1 00:00:00,418 --> 00:00:01,793 ರೀಚರ್ ಹಿಂದಿನ ಸಂಚಿಕೆಯಲ್ಲಿ… 2 00:00:01,794 --> 00:00:03,586 ಆನಾಗೆ ಒಂದು ವಿಳಾಸವನ್ನು ಕಳಿಸಿದಳು. 3 00:00:03,587 --> 00:00:05,380 ಮೊದಲ ಮಹಡಿ ಒಂದು ಪಾಳುಬಿದ್ದ ರೆಸ್ಟೋರೆಂಟ್. 4 00:00:05,381 --> 00:00:07,257 ಅಲ್ಲಿ ಯಾವುದೋ ನವೀಕರಣ ನಡೆಯುತ್ತಿರುವಂತಿದೆ. 5 00:00:07,258 --> 00:00:08,551 ನಾವು ಮುಂದೆ ಹೋಗುವುದು ಅಲ್ಲಿಗೆಯೇ. 6 00:00:10,302 --> 00:00:12,137 ಇಲ್ಲಿ ಗುಂಡೇಟಿನ ಗಾಯಾಳು ಇದ್ದಾರೆ! 7 00:00:12,138 --> 00:00:13,596 ರಸ್ಸಲ್ ಪ್ಲಂ ಬಗ್ಗೆ ವಿಚಾರಿಸಿ. 8 00:00:13,597 --> 00:00:15,890 ಅವನನ್ನು ಗ್ರಂಥಾಲಯದಲ್ಲಿ ಬಿಟ್ಟು ಹೋಗಿದ್ದಕ್ಕೆ ಕ್ಷಮಿಸಲು ಹೇಳಿ. 9 00:00:15,891 --> 00:00:20,103 ನನ್ನ ಅಕ್ಕ ಸತ್ತ ರಾತ್ರಿ, ಅವಳ ಬಳಿ ದಶಕಗಳಷ್ಟು ಹಳೆಯ ಫೋಟೋ ಇದ್ದಂಥ ಜಂಪ್ ಡ್ರೈವ್ ಇತ್ತು. 10 00:00:20,104 --> 00:00:22,689 ಜನರಲ್ ಪೂತ್ರ ನಮ್ಮಿಬ್ಬರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕಂತೆ. 11 00:00:22,690 --> 00:00:25,483 ಹಿನ್ನೆಲೆಯಲ್ಲಿ ಆ ಬಿಳಿಯ ಫಲಕವಿತ್ತು, ಅದು ಅಷ್ಟು ಸ್ಪಷ್ಟವಾಗಿರಲಿಲ್ಲ. 12 00:00:25,484 --> 00:00:28,987 ಹೊಸದಾಗಿ ಅಭಿವೃದ್ಧಿಪಡಿಸಲಾದ ಎಐ ಮಸೂರವನ್ನು ಡಿಜಿಟಲ್ ರೀತಿಯಲ್ಲಿ ಮರುಕೇಂದ್ರೀಕರಿಸಬಹುದು. 13 00:00:28,988 --> 00:00:30,113 ಅದು ಕೆಲಸ ಮಾಡುತ್ತಿದೆ. 14 00:00:30,114 --> 00:00:33,367 ಅದರಲ್ಲಿ ಸಾಮೂಹಿಕ ವಿನಾಶದ ರಾಸಾಯನಿಕ ಅಸ್ತ್ರದ ಸೂತ್ರ ಇದೆ. 15 00:00:34,285 --> 00:00:37,620 ಟೈಮ್ಸ್ ಸ್ಕ್ವೇರ್‌ನಲ್ಲಿ ಒಬ್ಬ ಆತ್ಮಹತ್ಯಾ ದಾಳಿಕೋರನಿಗೆ ಅದನ್ನು ಕಟ್ಟಿ ಕಳಿಸಿದರೆ, 16 00:00:37,621 --> 00:00:39,664 10 ಬ್ಲಾಕ್ ವ್ಯಾಪ್ತಿಯೊಳಗಿನ ಎಲ್ಲರನ್ನೂ ಕೊಲ್ಲಬಹುದು. 17 00:00:39,665 --> 00:00:41,291 ಸಾವಿರಾರು ಜನರನ್ನು ಕೊಲ್ಲುವಷ್ಟು ತಯಾರಿಸಿ. 18 00:00:41,292 --> 00:00:45,003 ಲೈಲಾ ಡ್ರೈವನ್ನು ನಾಳೆ ಬೆಳಿಗ್ಗೆ 10:00 ಗಂಟೆಗೆ ಡಾರ್ಕ್ ವೆಬ್‌ನಲ್ಲಿ ಹರಾಜು ಹಾಕುತ್ತಿದ್ದಾಳೆ. 19 00:00:45,004 --> 00:00:47,255 ಅದು ಕೆಲಸ ಮಾಡುತ್ತೆಂದು ಸಾಬೀತುಪಡಿಸಲು ಜನರನ್ನು ಕೊಲ್ಲುತ್ತಾರೆ. 20 00:00:47,256 --> 00:00:49,924 ಡೆಲ್ಟಾ ಜನರಲ್ ಪೂತ್ರನನ್ನು ಬೇಟೆಯಾಡಿ ಕೊಂದರು ಅಂತ ಹೇಳಿದೆನಲ್ಲ, 21 00:00:49,925 --> 00:00:51,801 ಆಗ ಟ್ರಿಗರ್ ಒತ್ತಿದವನು ನಾನೇ. 22 00:00:51,802 --> 00:00:54,597 ಆಮಿಷ ಎಂದು ಕರೆದುಕೊಳ್ಳುವ ಮಹಿಳೆ ನಾನು ಅದನ್ನು ಮಾಡುವುದನ್ನು ನೋಡಿದಳು. 23 00:00:55,181 --> 00:00:56,931 ಇಲ್ಲಿ ದಾಳಿ ಮಾಡ್ತಿದ್ದಾರೆ. ನಾನು ಇರುವೆಡೆ. 24 00:00:56,932 --> 00:00:58,057 ಇದು ಈಗ ನಡೆಯುತ್ತಿದೆ. 25 00:00:58,058 --> 00:01:01,019 ನಮಗೆ ತಿಳಿದಿದೆ ಅಂತ ಅವರಿಗೆ ಗೊತ್ತಿಲ್ಲ. ದಾಳಿಯನ್ನು ತಟಸ್ಥಗೊಳಿಸಬೇಕು. 26 00:01:01,020 --> 00:01:02,229 ಹೇಗೆ? 27 00:01:23,375 --> 00:01:24,751 ಅಲ್ಲೇ ನಿಲ್ಲೋ, ಬೇವರ್ಸಿ! 28 00:01:24,752 --> 00:01:26,378 ಅಲುಗಾಡಬೇಡ! 29 00:01:28,464 --> 00:01:29,381 ಒಳಗೆ ಹತ್ತು! 30 00:01:30,466 --> 00:01:31,342 ಹೋಗು! 31 00:01:36,972 --> 00:01:38,223 ಏನಾಯಿತು ಅಲ್ಲಿ? 32 00:01:38,224 --> 00:01:40,433 ಸ್ಯಾಮ್ ಸನ್ ದಾಳಿಕೋರನನ್ನು ನದಿಗೆ ತಳ್ಳಿದರು. 33 00:01:40,434 --> 00:01:42,728 ನೀರು ವಿಷವನ್ನು ಗಾಳಿಯಲ್ಲಿ ಬೆರೆಯದಂತೆ ತಡೆಯಿತು. 34 00:01:43,813 --> 00:01:44,730 ಸ್ಯಾಮ್ ಸನ್ ಸತ್ತರು. 35 00:01:45,564 --> 00:01:46,523 ಛೆ. 36 00:01:46,524 --> 00:01:48,191 ಅವರು ಬಹಳಷ್ಟು ಜೀವಗಳನ್ನು ಉಳಿಸಿದರು. 37 00:01:48,192 --> 00:01:49,275 ತಾತ್ಕಾಲಿಕವಾಗಿ. 38 00:01:49,276 --> 00:01:51,986 ಅದರ ಕಾರ್ಯವೈಖರಿ ನೋಡದ ಹೊರತು ಯಾರೂ ಆ ಬಾಂಬನ್ನು ಕೊಳ್ಳುವುದಿಲ್ಲ. 39 00:01:51,987 --> 00:01:53,363 ಲೈಲಾ, ಆಮಿಷ ಮತ್ತೆ ಪ್ರಯತ್ನಿಸುವರು. 40 00:01:53,364 --> 00:01:54,697 ಎಲ್ಲಿ ಅಂತ ನಮಗೆ ಗೊತ್ತಿಲ್ಲ. 41 00:01:54,698 --> 00:01:57,283 ನಾವು ಅಂದುಕೊಂಡಂತೆ, ನಾಳೆಯ ಬೆಳಗಿನ ಪ್ರಯಾಣದಲ್ಲಿ. 42 00:01:57,284 --> 00:01:58,952 ಬಹುಶಃ ಬೇರೆ ಎಲ್ಲಾದರೂ. 43 00:01:58,953 --> 00:02:00,829 ಗೊತ್ತಿಲ್ಲ, ಆದರೆ ಅದು ಶೀಘ್ರದಲ್ಲೇ ಆಗುತ್ತದೆ. 44 00:02:00,830 --> 00:02:02,455 ನಾವು ಯಾರಿಗಾದರೂ ಹೇಳಲೇಬೇಕು. 45 00:02:02,456 --> 00:02:04,749 ಯಾರಿಗೆ? ಅವರು ಇದಕ್ಕೆ ನಮ್ಮನ್ನೇ ದೂಷಿಸುತ್ತಾರೆ. 46 00:02:04,750 --> 00:02:06,918 ನಾವು ಬಾಂಬ್ ದಾಳಿಯ ಸ್ಥಳದಲ್ಲಿದ್ದು, ಆ ಪೊಲೀಸರನ್ನು ಅಲ್ಲಿಗೆ 47 00:02:06,919 --> 00:02:08,878 ವಿನಾಕಾರಣ ಕರೆಸಿದ ನಂತರ ತಪ್ಪಿಸಿಕೊಂಡಿದ್ದೇವೆ. 48 00:02:08,879 --> 00:02:10,755 ಗಮನ ಬೇರೆಡೆ ಸೆಳೆಯಲು ಮಾಡಿದ್ದೇವೆಂದುಕೊಳ್ಳುವರು. 49 00:02:10,756 --> 00:02:12,091 ನಾವು ಈ ವ್ಯಾನ್ ಬಿಟ್ಟು ಹೋಗಬೇಕು. 50 00:02:14,260 --> 00:02:15,636 ಜನಜಂಗುಳಿ ಇರುವ ರೆಸ್ಟೋರೆಂಟ್ ಹುಡುಕು. 51 00:02:25,396 --> 00:02:29,567 ಮೇಡಂ, ಎರಡನೇ ದಾಳಿ ನಡೆಯುವಷ್ಟರಲ್ಲಿ ನಾವು ನಿಮ್ಮನ್ನು ಇಲ್ಲಿಂದ ಹೊರಗೆ ಕರೆದೊಯ್ಯಬೇಕು. 52 00:02:34,613 --> 00:02:36,866 ಕಾರ್ಯಕ್ರಮದ ವಿಡಿಯೋ ಚಿತ್ರೀಕರಿಸುತ್ತಿದ್ದ ಸಿಬ್ಬಂದಿ ಇದ್ದರು. 53 00:02:37,575 --> 00:02:40,494 ಪೊಲೀಸರು ಅದನ್ನು ವಶಪಡಿಸಿಕೊಳ್ಳುವ ಮೊದಲು ನಾನು ಅದರ ಒಂದೊಂದು ಕ್ಷಣವನ್ನೂ ನೋಡಬೇಕು. 54 00:02:42,371 --> 00:02:45,916 ನಾವು ಯಾರನ್ನು ನಂಬಬಹುದೋ ಗೊತ್ತಿಲ್ಲ, ಆದರೆ ಇದನ್ನು ಯಾರೂ ಮುಚ್ಚಿಹಾಕಲು ನಾನು ಬಿಡಲ್ಲ. 55 00:02:48,127 --> 00:02:49,670 ಜಾನ್‌ನನ್ನು ಕೊಂದವರನ್ನು ಹುಡುಕಿ… 56 00:02:52,047 --> 00:02:53,966 ಅವರಿಗೆ ತಕ್ಕ ಶಾಸ್ತಿಯನ್ನು ಮಾಡೋಣ. 57 00:03:14,069 --> 00:03:15,486 ತುಂಬಾ ಸಮಯವಾಯಿತು. 58 00:03:15,487 --> 00:03:16,947 ಅವನು ಇದನ್ನು ಮಾಡುವುದು ನನಗೆ ಇಷ್ಟವಿಲ್ಲ. 59 00:03:18,365 --> 00:03:22,660 ಅವನು ಗಮನ ಸೆಳೆಯುವ ಸಾಧ್ಯತೆ ಕಡಿಮೆ. ಅವನು ಚಿಕ್ಕ ಊರಿನವನೇ, ಆದರೆ ಅವನು ಸಮರ್ಥ. 60 00:03:22,661 --> 00:03:24,954 ಲೈಲಾ ಮತ್ತು ಆಮಿಷರನ್ನು, ಅಥವಾ ಅವರ ಹೆಸರುಗಳು ಅದೇನೇ ಇದ್ದರೂ, 61 00:03:24,955 --> 00:03:26,539 ಅವರನ್ನು ಕೊಲ್ಲಬೇಕೆಂದಿದ್ದಾನೆ, ಗೊತ್ತಾ? 62 00:03:26,540 --> 00:03:28,959 ಒಳ್ಳೆಯದು. ಅವರಿಲ್ಲದೆ ಜಗತ್ತು ಉತ್ತಮವಾಗಿರುತ್ತೆ. 63 00:03:30,586 --> 00:03:33,796 ಹಾಂ, ಆದರೆ, ಯಾರನ್ನಾದರೂ ಕೊಂದ ನಂತರ ಮೇಫೀಲ್ಡ್‌ಗೆ ಹಿಂತಿರುಗುವುದು ಕಷ್ಟ, 64 00:03:33,797 --> 00:03:36,341 ಅವರು ಅದಕ್ಕೆ ಅರ್ಹರಾಗಿದ್ದರೂ ಸಹ. 65 00:03:36,342 --> 00:03:40,345 ಅವರು ಈಗಾಗಲೇ ಆನಾ ಮತ್ತು ಬೆನ್‌ನನ್ನು ಕೊಂದಿದ್ದಾರೆ. ಅವನ ಜೀವವನ್ನೂ ತೆಗೆಯಬಾರದು. 66 00:03:40,346 --> 00:03:42,056 ನಾನವನನ್ನು ಇದರಲ್ಲಿ ತೊಡಗಿಸಿಕೊಳ್ಳಲು ಬಯಸಲಿಲ್ಲ. 67 00:03:44,058 --> 00:03:44,892 ಅದು ಅವನೇ. 68 00:03:55,069 --> 00:03:58,488 ಒಳ್ಳೆಯ ಆಯ್ಕೆ. ಜನಪ್ರಿಯ ಕಾರು, ಗಾಢ ಬಣ್ಣ. 69 00:03:58,489 --> 00:03:59,530 ನಾವು ಎದ್ದು ಕಾಣುವುದಿಲ್ಲ. 70 00:03:59,531 --> 00:04:01,783 ನಾನು ಒಳ್ಳೆಯ ಕಾರು ಕಳ್ಳ ಎಂದು ಕೇಳಿ ಸಂತೋಷವಾಯಿತು. 71 00:04:01,784 --> 00:04:02,701 ಡಿಸಿಗೆ ನಡಿ. 72 00:04:04,119 --> 00:04:05,036 ಪ್ಲಂನ ಮನೆಗಾ? 73 00:04:05,037 --> 00:04:07,705 ಫೆಡ್ಸ್ ಮತ್ತು ಸ್ಥಳೀಯ ಪೊಲೀಸರು ಈಗ ಆ ಸ್ಥಳವನ್ನು ತಡಕಾಡಿರುತ್ತಾರೆ. 74 00:04:07,706 --> 00:04:10,291 ಪ್ಲಂ ಆಸ್ಪತ್ರೆಯಲ್ಲಿದ್ದಾನೆ. ನಾವು ಹಿಂತಿರುಗಲು ಯಾವುದೇ ಕಾರಣವಿರಲ್ಲ. 75 00:04:10,292 --> 00:04:11,960 ಯಾರೂ ಅಲ್ಲಿ ಹುಡುಕುವುದಿಲ್ಲ. 76 00:04:11,961 --> 00:04:13,128 70ರೊಳಗೆ ಹೋಗು. 77 00:04:13,837 --> 00:04:16,674 - ನಮ್ಮನ್ನು ನಿಲ್ಲಿಸಿದರೆ, ಅದು ನಮಗೆ ಸಮಸ್ಯೆ. - ತಿಳಿಯಿತು. 78 00:04:23,055 --> 00:04:27,558 ಗಂಟೆಗೆ ಹಲವು ಇಂಚುಗಳಷ್ಟು ಮಳೆ, ರಾತ್ರಿಯಿಡೀ ಇನ್ನೂ ಹೆಚ್ಚಿನ ಮಳೆಯಾಗುತ್ತದೆ. 79 00:04:27,559 --> 00:04:30,395 ನಮ್ಮ ವ್ಯವಸ್ಥೆಯ ಅತ್ಯಾಧುನಿಕ ತಂತ್ರಜ್ಞಾನದ ಅಡಿ, ನಾವು ಹೆಚ್ಚಿನ 80 00:04:30,396 --> 00:04:32,563 ಸಿಡಿಲಿನ ಹೊಡೆತಗಳನ್ನು ಪರಿಶೀಲಿಸುತ್ತಿದ್ದೇವೆ, 81 00:04:32,564 --> 00:04:35,858 ಚಂಡಮಾರುತವು ನಗರವನ್ನು ಸಮೀಪಿಸುತ್ತಿದ್ದಂತೆ, ಅದು ಹೆಚ್ಚಾಗುವ ನಿರೀಕ್ಷೆಯಿದೆ. 82 00:04:35,859 --> 00:04:38,611 ಸಂಜೆ ಪೂರ್ತಿ ಇದರ ಸುದ್ದಿ ಕೊಡುವುದನ್ನು ಮುಂದುವರಿಸುತ್ತೇವೆ. 83 00:04:38,612 --> 00:04:42,783 ಹಾಗಾಗಿ ನೋಡುತ್ತಿರಿ, ಈ ರಾತ್ರಿಯ ಅಕಾಲಿಕ ಬೇಸಿಗೆಯ ಚಂಡಮಾರುತದ ನಮ್ಮ ಪರಿಶೀಲನೆಯನ್ನು. 84 00:04:43,575 --> 00:04:44,575 ಅಯ್ಯೋ. 85 00:04:44,576 --> 00:04:48,121 ಈಗಷ್ಟೇ ಬಂದ ಸುದ್ದಿ. ಉತ್ತರ ಕೆರೊಲಿನಾದ ಪ್ರತಿನಿಧಿ ಮತ್ತು ಇತ್ತೀಚೆಗೆ ಅಧ್ಯಕ್ಷೀಯ 86 00:04:48,122 --> 00:04:52,166 ಅಭ್ಯರ್ಥಿಯಾಗಿ ಘೋಷಿಸಲಾದ ಜಾನ್ ಸ್ಯಾಮ್ ಸನ್‌ನ ಕೊಂದ ದಾಳಿಯ ಕುರಿತು ಹೆಚ್ಚಿನ ಮಾಹಿತಿ ಬಂದಿದೆ. 87 00:04:52,167 --> 00:04:53,084 ಛೆ. 88 00:04:53,085 --> 00:04:55,753 ನದಿಯ ಬಳಿ ಫೀಡ್ ಅಮೆರಿಕಾ ಕಾರ್ಯಕ್ರಮದ ವರದಿ ಮಾಡುತ್ತಿದ್ದ 89 00:04:55,754 --> 00:04:59,799 ಕ್ಯಾಮೆರಾ ಸಿಬ್ಬಂದಿ, ಕಾಂಗ್ರೆಸ್ ಮ್ಯಾನ್ ಸ್ಯಾಮ್ ಸನ್ ಆತ್ಮಹತ್ಯಾ ಬಾಂಬರ್‌ನನ್ನು 90 00:04:59,800 --> 00:05:02,677 ನೀರಿನೊಳಗೆ ತಳ್ಳುವ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ, 91 00:05:02,678 --> 00:05:06,264 ಇದರಲ್ಲಿ ಸ್ಯಾಮ್ ಸನ್ ಲೆಕ್ಕವಿಲ್ಲದಷ್ಟು ಜೀವ ಉಳಿಸಲು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. 92 00:05:06,265 --> 00:05:08,976 ಈ ದೃಶ್ಯಾವಳಿಗಳು ಆಘಾತಕಾರಿಯಾಗಿವೆ ಎಂದು ನಿಮಗೆ ಎಚ್ಚರಿಸುತ್ತೇವೆ. 93 00:05:17,026 --> 00:05:19,444 ಕಾಂಗ್ರೆಸ್ ಮ್ಯಾನ್ ಸ್ಯಾಮ್ ಸನ್‌ರ ವಿಧವೆ ಪತ್ನಿ ಎಲ್ಸ್ಪೆತ್… 94 00:05:19,445 --> 00:05:20,528 ಅಜ್ಞಾತ ಬಾಂಬರ್ 95 00:05:20,529 --> 00:05:22,947 …ಈ ವ್ಯಕ್ತಿಯ ಬಗ್ಗೆ ಅಥವಾ ಅವನ ಸಹಚರರ ಬಗ್ಗೆ ಮಾಹಿತಿ ಇರುವ 96 00:05:22,948 --> 00:05:26,451 ಯಾರಾದರೂ ದಯವಿಟ್ಟು ಕಾಂಗ್ರೆಸ್ ಮ್ಯಾನ್ ಸ್ಯಾಮ್ ಸನ್‌ರ 97 00:05:26,452 --> 00:05:29,787 ಭದ್ರತಾ ಮುಖ್ಯಸ್ಥರನ್ನು ನೇರವಾಗಿ ಸಂಪರ್ಕಿಸಲು ವಿನಂತಿಸಿಕೊಂಡಿದ್ದಾರೆ. 98 00:05:29,788 --> 00:05:31,414 ಪಾಸ್‌ಪೋರ್ಟ್ ವಾಬೇರಿ - ಟೋಮಾಸ್ - ಜಿಬೌಟಿ 99 00:05:31,415 --> 00:05:33,083 "ಟೋಮಾಸ್ ವಾಬೇರಿ." 100 00:06:10,621 --> 00:06:11,538 ಸರಿ. 101 00:06:16,001 --> 00:06:16,835 ಛೆ. 102 00:06:18,295 --> 00:06:19,254 ಸರಿ. 103 00:06:30,974 --> 00:06:32,141 ಅಯ್ಯೋ! 104 00:06:32,142 --> 00:06:33,226 ದಾರಿ ಬಿಡಿ. 105 00:06:33,227 --> 00:06:34,812 ಈತನನ್ನು ಮಲಗಿಸಲು ನನಗೆ ಸಹಾಯ ಮಾಡಿ. 106 00:06:36,772 --> 00:06:39,942 ನಿಮಗೆ ಈಗಷ್ಟೇ ಶಸ್ತ್ರಚಿಕಿತ್ಸೆ ಆಗಿದೆ. ಅಸಲಿಗೆ, ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ? 107 00:06:46,573 --> 00:06:47,449 ಮೇಲಕ್ಕೆ. 108 00:06:49,827 --> 00:06:51,245 ಯಾರಿಗೆ ಕರೆ ಮಾಡಲು ನೋಡುತ್ತಿದ್ದೆ? 109 00:06:53,997 --> 00:06:55,998 ನಾನು ಇದರಲ್ಲಿ ನಿನ್ನ ವಿರೋಧಿಯಲ್ಲ. 110 00:06:55,999 --> 00:06:58,709 ಜೇಕಬ್ ಮೆರಿಕ್ ನನಗೆ ಇಲ್ಲಿಗೆ ಬಂದು ನಿನ್ನ ಬಗ್ಗೆ ವಿಚಾರಿಸಲು ಹೇಳಿದ. 111 00:06:58,710 --> 00:07:00,711 ಗ್ರಂಥಾಲಯದಲ್ಲಿ ಬಿಟ್ಟು ಹೋಗಿದ್ದಕ್ಕೆ ಕ್ಷಮಿಸಲು ಕೇಳಿದ. 112 00:07:00,712 --> 00:07:02,172 ಅದರ ಅರ್ಥವೇನೋ ಯಾರಿಗೆ ಗೊತ್ತು. 113 00:07:03,257 --> 00:07:04,133 ಏನು ನಡೆಯುತ್ತಿದೆ? 114 00:07:05,968 --> 00:07:08,177 ಟೋಮಾಸ್ ವಾಬೇರಿ. 115 00:07:08,178 --> 00:07:09,512 ಅವನಿಗೆ ಕರೆ ಮಾಡುತ್ತಿದ್ದೆಯಾ? 116 00:07:09,513 --> 00:07:15,769 ಇಲ್ಲ, ಅವನು… ಆತ್ಮಹತ್ಯಾ ಬಾಂಬರ್. 117 00:07:18,772 --> 00:07:22,567 - ಅದರ ಬಗ್ಗೆ ನಿನಗೆ ಖಚಿತವೇ? - ನನಗೆ ಖಚಿತವೇ. ನನಗೆ ಖಚಿತವೇ. 118 00:07:22,568 --> 00:07:24,820 - ಸರಿ, ಇಲ್ಲಿಂದ ನಾನು ನೋಡಿಕೊಳ್ಳುತ್ತೇನೆ. - ಸರಿ. 119 00:07:25,988 --> 00:07:27,072 ಒಳ್ಳೆಯ ಕೆಲಸ, ಪ್ಲಂ. 120 00:07:42,880 --> 00:07:43,714 ಯಾರೂ ಇಲ್ಲ! 121 00:07:45,257 --> 00:07:46,091 ಯಾರೂ ಇಲ್ಲ! 122 00:07:46,633 --> 00:07:48,009 - ಯಾರೂ ಇಲ್ಲ! - ಛೇ. 123 00:07:48,010 --> 00:07:49,761 ಯಾರೂ ಇಲ್ಲ! 124 00:07:53,390 --> 00:07:54,600 ಛೆ. 125 00:08:03,609 --> 00:08:04,859 ಡಾಕೆರ್ಟಿ, ಏನು ವಿಷಯ? 126 00:08:04,860 --> 00:08:07,653 ನಿಮ್ಮ ಹುಡುಗ ಪ್ಲಂ ಸ್ಯಾಮ್ ಸನ್‌ನನ್ನು ಕೊಂದ ವ್ಯಕ್ತಿಯನ್ನು ನಮಗೆ ತೋರಿಸಿದ. 127 00:08:07,654 --> 00:08:08,905 ರಸ್ಸಲ್ ಆರಾಮಾಗಿದ್ದಾನಾ? 128 00:08:08,906 --> 00:08:10,907 ಅವನು ಉದ್ರೇಕಗೊಂಡಿದ್ದಾನೆ, ಆದರೂ ಬದುಕಿದ್ದಾನೆ. 129 00:08:10,908 --> 00:08:12,408 ಆ ಬಾಂಬರ್ ಹೆಸರನ್ನು ನಮಗೆ ಹೇಳುವ 130 00:08:12,409 --> 00:08:15,286 ಪ್ರಯತ್ನದಲ್ಲಿ ಇನ್ನೇನು ಬಿದ್ದು ಸಾಯುತ್ತಿದ್ದ. ಟೋಮಾಸ್ ವಾಬೇರಿ. 131 00:08:15,287 --> 00:08:17,788 ನಾವು ಪರಿಶೀಲಿಸಿದೆವು. ಬಂದಿಳಿದ ಕೂಡಲೇ ಕಾರನ್ನು ಬಾಡಿಗೆಗೆ ಪಡೆದ. 132 00:08:17,789 --> 00:08:21,667 ಬಾಡಿಗೆ ಏಜೆನ್ಸಿಯು ಜಿಪಿಎಸ್ ಬಳಸಿ ಅದನ್ನು ಒಂದು ಗೋದಾಮಿನಲ್ಲಿ ಪತ್ತೆಹಚ್ಚಿತು. 133 00:08:21,668 --> 00:08:24,212 ಕಾರು ಆ ಜಾಗದಲ್ಲಿತ್ತು, ಆದರೆ ಜಾಗ ಖಾಲಿಯಾಗಿತ್ತು. 134 00:08:24,213 --> 00:08:25,755 ಅವರು ಬಿಟ್ಟು ಹೋದ ಒಂದೇ ಒಂದು ವಸ್ತು 135 00:08:25,756 --> 00:08:29,550 45-ಗ್ಯಾಲನ್‌ನ ಸೀಲ್ ಮಾಡಿದ ಡ್ರಮ್, ಅದರ ಒಳಗೆ ಒಬ್ಬ ಸತ್ತ ಹುಡುಗನಿದ್ದ. 136 00:08:29,551 --> 00:08:31,385 ಅಂತಹದ್ದನ್ನು ನಾನು ಎಂದಿಗೂ ನೋಡಿಲ್ಲ. 137 00:08:31,386 --> 00:08:32,970 ಅವರು ಅವನ ಮೇಲೆ ವಿಷವನ್ನು ಪರೀಕ್ಷಿಸಿದರು. 138 00:08:32,971 --> 00:08:34,680 ಅವರು ಎಲ್ಲಿಗೆ ಹೋದರಂತ ಏನಾದರೂ ಸೂಚಿಸುತ್ತಾ? 139 00:08:34,681 --> 00:08:36,807 ವಾಬೇರಿಯ ವಿಮಾನ ಟಿಕೆಟ್ ಖರೀದಿಸಿದ ಕ್ರೆಡಿಟ್ ಕಾರ್ಡ್ 140 00:08:36,808 --> 00:08:39,769 ಬಳಸಿ ಈ ರಾತ್ರಿ ಬರಲಿರುವ ಇನ್ನೂ 13 ಮಂದಿಗಾಗಿ ಟಿಕೆಟ್ ಖರೀದಿ ಮಾಡಿದ್ದಾರೆ. 141 00:08:39,770 --> 00:08:41,688 ಇಬ್ಬರಿಗೆ ಪ್ರಥಮ ದರ್ಜೆ, 11 ಮಂದಿಗೆ ಸಾಮಾನ್ಯದ್ದು. 142 00:08:42,356 --> 00:08:44,440 ಲೈಲಾ ಮತ್ತು ಆಮಿಷರಿಗೆ ಪ್ರಥಮ ದರ್ಜೆಯದ್ದು. 143 00:08:44,441 --> 00:08:47,526 ಇತರ 11 ಜನರಲ್ಲಿ, ಕಂಪ್ಯೂಟರ್ ತಜ್ಞ, ರಸಾಯನಶಾಸ್ತ್ರಜ್ಞ, 144 00:08:47,527 --> 00:08:49,528 ಬಹುಶಃ ಆ ಸಾಧನವನ್ನು ಕಟ್ಟಲು ಸ್ಫೋಟಕಗಳ ತಜ್ಞ ಇರಬಹುದು. 145 00:08:49,529 --> 00:08:51,155 ಉಳಿದವರು ತರಬೇತಿ ಪಡೆದ ಕೊಲೆಗಾರರು. 146 00:08:51,156 --> 00:08:53,366 ಪರಿಸ್ಥಿತಿ ಬಿಗಡಾಯಿಸಿದಾಗ ಹೆಚ್ಚುವರಿ ಮಂದಿಯನ್ನು ಕರೆಸಿದರು. 147 00:08:53,367 --> 00:08:55,660 ಯಾವ ಹೆಸರುಗಳಲ್ಲಿ ಪ್ರಯಾಣಿಸಲಿದ್ದಾರೆ ಎಂದು ಹುಡುಕುತ್ತಿದ್ದೇವೆ. 148 00:08:55,661 --> 00:08:57,662 ಫಿಲ್ಲಿ ಪಿಡಿಯ ಎಲ್ಲಾ ಪೊಲೀಸರೂ ಅಲ್ಲಿ ಇರಲಿದ್ದಾರೆ. 149 00:08:57,663 --> 00:08:58,580 ಅವರು ಬರುವುದಿಲ್ಲ. 150 00:08:59,456 --> 00:09:01,290 - ಯಾಕಿಲ್ಲ? - ಏಕೆಂದರೆ ದಾಳಿ ವಿಫಲವಾಯಿತು. 151 00:09:01,291 --> 00:09:03,751 ರಾಸಾಯನಿಕ ಅಸ್ತ್ರ ಕೆಲಸ ಮಾಡುವುದಂತ ಕೊಳ್ಳುಗರಿಗೆ ಸಾಬೀತು ಮಾಡಲಿಲ್ಲ. 152 00:09:03,752 --> 00:09:06,170 ಅದನ್ನು ಡೆಲವೇರ್‌ನಲ್ಲಿರುವ ಮೀನುಗಳಿಗೆ ಹೇಳು. 153 00:09:06,171 --> 00:09:08,422 ಇನ್ನೂ ಉತ್ತಮ, ಅದನ್ನು ಜಾನ್ ಸ್ಯಾಮ್ ಸನ್‌ಗೆ ಹೇಳು. 154 00:09:08,423 --> 00:09:10,758 ನನ್ನನ್ನು ನಂಬು, ಈ ದುಷ್ಟರು ತಮ್ಮ ಉದ್ದೇಶವನ್ನು ಸಾಬೀತುಪಡಿಸಿದರು. 155 00:09:10,759 --> 00:09:12,885 ಅವರ ಉದ್ದೇಶ ಹೊರಾಂಗಣದಲ್ಲಿ ಪರಿಣಾಮಕಾರಿಯಾಗಿ ಮಾರಕವಾಗಿರುವ 156 00:09:12,886 --> 00:09:16,138 ರಾಸಾಯನಿಕ ಅಸ್ತ್ರವನ್ನು ಪ್ರದರ್ಶಿಸುವುದಾಗಿತ್ತು. ಅವರು ಎಲ್ಲಿಗೂ ಹೋಗಲ್ಲ. 157 00:09:16,139 --> 00:09:17,723 ಅವರು ಅರಸಿ ಬಂದದ್ದನ್ನು ಪಡೆದರು. 158 00:09:17,724 --> 00:09:20,893 ಅವರಿಗೆ ಉಳಿದಿರುವ ಕೆಲಸ ಜಾಗ ಖಾಲಿ ಮಾಡಿ ಅವಕಾಶ ಬಳಸುವುದಷ್ಟೇ. 159 00:09:20,894 --> 00:09:23,020 ಅವರು ವಿಮಾನ ನಿಲ್ದಾಣಕ್ಕೆ ಬಂದಾಗ, ನಾವು ಕಾಯುತ್ತಿರುತ್ತೇವೆ. 160 00:09:23,021 --> 00:09:25,940 ನಾವು ಅವರನ್ನು ವಶಕ್ಕೆ ಪಡೆಯುವವರೆಗೂ ನೀವು ತಲೆ ಮರೆಸಿಕೊಂಡಿರಿ. 161 00:09:25,941 --> 00:09:28,526 ಒಬ್ಬ ಕಾಂಗ್ರೆಸ್ ಮ್ಯಾನ್ ಸ್ಫೋಟಗೊಂಡಾಗ ನೀನು ಅಲ್ಲೇ ಇದ್ದೆ. 162 00:09:28,527 --> 00:09:32,656 ನೀನು ಅವರೊಂದಿಗೆ ಸೇರಿದ್ದೀಯ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ನಿನ್ನ ಶೌರ್ಯ ಪ್ರದರ್ಶಿಸಬೇಡ. 163 00:09:37,661 --> 00:09:39,912 ಲೈಲಾ ಮತ್ತು ಆಮಿಷ ಓಡಿಹೋಗಲ್ಲ ಅಂತ ನಿನಗೆ 100% ಖಚಿತವೇ? 164 00:09:39,913 --> 00:09:40,913 ಬಹುಮಟ್ಟಿಗೆ. 165 00:09:40,914 --> 00:09:43,541 ನಾವು ಅವರನ್ನು ಹುಡುಕಬೇಕು. ಏಕೆಂದರೆ ಪೊಲೀಸರು ಹುಡುಕುತ್ತಿಲ್ಲ. 166 00:09:43,542 --> 00:09:44,835 ಅವರು ಎಲ್ಲಿಯಾದರೂ ಇರಬಹುದು. 167 00:09:46,503 --> 00:09:49,672 ಎಲ್ಲಿಯಾದರೂ ಅಲ್ಲ. ಅವರಿಗೆ ವಿಷ ತಯಾರಿಸಲು ಸೂಕ್ತ ಸ್ಥಳ ಬೇಕು. 168 00:09:49,673 --> 00:09:51,716 ಅವರು ಬೇಗನೆ ಆಸರೆ ಪಡೆಯಬಹುದಾದ ಸ್ಥಳ. 169 00:09:51,717 --> 00:09:53,343 ಯಾರೂ ಅವರು ಹೋಗುತ್ತಾರೆಂದು ಭಾವಿಸದ ಸ್ಥಳ. 170 00:09:54,511 --> 00:09:55,512 ಛೆ. 171 00:09:57,431 --> 00:09:59,098 ನಾವು ಮಾಡುತ್ತಿರುವುದನ್ನೇ ಮಾಡುತ್ತಿದ್ದಾರೆ. 172 00:09:59,099 --> 00:10:01,435 ಪೊಲೀಸರು ಈಗಾಗಲೇ ನೋಡಿರುವ ಸ್ಥಳಕ್ಕೆ ಹಿಂತಿರುಗುತ್ತಿದ್ದಾರೆ. 173 00:10:02,144 --> 00:10:04,855 - ಆ ಖಾಲಿ ರೆಸ್ಟೋರೆಂಟ್ ಕಟ್ಟಡವೇ? - ಹಿಂದಕ್ಕೆ ತಿರುಗಿಸು. 174 00:10:39,848 --> 00:10:42,976 ಮೊದಲ ಬ್ಯಾಚ್ ಚೆನ್ನಾಗಿದೆ. ಇನ್ನೊಂದು ಗಂಟೆಯಲ್ಲಿ ನಮಗೆ ಬೇಕಾದ್ದು ಸಿಗುತ್ತದೆ. 175 00:10:43,727 --> 00:10:44,561 ಅದ್ಭುತ. 176 00:10:45,312 --> 00:10:46,772 ಆಮಿಷಳಿಗೆ ನಿರಾಸೆ ಮೂಡಿಸಬೇಡ, ಸರಿನಾ? 177 00:11:08,668 --> 00:11:10,544 {\an8}ಒಂದು ಗಂಟೆ. 178 00:11:10,545 --> 00:11:11,462 {\an8}ಏನಾದರೂ ಫಲಿಸಿತಾ? 179 00:11:11,463 --> 00:11:16,842 {\an8}ನಗರದ ಹೊರಗೆ 25 ಮೈಲುಗಳಷ್ಟು ದೂರದಲ್ಲಿ ಕೀಟನಾಶಕ ವಿಮಾನ ಬಾಡಿಗೆಗೆ ಸಿಗುತ್ತದೆ. 180 00:11:16,843 --> 00:11:18,386 {\an8}ನಮ್ಮ ಅಗತ್ಯಕ್ಕೆ ಪರಿಪೂರ್ಣವಾಗಿರುತ್ತೆ. 181 00:11:18,387 --> 00:11:20,347 {\an8}ಚಂಡಮಾರುತ ಬರಲಿದೆ. 182 00:11:20,680 --> 00:11:23,682 {\an8}ಮಳೆಯು ವಿಷದ ಮೋಡವನ್ನು ಕುಗ್ಗಿಸಿ, ಸಾವುಗಳನ್ನು ಕಡಿಮೆಗೊಳಿಸುತ್ತದೆ. 183 00:11:23,683 --> 00:11:30,649 {\an8}ಮುನ್ಸೂಚನೆಯ ಪ್ರಕಾರ ಅದು ದಟ್ಟಣೆಯ ಸಮಯದ ಹೊತ್ತಿಗೆ ತಗ್ಗುತ್ತದೆಯಂತೆ. 184 00:11:31,858 --> 00:11:35,403 {\an8}ಆರಾಮಾಗಿರು. ನಾಳೆ ನಾವು ಶ್ರೀಮಂತರಾಗಲಿದ್ದೇವೆ. 185 00:11:35,404 --> 00:11:36,905 ಹೇ. ಅದನ್ನು ನನಗೆ ಕೊಡು. 186 00:11:43,245 --> 00:11:46,247 ಇವನು ಕೆಲಸ ಮುಗಿಸಿದ ನಂತರ, ಇವನ ಲ್ಯಾಪ್‌ಟಾಪ್‌ಗೆ ಗುಂಡು ಹೊಡೆಯಿರಿ. 187 00:11:46,248 --> 00:11:47,915 ನಾನು ಹಾರ್ಡ್ ಡ್ರೈವನ್ನು ಅಳಿಸಬಹುದು. 188 00:11:47,916 --> 00:11:50,335 ನಮ್ಮನ್ನು ಬಿಟ್ಟು ಬೇರೆ ಯಾರ ಬಳಿಯೂ ಆ ಸೂತ್ರವಿರದಂತೆ ಖಚಿತಪಡಿಸಬೇಕು. 189 00:12:01,763 --> 00:12:03,014 ಬೆನ್ ಚಿಕ್ಕವನಿದ್ದಾಗ, 190 00:12:04,391 --> 00:12:07,644 ನಾನು ಅವನಿಗೆ ಗುಡುಗು ಮತ್ತು ಮಿಂಚಿನ ನಡುವಿನ ಕ್ಷಣಗಳನ್ನು ಎಣಿಸಲು ಕಲಿಸಿದೆ… 191 00:12:08,603 --> 00:12:09,771 ಅದನ್ನು ಐದರಿಂದ ಭಾಗಿಸಬೇಕು. 192 00:12:11,940 --> 00:12:14,109 ಚಂಡಮಾರುತ ಅಷ್ಟು ಮೈಲಿಗಳಷ್ಟು ದೂರದಲ್ಲಿದೆ ಅಂತ ಅರ್ಥ. 193 00:12:16,611 --> 00:12:19,030 ಆಗ ಅವನಿಗೆ ಭಯ ಉಂಟುಮಾಡುವ ಆ ವಿಷಯವು ಅವನು ಭಾವಿಸಿದಷ್ಟು 194 00:12:20,490 --> 00:12:22,033 ಹತ್ತಿರವಿಲ್ಲ ಎಂದು ಸಮಾಧಾನಗೊಳ್ಳುತ್ತಿದ್ದ. 195 00:12:27,038 --> 00:12:28,999 ಅವನು ತುಂಬಾ ಹೆದರಿದ್ದಿರಬೇಕು… 196 00:12:30,584 --> 00:12:32,294 ಕೊನೆಯಲ್ಲಿ ಅಷ್ಟೂ ಹೊತ್ತು. 197 00:12:35,338 --> 00:12:39,676 ಅವನನ್ನು ಭಯಭೀತಗೊಳಿಸಿದ ವಿಷಯ ಅವನೊಂದಿಗೆ ಕೋಣೆಯಲ್ಲೇ ಇತ್ತು. 198 00:12:45,474 --> 00:12:49,393 ಹೇ, ನೀನು ದ್ವೇಷದಿಂದ ಕುರುಡಾಗಿ ಅಲ್ಲಿಗೆ ಹೋದರೆ, 199 00:12:49,394 --> 00:12:51,271 ಮೊದಲು ನೀನೇ ಸಾಯುವೆ. 200 00:12:52,814 --> 00:12:54,149 ನಿನ್ನ ತಲೆಯನ್ನು ಸರಿಯಾಗಿಟ್ಟುಕೋ. 201 00:12:54,858 --> 00:12:55,734 ಸರಿನಾ? 202 00:13:01,990 --> 00:13:03,699 - ಅವರು ಅಲ್ಲಿದ್ದಾರೆ. - ಅವರನ್ನು ನೋಡಿದೆಯಾ? 203 00:13:03,700 --> 00:13:06,285 ಪ್ಲೈವುಡ್‌ನ ಬಿರುಕುಗಳ ಮೂಲಕ ನಾನು ನೋಡಿದುದರ ಪ್ರಕಾರ, 204 00:13:06,286 --> 00:13:08,537 ಲೈಲಾ ನಡೆದು ಹೋದಳು ಮತ್ತು ಸುಮಾರು ಅರ್ಧ ಡಜನ್ ಗೂಂಡಾಗಳಿದ್ದರು. 205 00:13:08,538 --> 00:13:11,790 ನಮಗೇನಂತೆ? ಅವರು ಅಲ್ಲಿದ್ದಾರೆ. ಅವರನ್ನು ನಾವು ಅಚ್ಚರಿಗೊಳಿಸಬಹುದು. 206 00:13:11,791 --> 00:13:15,002 ಅವರು 13 ಜನ, ನಾವು ಮೂವರು. ಸ್ವಲ್ಪ ನೆರವು ಇದ್ದರೆ ಒಳ್ಳೆಯದು. 207 00:13:15,003 --> 00:13:17,922 ನಾವು ಈಗಲೂ ಬೇಕಾಗಿದ್ದೇವೆ. ಕಾನೂನು ಜಾರಿ ಸಂಸ್ಥೆಗಳು ನಾವು ಹೇಳಿದ ಮಾತ್ರಕ್ಕೆ 208 00:13:17,923 --> 00:13:20,174 ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಹೊರಗೆ ಕಳಿಸುವುದಿಲ್ಲ. 209 00:13:20,175 --> 00:13:21,842 ಹಾಗಾದರೆ ಎಲ್ಸ್ಪೆತ್ ಸ್ಯಾಮ್ ಸನ್? 210 00:13:21,843 --> 00:13:23,178 ಆಕೆಯ ಮಾತನ್ನು ಕೇಳುವರೇ? 211 00:13:23,929 --> 00:13:25,596 ಆಕೆ ನನ್ನ ಕರೆಯನ್ನು ಸ್ವೀಕರಿಸುವುದು ಅನುಮಾನ. 212 00:13:25,597 --> 00:13:27,848 ಆದರೆ ಆಕೆ ಸ್ವೀಕರಿಸಿದರೆ, ಮತ್ತು ಆಕೆ ನಮ್ಮನ್ನು ನಂಬಿದರೆ, 213 00:13:27,849 --> 00:13:30,226 ಆಕೆಗೆ ಮಾಹಿತಿ ಕೊಟ್ಟಿದ್ದು ಯಾರೆಂದು ತಿಳಿದ ನಂತರ ಅವರು 214 00:13:30,227 --> 00:13:32,479 ವಿಮಾನ ನಿಲ್ದಾಣದಿಂದ ಫೆಡ್ಸ್‌ರನ್ನು ಹೊರಗೆ ಕಳಿಸುವುದು ಅಸಾಧ್ಯ. 215 00:13:33,396 --> 00:13:34,689 ನಮಗೆ ನಾವೇ ಆಸರೆ. 216 00:13:39,194 --> 00:13:40,862 - ಸಿದ್ಧ. - ತಗೋ. 217 00:13:43,490 --> 00:13:44,366 ಮತ್ತೆ, ನೀನು? 218 00:13:45,534 --> 00:13:46,618 ನಾನು ನನ್ನದನ್ನು ಪಡೆಯುತ್ತೇನೆ. 219 00:13:47,869 --> 00:13:52,791 ರೀಚರ್ 220 00:14:06,888 --> 00:14:11,643 ಒಂದು, ಎರಡು, ಮೂರು, ನಾಲ್ಕು, ಐದು. 221 00:14:24,656 --> 00:14:28,076 ಒಂದು, ಎರಡು, ಮೂರು, ನಾಲ್ಕು… 222 00:15:00,150 --> 00:15:01,735 ನಾನು ಫ್ಯೂಸ್ ಬಾಕ್ಸ್ ಪರಿಶೀಲಿಸುತ್ತೇನೆ. 223 00:15:28,762 --> 00:15:29,678 ಪರವಾಗಿಲ್ಲ. 224 00:15:29,679 --> 00:15:32,265 ವಿದ್ಯುತ್ ಕಡಿತವು ಲಿಫ್ಟನ್ನು ಮತ್ತೆ ಕೆಳ ಮಹಡಿಗೆ ತರುತ್ತದೆ. 225 00:15:33,600 --> 00:15:35,809 ನಾನು ಮೇಲಕ್ಕೆ ಹೋಗಿ ಆದಷ್ಟು ಮಂದಿಯನ್ನು ನನ್ನೆಡೆ ಸೆಳೆಯುವೆ. 226 00:15:35,810 --> 00:15:37,269 ನೀವು ಉಳಿದವರನ್ನು ಕೊಂದು, 227 00:15:37,270 --> 00:15:39,772 ಇಲ್ಲಿ ಈಗಾಗಲೇ ತಯಾರಿಸಲಾದ ಯಾವುದೇ ವಿಷವನ್ನು ಪಡೆಯಿರಿ. 228 00:15:39,773 --> 00:15:41,024 ನೀನು ಅವರನ್ನು ಹೇಗೆ ಸೆಳೆಯುವೆ? 229 00:15:42,609 --> 00:15:44,110 ನಾನು ಅವರ ಗಮನ ಸೆಳೆಯುತ್ತೇನೆ. 230 00:15:46,863 --> 00:15:48,155 ಅವರಿಗೆ ನೀನು ಅಲ್ಲಿ ಕಾಣುತ್ತೀಯ. 231 00:15:48,156 --> 00:15:49,324 ನಾನು ಒಳಗೆ ಹೋಗುತ್ತಿಲ್ಲ. 232 00:16:14,307 --> 00:16:16,767 {\an8}ಬೆಟ್ಸಿ ರಾಸ್ ಸೇತುವೆ ಸೂಕ್ತವಾಗಿ ಕಾಣುತ್ತದೆ. 233 00:16:16,768 --> 00:16:21,355 {\an8}ಸಂಚಾರ ದಟ್ಟಣೆ ಉಂಟಾದರೆ, ಜನರು ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ. 234 00:16:21,356 --> 00:16:24,566 {\an8}ಐ-676ರ ಈ ವಿಭಾಗದ ಬಗ್ಗೆ ಏನು? ಇದು ಉದ್ದವಾಗಿದೆ. 235 00:16:24,567 --> 00:16:27,195 {\an8}ಸಾವಿನ ಸಂಖ್ಯೆ ಹೆಚ್ಚಾಗುತ್ತೆ. 236 00:16:36,538 --> 00:16:37,539 ಅದು ಯಾರೆಂದು ಹೋಗಿ ನೋಡು. 237 00:17:47,650 --> 00:17:48,526 ಅದೇ ನಮ್ಮ ಸೂಚನೆ. 238 00:17:50,320 --> 00:17:52,030 ಅದು ಏನು ಅಂತ ತಿಳಿದುಕೊಳ್ಳಿ. 239 00:17:56,117 --> 00:17:57,285 ರೀಚರ್. 240 00:17:59,829 --> 00:18:00,663 ಲೈಲಾ! 241 00:18:02,415 --> 00:18:04,750 {\an8}ಸೇತುವೆಯ ಮೇಲೆ ನಾನು ನಿನಗೆ ಏನು ಹೇಳಿದೆ? 242 00:18:04,751 --> 00:18:06,752 {\an8}ನಾವು ಸತ್ತರೆ ನಮ್ಮ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ. 243 00:18:06,753 --> 00:18:09,630 {\an8}ನಾವು ಈ ಜನರಿಗೆ ಒಂದು ಕಾರಣಕ್ಕಾಗಿ ಇಷ್ಟು ಹಣ ಪಾವತಿಸುತ್ತಿದ್ದೇವೆ. 244 00:18:09,631 --> 00:18:11,382 ನೀನು, ರೀಚರ್‌ನನ್ನು ಹುಡುಕಲು ಹೋಗು. 245 00:18:12,550 --> 00:18:13,717 ಅವನನ್ನು ಹೇಗೆ ಗುರುತಿಸಲಿ? 246 00:18:13,718 --> 00:18:16,179 ಅವನೇ ಎಲ್ಲರನ್ನೂ ಕೊಲ್ಲುತ್ತಿರುವವನು! ಹೋಗು! 247 00:19:32,422 --> 00:19:33,506 ನನಗೆ ರಕ್ಷಣೆ ಕೊಡು! 248 00:19:39,721 --> 00:19:42,223 ಮೂರು… ಎರಡು… ಒಂದು. 249 00:19:52,483 --> 00:19:54,192 ನಿಲ್ಲಿಸು! 250 00:19:54,193 --> 00:19:56,321 ನೀನು ವಿಷಕ್ಕೆ ಹೊಡೆದರೆ, ನಾವೆಲ್ಲರೂ ಸಾಯುತ್ತೇವೆ! 251 00:19:57,363 --> 00:19:58,781 ಅದನ್ನು ನನಗೆ ಕೊಡು! 252 00:20:01,075 --> 00:20:03,243 - ಅದು ಏನು? - ಅದರಲ್ಲಿ ಮರ್ಕ್ಯುರಿ ಫುಲ್ಮಿನೇಟ್ ಇದೆ, 253 00:20:03,244 --> 00:20:04,120 ಆತ್ಮಹತ್ಯಾ ಪಟ್ಟಿಗಾಗಿ. 254 00:20:15,673 --> 00:20:17,216 ಈಗ ಹೋಗಿ ವಿಷವನ್ನು ತೆಗೆದುಕೊಂಡು ಬಾ. 255 00:20:18,760 --> 00:20:20,428 ಅವಳು ನನ್ನನ್ನು ಕೊಲ್ಲಲು ಬಿಡಬೇಡ! 256 00:20:36,653 --> 00:20:37,612 ಅವನದು ಮುಗಿಯಿತು! 257 00:22:09,912 --> 00:22:10,913 ಅಯ್ಯೋ! 258 00:22:22,508 --> 00:22:23,342 ಛೆ! 259 00:23:59,188 --> 00:24:00,523 ಬಾರೋ, ಬೋಳಿಮಗನೇ. 260 00:24:23,671 --> 00:24:25,463 ಅಲ್ಲಿ ಏನು ನಡೆಯುತ್ತಿದೆ? 261 00:24:25,464 --> 00:24:26,716 ರಸಾಯನಶಾಸ್ತ್ರಜ್ಞ ಸತ್ತಿದ್ದಾನೆ. 262 00:24:27,425 --> 00:24:30,928 ನಮಗಲ್ಲಿ ಸಿಗುವ ಯಾವುದೇ ವಿಷವನ್ನು ತೆಗೆದುಕೋ. ಜನರ ಗುಂಪನ್ನು ಹುಡುಕಿ ಅದನ್ನು ಬಳಸು. 263 00:24:32,013 --> 00:24:32,929 ನೈಟ್‌ಕ್ಲಬ್‌ನಲ್ಲಿ! 264 00:24:32,930 --> 00:24:34,724 ಅದನ್ನು ಹೊರಾಂಗಣದಲ್ಲಿ ಬಳಸಬೇಕು ಎಂದುಕೊಂಡೆ! 265 00:24:36,684 --> 00:24:38,143 ಈಗ ಮಧ್ಯರಾತ್ರಿ! 266 00:24:38,144 --> 00:24:40,563 ಹೊರಾಂಗಣದಲ್ಲಿ ಜನಸಂದಣಿ ನಮಗೆಲ್ಲಿ ಸಿಗುತ್ತದೆ? 267 00:24:41,564 --> 00:24:43,983 ನನ್ನ ಮಾತನ್ನು ಗಮನವಿಟ್ಟು ಕೇಳು. 268 00:24:44,775 --> 00:24:47,944 ನಾನು ಖರೀದಿದಾರರಿಗೆ ಶವಗಳ ಸಂಖ್ಯೆಯನ್ನು ತೋರಿಸಬೇಕಿದೆ. 269 00:24:47,945 --> 00:24:51,406 ಈಗಲೇ ವಾಯುಶೋಧಕವನ್ನು ಧರಿಸಿ ಅದನ್ನು ಮಾಡು, 270 00:24:51,407 --> 00:24:56,204 ಇಲ್ಲದಿದ್ದರೆ ನೀನು ಇದುವರೆಗೆ ಕಾಳಜಿ ವಹಿಸಿದ ಎಲ್ಲರೂ ಬೆಳಿಗ್ಗೆ ಹೊತ್ತಿಗೆ ಸಾಯುತ್ತಾರೆ! 271 00:25:32,281 --> 00:25:33,199 ಟಮಾರಾ! 272 00:25:37,954 --> 00:25:41,122 ಹೇ! ಹೇ, ಹೇ. 273 00:25:41,123 --> 00:25:43,917 ಟಮಾರಾ. ಹೇ. 274 00:25:43,918 --> 00:25:44,834 ನನ್ನನ್ನು ನೋಡು. 275 00:25:44,835 --> 00:25:46,796 ಸರಿ. ನಿನಗೇನಾಗಿಲ್ಲ. 276 00:25:49,298 --> 00:25:50,341 ನಿನಗೇನಾಗಿಲ್ಲ. 277 00:25:55,054 --> 00:25:57,514 {\an8}ಕೊಳ್ಳುಗರು ತಮ್ಮ ಪ್ರದರ್ಶನವನ್ನು ನೋಡಲಿದ್ದಾರೆ. 278 00:25:57,515 --> 00:25:59,224 {\an8}ಇದನ್ನು ಮುಗಿಸೋಣ. 279 00:25:59,225 --> 00:26:01,727 ಇರಿ. ನಾನು ಕೇವಲ ಒಬ್ಬ ಎಐ ತಂತ್ರಜ್ಞ. ನನ್ನನ್ನು ಬಿಟ್ಟು ಹೋಗಬೇಡಿ. 280 00:26:02,395 --> 00:26:03,562 ನೀನು ಹೇಳಿದ್ದು ಸರಿ. 281 00:26:09,110 --> 00:26:10,902 ಗಿಸೆಪ್ಪೆಸ್ ಅರ್ಬನ್ ಲೌಂಜ್ & ರೆಸ್ಟೋರೆಂಟ್ 282 00:26:10,903 --> 00:26:11,821 ಈ ಕಡೆಗೆ! 283 00:26:16,242 --> 00:26:17,076 ಛೆ! 284 00:26:36,679 --> 00:26:37,763 ಇಲ್ಲ! 285 00:26:39,432 --> 00:26:40,433 ಇಲ್ಲ! 286 00:27:27,897 --> 00:27:30,191 ಆ ರೈಲಿನಲ್ಲಿ ನಿನ್ನ ಕೆಲಸವನ್ನು ನೀನು ನೋಡಿಕೊಳ್ಳಬೇಕಿತ್ತು. 287 00:27:31,192 --> 00:27:32,610 ಜನರು ನನಗೆ ಅದನ್ನೇ ಹೇಳುತ್ತಿರುತ್ತಾರೆ. 288 00:28:09,897 --> 00:28:11,857 ಯಾವ ಟೈಲ್ ಲೈಟ್‌ಗಳು ಅವನವು ಎಂದು ನನಗೆ ಗೊತ್ತಾಗುತ್ತಿಲ್ಲ. 289 00:28:17,238 --> 00:28:18,864 ಛೆ! ಅವನು ಎಲ್ಲಿದ್ದಾನೆ? 290 00:29:04,827 --> 00:29:06,454 ನಾವು ಇದನ್ನು ಆನಂದಿಸುತ್ತೇವೆ. 291 00:29:53,542 --> 00:29:55,084 ತುಂಬಾ ರಕ್ತ ಕಳೆದುಕೊಳ್ಳುತ್ತಿದ್ದೀಯ. 292 00:29:55,085 --> 00:29:56,420 ದುರ್ಬಲನಾಗುತ್ತಿದ್ದೀಯ. 293 00:29:57,171 --> 00:30:01,424 ಬೇಗ ನೀನು ಪ್ರಜ್ಞೆ ತಪ್ಪುತ್ತೀಯ. ಆಮೇಲೆ ಆನಾಳ ಮಗನಂತೆ ನಿನ್ನನ್ನೂ ಮೇಜಿಗೆ ಕಟ್ಟಿಹಾಕುತ್ತೇವೆ. 294 00:30:01,425 --> 00:30:04,970 ಆಗ… ಮಜಾ ಶುರುವಾಗುತ್ತದೆ. 295 00:30:05,888 --> 00:30:08,349 ಆ ಹುಡುಗ ತನ್ನ ತಾಯಿ ಬೇಕೆಂದು ಅಳುವುದನ್ನು ನೀನು ಕೇಳಬೇಕಿತ್ತು. 296 00:30:10,976 --> 00:30:12,394 ನೀನೂ ನಿಮ್ಮಮ್ಮ ಬೇಕೆಂದು ಅಳುತ್ತೀಯಾ? 297 00:31:07,408 --> 00:31:08,450 ಇಲ್ಲ! 298 00:31:40,274 --> 00:31:42,109 ಹೇ, ಬೇವರ್ಸಿ! ಅಲ್ಲಿ ಪಾರ್ಕ್ ಮಾಡಬಾರದು! 299 00:31:42,735 --> 00:31:45,195 ಫ್ಲಕ್ಸ್ 300 00:32:11,472 --> 00:32:12,514 ನನಗೆ ಅವನು ಕಾಣುತ್ತಿಲ್ಲ. 301 00:32:18,562 --> 00:32:20,147 ಅದು ಅವನ ಕಾರು! 302 00:32:21,023 --> 00:32:22,316 ಸಿಕ್ಕಿದ ನನ್ಮಗ! 303 00:32:27,363 --> 00:32:28,238 ಫಿಲ್ಲಿ ಪಿಡಿ! 304 00:32:28,822 --> 00:32:29,657 ಸರಿಯಿರಿ! 305 00:32:53,764 --> 00:32:54,682 ಮೇಲಕ್ಕೆ! 306 00:33:03,941 --> 00:33:04,858 ಅದನ್ನು ಕೆಳಗೆ ಹಾಕು! 307 00:33:08,737 --> 00:33:10,239 ನಾನು ನಿನ್ನ ತಲೆಯನ್ನು ಸಿಡಿಸುತ್ತೇನೆ! 308 00:33:11,990 --> 00:33:14,618 ಅವನು ಆ ಜಾಡಿಯನ್ನು ಬೀಳಿಸಿದರೆ, ಇಲ್ಲಿರುವ ಎಲ್ಲರೂ ಸಾಯುತ್ತಾರೆ. 309 00:33:42,438 --> 00:33:43,564 ನಾವು ಹೋಗಿ ಅದನ್ನು ಪಡೆಯಬೇಕು. 310 00:33:45,858 --> 00:33:46,734 ಹಾಂ. 311 00:35:22,454 --> 00:35:23,622 ಓಹ್, ದೇವರೇ. 312 00:36:13,297 --> 00:36:15,298 ನಾನು ಯಾವುದನ್ನು ಹೆಚ್ಚು ಆನಂದಿಸುತ್ತೇನೋ ಗೊತ್ತಿಲ್ಲ. 313 00:36:15,299 --> 00:36:17,676 ನಿನ್ನನ್ನು ಕೆಯ್ಯೋದೋ ಅಥವಾ ಕೊಲ್ಲೋದೋ! 314 00:36:41,283 --> 00:36:43,285 ನನಗೆ ಯಾವುದು ಹೆಚ್ಚು ಇಷ್ಟ ಅಂತ ನನಗೆ ಗೊತ್ತು. 315 00:38:31,852 --> 00:38:34,187 ನಿಜವಾಗಲೂ ಮೆಚ್ಚಿದೆ, ರೀಚರ್. 316 00:38:35,272 --> 00:38:37,232 ನೀನು ಅಲ್ಲಿರುವ ಎಲ್ಲರನ್ನೂ ಕೊಂದಿದ್ದೀಯ ಅನಿಸುತ್ತೆ. 317 00:38:39,985 --> 00:38:42,237 ಅವರು ಕೂಡ ತಮ್ಮ ಕೈಚಳಕ ತೋರಿದಂತಿದ್ದಾರೆ. 318 00:38:56,043 --> 00:38:57,335 ನನ್ನನ್ನು ನೋಡಿ ಆಶ್ಚರ್ಯವಾಯಿತೇ? 319 00:38:59,921 --> 00:39:01,506 ನಮ್ಮ ಕೊನೆಯ ಮುಖಾಮುಖಿಯ ನಂತರ, 320 00:39:03,175 --> 00:39:05,886 ನಾನಂದುಕೊಂಡೆ, ನಾನು ಮಾಡಬಹುದಾದ ಬುದ್ಧಿವಂತ ಕೆಲಸವೆಂದರೆ ಕೇವಲ… 321 00:39:07,763 --> 00:39:09,264 ನಿನ್ನನ್ನು ಹಿಂಬಾಲಿಸುವುದು. 322 00:39:09,890 --> 00:39:11,808 ನೀನು ನನಗೆ ಡ್ರೈವ್ ತರುವವರೆಗೆ ಕಾಯುವುದು. 323 00:39:17,981 --> 00:39:19,691 ಕಷ್ಟದ ಕೆಲಸ ಮಾಡಿದ್ದಕ್ಕಾಗಿ ಧನ್ಯವಾದ. 324 00:40:37,185 --> 00:40:40,939 ನಿನ್ನ ಸಹೋದರಿ ಮತ್ತು ಸೋದರಳಿಯ ಹೇಡಿಗಳಂತೆ ಸತ್ತರು. 325 00:40:41,815 --> 00:40:43,233 ನಾನು ಹಾಗೆ ಸಾಯಲ್ಲ. 326 00:40:44,484 --> 00:40:45,986 ಮುಗಿಸಿಬಿಡು! 327 00:41:16,266 --> 00:41:18,810 ಕೊಲೆ ಆರೋಪದ ಮೇಲೆ ನಿನ್ನನ್ನು ಬಂಧಿಸಲಾಗುತ್ತದೆ… 328 00:41:20,645 --> 00:41:25,609 ಜಾನ್ ಸ್ಯಾಮ್ ಸನ್, ಬೆನ್ಜಮಿನ್ ಮೆರಿಕ್, ಮತ್ತು ಆನಾ ಮೆರಿಕ್ ಅವರ ಕೊಲೆಗಾಗಿ. 329 00:41:27,068 --> 00:41:29,528 ಮೌನವಾಗಿರಲು ನಿನಗೆ ಹಕ್ಕಿದೆ. 330 00:41:29,529 --> 00:41:31,447 ಮತ್ತು ನೀನು ಏನೇ ಹೇಳಿದರೂ 331 00:41:31,448 --> 00:41:34,993 ಅದನ್ನು ನ್ಯಾಯಾಲಯದಲ್ಲಿ ನಿನ್ನ ವಿರುದ್ಧ ಬಳಸಬಹುದು ಮತ್ತು ಬಳಸಲಾಗುವುದು. 332 00:41:35,660 --> 00:41:37,454 ನಿನಗೆ ವಕೀಲರನ್ನು ಪಡೆಯುವ ಹಕ್ಕಿದೆ. 333 00:41:38,455 --> 00:41:42,291 ನಿನಗವರನ್ನು ಪಡೆಯಲು ಸಾಧ್ಯವಾಗದಿದ್ದರೆ, ನಿನಗಾಗಿ ಒಬ್ಬ ವಕೀಲರನ್ನು ನೇಮಿಸಲಾಗುತ್ತದೆ. 334 00:41:42,292 --> 00:41:44,878 ನೀನು ಈಗ ಪ್ರಶ್ನೆಗಳಿಗೆ ಉತ್ತರಿಸಲು ನಿರ್ಧರಿಸಿದರೆ… 335 00:42:20,914 --> 00:42:21,831 ಅವನು ಎದ್ದಿದ್ದಾನೆ. 336 00:42:23,083 --> 00:42:24,167 ಡ್ರೈವ್ ಎಲ್ಲಿದೆ? 337 00:42:25,126 --> 00:42:26,044 ನಿನ್ನ ಕೈಯಲ್ಲಿ ನೋಡು. 338 00:42:29,256 --> 00:42:32,258 ಅದನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಅರೆವೈದ್ಯರನ್ನೂ ನೀನು ಕೊಂದುಬಿಡುತ್ತಿದ್ದೆ. 339 00:42:32,259 --> 00:42:33,468 ನನಗೆ ಯಾಕೆ ಕೈಕೋಳ ಹಾಕಿಲ್ಲ? 340 00:42:34,135 --> 00:42:35,053 ಯಾವುದೇ ಆರೋಪವಿಲ್ಲ. 341 00:42:35,887 --> 00:42:38,056 ಹಲವಾರು ಸಾವುಗಳಿಗೆ ನನ್ನನ್ನೇ ದೂಷಿಸಬಹುದು. 342 00:42:39,516 --> 00:42:41,308 ಆ ಕಟ್ಟಡದಲ್ಲೆಲ್ಲಾ ನನ್ನ ರಕ್ತ ಚೆಲ್ಲಿದೆ. 343 00:42:41,309 --> 00:42:43,602 ಸ್ಯಾಮ್ ಸನ್‌ನ ವಿಧವೆ ಪತ್ನಿಯ ತಂಟೆಗೆ ಹೋಗಬಾರದು. 344 00:42:43,603 --> 00:42:47,189 ಡಿಓಡಿ ಘಟನಾ ಸ್ಥಳದ ಉಸ್ತುವಾರಿ ವಹಿಸಿಕೊಂಡು, ಫೆಡರಲ್ ದಾಳಿಯ ಬಗ್ಗೆ ಸಂಪೂರ್ಣ ಕಥೆ ಹೆಣೆದರು. 345 00:42:47,190 --> 00:42:48,565 ನಿನ್ನ ಹೆಸರನ್ನು ಸೇರಿಸಲಿಲ್ಲ. 346 00:42:48,566 --> 00:42:50,818 ನಿನಗೂ ಅದೇ ಬೇಕು ಅಂದುಕೊಂಡೆ. 347 00:42:50,819 --> 00:42:53,363 ಆದರೂ ನನಗೆ ಸ್ವಲ್ಪ ಮನ್ನಣೆ ಸಿಕ್ಕಿತು. ಜೇಕಬ್‌ಗೂ ಅಷ್ಟೇ. 348 00:42:55,323 --> 00:42:56,240 ಅವನು ಹೇಗಿದ್ದಾನೆ? 349 00:42:56,241 --> 00:42:57,533 ಪರವಾಗಿಲ್ಲ. 350 00:42:57,534 --> 00:42:58,410 ಎಲ್ಲಾ ಪರಿಗಣಿಸಿದರೆ. 351 00:42:59,411 --> 00:43:01,912 ನನ್ನ ಜೊತೆ ಪಾಳಿ ಕೆಲಸ ಬದಲಾಯಿಸುತ್ತಾ, ನಿನ್ನ ನೋಡಿಕೊಳ್ಳುತ್ತಿದ್ದಾನೆ. 352 00:43:01,913 --> 00:43:03,415 ನೀವು ಹೇಗಿದ್ದೀರಿ? 353 00:43:04,499 --> 00:43:05,416 ನಿಜ ಹೇಳಲೇ? 354 00:43:05,417 --> 00:43:08,086 ನಾವು ಒಬ್ಬರಿಗೊಬ್ಬರು ಸುಳ್ಳು ಹೇಳುವ ಹಂತವನ್ನು ದಾಟಿದ್ದೇವೆ ಅನಿಸುತ್ತೆ. 355 00:43:09,838 --> 00:43:10,839 ಚೆನ್ನಾಗಿದೆ ಅನಿಸುತ್ತಿದೆ. 356 00:43:12,173 --> 00:43:13,758 ತುಂಬಾ ಸಮಯದ ನಂತರ ಚೆನ್ನಾಗಿ ಅನಿಸುತ್ತಿದೆ. 357 00:43:15,427 --> 00:43:18,596 - ನಾನು ಮತ್ತೆ ಪೊಲೀಸ್ ಆಗಲು ಸಿದ್ಧ ಅನಿಸುತ್ತೆ. - ನಿವೃತ್ತಿ ಬಗ್ಗೆ ಏನು? 358 00:43:20,056 --> 00:43:21,474 ಇಪ್ಪತ್ತು ವರ್ಷಗಳ ನಂತರ ಮತ್ತೆ ಕೇಳು. 359 00:43:28,189 --> 00:43:30,108 - ಏನು ಮಾಡ್ತಿದ್ದೀಯ? - ಹೊರಡುತ್ತಿದ್ದೇನೆ. 360 00:43:32,861 --> 00:43:34,321 ಸರ್, ಏನು ಮಾಡುತ್ತಿದ್ದೀರಿ? 361 00:43:34,821 --> 00:43:37,614 - ಹೊರಡುತ್ತಿದ್ದಾನೆ. - ಅದು ವೈದ್ಯರ ಆದೇಶವಲ್ಲ. 362 00:43:37,615 --> 00:43:39,951 ನಾನು ಸೈನ್ಯ ಬಿಟ್ಟಾಗಲೇ ಆದೇಶ ಪಡೆಯುವುದನ್ನೂ ಬಿಟ್ಟೆ. 363 00:43:40,660 --> 00:43:42,037 ಡಾಕ್ಟರ್ ನ್ಯೂಹುಕ್ ಅವರನ್ನು ಕರೆಯುವೆ. 364 00:43:43,455 --> 00:43:46,124 - ನನ್ನ ಬಟ್ಟೆಗಳು ಎಲ್ಲಿವೆ? - ನಿನಗೆ ಹೊಸ ಬಟ್ಟೆಗಳನ್ನು ತಂದೆ. 365 00:43:47,042 --> 00:43:49,543 ಮೂಲೆಯಲ್ಲಿರುವ ಆ ಪುಟ್ಟ ಮೇಜಿನ ಮೇಲೆ ಹೊಸ ಬೂಟುಗಳಿವೆ. 366 00:43:49,544 --> 00:43:52,297 ಬೇಗ ಬಟ್ಟೆ ಹಾಕಿಕೋ. ನನಗೆ ನಿನ್ನ ತಿಕ ನೋಡುವ ಅವಶ್ಯಕತೆ ಇಲ್ಲ. 367 00:43:54,507 --> 00:43:56,843 ಆ ದೊಡ್ಡ ಗಾಯದ ಗುರುತು ನಿನ್ನ ಜೀವ ಉಳಿಸಿತೆಂದು ಡಾಕ್ಟರ್ ಹೇಳಿದರು. 368 00:43:57,552 --> 00:44:00,095 ಗಾಯದ ಗುರುತಿನ ದಪ್ಪ ಚರ್ಮದಿಂದ ಚಾಕು ಆಳಕ್ಕೆ ಇಳಿಯಲಿಲ್ಲ. 369 00:44:00,096 --> 00:44:02,473 ಅದು ಇಲ್ಲದೇ ಹೋಗಿದ್ದರೆ, ನೀನು ಇಲ್ಲಿ ಇರುತ್ತಿರಲಿಲ್ಲ. 370 00:44:02,474 --> 00:44:03,433 ನನ್ನ ಅದೃಷ್ಟ. 371 00:44:10,398 --> 00:44:12,900 ಅವರು ನಿನ್ನನ್ನು ಬಂಧಿಸಿದಾಗ ಪಡೆದ ನಿನ್ನ ವಸ್ತುಗಳ ಪುಟ್ಟ ಚೀಲ. 372 00:44:12,901 --> 00:44:15,361 ಪಾಸ್‌ಪೋರ್ಟ್, ಟೂತ್‌ಬ್ರಷ್, ಬರ್ನರ್ ಫೋನ್ ಮತ್ತು ನಗದು. 373 00:44:15,362 --> 00:44:18,072 ನಾನು ಸ್ವಲ್ಪ ಹೆಚ್ಚುವರಿ ಹಣ ಹಾಕಿದೆ. ನೀನು ಬಡವ, ರೀಚರ್. 374 00:44:18,073 --> 00:44:19,115 ಧನ್ಯವಾದ. 375 00:44:20,116 --> 00:44:21,409 ಆದರೆ ನನಗೆ ಇನ್ನೊಂದು ಉಪಕಾರ ಬೇಕು. 376 00:44:22,035 --> 00:44:24,621 - ಏನು? - ನೀವು ನನಗಾಗಿ ಒಂದನ್ನು ಮರಳಿ ತರಬೇಕು. 377 00:44:32,420 --> 00:44:33,670 ಅವರು ಆಗಲೇ ಹೊರಟರು. 378 00:44:33,671 --> 00:44:35,756 ಸರ್. ಸರ್? 379 00:44:35,757 --> 00:44:37,175 ನೀವು ಅದನ್ನು ಇಲ್ಲಿ ತರಬಾರದು! 380 00:44:39,552 --> 00:44:40,428 ರೀಚರ್. 381 00:44:41,179 --> 00:44:42,389 ನಾನು ನಿನಗೆ ಏನೋ ತಂದಿದ್ದೇನೆ. 382 00:44:44,557 --> 00:44:45,474 ಇವನು ಈಗ ನಿನ್ನವನು. 383 00:44:45,475 --> 00:44:46,393 ಏನು? 384 00:44:49,521 --> 00:44:50,647 ಹೇ. 385 00:44:51,856 --> 00:44:54,109 ನಾನು ನಿನ್ನನ್ನು ವಾಲ್ಟರ್ ಕ್ರಾನ್-ಕ್ಯಾಟ್ ಎಂದು ಕರೆಯುತ್ತೇನೆ. 386 00:44:56,069 --> 00:44:57,861 ಗುರು, ನೀನು ಅಷ್ಟು ಚೆನ್ನಾಗಿ ಕಾಣುತ್ತಿಲ್ಲ. 387 00:44:57,862 --> 00:44:59,030 ನೀನೂ ಅಷ್ಟೇ. 388 00:45:00,990 --> 00:45:03,659 ಗೊತ್ತಾ, ಜೇಕಬ್ ಮತ್ತು ಟಮಾರಾ ಬಂದಿದ್ದರು. 389 00:45:03,660 --> 00:45:05,078 ಅದು ಮುಗಿಯಿತು ಎಂದು ನನಗೆ ಹೇಳಿದರು. 390 00:45:06,204 --> 00:45:10,250 ಇನ್ನೂ ಇಲ್ಲ. ನನಗೆ ತಿಳಿದಿರುವ ಜನರಿಗೆ ನನಗಿದು ಸಿಕ್ಕಾಗ ಏನು ಮಾಡುವೆ ಎಂದು ಹೇಳುತ್ತಿದ್ದೆ. 391 00:45:13,253 --> 00:45:14,295 ನಿನ್ನ ಸುದ್ದಿಯನ್ನು ಬರೆ. 392 00:45:15,422 --> 00:45:16,464 ನಿನ್ನ ಪುಲಿಟ್ಜರ್ ಪಡೆದುಕೋ. 393 00:45:24,764 --> 00:45:25,890 ಬೆಕ್ಕನ್ನು ನೋಡಿಕೋ, ಪ್ಲಂ. 394 00:45:27,392 --> 00:45:29,144 ನಿನ್ನ ಬಗ್ಗೆ ಕಾಳಜಿ ವಹಿಸು, ರೀಚರ್. 395 00:45:30,395 --> 00:45:31,353 ಹೇ. 396 00:45:31,354 --> 00:45:34,232 ಲೇಖನಿ ಕತ್ತಿಗಿಂತ ಹರಿತವಾದದ್ದು ಎಂದು ನಾನು ನಿನಗೆ ಹೇಳಿದ್ದೆ. 397 00:45:38,153 --> 00:45:39,529 ಕತ್ತಿಯೂ ತನ್ನ ಪಾತ್ರ ನಿರ್ವಹಿಸಿತು. 398 00:45:51,291 --> 00:45:52,167 ಹಲೋ? 399 00:45:52,959 --> 00:45:53,793 ಹೌದು. 400 00:45:55,962 --> 00:45:57,338 ಹದಿನೈದು ನಿಮಿಷಗಳಲ್ಲಿ ಭೇಟಿಯಾಗುವೆ. 401 00:45:58,840 --> 00:46:01,216 ದ ಬೆಲ್‌ಮೊಂಟ್ 402 00:46:01,217 --> 00:46:02,093 ಕ್ರೀಮ್ ಮತ್ತು ಸಕ್ಕರೆ? 403 00:46:02,677 --> 00:46:03,511 ಬೇಡ, ಧನ್ಯವಾದ. 404 00:46:04,179 --> 00:46:08,099 ನನಗೂ ಬೇಡ. ಕ್ರೀಮ್ ಮತ್ತು ಸಕ್ಕರೆ ಇರುವುದನ್ನೇ ಚಂದಗೊಳಿಸುತ್ತವೆ. 405 00:46:09,684 --> 00:46:12,353 ಇಷ್ಟು ಕಡಿಮೆ ಸಮಯದಲ್ಲಿ ನನ್ನನ್ನು ಇಲ್ಲಿ ಭೇಟಿ ಮಾಡಿದ್ದಕ್ಕಾಗಿ ಧನ್ಯವಾದ. 406 00:46:13,271 --> 00:46:15,314 ನನ್ನ ಮೇಲೆ ಯಾವುದೇ ಆರೋಪ ಬರದಂತೆ ನೋಡಿದ್ದಕ್ಕೆ ಧನ್ಯವಾದ. 407 00:46:15,315 --> 00:46:18,193 ನನ್ನ ಗಂಡನ ಹೆಸರಿಗೆ ಈಗ ಅಂಟಿರುವ ಸದ್ಭಾವನೆ ನಿಜಕ್ಕೂ ಅದ್ಭುತ. 408 00:46:19,611 --> 00:46:22,404 ಅದಕ್ಕಾಗಿ ಅವರು ವೀರಮರಣವನ್ನು ಹೊಂದಬೇಕಾಯಿತು. 409 00:46:22,405 --> 00:46:25,575 ವಾಷಿಂಗ್ಟನ್‌ನಲ್ಲೆಲ್ಲ ಖಾಲಿ ಸೂಟ್‌ಗಳಲ್ಲಿ ಖಾಲಿ ಭರವಸೆಗಳನ್ನು ಕೊಡುವವರೇ ಇದ್ದಾರೆ. 410 00:46:26,367 --> 00:46:28,077 ಅಲ್ಲಿನ ಬಹಳಷ್ಟು ಮಂದಿಯನ್ನು ನಾನು ಮೆಚ್ಚಲಾರೆ. 411 00:46:28,786 --> 00:46:29,913 ಸ್ಯಾಮ್ ಸನ್‌ರನ್ನು ಮೆಚ್ಚಿದೆ. 412 00:46:31,623 --> 00:46:32,457 ನಿಮ್ಮನ್ನೂ ಅಷ್ಟೇ. 413 00:46:33,166 --> 00:46:34,542 ಕೇಳಿ ಸಂತೋಷವಾಯಿತು. 414 00:46:35,585 --> 00:46:37,962 ಆ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳಲು ಬಯಸುತ್ತಿರುವುದರಿಂದ. 415 00:46:39,339 --> 00:46:41,674 ಒಂದೇ ಕುಟುಂಬದ ಇಬ್ಬರು ನೈತಿಕ ರಾಜಕಾರಣಿಗಳು. 416 00:46:42,675 --> 00:46:43,760 ಯಾರು ಅಂದುಕೊಂಡಿರುತ್ತಾರೆ? 417 00:46:45,136 --> 00:46:46,512 ನಿನ್ನ ಮತವನ್ನು ನಾನು ಬಯಸಬಹುದೇ? 418 00:46:46,513 --> 00:46:47,597 ನನ್ನನ್ನು ನೋಂದಾಯಿಸಲಾಗಿಲ್ಲ. 419 00:46:48,932 --> 00:46:50,016 ನನಗೆ ನಿವಾಸವಿಲ್ಲ. 420 00:46:55,104 --> 00:46:56,731 ಮತ್ತೆ, ರೀಚರ್, 421 00:46:57,565 --> 00:47:00,360 ಇನ್ನು ಚರ್ಚಿಸಲು ಉಳಿದಿರುವ ಏಕೈಕ ವಿಷಯವೆಂದರೆ… 422 00:47:01,319 --> 00:47:02,487 ಡ್ರೈವ್ ಎಲ್ಲಿದೆ? 423 00:47:03,404 --> 00:47:04,280 ಸುರಕ್ಷಿತವಾಗಿದೆ. 424 00:47:05,114 --> 00:47:06,866 ಆದರೆ ಸುದ್ದಿ ಹೊರಬರುತ್ತದೆ. 425 00:47:07,909 --> 00:47:08,826 ಒಳ್ಳೆಯದು. 426 00:47:09,869 --> 00:47:12,162 ನನ್ನ ಗಂಡನಿಗೆ 1998ರಲ್ಲಿ ಏನು ನಡೆಯುತ್ತಿತ್ತೆಂದು ತಿಳಿದಿದ್ದರೆ, 427 00:47:12,163 --> 00:47:14,206 ಆಗ ಅವರು ಅದರ ಬಗ್ಗೆ ಏನಾದರೂ ಮಾಡುತ್ತಿದ್ದರು. 428 00:47:14,207 --> 00:47:16,124 ಸತ್ಯವನ್ನು ಈಗ ಅವರು ಮುಚ್ಚಿಡಲು ಬಯಸುವರು ಅನಿಸಲ್ಲ. 429 00:47:16,125 --> 00:47:18,378 ಅದಕ್ಕಾಗಿಯೇ ಅವರು ಒಬ್ಬ ಉತ್ತಮ ಅಧ್ಯಕ್ಷರಾಗುತ್ತಿದ್ದರು. 430 00:47:19,587 --> 00:47:20,755 ನೀವು ಕೂಡ ಆಗಬಹುದು. 431 00:47:23,675 --> 00:47:24,551 ರೀಚರ್. 432 00:47:24,926 --> 00:47:25,843 ಸ್ಪ್ರಿಂಗ್ ಫೀಲ್ಡ್. 433 00:47:26,302 --> 00:47:28,637 ಮೇಡಂ. ವರದಿಗಾರರು ನಿಮ್ಮೊಂದಿಗೆ ಮಾತನಾಡಲು ಬಂದಿದ್ದಾರೆ. 434 00:47:28,638 --> 00:47:29,763 ಸರಿ, ಧನ್ಯವಾದ. 435 00:47:29,764 --> 00:47:31,140 ನಾನಿನ್ನು ಹೊರಡುತ್ತೇನೆ. 436 00:47:33,184 --> 00:47:34,352 ನಾವು ನಿನ್ನನ್ನು ಬಿಡಬಹುದಾ? 437 00:47:36,312 --> 00:47:37,272 ಬಿಡಬಹುದು. 438 00:47:51,703 --> 00:47:52,954 ನೀವು ನನಗಾಗಿ ಕಾಯುತ್ತಿದ್ದೀರಾ? 439 00:47:53,788 --> 00:47:57,374 ನಮ್ಮ ಬಾಸ್‌ಗಳು ಕೆಲವು ಎರಡನೇ ದರ್ಜೆಯ ಹುಡುಗರನ್ನು ನಿನ್ನೊಂದಿಗೆ ಚರ್ಚಿಸಲು ಕಳುಹಿಸಿದ್ದಾರೆ. 440 00:47:57,375 --> 00:47:59,460 - ಅದು ಆಗುವುದಿಲ್ಲ, ಅಲ್ವಾ? - ಇಲ್ಲ. 441 00:48:01,170 --> 00:48:02,462 ನಮಗೆ ಒಂದು ಸಹಾಯ ಮಾಡುವೆಯಾ? 442 00:48:02,463 --> 00:48:04,590 ನಾವು ನಿನ್ನನ್ನು ಒಂದು ನಿರ್ದಿಷ್ಟ ಪ್ರಶ್ನೆಯನ್ನು 443 00:48:04,591 --> 00:48:07,217 ಕೇಳಿದೆವು ಎಂದು ಒಂದು ಸಣ್ಣ ಚೌಕದಲ್ಲಿ ಗುರುತು ಹಾಕಬೇಕಾಗಿದೆ. 444 00:48:07,218 --> 00:48:08,385 ಕೇಳಿ. 445 00:48:08,386 --> 00:48:11,847 ಲೈಲಾ ಮತ್ತು ಆಮಿಷ ಹಾತ್ ಎಂಬ ಅಲಿಯಾಸ್‌ಗಳಡಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯರೊಂದಿಗಿನ 446 00:48:11,848 --> 00:48:14,433 ನಿನ್ನ ಕೊನೆಯ ಸಂವಾದದ ಸಂದರ್ಭದಲ್ಲಿ ನೀನು ಯಾವುದೇ ಸಮಯದಲ್ಲಿ 447 00:48:14,434 --> 00:48:17,020 ಜಂಪ್ ಡ್ರೈವನ್ನು ಸ್ವೀಕರಿಸಿದೆಯಾ ಅಥವಾ ಸ್ವಾಧೀನಪಡಿಸಿಕೊಂಡೆಯಾ? 448 00:48:19,439 --> 00:48:20,273 ಇಲ್ಲ. 449 00:48:23,568 --> 00:48:24,569 ಇಷ್ಟು ಸಾಕು. 450 00:48:27,864 --> 00:48:30,574 ದೇಶಕ್ಕಾಗಿ ನೀನು ಮಾಡಿದ್ದಕ್ಕಾಗಿ ಧನ್ಯವಾದಗಳು, ರೀಚರ್. 451 00:48:30,575 --> 00:48:31,618 ಪರವಾಗಿಲ್ಲ… 452 00:48:32,452 --> 00:48:33,369 ಮೆಕ್ ಮೈಕಲ್ಸ್. 453 00:48:34,245 --> 00:48:35,079 ಮೆಕ್ ಮೈಕಲ್ಸ್. 454 00:48:36,998 --> 00:48:37,874 ಜಾರ್ವಿಸ್. 455 00:48:38,916 --> 00:48:39,916 ಧನ್ಯವಾದ. 456 00:48:39,917 --> 00:48:41,085 ಪರವಾಗಿಲ್ಲ, ಜಾರ್ವಿಸ್. 457 00:48:42,253 --> 00:48:45,131 - ಬ್ಯೂನರ್. ಧನ್ಯವಾದಗಳು, ರೀಚರ್. - ಪರವಾಗಿಲ್ಲ, ಬ್ಯೂನರ್. 458 00:48:52,180 --> 00:48:53,222 ಎರಡನೇ ದರ್ಜೆಯ ತಂಡದಲ್ಲೇ ಇರಿ. 459 00:48:54,182 --> 00:48:55,350 ಅವರ ಮೇಲೆ ಗುಂಡು ಹಾರಿಸಲಾಗಲ್ಲ. 460 00:49:29,550 --> 00:49:31,386 ನೀವು ಶಾಶ್ವತವಾಗಿ ಒಟ್ಟಿಗೆ ಇರಲಿ ಅಂತ. 461 00:50:40,872 --> 00:50:43,874 ಕರ್ತವ್ಯದ ಕರೆಯನ್ನು ಮೀರಿದ ಆಕೆಯ ಪ್ರಯತ್ನಕ್ಕಾಗಿ, 462 00:50:43,875 --> 00:50:47,753 ಟಮಾರಾ ಗ್ರೀನ್ ಅವರಿಗೆ ಫಿಲಡೆಲ್ಫಿಯ ಪೋಲೀಸ್ ಡಿಪಾರ್ಟ್ಮೆಂಟ್‌ನ 463 00:50:47,754 --> 00:50:54,468 ಸಾರ್ಜೆಂಟ್ ರಾಬರ್ಟ್ ವಿಲ್ಸನ್ III ಶೌರ್ಯ ಪದಕ ಕೊಡಲು ನನಗೆ ಹೆಮ್ಮೆಯಾಗುತ್ತಿದೆ. 464 00:50:54,469 --> 00:50:57,305 ಫಿಲಡೆಲ್ಫಿಯ ನಗರದ ಮುದ್ರೆ 465 00:50:58,097 --> 00:51:00,182 ನಿಮ್ಮನ್ನು ತಕ್ಷಣವೇ ಡಿಟೆಕ್ಟಿವ್ ಆಗಿ, ನರಹತ್ಯೆ ವಿಭಾಗಕ್ಕೆ 466 00:51:00,183 --> 00:51:05,146 ಮರು ನಿಯೋಜಿಸುವುದು ನನಗೊಂದು ಮಹಾಭಾಗ್ಯ ಕೂಡ. 467 00:51:11,110 --> 00:51:14,447 ಅವಳು ಅದಕ್ಕೆ ಅರ್ಹಳು, ಗೊತ್ತಾ? ಈಗ ಆ ಸಮಯ ಬಂತು. ಕೊನೆಗೂ. 468 00:51:17,325 --> 00:51:18,450 ಹೊಡೆಯಿರಿ! 469 00:51:18,451 --> 00:51:20,619 ಸಿದ್ಧರಾಗಿ, ಗುರಿಯಿಡಿ. 470 00:51:20,620 --> 00:51:21,496 ಹೊಡೆಯಿರಿ! 471 00:51:39,472 --> 00:51:40,348 ವಿಜ್ ವಿಟ್. 472 00:55:30,161 --> 00:55:32,245 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 473 00:55:32,246 --> 00:55:34,248 ಸೃಜನಶೀಲ ಮೇಲ್ವಿಚಾರಕರು ವಿವೇಕ್