1 00:00:06,090 --> 00:00:08,210 ಈ ಹಿಂದೆ... 2 00:00:08,630 --> 00:00:11,010 ಈವ್ ಪವಾಡಗಳನ್ನು ಸೃಷ್ಟಿಸುತ್ತಾಳೆ. ನಿಜವಾದವು. 3 00:00:11,420 --> 00:00:15,240 ನೀನು ಯಾರೆಂದು ಕಂಡುಹಿಡಿದು ನೀನು ಸೇರಬೇಕಾದ ಜಾಗಕ್ಕೆ ಕಳಿಸುವೆ. 4 00:00:15,440 --> 00:00:17,020 ನಿಮ್ಮ ಕಥೆ ಹೇಳಲು ಬಂದಿರುವೆ. 5 00:00:17,220 --> 00:00:21,390 ಟಾಟಿಯಾನಾ ತನ್ನ ಗಂಡ ಎಷ್ಟು ದಪ್ಪ ಇದ್ದಾನೋ ಅವಳು ಅಷ್ಟೇ ಹಾಳಾಗಿರಬಹುದು, ಆದರೂ ಆಕೆ ನನ್ನ ಅಕ್ಕನೇ. 6 00:00:21,600 --> 00:00:23,000 ಅವಳಿಗೆ ಕಾಳಜಿ ಇದೆಯಾ ತಿಳಿಯಬೇಕು. 7 00:00:23,200 --> 00:00:25,800 ಸಹಿ ಮಾಡುವ ಮುನ್ನ ನನ್ನ ಹಿರಿಮಗ ಮತ್ತು ಕಿರಿಮಗಳು ಹೇಗೆ 8 00:00:26,000 --> 00:00:27,860 ಕಾರ್ಯನಿರ್ವಹಿಸುತ್ತಾರೆಂದು ನೋಡಬಯಸುವೆ. 9 00:00:28,360 --> 00:00:29,430 ಏನಿದು ವಿಚಿತ್ರ? 10 00:00:29,630 --> 00:00:32,050 ನಾನು ನಿನ್ನೊಂದಿಗಿದ್ದೇನೆ, ಜೋಸ್. ನಾನು ಇದರಲ್ಲಿರುವೆ 11 00:00:32,250 --> 00:00:33,110 ನಾನೂ ಇದರಲ್ಲಿರುವೆ. 12 00:00:33,360 --> 00:00:35,490 ಸೆನೆಟ್ ಚುನಾವಣೆಗೆ ನಿಲ್ಲಲು ನಿರ್ಧರಿಸಿರುವೆ. 13 00:00:36,280 --> 00:00:39,140 - ಅಮ್ಮ, ನೀನವರಿಗೆ ಹೇಳಬೇಕು. - ಗೊತ್ತು. ಸದ್ಯಕ್ಕಂತೂ ಅಲ್ಲ. 14 00:00:39,340 --> 00:00:41,620 ನಾನು ನಿನ್ನ ಗಂಡ ಕಣೆ. ನೀನು ಯಾರು? 15 00:00:42,660 --> 00:00:43,500 ಎಲ್ಲರೂ ಬಗ್ಗಿ! 16 00:00:47,790 --> 00:00:50,710 - ನಿನಗೆ ಬ್ರೆಡ್ ಬೇಕಾ? ಮತ್ತು ಸಾಕು. - ಹಾಂ. 17 00:00:52,170 --> 00:00:54,970 ನಿನಗೆ ಬ್ರೆಡ್ ಬೇಕಾ? ಹಾಂ. ತಡಿ. ಏನವು? 18 00:00:55,760 --> 00:00:59,180 - ಇಲ್ಲಿ. ನಂದು ಅರ್ಧ ತಗೋ. - ಹಾಂ. ಧನ್ಯವಾದ. 19 00:01:00,600 --> 00:01:04,100 - ನನ್ನ ಹಲ್ಲಿನಲ್ಲಿ ಏನಾದರೂ ಸಿಕ್ಕಿಕೊಂಡಿದೆಯೇ? - ದೇವರಾಣೆಗೂ ಚೆನ್ನಾಗಿರುವೆ. 20 00:01:15,610 --> 00:01:16,390 ಅದು ಈವ್. 21 00:01:16,590 --> 00:01:18,350 - ನಾನು ಪ್ರಕಟಿಸಿದೆ. - ನೀನು ಪ್ರಕಟಿಸಿದ್ದಾ? 22 00:01:18,550 --> 00:01:20,160 ಹೇ, ಯೋ. ಲುವೇನ್. 23 00:01:21,370 --> 00:01:22,450 ನೋಡೇ ಅದನ್ನು. 24 00:01:27,330 --> 00:01:28,920 ನೀನು ಕಾಮೆಂಟುಗಳನ್ನು ನೋಡಬೇಕು. 25 00:01:30,090 --> 00:01:30,920 ಹೇ. 26 00:01:33,010 --> 00:01:35,420 - ಛೆ. ಅಯ್ಯೋ. - ಏನಾಯ್ತು? 27 00:01:35,930 --> 00:01:37,300 ಅದನ್ನು ಪ್ರಕಟಿಸಿದ್ದು ಯಾರು? 28 00:01:37,890 --> 00:01:40,550 - ಗೊತ್ತಿಲ್ಲ. ಅದು ನಾವಲ್ಲ. - ಈವ್ ಮುಖ ಕಾಣುತ್ತದೆ. 29 00:01:48,060 --> 00:01:50,400 ಇದು ಧರ್ಮನಿಂದನೆ. ಎಲ್ಲರಿಗೂ ನೋಡಲು. 30 00:02:21,600 --> 00:02:22,810 ಇಜ್ಜಿ, ದೀಪ ಆರಿಸು. 31 00:02:33,520 --> 00:02:36,300 {\an8}"ರಕ್ಷಕನು ಅವಳನ್ನು ಯೋಗ್ಯಳನ್ನಾಗಿ ಮಾಡಿದರೆ, ಅವಳನ್ನು ತಿರಸ್ಕರಿಸಲು ನೀನ್ಯಾರು?" 32 00:02:36,500 --> 00:02:37,280 {\an8}ಮೇರಿ ಮ್ಯಾಗ್ಡಲೀನಳ ಸುವಾರ್ತೆ 33 00:02:41,950 --> 00:02:46,540 ದಿ ಪವರ್ 34 00:02:48,410 --> 00:02:52,420 ಅವನನ್ನು ಕೊಂದೆ. ಪೊಲೀಸರು… ಯಾರಾದರೂ ನನ್ನನ್ನು ಗುರುತಿಸಬಹುದು. 35 00:02:53,960 --> 00:02:58,300 ನಿನ್ನ ಜೀವ ಅಪಾಯದಲ್ಲಿತ್ತು. ನಿನ್ನ ಆತ್ಮರಕ್ಷಣೆ ಮಾಡಿಕೊಳ್ಳುತ್ತಿದ್ದೆ. 36 00:03:05,760 --> 00:03:06,890 ತಿಳಿದುಕೊಳ್ಳಬಹುದು. 37 00:03:07,850 --> 00:03:09,020 ಶ್ರೀಮತಿ ಮಾಂಟ್ಗೊಮೆರಿ. 38 00:03:09,730 --> 00:03:10,690 ಜೈಲಿಗೆ ಹೋಗುತ್ತೇನೆ. 39 00:03:11,900 --> 00:03:13,770 ಇಂದು ಒಂದು ಸೂಚನೆ ಹುಡುಕುತ್ತಿದ್ದೆ. 40 00:03:15,150 --> 00:03:17,530 ದೇವರು ನನಗೆ ಲ್ಯೂಕ್ 19:47 ತೋರಿಸಿದರು. 41 00:03:18,280 --> 00:03:20,490 ಯೇಸು ದೇವಾಲಯದಲ್ಲಿ ಪ್ರವಚನ ಕೊಡುತ್ತಿದ್ದ. 42 00:03:21,160 --> 00:03:24,450 ಧರ್ಮಗ್ರಂಥಗಳನ್ನು ಪ್ರಶ್ನಿಸುವುದು ಹಿರಿಯರಿಗೆ ಹಿಡಿಸಲಿಲ್ಲ. 43 00:03:25,660 --> 00:03:27,040 ಯೇಸು ಅವರನ್ನು ಭಯಪಡಿಸಿದ. 44 00:03:30,000 --> 00:03:31,250 ನೀನು ಮಾಡಿದಂತೆಯೇ. 45 00:03:34,920 --> 00:03:36,550 ನೀನು ನಮ್ಮನ್ನು ಎಚ್ಚರಿಸಿರುವೆ. 46 00:03:37,090 --> 00:03:40,590 ನಾವು ನಿನ್ನ ಸಹೋದರಿಯರು. ನಿನ್ನನ್ನು ರಕ್ಷಿಸುತ್ತೇವೆ. 47 00:03:41,180 --> 00:03:46,760 ಇನ್ನೂ ಹೆಚ್ಚು ಬರುತ್ತೆ. ವಿಡಿಯೋದಲ್ಲಿನ ಹುಡುಗಿಯ ಬಗ್ಗೆ ತಿಳಿಯಬೇಕೆನ್ನುತ್ತಾರೆ. 48 00:03:56,860 --> 00:03:57,820 ಹೆಚ್ಚು. 49 00:04:08,740 --> 00:04:12,620 - ಮತ್ತೆ ಶಾಕ್ ಕೊಡು. ಹೆಚ್ಚಿನ ಕಾಲ. - ನನಗೆ ಸಾಕು ಅನ್ಸುತ್ತೆ. 50 00:04:23,880 --> 00:04:25,010 ಹೇ, ಏನಿದು ವಿಚಿತ್ರ? 51 00:04:29,060 --> 00:04:31,930 ಹಾಂ, ಅವಳು ಈವ್. ನನ್ನ ಫೀಡಲ್ಲೂ ಅವಳೇ ತುಂಬಿದ್ದಾಳೆ. 52 00:04:32,430 --> 00:04:36,440 ಅವಳು ಒಂದು ರೀತಿಯ ಹೊಸ ಹೊಳೆಯುವ ಆಧ್ಯಾತ್ಮಿಕ ನಾಯಕಿ. 53 00:04:37,190 --> 00:04:38,650 ಇದೆಂಥ ಅಸಂಬದ್ಧ. 54 00:04:39,230 --> 00:04:41,400 ಹೌದು. ಪವಾಡ ಸೃಷ್ಟಿಸುತ್ತಾಳೆ, ಹಾಗಂತೆ. 55 00:04:42,860 --> 00:04:43,950 ಇದು ಖಂಡಿತ ನಕಲಿ. 56 00:04:53,830 --> 00:04:55,440 ನಾನಿಲ್ಲದೆ ಮುಗಿಸಿದ್ರಾ? 57 00:04:55,640 --> 00:04:58,000 ನಾನು ಮುಗಿಸಿದೆ. ಕ್ಷಮಿಸು, ಚಿನ್ನ. ಹೊರಡಬೇಕು. 58 00:05:14,980 --> 00:05:15,810 ಹೇ. 59 00:05:16,480 --> 00:05:18,730 ಚೌಕದ್ದು. ಬಿಳಿಯದು ಕ್ಯಾಮರಾಗೆ ಸರಿ ಕಾಣಲ್ಲ. 60 00:05:18,980 --> 00:05:20,980 ಅಯ್ಯೋ. ಅದನ್ನೇ ನಾನು ಇಸ್ತ್ರಿ ಮಾಡಬೇಕು. 61 00:05:22,530 --> 00:05:23,740 ಅದ್ಭುತ. 62 00:05:30,700 --> 00:05:32,450 ಇದನ್ನು ನಿಜವಾಗಲೂ ಹೀಗೆ ಮಾಡುವೆಯಾ? 63 00:05:34,910 --> 00:05:37,980 ಈಗ ಇದರಿಂದ ತಪ್ಪಿಸಿಕೊಳ್ಳುವೆಯಾ? ಚಿತ್ರೀಕರಣದ ತಂಡ ಬರುತ್ತಿದೆ. 64 00:05:38,180 --> 00:05:40,780 ಮಾರ್ಗ್, ನಾನು ಪ್ರಚಾರದ ವಿಡಿಯೋ ಬಗ್ಗೆ ಮಾತನಾಡುತ್ತಿಲ್ಲ. 65 00:05:40,980 --> 00:05:43,950 ಒಬ್ಬ ಬೆಂಕಿ ಹಚ್ಚಿಕೊಂಡು ಸತ್ತಿದ್ದರ ಬಗ್ಗೆ ಮಾತನಾಡುತ್ತಿದ್ದೇನೆ. 66 00:05:44,150 --> 00:05:46,740 ಏನೂ ನಡೆದೇ ಇಲ್ಲದೆ, ಎಲ್ಲಾ ಚೆನ್ನಾಗಿರುವಂತೆ ಇರುವೆ. 67 00:05:46,940 --> 00:05:50,250 ಈ ವಿಚಾರಗಳು ಕಳೆದುಹೋಗುವುದಿಲ್ಲ. ಇವುಗಳ ಬಗ್ಗೆ ಮಾತನಾಡಬೇಕು. 68 00:05:50,450 --> 00:05:52,790 - ಮಾತನಾಡಿದ್ದೇವೆ. - ಹೌದು, ಆಪ್ತಸಮಾಲೋಚಕರ ಬಳಿ. 69 00:05:52,990 --> 00:05:55,130 ನೀನು ಮತ್ತು ನಾನು, ಮಕ್ಕಳೊಂದಿಗೆ ಮಾತನಾಡಿಲ್ಲ… 70 00:05:55,330 --> 00:05:58,020 ಮಕ್ಕಳು ಆರಾಮವಾಗಿದ್ದಾರೆ. ಸಮಾಲೋಚಕರು ಸರಿ ಇದೆ ಎಂದಿದ್ದಾರೆ. 71 00:05:58,400 --> 00:06:02,020 ಪ್ರತಿ ಸಲ ನಾನು ಕಣ್ಣು ಮುಚ್ಚಿದಾಗ, ನನಗೆ ಕಾಣುವುದು ಮತ್ತು ಮೂಗಿಗೆ ಬಡಿಯುವುದು 72 00:06:02,650 --> 00:06:03,800 ಅವನು ಸುಡುತ್ತಿರುವುದು. 73 00:06:04,000 --> 00:06:07,740 ಭೂತಕಾಲಕ್ಕೆ ಮರಳಿ ನಮ್ಮ ಮಕ್ಕಳು ಅದನ್ನು ನೋಡುವುದು ತಡೆಯಬೇಕೆಂದುಕೊಂಡರೆ 74 00:06:08,160 --> 00:06:09,100 ಆಗುತ್ತಿಲ್ಲ. 75 00:06:09,300 --> 00:06:13,560 ನಿನ್ನನ್ನು ಬಲ್ಲೆ. ಬಾಧಿಸುತ್ತಿರುವುದು ಗೊತ್ತು, ಅದನ್ನು ಮುಚ್ಚಿಡುವುದರಿಂದ ಪ್ರಯೋಜನವಿಲ್ಲ. 76 00:06:13,760 --> 00:06:16,330 ನಾನು ಚೆನ್ನಾಗಿದ್ದೇನೆ, ರಾಬ್. ಮಕ್ಕಳು ಚೆನ್ನಾಗಿದ್ದಾರೆ. 77 00:06:17,370 --> 00:06:20,610 ತುಂಬಾನೇ ನಡೆಯುತ್ತಿದ್ದು ಅದರಲ್ಲಿ ಕೆಲವನ್ನು ನಾನು ಸರಿಪಡಿಸಬಲ್ಲೆ. 78 00:06:20,810 --> 00:06:23,710 ನಾನು ಸರಿಪಡಿಸಲಾಗದ ವಿಚಾರದ ಬಗ್ಗೆ ಗಮನ ಹರಿಸಲಾರೆ. 79 00:06:31,850 --> 00:06:33,390 ಇದು ಒಂದು ರೀತಿ ದೊಡ್ಡ ದಿನ. 80 00:06:35,560 --> 00:06:36,520 ನನ್ನೊಂದಿಗಿರುವೆಯಾ? 81 00:06:44,690 --> 00:06:46,680 ಸರಿ. ತಂಡವು ಇಷ್ಟರಲ್ಲೇ ಇಲ್ಲಿರಲಿದೆ. 82 00:06:46,880 --> 00:06:50,700 ನಮ್ಮನ್ನು ಒಂದು ಕುಟುಂಬವಾಗಿ ಚಿತ್ರೀಕರಿಸಲಿದ್ದಾರೆ ಎಂಬುದನ್ನಷ್ಟೇ ನೆನಪಿಡಿ. 83 00:06:51,280 --> 00:06:53,530 ಆಗ ಜನರು ನಮ್ಮನ್ನು ಅರಿಯಬಹುದು. 84 00:06:53,950 --> 00:06:55,350 ಯಾವುದೇ ಭಯ ಪಡಬೇಕಿಲ್ಲ. 85 00:06:55,550 --> 00:06:57,810 ಸಹಜವಾಗಿರಿ, ಆಯ್ತಾ? ನೀವು ನೀವಾಗಿರಿ. 86 00:06:58,010 --> 00:07:02,000 ಹೌದು, ಸಹಜವಾಗಿ. ಹೊರಗಡೆ ಕಪ್ಪು ದಿರಿಸಿನಲ್ಲಿ ನಿಂತಿರುವ ಗಂಡಸರ ಬಗ್ಗೆ ಚಿಂತಿಸಬೇಡಿ. 87 00:07:02,210 --> 00:07:05,780 - ಹುಚ್ಚರು ಬರದಿರಲೆಂದು ಅವರು ಇಲ್ಲಿದ್ದಾರೆ. - ಅವರನ್ನು ಹಾಗೆ ಕರೆಯಬೇಡ. 88 00:07:05,980 --> 00:07:08,620 ಅಂಥವರನ್ನು ನಾನು ಇನ್ನೇನೆಂದು ಕರೆಯಬೇಕು… 89 00:07:08,820 --> 00:07:11,410 ವಿಷಯ ಮಂಡಿಸುತ್ತಿದ್ದ. ಭವಿಷ್ಯವು ಕರಾಳವಾಗಿದೆ. 90 00:07:11,610 --> 00:07:14,080 - ಅರ್ಬನ್ಡಾಕ್ಸ್ ಹಿಂಸೆ ಒಪ್ಪಲ್ಲ. - ಏನು ತಮಾಷೆನಾ? 91 00:07:14,280 --> 00:07:16,250 ಗಂಡಸರಿಗೆ ನಿಲ್ಲಲು ಪ್ರೋತ್ಸಾಹಿಸುತ್ತಿದ್ದಾನೆ… 92 00:07:16,450 --> 00:07:18,830 - ತಲೆ ಕೆಡಿಸ್ತಿದ್ದಾನೆ. - ಅಂದುಕೊಳ್ಳುವ ಮುಂಚೆ ಕೇಳು. 93 00:07:19,030 --> 00:07:21,130 - ಅಷ್ಟೇ ನೀನು ಮಾಡೋದು. - ನಿಮ್ಮ ಮಗ ಮೂಲಭೂತವಾದಿ. 94 00:07:21,330 --> 00:07:22,710 ಬಾಯಿ ಮುಚ್ಚು. ನಾನು ಹಾಗಲ್ಲ… 95 00:07:22,910 --> 00:07:24,720 ಆಯ್ತು. ಹೇ, ಎಲ್ಲರೂ, ಬಿಡ್ರಿ. 96 00:07:24,920 --> 00:07:28,010 ಇದು ನಿಮ್ಮ ತಾಯಿಗೆ ಪ್ರಮುಖವಾದ ದಿನ, ಹಾಗಾಗಿ ನೀವು ಆಹಾರ, ಪ್ರವಾಸ, 97 00:07:28,210 --> 00:07:30,430 ಮತ್ತು ಇನ್ನೇನು, ನಿಮ್ಮ ಅಜ್ಜಿ ಹೇಳುವ 98 00:07:30,630 --> 00:07:33,060 ತಮಾಷೆಯ ಸಂಗತಿಗಳ ಬಗ್ಗೆ ಮಾತನಾಡಬೇಕು. ಅಷ್ಟೇ. 99 00:07:33,260 --> 00:07:35,560 ಬಹುಶಃ, ಮ್ಯಾಟಿ, ಶುಭ್ರವಾದ ಅಂಗಿ ಹಾಕಿಕೋ. 100 00:07:35,760 --> 00:07:39,270 ಈ ನಾಟಕದಲ್ಲಿ ನಾನು ಭಾಗವಹಿಸಲಾರೆ. ಆಯ್ತಾ? ನೀನು ಗೆಲ್ಲುವುದು ನನಗೆ ಬೇಡ. 101 00:07:39,470 --> 00:07:40,940 ಬಿಡೋ. ಆಕೆ ನಿನ್ನ ತಾಯಿ. 102 00:07:41,140 --> 00:07:44,490 ಸರಿ, ನಿನಗೆ ಹಾಗನ್ನಿಸಿರುವುದಕ್ಕೆ ನನ್ನನ್ನು ಕ್ಷಮಿಸು. 103 00:07:44,680 --> 00:07:48,070 ಮಗುವಿನಂತೆ ಆಡ್ತಿರುವೆ. ಅಮ್ಮ ಮಾಡ್ತಿರುವುದು ಮುಖ್ಯವಾದದ್ದು. ನಿನಗೆ ಕಾಣಲ್ವಾ? 104 00:07:48,270 --> 00:07:50,570 ಹೆಂಗಸರ ದೇಹಗಳ ಬಗ್ಗೆ ಗಂಡಸರು ನಿರ್ಣಯಿಸಲಾಗದು. 105 00:07:50,770 --> 00:07:53,870 ಹಾಗಾದರೆ ಗಂಡಸರ ದೇಹಗಳು? ನನ್ನದೇನು? ನನ್ನ ಮುಖವನ್ನು ನೋಡು. 106 00:07:54,070 --> 00:07:55,800 - ನಾನು ಕ್ಷಮೆ ಕೇಳಿದೆ. - ಅಮ್ಮ? 107 00:07:56,430 --> 00:07:58,040 ಬೆಳೆದ ಮೇಲೆ ನನಗೆ ಈಓಡಿ ಬರುತ್ತಾ? 108 00:07:58,240 --> 00:08:00,140 ಹೌದು, ಚಿನ್ನ. ನಿನಗೆ ಬರುವ ಸಾಧ್ಯತೆ ಇದೆ. 109 00:08:00,350 --> 00:08:02,350 ಸರಿ. ಹಾಗಿದ್ದರೆ ನನಗೆ ನೀನು ಗೆಲ್ಲಬೇಕು. 110 00:08:03,850 --> 00:08:06,880 ಇಲ್ಲ. ಅರ್ಬನ್ಡಾಕ್ಸ್ ಸರಿ ಹೇಳಿದ. ನೀವು ಹೆಂಗಸರೆಲ್ಲಾ ಒಂದೇನೇ. 111 00:08:07,080 --> 00:08:08,880 ಹೆಂಗಸರಾ? ಮತಾಂಧನ ಹಾಗೆ ಮಾತನಾಡುವೆ. 112 00:08:09,080 --> 00:08:10,340 ಹೇ, ಪುಟ್ಟ. ಏನೋ. 113 00:08:10,540 --> 00:08:13,720 ಕುಟುಂಬ ಎಂದರೆ ಕೆಲವೊಮ್ಮೆ ಒಬ್ಬರಿಗೊಬ್ಬರು ತ್ಯಾಗ ಮಾಡಬೇಕಾಗುತ್ತದೆ. 114 00:08:13,920 --> 00:08:17,620 - ನನಗೆ ಈ ಕುಟುಂಬದಲ್ಲಿ ಇರಲು ಇಷ್ಟವಿಲ್ಲವೇನೋ. - ಬಿಡು. ಹಾಗನ್ನಬೇಡ. 115 00:08:18,870 --> 00:08:22,060 ಹೇ, ಅವನಿಗೆ ಸ್ವಲ್ಪ ಸಮಯಾವಕಾಶ ಬೇಕು. ಅಷ್ಟೇ. 116 00:08:22,260 --> 00:08:23,040 ಹಾಂ. 117 00:09:14,010 --> 00:09:18,500 "ಜೋಯಾಳನ್ನು ಆರು ತಿಂಗಳು ಬಂಧನದಲ್ಲಿರಿಸಿ ಕಾರ್ಪೇಥಿಯಾಗೆ ಗಡೀಪಾರು ಮಾಡಲಾಯಿತು. 118 00:09:18,700 --> 00:09:21,120 "ಪೊಲೀಸರಿಗೆ ಗೊತ್ತಿದ್ದರೂ ಏನನ್ನೂ ಮಾಡಲಿಲ್ಲ. 119 00:09:21,320 --> 00:09:24,290 "ಅವರಿಗೆ ಹೆಚ್ಚು ಆಹಾರ ಕೊಟ್ಟರೆ ಗಂಡಸರು ಪತ್ನಿಯರಿಗೆ ಹೊಡೆಯುವರು. 120 00:09:24,490 --> 00:09:27,860 {\an8}"ಒಂದು ಕಾಲದಲ್ಲಿ, ಮಹಿಳೆಯರು ಚಾಲಿತ ಹಣದಂತಿದ್ದರು, ಸಂಪನ್ಮೂಲದಂತೆ. 121 00:09:28,060 --> 00:09:28,800 {\an8}ಚಾಲಿಸ್ ಹೋಟೆಲ್, ಕಾರ್ಪೇಥಿಯಾ 122 00:09:29,000 --> 00:09:31,050 {\an8}ಎರಡು ನಿಮಿಷಗಳಲ್ಲಿ ಅರಮನೆಗೆ ಹೊರಡಬೇಕು. 123 00:09:31,250 --> 00:09:34,780 "ವ್ಯವಸ್ಥೆ ಮುರಿದಿದೆ. ಹೆಂಗಸರು ಮಾತ್ರ ಅದನ್ನು ಮರುನಿರ್ಮಿಸಬಲ್ಲರು." 124 00:09:37,070 --> 00:09:40,580 ಇದು ಕ್ಲೀಷೆಗಳಿಂದ ತುಂಬಿದೆ, ಖಂಡಿತ. ಆದರೆ ನಿನಗೆ ವಿಶೇಷವಾದದ್ದು ಸಿಕ್ಕಿದೆ. 125 00:09:41,080 --> 00:09:43,160 ಇದನ್ನು ಸರಿಪಡಿಸಿ ನನ್ನ ಸಂಪಾದಕರ ಬಳಿ ತಾ. 126 00:09:44,160 --> 00:09:46,620 ಒಬ್ಬ ಗಂಡಸು ಅಲ್ಲಿಗೆ ಮರಳಿ ಹೋಗಬೇಕೆನ್ನುವಂತಿದೆ. 127 00:09:47,210 --> 00:09:47,980 ನೀವು ಹೋಗಬಾರದೇ? 128 00:09:48,180 --> 00:09:52,300 ಗಡಾಫಿ ಬಗ್ಗೆ 200 ಪದಗಳು ಬರೆದು ಮೂರು ಪೈಂಟ್ ರಕ್ತ ಕಳೆದುಕೊಂಡೆ. ಅದೃಷ್ಟ ಮುಗಿದಾಗ ಅರಿಯಬೇಕು. 129 00:09:54,800 --> 00:09:56,880 ಪುಸ್ತಕ ಬರೆಯುವ ಬಗ್ಗೆ ಆಲೋಚಿಸುತ್ತಿದ್ದೇನೆ. 130 00:09:58,640 --> 00:09:59,850 ಈಓಡಿ ಚರಿತ್ರೆ. 131 00:10:03,970 --> 00:10:04,880 ತುಂಡೆಓಜೋ.ನೆಟ್ 132 00:10:05,080 --> 00:10:06,020 ನಿಜವಾಗಲೂ? 133 00:10:08,270 --> 00:10:09,520 ಮಾರ್ಕ್ ಟ್ವೈನ್ ಓದಿರುವೆಯಾ? 134 00:10:11,110 --> 00:10:14,860 ನಮ್ಮ ಪ್ರಮುಖ ದಿನಗಳು ನಾವು ಹುಟ್ಟಿದ ದಿನ ಮತ್ತು ಯಾಕೆ ಎಂದು ತಿಳಿಯುವ ದಿನ ಅಂದರು. 135 00:10:21,410 --> 00:10:23,200 ವಿಕ್ಟರ್ನ ಭೇಟಿಯಾಗಲು ನಾನೂ ಬರಲೇ? 136 00:10:24,290 --> 00:10:25,200 ಯಾಕೆ? 137 00:10:26,870 --> 00:10:28,330 ಜೋಯಾ ನಿನಗೇನಾದರೂ ಹೇಳಿದಳಾ? 138 00:10:33,460 --> 00:10:37,010 ಟಾಟಿಯಾನಾ ಮೊಸ್ಕಲೇವ್ ಮತ್ತು ಜನರಲ್ ಜೋಯಾ ಸಹೋದರಿಯರು. 139 00:10:44,720 --> 00:10:46,640 ಅದ್ಭುತ. ಅದ್ಭುತ. 140 00:10:47,270 --> 00:10:49,060 ಬಾ. ಟ್ಯಾಕ್ಸಿ ಕಾಯುತ್ತಿದೆ. 141 00:10:49,640 --> 00:10:51,770 - ನೀನು ನನ್ನ ಛಾಯಾಗ್ರಾಹಕ ಎನ್ನೋಣ. - ಸರಿ. 142 00:11:03,660 --> 00:11:05,560 ನಮಗೆ ಇದಕ್ಕೆ ಒಂದೇ ಅವಕಾಶ ಇರುವುದು, ಆಯ್ತಾ? 143 00:11:05,760 --> 00:11:08,560 ಪ್ರಥಮ ಮಹಿಳೆಯನ್ನು ಮಾಧ್ಯಮದವರೊಂದಿಗೆ ಒಬ್ಬಂಟಿಯಾಗಿ ಬಿಡಲ್ಲ. 144 00:11:08,760 --> 00:11:12,580 ಆಕೆಯೊಂದಿಗೆ ನಾವು ಮಾತನಾಡಬೇಕಾದರೆ, ಇಲ್ಲಿಂದ ತಪ್ಪಿಸಿಕೊಳ್ಳಲು ಜಾದೂ ಮಾಡಬೇಕಾಗಬಹುದು. 145 00:11:14,340 --> 00:11:16,860 ಏನೇ ಆದರೂ, ಶಾಂತವಾಗಿರು, ನಾನು ಮಾತನಾಡುವೆ. 146 00:11:17,060 --> 00:11:17,840 ಗೊತ್ತು. 147 00:11:20,930 --> 00:11:21,930 ದೇವರೇ. 148 00:11:26,310 --> 00:11:30,890 - ನಿಮ್ಮನ್ನು ನೋಡಿ ಸಂತೋಷವಾಯಿತು, ಮಿ. ಬ್ಲೀಸ್. - ನಮಗೂ ಸಂತೋಷವೇ. ನನ್ನ ಛಾಯಾಗ್ರಾಹಕ. 149 00:11:37,860 --> 00:11:39,110 ಹೇಳಿದ್ದು ನೆನಪಿದೆಯೇ? 150 00:11:39,740 --> 00:11:41,570 - ನೀವು ಮಾತನಾಡುವಿರಿ. - ಒಳ್ಳೆ ಹುಡುಗ. 151 00:11:53,670 --> 00:11:55,000 - ಪುಸ್ತಕ? - ಸರಿ. 152 00:12:11,980 --> 00:12:12,890 ನಂತರ. 153 00:12:19,360 --> 00:12:22,450 ಅಧ್ಯಕ್ಷರ ಅತಿ ಹಿರಿಯ ಸಲಹೆಗಾರರಿಗೆ ನಿಮ್ಮನ್ನೀಗ ಪರಿಚಯಿಸುವೆ. 154 00:12:22,950 --> 00:12:24,780 - ಜನರಲ್ ಮಿರೋನ್. - ಜನರಲ್ ಮಿರೋನ್. 155 00:12:27,910 --> 00:12:31,460 ಅರಮನೆಯು ನಿಮ್ಮ ಪ್ರಶ್ನೆಗಳನ್ನು ಪರಿವೀಕ್ಷಿಸಿ ಕೆಲ ಸಣ್ಣ ಬದಲಾವಣೆಗಳನ್ನು ಮಾಡಿದೆ. 156 00:12:35,250 --> 00:12:38,320 ನಾನು ಗಂಭೀರ ವಾರ್ತಾ ಪತ್ರಿಕೆಗಳಿಗೆ ಕೆಲಸ ಮಾಡುವೆ, ಹಲೋ! ಪತ್ರಿಕೆಗಲ್ಲ. 157 00:12:38,520 --> 00:12:40,130 ನೀವು ಯಾರೆಂದು ಗೊತ್ತು, ಬ್ಲೀಸ್. 158 00:12:41,970 --> 00:12:42,880 ಹೋಗೋಣವೇ? 159 00:13:20,590 --> 00:13:22,300 ಹುಟ್ಟುಹಬ್ಬದ ಶುಭಾಶಯಗಳು! 160 00:13:24,510 --> 00:13:27,200 - ಧನ್ಯವಾದ, ಅಪ್ಪ. - ಹುಟ್ಟುಹಬ್ಬದ ಶುಭಾಶಯ, ರಾಕ್ಸಿ. 161 00:13:27,400 --> 00:13:31,460 ಇದು ವಿಶೇಷವಾದದ್ದು. ಕಾನೂನಿನ ಪ್ರಕಾರ ಈಗ ನೀನು ವಯಸ್ಕಳು. ತರಲೆ ಮಾಡಿದರೆ, ನಿನ್ನ ಜವಾಬ್ದಾರಿಯೇ. 162 00:13:31,660 --> 00:13:34,100 ಹೌದು, ಜೈಲು ಶಿಕ್ಷೆಯಾಗುತ್ತೆ. ಕ್ಷಮಿಸಿ. 163 00:13:38,360 --> 00:13:40,570 - ಏನಿದು? - ತೆರೆದು ನೋಡು. 164 00:13:46,740 --> 00:13:49,030 ಮೊಂಕ್ ಅಂಡ್ ಸನ್ಸಿನ ಮೂರರ ಒಂದು ಭಾಗ ನಿನಗೆ. 165 00:13:50,620 --> 00:13:51,910 ನಾನಿದನ್ನು ನಂಬಲಾರೆ. 166 00:13:52,790 --> 00:13:55,360 - ಧನ್ಯವಾದ. - ಒಬ್ಬನಿಗೆ ಈಜುಕೊಳದಲ್ಲಿ ಕಕ್ಕಸು ಮಾಡಿಸಿದೆ. 167 00:13:55,560 --> 00:13:59,040 ಮಿಕ್ಕ ಲಂಡನ್ ಮನೆಗಳಲ್ಲಿ ಭೇದಿ ಮಾಡಿಕೊಳ್ಳುತ್ತಿದ್ದಾರೆ. ಪರಂಪರೆಗಳಿವು. 168 00:14:00,380 --> 00:14:02,250 - ಗಾಡಿ ಓಡಿಸಬೇಕು. - ಪೆದ್ದನ ಹಾಗೆ ಆಡಬೇಡ. 169 00:14:02,880 --> 00:14:06,010 ಈ ಕುಟುಂಬಕ್ಕೆ ಬೇಕಿರುವುದು, ಸ್ವಲ್ಪ ಭಯ. ಪ್ರತಿಷ್ಠೆ ಹೆಚ್ಚಿಸು. 170 00:14:06,510 --> 00:14:08,130 ಎಲ್ಲವೂ ಲೆಕ್ಕಾಚಾರವಲ್ಲ. 171 00:14:09,430 --> 00:14:11,680 ಇಂದು ಬಾರ್ಬರಾ ನಿನಗೆ ಪಾರ್ಟಿ ಕೊಡುವಳು. 172 00:14:12,970 --> 00:14:14,140 - ನಿಜವಾಗಲೂ? - ಹೌದು. 173 00:14:14,720 --> 00:14:17,140 ನಿನ್ನ ಸ್ನೇಹಿತರನ್ನು ಕರೆ ತಾ. ತಿಕ್ಕಲುಗಳು ಬೇಡ. 174 00:14:17,640 --> 00:14:19,150 ನನಗೆ ಯಾವ ಸ್ನೇಹಿತರೂ ಇಲ್ಲ. 175 00:14:19,560 --> 00:14:21,900 - ಒಳ್ಳೆಯದು. - ಸರಿ. ಈಗ ಭಾಷಣ. 176 00:14:22,150 --> 00:14:26,280 ನನ್ನ ಮಗಳಿಗೆ 18 ತುಂಬಿದೆ, ಮತ್ತು ಅವಳಿಗೆ ಬೇಕಿರುವುದೆಲ್ಲವೂ ಅವಳಿಗೆ ಸಿಕ್ಕಿದೆ. 177 00:14:30,200 --> 00:14:31,620 ಏನಾಗಿದೆ ನಿನಗೆ? 178 00:14:33,290 --> 00:14:36,040 ನಮ್ಮಮ್ಮ ಅಷ್ಟೇ. 179 00:14:41,380 --> 00:14:44,660 - ಬನ್ನಿ, ಸೋದರಿಯರೇ. ಬೇಗ ಈಗ. - ಸೋದರಿಯರೇ, ಎಲ್ಲಿಗೆ ಹೊರಟಿರುವಿರಿ? 180 00:14:44,850 --> 00:14:46,630 - ಶುಭವಾಗಲಿ. - ಶುಭವಾಗಲಿ, ಸೋದರಿ ಮರಿಯಾ. 181 00:14:47,010 --> 00:14:49,560 - ದಯವಿಟ್ಟು ಹೋಗಬೇಡಿ. - ಅವಳೇ ನೋಡಿಕೊಳ್ಳಲಿ. 182 00:14:49,760 --> 00:14:51,040 ಹೌದು. ಹಿಂದೆ ಹತ್ತಿರಿ. 183 00:14:51,240 --> 00:14:51,950 ಸಹೋದರಿ ಫಾತಿಮಾ. 184 00:14:52,150 --> 00:14:54,720 - ಇನ್ನು ನಾವು ಇರಲಿಕ್ಕಾಗದು. - ಇಲ್ಲ, ಕೈಚೆಲ್ಲಬೇಡಿ. 185 00:14:55,520 --> 00:14:56,350 ದಯವಿಟ್ಟು. 186 00:15:07,490 --> 00:15:10,070 ಹೀಗೆ ಬನ್ನಿ. ಸಿಸ್ಟರ್ಸ್ ಆಫ್ ಕ್ರೈಸ್ಟಿಗೆ ಸ್ವಾಗತ. 187 00:15:10,660 --> 00:15:11,570 ಹೀಗೆ ಬನ್ನಿ. 188 00:15:32,140 --> 00:15:33,550 ಹೇ. ಹೇಗಿದ್ದೀಯಾ? 189 00:15:36,010 --> 00:15:37,430 ನೀನು ವಿಡಿಯೋ ಪ್ರಕಟಿಸಿದೆ. 190 00:15:38,480 --> 00:15:41,060 - ನಾನು… - ಈ ರಾತ್ರಿ ನೀನು ನಮ್ಮೊಂದಿಗೆ ತಿನ್ನಬೇಡ. 191 00:15:41,560 --> 00:15:44,150 ನಂಬಲರ್ಹವಾದವರ ಜೊತೆ ಈವ್ ಇರಬೇಕು. 192 00:15:45,770 --> 00:15:46,730 ಬನ್ನಿ, ಹುಡುಗಿಯರೇ. 193 00:15:47,070 --> 00:15:51,360 ಇರಿ. ಇರಿ. ಸೀಮಾ. ಲುವೇನ್. ನಾನು… ನಾನು… 194 00:15:58,580 --> 00:16:00,830 ಇದು ನಮಗೆ ಎಂದಿನಂತಿನ ಶನಿವಾರ. 195 00:16:04,830 --> 00:16:06,880 - ರಾಬ್. - ಹಾಂ. 196 00:16:09,300 --> 00:16:10,780 ಛೆ. ಕ್ಷಮಿಸಿ. 197 00:16:10,980 --> 00:16:12,410 ಸರಿ. ಆಯ್ತು. ಒಂದು ಕ್ಷಣ. 198 00:16:12,610 --> 00:16:14,390 - ಆಗಲಿಲ್ಲ… - ಕೊನೆಯ ಭಾಗ ಕಟ್ ಮಾಡಿ. 199 00:16:14,590 --> 00:16:16,470 - ನೆನಪಾಗಲಿಲ್ಲ. - ಮತ್ತೊಮ್ಮೆ ಮಾಡೋಣ. 200 00:16:16,890 --> 00:16:17,970 ಕ್ಷಮಿಸಿ, ದಯವಿಟ್ಟು. 201 00:16:18,180 --> 00:16:20,710 - ನೀವು ಭಯಗೊಂಡಿದ್ದೀರಿ. - ಬಿಸಿಯಾಗಿದೆ. 202 00:16:20,910 --> 00:16:23,140 ಹಾಂ. ಅದು ಬೆಳಕುಗಳಿಂದ. ಅಭ್ಯಾಸ ಮಾಡಿಕೊಳ್ಳಿ. 203 00:16:23,770 --> 00:16:25,520 ದವಡೆಯನ್ನು ಆರಾಮವಾಗಿರಿಸುವಿರಾ? 204 00:16:27,360 --> 00:16:28,630 ನೀವು, ಕೆಟ್ಟ ಮಾತನಾಡಬೇಡಿ. 205 00:16:28,830 --> 00:16:29,970 - ಗೊತ್ತು. ಸರಿ. - ಬನ್ನಿ. 206 00:16:30,170 --> 00:16:32,350 ಮ್ಯಾಟಿ ಅಭ್ಯಾಸದಲ್ಲಿದ್ದಾನೆ ಎಂದು ಹೇಳಿ. 207 00:16:32,550 --> 00:16:35,270 ಗೊತ್ತು. ಏನಾಯ್ತು ಅಂತ ಗೊತ್ತಿಲ್ಲ. ಅದು… 208 00:16:35,470 --> 00:16:37,060 - ಆದರೆ ಮಾಡುವೆ. - ಸರಿ. 209 00:16:37,260 --> 00:16:38,770 - ಖಂಡಿತ. - ಸರಿ. 210 00:16:38,970 --> 00:16:42,310 - ಸರಿ, ಮತ್ತೊಮ್ಮೆ ಮಾಡೋಣ. ಮೊದಲಿನಿಂದ. - ಸರಿ. ಅದನ್ನು ಮತ್ತೆ ಪ್ರಯತ್ನಿಸಿ. 211 00:16:42,510 --> 00:16:44,040 - ಹಾಂ. - ನೀವು ತಯಾರಿದ್ದಾಗ. 212 00:16:46,880 --> 00:16:47,710 ಛೆ. 213 00:16:49,050 --> 00:16:51,530 ತಂದೆಯಂತೆ ಮಗಳು ಎನ್ನುವೆ. 214 00:16:51,730 --> 00:16:55,040 ಆಯ್ತು. ಐದು ನಿಮಿಷ ವಿರಾಮ ಪಡೆಯೋಣ, ಕಣ್ರೀ, ಸ್ವಚ್ಛ ಮಾಡಲು. 215 00:16:55,230 --> 00:16:56,180 ಕಟ್. 216 00:16:59,600 --> 00:17:01,060 ಎಷ್ಟು ಗಲೀಜು. ನೋಡಿ ಇದನ್ನು. 217 00:17:02,890 --> 00:17:03,730 ನಿನಗೆ ಬೇಕಾ? 218 00:17:04,020 --> 00:17:09,010 ಸರಿ. ಇದರ ನಂತರ, ನೀವು ಎದುರಿಸಬೇಕಾದ ಒಂದು ಸಣ್ಣ ಸಮಸ್ಯೆ ಇದೆ. 219 00:17:09,210 --> 00:17:10,300 ಏನದು? 220 00:17:10,500 --> 00:17:13,570 ನಿಮ್ಮ ಸಾಮಾಜಿಕ ಮಾಧ್ಯಮದ ಕೆಟ್ಟ ಅಭಿಪ್ರಾಯಗಳು ನೆನಪಿದೆಯೇ? 221 00:17:13,770 --> 00:17:14,510 ಹಾಂ. 222 00:17:14,710 --> 00:17:17,950 ಹಾಂ, ಮತ್ತೆ, ಒಂದರ ಮೂಲವನ್ನು ಪತ್ತೆ ಮಾಡಿದೆವು ಮತ್ತು… 223 00:17:20,410 --> 00:17:21,290 ಮತ್ತು? 224 00:17:25,870 --> 00:17:28,540 ನೆಲದ ಮೇಲೆಲ್ಲಾ ಚೆಲ್ತಿದೆ. ನನಗೆ ಸಹಾಯ ಮಾಡುವೆಯಾ? 225 00:17:31,340 --> 00:17:33,090 ಇದು ನಮಗೆ ಎಂದಿನಂತಿನ ಶನಿವಾರ. 226 00:17:33,670 --> 00:17:36,830 ಹಾಂ, ಸಾಮಾನ್ಯವಾಗಿ ಮ್ಯಾಟಿ ಸಾಕರ್ ಅಭ್ಯಾಸದಲ್ಲಿ ಇರುತ್ತಾನೆ. 227 00:17:37,030 --> 00:17:39,680 ನಿಜ. ನಾನು ಮತ್ತು ಹುಡುಗಿಯರು ವಾಫಲ್ಸ್ ತಯಾರಿಸುತ್ತೇವೆ. 228 00:17:40,810 --> 00:17:43,880 ರಾಬ್, ಎಂಥಾ ಒಳ್ಳೆಯ ತಂದೆ. ವಾರದ ದಿನಗಳಂದು ಉಪಹಾರ ತಯಾರಿಸುತ್ತಾರೆ. 229 00:17:44,080 --> 00:17:48,460 ಹಾಗಾಗಿ ಶನಿವಾರ ಬಂದಾಗ, ಈ ರೀತಿ ಅವರಿಗೆ ರಜೆ ಕೊಡುತ್ತೇವೆ. 230 00:17:48,660 --> 00:17:50,020 ನಿಮ್ಮ ವಿಶೇಷತೆ ಏನು? 231 00:17:51,610 --> 00:17:54,490 ಬಹಳ ಒಳ್ಳೆಯ ಪ್ರಶ್ನೆ. ನನ್ನ ವಿಶೇಷತೆ ಏನು? 232 00:17:56,200 --> 00:17:58,890 ಆಮ್ಲೆಟ್ ತಯಾರಿಸುವುದು, ಎನ್ನಬಹುದು. 233 00:17:59,090 --> 00:18:02,290 ಅಪ್ಪ ಒಳ್ಳೆ ಅಡುಗೆ ಮಾಡುತ್ತಾರೆ. ಕೊಲಂಬಿಯಾದ ಖಾದ್ಯ ತಯಾರಿಸುತ್ತಾರೆ. 234 00:18:02,830 --> 00:18:08,150 ಹೂವೊಸ್ ಪೆರಿಕೋಸ್ ಮತ್ತು ಚಾಕಲೇಟ್ ಸಂತಾಫೆರೆನ್ಯೋ, ಇದು ವಿಚಿತ್ರ ಎನಿಸಬಹುದು 235 00:18:08,350 --> 00:18:12,070 ಯಾಕೆಂದರೆ ಇದು ಚೀಸ್ ಜೊತೆಗೆ ಚಾಕಲೇಟ್, ಆದರೆ ತುಂಬಾ, ತುಂಬಾ ಚೆನ್ನಾಗಿರುತ್ತೆ. 236 00:18:12,270 --> 00:18:16,240 ನನ್ನ ಇಷ್ಟವಾದವುಗಳನ್ನು ತಯಾರಿಸುತ್ತಾರೆ. ಪಾನ್ ದೆ ಬೋನೋ, ಚಾಂಗುವಾ, ಅರೇಪಾ ಕಾನ್ ಕ್ವೆಸಿತೋ 237 00:18:16,440 --> 00:18:19,640 - ಮತ್ತು ಏನಂದ್ರೆ... - ನೀನು ಎಲ್ಲವನ್ನೂ ಹೇಳಬೇಕಿಲ್ಲ. 238 00:18:20,390 --> 00:18:22,890 ಆದರೆ ಊಟ, ಪ್ರವಾಸದ ಬಗ್ಗೆ ಮಾತ್ರ ಮಾತನಾಡಬೇಕು ಅಂದ್ರಿ… 239 00:18:23,180 --> 00:18:24,710 - ಛೆ. ಅದು... - ಮಾರ್ಗೋ. 240 00:18:24,910 --> 00:18:27,880 ಮಾರ್ಗೋ, ನೀವೂ ಸ್ಪ್ಯಾನಿಷ್ ಮಾತನಾಡ್ತೀರಾ? ಅದನ್ನೂ ನಾವು ಪಡೆಯಬಹುದು. 241 00:18:28,080 --> 00:18:30,090 ಆಕೆಗೆ ಬರಲ್ಲ. ನಾನು ಮತ್ತು ಮಕ್ಕಳು ಮಾತ್ರ. 242 00:18:30,290 --> 00:18:31,360 ಮತ್ತು ನಾವೇನೇ… 243 00:18:41,410 --> 00:18:42,280 ...ಎನ್ಜಿಓ. 244 00:18:55,760 --> 00:18:56,880 ಹಾಂ, ವೆರ್ದಾದ್. 245 00:19:12,560 --> 00:19:15,900 ದೀರ್ಘಕಾಲ ಬಾಳುವ ವಿವಾಹಕ್ಕೆ ರಹಸ್ಯವೇನು, ಅಧ್ಯಕ್ಷರೇ? 246 00:19:21,360 --> 00:19:23,030 ಸಮಾನ ಅಭಿರುಚಿಗಳು. 247 00:19:23,830 --> 00:19:24,830 ಸರಿ. 248 00:19:25,410 --> 00:19:27,950 ನೀವು ಮತ್ತು ಪ್ರಥಮ ಮಹಿಳೆ ಒಟ್ಟಾಗಿ ಏನು ಮಾಡಲು ಬಯಸುವಿರಿ? 249 00:19:38,010 --> 00:19:39,010 ಒಗಟು ಬಿಡಿಸುವುದು. 250 00:19:41,220 --> 00:19:42,300 ಒಗಟು ಬಿಡಿಸುವುದು. 251 00:19:44,890 --> 00:19:48,020 ಶ್ರೀಮತಿ ಮೊಸ್ಕಲೇವ್, ವಿಕ್ಟರ್ ಬಗ್ಗೆ ನಿಮ್ಮ ಮೊದಲ ಅಭಿಪ್ರಾಯ ಏನಾಗಿತ್ತು? 252 00:19:49,890 --> 00:19:54,480 ಅವರು ತುಂಬಾ ಆಕರ್ಷಕ ವ್ಯಕ್ತಿ, ಮತ್ತು ನಮ್ಮ ನಡುವೆ ಒಳ್ಳೆಯ ಆಕರ್ಷಣೆ ಇತ್ತು. 253 00:19:57,780 --> 00:19:58,610 ಥೂ. 254 00:20:02,240 --> 00:20:05,310 ಅಧ್ಯಕ್ಷರೇ, ಉತ್ತರದಲ್ಲಿರುವ ಮಹಿಳೆಯರ ಬಗ್ಗೆ ನಿಮ್ಮ ಅಭಿಪ್ರಾಯವೇನು? 255 00:20:05,510 --> 00:20:07,390 - ನಿಮಗೆ ಭಯವಾಗುತ್ತದೆಯೇ? - ಕೇಳುವ ಹಾಗಿಲ್ಲ. 256 00:20:07,590 --> 00:20:09,160 ಅವರು ದಂಗೆ ಏಳಬಹುದು. 257 00:20:10,460 --> 00:20:12,070 ಬಡವರ ಮಧ್ಯೆ ಜನಪ್ರಿಯರಾಗಿದ್ದಾರೆ. 258 00:20:12,260 --> 00:20:14,570 ನಿಮ್ಮ ದೇಶದೊಳಗೆ ಈ ಮಹಿಳೆಯರ ಕಳ್ಳಸಾಗಣೆ ಮಾಡಲಾಯಿತು. 259 00:20:14,770 --> 00:20:16,250 ಅವರ ಕೋಪ ಅರ್ಥವಾಗುವಂಥದ್ದೇ. 260 00:20:22,090 --> 00:20:24,090 ನಾನು ಬಡವನಾಗಿ ಬೆಳೆದೆ. 261 00:20:27,430 --> 00:20:30,180 ಪ್ರತಿ ರಾತ್ರಿ ಊಟ ಇಲ್ಲದೆ ಮಲಗುತ್ತಿದ್ದೆ. 262 00:20:32,350 --> 00:20:36,230 ನನ್ನ ತಂದೆ ಯುಕ್ರೇನಿಗೆ ಕೆಲಸ ಅರಸಲು ಗಡಿ ದಾಟಬೇಕಾಯಿತು. 263 00:20:39,360 --> 00:20:42,430 ನನ್ನ ಪ್ರೀತಿಯ ತಾಯಿ ನನಗೆ ಎಲ್ಲವನ್ನೂ ಕೊಡುತ್ತಿದ್ದರು ಆದರೆ 264 00:20:42,630 --> 00:20:44,240 ಕೊಡಲು ಆಕೆಯಲ್ಲಿ ಏನೂ ಇರಲಿಲ್ಲ. 265 00:20:45,160 --> 00:20:47,200 ಹಾಗಾಗಿ ನಾವು ತುಂಬಾ ಕಷ್ಟಪಟ್ಟೆವು. 266 00:20:49,120 --> 00:20:50,580 ಆದರೆ ದೇವರಿಗೆ ಅದೇ ಬೇಕಿತ್ತು. 267 00:20:59,670 --> 00:21:03,630 ಟಾಟಿಯಾನಾಗೂ ಹಾಗೆಯೇ ಇತ್ತು, ಆದರೆ ಪುಣ್ಯಕ್ಕೆ ಇವರು ನನ್ನನ್ನು ಕಾಪಾಡಿದರು. 268 00:21:16,690 --> 00:21:17,520 ಹೇ. 269 00:21:24,280 --> 00:21:26,610 ಚಿತ್ರಗಳು ತೆಗೆಯುವ ಹಾಗಿಲ್ಲ. ಇಳಿಸಿ. 270 00:21:27,700 --> 00:21:28,530 ಸರಿ. 271 00:21:48,050 --> 00:21:51,720 ಈ ಹೆಂಗಸರು ಒಂದು ಬಟ್ಟೆಯ ಕಾರ್ಖಾನೆಯನ್ನು ಸುಟ್ಟುಹಾಕಿದರು. 272 00:21:54,430 --> 00:21:57,480 ಕಡಿಮೆ ಸಂಬಳ ಮತ್ತು ಅಸಮಾನ ಭತ್ಯೆಯ ಬಗ್ಗೆ ಕೂಗಾಡುತ್ತಾ. 273 00:21:59,310 --> 00:22:00,940 ಈಗ ಮಹಿಳೆಯರಿಗೆ ಸಂಬಳವಿಲ್ಲ. 274 00:22:02,780 --> 00:22:05,860 ಅವರು ಕೆಲಸಕ್ಕೆ ಏನು ಮಾಡ್ತಾರೆ? ಸೂಳೆಗಾರಿಕೆಗೆ ಮರಳುವರೇ? 275 00:22:07,530 --> 00:22:09,780 ಗಂಡಸರಿಗೇನು ಸುಲಭವೇ? 276 00:22:10,070 --> 00:22:13,080 ನಾವು ಇದ್ದಿಲನ್ನು ಅಗೆಯುತ್ತೇವೆ. ಯುದ್ಧಕ್ಕೆ ಹೋಗುತ್ತೇವೆ. 277 00:22:13,330 --> 00:22:15,580 ಆದರೆ, ಮಹಿಳೆಯರೂ ಯುದ್ಧಕ್ಕೆ ಹೋಗುತ್ತಾರೆ. 278 00:22:23,960 --> 00:22:28,130 ಮಜಾ ಮಾಡಲು. ಅವರೂ ಗಂಡಸರಂತೆಯೇ ಎಂದು ತೋರಿಸಿಕೊಳ್ಳಲು. 279 00:22:29,800 --> 00:22:30,890 ಬೇರೇನೂ ಅಲ್ಲ. 280 00:22:49,280 --> 00:22:51,390 ಬಂಡುಕೋರರನ್ನು ಜೋಯಾ ಮುನ್ನಡೆಸುತ್ತಿದ್ದಾಳೆ. 281 00:22:51,590 --> 00:22:52,530 ಮಾತಾಡಿದ್ದು ಸಾಕು. 282 00:22:52,950 --> 00:22:55,940 - ತುಂಡೆ. ಬಾಯಿ ಮುಚ್ಚು. - ಜೋಯಾ ಹೆಣ್ಣು ಮಗು ಹೆತ್ತಿದ್ದಾಳೆ. 283 00:22:56,140 --> 00:22:57,120 ಸಾಕು ಅಂತಂದೆ. 284 00:22:57,620 --> 00:22:59,170 ಈ ಸಂದರ್ಶನ ಮುಗಿಯಿತು. 285 00:22:59,750 --> 00:23:01,420 ಎದ್ದೇಳಿ. ನೀವಿಬ್ರೂ. 286 00:23:13,850 --> 00:23:15,430 ಡೆಕ್ಲಾನ್. ಡೆಕ್ಲಾನ್. 287 00:23:17,100 --> 00:23:18,350 ಪರವಾಗಿಲ್ಲ. ಗಾಬರಿಯಾಗಬೇಡ. 288 00:23:25,270 --> 00:23:27,940 ಕುಳಿತುಕೋ, ತುಂಡೆ ಓಜೋ. 289 00:23:36,700 --> 00:23:37,950 ಸರಿ. ಸರಿ. ಸರಿ. 290 00:23:44,790 --> 00:23:47,610 - ಅರಮನೆಗೆ ಯಾಕೆ ಬಂದಿದ್ದೀರಿ? - ನಾನೊಬ್ಬ ಛಾಯಾಗ್ರಾಹಕ. 291 00:23:47,810 --> 00:23:50,120 ಅರಮನೆಗೆ ಯಾಕೆ ಬಂದಿದ್ದೀರಿ, ಅಂದೆ. 292 00:23:50,320 --> 00:23:52,160 ಇಲ್ಲ, ನಿಜವಾಗಲೂ. ನಾನೊಬ್ಬ ಛಾಯಾಗ್ರಾಹಕ. 293 00:23:52,360 --> 00:23:55,930 ಆಯ್ತಾ? ನಾನಿಲ್ಲಿ ಬಂದು ಹೆಚ್ಚು ಕಾಲವಾಗಿಲ್ಲ, ಆದರೆ ನಾನು ಮತ್ತು ಮಿ. ಬ್ಲೀಸ್… 294 00:24:06,820 --> 00:24:09,740 ಬಂಡುಕೋರ ಮಹಿಳೆಯರು ಆಹಾರ, ಔಷಧ ವಿತರಿಸಲು ನನ್ನ ಕರೆದೊಯ್ದರು. 295 00:24:09,940 --> 00:24:12,570 ಈ ಸಿರಿವಂತ ಭೂಖಂಡದಲ್ಲಿ ನಾನು ನೋಡಿದ ಬಡತನ ಆಘಾತಕಾರಿ. 296 00:24:13,410 --> 00:24:16,330 ನಾನೆಂದಿಗೂ ಮರೆಯದ ಹಸಿದ ಮುಖಗಳು. ನರಳಾಟ. 297 00:24:17,830 --> 00:24:22,330 ಮೊಸ್ಕಲೇವ್ ಕೆಳಗಿನ ಹುಡುಗಿಯರಿಗೆ, ಇನ್ನೈದು ವರ್ಷಗಳಲ್ಲಿ, ಬಂಡುಕೋರ ಮಹಿಳೆಯರ ಗತಿಯೇ ಆಗುವುದು. 298 00:24:23,370 --> 00:24:26,320 ನನಗೀಗಲೇ ಉತ್ತರ ಬೇಕು ಇಲ್ಲದಿದ್ದರೆ ನಿಮ್ಮಿಬ್ಬರಿಗೂ ಜೈಲು ಶಿಕ್ಷೆ. 299 00:24:26,520 --> 00:24:30,340 ಇರಿ. ಒಂದು ಕ್ಷಣ ಇರಿ. ಇಲ್ಲೇನೋ ಅಪಾರ್ಥ ಆಗಿದೆ, ಜನರಲ್ ಮಿರೋನ್. 300 00:24:30,760 --> 00:24:32,550 ನನ್ನ ಸಂಪಾದಕರೊಂದಿಗೆ ಮಾತನಾಡಬೇಕು. 301 00:24:34,930 --> 00:24:39,140 ನಮ್ಮಿಬ್ಬರಿಗೂ ಅಷ್ಟೇ. ನ್ಯಾಷನಲ್ ಜಿಯೋಗ್ರಾಫಿಕ್ಕಿಗೆ ಕೆಲಸ ಮಾಡುವೆ ಎಂದು ಹೇಳಿದ. 302 00:24:41,270 --> 00:24:42,100 ಏನು? 303 00:24:43,190 --> 00:24:44,060 ನನ್ನೊಂದಿಗೆ ಬಾ. 304 00:24:44,940 --> 00:24:47,220 ಇರಿ, ಇರಿ, ಇರಿ. ಇಲ್ಲ, ಇಲ್ಲ, ಇಲ್ಲ. ಡೆಕ್ಲಾನ್. 305 00:24:47,410 --> 00:24:50,150 ಡೆಕ್ಲಾನ್. ಡೆಕ್ಲಾನ್. ಇರಿ. ಡೆಕ್ಲಾನ್. 306 00:24:50,530 --> 00:24:52,780 ಡೆಕ್ಲಾನ್! ಡೆಕ್ಲಾನ್! 307 00:24:53,450 --> 00:24:55,530 ಛೆ. ಡೆಕ್ಲಾನ್! 308 00:24:57,030 --> 00:24:58,410 ಇಲ್ಲ, ಇಲ್ಲ, ಇಲ್ಲ. ಛೆ! 309 00:25:00,790 --> 00:25:03,160 ಗೂಬೆ ನನ್ಮಗನೇ! ನೀನು ದಡ್ಡ ಕಣೋ. 310 00:25:04,540 --> 00:25:07,900 {\an8}ಈಓಡಿಯಿಂದ ನೊಂದವರಿಗೆ ರಕ್ಷಣೆ ಮತ್ತು ನ್ಯಾಯ ಬೇಕಿದೆ. 311 00:25:08,100 --> 00:25:12,260 ಹಿಂಸೆಯನ್ನು ನೀವು ತಡೆಯಬಯಸಿದರೆ, ವಾಷಿಂಗ್ಟನ್ನಿಗೆ ಇರುವುದು ಒಂದೇ ಆಯ್ಕೆ. 312 00:25:12,630 --> 00:25:16,450 ಸಹಜತೆಗೆ ಮರಳಲು ಡೇನಿಯಲ್ ಡ್ಯಾಂಡನ್ ಒಬ್ಬರೇ ನಮ್ಮ ಭರವಸೆ. 313 00:25:16,650 --> 00:25:20,140 ಸುರಕ್ಷತೆಗೆ ಮರಳಲು. ಈ ಪ್ರಚಾರದ ಅನುಮೋದಕರು ಡೇನಿಯಲ್ ಡ್ಯಾಂಡನ್. 314 00:25:22,100 --> 00:25:23,680 ಹೇ. ಏನು ಮಾಡುತ್ತಿರುವೆ? 315 00:25:25,900 --> 00:25:29,400 ಆ ನಕಲಿ, ಸುಳ್ಳುಗಾರ, ಬಂಡವಾಳಶಾಹಿ ಮೇಯರ್ ಬಗ್ಗೆ ಕೆಟ್ಟದಾಗಿ ಪ್ರಕಟಿಸುತ್ತಿರುವೆಯಾ? 316 00:25:31,280 --> 00:25:34,990 "ಆ ದುಬಾರಿ ಶೂಗಳ ಸೂಳೆ ಬೇಯದ ಕೋಳಿಯಿದ್ದಂತೆ." 317 00:25:37,410 --> 00:25:41,290 ಕೋಳಿಯ ಬಗ್ಗೆ ನಾನು ಪ್ರಕಟಿಸಲಿಲ್ಲ. ಒಪ್ಪಿಗೆ ಸೂಚಿಸಿದೆ ಅಷ್ಟೇ. 318 00:25:43,450 --> 00:25:47,290 ನಿನ್ನ ರಹಸ್ಯ ಪೊಲೀಸರು ಅದನ್ನು ಕಂಡುಹಿಡಿದರೇ? 319 00:25:48,040 --> 00:25:51,840 ರಹಸ್ಯ ಪೊಲೀಸರು ನನ್ನ ಸಾಮಾಜಿಕ ಮಾಧ್ಯಮದ ತಂಡ ಅಂದರೆ, ಹೌದು. 320 00:25:52,040 --> 00:25:54,470 ಅದು ಕಷ್ಟವಾಗಲಿಲ್ಲ, ಜೋಸ್. ಏನೇ ಇದು? 321 00:25:55,130 --> 00:25:56,510 ಕ್ಷಮಿಸು. ನಾನು ಕೋಪದಲ್ಲಿದ್ದೆ. 322 00:25:57,550 --> 00:25:58,590 ಯಾಕೆ? 323 00:25:59,470 --> 00:26:01,760 ಸಾರ್ವಜನಿಕ ವ್ಯಕ್ತಿಯಾಗಲು ನೀನು ಬಯಸಿದೆ. 324 00:26:02,140 --> 00:26:03,040 ನೀನು ಆಯ್ಕೆ ಮಾಡಿದೆ. 325 00:26:03,240 --> 00:26:05,840 ಎಲ್ಲಾ ಸಮಯದಲ್ಲೂ 326 00:26:06,040 --> 00:26:09,840 ಸಾರ್ವಜನಿಕರ ನಡುವೆ ಪರಿಪೂರ್ಣಳಾಗಿರಲು ನಾನು ಬಯಸಲಿಲ್ಲ. 327 00:26:10,040 --> 00:26:11,690 ನೀನು ಪರಿಪೂರ್ಣವಾಗಿರಬೇಕಿಲ್ಲ. 328 00:26:12,900 --> 00:26:13,900 ಪರಿಪೂರ್ಣವಾಗಿರುವೆ. 329 00:26:14,440 --> 00:26:15,300 ಅಮ್ಮ. 330 00:26:15,500 --> 00:26:18,930 ಅಂದರೆ, ಕೆಲವು ವಿಚಾರಗಳನ್ನು ಪ್ರಕಟಿಸದಂತೆ ನಾನು ನಿನಗೆ ನಿರ್ದಿಷ್ಟವಾಗಿ ಹೇಳಿದೆ. 331 00:26:19,130 --> 00:26:23,330 ಅದರಲ್ಲಿ ನಾನು ಕಂಡ ಬಗೆ ನನಗೆ ಇಷ್ಟವಾಗಲಿಲ್ಲ, ಆದರೂ ನೀನು ಪ್ರಕಟಿಸಿದೆ. 332 00:26:25,450 --> 00:26:28,440 ಕೆಲವೊಮ್ಮೆ ನನ್ನನ್ನು ಬಳಸಿದಂತೆ ಅನಿಸುತ್ತದೆ. 333 00:26:28,640 --> 00:26:32,250 ಅಂದರೆ ನಿನ್ನ ಕೆಲಸಕ್ಕಾಗಿ ನಮ್ಮ ಕುಟುಂಬದ ರೂಪವನ್ನು ಮಾರಿಕೊಂಡಂತೆ. 334 00:26:33,710 --> 00:26:34,670 ಇದು ವಿಷಾದಕರ. 335 00:26:37,010 --> 00:26:39,550 ನನಗೆ ಅರಿವಾಗಲಿಲ್ಲ, ಆದರೆ ನೀನು ಸರಿ ಹೇಳಿದೆ. 336 00:26:43,060 --> 00:26:45,890 ನೀವು ಮಕ್ಕಳು, ನಾನು ಅತ್ಯಂತ ಹೆಮ್ಮೆಪಡುವುದು ನಿಮ್ಮ ಬಗ್ಗೆಯೇ. 337 00:26:46,480 --> 00:26:51,860 ಕೆಲವೊಮ್ಮೆ ಅದನ್ನು ಹಂಚಿಕೊಳ್ಳಬಯಸುವೆ, ಆದರೆ ನಿಮಗೆ ಎಂದಿಗೂ ಬೇಜಾರು ಮಾಡಲಾರೆ. 338 00:26:53,730 --> 00:26:57,110 ಅಂತರ್ಜಾಲದಲ್ಲಿ ನನ್ನನ್ನು ಅಣಕಿಸುವುದರ ಬದಲು ನನ್ನೊಂದಿಗೆ ಮಾತನಾಡಬೇಕಿತ್ತು. 339 00:26:59,530 --> 00:27:00,450 ನನ್ನನ್ನು ಕ್ಷಮಿಸು. 340 00:27:00,700 --> 00:27:02,070 ಸರಿ. ಧನ್ಯವಾದ. 341 00:27:02,780 --> 00:27:08,750 ನೀನು ಮಾಡುತ್ತಿದ್ದುದನ್ನು ಯಾಕೆ ಮಾಡುತ್ತಿದ್ದೆ ಎಂದು ನನಗೆ ಗೊತ್ತಿರಲಿಲ್ಲ, ಆದರೀಗ ಅರ್ಥವಾಗಿದೆ. 342 00:27:10,460 --> 00:27:14,990 ಡ್ಯಾಂಡನ್ ಏನು ಮಾಡ್ತಿದ್ದಾನೆ ನೋಡುತ್ತಿರುವೆಯಾ? ಅವನು ಈ ವಾರದ ಹೊಸ ಗಂಡು ಬಲಿಪಶು, 343 00:27:15,190 --> 00:27:18,660 ಮತ್ತು ಅಲಬಾಮಾದ ಕ್ಲೈಡ್ ಮಾಂಟ್ಗೊಮೆರಿ ವಿಕೃತಕಾಮಿಯಂತೆ ಕಾಣುತ್ತಾನೆ. 344 00:27:18,860 --> 00:27:22,430 ತನ್ನ ಊರಿನ ವೀರನಂತೆ ಜನರ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾನೆ. 345 00:27:23,760 --> 00:27:25,010 ಅದು ತುಂಬಾ ಅಸಹ್ಯಕರ. 346 00:27:25,350 --> 00:27:27,810 ಸ್ಪಷ್ಟವಾಗಿ ಅದು ಭಯಗೊಳಿಸುವುದಲ್ಲದೆ ಬೇರೇನೂ ಅಲ್ಲ. 347 00:27:28,480 --> 00:27:31,560 ಆ ಹುಡುಗಿಯರನ್ನು ಗುರಿಪಡಿಸುವುದು ತುಂಬಾನೇ ಅಪಾಯಕಾರಿ. 348 00:27:32,770 --> 00:27:34,020 ನೀನು ಅವನನ್ನು ತಡೆಯಬೇಕು. 349 00:27:35,900 --> 00:27:36,860 ನಾವು ತಡೆಯುವೆವು. 350 00:27:38,440 --> 00:27:39,900 ಮಿಂಚುವ ಬೆರಳುಗಳು ಒಂದಾಗಿ? 351 00:27:46,330 --> 00:27:47,160 ಕ್ಷಮಿಸು. 352 00:27:47,620 --> 00:27:48,560 ಪರವಾಗಿಲ್ಲ. 353 00:27:48,760 --> 00:27:50,160 ಸರಿ, ನೀವಿಬ್ಬರೂ. 354 00:27:50,790 --> 00:27:52,980 ನಡೆಯುವ ಶೂಗಳನ್ನು ಧರಿಸಿ, ಜಾಕೆಟ್ ಹಾಕಿಕೊಳ್ಳಿ. 355 00:27:53,180 --> 00:27:54,900 - 15 ನಿಮಿಷದಲ್ಲಿ ಹೊರಡುತ್ತೇವೆ. - ಏನು? 356 00:27:55,100 --> 00:27:56,650 - ಎಲ್ಲಿಗೆ? - ಮಜಾ ಇರುವ ಜಾಗಕ್ಕೆ. 357 00:27:56,850 --> 00:28:00,120 ಸುಮ್ಮನೆ ಪ್ರವಾಸಕ್ಕೆ ಬರಲಾರೆ. ನಾನೊಂದು ಭಾಷಣವನ್ನು ತಯಾರಿಸಿಕೊಳ್ಳಬೇಕು. 358 00:28:00,320 --> 00:28:04,700 - ಮತ್ತು ರಾತ್ರಿ ನಾನು ರಯಾನ್ ಜೊತೆ ಹೋಗಬೇಕು. - ನನಗೆ ಬೇಕಿಲ್ಲ. ಆಯ್ತಾ? ನನಗೆ ಬೇಕಿಲ್ಲ. 359 00:28:04,900 --> 00:28:08,830 ನಾವು ಒಂದು ನಿಜವಾದ ಕುಟುಂಬದಂತೆ ಸಮಯ ಕಳೆಯಬೇಕು, ಯಾವುದೋ ನಕಲಿ ಕುಟುಂಬದಂತಲ್ಲ, 360 00:28:09,030 --> 00:28:12,400 ನಕಲಿ ಉಪಹಾರ ತಯಾರಿಸಿಕೊಂಡು, ನಕಲಿ ಕೆಲಸ ಮಾಡಿಕೊಂಡು. ಈಗಲೇ ಹೊರಡಬೇಕು. 361 00:28:12,900 --> 00:28:14,480 ಸರಿ. ಇಜ್ಜಿ ಮತ್ತು ಮ್ಯಾಟಿ? 362 00:28:25,660 --> 00:28:27,740 ದನಿಯಿಲ್ಲದ ಹುಡುಗಿ ನೀನಾಗಿದ್ದೆ. 363 00:28:28,160 --> 00:28:30,370 ಈಗ ಇಡೀ ಪ್ರಪಂಚ ಕೇಳುತ್ತಿದೆ. 364 00:28:34,580 --> 00:28:36,440 ಸಾಕು. ಸುಮ್ಮನೆ ಹಣ ಹಿಂತಿರುಗಿಸು. 365 00:28:36,640 --> 00:28:38,590 ಯಾವುದು ಸಾಕು? ನಂಜೊತೆ ಮಾತನಾಡೋದಾ? 366 00:28:46,470 --> 00:28:49,520 {\an8}ಒಳ್ಳೆಯ ಜಾದೂ. ಹೇಗೆ ಮಾಡುವೆ? 367 00:28:57,570 --> 00:28:59,320 ನನ್ನ ಉಡುಗೊರೆ ದೇವರ ವರ. 368 00:29:00,400 --> 00:29:04,030 ಹಹಾ. ನನಗೆ ಸುಳ್ಳು ಹೇಳಬೇಡ. ನನ್ನ ವಿಡಿಯೋಗಳನ್ನು ನೋಡಿರುವೆಯಾ? ಅದು ನಿಜವಾದ ಶಕ್ತಿ ಅಂದರೆ 369 00:29:16,880 --> 00:29:21,740 ಬಂದು ನಮ್ಮೊಂದಿಗೆ ಸೇರು. ನಿನಗೆ ಇಲ್ಲಿ ಮನೆ ಇದೆ 370 00:29:21,940 --> 00:29:27,850 ನನಗೆ ಮನೆ ಇದೆ. ನಿಮ್ಮ ಸಂಘ ಸೇರಬೇಕಿಲ್ಲ. ಹೇಗೆ ಮಾಡುವೆ ಎಂದು ಹೇಳು ಅಷ್ಟೇ 371 00:29:32,350 --> 00:29:34,190 ನಿನಗೇನು ತೊಂದರೆ ಬೇಕಾ? 372 00:29:35,350 --> 00:29:37,880 {\an8}ನಿನಗೆ ನಾನು ಸಾಬೀತುಪಡಿಸಬೇಕಿಲ್ಲ 373 00:29:38,080 --> 00:29:39,320 {\an8}ಸುಮ್ಮನೆ ದುಡ್ಡು ಕೊಡೋಲೋ. 374 00:29:40,360 --> 00:29:46,320 ಇದನ್ನು ಸುಳ್ಳುಗಾರರು ಹೇಳುತ್ತಾರೆ. ಏನಾದರಾಗಲಿ. ಹೇಗೂ ನಾನು ನಿನಗಿಂತ ಬಲಶಾಲಿ 375 00:29:49,070 --> 00:29:50,980 ಹಾಗಿದ್ದರೆ ನನ್ನನ್ನು ಬಂದು ಹುಡುಕೇ ಮುಂಡೆ 376 00:29:51,180 --> 00:29:52,330 ಆಯ್ತೇ, ಮುಂಡೆ. 377 00:29:53,080 --> 00:29:55,120 - ನನ್ನ ಮುಖದಿಂದ ದೂರ ಸರಿ. - ಏಯ್. 378 00:29:58,290 --> 00:29:59,880 ಸಾಕಿನ್ನು. ದುಡ್ಡು ಕೊಡೋ. 379 00:30:04,340 --> 00:30:05,700 ಬೇವರ್ಸಿ. ದರಿದ್ರದವನೇ. 380 00:30:05,900 --> 00:30:08,800 - ನಾನು ನೋಡಿಕೊಳ್ಳುತ್ತಿದ್ದೆ. - ಹೌದು. ಖಂಡಿತ. 381 00:30:13,310 --> 00:30:16,540 ಬನ್ನಿ, ಕ್ಲೆಯರಿ-ಲೋಪೆಜ್ ತಂಡ. ಜೋಸ್, ಸ್ವಲ್ಪ ಸಹಾಯ ಮಾಡುವೆಯಾ? 382 00:30:16,740 --> 00:30:19,010 - ಮಾಡಲೇಬೇಕಾ? - ಇದು ನೋಡುವ ಆಟ ಅಲ್ಲ, ಚಿನ್ನ. 383 00:30:19,200 --> 00:30:21,090 - ಕೆಳಗೆ ಎಳೆ. - ಇಲ್ಲೇನು ಮಾಡುತ್ತಿದ್ದೇವೆ? 384 00:30:21,290 --> 00:30:23,070 ಆಯ್ತು. ಬನ್ನಿ. ಅದನ್ನು ಒಳಗೆ ಹಾಕಿ. 385 00:30:23,570 --> 00:30:24,690 ನೋಡಿ ಅದನ್ನು. 386 00:30:25,570 --> 00:30:27,510 ಅದು ಸಕ್ಕತ್ತಾಗಿದೆ. ನಾನು ಹೇಳುವೆ. 387 00:30:27,710 --> 00:30:29,870 ಇಲ್ಲಿಂದ ನೀವೇ ಮಾಡಿ. ನಿಮ್ಮಲ್ಲಿ ನಂಬಿಕೆ ಇದೆ. 388 00:30:35,290 --> 00:30:38,650 ನಾವು ಇಲ್ಲಿಗೆ ಮೊದಲ ಬಾರಿ ಬಂದಿದ್ದು ನೆನಪಿದೆಯಾ? ಜೋಸ್ ಪುಟ್ಟ ಮಗುವಾಗಿದ್ದಳು. 389 00:30:38,850 --> 00:30:40,360 - ನಾವೂ ಮಕ್ಕಳಾಗಿದ್ದೆವು. - ಹೌದು. 390 00:30:40,560 --> 00:30:43,860 ನಮ್ಮಲ್ಲಿ ದುಡ್ಡಿರಲಿಲ್ಲ. ಮೂವರಿಗೆ ಒಂದೇ ಮಲಗುವ ಚೀಲ ಇತ್ತು. 391 00:30:44,060 --> 00:30:48,220 ಹೌದು, ಆದರೆ ತುಂಬಾ ಸುಖವಾಗಿತ್ತು. ನೆನಪಿದೆಯಾ? ಬೆಂಕಿಯ ಬಳಿ ರಾತ್ರಿ ಎಲ್ಲಾ ಎದ್ದಿದ್ದೆವು. 392 00:30:49,010 --> 00:30:53,620 ನೆನಪಿದೆ. ನೀನು ಆ ಪೆದ್ದು ಹಾಡನ್ನು ಹಾಡಿದ್ದು ನೆನಪಿದೆ. ನೀನು ನಿಲ್ಲಿಸಲೇ ಇಲ್ಲ. 393 00:30:53,820 --> 00:30:56,880 ಲಾ ಕುಕರಾಚಾ? ಇದುವರೆಗೂ ಬರೆಯಲಾದ ಅತ್ಯಂತ ಶ್ರೇಷ್ಠ ಹಾಡುಗಳಲ್ಲಿ ಒಂದು? 394 00:30:57,080 --> 00:31:00,050 - ತಮಾಷೆ ಮಾಡುತ್ತಿರುವೆಯಾ? - ಒಪ್ಪದಿರಲು ಕ್ಷಮಿಸು. ತಮಾಷೆ ಮಾಡ್ತಿಲ್ಲ. 395 00:31:00,250 --> 00:31:01,860 - ರಾಬ್. - ಮಾರ್ಗೋ. 396 00:31:02,650 --> 00:31:05,260 - ನೀನೇ ಅದನ್ನು ಕೇಳಿದ್ದು. ನೀನೇ. - ಇಲ್ಲ. ನಾನು ಕೇಳಲಿಲ್ಲ. 397 00:31:05,460 --> 00:31:07,490 - ನೀನು ಕೇಳಿದೆ. - ಇಲ್ಲ. ಇಲ್ಲ, ದಯವಿಟ್ಟು. 398 00:31:11,070 --> 00:31:12,070 ಎಲ್ಲರೂ. 399 00:31:17,750 --> 00:31:18,750 ನೋಡು? ಅವರಿಗೂ ಗೊತ್ತು. 400 00:31:22,040 --> 00:31:25,990 ಮ್ಯಾಟಿ, ಏನೋ ಇದು ವಿಚಿತ್ರ? ಏನೋ ನಿನಗೆ ಬಂದಿರುವ ದೊಡ್ಡ ರೋಗ, ಹಾಳಾದವನೇ? 401 00:31:26,190 --> 00:31:28,160 - ಏನು ನಡೆಯುತ್ತಿದೆ? - ನಿಲ್ಲಿಸಿ ಅದನ್ನು. 402 00:31:28,360 --> 00:31:32,550 - ಸಾರ್ವಜನಿಕ ಸ್ಥಳದಲ್ಲಿದ್ದ. ನನಗೆ ಹಕ್ಕಿದೆ. - ನೀನೇನು ಮಾಡಿರುವೆ ನಿನಗೆ ಗೊತ್ತಿಲ್ಲ. 403 00:31:33,430 --> 00:31:35,330 ನನ್ನನ್ನು ಚಿತ್ರೀಕರಿಸಿದ. ರಯಾನನ್ನೂ ಸಹ. 404 00:31:35,530 --> 00:31:36,850 ನಾವು ಏನನ್ನು ನೋಡುತ್ತಿದ್ದೇವೆ? 405 00:31:38,930 --> 00:31:41,730 ರಯಾನಲ್ಲಿ ಕೂಡ ಇದೆ. ಈಓಡಿ. 406 00:31:45,020 --> 00:31:47,480 ನನಗೆ ಅರ್ಥವಾಗುತ್ತಿಲ್ಲ. ಅಂದರೆ, ಹೇಗೆ? 407 00:31:48,780 --> 00:31:52,560 ಅವನು ದ್ವಿಲಿಂಗಿ. ನನ್ನಲ್ಲಿ ಹೇಳಿಕೊಳ್ಳಲು ತುಂಬಾ ಧೈರ್ಯ ಮಾಡಿದ. 408 00:31:52,760 --> 00:31:54,810 ಈಗ ಅರ್ಬನ್ಡಾಕ್ಸ್ ತುಂಬಾ ಇದ್ದಾನೆ. 409 00:31:55,010 --> 00:31:56,520 ಮಾಹಿತಿಯ ಸ್ವಾತಂತ್ರ್ಯ. ದೇವರೇ. 410 00:31:56,720 --> 00:32:00,110 ನಿನ್ನ ಅಕ್ಕನಿಗೆ ಹೀಗೆ ಮಾಡುವೆ ಎಂದು ನಂಬಲಾಗುತ್ತಿಲ್ಲ, ನಿನ್ನ ಕುಟುಂಬಕ್ಕೆ. 411 00:32:00,310 --> 00:32:03,690 ಇದು ದಡ್ಡ ಕೆಲಸ, ಆದರೂ ಬಿಡಿ. ಅವನ ಮೇಲೆರಗಬೇಡಿ. 412 00:32:03,890 --> 00:32:06,320 ನನ್ನನ್ನು ದ್ವೇಷಿಸುತ್ತಾನೆ. ಎಂದಿಗೂ ನನ್ನ ಮಾತನಾಡಲ್ಲ. 413 00:32:06,520 --> 00:32:08,110 - ಪ್ರಯೋಗಾಲಯಕ್ಕೆ ಹೋಗುತ್ತಾನೆ. - ಇಲ್ಲ. 414 00:32:08,310 --> 00:32:10,030 ಪ್ರಯೋಗಾಲಯದಲ್ಲೇ ಇರಬೇಕು. ಅವನು ಹುಚ್ಚ. 415 00:32:10,230 --> 00:32:12,120 - ಹೇ. - ಸಾಕು ಎಂದು ನಿನಗೆ ಹೇಳಿದೆವು. 416 00:32:12,320 --> 00:32:15,260 ಒಂಟಿ ಕಣ್ಣಿನ ಕುರೂಪಿ. ದೇವರಾಣೆ, ನಿನ್ನನ್ನು ಕೊಂದುಬಿಡುವೆ. 417 00:32:24,730 --> 00:32:25,650 ಅದ್ಭುತ. 418 00:32:27,110 --> 00:32:28,980 ಇನ್ನು ನಮ್ಮಲ್ಲಿ ಯಾರೂ ಸುರಕ್ಷಿತರಲ್ಲ. 419 00:32:29,650 --> 00:32:32,660 - ತಡಿ, ಮ್ಯಾಟಿ. ಎಲ್ಲಿಗೆ ಹೋಗುತ್ತಿರುವೆ? - ರಯಾನನ್ನು ಎಚ್ಚರಿಸಬೇಕು. 420 00:32:41,580 --> 00:32:43,250 ನನಗೆ ಯಾವಾಗ ಹೇಳುವವಳಿದ್ದೆ? 421 00:32:45,750 --> 00:32:46,900 ಪ್ರಚಾರದ ನಂತರ. 422 00:32:47,100 --> 00:32:49,910 - ಪ್ರಚಾರದ ನಂತರವೇ? - ನಿನ್ನಿಂದ ಸುಳ್ಳು ಹೇಳಿಸಬೇಕಿರಲಿಲ್ಲ. 423 00:32:50,110 --> 00:32:52,580 - ಹೀಗೆ ಗೊತ್ತಿಲ್ಲದಂತಿರಬಹುದು. - ಸಾಕು ಸುಮ್ಮನಿರು. 424 00:32:52,770 --> 00:32:56,500 ನೆನಪಿರಲಿ, ನಿನ್ನ ವೃತ್ತಿಯನ್ನು ಅಪಾಯಕ್ಕೊಡ್ಡುವ ಮಾಹಿತಿ ಸೋರಿಸಿದ್ದು ನೀನು. 425 00:32:56,700 --> 00:32:57,750 ನಾನೇನೂ ಮುಚ್ಚಿಡಲಿಲ್ಲ. 426 00:32:57,950 --> 00:33:01,500 ನೀನು ಜೈಲಿಗೆ ಹೋಗಿ ನಮ್ಮ ಕುಟುಂಬ ನಾಶವಾಗ್ತಿತ್ತು. ನೀನು ನನಗೆ ಹೇಳಲಿಲ್ಲ. 427 00:33:01,700 --> 00:33:04,550 ಮಾರ್ಗೋ, ನಾನು ಅದನ್ನೇ ಮಾಡಲು ಪ್ರಯತ್ನಿಸುತ್ತಿರುವುದು. 428 00:33:04,750 --> 00:33:07,470 ಸೆನೆಟ್ ಚುನಾವಣೆಯ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಿದ್ದೆ, 429 00:33:07,660 --> 00:33:09,630 ದರಿದ್ರ ಪತ್ರಿಕಾಗೋಷ್ಠಿಯ ಬಗ್ಗೆ, 430 00:33:09,830 --> 00:33:12,990 ಮಕ್ಕಳ ಬಗ್ಗೆ, ಎಲ್ಲದರ ಬಗ್ಗೆ, ನೀನು ನನ್ನ ಬಾಯಿ ಮುಚ್ಚಿಸುತ್ತಿದ್ದೆ. 431 00:33:19,450 --> 00:33:21,950 - ನಾನು… - ಬಿಟ್ಟಾಕು. ನಾನು ಮ್ಯಾಟಿಯನ್ನು ಹುಡುಕುವೆ. 432 00:33:24,210 --> 00:33:26,000 - ಸರ್. - ಬೇಡ. ನನ್ನ ಹಿಂದೆ ಬರಬೇಡ. 433 00:33:30,920 --> 00:33:32,950 ವಾಷಿಂಗ್ಟನ್ ಗವರ್ನರ್ ಡೇನಿಯಲ್ ಡ್ಯಾಂಡನ್ 434 00:33:33,150 --> 00:33:36,410 ಈಓಡಿ ಹಿಂಸೆಯ ಬಾಧಿತರಿಗೆ ರಾಷ್ಟ್ರೀಯ ಅರಿವನ್ನು ಮೂಡಿಸುತ್ತಿದ್ದಾರೆ. 435 00:33:36,610 --> 00:33:39,160 ಇಂದಿನ ನಮ್ಮ ಅತಿಥಿಯ ಪತಿ ತಮ್ಮ ಸಾಕುಮಗಳ 436 00:33:39,360 --> 00:33:40,960 ಭೀಕರ ದಾಳಿಯಿಂದಲೇ ಕೊಲೆಗೀಡಾದರು. 437 00:33:41,160 --> 00:33:43,920 ಶ್ರೀಮತಿ ಮಾಂಟ್ಗೊಮೆರಿ ಮಗಳಿಗೆ ಒಂದು ಸಂದೇಶ ಕೊಡಬಯಸುತ್ತಾರೆ. 438 00:33:44,120 --> 00:33:45,390 ಆ್ಯಲಿಸನ್. 439 00:33:46,850 --> 00:33:49,020 ನಿನ್ನೊಂದಿಗೆ ಮಾತನಾಡಬೇಕಷ್ಟೆ, ಚಿನ್ನ. 440 00:33:49,770 --> 00:33:51,860 ದಯವಿಟ್ಟು ನನಗೆ ಕರೆ ಮಾಡು. 441 00:33:54,070 --> 00:33:58,310 ಫೆಬ್ರವರಿ 27ರಿಂದ ಆ್ಯಲಿಸನ್ ಬಗ್ಗೆ ನಿಮಗೆ ಗೊತ್ತಿದ್ದರೆ ಅಥವಾ ಅವಳನ್ನು ನೋಡಿದ್ದರೆ, 442 00:33:58,510 --> 00:34:01,660 ದಯಮಾಡಿ ತೆರೆಯ ಕೆಳಗಿರುವ ಸಂಖ್ಯೆಗೆ ಕರೆ ಮಾಡಿ. 443 00:34:02,490 --> 00:34:06,980 ಕ್ಲೈಡ್ ಮಾಂಟ್ಗೊಮೆರಿ ಒಳ್ಳೆಯ ಕ್ರೈಸ್ತ ವ್ಯಕ್ತಿ. ಆತ ಉದಾರಿ, ಸಮುದಾಯದವರ ಮೆಚ್ಚುಗೆ ಗಳಿಸಿದ್ದರು. 444 00:34:07,180 --> 00:34:07,900 ನನಗೆ ಗೊತ್ತಿತ್ತು. 445 00:34:08,100 --> 00:34:10,400 ಇಂತಹ ಅರ್ಥಹೀನ ಸಾವುಗಳನ್ನು ಬಿಗಿ ಕಾನೂನು ಕ್ರಮಗಳಿಂದ 446 00:34:10,600 --> 00:34:12,880 ತಡೆಯಬಹುದು ಎಂದು ಗವರ್ನರ್ ಡ್ಯಾಂಡನ್ ಹೇಳುತ್ತಾರೆ. 447 00:34:13,080 --> 00:34:15,420 ಇದರ ಬಗ್ಗೆ ನಿಮ್ಮ ಅಭಿಪ್ರಾಯ, ಶ್ರೀಮತಿ ಮಾಂಟ್ಗೊಮೆರಿ? 448 00:34:15,630 --> 00:34:18,470 - ಅದು ಸರಿ ಅನಿಸದು. - ಇಲ್ಲ, ಅನಿಸುವುದಿಲ್ಲ. 449 00:34:19,300 --> 00:34:23,060 ಅಯ್ಲಿ ಅಲ್ಲಿದ್ದಳೆಂದರೆ, ಅವಳನ್ನು ಇಲ್ಲಿಗೆ ಕರೆತರಬೇಕು. 450 00:34:25,140 --> 00:34:27,060 - ಬೇಡ. - ಆಕೆಯನ್ನು ತಡೆ. 451 00:34:27,770 --> 00:34:30,970 ನಿನ್ನ ಕೈ ತೆಗಿ, ಆ್ಯಲಿಸನ್. 452 00:34:31,160 --> 00:34:32,820 ಆಕೆಯನ್ನು ತಡೆ. 453 00:34:33,860 --> 00:34:35,440 ನನ್ನನ್ನು... 454 00:34:38,610 --> 00:34:40,030 ಆಲೋಚನೆಗಳು ವಿದ್ಯುತ್ತಿನಂತೆ. 455 00:34:48,290 --> 00:34:49,460 ಅವಳ ತಲೆಯೊಳಗೆ ಹೋಗು. 456 00:34:58,630 --> 00:35:00,260 ಅವಳ ಮನ ಬದಲಾಯಿಸು. 457 00:35:20,110 --> 00:35:23,740 ಸೋದರಿ ವೆರೋನಿಕಾ? ಆರಾಮವಾಗಿದ್ದೀರಾ? 458 00:35:28,250 --> 00:35:29,080 ಈವ್? 459 00:35:29,750 --> 00:35:33,380 ಏನು ನಡೆಯುತ್ತಿದೆ? ಈವ್. ಸೋದರಿ ವೆರೋನಿಕಾ? ಏನಾಗುತ್ತಿದೆ? ಸೋದರಿ ವೆರೋನಿಕಾ? 460 00:35:57,610 --> 00:35:58,970 - ಐದು ನಿಮಿಷಗಳು. - ಸರಿ. 461 00:35:59,170 --> 00:36:00,970 ಸುಮ್ಮನೆ ಹಲೋ ಹೇಳಿ ಬರ್ತೀನಿ. 462 00:36:01,170 --> 00:36:03,930 - ಸಮಯ ಹಾಳು ಮಾಡಬೇಡ. - ಬಾಯ್ಮುಚ್ಚು. ಇಂದು ನನ್ನ ಹುಟ್ಟುಹಬ್ಬ. 463 00:36:04,130 --> 00:36:06,310 - ನೀನು ಬಾಯಿ ಮುಚ್ಚು. ಬಾಯಿ ಮುಚ್ಚು. - ಬಾಯಿ ಮುಚ್ಚು. 464 00:36:06,510 --> 00:36:10,190 - ನೀನೇನು ಮಾಡುತ್ತಿರುವೆ? ವಸೂಲಿ ಮಾಡೋದು ನಾನು. - ಅಪ್ಪ ನಿನಗೆ ಸಹಾಯ ಬೇಕಂದುಕೊಂಡರು. 465 00:36:10,390 --> 00:36:13,400 ನೀನು ಸಹಾಯ ಅಲ್ಲ. ನೀನೊಬ್ಬ ದಡ್ಡಿ. ನೀನು ಸತ್ತರೆ ಸಾಕು. 466 00:36:13,600 --> 00:36:15,710 - ನನ್ನನ್ನು ನೋಡಿ ನಗಬೇಡ. - ಬಿಡು ನನ್ನನ್ನು. 467 00:36:19,210 --> 00:36:21,380 ಅಯ್ಯೋ. ಅಯ್ಯೋ. ಅಯ್ಯೋ. 468 00:36:27,760 --> 00:36:30,020 - ಕ್ಷಮಿಸು. - ಅಯ್ಯೋ. ಬಿಡು ನನ್ನನ್ನು. 469 00:36:30,730 --> 00:36:32,900 ಒಳಗೆ ಬಾ. ಅವರು ನಿನ್ನನ್ನು ನೋಡಿಕೊಳ್ಳುತ್ತಾರೆ. 470 00:36:35,400 --> 00:36:37,680 ಇಂದು ರಾತ್ರಿ ನೃತ್ಯದ ವೇದಿಕೆಯ ಮೇಲೆ ಕಿಚ್ಚು 471 00:36:37,870 --> 00:36:40,280 ಹತ್ತಿಸುವ ಮಿಂಚಿನ ಹುಡುಗಿಯರಿಗೆ ಇದು ಅರ್ಪಣೆ. 472 00:36:47,660 --> 00:36:48,910 ಹುಟ್ಟುಹಬ್ಬದ ಶುಭಾಶಯ. 473 00:36:51,830 --> 00:36:53,540 ನಿಮ್ಮಮ್ಮನನ್ನು ನೆನೆಸಿಕೊಳ್ತೇವೆ. 474 00:36:55,210 --> 00:36:56,880 ಮತ್ತೆ, ಪೊಲೀಸರು ಏನಂದ್ರು? 475 00:37:00,590 --> 00:37:02,930 ತಪ್ಪಾದ ಮನೆಗೆ ಕಳ್ಳತನಕ್ಕೆ ಬಂದಿದ್ದರು ಅಂತ. 476 00:37:04,300 --> 00:37:05,550 ಡೆರ್ರಿಕ್ಕಿಗೆ ಏನನ್ಸುತ್ತೆ? 477 00:37:07,180 --> 00:37:08,010 ಯಾರು? 478 00:37:08,760 --> 00:37:12,480 ನಿಮ್ಮಮ್ಮನ ಪ್ರಿಯಕರ. ನಿನಗೆ ಹೇಳಬೇಕು ಅಂದುಕೊಂಡಿದ್ದಳು… 479 00:37:13,350 --> 00:37:14,600 ಡೆರ್ರಿಕ್ ಯಾರು? 480 00:37:18,270 --> 00:37:20,650 - ಡೆರ್ರಿಕ್ ಯಾರು? - ಡೆರ್ರಿಕ್ ರೀನಾ. 481 00:37:21,530 --> 00:37:24,640 ಕ್ರಿಸ್ಟಿನಾ ರೀನಾ, ಅವರಿಗೆ ಒಂದು ವೇಳೆ ಮದುವೆಯಾಗಿದ್ದಿದ್ದರೆ. 482 00:37:24,840 --> 00:37:25,740 ಮದುವೆ? 483 00:37:26,280 --> 00:37:28,430 - ಯಾಕೆ ಹೇಳಿದೆ? - ನೀನೇ ಅವನ ಬಗ್ಗೆ ಹೇಳಿದ್ದು. 484 00:37:28,630 --> 00:37:30,740 ಹಾಂ, ಆದರೆ ನೀನು ಹೇಳಬೇಕಾಗಿರಲಿಲ್ಲ… 485 00:37:31,410 --> 00:37:32,250 ಕ್ಷಮಿಸು. 486 00:37:32,910 --> 00:37:33,900 ತುಂಬಾ ಅವಸರ ಪಟ್ಟೆ. 487 00:37:34,100 --> 00:37:34,920 ರಾಕ್ಸಿ! 488 00:37:49,680 --> 00:37:50,510 ಧನ್ಯವಾದ. 489 00:37:58,310 --> 00:37:59,360 ಬಾ, ರಾಕ್ಸ್. 490 00:38:15,870 --> 00:38:16,870 ರಾಕ್ಸಿ. 491 00:38:21,460 --> 00:38:24,090 ಇದರಲ್ಲಿ 10,000 ಇದೆ. ನಿನಗೆ ಸಾಕಾಗುವಷ್ಟು. 492 00:38:26,800 --> 00:38:29,220 - ಏನು ಹೇಳುತ್ತಿರುವೆ? - ಬಾಯಿ ಮುಚ್ಚಿಕೊಂಡು ಕೇಳಿಸಿಕೋ. 493 00:38:31,350 --> 00:38:33,100 ನೀ ನನ್ ಮದುವೆಗೆ ಬರೋದು ಬೇಕಿರಲಿಲ್ಲ. 494 00:38:35,180 --> 00:38:36,350 ಅಮ್ಮನಿಗೂ ಅಷ್ಟೇ. 495 00:38:37,690 --> 00:38:42,320 ಆಮೇಲೆ, ಒಂದು ವಾರದ ಹಿಂದೆ, ನಮಗೆ ಬೇಕಿರುವುದು ಮುಖ್ಯವಲ್ಲ ಎಂದು ಬರ್ನಿ ಹೇಳಿದರು. 496 00:38:44,400 --> 00:38:45,360 ನೀನು ಬರಬೇಕು. 497 00:38:50,820 --> 00:38:52,330 ನೀನವರಿಗೆ ಅಲ್ಲಿರಬೇಕು, ರಾಕ್ಸ್. 498 00:38:53,740 --> 00:38:55,160 ನಿಮ್ಮಮ್ಮನ ಮನೆಯಿಂದ ಹೊರಗೆ. 499 00:39:05,590 --> 00:39:06,470 ಛೆ. 500 00:39:08,380 --> 00:39:12,260 ತಡಿ. ಓಯ್. ಅವರೇನಾ ಎಂದು ನೀನೆಂದಿಗೂ ಆಲೋಚಿಸಿಲ್ಲ ಎಂದು ಹೇಳಬೇಡ. 501 00:39:31,240 --> 00:39:32,740 ಸರಿ. ಒಳ್ಳೆಯದು. ಒಳಗೆ ಬಾ. 502 00:40:02,150 --> 00:40:04,980 ನೀನು ಹೀಗೆ ತಿಳಿದುಕೊಳ್ಳುವುದು ನನಗೆ ಇಷ್ಟವಿರಲಿಲ್ಲ. 503 00:40:07,070 --> 00:40:07,940 ನನ್ನನ್ನು ಕ್ಷಮಿಸು. 504 00:40:09,490 --> 00:40:10,820 ನಿನಗೆ ಕೊಟ್ಟವರು ಯಾರು? 505 00:40:13,530 --> 00:40:14,370 ಜೋಸ್. 506 00:40:15,280 --> 00:40:16,120 ಜೋಸ್? 507 00:40:18,950 --> 00:40:21,400 ನನ್ನ ಮಗಳಿಂದ ನನಗೇ ಸುಳ್ಳು ಹೇಳಿಸಿರುವೆ. 508 00:40:21,600 --> 00:40:23,790 ನಾನು ತಪ್ಪು ಮಾಡಿದೆ. ಗೊತ್ತು. ನಿಜವಾಗಿ. 509 00:40:25,460 --> 00:40:29,090 ಅವಳೇನು ಅನುಭವಿಸುತ್ತಿದ್ದಳು ಎಂದು ತಿಳಿದುಕೊಳ್ಳಲು ನಾನದನ್ನು ಪಡೆದುಕೊಂಡೆ. 510 00:40:29,920 --> 00:40:32,870 ಅವಳಾಗಿಯೇ ಅದನ್ನು ಅನುಭವಿಸಲು ನಾನು ಬಿಡಲಾಗುತ್ತಿರಲಿಲ್ಲ. 511 00:40:33,070 --> 00:40:34,050 ಸಾಕು ಮಾಡು. 512 00:40:34,970 --> 00:40:38,970 ಸಾಕು. ನೀನು ಅದನ್ನು ಪಡೆದುಕೊಂಡ ಕಾರಣ ನಿನಗೆ ಶಕ್ತಿ ಬೇಕಿತ್ತು, ಅದು ಮಾತ್ರ ಬೇಕಿತ್ತು. 513 00:40:40,060 --> 00:40:40,890 ಅಂದರೆ, 514 00:40:41,520 --> 00:40:42,890 ಜನರಿಗೆ ಸಹಾಯ ಮಾಡಬಯಸುವೆ. 515 00:40:44,600 --> 00:40:46,940 ಜನರಿಗೆ ಸಹಾಯ ಮಾಡುವ ನಿನ್ನ ಬಿಂಬ ನಿನಗೆ ಇಷ್ಟ. 516 00:40:49,530 --> 00:40:54,320 ದೇವರೇ. ಇಷ್ಟೆಲ್ಲಾ ವರ್ಷಗಳ ನಂತರ ನನ್ನ ಬಗ್ಗೆ ನೀನು ಯೋಚಿಸುವುದು ಹೀಗೇನಾ? 517 00:40:55,030 --> 00:40:58,990 ಮಾರ್ಗೋ, ನಿನ್ನ ಬಗ್ಗೆ ಇನ್ನು ಏನು ಯೋಚಿಸಬೇಕಂತ ನನಗೆ ಗೊತ್ತಾಗುತ್ತಲೇ ಇಲ್ಲ. 518 00:41:01,200 --> 00:41:02,910 ನೀನು ನನಗೆ ಆಗಂತುಕಳಂತೆ ಕಾಣುವೆ. 519 00:41:05,330 --> 00:41:08,450 ನೋಡು, ಬೇರೆ ರೀತಿ ನಾನಿರುವುದು ಗೊತ್ತು. ಬೇರೆ ರೀತಿ ಇದ್ದೇನೆ. 520 00:41:08,650 --> 00:41:11,050 ಇದು ನನ್ನನ್ನೆಷ್ಟು ಬದಲಾಯಿಸಿತು ಎಂದು ಅರಿಯಲಿಲ್ಲ. 521 00:41:12,720 --> 00:41:13,590 ಆದರೆ ನಾನು… 522 00:41:18,140 --> 00:41:23,730 ಆದರೆ ಹಿಂದೆ ನನ್ನ ದೇಹದೊಳಗೆ ನಾನು ಹೀಗೆಂದೂ ಅನುಭವಿಸಿಲ್ಲ. 523 00:41:26,480 --> 00:41:31,190 ಗೊತ್ತಾ? ತುಂಬಾ ಸ್ವಾವಲಂಬಿಯಾಗಿ ಮತ್ತು ಹೌದು, ಶಕ್ತಿವಂತಳಾಗಿ. 524 00:41:34,320 --> 00:41:36,810 ಅದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ನನಗೆ ಶಕ್ತಿ ಬೇಕು. 525 00:41:37,010 --> 00:41:40,850 ನನಗೆ ನಿಯಂತ್ರಣ ಮತ್ತು ಆಯ್ಕೆ ಬೇಕು, 526 00:41:41,050 --> 00:41:45,080 ಮತ್ತು ಪ್ರಮುಖವಾದುದರ ಒಂದು ಭಾಗವಾಗಬೇಕು ನಾನು, ಜೀವನಗಳನ್ನು ಬದಲಾಯಿಸಬೇಕು. 527 00:41:47,210 --> 00:41:52,880 ಅಂದರೆ, ನಾನು ಕನಸಲ್ಲೂ ಧೈರ್ಯ ಮಾಡದ ಕೆಲಸಗಳನ್ನು ಈಗ ಮಾಡಬಲ್ಲೆ. 528 00:42:02,350 --> 00:42:06,310 ಆದರೆ ನನಗೆ ಎಲ್ಲವೂ ಗೊತ್ತಿಲ್ಲ. ಇದೆಲ್ಲವೂ ಹೇಗೆ ನಡೆಯುತ್ತದೆ ಎಂದು ನನಗೆ ಗೊತ್ತಿಲ್ಲ, 529 00:42:07,900 --> 00:42:11,440 ಆದರೆ ಜೀವನದಲ್ಲಿ ನನ್ನ ಸ್ಥಾನದ ಬಗ್ಗೆ 530 00:42:12,690 --> 00:42:13,820 ನನಗೆ ಗೊತ್ತಿದೆ, 531 00:42:15,610 --> 00:42:19,100 ಮತ್ತು ಈ ಪ್ರಪಂಚದಲ್ಲಿ, ಈ… 532 00:42:19,300 --> 00:42:20,910 ದೇವರೇ, ಈ ಸಂಸಾರದಲ್ಲಿ. 533 00:42:23,540 --> 00:42:24,750 ಈಗ ಅದು ಬೇರೆ. 534 00:42:26,040 --> 00:42:27,870 ಅಂದರೆ, ಇದು ನಮಗಿಂತಲೂ ದೊಡ್ಡದು. 535 00:42:29,420 --> 00:42:32,210 ಕ್ಷಮಿಸು. ಕ್ಷಮಿಸು. ನಾನು ಇದಕ್ಕೆ ಒಪ್ಪಿಕೊಳ್ಳಲಿಲ್ಲ. 536 00:42:33,920 --> 00:42:36,420 ಆದರೂ ನಾವು ಸಾಂಗತ್ಯಕ್ಕೆ ಒಪ್ಪಿಕೊಂಡೆವು, ಅಲ್ವಾ? 537 00:42:38,300 --> 00:42:40,850 ಮತ್ತು ಅದು ಇನ್ನೂ ಇಲ್ಲಿದೆ. ನಾವು ಈಗಲೂ ಸಂಗಾತಿಗಳೇ. 538 00:42:51,150 --> 00:42:52,190 ರಾಬ್. 539 00:42:54,230 --> 00:42:55,190 ನೀನು ನನಗೆ ಬೇಕು. 540 00:42:58,610 --> 00:43:02,060 ದೇವರೇ, ನೀನು ನನಗೆ ಬೇಕು, ಅದರಲ್ಲೂ ಈ ಪ್ರಚಾರಕ್ಕೆ. 541 00:43:02,260 --> 00:43:04,240 ನೀನಿಲ್ಲದೆ ನಾನು ಏನನ್ನೂ ಮಾಡಲಾಗದು. 542 00:43:05,290 --> 00:43:07,290 ನಂಗೊತ್ತು. ನಂಗೊತ್ತು. 543 00:43:26,470 --> 00:43:29,440 ನೋಡು, ನಾನು ನಿನ್ನೊಂದಿಗಿರುವೆ, ಆಯ್ತಾ? ಕೊನೆಯವರೆಗೂ ಇರುವೆ. 544 00:43:34,270 --> 00:43:35,860 ಆದರೆ ಚುನಾವಣೆಯ ನಂತರ, 545 00:43:39,650 --> 00:43:40,860 ನನಗೆ ವಿಚ್ಛೇದನ ಬೇಕು. 546 00:43:47,950 --> 00:43:49,160 ಹಾಂ. ಹಾಂ. 547 00:44:13,560 --> 00:44:16,940 ಹುಡುಗರು ನನಗೆ ತೊಂದರೆ ಕೊಟ್ಟಿಲ್ಲ ಅಂದುಕೊಂಡೆಯಾ? ನಮ್ಮಲ್ಲಿ ಯಾರಿಗೂನೂ? 548 00:44:18,280 --> 00:44:19,860 ನಾವು ಜನರನ್ನು ಕೊಲ್ಲುವುದಿಲ್ಲ. 549 00:44:20,900 --> 00:44:24,780 ಅದು ಹುಚ್ಚುತನ, ಈವ್. ಆ್ಯಲಿಸನ್. ನಿನ್ನ ನಿಜ ಹೆಸರು ಅದೇನೇ ಆಗಿರಲಿ. 550 00:44:38,960 --> 00:44:40,380 ನಾನು ಆ್ಯಲಿಸನ್ ಆಗಿದ್ದೆ. 551 00:44:42,760 --> 00:44:44,720 ನನ್ನ ನಿಜ ಕೊನೇ ಹೆಸರು ಯಾರಿಗೂ ಗೊತ್ತಿಲ್ಲ. 552 00:44:46,300 --> 00:44:51,270 ನನಗೆ ಮೂರು ವರ್ಷವಾಗಿದ್ದಾಗ ನಮ್ಮಮ್ಮ ನನ್ನನ್ನು ವಾಲ್ಮಾರ್ಟಿನಲ್ಲಿ ಬಿಟ್ಟು ಹೋದಳು. 553 00:44:53,020 --> 00:44:55,730 ಆಕೆ ಸುಮ್ಮನೆ ಹೊರಗೆ ಹೋಗಿ ಮತ್ತೆಂದೂ ಬರಲಿಲ್ಲ. 554 00:44:57,230 --> 00:45:01,510 ಹಾಗಾಗಿ, 13 ವರ್ಷಗಳಲ್ಲಿ 13 ಮನೆಗಳು, ಮತ್ತು ಕೆಲವು ಅಷ್ಟೇನೂ ಕೆಟ್ಟದಾಗಿರಲಿಲ್ಲ. 555 00:45:01,710 --> 00:45:03,820 ಆದರೆ ಒಳ್ಳೆಯವುಗಳಿಗೆ, ನಾನು ಬೇಕಿರಲೇ ಇಲ್ಲ. 556 00:45:05,160 --> 00:45:06,740 ತುಂಬಾ ಹಾಳಾಗಿದ್ದೆ, ಎನ್ನಬಹುದು. 557 00:45:07,870 --> 00:45:09,520 ನಾನೆಂದಿಗೂ ಸರಿಯಾದುದನ್ನು ಹೇಳಲಿಲ್ಲ. 558 00:45:09,720 --> 00:45:13,620 ನನಗೇನಾಗುತ್ತಿತ್ತು ಎಂದು ಜನರಿಗೆ ಹೇಳಲು ನನಗೆ ಪದಗಳೇ ಸಿಗುತ್ತಿರಲಿಲ್ಲ. 559 00:45:15,380 --> 00:45:18,500 ಅವರು ನನ್ನನ್ನು ಇಷ್ಟಪಡಲು, ನನ್ನನ್ನು ಕಾಪಾಡಲು ಯಾರನ್ನಾದರೂ ಕರೆತರಲು, 560 00:45:19,670 --> 00:45:21,300 ಹಾಗಾಗಿ ನಾನು ಮಾತು ನಿಲ್ಲಿಸಿದೆ. 561 00:45:23,050 --> 00:45:24,680 ಸುಮಾರು ಆರು ವರ್ಷಗಳು. 562 00:45:25,340 --> 00:45:28,600 ನಾನು ಜೀವಂತ ಹೆಣದಂತಿದ್ದೆ, ಒಳಗಿನಿಂದ, ಕನಿಷ್ಠ ಪಕ್ಷ. 563 00:45:29,430 --> 00:45:34,170 ಆನಂತರ, ನನ್ನ ಕೈಗಳಲ್ಲಿ ಈ ಶಕ್ತಿಯ ಅನುಭವವಾಯಿತು ಮತ್ತು ಒಂದು ಧ್ವನಿ 564 00:45:34,370 --> 00:45:38,980 ಹೋರಾಡಲು ಸಮಯವಾಗಿದೆ, ನನ್ನನ್ನು ನಾನು ರಕ್ಷಿಸಿಕೊಳ್ಳಲು, ಎಂದು ಹೇಳಿತು. 565 00:45:40,400 --> 00:45:43,220 ನನಗೀಗ ಗೊತ್ತು ಆ ಧ್ವನಿ, ಆಕೆಯೇ ದೇವರು. 566 00:45:43,420 --> 00:45:46,360 ನಾನೇನೇ ಮಾಡಿದರೂ, ಆಕೆಯ ಆಶೀರ್ವಾದದಿಂದ ಮಾಡಿದೆ. 567 00:45:49,490 --> 00:45:52,160 ಹಾಗಾಗಿ ಹೌದು. ಆ ವ್ಯಕ್ತಿಯನ್ನು ನಾನು ಕೊಂದೆ. 568 00:45:52,620 --> 00:45:55,670 ಮತ್ತು ಇಲ್ಲ. ನನಗೆ ಪಶ್ಚಾತ್ತಾಪವಿಲ್ಲ. 569 00:46:00,090 --> 00:46:05,050 ಹೌದು. ನೋಡಿ. ಅವಳ ಬಗ್ಗೆ ನಿರ್ಣಯಿಸಬೇಕೇನು ಈಗ? 570 00:46:06,050 --> 00:46:09,850 ನಿಮ್ಮಲ್ಲಿ ಪ್ರತಿಯೊಬ್ಬರೂ ಬದುಕಲು ಏನಾದರೂ ಮಾಡಲೇಬೇಕಿತ್ತು. 571 00:46:10,050 --> 00:46:13,270 - ಇಲ್ಲದಿದ್ದರೆ ನೀವಿಲ್ಲಿರುತ್ತಿರಲಿಲ್ಲ. - ಅವಳೇನು ಮಾಡಿದ್ದಾಳೋ ಬೇಕಿಲ್ಲ. 572 00:46:13,520 --> 00:46:17,650 ಈವ್ ನನ್ನನ್ನು ಗುಣಪಡಿಸಿದಳು. ನಮಗೆ ಜ್ಞಾನಸ್ನಾನ ಮಾಡಿಸಿದಳು. ಹೊಸ ಆರಂಭ ಕೊಟ್ಟಳು. 573 00:46:22,900 --> 00:46:24,740 ನಾವಿಲ್ಲಿ ಪುನರ್ಜನ್ಮ ಪಡೆದೆವು. 574 00:46:25,530 --> 00:46:28,660 ಮನೆಗೆ ಸ್ವಾಗತ, ಈವ್. ಅಥವಾ ನಿನ್ನನ್ನು ಆ್ಯಲಿಸನ್ ಎಂದು ಕರೆಯಬೇಕೇ? 575 00:46:34,750 --> 00:46:35,750 ಈವ್. 576 00:46:36,710 --> 00:46:37,540 ಬಾ ಇಲ್ಲಿ. 577 00:46:51,260 --> 00:46:56,270 ವೆರೋನಿಕಾ, ಇವುಗಳನ್ನು ತೆಗೆದುಬಿಡೋಣವೇ? ಚಂಡಮಾರುತ ಬರುವ ಹಾಗಿದೆ. 578 00:46:58,940 --> 00:47:01,110 ನಾನು ದೇವರನ್ನು ಕಂಡೆ. 579 00:47:02,270 --> 00:47:04,690 ಬೆಳಕಿನಲ್ಲಿ ದೇವರು. 580 00:47:06,900 --> 00:47:08,320 ನಾನು ಬೆಳಕನ್ನು ಕಂಡೆ. 581 00:47:09,280 --> 00:47:12,620 ಬೆಳಕು. ಬೆಳಕಿನಲ್ಲಿ ದೇವರು. 582 00:47:13,990 --> 00:47:18,830 - ನನ್ನೊಳಗೆ ಬೆಳಕು. - ವೆರೋನಿಕಾ, ಒಳಗಡೆಗೆ ಹೋಗೋಣ. 583 00:47:23,000 --> 00:47:25,960 ಕಾಪಾಡಿ! ಕಾಪಾಡಿ! ಕಾಪಾಡಿ! 584 00:47:26,760 --> 00:47:27,670 ಏನು ನಡೆಯುತ್ತಿದೆ? 585 00:47:29,680 --> 00:47:33,970 - ಕಣ್ಣುಗಳಿಂದ ರಕ್ತ ಬರುತ್ತಿದೆ. ಇದು ಎಬೋಲಾನಾ? - ಇಲ್ಲ, ಇದು ಕಳಂಕ. 586 00:47:36,520 --> 00:47:38,060 ಓ, ದೇವರೇ. 587 00:47:41,230 --> 00:47:42,150 ದೇವರೇ. 588 00:47:44,270 --> 00:47:45,480 ವೆರೋನಿಕಾ. 589 00:48:15,100 --> 00:48:17,390 ಆ ಸೂಳೆ ಮುಂಡೆಯರು. 590 00:48:18,060 --> 00:48:21,230 ಮುಚ್ಚು ಬಾಯಿ! ಸೇನೆಯನ್ನು ಕಳುಹಿಸಿ ಅವರನ್ನು ನಿರ್ನಾಮ ಮಾಡಬೇಕು. 591 00:48:21,690 --> 00:48:24,730 ನಿಜವಾಗಿ ದೆಂಗೋದು ಏನಂತ ಈ ಸೂಳೆಯರಿಗೆ ತೋರಿಸ್ತೀನಿ. 592 00:48:25,980 --> 00:48:27,980 ಮಿರೋನ್ ಏನು ಮಾಡುತ್ತಿದ್ದಾನೆ? 593 00:48:28,530 --> 00:48:33,910 ಈ ಸೂಳೆಯರ ಬಗ್ಗೆ ಏನು ಮಾಡುತ್ತಿದ್ದಾನೆ? ನನಗೆ ಅರ್ಥವಾಗುತ್ತಿಲ್ಲ. 594 00:48:41,120 --> 00:48:41,960 ಹೋಗು ದೂರ! 595 00:48:42,170 --> 00:48:44,400 ಬೇಡ, ವಿಕ್ಟರ್. ವಾದಿಮ್ಗೆ ತೊಂದರೆ ಮಾಡಬೇಡ. 596 00:48:44,600 --> 00:48:45,360 ಬಾ, ಪುಟ್ಟ. 597 00:48:45,560 --> 00:48:47,050 ಬಿಡು ಆ ದರಿದ್ರ ನಾಯಿಯನ್ನು! 598 00:48:47,420 --> 00:48:48,800 ಇಲ್ಲ, ಇಲ್ಲ, ಇಲ್ಲ. 599 00:48:53,800 --> 00:48:59,710 ಈ ಜೋಯಾಳಿಗೆ ಪಾಠ ಕಲಿಸಲು ಸೇನೆಯನ್ನು ಕಳುಹಿಸಬೇಕು. 600 00:48:59,910 --> 00:49:02,060 ಇನ್ನೊಬ್ಬ ಸೋಂಬೇರಿ ಸೂಳೆ ಆಗ್ತಿದ್ದಾಳೆ. 601 00:49:05,560 --> 00:49:07,760 ಅವರನ್ನು ರುಬ್ಬುತ್ತಾರೆ. ನೋಡ್ತಾ ಇರು. 602 00:49:07,960 --> 00:49:13,850 ಸೂಳೆ ಮುಂಡೆಯರು, ಇನ್ನೇನಂದುಕೊಂಡರು? 603 00:49:14,050 --> 00:49:15,410 ಅವರೆಲ್ಲರೂ ಹಾಳಾಗಲಿ. 604 00:49:15,910 --> 00:49:16,870 ಏನು ಮಾಡುತ್ತಿರುವೆ? 605 00:49:21,290 --> 00:49:22,250 ಏನು ಮಾಡುತ್ತಿರುವೆ? 606 00:49:23,330 --> 00:49:25,290 ವಾದಿಮ್ ನಿನಗೇನು ಮಾಡಿತ್ತು? 607 00:49:28,670 --> 00:49:30,280 ಏನೇ ಮಾಡ್ತಾ ಇದ್ದೀಯ? 608 00:49:30,480 --> 00:49:33,090 ವಾದಿಮ್ ನಿನಗೇನು ಮಾಡಿತ್ತು? 609 00:49:34,550 --> 00:49:36,840 ವಾದಿಮ್ ನಿನಗೇನು ಮಾಡಿತ್ತು? 610 00:49:40,470 --> 00:49:42,520 ಏನೇ ಇದು? 611 00:49:47,560 --> 00:49:49,480 ಏನೇ ಇದು...? 612 00:50:52,340 --> 00:50:54,300 ಬಾ. ಬಾ. ಬಾ. 613 00:51:34,210 --> 00:51:37,130 - ಹಲೋ? - ನನ್ನ ಕೋಣೆಗೆ ಬರುವೆಯಾ, ದಯವಿಟ್ಟು? 614 00:51:38,010 --> 00:51:39,260 ಖಂಡಿತ, ಮೇಡಂ. 615 00:51:53,400 --> 00:51:54,820 ಇದನ್ನು ನನಗೆ ಕೊಡು. 616 00:51:56,530 --> 00:51:59,820 ಬಾ. ಬಾ. ನನ್ನೊಂದಿಗೆ ಬಾ. 617 00:52:01,320 --> 00:52:03,950 ಬಾ. ಇದನ್ನು ತಗೋ. 618 00:52:07,910 --> 00:52:09,650 ಇಲ್ಲ, ಇಲ್ಲ, ಇಲ್ಲ. ಹೇ. 619 00:52:09,850 --> 00:52:13,790 ನನ್ನನ್ನು ನೋಡು. ನಿನ್ನ ತಮ್ಮನ ಹೆಸರೇನು? ನಿನಗೆ ನೆರವಾಗುವೆ. 620 00:52:14,460 --> 00:52:17,700 ಅವನನ್ನು ಖಂಡಿತ ಬಿಡುಗಡೆಗೊಳಿಸುತ್ತೇನೆ. ಆಯ್ತಾ? ಮತ್ತು ನಿನ್ನ ಕುಟುಂಬ. 621 00:52:17,900 --> 00:52:19,300 ಅವನ ಹೆಸರು ಬ್ಯಾಟ್ಜೊರಿಗ್. 622 00:52:19,800 --> 00:52:23,140 ನಿನ್ನ ಕುಟುಂಬ ಚೆನ್ನಾಗಿರುತ್ತೆ. ಆಯ್ತಾ? ಆಯ್ತಾ? 623 00:53:19,230 --> 00:53:24,720 ಕಾಪಾಡಿ! 624 00:53:24,920 --> 00:53:28,020 ಸೋಲೊಂಗೋ ವಿಕ್ಟರ್ನನ್ನು ಕೊಂದುಬಿಟ್ಟಳು. 625 00:53:28,220 --> 00:53:33,290 ಅವಳನ್ನು ತಡೆಯಲು ಪ್ರಯತ್ನಿಸಿದೆ ಆದರೆ ಕಾಲ ಮಿಂಚಿತ್ತು! 626 00:56:30,050 --> 00:56:32,760 ಮುಂದಿನ ಸಲ... 627 00:56:32,970 --> 00:56:36,080 ಈಗ ನಿನಗೆ ಬೇಕಾಗಿರುವುದು ಒಬ್ಬ ಯೋಧ. 628 00:56:36,280 --> 00:56:39,000 ನೀನೇನಾ ಅದು? ನಿನ್ನ ತಂದೆಯ ಯೋಧಳೇನು ನೀನು? 629 00:56:39,200 --> 00:56:41,170 ಡೇನಿಯಲ್ ಡ್ಯಾಂಡನ್ನನ ಬಿಳಿಯ ಸೌಕರ್ಯಭರಿತ 630 00:56:41,370 --> 00:56:44,260 ಅಧಿಕಾರಶಾಹಿ ಕುಂಡಿಯನ್ನು ನೀವು ಒದೆಯುವುದನ್ನು ನಾನು ನೋಡಬೇಕು. 631 00:56:44,450 --> 00:56:46,570 ಇರಿ. ನನ್ನ ತಾಯಿಯ ಮೇಲೆ ಬೇಹುಗಾರಿಕೆ ಮಾಡಬೇಕೇ? 632 00:56:47,650 --> 00:56:49,910 - ಹೋಗೋ ಹಿಂದಕ್ಕೆ. - ಹೇ, ಬಿಡೋ ಅವನನ್ನು. 633 00:56:50,110 --> 00:56:52,990 ಜೋಯಾ ನಿಮಗೊಂದು ಸಂದೇಶ ಕೊಟ್ಟಿದ್ದಾಳೆ. ಒಂದು ಬಣ ಆರಿಸಬೇಕಂತೆ. 634 00:56:53,950 --> 00:56:55,700 ನನಗೆ ನಿರಾಸೆ ಮೂಡಿಸಬೇಡ. 635 00:56:56,950 --> 00:56:58,670 ಸೀಸನ್ ಅಂತ್ಯದಲ್ಲಿ 636 00:56:58,870 --> 00:57:01,830 ನನ್ನ ಸಂಸಾರ ಚೆನ್ನಾಗಿದೆ. ರಾಬ್ ಚೆನ್ನಾಗಿದ್ದಾರೆ. 637 00:57:05,380 --> 00:57:07,550 ಬಂಡುಕೋರರನ್ನು ಎದುರಿಸಲು ಸೇನೆ ಕಳುಹಿಸಲಾಯಿತು. 638 00:57:08,550 --> 00:57:10,110 ಕ್ರಾಂತಿ ಶುರುವಾಗುತ್ತಿದೆ 639 00:57:10,310 --> 00:57:13,630 - ಅವನಿಗೆ ಮುಟ್ಟಿ ನೋಡಿಕೊಳ್ಳೋ ಹಾಗೆ ಕೊಡಿ. - ನೀನು ಸುಳ್ಳಿ ಮತ್ತು ವಂಚಕಿ. 640 00:57:14,220 --> 00:57:17,390 ಆ ಸೇನೆಯನ್ನು ನಿರ್ಮಿಸು. ಅವರೆಲ್ಲರನ್ನೂ ನಿನ್ನವರನ್ನಾಗಿಸಿಕೋ. 641 00:57:24,270 --> 00:57:25,310 ತುಂಡೆ, ಮನೆಗೆ ಬಾ. 642 00:57:25,860 --> 00:57:28,930 {\an8}ದಿ ಪವರ್ ಸೀಸನ್ ಅಂತ್ಯ 643 00:57:29,120 --> 00:57:30,010 {\an8}ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 644 00:57:30,210 --> 00:57:31,150 ಸೃಜನಶೀಲ ಮೇಲ್ವಿಚಾರಕರು ವಿವೇಕ್