು ಜಪ್ತಿ ಮಾಡೋಕಾಗಲ್ಲ, 210 00:24:45,041 --> 00:24:47,708 ಆದರೆ ನಮ್ಮಣ್ಣ ತನ್ನ ಹೊಲವನ್ನು ನಿರ್ಮಿಸುತ್ತಿದ್ದಾನೆ, 211 00:24:47,708 --> 00:24:49,416 ಅಲ್ಲಿ ಹಸುಗಳೇ ಸಿಗಲ್ಲ. 212 00:24:49,416 --> 00:24:51,458 ಚಳಿಗಾಲದವರೆಗೂ ಆ ಹಸುವೇ ನಮಗೆ ಆಧಾರ. 213 00:24:51,458 --> 00:24:53,916 ಹಸು ಮಾರಾಟವಾಗಿದೆ. ನೀವು ಹೊರಡಬಹುದು. 214 00:25:02,875 --> 00:25:05,041 ಆಲಿಸ್, ಸುಮ್ಮನಿರು, ಈಗ. 215 00:25:06,083 --> 00:25:08,875 - ಆಲಿಸ್. - ಸಮ್ನರ್ ಅವರೇ. ನಿಮ್ಮ ಹೆಂಡತಿ. 216 00:25:11,750 --> 00:25:16,375 ಯಾವ ಕಾರಣಕ್ಕೋ ಗೊತ್ತಿಲ್ಲ, ನನ್ನ ಗಂಡ ಈ ಮಾರಾಟದ ಬಗ್ಗೆ ನನಗೆ ಹೇಳಿಲ್ಲ. 217 00:25:16,375 --> 00:25:19,625 - ಗನ್ ಕೆಳಗಿಳಿಸು. - ಅಷ್ಟೇ ಹೇಳುವೆ, ಈ ಹಸು ಇಲ್ಲೇ ಇರುತ್ತೆ. 218 00:25:19,625 --> 00:25:21,583 ರೈಫಲ್ ಕೆಳಗೆ ಇರಿಸು. 219 00:25:21,583 --> 00:25:25,833 ಆ ಶ್ರೀಮಂತ ದನಗಾಹಿಗಳಂತೆ ಕಾಣಲು ಬೇಕಿರುವುದು ಆಕರ್ಷಕ ಶೂಗಳಲ್ಲ. 220 00:25:30,166 --> 00:25:33,958 ನಾನು ಮತ್ತು ನನ್ನ ಮಗ ಇದನ್ನು ದುಡಿದು ತೀರಿಸುತ್ತೇವೆ. 221 00:25:39,458 --> 00:25:41,333 ಲೀವೈ ಸಮ್ನರ್! 222 00:25:41,333 --> 00:25:43,583 ಕೇಪ್ ಅವರೇ, ಏನು ಸಮಾಚಾರ? 223 00:25:44,125 --> 00:25:47,166 ಯಾರೋ ಅನಾಗರಿಕರು ನನ್ನ ಜಮೀನಿಗೆ ನುಗ್ಗಿದರು. 224 00:25:47,166 --> 00:25:50,500 ನನ್ನ ಇಬ್ಬರು ಕೆಲಸದವರನ್ನು ಕೊಂದು, ಕಾಡಿಗೆ ಓಡಿಹೋದರು. 225 00:25:51,458 --> 00:25:53,666 ನೀನು ಒಳ್ಳೆ ಪತ್ತೇದಾರನೆಂದು ಕೇಳಿದೆ, ಲೀವೈ. 226 00:25:55,875 --> 00:25:57,291 ನೀವು ಕೇಳಿದ್ದು ಸರಿ. 227 00:25:57,291 --> 00:25:59,208 ಸರಿ, ನೀನು ನನಗೆ ಸಹಾಯ ಮಾಡಿದರೆ, 228 00:25:59,875 --> 00:26:03,041 ನನ್ನ ಜಮೀನಿನಲ್ಲಿ ನಿನಗೆ ಕೆಲಸ ಕೊಡುವುದರ ಬಗ್ಗೆ ಯೋಚಿಸುವೆ. 229 00:26:06,833 --> 00:26:09,416 ಹೋಗಿ ಒಂದು ರೈಫಲ್ ಮತ್ತು ಗುಂಡುಗಳನ್ನು ತಾ, ಮಗನೇ. 230 00:26:10,375 --> 00:26:11,875 ರಕೂನ್ ಬೇಟೆಗೆ ಹೋಗೋಣ. 231 00:26:11,875 --> 00:26:14,375 - ಸರಿ. - ಅವರಿಗೆ ಕೋಪ ಬರುವ ಮುನ್ನ ಹೋಗು. 232 00:26:14,375 --> 00:26:16,666 ಫಾರ್ಬರ್ ಅವರೇ, ನೀವು ಶೆರಿಫ್ ಗೆ ಹೇಳಿ. 233 00:26:16,666 --> 00:26:18,208 ನಾನು ಅವರ ಜಾಡಿನಲ್ಲೇ ಇರುವೆ. 234 00:26:18,208 --> 00:26:21,541 ನನ್ನನ್ನು ಹುಡುಕಿ ಬಾ. ನನ್ನ ಮರಗಳ ಉತ್ತರ ದಿಕ್ಕಿಗೆ ಬಾ! 235 00:26:21,541 --> 00:26:23,125 ಹೋಗೋಣ! 236 00:26:27,541 --> 00:26:29,208 ಹಸುವಿಗಾಗಿ ಹಿಂತಿರುಗುತ್ತೇನೆ. 237 00:26:31,541 --> 00:26:34,041 ಕೇಪ್ ದೊಡ್ಡ ಹುಚ್ಚ, ಲೀವೈ. 238 00:26:34,041 --> 00:26:35,875 ಯಾರನ್ನಾದರೂ ಕೊಲ್ಲಿಸುತ್ತಾನೆ. 239 00:26:38,833 --> 00:26:40,750 ನಿನಗದು ಕಾಣುತ್ತೆ, ಅಲ್ವಾ? 240 00:26:43,000 --> 00:26:44,666 ನನಗೆ ಕಾಣುವುದು 241 00:26:45,875 --> 00:26:47,500 ನಮ್ಮ ಭವಿಷ್ಯ ಮಾತ್ರ. 242 00:26:50,750 --> 00:26:53,500 ಹೇ, ನಡೆದು ಹೋದರೇನೇ ಉತ್ತಮವಾಗಿ ಪತ್ತೆ ಮಾಡೋಕಾಗೋದು. 243 00:26:57,583 --> 00:26:58,916 ಬಾ. 244 00:27:00,000 --> 00:27:03,166 ರಾಯಲ್, ಹುಷಾರಾಗಿರು! 245 00:27:08,125 --> 00:27:10,000 ದಯವಿಟ್ಟು ಶಾಂತರಾಗಿ. 246 00:27:11,541 --> 00:27:13,000 ಸುಮ್ಮನೆ ಕೇಳಿ. 247 00:27:13,000 --> 00:27:14,750 ಅವರನ್ನು ನೇಣು ಹಾಕಿ! 248 00:27:15,875 --> 00:27:19,541 ನಿಮಗೆ ನೆನಪಿಸುವೆ, ಮಿ. ಕ್ರಮ್ ನಮ್ಮ ಇಂಡಿಯನ್ ಪ್ರತಿನಿಧಿ. 249 00:27:20,333 --> 00:27:23,875 ಅವರು ತಯಾರಿ ಇಲ್ಲದೆ ಹೋಗಲ್ಲ, ಹಾಗಾಗಿ ಅವರ ಮಾತು ಕೇಳಿ. 250 00:27:23,875 --> 00:27:25,916 ಅವರೇನು ಮಾತಾಡುತ್ತಾರೆಂದು ಅವರಿಗೆ ಗೊತ್ತು. 251 00:27:25,916 --> 00:27:27,291 ಧನ್ಯವಾದಗಳು, ಶೆರಿಫ್. 252 00:27:28,458 --> 00:27:30,416 ಎಲ್ಲರೂ ಸಿಟ್ಟಿನಲ್ಲಿರುವಿರಿ ಅಂತ ಗೊತ್ತು. 253 00:27:30,416 --> 00:27:32,291 ಹೌದು! 254 00:27:32,291 --> 00:27:36,500 ಇಲ್ಲಿ ನಡೆದಿರುವುದರ ವದಂತಿಯು ನಿಜವಾಗಿದ್ದರೆ, ಅದು ನಿಜಕ್ಕೂ ಆಘಾತಕಾರಿಯೇ. 255 00:27:38,250 --> 00:27:41,375 ಅವರಿಗೆ ಮಾತನಾಡಲು ಬಿಡಿ! 256 00:27:43,500 --> 00:27:45,958 ಆಕ್ರೋಶವಿದೆ, ಖಂಡಿತವಾಗಿ. 257 00:27:45,958 --> 00:27:50,208 ಆದರೆ ಒಬ್ಬ ಸರ್ಕಾರಿ ಪ್ರತಿನಿಧಿಯಾಗಿ, ನಾನು ತಾಳ್ಮೆಯನ್ನು ಒತ್ತಾಯಿಸುವೆ. 258 00:27:50,916 --> 00:27:54,708 ಬರುವ ವಸಂತ ಕಾಲದಲ್ಲಿ, ನಾವು ಶೊಶೋನಿಗಳನ್ನ ಸ್ಥಳಾಂತರಗೊಳ್ಳೋಣ. 259 00:27:54,708 --> 00:28:00,041 ನಾವು ಮಾತನಾಡುತ್ತಿರುವಾಗಲೇ, ಕಾಂಗ್ರೆಸ್ ನಿಮಗಾಗಿ ಗಡಿಗಳನ್ನು ಪುನರ್ರಚಿಸುತ್ತಿದೆ. 260 00:28:00,041 --> 00:28:05,833 ಬಿಳಿಯ ಜನ ಖಾಸಗಿ ಜಮೀನಿನಲ್ಲಿ ಕೊಲೆಯಾಗುವುದಕ್ಕೂ ಇದಕ್ಕೂ ಏನು ಸಂಬಂಧ? 261 00:28:06,583 --> 00:28:08,875 - ಅಲ್ಲವೇ! - ನೀವು ಕೆಲಸ ಮಾಡುವುದು ಸರ್ಕಾರಕ್ಕೆ, 262 00:28:08,875 --> 00:28:11,083 ನಾವ್ಯಾಕೆ ನಿಮ್ಮ ಮಾತು ಕೇಳಬೇಕು? 263 00:28:11,083 --> 00:28:13,625 ನಿಮ್ಮಂಥ ಘನತೆಯುಳ್ಳ ವ್ಯಕ್ತಿಗೆ ಇಂಥ ರಕ್ತದಾಹವಿದೆ 264 00:28:14,875 --> 00:28:17,166 ಎಂದು ನಾನು ಊಹಿಸಿರಲಿಲ್ಲ. 265 00:28:17,166 --> 00:28:19,166 ಸರಿ, ಸ್ವಲ್ಪ ಶಾಂತರಾಗೋಣ. 266 00:28:20,666 --> 00:28:23,833 ನಾನು ಕಣಿವೆಯ ಜಮೀನುದಾರರ ಪರವಾಗಿಯೇ ಮಾತನಾಡುವೆ, 267 00:28:23,833 --> 00:28:27,833 ಸಂಯಮವೇ ಸೂಕ್ತ ಕ್ರಮ ಎಂದು ನಾನಿಲ್ಲಿ ಹೇಳುವೆ. 268 00:28:27,833 --> 00:28:31,166 ಕಾನೂನು ಇಂಡಿಯನ್ಸನ್ನು ನೋಡಿಕೊಳ್ಳಲಿ. 269 00:28:31,166 --> 00:28:33,500 ಕೊನೆಗೆ ಗೆಲುವಿನ ನಗೆ ನಮ್ಮದೇ ಅನ್ನೋದು ಖಚಿತ. 270 00:28:33,500 --> 00:28:36,958 ಇಂಥ ಪರಿಸ್ಥಿತಿಯಲ್ಲಿ ನಗುವಂಥದ್ದು ಏನೂ ಇಲ್ಲ. 271 00:28:36,958 --> 00:28:39,208 ಇದೆ, ಯಾಕೆಂದರೆ ನಿನ್ನನ್ನು ನೋಡಿಯೇ ನಗಬೇಕು. 272 00:28:40,041 --> 00:28:44,625 - ಮಾತು ಸರಿಯಾಗಿರಲಿ. - ನಿನ್ನ ಸ್ಥಾನವನ್ನು ಮರೆಯಬೇಡ. 273 00:28:44,625 --> 00:28:49,791 ನನ್ನ ಸ್ಥಾನ ಈ ಭೂಮಿಯ ಮೇಲಿದೆ, ಮತ್ತು ಅದು ನಮ್ಮೆಲ್ಲರಿಗೂ ಸೇರಿದೆ. 274 00:28:49,791 --> 00:28:52,541 - ಹೌದು! - ನಾವು ಇಲ್ಲಿ ವಾಸಿಸುತ್ತೇವೆ! 275 00:28:52,541 --> 00:28:54,583 ಅದನ್ನು ಪಡೆಯಲು ಸಾಧ್ಯವಾದವರಿಗೆ ಇದೆ. 276 00:28:55,833 --> 00:28:58,583 ನನಗಿಲ್ಲಿ ಅಂತಹ ಹೆಚ್ಚಿನ ಜನ ಕಾಣುತ್ತಿಲ್ಲ. 277 00:29:05,791 --> 00:29:07,208 ದೇವರ ಮೇಲಾಣೆ, 278 00:29:08,916 --> 00:29:12,125 ನನ್ನ ಮೇಲೆ ಯಾವನಾದರೂ ಧೂಳು ಎಬ್ಬಿಸಿದರೆ, ಅವನಿಗೆ ಗುಂಡು ಹೊಡೆಯುವೆ. 279 00:29:14,041 --> 00:29:17,458 ನನ್ನ ಹೋರಾಟ ಇಲ್ಲಿಲ್ಲ. ಇದು ಶೆಲ್ಟನ್ನೊಂದಿಗೆ ಅಲ್ಲಿದೆ. 280 00:29:17,458 --> 00:29:18,708 ಹೌದು! 281 00:29:18,708 --> 00:29:20,875 ನನ್ನ ಜೊತೆಗಿರುವವರು ಸವಾರಿ ಮಾಡೋಣ. 282 00:29:49,916 --> 00:29:51,833 ಫ್ಲವರ್ಸ್! 283 00:29:54,791 --> 00:29:56,541 ನಾವು ಹೋಗಬೇಕು! 284 00:29:59,166 --> 00:30:03,958 ನಿಮ್ಮ ಕಾಲಿಗೆ ನಾವು ಏನಾದರೂ ಮಾಡದಿದ್ದರೆ, ನಾವು ಹಿಂತಿರುಗಲು ಆಗಲ್ಲ. 285 00:30:23,708 --> 00:30:25,208 ನಿಮ್ಮ ಕಾಲು ತೋರಿಸಿ. 286 00:30:29,916 --> 00:30:31,458 ಕುದುರೆ ತಗೊಂಡು ಹೋಗು. 287 00:30:39,875 --> 00:30:41,416 ಇದೆಲ್ಲಾ ನನ್ನ ತಪ್ಪು. 288 00:30:43,250 --> 00:30:44,750 ಇಲ್ಲ, ಹಾಗೇನಿಲ್ಲ. 289 00:31:00,125 --> 00:31:01,666 ನನಗೆ ನಿನ್ನಷ್ಟು ವಯಸ್ಸಾಗಿದ್ದಾಗ 290 00:31:04,541 --> 00:31:07,416 ನಾನು ದಾಳಿಗೊಳಗಾಗಿದ್ದೆ. 291 00:31:11,666 --> 00:31:14,166 ನನ್ನನ್ನು ಇನ್ನೇನು ಹಿಡಿಯಲಿದ್ದರು, ಆದರೆ ನಾನು ತಪ್ಪಿಸಿಕೊಂಡೆ. 292 00:31:15,708 --> 00:31:18,000 ನಡೆದದ್ದು ನನ್ನ ಮನಸ್ಸಿನಲ್ಲಿ ಪದೇ ಪದೇ ನಡೆಯುತ್ತಿತ್ತು, 293 00:31:18,000 --> 00:31:19,833 ನನಗದನ್ನು ತಡೆಯಲಾಗಲಿಲ್ಲ. 294 00:31:21,541 --> 00:31:23,500 ನಾನು ಬೆಳೆದ ಮೇಲೆ, 295 00:31:26,500 --> 00:31:29,125 ನಾನು ಕಾಳಜಿ ವಹಿಸುವ ಯಾರಿಗೂ ಹಾಗಾಗಬಾರದು ಅಂದುಕೊಂಡೆ. 296 00:31:33,416 --> 00:31:37,125 ಅವರು ನನಗೇನು ಮಾಡಲಿದ್ದರೆಂದು ನನಗೆ ಹೇಳಿದರು. 297 00:31:39,666 --> 00:31:42,250 ಅವರ ಬಾಯಿಂದ ಬರುತ್ತಿದ್ದ ಹೆಂಡದ ವಾಸನೆ... 298 00:31:42,250 --> 00:31:44,375 ನೀನೀಗ ಸುರಕ್ಷಿತಳು. 299 00:31:53,083 --> 00:31:55,666 ನೀವು ನನಗಾಗಿ ಬಂದ್ರಿ. 300 00:31:56,333 --> 00:31:57,750 ನಾನು ನಿಮ್ಮನ್ನು ಬಿಟ್ಟು ಹೋಗಲ್ಲ. 301 00:31:58,583 --> 00:32:02,000 ನನಗೆ ಗೊತ್ತಿರುವುದನ್ನು ತಿಳಿದೂ ಸಹ. 302 00:32:03,458 --> 00:32:07,791 ನನಗಾಗಿ ಬಂದದ್ದು ಅಪಾಯಕಾರಿ. 303 00:32:09,375 --> 00:32:13,916 ಏನಾದರೂ ನಡೆದರೆ, ನಿಮಗೆ ನಿಮ್ಮ ಕಾಲಮಾನ ಸಿಗದೇ ಹೋಗಬಹುದು. 304 00:32:25,416 --> 00:32:27,958 ಕುದುರೆ ತಗೊಂಡು ಹೋಗು. 305 00:32:38,958 --> 00:32:43,833 ಅವರು ಬರುತ್ತಿದ್ದಾರೆ ಎಂದು ಫಾಲಿಂಗ್ ಸ್ಟಾರ್ ಗೆ ಹೇಳು. 306 00:33:03,250 --> 00:33:04,916 ಶೆಲ್ಟನ್. 307 00:33:09,458 --> 00:33:10,916 ಶೆಲ್ಟನ್. 308 00:33:12,583 --> 00:33:14,333 ನನ್ನೊಂದಿಗೆ ಮಾತನಾಡುತ್ತಿದ್ದೀಯಾ? 309 00:33:14,333 --> 00:33:17,291 ನಿನ್ನ ಹಾಳಾದ ಕುದುರೆಯನ್ನು ಕಟ್ಟಿಹಾಕು. 310 00:33:18,541 --> 00:33:21,458 ನನ್ನ ಕುದುರೆಯಿಂದ ನಿನ್ನ ಪತ್ತೆದಾರಿಕೆಗೆ ಏನು ತೊಂದರೆ? 311 00:33:21,458 --> 00:33:24,708 - ತುಂಬಾ ಸದ್ದು ಮಾಡುತ್ತಿದೆ. - ಅದು ನಿನ್ನ ಹಾಳಾದ ಬಾಯಿ. 312 00:33:28,291 --> 00:33:31,500 ಕೊನೆಯದಾಗಿ ಯಾವಾಗ ಬೇಟೆ ಆಡಿದ್ರಿ, ಯಜಮಾನರೇ? 313 00:33:31,500 --> 00:33:34,166 ಅದೆಲ್ಲಾ ನಿನಗೆ ಬೇಕಾಗಿಲ್ಲ. 314 00:33:34,166 --> 00:33:37,250 ನೋಡಿ, ನನಗೆ ಹೆಚ್ಚು ಗೊತ್ತಿಲ್ಲ, 315 00:33:38,208 --> 00:33:42,875 ಆದರೆ ಇಂಜನ್ ಹಳ್ಳಿಗೆ ನುಗ್ಗಿದರೆ, ಅವರಿಗೆ ನಾನು ಬರುವುದು ಗೊತ್ತಾಗಬಾರದು 316 00:33:42,875 --> 00:33:44,333 ಅನ್ನೋದಂತೂ ಗೊತ್ತು. 317 00:33:45,416 --> 00:33:48,666 ಅದು ನಿಮ್ಮ ಯೋಜನೆ ಆದರೆ, ದೇವರೇ ನಿಮಗೆ ನೆರವಾಗಲಿ. 318 00:33:48,666 --> 00:33:53,041 ಇಲ್ಲದಿದ್ದರೆ, ನಿಮ್ಮ ಕುದುರೆಯಿಂದ ಇಳಿಯಿರಿ. 319 00:33:56,291 --> 00:33:57,958 ಏನು ಮಾಡೋಣ ಅಂತೀಯಾ? 320 00:34:00,291 --> 00:34:03,666 ಅವರಲ್ಲಿ ಒಬ್ಬರಿಗೆ ಏಟು ತಗುಲಿದ್ದರೆ, ನಿಧಾನವಾಗಿ ಹೋಗುತ್ತಿರುತ್ತಾರೆ. 321 00:34:04,583 --> 00:34:10,041 ನಾವು ಬೇರೆ ದಿಕ್ಕುಗಳಲ್ಲಿ ಹೋಗಿ, ಆ ಬೇವರ್ಸಿ ತಪ್ಪಿಸಿಕೊಳ್ಳಲಾಗದಂತೆ ಹಿಡಿಯೋಣ. 322 00:34:11,500 --> 00:34:15,500 ಹಾಗೆ ಮಾಡೋಣ ಅಂತೀನಿ, ಸರ್. 323 00:34:29,750 --> 00:34:31,416 ನೀನು ಸಾಯಬೇಡ. 324 00:34:37,375 --> 00:34:39,083 ವಾಪಸ್ ಬರ್ತೀನಿ ಕಣೋ. 325 00:34:41,625 --> 00:34:44,291 ಸರಿ, ನಾನು ಯಾವ ಕಡೆ ಹೋಗಲಿ? 326 00:34:45,583 --> 00:34:47,250 ರಕ್ತದ ಜಾಡು ಹಿಡಿಯಿರಿ. 327 00:34:49,125 --> 00:34:51,083 ಹೆಚ್ಚು ಸ್ಥಿರವಾದ ಜಾಡು. 328 00:34:55,125 --> 00:34:56,583 ಸರಿ. 329 00:34:59,500 --> 00:35:02,125 ಅಲ್ಲಿ ನಿಂತ್ಕೊಂಡು ಇನ್ನೂ ಏನು ಮಾಡ್ತಿದ್ದೀಯಾ? 330 00:35:24,375 --> 00:35:25,708 ಫ್ಲವರ್ಸ್! 331 00:35:25,708 --> 00:35:27,333 ನೀನು ವಾಪಸ್ ಬಂದೆ! 332 00:35:30,875 --> 00:35:33,916 ಕ್ಷಮಿಸು, ನಾನು ಓಡಿಹೋದೆ. 333 00:35:34,875 --> 00:35:35,958 ಜಾಯ್ ಎಲ್ಲಿ? 334 00:35:38,125 --> 00:35:42,625 ಆಕೆಗೆ ಗಾಯವಾಯಿತು, 335 00:35:43,791 --> 00:35:45,958 ಮತ್ತು ಹಿಂದೆಯೇ ಉಳಿದರು. 336 00:35:45,958 --> 00:35:47,000 ಗಾಯವಾಗಿದೆಯೇ? 337 00:35:48,208 --> 00:35:50,208 ಅವರು ಅವಳನ್ನು ಹಿಂಬಾಲಿಸುತ್ತಿದ್ದರಾ? 338 00:35:51,500 --> 00:35:53,208 ಅವರು ಬರುತ್ತಿದ್ದಾರೆ. ವೇಗವಾಗಿ. 339 00:35:58,250 --> 00:35:59,916 ಸಾಧಿಸಿ ತೋರಿಸಬೇಕು ಅಂತಿದ್ದೆ ಅಲ್ವಾ? 340 00:36:01,458 --> 00:36:06,958 ನಮ್ಮ ಯೋಧರನ್ನು ಹುಡುಕಿ ವಾಪಸ್ ಕರೆ ತಾ. 341 00:36:09,333 --> 00:36:10,458 ಮೌಂಟನ್ ಲಯನ್. 342 00:36:12,000 --> 00:36:13,208 ಭಯಪಡಬೇಡ. 343 00:36:14,791 --> 00:36:17,083 ನಿನ್ನ ಹೃದಯದಲ್ಲಿ ಧೈರ್ಯವಿದೆ. 344 00:39:08,250 --> 00:39:09,958 ಹುಚ್ಚು ಮೂರ್ಖ. 345 00:39:12,541 --> 00:39:15,500 ಆ ಕಡೆ. ಈಗ. ತಡಿ! 346 00:39:15,500 --> 00:39:18,958 ಆ ಮೂರ್ಖನ ಹಾಗೆ ಸದ್ದು ಮಾಡಬೇಡ, ಇಲ್ಲದಿದ್ದರೆ ತಿಕ ಒದೆಯುವೆ. 347 00:39:19,750 --> 00:39:22,000 ಏನೇ ಚಲಿಸಿದರೂ ಗುಂಡು ಹೊಡಿ. 348 00:39:24,750 --> 00:39:26,041 ಹೋಗು! 349 00:39:58,833 --> 00:40:00,500 ಛೆ. 350 00:40:11,458 --> 00:40:13,333 - ಅದರೊಂದಿಗೆ ಹುಷಾರು, ರಾಯಲ್. - ಕದಲಬೇಡ. 351 00:40:15,541 --> 00:40:17,166 - ನನ್ನಿಂದ ಆಗಲ್ಲ. - ಬಾಯಿ ಮುಚ್ಚು. 352 00:40:22,208 --> 00:40:23,583 ನಿನ್ನ ಭಾವನೆ ಅರ್ಥವಾಗುತ್ತೆ. 353 00:40:24,875 --> 00:40:26,166 ಹೌದು. 354 00:40:28,708 --> 00:40:30,875 ನೀನಿಲ್ಲಿ ಒಬ್ಬನೇ ಬಂದಿರುವೆಯಾ? 355 00:40:32,000 --> 00:40:33,583 ನಿನ್ನ ಅಪ್ಪ ಎಲ್ಲಿದ್ದಾರೆ? 356 00:40:40,416 --> 00:40:42,125 ನನಗೆ ರಾಯಲ್ ಹೆಸರಿನ ಒಬ್ಬರು ಗೊತ್ತು. 357 00:40:44,333 --> 00:40:46,000 ಒಳ್ಳೆಯ ವ್ಯಕ್ತಿಯಾಗಿರುತ್ತಾರೆ. 358 00:40:47,958 --> 00:40:49,625 ನಿನ್ನ ತಂದೆಯಂತೆ ಅಲ್ಲದೆ. 359 00:40:50,875 --> 00:40:52,458 ಆತ ಒಳ್ಳೆಯ ವ್ಯಕ್ತಿ ಅಲ್ಲ, ಅಲ್ವಾ? 360 00:40:53,250 --> 00:40:55,583 ನಾನು ಬಂದ ಕಡೆ ಅವರನ್ನು ಜೈಲಿಗೆ ಹಾಕುತ್ತಾರೆ. 361 00:40:57,916 --> 00:41:00,541 ಹೆಂಗಸರು ಮತ್ತು ಮಕ್ಕಳಿಗೆ ಹಿಂಸೆ ಕೊಡುವವರನ್ನು. 362 00:41:04,083 --> 00:41:06,375 ನೀನು ಅಂತಹ ವ್ಯಕ್ತಿ ಆಗಬೇಕಿಲ್ಲ, ರಾಯಲ್. 363 00:41:07,541 --> 00:41:09,166 ನೀನು ಭಿನ್ನವಾಗಿರಬಹುದು. 364 00:41:11,083 --> 00:41:15,916 ನನಗೆ ಸಹಾಯ ಮಾಡುವುದರಿಂದ ಶುರು ಮಾಡು, ದಯವಿಟ್ಟು. 365 00:41:15,916 --> 00:41:17,750 ನೀನಿದ್ದಲ್ಲಿಯೇ ಇರು, ಹುಡುಗ. 366 00:41:22,208 --> 00:41:24,041 ನೀನು ಸುಮ್ಮನಿರು, ನಾಯಿ. 367 00:41:28,541 --> 00:41:31,875 ಮಾರ್ಥಾ, ರೋಸ್, ನಿಮ್ಮನ್ನು ಪ್ರೀತಿಸುವೆ. ನಾನು ಪ್ರಯತ್ನಿಸಿದೆ. 368 00:41:31,875 --> 00:41:34,458 ನಿನ್ನ ಇಂಜನ್ ದೇವತೆಗಳು ಈಗ ನಿನ್ನ ಕಾಪಾಡಲ್ಲ. 369 00:41:36,625 --> 00:41:39,000 ಇದನ್ನು ನಿನ್ನ ಮಗನ ಮುಂದೆ ಮಾಡುವೆಯಾ? 370 00:41:39,000 --> 00:41:40,333 ಇಲ್ಲ. 371 00:41:40,958 --> 00:41:43,208 ಅವನಿಂದಲೇ ಮಾಡಿಸುವೆ. 372 00:41:44,916 --> 00:41:48,916 ಮಾಡು, ರಾಯಲ್. ನಾನು ನಿನಗೆ ಹೇಳಿಕೊಟ್ಟ ಹಾಗೆ ಮಾಡು. 373 00:41:48,916 --> 00:41:50,541 ನಿನ್ನಿಷ್ಟ. 374 00:41:50,541 --> 00:41:54,000 ತಲೆಗೆ ಗುಂಡಾ ಅಥವಾ ಎದೆಯ ಮೂಲಕವಾ? 375 00:41:57,458 --> 00:41:59,708 ನೀನು ತಯಾರಾದ ತಕ್ಷಣ, ಮಗನೇ. 376 00:41:59,708 --> 00:42:01,375 ಸಮ್ನರ್. 377 00:42:02,708 --> 00:42:04,166 ಇದನ್ನು ತಿಳಿದುಕೋ. 378 00:42:05,166 --> 00:42:09,000 ನೀನು ಸತ್ತ ದಿನವೇ ನಿನ್ನ ಕುಟುಂಬಕ್ಕೆ ಸಂತೋಷವಾಗುತ್ತದೆ. 379 00:42:10,333 --> 00:42:12,666 ಯಾಕೆಂದರೆ ಅವರಿಗೆ ಕೊನೆಗೂ ನಿನ್ನಿಂದ ಬಿಡುಗಡೆ. 380 00:42:13,625 --> 00:42:17,291 ನನಗೆ ಅದೃಷ್ಟವಿದ್ದರೆ, ನನ್ನ ಹೆಂಡತಿ ಹೆರಿಗೆಯ ಸಮಯದಲ್ಲಿ 381 00:42:17,291 --> 00:42:19,291 ಸತ್ತಾಗ ನಾನು ಅವರಿಂದ ಮುಕ್ತನಾಗುವೆ. 382 00:42:19,291 --> 00:42:21,083 ನರಕಕ್ಕೆ ಹೋಗು! 383 00:42:21,083 --> 00:42:22,625 ಮೊದಲು ನೀನು. 384 00:42:23,958 --> 00:42:26,083 ಯಾಕೋ ಕಾಯುತ್ತಿದ್ದೀಯಾ, ಹುಡುಗ? ಹೊಡಿ! 385 00:42:45,833 --> 00:42:47,291 ರಾಯಲ್! 386 00:42:48,625 --> 00:42:49,791 ರಾಯಲ್! 387 00:42:53,583 --> 00:42:55,583 ರಾಯಲ್! ಇರು! 388 00:43:32,625 --> 00:43:34,291 ಮತ್ತೆ ತುಂಬಿಸಿ! ಬೇಗ! 389 00:43:47,416 --> 00:43:49,000 ಏನು ನಡೆಯುತ್ತಿದೆ, ಫಾರ್ಬರ್? 390 00:44:06,666 --> 00:44:08,041 ರಾಯಲ್! 391 00:44:08,875 --> 00:44:11,208 ರಾಯಲ್, ಇರು! 392 00:44:18,833 --> 00:44:20,750 ರಾಯಲ್, ಇರು! 393 00:45:42,000 --> 00:45:43,916 ರಾಯಲ್! 394 00:46:10,000 --> 00:46:11,416 ರಾಯಲ್? 395 00:46:18,833 --> 00:46:20,416 ಜಾಯ್? 396 00:48:30,083 --> 00:48:32,083 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 397 00:48:32,083 --> 00:48:34,166 ಸೃಜನಶೀಲ ಮೇಲ್ವಿಚಾರಕರು ಮಧುರಾ ಸುಬ್ರಹ್ಮಣ್ಯ