1 00:00:06,916 --> 00:00:08,750 ನಿನಗೆ ಏನಾದರೂ ಬೇಕೇ? ನೀರು? 2 00:00:11,291 --> 00:00:14,082 ಕೇಟ್ಲಿನ್ ನಿನಗೆ ಮೈಕ್ರೋಫೋನ್ ಕೊಡುತ್ತಾಳೆ, ನೀನು ಸ್ವಲ್ಪ… 3 00:00:14,083 --> 00:00:15,708 ಇದನ್ನು ನಿನ್ನ ಇದರ ಒಳಗಿಂದ ಎಳೆದುಕೋ… 4 00:00:17,833 --> 00:00:18,916 ಇದು ಕಷ್ಟವೆಂದು ನನಗೆ ಗೊತ್ತು. 5 00:00:20,208 --> 00:00:21,582 ದಯವಿಟ್ಟು ಕುಳಿತುಕೋ, 6 00:00:21,583 --> 00:00:23,666 ಖಂಡಿತ, ಆದಷ್ಟು ಬೇಗ ನಿನ್ನನ್ನು ಇಲ್ಲಿಂದ ಕಳುಹಿಸುತ್ತೇವೆ. 7 00:00:27,625 --> 00:00:31,916 ಚೇಂಬರ್ಲಿನ್‌ನಲ್ಲಿ ನಡೆದ ಘಟನೆಯ ಬಗ್ಗೆ ಯಾರಿಗೂ ಅರ್ಥವಾಗದ ಒಂದು ವಿಷಯವಿದೆ. 8 00:00:33,291 --> 00:00:34,541 ಪೊಲೀಸರಿಗೆ ಅರ್ಥವಾಗುತ್ತಿಲ್ಲ, 9 00:00:35,916 --> 00:00:38,332 ಪತ್ರಕರ್ತರಿಗೆ, ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ, 10 00:00:38,333 --> 00:00:39,916 ಮತ್ತು ನಿಮಗೂ ಅದು ಅರ್ಥವಾಗುವುದಿಲ್ಲ. 11 00:00:47,208 --> 00:00:48,708 ನಿನ್ನ ಅಭಿಪ್ರಾಯ ಸುಳ್ಳುಮಾಡುವೆನೇನೋ, ಸೂ. 12 00:00:50,625 --> 00:00:52,582 ಪೊಲೀಸರು, ಪತ್ರಕರ್ತರು ಮತ್ತು ವಿಜ್ಞಾನಿಗಳು, 13 00:00:52,583 --> 00:00:55,082 ಏನು ನಡೆಯಿತೆಂದು ನಿನ್ನ ಅನಿಸಿಕೆ ಕೇಳಲು ಇಷ್ಟಪಡುತ್ತಾರೆ, 14 00:00:55,083 --> 00:00:56,833 ಆಮೇಲೆ ಆ ಅನಿಸಿಕೆ ಯಾಕೆ ತಪ್ಪೆಂದು ಹೇಳುತ್ತಾರೆ. 15 00:00:58,625 --> 00:00:59,666 ನಾವು ಹಾಗಲ್ಲ. 16 00:01:02,291 --> 00:01:04,083 ನನಗೆ ಬರೀ ವಿಷಯ ಅರ್ಥಮಾಡಿಕೊಳ್ಳುವುದಷ್ಟೇ ಬೇಕು. 17 00:01:06,958 --> 00:01:09,291 ಹಾಗಾಗಿ ನನಗೆ ಹೇಳಿ ನೋಡು, ದಯವಿಟ್ಟು. 18 00:01:10,208 --> 00:01:11,500 ಅದು ಏನು, ಸೂ? 19 00:01:12,833 --> 00:01:15,250 ಯಾರಿಗೂ ಅರ್ಥವಾಗದ ಆ ಒಂದು ವಿಷಯ ಯಾವುದು? 20 00:01:21,083 --> 00:01:22,500 ಇನ್ನೂರು ಸಾವುಗಳು. 21 00:01:25,041 --> 00:01:27,333 ಇಡೀ ಊರಿನ ವಿನಾಶ. 22 00:01:29,125 --> 00:01:32,875 ಮರೆಯುವುದು ಬಹಳ ಸುಲಭ. 23 00:01:34,500 --> 00:01:35,666 ನಾವು ಮಕ್ಕಳಾಗಿದ್ದೆವು. 24 00:01:38,125 --> 00:01:39,208 ನಾವು ಮಕ್ಕಳಾಗಿದ್ದೆವು. 25 00:01:41,750 --> 00:01:44,750 ನಾವು ಮಕ್ಕಳಾಗಿದ್ದು, ಆದಷ್ಟು ಉತ್ತಮವಾದುದನ್ನು ಮಾಡಲು ನೋಡುತ್ತಿದ್ದೆವು. 26 00:01:53,458 --> 00:01:57,291 ಸೂ, ಕೇರಿ ವೈಟ್ ಬಗ್ಗೆ ನೀನು ನನಗೆ ಹೆಚ್ಚು ಹೇಳಿದರೆ, ನನಗೆ ಬಹಳ ಇಷ್ಟವಾಗುತ್ತದೆ. 27 00:02:00,250 --> 00:02:01,500 ನಿಮಗೆ ಏನು ತಿಳಿಯಬೇಕು? 28 00:02:03,250 --> 00:02:04,583 ಪ್ರತಿಯೊಂದು ವಿಷಯ. 29 00:02:06,500 --> 00:02:09,165 ಅವಳ ಶಾಲೆಯ ಮೊದಲ ದಿನದಂದು ಸಕ್ರಿಯ ಶೂಟರ್ ತಾಲೀಮು ನಡೆದಿತ್ತು 30 00:02:09,166 --> 00:02:11,540 ಎಂಬುದು ನನಗೆ ಅರ್ಥವಾಗಿದೆ. ನಿಜ ತಾನೇ? 31 00:02:11,541 --> 00:02:12,874 ಆ ತಾಲೀಮು ನಿನಗೆ ನೆನಪಿದೆಯೇ? 32 00:02:12,875 --> 00:02:14,125 ಖಂಡಿತ, ನೆನಪಿದೆ ಅನಿಸುತ್ತದೆ. 33 00:02:14,958 --> 00:02:18,291 ನೀನು ದಿನಚರಿಯಲ್ಲಿ ಬರೆಯುತ್ತಿರುವಂತೆ, ಅದರ ಬಗ್ಗೆ ನನಗೆ ಹೇಳಿದರೆ ನನಗೆ ಖುಷಿಯಾಗುತ್ತದೆ. 34 00:02:22,250 --> 00:02:24,875 ಕ್ರಿಸ್ ಮತ್ತು ನಾನು ಎಂದಿನಂತೆ ಕಾರ್ ಓಡಿಸಿಕೊಂಡು ಬಂದೆವು, 35 00:02:26,083 --> 00:02:28,833 ಡ್ಯೂಕ್ ಇನ್ನೂ ಫಲಿತಾಂಶ ಪ್ರಕಟಿಸದ ಕಾರಣ ಸ್ವಲ್ಪ ಆತಂಕಗೊಂಡಿದ್ದೆವು. 36 00:02:31,083 --> 00:02:33,375 ಆಗ ಮೆಟಲ್ ಡಿಟೆಕ್ಟರ್ ಬಳಿ ನಾವು ಈ ಹುಡುಗಿಯನ್ನು ನೋಡಿದೆವು. 37 00:02:35,291 --> 00:02:36,875 ಮತ್ತು ಈ ಹುಡುಗಿ… 38 00:02:38,250 --> 00:02:39,333 ನನ್ನನ್ನು ನೋಡಿದಳು, 39 00:02:40,750 --> 00:02:41,750 ಮತ್ತು ನಾನು ಕೇವಲ… 40 00:02:44,166 --> 00:02:46,291 ನಾನು ಒಂದು ಮಗುವನ್ನು ನೋಡುತ್ತಿರುವಂತೆ ಎಂದು ಭಾಸವಾಯಿತು, 41 00:02:48,333 --> 00:02:49,541 ನನ್ನ ತಂಗಿಯ ಹಾಗೆ. 42 00:02:53,208 --> 00:02:54,791 ಮತ್ತೆ ಅವಳನ್ನು ಹೋಂರೂಮಿನಲ್ಲಿ ನೋಡಿದೆ. 43 00:02:58,250 --> 00:02:59,665 ಅವಳು ಇಕ್ಕಟ್ಟಿಗೆ ಸಿಲುಕಿದ್ದಳು. 44 00:02:59,666 --> 00:03:01,375 ನನಗೆ ತಕ್ಷಣವೇ ಅರ್ಥವಾಯಿತು, ಏಕೆಂದರೆ… 45 00:03:03,083 --> 00:03:04,416 ಏಕೆಂದರೆ ಅವಳು ಒಳ್ಳೆಯವಳಾಗಿದ್ದಳು. 46 00:03:12,583 --> 00:03:13,958 ಅದು ನಾಟಕದ ಒಳ್ಳೆಯತನವಲ್ಲ, 47 00:03:16,166 --> 00:03:17,125 ಬೂಟಾಟಿಕೆಗಾಗಿಯಂತೂ… 48 00:03:18,458 --> 00:03:19,875 ಅಲ್ಲವೇ ಅಲ್ಲ. 49 00:03:23,625 --> 00:03:24,916 ಅದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. 50 00:03:28,250 --> 00:03:29,916 ಅವಳು ಬರೀ… 51 00:03:36,125 --> 00:03:37,208 ಒಳ್ಳೆಯವಳಾಗಿದ್ದಳು ಅಷ್ಟೇ. 52 00:03:41,208 --> 00:03:42,958 ಅದು ಯಾಕೆ ಅಷ್ಟೊಂದು ಅಪರೂಪ ಅನಿಸುತ್ತಿತ್ತು? 53 00:03:47,375 --> 00:03:48,958 ನಮ್ಮ ಬುದ್ಧಿಗೆ ಬೆಂಕಿ ಬಿದ್ದಿದೆಯಾ? 54 00:03:50,500 --> 00:03:54,165 ಕೇರಿ 55 00:03:54,166 --> 00:03:56,540 ಹಾಗಾದರೆ ನೀನು ಪ್ರಾಮ್‍ಗೆ ಹೋಗಿರಲಿಲ್ಲ, 56 00:03:56,541 --> 00:03:58,207 ನೀನು ನಿನ್ನ ತಂಗಿಯರ ಜೊತೆ ಮನೆಯಲ್ಲಿದ್ದೆ, 57 00:03:58,208 --> 00:04:00,332 ಆಮೇಲೆ ನೀನು ಆನ್‌ಲೈನ್ ಪೋಸ್ಟ್‌ನಲ್ಲಿ ಒಂದು ಕಾರ್ ನೋಡಿದೆ. 58 00:04:00,333 --> 00:04:02,458 - ಬಿಲ್ಲಿ ನೋಲನ್‍ನ ಕಾರ್. - ಹಾಗಾಗಿ ನೀನು ಶಾಲೆಗೆ ಓಡಿಬಂದೆ. 59 00:04:03,458 --> 00:04:06,415 ಕ್ರಿಸ್-ಬಿಲ್ಲಿ ಏನೋ ಮಾಡುತ್ತಿರುವುದು ತಿಳಿದಿತ್ತು, ಆದರೆ ಏನೆಂದು ತಿಳಿದಿರಲಿಲ್ಲ. 60 00:04:06,416 --> 00:04:08,957 ಮತ್ತು ನೀನು 9:25ಕ್ಕೆ ತಲುಪಿದೆ. 61 00:04:08,958 --> 00:04:10,707 ನನಗೆ ನಿಖರವಾದ ಸಮಯ ಗೊತ್ತಿಲ್ಲ. 62 00:04:10,708 --> 00:04:13,125 ನಮಗೆ ಗೊತ್ತು. ಆಗ 9:25 ಆಗಿತ್ತು ಮತ್ತು ನೀನು ನೋಡಿದ್ದು… 63 00:04:14,125 --> 00:04:15,208 ನಾನು ನೋಡಿದ್ದು… 64 00:04:16,666 --> 00:04:18,041 ಕೇರಿ ಮೇಲೆ ಆ ರಕ್ತ ಸುರಿದದ್ದನ್ನು. 65 00:04:18,791 --> 00:04:20,124 ನಿನಗೊಂದು ಫೋಟೊ ತೋರಿಸಲಿದ್ದೇನೆ, 66 00:04:20,125 --> 00:04:24,040 ಮತ್ತು ವಿದ್ಯುತ್ ಕಡಿತದ ಮುನ್ನ ನಮಗೆ ಸಿಕ್ಕಿರುವ ಕೊನೆಯ ಫೋಟೊಗಳಲ್ಲಿ ಇದೂ ಒಂದು. 67 00:04:24,041 --> 00:04:26,124 ಇದು ನೇರ ಪ್ರಸಾರದಿಂದ ತೆಗೆದಕೊಂಡ ಫೋಟೊ. 68 00:04:26,125 --> 00:04:28,790 ವಿಕ್ಟೋರಿಯಾ ಗಿಬ್ಸ್ ಕಿರೀಟಧಾರಣೆಯ ನೇರ ಪ್ರಸಾರ ಮಾಡುತ್ತಿದ್ದಳು. 69 00:04:28,791 --> 00:04:30,374 ಆ ವಿಡಿಯೋ ವಿಕಿಯದ್ದಾದರೆ, ಅವಳನ್ನೇ ಕೇಳಿ. 70 00:04:30,375 --> 00:04:32,832 ವಿಕಿ ಸತ್ತಿದ್ದಾಳೆ. ಮೇಲ್ಛಾವಣಿಯ ಕಟ್ಟಿಗೆಗಳ ಮಧ್ಯೆ ಶವ ಸಿಕ್ಕಿದೆ. 71 00:04:32,833 --> 00:04:35,666 ನಾನು ಈ ಮಹಿಳೆಯ ಬಗ್ಗೆ ಕೇಳಬಯಸುತ್ತೇನೆ. 72 00:04:36,291 --> 00:04:37,541 ಇವಳನ್ನು ಮುಂಚೆ ನೋಡಿದ್ದೀಯಾ? 73 00:04:38,291 --> 00:04:41,582 ಪ್ರಾಮ್‍ಗಿಂತ ಮುಂಚೆ ಈಕೆ ಎಂದಾದರೂ ಶಾಲೆ ಹತ್ತಿರ ಕಂಡಿದ್ದಳೇ? 74 00:04:41,583 --> 00:04:42,500 ನನಗೆ… 75 00:04:43,083 --> 00:04:45,874 ನನಗೆ ಈಕೆ ಯಾರೆಂದು ಗೊತ್ತಿಲ್ಲ, ಕ್ಷಮಿಸಿ. 76 00:04:45,875 --> 00:04:48,207 ನೀನು ಒಳಗೆ ಹೋದಾಗ ನಿನಗೆ ಹೇಗನಿಸಿತು? 77 00:04:48,208 --> 00:04:50,249 - ನಿನಗೆ ಯಾವುದೇ ರೀತಿಯ ಅನುಭವ ಭಾಸವಾಯಿತೇ… - ಆಕೆ ಯಾರು? 78 00:04:50,250 --> 00:04:52,082 …ಏನಾದರೂ ಮೈ ಜುಮ್ಮೆನಿಸಿದಂಥದ್ದು? 79 00:04:52,083 --> 00:04:56,125 ಅಥವಾ ನಿನ್ನ ಕುತ್ತಿಗೆ ಅಥವಾ ಕೈಗಳ ಮೇಲಿನ ಕೂದಲು ನಿಮಿರಿಕೊಂಡವೇ? 80 00:04:56,708 --> 00:04:59,415 ವಿಮಾನದಲ್ಲಿರುವಾಗ ಆದಂತೆ ನಿನ್ನ ಕಿವಿಗಳು ಮುಚ್ಚಿಕೊಂಡವೇ, 81 00:04:59,416 --> 00:05:01,999 ಅಥವಾ ಓಝೋನ್‌ನಂಥ ವಿಚಿತ್ರ ವಾಸನೆಗಳಿದ್ದವೇ? 82 00:05:02,000 --> 00:05:04,374 ಅಥವಾ ನಿನ್ನ ನಾಲಿಗೆಯಲ್ಲಿ ಲೋಹದ ರುಚಿ ಅನುಭವವಾಯಿತೇ? 83 00:05:04,375 --> 00:05:05,416 ನನಗೆ ಖಚಿತವಿಲ್ಲ. 84 00:05:11,500 --> 00:05:12,541 ಜ್ಞಾಪಕ ಬರುತ್ತದೆಯೇ ನೋಡು. 85 00:05:39,583 --> 00:05:40,666 ಛೀ! 86 00:05:48,958 --> 00:05:50,041 ಏನು? 87 00:06:38,375 --> 00:06:39,625 ನಿನ್ನ ಫೋನ್ ಸ್ಫೋಟಗೊಂಡಿತು ಎಂದೆಯಾ? 88 00:06:40,416 --> 00:06:43,207 ಹಾಂ. ನನ್ನ ಕೈಯಲ್ಲೇ. 89 00:06:43,208 --> 00:06:47,250 ಜಿಮ್ನಾಷಿಯಂನಲ್ಲಿನ ಎಲ್ಲಾ ದೂರವಾಣಿ ಚಟುವಟಿಕೆಯು ಸರಿಯಾಗಿ 9:27ಕ್ಕೆ ನಿಂತುಹೋದವು. 90 00:06:48,541 --> 00:06:53,332 ಯಾವುದೇ ನೇರಪ್ರಸಾರ, ಡೇಟಾ ಇಲ್ಲ, ನಗರದ ದೂರವಾಣಿ ಟವರ್‌ಗೆ ಸಂಪರ್ಕ ಹೋಗಿಲ್ಲ. 91 00:06:53,333 --> 00:06:57,124 ಪೊಲೀಸ್ ವರದಿಗಳ ಪ್ರಕಾರ ಎಲ್ಲಾ ಕೈಗಡಿಯಾರಗಳೂ ನಿಂತುಹೋದವು. 92 00:06:57,125 --> 00:06:58,500 ಯಾಂತ್ರಿಕ ಗಡಿಯಾರಗಳೂ ಸಹ. 93 00:07:00,875 --> 00:07:01,832 ಸರಿ. 94 00:07:01,833 --> 00:07:03,665 ನಿನಗೆ ಬೇರೇನಾದರೂ ಅನುಭವಕ್ಕೆ ಬಂದಿತೇ? 95 00:07:03,666 --> 00:07:05,582 ಒತ್ತಡ ಅಥವಾ ತಾಪಮಾನದಲ್ಲಿ ಬದಲಾವಣೆ, 96 00:07:05,583 --> 00:07:08,457 ಅಥವಾ ಕೇರಿ ವೈಟ್ ತನ್ನ ಕೈಗಳಿಂದ ಯಾವುದಾದರೂ ನಿರ್ದಿಷ್ಟ ಸನ್ನೆ ಮಾಡಿದಳೇ? 97 00:07:08,458 --> 00:07:10,999 ನನ್ನ ಮುಖಕ್ಕೆ ಫೋನ್ ಸ್ಫೋಟಗೊಂಡಿದ್ದಷ್ಟೇ ನನ್ನ ಅನುಭವಕ್ಕೆ ಬಂದದ್ದು. 98 00:07:11,000 --> 00:07:12,832 ನನ್ನ ಕಣ್ಣಿಗೆ ಗಾಜಿನ ಚೂರು ಬಿದ್ದಿತ್ತು, 99 00:07:12,833 --> 00:07:14,832 ಹಾಗಾಗಿ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದೆ. 100 00:07:14,833 --> 00:07:15,958 ಕೇರಿ ಏನು ಮಾಡುತ್ತಿದ್ದಳು? 101 00:07:16,833 --> 00:07:17,750 ನನಗೆ ಗೊತ್ತಿಲ್ಲ. 102 00:07:18,916 --> 00:07:22,083 ನನಗೆ ಅದರಲ್ಲಿ… ಬಹಳಷ್ಟು ನೆನಪಿಲ್ಲ. 103 00:07:24,500 --> 00:07:25,708 ಕಿವಿಯಿಂದ ರಕ್ತ ಬರುತ್ತಿತ್ತು. 104 00:07:27,416 --> 00:07:29,000 ಜನರು ಕಿರುಚುತ್ತಿದ್ದರು. 105 00:07:30,125 --> 00:07:32,375 ಅದರ ನಂತರ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ಖಂಡಿತ ಗೊತ್ತು. 106 00:07:33,916 --> 00:07:36,833 ಆ ನಡೆದಾರಿ, ಅಥವಾ ಅದೇನು ಅಂತಾರೋ ಅದು, 107 00:07:37,958 --> 00:07:40,791 ಅದರ ನಂತರ ತಕ್ಷಣವೇ ಕೆಳಗೆ ಬಿತ್ತು, ಆಮೇಲೆ ಬೆಂಕಿ ಹೊತ್ತಿಕೊಂಡಿತು. 108 00:07:44,458 --> 00:07:46,541 ಆಗ ಅದು ಗುಂಡೇಟಿನಂತೆ ಕೇಳಿಸಿದ್ದು ನನಗೆ ನೆನಪಿದೆ. 109 00:07:48,291 --> 00:07:49,208 ಗುಂಡೇಟುಗಳು. 110 00:07:50,583 --> 00:07:51,500 ಹೌದು. 111 00:07:52,750 --> 00:07:54,290 ಕೆಲ ಮಕ್ಕಳು ಗುಂಡಿನ ಸದ್ದು ಅಂತ ಕೂಗಿದರು, 112 00:07:54,291 --> 00:07:58,041 ಮತ್ತು ಯಾರೋ ಹುಚ್ಚ ಪ್ರಾಮ್‍ನಲ್ಲಿ ಗುಂಡು ಹಾರಿಸುತ್ತಿದ್ದಾನೆ ಎಂದುಕೊಂಡೆ. 113 00:08:01,083 --> 00:08:02,500 ಬೇರೆ ಏನು ನೆನಪಿದೆ ನಿನಗೆ? 114 00:08:12,375 --> 00:08:13,916 ಅದೊಂದು ಭಯಾನಕ ದುರ್ಘಟನೆ, ಮೇಡಂ. 115 00:08:15,416 --> 00:08:16,666 ಅದೇ ನನಗೆ ನೆನಪಿರುವುದು. 116 00:08:44,750 --> 00:08:45,750 ಟಾಮಿ! 117 00:09:02,041 --> 00:09:03,250 ನಕ್ಷತ್ರಗಳು. 118 00:09:21,958 --> 00:09:22,958 ಹೇ. 119 00:09:26,333 --> 00:09:27,333 ನಾನು ಸಹಾಯ ಮಾಡುತ್ತೇನೆ. 120 00:09:30,708 --> 00:09:32,208 ಇದನ್ನು ನಾನು ನಿಭಾಯಿಸುತ್ತೇನೆ, ಸರಿನಾ? 121 00:10:07,041 --> 00:10:08,916 ಇಲ್ಲ. ಇಲ್ಲ, ಇಲ್ಲ, ಇಲ್ಲ, ಇಲ್ಲ! 122 00:10:15,250 --> 00:10:16,250 ಇಲ್ಲಿ ನಿಲ್ಲು. 123 00:10:17,250 --> 00:10:18,291 ಸುತ್ತಲೂ ನೋಡು. 124 00:11:01,458 --> 00:11:02,583 ನೀನು ಮುಂಚೆ ಹೇಳಿದ್ದೆ, 125 00:11:04,000 --> 00:11:08,500 ಇಲ್ಲಿ, ಕೇರಿಯ ಹಿಂದೆ ನೀನು ಏನನ್ನೋ ನೋಡಿದೆ ಎಂದು. 126 00:11:11,500 --> 00:11:12,957 ಅದು ನಿಜ. 127 00:11:12,958 --> 00:11:16,791 ನಿನ್ನ ಹೇಳಿಕೆಯಲ್ಲಿ ನೀನು ತಿಳಿಸಿದ ವಿಚಾರದ ಬಗ್ಗೆ ನೀನು ಸ್ಪಷ್ಟನೆ ಕೊಡಬೇಕು. 128 00:11:17,416 --> 00:11:18,583 ಒಂದು ನೆರಳಿನ ಬಗ್ಗೆ. 129 00:11:20,291 --> 00:11:21,291 ಆ ನೆರಳೇ? 130 00:11:22,583 --> 00:11:23,750 ಹೌದು, ಆ ನೆರಳು. 131 00:11:26,958 --> 00:11:28,458 ಆ ನೆರಳು ಏನು ಮಾಡಿತು? 132 00:11:38,125 --> 00:11:39,666 ಆ ನೆರಳು ಸ್ಫೋಟವಾಯಿತು. 133 00:11:50,916 --> 00:11:54,208 {\an8}ಪ್ರಾಮ್ 134 00:12:07,833 --> 00:12:08,666 ಅಯ್ಯೋ! 135 00:12:41,958 --> 00:12:43,541 ನಮ್ಮನ್ನ ಕೂಡಿಹಾಕಿದ್ದಾರೆ. ಬಂಧಿಯಾಗಿದ್ದೇವೆ. 136 00:12:47,875 --> 00:12:49,041 ನಮ್ಮ ಮೇಲೆ ಗುಂಡಿನ ದಾಳಿ! 137 00:13:15,166 --> 00:13:16,583 ಕೇರಿ. ಕೇರಿ! 138 00:14:53,708 --> 00:14:55,916 ಎಲ್ಲರೂ ಕೇರಿ ಬಗ್ಗೆಯೇ ಕೇಳುತ್ತಾರೆ. 139 00:14:57,333 --> 00:15:00,125 ಆದರೆ ಯಾರೂ ಕೇಳುತ್ತಿಲ್ಲದ ಪ್ರಶ್ನೆ ಯಾವುದೆಂದರೆ, ಅಲ್ಲಿದ್ದ ಇತರ ಜನರ ಬಗ್ಗೆ. 140 00:15:00,875 --> 00:15:02,707 ಅಲ್ಲಿದ್ದ ಅಪರಿಚಿತರ ಬಗ್ಗೆ. 141 00:15:02,708 --> 00:15:06,333 ನನ್ನ ಜೀವಮಾನದಲ್ಲೇ ನಾನು ನೋಡಿರದ ಜನರ ಬಗ್ಗೆ. 142 00:15:08,041 --> 00:15:10,375 ಮತ್ತು ನಂಬಲು ಎಷ್ಟು ಕಷ್ಟವಾದರೂ, 143 00:15:11,250 --> 00:15:13,333 ಮತ್ತು ಅರ್ಥಮಾಡಿಕೊಳ್ಳಲು ಎಷ್ಟು ಕಷ್ಟವಾದರೂ, 144 00:15:14,541 --> 00:15:17,375 ಯಾರೂ ಸರಿಯಾದ ಪ್ರಶ್ನೆಗಳನ್ನು ಕೇಳುತ್ತಿಲ್ಲ. 145 00:15:19,458 --> 00:15:21,083 ಏಕೆಂದರೆ ಅದು ಕೇವಲ ಕೇರಿ ಆಗಿರಲಿಲ್ಲ. 146 00:15:22,583 --> 00:15:24,000 ಅದೇ ವಿಷಯ. 147 00:15:25,875 --> 00:15:29,750 ಅದು ಕೇವಲ ಕೇರಿ ಆಗಿರಲಿಲ್ಲ. 148 00:15:37,875 --> 00:15:40,166 - ನಿನಗೆ ಖಚಿತವೇ? - ಹೌದು. 149 00:15:41,625 --> 00:15:44,333 ಆದರೂ, ನಿನಗೆ ಖಚಿತವಿಲ್ಲ. ಹೌದಲ್ಲವೇ? 150 00:15:46,166 --> 00:15:48,208 ನೀನು ನಿಜವಾಗಲೂ ಯೋಚಿಸಿ ನೋಡಿದರೆ, 151 00:15:49,333 --> 00:15:52,166 ಅಲ್ಲಿ ನೀನು ಬೇರೆಯವರನ್ನು ನೋಡಿರುವ ಬಗ್ಗೆ ನಿನಗೆ ಖಚಿತವೇ ಇಲ್ಲ. 152 00:15:54,125 --> 00:15:57,250 ನಿನಗೆ ಖಚಿತವಿಲ್ಲ, ಹೌದಲ್ಲವೇ? 153 00:16:29,333 --> 00:16:30,375 ಏನಿದು ದರಿದ್ರ? 154 00:16:31,458 --> 00:16:33,583 - ಎಂಥಾ ಕರ್ಮ ಅದು? - ಓಹ್, ದೇವರೇ. 155 00:16:35,750 --> 00:16:36,791 ಓಹ್, ದೇವರೇ. 156 00:16:38,000 --> 00:16:40,375 ಎಂಥಾ ಕರ್ಮನಪ್ಪಾ ಅದು? 157 00:16:50,166 --> 00:16:51,250 ಅದನ್ನು ಅವಳೇ ಮಾಡಿದ್ದು. 158 00:16:52,083 --> 00:16:54,458 ಬಾಯಿ ಮುಚ್ಚು. ಹುಚ್ಚಿಯಂತೆ ಆಡಬೇಡ. 159 00:16:56,166 --> 00:16:57,583 ಬಿಲ್ಲಿ, ನಾವೇನು ಮಾಡಿದೆವು? 160 00:17:01,625 --> 00:17:03,125 ಅವರಿಗೆ ಹಾಗೆ ಆಗಲೇಬೇಕಾಗಿತ್ತು. 161 00:17:04,750 --> 00:17:05,791 ಎಲ್ಲರಿಗೂ. 162 00:17:07,041 --> 00:17:09,458 ಬಿಲ್ಲಿ. ಬಿಲ್ಲಿ. 163 00:17:15,541 --> 00:17:17,458 ವಿಚಿತ್ರ ಮುಂಡೇದು! 164 00:17:25,208 --> 00:17:27,083 ಸತ್ತುಹೋಗು! 165 00:17:29,166 --> 00:17:30,415 ನೀನು ಸಾಯುತ್ತೀಯ. 166 00:17:30,416 --> 00:17:31,625 ತಾಳು. ತಾಳು! 167 00:18:22,250 --> 00:18:23,416 ಒಳ್ಳೆಯದಾಯಿತು. 168 00:18:26,375 --> 00:18:27,625 ಇದೆಲ್ಲಾ ನಿಮ್ಮ ಕರ್ಮ. 169 00:18:31,750 --> 00:18:32,750 ಅಯ್ಯೋ, ದೇವರೇ-- 170 00:18:36,750 --> 00:18:38,708 ದೇವರೇ. ಸ್ವಲ್ಪ ಬುದ್ಧಿ ಕಲಿ. 171 00:19:04,791 --> 00:19:05,875 ನನ್ನನ್ನು ಕ್ಷಮಿ-- 172 00:19:21,166 --> 00:19:24,791 ಹೇ, ಹೇ, ಹೇ, ನನ್ನನ್ನು ನೋಡು, ನನ್ನನ್ನು ನೋಡು. 173 00:19:26,083 --> 00:19:28,707 ನೀನು ಯಾವ ತಪ್ಪೂ ಮಾಡಿಲ್ಲ, ಸರಿನಾ? 174 00:19:28,708 --> 00:19:29,708 ಏನೂ ಮಾಡಿಲ್ಲ. 175 00:19:32,541 --> 00:19:34,291 ಕೇಳಿಸಿಕೋ. ನಿನಗದು ಕೇಳಿಸುತ್ತಿದೆಯೇ? 176 00:19:39,041 --> 00:19:43,082 ಬರೀ ಬದುಕಿರುವುದಷ್ಟೇ ನಿನ್ನ ಆಸೆಯಾಗಿತ್ತು. 177 00:19:43,083 --> 00:19:48,040 ಈ ಇಡೀ ಜಗತ್ತನ್ನು ನೀನು ಯಾವಾಗ ಆಳಲಿದ್ದೀಯಾ? 178 00:19:48,041 --> 00:19:49,916 ಇದನ್ನು ಹೇಳು. "ನಾನು ಬದುಕಿದ್ದೇನೆ." 179 00:19:51,333 --> 00:19:52,833 ನಾನು ಬದುಕಿದ್ದೇನೆ. 180 00:19:53,541 --> 00:19:54,416 ಮೇಲೇಳು. 181 00:19:55,416 --> 00:19:57,332 ಹೇಳು, "ನೀವು ಹಾಳಾಗಿಹೋಗಿ, ನಾನು ಬದುಕಿದ್ದೇನೆ!" 182 00:19:57,333 --> 00:20:00,665 ನಿನ್ನ ಕಣ್ಣುಗಳಲ್ಲಿ ಆ ಹುಚ್ಚುತನವಿದ್ದದ್ದು ನನಗೆ ನೆನಪಿದೆ 183 00:20:00,666 --> 00:20:03,624 ನೀವು ಹಾಳಾಗಿಹೋಗಿ! ನಾನು ಬದುಕಿದ್ದೇನೆ. 184 00:20:03,625 --> 00:20:08,665 ಈ ರಾತ್ರಿ ಅದು ಹೊರಬರಲಿ 185 00:20:08,666 --> 00:20:10,082 ಈಗ, ನನ್ನ ಜೊತೆ ನೃತ್ಯ ಮಾಡು. 186 00:20:10,083 --> 00:20:16,165 ಈ ರಾತ್ರಿ ಅದು ಹೊರಬರಲಿ 187 00:20:16,166 --> 00:20:17,291 ಹೌದು, ಹೌದು 188 00:20:17,958 --> 00:20:22,291 ನೀನು ನಡೆಯುವ ರೀತಿ, ಮಾತಾಡುವ ರೀತಿ ಅವರಿಗೆ ಅರ್ಥವಾಗಬೇಕಿಲ್ಲ 189 00:20:24,208 --> 00:20:25,332 ಯೂವನ್ ಹೈ ಸ್ಕೂಲ್ 190 00:20:25,333 --> 00:20:27,540 ಓಹ್, ನಿನ್ನ ಕೇಶವಿನ್ಯಾಸ ಬದಲಾಯಿಸು ಬಟ್ಟೆಗಳನ್ನು ಬದಲಾಯಿಸು 191 00:20:27,541 --> 00:20:29,500 ಆಗ ಎಲ್ಲರೂ ಭಯಪಡಲು ಶುರುಮಾಡುವರು 192 00:20:31,583 --> 00:20:36,874 ಆದರೆ ಅದು ನಿನ್ನ ಕಣ್ಣಿಗೆ ರಾಚುತ್ತಿದೆ ಪ್ರತಿ ರಾತ್ರಿ 193 00:20:36,875 --> 00:20:40,915 ನೀನು ಎಲ್ಲದಕ್ಕೂ ವಿದಾಯ ಹೇಳಿ, 194 00:20:40,916 --> 00:20:44,165 ನಿನ್ನ ಪಾಡಿಗೆ ಬದುಕಲು ಬಯಸುತ್ತೀಯ 195 00:20:44,166 --> 00:20:46,290 ನಾಚಿಕೆ, ನಾಚಿಕೆ 196 00:20:46,291 --> 00:20:47,749 ನಟಿಸುವುದು ನಿಲ್ಲಿಸು ನೀನೊಬ್ಬಳು 197 00:20:47,750 --> 00:20:51,666 ನಾಚಿಕೆಯ, ನಾಚಿಕೆಯ, ನಾಚಿಕೆಯ, ಹುಡುಗಿ 198 00:20:54,000 --> 00:20:58,875 ಈ ಇಡೀ ಜಗತ್ತನ್ನು ನೀನು ಯಾವಾಗ ಆಳಲಿದ್ದೀಯಾ? 199 00:21:00,458 --> 00:21:06,708 ನಿನ್ನ ಕಣ್ಣುಗಳಲ್ಲಿ ಆ ಹುಚ್ಚುತನವಿದ್ದದ್ದು ನನಗೆ ನೆನಪಿದೆ 200 00:21:07,416 --> 00:21:13,833 ಈ ರಾತ್ರಿ ಅದು ಹೊರಬರಲಿ 201 00:21:15,000 --> 00:21:21,165 ಈ ರಾತ್ರಿ ಅದು ಹೊರಬರಲಿ 202 00:21:21,166 --> 00:21:22,208 ಹೌದು, ಹೌದು 203 00:21:31,291 --> 00:21:33,916 ಬ್ರಯನ್ ಡಿ ಪಾಲ್ಮಾ 35ಎಂಎಂ ಚಿತ್ರದ ಪುನರಾವಲೋಕನ 204 00:21:56,083 --> 00:21:57,208 ಎಮಲೈನ್! 205 00:22:31,625 --> 00:22:32,500 ಕೇರಿ! 206 00:22:33,666 --> 00:22:35,874 ಕೇರಿ, ನೀನು ಇಲ್ಲಿಂದ ಹೊರಡಬೇಕು. 207 00:22:35,875 --> 00:22:38,540 ದೇವರೇ, ನಿನಗೇನಾಯಿತು? 208 00:22:38,541 --> 00:22:39,625 ಹಾಯ್, ಸ್ಟೆಲ್ಲಾ. 209 00:22:41,041 --> 00:22:43,790 ಇಡೀ ಊರಿಗೆ ಆದೇಶಿಸಲಾಗಿದೆ. ನೀವು ಜಾಗ ಖಾಲಿ ಮಾಡಬೇಕು. 210 00:22:43,791 --> 00:22:45,290 ನಿಮ್ಮಮ್ಮ ಎಲ್ಲಿ? 211 00:22:45,291 --> 00:22:47,416 ನೀವೂ ಹೋಗುತ್ತಿದ್ದೀರಿ ತಾನೇ? 212 00:22:49,083 --> 00:22:51,125 ಪುಸ್ತಕಗಳನ್ನು ಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದ. 213 00:23:20,041 --> 00:23:21,000 ಅಮ್ಮಾ. 214 00:23:51,416 --> 00:23:55,874 ಲ್ಯಾವೆಂಡರ್ ಹಸಿರಾಗಿದೆ, ಡಿಲ್ಲಿ, ಡಿಲ್ಲಿ 215 00:23:55,875 --> 00:23:58,583 ಲ್ಯಾವೆಂಡರ್ ನೀಲಿಯಾಗಿದೆ 216 00:24:01,083 --> 00:24:05,165 ನೀನು ನನ್ನನ್ನು ಪ್ರೀತಿಸಿದರೆ, ಡಿಲ್ಲಿ, ಡಿಲ್ಲಿ 217 00:24:05,166 --> 00:24:08,125 ನಾನು ನಿನ್ನನ್ನು ಪ್ರೀತಿಸುತ್ತೇನೆ 218 00:24:09,541 --> 00:24:13,749 ಹಕ್ಕಿಗಳು ಹಾಡಲಿ, ಡಿಲ್ಲಿ, ಡಿಲ್ಲಿ 219 00:24:13,750 --> 00:24:16,207 ಕುರಿಮರಿಗಳು ಆಡಿಕೊಳ್ಳಲಿ 220 00:24:16,208 --> 00:24:20,957 ನಾವು ಕ್ಷೇಮವಾಗಿರುತ್ತೇವೆ, ಡಿಲ್ಲಿ, ಡಿಲ್ಲಿ 221 00:24:20,958 --> 00:24:23,957 ಕಂಟಕದಿಂದ ದೂರ 222 00:24:23,958 --> 00:24:25,250 ಅವರೆಲ್ಲರೂ ಸತ್ತುಹೋದರು. 223 00:24:28,916 --> 00:24:30,041 ಯಾರು? 224 00:24:32,791 --> 00:24:35,333 ಬಹುಶಃ, ಅವರೆಲ್ಲರೂ. 225 00:24:39,166 --> 00:24:40,166 ಶಾಲೆ. 226 00:24:43,291 --> 00:24:44,958 ಬಹುಶಃ ಇನ್ನೂ ಹೆಚ್ಚಿನ ಜನರೂ ಕೂಡ. 227 00:24:46,708 --> 00:24:48,000 ನನಗೆ ಗೊತ್ತಿಲ್ಲ. 228 00:24:51,750 --> 00:24:52,791 ಸರಿ. 229 00:24:54,208 --> 00:24:56,250 ಕ್ಷಮಿಸಿ, ಅಮ್ಮ. 230 00:24:58,000 --> 00:24:59,125 ಶಾಂತಳಾಗು. 231 00:25:00,416 --> 00:25:02,083 ನಾನು ಹೀಗೆ ಮಾಡುತ್ತಿದ್ದೆ. 232 00:25:03,125 --> 00:25:08,916 ಈ ಜಗತ್ತಿಗೆ ನೀನು ಕಾಲಿಟ್ಟ ಮೊದಲ ರಾತ್ರಿ, ನಿನ್ನ ಹೊಸ ಪುಟ್ಟ ದೇಹದ ಮೇಲಿನ… 233 00:25:09,625 --> 00:25:11,500 ರಕ್ತವನ್ನು ನಾನು ಸ್ವಚ್ಛಗೊಳಿಸಿದ್ದೆ. 234 00:25:15,166 --> 00:25:16,749 ಅದು ಇದೇ ರೀತಿಯ ಸ್ಪಂಜು. 235 00:25:16,750 --> 00:25:19,166 ಈಗ ನೆನಪಿಸಿಕೊಂಡರೆ, ಅದು… 236 00:25:20,958 --> 00:25:22,041 ಅದೇ ರೀತಿಯದ್ದಾಗಿತ್ತು. 237 00:25:32,000 --> 00:25:33,000 ಸರಿ. 238 00:26:11,000 --> 00:26:12,458 ನಾವು ಒಟ್ಟಿಗೆ ಪ್ರಾರ್ಥಿಸಬಹುದು. 239 00:26:13,458 --> 00:26:16,666 ನೀನು ಚಿಕ್ಕವಳಿದ್ದಾಗ, ನಾವು ಮಾಡುತ್ತಿದ್ದಂತೆ. 240 00:26:17,791 --> 00:26:22,875 ನಾನು ಇಲ್ಲಿಗೆ ಬರುತ್ತಿದ್ದೆ, ಮತ್ತು ನೀನು ತಾನಾಗಿಯೇ ಕೆಳಗೆ ಬರುತ್ತಿದ್ದೆ. 241 00:26:24,166 --> 00:26:25,583 ನಾನು ಹಿಂತಿರುಗಿ ನೋಡಿದಾಗ, ನೀನು… 242 00:26:26,666 --> 00:26:28,540 ನೀನು ನನ್ನ ಪಕ್ಕದಲ್ಲೇ ಇರುತ್ತಿದ್ದೆ. 243 00:26:28,541 --> 00:26:30,999 ನೀನು ಕೈಮುಗಿದು, ಕಣ್ಣುಗಳನ್ನು ಮುಚ್ಚಿರುತ್ತಿದ್ದೆ, 244 00:26:31,000 --> 00:26:33,708 ಮತ್ತು ನೀನು ನನ್ನನ್ನೇ ಅನುಕರಿಸುತ್ತಿದ್ದೆ ಅನಿಸುತ್ತದೆ. 245 00:26:36,250 --> 00:26:37,499 ನನಗೆ ನೆನಪಿಲ್ಲ. 246 00:26:37,500 --> 00:26:39,458 ಖಂಡಿತ ಇಲ್ಲ. ನೀನು ತುಂಬಾ ಚಿಕ್ಕವಳಿದ್ದೆ. 247 00:26:40,541 --> 00:26:43,000 ನನ್ನನ್ನೇ ಅನುಕರಿಸುವ ಪುಟ್ಟ ಜೀವ. 248 00:26:44,541 --> 00:26:46,041 ನನ್ನ ಪುಟ್ಟ ನೆರಳು. 249 00:26:47,750 --> 00:26:48,791 ಮತ್ತು ನೀನು ತುಂಬಾ… 250 00:26:50,541 --> 00:26:51,582 ನಿರ್ಮಲವಾಗಿದ್ದೆ. 251 00:26:51,583 --> 00:26:52,500 ನೀನು… 252 00:26:54,750 --> 00:26:59,415 ಆ ದೇವರಿಗೆ ಬೇಕಾದಂತೆಯೇ, ಯಾವ ಕಲ್ಮಶವೂ ಇಲ್ಲದಷ್ಟು ಮುಗ್ಧವಾಗಿದ್ದೆ. 253 00:26:59,416 --> 00:27:00,625 ನೀನು… 254 00:27:02,416 --> 00:27:04,750 ನೀನು ತಾಜಾ ಹಿಮದಂತೆಯೇ ಬೆಳಗುತ್ತಿದ್ದೆ. 255 00:27:09,541 --> 00:27:11,291 ನನಗೆ ಕ್ಷಮೆ ಇದೆಯಾ? 256 00:27:13,208 --> 00:27:15,458 ದೇವರು ಕ್ಷಮಿಸುತ್ತಾನೆ. ಆತ ಕ್ಷಮಿಸಬಲ್ಲ. 257 00:27:18,416 --> 00:27:20,500 - ಈ ರಾತ್ರಿಯೂ? - ಈ ರಾತ್ರಿಯೂ. 258 00:27:24,708 --> 00:27:27,666 ಮತ್ತು ಅವನಿಗೆ ಆಗದಿದ್ದರೆ, ಪರವಾಗಿಲ್ಲ, ನಾನು ನಿನ್ನನ್ನು ಕ್ಷಮಿಸುತ್ತೇನೆ. 259 00:27:31,583 --> 00:27:32,708 ಕಂದಾ, ನಾನು ಕ್ಷಮಿಸುತ್ತೇನೆ. 260 00:27:33,416 --> 00:27:35,750 ಎಲ್ಲದಕ್ಕೂ. ಈ ರಾತ್ರಿ, ಮತ್ತು ಬೇರೆಲ್ಲದಕ್ಕೂ. 261 00:27:37,708 --> 00:27:38,666 ಎಲ್ಲದಕ್ಕೂ. 262 00:27:40,750 --> 00:27:44,375 ನೀನು ನನ್ನನ್ನು ಕ್ಷಮಿಸಬಲ್ಲೆಯಾ? 263 00:27:49,000 --> 00:27:49,916 ಯಾವುದಕ್ಕಾಗಿ? 264 00:27:50,708 --> 00:27:51,750 ಯಾವುದಕ್ಕಾದರೂ. 265 00:27:54,208 --> 00:27:56,583 ಎಲ್ಲದಕ್ಕೂ. ಒಟ್ಟಾರೆಯಾಗಿ ಎಲ್ಲವೂ. 266 00:27:58,791 --> 00:28:00,083 ಖಂಡಿತ, ಅಮ್ಮಾ. 267 00:28:02,958 --> 00:28:04,375 ನನ್ನನ್ನು ಕ್ಷಮಿಸಿದ್ದೇನೆ ಎಂದು ಹೇಳು. 268 00:28:05,750 --> 00:28:08,375 - ನಿಮ್ಮನ್ನು ಕ್ಷಮಿಸಿದ್ದೇನೆ. - ಹೇಳು… ಮತ್ತೊಮ್ಮೆ ಹೇಳು. 269 00:28:11,333 --> 00:28:12,958 ನಾನು ನಿಮ್ಮನ್ನು ಕ್ಷಮಿಸಿದ್ದೇನೆ, ಅಮ್ಮಾ. 270 00:28:19,750 --> 00:28:22,291 ಹಾಂ, ಒಟ್ಟಿಗೆ ಪ್ರಾರ್ಥಿಸೋಣ, ಮುದ್ದು ಮಗಳೇ. 271 00:28:37,250 --> 00:28:38,999 ಸ್ವರ್ಗೀಯ ಪಿತಾಮಹನೇ, 272 00:28:39,000 --> 00:28:42,708 ನನ್ನ ಪಾಪಕ್ಕೆ ಕ್ಷಮೆ ಕೇಳುತ್ತಾ ಪ್ರಾರ್ಥಿಸಲು ನಿನ್ನ ಬಳಿ ಬಂದಿದ್ದೇನೆ. 273 00:28:48,500 --> 00:28:51,999 ನಾನು ನನ್ನ ಬಾಯಿಂದ ಒಪ್ಪಿಕೊಳ್ಳುತ್ತೇನೆ ಮತ್ತು ಹೃದಯದಿಂದ ನಂಬುತ್ತೇನೆ, 274 00:28:52,000 --> 00:28:53,666 - ಯೇಸು ನಿನ್ನ ಮಗನೆಂದು… - ಪ್ರಭುವೇ. ದಯವಿಟ್ಟು. 275 00:28:55,375 --> 00:28:57,624 …ಮತ್ತು ಆತ ಶಿಲುಬೆಯ ಮೇಲೆ ಮರಣಹೊಂದಿದನೆಂದು… 276 00:28:57,625 --> 00:29:00,332 - ಪ್ರಭುವೇ, ಶಕ್ತಿ ನೀಡು. - …ಹಾಗಾಗಿ ನನಗೆ ಕ್ಷಮೆ ಸಿಗಬಹುದು 277 00:29:00,333 --> 00:29:03,166 ಮತ್ತು ಶಾಶ್ವತ ಜೀವನವನ್ನು ಪಡೆಯಬಹುದು-- 278 00:29:12,791 --> 00:29:13,791 ಇಲ್ಲ! 279 00:29:24,583 --> 00:29:25,416 ಕೇರಿ? 280 00:29:44,541 --> 00:29:45,833 ಏಕೆ? 281 00:32:01,000 --> 00:32:03,583 ಹೇ, ಇಗೋ ಇಲ್ಲಿದ್ದೀಯ. 282 00:32:05,958 --> 00:32:07,500 ನನ್ನನ್ನು ಸಾಯಲು ಬಿಡು. 283 00:32:08,083 --> 00:32:10,916 ಇಲ್ಲ, ನಾನು ನೆರವಾಗಲು ಬಂದಿದ್ದೇನೆ. 284 00:32:16,166 --> 00:32:17,208 ಬಾ. 285 00:32:18,375 --> 00:32:19,375 ಬಾ. 286 00:32:20,458 --> 00:32:21,833 ನಾನು ಕಲ್ಪನೆಯಲ್ಲ ಎಂದು ಹೇಳಿದ್ದೆ. 287 00:32:23,250 --> 00:32:24,708 ನಿನ್ನನ್ನು ಇಲ್ಲಿಂದ ಪಾರುಮಾಡಬೇಕು. 288 00:32:34,291 --> 00:32:35,333 ನನಗೆ ಗುಂಡೇಟು ಬಿದ್ದಿದೆ. 289 00:32:37,500 --> 00:32:38,416 ಏನು? 290 00:32:39,375 --> 00:32:40,333 ಹಾಗಾದರೆ ಹೇಗೆ… 291 00:32:58,583 --> 00:33:00,583 ಅವಳನ್ನು ಆ ರಾತ್ರಿಗಿಂತ ಮುಂಚೆ ಯಾವಾಗಲಾದರೂ ನೋಡಿದ್ದಿರಾ? 292 00:33:08,958 --> 00:33:09,875 ಇಲ್ಲ. 293 00:33:11,416 --> 00:33:13,832 ಇದು ಅವಳೇ. ನಿಮಗೆ ಖಚಿತವೇ? 294 00:33:13,833 --> 00:33:14,875 ಹೌದು. 295 00:33:18,458 --> 00:33:20,333 - ಅವಳು ಯಾರು? - ಅದರ ಬಗ್ಗೆ ಚಿಂತಿಸಬೇಡಿ. 296 00:33:23,458 --> 00:33:25,000 ಅಂದರೆ ಅವಳು ಕ್ಷೇಮವಾಗಿದ್ದಾಳೆಂದೇ? 297 00:33:25,583 --> 00:33:26,624 ಕೇರಿ? ಹೌದು. 298 00:33:26,625 --> 00:33:27,958 ಖಂಡಿತವಾಗಲೂ ಜೀವಂತವಾಗಿದ್ದಾಳೆ. 299 00:33:28,625 --> 00:33:30,208 ಕ್ಷೇಮ ಹಾಗೂ ಜೀವಂತ ಎರಡೂ ಬೇರೆ ಬೇರೆ. 300 00:33:32,208 --> 00:33:33,083 ಅವಳು ಯಾರು? 301 00:33:33,833 --> 00:33:34,916 ಅದು ಮುಖ್ಯವಲ್ಲ. 302 00:33:36,041 --> 00:33:37,166 ನೋಡಿ, ನಾನು… 303 00:33:38,791 --> 00:33:40,624 ನೀವದನ್ನು ನನಗೆ ಹೇಳಬಯಸುವುದಿಲ್ಲ ಅನಿಸುತ್ತೆ. 304 00:33:40,625 --> 00:33:42,708 ನಾನು ನಿಜಕ್ಕೂ… ನನಗೆ… 305 00:33:43,416 --> 00:33:45,625 - ಕ್ಷಮಿಸಿ. ನಾನು-- - ನಿಮಗೆ ಮಕ್ಕಳಿದ್ದಾರೆಯೇ? 306 00:33:46,291 --> 00:33:47,625 - ಒಂದು ರೀತಿಯಲ್ಲಿ. - ಅಂದರೆ, ಇಲ್ಲವೇ? 307 00:33:50,291 --> 00:33:52,000 ಇಲ್ಲ, ಇಲ್ಲವೆಂದೇ ಭಾವಿಸುತ್ತೇನೆ. 308 00:33:53,750 --> 00:33:54,708 ಅಂದರೆ, ಸ್ಪಷ್ಟವಾಗಿ ಇಲ್ಲ. 309 00:33:56,416 --> 00:33:59,207 ತಾಯಿಗೆ ತನ್ನ ಮಗು ಸುರಕ್ಷಿತವಾಗಿಲ್ಲ ಎಂದು ನೀವು ಹೇಳಿದರೆ, 310 00:33:59,208 --> 00:34:01,957 ಆಮೇಲೆ ನಿಮ್ಮಲ್ಲಿರುವ ಮಾಹಿತಿಯನ್ನು ಆಕೆಗೆ ನೀಡಲು ನಿರಾಕರಿಸಿದರೆ, 311 00:34:01,958 --> 00:34:04,832 ಆಗ ನೀವು ಸ್ಪಷ್ಟವಾಗಿ ತಾಯಿ ಅಲ್ಲ ಎಂದರ್ಥ. 312 00:34:04,833 --> 00:34:07,041 ಅಂದರೆ, ಒಂದು ವೇಳೆ… 313 00:34:08,416 --> 00:34:12,083 ಆ ಹುಡುಗಿಯಿಂದ ನನ್ನ ಮಗಳಿಗೆ ಅಪಾಯವೆಂದಾದರೆ, 314 00:34:13,333 --> 00:34:16,707 ನನಗೆ ಬೇಕಾದ ಎಲ್ಲವನ್ನೂ ಖಂಡಿತ ಹೇಳುತ್ತೀರಿ, 315 00:34:16,708 --> 00:34:21,249 ಏಕೆಂದರೆ ನಾನು ಇಲ್ಲಿಂದ ಹೊರಟ ಕೂಡಲೇ, ಆ ಹುಡುಗಿಯನ್ನು 316 00:34:21,250 --> 00:34:23,208 ನನ್ನ ಏಕೈಕ ಗುರಿಯನ್ನಾಗಿಸಿಕೊಳ್ಳುತ್ತೇನೆ. 317 00:34:24,958 --> 00:34:26,041 ನನ್ನ ಮಾತು ಅರ್ಥವಾಯಿತೇ? 318 00:34:30,000 --> 00:34:31,000 ಅರ್ಥವಾಯಿತು. 319 00:34:31,916 --> 00:34:32,875 ನಿಮ್ಮ ಮಾತು ನಂಬುತ್ತೇನೆ. 320 00:34:34,708 --> 00:34:36,666 ಆ ಯುವತಿಯ ಹೆಸರು ಎಮಲೈನ್ ವೆಸ್ಟ್. 321 00:34:38,833 --> 00:34:39,833 ಅವಳು ಅಪಾಯಕಾರಿಯೇ? 322 00:34:40,750 --> 00:34:42,333 ಹೌದು, ಅವಳೊಬ್ಬಳು ಆಸ್ಟ್ರಲ್ ಪ್ರೊಜೆಕ್ಟರ್. 323 00:34:46,291 --> 00:34:47,291 ಹಾಗೆಂದರೇನು? 324 00:34:49,333 --> 00:34:50,458 ಆತ್ಮದ ರೂಪದಲ್ಲಿ ಸಂಚರಿಸುವವಳು. 325 00:34:52,125 --> 00:34:55,333 ಉಪಹಾರ ಗೃಹದಲ್ಲಿ ಆ ಮಹಿಳೆಯ ಭೇಟಿಗೂ ಮುಂಚೆ, ಅವರ ಬಗ್ಗೆ ನೀವು ಓದಿದ್ದಿರಿ ಅನಿಸುತ್ತದೆ. 326 00:35:01,208 --> 00:35:03,333 - ನಾನು ಹೋಗಬೇಕು. - ವಾಪಸ್ ಕುಳಿತುಕೊಳ್ಳಿ. 327 00:35:08,000 --> 00:35:12,291 ಕುಸಿತದ ಸಮಯದಲ್ಲಿ ನೀವು ವಿವರಿಸಿದ ಕ್ಷಣದ ಬಗ್ಗೆ ನಾನು ನಿಮ್ಮನ್ನು ಕೇಳಬಯಸುತ್ತೇನೆ. 328 00:35:13,041 --> 00:35:15,416 ಮುಂಚೆ ಯಾವಾಗಲಾದರೂ ಆ ರೀತಿ ಮಾಡಿದ್ದಿರಾ? 329 00:35:20,583 --> 00:35:24,458 ಅದು ಕೆಳಗೆ ಬಂದು, ನಿಮ್ಮ ಮೇಲೆ ಅಪ್ಪಳಿಸುವುದನ್ನು ನೀವು ನೋಡಿದಿರಿ, ಮತ್ತು ನೀವು… 330 00:35:27,625 --> 00:35:28,666 ಶಕ್ತಿ ಪ್ರಯೋಗಿಸಿದೆ. 331 00:35:30,416 --> 00:35:32,958 ನನಗದು ಇಷ್ಟವಾಯಿತು. "ಶಕ್ತಿ ಪ್ರಯೋಗಿಸಿದಿರಿ." 332 00:35:34,125 --> 00:35:35,708 ಮುಂಚೆ ಯಾವಾಗಲಾದರೂ ಹಾಗೆ ಮಾಡಿದ್ದಿರಾ? 333 00:35:40,541 --> 00:35:43,250 ದಯವಿಟ್ಟು, ಪ್ರಭು. ದಯವಿಟ್ಟು, ಪ್ರಭು. ದಯವಿಟ್ಟು ನನ್ನನ್ನು ನೋಡು. 334 00:35:46,416 --> 00:35:48,791 ದಯವಿಟ್ಟು, ಪ್ರಭು. ದಯವಿಟ್ಟು, ಪ್ರಭು. ದಯವಿಟ್ಟು ನನ್ನನ್ನು ನೋಡು. 335 00:35:49,708 --> 00:35:51,833 ದಯವಿಟ್ಟು, ಪ್ರಭು. ದಯವಿಟ್ಟು. ದಯವಿಟ್ಟು ನನ್ನನ್ನು ನೋಡು. 336 00:35:57,916 --> 00:35:59,041 ಬಹುಶಃ ಒಮ್ಮೆ. 337 00:36:01,541 --> 00:36:02,583 ದಯವಿಟ್ಟು, ಪ್ರಭು. 338 00:36:04,375 --> 00:36:05,500 ದಯವಿಟ್ಟು? 339 00:36:09,750 --> 00:36:11,915 ನಾನು ತುಂಬಾ, ತುಂಬಾ ಚಿಕ್ಕವಳಿದ್ದಾಗ… 340 00:36:11,916 --> 00:36:13,249 ಅವನು ಉತ್ತರಿಸಿದ, ಅವನು ಉತ್ತರಿಸಿದ! 341 00:36:13,250 --> 00:36:16,166 …ಬಹುಶಃ ಅದು ದೇವರು ಎಂದು ಭಾವಿಸಿದ್ದೆ. 342 00:36:19,250 --> 00:36:21,749 ನಾವದನ್ನು 'ಟಿ.ಕೆ. ವಂಶವಾಹಿ' ಎಂದು ಕರೆಯುತ್ತೇವೆ. 343 00:36:21,750 --> 00:36:24,790 ಅದು ಸುಲಭವಾಗಿ ಸಿಗುವುದಿಲ್ಲ. ಇದು ತಲೆಮಾರುಗಳನ್ನು ದಾಟುತ್ತದೆ. 344 00:36:24,791 --> 00:36:27,749 ಇದು ಪ್ರಾಥಮಿಕವಾಗಿ ಸುಪ್ತ ಮತ್ತು ಹಿಂಜರಿತವನ್ನು ಹೊಂದಿರುತ್ತದೆ, 345 00:36:27,750 --> 00:36:30,333 ಮತ್ತು ಕೆಲವರಲ್ಲಿ, ಇದು ಅತ್ಯಂತ ಹಿಂಜರಿತವನ್ನು ಹೊಂದಿರುತ್ತದೆ. 346 00:36:31,166 --> 00:36:34,125 ನಿಮ್ಮ ಇಡೀ ಜೀವನದಲ್ಲಿ ಎಂದಿಗೂ ಅದರ ಅಭಿವ್ಯಕ್ತಿಯಿಲ್ಲದೆ ಬದುಕಬಹುದಿತ್ತು. 347 00:36:35,833 --> 00:36:38,290 ಆದರೆ ಇಂತಹ ಕ್ಷಣಗಳಲ್ಲಿ, 348 00:36:38,291 --> 00:36:40,832 ವಿಪರೀತ ಕ್ಷಣಗಳಲ್ಲಿ, ವಿಪರೀತ ಒತ್ತಡದ ಕ್ಷಣಗಳಲ್ಲಿ, 349 00:36:40,833 --> 00:36:44,791 ಕೆಲವೊಮ್ಮೆ ಅದು ಸ್ವಲ್ಪ ಹೊರಬರುತ್ತದೆ. 350 00:36:46,125 --> 00:36:49,457 ಎಲ್ಲರಿಗೂ ಆ ಕಥೆ ತಿಳಿದಿದೆ. ಆ ಮಹಿಳೆ, ಆ ಮಗು, ಆ ಕಾರು. 351 00:36:49,458 --> 00:36:53,124 ಜ್ಯಾಕ್ ಜಾರಿದಾಗ ತನ್ನ ಮಗ ಕಾರಿನ ಅಡಿ ಸಿಲುಕಿಕೊಂಡಿರುವುದನ್ನು ತಾಯಿ ನೋಡುತ್ತಾಳೆ, 352 00:36:53,125 --> 00:36:56,875 ಮತ್ತು ನೆರೆಯವರು ಸಹಾಯಕ್ಕಾಗಿ ಓಡುತ್ತಿರುವಾಗ, ಆಕೆ ಮಗನ ಮೇಲಿಂದ ಕಾರನ್ನು ಎತ್ತುತ್ತಾಳೆ. 353 00:36:58,333 --> 00:36:59,500 ನಿಮಗೆ ಈ ಕಥೆ ಗೊತ್ತೇ? 354 00:37:01,083 --> 00:37:02,041 ಗೊತ್ತು. 355 00:37:03,333 --> 00:37:05,915 ಅಂದರೆ, ಆ ರೀತಿಯದ್ದನ್ನು ಯಾವಾಗಲೋ ಒಮ್ಮೆ ಕೇಳಿದ್ದೇನೆ, ಹೌದು. 356 00:37:05,916 --> 00:37:08,499 ಪತ್ರಿಕಾ ಮಾಧ್ಯಮಕ್ಕೆ ಆ ಕ್ಷಣದಲ್ಲಿ ಏನು ಅರ್ಥವಾಗಲಿಲ್ಲ ಎಂದರೆ, 357 00:37:08,500 --> 00:37:13,125 ಅವಳಲ್ಲಿದ್ದ ಆದರೆ ತನಗೆ ಅರಿವಿಲ್ಲದ ಶಕ್ತಿಯನ್ನು ಆಕೆ ಕಂಡುಕೊಂಡಳೆಂಬುದು. 358 00:37:14,833 --> 00:37:17,083 ಮಾಂಸಖಂಡ ಮತ್ತು ಮೂಳೆಗಳಿಗಿಂತ ಬಲವಾದದ್ದು. 359 00:37:18,458 --> 00:37:22,250 ಒಮ್ಮೆ ಅದು ಎಲ್ಲಿದೆ ಎಂದು ಗೊತ್ತಾದ ಮೇಲೆ, ಅದನ್ನು ಮತ್ತೆ ಕಂಡುಕೊಳ್ಳುವುದು ಆಕೆಗೆ ಸುಲಭ. 360 00:37:25,125 --> 00:37:27,500 ನೀವದನ್ನು ಮತ್ತೆ ಕಂಡುಕೊಳ್ಳಬಲ್ಲಿರಾ, ಮಾರ್ಗರೆಟ್? 361 00:37:28,500 --> 00:37:29,500 ನಿಜ ಹೇಳಿ. 362 00:37:30,791 --> 00:37:32,833 ನೀವು ನಿಜ ಹೇಳುವುದು ಬಹಳ ಮುಖ್ಯ. 363 00:37:36,958 --> 00:37:37,875 ಇಲ್ಲ. 364 00:37:43,125 --> 00:37:44,125 ಇಲ್ಲ, ನನಗೂ ಹಾಗನಿಸಲಿಲ್ಲ. 365 00:37:45,500 --> 00:37:46,416 ಪರವಾಗಿಲ್ಲ. 366 00:37:47,250 --> 00:37:50,250 ಬಹಳಷ್ಟು ಜನರಿಗೆ ಸ್ವಲ್ಪ ಪ್ರತಿಭೆ ಇರುತ್ತದೆ. ಅದು ಅವರಿಗೇ ಗೊತ್ತಿರುವುದಿಲ್ಲ. 367 00:37:50,916 --> 00:37:53,125 ಪರವಾಗಿಲ್ಲ, ಮಾರ್ಗರೆಟ್. ಪರವಾಗಿಲ್ಲ. 368 00:37:54,583 --> 00:37:55,458 ನಾನು ಕೇವಲ… 369 00:37:57,333 --> 00:37:59,957 ಯಾವಾಗಲೂ ಅವಳಿಗೆ ಒಳ್ಳೆಯದನ್ನೇ ಮಾಡಲು ಬಯಸಿದ್ದೆ. 370 00:37:59,958 --> 00:38:01,457 ನಾನು ಕೇವಲ… 371 00:38:01,458 --> 00:38:02,500 ದಯವಿಟ್ಟು ಅದರ ಚಿಂತೆ ಬಿಡಿ. 372 00:38:04,000 --> 00:38:07,625 ಅವಳಿಗೆ ಬೇಕಾದುದನ್ನು ನೀವು ಎಂದಿಗೂ ನೀಡಲು ಸಾಧ್ಯವಾಗುತ್ತಿರಲಿಲ್ಲ. 373 00:38:09,875 --> 00:38:11,208 ಆದರೆ ನಿಮಗೆ ಒಳ್ಳೆಯ ಮನಸ್ಸಿದೆ. 374 00:38:12,833 --> 00:38:15,166 ನಿಮಗೆ ಒಳ್ಳೆಯ, ನಿರ್ಮಲವಾದ ಹೃದಯವಿದೆ. 375 00:38:17,666 --> 00:38:18,791 ಕೇಳಿ. ನಿಮಗದು ಕೇಳಿಸುತ್ತಿದೆಯೇ? 376 00:38:19,416 --> 00:38:21,583 ಅದರ ಬಡಿತ ನಿಮಗೆ ಕೇಳಿಸಬಹುದು. 377 00:38:27,416 --> 00:38:29,291 ನಿಮ್ಮ ಹೃದಯವನ್ನು ಕಲ್ಪಿಸಿಕೊಳ್ಳಿ, ಮಾರ್ಗರೆಟ್. 378 00:38:30,000 --> 00:38:32,125 ನೀವದನ್ನು ಮನಸ್ಸಿನಲ್ಲಿ ನೋಡಿಕೊಳ್ಳಬಹುದಾದರೆ ಅದು ಸುಲಭ. 379 00:38:32,750 --> 00:38:35,915 ನಿಮ್ಮ ಹೃದಯ ಒಂದು ದೊಡ್ಡ ಕೆಂಪು ಸ್ನಾಯು. 380 00:38:35,916 --> 00:38:38,333 ಮತ್ತು ಕೆಲವೊಮ್ಮೆ ಅದು ವೇಗವಾಗಿ ಬಡಿಯುತ್ತದೆ, 381 00:38:39,750 --> 00:38:43,957 ನೀವು ಹೆದರಿದಾಗ ಬಹಳ ವೇಗವಾಗಿ, ಆದರೆ ನೀವು ಹೆದರುವ ಅಗತ್ಯವಿಲ್ಲ. 382 00:38:43,958 --> 00:38:46,000 ಹಾಗಾಗಿ ಈಗ ಅದು ಸ್ವಲ್ಪ ನಿಧಾನವಾಗುತ್ತಿದೆ. 383 00:38:47,625 --> 00:38:48,541 ಇನ್ನಷ್ಟು ನಿಧಾನ. 384 00:38:50,416 --> 00:38:51,666 ಈಗ ಅದಕ್ಕಿಂತ ನಿಧಾನ. 385 00:38:59,916 --> 00:39:01,750 ನಿಮಗೊಂದು ಉಡುಗೊರೆ ಕೊಡಲಿದ್ದೇನೆ, ಮಾರ್ಗರೆಟ್. 386 00:39:02,541 --> 00:39:04,791 ಚಿಂತಿಸುವ ಅಗತ್ಯವಿಲ್ಲ. ಎಲ್ಲರಿಗೂ ಉಡುಗೊರೆಗಳು ಇಷ್ಟ. 387 00:39:05,791 --> 00:39:07,332 ನನಗೆ ಉಡುಗೊರೆ ಕೊಡುವುದರಲ್ಲಿ ಕಲೆ ಇದೆ. 388 00:39:07,333 --> 00:39:08,624 ಸ್ವಲ್ಪ ನಿಧಾನ. 389 00:39:08,625 --> 00:39:10,957 ಜನರು ನಿಜವಾಗಲೂ ಸದಾ ಏನನ್ನು ಬಯಸಿದ್ದರೋ ಅದನ್ನು ಕೊಡುವ ಕಲೆ. 390 00:39:10,958 --> 00:39:14,000 ಮತ್ತು ನೀವು ನಿಜಕ್ಕೂ ಸದಾ ಏನನ್ನು ಬಯಸಿದ್ದೀರಿ ಗೊತ್ತೇ, ಮಾರ್ಗರೆಟ್? 391 00:39:17,416 --> 00:39:18,458 ಕತ್ತಲೆ 392 00:39:20,041 --> 00:39:21,666 ಮತ್ತು ಅಲ್ಲಿ ವಾಸಿಸುವ ಆ ದೇವರು. 393 00:39:23,333 --> 00:39:24,250 ಸ್ವಲ್ಪ ನಿಧಾನ. 394 00:39:28,875 --> 00:39:29,875 ಪರವಾಗಿಲ್ಲ. 395 00:39:35,625 --> 00:39:37,874 ಸ್ವರ್ಗದಲ್ಲಿರುವ ನಮ್ಮ ತಂದೆಯೇ… 396 00:39:37,875 --> 00:39:38,833 ಸ್ವಲ್ಪ ನಿಧಾನ. 397 00:39:40,208 --> 00:39:42,082 …ನಿನ್ನ ಹೆಸರು ಪವಿತ್ರವಾಗಲಿ… 398 00:39:42,083 --> 00:39:44,166 ಈಗ ರಕ್ತವು ಮತ್ತೆ ನಿಮ್ಮೊಳಗೆ ಹರಿಯುತ್ತಿದೆ. 399 00:39:45,583 --> 00:39:46,666 …ನಿನ್ನ ಅಧಿಪತ್ಯ ಬರಲಿ… 400 00:39:47,625 --> 00:39:50,458 ಕೃತಕ ಹಾಲುಗಲ್ಲಿನಂಥ ಕೈಗಳು, ಅಮೃತಶಿಲೆಯಂತೆ. ಬಿಳಿ. 401 00:39:51,416 --> 00:39:52,625 …ನಿನ್ನ ಇಚ್ಛೆ ನೆರವೇರಲಿ… 402 00:39:53,791 --> 00:39:56,375 ನನ್ನ ಇಚ್ಛೆ, ಮಾರ್ಗರೆಟ್. 403 00:39:57,666 --> 00:39:58,957 ನನ್ನ ಇಚ್ಛೆ. 404 00:39:58,958 --> 00:40:00,290 …ಭೂಮಿಯ ಮೇಲೆ… 405 00:40:00,291 --> 00:40:01,291 ಇನ್ನಷ್ಟು ನಿಧಾನವಾಗಿ. 406 00:40:08,500 --> 00:40:09,583 ಪೂರ್ತಿ ನಿಂತುಹೋಯಿತು. 407 00:40:27,500 --> 00:40:28,624 ಅಯ್ಯೋ, ಇದೇನು! 408 00:40:28,625 --> 00:40:30,499 ಅವಳ ತಾಯಿಯನ್ನು ಕೊಂದೆಯಾ? 409 00:40:30,500 --> 00:40:31,833 ನೀನು ಏನನ್ನಾದರೂ ಕಂಡೆಯಾ, ಕೇಟ್ಲಿನ್? 410 00:40:32,541 --> 00:40:35,125 ಒಂದೆರಡು ಝಲಕ್. ಕಾರು ಬಿಳಿ ಬಣ್ಣದ್ದು. 411 00:40:35,708 --> 00:40:37,375 - ಅವಳು ಕಾರಿನ ಸಂಖ್ಯೆ ನೋಡಲಿಲ್ಲ. - ಸರಿ. 412 00:40:38,000 --> 00:40:39,332 ಅವಳನ್ನು ವಸತಿಗೃಹಕ್ಕೆ ಮರಳಿ ಕರೆತನ್ನಿ. 413 00:40:39,333 --> 00:40:42,125 ಅವಳ ಗಾಯಗಳನ್ನು ಗಮನಿಸಿದರೆ, ಹೃದಯ ಸ್ತಂಭನ ಎಂದರೆ ಯಾರೂ ಪ್ರಶ್ನಿಸುವುದಿಲ್ಲ. 414 00:40:43,083 --> 00:40:44,083 ಅವಳನ್ನು ಹಾಸಿಗೆಯಲ್ಲಿ ಮಲಗಿಸಿ. 415 00:40:45,250 --> 00:40:46,916 ಮಾರ್ಗರೆಟ್ ವೈಟ್ ನಿದ್ದೆಯಲ್ಲೇ ಸಾವನ್ನಪ್ಪಿದಳು. 416 00:41:03,541 --> 00:41:04,541 ಹೇ. 417 00:41:05,875 --> 00:41:07,416 ಹೇ, ಹೇಗನಿಸುತ್ತಿದೆ? 418 00:41:14,791 --> 00:41:15,833 ನಾವೆಲ್ಲಿದ್ದೇವೆ? 419 00:41:21,000 --> 00:41:22,250 ಅಬ್ಬಾ, ನಿನ್ನ ಜ್ವರ ಕಡಿಮೆಯಾಯಿತು. 420 00:41:23,208 --> 00:41:25,166 ಅದ್ಭುತ. ಹೇಗಿದೆ… 421 00:41:25,750 --> 00:41:27,458 ಹೇ, ನಿನ್ನ ತೋಳು ಮತ್ತು ಭುಜ ಹೇಗಿದೆ? 422 00:41:28,291 --> 00:41:30,375 ನನ್ನ ಕೈಲಾದಷ್ಟು ಚಿಕಿತ್ಸೆ ನೀಡಲು ನೋಡಿದೆ, ಆದರೆ… 423 00:41:31,666 --> 00:41:32,750 ನಿನಗೆ ಗುಂಡೇಟು ಬಿದ್ದಿತೇ? 424 00:41:35,041 --> 00:41:37,499 ಹಾಂ, ಆಕೆ ನಿನ್ನ ಕಿವಿಯ ತಮಟೆಗೆ ಚುಚ್ಚಲು ಪ್ರಯತ್ನಿಸಿದಳು. 425 00:41:37,500 --> 00:41:40,457 ಹೆಚ್ಚೇನೂ ಒಳಗೆ ನುಗ್ಗಲಿಲ್ಲ. ನೀನು ಥಟ್ಟನೆ ಪ್ರತಿಕ್ರಿಯಿಸಿದೆ. 426 00:41:40,458 --> 00:41:43,166 ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ, ಆದರೆ ನೀನು ಗುಣಮುಖಳಾಗುತ್ತೀಯ. 427 00:41:44,916 --> 00:41:48,166 - ನಮ್ಮಮ್ಮ-- - ನಿನ್ನ ಮಿದುಳಿಗೆ ಚುಚ್ಚಲು ನೋಡಿದಳು, ಕೇರಿ. 428 00:41:49,583 --> 00:41:51,375 ನನಗೂ ಆ ಪರಿಸ್ಥಿತಿ ಬಂದಿತ್ತು, ನನಗರ್ಥವಾಗುತ್ತದೆ. 429 00:41:52,250 --> 00:41:53,291 ಅದು ಬಹಳ ಕೆಟ್ಟ ಪರಿಸ್ಥಿತಿ. 430 00:41:58,250 --> 00:41:59,791 ಹಾಂ, ನೀನು ನನ್ನನ್ನು ಸ್ಪರ್ಶಿಸಬಹುದು. 431 00:42:00,541 --> 00:42:02,416 ಬಹುಶಃ ನನ್ನಿಂದ ಕೊಳಕು ವಾಸನೆಯೂ ಬರುತ್ತಿರಬಹುದು. 432 00:42:04,791 --> 00:42:05,791 ನೀನು ಕಲ್ಪನೆಯಲ್ಲ. 433 00:42:06,875 --> 00:42:07,833 ನನಗೆ ಗೊತ್ತು. 434 00:42:09,583 --> 00:42:11,958 ಆದರೆ… ಆದರೆ ನೀನು ಬರೀ ನನ್ನ ಕಾಲ್ಪನಿಕವಾಗಿದ್ದೆ. 435 00:42:13,041 --> 00:42:14,750 ಇಲ್ಲ. ಹಾಗೆ ಹೇಳಲಾಗದು. ನಾನು… 436 00:42:17,625 --> 00:42:20,416 ನಿನ್ನನ್ನು ತಲುಪಲು ಇಷ್ಟು ಸಮಯ ಹಿಡಿಯಿತು, ಕ್ಷಮಿಸು. ಅದೊಂದು ದೀರ್ಘ ಪ್ರಯಾಣ. 437 00:42:21,750 --> 00:42:23,041 ಯಾರು ನೀನು? 438 00:42:24,208 --> 00:42:26,291 ಅದೂ ಕೂಡ ಒಂದು ದೊಡ್ಡ ಕಥೆ. 439 00:42:27,291 --> 00:42:29,791 ನಮಗೆ… ನಮಗೆ ಸಮಯವಿದೆ. ಖಂಡಿತವಾಗಲೂ. 440 00:42:30,625 --> 00:42:31,708 ನಾವೆಲ್ಲಿದ್ದೇವೆ? 441 00:42:32,625 --> 00:42:34,457 - ಸರಿ. ನಮ್ಮದು ಮತ್ತೆ ಶುರುವಾಯಿತು. - ಎಲ್ಲಿ? 442 00:42:34,458 --> 00:42:35,958 ಹಾಂ. ನೋಡು, ನಾನು… 443 00:42:37,541 --> 00:42:42,250 ಅಂದರೆ, ಸೈದ್ಧಾಂತಿಕವಾಗಿ, ನಾನು ಹೇಳದಿದ್ದರೆ ನೀನು ಅದನ್ನು ಯೋಚಿಸಲಾಗದು ಎಂದರ್ಥ, 444 00:42:42,875 --> 00:42:45,165 ಯಾರಾದರೂ ನಿಮ್ಮ ಮೇಲೆ ಕಣ್ಣಿಟ್ಟಿದ್ದರೆ, ಇದು ಸುರಕ್ಷಿತ. 445 00:42:45,166 --> 00:42:48,125 ನಿನ್ನನ್ನು ಎರಡು ಸರಳ ಪ್ರಶ್ನೆಗಳನ್ನು ಕೇಳಿದೆ. 446 00:42:48,833 --> 00:42:51,374 ಯಾರು ನೀನು, ಮತ್ತು ನಾವೆಲ್ಲಿದ್ದೇವೆ? 447 00:42:51,375 --> 00:42:53,624 ಮತ್ತು ನೀನು ಅದಕ್ಕೂ ಉತ್ತರಿಸುವುದಿಲ್ಲವೇ? 448 00:42:53,625 --> 00:42:57,290 ನೀನು ಸುಮ್ಮನೆ ನನ್ನನ್ನು ಕದ್ದೊಯ್ಯುತ್ತಿದ್ದೀಯ ಮತ್ತು ನನಗೇನೂ ವಿಷಯ ಹೇಳುತ್ತಿಲ್ಲ. 449 00:42:57,291 --> 00:42:58,249 ಏಕೆ… 450 00:42:58,250 --> 00:43:02,374 ನನ್ನಿಂದ ಒಂದೇ ಒಂದು ವಿಷಯವನ್ನೂ ನಿಭಾಯಿಸಲಾಗದು ಎಂಬಂತೆ ಎಲ್ಲರೂ ನನ್ನನ್ನು ಯಾಕೆ ನೋಡುತ್ತಾರೆ? 451 00:43:02,375 --> 00:43:04,540 ಇಲ್ಲ, ನಿನ್ನಿಂದಾಗುವುದು. ನಿನ್ನಿಂದಾಗುವುದು. 452 00:43:04,541 --> 00:43:07,166 ಮತ್ತು ನೀನು ಭಾವನಾತ್ಮಕವಾಗಿ ಕುಸಿದಿಲ್ಲ, ಸರಿನಾ? ಖಂಡಿತ ಇಲ್ಲ. 453 00:43:08,208 --> 00:43:09,250 ನೀನೊಬ್ಬಳು ದೇವತೆ. 454 00:43:10,125 --> 00:43:13,457 ನೀನೊಂದು ಪ್ರಬಲ ಚಂಡಮಾರುತ. 455 00:43:13,458 --> 00:43:15,874 ಮತ್ತು ನಾನು ನಿನ್ನನ್ನು ಕದ್ದೊಯ್ಯುತ್ತಿಲ್ಲ, 456 00:43:15,875 --> 00:43:17,832 ಅಥವಾ ನಿನ್ನಿಂದ ಯಾವುದೇ ವಿಷಯ ಮುಚ್ಚಿಡುತ್ತಿಲ್ಲ. 457 00:43:17,833 --> 00:43:20,041 ಸುರಕ್ಷಿತ ಜಾಗಕ್ಕೆ ಕರೆದೊಯ್ಯುತ್ತಿದ್ದೇನೆ, 458 00:43:20,791 --> 00:43:23,666 ನಮ್ಮನ್ನು ಆ ರಾಕ್ಷಸರು ಹಿಂಬಾಲಿಸುತ್ತಿದ್ದಾರೆ. ಮತ್ತು ಇದು ನನಗೆ ಹೆಮ್ಮೆಯ ವಿಷಯ. 459 00:43:25,000 --> 00:43:26,083 ನಾನು ಯಾರು? 460 00:43:26,916 --> 00:43:28,000 ನಾನು ನಿನ್ನ ಗೆಳತಿ. 461 00:43:28,791 --> 00:43:29,833 ಮತ್ತು ನಾವೆಲ್ಲಿದ್ದೇವೆ? 462 00:43:31,416 --> 00:43:32,666 ಅದೇ ಈ ಜಗತ್ತು. 463 00:43:34,750 --> 00:43:36,500 ನೀನು ಯಾವಾಗಲೂ ಬಯಸಿದ್ದು ಅದನ್ನೇ, ಅಲ್ವಾ? 464 00:43:39,000 --> 00:43:40,875 ನೀನು ಇಲ್ಲಿ ಇಷ್ಟ ಬಂದಂತೆ ಇರಬಹುದು, ಕೇರಿ. 465 00:43:45,208 --> 00:43:48,540 ಮತ್ತು ನಿನಗೆ ಅಪರಾಧಿ ಭಾವನೆ ಇದೆಯೆಂದು ನನಗೆ ಗೊತ್ತು, ನಾವದನ್ನೂ ಸರಿಪಡಿಸೋಣ, 466 00:43:48,541 --> 00:43:51,041 ಏಕೆಂದರೆ ನೀನು ಸರಪಳಿಗಳನ್ನು ಬಿಟ್ಟು, ಬೇರೇನನ್ನೂ ಮುರಿದಿಲ್ಲ. 467 00:43:57,250 --> 00:43:58,333 ಇದು ನನ್ನ ಪ್ರಪಂಚವೇ? 468 00:43:59,791 --> 00:44:00,875 ಹೌದು, ನಿನ್ನದೇ. 469 00:44:07,291 --> 00:44:08,333 ನನ್ನ ಪ್ರಪಂಚ. 470 00:44:09,708 --> 00:44:11,083 ಇದೆಲ್ಲವೂ. 471 00:44:14,708 --> 00:44:15,750 ಇದು ನನ್ನ ಪ್ರಪಂಚ. 472 00:44:17,500 --> 00:44:18,541 ಎಲ್ಲಿಗೆ ಹೋಗಲು ಬಯಸುತ್ತೀಯಾ? 473 00:44:39,041 --> 00:44:42,000 ಸ್ಟೀಫನ್ ಕಿಂಗ್ ಕಾದಂಬರಿ ಆಧಾರಿತ 474 00:46:17,875 --> 00:46:19,957 ಉಪ ಶೀರ್ಷಿಕೆ ಅನುವಾದ: ಹೇಮಂತ್ ಕುಮಾರ್ 475 00:46:19,958 --> 00:46:21,958 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ