1 00:01:35,400 --> 00:01:37,440 ಹೇ, ಮಾದಕ ವಸ್ತು ಸೇವಿಸಿದ್ದೀಯಾ, ಬೇವರ್ಸಿ? 2 00:01:37,520 --> 00:01:39,240 ಕೆಲಸ ಇಟ್ಕೋಬೇಕಾ ಬೇಡವಾ ನಿನಗೆ? 3 00:02:38,120 --> 00:02:40,120 ಪಾತಾಳ್ ಲೋಕ್ 4 00:02:40,160 --> 00:02:44,960 ದಿ ಗುಡ್ ಸಮರಿಟನ್ 5 00:02:46,040 --> 00:02:48,920 ಕ್ರಿಸ್ಮಸ್ ಶುಭಾಶಯಗಳು, ಈ ವಿಶೇಷ ಸುದ್ದಿ ಪ್ರಸಾರಕ್ಕೆ ಸ್ವಾಗತ. 6 00:02:49,400 --> 00:02:53,200 ನಾಗಾ ಬಿಸಿನೆಸ್ ಸಮ್ಮಿಟ್ ಮಾತುಕತೆ ಡೆಲ್ಲಿಯಲ್ಲಿ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದೆ, 7 00:02:53,760 --> 00:02:56,040 ನಾಗ ನಾಯಕರು ಸಹಿ ಮಾಡಿದ ಈ ಐತಿಹಾಸಿಕ ಒಪ್ಪಂದವು 8 00:02:56,120 --> 00:02:57,960 ಈ ರಾಜ್ಯಕ್ಕೆ 20,000 ಕೋಟಿ ರೂಪಾಯಿಗಳಷ್ಟು 9 00:02:58,040 --> 00:03:01,000 ಹೂಡಿಕೆಗೆ ದಾರಿ ಮಾಡಿಕೊಡಲಿದೆ. 10 00:03:01,080 --> 00:03:04,280 ದಿಮಾಪುರ್‌ಗೆ ವಿಶೇಷ ವಿಮಾನ ಏರುವ ಮೊದಲು, ನಾಗ ನಾಯಕರು ಈ ನಿಟ್ಟಿನಲ್ಲಿ 11 00:03:04,360 --> 00:03:06,640 ಸಂಕ್ಷಿಪ್ತ ಜಂಟಿ ಹೇಳಿಕೆ ಹೊರಡಿಸಿದ್ದಾರೆ, 12 00:03:06,720 --> 00:03:09,920 ಅಲ್ಲಿ ಅವರನ್ನು ಸಾವಿರಾರು ಬೆಂಬಲಿಗರು ಸ್ವಾಗತಿಸಲಿದ್ದಾರೆ. 13 00:03:10,000 --> 00:03:12,000 ಇದರ ನಂತರ ಪತ್ರಿಕಾಗೋಷ್ಠಿ ಇರಲಿದ್ದು... 14 00:03:30,920 --> 00:03:32,640 ಚಿರಾಯುವಾಗಲಿ, ನಾಗಾಲ್ಯಾಂಡ್! 15 00:03:32,720 --> 00:03:35,960 ಚಿರಾಯುವಾಗಲಿ, ನಾಗಾಲ್ಯಾಂಡ್! 16 00:03:36,040 --> 00:03:38,000 ಓ, ಹಾಯ್, ಸರ್! ಕ್ರಿಸ್ಮಸ್ ಶುಭಾಶಯಗಳು! 17 00:03:38,600 --> 00:03:39,680 ಬಲೂನ್ ಬೇಕಾ? 18 00:03:39,760 --> 00:03:41,640 ಕಿರಿಯರಾಗಲಿ ಹಿರಿಯರಾಗಲಿ, ಬಲೂನುಗಳು ಬೇಕು. 19 00:03:42,240 --> 00:03:44,960 -ನಿಮಗೆ ಕೇವಲ 100 ರೂಪಾಯಿ. -ನೀವು ಕರೆ ಮಾಡಿರುವ ಸಂಖ್ಯೆ-- 20 00:03:45,680 --> 00:03:48,200 -ನನಗೆ ಬೇಡ. -ಸರಿ, ಸರ್, ನಿಮಗೆ ಇದು ಉಚಿತ. 21 00:03:49,320 --> 00:03:51,160 -ಯೇಸು ನಿಮ್ಮನ್ನು ಪ್ರೀತಿಸುವನು. -ಬೇಡ. 22 00:03:56,000 --> 00:03:56,840 ಕೇವಲ ಹತ್ತು-- 23 00:03:59,760 --> 00:04:01,880 ಸರ್, ಏನಾಯ್ತು? 24 00:04:02,880 --> 00:04:04,000 ಸರ್... 25 00:04:06,320 --> 00:04:09,200 ಹೊಸ ಬಲೂನ್ ಕೊಡುವೆ. ಯಾಕೆಂದರೆ ಯೇಸು ನಿಮ್ಮನ್ನು-- 26 00:04:21,440 --> 00:04:23,240 ಸ್ವೀಟ್ ಕ್ರಿಸ್ಮಸ್ 27 00:04:28,520 --> 00:04:30,480 ಹೇ, ವಾಪಸ್ ಬಾರೋ! 28 00:04:30,560 --> 00:04:31,640 ನನ್ನ ಕಟ್ಟುಬಿಚ್ಚು! 29 00:04:31,720 --> 00:04:32,720 ಪಕ್ಕಕ್ಕೆ ಸರಿ! 30 00:04:38,480 --> 00:04:40,560 ಪೊಲೀಸರಿಗೆ ಕರೆ ಮಾಡಿ. ಪೊಲೀಸರಿಗೆ ಕರೆ ಮಾಡಿ! 31 00:04:58,640 --> 00:05:00,440 ಹಿಂಬಾಗಿಲು? 32 00:05:01,000 --> 00:05:02,800 ಆ ಕಡೆ, ಸರ್. ಆ ಕಡೆ. 33 00:05:02,880 --> 00:05:03,920 -ಬಲಗಡೆ? -ಹೌದು. 34 00:05:04,600 --> 00:05:05,920 ಕೀ? 35 00:05:06,000 --> 00:05:07,640 ಬಾಗಿಲಿನ ಬೀಗದ ಕೈ? ಬೇಗ! 36 00:05:08,800 --> 00:05:09,800 ಬೇಗ! 37 00:10:05,520 --> 00:10:06,720 ಜೈ ಹಿಂದ್, ಸರ್. 38 00:10:06,760 --> 00:10:08,960 ಎಸ್ಐ ಇಮ್ರಾನ್ ಅನ್ಸಾರಿ ಕರ್ತವ್ಯಕ್ಕೆ. 39 00:10:34,040 --> 00:10:35,480 ಆಂಬ್ಯುಲೆನ್ಸ್ 40 00:10:35,520 --> 00:10:38,040 ಡೇನಿಯಲ್‍ನ ಮನೆಯಲ್ಲಿ ಮೇಡಂನವರ ಶವ ಸಿಕ್ಕಿತು. 41 00:10:46,400 --> 00:10:48,160 ನನ್ನ ತಂದೆ ಕೂಡ ಪೋಲೀಸ್ ಆಗಿದ್ದರು. 42 00:10:49,080 --> 00:10:50,720 '80 ಮತ್ತು '90ರ ದಶಕದಲ್ಲಿ. 43 00:10:52,160 --> 00:10:53,600 ನಾಗಾಲ್ಯಾಂಡ್‌ಗೆ ಕೆಟ್ಟ ಸಮಯ. 44 00:10:55,840 --> 00:10:57,080 ಅವರು ನನಗೆ ಹೇಳಿದರು, 45 00:10:58,760 --> 00:11:03,960 "ಮಗನೇ, ನಾನು ಮನೆಯಲ್ಲಿಲ್ಲದಿದ್ದಾಗ, ನನ್ನ ಸಹೋದ್ಯೋಗಿ ನಮ್ಮ ಬಾಗಿಲ ಬಳಿ ಬಂದರೆ, 46 00:11:06,360 --> 00:11:07,880 "ನಿನ್ನನ್ನ ನೆನೆಯುವೆನೆಂದು ತಿಳಿ." 47 00:11:13,400 --> 00:11:14,680 ಅವರು ಹೊರಗಿರುವಾಗಲೆಲ್ಲ 48 00:11:16,600 --> 00:11:17,960 ಮನೆಯ ಕರೆಗಂಟೆ ಬಾರಿಸಿದರೆ... 49 00:11:22,120 --> 00:11:24,000 ಇಂದು ಆ ಸಹೋದ್ಯೋಗಿ ನಾನಾಗಿದ್ದೇನೆ. 50 00:11:30,600 --> 00:11:32,040 ನಾನು ಕೆನ್‍ರನ್ನು ಭೇಟಿಯಾಗಬೇಕು. 51 00:11:35,840 --> 00:11:37,280 ನಾಗಾಲ್ಯಾಂಡ್ ಬಿಸಿನೆಸ್ ಸಮ್ಮಿಟ್ 52 00:11:37,360 --> 00:11:40,400 ಶಾಂತಿ, ಅಭಿವೃದ್ಧಿಯೆಡೆಗೆ ವರ್ಷಗಳ ಕಾಲ ಸಣ್ಣ ಹೆಜ್ಜೆಗಳಿಟ್ಟ ನಂತರ, 53 00:11:40,480 --> 00:11:43,200 ನಾಗಾ ಬಿಸಿನೆಸ್ ಸಮ್ಮಿಟ್ ತಲೆಮಾರುಗಳಿಂದ ಎದುರುನೋಡುತ್ತಿರುವ 54 00:11:43,280 --> 00:11:46,000 ನಾಗಗಳಿಗೆ ಒಂದು ಕ್ರಾಂತಿಕಾರಿ ಮಾರ್ಗವಾಗುವ ಭರವಸೆ ನೀಡಿದೆ. 55 00:11:46,080 --> 00:11:47,840 ಕೊಹಿಮಾದಲ್ಲಿನ ಪತ್ರಿಕಾಗೋಷ್ಠಿಯಲ್ಲಿ, 56 00:11:47,920 --> 00:11:51,440 ನಾಗ ನಾಯಕರು ಒಪ್ಪಂದದ ಸ್ಥೂಲ ನಿಯಮಗಳನ್ನು ಬಹಿರಂಗಪಡಿಸಿದರು, 57 00:11:51,520 --> 00:11:55,440 ಇದರಲ್ಲಿ ಮುಂದಿನ ಐದು ವರ್ಷಗಳಲ್ಲಿ, 20,000 ಕೋಟಿಗಳಷ್ಟು 58 00:11:55,520 --> 00:11:57,320 ಹೂಡಿಕೆಯ ಖಾತರಿಯು ಒಳಗೊಂಡಿದೆ. 59 00:11:57,400 --> 00:12:00,040 ನಾಗಗಳಿಗೆ 50% ಉದ್ಯೋಗ ಮೀಸಲಾತಿ, 60 00:12:00,120 --> 00:12:03,200 ಮತ್ತು ಸಂಕಷ್ಟದಲ್ಲಿರುವ ರಾಜ್ಯಕ್ಕೆ ಹಲವಾರು ಇತರ ಎಸ್ಓಪಿಗಳು ಸೇರಿವೆ. 61 00:12:03,280 --> 00:12:06,560 ಆದಾಗ್ಯೂ, ಒಬ್ಬ ವ್ಯಕ್ತಿಯ ಅನುಪಸ್ಥಿತಿ ಎದ್ದುಕಾಣುತ್ತಿತ್ತು. 62 00:12:06,640 --> 00:12:09,520 ಮತ್ತು ಅವರೇ ಹಿರಿಯ ನಾಯಕ, ರಂಗ್‌ಥಾಂಗ್ ಕೆನ್. 63 00:12:09,600 --> 00:12:11,520 ಅಂಕಲ್ ಕೆನ್ ಎಂದು ನಮಗೆ ಚಿರಪರಿಚಿತರು. 64 00:12:11,600 --> 00:12:13,800 ಈಗ ನಾವು ಅವರ ಮನೆಯ ಹೊರಗೇ ಇದ್ದೇವೆ, 65 00:12:13,880 --> 00:12:17,600 ನಮ್ಮ ಜೀವಿತಾವಧಿಯಲ್ಲಿ ಇಂತಹ ಮಹತ್ವದ ದಿನ ಬರಲು ಪ್ರಮುಖ ಪಾತ್ರ 66 00:12:17,680 --> 00:12:21,680 ವಹಿಸಿದ ವ್ಯಕ್ತಿಯನ್ನು ಕಾಣಲು ಆಶಿಸುತ್ತಿದ್ದೇವೆ. 67 00:12:53,400 --> 00:12:54,720 ರಾತ್ರಿ ಅವಳಿಗೆ ಹೇಳಿದೆ, 68 00:12:56,320 --> 00:12:57,560 ಬೆಳಗಾದ ಕೂಡಲೇ, 69 00:12:58,720 --> 00:13:01,960 ಒಂದೋ ಡೇನಿಯಲ್ ಬರ್ತಾನೆ, ಅಥವಾ ನೀವು ಬರ್ತೀರಿ ಅಂತ. 70 00:13:04,120 --> 00:13:05,360 ಹೋಗು. 71 00:13:29,120 --> 00:13:31,200 ಥಾಮ್ ಕೊಲೆಯಾದ ರಾತ್ರಿ ಏನಾಯಿತು? 72 00:13:34,720 --> 00:13:35,720 ನಾನು ನಿಮಗೆ ಹೇಳಲೇ? 73 00:13:37,520 --> 00:13:39,360 ಆ ರಾತ್ರಿ ಥಾಮ್‌ಗೆ ಕರೆ ಬಂತು. 74 00:13:40,080 --> 00:13:41,920 ಅವರ ಡೀಲರ್ ಮ್ಯಾಕ್ಸ್ ರಿಜುನಿಂದ. 75 00:13:43,200 --> 00:13:46,480 ಅವನು ಥಾಮ್‌ಗೆ ಹೇಳಿದ, ಅವರ ಸರಕಿನ ಮೇಲೆ ದಾಳಿ ಮಾಡಿಸಿದ್ದು 76 00:13:46,560 --> 00:13:49,280 ಬೇರಾರೂ ಅಲ್ಲ, ರೆಡ್ಡಿನೇ ಅಂತ. 77 00:13:51,200 --> 00:13:53,120 ಥಾಮ್ ಒಬ್ಬ ನೀಚನಾಗಿದ್ದ. 78 00:13:54,360 --> 00:13:57,120 ಸಭೆಗೆ ಹಾಜರಾಗುವಂತೆ ಮಾಡಲು, ತನ್ನ ಮೇಲೆ ಒತ್ತಡ ಹೇರಲು 79 00:13:57,200 --> 00:14:00,120 ಇದು ರೆಡ್ಡಿಯ ಕುತಂತ್ರ ಎಂದು ತಕ್ಷಣವೇ ಅರಿತ. 80 00:14:01,520 --> 00:14:02,520 ಕೇಳಿ, ಸರ್. 81 00:14:03,480 --> 00:14:04,720 ಈ ನೋಟ್ ಹರಿದಿದೆ. 82 00:14:08,680 --> 00:14:11,720 ಥಾಮ್ ಕೋಪದಿಂದ ಕುದಿಯುತ್ತಾ ಬಾರಿಂದ ಹೊರಹೋದ. 83 00:14:11,800 --> 00:14:15,280 ನಂತರ, ಅಲ್ಲಿಂದ ನೇರವಾಗಿ ನಿಮ್ಮ ಕೋಣೆಗೆ ಹೋದನು, 84 00:14:15,360 --> 00:14:18,200 ಮತ್ತು ಸಭೆಗೆ ಹಾಜರಾಗಲು ನಿರಾಕರಿಸಿದನು. 85 00:14:29,240 --> 00:14:31,240 ಬರೀ ಅಷ್ಟಕ್ಕೇ ಅವನನ್ನು ಕೊಲೆ ಮಾಡಿಸಿದಿರಾ? 86 00:14:36,120 --> 00:14:37,800 ಕೊಲೆ ಮಾಡಿಸಲಿಲ್ಲ, ಚೌಧರಿಯವರೇ. 87 00:14:39,040 --> 00:14:40,600 ನನ್ನ ಕೈಯಾರೆ ಕೊಂದೆ. 88 00:14:45,120 --> 00:14:46,760 ಏಕೆಂದರೆ ನನಗೆ ಬೇರೆ ದಾರಿ ಇರಲಿಲ್ಲ. 89 00:14:50,800 --> 00:14:52,480 ಅದು ಕೋಪದ ಕೃತ್ಯವಾಗಿರಲಿಲ್ಲ. 90 00:14:53,280 --> 00:14:55,920 ಅದನ್ನು ಬಹಳ ಆಲೋಚಿಸಿದ ನಂತರವೇ ಮಾಡಿದೆ. 91 00:15:12,560 --> 00:15:15,120 ಅಂಕಲ್ ಕೆನ್, ನಾನು ನನ್ನ ಮನಸ್ಸನ್ನು ಬದಲಾಯಿಸಲ್ಲ. 92 00:15:20,800 --> 00:15:23,520 ನಾನು ಇದರ ಭಾಗವಾಗಲ್ಲ. ಇದನ್ನು ರದ್ದುಪಡಿಸುತ್ತಿದ್ದೇನೆ. 93 00:15:28,720 --> 00:15:32,800 ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ, ಆದರೆ ಇದರ ಬಗ್ಗೆ ಹೆಚ್ಚು ಚರ್ಚಿಸಲ್ಲ. 94 00:15:56,800 --> 00:16:00,080 ಒಳಬರುವ ಕರೆ... ಅಪ್ಪ 95 00:16:52,640 --> 00:16:54,480 ಬೇರೆ ದಾರಿ ಇಲ್ಲದಿದ್ದಾಗಷ್ಟೇ ಕೊಲ್ಲಬೇಕು. 96 00:16:57,480 --> 00:16:59,400 ಆಮೇಲೆ ನೀವಿಬ್ಬರೂ ಅವನ ತಲೆ ಕತ್ತರಿಸಿ, 97 00:17:00,360 --> 00:17:02,080 ರಾಜಕೀಯ ಕೊಲೆಯಂತೆ ಬಿಂಬಿಸಿದಿರಿ. 98 00:17:02,160 --> 00:17:04,480 ಆಮೇಲೆ ಆ ಮೂವರಿಂದ ವಿಡಿಯೋ ಮಾಡಿಸಿದಿರಿ. 99 00:17:05,400 --> 00:17:06,680 ನಂತರ ಅವರನ್ನೂ ಕೊಲ್ಲಲಾಯಿತು. 100 00:17:08,520 --> 00:17:10,640 ಇದೆಲ್ಲವನ್ನೂ ರೂಬೆನ್ ತಲೆ ಮೇಲೆ ಹೊರಿಸಿದಿರಿ. 101 00:17:14,560 --> 00:17:16,160 ಎಸಿಪಿ ಇಮ್ರಾನ್ ಅನ್ಸಾರಿ. 102 00:17:17,319 --> 00:17:18,800 ಎಸ್‌ಪಿ ಮೇಘನಾ ಬರುವಾ. 103 00:17:18,880 --> 00:17:21,880 ರೋಸ್ ಲಿಝೋ, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವಳು. 104 00:17:24,079 --> 00:17:26,680 ನೀವು ಎಷ್ಟು ಜನರ ಜೀವನ ಹಾಳುಮಾಡಿದ್ದೀರಂತ ಗೊತ್ತಾ? 105 00:17:27,480 --> 00:17:28,480 ನನ್ನನ್ನು ನಂಬು, 106 00:17:29,720 --> 00:17:31,560 ದೇವರು ನನ್ನ ಪಾಪಗಳನ್ನು ನೆನಪಿಸುತ್ತಾನೆ, 107 00:17:32,280 --> 00:17:34,000 ಪ್ರತಿ ಸಲ ನಾನು ಉಚ್ಚೆ ಮಾಡಿದಾಗಲೂ. 108 00:17:36,760 --> 00:17:38,040 ನನಗೆ ಕಿಡ್ನಿಯ ಕ್ಯಾನ್ಸರ್. 109 00:17:39,920 --> 00:17:41,560 ಬದುಕಲು ಕೇವಲ ಒಂದೆರಡು ತಿಂಗಳುಗಳಿವೆ. 110 00:17:42,080 --> 00:17:43,320 ಆದರೆ ಈ ಶೃಂಗಸಭೆ? 111 00:17:44,800 --> 00:17:46,320 ಇದು ನನ್ನ ಜನರಿಗೆ ಸಹಾಯ ಮಾಡಬಹುದು. 112 00:17:47,920 --> 00:17:50,400 ಅವರಿಗಾಗಿ ಇದೊಂದು ಕೆಲಸ ಮಾಡಲು ಬಯಸಿದೆ. 113 00:17:51,480 --> 00:17:53,480 ಸತ್ತ ನಂತರ ದೇವರಾಗಲು ಬಯಸಿದಿರಾ? 114 00:17:54,520 --> 00:17:55,560 ನಾಗಾಲ್ಯಾಂಡ್‍ನ ದೇವರು. 115 00:17:59,560 --> 00:18:00,760 ನಮಗೆ ಈಗಾಗಲೇ ದೇವರಿದ್ದಾನೆ. 116 00:18:02,480 --> 00:18:04,480 ನಾವು ಅವನ ಪವಾಡವನ್ನು ನೋಡಬೇಕಾಗಿತ್ತು. 117 00:18:06,560 --> 00:18:07,560 ಸರಿ, ಹಾಗಾದರೆ. 118 00:18:09,000 --> 00:18:12,160 ಆ ನಿರ್ಧಾರವನ್ನು ಹೊರಗೆ ನಿಂತಿರುವ ನಿಮ್ಮ ಭಕ್ತರಿಗೆ ಬಿಡೋಣ. 119 00:18:13,040 --> 00:18:16,040 ಸತ್ಯ ತಿಳಿದ ಮೇಲೆ ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಅಂತ. ಸರಿನಾ? 120 00:18:18,320 --> 00:18:20,680 ಸತ್ಯ ಹೊರಬರುವುದರ ಬಗ್ಗೆ ನನಗೆ ಭಯವಿಲ್ಲ, ಚೌಧರಿ. 121 00:18:21,280 --> 00:18:25,240 ಆದರೆ ಅದರ ನಂತರ, ಥಾಮ್‍ನ ಪಕ್ಷ, ಅವನ ಬೆಂಬಲಿಗರು, 122 00:18:26,000 --> 00:18:27,760 ಈ ಒಪ್ಪಂದವನ್ನು ಎಂದಿಗೂ ಒಪ್ಪಲ್ಲ. 123 00:18:28,320 --> 00:18:30,160 ಎಲ್ಲವೂ ಪ್ರಯೋಜನವಿಲ್ಲದಂತಾಗುತ್ತದೆ. 124 00:18:39,680 --> 00:18:40,760 ಪ್ರಯೋಜನವಿಲ್ಲದಂತೆ. 125 00:19:00,080 --> 00:19:05,080 ಜೊನಾಥನ್ ಥಾಮ್ ಅವರ ಬಗೆಹರಿಯದ ಕೊಲೆ ಇನ್ನೂ ಕಾಡುವಾಗಲೇ, 126 00:19:05,160 --> 00:19:09,200 ಕೊಹಿಮಾ ಕೊನೆಗೂ ಇಂದು ಸಂತೋಷ ಮತ್ತು ಭರವಸೆಯೊಂದಿಗೆ ಬೆಳಗುತ್ತಿರುವಂತಿದೆ. 127 00:19:20,480 --> 00:19:23,320 ನಾವು ನಾಗಾಲ್ಯಾಂಡ್‌ನವರು 128 00:19:32,720 --> 00:19:36,240 ಮುಂದೆ ಸಾಗುವ ಸಮಯ 129 00:19:36,320 --> 00:19:40,080 ನಮ್ಮ ನಾಯಕರು ನಮ್ಮ ಹೆಮ್ಮೆ 130 00:20:07,400 --> 00:20:08,760 ವಿಮಾನ ನಿಲ್ದಾಣಕ್ಕೆ ಬಿಡುವಿರಾ? 131 00:20:19,160 --> 00:20:21,960 ಸೇನಾ ಆಸ್ಪತ್ರೆ ದಾರಿಯಲ್ಲಿದೆ, ಅಲ್ವಾ? 132 00:20:23,080 --> 00:20:24,560 ರೋಸ್‍ಗೆ ಪ್ರಜ್ಞೆ ಬಂದಿರಬಹುದು 133 00:20:24,680 --> 00:20:27,200 ಮತ್ತವಳು ನಮಗೆ ರಘು ಪಾಸ್ವಾನ್ ಬಗ್ಗೆ ಏನಾದರೂ ಹೇಳಬಹುದು. 134 00:20:29,800 --> 00:20:30,920 ರೋಸ್ ತೀರಿಕೊಂಡಳು. 135 00:20:32,280 --> 00:20:35,200 ನೀನು ಕೆನ್ ಜೊತೆ ಇದ್ದಾಗ ಆಸ್ಪತ್ರೆಯಿಂದ ಕರೆ ಬಂತು. 136 00:20:36,240 --> 00:20:38,080 ನಿನ್ನೆ ರಾತ್ರಿ ನಿದ್ದೆಯಲ್ಲೇ ಸತ್ತಳು. 137 00:20:41,800 --> 00:20:43,880 ನಾವು ಸಾಧ್ಯವಾದದ್ದನ್ನೆಲ್ಲ ಮಾಡಿದೆವು. 138 00:20:49,920 --> 00:20:51,400 ತುಂಬಾ ಧನ್ಯವಾದ, ಚೌಧರಿ, 139 00:20:51,800 --> 00:20:54,240 ಕೆನ್ ಮನೆಯ ಹೊರಗೆ 140 00:20:55,800 --> 00:20:57,240 ಏನನ್ನೂ ಹೇಳದಿದ್ದಕ್ಕಾಗಿ. 141 00:20:59,200 --> 00:21:01,560 ನನ್ನ ನೆಲ, ನನ್ನ ಜನರು, 142 00:21:03,280 --> 00:21:04,280 ಅವರಿಗೆ ಭರವಸೆ ಬೇಕು. 143 00:21:05,920 --> 00:21:07,240 ಅವರು ಭರವಸೆಗೆ ಅರ್ಹರು. 144 00:21:15,560 --> 00:21:17,240 ಭರವಸೆ ಅಂದರೆ, ಐಸಾಕ್ ಗೆಳೆಯ, 145 00:21:18,280 --> 00:21:19,920 ಇವನ ಹೆಂಡತಿ ನನ್ನ ಬಳಿಗೆ ಬಂದಳು, 146 00:21:20,640 --> 00:21:22,760 ನಾನು ಅವಳ ಗಂಡನ ಹುಡುಕುವೆ ಎಂಬ ಭರವಸೆಯೊಂದಿಗೆ. 147 00:21:25,640 --> 00:21:26,760 ಹೆಂಡತಿ ತೀರಿಕೊಂಡಳು. 148 00:21:28,800 --> 00:21:30,240 ಮಗು ಅನಾಥನಾದ. 149 00:21:35,040 --> 00:21:37,080 ಆದರೆ ಅವಳ ಗಂಡನನ್ನು ಹುಡುಕಲು ಸಾಧ್ಯವಾಗಲಿಲ್ಲ. 150 00:21:46,040 --> 00:21:49,640 ರೂಬೆನ್ ಥಾಮ್ ಬದಲಾವಣೆಗಾಗಿ ಬದಲಾವಣೆಯಾಗಿರಿ 151 00:22:07,160 --> 00:22:08,760 ನಿಮ್ಮ ಅತಿಥಿಗಳು, ಸರ್. 152 00:22:08,840 --> 00:22:10,080 ಹಾಗಾಗಿ ನಿಲ್ಲಿಸಲು ಬಿಟ್ಟೆ. 153 00:22:19,120 --> 00:22:24,440 ಕೊನೆವರೆಗೂ ಗೆಳೆಯರಾಗಿ ಇರೋಣ 154 00:22:42,960 --> 00:22:43,960 ಚೆನ್ನಾಗಿದ್ದೀಯಾ? 155 00:22:53,160 --> 00:22:56,800 ಸರ್, ನೀವೆಷ್ಟು ದೊಡ್ಡ ಅಧಿಕಾರಿ. 156 00:22:57,320 --> 00:22:59,920 ನಮ್ಮ ಮಗನನ್ನು ಹುಡುಕಲಾಗಿದ್ದರೆ, 157 00:23:00,000 --> 00:23:02,080 ಈ ಇಳಿವಯಸ್ಸಿನಲ್ಲಿ ನೆರವಾಗುತ್ತಿತ್ತು. 158 00:23:03,040 --> 00:23:06,640 ಹೇ, ನಿನ್ನ ಮಗ ಅವನು ಇಟ್ಟುಕೊಂಡವಳ ಜೊತೆ ಓಡಿಹೋಗಿದ್ದಾನೆ. 159 00:23:07,320 --> 00:23:09,720 ತನ್ನ ಮಗುವಿನ ಬಗ್ಗೆಯೇ ಕಾಳಜಿ ಇಲ್ಲದವನಿಗೆ, 160 00:23:09,800 --> 00:23:11,880 ವೃದ್ಧ ಹೆತ್ತವರ ಕಾಳಜಿ ಇರುತ್ತೇನು? 161 00:23:13,240 --> 00:23:14,240 ಚಿಕ್ಕಪ್ಪ... 162 00:23:16,600 --> 00:23:19,560 ರಘು ಆ ಹುಡುಗಿ ಜೊತೆ ಓಡಿ ಹೋಗಲಿಲ್ಲ. 163 00:23:19,640 --> 00:23:22,920 ಸರ್, ನಿಮಗೇನಾದರೂ ಗೊತ್ತಾಯಿತೇ? 164 00:23:27,000 --> 00:23:31,200 ಮುಂದಿನ ಸಂಕ್ರಾಂತಿಗೆ ಬರುತ್ತೇನೆ ಅಂದಿದ್ದ, ಹಣದೊಂದಿಗೆ, 165 00:23:31,880 --> 00:23:35,000 ನಾವು ಚಿಕಿತ್ಸೆಗಾಗಿ ಮಾಡಿದ್ದ ಸಾಲವನ್ನೆಲ್ಲ ತೀರಿಸುತ್ತೇನೆ ಅಂದಿದ್ದ. 166 00:23:48,960 --> 00:23:50,360 ಇದು ಗುಡ್ಡುಗಾಗಿ. 167 00:23:54,720 --> 00:23:56,160 ನಮ್ಮಿಂದ ಆಗಿದ್ದು ಇಷ್ಟೇ. 168 00:23:58,680 --> 00:24:01,240 ಬಾ, ಮಗು, ಮೇಡಂ ಆಶೀರ್ವಾದ ಪಡೆದುಕೋ. 169 00:24:08,800 --> 00:24:10,240 ನಾನು ಇವನ ಆಂಟಿ. 170 00:24:35,120 --> 00:24:37,160 ಮುಂದಿನ ವಾರ ಸಿದ್ದುನನ್ನು ನೋಡಲು ಹೋಗೋಣವೇ? 171 00:24:38,240 --> 00:24:40,360 ಅವನ ಗೆಳತಿಯನ್ನೂ ಸರಿಯಾಗಿ ಭೇಟಿ ಮಾಡಬಹುದು. 172 00:24:41,520 --> 00:24:42,720 ಅವಳ ಹೆಸರೇನು? 173 00:24:44,880 --> 00:24:45,880 ಅನನ್ಯಾ. 174 00:24:48,840 --> 00:24:51,480 ಹಾಥಿ ರಾಮ್ ಚೌಧರಿಗೆ ಆನೆಯ ನೆನಪಿನ ಶಕ್ತಿ ಇದೆ. 175 00:24:52,800 --> 00:24:55,120 ಹೋಗಿ ಕೈಕಾಲು ತೊಳೆದುಕೋ. ಊಟ ಬಡಿಸುತ್ತೇನೆ. 176 00:25:28,240 --> 00:25:30,720 ಹಾಂ, ಮಂಜು. ನನ್ನ ಮಾತು ಕೇಳು. 177 00:25:36,160 --> 00:25:38,360 ಸರ್, ಇದರಲ್ಲಿ ಏನನ್ನು ಹುಡುಕುತ್ತಿದ್ದೇವೆ? 178 00:25:38,440 --> 00:25:39,680 ಇದನ್ನು ಮುಂದೆ ಪ್ಲೇ ಮಾಡು. 179 00:25:44,720 --> 00:25:46,840 -ಜೈ ಹಿಂದ್, ಸರ್. -ಜೈ ಹಿಂದ್, ಚೌಧರಿ. 180 00:25:47,640 --> 00:25:49,560 ನಿಮ್ಮ ಅತ್ತೆ ಈಗ ಹೇಗಿದ್ದಾರೆ? 181 00:25:52,400 --> 00:25:53,280 ಕ್ಷಮಿಸಿ, ಸರ್. 182 00:25:54,040 --> 00:25:56,360 ಡಿಸಿಪಿ ಸರ್ ನಿಮಗೆಲ್ಲ ಹೇಳಿರಬೇಕು. 183 00:25:58,280 --> 00:26:00,760 ಈ ಪ್ರಕರಣ ನನಗೆ ಸ್ವಲ್ಪ ವೈಯಕ್ತಿಕ ಆಯಿತು, ಸರ್. 184 00:26:03,760 --> 00:26:04,960 ಅರ್ಥವಾಗುತ್ತೆ, ಚೌಧರಿ. 185 00:26:06,040 --> 00:26:07,840 ಆದರೆ ಮೌಲ್ಯಮಾಪನ ವರದಿಗೆ ಹೋಗುತ್ತದೆ. 186 00:26:08,400 --> 00:26:09,760 ನಿಮ್ಮನ್ನು ಅಮಾನತುಗೊಳಿಸಬಹುದು. 187 00:26:11,480 --> 00:26:13,640 ಸರಿ, ಸರ್. ನಾನು ಅದಕ್ಕೆ ಅರ್ಹ. 188 00:26:18,880 --> 00:26:19,880 ಸರ್? 189 00:26:21,160 --> 00:26:23,160 ನೀವು ನಿಮ್ಮ ಅತ್ತೆಯನ್ನು ನೋಡಲು ಹೋಗಿರಲಿಲ್ವಾ? 190 00:26:23,640 --> 00:26:24,800 ನಿನ್ನ ಕೆಲಸ ನೋಡು. 191 00:26:26,760 --> 00:26:28,400 ಆಕೆಯಿಂದ ಒದೆ ತಿಂದಿರಿ ಅಂದುಕೊಂಡೆ. 192 00:26:30,480 --> 00:26:31,680 ನಡೆಯುತ್ತಿದೆ, ಸರ್. 193 00:26:36,920 --> 00:26:39,480 ಒಂದು ನಿಮಿಷ. ಇಲ್ಲಿ ನಿಲ್ಲಿಸು. ಹಿಂದಕ್ಕೆ ಹಾಕು. 194 00:26:40,680 --> 00:26:41,560 ಸಾಕು, ಸಾಕು. 195 00:26:42,080 --> 00:26:43,080 ದೊಡ್ಡದು ಮಾಡು. 196 00:26:48,920 --> 00:26:50,600 "ಕೊನೆವರೆಗೂ ಗೆಳೆಯರಾಗಿ ಇರೋಣ." 197 00:26:51,880 --> 00:26:55,680 ಕೊನೆವರೆಗೂ ಗೆಳೆಯರಾಗಿ ಇರೋಣ 198 00:26:59,200 --> 00:27:00,640 "ಕೊನೆವರೆಗೂ ಗೆಳೆಯರಾಗಿರೋಣವೇ?" 199 00:27:01,760 --> 00:27:04,000 ಚಿಕ್ಕ ಮಾತೇ, ಆದರೆ ಆಳವಾದ ಅರ್ಥವಿದೆ, ಟೋಕಸ್. 200 00:27:06,480 --> 00:27:09,160 ಮತ್ತೆ, ಕಿಶೋರ್, ಸ್ನೇಹವನ್ನು ಹೇಗೆ ಉಳಿಸಿಕೊಂಡೆ? ಹೇಳು. 201 00:27:10,600 --> 00:27:12,000 ಇದು ನನ್ನ ಬಾಸ್‍ನ ಆಟೋ, ಸರ್. 202 00:27:12,520 --> 00:27:13,920 ನನಗೆ ಇದೆಲ್ಲ ಅರ್ಥವಾಗಲ್ಲ. 203 00:27:14,480 --> 00:27:16,240 ನೀವು ಗುಡ್ಡುನ ಭೇಟಿ ಮಾಡಲು ಬಂದಿರಲ್ವಾ? 204 00:27:16,320 --> 00:27:18,800 ಅವನನ್ನು, ಅಜ್ಜಿ-ತಾತರನ್ನು ಹಳೆಯ ಡೆಲ್ಲಿಯಲ್ಲಿ ಬಿಟ್ಟೆ. 205 00:27:18,880 --> 00:27:20,040 ಇಂದು ರಾತ್ರಿ ಅವರ ರೈಲಿದೆ. 206 00:27:20,120 --> 00:27:21,560 ಅಲ್ವೋ, ಪೆದ್ದ. 207 00:27:22,480 --> 00:27:24,120 ನಿನ್ನನ್ನು ಭೇಟಿಯಾಗಲೆಂದೇ ಬಂದೆವು. 208 00:27:30,000 --> 00:27:32,320 ರಘು ಪಾಸ್ವಾನ್ ನಾಪತ್ತೆಯಾದ ರಾತ್ರಿ, 209 00:27:32,880 --> 00:27:35,240 ನಾಗಾಲ್ಯಾಂಡ್ ಸದನ್ ಹೊರಗೆ ನಿನ್ನ ಆಟೋ ಯಾಕಿತ್ತು? 210 00:27:41,120 --> 00:27:42,200 -ಸರ್! -ಅಜ್ಜು, ಓಡು! 211 00:27:44,160 --> 00:27:46,760 -ಟೋಕಸ್, ಮೇಲೆ! ಮೇಲಕ್ಕೆ ಓಡಿ! -ನಿಲ್ಲೋ, ಬೇವರ್ಸಿ. 212 00:28:07,520 --> 00:28:08,520 ಇವನಮ್ಮನ್. 213 00:29:02,120 --> 00:29:04,320 ಮಾತಾಡು ಅಂತ ನಿನಗೆ ಪ್ರಾರ್ಥಿಸಬೇಕೇನೋ, ಸೂಳೆಮಗನೇ? 214 00:29:07,440 --> 00:29:08,440 ಆ ರಾತ್ರಿ 215 00:29:09,640 --> 00:29:11,200 ರಘು ಪಟ್ಟುಹಿಡಿಯುತ್ತಲೇ ಇದ್ದ, 216 00:29:12,200 --> 00:29:13,800 ನನ್ನ ಆಟೋ ತಗೊಂಡು ಹೋಗ್ತೀನಿ ಅಂತ. 217 00:29:16,040 --> 00:29:17,320 ನಾನು ನಿರಾಕರಿಸಿದೆ, ಸರ್. 218 00:29:18,800 --> 00:29:19,960 ಅದು ನನ್ನ ಬಾಸ್‍ನ ಆಟೋ. 219 00:29:22,000 --> 00:29:25,600 ಒಂದು ರಾತ್ರಿಗೆ 10,000 ಕೊಡ್ತೀನಿ ಅಂತ ರಘು ಹೇಳಿದ. 220 00:29:27,520 --> 00:29:29,680 ಅವನ ರೋಸ್ ಮೇಡಂಗೇನೋ ತುರ್ತು ಕೆಲಸವಿತ್ತು. 221 00:29:58,800 --> 00:29:59,800 ಕುಡಿಯುವೆಯಾ? 222 00:30:12,680 --> 00:30:13,720 ದುಡ್ಡು ತಂದೆಯಾ? 223 00:30:16,640 --> 00:30:18,760 -ಇನ್ನೊಂದು ವಾರದಲ್ಲಿ ಕೊಡುವೆ. -ಅಂದರೆ? 224 00:30:19,440 --> 00:30:21,000 ಅಂದರೆ ಈಗ ನನ್ನ ಬಳಿ ಇಲ್ಲ. 225 00:30:22,680 --> 00:30:25,440 ಏಕೆ? ನಿನ್ನ ರೋಸ್ ಮೇಡಂ ನಿನಗೆ ಕೊಡಲಿಲ್ಲವೇ? 226 00:30:26,360 --> 00:30:28,800 ಮೇಡಂ ಅವನಿಗೆ ದುಡ್ಡು ಕೊಡಲ್ಲ, 227 00:30:29,320 --> 00:30:30,520 ಬೇರೆ ಏನೋ ಕೊಡ್ತಾಳೆ. 228 00:30:32,600 --> 00:30:33,920 ಮರ್ಯಾದೆಯಿಂದ ಮಾತಾಡು, ಅಜ್ಜು. 229 00:30:34,000 --> 00:30:36,840 ಹೇ, ಮರ್ಯಾದೆ ನಿನ್ನ ತಿಕದಲ್ಲಿ ಹಾಕಿಕೋ. 230 00:30:37,400 --> 00:30:40,560 ಅಪಾಯವನ್ನೆದುರಿಸಿ ನಾನು ನಿನಗೆ ಆಟೋ ಕೊಟ್ಟೆ. ನೀನು ನನಗೆ 10,000 ಕೊಟ್ಟು 231 00:30:40,640 --> 00:30:42,880 ಶಾಹಿದ್‌ನ ಸಾಲ ತೀರಿಸುವೆ ಎಂದೆ. ಹಾಗಾಗಿ ಕೊಡು. 232 00:30:44,000 --> 00:30:45,920 ಕೊಡುವೆ ಅಂದೆನಲ್ಲ. ಪಕ್ಕಕ್ಕೆ ಸರಿ. 233 00:30:47,080 --> 00:30:49,120 ಅರೆ, ಸಂಪಾದನೆ ಮಾಡಿ ಕೊಡ್ತಾನೆ ಬಿಡು. 234 00:30:49,200 --> 00:30:50,520 ಕೇವಲ 10,000 ಅಷ್ಟೇ. 235 00:30:50,600 --> 00:30:52,720 ಮೇಡಂ ಸೋನೆಪುರ್ ಫೇರ್‌ನಲ್ಲಿ ಕುಣಿಯುತ್ತಾಳೆ 236 00:30:52,800 --> 00:30:55,000 ಮತ್ತು ಈ ಬೇವರ್ಸಿ ಬ್ಯಾಂಡ್ ಬಾರಿಸುತ್ತಾನೆ. 237 00:30:56,880 --> 00:30:57,720 ಹೇ! 238 00:30:58,240 --> 00:31:01,120 ನನ್ನೊಂದಿಗೆ ಮಾತನಾಡು. ಹಣ ಎಲ್ಲಿದೆ? 239 00:31:01,200 --> 00:31:02,080 ಹೇ, ಕೇಳೋ! 240 00:31:02,160 --> 00:31:04,840 ಮೇಡಂ ನಿನಗೆ ಕುಣಿದು ವಯ್ಯಾರ ತೋರಿಸಿರಬೇಕು. 241 00:31:04,920 --> 00:31:06,520 ಬೋಳಿಮಗನೇ. 242 00:31:07,840 --> 00:31:08,840 ಬೇವರ್ಸಿ! 243 00:31:12,800 --> 00:31:13,800 ಬೇವರ್ಸಿ! 244 00:31:14,840 --> 00:31:18,200 ದುಡ್ಡು ಕೊಡದೆ, ಅದರ ಮೇಲೆ ಗಾಂಚಲಿ ಮಾಡ್ತೀಯಾ? 245 00:31:19,280 --> 00:31:20,640 ಹೇಳೋ, ಹಣ ಎಲ್ಲಿದೆ? 246 00:31:21,600 --> 00:31:22,920 -ಹಣ ಎಲ್ಲಿದೆ? -ಅಣ್ಣ... 247 00:31:23,400 --> 00:31:26,360 ರೋಸ್ ಮೇಡಂ ಎಲ್ಲಿಂದಲೋ ಹಣ ತರುತ್ತೇನೆ ಅಂತ ಹೇಳಿದ್ದಾಳೆ. 248 00:31:26,440 --> 00:31:28,640 ಅದರಿಂದ ನನಗೆ ಐದು ಲಕ್ಷ ಕೊಡುತ್ತೇನೆ ಎಂದಳು. 249 00:31:29,160 --> 00:31:30,480 ನನ್ನ ಹಣ ಎಲ್ಲಿದೆ? 250 00:31:30,560 --> 00:31:31,840 ಹೇಳೋ, ಬೇವರ್ಸಿ! 251 00:31:31,920 --> 00:31:32,920 ಗೀತಾ 252 00:31:33,040 --> 00:31:34,360 ಹಣ ಎಲ್ಲಿದೆ? ಹೇಳೋ! 253 00:31:35,200 --> 00:31:36,840 ಅವಳಿಗಿನ್ನೂ ಹಣ ಸಿಕ್ಕಿಲ್ಲ! 254 00:31:37,400 --> 00:31:39,160 ಪಾಪ, ಅವಳು ತುಂಬಾ ತೊಂದರೆಯಲ್ಲಿದ್ದಾಳೆ! 255 00:31:39,240 --> 00:31:41,280 -ನನಗೆ ಮೋಸ ಮಾಡ್ತೀಯಾ? -ಇಲ್ಲಣ್ಣ. 256 00:31:41,360 --> 00:31:42,440 ನನಗೆ ಮೋಸ ಮಾಡ್ತೀಯಾ? 257 00:31:44,280 --> 00:31:47,200 -ಅಣ್ಣ! ಅಣ್ಣ, ಕೇಳು! -ಹೇಳೋ, ದುಡ್ಡೆಲ್ಲಿದೆ? 258 00:31:47,800 --> 00:31:49,120 ಹೇಳೋ, ಸೂಳೆಮಗನೇ! 259 00:31:50,840 --> 00:31:54,000 ಹೇ, ಅಜ್ಜು, ಈ ಬೋಳಿಮಗನನ್ನು ಹಿಡಿದುಕೋ! 260 00:32:30,880 --> 00:32:34,800 ಕರೋನಾ ಸಮಯದಲ್ಲಿ, ನಾವು ಅವನಿಗೆ ನಾಲ್ಕು ತಿಂಗಳು ಊಟ ಹಾಕಿದ್ದೇವೆ. 261 00:32:38,960 --> 00:32:40,680 ಒಂದು ರಾತ್ರಿಗೆ ಐದು ಲಕ್ಷ ಗಳಿಸಿದ್ದ. 262 00:32:41,200 --> 00:32:43,640 ನಮಗೆ ಕೊಡಬೇಕಾದ ಹಣ ಕೊಡೋಕೆ ಆಗುತ್ತಿರಲಿಲ್ವಾ? 263 00:32:47,320 --> 00:32:49,240 ಅವನಿಗೆ ಹಣ ಸಿಕ್ಕಿರಲಿಲ್ವೋ, ದಡ್ಡ. 264 00:32:53,880 --> 00:32:55,440 ಸರ್, ಅದು... 265 00:33:46,000 --> 00:33:47,000 ಆಂಬ್ಯುಲೆನ್ಸ್ 266 00:33:49,240 --> 00:33:54,840 ಪೊಲೀಸ್ 267 00:33:56,840 --> 00:34:01,320 ಹಾಗಾದರೆ, ರೋಸ್‍ಗೆ ಸಹಾಯ ಮಾಡಿದ್ದೇ ರಘುವಿನ ತಪ್ಪಾ? 268 00:34:05,520 --> 00:34:07,200 ಇನ್ನೊಂದು ವಿಷಯ ಅರ್ಥವಾಗುತ್ತಿಲ್ಲ. 269 00:34:08,080 --> 00:34:12,159 ಆ ರಾತ್ರಿ ಧ್ರುವ್ ಮಲ್ಲಿಕ್ ನಾಗಾಲ್ಯಾಂಡ್ ಸದನ್‌ನ ಹೊರಗೆ ಕಾಯುತ್ತಿದ್ದ. 270 00:34:13,159 --> 00:34:16,679 ಆದರೆ ರೋಸ್ ಅವನಿಂದ ತಪ್ಪಿಸಿಕೊಂಡು, ರಘುವಿನ ಆಟೋದಲ್ಲಿ ಓಡಿಹೋಗಲು ನಿರ್ಧರಿಸಿದ್ದಳು. 271 00:34:16,800 --> 00:34:17,840 ಹಣದೊಂದಿಗೆ. 272 00:34:20,600 --> 00:34:24,040 ಅಂದರೆ ಆ ರಾತ್ರಿ ಅವಳಿಗೆ ಥಾಮ್‍ನಿಂದ ಹಣ ಸಿಗಬೇಕಿತ್ತಲ್ವಾ? 273 00:34:24,639 --> 00:34:28,080 ಹಾಂ. ಆದರೆ ಅವಳು ಅಲ್ಲಿಗೆ ತಲುಪಿದಾಗ, ಥಾಮ್ ಅದಾಗಲೇ ಸತ್ತಿದ್ದ. 274 00:34:29,280 --> 00:34:31,600 ಅವಳು ಗಾಬರಿಗೊಂಡು ಹಣವಿಲ್ಲದೆ ಅಲ್ಲಿಂದ ಪರಾರಿಯಾದಳು. 275 00:34:33,400 --> 00:34:34,920 ಹಾಗಾದರೆ ಹಣ ಎಲ್ಲಿ ಹೋಯಿತು? 276 00:34:37,040 --> 00:34:39,360 ಕೋಣೆಯನ್ನು ಹುಡುಕಿದಾಗ ನಮಗೆ ಏನೂ ಸಿಗಲಿಲ್ಲ. 277 00:34:45,960 --> 00:34:47,199 ನಾನೊಂದು ಮಾತು ಹೇಳಬೇಕಿತ್ತು. 278 00:34:51,080 --> 00:34:52,320 ನಾನು ಕೆಲಸ ಬಿಡುವೆ, ಕಣೋ. 279 00:34:56,960 --> 00:34:58,040 ನನಗೆ ಸಾಕಾಯಿತು. 280 00:35:01,760 --> 00:35:02,760 ಮತ್ತೇನು ಮಾಡುವೆ? 281 00:35:05,360 --> 00:35:06,800 ಹನುಮಂತ ಹೇಳಿದ್ದನ್ನು. 282 00:35:07,960 --> 00:35:08,960 ಹಾಂ. 283 00:35:13,760 --> 00:35:17,160 ಓಖ್ಲಾ ಠಾಣೆಯಲ್ಲಿ ನೀವು ನನ್ನನ್ನು ಶತಮೂರ್ಖ ಅಂತಿದ್ದಿರಿ, ಅಲ್ವಾ? 284 00:35:22,840 --> 00:35:25,080 ನೀನು ನನಗಿಂತ ಉತ್ತಮ ಅಧಿಕಾರಿಯಾಗಿದ್ದೆ, ಚೌಧರಿ. 285 00:35:27,280 --> 00:35:30,880 ಆದರೆ ನನಗೆ ಆಗಲೇ ಗೊತ್ತಿತ್ತು, ಈ ವ್ಯವಸ್ಥೆಯಲ್ಲಿ ನಿನಗಿಂತ ಮುಂದೆ ಸಾಗುವೆ ಅಂತ. 286 00:35:32,680 --> 00:35:34,920 ಈ ವ್ಯವಸ್ಥೆ ದೋಣಿಯಂತೆ, ಚೌಧರಿ. 287 00:35:35,640 --> 00:35:37,280 ಇದರಲ್ಲಿ ತೂತಿರೋದು ಎಲ್ರಿಗೂ ಗೊತ್ತು. 288 00:35:38,000 --> 00:35:41,160 ದೋಣಿ ಮುಳುಗದಂತೆ ಕಾಪಾಡಲು ಪ್ರಯತ್ನಿಸುತ್ತಿರುವ ಮೂರ್ಖರಂತೆ ನೀನು. 289 00:35:41,680 --> 00:35:43,480 ನಾನು ನನ್ನನ್ನು ರಕ್ಷಿಸಿಕೊಳ್ತಿದ್ದೇನೆ. 290 00:35:52,440 --> 00:35:53,560 ಕುಲ್ಫಿ ತಿಂತೀಯಾ? 291 00:35:54,640 --> 00:35:55,520 ಹೇ! 292 00:35:55,600 --> 00:35:57,760 -ಹಾಂ, ಸರ್. -ಎರಡು ಕುಲ್ಫಿ ಕೊಡು! 293 00:36:10,400 --> 00:36:11,920 ಈ ನೋಟು ಹರಿದಿದೆ. 294 00:36:12,640 --> 00:36:15,000 ದುಡ್ಡು ಕೊಟ್ಟಿದ್ದಕ್ಕೆ ಸಂತೋಷಪಡು. ಹೋಗು. 295 00:36:28,000 --> 00:36:29,000 ಕೇಳಿ, ಸರ್. 296 00:36:29,080 --> 00:36:30,160 ಈ ನೋಟ್ ಹರಿದಿದೆ. 297 00:36:40,600 --> 00:36:42,320 ವಿರ್ಕ್, ನಾನು ಹೊರಡುತ್ತೇನೆ. 298 00:36:43,680 --> 00:36:45,160 -ಏನಾಯಿತು? -ಏನೂ ಇಲ್ಲ. 299 00:36:45,800 --> 00:36:48,920 -ಇನ್ನೊಮ್ಮೆ ಯೋಚಿಸಿ ನೋಡು! -ಹೋಗೋಲೇ, ಶತಮೂರ್ಖ! 300 00:36:55,600 --> 00:36:56,640 ಸರ್, ದಯವಿಟ್ಟು ಬೇಗ. 301 00:36:59,920 --> 00:37:01,080 ಬೇಗ ಮಾಡಿ, ಸರ್. 302 00:37:10,120 --> 00:37:12,800 ಸರ್, ಈ ವಿಷಯ ಹೊರಬಂದರೆ, ನನ್ನ ಕೆಲಸ ಹೋಗುತ್ತೆ. 303 00:37:13,960 --> 00:37:15,600 ಇತಿಹಾಸವೇ ನಮಗೆ ಸಾಕ್ಷಿ, ಸತ್ಬೀರ್, 304 00:37:15,640 --> 00:37:19,120 ಒಂದು ಕಡತ ಮುಚ್ಚಲು ಮೇಲಿನಿಂದ ಆದೇಶ ಬಂದರೆ, ಆ ಕಡತ ಇನ್ನೆಂದೂ ತೆರೆಯುವುದಿಲ್ಲ. 305 00:37:37,200 --> 00:37:38,800 -ಸರಿನಾ ಈಗ? -ಸರಿ, ಸರ್. 306 00:37:41,960 --> 00:37:44,320 -ಸರಿ, ನಾನು ಈಗ ಹೋಗುತ್ತೇನೆ. -ಶುಭವಾಗಲಿ, ಸರ್. 307 00:38:07,960 --> 00:38:10,960 ಮಿ. ಭಲ್ಲಾ, ನಿಮ್ಮಿಂದ ಒಂದು ಚಿಕ್ಕ ಸಹಾಯ ಬೇಕು. 308 00:38:18,760 --> 00:38:21,160 ಈ ನೋಟ್ ನೀಡಿದ ಹವಾಲಾ ದಂಧೆಕೋರ ಯಾರು? 309 00:38:21,200 --> 00:38:22,520 ಅದಷ್ಟೇ ತಿಳಿದುಕೊಳ್ಳಬೇಕು. 310 00:38:23,320 --> 00:38:27,320 ನನ್ನ ವ್ಯವಹಾರಕ್ಕೆ ಹಿತ್ತಾಳೆಯ ಬೀಗ ಹಾಕುವ ಬೆದರಿಕೆ ಹಾಕಿದ್ದು ಇದೇ ವ್ಯಕ್ತಿ. 311 00:38:29,440 --> 00:38:33,360 ಮಿ. ಭಲ್ಲಾ, ಆಗಿದ್ದು ಆಗೋಯ್ತು. ನೀವು ನಮ್ಮ ಅಣ್ಣನಂತೆ. 312 00:38:34,800 --> 00:38:36,760 ಒಂದು ಮಗುವಿನ ಜೀವ ಅಪಾಯದಲ್ಲಿದೆ, ಮಿ. ಭಲ್ಲಾ. 313 00:38:38,280 --> 00:38:40,520 ಸಹಾಯ ಮಾಡಿದರೆ, ಜೀವನ ಪೂರ್ತಿ ನೆನೆಯುತ್ತೇನೆ. 314 00:38:42,000 --> 00:38:43,000 ಮತ್ತು ಮಾಡದಿದ್ದರೆ, 315 00:38:43,600 --> 00:38:45,560 ಅದನ್ನು ಮರೆಯುವ ಪ್ರಶ್ನೆಯೇ ಉದ್ಭವಿಸಲ್ಲ. 316 00:39:10,320 --> 00:39:11,360 ಸಾಮಗ್ರಿ ಬೇಕು. 317 00:39:12,360 --> 00:39:13,960 -ಸಂಖ್ಯೆ ಹೇಳಿ. -ಸಂಖ್ಯೆ? 318 00:39:14,560 --> 00:39:15,560 ನೋಟಿನ ಮೇಲಿರುತ್ತೆ. 319 00:39:18,320 --> 00:39:21,640 0-ಎಸ್-ವಿ 5-7-4-8-4. 320 00:39:31,800 --> 00:39:33,960 -ಚೀಲವನ್ನು ತಂದಿದ್ದೀರಾ? -ಚೀಲವಾ? 321 00:39:34,040 --> 00:39:35,880 ಎರಡು ಕೋಟಿ ಜೇಬಿನಲ್ಲಿ ಇಟ್ಟುಕೊಳ್ತೀರಾ? 322 00:40:15,640 --> 00:40:16,840 ಹೇ, ಅದು ಕೇವಲ ಐದು ಲಕ್ಷ. 323 00:40:18,640 --> 00:40:20,160 ಅವನ ಹಕ್ಕು ಇಷ್ಟೇನೇ. 324 00:41:05,120 --> 00:41:08,320 ಸ್ವಾಗತ ಡೆಲ್ಲಿ ಜಂಕ್ಷನ್ 325 00:45:19,640 --> 00:45:21,640 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 326 00:45:21,720 --> 00:45:23,720 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ