1 00:00:06,630 --> 00:00:08,960 ಹೇ. ಹೇ. 2 00:00:11,130 --> 00:00:12,220 ಎದ್ದೇಳು. 3 00:00:13,180 --> 00:00:14,800 ವಿವಾಹೋತ್ಸವದ ಶುಭಾಶಯಗಳು. 4 00:00:18,640 --> 00:00:21,830 ವಿವಾಹೋತ್ಸವದ ಶುಭಾಶಯಗಳು. ಸಮಯ ಎಷ್ಟಾಗಿದೆ? 5 00:00:22,030 --> 00:00:25,150 ಮುಂಚೆಯೇ. ಕ್ಷಮಿಸು. ಕೆಲಸಕ್ಕೆ ಮುನ್ನ ಓಟಕ್ಕೆ ಹೋಗಬೇಕು ಅಂದುಕೊಂಡೆ. 6 00:00:26,650 --> 00:00:28,480 ಹಾಂ, ತುಂಬಾ ಬೆವರು ಬರುತ್ತೆ. 7 00:00:29,480 --> 00:00:31,240 ಇವತ್ತಂತೂ ನನ್ನ ದಿನ ಭಯಂಕರವಾಗಿದೆ. 8 00:00:32,070 --> 00:00:37,200 ನಾನು ನಿನಗೆ ನೇರವಾಗಿ ಹೇಳಬೇಕೆಂದುಕೊಂಡೆ, ನೀನು ಹೊರಡುವ ಮುಂಚೆ… 9 00:00:38,950 --> 00:00:39,910 ನಿನ್ನ ಪ್ರೀತಿಸುವೆ. 10 00:00:41,660 --> 00:00:44,250 - ಮತ್ತು ಇಂದು ರಾತ್ರಿ ವೈನ್ ಕುಡಿಯೋಣ. - ಹೌದಾ? 11 00:00:45,250 --> 00:00:49,700 ವಯಸ್ಕರ ವಿಚಾರ ಮಾತಾಡೋಣ. ಕೆಲಸ ಅಥವಾ ಮಕ್ಕಳ ಬಗ್ಗೆಯಾಗಲಿ ಅಲ್ಲ. 12 00:00:49,900 --> 00:00:50,780 ಅಬ್ಬಾ, ಸದ್ಯ. 13 00:00:50,980 --> 00:00:54,090 ಆಮೇಲೆ ಸಂಭೋಗ ನಡೆಸೋಣ. 14 00:00:55,340 --> 00:00:56,510 ಏನು ಮಾಡೋದು? 15 00:00:58,140 --> 00:01:03,980 ಸರಿ. ಮಕ್ಕಳನ್ನು ಕಳಿಸಿ ಆಮೇಲೆ ನಾನು ತಯಾರಾಗುವೆ. 16 00:01:05,900 --> 00:01:09,860 ದೇವರೇ, ನಿನ್ನ ಉಪಾಯ ನನಗೆ ಹಿಡಿಸಿತು. ಆದರೆ ನೀನು ಇನ್ನೂ ಹೆಚ್ಚು ಹಿಡಿಸಿದೆ. 17 00:01:13,150 --> 00:01:13,990 - ಏನು? - ದೇವರೇ. 18 00:01:14,200 --> 00:01:16,760 - ಇದೇನು ತಮಾಷೆಯೇ? - ಏನು ಹಾಳಾದ್ದು ನಡೆಯುತ್ತಿದೆ? 19 00:01:16,960 --> 00:01:18,370 - ಏನು ನಡೆಯುತ್ತಿದೆ? - ಛೆ. 20 00:01:32,000 --> 00:01:35,240 ಜೋಸ್, ಏನಾಯ್ತು? ಅಯ್ಯೋ, ದೇವರೇ. ಆರಾಮವಾಗಿದ್ದಿಯಾ? 21 00:01:35,440 --> 00:01:36,240 ನನ್ನ ಮುಟ್ಟಬೇಡಿ. 22 00:01:36,440 --> 00:01:39,390 ನಾನು ನೋಡ್ತೀನಿ. ನೋಡಿಕೊಳ್ಳಿ. ಹಿಂದೆ ಹೋಗು, ಚಿನ್ನ. 23 00:01:44,020 --> 00:01:46,000 ಅಲಾರ್ಮ್ ಹೊಡೆಯುತ್ತಿದೆ. ಬೆಂಕಿ ಹತ್ತಿದೆಯಾ? 24 00:01:46,200 --> 00:01:48,520 - ಇನ್ನಿಲ್ಲ. - ಚೆನ್ನಾಗಿದ್ದೇವೆ. ಧನ್ಯವಾದ, ಫ್ರಾಂಕ್. 25 00:01:48,940 --> 00:01:50,920 ಮನೆ ಯಾಕೆ ಕಿರುಚುತ್ತಿದೆ? 26 00:01:51,120 --> 00:01:52,400 ಜೋಸ್ ಅದನ್ನು ಸುಡಲು ನೋಡಿದಳು. 27 00:01:53,320 --> 00:01:55,850 - ಹದಿಹರೆಯ-ಹಾರ್ಮೋನ್ ಏರುಪೇರು. - ಬಾಯಿ ಮುಚ್ಚು, ಮ್ಯಾಟಿ. 28 00:01:56,040 --> 00:01:58,970 ಸರಿ. ಎಲ್ಲವೂ ಚೆನ್ನಾಗಿದೆ. ನಿಯಂತ್ರಣ ಪಡೆದಿದ್ದೇವೆ. 29 00:01:59,170 --> 00:02:00,390 ತಯಾರಾಗಿ. ತಡವಾಗಿದೆ. 30 00:02:00,590 --> 00:02:04,080 - ಏನು ಹೇಳುತ್ತಿರುವೆ? ಇಲ್ಲಿ ಅನಾಹುತವೇ ಆಗಿದೆ. - ಇದು ಸ್ವಲ್ಪ ಅತಿಯಾಯಿತು. 31 00:02:07,000 --> 00:02:09,210 - ಜೋಸ್, ಏನಾಯ್ತು? - ನಂಗೊತ್ತಿಲ್ಲ. 32 00:02:18,050 --> 00:02:22,330 - ಹಾಯ್. ಆಂಗ್ಲದಲ್ಲಿ ಮಾತನಾಡಬಹುದೇ? - ಚಿನ್ನ, ನಮ್ಮ ಮದುವೆಯಾಗಿ ಎಷ್ಟು ವರ್ಷಗಳಾದವು? 33 00:02:22,530 --> 00:02:25,580 ಇಪ್ಪತ್ತು ವರ್ಷ, ಒಂದು ಪದ ಕಲಿತಿಲ್ಲ? ರೊಸೆಟ್ಟ ಸ್ಟೋನ್ ಕೊಡಲಿಲ್ಲವೇ? 34 00:02:25,780 --> 00:02:29,440 ಆಕೆಗೆ ಸಮಯವಿಲ್ಲ. ಶಿಶುಗಳಿಗೆ ಮುತ್ತಿಟ್ಟು ರಿಬ್ಬನ್ ಕತ್ತರಿಸುತ್ತಿದ್ದಾರೆ. 35 00:02:29,690 --> 00:02:32,920 ಹೇ. ಹೇ. ಜೋಸ್. ಅಮ್ಮನನ್ನು ಹಾಗೆ ಮಾತನಾಡಿಸಬೇಡ. 36 00:02:33,120 --> 00:02:35,780 ಹೇ. ಏನಾಗುತ್ತಿದೆ ನಿನಗೆ? 37 00:02:43,450 --> 00:02:44,520 ಇದು ಹೆಲೆನ್. ಕ್ಷಮಿಸಿ. 38 00:02:44,720 --> 00:02:45,480 - ಹಾಂ. - ಕ್ಷಮಿಸಿ. 39 00:02:45,680 --> 00:02:46,580 ಇರಲಿ ಬಿಡು. 40 00:02:46,950 --> 00:02:50,500 - ಮುಖ್ಯವಾದ ವಿಷಯವಿರಲಿ. - ಪ್ರಪಂಚವೇ ಹೊತ್ತಿ ಉರಿಯುತ್ತಿದೆ. 41 00:02:51,670 --> 00:02:54,500 ನೀವಿಲ್ಲಿ ಬರಬೇಕು. ಈಗಲೇ. 42 00:02:56,340 --> 00:03:01,220 ದಿ ಪವರ್ 43 00:03:02,680 --> 00:03:05,960 ತುರ್ತು ಸೇವೆಗಳು ತಮ್ಮ ಈ ವರ್ಷದ ಅಧಿಕ ಸಮಯದ ಬಜೆಟ್ ತಲುಪುತ್ತಿವೆ. 44 00:03:06,160 --> 00:03:08,380 ಯಾರಾದರೂ ಹೆಚ್ಚಿನ ಹಣವಿರುವವರನ್ನು ಸಂಪರ್ಕಿಸಬೇಕು. 45 00:03:08,580 --> 00:03:12,130 - ಗವರ್ನರ್ ಜೊತೆ ಸಭೆ ಮಾಡಿಸಿ. ಇನ್ನೇನು? - ಪ್ಯೂಜೆಟ್ ಸೌಂಡ್ ಎನರ್ಜಿ. 46 00:03:12,330 --> 00:03:16,190 ವಿದ್ಯುತ್ ವ್ಯತ್ಯಯ, ಸುಟ್ಟ ಗ್ರಿಡ್'ಗಳು, ಫ್ಯೂಸ್ ಡಬ್ಬಿಗಳು. ಸಲಕರಣೆಗಳ ವೈಫಲ್ಯ ಅಲ್ಲ. 47 00:03:16,400 --> 00:03:19,610 ಹೊರಗಿನ ಸಂಸ್ಥೆಯ ಮೂಲಕ ಅದನ್ನು ಪರಿಶೀಲಿಸೋಣ, ದಯವಿಟ್ಟು. 48 00:03:19,820 --> 00:03:22,890 ಬೀಕನ್ ಹಿಲ್ಲಲ್ಲಿ ಮತ್ತೊಂದು ಬೆಂಕಿ ಅವಘಡ. ಉಪಹಾರ ಮಂದಿರದಲ್ಲಿ. 49 00:03:23,090 --> 00:03:27,060 ನಿಯಂತ್ರಣದಲ್ಲಿದೆ ಎಂದು ಮುಖ್ಯಸ್ಥರು ಹೇಳಿದ್ದರೂ, ಈಗ ಪಕ್ಕದ ಕಟ್ಟಡಕ್ಕೆ ಬೆಂಕಿ ಹಬ್ಬಿದೆ. 50 00:03:27,260 --> 00:03:29,310 ಮೂವರ ಮರಣ, ನಿವಾಸಿಗಳು ಕಾಣೆಯಾಗಿದ್ದಾರೆ. 51 00:03:29,510 --> 00:03:33,460 ಇನ್ನೊಬ್ಬ ಹದಿಹರೆಯದ ಹುಡುಗಿ. ಕುಟುಂಬದವರು ಇದೊಂದು ಅವಘಡ ಎನ್ನುತ್ತಿದ್ದಾರೆ. 52 00:03:33,830 --> 00:03:38,710 ಆಕೆಯ ತಂದೆಯ ಪ್ರಕಾರ ಬೆಂಕಿಯು ಅವಳ ಕೈಗಳಿಂದ ಬಂತಂತೆ. ಹೀಗೇ ಹೇಳಿದರು. 53 00:03:39,260 --> 00:03:41,760 ಬೀಕನ್ ಹಿಲ್ಲಲ್ಲಿ ಹೆಚ್ಚಾಗಿ ಚೀನಾದ ವಲಸಿಗರೇ ಇದ್ದಾರೆ. 54 00:03:41,960 --> 00:03:44,500 ಅನುವಾದ ಮಾಡುವಾಗ ಏನಾದರೂ ತಪ್ಪು ಸಂಭವಿಸಿರಬಹುದಾ? 55 00:03:44,700 --> 00:03:45,500 ಸಾಧ್ಯವಿದೆ. 56 00:03:45,700 --> 00:03:48,120 - ನಿಮಗೆ ಮಂಡಾರಿನ್ ಬರುತ್ತಾ? - ಕ್ಯಾಂಟನೀಸ್ ಸಹ. ನೋಡುವೆ. 57 00:03:48,320 --> 00:03:51,790 ಸರಿ, ಭರ್ಜರಿಯಾಗಿದೆ. ಎಲ್ಲರೂ ಭರ್ಜರಿ ಕೆಲಸ ಮಾಡಿದ್ದೀರಿ. ಧನ್ಯವಾದ. 58 00:03:51,990 --> 00:03:54,510 ಎಲ್ಲರ ಬಳಿಯೂ ಕಳಿಸುವ ಆದೇಶ ಇದೆ, ಅಲ್ವಾ? 59 00:03:54,700 --> 00:03:56,650 ಏನಿದು? ವಾರದಲ್ಲಿ 12ನೇ ಅಗ್ನಿ ಅವಘಡವೇ? 60 00:03:58,820 --> 00:04:00,280 ಏನು ನಡೆಯುತ್ತಿದೆ? 61 00:04:02,110 --> 00:04:04,870 ಹದಿಹರೆಯದ ಹುಡುಗಿಯರು ಎಲ್ಲಕ್ಕೂ ಬೆಂಕಿ ಹಚ್ಚುತ್ತಿದ್ದಾರೆ. 62 00:04:05,120 --> 00:04:08,060 ನನಗೆ ಆಶ್ಚರ್ಯವಿಲ್ಲ. ಅವರು ಬೆಳೆಯುತ್ತಿರುವ ಪ್ರಪಂಚವೇ ಹಾಗಿದೆ. 63 00:04:08,260 --> 00:04:12,040 ಹಾಂ. ನನಗೂ ಕೆಲವೊಮ್ಮೆ ಏನಕ್ಕಾದರೂ ಬೆಂಕಿ ಹಚ್ಚಬೇಕು ಅನ್ಸುತ್ತೆ. 64 00:04:12,620 --> 00:04:17,840 ಬೆಂಕಿ, ಹುಡುಗಿಯರು, ವಿದ್ಯುತ್ ವ್ಯತ್ಯಯಗಳು. ಅವುಗಳಿಗೆ ಏನಾದರೂ ಸಂಬಂಧವಿದೆ ಅನ್ಸುತ್ತಾ? 65 00:04:18,800 --> 00:04:20,010 ನಾನು ಪತ್ತೆ ಮಾಡುವೆ. 66 00:04:36,400 --> 00:04:38,820 ಹೇ, ಜೋಸ್. ನನ್ನನ್ನು ಕ್ಷಮಿಸು… 67 00:04:41,360 --> 00:04:44,360 ನಮ್ಮಮ್ಮ. ಸಾಮಾನ್ಯ ವ್ಯಕ್ತಿಯಂತೆ ಸಂದೇಶ ಕಳಿಸಲು ಆಕೆಗೆ ಆಗಲ್ವೇ? 68 00:04:44,950 --> 00:04:48,530 ಹುಡುಗಿಯರು ಮಾಡುತ್ತಿರುವ ವಿಚಿತ್ರ ವಿದ್ಯುತ್ ಕ್ರಿಯೆಯ ಬಗ್ಗೆ ಕೇಳಿರುವೆಯಾ? 69 00:04:49,330 --> 00:04:52,190 ಅಂದರೆ, ಹಾಂ. ಒಂಥರಾ. ಯಾಕೆ? ಅದರ ಬಗ್ಗೆ ನೀನೇನು ಕೇಳಿರುವೆ? 70 00:04:52,390 --> 00:04:55,020 - ಅದರಿಂದಲೇ ಆಗುತ್ತೆ ಅನ್ಸುತ್ತೆ. - ಯಾವುದು, ಸಂದೇಶಗಳಿಂದಲೇ? 71 00:04:55,220 --> 00:05:00,750 ಇಲ್ಲ. ಹುಡುಗಿಯರು, ಗೊತ್ತಲ್ಲ, ತಮ್ಮೊಂದಿಗೇ ಆಟವಾಡುವುದು. ವೈಬ್ರೇಟರ್ಗಳೊಂದಿಗೆ. 72 00:05:03,550 --> 00:05:07,950 ಸರಿ. ಅದರ ಬಗ್ಗೆ ನಾನಿನ್ನೂ ಕೇಳಿಲ್ಲ. ಆದರೆ ವಿಶ್ವ ನಾಗರಿಕತೆಯ ಬಗ್ಗೆ ಪರೀಕ್ಷೆ ಇದೆ. 73 00:05:08,150 --> 00:05:11,920 ಹಾಗಾಗಿ ಮತ್ತೆ ಸಿಗುವೆ. ಸರಿ. ಹೇ, ಕ್ವಿನ್. ಕ್ಯಾಟ್ ಎಲ್ಲಿ? 74 00:05:12,120 --> 00:05:15,020 ಪರೀಕ್ಷೆ ಇದೆ ಅಂತ ತಪ್ಪಿಸಿಕೊಂಡಿರಬೇಕು. ನೀನು ಓದಿರುವೆಯಾ? 75 00:05:15,560 --> 00:05:19,980 ಹಾಂ, ಒಂಥರಾ. ಗೊತ್ತಿಲ್ಲ. ಫ್ರೆಂಚ್ ಕ್ರಾಂತಿಯ ಇಡೀ ಅಧ್ಯಾಯವೇ? 76 00:05:20,520 --> 00:05:24,650 - ಅದನ್ನು ಜೀವನದಲ್ಲಿ ಹೇಗೆ ಬಳಸಲಿ? - ಹೌದಲ್ವಾ? ಪಕ್ಕಾ ಅನುತ್ತೀರ್ಣಳಾಗುತ್ತೇನೆ. 77 00:05:33,000 --> 00:05:36,250 - ಈಗ ನೋಡು. ಪರೀಕ್ಷೆ ಇಲ್ಲ. - ಆಹಾ, ದೇವರೇ. ಸಕ್ಕತ್ತಾಗಿದೆ. 78 00:05:36,620 --> 00:05:38,080 ಬಾ, ಬಾ, ಬಾ. 79 00:05:41,750 --> 00:05:42,530 ಹೇ. 80 00:05:42,730 --> 00:05:45,920 ಇವರು ರಾಬ್ ಲೋಪೆಜ್. ಈ ಪರೀಕ್ಷೆಯ ಉಸ್ತುವಾರಿ ಇವರೇ. 81 00:05:46,630 --> 00:05:47,620 ಭೇಟಿ ಸಂತೋಷವಾಯಿತು. 82 00:05:47,820 --> 00:05:52,080 ಅವರು ನಿನ್ನ ಗಾಯದ ಕಲೆಗಳನ್ನು ನೋಡಲಿದ್ದಾರೆ, ನೀನು ಸರಿ ಅಂದರೆ, ಸಾರಾ. 83 00:05:52,280 --> 00:05:53,060 ಸರಿ. 84 00:05:55,390 --> 00:05:58,400 ಮತ್ತೆ, ಸಾರಾ, ಚೆನ್ನಾಗಿದ್ದೀಯಾ? 85 00:05:58,730 --> 00:06:01,020 - ಹಾಂ. - ಒಳ್ಳೆಯದು, ಒಳ್ಳೆಯದು, ಒಳ್ಳೆಯದು. 86 00:06:02,320 --> 00:06:05,400 ನಿನ್ನ ಕಷ್ಟದ ಬಗ್ಗೆ ಕೇಳಿ ನನಗೆ ತುಂಬಾ ನೋವಾಯಿತು. 87 00:06:06,450 --> 00:06:10,240 ಆದರೆ ನಾವು ಸರಿ ಮಾಡಲಾಗದ್ದು ಖಂಡಿತ ಅಲ್ಲ ಎಂದು ಅಂದುಕೊಳ್ಳುವೆ. 88 00:06:11,660 --> 00:06:12,640 ನೋಡು. ನಂಗೊತ್ತು. 89 00:06:12,840 --> 00:06:16,460 ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಚಿಂತಿಸುತ್ತಾರೆಂದು ನನಗೆ ಗೊತ್ತು. 90 00:06:16,710 --> 00:06:19,120 ಎಲ್ಲದರ ಬಗ್ಗೆಯೂ. ಸರಿ. ನೋಡಲೇ? 91 00:06:21,750 --> 00:06:22,800 ಸರಿ. 92 00:06:28,590 --> 00:06:29,430 ಸರಿ. 93 00:06:39,980 --> 00:06:42,520 ಅಷ್ಟು ಚಿಕ್ಕ ದೇಹಕ್ಕೆ ಎಷ್ಟೊಂದು ಔಷಧಿಗಳು. 94 00:06:43,150 --> 00:06:45,150 ಭಾವನೆಗಳನ್ನು ನಿಭಾಯಿಸಲು ಕಷ್ಟಪಡುತ್ತಾಳೆ. 95 00:06:46,190 --> 00:06:48,760 - ಅದರಲ್ಲೂ ಅವಳಿಗೆ ಕೋಪ ಬಂದಾಗ. - ಸರಿ. 96 00:06:48,960 --> 00:06:52,160 ಮತ್ತು ಆಕೆಗೆ ಮಧ್ಯಂತರ ಸ್ಫೋಟಕ ಅಸ್ವಸ್ಥತೆ ಇದೆಯೇ? 97 00:06:52,490 --> 00:06:56,160 ಹೌದು. ಎರಡು ವರ್ಷಗಳ ಹಿಂದೆ ಸಾರಾಗೆ ಈ ಯಾವ ಸಮಸ್ಯೆಗಳೂ ಇರಲಿಲ್ಲ. 98 00:06:57,660 --> 00:07:00,790 - ಏನಾದರೂ ನಡೀತಾ? - ಏನೂ ಇಲ್ಲ, ನಮಗೆ ಗೊತ್ತಿದ್ದಂತೆ. 99 00:07:02,630 --> 00:07:06,050 ಅವಳ ಕಷ್ಟದ ಹದಿಹರೆಯದ ವಯಸ್ಸಿನ ತೊಳಲಾಟಗಳಷ್ಟೇ. 100 00:07:06,380 --> 00:07:09,930 ನನ್ನನ್ನು ನಂಬಿ, ಅದರ ಬಗ್ಗೆ ತಿಳಿದಿರುವೆ. ನನಗೂ ಆ ವಯಸ್ಸಿನ ಮಗಳಿದ್ದಾಳೆ. 101 00:07:10,180 --> 00:07:14,620 ನನ್ನ ಮಗಳಿಗೆ 17. ನೀವು ಅವಳ ಭಾವನೆಗಳ ಬಗ್ಗೆ ಅವಳೊಂದಿಗೆ ಮಾತನಾಡುವಾಗ ಏನು ಹೇಳುತ್ತಾಳೆ? 102 00:07:14,820 --> 00:07:18,600 ಮಾತನಾಡೋದೇ? ಸಾರಾ ಮಾತನಾಡಲ್ಲ. ಕಿರುಚುತ್ತಾಳೆ. 103 00:07:19,180 --> 00:07:21,690 ನನ್ನನ್ನು ದ್ವೇಷಿಸುತ್ತಾಳೆ. ಎಲ್ಲರನ್ನೂ ಅಷ್ಟೇ. 104 00:07:22,480 --> 00:07:24,770 ಕ್ಷಮಿಸಿ. ತಗೊಳ್ಳಿ. 105 00:07:29,990 --> 00:07:34,310 ನೋಡೋಣ. ನಮ್ಮಲ್ಲಿ ಡೆಪಕೋಟ್, ಟೆಗ್ರೆಟೋಲ್, ಟೋಪಮ್ಯಾಕ್ಸ್, ಎಬಿಲಿಫೈ, 106 00:07:34,510 --> 00:07:37,230 ರಿಸ್ಪರ್ಡಾಲ್, ಪಿಆರ್ಎನ್ ಫೀನೋಬಾರ್ಬಿಟಾಲ್... 107 00:07:37,430 --> 00:07:39,370 ಹಾಂ, ಎಲ್ಲವನ್ನೂ ಪ್ರಯತ್ನಿಸಿದ್ದೇವೆ. 108 00:07:41,830 --> 00:07:45,110 ಆದರೆ ಆಕೆಯ ಕಲೆಗಳು ಅದರಿಂದಲೇ, ಅಲ್ವಾ? ಔಷಧಗಳಿಂದ? 109 00:07:45,310 --> 00:07:48,240 ಅವುಗಳಿಂದ ಆಕೆಗೆ ಅಡ್ಡ ಪರಿಣಾಮಗಳು ಮತ್ತು ಪ್ರತಿಕ್ರಿಯೆಗಳಾಗಿವೆಯೇ? 110 00:07:48,440 --> 00:07:50,660 ಈ ಯಾವುದೇ ಔಷಧಗಳು, ಜೊತೆಯಾಗಿ ಸಹ, 111 00:07:50,860 --> 00:07:52,300 ಇದನ್ನು ಮಾಡಿರದಿರಬಹುದು. 112 00:07:53,180 --> 00:07:57,620 ಕ್ಷಮಿಸಿ. ಈ ಕಲೆಗಳ ಮಾದರಿ ತುಂಬಾ ವಿಭಿನ್ನವಾಗಿದೆ. 113 00:07:57,820 --> 00:08:02,440 ಇದು ಲಿಕ್ಟೆನ್ಬರ್ಗ್ ರೇಖಾಚಿತ್ರ. ಇದು ವಿಶಿಷ್ಟವಾಗಿ ವಿದ್ಯುತ್ ಸುಡುವಿಕೆಯಿಂದ ಆಗುತ್ತೆ. 114 00:08:03,730 --> 00:08:08,380 ಸಾರಾಗೆ ವಿದ್ಯುತ್ ಆಘಾತ ಉಂಟಾಗಿತ್ತಾ? ನಿಮಗೆ ಗೊತ್ತಿಲ್ಲದ ಯಾವುದಾದರೂ ಅವಘಡ? 115 00:08:08,580 --> 00:08:12,240 ಇಲ್ಲ. ಇಲ್ಲ. ಅಂದರೆ, ಇಲ್ಲ ಅನ್ಸುತ್ತೆ. 116 00:08:12,450 --> 00:08:15,740 ಅಂಥದ್ದು ನಡೆದಿದ್ದರೆ ನನಗೆ ಹೇಳುತ್ತಿದ್ದಳು, ಅಲ್ವಾ? 117 00:08:17,530 --> 00:08:23,210 ಕೆಲ್ಲಿ, ನನ್ನನ್ನು ಕ್ಷಮಿಸಿ. ಇದು ಸೂಕ್ಷ್ಮ ಅಂತ ನಂಗೊತ್ತು, ಆದರೂ ನಾನು ಕೇಳಲೇಬೇಕು. 118 00:08:25,130 --> 00:08:27,170 ಅವಳಿಗೆ ಯಾರೂ ತೊಂದರೆ ಕೊಡುತ್ತಿಲ್ಲವಷ್ಟೇ? 119 00:08:27,670 --> 00:08:31,880 ಇಲ್ಲ. ಇಲ್ಲ. ನನಗೆ ಗೊತ್ತಿದ್ದಂತೆ ಇಲ್ಲ. 120 00:08:33,050 --> 00:08:35,930 ಕೇವಲ ಜಗಳಗಳು. ಸಾಮಾನ್ಯ ಆಟದ ಮೈದಾನದ ವಿಚಾರಗಳು. 121 00:08:36,890 --> 00:08:39,060 ಹುಡುಗಿಯರೊಂದಿಗೆ. ಬೇರೆ ಹುಡುಗಿಯರೊಂದಿಗೆ. 122 00:08:41,480 --> 00:08:42,310 ಸರಿ. 123 00:08:46,150 --> 00:08:48,050 ಕಾರ್ಪೇಥಿಯಾದ ಬೀದಿಗಳು ಉರಿಯುತ್ತಿವೆ. 124 00:08:48,250 --> 00:08:52,220 ಈ ಬೆಂಕಿಗಳು ಆಕಸ್ಮಿಕವಲ್ಲ. ಇವು ವಿಧ್ವಂಸಕತೆ ಮತ್ತು ಅರಾಜಕತಾ ಕೃತ್ಯಗಳಾಗಿವೆ. 125 00:08:52,420 --> 00:08:53,820 ದುಷ್ಕರ್ಮಿಗಳಿಗೆ 126 00:08:54,820 --> 00:08:56,410 ಮರಣದಂಡನೆ ವಿಧಿಸಲಾಗುತ್ತದೆ. 127 00:08:56,660 --> 00:09:00,100 ಇವರು ಕೇವಲ ಸಣ್ಣ ಹೆಣ್ಣು ಮಕ್ಕಳಲ್ಲ. ಇವರು ಭಯೋತ್ಪಾದಕಿಯರು. 128 00:09:00,300 --> 00:09:05,120 ನಿಮ್ಮ ನಿಷ್ಠ ಅಧ್ಯಕ್ಷನಾಗಿ ನ್ಯಾಯ ಮತ್ತು ನೀತಿಯನ್ನು ಎತ್ತಿ ಹಿಡಿಯುವೆ. ದೇವರು ನೆರವಾಗಲಿ. 129 00:09:06,040 --> 00:09:06,920 ಹಾಳಾಗಿ ಹೋಗಿ. 130 00:09:20,100 --> 00:09:22,080 {\an8}ಕ್ರೀಡಾ ವಿಶೇಷ 1999 131 00:09:22,280 --> 00:09:24,040 {\an8}ಈ ವರ್ಷ, ಅಕ್ಟೋಬರ್ 1999ರಲ್ಲಿ, 132 00:09:24,240 --> 00:09:25,840 {\an8}ಇನ್ಸ್ಟಿಟ್ಯೂಟ್ ಫಾರ್ ಜಿಮ್ನಾಸ್ಟಿಕ್ಸ್ ಎಕ್ಸಲೆನ್ಸ್ 133 00:09:26,040 --> 00:09:29,010 {\an8}ಪ್ರಪಂಚದ 71 ದೇಶಗಳಿಂದ ಅತ್ಯುತ್ತಮ ಜಿಮ್ನಾಸ್ಟುಗಳು 134 00:09:29,210 --> 00:09:31,570 ಟಿಯಾಂಜಿನ್, ಚೀನಾದಲ್ಲಿ ಒಟ್ಟಾಗಿ ಸೇರಿ, 135 00:09:31,940 --> 00:09:34,740 ಅಂತಿಮ ಪ್ರಶಸ್ತಿಗೆ ಇದು ವೇದಿಕೆಯಾಗಲಿದೆ. 136 00:09:35,110 --> 00:09:37,820 ಸಿಡ್ನಿ ಒಲಿಂಪಿಕ್ಸಿನಲ್ಲಿ ಪ್ರತಿಷ್ಠಿತ ಚಿನ್ನ. 137 00:09:38,990 --> 00:09:41,490 ಅದಕ್ಕೂ ಮೊದಲು ರಾಷ್ಟ್ರೀಯ ಸ್ಪರ್ಧೆಗಳು ಬರುತ್ತವೆ. 138 00:09:41,740 --> 00:09:45,620 ಮತ್ತು ಕಾರ್ಪೇಥಿಯಾದಲ್ಲಿ ಒಂದು ಆಶ್ಚರ್ಯಕರ ಹೊಸ ಪ್ರತಿಭೆ ಉದಯಿಸುತ್ತಿದೆ. 139 00:09:46,040 --> 00:09:50,420 {\an8}ಎಲ್ಲವೂ ಅರ್ಹತಾ ಸುತ್ತಿನಲ್ಲಿ ನನ್ನ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ, ಸುಲಭವಾಗಿ ಗೆಲ್ಲಬಲ್ಲೆ. 140 00:09:52,670 --> 00:09:55,010 ಎರಡು ವರ್ಷ ವಯಸ್ಸಿನಿಂದ ತರಬೇತಿ ಪಡೆಯುತ್ತಿದ್ದೇನೆ. 141 00:09:55,340 --> 00:09:58,930 ಮತ್ತು ನಾನೇ ಶ್ರೇಷ್ಠಳಾಗಬೇಕು. ನನ್ನ ದೇಶಕ್ಕೆ ಹೆಮ್ಮೆ ಆಗಬೇಕು. 142 00:10:00,010 --> 00:10:02,640 ಹಾಗೆಯೇ, ನನ್ನ ತಂಗಿ, ಜೋಯಾ. 143 00:10:02,850 --> 00:10:05,680 - ಮತ್ತು ನಿಮ್ಮ ತಾಯಿ? - ಖಂಡಿತ. 144 00:10:06,980 --> 00:10:09,350 ಕಾರ್ಪೇಥಿಯಾದ ಪತ್ರಿಕೋದ್ಯಮದ ಪ್ರೀತಿ ಪಾತ್ರಳು, 145 00:10:09,600 --> 00:10:13,360 ಟಿಯಾಂಜಿನ್ ಪರೀಕ್ಷೆಯಲ್ಲಿ ತಂಡಕ್ಕೆ ಆಯ್ಕೆಯಾಗುತ್ತಾಳಾ ಕಾದು ನೋಡಬೇಕಿದೆ. 146 00:10:13,820 --> 00:10:15,860 {\an8}ಮತ್ತೊಮ್ಮೆ ನಿಮ್ಮ ಹೆಸರನ್ನು ಹೇಳುವಿರಾ? 147 00:10:16,360 --> 00:10:20,030 ನನ್ನ ಹೆಸರು ಟಾಟಿಯಾನಾ ದೋನಿಚ್ ಮತ್ತು ನನ್ನ ವಯಸ್ಸು 15. 148 00:10:20,240 --> 00:10:21,240 ಕಟ್. 149 00:11:25,600 --> 00:11:28,020 ಇಲ್ಲಿ ಧೈರ್ಯವಾಗಿ ಮುಖವನ್ನು ತೋರಿಸುತ್ತಿರುವೆ. 150 00:11:29,350 --> 00:11:32,060 - ನನ್ನಪ್ಪ ನಿನ್ನ ಕೊಂದುಹಾಕುತ್ತಾರೆ. - ಆಕೆ ಹೇಗಿದ್ದಾಳೆ? 151 00:11:34,940 --> 00:11:37,150 ಆಕೆ ಹೇಗಿದ್ದಾಳೆ ಅನ್ಸುತ್ತೆ, ತುಂಡೆ? 152 00:11:37,780 --> 00:11:38,650 ದಯವಿಟ್ಟು. 153 00:11:40,400 --> 00:11:42,200 - ದೇವರೇ. - ಧನ್ಯವಾದ. 154 00:11:45,200 --> 00:11:47,990 ಎಲ್ಲಾ ಮುಗಿದಿದೆ. ಧನ್ಯವಾದ, ಸರ್. 155 00:12:02,510 --> 00:12:03,680 ನನ್ನನ್ನು ನೋಡು. 156 00:12:05,470 --> 00:12:06,600 ನ್ದುಡಿ? 157 00:12:09,810 --> 00:12:10,890 ನನ್ನನ್ನು ನೋಡು. 158 00:12:27,740 --> 00:12:29,580 ನಾನು ಸಿಲುಕಿರುವ ತೊಂದರೆ ನಿನಗೆ ಗೊತ್ತಾ? 159 00:12:33,750 --> 00:12:38,630 - ಕ್ಷಮಿಸು. - ನನ್ನ ತಂದೆ ಭೂತ ಬಿಡಿಸಬೇಕೆಂತಿದ್ದಾರೆ. 160 00:12:41,920 --> 00:12:43,720 ಯಾರೂ ಬರಬಾರದು ಎಂದು ಹೇಳಿದ್ದಾರೆ. 161 00:12:51,350 --> 00:12:53,390 ನಿನಗೇನಾಯಿತು ಅಂತ ತಿಳಿದುಕೊಳ್ಳುವೆ. 162 00:12:54,520 --> 00:12:55,690 ಇದು ಏನು ಅಂತ. 163 00:13:41,360 --> 00:13:42,820 ಅವನಿಗೆ ಅದು ಆಗಬೇಕಾಗಿತ್ತು. 164 00:13:46,910 --> 00:13:49,910 ಸ್ವರ್ಗದಲ್ಲಿರುವ ನಮ್ಮ ತಂದೆ... 165 00:13:50,200 --> 00:13:52,660 ಆ ಪಿತೃವು ನಿನಗೇನು ಮಾಡಿದ್ದಾರೆ? 166 00:13:55,410 --> 00:13:57,290 ನಿನ್ನನ್ನು ಕಾಪಾಡಲು ಯಾರೂ ಬಂದಿಲ್ಲ. 167 00:13:59,080 --> 00:14:00,690 ನೀನು ಹುಟ್ಟಿದ ಕ್ಷಣದಿಂದ, 168 00:14:00,890 --> 00:14:03,510 ಈ ಪ್ರಪಂಚವು ನಿನಗೆ ಹತಾಶೆಯ ಬದಲು ಬೇರೇನೂ ಕೊಟ್ಟಿಲ್ಲ. 169 00:14:36,540 --> 00:14:38,370 ಈಗ ಒಳ್ಳೆಯವಳಾಗಿರುವುದನ್ನು ನಿಲ್ಲಿಸೋಣ. 170 00:14:42,380 --> 00:14:43,750 ನಿನಗೆ ಬೇಕಾದ್ದು ಪಡೆದುಕೋ. 171 00:14:54,010 --> 00:14:57,060 ಈ ವ್ಯಕ್ತಿಯನ್ನು ಕಂಡರೆ, ದಯವಿಟ್ಟು 911ಗೆ ಕರೆ ಮಾಡಿ. 172 00:14:57,680 --> 00:14:59,270 ಕ್ಲೈಡ್ ಒಳ್ಳೆಯ ವ್ಯಕ್ತಿಯಾಗಿದ್ರು. 173 00:14:59,770 --> 00:15:03,400 {\an8}ಸೌಲ್ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚಿಗೆ ವರ್ಷಗಳ ಸೇವೆ ನೀಡಿದರು. ವರ್ಷಗಳು. 174 00:15:05,320 --> 00:15:07,050 ಅವರು ಈ ರೀತಿ ಸಾಯಬೇಕಿರಲಿಲ್ಲ. 175 00:15:07,250 --> 00:15:09,530 ಅನುಮಾನಾಸ್ಪದ ಸಾವಿನ ನಂತರ ತಪ್ಪಿಸಿಕೊಂಡಿರುವ ಹದಿಹರೆಯದವಳು 176 00:15:11,620 --> 00:15:13,870 - ಪೊಲೀಸರು... - ಪ್ರಶ್ನೆ ಸಾಕು. 177 00:15:14,280 --> 00:15:18,020 ...17 ವರ್ಷದ ಆ್ಯಲಿಸನ್ ಮಾಂಟ್ಗೊಮೆರಿ ಈ ಕೊಲೆಯ ಪ್ರಮುಖ ಶಂಕಿತೆ, 178 00:15:18,220 --> 00:15:20,570 ಸಾರ್ವಜನಿಕರಿಗೆ ಅವಳ ಬಳಿ ಸುಳಿಯದಿರಲು ಹೇಳಿದ್ದಾರೆ, 179 00:15:20,770 --> 00:15:23,080 ಯಾಕೆಂದರೆ ಅವಳು ತುಂಬಾ, ತುಂಬಾ ಅಪಾಯಕಾರಿ. 180 00:16:27,230 --> 00:16:28,150 ಕ್ಷಮಿಸಿ. 181 00:16:35,530 --> 00:16:36,410 ಮೊಂಕ್ ಅಂಡ್ ಸನ್ಸ್ 182 00:16:37,330 --> 00:16:39,910 - ಇನ್ನೇನು ಮುಚ್ಚುತ್ತಿದ್ದೇವೆ. - ನೀನು ಹೊಸಬನೇ? 183 00:16:40,290 --> 00:16:44,420 ನನ್ನ ಅಪ್ಪನನ್ನು ನೋಡಬೇಕು. ನಾನು ಬರ್ನಿ ಮೊಂಕ್ ಅವರ ಮಗಳು. 184 00:16:49,170 --> 00:16:51,590 - ಜರುಗು. - ನೀನದನ್ನು ಒಳಗೆ ತರಬಾರದು. 185 00:16:59,350 --> 00:17:02,080 - ಓಯ್, ಓಯ್. - ಇನ್ನೊಂದು ನಿಮಿಷದಲ್ಲಿ ಬರ್ತೀನಿ. 186 00:17:02,280 --> 00:17:05,920 - ಅವನು ಯಾವನು ಹೊರಗಡೆ ಇರುವವನು? - ಮೇಲೆ ಬಲಗಡೆಗೆ ಹೋಗಿ. 187 00:17:06,120 --> 00:17:09,760 ಆತ ಅಲ್ಲಿರುತ್ತಾರೆ, ಮೇಡಂ, ಆಯ್ತಾ? ಅದು ಹೇಗಿದೆ? 188 00:17:09,960 --> 00:17:11,890 ಅಮ್ಮನ ಬಗ್ಗೆ ಪೊಲೀಸರು ಏನು ಹೇಳಿದರು? 189 00:17:12,080 --> 00:17:14,860 - ನೀನು ಹೀಗೆ ಬರಲಾಗದು. ಕೆಲಸದಲ್ಲಿದ್ದೇವೆ. - ನಾನು ನೋಡುವೆ. 190 00:17:15,740 --> 00:17:18,730 - ನೀನು ಹೇಗಿರುವೆ? - ನನ್ನ ತಾಯಿಯನ್ನು ಕೊಂದವನನ್ನು ಹುಡುಕಬೇಕು. 191 00:17:18,930 --> 00:17:22,250 - ಅವರ ಮುಖಗಳನ್ನು ನೋಡಿದೆ. ನೆರವಾಗುವೆ. - ಕೇಳು, ರಾಕ್ಸ್. ನನ್ನ ಮಾತು ಕೇಳು. 192 00:17:23,080 --> 00:17:28,210 ನಡೆದದ್ದರ ಬಗ್ಗೆ ನನ್ನನ್ನು ದಯವಿಟ್ಟು ಕ್ಷಮಿಸು. ಈಗ, ಅವಳ ನೆನಪು ಕಾಡುತ್ತೆ. ನಮಗೂ ಅಷ್ಟೇ. 193 00:17:28,500 --> 00:17:32,110 ಆದರೆ ರಿಕ್ಕಿ ಸರಿ ಹೇಳಿದ. ಇದೊಂದು ವ್ಯವಹಾರ. ಕೆಳಗಡೆ ಗ್ರಾಹಕರಿದ್ದಾರೆ. 194 00:17:32,310 --> 00:17:36,130 ನಿನ್ನ ವ್ಯವಹಾರದಿಂದ ಆಕೆಯನ್ನು ಕೊಂದರೇ? ನಿನ್ನ ಹಿಂದೆ ಬಿದ್ದಿದ್ದರೇ? ಸೇಡೇನು? 195 00:17:36,720 --> 00:17:39,290 ಇಲ್ಲ. ಕಳ್ಳತನದಲ್ಲಿ ನಡೆದ ಅನಾಹುತ ಅಂತ ಹೇಳಿದರು. 196 00:17:39,490 --> 00:17:41,720 ಗೂಬೆ ನನ್ನ ಮಕ್ಕಳು ತಪ್ಪಾದ ಮನೆಗೆ ನುಗ್ಗಿದರು. 197 00:17:43,100 --> 00:17:45,890 "ಈ ಹುಡುಗಿ ಇಲ್ಲಿ ಇರಬಾರದಿತ್ತು" ಅಂತ ಹೇಳಿದರು. 198 00:17:46,310 --> 00:17:47,850 ನಾನು ಯಾರೆಂದು ಗೊತ್ತಿರುವ ಹಾಗೆ. 199 00:17:48,480 --> 00:17:52,610 ಅವರು ಸ್ಥಳವನ್ನು ವೀಕ್ಷಿಸುತ್ತಿದ್ದಿರಬಹುದು. ನೀನು ಹೋಗಿ ಬರುವುದನ್ನು ಗಮನಿಸಿರಬಹುದು. 200 00:17:54,610 --> 00:17:58,660 ಹೇಳ್ತೀನಿ ಕೇಳು. ನಾವದನ್ನು ನೋಡಿಕೊಳ್ಳುತ್ತೇವೆ. ಆಯ್ತಾ? ಆಣೆ ಮಾಡ್ತೀನಿ. 201 00:18:00,660 --> 00:18:03,270 ಅವರು ಸಾಯಬೇಕು. ನೀನು ಅವರನ್ನು ಕೊಲ್ಲುವಾಗ ನಾನಲ್ಲಿರಬೇಕು. 202 00:18:03,470 --> 00:18:07,730 ಯಾರೂ ಯಾರನ್ನೂ ಕೊಲ್ಲುವುದಿಲ್ಲ. ನಾನಿದನ್ನು ಪೊಲೀಸರ ಜೊತೆ ನಿಭಾಯಿಸುತ್ತೇನೆ. 203 00:18:07,930 --> 00:18:11,990 - ಇದು ಸರಿಯಾದ ತನಿಖೆ. - ನೀನು ಯಾವಾಗಿನಿಂದ ಪೊಲೀಸರನ್ನು ನಂಬುತ್ತಿರುವೆ? 204 00:18:12,190 --> 00:18:15,670 ನನಗೆ ನೋವಾಗಿಲ್ಲ ಅಂದುಕೊಂಡೆಯಾ? ನಿನ್ನ ತಾಯಿಯನ್ನು ಪ್ರೀತಿಸುತ್ತಿದ್ದೆ. 205 00:18:16,550 --> 00:18:19,370 ಎಲ್ಲವನ್ನೂ ನೋಡಿಕೊಳ್ಳುತ್ತಿರುವೆ, ಆದರೆ ನಾವು ಹುಷಾರಾಗಿರಬೇಕು. 206 00:18:19,570 --> 00:18:20,790 ಎಲ್ಲೆಡೆಯೂ ಪೊಲೀಸರಿದ್ದಾರೆ. 207 00:18:20,990 --> 00:18:23,720 ಮತ್ತು ನೀನು ಮೂರ್ಖತನ ಪ್ರದರ್ಶಿಸುವುದು ಬೇಡ, ಪುಟ್ಟಿ. 208 00:18:25,480 --> 00:18:26,430 ಕೇಳಿಸ್ತಾ ಏನು? 209 00:18:28,650 --> 00:18:30,860 ಆಯ್ತು. ಹೊರಡುವ ಸಮಯ. 210 00:18:33,980 --> 00:18:35,740 ಟೆರ್ರಿ, ರಾಕ್ಸಿಯನ್ನು ಕಳಿಸಿಕೊಡು. 211 00:18:38,150 --> 00:18:39,280 ಅದೇ ನಾನು ಹೇಳಿದ್ದು. 212 00:18:39,820 --> 00:18:45,080 ಗೊತ್ತು. ಅವನು ಬುಧವಾರ ಅಂದ, ಹಾಗಾಗಿ ಅವನ ಕರೆಗಾಗಿ ಕಾದು ಕುಳಿತಿರುವೆ. 213 00:18:45,950 --> 00:18:49,340 ನನಗೆ ಗೊತ್ತಿಲ್ಲ, ಕೇಟ್ಲಿನ್. ಬದಲಾಗುತ್ತಾನೆ ಅಂತ ಯಾಕಂದುಕೊಳ್ಳಬೇಕು? 214 00:18:49,540 --> 00:18:53,800 ಯಾವ ರೀತಿಯ ಅಸಂಬದ್ಧ ಮಕ್ಕಳಾಟವನ್ನು ನಾನು ಈ ಬೇವರ್ಸಿಯ ಮುಂದೆ ತೆಗೆದಿರಿಸಿ ಮುಕ್ತಳಾಗಲಿ? 215 00:18:56,300 --> 00:19:01,340 ಓ, ದೇವರೇ. ಸರಿ, ನೋಡು. ನಾನು ಹೊರಡಬೇಕು. ಆಯ್ತು. 7:30. 216 00:19:03,430 --> 00:19:06,390 - ಇದನ್ನು ಅಡ ಇಡಬೇಕು. - ಪರ್ವಾಗಿಲ್ವೇ. 217 00:19:08,230 --> 00:19:12,150 - ಇದು ಯಾವುದದ್ದಾದರೂ ಭಾಗವೇ? - ಕತ್ತಿನ ಹಾರದಲ್ಲಿ ಇದ್ದದ್ದು. 218 00:19:16,110 --> 00:19:17,820 ಕತ್ತಿನ ಹಾರ, ಅಂತೀಯಾ? 219 00:19:22,320 --> 00:19:25,700 ಸರಿ, ಇದರ ಮೇಲೆ ಸ್ವಲ್ಪ ತರಚಿದೆ. 220 00:19:32,960 --> 00:19:34,500 ನಿನಗೆ $100 ಕೊಡುವೆ. 221 00:19:35,630 --> 00:19:38,760 - ಅದು ನಿಜವಾದ ಮಾಣಿಕ್ಯ. - ನಿನಗೆ $100 ಕೊಡ್ತೀನಿ ಅಂದೆ. 222 00:19:39,130 --> 00:19:40,550 ಆ ಹಾವು ಮೀನುಗಳು ನೆನಪಿವೆಯೇ? 223 00:19:41,630 --> 00:19:44,430 ಮೀನುಗಳು ತಮ್ಮ ಬಾಯಿಯೊಳಗೇ ಈಜುವಂತೆ ಮಾಡಿದವು. 224 00:19:47,180 --> 00:19:50,480 ಇಲ್ಲ, ಇಲ್ಲ, ಇಲ್ಲ. ನನ್ನ ಹಣವನ್ನು ಮಾದಕ ವ್ಯಸನಿಗೆ ನೀಡುವುದಿಲ್ಲ. 225 00:19:50,690 --> 00:19:52,440 - ಅದು ಇದೆ… - ಇಲ್ಲ, ನೀನು ವ್ಯಸನಿಯೇ. 226 00:19:52,940 --> 00:19:56,840 ಕ್ಷಮಿಸಿ. ನನಗೆ ತಲೆ ತಿರುಗುತ್ತೆ. ನಾನೊಬ್ಬ ರಕ್ತದಾನಿ. 227 00:19:57,040 --> 00:20:00,650 - ಈಗೇನು ಮಾಡಿದೆ? - ರಕ್ತ. ಪಿಂಟಿಗೆ 50 ಕೊಡ್ತಾರೆ. 228 00:20:02,860 --> 00:20:06,690 - ಆಮೇಲೆ ಬಿಸ್ಕತ್ತು ತಿನ್ನುವುದನ್ನು ಮರೆತೆ. - ಅಯ್ಯೋ, ದೇವರೇ. ಸರಿ. 229 00:20:06,880 --> 00:20:09,810 - ಸರಿ, ಕೂರು. ಕೂರು. - ಪರವಾಗಿಲ್ಲವೇ? 230 00:20:10,010 --> 00:20:12,750 ಖಂಡಿತ. ಹೋಗಿ ಆ ಕುರ್ಚಿಯಲ್ಲಿ ಕುಳಿತುಕೋ. 231 00:20:17,800 --> 00:20:22,630 - ಕುಡಿಯಲು ನನಗೇನಾದರೂ ಕೊಡುವಿರಾ? - ಖಂಡಿತ. ಅಯ್ಯೋ ಪಾಪ. 232 00:20:29,850 --> 00:20:30,790 ಕ್ರಿಸ್ಮಸ್ ವಿಶೇಷಗಳು! 233 00:20:30,990 --> 00:20:33,060 ನಿನ್ನ ಬಳಿ ಇರುವುದು ಯಾವುದೇ ಬಂದೂಕಿಗಿಂತ ಉತ್ತಮ. 234 00:20:33,900 --> 00:20:36,770 - ನೀನೇ ನೋಡುವೆ. - ತಗೋ, ಪುಟ್ಟಿ. ಸ್ವಲ್ಪ ಜ್ಯೂಸ್ ಕುಡಿ. 235 00:20:42,150 --> 00:20:43,110 ಬಿಸ್ಕೆಟ್ ಬೇಕಾ? 236 00:20:46,620 --> 00:20:47,530 ಅಯ್ಯೋ. 237 00:20:49,410 --> 00:20:51,750 ಇನ್ನೊಂದು ನಿಮಿಷದಲ್ಲಿ ಬರ್ತೀನಿ, ಬಿಲ್ಲಿ. 238 00:20:52,000 --> 00:20:53,210 ಸುಮ್ಮನೆ ನೋಡುತ್ತಿದ್ದೆ. 239 00:21:06,090 --> 00:21:09,470 ಇಂಥ ನಿಜವಾದ ಮಾಣಿಕ್ಯಕ್ಕೆ ಖಂಡಿತ ಹೆಚ್ಚೇ ಬೆಲೆ ಇರುತ್ತೆ... 240 00:21:11,810 --> 00:21:13,600 $150. 241 00:21:15,310 --> 00:21:16,150 ಧನ್ಯವಾದ. 242 00:21:19,770 --> 00:21:21,990 ನಿನ್ನಿಂದ ನಾನು ಹುಚ್ಚಿಯಂತೆ ಕಾಣುತ್ತೇನೆ. 243 00:21:22,530 --> 00:21:24,720 ನೀನು ಹೋಗಬೇಕಾದ ಕಡೆ ಹೋಗಲು ನೆರವಾಗುತ್ತಿದ್ದೇನೆ. 244 00:21:24,920 --> 00:21:27,990 - ಮತ್ತು ಅದು ಎಲ್ಲಿದೆ? - ನೀನದನ್ನು ನೋಡಿದಾಗ ನಿನಗೇ ಗೊತ್ತಾಗುತ್ತೆ. 245 00:21:28,280 --> 00:21:29,580 ಆಯ್ತು, ಸರಿ. 246 00:21:59,480 --> 00:22:00,520 ಹೇಳು ನನಗೆ. 247 00:22:01,440 --> 00:22:06,390 ನ್ದುಡಿಗೆ ಏನು ತೊಂದರೆ ಆಗಿದೆ? ಜನ ಅವಳನ್ನು ಮಾಟಗಾತಿ ಎನ್ನುತ್ತಿದ್ದಾರೆ. 248 00:22:06,590 --> 00:22:09,240 - ಮಾಟಗಾತಿ ಅಲ್ಲ ಅಂತ ನಿಂಗೊತ್ತು. - ಅವಳ ತಂದೆಗೆ ಹೇಳು. 249 00:22:16,210 --> 00:22:19,040 ನೀನು ಇತ್ತೀಚಿಗೆ ನನಗೆ ಅರ್ಥವಾಗೋದೇ ಇಲ್ಲ. 250 00:22:21,670 --> 00:22:25,370 ಜುಜು ಅಪಾಯಕಾರಿ ಅಂತ ನಿಂಗೊತ್ತು. ಇವುಗಳೊಂದಿಗೆ ಏಕೆ ಆಡುತ್ತಿರುವೆ? 251 00:22:25,560 --> 00:22:26,760 ನಾನು ಯೋಚಿಸುತ್ತಿರಲಿಲ್ಲ. 252 00:22:28,380 --> 00:22:30,470 ನಾನೊಂದು ಕಥೆಯನ್ನು ಅರಸುತ್ತಿದ್ದೆ. 253 00:22:32,390 --> 00:22:34,890 - ಕ್ಷಮಿಸು. - ನೀನು ಇದನ್ನು ಸರಿಪಡಿಸಬೇಕು. 254 00:22:35,810 --> 00:22:38,380 ನಿನ್ನ ಸಹೋದರಿಯೊಂದಿಗೆ ಇದರ ಬಗ್ಗೆ ಮಾತನಾಡಬೇಡ. 255 00:22:38,580 --> 00:22:40,770 ಅವಳಿಗೆ ಯಾವುದೇ ದುರಾಲೋಚನೆ ಬರುವುದು ಬೇಡ. 256 00:22:41,190 --> 00:22:42,400 ನಾನು ಹೇಳಿದ್ದು ಕೇಳಿಸ್ತಾ? 257 00:22:49,740 --> 00:22:50,620 ಪರವಾಗಿಲ್ಲ. 258 00:23:13,220 --> 00:23:15,010 ಅಪ್ಲೋಡ್ ಮಾಡಲು ವಿಡಿಯೋಗಳನ್ನು ಎಳೆದು ಬಿಡಿ ವಿದ್ಯುತ್ ಹುಡುಗಿಯರು???? 259 00:23:21,650 --> 00:23:24,360 {\an8}ದಯವಿಟ್ಟು ನೆರವಾಗಿ!! ಇದು ಏನಂತ ಯಾರಿಗಾದರೂ ಗೊತ್ತಾ? 260 00:23:38,500 --> 00:23:43,500 ನಮ್ಮ ಒಬ್ಬ ಸಹಾಯಕರಿಗೆ ಸಿಕ್ಕಿತು. ಯಾರೋ ಹುಡುಗ ನೈಜೀರಿಯಾದಲ್ಲಿ ಪ್ರಕಟಿಸಿದ್ದು. 261 00:23:44,000 --> 00:23:47,420 ತುಂಡೆ ಓಜೋ. 12 ಹಿಂಬಾಲಕರಿರುವ ವ್ಲಾಗರ್. 262 00:23:48,340 --> 00:23:51,550 ಸ್ನ್ಯಾಪ್ಚಾಟ್ ಇರುವ ಯಾರಾದರೂ ಇದನ್ನು ಮಾಡಬಲ್ಲರು, ಅಲ್ವಾ? 263 00:23:52,260 --> 00:23:56,220 - ಒಂಥರಾ, ಫಿಲ್ಟರ್ ಏನಾದರೂ ಇರಬಹುದೇ? - ದೇವರೇ, ಎಷ್ಟು ನೈಜವಾಗಿದೆ. 264 00:23:56,510 --> 00:23:58,250 ಮತ್ತು ನೀವು ಕಾಮೆಂಟುಗಳನ್ನು ನೋಡಬೇಕು. 265 00:23:58,450 --> 00:24:01,800 ಅದು ತಮಗಾಗುತ್ತಿದೆ ಎಂದು ಎಷ್ಟೋ ಮಕ್ಕಳು ಬರೆದುಕೊಂಡಿದ್ದಾರೆ. 266 00:24:01,990 --> 00:24:06,230 ಅಥವಾ ಹಿಂದೆ ನೋಡಿದ್ದೇವೆಂದು. ಅವರ ಕೈಗಳಿಂದ ವಿದ್ಯುತ್ ಹೊರಬರುವುದು. 267 00:24:07,940 --> 00:24:10,400 - ಎಲ್ಲಾ ಹದಿಹರೆಯದ ಹುಡುಗಿಯರೇ? - ನಾನು ನೋಡಿದಂತೆ, ಹೌದು. 268 00:24:12,660 --> 00:24:16,020 - ಗವರ್ನರ್ ಡ್ಯಾಂಡನ್ ಏನಾದರೂ ಹೇಳಿದ್ರಾ? - ದಿನವೆಲ್ಲಾ ಸಭೆಗಳಲ್ಲಿದ್ದಾರೆ. 269 00:24:16,220 --> 00:24:19,940 ಕರ್ಮವೇ. ಸೆನೇಟ್ ಪ್ರಚಾರ ನಡೆಯುತ್ತಿದೆ. ನಿಧಿ ಸಂಗ್ರಹದಲ್ಲಿದ್ದಾರೆ. 270 00:24:20,140 --> 00:24:24,540 ಇಂದು ರಾತ್ರಿ ತಮ್ಮ ಬಂಗಲೆಯಲ್ಲಿ ದಾನಿಗಳಿಗೆ ಔತಣ ಇದೆ ಅಂತ ಅವರ ಸಹಾಯಕರು ಹೇಳಿದರು. 271 00:24:25,750 --> 00:24:27,130 ಥೂ. 272 00:24:27,800 --> 00:24:32,380 ನಾನು ನನ್ನ ಹಾಳಾದ ವಿವಾಹೋತ್ಸವದಂದು ಹಾಳಾದ ಒಲಿಂಪಿಯಾಗೆ ಹೋಗಬೇಕಾಗಿದೆ. 273 00:24:34,180 --> 00:24:36,540 ರಾಬ್'ಗೆ ಕರೆ ಮಾಡಿ ನನಗೆ ತಡವಾಗುತ್ತೆ ಅಂತ ಹೇಳುವೆಯಾ? 274 00:24:36,740 --> 00:24:41,790 - ಖಂಡಿತ. ನನಗೊಂದು ಉಪಕಾರ ಮಾಡಿ? - ಸರಿ, ಮೇರಿ ಪಾಪಿನ್ಸ್. ಏನಿವು? 275 00:24:41,990 --> 00:24:46,150 ಡ್ಯಾಂಡನ್'ರ ಜೊತೆ ಮಾಧ್ಯಮದವರು ಇದ್ದರೆ. ಆ ಚಪ್ಪಲಿ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಬಂದಿತ್ತು. 276 00:24:46,520 --> 00:24:49,220 - ತುಂಬಾ ಬೆಲೆಬಾಳುವಂಥದ್ದು. - ಈ ಚಪ್ಪಲಿಗಳೇ? 277 00:24:49,420 --> 00:24:54,060 ಇವಕ್ಕೆ $800 ಕೊಟ್ಟೆನಲ್ಲ? "ಮಹತ್ವಾಕಾಂಕ್ಷೆ ಉಳ್ಳವಳಾಗಿ ನಾನು ಕಾಣಬೇಕು" ಅಂತ ನೀನಂದಿದ್ದಕ್ಕೆ. 278 00:24:54,260 --> 00:24:56,870 ಕ್ಷಮಿಸಿ. ಪ್ರಚಲಿತ ಶೈಲಿಗಳು ತುಂಬಾ ಬದಲಾಗುತ್ತಿರುತ್ತವೆ. 279 00:24:59,410 --> 00:25:00,580 ಇವೇನೂ ಕೆಟ್ಟದಾಗಿಲ್ಲ. 280 00:25:03,620 --> 00:25:04,710 ಸರಿ. 281 00:25:06,460 --> 00:25:08,920 - ನೋಯುತ್ತವೆ. - ಕಾಸಿಗೆ ತಕ್ಕಂತೆ ಕಜ್ಜಾಯ, ಎನ್ನುವೆ. 282 00:25:09,120 --> 00:25:12,530 ಗೊತ್ತಾ, ಗವರ್ನರ್ ಡ್ಯಾಂಡನ್ $1000 ಬೆಲೆಯ ಫೆರ್ರಗಮೋಸ್ ತೊಡುತ್ತಾರೆ. 283 00:25:12,730 --> 00:25:17,220 ಯಾರೂ ಏನೂ ಹೇಳಲ್ಲ. ನನ್ನ ಚಪ್ಪಲಿಯ ಚಿಂತೆಯಿದ್ದವರು ತಮ್ಮ ಕೆಲಸವನ್ನು ನೋಡಿಕೊಳ್ಳಲಿ. 284 00:25:22,850 --> 00:25:25,480 ವಿಶ್ವ ನಾಗರಿಕತೆಯ ಪರೀಕ್ಷೆ ಹೇಗಾಯಿತು? ಹೇಗೆ ಮಾಡಿದೆ? 285 00:25:26,600 --> 00:25:29,570 - ಪರವಾಗಿಲ್ಲ. - ಪರವಾಗಿಲ್ವಾ? ಬರೀ ಪರವಾಗಿಲ್ವಾ? 286 00:25:30,110 --> 00:25:32,150 - ಹಾಂ. - ಸರಿ. 287 00:25:36,160 --> 00:25:38,030 ಅರ್ಥ ಆಯ್ತಲ್ಲ, ಜೋಸ್? 288 00:25:39,280 --> 00:25:40,740 ಅರ್ಥ ಆಯ್ತಲ್ಲ, ಜೋಸ್? 289 00:25:41,700 --> 00:25:43,120 ಅರ್ಥ ಆಯ್ತಲ್ಲ, ಜೋಸ್? 290 00:25:46,580 --> 00:25:48,880 ನಾನು ಎಷ್ಟು ಒಳ್ಳೆಯವನು ಎಂಬ ಮೋಜಿನ ಪರಿಚಯ ಇಲ್ಲಿದೆ 291 00:25:49,080 --> 00:25:51,610 ನಿಮ್ಮಮ್ಮನಿಗೆ ಹೇಳು, ಅಪ್ಪನಿಗೆ ಹೇಳು ಟೆಲಿಗ್ರಾಂ ಕಳಿಸು 292 00:25:51,810 --> 00:25:54,200 ನಾನು ಎನರ್ಜೈಸರ್ ಇದ್ದಂತೆ ನೋಡಿ, ಹೆಚ್ಚು ಕಾಲ ಬಾಳುವೆ 293 00:25:54,400 --> 00:25:57,200 ನನ್ನ ತಂಡ ಎಂದಿಗೂ ಸೋಲಲ್ಲ ಯಾಕೆಂದರೆ ನಾವು ಒಟ್ಟಿಗೆ ನಿಲ್ಲುವೆವು 294 00:25:57,400 --> 00:25:59,010 ಹಾಂ, ಹಾಂ. 295 00:26:04,640 --> 00:26:08,900 ಓ, ದೇವರೇ. ನಾನು ನಿನ್ನ ವಯಸ್ಸಿನವನಾಗಿದ್ದಾಗ ಇಂಥ ಸಂಗೀತವನ್ನು ಕೇಳುತ್ತಿದ್ದೆ. 296 00:26:09,520 --> 00:26:12,900 ಆಗ ನನಗೆ ತುಂಬಾ ಚೆನ್ನಾಗಿತ್ತು. ಓ, ದೇವರೇ. 297 00:26:13,230 --> 00:26:16,780 ನೀನೂ ಯಾವಾಗಲಾದರೂ ಕೇಳಬೇಕು. ನಿನಗೆ ಇಷ್ಟವಾಗಬಹುದು. 298 00:26:17,150 --> 00:26:20,600 ಅವರ ಸಂಗೀತದಲ್ಲಿ ಮಜಾ ಒಂದೇ ಅಲ್ಲದೆ ಸಾಮಾಜಿಕ ಕಳಕಳಿಯೂ ಇತ್ತು. 299 00:26:20,800 --> 00:26:23,240 "ಅರಿವು" ಬರುವ ಮುನ್ನವೇ ಅರಿವು ಮೂಡಿಸಿದವರು. 300 00:26:23,540 --> 00:26:27,770 ಮತ್ತು ಮಾದರಿಗಳು. ಅಬ್ಬಾ, ದೇವರೇ. ಎಲ್ಲವೂ ಇತ್ತು. ವಿಶ್ವ ಸಂಗೀತವನ್ನು ಬಳಸಿದ್ದರು. 301 00:26:27,970 --> 00:26:31,630 ಜಾಜ್. ಅಂದರೆ, ಈಗ ಎಲ್ಲರೂ ಮಾದರಿ ಪಡೆಯುತ್ತಾರೆ ಅಂತ ಗೊತ್ತು, ಆದರೆ ಆಗ… 302 00:26:33,800 --> 00:26:37,220 ಸರಿ, ಗೊತ್ತಾಯ್ತು. ನಾನೊಬ್ಬ ದಡ್ಡ ಅಪ್ಪ. ಬಾಯಿ ಮುಚ್ಚಿಕೊಂಡು ಗಾಡಿ ಓಡಿಸುವೆ. 303 00:26:40,550 --> 00:26:41,600 ಅಯ್ಯೋ. 304 00:26:43,390 --> 00:26:44,430 ಏನಿದು ದರಿದ್ರ? 305 00:26:47,270 --> 00:26:50,650 - ಅಯ್ಯೋ, ಪುಟ್ಟಿ. ಆರಾಮವಾಗಿದ್ದೀಯಾ? - ಆರಾಮವಾಗಿದ್ದೇನೆ. 306 00:26:51,060 --> 00:26:52,230 ಅದೇನದು? 307 00:26:53,440 --> 00:26:56,820 ಗೊತ್ತಿಲ್ಲ. ಸ್ಥಿರ ವಿದ್ಯುತ್ ಆಘಾತ ಆಗಿರಬಹುದು. 308 00:26:59,320 --> 00:27:02,530 ಜೋಸ್, ಮೈಕ್ರೋವೇವ್ ಜೊತೆಯೂ ಇದೇ ನಡೆಯಿತಾ? 309 00:27:05,370 --> 00:27:06,750 - ಜೋಸ್? - ಇಲ್ಲ. 310 00:27:07,250 --> 00:27:08,440 - ನನಗೆ ಹೇಳು. - ಇಲ್ಲ. 311 00:27:08,640 --> 00:27:12,670 ದೇವರೇ. ನಿನ್ನ ದಡ್ಡ ಸಂಗೀತದಂತೆ ನಿನ್ನ ಸ್ಟಿರಿಯೋ ಕೂಡ ಹಳೆಯದಾಗಿರಬಹುದು. 312 00:27:13,290 --> 00:27:14,340 ಜೋಸ್. 313 00:27:50,160 --> 00:27:54,710 ರೈಬಿನಾ, ಸಸ್ಸಾಟೀನಾ. ದೊಡ್ಡ ಹುಡುಗರು, ಸುಂದರ ಹುಡುಗಿಯರು. 314 00:27:54,960 --> 00:27:59,260 ದೊಡ್ಡ ಹುಡುಗರು, ಸುಂದರ ಹುಡುಗಿಯರು. ರೈಬಿನಾ, ಸಸ್ಸಾಟೀನಾ. 315 00:28:14,190 --> 00:28:15,150 ಆರಾಮ ಇದ್ದೀಯಾ? 316 00:28:17,020 --> 00:28:19,150 - ಏನು ತೊಂದರೆ? - ಶುರುವಾಗುತ್ತಿಲ್ಲ. 317 00:28:19,570 --> 00:28:21,570 - ನಾನು ನೋಡಲೇ? - ಒಬ್ಬರು ಬರುತ್ತಿದ್ದಾರೆ. 318 00:28:23,070 --> 00:28:27,280 ನಿನ್ನನ್ನು ಕಡೆಗಣಿಸುತ್ತಿರುವ ಇನ್ನೊಬ್ಬ ಗಂಡಸು ಅಷ್ಟೇ. ಬೇರೇನೂ ವಿಶೇಷವಿಲ್ಲ. 319 00:28:27,870 --> 00:28:29,810 - ಎಲ್ಲಿಗೆ ಹೊರಟಿದ್ದೀರಿ? - ಆಹಾರದ ಬ್ಯಾಂಕು. 320 00:28:30,010 --> 00:28:32,040 ಸುಮ್ಮನಿರಿ, ಎಲ್ಲರಿಗೂ ನಮ್ಮ ವಿಷಯ ಹೇಳುವುದು. 321 00:28:32,240 --> 00:28:35,110 ನಾನು ಕಾರುಗಳ ಸುತ್ತಲೇ ಬೆಳೆದೆ. ನನ್ನ ತಂದೆ ಒಬ್ಬ ಮೆಕ್ಯಾನಿಕ್. 322 00:28:35,310 --> 00:28:37,460 ನಿನ್ನ ಜೇಬಿನೊಳಗೆ ಜಂಪರ್ ತಂತಿಗಳು ಇವೆಯೇ? 323 00:28:37,750 --> 00:28:38,750 ಹಾಂ, ಇರಬಹುದು. 324 00:28:40,970 --> 00:28:45,220 - ಎಲ್ಲಿಂದ ಬಂದೆ, ಒಬ್ಬಳೇ? - ಬಸ್ ತಪ್ಪಿತು. 325 00:28:47,350 --> 00:28:49,420 ನನಗೆ ಸಹಾಯವಾಗಲು ನೀನು ಏನು ಮಾಡಬೇಕು ಗೊತ್ತಾ? 326 00:28:49,620 --> 00:28:52,690 ನಾನು ಶುರು ಮಾಡಿದರೆ ಆ ಎಕ್ಸಲೆರೇಟರ್ ತಂತಿ ಕದಲುತ್ತಾ ಹೇಳು. 327 00:29:00,730 --> 00:29:01,690 ತಯಾರಾ? 328 00:29:05,910 --> 00:29:07,910 - ಏನೂ ಇಲ್ವಾ? - ಮತ್ತೆ ಪ್ರಯತ್ನಿಸಿ. 329 00:29:12,710 --> 00:29:13,580 ಮತ್ತೊಮ್ಮೆ. 330 00:29:14,790 --> 00:29:16,610 - ಈಕೆ ಮಾಂತ್ರಿಕಳೇನು? - ಅವಳು ಮಾಟಗಾತಿ. 331 00:29:16,810 --> 00:29:17,990 - ಏನಾದರೂ ಬಂತಾ? - ಮತ್ತೆ. 332 00:29:18,190 --> 00:29:20,970 - ಹುಡುಗಿಯರು ಮಾಂತ್ರಿಕರಾಗಲ್ಲ. - ಹುಡುಗಿಯರು ಏನಾದರೂ ಆಗಬಲ್ಲರು. 333 00:29:21,170 --> 00:29:22,210 ಇನ್ನೊಂದು ಸಲ. 334 00:29:34,310 --> 00:29:35,480 ಏನು ಮಾಡಿದೆ ನೀನು? 335 00:29:38,650 --> 00:29:40,630 - ಇಲ್ಲ, ಆರಾಮವಾಗು. ಉಸಿರಾಡು. - ಸುಟ್ಟಳು. 336 00:29:40,830 --> 00:29:41,970 - ಅಪ್ಪ. - ಏನಾಗುತ್ತಿದೆ? 337 00:29:42,170 --> 00:29:44,390 - ನನಗೆ ನೋವು ಮಾಡಿದಳು. - ನನ್ನ ಮಕ್ಕಳಿಂದ ದೂರವಿರು. 338 00:29:44,590 --> 00:29:48,180 - ಬಿಸಿ ಎಂಜಿನ್ ಮೇಲೆ ಕೈ ಇಟ್ಟಳು. - ನನ್ನ ಮಕ್ಕಳಿಂದ ದೂರ ಹೋಗು. 339 00:29:48,380 --> 00:29:50,830 - ನನ್ನನ್ನು ಮುಟ್ಟಬೇಡಿ. - ಅಪ್ಪ. ಅಪ್ಪ. 340 00:29:51,160 --> 00:29:52,100 ಛೆ. 341 00:29:52,300 --> 00:29:55,920 - ಕಾರು ಹತ್ತೋಣ. - ಅಪ್ಪ. ಅಪ್ಪ. 342 00:29:56,460 --> 00:29:57,230 ಆರಾಮ ಇದ್ದೀಯಾ? 343 00:29:57,430 --> 00:30:00,380 - ಅಪ್ಪ. ಅಪ್ಪ. - ಆಯ್ತು, ಮಕ್ಕಳೇ. ಏನೂ ಪರವಾಗಿಲ್ಲ. 344 00:30:05,800 --> 00:30:08,390 ನನ್ನ ಮಾತನ್ನು ನೀನು ಕೇಳದಿದ್ದರೆ ಹೀಗೆಯೇ ಆಗುತ್ತೆ. 345 00:30:17,440 --> 00:30:18,270 ಏಯ್. 346 00:30:32,120 --> 00:30:37,080 ದರಿದ್ರ. ಏನು ಮಾಡಿದೆ ನೀನು? ಸರಿಯಾಗಿ ಸೈಕಲ್ ತುಳಿಯಲು ಬರುವುದಿಲ್ಲವೇ? 347 00:30:37,370 --> 00:30:41,500 ದಡ್ಡ ಹುಡುಗಿ. ಏನಿದು ದರಿದ್ರ? 348 00:31:16,700 --> 00:31:20,290 - ನಿನ್ನನ್ನೇ ನೋಡುತ್ತಿರುತ್ತಾನೆ. - ಯಾಕಂದ್ರೆ ನೀನವನನ್ನೇ ನೋಡುತ್ತಿರುತ್ತೀಯಾ. 349 00:31:22,590 --> 00:31:25,250 - ಅಲ್ಲಿಗೆ ಹೋಗು. - ಖಂಡಿತ ಇಲ್ಲ. 350 00:31:25,670 --> 00:31:27,320 ಯಾಕೆ? ನಿನಗೇನು ಭಯ? 351 00:31:27,520 --> 00:31:30,550 ಅವನು ಬ್ರೀ ಡಿಯಾಜ್ ಜೊತೆ ಇದ್ದವನು. ನನಗೆ ಅವಳಷ್ಟು ವಯ್ಯಾರ ಇಲ್ಲ. 352 00:31:31,930 --> 00:31:35,540 ಜೋಸ್, ನೋಡು. ಇದು ಡಿಸ್ನೀ ಆನ್ ಐಸ್ ಅಲ್ಲ. ಸುಮ್ಮನೆ ಹೋಗಿ… 353 00:31:35,740 --> 00:31:37,680 ಸುಮ್ಮನಿರು. ದೇವರೇ. 354 00:31:41,400 --> 00:31:44,900 ಒಂದು ವಾರದ ಹಿಂದೆ, ನನ್ನ ಜೀವನ ಹತ್ತರಲ್ಲಿ ನಾಲ್ಕಂತೆ ಇತ್ತು. 355 00:31:47,440 --> 00:31:50,610 - ಈಗ ಏಳಂತಿದೆ. - ಏಳು? 356 00:31:51,700 --> 00:31:53,820 ನಾವು ವಿದ್ಯುದಾಘಾತ ಕೊಡಬಲ್ಲೆವು. 357 00:31:55,530 --> 00:32:00,750 ಏನನ್ನು ಬೇಕಾದರೂ ಸಿಡಿಸಬಲ್ಲೆವು. ಏನು, ಏಳಾ? ಇಲ್ಲ. ಹತ್ತು ಅನ್ನು. 358 00:32:02,000 --> 00:32:03,790 ಸರಿಯಾದ ಹತ್ತು ಕಣೆ. 359 00:32:29,780 --> 00:32:31,490 - ಮಾರ್ಗೋ. - ಡೇನಿಯಲ್. 360 00:32:31,860 --> 00:32:34,660 - ತಡವಾಗಿದೆ. - ನನ್ನ ಕಚೇರಿಯಿಂದ ಕರೆ ಮಾಡಿದೆ. ತುಂಬಾನೇ. 361 00:32:42,960 --> 00:32:45,230 - ಧನ್ಯವಾದ. - ಇದನ್ನು ಸ್ಟಡಿಗೆ ಒಯ್ಯೋಣ. 362 00:32:45,430 --> 00:32:46,210 ಖಂಡಿತ. 363 00:32:47,130 --> 00:32:50,800 ಎಲ್ಲರೂ, ಈಕೆ ಮೇಯರ್ ಮಾರ್ಗೋ ಕ್ಲೆಯರಿ-ಲೋಪೆಜ್. 364 00:32:51,170 --> 00:32:54,870 - ಅಡಚಣೆಗಾಗಿ ಕ್ಷಮಿಸಿ. - ನಿಮ್ಮನ್ನು ಬಿಟ್ಟು ಆಕೆಯ ಸೇರಿಸಿಕೊಳ್ಳಬೇಕೇ? 365 00:32:55,070 --> 00:32:56,970 ಐದು ನಿಮಿಷದ ವಿರಾಮ. ಈಗ ಬಂದೆ. 366 00:33:01,480 --> 00:33:05,340 ಅಲ್ಲಿ ಅನಾಹುತವೇ ನಡೆಯುತ್ತಿದ್ದರೆ ನೀವಿಲ್ಲಿ ಪೋಕರ್ ಆಡಿಕೊಂಡಿರೋದು ನಂಬೋಕಾಗುತ್ತಿಲ್ಲ. 367 00:33:05,540 --> 00:33:06,340 ಹೌದು. 368 00:33:06,540 --> 00:33:11,320 ನಿಮ್ಮ ವಸತಿ ಮತ್ತು ಸಾಕ್ಷರತಾ ಕಾರ್ಯಕ್ರಮಗಳಿಗೆ ಹಣ ಸುರಿಯುವವರೊಂದಿಗೆ. 369 00:33:11,820 --> 00:33:12,900 ಅದು ರಾಜಕೀಯ. 370 00:33:13,570 --> 00:33:16,870 ಜೀವನಗಳನ್ನೇ ಬದಲಾಯಿಸುವ ಒಪ್ಪಂದಗಳು ಪೋಕರ್ ಮೇಜುಗಳ ಮೇಲೆ ನಡೆಯುತ್ತವೆ. 371 00:33:17,830 --> 00:33:20,040 - ಗಟ್ಟಿ ಕಂಬೂಚ? - ಹಾಂ, ಖಂಡಿತ. ಧನ್ಯವಾದ. 372 00:33:25,830 --> 00:33:26,670 ಧನ್ಯವಾದ. 373 00:33:37,390 --> 00:33:41,500 ಮತ್ತೆ, ನಿಮ್ಮ ಸಂದೇಶಗಳು ಸಿಕ್ಕವು, ಮತ್ತು ನಿಮಗೆ ಬೆಳಗ್ಗೆಯೇ ಕರೆ ಮಾಡಲಿದ್ದೆ. 374 00:33:41,700 --> 00:33:44,960 - ನನ್ನಿಂದ ಏನಾಗಬೇಕು? - ಮೊದಲು, ನೀವು ಕರೆಗಳನ್ನು ಉತ್ತರಿಸಬೇಕು. 375 00:33:45,160 --> 00:33:48,420 - ನಾವೊಂದು ಸಂಕಷ್ಟದಲ್ಲಿದ್ದೇವೆ. - ಆರಿಸಲು ಬಹಳಷ್ಟು ಬೆಂಕಿ ಇವೆ. 376 00:33:48,620 --> 00:33:51,180 ಕೆಲವು ನಿಜವಾಗಿಯೂ ಆದರೆ "ಸಂಕಷ್ಟ" ಅನ್ನುವುದು ದೊಡ್ಡ ಪದವೇ. 377 00:33:51,370 --> 00:33:54,610 ದಯವಿಟ್ಟು "ಡ್ಯಾಡಿ ಡ್ಯಾಂಡನ್ ಎಲ್ಲವನ್ನೂ ನೋಡಿಕೊಳ್ಳುತ್ತಾನೆ" ಎನ್ನಬೇಡಿ. 378 00:33:55,030 --> 00:33:57,720 ಪ್ರಚಾರದ ಜೊತೆಗೆ ದೃಷ್ಟಿಯನ್ನೂ ನಿಭಾಯಿಸಬೇಕು ಅಂತಿದ್ದೀರಿ… 379 00:33:57,920 --> 00:33:59,270 ಇದು ನನ್ನ ಪ್ರಚಾರದ ಬಗ್ಗೆ ಅಲ್ಲ. 380 00:33:59,470 --> 00:34:01,980 ಇದು ನೀವು ಮಧ್ಯರಾತ್ರಿ ನನ್ನ ಮನೆಗೆ ಬಂದು, 381 00:34:02,180 --> 00:34:04,330 "ಆಕಾಶವೇ ಬೀಳುತ್ತಿದೆ" ಅನ್ನೋದು. ಏನು ಗೊತ್ತಾ? 382 00:34:04,870 --> 00:34:07,920 ಆಕಾಶ ಯಾವಾಗಲೂ ಬೀಳುತ್ತಿರುತ್ತದೆ. ಯಾಕೆಂದರೆ ಆಳುವುದು ಅಂದರೆ ಅದೇ. 383 00:34:08,830 --> 00:34:11,090 ನೀವು ಅದನ್ನು ಸರಿಯಾಗಿ ನಿಭಾಯಿಸಲು ಏನು ಮಾಡಬೇಕು? 384 00:34:11,460 --> 00:34:14,260 ನನ್ನ ಇಎಂಎಸ್ ಸೇವೆಗಳು ಮುಗಿದಿವೆ. ತುರ್ತು ಧನ ಸಹಾಯ ಬೇಕು. 385 00:34:15,010 --> 00:34:16,220 ಬೇರೆ ಏನಾದರೂ ಇದೆಯೇ? 386 00:34:18,510 --> 00:34:19,640 ಸರಿ. 387 00:34:21,850 --> 00:34:25,540 ನಿಮಗೊಂದು ತೋರಿಸಬೇಕು, ಆದರೆ ಅದು ವಿಚಿತ್ರವಾಗಿ ಕಾಣುತ್ತದೆ, ಆಯ್ತಾ? 388 00:34:25,740 --> 00:34:27,940 ಆದರೆ ಸುಮ್ಮನೆ ನೋಡಿ. ಸುಮ್ಮನೆ ವೀಕ್ಷಿಸಿ. 389 00:34:35,740 --> 00:34:40,740 ನನ್ನ ಪ್ರಕಾರ ನಡೆಯುತ್ತಿರುವುದೆಲ್ಲವೂ, ಇದೇನೇ ಆಗಿದ್ದರೂ ಇದಕ್ಕೆ ಸಂಬಂಧಿಸಿರಬಹುದು. 390 00:34:42,030 --> 00:34:44,040 - ಮಾರ್ಗೋ... - ನಂಗೊತ್ತು, ನಂಗೊತ್ತು. 391 00:34:47,790 --> 00:34:49,340 ಅದು ಯೂಸರ್ನಲ್ಲಿ ಬಂದ ದೃಶ್ಯ. 392 00:34:49,540 --> 00:34:52,570 ಹೌದು. ಎಲ್ಲಾ ವರದಿಗಳೊಂದಿಗೆ ಇದೊಂದಕ್ಕೆ ಅರ್ಥ ಇರುವಂತೆ ಇದೆ. 393 00:34:52,770 --> 00:34:56,050 - ನೀವು ಒತ್ತಡದಲ್ಲಿದ್ದೀರಿ. - ಒತ್ತಡದಲ್ಲಿರುವೆ. ನನ್ನ ನಗರ ಉರಿಯುತ್ತಿದೆ. 394 00:34:56,260 --> 00:34:59,260 - ನಿಮ್ಮ ವಿವಾಹೋತ್ಸವ ಅಲ್ಲವೇ? - ಹೌದು. 395 00:34:59,890 --> 00:35:01,870 - ಎಷ್ಟು ಕಾಲವಾಯಿತು? - ಇಪ್ಪತ್ತು ವರ್ಷಗಳು. 396 00:35:02,070 --> 00:35:06,600 ಮೆಚ್ಚುವಂಥದ್ದೇ. ಇಂತಹ ಸಮತೋಲನ ರಾಜಕೀಯದಲ್ಲಿ ಸಿಗುವುದು ಕಷ್ಟ. 397 00:35:07,600 --> 00:35:10,090 ಇದನ್ನು ನನ್ನ ತಂಡ ಪರಿಶೀಲಿಸುತ್ತದೆ, ಸದ್ದಿಲ್ಲದೆ. 398 00:35:10,290 --> 00:35:13,400 ಮತ್ತು ಅದು ನಡೆಯುವಾಗ, ನೀವು ತಾಳ್ಮೆಯಿಂದ ಸದ್ದಿಲ್ಲದೆ ಕಾಯುವಿರಿ. 399 00:35:14,360 --> 00:35:17,450 ಅದೇ ಸಮಯದಲ್ಲಿ, ನಿಮಗೆ ಬೇಕಾದ ಧನ ಸಹಾಯವನ್ನು ಹೊಂದಿಸುವೆ. 400 00:35:17,650 --> 00:35:18,450 ಧನ್ಯವಾದ. 401 00:35:19,030 --> 00:35:24,660 ಆದರೆ, ಮಾರ್ಗೋ, ನಾನಿದನ್ನು ನಿಮ್ಮ ಮತ್ತು ನಿಮ್ಮ ವೃತ್ತಿಯ ಮೇಲಿನ ಕಾಳಜಿಯಿಂದ ಹೇಳುತ್ತಿರುವೆ. 402 00:35:25,540 --> 00:35:28,210 ಸಮಾಧಾನವಾಗಿರಿ. ಮನೆಗೆ ಹೋಗಿ. ಪತಿಯೊಂದಿಗೆ ಸಮಯ ಕಳೆಯಿರಿ. 403 00:35:30,870 --> 00:35:32,290 ಆಯ್ತು. ಸರಿ ಹೇಳಿದಿರಿ. 404 00:35:35,420 --> 00:35:38,300 - ಧನ್ಯವಾದ. - ಹೇ. ಪರವಾಗಿಲ್ಲ. 405 00:35:38,500 --> 00:35:42,390 ನಾನು ಮಾಡುವವರೆಗೂ ನೀವು ಮಾಡಿದರೆ, ನಿಮ್ಮ ಸೆರಗನ್ನು ನೆನೆಸಬೇಕಾಗಿಲ್ಲ. 406 00:35:43,720 --> 00:35:47,390 - ಏನನ್ನು ಮಾಡುವುದು? - ನಾನು ಹೇಳುವುದು ನಿಮಗೆ ಗೊತ್ತಿದೆ. 407 00:35:49,350 --> 00:35:53,230 ಹಾಂ. ಹಾಂ. ನೀವು ಹೇಳುವುದು ನನಗೆ ಸರಿಯಾಗಿ ಗೊತ್ತಿದೆ. 408 00:36:00,280 --> 00:36:01,240 ಛೆ. 409 00:36:06,700 --> 00:36:08,950 ಥಾಯ್ ಆಹಾರದಲ್ಲಿ ಮಿಕ್ಕಿರೋದು ಇಷ್ಟೇ. 410 00:36:10,540 --> 00:36:12,690 ತಡವಾಗಿ ತಿಳಿಸಿದೆ. ನನ್ನನ್ನು ಕ್ಷಮಿಸು. 411 00:36:12,890 --> 00:36:15,740 ನಮ್ಮ ಫ್ರೆಂಚ್ ತಾಣದಲ್ಲಿ ಜಾಗ ಕಾಯ್ದಿರಿಸಿದ್ದೆ. ಮಾಡಿದ್ದೆ. 412 00:36:15,940 --> 00:36:20,370 ನನಗೆ ಹಸಿವಾಗಿದೆ, ಮತ್ತು ಇದು ನಿಜಕ್ಕೂ ಚೆನ್ನಾಗಿದೆ. ತುಂಬಾ ಧನ್ಯವಾದ. 413 00:36:20,570 --> 00:36:23,430 ನನ್ನನ್ನು ಕ್ಷಮಿಸು. 414 00:36:24,340 --> 00:36:28,350 - ಅದರ ಬಗ್ಗೆ ಚಿಂತಿಸಬೇಡ, ಚಿನ್ನ. - ಫ್ರೆಂಚ್ ಆಹಾರದಿಂದ ನನಗೆ ವಾಯು ಬಾಧಿಸುತ್ತದೆ. 415 00:36:30,810 --> 00:36:34,510 - ಆ ಹೂಗಳನ್ನು ಎಲ್ಲಿಂದ ತಂದೆ? - ಪಕ್ಕದ ಮನೆಯವರ ಅಂಚೆ ಪೆಟ್ಟಿಗೆ ಪಕ್ಕ ಡಬ್ಬಿ. 416 00:36:34,700 --> 00:36:37,800 ಮಕ್ಕಳ ಮರಳಿನ ಡಬ್ಬಿಯಲ್ಲಿ ಬೆಕ್ಕು ಹೇಸಿಗೆ ಮಾಡುತ್ತಿತ್ತು. ನ್ಯಾಯವೇ. 417 00:36:38,000 --> 00:36:39,740 ನಿಜವೇ. ಖಂಡಿತ ನ್ಯಾಯವೇ. 418 00:36:40,860 --> 00:36:44,820 - ಅಯ್ಯೋ. ಏನಾಯಿತು? - ಇಂಟರ್ನೆಟ್ ನನ್ನ ಶೂಗಳನ್ನು ದ್ವೇಷಿಸುತ್ತದೆ. 419 00:36:45,620 --> 00:36:49,700 - ಮತ್ತು ನನ್ನ ಮುಖವನ್ನು. - ಮುಟ್ಟಬೇಡ. ನಾನು ನೋಡುವೆ. 420 00:36:51,870 --> 00:36:55,130 ಮತ್ತೆ ನಿನ್ನ ದಿನ ಹೇಗಿತ್ತು? ಏನಾದರೂ ಆಸಕ್ತಿಕರವಾದದ್ದು ನಡೆಯಿತೇ? 421 00:36:56,340 --> 00:37:01,740 ಇಲ್ಲ. ಇಲ್ಲ. ಇಲ್ಲ. ನನ್ನ ದಿನದ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. 422 00:37:01,940 --> 00:37:04,470 ಸರಿ. ಮತ್ತೆ ಯಾವುದರ ಬಗ್ಗೆ ಮಾತನಾಡುವೆ? 423 00:37:07,050 --> 00:37:10,750 ನಿನ್ನ ಅಲಂಕಾರದ ಬಗ್ಗೆ. ಹಾಂ, ಅದರ ಬಗ್ಗೆ ಮಾತಾಡೋಣ, ಡಾ. ಲೋಪೆಜ್. 424 00:37:10,950 --> 00:37:13,190 ಸರಿ. ಸರಿ, ಅಮ್ಮ. 425 00:37:14,520 --> 00:37:15,560 ತಗೋ. 426 00:37:25,610 --> 00:37:28,120 ಇಲ್ಲ. ಏನು ಗೊತ್ತಾ? ನಿನ್ನ ದಿನದ ಬಗ್ಗೆ ಮಾತಾಡೋಣ. 427 00:37:29,160 --> 00:37:33,650 ಇಲ್ಲ. ನನಗೆ ಇಷ್ಟವಿಲ್ಲ. ನನ್ನ ದಿನದ ಬಗ್ಗೆ ಯಾಕೆ ಮಾತನಾಡಬೇಕು? 428 00:37:33,850 --> 00:37:37,150 ನೀನು ನಿನ್ನ ಧ್ವನಿಯಿಂದ ಮುದ್ದಾಗಿ ಕಾಣುವ ಪ್ರಯತ್ನ ಮಾಡಿದರೂ, 429 00:37:37,350 --> 00:37:39,530 ಏನೋ ನಡೆಯುತ್ತಿದೆ ಅಂತ ನನಗೆ ಗೊತ್ತಾಗುತ್ತೆ, ಆಯ್ತಾ? 430 00:37:39,730 --> 00:37:41,030 ಒತ್ತಿಟ್ಟುಕೊಳ್ಳುತ್ತಿರುವೆ. 431 00:37:41,230 --> 00:37:42,990 ಆ ದರಿದ್ರವನ್ನು ಹೇಳಿಕೊಳ್ಳದಿದ್ದರೆ, 432 00:37:43,190 --> 00:37:46,390 ಅದು ಎಲ್ಲಾ ಕಡೆ ಸಿಡಿದು ನಮ್ಮ ರಾತ್ರಿಯನ್ನು ಹಾಳು ಮಾಡುತ್ತದೆ. ಆಯ್ತಾ? 433 00:37:50,510 --> 00:37:53,810 ಕ್ಷಮಿಸು. ಕ್ಷಮಿಸು. ಗೊತ್ತಾ, ಇಂದು ಒಬ್ಬ ರೋಗಿಯನ್ನು ನೋಡಿದೆ. 434 00:37:54,520 --> 00:37:58,650 ಒಬ್ಬ ಪಾಪದ ಹದಿಹರೆಯದ ಹುಡುಗಿ. ಅವಳಲ್ಲಿ ತುಂಬಾ ಕೋಪವಿತ್ತು. ವಿಚಿತ್ರವಾಗಿತ್ತು. 435 00:37:59,060 --> 00:38:02,480 ಅವಳಿಗೆ ಅತಿಯಾದ ಔಷಧಗಳನ್ನು ಕೊಟ್ಟರೂ, ಇನ್ನೂ ಕೋಪಗೊಳ್ಳುತ್ತಲೇ ಇದ್ದಳು. 436 00:38:03,530 --> 00:38:04,570 ಗೊತ್ತಿಲ್ಲ. 437 00:38:05,610 --> 00:38:08,810 ಇತ್ತೀಚೆಗೆ ಇಡೀ ಪ್ರಪಂಚವೇ ಕುದಿಯುತ್ತಿರುವಂತೆ ಅನಿಸುತ್ತಿದೆ. 438 00:38:09,010 --> 00:38:12,660 ಅದಕ್ಕಾಗಿಯೇ ನೀನು ಅದನ್ನು ಹೇಳಿಕೊಳ್ಳಬೇಕು. ಆಯ್ತಾ? 439 00:38:13,950 --> 00:38:18,820 ನನಗಾಗಲ್ಲ. ನನ್ನ ಮುಖ, ಒಂದೇ ಒಂದು ಕ್ಷಣ, ಅತಿಯಾದ ಕೋಪದಲ್ಲಿ ಕಂಡರೂ, 440 00:38:19,020 --> 00:38:24,070 ನಾನು ಭಾವನಾತ್ಮಕತೆ, ಅತಾರ್ಕಿಕತೆ, ಉನ್ಮಾದದಿಂದಿದ್ದು ಆಯ್ಕೆಯಾಗಲು ಅನರ್ಹಳು. 441 00:38:24,270 --> 00:38:25,990 ತಪ್ಪು. ಇದು ನಮ್ಮ ಜಾಗ. 442 00:38:26,190 --> 00:38:29,510 ಮತ್ತು ನಾನು ನಿನ್ನ ಗಂಡ. ನೀನಿಲ್ಲಿ ಕೋಪಗೊಳ್ಳಬಹುದು ಎಂದು ಹೇಳುವೆ, ಆಯ್ತಾ? 443 00:38:29,760 --> 00:38:32,680 ಮತ್ತೆ ಕೆಂಡ ಉರಿಯಲಿ. ಹೇಳು. ಸರಿಯಾಗಿ ಕೋಪಗೊಳ್ಳು. 444 00:38:34,850 --> 00:38:35,730 ಸರಿ. 445 00:38:40,110 --> 00:38:43,730 ಈ ನಗರದಲ್ಲಿ ಏನೋ ನಡೆಯುತ್ತಿದೆ. ನಿಜವಾದದ್ದನ್ನು ಹೇಳುತ್ತಿದ್ದೇನೆ, ಆಯ್ತಾ? 446 00:38:44,570 --> 00:38:47,860 ಹಾಗಿರುವಂತೆಯೇ, ಮೊಬೈಲ್ ಫೋನುಗಳು ಮತ್ತು ಲಿಖಿತ ಸಂದೇಶಗಳು ಮತ್ತು 447 00:38:48,110 --> 00:38:50,140 ಈಮೇಲು ಮತ್ತು ಪ್ಯಾನೋಗ್ರಾಂ ಯುಗದಲ್ಲಿ, 448 00:38:50,340 --> 00:38:54,540 ಎರಡು ನಿಮಿಷಗಳ ಕಾಲ ಆತನ ಗಮನ ಸೆಳೆಯಲು ನಾನು ದರಿದ್ರ ಒಲಿಂಪಿಯಾಗೆ ಹೋಗಿ ಬರಬೇಕಾಯಿತು. 449 00:38:55,040 --> 00:38:57,710 - ಆಮೇಲೆ, ಆತ ನನಗೇನು ಹೇಳಿದ ಗೊತ್ತಾ? - ಇಲ್ಲ. ಏನು? 450 00:38:58,120 --> 00:39:03,090 ಆತ ನನ್ನ ಸೆರಗನ್ನು ಒದ್ದೆ ಮಾಡಿಕೊಳ್ಳಬೇಡ ಎಂದು ಹೇಳಿದ. 451 00:39:04,590 --> 00:39:07,450 ನನ್ನ ಹೆಂಡತಿಯ ಸೆರಗಿನ ಬಗ್ಗೆ ಅವನು ಮಾತನಾಡುವುದು ಬೇಡ. 452 00:39:07,650 --> 00:39:09,580 - ಅವನ ತಿಕ ಒದೆಯಬೇಕಾ? - ತಡಿ. ನೀನು ಒದೆಯಲಿಲ್ವಾ? 453 00:39:09,780 --> 00:39:13,730 - ಅಂದುಕೊಂಡೆ. ಅವನನ್ನು ಬೀಳಿಸುತ್ತಿದ್ದೆ. - ನೀನು ಮಾಡಬಲ್ಲೆ ಎಂದು ಗೊತ್ತು. 454 00:39:13,930 --> 00:39:17,170 ನೀನೇನು ಹೇಳಿದೆ? ನೀನೇನೋ ಹೇಳಿರುತ್ತೀಯಾ ಅಂತ ನನಗೆ ಗೊತ್ತು. 455 00:39:17,370 --> 00:39:21,420 ಏನೂ ಇಲ್ಲ. ನಾನು ರಾಜಕೀಯದಲ್ಲಿರುವ ಹೆಣ್ಣು. ದಿನವೆಲ್ಲಾ ನನ್ನನ್ನು ದಬಾಯಿಸುತ್ತಾನೆ. 456 00:39:21,620 --> 00:39:25,220 - ನಾನದನ್ನು ಸಹಿಸಿಕೊಳ್ಳಬೇಕು. - ಅವನಿಗೆ ನೀನೆಂದರೆ ಭಯ. ಆಯ್ತಾ? 457 00:39:25,420 --> 00:39:28,550 ಯಾಕೆಂದರೆ ನೀನು ಅವನಿಗಿಂತ ಸಮರ್ಥಳು ಮತ್ತು ಅರ್ಹಳು ಅಂತ. 458 00:39:28,750 --> 00:39:30,970 ಅದಕ್ಕಾಗಿಯೇ ದಬಾಯಿಸಿ ಬಾಯಿ ಮುಚ್ಚಿಸುತ್ತಾನೆ. 459 00:39:31,170 --> 00:39:34,640 - ನೀನು ಅವನನ್ನು ಗೆಲ್ಲಲು ಬಿಡಬೇಡ. - ಈಗಾಗಲೇ ಗೆದ್ದಿದ್ದಾನೆ. 460 00:39:34,840 --> 00:39:37,910 ನನಗೆ ಒಳ್ಳೆಯ ಊಟ ಮಾಡಿ ನನ್ನ ಗಂಡನ ಜೊತೆ ಸಂಭೋಗಿಸಬೇಕಿತ್ತು ಅಷ್ಟೇ. 461 00:39:38,330 --> 00:39:39,500 ಸರಿ, ಅಲ್ಲೇ ಇರು. 462 00:39:41,250 --> 00:39:43,790 - ಏನು ಮಾಡು… - ತಡಿ. ಬೇಡ… 463 00:39:49,050 --> 00:39:49,970 ತಗೋ. 464 00:39:52,340 --> 00:39:55,410 ಏನು ಇದು? ಒಂಥರಾ… 465 00:39:55,610 --> 00:39:57,520 ಇದು ಉಡುಗೊರೆಯೇ? ಅಥವಾ… 466 00:39:58,730 --> 00:40:02,900 ಇದೇ. ನಿನ್ನ ಹುಚ್ಚು ತಾಯಿ ಕೊಟ್ಟ ಮದುವೆಯ ಉಡುಗೊರೆ. 467 00:40:04,110 --> 00:40:07,070 ಒಡೆದುಹಾಕು. ಹಾಂ, ಹೊಡಿ. 468 00:40:08,280 --> 00:40:10,110 ಒಡೆದುಹಾಕು. ನಿಜವಾಗಿ ಹೇಳುತ್ತಿರುವೆ. 469 00:40:33,970 --> 00:40:38,680 ಓ, ದೇವರೇ. ಅಬ್ಬಬ್ಬಾ. ಅದಂತೂ ತುಂಬಾ ಚೆನ್ನಾಗನಿಸಿತು. 470 00:40:39,060 --> 00:40:40,430 ಹೌದಾ? ಚೆನ್ನಾಗಿತ್ತಾ? 471 00:40:41,140 --> 00:40:43,980 - ಸರಿ. ಮತ್ತೊಮ್ಮೆ ಮಾಡುವೆ. - ಬೇಡ, ಬೇಡ, ಬೇಡ. 472 00:40:46,310 --> 00:40:48,530 ಐಕಿಯಾದ ಹೆಚ್ಚಿನವುಗಳನ್ನು ತರುವೆ. ಇಲ್ಲ. 473 00:40:50,030 --> 00:40:51,950 - ಬೇಗ. - ಉತ್ಸಾಹದಲ್ಲಿರುವೆ. ನನಗೆ ಇಷ್ಟವೇ. 474 00:41:04,290 --> 00:41:06,440 ವಿಶ್ವದೆಲ್ಲೆಡೆ ಮಹಾ ಅಗ್ನಿ ಅವಘಡಗಳು 475 00:41:06,640 --> 00:41:09,380 ಉದ್ಯಾನಗಳು, ಉದ್ಯಮಗಳು, ಮನೆಗಳು ಮತ್ತು ಶಾಲೆಗಳ ಸುಡುತ್ತಿವೆ. 476 00:41:09,590 --> 00:41:13,010 ಅಧಿಕಾರಿಗಳು ಇಲ್ಲೊಂದು ವಿಲಕ್ಷಣ ಸಂಬಂಧವನ್ನು ಕಂಡುಹಿಡಿದಿದ್ದಾರೆ. 477 00:41:13,930 --> 00:41:17,010 ಹುಡುಗಿಯರು, ಕೆಲವರಿಗೆ ಕೇವಲ 12 ವರ್ಷ, ಇದಕ್ಕೆ ಕಾರಣ ಇರಬಹುದು. 478 00:41:18,220 --> 00:41:20,350 ಇವು ಬೇಕಾಗಿ ಮಾಡಲಾದ ಅಗ್ನಿಸ್ಪರ್ಶಗಳೇ? 479 00:41:20,970 --> 00:41:24,100 ಸಾಮಾಜಿಕ ಜಾಲತಾಣದ ಬೆಂಕಿ ಹಾಕುವ ಸವಾಲಿನ ಅನಾಹುತವೇ? 480 00:41:25,190 --> 00:41:26,630 ಬಿಡುವಿಲ್ಲದ ಅಗ್ನಿಶಾಮಕ ದಳದವರು 481 00:41:26,830 --> 00:41:30,610 ವಿಶ್ವದಾದ್ಯಂತ ಬೆಂಕಿಯೊಂದಿಗೆ ಸೆಣೆಸಾಡುತ್ತಾ ಉತ್ತರಗಳಿಗೆ ಹುಡುಕುತ್ತಿದ್ದಾರೆ. 482 00:41:30,940 --> 00:41:34,970 ಕಾರ್ಪೇಥಿಯಾದಲ್ಲಿ ಅಧ್ಯಕ್ಷ ಮೋಸ್ಕಲೆವ್ ಈ ಹೆಂಗಸರನ್ನು ಭಯೋತ್ಪಾದಕರೆಂದು ಘೋಷಿಸಿ 483 00:41:35,170 --> 00:41:37,750 ಬೆಂಕಿ ಹಚ್ಚುವವರಿಗೆ ಮರಣದಂಡನೆ ಶಿಕ್ಷೆ ಎಂದು ಎಚ್ಚರಿಸಿದ್ದಾರೆ. 484 00:41:37,950 --> 00:41:40,740 ಅವರು ಹುಡುಗಿಯರು, ವಿಕ್ಟರ್. ತಮಾಷೆ ಮಾಡ್ತಿರೋ ತುಂಟಿಯರು. 485 00:41:42,330 --> 00:41:44,870 ಚಿಂತಿಸಲು ಬೇರೆ ಪ್ರಮುಖ ವಿಚಾರಗಳಿವೆಯಲ್ಲ ನಿನಗೆ? 486 00:41:45,210 --> 00:41:49,190 ನನ್ನ ದೇಶದಲ್ಲಿ ಏನು ನಡೆಯುತ್ತಿದೆ ಎಂದು ನನಗೇ ಗೊತ್ತಿಲ್ಲ ಅಂದುಕೊಂಡೆಯಾ? 487 00:41:49,390 --> 00:41:52,780 …ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಎರಡನೇ ರಾತ್ರಿಯೂ ವಿದ್ಯುತ್ ಇಲ್ಲದಂತಾಗಿದೆ. 488 00:41:52,980 --> 00:41:54,530 ಉದ್ಯಮಗಳು ತಮ್ಮ ಬಾಗಿಲನ್ನು ಮುಚ್ಚಿವೆ 489 00:41:54,730 --> 00:41:57,720 ಮತ್ತು ಕುಟುಂಬಗಳು ಒಳಗಡೆಯೇ ದೀಪದ ಬೆಳಕಿನಲ್ಲಿ ಕೂತಿವೆ. 490 00:41:57,930 --> 00:42:02,390 ರಸ್ತೆಯ ದೀಪಗಳೂ ಕಾರ್ಯನಿರ್ವಹಿಸದೆ, ಸಂಪೂರ್ಣ ನಗರಗಳು ಕತ್ತಲುಮಯವಾಗುತ್ತಿವೆ. 491 00:42:03,430 --> 00:42:05,230 ಹಾಗಿರುವಂತೆಯೇ, ಚೀನಾದ ಜೆನ್ಜಿಯುನಲ್ಲಿ, 492 00:42:05,730 --> 00:42:08,960 ಮೊಬೈಲ್ ಫೋನುಗಳನ್ನು ತಯಾರಿಸುವ ಕಾರ್ಖಾನೆಯೊಂದು ಕೋಟ್ಯಾಂತರ ಡಾಲರುಗಳಷ್ಟು 493 00:42:09,160 --> 00:42:11,590 ವಸ್ತು ನಷ್ಟ ವಿದ್ಯುತ್ ಅವಘಡದಿಂದ ಆಯ್ತೆಂದು ಘೋಷಿಸಿತು. 494 00:42:11,790 --> 00:42:12,650 ಏನು? 495 00:42:13,780 --> 00:42:15,990 ನಿಮಗಾಗಿ ಬಂದಿದ್ದಾರೆ, ಶ್ರೀಮತಿ ಮೋಸ್ಕಲೆವ್. 496 00:42:17,780 --> 00:42:18,910 ನಿಮ್ಮ ತಾಯಿ. 497 00:42:29,790 --> 00:42:31,210 ಅಲ್ಲಿ ಕಕ್ಕಸಿನ ವಾಸನೆ ಬರುತ್ತೆ. 498 00:42:31,500 --> 00:42:35,590 ಸಂದರ್ಶನಗಳಲ್ಲಿ ಅಷ್ಟೆಲ್ಲಾ ಆಶಾವಾದಿಯಾಗಬೇಡ. ಅವರು ನಿನ್ನನ್ನು ಮೆಚ್ಚಲ್ಲ. 499 00:42:35,840 --> 00:42:39,660 ನೀನು ಕೃತಜ್ಞಳಾಗಿರಬೇಕು. ಅವರು ನಿನ್ನನ್ನು ನೋಡಿದ್ದು ಆಶ್ಚರ್ಯವೇ. 500 00:42:39,860 --> 00:42:42,350 ನಾನು ಶ್ರೇಷ್ಠಳು. ಅದಕ್ಕಾಗಿ ನನ್ನ ಸಂದರ್ಶನ ಮಾಡಿದರು. 501 00:42:42,810 --> 00:42:45,430 ಅಯ್ಯೋ ದೇವರೇ! ನನ್ನ ಮಾತನ್ನು ಕೇಳುತ್ತಿರುವೆಯಾ? 502 00:42:46,060 --> 00:42:49,600 ಅಷ್ಟೆಲ್ಲಾ ತಗೋಬೇಡ. ನಿನ್ನ ಅಕ್ಕನಿಗೆ ಅಭ್ಯಾಸವಿದೆ. 503 00:42:51,560 --> 00:42:54,340 ಸ್ವಲ್ಪ ನಮ್ರತೆ ತೋರಿಸು. ನೀನು ಈಗ ಚಿಕ್ಕವಳಲ್ಲ. 504 00:42:54,540 --> 00:42:57,050 - ನಾನು ಕೆಲಸ ಮಾಡಲ್ಲ… - ನಾವು… 505 00:42:57,250 --> 00:43:00,070 ಇದು ನಿನ್ನ ಬಗ್ಗೆ ಅಲ್ಲ. 506 00:43:01,070 --> 00:43:05,980 ನಾವಿಬ್ಬರೂ ಮೂರು ಕೆಲಸಗಳನ್ನು ನಿಭಾಯಿಸಿಕೊಂಡು, ಇಷ್ಟೊತ್ತು ಕಷ್ಟಪಟ್ಟು, 507 00:43:06,180 --> 00:43:09,620 ನಿನ್ನ ತರಬೇತಿಗಾಗಿ ಹಣ ಪಾವತಿಸುತ್ತಿದ್ದರೆ ಅಹಂಕಾರದಿಂದ ಹಾಳು ಮಾಡಿಕೊಳ್ಳಬೇಡ. 508 00:43:10,630 --> 00:43:13,420 ನಿನ್ನಲ್ಲಿ ಅದೆಲ್ಲಾ ಇರುವವರೆಗೂ ನೀನು ಲಾಗ ಹಾಕಲಾಗದು. 509 00:43:15,090 --> 00:43:18,010 ಆಯ್ತು. ಆಯ್ತು. ಅರ್ಥವಾಯಿತು. ಆಶಾವಾದಿ ಆಗಬಾರದು. 510 00:43:18,380 --> 00:43:19,430 ಅಲ್ಲ. ಅಲ್ಲ. 511 00:43:19,630 --> 00:43:24,600 ಖಂಡಿತ ಆಶಾವಾದಿಯಾಗಿರು. ಖಂಡಿತವಾಗಲೂ. 512 00:43:24,970 --> 00:43:27,330 ನೀನು ಆಶಾವಾದಿಯಾಗಿರಬೇಕು, 513 00:43:27,530 --> 00:43:30,350 ಆದರೆ ನೀನು ಆಶಾವಾದಿ ಎಂದು ಅವರಿಗೆ ತೋರಿಸಿಕೊಳ್ಳಬಾರದು. 514 00:43:30,770 --> 00:43:36,400 ಅವರಿಗೆ ಇಷ್ಟವಾಗದು. ನೀನು ಮುದ್ದಾದ ಹುಡುಗಿಯಂತೆಯೇ ಇರಬೇಕು. 515 00:43:50,620 --> 00:43:51,670 ಹಾಸಿಗೆ. 516 00:44:09,430 --> 00:44:11,810 ನೀನು ಕೆಲಸ ಮಾಡಿಸಿಕೊಂಡಿರುವೆ. 517 00:44:15,650 --> 00:44:17,150 ಶೋಕಿ ಮುಂಡೆ. 518 00:44:30,080 --> 00:44:32,120 ನನಗೇನೂ ಕೊಡುವುದಿಲ್ಲವೇನು? 519 00:44:38,380 --> 00:44:41,930 - ನೀನು ಕ್ರೂರಿ. - ನಿನ್ನಿಂದಲೇ ಕಲಿತದ್ದು. 520 00:44:46,180 --> 00:44:51,100 ನಿನ್ನ ತಂದೆ ಸತ್ತಿದ್ದಾರೆ. ಆತ ಸತ್ತು ನನಗೆ ಏನನ್ನೂ ಬಿಟ್ಟು ಹೋಗಿಲ್ಲ. 521 00:44:51,940 --> 00:44:53,650 ಮನೆಯಲ್ಲೊಂದು ಕಾಳೂ ಇಲ್ಲ. 522 00:44:56,400 --> 00:45:00,860 ಜೀವನ ಈಗ ಕಷ್ಟವಾಗಿದೆ. ಕೆಲಸವೂ ಇಲ್ಲ. 523 00:45:03,910 --> 00:45:05,450 ನನಗೆ ಬದುಕಲು ಏನೂ ಇಲ್ಲ. 524 00:45:08,370 --> 00:45:14,040 ಮೂರು ವಾರಗಳಿಂದ ಸರಿಯಾಗಿ ಏನನ್ನೂ ತಿಂದಿಲ್ಲ. ನನಗೆ ಸ್ನಾನ ಮಾಡಲು ಜಾಗವಿಲ್ಲ. 525 00:45:15,920 --> 00:45:17,880 ಮತ್ತು ನನ್ನ ಕಾಲ್ಬೆರಳ ಊತ. 526 00:45:19,170 --> 00:45:22,950 ನನ್ನ ಕಾಲ್ಬೆರಳ ಊತವನ್ನು ನೋಡು. 527 00:45:23,150 --> 00:45:25,590 ಅವುಗಳನ್ನು ದೂರ ಇರಿಸು. 528 00:45:27,720 --> 00:45:28,810 ದರಿದ್ರದ್ದು. 529 00:45:29,720 --> 00:45:32,140 ನನ್ನ ಪಾಲನ್ನು ಕೇಳಲು ಬಂದಿರುವೆ. 530 00:45:38,020 --> 00:45:38,900 ಸರಿ. 531 00:45:44,280 --> 00:45:45,820 ಅಪ್ಪ ಸತ್ತನಾ? 532 00:45:48,530 --> 00:45:49,580 ಆತನ ಹೃದಯ? 533 00:45:50,330 --> 00:45:51,240 ಕುಡಿ. 534 00:45:52,870 --> 00:45:56,170 ಮತ್ತು ಆತನ ಒಬ್ಬ ಮಗಳೂ ಶವಸಂಸ್ಕಾರಕ್ಕೆ ಬರಲಿಲ್ಲ. 535 00:45:57,000 --> 00:45:59,000 ಎಲ್ಲವನ್ನೂ ನಾನೇ ಮಾಡಿದೆ. 536 00:46:02,710 --> 00:46:04,420 ಜೋಯಾ ಏನಾದರೂ ಹೇಳಿದಳಾ? 537 00:46:05,930 --> 00:46:08,850 ಇನ್ನೂ ಇಲ್ಲ. ಇಷ್ಟೆಲ್ಲಾ ವರ್ಷಗಳಾದರೂ ಏನೂ ಇಲ್ಲ. 538 00:46:11,100 --> 00:46:14,310 ನೀನು ಅವಳಿಗೆ ಕಳಿಸಿದ ಆಭರಣಗಳೆಲ್ಲವನ್ನೂ ಮರಳಿಸಿದಳು ಎಂದು ಗೊತ್ತು. 539 00:46:23,490 --> 00:46:27,370 ನೀನು ನಿನ್ನ ಕುಟುಂಬವನ್ನು ಮರೆತಿಲ್ಲ. ನನಗೆ ಗೊತ್ತಿತ್ತು. 540 00:46:27,570 --> 00:46:30,580 - ನೀನು ಹೊರಡಬೇಕು. - ಆದರೆ ನಾನು ಈಗಷ್ಟೇ ಬಂದೆ. 541 00:46:30,830 --> 00:46:32,910 ನೀನು ಹೊರಡಬೇಕು. ರುಸ್ಲಾನ್! 542 00:46:33,160 --> 00:46:36,920 ಟಾಟಿಯಾನಾ. ಟಾಟಿಯಾನಾ, ಅಯ್ಯೋ, ದೇವರೇ, ನನಗೆ ಸಹಾಯ ಬೇಕು. 543 00:46:37,790 --> 00:46:41,790 ನನ್ನನ್ನು ಇರಲು ಬಿಡು, ಸ್ವಲ್ಪ ವಿರಮಿಸಲು. 544 00:46:43,550 --> 00:46:47,200 ಆ ಎಲ್ಲಾ ವರ್ಷಗಳು ನೀನು ನನಗೆ ನೆರವಾದಂತೆ ನಾನು ನಿನಗೆ ನೆರವಾಗುವೆ. 545 00:46:47,400 --> 00:46:48,220 ಧನ್ಯವಾದ. 546 00:46:49,550 --> 00:46:50,760 ಅದು ಅಲ್ಲವೇ ಅಲ್ಲ. 547 00:46:51,470 --> 00:46:52,390 ಬಾ. ಬಾ. 548 00:46:54,470 --> 00:46:58,600 ಹಾಗೆ ಹೇಗೆ ಹೇಳುವೆ? ನಿನ್ನಲ್ಲಿರುವುದನ್ನೆಲ್ಲಾ ನೋಡು! 549 00:46:58,810 --> 00:47:01,020 ಇದಕ್ಕೆ ನಾನೇನನ್ನೂ ತ್ಯಾಗ ಮಾಡಿಲ್ಲ ಅಂದುಕೊಂಡೆಯಾ? 550 00:47:04,940 --> 00:47:06,070 ಕಳಿಸು ಆಕೆಯನ್ನು ಹೊರಗೆ. 551 00:47:06,820 --> 00:47:08,680 ವಿದಾಯ ಹೇಳುವುದಿಲ್ಲವೇ, ಅಮ್ಮ? 552 00:47:08,880 --> 00:47:11,740 ನಿನ್ನ ಹೊಸ ಮೂಗು ದರಿದ್ರವಾಗಿದೆ. 553 00:47:14,870 --> 00:47:18,500 ರುಸ್ಲಾನ್, ಕೇಕನ್ನು ಬಿಸಾಡು. 554 00:47:51,320 --> 00:47:52,410 ನನ್ನಲ್ಲಿದೆ, ಅಪ್ಪ. 555 00:47:54,580 --> 00:47:55,490 ನಾನು ಮಾಡಬಲ್ಲೆ. 556 00:47:58,450 --> 00:47:59,730 ಬೇರೆ ಹುಡುಗಿಯರ ನೋಡಿರುವೆ. 557 00:47:59,930 --> 00:48:03,460 ನಿನಗೆ ಹೇಳುವೆ, ಅವರು ನನ್ನಂತಲ್ಲ. ನನ್ನಲ್ಲಿ ಅದು ತುಂಬಾ ಇದೆ. 558 00:48:55,680 --> 00:48:58,060 ಇದು ನನಗೆ ಯಾಕೆ ಆಗುತ್ತಿದೆ? 559 00:49:04,270 --> 00:49:05,310 ಯಾಕೆ? 560 00:49:23,370 --> 00:49:26,080 ಯಾಕೆ? ಯಾಕೆ? 561 00:49:27,630 --> 00:49:28,540 ಯಾಕೆ? 562 00:49:41,600 --> 00:49:44,270 ಯಾಕೆಂದರೆ ಪ್ರಪಂಚಕ್ಕೆ ಒಂದು ಕ್ರಾಂತಿಯ ಅವಶ್ಯಕತೆ ಇದೆ. 563 00:49:48,150 --> 00:49:51,070 ಮತ್ತು ನೀನು ಅದರ ಧ್ವನಿಯಾಗಲಿರುವೆ. 564 00:50:22,390 --> 00:50:24,680 ಉತ್ತಮ ಭವಿಷ್ಯ ನಿನ್ನ ಕೈಗಳಲ್ಲಿದೆ. 565 00:50:57,930 --> 00:51:01,100 ಇನ್ನೂ ನೋಡುತ್ತಿದ್ದೀರಾ? 566 00:51:16,570 --> 00:51:20,010 ಹೆಲೆನ್. ಏನಾದರೂ ಮುಖ್ಯವಾದದ್ದು ಇಲ್ಲದಿದ್ದರೆ ಆಕೆ ಕರೆ ಮಾಡುವುದಿಲ್ಲ. 567 00:51:20,210 --> 00:51:21,070 ಸರಿ. 568 00:51:23,160 --> 00:51:24,160 ಹಲೋ? 569 00:51:29,960 --> 00:51:30,960 ಏನು? 570 00:54:09,030 --> 00:54:10,980 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 571 00:54:11,180 --> 00:54:13,120 ಸೃಜನಶೀಲ ಮೇಲ್ವಿಚಾರಕರು: ವಿವೇಕ್