1 00:00:10,416 --> 00:00:13,708 ಸಿಟಡೆಲ್ 2 00:00:14,291 --> 00:00:15,916 ನಿಮಗೆ ತಿಳಿಯಬೇಕಾದದ್ದೆಲ್ಲಾ ಇಲ್ಲಿದೆ. 3 00:00:16,583 --> 00:00:20,833 {\an8}ಜಿ8ನಲ್ಲಿ ರಷ್ಯಾದ ರಾಷ್ಟ್ರಪತಿಯನ್ನು ಕೊಲೆ ಮಾಡುವ ಮುನ್ನ, ನಮಗೆ 30 ಗಂಟೆಗಳ ಸಮಯವಿದೆ. 4 00:00:20,875 --> 00:00:24,416 ಎಲ್ಲೆಡೆ ನಾಕಾಬಂದಿಗಳಿರುತ್ತವೆ, ಹಾಗಾಗಿ ಶಸ್ತ್ರಗಳು ಬೇಡ. ನೀವು ಸಿಕ್ಕಿಹಾಕಿಕೊಳ್ಳುವಿರಿ. 5 00:00:24,500 --> 00:00:26,166 ರಾಷ್ಟ್ರಪತಿ ಆರೋನೋವ್‌ರನ್ನು ನಾವು ಕೊಂದಮೇಲೆ, 6 00:00:26,250 --> 00:00:28,541 ನೀವು ನಿಮ್ಮ ಉಪಗ್ರಹಗಳ ನಿಯಂತ್ರಣವನ್ನು ನಮಗೆ ಹಸ್ತಾಂತರಿಸಿದ ನಂತರ, 7 00:00:28,625 --> 00:00:30,041 ಷರತ್ತುಗಳನ್ನು ಹಿಂಪಡೆಯಲಾಗುತ್ತದೆ. 8 00:00:31,041 --> 00:00:32,416 ಅದು ಸಿದ್ಧವಾಗಿದೆ. ಅವಳು ಮಾಡಿದ್ದಾಳೆ. 9 00:00:32,791 --> 00:00:33,666 ಕಾರ್ಯಗತ-[ಹೌದು] [ಬೇಡ] 10 00:00:33,791 --> 00:00:37,000 ಜೋಯಾನಾಳ ಬಳಿ ಇರುವ ತಂತ್ರಜ್ಞಾನದೊಂದಿಗೆ, ಯಾರನ್ನು ಬೇಕಾದರೂ ಕೊಲೆಗಾರರನ್ನಾಗಿ ಮಾಡಬಹುದು. 11 00:00:37,041 --> 00:00:39,208 ಯಾರೊಳಗಾದರೂ ಆ ಚಿಪ್ ಅಳವಡಿಸಲಾದರೆ, 12 00:00:39,291 --> 00:00:42,375 ಮ್ಯಾಂಟಿಕೋರ್ ಅವರನ್ನು ಕೇವಲ ಒಂದು ಗುಂಡಿಯನ್ನು ಒತ್ತಿ ನಿಯಂತ್ರಿಸಬಹುದು. 13 00:00:49,625 --> 00:00:50,750 ನಿನ್ನನ್ನು ಪ್ರೀತಿಸುವೆ. 14 00:00:50,833 --> 00:00:52,041 ನಿನ್ನನ್ನು ಪ್ರೀತಿಸುವೆ. 15 00:01:36,541 --> 00:01:37,541 ಇವಳ ನಾಡಿ ಮಿಡಿಯುತ್ತಿದೆ. 16 00:01:37,625 --> 00:01:38,750 ಅವಳನ್ನು ಒಳಕ್ಕೆ ಕೊಂಡೊಯ್ಯಿರಿ. 17 00:01:49,208 --> 00:01:50,208 ಕ್ಷಮಿಸು, ಬರ್ನಾರ್ಡ್‌. 18 00:01:59,791 --> 00:02:00,750 ಬಾ. 19 00:02:00,833 --> 00:02:02,666 ಬನ್ನಿ. ಶುರುಮಾಡೋಣ! 20 00:02:04,583 --> 00:02:06,625 - ಬೇಗ, ಚುಚ್ಚುಮದ್ದು ಹುಡುಕು. - ತಗೋ. 21 00:02:06,708 --> 00:02:07,750 ಚುಚ್ಚುಮದ್ದು ತಗೋ! 22 00:02:44,791 --> 00:02:47,458 - ಹೇ. ಪರವಾಗಿಲ್ಲ. ಆರಾಮವಾಗಿರು. - ಮೇಸನ್‌. 23 00:02:47,541 --> 00:02:48,625 ಮೇಸನ್‌. 24 00:02:49,958 --> 00:02:51,166 ಏನಾಯಿತು? 25 00:02:52,208 --> 00:02:53,833 ಅದು ಆಬ್ಬಿ ತಾನೇ? 26 00:02:53,916 --> 00:02:55,041 ಏನನ್ನು ಮಾತಾಡುತ್ತಿದ್ದೀರಿ? 27 00:02:55,125 --> 00:02:56,500 ಆಬ್ಬಿ ಮೇಸನ್‌‌ನನ್ನು ಯಾಕೆ ಕೊಲ್ಲುವಳು? 28 00:02:56,583 --> 00:02:58,541 ಯಾಕೆಂದರೆ ಆ ಕೊಲೆಗಾತಿ ಅವಳೇ. 29 00:02:59,541 --> 00:03:02,041 ಅವಳ ತಲೆಯೊಳಗೆ ಈಗಾಗಲೇ ಇದ್ದ ಬ್ಯಾಕ್‌ಸ್ಟಾಪ್ ಚಿಪ್ ಬಳಸಿಕೊಂಡರು. 30 00:03:08,416 --> 00:03:09,541 ಬ್ಯಾಕ್‌ಸ್ಟಾಪ್ ಚಿಪ್ ಪತ್ತೆಯಾಗಿದೆ 31 00:03:11,750 --> 00:03:13,416 ಅಯ್ಯೋ, ದೇವರೇ. 32 00:03:15,833 --> 00:03:18,375 ಎನ್‌ವಿಎಂ 33 00:03:18,458 --> 00:03:23,333 ಡ್ರಮ್ಮಂಡ್ ಮೋಟೆಲ್‌ಗೆ ಸ್ವಾಗತ 34 00:03:34,041 --> 00:03:35,166 - ಇದು ನಿನಗೆ. - ಧನ್ಯವಾದ. 35 00:04:03,125 --> 00:04:04,125 ನಾನು ನೋಡುವೆ. 36 00:04:07,416 --> 00:04:08,583 ಹೇಳಿ? 37 00:04:16,791 --> 00:04:17,916 ಕ್ಯಾಥರೀನ್ ವೊಲ್ಕಟ್. 38 00:04:18,000 --> 00:04:20,208 ಮಾಧ್ಯಮದ ಅನುಮತಿ 39 00:05:13,833 --> 00:05:14,833 ಕೂರು. 40 00:05:25,666 --> 00:05:28,000 ‌ಕೇನ್‌ನ ಹೆಂಡತಿ ಕೇನ್ ಮತ್ತು ಸಿನ್ಹ್ ಇಬ್ಬರನ್ನೂ ಕೊಂದಳು. 41 00:05:28,083 --> 00:05:31,166 ನೀನು ಮೊದಲ ಸಲವೇ ಸರಿಯಾಗಿ ಕೆಲಸ ಮಾಡಿದ್ದಿದ್ದರೆ, ಪೌಲೋ ಇನ್ನೂ ಇಲ್ಲಿರುತ್ತಿದ್ದ, 42 00:05:31,250 --> 00:05:32,750 ನನ್ನ ಪಕ್ಕದಲ್ಲಿ ಕುಳಿತಿದ್ದು, 43 00:05:32,833 --> 00:05:34,750 ಈ ಕ್ಷಣವನ್ನು ಆಚರಿಸುತ್ತಿದ್ದ. 44 00:05:37,791 --> 00:05:39,916 ನನ್ನ ಕೈ ಇಲ್ಲೇ ಇತ್ತು. ನೆನಪಿದೆಯಾ? 45 00:05:40,000 --> 00:05:41,708 ನಿನ್ನ ಕತ್ತು ಆಗ ಸಣ್ಣದಾಗಿತ್ತು, 46 00:05:41,791 --> 00:05:46,916 ಆದರೆ ನನ್ನ ಇಡೀ ಕೈ ಅದನ್ನು ಬಹುತೇಕ ಸುತ್ತುವರಿಯಬಹುದಾಗಿತ್ತು. 47 00:05:47,000 --> 00:05:49,416 ಈ ಕೈ ನಿನ್ನನ್ನು ಹಾಗೆಯೇ ಉಳಿಸಿತು, 48 00:05:49,500 --> 00:05:51,666 ನಿನ್ನೊಳಗಿನ ರಕ್ತವನ್ನು ಅಲ್ಲಿಯೇ ಉಳಿಸಿತು. 49 00:05:55,250 --> 00:05:57,583 ಆಬ್ಬಿ ರಷ್ಯಾದ ರಾಷ್ಟ್ರಪತಿಯನ್ನು ಕೊಲ್ಲಲೇಬೇಕು. 50 00:05:57,666 --> 00:06:00,291 ಇತರರು ಅವಳನ್ನು ತಡೆಯಲು ಜಿ8ಗೆ ಬರುತ್ತಾರೆ. 51 00:06:00,375 --> 00:06:02,791 ಏನೇ ಆದರೂ ನೀನು ಅವರನ್ನು ಕೊಂದುಹಾಕಬೇಕು. 52 00:06:02,875 --> 00:06:05,083 ಪೌಲೋನ ಕಾರ್ಯಾಚರಣೆಯಲ್ಲಿ ನಾವು ಯಶಸ್ವಿಯಾಗಬೇಕು, 53 00:06:05,166 --> 00:06:07,916 ಇಲ್ಲದಿದ್ದರೆ ನಿನಗೆ ದಾನ ಮಾಡಿದ ಜೀವವನ್ನು ನಾನು ತೆಗೆದು, 54 00:06:08,000 --> 00:06:12,041 ನನ್ನ ಕೈಗಳಿಂದ ನಿನ್ನ ಕತ್ತುಹಿಸುಕುತ್ತಾ, ನೀನು ರಕ್ತ ಕಾರುವಂತೆ ಮಾಡುತ್ತೇನೆ. 55 00:06:12,125 --> 00:06:13,125 ಅರ್ಥವಾಯಿತಾ? 56 00:07:32,708 --> 00:07:34,541 ಜಿ8ಗೆ ಇನ್ನೆರಡೇ ಗಂಟೆಗಳು ಉಳಿದಿವೆ. ನೀವು ಹೊರಡಬೇಕು. 57 00:07:34,625 --> 00:07:35,833 - ಸರಿ. - ನೀನು ಎಲ್ಲಿಗೆ ಹೋಗುವೆ? 58 00:07:35,916 --> 00:07:37,416 ಜೋಯಾನಾಳನ್ನು ಹುಡುಕಲು ಹೋಗುತ್ತಿದ್ದೇನೆ. 59 00:07:37,500 --> 00:07:39,750 ಎಲ್ಲೋ ಹತ್ತಿರದಲ್ಲಿ ಟ್ರಾನ್ಸ್ಮಿಟರ್ ಇಟ್ಟುಕೊಂಡಿರುತ್ತಾಳೆ. 60 00:07:39,833 --> 00:07:42,583 ನಾನು ಅದನ್ನು ಆರಿಸಲು ಪ್ರಯತ್ನಿಸಿ, ಆಬ್ಬಿಯನ್ನು ನಿಷ್ಕ್ರಿಯಗೊಳಿಸುವೆ. 61 00:07:42,666 --> 00:07:44,750 ನೀವು ಮೂವರೂ ಆ ಅರಮನೆಯೊಳಗೆ ಹೋಗಿ 62 00:07:44,833 --> 00:07:47,041 ರಾಷ್ಟ್ರಪತಿ ಆರೋನೋವ್‌ರನ್ನು ಅವಳು ಕೊಲ್ಲುವುದರಿಂದ ತಪ್ಪಿಸಬೇಕು. 63 00:07:48,583 --> 00:07:49,458 ನಾವು ಮೂವರಾ? 64 00:07:49,541 --> 00:07:53,125 ನನಗೆ ಕಾಣುವುದು ನಾವಿಬ್ಬರು, ಮತ್ತು ಇಲ್ಲಿರುವ ಸಾಧುವರ್ಯರು ಅಷ್ಟೇ. 65 00:07:53,208 --> 00:07:54,625 ಇವನು ಎಲ್ಲರ ಗಮನ ಸೆಳೆಯುವನು. 66 00:07:54,708 --> 00:07:57,833 "ಸಾಧುವರ್ಯ." ನನ್ನಿಂದ ನಿಮಗೆ ನಿಧಾನವಾಗಬಹುದೆಂದರೆ, ನಾನಿಲ್ಲೇ ಇರುತ್ತೇನೆ. 67 00:07:57,916 --> 00:07:59,291 ಅವನು ಆ ಉದ್ದೇಶದಲ್ಲಿ ಹೇಳಲಿಲ್ಲ. 68 00:07:59,375 --> 00:08:02,083 - ಹೌದು. ಹಾಗೆಯೇ ಹೇಳಿದೆ. - ಅವನು ಹೇಗೆ ಹೇಳಿದರೆ ನನಗೇನು? 69 00:08:02,166 --> 00:08:04,541 ನೀವು ಇಬ್ಬರು ಏಜೆಂಟರನ್ನು ಕಳೆದುಕೊಂಡಿದ್ದೀರಿ. ಈಗ ನೀವು ಹೊರಡಬೇಕು. 70 00:08:04,625 --> 00:08:05,625 ಒಬ್ಬರನ್ನಷ್ಟೇ. 71 00:08:30,500 --> 00:08:33,291 ನೀನಿನ್ನೂ ನಮಗೆ ಆ ಹೋಟೆಲಿನ ಹೆಸರನ್ನು ಹೇಳಿಲ್ಲ. 72 00:08:33,791 --> 00:08:34,916 ದ ಗ್ಲೆನ್‌ಬ್ರೂಕ್ ಹೋಟೆಲ್. 73 00:08:35,791 --> 00:08:36,791 ನಾನು ನಿನಗೆ ಋಣಿ. 74 00:08:40,000 --> 00:08:41,666 ಜೋಯಾನಾ ಕಳೆದ ರಾತ್ರಿ ಅಲ್ಲಿ ತಂಗಿದಳು. 75 00:08:42,791 --> 00:08:45,833 ಹಾಗಾದರೆ, ಎಲ್ಲಾ ಮುಗಿದ ಮೇಲೆ ಸಿಗೋಣ. 76 00:08:46,875 --> 00:08:47,875 ಸರಿ. 77 00:08:50,125 --> 00:08:51,208 ಏನಾಯಿತು? 78 00:08:52,125 --> 00:08:53,291 ನನ್ನಿಂದಲೇ ಅವನಿಗೆ ಹೀಗಾಯಿತು. 79 00:08:54,791 --> 00:08:55,791 ಮೇಸನ್‌‌ನನ್ನು ನಾನೇ ಕೊಂದೆ. 80 00:08:57,291 --> 00:08:58,291 ಅವನ ತಂದೆಯನ್ನು ಕೊಂದೆ. 81 00:08:59,958 --> 00:09:02,333 ಅವನನ್ನು ಏಜೆನ್ಸಿಗೆ ಕರೆತಂದೆ. ನಾನು… 82 00:09:05,041 --> 00:09:07,958 ಇವೆಲ್ಲದಕ್ಕೂ ನೀನೇ ಹೊಣೆಯಲ್ಲ. 83 00:09:12,166 --> 00:09:13,500 ಜೋಯಾನಾಳನ್ನು ನಾನು ಕೊಲ್ಲುವೆ. 84 00:09:15,750 --> 00:09:17,375 ಅವರೆಲ್ಲರನ್ನೂ ಕೊಂದುಹಾಕುವೆ. 85 00:09:20,250 --> 00:09:21,416 ನಾನು ಹಿಂದಿರುಗಿ ಬರದಿದ್ದರೆ, 86 00:09:22,541 --> 00:09:23,958 ಅದನ್ನು ನೀನು ಮುಗಿಸಬೇಕು, 87 00:09:24,750 --> 00:09:25,791 ನಾವು ಮೊದಲೇ ಚರ್ಚಿಸಿದಂತೆ. 88 00:09:26,416 --> 00:09:27,416 ಹಾಂ. 89 00:09:28,041 --> 00:09:29,875 ಮತ್ತು ನೀನು ನನ್ನ ಕುಟುಂಬವನ್ನು ನೋಡಿಕೊಳ್ಳಬೇಕು. 90 00:09:32,291 --> 00:09:33,500 ನಿನಗೆ ನನ್ನ ಮಾತು ಕೊಡುವೆ. 91 00:09:35,333 --> 00:09:36,458 ಧನ್ಯವಾದ. 92 00:09:36,541 --> 00:09:37,791 ಶುಭವಾಗಲಿ. 93 00:09:45,000 --> 00:09:48,583 (ಜರ್ಮನ್) ಜಾಗತಿಕ ನಾಯಕರು ಇಂದು ಬೆಳಿಗ್ಗೆ ಹಾಲ್‌ಗಾರ್ಟನ್ ಕಾಸಲ್‌ಗೆ, 64ನೇ ವಾರ್ಷಿಕ 94 00:09:48,666 --> 00:09:50,500 ಜಿ8 ಶೃಂಗಸಭೆಯ ಪ್ರಯುಕ್ತ ಆಗಮಿಸಲಿದ್ದಾರೆ. 95 00:09:50,583 --> 00:09:53,666 (ಜಪಾನಿ) ಜಗತ್ತಿನ ಎಂಟು ಶಕ್ತಿಶಾಲಿ ದೇಶಗಳ ನಾಯಕರನ್ನು ಈ ಸಭೆಯು ಒಟ್ಟು ಸೇರಿಸಲಿದೆ. 96 00:09:53,750 --> 00:09:55,458 (ಫ್ರೆಂಚ್) ಈ ವರ್ಷದ ಮುಖ್ಯ ವಿಷಯ, ವೆನೆಜುವೆಲಾ 97 00:09:55,541 --> 00:09:56,958 ಮತ್ತು ಆಸ್ಟ್ರೇಲಿಯಾದ ಯುದ್ಧಗಳು. 98 00:09:57,041 --> 00:09:59,750 (ಇಟಾಲಿಯನ್) ರಷ್ಯಾದ ರಾಷ್ಟ್ರಪತಿ ಆರೋನೋವ್‌ರನ್ನು ಹತ್ತು ವರ್ಷಗಳ ನಂತರ 99 00:09:59,833 --> 00:10:02,458 ವಿಶ್ವನಾಯಕರು ಶೃಂಗಸಭೆಗೆ ಸ್ವಾಗತಿಸಲಿದ್ದಾರೆ. 100 00:10:07,416 --> 00:10:08,458 {\an8}ಎನ್‌ವಿಎಂ ನ್ಯೂಸ್ 101 00:10:24,208 --> 00:10:25,500 {\an8}ಪ್ರವೇಶ ಅನುಮತಿಸಲಾಗಿದೆ 102 00:10:25,583 --> 00:10:26,875 ಸರಿ. 103 00:11:05,500 --> 00:11:06,666 ಇಲ್ಲಿಂದ ಪ್ರವೇಶವಿಲ್ಲ, ಕಣ್ರೀ. 104 00:11:07,458 --> 00:11:08,458 ಪ್ರವೇಶ ಇಲ್ವಾ? 105 00:11:09,666 --> 00:11:10,750 ಇದು ನನ್ನ ಜಮೀನು. 106 00:11:11,500 --> 00:11:13,916 ಎಷ್ಟೋ ವರ್ಷಗಳ ಹಿಂದೆ ನಮ್ಮಪ್ಪ ಇದನ್ನು ನಿಮ್ಮಿಂದ ಖರೀದಿಸಿದರು. 107 00:11:14,000 --> 00:11:17,000 ಹಾಗಾಗಿ, ಈ ಲೋಹದ ಬೇಲಿಯನ್ನು ನೀವು ತೆಗೆಸದಿದ್ದರೆ, ನಗರಸಭೆಗೆ ಕರೆ ಮಾಡುವೆ. 108 00:11:17,083 --> 00:11:18,291 ಖಾಸಗಿ ಜಮೀನು ಪ್ರವೇಶವಿಲ್ಲ 109 00:11:19,208 --> 00:11:20,791 ಇದು ಸಾರ್ವಜನಿಕ ಜಮೀನು. 110 00:11:20,875 --> 00:11:24,041 ನಿಮ್ಮಮ್ಮ ಕೂಡ ಅಷ್ಟೇ, ಹಾಗಂತ ಅವಳ ಸುತ್ತ ನಾನು ಬೇಲಿ ಹಾಕಿರುವೆನಾ? 111 00:11:25,125 --> 00:11:26,833 ಹೋಗಿ ನನಗೊಂದು ಐರ್ನ್-ಬ್ರೂ ಪಾನೀಯ ತಂದು ಕೊಡು. 112 00:11:31,041 --> 00:11:32,291 ಏನಂದೆ? 113 00:11:52,333 --> 00:11:53,416 ಮುಂದೆ ಹೋಗಿ. 114 00:12:05,208 --> 00:12:06,583 ನಮಸ್ಕಾರ, ಹೇಗಿದ್ದೀರಿ? 115 00:12:06,666 --> 00:12:08,125 - ಐಡಿಗಳು? - ಹಾಂ. 116 00:12:09,291 --> 00:12:10,625 ಇಲ್ಲೇ ಇದ್ದವು… 117 00:12:12,958 --> 00:12:14,708 ಒಂದು, ಎರಡು, ಮೂರು. 118 00:12:14,791 --> 00:12:16,041 ತಗೊಳ್ಳಿ. 119 00:12:22,166 --> 00:12:24,000 ಐಡಿ ಸ್ಕ್ಯಾನ್ ಮಾಡಿ ಐಡಿಯನ್ನು ಹುಡುಕಲಾಗುತ್ತಿದೆ 120 00:12:25,875 --> 00:12:27,041 [ಯಾವುದೇ ಹೋಲಿಕೆಗಳು ಸಿಕ್ಕಿಲ್ಲ] 121 00:12:27,541 --> 00:12:28,541 ಏನೂ ಸಿಕ್ಕಿಲ್ಲ, ಗೋರ್ಡನ್. 122 00:12:32,791 --> 00:12:35,125 ಸರಿ. ಎಲ್ಲರೂ ಕಾರಿನಿಂದ ಇಳಿಯಿರಿ. 123 00:12:35,208 --> 00:12:38,791 ನೋಡಿ. ಲ್ಯಾಂಗ್ಲಿ ಕಚೇರಿಯಲ್ಲಿ ಇದರ ಬಗ್ಗೆ ತಿಳಿದರೆ ಅಸಮಾಧಾನಗೊಳ್ಳುತ್ತಾರೆ. 124 00:12:38,875 --> 00:12:42,916 ಹಾಗಾಗಿ, ನಿಮ್ಮ ಕೆಲಸ ಉಳಿಯಬೇಕೆಂದರೆ, ಇನ್ನೊಮ್ಮೆ ಹೋಗಿ ಪರಿಶೀಲಿಸಿ. 125 00:12:43,000 --> 00:12:44,291 ಸ್ನೇಹಪೂರ್ವಕ ಸಲಹೆ. 126 00:12:47,416 --> 00:12:49,000 ಗೋರ್ಡನ್, ಇಲ್ಲೇ ಇವೆ. 127 00:12:51,750 --> 00:12:52,750 ಇದರ ಬಗ್ಗೆ ಕ್ಷಮಿಸಿ. 128 00:12:52,833 --> 00:12:55,875 ಸರಿ, ಈಗ ನನ್ನ ಕ್ರಿಸ್ಮಸ್ ಉಡುಗೊರೆ ಪಟ್ಟಿಯಿಂದ ನಿಮ್ಮ ಹೆಸರು ಹೋಯಿತು, ಹಾಗಾಗಿ… 129 00:13:05,333 --> 00:13:06,583 ಮುಗಿಯಿತಾ? 130 00:13:06,666 --> 00:13:09,000 ನಾವು ತಯಾರಿದ್ದೇವೆ. ಮಧ್ಯವರ್ತಿಯೂ ಸಕ್ರಿಯರಾಗಿದ್ದಾರೆ. 131 00:13:09,083 --> 00:13:10,916 ಅದು ಆದ ಕೂಡಲೇ ಪ್ರಧಾನಿಯವರ ಖಾತೆಗೆ 132 00:13:11,000 --> 00:13:12,750 ಅದು ತಲುಪಿದ್ದನ್ನು ಮ್ಯಾಲ್ಕಂ ಖಚಿತಪಡಿಸುತ್ತಾನೆ. 133 00:13:12,833 --> 00:13:16,833 ಒಳ್ಳೆಯದು. ವಿಮಾನ ನಿಲ್ದಾಣಕ್ಕೆ ಹೋಗಿ. 1300 ಗಂಟೆಗೆ ಹಾರಲು ಸಿದ್ಧರಾಗಿ. 134 00:13:16,916 --> 00:13:17,916 ಖಂಡಿತ, ಮೇಡಂ. 135 00:13:18,500 --> 00:13:21,958 {\an8}ಕಳೆದ ಮೇ ತಿಂಗಳು ಶಾಂತಿಯ ಒಪ್ಪಂದ ನಡೆದ ನಂತರ, 136 00:13:22,041 --> 00:13:24,208 {\an8}ಈ ಜಿ8ನಲ್ಲಿ ರಷ್ಯಾ ಶೃಂಗಸಭೆಗೆ ಮರಳಲಿದೆ. 137 00:14:01,541 --> 00:14:03,791 ಜಿ8 ಸ್ಕಾಟ್ಲೆಂಡ್ 138 00:14:09,291 --> 00:14:10,458 ಪರೀಕ್ಷೆ, ಪರೀಕ್ಷೆ, ಒಂದು, ಎರಡು. 139 00:14:39,958 --> 00:14:41,041 ಐಡಿ ದಾಖಲೆಗಳು? 140 00:14:47,541 --> 00:14:51,041 ನಲವತ್ತನೇ ಜಿ8 ಶೃಂಗಸಭೆಗೆ ನಿಮ್ಮೆಲ್ಲರನ್ನೂ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. 141 00:14:51,125 --> 00:14:52,500 ಜಿ8 ನಾಯಕರು ಇಷ್ಟರಲ್ಲೇ 142 00:14:52,583 --> 00:14:56,000 ಬರಲಿರುವುದರಿಂದ ದಯವಿಟ್ಟು ನಿಮ್ಮ ಸ್ಥಾನಗಳಲ್ಲಿ ಆಸೀನರಾಗಿ. 143 00:15:27,791 --> 00:15:29,958 ಹೇ. ನನ್ನ ಪುಟಾಣಿ ಹೇಗಿದ್ದಾಳೆ? 144 00:15:30,041 --> 00:15:31,041 ಅಪ್ಪ? 145 00:15:34,166 --> 00:15:35,583 ಹೇಗಿದ್ದೀಯ, ಮ್ಯಾಲ್ಕಂ? 146 00:15:36,458 --> 00:15:37,791 ಡಾಹ್ಲಿಯಾ, ಏನು ಮಾಡುತ್ತಿದ್ದೀಯ? 147 00:15:38,333 --> 00:15:42,208 ನನಗೆ ಬೇಕಾಗಿರುವುದನ್ನು ಕೊಟ್ಟರೆ ನಿನ್ನ ಮಗಳು ಬದುಕುತ್ತಾಳೆ. ಅರ್ಥವಾಯಿತಾ? 148 00:15:54,125 --> 00:15:55,208 ಏನು ಬೇಕು ನಿನಗೆ? 149 00:15:55,291 --> 00:15:58,166 ಪೌಲೋ ಬ್ರಾಗನ ಆಸ್ತಿ. ಎಲ್ಲವೂ. 150 00:16:01,291 --> 00:16:02,291 ನಾನೇ… 151 00:16:03,041 --> 00:16:06,291 ನಾನೇ ಸ್ವತಃ ನಿನಗೆ ಅದನ್ನು ಕೊಡಬಯಸಿದರೂ, ಅದು ಸಾಧ್ಯವಿಲ್ಲ. 152 00:16:06,375 --> 00:16:09,708 ಅವನ ಸಾವಿನ ನಂತರ, ಅವನ ಎಸ್ಟೇಟ್‌ನ ಉಸ್ತುವಾರಿ ನಿನ್ನದೇ ಅಲ್ಲವೇ? 153 00:16:12,000 --> 00:16:16,125 ಒಂದು ಸಣ್ಣ ದೇಶದ ಜಿಡಿಪಿಯ ಮೊತ್ತದಷ್ಟು ನೀನು ನನಗೆ ಮೋಸ ಮಾಡುತ್ತಿದ್ದೀಯ. 154 00:16:17,000 --> 00:16:20,791 ಕೆಲವರು ತಮ್ಮ ಮಗಳ ಜೀವ ಉಳಿಸಿಕೊಳ್ಳಲು ಅದು ತುಂಬಾ ಸಣ್ಣ ಮೊತ್ತ ಎನ್ನುತ್ತಾರೆ. 155 00:16:22,333 --> 00:16:23,333 ಸಿಗೋಣ. 156 00:16:23,958 --> 00:16:27,166 {\an8}ಸದಸ್ಯ ರಾಷ್ಟ್ರಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು 157 00:16:27,250 --> 00:16:30,958 {\an8}ಸ್ಕಾಟ್ಲೆಂಡಿನ ಗ್ರಾಮೀಣ ಭಾಗದಲ್ಲಿರುವ ಸುಂದರವಾದ ಅರಮನೆಗೆ ಆಗಮಿಸುತ್ತಿದ್ದಾರೆ. 158 00:17:33,791 --> 00:17:35,875 ಅಲ್ಲಿ. ಅವಳು ತಾರಸಿಗೆ ಹೋಗುತ್ತಿರಬೇಕು. 159 00:17:51,958 --> 00:17:54,750 ನಿಮ್ಮ ಬಳಿ ಚಿನ್ನದ ಬ್ಯಾಡ್ಜ್ ಇಲ್ಲದಿದ್ದರೆ, ಈ ಮೆಟ್ಟಿಲುಗಳ ಮೇಲೆ ಹೋಗುವಂತಿಲ್ಲ. 160 00:17:55,333 --> 00:17:56,541 ಪರವಾಗಿಲ್ಲ. 161 00:17:57,750 --> 00:17:59,000 ನಾವು ಅಮೆರಿಕನ್ನರು. 162 00:18:00,875 --> 00:18:01,875 ನಾವು ಸಿಐಎಯವರು. 163 00:18:03,916 --> 00:18:06,375 ನೀವು ಯಾರಾಗಿದ್ದರೂ ನನಗೇನೂ ಆಗಬೇಕಿಲ್ಲ. 164 00:18:06,458 --> 00:18:08,708 ಬ್ಯಾಡ್ಜ್‌ಗಳು ಇರಬೇಕು, ಇಲ್ಲದಿದ್ದರೆ ತೊಲಗಿ. 165 00:18:08,791 --> 00:18:10,375 ಹೌದಾ? 166 00:18:11,041 --> 00:18:14,541 ಹಾಂ. ಸರಿ, ಧನ್ಯವಾದ. ತುಂಬಾ ಧನ್ಯವಾದಗಳು. 167 00:18:15,333 --> 00:18:17,375 (ಫ್ರೆಂಚ್) ಯಾವಾಗಲೂ "ಬೀಜಕ್ಕೆ ಒದೆಯುವುದೇ" ಪರಿಹಾರವಲ್ಲ. 168 00:18:19,041 --> 00:18:20,541 ಹಾಂ, ಆದರೂ, ಕೆಲವೊಮ್ಮೆ ಅದೇ ಪರಿಹಾರ. 169 00:18:41,541 --> 00:18:43,875 ಲಕ್ಷಾಂತರ ಮೆಟ್ಟಿಲುಗಳಿರಬೇಕು. 170 00:19:42,958 --> 00:19:44,458 ಹೋಗು! ಆಬ್ಬಿಯನ್ನು ಕರೆತಾ! 171 00:20:10,125 --> 00:20:10,958 ನಿನಗೇನೂ ಆಗಿಲ್ಲ ತಾನೆ? 172 00:20:11,041 --> 00:20:12,333 - ಹಾಂ. - ವಾಹ್… 173 00:20:14,666 --> 00:20:15,625 ಸರಿ. 174 00:20:18,166 --> 00:20:20,375 ಏನು ನಡೆಯುತ್ತಿದೆ ಅಂತ ಇಲ್ಲಿ? 175 00:20:35,625 --> 00:20:39,166 ಈ ಶೃಂಗಸಭೆಗಳು ಎಷ್ಟು ಪ್ರಮುಖ ಎಂದು ನಾವು ಮತ್ತೆ, ಮತ್ತೆ ಹೇಳಬೇಕಿಲ್ಲ. 176 00:20:39,916 --> 00:20:42,291 ನೂರಾರು ರಾಜತಾಂತ್ರಿಕರು ಮತ್ತು ಮಾಧ್ಯಮದವರು 177 00:20:42,375 --> 00:20:46,750 ಹೊರಗಡೆ ಸೇರಿದ್ದಾರೆ, ರಷ್ಯಾದ ಐತಿಹಾಸಿಕ ಹಿಂದಿರುಗುವಿಕೆಯನ್ನು ಕಣ್ತುಂಬಿಕೊಳ್ಳಲು. 178 00:20:46,833 --> 00:20:49,333 {\an8}ಸ್ಕಾಟಿಷ್ ಪರ್ವತಗಳಲ್ಲಿನ ಐತಿಹಾಸಿಕ ಅರಮನೆಯಲ್ಲಿ ಜಿ8 ಶೃಂಗಸಭೆ ಆರಂಭ 179 00:21:03,333 --> 00:21:04,583 ಸ್ಪರ್ಧೆಯಿಂದ ದೂರವಿದ್ದು, 180 00:21:04,666 --> 00:21:08,291 {\an8}ಅದೆಷ್ಟೋ ದೃಢವಾದ ಆರ್ಥಿಕ ಮತ್ತು ರಾಜಕೀಯ ಒಪ್ಪಂದಗಳನ್ನು 181 00:21:08,375 --> 00:21:11,500 {\an8}ಈ ಸಮ್ಮೇಳನಗಳಲ್ಲಿ ಐತಿಹಾಸಿಕವಾಗಿ ಸಾಧಿಸಲಾಗುತ್ತದೆ. 182 00:22:09,958 --> 00:22:10,791 ಹೇ. 183 00:22:15,500 --> 00:22:17,750 ಹಾಗಾಗಿ ಈ ಶೃಂಗಸಭೆಯಲ್ಲಿ ಅವರು ಪಾಲ್ಗೊಳ್ಳುವುದರಿಂದ… 184 00:24:12,458 --> 00:24:15,583 ಪ್ರೆಸಿಡೆಂಟ್‌ರವರ ಕಾರಿನ ಆಗಮನವನ್ನು ನೋಡುತ್ತಿದ್ದೇವೆ. 185 00:24:15,666 --> 00:24:17,625 ರಷ್ಯಾದ ಬಾವುಟಗಳು ಗಾಳಿಗೆ ಹಾರಾಡುತ್ತಿವೆ… 186 00:24:54,916 --> 00:24:55,916 ಸರಿ. 187 00:26:05,625 --> 00:26:07,875 ಅಧ್ಯಕ್ಷರೇ, ಸ್ಕಾಟ್ಲೆಂಡಿಗೆ ನಿಮಗೆ ಸ್ವಾಗತ. 188 00:26:07,958 --> 00:26:10,208 ನಿಮ್ಮನ್ನು ಮತ್ತೆ ನೋಡಿ ಖುಷಿಯಾಯಿತು, ಪ್ರಧಾನ ಮಂತ್ರಿಗಳೇ. 189 00:26:28,333 --> 00:26:29,166 ನನ್ನನ್ನು ಕೊಲ್ಲುವೆಯಾ? 190 00:26:29,250 --> 00:26:30,416 ಇದು ನೀನಲ್ಲ. 191 00:26:30,500 --> 00:26:31,916 ನಿನ್ನ ಆಪ್ತ ಗೆಳತಿಯನ್ನು ಕೊಲ್ಲುತ್ತೀಯಾ? 192 00:26:32,666 --> 00:26:33,541 ನನಗೆ ಅರ್ಥವಾಗುತ್ತೆ. 193 00:26:33,625 --> 00:26:36,375 ನೀನು ಪ್ರೀತಿಸುವವನ ಹೆಂಡತಿಯನ್ನು ಕೊಲ್ಲಬೇಕೆಂದಿರುವೆ, ಅಲ್ವಾ? 194 00:26:36,458 --> 00:26:37,916 ಆಮೇಲೆ ನನ್ನ ಮಗಳಿಗೆ ಏನಂತ ಹೇಳುವೆ? 195 00:26:38,000 --> 00:26:39,875 ಅವಳ ಕಣ್ಣಲ್ಲಿ ನೋಡುತ್ತಾ 196 00:26:39,958 --> 00:26:41,958 ಅವಳ ತಾಯಿಯನ್ನು ಕೊಂದೆ ಎಂದು ಹೇಳುವೆಯಾ? 197 00:26:42,041 --> 00:26:43,083 ಅದನ್ನು ಮಾಡಲು ತಯಾರಿದ್ದೀಯಾ? 198 00:26:45,583 --> 00:26:47,250 ಮತ್ತೆ ನಿನ್ನ ಮಗಳ ಬಗ್ಗೆ ಏನು? 199 00:26:48,791 --> 00:26:50,375 ಆಶಾಗೆ ಏನಂತ ಹೇಳುತ್ತೀಯ? 200 00:27:09,125 --> 00:27:13,250 ಪರವಾಗಿಲ್ಲವೇ, ನಿನ್ನ ಸಿಬ್ಬಂದಿಯವರು ತುಂಬಾ ನಿಯತ್ತಿನವರು. 201 00:27:15,500 --> 00:27:16,833 ನನ್ನಿಂದ ಇದನ್ನು ಮಾಡಿಸಬೇಡ. 202 00:27:17,958 --> 00:27:19,166 ಸುಮ್ಮನೆ ನನ್ನ ಜೊತೆ ಬಾ. 203 00:27:19,250 --> 00:27:20,250 ನಾಡಿಯಾ… 204 00:27:20,916 --> 00:27:22,833 ಏನು ನಡೆಯುತ್ತಿದೆ? ಏನಾಗುತ್ತಿದೆ? 205 00:27:23,666 --> 00:27:24,666 ಏನಾಗುತ್ತಿದೆ? 206 00:27:25,166 --> 00:27:26,625 ನೀನೀಗ ನನಗೆ ಗುಂಡು ಹೊಡೆದೆಯಾ? 207 00:27:27,333 --> 00:27:28,333 ದಯವಿಟ್ಟು ನನಗೆ ಸಹಾಯ ಮಾಡು. 208 00:27:30,500 --> 00:27:31,583 ಇದನ್ನು ಮಾಡಬೇಡ. 209 00:27:32,250 --> 00:27:33,291 ದಯವಿಟ್ಟು ಸಹಾಯ ಮಾಡು. 210 00:27:33,375 --> 00:27:35,708 - ದಯವಿಟ್ಟು, ಇದನ್ನು ಮಾಡಬೇಡ. - ಕಾಪಾಡು… 211 00:27:36,583 --> 00:27:38,250 ಈಗ ಇದನ್ನು ತಡೆಯಲು ಆಗಲ್ಲ. 212 00:27:38,333 --> 00:27:39,625 ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ. 213 00:27:40,375 --> 00:27:41,625 ಹತ್ಯೆಯು ನಡೆಯಲಿದೆ. 214 00:27:42,208 --> 00:27:43,208 ನನಗೆ ಗೊತ್ತು. 215 00:27:54,500 --> 00:27:55,500 ನನಗದು ನಡೆಯಬೇಕು. 216 00:28:26,000 --> 00:28:27,583 {\an8}ಸ್ಪೋಟಗೊಂಡ ರಷ್ಯಾದ ಅಧ್ಯಕ್ಷೀಯ ವಾಹನ 217 00:28:59,250 --> 00:29:01,125 ಫ್ರಾಂಕ್ ಶಾರ್ಪ್ ಕೆಲಸ ಆಯಿತು. 218 00:29:02,083 --> 00:29:03,000 ಕೆಲಸ ಆಯಿತು. 219 00:29:03,791 --> 00:29:06,750 ನೋಡು, ಆರೋನೋವ್‌ನನ್ನು ಕೊಲ್ಲಬೇಕೆಂದುಕೊಂಡಿದ್ದು ನೀನಷ್ಟೇ ಅಲ್ಲ. 220 00:29:06,833 --> 00:29:12,125 ಪ್ರಧಾನ ಮಂತ್ರಿಗೆ ನಾನು ನಿರಾಕರಿಸಲಾಗದ ಹಣಕಾಸಿನ ಆಮಿಷವೊಂದನ್ನು ಒಡ್ಡಿದ್ದೇನೆ. 221 00:29:13,083 --> 00:29:15,000 ನೀನು ನನ್ನನ್ನು ಬದುಕಲು ಬಿಡಬೇಕು. 222 00:29:15,750 --> 00:29:17,000 ನಾನು ನಿನಗೆ ನೆರವಾಗಲು ಬಿಡು. 223 00:29:17,083 --> 00:29:18,583 ನೀನು ಮೇಸನ್‌ ಕೇನ್‌ನನ್ನು ಕೊಂದೆ. 224 00:29:23,000 --> 00:29:24,958 ನಾನು ಪ್ರೀತಿಸುವ ಯಾರನ್ನಾದರೂ ನೀನು ಹಿಂಸಿಸಿದರೆ… 225 00:29:41,083 --> 00:29:42,083 ‌ನಾಡಿಯಾ… 226 00:30:37,416 --> 00:30:40,500 ನೀವು ಈಗಷ್ಟೇ ವೀಕ್ಷಿಸುತ್ತಿದ್ದೀರಿ ಎಂದರೆ, ನಾವು ನೇರಪ್ರಸಾರ ಮಾಡುತ್ತಿದ್ದೇವೆ… 227 00:30:40,583 --> 00:30:42,041 - ಬರ್ನಾರ್ಡ್‌? - …ಕೇವಲ ಒಂದು ಗಂಟೆಯ ಹಿಂದೆ, 228 00:30:42,125 --> 00:30:44,166 ಜಿ8 ಶೃಂಗಸಭೆಯಲ್ಲಿ ನಡೆದ ಕಾರು ಬಾಂಬ್ ಸ್ಪೋಟ… 229 00:30:44,250 --> 00:30:45,583 ಏನಾಯಿತು? 230 00:30:46,291 --> 00:30:49,208 ಅದು ಅವಳು ಮಾಡಿದ್ದಲ್ಲ. ಅವಳನ್ನು ತಡೆದೆವು. ಆಬ್ಬಿ ಮಾಡಿದ್ದಲ್ಲ. 231 00:30:49,916 --> 00:30:50,916 ನನಗೆ ಗೊತ್ತು. 232 00:30:51,708 --> 00:30:52,708 ಅದನ್ನು ಮಾಡಿದ್ದು ನಾವು. 233 00:30:53,958 --> 00:30:55,208 ಆರೋನೋವ್‌ನನ್ನು ಹತ್ಯೆ ಮಾಡಿದೆಯಾ? 234 00:30:55,291 --> 00:30:56,833 ಏನು ಮಾಡಿದೆ ನೀನು? 235 00:30:56,916 --> 00:30:58,041 ಇದೆಲ್ಲವೂ ಯೋಜನೆಯ ಭಾಗವಾಗಿತ್ತು. 236 00:30:58,125 --> 00:31:00,541 ದುರದೃಷ್ಟವಶಾತ್, ಈ ಯೋಜನೆಯ ಬಗ್ಗೆ ನಿಮಗೆ ಹೇಳಲಾಗಲಿಲ್ಲ. 237 00:31:00,625 --> 00:31:02,000 ಅಂದರೆ ಆತ ನಿಮಗೆ ಹೇಳಲಾಗಲಿಲ್ಲವಂತೆ. 238 00:31:02,083 --> 00:31:04,541 ಅಂದರೆ, ಏನು, ನಿನಗೆ ಹೇಳಿದ-- ನೀನು ಅವನನ್ನು ನಂಬಿದೆಯಾ? 239 00:31:04,625 --> 00:31:07,583 ಅವನು ರಾಜಿಯಾಗಲು ಅವನಿಗೆ ಯಾವುದೇ ಭಾವನಾತ್ಮಕ ಬಂಧವಿಲ್ಲ. 240 00:31:07,666 --> 00:31:09,041 ಹಾಗಾಗಿ ನಾನು ಅವನನ್ನು ನಂಬಿದೆ. 241 00:31:09,833 --> 00:31:11,083 ನಮಗೆ ಉಪಗ್ರಹಗಳು ಬೇಕಿದ್ದವು, 242 00:31:11,166 --> 00:31:14,208 ಮತ್ತು ಅದನ್ನು ಪಡೆಯುವ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾರನ್ನೂ ನಾನು ನಂಬಲಿಲ್ಲ. 243 00:31:14,291 --> 00:31:15,708 ಆಬ್ಬಿಯನ್ನು ನೀನು ಕೊಲ್ಲಿಸಿದೆ. 244 00:31:16,666 --> 00:31:18,583 ಮೇಸನ್‌‌ನನ್ನು ನೀನು ಕೊಲ್ಲಿಸಿದೆ. 245 00:31:18,666 --> 00:31:22,000 ನೀನು ಯಾರನ್ನೂ ತ್ಯಾಗ ಮಾಡಲು ಸಿದ್ಧವಿರಲಿಲ್ಲ. 246 00:31:23,125 --> 00:31:24,541 ನಿನಗೆ ಆ ಅವಕಾಶ ಸಿಕ್ಕಾಗಲೂ ಸಹ. 247 00:31:24,625 --> 00:31:26,041 ನಿನ್ನ ಪಾಲಿಗೆ ಅವರು ಹಾಗೆ ಇದ್ದರೇ? 248 00:31:26,625 --> 00:31:28,625 ಬಲಿ ಕೊಡಲು ಬಲಿಪಶುಗಳೇನು ಅವರು? 249 00:31:28,708 --> 00:31:30,791 - ಇಲ್ಲ. ಇಲ್ಲ. - ಹಾಗಾದರೆ ಏನು? 250 00:31:33,000 --> 00:31:37,125 ನೋಡಿ, ನಾವಿಂದು ಮಾಡಿದ್ದು ನಮ್ಮೆಲ್ಲರಿಗಿಂತ ದೊಡ್ಡದು. 251 00:31:37,208 --> 00:31:38,791 ಇದು ಹುಚ್ಚುತನ! 252 00:31:38,875 --> 00:31:40,541 ಆರೋನೋವ್ ಸತ್ತಿರುವುದರಿಂದ, 253 00:31:40,625 --> 00:31:42,750 ಪ್ರಧಾನ ಮಂತ್ರಿ ಅಧಿಕಾರ ವಹಿಸಿಕೊಳ್ಳುತ್ತಾರೆ, 254 00:31:42,833 --> 00:31:45,750 ಮತ್ತು ಇದುವರೆಗೂ ನಿರ್ಮಿಸಲಾದ ಅತ್ಯಂತ ಅಪಾಯಕಾರಿ ಉಪಗ್ರಹಗಳನ್ನು ನಾವು 255 00:31:45,833 --> 00:31:47,166 ಆ ಕುಟುಂಬಗಳಿಂದ ದೂರ ಇರಿಸುತ್ತೇವೆ. 256 00:31:47,250 --> 00:31:49,541 ಬದಲಾಗಿ ನಾವು ಅವುಗಳನ್ನು ರಷ್ಯಾದವರ ಕೈಗಳಲ್ಲಿ ಇರಿಸಿದ್ದೇವೆ. 257 00:31:49,625 --> 00:31:52,500 ಪ್ರಧಾನ ಮಂತ್ರಿಯೊಂದಿಗೆ ನಾವು ಮಾತುಕತೆ ನಡೆಸಬಹುದು. 258 00:31:52,583 --> 00:31:55,291 ಆತ ಸೂಕ್ತ ಬೆಲೆಗೆ ಉಪಗ್ರಹಗಳನ್ನು ಮಾರುತ್ತಾರೆ. 259 00:31:55,375 --> 00:31:56,708 - ಯಾರಿಗೆ? - ನಮಗೆ. 260 00:31:58,458 --> 00:32:00,708 ‌ಮ್ಯಾಂಟಿಕೋರ್‌ನ ಸಮಾಧಿ ಕಟ್ಟೋಣ. 261 00:32:01,333 --> 00:32:02,875 ನೀನೊಬ್ಬ ಕಳ್ಳನರಿ. 262 00:32:02,958 --> 00:32:04,458 ಆದರೆ ಇದಕ್ಕೆ ವಿರುದ್ಧವಾಗಿ, 263 00:32:04,541 --> 00:32:07,458 ಆ‌ ಮ್ಯಾಂಟಿಕೋರ್ ಬೇವರ್ಸಿಗಳನ್ನು ಕೊಲ್ಲುವ ಮಾತುಗಳಿಗೆ… 264 00:32:08,458 --> 00:32:10,291 ಅದೇನೋ ಒಂಥರಾ ಮಾಧುರ್ಯ ಇದೆ. 265 00:32:10,375 --> 00:32:11,791 ಅದು ಆಬ್ಬಿ ಅಂತ ನಿಂಗೊತ್ತಿತ್ತು. 266 00:32:12,958 --> 00:32:17,750 ಆಬ್ಬಿ ನಮ್ಮ ಬಳಿ ವಾಪಸ್ ಬಂದಾಗ, ಅವಳೇ ಕೊಲೆಗಾತಿ ಅಂತ ನಿನಗೆ ಗೊತ್ತಿತ್ತು, ಅಲ್ವಾ? 267 00:32:34,000 --> 00:32:35,208 ನಮಗೆ ಅವಳ ಅಗತ್ಯವಿಲ್ಲ. 268 00:33:19,083 --> 00:33:20,083 ಅವಳನ್ನು ಕೊಂದಿರಾ? 269 00:33:20,958 --> 00:33:22,291 ಜೋಯಾನಾಳನ್ನು? 270 00:33:22,375 --> 00:33:23,875 ಅದು ಭೀಕರವಾಗಿತ್ತಾ? 271 00:33:28,083 --> 00:33:28,916 ಮತ್ತು ನೀನು? 272 00:33:31,208 --> 00:33:32,208 ಮೂವತ್ತೆರಡು ಶತಕೋಟಿ. 273 00:33:38,625 --> 00:33:40,291 ಜೋಯಾನಾ ಮಾಲ್ವರ್ನ್ 274 00:33:42,083 --> 00:33:44,541 ಏನಾಗಿತ್ತು ಅದು, ಜೋಯಾನಾ? 275 00:33:44,625 --> 00:33:46,416 ಜೋಯಾನಾ ಬದಲಿಗೆ ನಾನು ಬರುತ್ತಿದ್ದೇನೆ. 276 00:33:46,500 --> 00:33:47,541 ಅವಳು ತಪ್ಪು ಮಾಡಿದಳು, 277 00:33:47,625 --> 00:33:50,541 ಹಾಗಾಗಿ ನಿಮಗೆ ಸ್ಥಿರವಾದ ಕೈಗಳ ನೆರವು ಬೇಕೆಂದುಕೊಂಡೆ. 278 00:33:50,625 --> 00:33:53,041 ಅವಳು ನಿಮಗೆ 12 ಶತಕೋಟಿ ಡಾಲರ್ ಆಮಿಷ ಒಡ್ಡಿದ್ದಳು. 279 00:33:53,791 --> 00:33:56,250 ನಾನು ನಿಮಗೆ 24 ಶತಕೋಟಿ ಡಾಲರ್ ಕೊಡುತ್ತೇನೆ. 280 00:33:57,166 --> 00:33:58,791 ಒಪ್ಪಿಗೆ ಇದೆಯಾ ಇಲ್ವಾ? 281 00:34:12,833 --> 00:34:13,958 ದಯವಿಟ್ಟು ನನ್ನನ್ನು ಕ್ಷಮಿಸಿ. 282 00:34:33,958 --> 00:34:35,291 ಪ್ರವೇಶ ನಿರ್ಬಂಧಿಸಿದೆ ಪ್ರವೇಶ ಲಭಿಸಿದೆ 283 00:34:35,583 --> 00:34:38,375 ಉಪಗ್ರಹಗಳ ನಿಯಂತ್ರಣ ಪಡೆಯಲಾಗುತ್ತಿದೆ 284 00:34:39,291 --> 00:34:40,291 ಒಳಹೊಕ್ಕಿದ್ದೇನೆ. 285 00:34:42,791 --> 00:34:43,791 ಮಾಡು. 286 00:34:49,458 --> 00:34:51,791 ನಿಷ್ಕ್ರಿಯತೆ ಆರಂಭಿಸಲಾಗಿದೆ 287 00:35:34,541 --> 00:35:36,291 ದೇವರೇ, ಬರ್ನಾರ್ಡ್‌. 288 00:35:36,375 --> 00:35:39,416 ಅಷ್ಟೆಲ್ಲಾ ಉಪಗ್ರಹಗಳನ್ನು ಸಿಡಿಸಲು ಖರೀದಿಸಿದೆಯಾ? 289 00:35:40,000 --> 00:35:43,708 ಆಕಾಶದಲ್ಲಿ ಭಸ್ಮವಾದ ಶತಕೋಟಿ ಹಣ. 290 00:35:44,375 --> 00:35:46,375 ಅಂಥ ಶಕ್ತಿ ಯಾರ ಬಳಿಯೂ ಇರಬಾರದು. 291 00:35:47,958 --> 00:35:48,958 ಯಾರ ಬಳಿಯೂ ಸಹ. 292 00:36:02,333 --> 00:36:06,208 ಎರಡು ತಿಂಗಳ ನಂತರ 293 00:36:08,791 --> 00:36:13,958 ಒರೆಗಾನ್ 294 00:36:19,333 --> 00:36:22,416 ಕೈಲ್ ಜಾನ್ ಕಾನ್ರೋಯ್ 295 00:36:22,500 --> 00:36:25,583 ಪ್ರೀತಿಯ ತಂದೆ ಮತ್ತು ಪತಿ 296 00:36:29,208 --> 00:36:31,583 ಆಬಿಗೈಲ್ ಮೇ ಕಾನ್ರಾಯ್ 297 00:36:31,666 --> 00:36:34,041 ಪ್ರೀತಿಯ ತಾಯಿ ಮತ್ತು ಪತ್ನಿ 298 00:37:01,416 --> 00:37:03,000 ಅನಿಸಿದ್ದಕ್ಕಿಂತ ಹೆಚ್ಚಿನ ಸಮಯ ತಗೊಂಡೆ ನೀನು. 299 00:37:04,416 --> 00:37:06,458 ನಾವು ನಮ್ಮ ಚರ್ಚೆ ಮುಗಿಸಿರಲಿಲ್ಲ. 300 00:37:06,541 --> 00:37:07,833 ನಮಗಾಗಿ ಅದನ್ನು ನಾನು ಮುಗಿಸಿದೆ. 301 00:37:09,041 --> 00:37:10,250 ನೀನು ಯಾಕೆ ಬಂದೆ? 302 00:37:14,208 --> 00:37:15,791 ನನ್ನ ಪ್ರಸ್ತಾಪದ ಬಗ್ಗೆ ಯೋಚಿಸುತ್ತಿದ್ದೀಯಾ? 303 00:37:17,625 --> 00:37:19,833 ನೀನು ನನ್ನನ್ನು ನೋಡುವುದು ಇದೇ ಕೊನೆಯ ಬಾರಿ. 304 00:37:22,625 --> 00:37:24,208 ನಾವು ಮಾಡುವುದೆಲ್ಲವೂ ರಕ್ಷಣೆಗಾಗಿ. 305 00:37:24,291 --> 00:37:25,375 ಯಾರ ರಕ್ಷಣೆಗಾಗಿ? 306 00:37:26,125 --> 00:37:29,666 ನೀನು ಎಲ್ಲರ ಕುಟುಂಬಗಳನ್ನು ನಾಶ ಮಾಡಿದರೆ, ಅಲ್ಲಿ ನಿನ್ನ ಕುಟುಂಬ-- 307 00:37:29,750 --> 00:37:31,083 ಹಾಂ, ಅಡಗುತಾಣದಲ್ಲಿದ್ದಾರೆ. 308 00:37:31,166 --> 00:37:32,958 ನನ್ನ ಮಗಳು ಹೊರಗೆ ಕಾಲಿಟ್ಟಿಲ್ಲ, 309 00:37:33,041 --> 00:37:34,583 ಯಾಕೆಂದರೆ ಅವಳ ತಲೆಗೆ ಗುರಿ ಇಟ್ಟಿದ್ದಾರೆ. 310 00:37:34,666 --> 00:37:36,833 ಮತ್ತು ನಾನು ಬಹುಶಃ ಅವಳನ್ನು ನೋಡದೆಯೇ ಹೋಗಬಹುದು, 311 00:37:37,666 --> 00:37:41,833 ಆಗ ನಾನು ಮಿಕ್ಕ ಎಲ್ಲರ ಮಕ್ಕಳು ಸುರಕ್ಷಿತವಾಗಿದ್ದಾರೆಂದು ಖಚಿತಪಡಿಸಿಕೊಳ್ಳಬಹುದು. 312 00:37:43,375 --> 00:37:45,500 ನೀನು ನಿವೃತ್ತಿ ಹೊಂದುವ ಹಾಗಿಲ್ಲ. 313 00:37:45,583 --> 00:37:47,208 ನೀನು ನಮ್ಮೊಂದಿಗೆ ಕೆಲಸ ಮಾಡಬೇಕು. 314 00:37:49,583 --> 00:37:52,041 ದಯವಿಟ್ಟು. ನಿನ್ನ ಮಗಳಿಗಾಗಿ. 315 00:37:52,125 --> 00:37:54,208 ನನ್ನ ಮಗಳ ಸಲುವಾಗಿಯೇ ನಿನ್ನ ಜೊತೆ ನಾನು ಕೆಲಸ ಮಾಡುವುದಿಲ್ಲ. 316 00:37:55,166 --> 00:37:58,416 ನಿನ್ನ ಜೊತೆ ಇದರಲ್ಲಿ ನಾನು ಇದ್ದರೆ, ಅವಳು ಕೂಡ ಇನ್ನೊಂದು ಬಲಿಪಶುವಾಗುತ್ತಾಳಷ್ಟೇ. 317 00:37:58,500 --> 00:38:00,833 ನನ್ನ ತಾಯಿ ನನಗೆ ಮಾಡಿದಂತೆ ನಾನು ಅವಳಿಗೆ ಮಾಡುವುದಿಲ್ಲ. 318 00:38:02,500 --> 00:38:04,458 ಅವರು ನಿನ್ನನ್ನು ಪತ್ತೆಹಚ್ಚುತ್ತಾರೆ, ಗೊತ್ತಾ? 319 00:38:05,291 --> 00:38:06,625 ಅವರು ನಿನ್ನನ್ನು ಬೇಟೆಯಾಡುತ್ತಾರೆ. 320 00:38:06,708 --> 00:38:10,541 ‌ಎಲ್ಲಾ ಮ್ಯಾಂಟಿಕೋರ್ ಕುಟುಂಬಗಳು, ಸಿಐಎ, ಎಲ್ಲರೂ. 321 00:38:14,250 --> 00:38:15,250 ಮಾಡಲಿ. 322 00:38:15,833 --> 00:38:18,375 ನಾನು ಬೆಳೆದಿದ್ದೇ ಗುಪ್ತ ವಾತಾವರಣದಲ್ಲಿ. ನನಗೇನೂ ಆಗಲ್ಲ ಅನಿಸುತ್ತೆ. 323 00:38:20,333 --> 00:38:21,833 ಇಲ್ಲಿಗೆ ಯಾಕೆ ಬಂದೆ, ನಾಡಿಯಾ? 324 00:38:24,208 --> 00:38:25,416 ಇದು ವಿದಾಯದ ಉಡುಗೊರೆ. 325 00:38:26,166 --> 00:38:27,958 ಆಶಾಳನ್ನು ನಾನು ಅಪಾಯಕ್ಕೆ ದೂಡಲಾರೆ, 326 00:38:28,041 --> 00:38:31,166 ಆದರೆ ಮ್ಯಾಂಟಿಕೋರ್ ಕುಟುಂಬಗಳನ್ನು ಕೊಲ್ಲಲು ನಿನಗೆ ನೆರವಾಗಬಲ್ಲ ಇತರರು ಸಹ ಇದ್ದಾರೆ. 327 00:38:31,250 --> 00:38:33,750 ಸಿಟಡೆಲ್‌ನ ಪತನದ ನಂತರ ಬದುಕುಳಿದವರು ನಾವಷ್ಟೇ ಅಲ್ಲ. 328 00:38:35,125 --> 00:38:36,125 ಅವರನ್ನು ಹುಡುಕು. 329 00:38:37,583 --> 00:38:39,125 ಒಮ್ಮೆ ಒಬ್ಬ ವ್ಯಕ್ತಿ ನನಗೆ ಹೇಳಿದ್ದ, 330 00:38:39,208 --> 00:38:41,041 ಗೂಢಚಾರರಿಗೆ ನೂರು ಮುಖಗಳಿರಬಹುದು, 331 00:38:41,916 --> 00:38:43,875 ನೂರು ಗುರುತುಗಳಿರಬಹುದು, ನೂರು ಹೆಸರುಗಳಿರಬಹುದು ಎಂದು. 332 00:38:44,625 --> 00:38:46,125 ಆದರೆ ನಮಗಿರುವುದು ಒಂದೇ ಆತ್ಮ. 333 00:38:49,750 --> 00:38:51,166 ಜಾಗ್ರತೆಯಾಗಿರು, ಬರ್ನಾರ್ಡ್‌. 334 00:39:48,375 --> 00:39:49,916 ನಾವು ಭೇಟಿಯಾಗಬೇಕು ಅನಿಸಿತು. 335 00:42:13,416 --> 00:42:15,416 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 336 00:42:15,500 --> 00:42:17,500 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ