1 00:00:16,125 --> 00:00:20,041 ಮಯನ್ಮಾರ್‌ನಲ್ಲಿ ಭಾರತೀಯ ಸೈನಿಕರನ್ನು ಸೆರೆಯಾಳಾಗಿ ಹಿಡಿದಿರುವ ವೀಡಿಯೊ 2 00:00:20,125 --> 00:00:22,458 ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಹಬ್ಬುತ್ತಿದೆ. 3 00:00:22,541 --> 00:00:23,791 ಈ ಎಲ್ಲೆಡೆ ಹಬ್ಬಿದ ವಿಡಿಯೋ ನಿಜವೇ? 4 00:00:23,875 --> 00:00:26,416 ಅಥವಾ ಇದು ಕೃತಕ ಬುದ್ಧಿಮತ್ತೆ ಬಳಸಿ ಮಾಡಿದ ತಂತ್ರವೇ? 5 00:00:26,500 --> 00:00:29,375 ಇದು ನಿಜವೇ ಆಗಿದ್ದರೆ, ಭಾರತ ತಕ್ಕ ಪ್ರತ್ಯುತ್ತರ ನೀಡಬೇಕು. 6 00:00:29,500 --> 00:00:30,708 ದೇಶದಲ್ಲಿ ಆಕ್ರೋಶದ ವಾತಾವರಣವಿದೆ. 7 00:00:30,791 --> 00:00:34,166 ಸೆರೆಹಿಡಿಯಲಾದ ಸೈನಿಕರ ಸುರಕ್ಷಿತ ಬಿಡುಗಡೆಗೆ ಜನರು ಒತ್ತಾಯಿಸುತ್ತಿದ್ದಾರೆ. 8 00:00:34,250 --> 00:00:36,666 ಮಯನ್ಮಾರ್‌ನ ವಿದೇಶಾಂಗ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ, 9 00:00:36,750 --> 00:00:40,375 ತಮ್ಮ ನೆಲದಲ್ಲಿ ಯಾವುದೇ ಭಾರತೀಯ ಯುದ್ಧ ಕೈದಿಗಳ ಬಗ್ಗೆ ತಮಗೆ ತಿಳಿದಿಲ್ಲವೆಂದು ಹೇಳಿದ್ದಾರೆ. 10 00:00:40,416 --> 00:00:43,666 ಆದರೆ ಅವರು ಹೇಳಿದ್ದಾರೆ, "ಭಾರತೀಯ ಸೈನಿಕರು ಮಯನ್ಮಾರ್‌ಗೆ ಪ್ರವೇಶಿಸಿದ್ದರೆ, 11 00:00:43,750 --> 00:00:46,041 ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. 12 00:00:46,125 --> 00:00:48,583 ಏತನ್ಮಧ್ಯೆ, ಚೀನಾ ಒಂದು ಹೇಳಿಕೆ ನೀಡಿದೆ. 13 00:00:50,291 --> 00:00:54,375 ಭಾರತೀಯ ಸೇನೆ ಮಯನ್ಮಾರ್ ಗಡಿಯೊಳಗೆ ನುಗ್ಗಿದೆ ಎಂದು ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಸಿಕ್ಕಿದೆ. 14 00:00:54,458 --> 00:00:58,083 ತಾನು ಇಷ್ಟಪಟ್ಟಂತೆ ಮಯನ್ಮಾರ್‌ನ ನೆಲದಲ್ಲಿ ಕಾರ್ಯನಿರ್ವಹಿಸಬಹುದೆಂದು ಭಾರತ ಭಾವಿಸಿದರೆ, 15 00:00:58,166 --> 00:01:00,041 ಅದು ಚೀನಾವನ್ನು ಎದುರಿಸಬೇಕಾಗುತ್ತದೆ. 16 00:01:00,125 --> 00:01:02,583 ಸುರಕ್ಷತೆಗಾಗಿ ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, 17 00:01:02,666 --> 00:01:04,458 ಈ ಪ್ರದೇಶದ ದೇಶಗಳ ಸಾರ್ವಭೌಮತ್ವ ರಕ್ಷಿಸಲು. 18 00:01:04,500 --> 00:01:07,125 ದೇಶವು ಪ್ರಧಾನ ಮಂತ್ರಿಗಳ ರಾಜೀನಾಮೆಗಾಗಿ ಒತ್ತಾಯಿಸುತ್ತಿದೆ, 19 00:01:07,208 --> 00:01:09,875 ಆದರೆ ಪ್ರಧಾನ ಮಂತ್ರಿಗಳ ಕಚೇರಿ ಒಂದು ಮಾತನ್ನೂ ಆಡಿಲ್ಲ. 20 00:01:09,958 --> 00:01:14,125 ದೇಶಕ್ಕೆ ಉತ್ತರ ಬೇಕು, ಆದರೆ ಸಿಗುತ್ತಿರುವುದು ಕೇವಲ ಮೌನ. 21 00:01:15,708 --> 00:01:18,375 -ಮಯನ್ಮಾರ್ ಸರ್ಕಾರ ಏನು ಹೇಳುತ್ತಿದೆ? -ಅವರು ನಿರಾಕರಿಸುತ್ತಿದ್ದಾರೆ. 22 00:01:18,500 --> 00:01:22,083 ಈ ಘಟನೆಯ ಬಗ್ಗೆ ತಮಗೆ ಏನೂ ತಿಳಿದಿಲ್ಲವೆಂದು ಹೇಳುತ್ತಿದ್ದಾರೆ. 23 00:01:22,458 --> 00:01:26,166 ನಮ್ಮ ಸೈನಿಕರು ಎಲ್ಲಿದ್ದಾರೆ ಎಂಬ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ. 24 00:01:26,250 --> 00:01:27,416 ಬಹುಶಃ ಅದು ನಿಜವಿರಬಹುದು. 25 00:01:30,000 --> 00:01:32,375 ಮೇಡಂ, ಆ ಇಡೀ ಪ್ರದೇಶ ಉಗ್ರರ ನಿಯಂತ್ರಣದಲ್ಲಿದೆ. 26 00:01:33,625 --> 00:01:35,791 ಅವರ ಮೇಲೆ ಬರ್ಮಾ ಸರ್ಕಾರಕ್ಕೆ ಯಾವುದೇ ಹಿಡಿತವಿಲ್ಲ. 27 00:01:36,416 --> 00:01:38,375 ಅದಕ್ಕಾಗಿಯೇ ಅವರು ನಮಗೆ ನೆರವಾಗಲು ಸಾಧ್ಯವಿಲ್ಲ. 28 00:01:45,750 --> 00:01:48,375 ಅದು ಬರ್ಮಾ ಸರ್ಕಾರವೇ ಆಗಿರಲಿ ಅಥವಾ ಉಗ್ರರೇ ಆಗಿರಲಿ… 29 00:01:50,333 --> 00:01:51,750 ನಮ್ಮ ಮುಂದೆ ಇರುವುದು ಒಂದೇ ದಾರಿ. 30 00:01:52,875 --> 00:01:55,541 ನಾವು ಸಾಕಷ್ಟು ಸಮಯ ರಾಜತಾಂತ್ರಿಕವಾಗಿ ನಡೆದುಕೊಂಡಿದ್ದೇವೆ. 31 00:01:56,166 --> 00:01:59,375 ಸೇನೆಯನ್ನು ಕಳುಹಿಸಿ, ನಮ್ಮ ಸೈನಿಕರನ್ನು ಮರಳಿ ಕರೆತನ್ನಿ. 32 00:02:03,625 --> 00:02:04,583 ಮೇಡಂ… 33 00:02:06,541 --> 00:02:08,791 ಇದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ. 34 00:02:11,208 --> 00:02:13,000 ಚೀನಾ ಸುಮ್ಮನೆ ಕೂರುವುದಿಲ್ಲ. 35 00:02:13,750 --> 00:02:16,666 ಯಶವಂತ್‌ರವರೇ, ನಾನು ಹೇಳಿದ್ದು… 36 00:02:16,750 --> 00:02:18,291 ಸೇನೆಯನ್ನು ಕಳುಹಿಸಿ, 37 00:02:18,375 --> 00:02:22,083 ನಮ್ಮ ಸೈನಿಕರನ್ನು ಸುರಕ್ಷಿತವಾಗಿ ಮರಳಿ ಕರೆತನ್ನಿ. 38 00:02:22,833 --> 00:02:25,000 ಮತ್ತು ಅದರಿಂದ ಯುದ್ಧವಾದರೆ, 39 00:02:26,333 --> 00:02:27,833 ಹಾಗೆಯೇ ಆಗಲಿ. 40 00:02:30,166 --> 00:02:31,583 -ಸಂಬಿತ್. -ಹೇಳಿ, ಮೇಡಂ. 41 00:02:31,666 --> 00:02:33,333 ದ್ವಾರಕ್‌ಗೆ ಕರೆ ಮಾಡು. 42 00:02:33,416 --> 00:02:36,416 ನಾವು ಒಪ್ಪಂದಕ್ಕೆ ಸಿದ್ಧರಿದ್ದೇವೆ ಎಂದು ಹೇಳು. 43 00:02:37,875 --> 00:02:38,708 ಸರಿ. 44 00:02:57,708 --> 00:03:01,500 ದ ಫ್ಯಾಮಿಲಿ ಮ್ಯಾನ್ 45 00:03:06,291 --> 00:03:10,166 ಅಧ್ಯಾಯ 7 ಎಂಡ್‌ಗೇಮ್ 46 00:03:12,333 --> 00:03:17,458 ಮಯನ್ಮಾರ್ 47 00:03:29,500 --> 00:03:33,041 ಮಯನ್ಮಾರ್ ಹಾಗೂ ಥೈಲ್ಯಾಂಡ್ ನಡುವೆ ರಾಡಾರ್‌ನ ಕಣ್ತಪ್ಪಿಸಿ ಹಾರಾಡಿಸುವುದನ್ನು ಮರೆಯಬೇಡ. 48 00:03:33,500 --> 00:03:34,791 -ಟ್ಯಾಂಕ್ ಪೂರ್ತಿ ತುಂಬಿದೆಯೇ? -ಹೌದು. 49 00:03:34,875 --> 00:03:35,916 -ಹೋಗು. -ಸರಿ. 50 00:03:37,416 --> 00:03:41,208 ನಾನೇ ನಿಮ್ಮನ್ನು ಥೈಲ್ಯಾಂಡ್‌ಗೆ ಬಿಡುತ್ತಿದ್ದೆ, ಆದರೆ ಎಷ್ಟು ಕೆಲಸವಿದೆ ಎಂದು ನಿಮಗೇ ಗೊತ್ತು. 51 00:03:41,291 --> 00:03:42,833 ನೀನು ಇಲ್ಲೇ ಇರಬೇಕಾಗಿದೆ. 52 00:03:43,500 --> 00:03:44,500 ನಾನು ಕ್ಷೇಮವಾಗಿರುತ್ತೇನೆ. 53 00:03:45,500 --> 00:03:47,208 ಇದು ಹೇಗೆ ಸಂಭವಿಸಿತೋ ಅರ್ಥವಾಗುತ್ತಿಲ್ಲ. 54 00:03:47,291 --> 00:03:49,208 ನಾನು ನನ್ನ ಜೀವನದುದ್ದಕ್ಕೂ ಇದನ್ನೇ ಮಾಡುತ್ತಿದ್ದೇನೆ. 55 00:03:49,291 --> 00:03:53,708 -ಇಷ್ಟು ದೊಡ್ಡ ತಪ್ಪು-- -ಉತ್ತಮರು ಕೂಡ ತಪ್ಪು ಮಾಡುತ್ತಾರೆ, ಬಾಸ್ ಮೇಡಂ. 56 00:03:55,416 --> 00:03:57,666 ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. 57 00:03:58,583 --> 00:03:59,625 ಎಲ್ಲವೂ ಸರಿಯಾಗುತ್ತದೆ. 58 00:04:02,041 --> 00:04:03,541 ನಿನ್ನ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. 59 00:04:05,791 --> 00:04:08,416 -ಎಲ್ಲದಕ್ಕೂ ಧನ್ಯವಾದ. -ಈ ಸಂತೋಷ ಸಂಪೂರ್ಣವಾಗಿ ನನ್ನದು. 60 00:04:11,708 --> 00:04:13,458 ನೀನು ನಾನು ಅಂದುಕೊಂಡಂತೆ ಇಲ್ಲ. 61 00:04:14,166 --> 00:04:15,375 ಗೊತ್ತಲ್ಲಾ, ನೀನು ಬೇರೆಯೇ ತರಹ. 62 00:04:16,500 --> 00:04:17,541 "ಬೇರೆ ತರಹ"? ಅಂದರೆ? 63 00:04:18,332 --> 00:04:19,750 ಇದು ಒಂದು ಮೆಚ್ಚುಗೆ. 64 00:04:19,832 --> 00:04:20,666 ಸ್ವೀಕರಿಸು. 65 00:04:21,916 --> 00:04:24,332 ನೀವು ಅದ್ಭುತ, ಗಟ್ಟಿಗಿತ್ತಿ, ಅಸಾಮಾನ್ಯ ಮೇಡಂ. 66 00:04:25,875 --> 00:04:27,375 ಇದೊಂದು ಮೆಚ್ಚುಗೆ. 67 00:04:28,541 --> 00:04:30,750 ಧನ್ಯವಾದಗಳು. ನನಗೆ ತುಂಬಾ ಸಂತೋಷವಾಯಿತು. 68 00:04:34,541 --> 00:04:36,957 ಹಾಗಾದರೆ, ನಾವು ಮತ್ತೆ ಯಾವಾಗ ಭೇಟಿಯಾಗುತ್ತೇವೆ? 69 00:04:37,041 --> 00:04:39,041 ನಮ್ಮ ವೃತ್ತಿಯಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ. 70 00:04:39,125 --> 00:04:39,957 ಅದು ನಿನಗೆ ಗೊತ್ತು. 71 00:05:53,000 --> 00:05:55,957 ಸರ್, ಅದು ಕ್ಯಾರ್ ಮೈ ಗ್ರಾಮ. 72 00:05:56,750 --> 00:05:59,375 ನಾನು ಹೊರಡುತ್ತಿದ್ದೇನೆ. ಉಳಿದ ದಾರಿ ನೀವೇ ಸಾಗಬೇಕಾಗುತ್ತದೆ. 73 00:05:59,457 --> 00:06:00,291 ಧನ್ಯವಾದ. 74 00:06:01,375 --> 00:06:04,583 ಸ್ಟೀಫನ್, ಅಣ್ಣಾ, ನಿಮ್ಮ ಕಾರ್ಯಾಚರಣೆ ಏನೇ ಇರಲಿ, ನಿಮಗೆ ಶುಭವಾಗಲಿ. 75 00:06:04,666 --> 00:06:05,541 ಧನ್ಯವಾದ. 76 00:06:07,458 --> 00:06:08,291 ಬನ್ನಿ. 77 00:06:10,375 --> 00:06:13,625 ನಾವು ಹಳ್ಳಿಯಲ್ಲಿ ಕಾಯಬೇಕಾಗುತ್ತದೆ. ಟೆಮ್ಜೆನ್ ನಮಗೆ ಅಲ್ಲೇ ಸಿಗುತ್ತಾನೆ. 78 00:06:13,708 --> 00:06:15,125 ಮತ್ತು ಹೆಚ್ಚುವರಿ ಪಡೆ? 79 00:06:15,208 --> 00:06:17,666 ಎಂಸಿಎ-ಎಸ್‌ನ ಸ್ಥಳೀಯ ದಳವೂ ಇಲ್ಲಿ ಸಕ್ರಿಯವಾಗಿದೆ. 80 00:06:17,750 --> 00:06:19,500 ಅವರೂ ಶೀಘ್ರದಲ್ಲೇ ತಲುಪಿಬಿಡುತ್ತಾರೆ. 81 00:06:49,291 --> 00:06:50,125 ಝೋಯಾ. 82 00:06:54,375 --> 00:06:55,291 ಇದನ್ನೆಲ್ಲಾ ಯಾಕೆ ಮಾಡಿದೆ? 83 00:07:02,000 --> 00:07:04,958 ನೀನು ಯಾವುದೋ ದುಃಖದ ಹಿನ್ನೆಲೆಯ ಕಥೆ ಕೇಳಲು ನಿರೀಕ್ಷಿಸುತ್ತಿದ್ದರೆ, 84 00:07:06,458 --> 00:07:07,666 ನೀನು ನಿರಾಶೆಗೊಳ್ಳುವೆ, ಕ್ಷಮಿಸು. 85 00:07:09,166 --> 00:07:11,958 ನಿಜವೇನೆಂದರೆ, ನಾನೊಮ್ಮೆ ಇಷ್ಟು ಆಳಕ್ಕೆ ಇಳಿಯುವೆನೆಂದು ಎಂದಿಗೂ ತಿಳಿದಿರಲಿಲ್ಲ. 86 00:07:13,625 --> 00:07:15,666 ನಾವು ಇಲ್ಲಿ ಯಾವುದೇ ಮನ್ನಣೆ ಸಿಗದ ಕೆಲಸ ಮಾಡುತ್ತೇವೆ. 87 00:07:16,832 --> 00:07:18,375 ಮತ್ತು ಪ್ರತಿಯಾಗಿ ನಮಗೇನು ಸಿಗುತ್ತದೆ? 88 00:07:19,832 --> 00:07:22,832 ಹೇಳಿಕೊಳ್ಳಲು ನಾಚಿಕೆಯಾಗುವಷ್ಟು ಸಂಬಳ. 89 00:07:23,457 --> 00:07:25,457 ಜೀವಕ್ಕೆ ಇರುವ ಅಪಾಯವನ್ನು ಮರೆಯುವಂತಿಲ್ಲ. 90 00:07:26,082 --> 00:07:30,875 ಹಾಗೂ ಒಂದು ವೇಳೆ ಬದುಕುಳಿದರೆ, ನಿವೃತ್ತಿಗೆ ಏನು ಸಿಗುತ್ತದೆ? ಚಿಲ್ಲರೆಯಷ್ಟು ಪಿಂಚಣಿ? 91 00:07:32,457 --> 00:07:34,875 ಮತ್ತು ಬಹಳ ದೊಡ್ಡ ಸಾಧನೆ ಮಾಡಿದರೆ, ಬಹುಶಃ ಒಂದು ಪದಕ ಸಿಗಬಹುದು. 92 00:07:36,375 --> 00:07:39,000 ಹಾಗಾಗಿ, ಹೌದು, ನಾನು ಇದೆಲ್ಲವನ್ನೂ ಹಣಕ್ಕಾಗಿ ಮಾಡಿದೆ. 93 00:07:39,791 --> 00:07:40,791 ನೀನು ಹೇಳು… 94 00:07:42,082 --> 00:07:43,375 ನೀನು ಇದನ್ನು ಏಕೆ ಮಾಡುತ್ತಿದ್ದೀಯಾ? 95 00:07:44,000 --> 00:07:47,291 ಯಾವುದೋ ತಪ್ಪಾದ ಆದರ್ಶಕ್ಕಾಗಿಯೇ? ಅಥವಾ ದೇಶಭಕ್ತಿಯ ಭಾವನೆಗಾಗಿಯೇ? 96 00:07:47,916 --> 00:07:48,832 ನೀನು… 97 00:07:49,750 --> 00:07:54,457 ಮತ್ತು ನಿನ್ನ ಶ್ರೀಕಾಂತ್ ತಿವಾರಿ ಕೇವಲ ಸೂತ್ರದ ಗೊಂಬೆಗಳಿದ್ದಂತೆ, 98 00:07:55,291 --> 00:07:56,916 ಬೇರೆಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರಿ. 99 00:07:57,000 --> 00:07:58,916 ಝೋಯಾ, ನಿನಗೆ ಅರಿವು ಕೂಡ ಇಲ್ಲ, 100 00:07:59,000 --> 00:08:01,750 ನೀನು ಈ ದೊಡ್ಡ ಆಟದಲ್ಲಿ ಕೇವಲ ಒಂದು ಪಗಡೆಯ ಕಾಯಿ ಎಂದು. 101 00:08:07,875 --> 00:08:10,083 ಯತೀಶ್, ನಾನು ಇಂಜಿನಿಯರಿಂಗ್ ಪದವೀಧರೆ. 102 00:08:10,791 --> 00:08:12,291 ಒಂದು ಉನ್ನತ ಶಿಕ್ಷಣ ಸಂಸ್ಥೆಯಿಂದ. 103 00:08:12,875 --> 00:08:16,625 ಹಣ ಮಾಡಲು ಬಯಸಿದ್ದರೆ, ನನಗೆ ಬೇರೆ ಅನೇಕ ದಾರಿಗಳಿದ್ದವು. 104 00:08:16,707 --> 00:08:17,916 ನಾನು ಇದನ್ನು ಆರಿಸಿಕೊಂಡೆ. 105 00:08:18,707 --> 00:08:20,750 ಹಾಗಾಗಿ, ಹೌದು, ಇದನ್ನು ದೇಶಕ್ಕಾಗಿ ಮಾಡುತ್ತಿದ್ದೇನೆ. 106 00:08:23,166 --> 00:08:24,707 ಮತ್ತು ನನ್ನಂತಹ ಅಧಿಕಾರಿಗಳಿಂದಾಗಿ… 107 00:08:24,791 --> 00:08:27,582 ನಿಜ ಹೇಳಬೇಕೆಂದರೆ, ಶ್ರೀಕಾಂತ್ ತಿವಾರಿಯಂತಹ ಅಧಿಕಾರಿಗಳಿಂದಾಗಿ 108 00:08:28,832 --> 00:08:30,957 ದೇಶದ ನಾಗರಿಕರು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗುತ್ತಿದೆ. 109 00:08:38,790 --> 00:08:40,250 ನಿನ್ನಿಂದ ನನಗೆ ಪೂರ್ಣ ತಪ್ಪೊಪ್ಪಿಗೆ ಬೇಕು. 110 00:08:40,665 --> 00:08:43,540 ಕುಲಕರ್ಣಿ ಸರ್‌ರವರ ಹತ್ಯೆಯ ಬಗ್ಗೆ ನಿನಗೆ ತಿಳಿದಿರುವ ಎಲ್ಲವೂ. 111 00:08:45,040 --> 00:08:46,290 ಪ್ರತಿಯಾಗಿ ನನಗೇನು ಸಿಗುತ್ತದೆ? 112 00:08:46,665 --> 00:08:49,458 ಒಂದು ಅವಕಾಶ… ಜೀವಂತವಾಗಿ ಉಳಿಯಲು. 113 00:08:49,540 --> 00:08:52,125 ನಿಮ್ಮವರು ನಿನ್ನನ್ನು ಮುಗಿಸಲು ಹುಡುಕುತ್ತಿರಬೇಕು. 114 00:08:52,583 --> 00:08:55,458 ಏಕೆಂದರೆ ನೀನು ಈಗ ಒಂದು ಹೊರೆಯಾಗಿದ್ದೀಯ, ಮತ್ತು ಅದು ನಿನಗೆ ಗೊತ್ತು. 115 00:08:55,750 --> 00:08:58,750 ಹಾಗಾಗಿ, ಯತೀಶ್ ಚಾವ್ಲಾ, ನಿನ್ನನ್ನು ಜೀವಂತವಾಗಿಡಲು ನನಗೊಂದು ಒಳ್ಳೆಯ ಕಾರಣ ಕೊಡು. 116 00:09:01,416 --> 00:09:03,666 ಮಾತಾಡಲು ಶುರುಮಾಡು… ಈಗಲೇ. 117 00:09:12,666 --> 00:09:14,750 ಮೇಡಂ, ನಾವು ನಮ್ಮ ಸೈನ್ಯ ಜಮಾವಣೆಯನ್ನು ಶುರುಮಾಡಿದ್ದೇವೆ. 118 00:09:14,833 --> 00:09:17,041 ಈಗಾಗಲೇ ಮೂರು ವಿಭಾಗಗಳನ್ನು ಸ್ಥಳಾಂತರಿಸಲಾಗಿದೆ. 119 00:09:17,125 --> 00:09:19,875 ವಾಯುಸೇನಾ ಮುಖ್ಯಸ್ಥ ಡಿಸೋಜಾ ನಮಗೆ ವಾಯುಪಡೆಯ ಬೆಂಬಲ ನೀಡುತ್ತಿದ್ದಾರೆ. 120 00:09:19,958 --> 00:09:23,416 ನಮ್ಮ ಸೈನಿಕರು ಮಯನ್ಮಾರ್ ಪ್ರವೇಶಿಸಿದ ತಕ್ಷಣ, ಚೀನಾ ಪ್ರತಿಕ್ರಿಯಿಸುತ್ತದೆ. 121 00:09:23,500 --> 00:09:26,916 ಪಾಕಿಸ್ತಾನವನ್ನು ಮಿತ್ರನನ್ನಾಗಿ ಮಾಡಿಕೊಂಡು, ಅವರು ಪಶ್ಚಿಮ ಗಡಿಯನ್ನು ಗುರಿಯಾಗಿಸುತ್ತಾರೆ. 122 00:09:27,000 --> 00:09:28,541 ಮತ್ತು ನಾವು ಅದಕ್ಕೆ ಸಿದ್ಧರಾಗಿರಬೇಕು. 123 00:09:28,625 --> 00:09:31,000 ಎರಡೂ ಗಡಿಗಳನ್ನು ಏಕಕಾಲದಲ್ಲಿ ನಾವು ನಿಭಾಯಿಸಲು ಸಾಧ್ಯವೇ? 124 00:09:31,083 --> 00:09:34,583 ಹೌದು, ಮೇಡಂ. ಪಶ್ಚಿಮ ಗಡಿಯನ್ನು ಭದ್ರಪಡಿಸಲು ನಾವು ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದೇವೆ. 125 00:09:34,665 --> 00:09:37,500 ಅಶೋಕ್‌ರವರು ನಮಗೆ ಭರವಸೆ ನೀಡಿದ್ದಾರೆ, ಒಂದು ವಿಮಾನ ವಾಹಕ ನೌಕೆ, 126 00:09:37,583 --> 00:09:39,708 ಮೂರು ದಾಳಿ ಜಲಾಂತರ್ಗಾಮಿಗಳು, ಎರಡು ವಿನಾಶಕ ನೌಕೆ ನೀಡುವುದಾಗಿ. 127 00:09:39,790 --> 00:09:42,250 ಮೇಡಂ, ವಿದೇಶಾಂಗ ಇಲಾಖೆ ಮಯನ್ಮಾರ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. 128 00:09:42,333 --> 00:09:46,208 ಈ ವಿಷಯದಲ್ಲಿ ಉದ್ವಿಗ್ನತೆ ಹೆಚ್ಚಾಗದಂತೆ ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ. 129 00:09:46,665 --> 00:09:49,125 ಮೇಡಂ, ಇದನ್ನು ಹೇಳಲು ಬೇರೆ ದಾರಿಯಿಲ್ಲ, ಆದರೆ… 130 00:09:49,915 --> 00:09:51,790 ಈ ಹೋರಾಟ ದೀರ್ಘಕಾಲದವರೆಗೆ ನಡೆಯಲಿದೆ. 131 00:09:51,875 --> 00:09:53,333 ಇದು ಚೀನಾ ಹಾಗೂ ಪಾಕಿಸ್ತಾನದ ದೊಡ್ಡ ಉಪಕಾರ. 132 00:09:53,833 --> 00:09:56,165 ನಮ್ಮ ಸಂಪನ್ಮೂಲಗಳು ಪೂರ್ತಿಯಾಗಿ ಬಳಕೆಯಾಗಲಿವೆ. 133 00:09:56,250 --> 00:09:58,875 ನಾವು ಸಂಪೂರ್ಣ ಸಿದ್ಧತೆಯೊಂದಿಗೆ ಈ ಯುದ್ಧಕ್ಕೆ ಇಳಿಯಬೇಕು. 134 00:09:59,333 --> 00:10:02,250 ನಾವು ನಮ್ಮ ಮೂಲಸೌಕರ್ಯವನ್ನು ಯುದ್ಧೋಪಾದಿಯಲ್ಲಿ ಬಲಪಡಿಸಬೇಕು, ಮೇಡಂ. 135 00:10:03,916 --> 00:10:07,333 ಈಗಾಗಲೇ ದ್ವಾರಕ್ ನಾಥ್‌ರ ಸಂಪರ್ಕದಲ್ಲಿರುವೆ. ನಾವು ಮಾತಾಡುವ ಈ ಕ್ಷಣದಲ್ಲಿ ದೆಹಲಿಯತ್ತ ಹೊರಟಿದ್ದಾನೆ. 136 00:10:07,416 --> 00:10:08,250 ಒಳ್ಳೆಯದು. 137 00:10:08,833 --> 00:10:11,541 ನಾನು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದ್ದೇನೆ. 138 00:10:11,916 --> 00:10:13,041 ಅವರು ನಮ್ಮೊಂದಿಗಿದ್ದಾರೆ. 139 00:10:13,125 --> 00:10:14,833 ಎಲ್ಲವೂ ಒಳ್ಳೆಯದಾಗಲಿ ಎಂದು ಆಶಿಸೋಣ. 140 00:10:16,041 --> 00:10:16,916 ಜೈ ಹಿಂದ್. 141 00:10:30,666 --> 00:10:31,666 ಏನನ್ನು ದಿಟ್ಟಿಸುತ್ತಿದ್ದೀಯಾ? 142 00:10:31,750 --> 00:10:34,750 ನಾನು ಅವರನ್ನು ದಿಟ್ಟಿಸುತ್ತಿಲ್ಲ. ಇಡೀ ಹಳ್ಳಿಯೇ ನಮ್ಮನ್ನು ದಿಟ್ಟಿಸುತ್ತಿದೆ. 143 00:10:39,833 --> 00:10:40,750 ಅವನು ಬಂದ. 144 00:10:46,500 --> 00:10:48,833 ಸ್ಟೀಫನ್, ನಿಮ್ಮ ಪ್ರಯಾಣ ಸುಖಕರವಾಗಿತ್ತೆಂದು ಭಾವಿಸುತ್ತೇನೆ. 145 00:10:48,915 --> 00:10:50,290 ನಿಮ್ಮನ್ನು ನೋಡಿ ಸಂತೋಷವಾಯಿತು. 146 00:10:50,375 --> 00:10:51,540 -ಆರಾಮವಾಗಿದ್ದೀಯಾ? -ಹೌದು. 147 00:10:52,333 --> 00:10:54,500 ಇವನು ಟೆಮ್ಜೆನ್. ನಮ್ಮ ಅತ್ಯುತ್ತಮ ವ್ಯಕ್ತಿಗಳಲ್ಲೊಬ್ಬ. 148 00:10:58,375 --> 00:11:00,791 ಟೆಮ್ಜೆನ್, ನಮ್ಮ ಬಳಿ ಸಮಯ ಬಹಳ ಕಡಿಮೆ ಇದೆ. 149 00:11:01,666 --> 00:11:02,791 ಮುಂದಿನ ಯೋಜನೆ ಏನು? 150 00:11:04,666 --> 00:11:06,000 ನೀವು ಸುದ್ದಿ ನೋಡಿಲ್ಲವೇ? 151 00:11:06,666 --> 00:11:09,583 ಕೆಲವು ದಿನಗಳ ಹಿಂದೆ, ಭಾರತದ ಸೇನಾ ತಂಡವೊಂದು ಇಲ್ಲಿ ದಾಳಿ ಮಾಡಿತ್ತು. 152 00:11:10,000 --> 00:11:11,583 ಅದು ಒಂದು ರಹಸ್ಯ ಸೇನಾ ಕಾರ್ಯಾಚರಣೆಯಾಗಿತ್ತು. 153 00:11:11,666 --> 00:11:14,291 ಆ ಸೇನಾ ತಂಡದ ಹಲವರು ಕೊಲ್ಲಲ್ಪಟ್ಟರು, ಮತ್ತು… 154 00:11:16,416 --> 00:11:19,083 ಕೆಲವು ಸೈನಿಕರನ್ನು ರುಕ್ಮನ ಜನರು ಸೆರೆಹಿಡಿದರು. 155 00:11:19,166 --> 00:11:21,875 ಅವರ ವಿಡಿಯೋ ಇಂಟರ್‌ನೆಟ್‌ನಲ್ಲಿ ಎಲ್ಲೆಡೆ ಹರಡಿದೆ. 156 00:11:22,375 --> 00:11:24,458 ಅದು ಕರ್ನಲ್ ವಿಕ್ರಂ. 157 00:11:24,541 --> 00:11:28,333 ದಾಳಿ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂದು ರುಕ್ಮಗೆ ಮೊದಲೇ ತಿಳಿದಿತ್ತು. 158 00:11:28,416 --> 00:11:30,250 ಸೇನಾ ತಂಡವು ಗುರಿಯ ಸ್ಥಳಕ್ಕೆ ತಲುಪಿದಾಗ, 159 00:11:30,333 --> 00:11:31,958 ರುಕ್ಮಾ ಅವರ ಮೇಲೆ ಹೊಂಚು ಹಾಕಿ ದಾಳಿ ಮಾಡಿದ. 160 00:11:32,040 --> 00:11:33,290 ಇದರ ಅರ್ಥ… 161 00:11:34,333 --> 00:11:36,375 ನಿಮ್ಮ ಕಡೆಯಿಂದ ಯಾರೋ ಶತ್ರುಗಳಿಗೆ ನೆರವಾಗುತ್ತಿದ್ದಾರೆ. 162 00:11:38,165 --> 00:11:39,958 ಇವರ ಕಡೆಯವರು ಎಲ್ಲೆಡೆ ಇದ್ದಾರೆ. 163 00:11:40,583 --> 00:11:42,458 ಅವರಿಗೆ ಬಹಳ ಉನ್ನತ ಹುದ್ದೆಯಲ್ಲಿರುವವರ ಪರಿಚಯವಿದೆ. 164 00:11:43,458 --> 00:11:45,540 ನಾವು ಬಹಳ ಜಾಗರೂಕರಾಗಿರಬೇಕು. 165 00:11:45,625 --> 00:11:47,915 ಆದರೆ ರುಕ್ಮ ಆ ಸೈನಿಕರನ್ನು ಏಕೆ ಸೆರೆಹಿಡಿದ? 166 00:11:48,000 --> 00:11:49,375 ಕೆಲವು ಬೇಡಿಕೆಗಳನ್ನು ಮುಂದಿಡಲು, 167 00:11:50,083 --> 00:11:51,790 ಈ ಸೈನಿಕರ ಜೀವಕ್ಕೆ ಪ್ರತಿಯಾಗಿ. 168 00:11:53,625 --> 00:11:55,875 -ಹಳ್ಳಿಯ ನಕ್ಷೆ ತಂದಿದ್ದೀಯಾ? -ಹೌದು. 169 00:11:57,375 --> 00:11:58,875 ಇವು ರುಕ್ಮನ ವಸತಿಗೃಹಗಳು. 170 00:11:59,790 --> 00:12:03,083 ಭದ್ರತಾ ತಪಾಸಣಾ ಕೇಂದ್ರಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿವೆ. 171 00:12:03,166 --> 00:12:04,208 ಸರಿ, ಒಳ್ಳೆಯದು. 172 00:12:04,291 --> 00:12:06,500 -ಹಾಗಾಗಿ ಯೋಜನೆ ಏನೆಂದರೆ-- -ಭಾರತೀಯ ಸೈನಿಕರು… 173 00:12:07,041 --> 00:12:08,416 ಅವರನ್ನು ಎಲ್ಲಿ ಇಡಲಾಗಿದೆ? 174 00:12:08,500 --> 00:12:10,625 ಶ್ರೀಕಾಂತ್, ಬೇಡ. 175 00:12:11,375 --> 00:12:12,291 ಇದು ತುಂಬಾ ಅಪಾಯಕಾರಿ. 176 00:12:12,958 --> 00:12:14,458 ನಾವು ಮಾಡಲೇಬೇಕು, ಸ್ಟೀಫನ್. 177 00:12:14,541 --> 00:12:16,958 ಯೋಜನೆ ಇದ್ದದ್ದು ರುಕ್ಮನನ್ನು ಹಿಡಿಯಲು ಮಾತ್ರ. 178 00:12:17,791 --> 00:12:21,250 ಜೀವಂತವಾಗಿ ಅಥವಾ ಶವವಾಗಿ. ಬೇರೆ ಯಾವುದನ್ನಾದರೂ ಪ್ರಯತ್ನಿಸುವುದು ಅಪಾಯಕಾರಿ. 179 00:12:21,333 --> 00:12:23,791 ನಮ್ಮ ಬಳಿ ಬೇರೆ ಆಯ್ಕೆ ಇಲ್ಲ, ಸ್ಟೀಫನ್. 180 00:12:24,166 --> 00:12:27,750 ನಾವು ಏನೇ ಮಾಡಿದರೂ, ಅದು ಸೈನಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. 181 00:12:27,833 --> 00:12:29,208 ಅವರನ್ನು ಕೊಲ್ಲಲಾಗುತ್ತದೆ. 182 00:12:29,291 --> 00:12:32,000 ಮೊದಲ ಮತ್ತು ಅಗ್ರಗಣ್ಯವಾಗಿ, ನಾವು ಸೈನಿಕರನ್ನು ಅಲ್ಲಿಂದ ಹೊರಗೆ ಕರೆತರಬೇಕು. 183 00:12:32,665 --> 00:12:34,290 ಆಮೇಲೆ ನಾವು ರುಕ್ಮಾ ಮೇಲೆ ದಾಳಿ ಮಾಡೋಣ. 184 00:12:40,000 --> 00:12:41,833 ಅವರ ಬಂಧಿಕೋಣೆಗಳು ಇಲ್ಲಿವೆ. 185 00:12:41,915 --> 00:12:43,915 ಬಹುಶಃ ಸೈನಿಕರು ಅಲ್ಲಿದ್ದಾರೆ. 186 00:12:44,458 --> 00:12:46,415 -ಸ್ಟೀಫನ್, ನಾನು ಹೊರಡುತ್ತೇನೆ. -ಹೌದು. 187 00:12:46,500 --> 00:12:48,833 -ಸಿಗೋಣ. -ಸರಿ. ಸಿಗೋಣ. 188 00:12:49,958 --> 00:12:51,958 ಸ್ಟೀಫನ್, ಹೆಚ್ಚುವರಿ ಪಡೆ ಯಾವಾಗ ಬರಲಿದೆ? 189 00:12:53,458 --> 00:12:54,333 ಬರುತ್ತಿರುತ್ತಾರೆ. 190 00:12:56,583 --> 00:12:58,915 ಟಾಸ್ಕ್ ತಂಡದ ಎಲ್ಲಾ ಫೋನ್‌ಗಳು ಹ್ಯಾಕ್ ಆಗಿದ್ದವು. 191 00:12:59,000 --> 00:13:01,875 ಆದರೆ ಈ ಮಾಹಿತಿಯನ್ನು ಅವರು ರವಾನಿಸುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. 192 00:13:02,625 --> 00:13:06,083 ಶ್ರೀಕಾಂತ್ ಮತ್ತು ಟಾಸ್ಕ್ ತಂಡವನ್ನು ಬಲಿಪಶು ಮಾಡಲು ಇದು ಒಂದು ಸಂಘಟಿತ ಪ್ರಯತ್ನವಾಗಿತ್ತು. 193 00:13:07,375 --> 00:13:08,458 ನಿನ್ನ ಪೂರ್ಣ ಹೆಸರನ್ನು ಹೇಳು. 194 00:13:08,833 --> 00:13:09,750 ಯತೀಶ್ ಚಾವ್ಲಾ. 195 00:13:10,333 --> 00:13:12,416 ಮತ್ತು ನಾನು ಹೇಳಿದ್ದೆಲ್ಲವೂ ಸತ್ಯವೆಂದು ದೃಢೀಕರಿಸುತ್ತೇನೆ. 196 00:13:14,166 --> 00:13:16,750 ಯಾರಾದರೂ ತಪ್ಪೊಪ್ಪಿಗೆಯನ್ನು ನಂತರ ಹಿಂಪಡೆಯಬಹುದು. 197 00:13:17,458 --> 00:13:18,541 ಬೇರೇನಾದರೂ ಪುರಾವೆ ಇದೆಯೇ? 198 00:13:18,625 --> 00:13:20,375 ಸರ್, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. 199 00:13:20,791 --> 00:13:23,000 ವಿದೇಶಿ ಖಾತೆಗಳಿಂದ ಹಣ ವರ್ಗಾವಣೆಯಾಗಿದೆ. 200 00:13:23,083 --> 00:13:25,166 ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, 201 00:13:25,250 --> 00:13:28,000 ಎಲ್ಲಾ ಸಾಧನಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. 202 00:13:28,083 --> 00:13:30,333 ಹಾಗಾದರೆ, ನಮಗೆ ಹೆಚ್ಚಿನ ಪುರಾವೆಗಳು ಸಿಗುವವರೆಗೆ… 203 00:13:30,416 --> 00:13:33,250 ಕಾಳೆ, ನಮ್ಮ ಬಳಿ ಈಗಾಗಲೇ ಸಾಕಷ್ಟು ಪುರಾವೆಗಳಿವೆ. 204 00:13:33,333 --> 00:13:36,875 ನನಗೆ ಝೋಯಾ ಮೇಲೆ ಸಂಪೂರ್ಣ ನಂಬಿಕೆ ಇದೆ, ಮತ್ತು ಅವಳ ತನಿಖಾ ಮಾರ್ಗದ ಮೇಲೂ. 205 00:13:36,958 --> 00:13:38,208 ಅವಳು ಸರಿಯಾದ ಹಾದಿಯಲ್ಲಿದ್ದಾಳೆ. 206 00:13:38,708 --> 00:13:40,958 ಮತ್ತು ಶ್ರೀಕಾಂತ್ ನಿರಪರಾಧಿ ಎಂದು ನನಗೆ ಮನವರಿಕೆಯಾಗಿದೆ. 207 00:13:42,458 --> 00:13:44,583 ಈ ಸಮಿತಿಯ ಪರವಾಗಿ ನಾನು ಶಿಫಾರಸು ಮಾಡುತ್ತೇನೆ, 208 00:13:44,665 --> 00:13:48,290 ಶ್ರೀಕಾಂತ್ ವಿರುದ್ಧ ಹೊರಡಿಸಲಾದ ದಸ್ತಗಿರಿ ವಾರಂಟನ್ನು ಹಿಂಪಡೆಯಬೇಕು ಎಂದು. 209 00:13:48,375 --> 00:13:51,833 ಮತ್ತು ಅವನ ಕುಟುಂಬವನ್ನು ತಕ್ಷಣವೇ ರಕ್ಷಣಾ ವಶಕ್ಕೆ ತೆಗೆದುಕೊಳ್ಳಬೇಕು. 210 00:13:52,333 --> 00:13:55,290 -ಹೌದು, ಸರ್. -ಮತ್ತು ಅವನ ವರ್ತನೆಯ ಬಗ್ಗೆ ಏನು? 211 00:13:55,375 --> 00:13:58,458 ಅವನು ಪ್ರತಿ ಹಂತದಲ್ಲೂ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾನೆ. 212 00:13:58,540 --> 00:14:00,791 -ಅವನಿಗೆ ಶಿಸ್ತು ಕ್ರಮ ವಿಧಿಸಬೇಕು. -ಕ್ಷಮಿಸಿ, ಸರ್. 213 00:14:01,208 --> 00:14:04,000 ಶ್ರೀಕಾಂತ್ ದೇಶಕ್ಕಾಗಿ ಹಲವು ಬಾರಿ ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ. 214 00:14:04,083 --> 00:14:06,625 ದೇಶಕ್ಕಾಗಿ ನಿನ್ನ ಪ್ರಾಣ ಪಣಕ್ಕಿಡುವುದು ಎಂದರೆ… 215 00:14:07,625 --> 00:14:11,875 ಶರ್ಮಾ, ಶ್ರೀಕಾಂತ್ ದೇಶಕ್ಕಾಗಿ ಮಾಡಿರುವುದನ್ನು ಗೌರವಿಸುತ್ತೇನೆ. ನಾವೆಲ್ಲರೂ ಗೌರವಿಸುತ್ತೇವೆ. 216 00:14:11,958 --> 00:14:14,750 ಆದರೆ ನಿಯಮಾವಳಿಗಳನ್ನು ಒಂದು ಕಾರಣಕ್ಕಾಗಿ ಮಾಡಲಾಗಿದೆ. 217 00:14:15,083 --> 00:14:16,750 ಇದು ನಿಮಗೆ ಚೆನ್ನಾಗಿ ತಿಳಿದಿದೆ. 218 00:14:17,833 --> 00:14:20,041 -ಹೌದು. -ಹಾಗಾದರೆ ಶ್ರೀಕಾಂತ್‌ನನ್ನು ಕರೆಯೋಣ. 219 00:14:20,125 --> 00:14:21,875 ಆಮೇಲೆ ಅವನ ಬಗ್ಗೆ ಏನು ಮಾಡಬೇಕೋ ನಿರ್ಧರಿಸೋಣ. 220 00:14:22,166 --> 00:14:24,750 ಝೋಯಾ, ಶ್ರೀಕಾಂತ್ ಈಗ ಎಲ್ಲಿದ್ದಾನೆಂದು ನಿನಗೆ ತಿಳಿದಿದೆಯೇ? 221 00:14:26,083 --> 00:14:27,291 ಗೊತ್ತೇ ಇಲ್ಲ, ಸರ್. 222 00:14:35,708 --> 00:14:37,250 -ಹೇಗೆ ನಡೆಯಿತು? -ಎಲ್ಲವೂ ಸರಿಯಾಗಿದೆ. 223 00:14:37,875 --> 00:14:39,040 ಅದು ಅದ್ಭುತ. 224 00:14:39,500 --> 00:14:40,458 ಜೆಕೆಯಿಂದ ಮಾಹಿತಿ ಏನಾದರೂ? 225 00:14:40,540 --> 00:14:42,875 ಅದಕ್ಕಾಗಿ ಕಾಯುತ್ತಿದ್ದೇನೆ. ಸರ್. 226 00:14:44,458 --> 00:14:46,333 ನಮಗಾಗಿ ಐದು ನಿಮಿಷಗಳ ಕಾಲ ಕೊಠಡಿಯ ಹೊರಗೆ ಹೋಗುವಿರಾ? 227 00:14:53,165 --> 00:14:55,458 ಸರಿ, ಝೋಯಾ, ಪುನೀತ್… 228 00:14:56,875 --> 00:14:58,875 ಇನ್ನು ಸಾಕು. ಮುಚ್ಚಿಡಬೇಡಿ, ಹೇಳಿ. 229 00:14:59,290 --> 00:15:00,458 ಶ್ರೀಕಾಂತ್ ಎಲ್ಲಿದ್ದಾನೆ? 230 00:15:03,375 --> 00:15:05,041 -ಸರ್, ಆತ ಮಯನ್ಮಾರ್‌ನಲ್ಲಿದ್ದಾರೆ. -ಏನು? 231 00:15:06,208 --> 00:15:08,416 -ಅವನು ಮಯನ್ಮಾರ್‌ಗೆ ಹೋದನೇ? -ಸ್ಟೀಫನ್ ಜೊತೆ. 232 00:15:08,500 --> 00:15:11,333 ಏನು? ಸ್ಟೀಫನ್ ಖುಜೌ? 233 00:15:11,416 --> 00:15:13,750 ನಕಲಿ ನೋಟು ಕಳ್ಳಸಾಗಣೆದಾರರು ಬಳಸುವ ಮಾರ್ಗವನ್ನೇ 234 00:15:13,833 --> 00:15:16,291 -ಶ್ರೀಕಾಂತ್ ಬಳಸಿ-- -ಅವನಿಗೆ ಹುಚ್ಚು ಹಿಡಿದಿದೆಯೇ? 235 00:15:17,500 --> 00:15:19,041 ಅವನು ನನಗೆ ಯಾಕೆ ಹೇಳಲಿಲ್ಲ? 236 00:15:19,125 --> 00:15:20,083 ಯಾಕೆ? 237 00:15:21,041 --> 00:15:24,583 ಸರ್, ನಿಮ್ಮನ್ನು ನಂಬಬಹುದೇ ಎಂಬ ಬಗ್ಗೆ ಆತನಿಗೆ ಖಚಿತತೆ ಇರಲಿಲ್ಲ. 238 00:15:25,791 --> 00:15:26,791 ಎಂತಹ ಅಸಂಬದ್ಧ. 239 00:15:26,875 --> 00:15:28,625 ಸರ್, ನಮ್ಮೆಲ್ಲರಿಗೂ ಅನುಮಾನವಿತ್ತು, 240 00:15:28,708 --> 00:15:32,125 ಟಾಸ್ಕ್‌ನ ಒಳಗೆ ಒಬ್ಬ ದ್ರೋಹಿ ಇದ್ದಾನೆಂದು. ಹಾಗೂ ಯಾರನ್ನು ನಂಬಬೇಕೆಂದು ನಮಗೆ ತಿಳಿಯಲಿಲ್ಲ. 241 00:15:32,208 --> 00:15:34,665 ಹಾಗಾಗಿ, ನಾನೇ ಆ ದ್ರೋಹಿಯಾಗಿರಬಹುದು ಎಂದು ಅವನು ಭಾವಿಸಿದ. 242 00:15:35,625 --> 00:15:36,500 ಒಬ್ಬ ದೇಶದ್ರೋಹಿ. 243 00:15:36,958 --> 00:15:40,083 ಸರ್, ಈಗ ಯತೀಶ್ ಸಿಕ್ಕಿಬಿದ್ದಿದ್ದಾನೆ, ನಿಮ್ಮ ಮೇಲಿನ ಸಂಶಯ ನಿವಾರಣೆಯಾಗಿದೆ. 244 00:15:41,040 --> 00:15:42,208 ನನಗೆ ನಿರಾಳವಾಯಿತು. 245 00:15:43,665 --> 00:15:45,958 ಶ್ರೀಕಾಂತ್ ಮತ್ತು ನಾನು ಬಹಳ ಹಿಂದಿನಿಂದಲೂ ಒಟ್ಟಿಗಿದ್ದೇವೆ… 246 00:15:47,875 --> 00:15:51,458 ಆದರೂ ಅವನಿಗೆ ನನ್ನನ್ನು ನಂಬಲು ಆಗಲಿಲ್ಲ. 247 00:15:57,208 --> 00:15:58,333 ಮೂರ್ಖ. 248 00:16:10,583 --> 00:16:11,791 ಬರಲು ಹೇಳಿದಿರೇ, ಕರ್ನಲ್? 249 00:16:21,833 --> 00:16:22,750 ಇದೆಲ್ಲಾ ಏನು? 250 00:16:23,750 --> 00:16:25,541 ಇದು ನಮ್ಮ ಒಪ್ಪಂದದ ಭಾಗವಾಗಿರಲಿಲ್ಲ. 251 00:16:25,916 --> 00:16:28,458 ನಿನ್ನ ಕಾರ್ಯಾಚರಣೆಗೆ ನಿನಗೆ ಸೈನಿಕರು ಬೇಕಾಗಿದ್ದರು. 252 00:16:28,916 --> 00:16:30,500 ಮತ್ತು ನಾನು ನಿನಗೆ ಸಹಾಯ ಮಾಡಿದೆ. 253 00:16:31,333 --> 00:16:32,625 ಅದನ್ನು ಸಹಾಯ ಎನ್ನುವುದಿಲ್ಲ. 254 00:16:33,583 --> 00:16:34,875 ಅದು ವ್ಯವಹಾರ. 255 00:16:35,665 --> 00:16:37,625 ಒಪ್ಪಂದ ಇದ್ದದ್ದು ಕೇವಲ ದಾಳಿಗಾಗಿ. 256 00:16:38,375 --> 00:16:40,250 ನನ್ನ ಹಳ್ಳಿಯಿಂದ ಬಹಳ ದೂರದಲ್ಲಿ. 257 00:16:40,333 --> 00:16:42,790 ಭಾರತೀಯ ಸೈನಿಕರನ್ನು ಇಲ್ಲಿಗೆ ಕರೆತರಲು ಯಾವುದೇ ಒಪ್ಪಂದವಾಗಿರಲಿಲ್ಲ. 258 00:16:43,583 --> 00:16:46,208 ಇದು ಯುದ್ಧ, ಕರ್ನಲ್. ಹಾಗಾಗಿ ಕೈದಿಗಳೂ ಇರುತ್ತಾರೆ. 259 00:16:46,290 --> 00:16:49,165 ಮತ್ತು ಆ ಕೈದಿಗಳ ವಿಡಿಯೋಗಳು ಸೋರಿಕೆಯಾಗುತ್ತವೆ, ಅಲ್ಲವೇ? 260 00:16:52,750 --> 00:16:54,750 ನಾವು ಈಗ ಭಾರತ ಸರ್ಕಾರದ ಕಣ್ಣಿಗೆ ಬಿದ್ದಿದ್ದೇವೆ. 261 00:16:56,165 --> 00:16:59,790 ಬೀಜಿಂಗ್ ನನಗೆ ಕಠಿಣ ಪ್ರಶ್ನೆಗಳನ್ನು ಕೇಳುತ್ತಿದೆ. 262 00:17:01,333 --> 00:17:02,458 ಅಷ್ಟು ಉದ್ವೇಗಕ್ಕೆ ಒಳಗಾಗಬೇಡಿ. 263 00:17:02,541 --> 00:17:04,500 ನಿನಗೆ ಹುಚ್ಚು ಹಿಡಿದಿದೆ. 264 00:17:05,583 --> 00:17:07,875 ನೀನು ನನ್ನನ್ನು ಕೊಲ್ಲಿಸುತ್ತೀಯ. 265 00:17:09,250 --> 00:17:11,750 ನನಗೆ ಆ ಭಾರತೀಯ ಸೈನಿಕರು ಇಲ್ಲಿಂದ ಹೊರಗೆ ಹೋಗಬೇಕು. 266 00:17:13,333 --> 00:17:14,250 ನನಗೆ ಸ್ವಲ್ಪ ಸಮಯ ಕೊಡಿ. 267 00:17:15,250 --> 00:17:17,750 -ಏನಾದರೂ ಮಾಡುತ್ತೇನೆ. -ಏನೇ ಮಾಡಿದರೂ ಬೇಗ ಮಾಡು. 268 00:17:18,208 --> 00:17:19,833 ನನಗೆ ಅವರು ಇಲ್ಲಿ ಕಾಣಿಸಿಕೊಳ್ಳಬಾರದು. 269 00:17:21,375 --> 00:17:22,665 ಮತ್ತು ಅಲ್ಲಿಯವರೆಗೆ, 270 00:17:23,333 --> 00:17:25,625 ನನ್ನ ಹಳ್ಳಿಯಲ್ಲಿ ಯಾವುದೇ ತೊಂದರೆ ಇರಬಾರದು. 271 00:17:26,915 --> 00:17:27,790 ಅರ್ಥವಾಯಿತೇ? 272 00:17:31,458 --> 00:17:34,000 ಇಲ್ಲಿ ಯಾವುದೇ ಭಾರತೀಯನ ರಕ್ತ ಹರಿದರೆ… 273 00:17:38,791 --> 00:17:40,250 ನಾನು ನಿನ್ನನ್ನು ಕೊಂದುಬಿಡುತ್ತೇನೆ. 274 00:18:04,333 --> 00:18:05,333 ಸರ್. 275 00:18:06,583 --> 00:18:08,125 ನಾವು ಇಂದು ರಾತ್ರಿ ದಾಳಿ ಮಾಡೋಣ. 276 00:18:08,208 --> 00:18:10,333 ಅವರಿಗೆ ಏನು ನಡೆಯುತ್ತಿದೆ ಎಂದು ತಿಳಿಯುವ ಮೊದಲೇ, 277 00:18:10,416 --> 00:18:12,333 ನಾವು ನಮ್ಮ ಕೆಲಸವನ್ನು ಮುಗಿಸಿ ಹೊರಡಬೇಕು. 278 00:18:12,416 --> 00:18:14,458 ಅವರಿಗೆ ಪರಿಸ್ಥಿತಿ ಅರಿವಿಗೆ ಬರಲು ಅವಕಾಶ ಕೊಡಬಾರದು. 279 00:18:14,541 --> 00:18:17,083 ನಮ್ಮ ಬಳಿ ಅವರಿಗಿಂತ ಕಡಿಮೆ ಜನರಿದ್ದಾರೆ. 280 00:18:17,166 --> 00:18:21,041 ಹಾಗಾಗಿ ಈ ದಾಳಿಯಲ್ಲಿ ಅನಿರೀಕ್ಷಿತವಾಗಿ ದಾಳಿ ಮಾಡುವುದೇ ನಮ್ಮ ದೊಡ್ಡ ಅಸ್ತ್ರ. 281 00:18:21,125 --> 00:18:22,750 -ಅರ್ಥವಾಯಿತೇ? -ಹೌದು! 282 00:18:23,166 --> 00:18:24,000 ಉಲುಪಿ. 283 00:18:25,583 --> 00:18:27,541 ದಾಳಿ ಮುಗಿಯುವವರೆಗೆ, ನಿಮ್ಮ ಫೋನ್‌ಗಳನ್ನು ಕೊಟ್ಟುಬಿಡಿ. 284 00:18:30,833 --> 00:18:31,833 ಆಯುಧಗಳನ್ನು ತಂದಿದ್ದೀರಾ? 285 00:18:39,833 --> 00:18:40,791 ಹೆಚ್ಚುವರಿ ಪಡೆ. 286 00:18:41,666 --> 00:18:42,500 ಕೊನೆಗೂ. 287 00:18:48,833 --> 00:18:50,708 -ನನಗೊಂದು ನಿಮಿಷ ಕೊಡಿ. -ಖಂಡಿತ, ಸರ್. 288 00:18:54,000 --> 00:18:55,250 -ಹೇಳಿ, ಸರ್. -ಹಾಯ್, ಭಾವಿಕ್. 289 00:18:55,333 --> 00:18:57,416 ಪ್ರಧಾನಿಗಳನ್ನು ಭೇಟಿಯಾಗಲು ಭಾರತಕ್ಕೆ ಹೊರಟಿದ್ದೇನೆ. 290 00:18:57,500 --> 00:18:58,875 ನಿನಗಾಗಿ ನನ್ನ ಬಳಿ ಒಂದು ಸುದ್ದಿ ಇದೆ. 291 00:18:58,958 --> 00:19:01,041 ನಾನು ವಿಮಾನದಲ್ಲಿ ಬಂದಿಳಿಯುವಷ್ಟರಲ್ಲಿ, ಅದು ಪ್ರಕಟವಾಗಬೇಕು. 292 00:19:01,125 --> 00:19:03,583 ಒಂದು ವೇಳೆ ಬಸುಗೆ ನಿರ್ಧಾರ ಬದಲಾಯಿಸುವ ಯೋಚನೆ ಬರಲು ಶುರುವಾದರೆ, 293 00:19:03,666 --> 00:19:06,166 ಸಾರ್ವಜನಿಕ ಅಭಿಪ್ರಾಯವು ದೃಢವಾಗಿ ನಮ್ಮ ಪರವಾಗಿರಬೇಕು. 294 00:19:07,250 --> 00:19:08,750 ಮುಂಚಿತವಾಗಿ ಬೋನಸ್ ನೀಡಿದ್ದಕ್ಕೆ ಧನ್ಯವಾದ. 295 00:19:09,291 --> 00:19:11,000 ತಕ್ಷಣವೇ ತಂಡಕ್ಕೆ ಆ ಕೆಲಸವನ್ನು ವಹಿಸುತ್ತೇನೆ. 296 00:19:26,333 --> 00:19:28,541 ಟೆಮ್ಜೆನ್ ತನ್ನ ಸರಕುಗಳೊಂದಿಗೆ ಬಂದ. 297 00:19:29,500 --> 00:19:32,000 ಅನುಮತಿ ನೀಡಲಾಗಿದೆ. ಅವನನ್ನು ಒಳಗೆ ಬಿಡಿ. 298 00:20:10,875 --> 00:20:11,708 ಎಲ್ಲವೂ ಸರಿ ಇದೆ. 299 00:20:11,791 --> 00:20:12,916 ನೀವು ಹೊರಗೆ ಬರಬಹುದು. 300 00:20:16,791 --> 00:20:18,791 ಟೆಮ್ಜೆನ್, ಧನ್ಯವಾದ. 301 00:20:20,333 --> 00:20:21,166 ಬನ್ನಿ. 302 00:20:49,750 --> 00:20:51,750 ಏನೋ ಸರಿ ಇಲ್ಲ ಎನಿಸುತ್ತಿದೆ. 303 00:20:51,833 --> 00:20:53,791 ಇಡೀ ಸ್ಥಳವು ನಿರ್ಜನವಾಗಿದೆ. 304 00:21:02,291 --> 00:21:03,791 ನಿಮ್ಮ ಆಯುಧಗಳನ್ನು ಕೆಳಗಿಡಿ! 305 00:21:03,875 --> 00:21:05,125 ಈಗಲೇ ಕೆಳಗಿಡಿ! 306 00:21:48,833 --> 00:21:51,000 ಶ್ರೀಕಾಂತ್ ತಿವಾರಿ. 307 00:21:52,041 --> 00:21:55,583 ಅತ್ಯುನ್ನತ ಶ್ರೇಣಿಯ ಏಕಮಾತ್ರ ಏಜೆಂಟ್. ಒಬ್ಬ ದಂತಕಥೆ. 308 00:21:55,666 --> 00:21:58,291 ನಿನ್ನನ್ನು ಬಹಳ ದಿನಗಳಿಂದ ಹುಡುಕುತ್ತಿದ್ದೆ, 309 00:21:58,375 --> 00:22:00,625 ಮತ್ತು ನೀನೇ ತಾನಾಗಿಯೇ ನನ್ನ ಕೈಗೆ ಸಿಕ್ಕಿಬಿದ್ದೆಯಾ? 310 00:22:04,500 --> 00:22:05,708 ನೀನು ಮನಸ್ಸನ್ನು ನೋಯಿಸಿದೆ, ಮಾರಾಯ. 311 00:22:07,041 --> 00:22:08,375 ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ. 312 00:22:09,791 --> 00:22:13,458 ನಿನ್ನನ್ನು ಬೇಗ ಅಥವಾ ನಂತರ ಹಿಡಿಯುತ್ತೇನೆಂದು ನನಗೆ ತಿಳಿದಿತ್ತು. ಆದರೆ ಈ ರೀತಿಯೇ? ಛೇ. 313 00:22:13,916 --> 00:22:18,708 ಯಾರು ಯಾರನ್ನು ಹಿಡಿದಿದ್ದಾರೆಂದು ಸಮಯವೇ ಹೇಳುತ್ತದೆ, ರುಕ್ಮ. 314 00:22:20,750 --> 00:22:23,208 ಹೇ! ಒಂದು ಕುರ್ಚಿ ತಾ. 315 00:22:24,000 --> 00:22:25,041 ಕುಳಿತು ಮಾತಾಡೋಣ. 316 00:22:25,125 --> 00:22:26,375 ಸೈನಿಕನಿಂದ ಸೈನಿಕನಿಗೆ. 317 00:22:26,458 --> 00:22:27,291 "ಸೈನಿಕ"ನೇ? 318 00:22:28,666 --> 00:22:30,166 ನೀನು ಸೈನಿಕನೇ ಅಲ್ಲ. 319 00:22:30,625 --> 00:22:33,750 ಹಣಕ್ಕಾಗಿ ಜನರನ್ನು ಕೊಲ್ಲುತ್ತೀಯ, ಮತ್ತು ತನ್ನನ್ನು ತಾನು ಸೈನಿಕ ಎನ್ನುತ್ತೀಯಾ? 320 00:22:35,375 --> 00:22:37,583 ನೀನು ನಿಂತಿರುವುದೇ ಸರಿ. ಅದನ್ನು ವಾಪಸ್ ಇಡು. 321 00:22:40,583 --> 00:22:41,625 ನನಗೊಂದು ವಿಷಯ ಹೇಳು. 322 00:22:43,083 --> 00:22:45,958 ನೀನು ನಿನ್ನ ಸಮಯವನ್ನು ಹೇಗೆ ನಿರ್ವಹಿಸುತ್ತೀಯಾ, ಮಾರಾಯ? 323 00:22:46,041 --> 00:22:49,500 ಈ ದ್ವಂದ್ವ ಜೀವನವನ್ನು ನಡೆಸುವುದರಲ್ಲಿ ಬಹಳಷ್ಟು ಶ್ರಮ ತೆಗೆದುಕೊಳ್ಳುತ್ತದೆ. 324 00:22:49,583 --> 00:22:50,875 ನಿಜವಾಗಿ ಹೇಳು, 325 00:22:52,291 --> 00:22:56,166 ನೀನೊಬ್ಬ ಒಳ್ಳೆಯ ಗಂಡನಾಗಲು ಸಾಧ್ಯವಾಯಿತೆಂದು ಭಾವಿಸುತ್ತೀಯಾ? ಅಥವಾ ಒಬ್ಬ ಒಳ್ಳೆಯ ತಂದೆ? 326 00:22:56,958 --> 00:22:59,291 ನೀನು ಎಷ್ಟು ಒಳ್ಳೆಯ ಅಥವಾ ಕೆಟ್ಟ ಏಜೆಂಟ್ ಎಂಬುದು ಇರಲಿ. 327 00:23:00,458 --> 00:23:02,625 ಕನಿಷ್ಠ ಪಕ್ಷ ನನ್ನ ಬಳಿ ಯಾರಾದರೂ ಇದ್ದಾರೆ… 328 00:23:02,708 --> 00:23:04,208 ಅವರಿಗಾಗಿ ಹೋರಾಡಲು. 329 00:23:06,541 --> 00:23:08,875 ರುಕ್ಮ, ಹೇಳು, ನೀನು ಯಾರಿಗಾಗಿ ಹೋರಾಡುತ್ತಿದ್ದೀಯಾ? 330 00:23:24,541 --> 00:23:25,666 ಅವಳು ಯಾರೆಂದು ಗೊತ್ತೇ? 331 00:23:27,208 --> 00:23:28,333 ಇವಳ ಹೆಸರು ನಿಮಾ. 332 00:23:30,708 --> 00:23:31,541 ನಿಮಾ ಈಗಿಲ್ಲ. 333 00:23:34,791 --> 00:23:36,125 ನನ್ನನ್ನು ಬಹಳ ಪ್ರೀತಿಸುತ್ತಿದ್ದಳು. 334 00:23:36,833 --> 00:23:39,125 ಹೇಗೋ ಗೊತ್ತಿಲ್ಲ. ಆದರೆ ನನ್ನನ್ನು ಪ್ರೀತಿಸುತ್ತಿದ್ದಳು. 335 00:23:39,666 --> 00:23:41,250 ಮತ್ತು ನಾನೂ ಅವಳನ್ನು ಪ್ರೀತಿಸುತ್ತಿದ್ದೆ. 336 00:23:41,333 --> 00:23:42,208 ಹೌದೇ? 337 00:23:43,000 --> 00:23:46,375 ನಿನ್ನನ್ನು ನೋಡಿದರೆ, ನಿನಗೆ ಯಾವುದೇ ಕುಟುಂಬವಿರುವಂತೆ ಕಾಣುವುದಿಲ್ಲ. 338 00:23:47,333 --> 00:23:49,208 ಅಲ್ವೇ? ಹಾಗಲ್ಲವೇ? 339 00:23:49,958 --> 00:23:53,000 ನಾನೂ ಹಾಗೆಯೇ ಅಂದುಕೊಂಡಿದ್ದೆ. ನನ್ನಂತಹವನು ಕುಟುಂಬಸ್ಥನಾಗುವುದೇ? 340 00:23:56,125 --> 00:23:56,958 ಆದರೆ ಕುಟುಂಬಸ್ಥ ಹೌದು. 341 00:23:59,583 --> 00:24:01,041 ಅವಳು ನನ್ನನ್ನು ಮದುವೆಯಾಗಲು ಬಯಸಿದ್ದಳು. 342 00:24:03,708 --> 00:24:04,958 ಆದರೆ ನೀನು ಅವಳನ್ನು ಕೊಂದೆ. 343 00:24:05,041 --> 00:24:08,208 ನಾನೇ? ಹೇ, ಮಾರಾಯ, ನಾನು ಅವಳನ್ನು ನೋಡಿಯೂ ಇಲ್ಲ. 344 00:24:11,791 --> 00:24:13,750 ನೀನು ಗುಂಡು ಹಾರಿಸಲಿಲ್ಲ, ತಿವಾರಿ. 345 00:24:13,833 --> 00:24:16,708 ಆದರೆ ಅವಳು ನಿನ್ನಿಂದಾಗಿ ಸತ್ತಳು. 346 00:24:19,416 --> 00:24:20,708 ನೀನೂ ಜೀವಗಳನ್ನು ತೆಗೆಯುತ್ತೀಯ. 347 00:24:20,791 --> 00:24:23,333 ನಿನ್ನನ್ನು ನೀನು ಸೈನಿಕನೆಂದು ಕರೆದುಕೊಂಡರೆ ಅದು ಬದಲಾಗುವುದಿಲ್ಲ. 348 00:24:25,875 --> 00:24:28,333 ರುಕ್ಮ, ನೋಡು. 349 00:24:30,833 --> 00:24:33,291 ಅವಳು ಸತ್ತಿದ್ದಕ್ಕೆ ನನಗೆ ತುಂಬಾ ದುಃಖವಿದೆ. 350 00:24:34,166 --> 00:24:36,291 ಆದರೆ ಅವಳ ಸಾವಿಗೆ ನಾನು ಜವಾಬ್ದಾರನಲ್ಲ. 351 00:24:37,583 --> 00:24:39,500 ಅವಳು ನಿನ್ನನ್ನು ಪ್ರೀತಿಸಿದ ಕ್ಷಣವೇ… 352 00:24:41,291 --> 00:24:44,333 ತನ್ನ ಮರಣ ಪ್ರಮಾಣಪತ್ರಕ್ಕೆ ತಾನೇ ಸಹಿ ಹಾಕಿಬಿಟ್ಟಳು. 353 00:24:46,083 --> 00:24:48,541 ಅವಳ ಸಾವಿಗೆ ಯಾರಾದರೂ ಜವಾಬ್ದಾರರಾಗಿದ್ದರೆ… 354 00:24:50,000 --> 00:24:51,083 ಅದು ನೀನು. 355 00:24:55,750 --> 00:24:57,041 ಇದು ಸರಳ ವಿಷಯ. 356 00:24:58,166 --> 00:25:01,333 ನೀನು ನನ್ನ ಹೆಂಡತಿಯನ್ನು ಕೊಂದೆ, ಮತ್ತು ನನಗೆ ಪ್ರತೀಕಾರ ಬೇಕು. 357 00:25:01,416 --> 00:25:03,208 -ಹಾಗಾದರೆ ನನ್ನನ್ನು ಕೊಲ್ಲು. -ಹೌದು, ಕೊಲ್ಲುತ್ತೇನೆ. 358 00:25:03,666 --> 00:25:06,833 ಕೊಲ್ಲುತ್ತೇನೆ. ನಿಧಾನವಾಗಿ. ಸಂತೋಷದಿಂದ. ನನ್ನಷ್ಟಕ್ಕೆ ಸಮಯ ತೆಗೆದುಕೊಳ್ಳುತ್ತೇನೆ. 359 00:25:06,916 --> 00:25:08,583 ಅಲ್ಲಿಯವರೆಗೆ ಕಾಯಿ. 360 00:25:10,666 --> 00:25:12,916 ನೀನು ಯಾಕೆ ಅವನನ್ನು ಪ್ರಚೋದಿಸುತ್ತಿದ್ದೀಯ? 361 00:25:13,000 --> 00:25:14,333 ಬೆಂಕಿಗೆ ತುಪ್ಪ ಸುರಿಯುವುದು ಯಾಕೆ? 362 00:25:14,416 --> 00:25:16,000 ಚಿಂತಿಸಬೇಡ, ಜೆಕೆ. 363 00:25:16,083 --> 00:25:18,333 ಅವನು ನಮ್ಮನ್ನು ಇಲ್ಲಿ ಕೊಲ್ಲುವುದಿಲ್ಲ. 364 00:25:19,000 --> 00:25:20,750 ಅಷ್ಟು ನನಗೆ ಅರ್ಥವಾಗಿದೆ. 365 00:25:21,125 --> 00:25:23,500 ಬಾಸ್, ಇವರನ್ನು ಏನು ಮಾಡೋಣ? ಕೊಲ್ಲಬೇಕೇ? 366 00:25:26,208 --> 00:25:27,375 ನಾವು ಅವರನ್ನು ಈಗ ಕೊಲ್ಲುವಂತಿಲ್ಲ. 367 00:25:27,458 --> 00:25:30,000 ಭಾರತೀಯ ಸೈನಿಕರಿಂದಾಗಿ ಝುಲೋಂಗ್ ಈಗಾಗಲೇ ಉದ್ವೇಗಗೊಂಡಿದ್ದಾನೆ. 368 00:25:31,000 --> 00:25:33,041 ಬೇರೆ ಏನಾದರೂ ಮಾಡಿದರೆ, ಆತ ಬಹಳ ಕೋಪಗೊಳ್ಳುತ್ತಾನೆ. 369 00:25:37,916 --> 00:25:41,750 ಪರಿಸ್ಥಿತಿ ತಿಳಿಯಾಗುವವರೆಗೆ ಅವರನ್ನು ಬಂಧಿಕೋಣೆಯಲ್ಲಿರಿಸು. ಆಮೇಲೆ ನಿರ್ಧರಿಸೋಣ. 370 00:25:42,375 --> 00:25:43,333 ಸರಿ, ಬಾಸ್. 371 00:25:48,625 --> 00:25:50,125 ನಿನಗಾಗಿ ನನ್ನ ಬಳಿ ಒಂದು ಒಳ್ಳೇ ಸುದ್ದಿ ಇದೆ. 372 00:25:50,208 --> 00:25:52,833 ಶ್ರೀಕಾಂತ್ ಮೇಲಿನ ಎಲ್ಲಾ ಆರೋಪಗಳನ್ನು ಕೈಬಿಡಲಾಗುತ್ತಿದೆ. 373 00:25:53,250 --> 00:25:55,791 ನೀನು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಹೋಗಬಹುದು. 374 00:25:55,875 --> 00:25:58,291 ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ, 375 00:25:58,375 --> 00:26:00,750 ನಿನ್ನನ್ನು ಟಾಸ್ಕ್‌ನ ರಕ್ಷಣೆಯಲ್ಲಿ ಇಡಲಾಗುತ್ತದೆ. 376 00:26:04,583 --> 00:26:06,750 ಶ್ರೀಕಾಂತ್ ಬಗ್ಗೆ ಏನಾದರೂ ಸುದ್ದಿ ಇದೆಯೇ? 377 00:26:08,250 --> 00:26:09,916 ನನಗೆ ಅವನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. 378 00:26:15,625 --> 00:26:18,625 ನಾನು ಅವನ ಜೊತೆಯಲ್ಲಿ ಹಿಂತಿರುಗಲು ನಿಜವಾಗಿಯೂ ಆಶಿಸಿದ್ದೆ. 379 00:26:19,208 --> 00:26:21,958 ಸುಚಿ, ನೀನು ನಂಬಿಕೆ ಕಳೆದುಕೊಳ್ಳಬೇಡ. 380 00:26:22,041 --> 00:26:22,958 ನನ್ನನ್ನು ನಂಬು. 381 00:26:23,041 --> 00:26:24,041 ಅವನು ಹಿಂತಿರುಗುತ್ತಾನೆ. 382 00:26:24,125 --> 00:26:26,041 ಅವನು ನಮ್ಮ ಅತ್ಯುತ್ತಮ ಏಜೆಂಟರಲ್ಲೊಬ್ಬ. 383 00:26:32,291 --> 00:26:33,375 ನಿನಗೆ ಗೊತ್ತಾ, ಸಲೋನಿ… 384 00:26:36,166 --> 00:26:39,666 ಶ್ರೀ ನನ್ನ ಜೀವನದುದ್ದಕ್ಕೂ ನನಗೆ ಸುಳ್ಳು ಹೇಳಿದ್ದಾನೆ. 385 00:26:40,750 --> 00:26:43,875 ಅವನ ಕೆಲಸದ ಬಗ್ಗೆ, ಅವನು ಇರುವ ಸ್ಥಳಗಳ ಬಗ್ಗೆ. 386 00:26:46,416 --> 00:26:48,416 ಆದರೆ ಈ ಬಾರಿ ನನಗೆ ಸತ್ಯ ತಿಳಿದಿದೆ. 387 00:26:50,333 --> 00:26:53,458 ಅವನು ದೂರವಿರಲು ನಿಜವಾದ ಕಾರಣ ನನಗೆ ತಿಳಿದಿದೆ. 388 00:26:54,625 --> 00:26:57,083 ಹಿಂದೆ ಇದ್ದಂತೆ, ನನಗೇನೂ ತಿಳಿಯದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. 389 00:26:57,166 --> 00:26:58,416 ಆಗ ನನಗೆ ಸುಳ್ಳು ಹೇಳಲಾಗುತ್ತಿತ್ತು. 390 00:26:59,250 --> 00:27:02,958 ಬಹುಶಃ ಸತ್ಯ ತಿಳಿದುಕೊಳ್ಳುವುದಕ್ಕಿಂತ ತಪ್ಪು ತಿಳಿದುಕೊಂಡು ಇರುವುದೇ ಉತ್ತಮ. 391 00:27:03,625 --> 00:27:06,291 ಗೊತ್ತಲ್ಲಾ, ಪ್ರತಿದಿನ ಯೋಚಿಸುತ್ತೇನೆ… 392 00:27:08,291 --> 00:27:12,125 ಶ್ರೀಕಾಂತ್ ಯಾವುದೇ ಕ್ಷಣದಲ್ಲಿ ಬಾಗಿಲಿನಿಂದ ಒಳಗೆ ಬಂದು, 393 00:27:12,208 --> 00:27:15,375 ನನಗೆ ಮತ್ತೆ ಯಾವುದಾದರೂ ಸುದೀರ್ಘವಾದ, ಕಟ್ಟುಕಥೆ ಹೇಳುತ್ತಾನೆ ಎಂದು. 394 00:27:18,083 --> 00:27:20,791 ಎಲ್ಲವೂ ಸರಿಯಾಗಿದೆ ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಾನೆ. 395 00:27:27,333 --> 00:27:28,375 ಅವನ ನೆನಪು ಬಹಳ ಕಾಡುತ್ತಿದೆ. 396 00:27:30,625 --> 00:27:32,083 ಅವನು ನನಗೆ ಮರಳಿ ಬೇಕು, ಸಲೋನಿ. 397 00:27:38,708 --> 00:27:42,875 ಪ್ರೈಮ್ ಟೈಮ್ ಸುದ್ದಿ ಭಾವಿಕ್ ಕನ್ವರ್ ಜೊತೆ 398 00:27:42,958 --> 00:27:45,708 'ಮನ್ ಭಾರತ್ ನ್ಯೂಸ್'ಗೆ ಸ್ವಾಗತ. 399 00:27:45,791 --> 00:27:47,750 ನಿಮಗಾಗಿ ಒಂದು ಬಿಸಿ ಸುದ್ದಿ ತಂದಿದ್ದೇವೆ. 400 00:27:47,833 --> 00:27:50,708 ನಮ್ಮಲ್ಲಿ ವಿಶ್ವಾಸಾರ್ಹ ಮಾಹಿತಿ ಇದೆ, ಬಸು ಸರ್ಕಾರವು ರಹಸ್ಯವಾಗಿ 401 00:27:50,791 --> 00:27:53,833 ಒಂದು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು. 402 00:27:54,541 --> 00:27:56,833 ಹೌದು. ಮತ್ತು ಇದು ನಿಜವಾಗಿದ್ದರೆ, 403 00:27:56,916 --> 00:27:58,375 ನಾವು ಒಪ್ಪಿಕೊಳ್ಳಲೇಬೇಕು, 404 00:27:58,458 --> 00:28:01,208 ಹೇಡಿ ಬಸು ಅವರು ಒಂದು ದಿಟ್ಟ ಹೆಜ್ಜೆಯನ್ನಿಟ್ಟಿರುವುದು ಇದೇ ಮೊದಲು. 405 00:28:01,291 --> 00:28:04,291 ಹೌದು. ಕೊನೆಗೂ ಆಕೆ ಸ್ವಲ್ಪ ಧೈರ್ಯ ತೋರಿಸಿದ್ದಾರೆ. 406 00:28:04,375 --> 00:28:09,208 ಮರೆಯಬೇಡಿ, ನೀವು ಈ ಸುದ್ದಿಯನ್ನು ಮೊದಲು ಕೇಳಿದ್ದು ನಮ್ಮ ವಾಹಿನಿಯಲ್ಲಿ. 407 00:28:20,541 --> 00:28:21,666 ದಯವಿಟ್ಟು ಕೂರು, ಕೂರು. 408 00:28:25,958 --> 00:28:28,333 ಏನನ್ನು ತೆಗೆದುಕೊಳ್ಳುತ್ತೀಯಾ? ಚಹಾ? ಕಾಫಿಯೇ? 409 00:28:28,416 --> 00:28:30,041 ನನಗೇನೂ ಬೇಡ, ಮೇಡಂ. ಧನ್ಯವಾದ. 410 00:28:30,125 --> 00:28:31,166 ನನಗೊಂದು ಚಹಾ. 411 00:28:32,833 --> 00:28:36,166 ಇಷ್ಟು ಕಡಿಮೆ ಸಮಯದಲ್ಲಿ ತಿಳಿಸಿದರೂ ಭೇಟಿಯಾಗಲು ಬಂದಿದ್ದೀಯ, ತುಂಬಾ ಧನ್ಯವಾದ. 412 00:28:37,208 --> 00:28:38,458 ಇದು ನನ್ನ ದೇಶವೂ ಹೌದು. 413 00:28:39,125 --> 00:28:41,625 ಮತ್ತು ನನ್ನ ದೇಶಕ್ಕೆ ನನ್ನ ಅವಶ್ಯಕತೆ ಇದ್ದಾಗಲೆಲ್ಲಾ, 414 00:28:41,708 --> 00:28:43,750 ನಾನು ಅಲ್ಲಿರುತ್ತೇನೆ. ಯಾವಾಗಲೂ. 415 00:28:46,291 --> 00:28:49,000 ಆದರೆ ಯುಕೆ ಪ್ರಜೆಯಾಗಿದ್ದೀಯ ಎಂದು ಕೇಳ್ಪಟ್ಟೆ. 416 00:28:51,166 --> 00:28:52,375 ಹೌದು, ಖಂಡಿತ. 417 00:28:53,958 --> 00:28:56,083 ಆದರೆ ನನ್ನ ಹೃದಯದಲ್ಲಿ, ನಾನು ಯಾವಾಗಲೂ ಭಾರತೀಯನೇ. 418 00:28:58,208 --> 00:28:59,708 ಅಂದಹಾಗೆ, ನಾನು ನಿಮ್ಮನ್ನು ಶ್ಲಾಘಿಸಲೇಬೇಕು. 419 00:28:59,791 --> 00:29:03,666 ವಿರೋಧ ಪಕ್ಷದ ದ್ವೇಷಪೂರಿತ ಪ್ರಚಾರಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ಟೀಕೆಗಳ ಹೊರತಾಗಿಯೂ, 420 00:29:03,750 --> 00:29:05,666 ನೀವು ನಿಮ್ಮ ನೀತಿಗಳಿಗೆ ಅಂಟಿಕೊಂಡಿದ್ದಿರಿ. 421 00:29:07,291 --> 00:29:09,291 ಮಾಧ್ಯಮಗಳು ಯಾರಿಗೂ ನಿಷ್ಠವಾಗಿರುವುದಿಲ್ಲ. 422 00:29:10,000 --> 00:29:10,916 ವಿಶೇಷವಾಗಿ ಯಾರೆಂದರೆ, 423 00:29:11,416 --> 00:29:14,250 ಯುಕೆ ಮತ್ತು ಯುಎಸ್‌ನಲ್ಲಿ ಕುಳಿತಿರುವವರಿಂದ ಖರೀದಿಸಲ್ಪಟ್ಟವರು. 424 00:29:16,833 --> 00:29:18,541 ಏನೂ ಪರವಾಗಿಲ್ಲ, ನನಗೆ ಬೇಕಾಗಿದ್ದು 425 00:29:18,625 --> 00:29:21,291 ಈಶಾನ್ಯದಲ್ಲಿ ಶಾಂತಿ ಮತ್ತು ಪ್ರಗತಿ. 426 00:29:21,916 --> 00:29:23,625 ಆದರೆ, ನೋಡು, ಬಲವಂತದಿಂದ, 427 00:29:23,708 --> 00:29:27,000 ನಾನು ನಿಮ್ಮೊಂದಿಗೆ ಕುಳಿತು ಒಪ್ಪಂದ ಮಾಡಿಕೊಳ್ಳಬೇಕಾಗಿ ಬಂದಿದೆ. 428 00:29:27,666 --> 00:29:30,458 ಸರಿ, ನಾವು ಈ ಒಪ್ಪಂದವನ್ನು ತ್ವರಿತಗೊಳಿಸಬೇಕು. 429 00:29:33,208 --> 00:29:38,041 ಹೇಗೋ ಗೊತ್ತಿಲ್ಲ, ಆದರೆ ಈ ಸುದ್ದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ. 430 00:29:38,708 --> 00:29:41,625 ಈ ಬಗ್ಗೆ ಚಿಂತಿಸಬೇಡಿ, ಮೇಡಂ. ಮಾಧ್ಯಮ ಹೇಗೆ ಕಾರ್ಯನಿರ್ವಹಿಸುತ್ತದೆ ನಿಮಗೆ ಗೊತ್ತು. 431 00:29:42,375 --> 00:29:44,500 ನಾನು ಆ ಒಕ್ಕೂಟದ ಜೊತೆ ಪ್ರಕ್ರಿಯೆ ಆರಂಭಿಸಿದ್ದೇನೆ. 432 00:29:44,583 --> 00:29:48,916 ಅವರು ಔಪಚಾರಿಕತೆಗಳನ್ನು ಪ್ರಾರಂಭಿಸಿ, ಮುಂದಿನ ವಾರವೇ ಒಪ್ಪಂದವನ್ನು ಮುಗಿಸಲು ಸಿದ್ಧರಾಗಿದ್ದಾರೆ. 433 00:29:49,583 --> 00:29:52,708 ಪ್ರಾಥಮಿಕ ಒಪ್ಪಂದಕ್ಕೆ ಸಹಿ ಮಾಡಿದಮೇಲೆ, ಸರಕುಗಳ ಸಾಗಣೆ ಶುರುವಾಗಬಹುದು. 434 00:29:53,916 --> 00:29:55,750 ಸರಿ. ಒಳ್ಳೆಯದು. 435 00:29:56,375 --> 00:29:58,125 -ಧನ್ಯವಾದ. -ಧನ್ಯವಾದ, ಮೇಡಂ. 436 00:29:59,458 --> 00:30:00,291 ಮೇಡಂ? 437 00:30:08,958 --> 00:30:09,958 ಧನ್ಯವಾದ. 438 00:30:27,500 --> 00:30:29,125 ಯಾರಾದರೂ ನಮಗೆ ನೀರು ತನ್ನಿ! 439 00:30:30,000 --> 00:30:31,875 ಯಾರಾದರೂ ಕೇಳಿಸಿಕೊಳ್ಳುತ್ತಿದ್ದೀರಾ? 440 00:30:31,958 --> 00:30:33,291 ನಾನು ಬಾಯಾರಿಕೆಯಿಂದ ಸಾಯುತ್ತಿದ್ದೇನೆ. 441 00:30:33,375 --> 00:30:34,875 ಹೇ! ಬಾಯಿ ಮುಚ್ಚು! 442 00:30:37,083 --> 00:30:39,541 ಎಂಥಾ ಕರ್ಮ! ನಮ್ಮನ್ನು ಪ್ರಾಣಿಗಳಂತೆ ಕೂಡಿಹಾಕಿದ್ದಾರೆ. 443 00:30:40,750 --> 00:30:42,000 ಸಂಪೂರ್ಣವಾಗಿ ಸಿಲುಕಿಬಿದ್ದೆವು. 444 00:30:42,458 --> 00:30:44,791 ಟೆಮ್ಜೆನ್ ನಿಜವಾಗಲೂ ನಮ್ಮನ್ನು ಮೋಸಗೊಳಿಸಿದ. 445 00:30:44,875 --> 00:30:46,500 -ನನಗೆ ಗೊತ್ತಿಲ್ಲ-- -ಜೆಕೆ! 446 00:30:47,000 --> 00:30:48,000 ನಾಲಿಗೆ ಹಿಡಿತದಲ್ಲಿಟ್ಟುಕೋ. 447 00:30:49,708 --> 00:30:52,041 ಟೆಮ್ಜೆನ್ ತಾನು ಸತ್ತರೂ, ನಮಗೆ ದ್ರೋಹ ಬಗೆಯುವುದಿಲ್ಲ! 448 00:30:52,500 --> 00:30:53,500 ಆಕೆ ಹೇಳಿದ್ದು ಸರಿ. 449 00:30:53,583 --> 00:30:55,291 ನನಗೆ ಟೆಮ್ಜೆನ್ ಬಾಲ್ಯದಿಂದಲೂ ಗೊತ್ತು. 450 00:30:56,375 --> 00:30:57,375 ಅದು ಟೆಮ್ಜೆನ್ ಅಲ್ಲ. 451 00:30:58,583 --> 00:31:00,583 ಟೆಮ್ಜೆನ್‌ಗೆ ಆಮಿಷವೊಡ್ಡಿದ್ದು ರುಕ್ಮ. 452 00:31:00,958 --> 00:31:02,416 ನಮ್ಮನ್ನು ಹಿಡಿಯಲು. 453 00:31:02,500 --> 00:31:04,291 ಅವನು ನಮಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾನೆ! 454 00:31:04,375 --> 00:31:05,375 ಅರ್ಥವಾಯಿತೇ? 455 00:31:05,916 --> 00:31:08,500 ಅವರು ಅವನನ್ನು ಕೊಲ್ಲುವ ಮೊದಲು ಚಿತ್ರಹಿಂಸೆ ನೀಡಿಲ್ಲ ಎಂದು ಭಾವಿಸುತ್ತೇನೆ. 456 00:31:08,583 --> 00:31:10,416 ಸ್ಟೀಫನ್, ಅವನ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ. 457 00:31:10,500 --> 00:31:11,916 ಉಲುಪಿ, ಕ್ಷಮಿಸು. 458 00:31:12,000 --> 00:31:14,000 ಕ್ಷಮಿಸಿ. ಕ್ಷಮಿಸಿ. 459 00:31:14,416 --> 00:31:15,958 ನೀನು ಏನು ಮಾಡುತ್ತಿದ್ದೀಯಾ? 460 00:31:16,041 --> 00:31:17,458 ನಾವು ಎಷ್ಟೇ ಕ್ಷಮೆ ಕೇಳಿದರೂ, 461 00:31:17,541 --> 00:31:19,708 ನಾವು ಶೀಘ್ರದಲ್ಲೇ ಟೆಮ್ಜೆನ್ ಹೋದಲ್ಲಿಗೇ ಹೋಗಲಿದ್ದೇವೆ. 462 00:31:19,791 --> 00:31:21,583 ಸ್ವಲ್ಪ ಹೊತ್ತು ಬಾಯಿ ಮುಚ್ಚಿಕೊಂಡಿರುತ್ತೀಯಾ? 463 00:31:22,875 --> 00:31:25,291 ಯಾವಾಗಲೂ ತುಂಬಾ ನಕಾರಾತ್ಮಕವಾಗಿರುತ್ತೀಯ. 464 00:31:25,375 --> 00:31:27,750 ಸಕಾರಾತ್ಮಕವಾಗಿದ್ದುಕೊಂಡು ನೀನು ಏನನ್ನು ಸಾಧಿಸಿದೆ? 465 00:31:27,833 --> 00:31:29,500 ನೀನೂ ಸಾಯಲು ನಮ್ಮೊಂದಿಗೆ ಇಲ್ಲೇ ಸಿಲುಕಿದ್ದೀಯ. 466 00:31:29,583 --> 00:31:31,541 ನಾವು ಸತ್ತರೆ, ಸಾಯುತ್ತೇವೆ! 467 00:31:31,625 --> 00:31:33,000 ಹೌದು, ನಿನಗೇಕೆ ಚಿಂತೆ? 468 00:31:33,083 --> 00:31:34,916 ನೀನು ಜೀವನದ ಎಲ್ಲಾ ಸುಖಗಳನ್ನು ಅನುಭವಿಸಿದ್ದೀಯ. 469 00:31:35,000 --> 00:31:36,166 ನಿನಗೆ ಹೆಂಡತಿ-ಮಕ್ಕಳಿದ್ದಾರೆ. 470 00:31:36,250 --> 00:31:38,208 ಅದಕ್ಕೂ ಮೊದಲು ಒಬ್ಬಳು ಪ್ರೇಯಸಿ. ಆಮೇಲೆ, ವಿಚ್ಛೇದನ. 471 00:31:38,291 --> 00:31:39,625 ಒಂಟಿಯಾಗಿ ಸಾಯುವವರು ಯಾರು? ನಾನು. 472 00:31:39,958 --> 00:31:43,666 ಈಗಷ್ಟೇ ನನಗೆ ಪ್ರಣಯಭೇಟಿಯಲ್ಲಿ ಮುನ್ನಡೆ ಸಿಗುತ್ತಿತ್ತು, ಆದರೆ ಈಗ ಎಲ್ಲವೂ ಮುಗಿದುಹೋಯಿತು. 473 00:31:44,458 --> 00:31:47,583 ಒಬ್ಬಂಟಿಯಾಗಿ ಬದುಕುವುದು ಮತ್ತು ಸಾಯುವುದು ಜೀವನದಲ್ಲಿ ಅತಿ ದೊಡ್ಡ ಶಾಪ, ತಿವಾರಿ. 474 00:31:48,250 --> 00:31:50,041 ನಿನ್ನ ಹತಾಶೆಗೆ ಮಿತಿಯೇ ಇಲ್ಲ. 475 00:31:51,375 --> 00:31:55,208 ಇಲ್ಲಿ ನಾವು ಸನ್ನಿಹಿತ ಸಾವಿನ ಅಂಚಿನಲ್ಲಿದ್ದೇವೆ, 476 00:31:55,291 --> 00:31:57,083 ನೀನು ಪ್ರಣಯಭೇಟಿ ಬಗ್ಗೆ ಗೊಣಗುತ್ತಿದ್ದೀಯಾ? 477 00:31:57,166 --> 00:31:59,541 ಇಲ್ಲಿಂದ ಹೊರಗೆ ಹೋಗುವ ಬಗ್ಗೆ ಯೋಚಿಸು. 478 00:32:10,041 --> 00:32:12,208 ನಾವು ನಿನ್ನನ್ನು ಹಿಡಿಯುವುದಿಲ್ಲ ಎಂದುಕೊಂಡಿದ್ದೆಯಾ, ಟೆಮ್ಜೆನ್? 479 00:32:12,791 --> 00:32:15,375 ನೀನು ಅವರನ್ನು ಎಲ್ಲಿ ಮತ್ತು ಹೇಗೆ ಭೇಟಿಯಾದೆ ಎಂದು ನಮಗೆ ತಿಳಿದಿದೆ. 480 00:32:16,041 --> 00:32:17,583 ನಾವು ನಿನ್ನನ್ನು ಹಿಂಬಾಲಿಸಿದೆವು, ಮೂರ್ಖ! 481 00:32:19,416 --> 00:32:21,000 ಅವನನ್ನು ಏನು ಮಾಡೋಣ? 482 00:32:21,833 --> 00:32:23,958 ರುಕ್ಮ ಇವನ ಮೂಲಕ ಎಲ್ಲರಿಗೂ ಒಂದು ಪಾಠ ಕಲಿಸುತ್ತಾನೆ. 483 00:32:27,166 --> 00:32:30,416 ಚಿಯಾಂಗ್ ಮೈ 484 00:33:15,375 --> 00:33:18,375 ಅಲ್ಲೇ ಪಹರೆ ವಾಹನ ಹೋಯಿತು, ಸರಿಯಾದ ಸಮಯಕ್ಕೆ. 485 00:33:19,666 --> 00:33:22,750 ಮುಂದಿನ ವಾಹನ ಬರುವವರೆಗೆ ನಮ್ಮ ಬಳಿ ಕೇವಲ 18 ನಿಮಿಷಗಳಿವೆ. 486 00:34:13,375 --> 00:34:14,208 ಹೋಗೋಣ. 487 00:34:22,333 --> 00:34:24,083 ಏನು ನಡೆಯುತ್ತಿದೆ, ತಿವಾರಿ? 488 00:34:24,958 --> 00:34:26,458 ಹೇ, ಬೆಂಜಮಿನ್. 489 00:34:26,541 --> 00:34:27,416 ಸ್ಟೀಫನ್, ಅಣ್ಣಾ. 490 00:34:28,208 --> 00:34:30,125 -ಅತ್ಯುತ್ತಮ ಸಮಯ. -ಖಂಡಿತ, ಬಾಸ್. 491 00:34:30,208 --> 00:34:31,833 ನೀವೆಲ್ಲರೂ ಕ್ಷೇಮವಿರುವುದು ನನಗೆ ಖುಷಿಯಾಯಿತು. 492 00:34:31,916 --> 00:34:33,958 ಸ್ಟೀಫನ್, ಏನು ನಡೆಯುತ್ತಿದೆ? 493 00:34:34,708 --> 00:34:36,083 ಶ್ರೀಕಾಂತ್, ಇವನು ಬೆಂಜಮಿನ್. 494 00:34:36,875 --> 00:34:39,250 ಮಯನ್ಮಾರ್‌ನಲ್ಲಿರುವ ಎಂಸಿಎ-ಎಸ್ ಸೇನಾ ತಂಡದ ಕಮಾಂಡರ್. 495 00:34:39,333 --> 00:34:40,250 ತಾತ ಸದಾ ಹೇಳುತ್ತಿದ್ದರು, 496 00:34:40,333 --> 00:34:43,250 ನಿನ್ನ ಬಳಿ ಯಾವಾಗಲೂ ಒಂದು ಪರ್ಯಾಯ ಯೋಜನೆ ಇರಬೇಕು. ಯೋಜನೆ 'ಬಿ'. 497 00:34:43,666 --> 00:34:47,750 ನಾನು ಅವರಿಗೆ ಮೊದಲೇ ಹೇಳಿದ್ದೆ, ನಾವು 24 ಗಂಟೆಗಳಲ್ಲಿ ಹಿಂತಿರುಗದೇ ಇದ್ದರೆ, 498 00:34:47,833 --> 00:34:49,375 ನಾವು ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ ಎಂದು. 499 00:34:49,458 --> 00:34:52,000 ನಮ್ಮನ್ನು ರಕ್ಷಿಸಲು ಒಂದು ಸೇನಾ ತಂಡ ಈಗಾಗಲೇ ಸಿದ್ಧವಾಗಿತ್ತು. 500 00:34:52,875 --> 00:34:54,250 ನಮ್ಮ ಬಳಿ ಹೆಚ್ಚು ಸಮಯವಿಲ್ಲ. 501 00:34:54,333 --> 00:34:56,958 ಮುಂದಿನ ಪಹರೆ 18 ನಿಮಿಷಗಳಲ್ಲಿ ಬರುತ್ತದೆ. 502 00:34:57,458 --> 00:34:58,333 ಯೋಜನೆ ಏನು? 503 00:34:58,708 --> 00:35:01,375 ಮೊದಲಿಗೆ, ನಮ್ಮ ಸೈನಿಕರನ್ನು ಬಿಡುಗಡೆಗೊಳಿಸೋಣ. 504 00:35:01,458 --> 00:35:02,916 ಏಕೆಂದರೆ ಇದನ್ನೇ ಅಸ್ತ್ರವಾಗಿ 505 00:35:03,000 --> 00:35:05,375 ರುಕ್ಮ ನಮ್ಮ ಸರ್ಕಾರದ ವಿರುದ್ಧ ಬಳಸಬಹುದಾಗಿದೆ. 506 00:35:05,458 --> 00:35:07,250 ಜೆಕೆ, ಸ್ಟೀಫನ್, 507 00:35:07,333 --> 00:35:10,208 ನೀವಿಬ್ಬರೂ ನಮ್ಮ ಸೈನಿಕರನ್ನು ಕರೆದುಕೊಂಡು, ಕ್ಷೇಮವಾಗಿ ಭಾರತವನ್ನು ತಲುಪಿರಿ. 508 00:35:10,291 --> 00:35:11,541 ನಾವು ರುಕ್ಮನನ್ನು ಹಿಂಬಾಲಿಸೋಣ. 509 00:35:12,500 --> 00:35:14,000 ಶ್ರೀಕಾಂತ್, ನಾನು ಇದ್ದು, ಸಹಾಯ ಮಾಡಬಲ್ಲೆ. 510 00:35:14,083 --> 00:35:16,166 ನೀನು ಈಗಾಗಲೇ ಸಾಕಷ್ಟು ಮಾಡಿದ್ದೀಯ, ಸ್ಟೀಫನ್. 511 00:35:17,541 --> 00:35:19,625 ಈಗ ನಿನ್ನ ಜನರಿಗೆ ನಿನ್ನ ಅವಶ್ಯಕತೆ ಇದೆ. 512 00:35:20,833 --> 00:35:23,250 ಚಿಂತಿಸಬೇಡ, ನಾನು ಇಲ್ಲಿ ಎಲ್ಲವನ್ನೂ ನಿಭಾಯಿಸುತ್ತೇನೆ. 513 00:35:47,833 --> 00:35:49,375 ತುಂಬಾ ಚಳಿ ಇದೆ. 514 00:35:49,541 --> 00:35:50,875 ನಿನ್ನ ಬಳಿ ಲೈಟರ್ ಇದೆಯೇ? 515 00:35:50,958 --> 00:35:52,416 ಏನು? 516 00:36:00,500 --> 00:36:01,791 ವಿಕ್ರಂ. 517 00:36:01,875 --> 00:36:02,833 ಶ್ರೀಕಾಂತ್. 518 00:36:08,500 --> 00:36:09,708 ನೀನು ಇಲ್ಲೇನು ಮಾಡುತ್ತಿದ್ದೀಯಾ? 519 00:36:11,041 --> 00:36:12,375 ನಿಮಗೆ ನಡೆಯಲು ಸಾಧ್ಯವೇ? 520 00:36:12,750 --> 00:36:14,750 ನಮ್ಮೆಲ್ಲರ ಸ್ಥಿತಿ ಕೆಟ್ಟದಾಗಿದೆ. 521 00:36:14,833 --> 00:36:15,750 ಆದರೆ ನಿಭಾಯಿಸುತ್ತೇವೆ. 522 00:36:16,416 --> 00:36:17,250 ಸರಿ. 523 00:36:17,875 --> 00:36:20,041 ಅವರ ಸಮವಸ್ತ್ರಗಳನ್ನು ತೆಗೆದುಹಾಕಿ. 524 00:36:20,125 --> 00:36:22,041 ಶ್ರೀಕಾಂತ್, ಏನು ಮಾಡಲು ಯೋಜಿಸಿದ್ದೀಯಾ? 525 00:36:22,125 --> 00:36:23,750 ನಾನು ರುಕ್ಮನನ್ನು ತಲುಪಬೇಕು. 526 00:36:23,833 --> 00:36:26,333 ರುಕ್ಮಾ ಇಲ್ಲಿ ಈ ವಸತಿಗೃಹದಲ್ಲಿರಬೇಕು. 527 00:36:26,791 --> 00:36:29,791 ಈಗ, ನಮ್ಮ ಹುಡುಗರು ಹಳ್ಳಿಯ ಪ್ರತಿಯೊಂದು ಮೂಲೆಯಲ್ಲೂ ಬಾಂಬ್‌ಗಳನ್ನು ಇಡುತ್ತಿದ್ದಾರೆ. 528 00:36:29,875 --> 00:36:32,500 ಅವು ಸ್ಫೋಟಗೊಂಡ ತಕ್ಷಣ, ಅಸ್ತವ್ಯಸ್ಥತೆ ಉಂಟಾಗುತ್ತದೆ. 529 00:36:32,583 --> 00:36:34,375 ಸೇನೆಯು ಚದುರಿಹೋಗುತ್ತದೆ. 530 00:36:34,458 --> 00:36:37,708 ಇದು ರುಕ್ಮನನ್ನು ಹೆಚ್ಚುವರಿ ಪಡೆ ಬರುವವರೆಗೆ ಒಂಟಿಯಾಗಿಸುತ್ತದೆ. 531 00:36:37,791 --> 00:36:41,208 ಝುಲೋಂಗ್‌ನ ಬೆಂಬಲ ಪಡೆ ಬರಲು ಸುಮಾರು ಹತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತೆ. 532 00:36:41,291 --> 00:36:43,458 ಅದಕ್ಕೂ ಮೊದಲು, ನಾವು ರುಕ್ಮನನ್ನು ತಲುಪಬೇಕು. 533 00:36:43,916 --> 00:36:45,583 ಸ್ಟೀಫನ್, ಜೆಕೆ, ಜಾಗರೂಕರಾಗಿರಿ. 534 00:36:45,666 --> 00:36:47,291 ಯಾರೂ ನಿಮ್ಮನ್ನು ಗುರುತಿಸಬಾರದು. 535 00:36:47,375 --> 00:36:49,416 ಸರಿ. ನೀನೂ ಜಾಗರೂಕನಾಗಿರು. 536 00:36:49,500 --> 00:36:51,208 ಸತ್ತುಹೋಗಬೇಡ, ಬೋಳಿಮಗನೇ. 537 00:37:21,208 --> 00:37:23,291 ಸ್ಟೀಫನ್! ಹೋಗು, ಹೋಗು, ಹೋಗು, ಹೋಗು! 538 00:37:41,625 --> 00:37:43,208 -ಏನಾಯಿತು? -ಗೊತ್ತಿಲ್ಲ, ಸರ್. 539 00:37:45,125 --> 00:37:46,916 ಎಲ್ಲರೂ ಆ ಕಡೆ ಏಕೆ ಓಡುತ್ತಿದ್ದಾರೆ? 540 00:37:47,000 --> 00:37:49,291 -ಹಳ್ಳಿಯ ಮೇಲೆ ದಾಳಿಯಾಗಿದೆ, ಅಣ್ಣಾ! -ಏನು? 541 00:37:51,208 --> 00:37:52,500 ಶ್ರೀಕಾಂತ್ ತಿವಾರಿ ಇದ್ದಾನೆಯೇ ನೋಡು. 542 00:37:53,041 --> 00:37:55,333 ಶ್ರೀಕಾಂತ್ ತಿವಾರಿ ಮತ್ತು ಅವನ ಕಡೆಯವರು ತಪ್ಪಿಸಿಕೊಂಡಿದ್ದಾರೆ. 543 00:37:56,541 --> 00:37:57,666 ಮತ್ತು ಭಾರತೀಯ ಸೈನಿಕರು? 544 00:37:58,750 --> 00:38:00,875 ಅವರು ಇದ್ದಾರೆಯೇ ಎಂದು ನೋಡಲು ಹುಡುಗರನ್ನು ಕಳುಹಿಸಿದ್ದೇನೆ. 545 00:38:04,041 --> 00:38:06,541 ನನಗೆ ಏನಾದರೂ ತಿಳಿದ ತಕ್ಷಣ ನಿಮಗೆ ತಿಳಿಸುತ್ತೇನೆ, ಅಣ್ಣಾ. 546 00:38:07,916 --> 00:38:09,541 ಛೇ, ಝುಲೋಂಗ್ ನನಗೆ ತೊಂದರೆ ಕೊಡುತ್ತಾನೆ. 547 00:38:10,250 --> 00:38:12,708 ನೀವೆಲ್ಲರೂ ಏನು ಮಾಡುತ್ತಿದ್ದೀರಿ? ನನಗೆ ಬೆಂಬಲ ಪಡೆ ಬೇಕು. 548 00:38:13,000 --> 00:38:14,583 ಹತ್ತು ನಿಮಿಷಗಳಲ್ಲಿ ಬೆಂಬಲ ಪಡೆ ಕಳುಹಿಸುವೆವು. 549 00:38:15,166 --> 00:38:16,000 ಬೇಗ. 550 00:38:18,541 --> 00:38:21,416 ನಮ್ಮ ಮೇಲೆ ಯಾರು ದಾಳಿ ಮಾಡಿದರೆಂದು ಕಂಡುಹಿಡಿದೆಯಾ? 551 00:38:21,500 --> 00:38:23,708 ರುಕ್ಮನ ಕೈದಿಗಳು ತಪ್ಪಿಸಿಕೊಂಡಿದ್ದಾರೆ, ಸರ್. 552 00:38:23,833 --> 00:38:25,416 ಮತ್ತು ನೋಡುವುದಾದರೆ, 553 00:38:25,500 --> 00:38:28,916 ಕೈದಿಗಳನ್ನು ಬಿಡುಗಡೆ ಮಾಡಲು ಯಾವುದೋ ಹೊರಗಿನ ತಂಡವು ಹಳ್ಳಿಯೊಳಗೆ ನುಗ್ಗಿದೆ. 554 00:38:29,000 --> 00:38:31,250 ಖಂಡಿತವಾಗಿಯೂ, ಅವರೇ ನಮ್ಮ ಮೇಲೆ ದಾಳಿ ಮಾಡುತ್ತಿರುವುದು. 555 00:38:31,333 --> 00:38:32,833 ಆ ಬಡ್ಡಿಮಗ ರುಕ್ಮ. 556 00:39:03,458 --> 00:39:04,333 ಉಲುಪಿ! 557 00:39:04,916 --> 00:39:05,750 ಶ್ರೀಕಾಂತ್! 558 00:39:06,791 --> 00:39:07,625 ಎಲ್ಲವೂ ಕ್ಷೇಮವೇ? 559 00:39:07,708 --> 00:39:09,750 ಅವರು ತಪ್ಪಿಸಿಕೊಂಡಿದ್ದಾರೆ. ನಾವು ಮಾತ್ರ ಉಳಿದಿದ್ದೇವೆ. 560 00:39:09,833 --> 00:39:10,708 ಆದರೆ ಚಿಂತಿಸಬೇಡ. 561 00:39:10,791 --> 00:39:12,541 ನಾವಿಲ್ಲಿ ಸಂಭಾಳಿಸುತ್ತೇವೆ, ನೀವು ಮುಂದೆ ಸಾಗಿರಿ. 562 00:39:12,625 --> 00:39:13,708 ಸರಿ, ಹೋಗೋಣ. 563 00:39:13,791 --> 00:39:15,416 ಇಲ್ಲಿಂದ ಹೊರಹೋಗಲು ಒಂದು ದಾರಿ ಹುಡುಕಿ, ಸರಿನಾ? 564 00:39:15,500 --> 00:39:16,333 ಸರಿ. 565 00:39:16,416 --> 00:39:17,416 ಅವಳಿಗೆ ರಕ್ಷಣೆ ನೀಡಿ. 566 00:39:22,416 --> 00:39:24,125 ಹೋಗಿ! 567 00:39:35,583 --> 00:39:39,000 -ರುಕ್ಮ? -ಹಾಂ, ಹೇಳು. 568 00:39:39,083 --> 00:39:41,750 ಭಾರತೀಯ ಸೈನಿಕರು ಬಂಧಿಕೋಣೆಯಲ್ಲಿ ಇಲ್ಲ. 569 00:39:41,833 --> 00:39:43,083 ಅವರು ತಪ್ಪಿಸಿಕೊಂಡಿದ್ದಾರೆ. 570 00:39:46,625 --> 00:39:47,750 ಬೋಳಿಮಗ! 571 00:39:50,583 --> 00:39:51,458 ಅಲ್ಲಿಂದ ಹೊರಗೆ ಬಾ. 572 00:39:52,708 --> 00:39:54,291 ಸಿದ್ಧರಾಗಿ, ನಾವು ಹೊರಡಬೇಕು. 573 00:40:09,416 --> 00:40:12,583 ಬನ್ನಿ. ಝುಲೋಂಗ್ ನಮ್ಮನ್ನು ಹುಡುಕುವ ಮೊದಲು ನಾವು ಹಳ್ಳಿಯನ್ನು ಬಿಡಬೇಕು. 574 00:40:56,500 --> 00:40:57,875 ಇಲ್ಲಿಂದ ಹೊರಡೋಣ. 575 00:41:13,916 --> 00:41:15,083 ಅವರ ಬೆಂಬಲ ಪಡೆ ಬಂದಿದೆ. 576 00:41:15,166 --> 00:41:16,000 ಏನು? 577 00:41:16,083 --> 00:41:18,333 ಅವರ ಬೆಂಬಲ ಪಡೆ ಬಂದಿದೆ. ನೀವು ಹೊರಟುಬಿಡು, ಬೇಗ! 578 00:41:18,416 --> 00:41:21,083 ಶ್ರೀಕಾಂತ್, ವಿಕ್ರಂ, ಬೆಂಬಲ ಪಡೆಯ ತಂಡ ಬರುತ್ತಿದೆ. 579 00:41:21,166 --> 00:41:23,250 ನಾವು ಇಲ್ಲಿಂದ ಹೋಗಿಬಿಡಬೇಕು. ಬನ್ನಿ. 580 00:41:23,958 --> 00:41:25,083 ಶ್ರೀಕಾಂತ್, ನಾವು ಈಗಲೇ ಹೋಗಬೇಕು. 581 00:41:47,791 --> 00:41:49,166 ಬನ್ನಿ, ಹೊರಡಿ! ಸಾಗಿರಿ. 582 00:41:49,250 --> 00:41:51,083 ಝುಲೋಂಗ್ ಕಡೆಯವರು ಬರುತ್ತಿದ್ದಾರೆ. 583 00:41:51,166 --> 00:41:52,000 ಹೋಗೋಣ. 584 00:41:56,458 --> 00:41:58,375 ಶ್ರೀಕಾಂತ್, ಎಲ್ಲಿಗೆ ಹೋಗುತ್ತಿದ್ದೀಯಾ? 585 00:41:58,458 --> 00:41:59,708 ನಾನು ರುಕ್ಮನ ಹಿಂದೆ ಹೋಗಬೇಕು. 586 00:41:59,791 --> 00:42:01,708 ಹುಚ್ಚು ಹಿಡಿದಿದೆಯೇ? ಬೆಂಬಲ ಪಡೆ ಬರುತ್ತಿದೆ. 587 00:42:01,791 --> 00:42:05,041 -ನಾವು ಈಗಲೇ ಇಲ್ಲಿಂದ ಹೋಗಿಬಿಡಬೇಕು. -ನೀನು ಹೋಗು. ನನಗೆ ರುಕ್ಮ ಬೇಕು! 588 00:42:05,125 --> 00:42:09,250 ಶ್ರೀಕಾಂತ್, ನೀನು ನನ್ನ ಜೊತೆ ಬರುತ್ತೀಯ, ಇಲ್ಲವೇ ನಾನು ನಿನ್ನ ಜೊತೆ ಬರುತ್ತೇನೆ. ಅರ್ಥವಾಯಿತೇ? 589 00:42:09,333 --> 00:42:11,000 ನಿನ್ನನ್ನು ಒಬ್ಬಂಟಿಯಾಗಿ ಹೋಗಲು ಬಿಡಲ್ಲ. 590 00:42:16,875 --> 00:42:19,166 -ಸರಿ, ಹೋಗೋಣ. -ಸರಿ. 591 00:42:32,000 --> 00:42:34,000 ಶ್ರೀಕಾಂತ್? ಛೇ! 592 00:42:55,916 --> 00:42:56,750 ರುಕ್ಮ. 593 00:43:03,333 --> 00:43:05,083 ಎಲ್ಲಿಗೆ ಓಡಿಹೋಗುತ್ತೀಯ, ಮೂರ್ಖ? 594 00:43:05,916 --> 00:43:07,375 ನಡೆದುಕೊಂಡು ಹೋಗುತ್ತಿದ್ದೇನೆ, ಗಾಂಡು. 595 00:43:08,833 --> 00:43:10,208 ನನ್ನನ್ನು ಏಕೆ ಹಿಂಬಾಲಿಸುತ್ತಿದ್ದೀಯಾ? 596 00:43:10,291 --> 00:43:11,750 ನಿನಗೆ ಸಾಲ ಬಾಕಿ ಕೊಡಬೇಕೇ, ಬೋಳಿಮಗನೇ? 597 00:43:15,000 --> 00:43:16,000 ಅಯ್ಯೋ! 598 00:45:07,083 --> 00:45:08,666 ನಿಲ್ಲಿಸಿ! 599 00:45:24,791 --> 00:45:27,708 ಸೇನಾ ನೆಲೆ 33, ಸಂಪರ್ಕಕ್ಕೆ ಬನ್ನಿ. 600 00:45:29,208 --> 00:45:30,333 ಸೇನಾ ನೆಲೆ 33 ಸಂಪರ್ಕದಲ್ಲಿದೆ. 601 00:45:30,416 --> 00:45:33,375 ನಾನು ಎನ್ಐಎ ವಿಭಾಗದ ಜೆಕೆ ತಲ್ಪಡೆ. ಗುರುತು ಸಂಖ್ಯೆ 5495. 602 00:45:33,458 --> 00:45:36,666 ನಮಗೆ ಪ್ರವೇಶಿಸಲು ಅನುಮತಿ ಬೇಕು. ನನ್ನೊಂದಿಗೆ ಭಾರತೀಯ ಸೈನಿಕರಿದ್ದಾರೆ. ಓವರ್. 603 00:45:41,708 --> 00:45:43,416 ಸೇನಾ ನೆಲೆಯ ಕಮಾಂಡರ್‌ಗಾಗಿ ನಿರೀಕ್ಷಿಸಿ, ಸರ್. 604 00:46:55,041 --> 00:46:56,666 ಅವರನ್ನು ಬರಲು ಬಿಡಿ. ಅದು ನಮ್ಮ ವಾಹನ. 605 00:46:58,583 --> 00:46:59,708 ಬನ್ನಿ, ಬನ್ನಿ, ಬನ್ನಿ. 606 00:47:00,583 --> 00:47:01,833 ಹೋಗಿ, ಹೋಗಿ, ಹೋಗಿ! 607 00:47:01,916 --> 00:47:02,750 ಸರ್. 608 00:47:08,333 --> 00:47:09,916 ಎಲ್ಲಾ ಸೈನಿಕರು ಬಂದಾಯಿತೇ? 609 00:47:10,000 --> 00:47:11,500 ಇಬ್ಬರು ಸೈನಿಕರು ಬರುವುದು ಬಾಕಿ ಇದೆ. 610 00:47:14,375 --> 00:47:16,250 ಇಬ್ಬರು ಅಸ್ವಸ್ಥರಿದ್ದಾರೆ. ಬೇಗ. 611 00:47:21,958 --> 00:47:26,125 ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಒಪ್ಪಂದ ಆದಾಗಿನಿಂದ, ಉದ್ವಿಗ್ನತೆ ತೀವ್ರಗೊಂಡಿದೆ. 612 00:47:26,208 --> 00:47:30,791 ಭಾರತ-ಮಯನ್ಮಾರ್ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. 613 00:47:30,875 --> 00:47:32,916 ಈಗ, ಉಳಿಯುವ ಪ್ರಶ್ನೆಯೆಂದರೆ, 614 00:47:33,000 --> 00:47:35,250 ಯುದ್ಧ ಸನ್ನಿಹಿತವಾಗಿದೆಯೇ? 615 00:48:28,833 --> 00:48:30,291 ಹೇ, ಅದನ್ನು ತೆರೆಯಿರಿ, ತೆರೆಯಿರಿ! 616 00:48:30,375 --> 00:48:31,666 ಅವನನ್ನು ಒಳಗೆ ಬಿಡಿ. 617 00:48:36,500 --> 00:48:38,791 -ತಿವಾರಿ? -ಅವನು ರುಕ್ಮಾನ ಹಿಂದೆ ಹೋದ. 618 00:48:40,291 --> 00:48:41,125 ಛೇ! 619 00:52:06,250 --> 00:52:08,250 ಉಪ ಶೀರ್ಷಿಕೆ ಅನುವಾದ: ಮಾಲತಿ ಉಮೇಶ್ ಗೌಡ 620 00:52:08,333 --> 00:52:10,333 ಸೃಜನಶೀಲ ಮೇಲ್ವಿಚಾರಕರು ರಘುನಂದನ್ ಬಿ ಎಸ್