1 00:00:00,042 --> 00:00:01,251 ರೀಚರ್ ಹಿಂದಿನ ಸಂಚಿಕೆಯಲ್ಲಿ… 2 00:00:01,252 --> 00:00:03,086 ನೀವು ಮೂವರು ಇಲ್ಲಿರೋದು ಯಾರಿಗೂ ತಿಳಿದಿಲ್ಲ. 3 00:00:03,087 --> 00:00:05,380 ನಿಮ್ಮನ್ನು ಅಮೆರಿಕದ ಶತ್ರು ಹೋರಾಟಗಾರರಂತೆ ಕಾಣುತ್ತಿದ್ದೇವೆ. 4 00:00:05,381 --> 00:00:06,798 ನಾವು ಏನು ಬೇಕಾದರೂ ಮಾಡಬಹುದು. 5 00:00:06,799 --> 00:00:09,885 ಆನಾ ಮೆರಿಕ್ ನಿನಗೆ ರೈಲಿನಲ್ಲಿ ನೀಡಿದ ಡ್ರೈವ್ ಎಲ್ಲಿದೆ? 6 00:00:15,641 --> 00:00:16,558 ಒಳಗೆ ಹತ್ತಿ! 7 00:00:16,559 --> 00:00:20,562 - ನೀವು ಯಾರು? - ರಸ್ಸಲ್ ಪ್ಲಂ. ಸ್ವತಂತ್ರ ಪತ್ರಕರ್ತ. 8 00:00:20,563 --> 00:00:21,521 ಇದೆಲ್ಲ ಏನು? 9 00:00:21,522 --> 00:00:24,315 ನನ್ನ ಸಂಶೋಧನೆ. ನಾನು ವರ್ಷಗಳಿಂದ ಸಿ ಐ ಎ ಬಗ್ಗೆ ತನಿಖೆ ನಡೆಸುತ್ತಿದ್ದೇನೆ. 10 00:00:24,316 --> 00:00:27,193 90ರ ದಶಕದಲ್ಲಿ, ನನ್ನ ತಾಯಿ ಜಾನ್ ಎಂಬ ಅಮೆರಿಕನ್ ಸೈನಿಕನನ್ನು ಭೇಟಿಯಾದರು. 11 00:00:27,194 --> 00:00:29,571 ಕಾಂಗ್ರೆಸ್ ಮ್ಯಾನ್ ಜಾನ್ ಸ್ಯಾಮ್ ಸನ್. 12 00:00:29,572 --> 00:00:32,449 ಅವರ ನಡುವೆ ಸಂಬಂಧವಿತ್ತು. ಅವರ ಸಂಗಮದ ಕುಡಿಯ ಜೊತೆ ನೀವು ನಡೆಯುತ್ತಿದ್ದೀರಿ. 13 00:00:32,450 --> 00:00:34,617 ವೈದ್ಯರು ನನಗೆ ಮೂಳೆ ಮಜ್ಜೆಯ ಕಸಿ ಬೇಕು ಎಂದರು, 14 00:00:34,618 --> 00:00:36,161 ಆದರೆ ಹೊಂದಿಕೆಗಳು ಸಿಗುವುದು ಕಷ್ಟ. 15 00:00:36,162 --> 00:00:38,371 ನೀವು ಆ ದೇಶದಲ್ಲಿದ್ದದ್ದು ನನ್ನ ಮಾಹಿತಿದಾರರ ಹುಟ್ಟಿಗೆ ಕಾರಣ. 16 00:00:38,372 --> 00:00:39,581 ನನಗೆ ಅಕ್ರಮ ಸಂಬಂಧವಿತ್ತು ಅಂತ? 17 00:00:39,582 --> 00:00:42,710 ನೀನು ನಮ್ಮನ್ನು ಸುಮ್ಮನೆ ಬಿಡಲು ನಿನಗೆ ನನ್ನ ಡಿಎನ್ಎ ಸಾಕಾದರೆ, 18 00:00:43,919 --> 00:00:44,754 ತಗೋ. 19 00:00:45,254 --> 00:00:47,214 ಯಾರೋ ಡ್ರೈವ್‌ಗಾಗಿ ಹುಡುಕಿದ್ದಾರೆ. 20 00:00:47,840 --> 00:00:49,132 ನಿನ್ನ ಸೋದರಳಿಯನಾ? 21 00:00:49,133 --> 00:00:50,842 ಅವನು ನನಗೆ ಮರಳಿ ಕರೆ ಮಾಡಿರಬೇಕಿತ್ತು. 22 00:00:50,843 --> 00:00:52,427 ಸ್ಯಾಮ್ ಸನ್ ಜೊತೆ ಮಾತನಾಡುತ್ತಿರುವವ ಯಾರು? 23 00:00:52,428 --> 00:00:54,597 ಆತ ನೋಲಾನ್ ಕೇಹಿಲ್. ಸ್ಯಾಮ್ ಸನ್ ಅವರ ಸಿಬ್ಬಂದಿ ಮುಖ್ಯಸ್ಥ. 24 00:00:55,097 --> 00:00:57,098 ಆನಾ ಆತ್ಮಹತ್ಯೆ ಮಾಡಿಕೊಂಡಾಗ ಅಲ್ಲಿ ನಾಲ್ಕನೇ ಸಾಕ್ಷಿ 25 00:00:57,099 --> 00:00:59,018 ಇದ್ದ ಅಂತ ಹೇಳಿದ್ದೆ, ನೆನಪಿದೆಯಾ? ಅದು ಅವನೇ. 26 00:01:17,703 --> 00:01:18,620 ವಾಪಸ್ ಬಂದಿರಾ? 27 00:01:18,621 --> 00:01:19,663 ವ್ಯಾನ್ ಕೆಳಗೆ ಇದೆ. 28 00:01:20,706 --> 00:01:21,623 ತಗೊಳ್ಳಿ. 29 00:01:21,624 --> 00:01:22,999 ಇದೇನು? 30 00:01:23,000 --> 00:01:23,876 ಅದು ಬೆಕ್ಕು. 31 00:01:24,502 --> 00:01:27,170 ನೋಲಾನ್ ಕೇಹಿಲ್ ಬಗ್ಗೆ ಸಾಧ್ಯವಾದಷ್ಟೂ ಎಲ್ಲಾ ಮಾಹಿತಿ ನಮಗೆ ಬೇಕು. 32 00:01:27,171 --> 00:01:28,797 ಸ್ಯಾಮ್ ಸನ್ ಅವರ ಸಿಬ್ಬಂದಿ ಮುಖ್ಯಸ್ಥ. 33 00:01:28,798 --> 00:01:30,215 ಯಾಕೆ? ಏನು ನಡೆಯುತ್ತಿದೆ? 34 00:01:30,216 --> 00:01:31,258 ನನ್ನ ಅಕ್ಕ… 35 00:01:33,636 --> 00:01:34,845 ಆನಾ, ಅವಳು… 36 00:01:35,638 --> 00:01:38,056 ನೀವು ವ್ಯಾನ್‌ನಲ್ಲಿ ಮಾತನಾಡುತ್ತಿದ್ದವರ ಬಗ್ಗೆಯೇ? 37 00:01:38,057 --> 00:01:40,225 ಪೆಂಟಗನ್‌ಗಾಗಿ ಕೆಲಸ ಮಾಡುತ್ತಿದ್ದರು, ಜಂಪ್ ಡ್ರೈವ್ ಇತ್ತು? 38 00:01:40,226 --> 00:01:43,938 ಎರಡು ರಾತ್ರಿಯ ಹಿಂದೆ ಬ್ರಾಡ್ ಸ್ಟ್ರೀಟ್ ಲೈನಲ್ಲಿ ಆಕೆ ತಲೆಗೆ ಗುಂಡು ಹೊಡೆದುಕೊಂಡಳು. 39 00:01:52,488 --> 00:01:53,447 ಸ್ವಲ್ಪ ಯೋಚಿಸಿ ಮಾತನಾಡು. 40 00:01:55,991 --> 00:01:59,035 ಆ ರಾತ್ರಿ ಕೇಹಿಲ್ ರೈಲಿನಲ್ಲಿದ್ದ. ನಮಗೆ ಏಕೆ ಎಂದು ತಿಳಿಯಬೇಕು. 41 00:01:59,036 --> 00:02:01,788 ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿಯ ಸಿಬ್ಬಂದಿ ಮುಖ್ಯಸ್ಥ ಇರುವ 42 00:02:01,789 --> 00:02:03,832 ರೈಲಿನಲ್ಲಿಯೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡಳಾ? 43 00:02:03,833 --> 00:02:06,459 ಅದಕ್ಕಾಗಿ ಸಿ ಐ ಎ ಜನರನ್ನು ಅಪಹರಿಸಲು ಪ್ರಾರಂಭಿಸುತ್ತದೆಯೇ? 44 00:02:06,460 --> 00:02:10,840 ಇದು ಒಂದು ದುರಂತವೇ, ನಿಜವಾಗಿ. ಖಂಡಿತ, ಆದರೂ ಅದು ರೋಚಕ ಕಥೆಯೇ. 45 00:02:11,799 --> 00:02:13,675 ಒಂದು ನಿಮಿಷ ಇರಿ, ಕೆಲವು ದಾಖಲೆಗಳನ್ನು ನೋಡುವೆ. 46 00:02:13,676 --> 00:02:15,468 ನಾನು ಬೆನ್. ಒಂದು ಸಂದೇಶ ಬಿಡಿ, 47 00:02:15,469 --> 00:02:18,346 ಅಥವಾ 21ನೇ ಶತಮಾನದಲ್ಲಿ ಜೀವಿಸುವವರಂತೆ ನನಗೆ ಲಿಖಿತ ಸಂದೇಶ ಕಳುಹಿಸಿ. 48 00:02:18,347 --> 00:02:21,307 ಅಂಚೆಪೆಟ್ಟಿಗೆ ತುಂಬಿದೆ ಮತ್ತು-- 49 00:02:21,308 --> 00:02:22,309 ಥೂ! 50 00:02:29,108 --> 00:02:32,278 ಶಾಂತವಾಗುತ್ತೇನೆ. ಶಾಂತವಾಗಿದ್ದೇನೆ. ಕ್ಷಮಿಸಿ. 51 00:02:33,279 --> 00:02:36,739 ಇವನು ಒಂದು ಹೊರೆ. ಅನನುಭವಿ. ಭಾವನಾತ್ಮಕ. 52 00:02:36,740 --> 00:02:38,491 - ಅವನು ಒಬ್ಬ ಪೊಲೀಸ್. - ಮೇಬೆರಿಯವನು. 53 00:02:38,492 --> 00:02:40,159 - ಮೇಫೀಲ್ಡ್. - ಎರಡೂ ಒಂದೇ. 54 00:02:40,160 --> 00:02:43,121 ಏನನ್ನು ಎದುರಿಸುತ್ತಿದ್ದೇವೆಂದು ಗೊತ್ತಿಲ್ಲ. ನಮಗೆ ಸಿಗಬಹುದಾದ ಎಲ್ಲಾ ಸಹಾಯವೂ ಬೇಕು. 55 00:02:43,122 --> 00:02:44,789 - ಅವನು ಸಹಾಯ ಮಾಡಲಾರ. - ನಿನಗೆ ಹೇಗೆ ಗೊತ್ತು? 56 00:02:44,790 --> 00:02:48,334 ಯಾವುದೋ ಕಾನೂನುಬಾಹಿರ ವಿಷಯವಾಗಿ ನಿನ್ನ ಒಡಹುಟ್ಟಿದವರು ಯಾರಾದರೂ ಸತ್ತಿದ್ದಾರಾ? 57 00:02:48,335 --> 00:02:49,919 - ಹೌದು. - ಏನು? 58 00:02:49,920 --> 00:02:53,924 ವಿಷಯ ಇಷ್ಟೇ, ಅವನು ನಿಯಂತ್ರಣ ಕಳೆದುಕೊಂಡರೆ, ಅವನನ್ನು ರಸ್ತೆಯ ನಡುವೆಯೇ ಬಿಟ್ಟು ಹೋಗುತ್ತೇನೆ. 59 00:02:55,009 --> 00:02:56,217 ಯಾರಿಗೆ ಕರೆ ಮಾಡುತ್ತಿರುವೆ? 60 00:02:56,218 --> 00:02:59,637 ಲೈಲಾಗೆ. ಸ್ಯಾಮ್ ಸನ್ ಆಕೆಯ ತಂದೆ ಅಲ್ಲವೆಂದು ಪ್ರಾಮಾಣಿಕವಾಗಿ ಹೇಳುತ್ತಿದ್ದಾರೆ. 61 00:02:59,638 --> 00:03:01,639 ಡಿಎನ್ಎ ಒದಗಿಸಲೂ ತಾನೇ ಮುಂದಾದರು. 62 00:03:01,640 --> 00:03:04,142 ನನಗೆ ಏಕೆ ಸುಳ್ಳು ಹೇಳಿದಳು, ಅವಳಿಗೆ ಏನು ಗೊತ್ತಿದೆ ಎಂದು ತಿಳಿಯಬೇಕು. 63 00:03:04,143 --> 00:03:06,228 ಸರಿ. ಬಹಳಷ್ಟು ಸಿಕ್ಕಿತು. 64 00:03:07,938 --> 00:03:10,440 ಕೇಹಿಲ್ ಸ್ಯಾಮ್ ಸನ್ ಇದ್ದ ಡೆಲ್ಟಾ ತಂಡದಲ್ಲೇ ಸೇವೆ ಸಲ್ಲಿಸಿದರು. 65 00:03:10,441 --> 00:03:12,525 ಆತ ಸ್ಯಾಮ್ ಸನ್ ಅವರ ಮೇಲಧಿಕಾರಿ ಆಗಿದ್ದರು. 66 00:03:12,526 --> 00:03:15,612 ಆತನ ಬಳಿ ಒಲಿಂಪಿಕ್ಸ್‌ಗಿಂತ ಹೆಚ್ಚು ಪದಕಗಳಿವೆ. ಆತನಿಗೆ ಬಹಳಷ್ಟು ತಿಳಿದಿದೆ. 67 00:03:15,613 --> 00:03:18,531 ಸರಿ. ಹಾಗಾದರೆ ಇಲ್ಲಿ ಏನು ಮಾಡುತ್ತಿದ್ದೇವೆ? ಅವನನ್ನು ಎದುರಿಸೋಣ. 68 00:03:18,532 --> 00:03:20,575 - ಅವನು ಬಾಯಿ ಬಿಡಲ್ಲ. - ಹಾಗಾದರೆ ಅವನ ಬಾಯಿ ಬಿಡಿಸೋಣ. 69 00:03:20,576 --> 00:03:23,703 ಒಬ್ಬ ಕಾಂಗ್ರೆಸ್ ಮ್ಯಾನ್‌ನ ಸಿಬ್ಬಂದಿ ಮುಖ್ಯಸ್ಥನನ್ನು ಎಳೆದು ತಂದು ಬೆದರಿಸೋಕಾಗಲ್ಲ. 70 00:03:23,704 --> 00:03:27,874 ಆ ಹುಡುಗಿಯನ್ನು ತುಂಡುತುಂಡಾಗಿ ಕತ್ತರಿಸಿದ್ದರು. ನನಗೆ ನನ್ನ ಸೋದರಳಿಯ ವಾಪಸ್ ಬೇಕು! 71 00:03:27,875 --> 00:03:30,252 ಜೇಕಬ್, ನಾವು ನಿನ್ನನ್ನು ವಿರೋಧಿಸುತ್ತಿಲ್ಲ. ಅದು ಕೇವಲ-- 72 00:03:31,211 --> 00:03:32,129 ಯಾರೋ ಹೊರಗೆ ಇದ್ದಾರೆ. 73 00:03:37,468 --> 00:03:39,469 ಅದು ರಹಸ್ಯತಾಣದಿಂದ ಬಂದ ಸಿ ಐ ಎ ಹೆಚ್ಚುವರಿ ತಂಡ. 74 00:03:39,470 --> 00:03:40,554 ನಮ್ಮನ್ನು ಹೇಗೆ ಹುಡುಕಿದರು? 75 00:03:41,430 --> 00:03:43,139 ಅಯ್ಯೋ. 76 00:03:43,140 --> 00:03:44,058 ಏನು ಮಾಡಿದೆ ನೀನು? 77 00:03:44,767 --> 00:03:47,518 ನೀವು ನನ್ನನ್ನು ಬಿಟ್ಟುಹೋದ ನಂತರ, ನಾನು 4ಚಾನ್‌ನಲ್ಲಿ 78 00:03:47,519 --> 00:03:50,188 ಫಿಲ್ಲಿ ಸಬ್‌ವೇಯಲ್ಲಿ ಥಂಬ್ ಡ್ರೈವ್ ಸಿಕ್ಕಿತು ಎಂದು ಪ್ರಕಟಿಸಿದೆ. 79 00:03:50,189 --> 00:03:54,192 ಅದರ ಮೇಲೆ ಆನಾ ಮೆರಿಕ್ ಹೆಸರು ಮತ್ತು ಒಳಗೆ ಮಿಲಿಟರಿ ದಾಖಲೆಗಳಿದ್ದವು ಅಂತ. 80 00:03:54,193 --> 00:03:56,778 ಯಾರಿಗಾದರೂ ಇದರ ಮಾಹಿತಿ ಇದ್ದರೆ ನನ್ನನ್ನು ಸಂಪರ್ಕಿಸಿ ಎಂದು ಬರೆದಿದ್ದೆ. 81 00:03:56,779 --> 00:03:57,695 ಏನಯ್ಯಾ? 82 00:03:57,696 --> 00:03:59,739 ನೀವು ನನಗೆ ಏನೂ ಹೇಳಲಿಲ್ಲ. ನೀವು ನನ್ನ ವ್ಯಾನ್ ಕದ್ದಿರಿ! 83 00:03:59,740 --> 00:04:01,616 ಈ ಕಥೆ ನನ್ನ ವೃತ್ತಿಜೀವನವನ್ನು ಮರಳಿ ಕೊಡಬಹುದು. 84 00:04:01,617 --> 00:04:03,993 ಏನಾದರೂ ಗೊತ್ತಿರುವಂಥ ಯಾರನ್ನಾದರೂ ಬಯಲುಮಾಡಬಹುದು ಎಂದುಕೊಂಡೆ. 85 00:04:03,994 --> 00:04:06,663 ವಿಪಿಎನ್ ಮತ್ತು ಗೂಢಲಿಪೀಕರಣ ಬಳಸಿದೆ, ನನ್ನನ್ನು ಪತ್ತೆಹಚ್ಚದಿರಲಿ ಅಂತ. 86 00:04:06,664 --> 00:04:08,123 ಯಾರೋ ಪತ್ತೆಹಚ್ಚಿದಂತೆ ಕಾಣುತ್ತೆ. 87 00:04:08,749 --> 00:04:09,833 ಬಹುಶಃ ಇಬ್ಬರು ಇದ್ದಂತಿದೆ. 88 00:04:11,001 --> 00:04:13,587 ಹಾಂ. ನಮಗಾಗಿ ಇನ್ನೊಂದು ಕಾರಿನ ತುಂಬಾ ದಾಂಡಿಗರು ಬಂದಂತಿದ್ದಾರೆ. 89 00:04:14,338 --> 00:04:16,923 ಆ ಗಾಯ ಇರುವವನು ನೆನ್ನೆ ಲೈಲಾಳ ಹೋಟೆಲಿಗೆ ಬಂದಿದ್ದ. 90 00:04:16,924 --> 00:04:18,091 ಈ ವ್ಯಕ್ತಿಗಳು ಯಾರು? 91 00:04:18,092 --> 00:04:20,218 ಅವರು ಖಾಸಗಿ ಸುಪಾರಿ ಕೊಲೆಗಾರರಾಗಿದ್ದರೂ ಪರವಾಗಿಲ್ಲ, 92 00:04:20,219 --> 00:04:22,971 ಅಥವಾ ವಿಶ್ವಕಪ್ ಗೆದ್ದ ತಂಡವೇ ಆಗಿರಲಿ. ಅವರು ಬಂದರೆ, ಅದು ಒಳ್ಳೆಯದಲ್ಲ. 93 00:04:22,972 --> 00:04:25,348 ಗುತ್ತಿಗೆ ಕೊಲೆಗಾರರು ಗುಪ್ತಯೋಧರಂತೆ ಕಾರ್ಯನಿರ್ವಹಿಸುತ್ತಿದ್ದಾರಾ? 94 00:04:25,349 --> 00:04:26,517 ಇರಬಹುದು. 95 00:04:30,020 --> 00:04:32,481 - ಅವರು ಜೊತೆಯಾಗಿ ಇರುವಂತಿಲ್ಲ. - ಅವರು ಒಳಗೆ ಬರುತ್ತಿದ್ದಾರೆ. 96 00:04:33,941 --> 00:04:35,900 ಛೆ. ಅವರು ವಿದ್ಯುತ್ ಕಡಿತಗೊಳಿಸಿದರು. 97 00:04:35,901 --> 00:04:39,487 ನಾವು ಅವರಿಗೆ ಸಿಗುವವರೆಗೂ ನಿಯಮದಂತೆ ಹುಡುಕಾಟ ನಡೆಸುವರು, ಹುಡುಕುತ್ತಾ ಮೇಲೆ ಬರುವರು. 98 00:04:39,488 --> 00:04:41,406 ಒಂದೇ ಮೆಟ್ಟಿಲ ದಾರಿ ಇದೆ. ಅವರಿಗೆ ಸಿಗುತ್ತೇವೆ. 99 00:04:41,407 --> 00:04:43,324 ಛಾವಣಿಯಿಂದ ದಾರಿ? ಬೆಂಕಿಯಿಂದ ತಪ್ಪಿಸಿಕೊಳ್ಳುವ ದಾರಿ? 100 00:04:43,325 --> 00:04:44,826 - ಇಲ್ಲ! - ನಿಮ್ಮ ಚಾಕುಗಳು ಎಲ್ಲಿವೆ? 101 00:04:44,827 --> 00:04:47,328 - ನನ್ನ ಬಳಿ ಚಾಕುಗಳಿಲ್ಲ. ಊಟ ಖರೀದಿಸುವೆ. - ಯಾವುದೇ ಆಯುಧಗಳಿವೆಯೇ? 102 00:04:47,329 --> 00:04:49,080 ನನ್ನ ಬಳಿ ಐದು ಕ್ಯಾನ್ ಕಣಜದ ಸ್ಪ್ರೇ ಇದೆ. 103 00:04:49,081 --> 00:04:50,623 - ಏಕೆ? - ಇಲ್ಲಿ ಕಣಜಗಳಿವೆ. 104 00:04:50,624 --> 00:04:52,793 ಅವುಗಳನ್ನು ತಾ. ಜೇಕಬ್, ಅಗ್ನಿಶಾಮಕವನ್ನು ತೆಗೆದುಕೋ. 105 00:04:57,006 --> 00:04:57,840 ಇಲ್ಲೇ ಇರು. 106 00:04:58,841 --> 00:05:02,219 ಅದನ್ನು ಮರೆಮಾಡಲು ಬಳಸು, ಸನ್ನೆ ಕೇಳಿದ ಕೂಡಲೇ ಟಮಾರಾ ಗುಂಡು ಹಾರಿಸಬಹುದು. 107 00:05:03,721 --> 00:05:05,014 ಸನ್ನೆ ಏನು? 108 00:05:06,223 --> 00:05:07,099 ಕಿರುಚುವುದು. 109 00:05:08,142 --> 00:05:13,063 ರೀಚರ್ 110 00:05:30,998 --> 00:05:32,666 ಬೇಗ. ಬೇಗ, ಅವರು ಬರುತ್ತಿದ್ದಾರೆ. 111 00:06:06,867 --> 00:06:07,701 ಯಾರೂ ಇಲ್ಲ. 112 00:06:15,042 --> 00:06:15,876 ಯಾರೂ ಇಲ್ಲ. 113 00:06:22,633 --> 00:06:23,591 ಸದ್ದು ಮಾಡಬೇಡ! 114 00:06:23,592 --> 00:06:25,427 ನನಗೆ ಆ ದರಿದ್ರ ಕಣಜದ ಸ್ಪ್ರೇ ಸಿಗುತ್ತಿಲ್ಲ! 115 00:07:26,196 --> 00:07:27,030 ಈಗ! 116 00:08:01,190 --> 00:08:03,192 ಇನ್ನೂ ಬದುಕಿದ್ದೀಯಾ? ಒಳ್ಳೆಯದು. 117 00:08:14,786 --> 00:08:16,245 ಯಾರಿಗಾಗಿ ಕೆಲಸ ಮಾಡುತ್ತೀಯ? 118 00:08:16,246 --> 00:08:17,288 ನನಗೆ ವೈದ್ಯರ ಅಗತ್ಯವಿದೆ. 119 00:08:17,289 --> 00:08:19,415 ನಿನಗೆ ವೈದ್ಯರು ಬೇಕಾ? ನಿನ್ನನ್ನು ಯಾರು ಕಳಿಸಿದರೆಂದು ಹೇಳು. 120 00:08:19,416 --> 00:08:20,917 - ದಯವಿಟ್ಟು. - ಬೆನ್ ಎಲ್ಲಿ ಅಂತ ಹೇಳು-- 121 00:08:20,918 --> 00:08:22,461 ಹೇ! ಇವನನ್ನು ಇಲ್ಲಿಂದ ಕರೆದುಕೊಂಡು ಹೋಗಿ! 122 00:08:23,462 --> 00:08:25,087 ನೀನು ಶಾಂತವಾಗಿರಬೇಕು. 123 00:08:25,088 --> 00:08:26,964 ಶಾಂತ? ಬೆನ್ ಎಲ್ಲಿದ್ದಾನೆಂದು ಅವನಿಗೆ ತಿಳಿದಿದೆ. 124 00:08:26,965 --> 00:08:29,300 ಆದರೆ ನೀನು ಅವನನ್ನು ಕೊಂದರೆ ಅವನು ಏನೂ ಹೇಳಲಾರ. 125 00:08:29,301 --> 00:08:31,678 ನಮಗೆ ಮಾಹಿತಿ ಬೇಕೆಂದರೆ ಅವನನ್ನು ಜೀವಂತವಾಗಿ ಇರಿಸಬೇಕು. 126 00:08:36,308 --> 00:08:37,517 ಅದು ಆಗಲ್ಲ ಬಿಡಿ. 127 00:08:39,478 --> 00:08:42,648 - ಅವನಿಂದ ಕದಿಯುತ್ತಿದ್ದೀಯಾ? - ಇವರು ಯಾರು ಅಂತ ನಮಗೆ ತಿಳಿಯಬೇಕು. 128 00:08:44,024 --> 00:08:46,359 ಅವರ ಗನ್ನುಗಳು ಕೊಲೆಯಾದ ಸಿ ಐ ಎಯವರದ್ದು ಅಂತ ತಿಳಿಯುತ್ತದೆ. 129 00:08:46,360 --> 00:08:47,443 ಅಯ್ಯೋ. 130 00:08:47,444 --> 00:08:48,819 ಏನದು? 131 00:08:48,820 --> 00:08:52,949 ಎರಡು ವಿಳಾಸಗಳು. ಒಂದು ಈ ಸ್ಥಳ, ಇನ್ನೊಂದು, ನಾನು ಅಂದುಕೊಂಡಿರುವುದು ಅಲ್ಲವೆಂದರೆ ಸಾಕು. 132 00:08:52,950 --> 00:08:54,576 ಸರಿ. ನಾವು ಹೊರಡಬೇಕು, ಕಣ್ರಪ್ಪ. 133 00:08:56,370 --> 00:08:57,787 ಲೈಲಾ, ನಾನು ರೀಚರ್. 134 00:08:57,788 --> 00:09:00,122 ನಿನ್ನೆ ಹೋಟೆಲ್‌ಗೆ ಬಂದಿದ್ದವನು ಮತ್ತೊಮ್ಮೆ ಭೇಟಿ ನೀಡಿದ. 135 00:09:00,123 --> 00:09:01,415 ಇನ್ನು ಅವನು ಸಮಸ್ಯೆಯಲ್ಲ, 136 00:09:01,416 --> 00:09:03,960 ಆದರೆ ಅವನ ಬಳಿ ರಿಟ್ಟನ್‌ಹೌಸ್ ಹೋಟೆಲ್‌ನ ವಿಳಾಸವಿತ್ತು. 137 00:09:03,961 --> 00:09:07,172 ನೀನು ಅಲ್ಲೇ ಇದ್ದರೆ, ಈಗಲೇ ಹೊರಟುಬಿಡು. ನಾನು ನಿನ್ನನ್ನು ಹುಡುಕುತ್ತೇನೆ. 138 00:09:16,848 --> 00:09:17,765 - ಹೇ. - ಏನು? 139 00:09:17,766 --> 00:09:19,476 - ಆರಾಮಿದ್ದೀಯಾ? - ಹಾಂ, ಕಣಪ್ಪ. ನಾನು… 140 00:09:20,227 --> 00:09:21,519 ನಾನು ಡಿ.ಸಿ.ಯಿಂದ ಹೊರಹೋಗಬೇಕು. 141 00:09:21,520 --> 00:09:24,647 ನೀನು ಅವರ ನಡುವೆ ಸಿಲುಕಿಕೊಂಡಾಗ ಈ ನಗರ ಹೇಗಿರುತ್ತದೆ ಎಂದು ನಿನಗೆ ಗೊತ್ತಿಲ್ಲ. 142 00:09:24,648 --> 00:09:27,149 ನನ್ನ ವೃತ್ತಿಜೀವನವನ್ನೇ ಕೊಂದರು, ಈಗ ನನ್ನನ್ನು ಕೊಲ್ಲಲಿದ್ದಾರೆ. 143 00:09:27,150 --> 00:09:29,361 ದಯವಿಟ್ಟು ನಾವು ಸ್ವಲ್ಪ ವೇಗವಾಗಿ ಹೋಗಬಹುದೇ? 144 00:09:30,320 --> 00:09:32,363 ನಾವು ಮೊದಲು ಪಟ್ಟಣದಲ್ಲಿ ನಿಲ್ಲಬೇಕು. 145 00:09:32,364 --> 00:09:35,366 - ಏನು? ತಮಾಷೆ ಮಾಡುತ್ತಿದ್ದೀಯಾ? - ನಾವು ಓಡುತ್ತಿದ್ದೇವೆ, ನಮಗೆ ಹಣ ಬೇಕು. 146 00:09:35,367 --> 00:09:37,451 ನಾವು ನಗರದಲ್ಲಿರುವಾಗ ಎಟಿಎಂಗೆ ಹೋಗಬೇಕು. 147 00:09:37,452 --> 00:09:38,828 ಅವರಿಗೆ ನಾವು ಇಲ್ಲಿರೋದು ಗೊತ್ತು. 148 00:09:38,829 --> 00:09:41,414 ಅವರಿಗೆ ಎಟಿಎಂ ಸುಳಿವು ಸಿಗುವ ಹೊತ್ತಿಗೆ, ನಾವು ಬಹಳ ದೂರ ಹೋಗಿರುತ್ತೇವೆ. 149 00:09:41,415 --> 00:09:42,957 ಅವರು ನಮ್ಮನ್ನು ಹಿಂಬಾಲಿಸುತ್ತಿರಬಹುದು. 150 00:09:42,958 --> 00:09:46,085 ಅವರು ನನ್ನ ಮನೆಗೆ ಬರುವ ಮೊದಲು, ವ್ಯಾನನ್ನು ನೋಡಿದರು, 151 00:09:46,086 --> 00:09:48,963 ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿರಬಹುದು. ನಮ್ಮ ವಾಹನವನ್ನು ನೋಡಿದ್ದಾರೆ. 152 00:09:48,964 --> 00:09:50,506 ವಾಹನಕ್ಕೆ ಬೇರೆಯ ಕವಚ ಇದೆಯಾ? 153 00:09:50,507 --> 00:09:52,800 ಅವರಿಗೆ ಬ್ರಾಂಡ್ ಮತ್ತು ಮಾಡೆಲ್ ಗೊತ್ತು. ಹೊಸ ಗಾಡಿ ಮಾಡಲೇಬೇಕು! 154 00:09:52,801 --> 00:09:54,135 ನಾವು ಸಿ ಐ ಎಗೆ ಬೇಕಾಗಿದ್ದೇವೆ. 155 00:09:54,136 --> 00:09:56,722 ಕಾರು ಬಾಡಿಗೆ ಮಳಿಗೆಗೆ ಹೋಗಿ ನಮ್ಮ ಲೈಸೆನ್ಸ್ ಕೊಡಕ್ಕಾಗಲ್ಲ. 156 00:09:58,056 --> 00:10:01,143 ನನಗೊಂದು ಜಾಗ ಗೊತ್ತು. ಎರಡು ಗಂಟೆಗಳ ಒಳಗೆ ನಾವು ಅಲ್ಲಿಗೆ ತಲುಪಬಹುದು. 157 00:10:07,566 --> 00:10:10,610 {\an8}ಫಿಲಡೆಲ್ಫಿಯ 158 00:10:13,196 --> 00:10:14,364 ಹೇ, ಯೋ, ಸೈರಸ್! 159 00:10:19,369 --> 00:10:21,996 ಅಯ್ಯೋ, ಛೆ. ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ. 160 00:10:21,997 --> 00:10:23,914 ನಾನು ಮತ್ತು ಡಾಕೆರ್ಟಿ ಒಪ್ಪಂದ ಮಾಡಿಕೊಂಡೆವು. 161 00:10:23,915 --> 00:10:27,460 ನೋರಿಸ್‌ಟೌನ್ ಹುಡುಗರ ಬಗ್ಗೆ ನಿಮಗೆ ಮಾಹಿತಿ ಕೊಟ್ಟೆ, ಈಗ ನನ್ನನ್ನು ಸುಮ್ಮನೆ ಬಿಡಿ. 162 00:10:27,461 --> 00:10:30,338 ಒಪ್ಪಂದ ಮಾಡಿದ್ದು ಡಾಕೆರ್ಟಿ, ನಾನಲ್ಲ. ಚಿಲ್ಲರೆ ಕಳ್ಳರ ಜೊತೆ ಒಪ್ಪಂದ ಮಾಡಲಾರೆ. 163 00:10:30,339 --> 00:10:32,882 - ಹಾಗಾದರೆ ಇಲ್ಲಿ ಏನು ಮಾಡುತ್ತಿದ್ದೀರಿ? - ಚಿಲ್ಲರೆ ಕಳ್ಳರ ಜೊತೆ ಒಪ್ಪಂದ. 164 00:10:32,883 --> 00:10:34,051 ನಿಮ್ಮ ಬಿಳಿ ಹುಡುಗರು ಯಾರು? 165 00:10:34,760 --> 00:10:37,679 ನನ್ನ ಹಿನ್ನಲೆ ನರ್ತಕರು. ವಿಂಡ್‌ಸ್ಟಾರ್‌ನ ಹೈಲ್ಯಾಂಡರ್‌ಗಾಗಿ ವಿನಿಮಯ ಮಾಡೋಣಾ? 166 00:10:39,681 --> 00:10:41,932 ಇದು ಹಣ. ಅದು ಕಸ. 167 00:10:41,933 --> 00:10:43,643 ನಮ್ಮಿಬ್ಬರಿಗೂ ಗೊತ್ತು ಆ ಗಾಡಿ ಕದ್ದಿರೋದು ಅಂತ. 168 00:10:44,436 --> 00:10:47,646 ಹಾಗಾಗಿ, ಬೇಕಾದರೆ, ನಾವು ಈ ಸಂಭಾಷಣೆಯನ್ನು ಡಿಸ್ಟ್ರಿಕ್ಟ್ ಒಳಗೆ ಮುಂದುವರಿಸಬಹುದು, 169 00:10:47,647 --> 00:10:51,275 ನಾನು ನೋಂದಣಿ ಸಂಖ್ಯೆ ಪರೀಕ್ಷಿಸುವಾಗ, ಅಂದರೆ, ಅದನ್ನು ಈಗಾಗಲೇ ಅಳಿಸಿಲ್ಲದಿದ್ದರೆ. 170 00:10:51,276 --> 00:10:54,071 ನೀವು ನಮ್ಮನ್ನು ಬಂಧಿಸುವುದಿದ್ದರೆ, ಇಷ್ಟೊತ್ತಿಗಾಗಲೇ ಅದನ್ನು ಮಾಡಿರುತ್ತಿದ್ದಿರಿ. 171 00:10:55,030 --> 00:10:59,534 ನೀನು ಹೇಳಿದ್ದು ಸರಿಯೇ. ಮಾತುಕತೆ ನಡೆಸಲು ನಾವು ಇನ್ನೊಂದು ಮಾರ್ಗವನ್ನು ಕಂಡುಹಿಡಿಯಬೇಕೇನೋ. 172 00:11:05,957 --> 00:11:07,125 ಏನು ಮಾಡುತ್ತಿದ್ದೀರಿ? 173 00:11:10,003 --> 00:11:12,381 ರೀ! ಅದು $50,000 ಕಣ್ರೀ! ಏನು ಮಾಡುತ್ತಿದ್ದೀರಿ? 174 00:11:13,131 --> 00:11:14,132 ಏನು ಮಾಡುತ್ತಿದ್ದಾಳೆ? 175 00:11:14,925 --> 00:11:16,133 ಅವನ ಗಮನ ಸೆಳೆಯುತ್ತಿದ್ದಾಳೆ. 176 00:11:16,134 --> 00:11:17,051 ಹೇ, ಯೋ… 177 00:11:17,052 --> 00:11:19,804 ಇದನ್ನು ಮತ್ತೊಮ್ಮೆ ಪ್ರಯತ್ನಿಸೋಣ. ಹೈಲ್ಯಾಂಡರ್ ಬದಲು ನನ್ನ ವಿಂಡ್‌ಸ್ಟಾರ್. 178 00:11:19,805 --> 00:11:23,474 ಏಕೆಂದರೆ ಕೆಲವೇ ಕ್ಷಣಗಳಲ್ಲಿ, ನಮಗಿರುವ ಒಂದೇ ಆಯ್ಕೆ ಇಲ್ಲಿಂದ ಹೊರಗೆ ಓಡುವುದು. 179 00:11:23,475 --> 00:11:26,727 ಛೆ. ಸರಿ. ಸರಿ! ಬೆಂಕಿ ಆರಿಸಿ. ಆರಿಸಿಬಿಡಿ. 180 00:11:26,728 --> 00:11:30,690 ಸರಿಯಾಗಿ ನೋಂದಾಯಿಸಲಾದ ಕಾರಿನಿಂದ ಕೆಲವು ಸಂಖ್ಯೆಗಳನ್ನು ಕೊಡು. ಅದು ಜೆಟ್ಟಾನಾ? 181 00:11:31,817 --> 00:11:33,943 ಇಲ್ಲ, ಇಲ್ಲ, ಇಲ್ಲ. ಅದು ನನ್ನ ಅಕ್ಕನ ಕಾರು. 182 00:11:33,944 --> 00:11:36,862 ರೇಯೋನಾ ನನ್ನನ್ನು ಕೊಲ್ಲುತ್ತಾಳೆ. ಅವಳು ಹುಚ್ಚಿ ಅಂತ ನಿಮಗೆ ಗೊತ್ತಲ್ವಾ? 183 00:11:36,863 --> 00:11:39,032 ಈ ಚಿಂದಿ ಬಟ್ಟೆ ಬೇಗನೆ ಉರಿಯುತ್ತಿದೆ. 184 00:11:42,702 --> 00:11:46,580 ಸರಿ. ಸರಿ, ಏನು ಗೊತ್ತಾ? ನನಗೆ ರೇ ರೇಳ ಮನ ಒಲಿಸುವುದು ಗೊತ್ತು. 185 00:11:46,581 --> 00:11:49,084 ನಾನು ಆಲೋಚಿಸುವೆ. ಆದರೆ ದಯವಿಟ್ಟು, ಅದನ್ನು ಆರಿಸಿ. 186 00:11:59,261 --> 00:12:00,429 ನಿನ್ನನ್ನು ಪ್ಯಾನ್ಕೇಕ್ ಎನ್ನುವೆ. 187 00:12:12,107 --> 00:12:13,357 ನನಗೆ ಆ ಬೆಕ್ಕು ಇಷ್ಟವಿತ್ತು. 188 00:12:13,358 --> 00:12:15,777 ರೇ ರೇ ಏನೂ ಹೇಳಲ್ಲ. ಬೆಕ್ಕಿಗೆ ಒಳ್ಳೆಯ ಮನೆ ಸಿಕ್ಕಿದೆ. 189 00:12:22,659 --> 00:12:23,576 ಲೈಲಾ. 190 00:12:23,577 --> 00:12:25,369 ಹೇ, ನನಗೆ ನಿಮ್ಮ ಸಂದೇಶ ಸಿಕ್ಕಿತು. 191 00:12:25,370 --> 00:12:28,247 ನನ್ನ ಕುಟುಂಬವನ್ನು ತಕ್ಷಣವೇ ಹೊಸ ಹೋಟೆಲ್‌ಗೆ ಸ್ಥಳಾಂತರಿಸಿದೆ. 192 00:12:28,248 --> 00:12:30,791 ನಾವು ಹೊಂದಿಕೊಳ್ಳುತ್ತಿದ್ದೇವೆ, ಆದರೆ ಸ್ವಲ್ಪ ಭಯಭೀತರಾಗಿದ್ದೇವೆ. 193 00:12:30,792 --> 00:12:33,128 ನಾವು ಮಾತನಾಡಬೇಕು. ನೀನು ಎಲ್ಲಿ ಭೇಟಿಯಾಗಬಹುದು? 194 00:12:33,795 --> 00:12:34,712 ಮತ್ತೆ ಉದ್ಯಾನವನದಲ್ಲಿ? 195 00:12:34,713 --> 00:12:37,131 ನಾವು ಗಾಡಿಯಲ್ಲಿ ಬರುವುದು ನಮ್ಮನ್ನು ಹುಡುಕುತ್ತಿರುವವರಿಗೆ 196 00:12:37,132 --> 00:12:39,175 ಕಾಣಲಾಗದಂತಹ ಜಾಗ ಬೇಕು. 197 00:12:39,176 --> 00:12:41,552 ಜನಜಂಗುಳಿ ಇರಬೇಕು, ಆದರೆ ನಾವು ಮಾತನಾಡಲೂ ಆಗುವಂಥ ಸ್ಥಳ. 198 00:12:41,553 --> 00:12:42,970 ಗದ್ದಲದ ಬಾರ್‌ಗಳು ಬೇಡ. 199 00:12:42,971 --> 00:12:45,931 ನಾನು ಇಲ್ಲಿಗೆ ಬರುವಾಗ ಒಂದು ಬೌಲಿಂಗ್ ಆಲಿ ಹಾದು ಬಂದೆ. 200 00:12:45,932 --> 00:12:47,641 ಪ್ಲೇಟೈಮ್ ಬೌಲ್, ಎರಡನೆ ರಸ್ತೆಯಲ್ಲಿ. 201 00:12:47,642 --> 00:12:50,227 ಅದ್ಭುತ. ಈಗಲೇ ಅಲ್ಲಿಗೆ ಹೋಗು. ಬೇಗ ನಿನ್ನನ್ನು ಭೇಟಿಯಾಗುತ್ತೇನೆ. 202 00:12:50,228 --> 00:12:51,062 ರೀಚರ್? 203 00:12:53,815 --> 00:12:54,649 ಧನ್ಯವಾದ. 204 00:12:58,028 --> 00:13:00,529 ಕೇಹಿಲ್‌ನನ್ನು ಪ್ರಶ್ನಿಸಲು ನನಗೆ ಲೈಲಾಳಿಂದ ಸ್ವಲ್ಪ ಮಾಹಿತಿ ಬೇಕು. 205 00:13:00,530 --> 00:13:03,115 ಅವನು ಡಿ.ಸಿ. ಸಂಪರ್ಕ ಹೊಂದಿರುವ ಪ್ರಭಾವಿ ವ್ಯಕ್ತಿ. 206 00:13:03,116 --> 00:13:05,659 ನಾನು ಸುಮ್ಮನೆ ಹೋಗಿ ಅವನನ್ನು ಹೆದರಿಸಲು ಸಾಧ್ಯವಿಲ್ಲ. 207 00:13:05,660 --> 00:13:07,787 ನಿಮ್ಮ ಮೂವರನ್ನು ಎಲ್ಲಿ ಬಿಡಬೇಕು? 208 00:13:08,288 --> 00:13:12,416 ಒಬ್ಬನೇ ಹೋಗುತ್ತಿದ್ದೀಯಾ? ಹೆಚ್ಚಿನ ಕೊಲೆಗಡುಕರು ಲೈಲಾ ಹಿಂದೆ ಬಿದ್ದಿದ್ದರೆ? ನಿನಗೆ ಸಹಾಯ ಬೇಕು. 209 00:13:12,417 --> 00:13:14,335 ಹೋಟೆಲಿನಲ್ಲಿ ಸಹಾಯ ಬೇಕಾಗಲಿಲ್ಲ. 210 00:13:14,336 --> 00:13:16,670 - ನಾನು ನಿನ್ನ ಜೊತೆ ಇದ್ದೆ. - ಹಾಂ, ಹೊರಗೆ ಪ್ರಜ್ಞೆ ತಪ್ಪಿದ್ದೆ. 211 00:13:16,671 --> 00:13:19,965 ಈ ನಗರದಲ್ಲಿ ಅವರು ಒಬ್ಬ ಮಹಿಳೆಯನ್ನು ಹುಡುಕುವ ಸಾಧ್ಯತೆ ಅಷ್ಟಕ್ಕಷ್ಟೇ. 212 00:13:19,966 --> 00:13:21,885 ಹಾಗಿದ್ದರೆ ಚಂದವೇ. ಆದರೆ ಲೈಲಾ ಗಮನ ಸೆಳೆಯುತ್ತಾಳೆ. 213 00:13:22,928 --> 00:13:23,844 ಅದು ಹೇಗೆ? 214 00:13:23,845 --> 00:13:26,556 ಇಂದಿನ ಹುಡುಗರು ಅವಳನ್ನು "ಮಸ್ತು ಮಾಲು" ಅಂತ ಕರೆಯಬಹುದು. 215 00:13:27,682 --> 00:13:29,725 ಅದಕ್ಕೇ ಅವಳನ್ನು ಒಬ್ಬನೇ ಭೇಟಿಯಾಗಲು ಹೋಗುತ್ತಿದ್ದೀಯಾ? 216 00:13:29,726 --> 00:13:30,936 ಅವಳು ನನಗೆ ಸುಳ್ಳು ಹೇಳಿದಳು. 217 00:13:31,520 --> 00:13:34,188 ನಾನು ಇಬ್ಬರು ಪೊಲೀಸರೊಂದಿಗೆ ಹೋದರೆ, ಅವಳು ಬಾಯಿ ಬಿಡಲ್ಲ. 218 00:13:34,189 --> 00:13:35,398 ನಾನು ಒಬ್ಬಂಟಿಯಾಗಿ ಹೋಗಬೇಕು. 219 00:13:39,611 --> 00:13:43,155 ನನ್ನ ಪಾಳಿಗಾಗಿ ನಮ್ಮನ್ನು ಡಿಸ್ಟ್ರಿಕ್ಟ್ ಬಳಿ ಬಿಡು. ಡಾಕೆರ್ಟಿ ಜೊತೆ ಮಾತನಾಡಿ, 220 00:13:43,156 --> 00:13:46,660 ಅವನಿಗೆ ತಿಳಿದಿದ್ದನ್ನು ಕೇಳುವೆ, ಆಗ ನೀನು… ಲೈಲಾಳನ್ನು ವಿಚಾರಿಸು. 221 00:14:06,054 --> 00:14:11,100 ದೇವರೇ, ಇದು ಹ್ಯಾಲಿಯ ಧೂಮಕೇತು ಪ್ರತಿ 100 ವರ್ಷಗಳಿಗೊಮ್ಮೆ ಬಂದಂತಿದೆ. 222 00:14:11,101 --> 00:14:13,394 ಎಪ್ಪತ್ತೈದು ಕಣೋ, ದಡ್ಡ. ಮೆರಿಕ್ ಪ್ರಕರಣದಲ್ಲಿ ಏನು ತಿಳಿಯಿತು? 223 00:14:13,395 --> 00:14:15,187 ನೋಡು, ಹಾಳಾಗಿ ಹೋಗು. ನೀನು ಮತ್ತೆ ಕಾಣೆಯಾಗಿದ್ದೆ. 224 00:14:15,188 --> 00:14:17,064 ಅದು ಅಭ್ಯಾಸವಾಗ್ತಿದೆ. ನಿನಗೆ ಸಹಾಯ ಮಾಡಿ ಸಾಕಾಗಿದೆ. 225 00:14:17,065 --> 00:14:19,441 ಅದಕ್ಕೀಗ ಸಮಯವಿಲ್ಲ. ನಾವಿಲ್ಲಿ ಏನೋ ಕೆಲಸ ಮಾಡುತ್ತಿದ್ದೇವೆ. 226 00:14:19,442 --> 00:14:21,527 "ನಾವು" ಅಂದರೆ ಯಾರು? ನೀನು ಮತ್ತು ಹಾಳುಮಾಡುವ ತಂಡವೇ? 227 00:14:21,528 --> 00:14:24,989 ಫೆಡ್‌ಗಳು ಪ್ರಕರಣ ವಹಿಸಿಕೊಂಡರು. ಇದು ಇನ್ನು ಮುಂದೆ ನಮ್ಮ ತಲೆನೋವಲ್ಲ. 228 00:14:24,990 --> 00:14:27,449 ಆ ಸತ್ತ ಓನ್ಲಿ ಫ್ಯಾನ್ಸ್ ಹುಡುಗಿ ಫಿಲಡೆಲ್ಫಿಯದಲ್ಲಿ ಪತ್ತೆಯಾದಳು. 229 00:14:27,450 --> 00:14:29,702 ಅದು ನಮ್ಮ ನ್ಯಾಯವ್ಯಾಪ್ತಿ. ಹಾಗಾಗಿ, ಏನು ಸಿಕ್ಕಿದೆ? 230 00:14:29,703 --> 00:14:32,580 ಅಥವಾ ನನ್ನ ನಗರದಲ್ಲಿ ಇನ್ನು ಮುಂದೆ ಕೊಲೆಗಳ ಬಗ್ಗೆ ನಾನು ಕಾಳಜಿ ವಹಿಸಬಾರದಾ? 231 00:14:32,581 --> 00:14:35,166 - ನೀನು ಕೊಲೆ ತನಿಖಾಧಿಕಾರಿ ಅಲ್ಲ. - ನೀನು ಕೂಡ ಅಲ್ಲ. 232 00:14:36,126 --> 00:14:38,003 ನೀನು ಏನು ನೋಡಿ ನಗುತ್ತಿದ್ದೀಯೋ, ಪುಟಾಣಿ ಮರಿ? 233 00:14:38,587 --> 00:14:41,088 ಆ ಹುಡುಗಿ, ಆ ವೇಶ್ಯೆ ಅಥವಾ ಏನೇ ಆಗಲಿ, ಅವಳನ್ನು ಕರೆಸಿದವರು, 234 00:14:41,089 --> 00:14:44,800 ತಮ್ಮ ಜಾಡುಗಳನ್ನು ಮರೆಮಾಡಿದರು. ವಿಪಿಎನ್, ವಿದೇಶಿ ಖಾತೆಗಳು. ಸಿಗುತ್ತಿಲ್ಲ. 235 00:14:44,801 --> 00:14:47,261 - ವೈದ್ಯಾಧಿಕಾರಿ ಬಗ್ಗೆ ಏನು? - ಕೆಲವು ದಿನಗಳಾಗುತ್ತವೆ. 236 00:14:47,262 --> 00:14:48,346 ಅದನ್ನು ತ್ವರಿತಗೊಳಿಸಿದಿರಾ? 237 00:14:49,055 --> 00:14:49,972 ಹಾಂ. 238 00:14:49,973 --> 00:14:53,475 - ಮತ್ತು ಗ್ರಂಥಾಲಯದಲ್ಲಿದ್ದವನು? - ಆ ಸಾರ್ವಜನಿಕ ದೂರು? ಅದು ನೀನೇನಾ? 239 00:14:53,476 --> 00:14:56,354 ಯಾರ ದೂರು ನೀಡಿದರು ಎಂಬುದು ಮುಖ್ಯವಲ್ಲ. ಅವನ ಬಗ್ಗೆ ಏನು ಗೊತ್ತಾಯಿತು? 240 00:14:57,188 --> 00:15:00,065 ಅವನ ಬೆರಳಚ್ಚುಗಳು ಆ ಹುಡುಗಿಯ ಕೋಣೆಯಲ್ಲಿ ಎಲ್ಲೂ ಕಂಡುಬರಲಿಲ್ಲ. 241 00:15:00,066 --> 00:15:01,650 ಆಮೇಲೆ? 242 00:15:01,651 --> 00:15:04,278 ಆಮೇಲೇನು ಗೊತ್ತಾ? ಅಡುಗೆಮನೆಯಲ್ಲಿ ಟೇಸ್ಟಿಕೇಕ್ಸ್ ಇದೆ. 243 00:15:04,279 --> 00:15:05,446 ಸರಿ. ನಾನು ತಿನ್ನುವೆ. 244 00:15:05,447 --> 00:15:06,573 ನನಗೆ ಹಸಿವಿಲ್ಲ. 245 00:15:08,074 --> 00:15:10,452 ಹಾಗಾದರೆ ಕಾಫಿ ಕುಡಿ. ನಾನು ಇದನ್ನು ನೋಡುತ್ತೇನೆ. 246 00:15:15,206 --> 00:15:16,875 ಈಗ, ನೀನು ಏನು ಮಾಡುತ್ತಿದ್ದೀಯ? 247 00:15:17,542 --> 00:15:20,294 ಈಗಾಗಲೇ ನಿನ್ನ ವೃತ್ತಿಯನ್ನು ಕುಲಗೆಡಿಸಿಕೊಂಡೆ, ನನ್ನದನ್ನೂ ಕೆಡಿಸಬೇಕಾ? 248 00:15:20,295 --> 00:15:22,546 - ಅದಕ್ಕೂ ನಿನಗೂ ಸಂಬಂಧವಿಲ್ಲ. - ನೀನು ಮಾಡಿದ್ದಕ್ಕೆ ನಾನು ಪರಿಣಾಮ 249 00:15:22,547 --> 00:15:25,633 ಎದುರಿಸಬೇಕು ಎಂಬುದು ನಿನಗೆ ಚೆನ್ನಾಗಿ ಗೊತ್ತು. ನನ್ನ 40 ವರ್ಷಗಳ ಸೌಲಭ್ಯ ಬರಲಿದೆ. 250 00:15:25,634 --> 00:15:27,426 - ನೀನು ಅದನ್ನು ಹಾಳುಮಾಡಲು ಬಿಡಲಾರೆ. - ಬಿಗ್ ಡಿ. 251 00:15:27,427 --> 00:15:29,386 ಆತ್ಮಹತ್ಯೆಯವಳ ಕಾರು ಸಿಕ್ಕಿದೆ. 252 00:15:29,387 --> 00:15:30,888 ಸಬ್‌ವೇ ನಿಲ್ದಾಣದ ಹತ್ತಿರವೇ? 253 00:15:30,889 --> 00:15:33,223 ಇಲ್ಲ. ಮೆರಿಕ್ ಟಾಸ್ಕರ್-ಮೋರಿಸ್‌ನಲ್ಲಿ ಹತ್ತಿದ್ದು. 254 00:15:33,224 --> 00:15:35,434 ಕಾರು ಸಿಕ್ಕಿದ್ದು 6ಥ್ ಅಂಡ್ ಕಾರ್ಪೆಂಟರ್‌ನಲ್ಲಿ. 255 00:15:35,435 --> 00:15:39,104 ಆರ್‌ಪಿಸಿ ಅದನ್ನು ನೋಡಿಕೊಳ್ಳುತ್ತಿದೆ. ಫೆಡ್‌ಗಳಿಗೆ ಹೇಳಬೇಕಾ? ಅದು ನಿಮ್ಮ ಪ್ರಕರಣ. 256 00:15:39,105 --> 00:15:40,774 ನೀನೇ ಹೇಳು ಅವರಿಗೆ. ನನಗೇನಾಗಬೇಕಿಲ್ಲ. 257 00:15:43,735 --> 00:15:44,569 ತಿಳಿಯಿತು. 258 00:15:50,867 --> 00:15:52,284 ಅದು ಇನ್ನು ನಮ್ಮ ಪ್ರಕರಣವಲ್ಲ. 259 00:15:52,285 --> 00:15:53,577 ಆನಾ ಮೆರಿಕ್ ಅಲ್ಲ. 260 00:15:53,578 --> 00:15:55,621 ಕದ್ದ ಕಾರಿನ ಬಗ್ಗೆ ವಿಚಾರಿಸಬಾರದು ಅಂತ ಯಾರೂ ಹೇಳಿಲ್ಲ. 261 00:15:55,622 --> 00:15:57,915 ಫಿಲ್ಲಿಯಲ್ಲಿ ಕಾರು ಕಳ್ಳರ ಗುಂಪು ಇರಬಹುದು. 262 00:15:57,916 --> 00:15:59,500 ವರ್ಷಗಳಿಂದ ಅದರ ಬಗ್ಗೆ ಅಸಡ್ಡೆ ತೋರಿದ್ದೀಯ, 263 00:15:59,501 --> 00:16:02,169 ಈಗ ನಿನ್ನಲ್ಲಿ ಏಕಾಏಕಿ ಪೊಲೀಸ್ ಉತ್ಸಾಹ ಉಕ್ಕುತ್ತಿದೆಯಾ? 264 00:16:02,170 --> 00:16:06,091 ಕಳೆದ ಬಾರಿ ನೀನು ಒಂದು ಪ್ರಕರಣದ ಕೈ ಬಿಡದಿದ್ದಾಗ ಏನಾಯಿತು ಎಂಬುದು ನೆನಪಿದೆಯಾ? 265 00:16:10,011 --> 00:16:11,221 ನಾನು ಟೇಸ್ಟಿಕೇಕ್ಸ್ ತರುವೆ. 266 00:16:14,140 --> 00:16:15,892 ಎಲ್ಲಾ ನನ್ನ ಕರ್ಮ. 267 00:16:17,352 --> 00:16:18,311 ನಮಗೆ ಕಾರು ಸಿಕ್ಕಿತು. 268 00:16:19,688 --> 00:16:22,273 ಬೌಲ್ 269 00:16:34,119 --> 00:16:36,286 ರೀಚರ್, ನಮಗೆ ಎಚ್ಚರಿಕೆ ನೀಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದ. 270 00:16:36,287 --> 00:16:39,249 ನೀನು ನನಗೆ ಸತ್ಯ ಹೇಳದಿದ್ದರೆ ನಾನು ನಿನಗಾಗಿ ಮಾಡುವ ಕೊನೆಯ ಕೆಲಸ ಇದು. 271 00:16:40,375 --> 00:16:41,709 ಸ್ಯಾಮ್ ಸನ್ ಬಗ್ಗೆ ಸುಳ್ಳು ಹೇಳಿದೆ. 272 00:16:41,710 --> 00:16:44,337 ಆತ ನಿನ್ನ ತಂದೆ ಅಂತ ನಾನು ನಂಬುವುದಿಲ್ಲ, ನೀನೂ ನಂಬುವುದಿಲ್ಲ. 273 00:16:50,760 --> 00:16:52,386 ನೀವು ಪ್ರಾಮಾಣಿಕವಾಗಿಯಾದರೂ ಇರಬಹುದಿತ್ತು, 274 00:16:52,387 --> 00:16:55,682 ನಿಮ್ಮ ಸುಳ್ಳನ್ನು ತೆಗೆದುಕೊಂಡು ನಾನು ಒಬ್ಬ ಯು.ಎಸ್. ಕಾಂಗ್ರೆಸ್ ಮ್ಯಾನ್‌ನ ಎದುರಿಸಿದೆ. 275 00:17:02,063 --> 00:17:02,939 ನೀವು ಹೇಳಿದ್ದು ಸರಿ. 276 00:17:04,149 --> 00:17:05,525 ನಾನು ಸಂಪೂರ್ಣ ಸತ್ಯ ಹೇಳಲಿಲ್ಲ. 277 00:17:06,401 --> 00:17:10,905 ನಾನೊಬ್ಬ ಪತ್ರಕರ್ತೆ. ಆಮಿಷ ನನ್ನ ತಾಯಿಯಲ್ಲ, ಮತ್ತು ಇವರಿಬ್ಬರೂ ರಕ್ಷಣೆಗೆ ನೇಮಕಗೊಂಡವರು. 278 00:17:11,823 --> 00:17:13,198 ಯಾವುದರಿಂದ ರಕ್ಷಣೆಗಾಗಿ? 279 00:17:13,199 --> 00:17:16,285 ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಸರ್ಕಾರದ ರಹಸ್ಯಗಳನ್ನು ಬಹಿರಂಗಪಡಿಸಲು ಬಂದೆ. 280 00:17:16,286 --> 00:17:17,536 ಮತ್ತು ಕ್ಯಾನ್ಸರ್? 281 00:17:17,537 --> 00:17:20,205 ಸ್ಯಾಮ್ ಸನ್‌ನನ್ನು ತಲುಪಲು ನಾನೇ ಮೂಗೇಟುಗಳನ್ನು ಮಾಡಿಕೊಂಡೆ. 282 00:17:20,206 --> 00:17:21,790 ಆಗ ಆತನಿಗೂ ಸುಳ್ಳು ಹೇಳಬಹುದು ಅಂತಾನಾ? 283 00:17:21,791 --> 00:17:25,335 ನೋಡಿ… ನನ್ನನ್ನು ನಿಜವಾಗಿಯೂ ಕ್ಷಮಿಸಿ, ಸರಿನಾ? 284 00:17:25,336 --> 00:17:27,464 ಆದರೆ ನಮಗೆ ಬೇಕಾದ ಮಾಹಿತಿಯನ್ನು ನೀವು ಪಡೆಯಬಹುದಿತ್ತು. 285 00:17:28,798 --> 00:17:32,927 ನನಗೆ ಭಯವಾಗಿತ್ತು. ಒಬ್ಬ ಮಹಿಳೆ ಸತ್ತಳು. ಜನ ನನ್ನ ಹಿಂದೆ ಬಿದ್ದರು. 286 00:17:33,595 --> 00:17:35,096 ನಿಜವಾದ ಕಥೆಯನ್ನು ಹೇಳು. 287 00:17:40,143 --> 00:17:42,645 ಫ್ರೈಸನ್ನು ಹಂಚಿಕೊಂಡು ತಿನ್ನಬಹುದು. ಮುಂದುವರಿಸು. 288 00:17:43,271 --> 00:17:46,607 ಆಮಿಷ ಮತ್ತು ಸ್ಯಾಮ್ ಸನ್‌ಗೆ ಯಾವುದೇ ಸಂಬಂಧವಿರಲಿಲ್ಲ, ಆದರೆ ಬೇರೆ ರೀತಿ ಸಂಪರ್ಕವಿದೆ. 289 00:17:46,608 --> 00:17:49,860 ಆಮಿಷ ಮತ್ತು ಆಕೆಯ ಪತಿ ಇಂಡೋನೇಷ್ಯಾದಲ್ಲಿ ಇನ್ನೂ ವಿದ್ಯಾರ್ಥಿಗಳಾಗಿದ್ದಾಗ, 290 00:17:49,861 --> 00:17:52,488 ಜನರಲ್ ಪೂತ್ರ ಎಂಬ ವ್ಯಕ್ತಿಯ ಅಡಿಯಲ್ಲಿ, ಮಿಲಿಟರಿಯ 291 00:17:52,489 --> 00:17:54,865 ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಅವರು ಚಿಂತಿತರಾಗಿದ್ದರು. 292 00:17:54,866 --> 00:17:56,034 ಅವರು ಸಮಾವೇಶಗಳನ್ನು ನಡೆಸಿದರು. 293 00:17:57,035 --> 00:17:59,912 ಅದಾದ ಸ್ವಲ್ಪ ಸಮಯದ ನಂತರ, ಇಡೀ ಗುಂಪನ್ನು ಕಾನೂನುಬಾಹಿರವಾಗಿ ಬಂಧಿಸಲಾಯಿತು. 294 00:17:59,913 --> 00:18:02,122 ಪೂತ್ರ ದೌರ್ಜನ್ಯ ಎಸಗಿದನು. 295 00:18:02,123 --> 00:18:05,250 ತನ್ನ ಪತಿಯನ್ನು ಕ್ರೂರವಾಗಿ ಥಳಿಸಿ ಕೊಲ್ಲುವಾಗ, ಪಕ್ಕದ ಬಂದೀಖಾನೆಯಲ್ಲಿ 296 00:18:05,251 --> 00:18:06,376 ಆಮಿಷ ಕೇಳಿಸಿಕೊಂಡರು. 297 00:18:06,377 --> 00:18:08,837 ತದನಂತರ, ಆಕೆಯನ್ನು ತನ್ನ ಜೀವವೇ ಹೋಗುವಂತೆ ಥಳಿಸಲಾಯಿತು. 298 00:18:08,838 --> 00:18:13,258 ಪೂತ್ರ ಮತ್ತು ಅವನ ಸೈನಿಕರಿಗೆ ಒಬ್ಬ ಅಮೆರಿಕನ್ ಡೆಲ್ಟಾ ಫೋರ್ಸ್ ತಜ್ಞ ತರಬೇತಿ ಕೊಟ್ಟಿದ್ದ. 299 00:18:13,259 --> 00:18:14,259 ಜಾನ್ ಸ್ಯಾಮ್ ಸನ್. 300 00:18:14,260 --> 00:18:16,678 ಹೌದು. ಅದಕ್ಕಾಗಿಯೇ ಆತ ಇಂಡೋನೇಷ್ಯಾದಲ್ಲಿದ್ದದ್ದು. 301 00:18:16,679 --> 00:18:19,348 ಪೂತ್ರನ ಸೈನಿಕರಿಗೆ ಆಧುನಿಕ ಮಿಲಿಟರಿ ತಂತ್ರಗಳನ್ನು ಕಲಿಸಲು. 302 00:18:19,349 --> 00:18:23,477 ಪೂತ್ರ ಹಿಂಸಿಸಿ ಕೊಂದ ನಾಗರಿಕರ ವಿರುದ್ಧ ಬಳಸಿದ ಅವೇ ತಂತ್ರಗಳು. 303 00:18:23,478 --> 00:18:24,812 ನೋಲಾನ್ ಕೇಹಿಲ್ ಬಗ್ಗೆ ಏನು? 304 00:18:24,813 --> 00:18:28,273 ಆತ ಇಂಡೋನೇಷ್ಯಾದಲ್ಲಿ ಸ್ಯಾಮ್ ಸನ್ ಅವರ ಮೇಲಧಿಕಾರಿ ಆಗಿದ್ದ. ಏಕೆ? 305 00:18:28,274 --> 00:18:30,527 ಆನಾ ಸತ್ತ ರಾತ್ರಿ ಅವನು ರೈಲಿನಲ್ಲಿದ್ದ. 306 00:18:35,865 --> 00:18:39,076 ಆನಾ ನನಗೆ ಡ್ರೈವ್ ತಲುಪಿಸುವುದನ್ನು ತಡೆಯಲು ಅವನು ಅಲ್ಲೇ ಇದ್ದಿರಬೇಕು. 307 00:18:39,077 --> 00:18:40,661 ಕಥೆಯನ್ನು ನನಗೆ ತಲುಪಿಸದಿರುವುದಕ್ಕೆ. 308 00:18:40,662 --> 00:18:42,955 ಅಮೆರಿಕ ತನ್ನ ಪಾಲ್ಗೊಳ್ಳುವಿಕೆಯನ್ನು ಅಳಿಸಲು ಬಯಸುತ್ತದೆ, 309 00:18:42,956 --> 00:18:44,582 ಆದರೆ ಸಾರ್ವಜನಿಕರಿಗೆ ತಿಳಿಯಬೇಕು. 310 00:18:45,583 --> 00:18:48,168 ಆಮಿಷ ಜೊತೆ ಕುಳಿತು, ಆಕೆಯ ಕಥೆಯನ್ನು ಕೇಳಿದ ನಂತರ, 311 00:18:48,169 --> 00:18:51,588 ಆಕೆಯ ಕಣ್ಣುಗಳಲ್ಲಿ, ಆಕೆಯ ಮುಖವನ್ನು ನೋಡುತ್ತಾ, ಪೂತ್ರ ಆಕೆಗೆ ಮಾಡಿದ್ದನ್ನು ನೋಡುತ್ತಾ, 312 00:18:51,589 --> 00:18:53,423 ಆನಾ ಮೆರಿಕ್ ಸಹಾಯ ಮಾಡಲು ಒಪ್ಪಿಕೊಂಡರು. 313 00:18:53,424 --> 00:18:56,802 ಅದಕ್ಕಾಗಿಯೇ ನನಗೆ ಆ ಡ್ರೈವ್ ತರುತ್ತಿದ್ದರು. ಅಲ್ಲಿರುವ ಅಪಾಯವನ್ನು ಆಕೆ ಅರಿತರು. 314 00:18:56,803 --> 00:19:00,056 ಆದರೆ ಸರ್ಕಾರಿ ದಾಖಲೆಗಳನ್ನು ಕದಿಯುವುದು ಫೆಡರಲ್ ಅಪರಾಧ ಎಂದು ಅವಳು ಅರಿತಿದ್ದಳು. 315 00:19:01,140 --> 00:19:04,601 ಆನಾ ದೇಶಭಕ್ತಿಯಿಂದಾಗಿ ಪೆಂಟಗನ್‌ನಲ್ಲಿ ಕೆಲಸ ಮಾಡಲು ನಿರ್ಧರಿಸಿದರು. 316 00:19:04,602 --> 00:19:08,313 ಮತ್ತು ಆಕೆಯೂ, ನನ್ನಂತೆಯೇ ನಂಬಿದ್ದರು, ಸ್ಯಾಮ್ ಸನ್‌ನಂತಹ ವ್ಯಕ್ತಿ, 317 00:19:08,314 --> 00:19:11,401 ಅಂಥ ನೈತಿಕತೆ ಹೊಂದಿರುವವನು ಶ್ವೇತಭವನದಲ್ಲಿ ಕೂರಬಾರದು ಅಂತ. 318 00:19:12,652 --> 00:19:14,279 ನಾನು ಈ ಕಥೆಯನ್ನು ಹೊರಹಾಕಬೇಕು. 319 00:19:20,076 --> 00:19:23,204 ದಯವಿಟ್ಟು. ನನಗೆ ನಿಮ್ಮ ಸಹಾಯ ಬೇಕು. 320 00:19:26,040 --> 00:19:28,667 ನನಗಾಗಿ ಅಲ್ಲದಿದ್ದರೆ, ಆಮಿಷಗಾಗಿ, 321 00:19:28,668 --> 00:19:31,044 ಆಕೆಯ ಗಂಡ ಮತ್ತು ಕೊಲ್ಲಲ್ಪಟ್ಟ ಎಲ್ಲಾ ಜನರಿಗಾಗಿ. 322 00:19:31,045 --> 00:19:31,963 ಆನಾಗಾಗಿ. 323 00:19:33,006 --> 00:19:35,925 ಆ ಡ್ರೈವ್ ಸ್ಯಾಮ್ ಸನ್‌ನನ್ನು ಇದೆಲ್ಲದಕ್ಕೂ ಸಂಪರ್ಕಿಸುವ ಪುರಾವೆಯನ್ನು ಹೊಂದಿದೆ. 324 00:19:38,553 --> 00:19:39,679 ನಾನು ಡ್ರೈವ್ ಹುಡುಕುತ್ತೇನೆ. 325 00:19:40,597 --> 00:19:41,931 ಅದರಲ್ಲಿ ಏನಿದೆ ಎಂದು ನಾನು ನೋಡಿದಾಗ… 326 00:19:43,016 --> 00:19:44,601 ಅದನ್ನು ಏನು ಮಾಡಬೇಕೆಂದು ನಿರ್ಧರಿಸುತ್ತೇನೆ. 327 00:19:45,977 --> 00:19:47,729 ನಾನು ಕೇಳುವುದಷ್ಟೇ. ಧನ್ಯವಾದ. 328 00:19:55,737 --> 00:19:58,780 ಈಗಲೇ ಧನ್ಯವಾದ ಹೇಳಬೇಡ. ಗುತ್ತಿಗೆಯವರು ನಮ್ಮನ್ನು ಹುಡುಕಿದಂತೆ ಕಾಣುತ್ತಿದೆ. 329 00:19:58,781 --> 00:19:59,781 ಹೇಗೆ? 330 00:19:59,782 --> 00:20:02,827 ನಿಮ್ಮನ್ನು ಹಿಂಬಾಲಿಸಲಾಗಿದೆ. ಹೊಸ ಭದ್ರತೆಯವರನ್ನು ನೇಮಿಸಿಕೊಳ್ಳಿ. 331 00:20:03,536 --> 00:20:04,746 ನೀವು ಏನು ಮಾಡಲಿದ್ದೀರಿ? 332 00:20:07,498 --> 00:20:09,125 ಅವರು ಇಲ್ಲಿಗೆ ಬಂದು ಪರಿತಪಿಸುವಂತೆ ಮಾಡುವೆ. 333 00:20:10,460 --> 00:20:11,294 ಬಹುಶಃ ಇಲ್ಲವೇನೋ. 334 00:20:14,714 --> 00:20:16,466 ಮೇಜಿನ ಮೇಲೆ ಗನ್ಸ್ ಇಡದಿದ್ದರೆ ಈಕೆ ಸಾಯುತ್ತಾಳೆ. 335 00:20:18,551 --> 00:20:19,677 ಈಗಲೇ. 336 00:20:23,431 --> 00:20:24,891 ಎದ್ದೇಳು. ನಾವು ನಡೆದು ಹೋಗೋಣ. 337 00:20:25,600 --> 00:20:28,478 ಹೋಗೋಣ. ಕುಳಿತುಕೋ. ನೀನು, ಕುಳಿತುಕೋ. 338 00:20:32,440 --> 00:20:36,693 ಈಗ ಮಿಡ್‌ನೈಟ್ ಕಾಸ್ಮಿಕ್ ಬೌಲ್‌ಗೆ ಸಮಯ! 339 00:20:36,694 --> 00:20:39,112 ಎಲ್ಲಾ ಸ್ಟ್ರೈಕ್‌ಗಳಿಗೂ ಉಚಿತ ರೋಲಿಂಗ್ ರಾಕ್ ಪಿಚರ್ ಸಿಗುತ್ತದೆ, 340 00:20:39,113 --> 00:20:43,409 ಮತ್ತು ನಮ್ಮಲ್ಲಿ ಒಂದಕ್ಕೊಂದು ಉಚಿತದ ಅಪ್ಲಿಕೇಶನ್‌ಗಳು ಇವೆ! 341 00:20:52,919 --> 00:20:54,086 ಅವರನ್ನು ಕರೆದುಕೊಂಡು ಹೋಗು. 342 00:20:54,087 --> 00:20:55,964 ಬನ್ನಿ, ಬನ್ನಿ! ಹೋಗೋಣ! 343 00:21:39,382 --> 00:21:40,258 ಯಪ್ಪಾ! 344 00:22:09,203 --> 00:22:10,537 ನಿನಗೆ ಹೊರಟುಹೋಗು ಅಂತ ಹೇಳಿದೆ. 345 00:22:10,538 --> 00:22:14,042 ಭದ್ರತೆಯವರು ಆಮಿಷಳನ್ನು ಹೋಟೆಲ್‌ಗೆ ಕರೆದೊಯ್ದರು. ನಾನು ನಿನ್ನನ್ನು ಬಿಟ್ಟು ಹೋಗಲು ಆಗಲಿಲ್ಲ. 346 00:22:16,044 --> 00:22:17,045 ಧನ್ಯವಾದ. 347 00:22:22,925 --> 00:22:26,429 ನಾವು ಹೋಗಬೇಕು. ನಾನು ವ್ಯವಸ್ಥೆಯಲ್ಲಿ ಸಿಲುಕಿದರೆ, ಸಿ ಐ ಎ ನನ್ನನ್ನು ಹುಡುಕುತ್ತದೆ. 348 00:22:27,221 --> 00:22:28,264 ಸಿ ಐ ಎನಾ? 349 00:22:34,854 --> 00:22:35,730 ಅವರನ್ನು ಒಳಗೆ ಬಿಡಿ. 350 00:22:57,335 --> 00:22:59,586 - ಇದೇನಾ? - ಹೌದು. 351 00:22:59,587 --> 00:23:02,840 ಇಷ್ಟು ಒಳ್ಳೆಯ ಕಾರನ್ನು ಬಿಟ್ಟು ಸಬ್‌ವೇಯಲ್ಲಿ ಏಕೆ ಹೋಗಿರಬಹುದು ಅವಳು? 352 00:23:03,883 --> 00:23:04,800 ಗೊತ್ತಿಲ್ಲ. 353 00:23:04,801 --> 00:23:07,928 ಅದನ್ನು ತೆಗೆದುಕೊಂಡವರಿಗೆ ಅವರು ಏನು ಮಾಡುತ್ತಿದ್ದಾರೆಂದು ನಿಖರವಾಗಿ ತಿಳಿದಿತ್ತು. 354 00:23:07,929 --> 00:23:11,431 ಅದನ್ನು ನಿರ್ಜನ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿಯೇ ಬಿಟ್ಟುಹೋಗುವುದು. 355 00:23:11,432 --> 00:23:14,268 ಆನಾಳ ಮನೆಯಂತೆ. ಮತ್ತೆ ಸಿ ಐ ಎನಾ? 356 00:23:14,936 --> 00:23:15,812 ಇರಬಹುದು. 357 00:23:17,396 --> 00:23:20,107 ಸ್ಥಳೀಯ ಪೊಲೀಸರು ಈ ಕಾರನ್ನು ಹುಡುಕುತ್ತಿದ್ದಾರೆಂದು ತಿಳಿದಿತ್ತೇನೋ. 358 00:23:20,108 --> 00:23:22,735 ಸಬ್‌ವೇ ಪಕ್ಕದಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟವಿರಲಿಲ್ಲ. 359 00:23:23,402 --> 00:23:25,154 ಅರೆ! ಇದನ್ನು ನೋಡಿ. 360 00:23:26,906 --> 00:23:30,952 ಗ್ಲೌವ್ ಬಾಕ್ಸ್ ಬಲವಂತವಾಗಿ ತೆರೆಯಲಾಗಿದೆ, ಸೀಟುಗಳು ಹರಿಯಲಾಗಿವೆ. ಈ ಅಂಚೆ ನೋಡಿ. 361 00:23:34,038 --> 00:23:35,205 ಕ್ರೆಡಿಟ್ ಕಾರ್ಡ್ ಕೊಡುಗೆ. 362 00:23:35,206 --> 00:23:37,707 "ಬೇಗನೇ ನಿರ್ಧರಿಸಿ, 5,000 ಹೆಚ್ಚುವರಿ ಅಂಕಗಳನ್ನು ಪಡೆಯಿರಿ." 363 00:23:37,708 --> 00:23:40,460 ಬೀದಿ ದರೋಡೆಕೋರರು ಮಾಡಿದ್ದರೆ, ಇದನ್ನು ಕೊಂಡೊಯ್ಯುತ್ತಿದ್ದರು. 364 00:23:40,461 --> 00:23:41,628 ಸ್ವಲ್ಪ ವಂಚನೆ ಮಾಡೋಕೆ. 365 00:23:41,629 --> 00:23:43,713 ಖಂಡಿತ ಯಾರೋ ಏನನ್ನೋ ಹುಡುಕಿದ್ದಾರೆ. 366 00:23:43,714 --> 00:23:45,466 - ಡ್ರೈವ್ ಅನ್ನು. - ಹೌದು. 367 00:23:54,142 --> 00:23:55,518 ಬೇರ್ ಕ್ರೀಕ್ ಪ್ರವೇಶದ ಚೀಟಿ. 368 00:23:57,145 --> 00:23:59,438 ಕಳೆದ ಚಳಿಗಾಲದ ನಂತರ ಅವಳ ಟ್ರಂಕನ್ನು ಸ್ವಚ್ಛಗೊಳಿಸಿಯೇ ಇಲ್ಲ. 369 00:24:01,149 --> 00:24:03,191 ಹಾಗಾದರೆ, ಅವಳ ಚಳಿಗಾಲದ ಜಾಕೆಟ್ ಕೂಡ ಇಲ್ಲೇ ಇತ್ತೇನೋ. 370 00:24:03,192 --> 00:24:05,569 ಮತ್ತು ಅವಳು ಅದನ್ನು ಏಕೆ ಹಾಕಿಕೊಂಡು ಬಿಸಿ ಸಬ್‌ವೇಗೆ ಹೋದಳು 371 00:24:05,570 --> 00:24:06,904 ಎಂದು ನಿನಗೆ ಏನಾದರೂ ಗೊತ್ತಾ? 372 00:24:08,573 --> 00:24:09,407 ಗೊತ್ತಿಲ್ಲ. 373 00:24:11,742 --> 00:24:15,120 ಅವಳು ಇನ್ನೂ ಈ ಸಾಮಾನುಗಳನ್ನು ಹಿಂಭಾಗದಲ್ಲಿ ಇಟ್ಟುಕೊಂಡಿರುವಂತೆ ಕಾಣುತ್ತಿದೆ. 374 00:24:15,121 --> 00:24:19,124 ಹಾಗಾಗಿ, ಆನಾ ಕೋಟ್ ಇಲ್ಲದೆ ಮನೆಯಿಂದ ಹೊರಬಂದಾಗ, ಅದನ್ನು ಧರಿಸುವ ಯೋಚನೆ ಮಾಡಿರಲಿಲ್ಲ. 375 00:24:19,125 --> 00:24:22,670 ಅವಳು ಕಾರು ಹತ್ತಿದ ನಂತರವೇ ಅದರ ಬಗ್ಗೆ ಯೋಚಿಸಿದಳು. 376 00:24:23,296 --> 00:24:24,630 ಇದು ಯಾವುದೂ ತರ್ಕಕ್ಕೇ ಸಿಗುತ್ತಿಲ್ಲ. 377 00:24:33,723 --> 00:24:34,599 ಆರಾಮವಾಗಿದ್ದೀಯಾ? 378 00:24:38,811 --> 00:24:40,938 ನಾನು ಅವಳ ಮತ್ತು ಬೆನ್ ಜೊತೆ ಹೋಗಬೇಕಿತ್ತು… 379 00:24:42,023 --> 00:24:42,857 ಬೇರ್ ಕ್ರೀಕ್‌ಗೆ. 380 00:24:44,233 --> 00:24:47,737 ಆದರೆ ನಾನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದೆ, ಯಾಕೆಂದರೆ ನನ್ನ… 381 00:24:49,822 --> 00:24:52,450 ಗರಾಜ್‌ಗೆ ಮತ್ತೆ ದುರಸ್ತಿ ಮಾಡಬೇಕಿತ್ತು. 382 00:24:55,661 --> 00:24:58,164 ನಾನು ಅವರೊಂದಿಗೆ ಮತ್ತೆ ಎಂದಿಗೂ ಏನನ್ನೂ ಮಾಡಲು ಆಗಲ್ಲ. 383 00:25:01,042 --> 00:25:04,252 ಕನಿಷ್ಠ ಪಕ್ಷ ನನ್ನ ಗರಾಜ್ ಆದರೂ ದುರಸ್ತಿಯಾಗಿದೆ, ಅಲ್ವಾ? 384 00:25:04,253 --> 00:25:08,673 ಹೇ… ಪ್ರೀತಿಪಾತ್ರರು ಸತ್ತ ನಂತರ ಯಾವ ರೀತಿಯ ಜನರು ನರಕ 385 00:25:08,674 --> 00:25:10,134 ಅನುಭವಿಸುತ್ತಾರೆಂದು ನಿನಗೆ ಗೊತ್ತಾ? 386 00:25:11,135 --> 00:25:13,638 "ನಾನು ಮಾಡಬೇಕಿತ್ತು, ಮಾಡಬಹುದಿತ್ತು, ಮಾಡಿದ್ದರೆ?" ಅನ್ನೋರು. 387 00:25:17,475 --> 00:25:18,601 ಒಳ್ಳೆಯ ಜನರು. 388 00:25:20,478 --> 00:25:21,938 ಆದರೆ ಅದು ನಿನಗೆ ಸಹಾಯ ಮಾಡುವುದಿಲ್ಲ. 389 00:25:24,315 --> 00:25:26,776 ಮತ್ತು ಇದನ್ನೆಲ್ಲಾ ಯಾರು ಮಾಡಿದರು ಎಂದು ಕಂಡುಹಿಡಿಯಲೂ ಸಹಾಯ ಮಾಡಲ್ಲ. 390 00:25:30,655 --> 00:25:31,948 ಈಗಲೂ ನನ್ನ ಜೊತೆ ಇದ್ದೀಯ ತಾನೆ? 391 00:25:33,407 --> 00:25:34,283 ಗಮನಭಂಗವಾಗದೆ? 392 00:25:42,166 --> 00:25:43,000 ಸರಿ. 393 00:25:43,626 --> 00:25:48,297 ಜಿಪಿಎಸ್ ಇಲ್ಲ. ಡ್ಯಾಶ್‌ನಲ್ಲಿ ಫೋನ್ ಮೌಂಟ್. ದಾರಿ ಹುಡುಕಲು ಬಹುಶಃ ಅವಳ ಸೆಲ್ ಬಳಸಿರಬಹುದು. 394 00:25:49,924 --> 00:25:52,717 ಸಬ್‌ವೇ ನಿಲ್ದಾಣದಲ್ಲಿ ಆನಾ ಬಳಿ ಯಾವುದೇ ಫೋನ್ ಸಿಗಲಿಲ್ಲ. 395 00:25:52,718 --> 00:25:54,177 ಮತ್ತು ರೈಲಿನಲ್ಲೂ ಏನೂ ಸಿಗಲಿಲ್ಲ. 396 00:25:54,178 --> 00:25:56,472 - ಹುಡುಕಿದವರು ಅದನ್ನು ತೆಗೆದುಕೊಂಡಿರಬೇಕು. - ಪಕ್ಕಕ್ಕೆ ಬಾ. 397 00:26:01,727 --> 00:26:02,937 ಇದು ಕೆಲಸದ ಬ್ಯಾಡ್ಜ್. 398 00:26:03,896 --> 00:26:06,106 ನಮಗೆ ಆನಾಳ ಮನೆಯಲ್ಲಿ ಅವಳ ಕೆಲಸದ ಬ್ಯಾಡ್ಜ್ ಸಿಕ್ಕಿತು. 399 00:26:06,107 --> 00:26:09,234 ಇದೆಲ್ಲವೂ ಏನೆಂದರೆ ಫೆಡೆರಲ್ ಸ್ವತ್ತಿನ ಮೇಲೆ ಹೋಗುವಾಗ ಇರುವ ಭದ್ರತೆಯ ಬಗ್ಗೆ. 400 00:26:09,235 --> 00:26:10,611 ಅವರು ಹೆಚ್ಚಿನವುಗಳನ್ನು ಕೊಡಲ್ಲ. 401 00:26:12,113 --> 00:26:15,115 ಆನಾ ಎಂದಾದರೂ ಎರಡನೇ ಕೆಲಸ ಅಥವಾ ಹೊಸ ಸ್ಥಳದಲ್ಲಿ ಕೆಲಸ ಮಾಡುವ ಬಗ್ಗೆ ಹೇಳಿದ್ದಳಾ? 402 00:26:15,116 --> 00:26:16,575 ಇಲ್ಲ, ಎಂದಿಗೂ ಇಲ್ಲ. 403 00:26:22,039 --> 00:26:23,916 ಛೆ! ಫೆಡ್ಸ್. ನಾವು ಹೋಗಬೇಕು. 404 00:26:26,669 --> 00:26:27,712 ಏನು ಮಾಡುತ್ತಿದ್ದೀಯ? 405 00:26:29,046 --> 00:26:31,756 ಕೇಳು! ಒಮ್ಮೆ ನೀನು ಆ ವಸ್ತುವನ್ನು ನಿನ್ನ ಜೇಬಿನಲ್ಲಿ ಇಟ್ಟರೆ, 406 00:26:31,757 --> 00:26:33,300 ಸಾಕ್ಷ್ಯನಾಶ ಮಾಡಿದಂತೆಯೇ. 407 00:26:33,301 --> 00:26:36,011 ಆ ಬ್ಯಾಡ್ಜ್‌ನಿಂದ ಯಾರಾದರೂ ಸಿಕ್ಕರೂ, ಯಾರಿಗೂ ಶಿಕ್ಷೆಯಾಗುವುದಿಲ್ಲ. 408 00:26:36,012 --> 00:26:39,806 ಆತ್ಮಹತ್ಯೆಯನ್ನು ಸಂಯುಕ್ತ ಸರ್ಕಾರ ವಹಿಸಿಕೊಂಡು, ಸಿ ಐ ಎ ನಮ್ಮನ್ನು ಅಪಹರಿಸುತ್ತೆ, 409 00:26:39,807 --> 00:26:42,100 ಗುತ್ತಿಗೆ ಕೊಲೆಗಾರರು ನಮ್ಮನ್ನು ಕೊಲ್ಲಲು ನೋಡುತ್ತಾರೆ. 410 00:26:42,101 --> 00:26:44,228 ಸಾಕ್ಷ್ಯನಾಶ ಹಾಳಾಗಿ ಹೋಗಲಿ. 411 00:26:45,062 --> 00:26:47,189 ನನ್ನ ಅಕ್ಕ ಯಾತಕ್ಕೆ ಸತ್ತಳೆಂದು ನಾನು ತಿಳಿದುಕೊಳ್ಳಬೇಕು. 412 00:26:50,359 --> 00:26:54,780 ಲಿಬರ್ಟಿ ಗಾರ್ಡನ್ಸ್ ಹೋಟೆಲ್ 413 00:27:24,977 --> 00:27:28,898 ಹೊಸ ಬಟ್ಟೆಗಳು. ಒಬ್ಬನು ಬೀದಿಯ ಎದುರಿನ ವೇ-ವೇ ಅಂಗಡಿಯ ಹೊರಗೆ ಮಾರುತ್ತಿದ್ದ. 414 00:27:30,649 --> 00:27:31,484 ವಾವಾ. 415 00:27:33,277 --> 00:27:34,862 ಆಮಿಷ ಹೇಗಿದ್ದಾಳೆ? 416 00:27:35,780 --> 00:27:39,867 ಅವಳು ಮತ್ತು ಭದ್ರತೆಯವರು ರಾತ್ರಿ ಅಲ್ಲೇ ಇರುವರು. ಯಾವುದೇ ಗಾಯಗಳಾಗಿಲ್ಲ. ಸುರಕ್ಷಿತವಾಗಿ ಪಾರಾದರು. 417 00:27:40,826 --> 00:27:43,537 ಆದರೆ ಅವಳಿಗೆ ಭಯವಾಗಿದೆ. 418 00:27:44,205 --> 00:27:48,084 ಜನ ಅವಳನ್ನು ಮತ್ತೆ ನೋಯಿಸಲು ನೋಡುತ್ತಿದ್ದಾರೆ. ಬಹಳಷ್ಟು ಕೆಟ್ಟ ನೆನಪುಗಳನ್ನು ಮರಳಿ ತರುತ್ತಿದೆ. 419 00:27:53,964 --> 00:27:54,882 ಹಗುರವಾಗಿ ಪ್ರಯಾಣಿಸುವೆ. 420 00:27:59,053 --> 00:28:00,221 ನಿನಗೆ ತುಂಬಾ ಪೆಟ್ಟಾಗಿದೆ. 421 00:28:02,098 --> 00:28:03,099 ಇದಕ್ಕಿಂತ ಚೆನ್ನಾಗಿದ್ದೇನೆ… 422 00:28:04,517 --> 00:28:05,393 ಕೆಟ್ಟದಾಗಿಯೂ ಇದ್ದೇನೆ. 423 00:28:06,185 --> 00:28:09,188 ನನಗೆ ಎರಡನೇ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ. 424 00:28:11,607 --> 00:28:13,567 ಕ್ಷಮಿಸು, ನಿನಗೆ ಸುಳ್ಳು ಹೇಳಿದೆ, ನನಗದು ಇಷ್ಟವಿರಲಿಲ್ಲ. 425 00:28:14,693 --> 00:28:15,611 ಹೌದು, ಸುಳ್ಳು ಹೇಳಿದೆ. 426 00:28:17,196 --> 00:28:19,072 ಅದಕ್ಕಾಗಿಯೇ ನೀನು ನಿರ್ದಿಷ್ಟ ಪದಗಳನ್ನು 427 00:28:19,073 --> 00:28:21,033 ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ರೀತಿಯಲ್ಲಿ ಹೇಳಿದೆ. 428 00:28:21,951 --> 00:28:23,119 ಸುಳ್ಳು ಹೇಳಲು. 429 00:28:24,120 --> 00:28:25,954 ಆದರೆ ಓಣಿಯೊಂದರಲ್ಲಿ ನನ್ನ ತಲೆ ಒಡೆಯದಂತೆ ಕಾಪಾಡಿದ 430 00:28:25,955 --> 00:28:28,207 ಸುಳ್ಳುಗಾರರನ್ನು ಕ್ಷಮಿಸುವಂತೆ ನನ್ನದೊಂದು ದೃಢ ನಿಯಮ ಇದೆ. 431 00:28:31,252 --> 00:28:32,211 ಧನ್ಯವಾದ. 432 00:28:34,088 --> 00:28:37,215 ಆದರೂ ನಾನು ಮೋಸ ಮಾಡಬಾರದಿತ್ತು ಎಂದುಕೊಳ್ಳುತ್ತೇನೆ. 433 00:28:37,216 --> 00:28:40,051 ಸತ್ಯವನ್ನು ತಿಳಿದುಕೊಳ್ಳುವುದು, ಕಥೆಯನ್ನು ಹೊರತರುವುದು. 434 00:28:40,052 --> 00:28:42,388 ಅದನ್ನು ಪಡೆಯಲು ನಾನು ಸತ್ಯವನ್ನೇ ಮುಚ್ಚಿಡಬೇಕಾಯಿತು. 435 00:28:44,181 --> 00:28:45,515 ಅದೇ ಅದಕ್ಕೆ ತೆತ್ತ ಬೆಲೆ. 436 00:28:45,516 --> 00:28:47,016 ಆ ಬೆಲೆ ತೆತ್ತಿದ್ದಕ್ಕೆ ಸಾರ್ಥಕವಾಯಿತಾ? 437 00:28:47,017 --> 00:28:51,438 ನಾವು ಆ ಬೌಲಿಂಗ್ ಆಲಿಯಲ್ಲಿ ಕೊಲೆಯಾಗಬಹುದಿತ್ತು, ಹೋಟೆಲಿನಲ್ಲೂ ಕೂಡ. 438 00:28:51,439 --> 00:28:53,190 ನಾನು ಅಪಾಯದಿಂದ ಓಡಿಹೋಗುವುದಿಲ್ಲ. 439 00:28:55,401 --> 00:28:56,818 ನೀನೂ ಸಹ ಹಾಗೆ ಕಾಣಲ್ಲ. 440 00:28:56,819 --> 00:28:59,487 ನಾನು 250-ಪೌಂಡ್ ತೂಕದ ಮಾಜಿ ಸೈನಿಕ. 441 00:28:59,488 --> 00:29:02,782 ನೀನು 110-ಪೌಂಡ್ ತೂಗುವ ವರದಿಗಾರ್ತಿ, ಮತ್ತು ನಿನ್ನ ಭದ್ರತೆ ಸಾಧಾರಣವಾಗಿದೆ. 442 00:29:02,783 --> 00:29:05,034 ಬಹುಶಃ ನೀನು ಆಮಿಷಳನ್ನು ಕರೆದುಕೊಂಡು ಮನೆಗೆ ಹೋಗಬೇಕು. 443 00:29:05,035 --> 00:29:05,911 ಖಂಡಿತ ಇಲ್ಲ. 444 00:29:06,620 --> 00:29:10,248 ನಾವು ಇಲ್ಲಿ ಮಾಡಲು ಪ್ರಯತ್ನಿಸುತ್ತಿರುವುದು ನನ್ನ ಮತ್ತು ಆಮಿಷಳಿಗಿಂತ ದೊಡ್ಡದು. 445 00:29:10,249 --> 00:29:12,709 ಮತ್ತು ಅವಳು ಒಪ್ಪುತ್ತಾಳೆ. ನಾವು ಮಾಹಿತಿಗಾಗಿ ಇಲ್ಲಿಗೆ ಬಂದೆವು, 446 00:29:12,710 --> 00:29:15,796 ಮತ್ತು ಆ ಮಾಹಿತಿಯನ್ನು ಹೊಂದಿದ್ದ ಕೊನೆಯ ವ್ಯಕ್ತಿ ಈ ನಗರದಲ್ಲಿದ್ದರು. 447 00:29:16,755 --> 00:29:19,591 ಹಾಗಾಗಿ, ಇಲ್ಲ, ನಾವು ಹೊರಡುತ್ತಿಲ್ಲ. 448 00:29:19,592 --> 00:29:21,260 ಪರಿಣಾಮವಾಗಿ ನೀನು ಸತ್ತರೂ ಸಹ? 449 00:29:21,760 --> 00:29:24,722 ನಾನು ನಿನಗೆ ಹೇಳಿದೆ, ನಾನು ಓಡಿಹೋಗುವ ವ್ಯಕ್ತಿಯಲ್ಲ. 450 00:29:26,390 --> 00:29:27,433 ಅಲ್ಲಿ ಏನಾಯಿತು? 451 00:29:30,686 --> 00:29:32,813 ನಾನು ಕೂಡ ಓಡಿಹೋಗುವ ವ್ಯಕ್ತಿಯಲ್ಲ ಅಂತ ಅನಿಸುತ್ತದೆ. 452 00:29:37,693 --> 00:29:39,236 ಅದಕ್ಕೇನಾ ಇನ್ನೂ ಇಲ್ಲೇ ಇದ್ದೀಯ? 453 00:29:44,825 --> 00:29:47,411 ಆನಾಗೆ ಸಹಾಯ ಮಾಡಲು ಸಾಧ್ಯವಾಗದಿದ್ದಕ್ಕೆ ನಿನಗೆ ಬೇಸರವಾಗುತ್ತಿದೆ, ಅಲ್ವಾ? 454 00:29:48,454 --> 00:29:50,414 ಆ ಪಾಪದ ಮಹಿಳೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು… 455 00:29:51,207 --> 00:29:53,334 ಗೊಂದಲಗೊಂಡು, ಭಯಗೊಂಡು, 456 00:29:54,585 --> 00:29:56,462 ಭರವಸೆ ಕಳೆದುಕೊಂಡು, ಮತ್ತು ನೀನೇನೂ ಮಾಡಲಾಗಲಿಲ್ಲ. 457 00:29:59,423 --> 00:30:00,382 ಆದರೆ, ಹೇ… 458 00:30:01,717 --> 00:30:03,552 ಯಾರು ಹೆಚ್ಚು ಜವಾಬ್ದಾರಿಯುತರು ಅನಿಸುತ್ತದೆ? 459 00:30:05,137 --> 00:30:08,224 ಸಬ್‌ವೇಯಲ್ಲಿ ಆನಾಗೆ ಕೆಲವು ಮಾತುಗಳನ್ನು ಹೇಳಿದ ವ್ಯಕ್ತಿನಾ… 460 00:30:10,184 --> 00:30:11,936 ಅಥವಾ ಅವಳನ್ನು ಅಲ್ಲಿ ಕಳಿಸಿದ ವರದಿಗಾರಳಾ? 461 00:30:18,025 --> 00:30:19,026 ಬೆನ್ನು ಒರೆಸುತ್ತೇನೆ. 462 00:30:27,660 --> 00:30:31,330 ನನಗೆ 16 ವರ್ಷವಾಗಿದ್ದಾಗ ನನ್ನ ತಾಯಿ ಈ ಬಳೆಯನ್ನು ನನಗೆ ಕೊಟ್ಟರು. 463 00:30:34,708 --> 00:30:37,586 ಆಕೆ ನಿಜವಾದ ಪತ್ರಕರ್ತೆಯಾಗಿದ್ದರು. 464 00:30:40,339 --> 00:30:42,049 ಇಂಡೋನೇಷ್ಯಾದಲ್ಲಿ ಕರ್ತವ್ಯದಲ್ಲಿದ್ದಾಗ ಸತ್ತರು. 465 00:30:46,554 --> 00:30:48,055 ನಾನು ವರದಿಗಾರ್ತಿಯಾಗಲು ಆಕೆಯೇ ಕಾರಣ. 466 00:30:53,018 --> 00:30:54,562 ಈ ಬಳೆ… 467 00:30:56,230 --> 00:30:57,690 ನನ್ನ ಬಳಿ ಇರುವ ಆಕೆಯ ಏಕೈಕ ನೆನಪು. 468 00:31:01,068 --> 00:31:04,363 ಪ್ರತಿ ಚೌಕದಲ್ಲಿ ಎರಡು ಬೀಜಗಳು. 469 00:31:05,614 --> 00:31:08,909 ನಾನು ಮತ್ತು ಆಕೆ ಇರುವಂತೆ… 470 00:31:12,288 --> 00:31:13,247 ಎಂದೆಂದಿಗೂ ಜೊತೆಯಾಗಿ. 471 00:31:17,001 --> 00:31:19,128 ಪ್ರತಿಯೊಂದು ಚೌಕವೂ ನಮ್ಮ ಜೀವನದ ವಿಭಿನ್ನ ಹಂತ. 472 00:31:25,259 --> 00:31:28,095 ಮತ್ತು ನಾನು ಜನರಿಗೆ ಇದು ಕೇವಲ ಅದೃಷ್ಟದ ಬಳೆ ಎಂದು ಹೇಳುತ್ತೇನೆ. 473 00:31:31,807 --> 00:31:32,933 ಅದು ಯಾಕೋ… 474 00:31:35,728 --> 00:31:37,688 ಮತ್ತೆ ನಿನಗೆ ಸುಳ್ಳು ಹೇಳುವುದು ಸರಿ ಅನಿಸುತ್ತಿಲ್ಲ. 475 00:32:13,307 --> 00:32:15,768 ನನ್ನ ಲ್ಯಾಪ್‌ಟಾಪ್‌ನಲ್ಲಿ ಇದನ್ನು ಮಾಡುವುದು ನನಗೆ ಸರಿ ಅನಿಸುತ್ತಿಲ್ಲ. 476 00:32:16,644 --> 00:32:18,102 ನನಗದು ಬೇಕಿಲ್ಲ. 477 00:32:18,103 --> 00:32:19,438 ಹೌದಾ? ಸರಿ, ನನಗೆ ಬೇಕಿದೆ. 478 00:32:20,272 --> 00:32:23,900 ನಾನು ಸಿ ಐ ಎ ತಾಣಗಳನ್ನು ರೆಕಾರ್ಡ್ ಮಾಡುವೆ, ಬರ್ನರ್ಸ್ ಬಳಸುವೆ, ಸಂಪರ್ಕವಿಲ್ಲದೆ ಬದುಕುವೆ, 479 00:32:23,901 --> 00:32:24,985 ಆದರೆ ಅದೆಲ್ಲವೂ ಕಾನೂನುಬದ್ಧ. 480 00:32:25,527 --> 00:32:27,487 ಕೃತ್ಯದ ಸ್ಥಳದಿಂದ ಅಕ್ಕನ ಬ್ಯಾಡ್ಜ್ ತೆಗೆದುಕೊಂಡರೆ, 481 00:32:27,488 --> 00:32:29,198 ಅದು ಫೆಡರಲ್ ಸಾಕ್ಷ್ಯಗಳನ್ನು ತಿರುಚುವುದು. 482 00:32:30,699 --> 00:32:33,327 ಹಾಗಾದರೆ ಹೊರಟುಹೋಗು. ನೀನು ಇಲ್ಲಿ ಇರಬೇಕಾಗಿಲ್ಲ. 483 00:32:34,495 --> 00:32:36,830 ಸರಿ, ಹಾಂ. ನಿನಗೆ ಹೇಳುವುದು ಸುಲಭ. 484 00:32:39,375 --> 00:32:42,586 ನಾನು ಈಗ ಆನ್‌ಲೈನ್ ಪ್ರಕಟಣೆಗಳಿಗೆ ಮಾತ್ರ ಬರೆಯುವುದು ಯಾಕೆ ಗೊತ್ತಾ? 485 00:32:43,587 --> 00:32:46,756 ಏಕೆಂದರೆ ಒಂದು ವರ್ಷದ ಹಿಂದೆ ನಾನು ಮಾಡಿದ ಬ್ಯಾಂಕಿಂಗ್ ವ್ಯವಹಾರದ ತನಿಖೆಯು ಫೆಡ್ 486 00:32:46,757 --> 00:32:49,300 ಮತ್ತು ಅಂಥ ಸಂಸ್ಥೆಗಳನ್ನು ಸಿಲುಕಿಸಿತು, ನನ್ನ ಸ್ವಂತ ಪತ್ರಿಕೆಯನ್ನೂ ಸಹ, 487 00:32:49,301 --> 00:32:52,471 ಆ ಕಥೆಯನ್ನು ಇಟ್ಟುಕೊಂಡು ಅವರು ವರ್ಷಾನುಗಟ್ಟಲೆ ಸುಮ್ಮನಿದ್ದರು ಎಂದು ತಿಳಿದುಕೊಂಡೆ. 488 00:32:53,764 --> 00:32:56,182 ಬೇಲಿಯೇ ಎದ್ದು ಹೊಲ ಮೇಯ್ದಾಗ ಏನಾಗುತ್ತೆ? 489 00:32:56,183 --> 00:32:57,935 ಇಲ್ಲ, ನಿನಗೆ ಯಾವುದೇ ಅವಕಾಶವಿರಲ್ಲ. 490 00:32:58,811 --> 00:33:01,396 ನನ್ನನ್ನು ಕೆಲಸದಿಂದ ತೆಗೆದುಹಾಕಿ, ನನ್ನ ಬಗ್ಗೆ ಅಪಪ್ರಚಾರ ಮಾಡಿದರು, 491 00:33:01,397 --> 00:33:03,607 ನನ್ನನ್ನು ಅವಮಾನಿಸಿ, ನನ್ನನ್ನು ಹುಚ್ಚ ಎಂದು ಕರೆದರು. 492 00:33:04,650 --> 00:33:07,485 ನನ್ನ ಲ್ಯಾಪ್‌ಟಾಪ್‌ನಲ್ಲಿ ವಿಚಿತ್ರ ಪಿತೂರಿ ಸಿದ್ಧಾಂತದ ದಾಖಲೆಗಳನ್ನು ಇರಿಸಿ, 493 00:33:07,486 --> 00:33:11,155 ನಾನು ಕಳ್ಳತನ ಮಾಡಿದ್ದೇನೆ ಎಂಬಂತೆ ನನ್ನ ಆಯವ್ಯಯದ ದಾಖಲೆಗಳನ್ನು ತಿರುಚಿದರು. 494 00:33:11,156 --> 00:33:12,950 ನನ್ನ ತಂದೆಯೇ ನನ್ನನ್ನು ಅನುಮಾನಿಸುವಂತೆ ಮಾಡಿದರು. 495 00:33:15,411 --> 00:33:16,412 ಹಾಗಾಗಿ, ಹಾಂ… 496 00:33:18,122 --> 00:33:19,081 ನಾನು ಇಲ್ಲೇ ಇರಬೇಕು. 497 00:33:22,126 --> 00:33:23,961 ತಗೋ. ಸಾಕ್ಷಿಗಳ ನಡುವೆ ಒಂದು ಇತ್ತೆಂದು ಗೊತ್ತಿತ್ತು. 498 00:33:24,545 --> 00:33:28,047 ಕೆಲವು ವಾರಗಳ ಹಿಂದೆ ನಕಲಿ ಗುರುತಿನ ಚೀಟಿ ಜಾಲದ ಮೇಲೆ ದಾಳಿ ನಡೆಸಿದೆ. ಅದು ಕೆಲಸ ಮಾಡಬೇಕು. 499 00:33:28,048 --> 00:33:28,966 ಸರಿ. 500 00:33:30,843 --> 00:33:31,719 ಎಲ್ಲವೂ ಸಿದ್ಧವಾಗಿದೆ. 501 00:33:39,768 --> 00:33:41,854 ಇಲ್ಲೇನಿದೆಯೋ ನೋಡೋಣ. 502 00:33:43,564 --> 00:33:46,858 ಸರಿ. ಹೆಸರು, ಆನಾ ಮೆರಿಕ್. 503 00:33:46,859 --> 00:33:51,488 ಕೆಲಸದ ವಿಳಾಸ ಮತ್ತು ಪ್ರವೇಶಾನುಮತಿ, ಕಟ್ಟಡ 28, ಸ್ಟೇಷನ್ ಜೆ12. 504 00:33:54,032 --> 00:33:58,202 ಎಂಟನೇ ಹಂತದ ಅನುಮತಿ? ನಿಮ್ಮ ಅಕ್ಕ ಎಚ್ಆರ್ ಗುಮಾಸ್ತೆ ಎಂದೆ ಅಲ್ವಾ? 505 00:33:58,203 --> 00:34:00,372 ಎಂಟನೇ ಹಂತದ ಅನುಮತಿಯೊಂದಿಗೆ ಆಕೆ ಏನು ಮಾಡುತ್ತಿದ್ದಳು? 506 00:34:02,249 --> 00:34:04,001 ನನಗೆ ಗೊತ್ತಿಲ್ಲ. 507 00:34:04,668 --> 00:34:07,378 ಸರಿ, ಕನಿಷ್ಠ ಪಕ್ಷ ನಾವು ಮುಂದೆ ಎಲ್ಲಿಗೆ ಹೋಗುತ್ತೇವೆಂದು ನಮಗೆ ತಿಳಿದಿದೆ. 508 00:34:07,379 --> 00:34:10,131 ಆ ಬ್ಯಾಡ್ಜ್ ಆ ಕಾರಿನದ್ದಲ್ಲ ಅಂತ ಹೇಳು. 509 00:34:10,132 --> 00:34:12,216 ನೀನು ನೋಡುತ್ತಿರುವುದನ್ನು ಮರೆತು ಹೊರಡು. 510 00:34:12,217 --> 00:34:14,219 ಸರಿ, ನನಗೆ ಕದ್ದ ಪುರಾವೆಗಳು ಕಾಣುತ್ತಿವೆ. 511 00:34:16,722 --> 00:34:18,140 ಇಲ್ಲ, ಕಾಣುತ್ತಿಲ್ಲ. 512 00:34:19,808 --> 00:34:21,393 ನೀನು ನನ್ನನ್ನು ಬೆದರಿಸುತ್ತೀಯಾ? 513 00:34:22,311 --> 00:34:24,229 ನಾನೆಲ್ಲೂ ಬಾಯಿ ಬಿಡಲ್ಲ, ಗ್ರೀನ್. 514 00:34:25,230 --> 00:34:26,522 ನಾನು ಮೂರ್ಖನಲ್ಲ. 515 00:34:26,523 --> 00:34:28,192 ಇದು ಫೆಡರಲ್ ಪ್ರಕರಣ. 516 00:34:28,984 --> 00:34:33,030 ನಾನು ನೀನಲ್ಲ. ಸುಳ್ಳು ಹೇಳಿ ನನ್ನ ವೃತ್ತಿಜೀವನ ಹಾಳು ಮಾಡಿಕೊಳ್ಳುವುದರಲ್ಲಿ ನನಗೆ ಆಸಕ್ತಿ ಇಲ್ಲ. 517 00:34:33,739 --> 00:34:35,699 ಹಾಗಾಗಿ, ಅವರು ನನ್ನ ಬಳಿಗೆ ಬಂದು, ನನ್ನನ್ನು ಕೇಳಿದರೆ… 518 00:34:37,534 --> 00:34:39,244 ನಾನು ನೋಡಿದ್ದನ್ನು ಅವರಿಗೆ ಹೇಳುತ್ತೇನೆ. 519 00:34:42,331 --> 00:34:43,749 ನಿನ್ನ ಮೇಜಿಗೆ ಹಿಂತಿರುಗು, ಶಾನ್. 520 00:34:50,380 --> 00:34:52,466 ಸರಿ. ನಿಮ್ಮ ವಸ್ತು ತೆಗೆದುಕೊಳ್ಳಿ. ನಾವು ಹೊರಡಬೇಕು. 521 00:34:56,053 --> 00:34:59,014 ಯಾರಿಗೂ ತಿಳಿಯದೆ ಮೌನವಾಗಿ ಹೋಗದಷ್ಟು ದೊಡ್ಡದಾಗಿದ್ದೀಯ ನೀನು, ಗೊತ್ತಲ್ಲಾ? 522 00:34:59,681 --> 00:35:00,973 ನಿನ್ನನ್ನೆಬ್ಬಿಸಲು ಇಷ್ಟವಿರಲಿಲ್ಲ. 523 00:35:00,974 --> 00:35:03,643 ನಾನು ಯಾವಾಗಲೂ ಮಧ್ಯರಾತ್ರಿಯಲ್ಲಿ ಹೊರಗೆ ನುಸುಳಲ್ಲ, 524 00:35:03,644 --> 00:35:05,311 ಆದರೆ ನಾನು ಒಂದು ಪ್ರಯಾಣ ಮಾಡಬೇಕಿದೆ. 525 00:35:05,312 --> 00:35:06,230 ಎಲ್ಲಿಗೆ? 526 00:35:06,730 --> 00:35:07,773 ಬಾಲ್ಟಿಮೋರ್. 527 00:35:08,398 --> 00:35:10,608 ಬೆಳಿಗ್ಗೆಯೇ ಅಲ್ಲಿಗೆ ಹೋಗಬೇಕು. 528 00:35:10,609 --> 00:35:12,444 ನನಗೆ ಹೆಚ್ಚೆಂದರೆ ಎರಡೂವರೆ ಗಂಟೆ ಸಮಯ ಇದೆ. 529 00:35:13,111 --> 00:35:14,028 ಅಲ್ಲಿ ಏನಿದೆ? 530 00:35:14,029 --> 00:35:18,200 ಸ್ಯಾಮ್ ಸನ್. ನೀನು ನನಗೆ ಹೇಳಿದ ನಂತರ, ನಾವು ಚರ್ಚಿಸಬೇಕಾದದ್ದು ಇನ್ನೂ ಇದೆ. 531 00:35:20,077 --> 00:35:21,829 ಸುರಕ್ಷಿತವಾಗಿ ಹಿಂತಿರುಗಿ ಬಾ, ಸರಿನಾ? 532 00:35:25,207 --> 00:35:28,085 ನನಗೆ ಬೇರೆ ಯಾರೂ ಇದರಲ್ಲಿ ಸಿಲುಕಿಕೊಂಡು ನರಳುವುದು ಬೇಡ. 533 00:35:39,304 --> 00:35:41,640 23 ಕೈಗಾರಿಕಾ ಮಾರ್ಗ ಕಟ್ಟಡ 28, ಸ್ಟೇಷನ್ J12 534 00:35:46,061 --> 00:35:47,979 ಆನಾ ಇಲ್ಲಿ ಏನು ಮಾಡುತ್ತಿದ್ದಳು? 535 00:35:47,980 --> 00:35:52,067 ಯು.ಎಸ್. ಸರ್ಕಾರಿ ಸ್ವತ್ತು 536 00:35:57,698 --> 00:36:00,784 {\an8}ಬಾಲ್ಟಿಮೋರ್ 537 00:36:02,077 --> 00:36:04,036 ಅವರ ಕೋಣೆಗೆ ಹಜಾರದ ಕೊನೆಯಲ್ಲಿ ಬೀಗ ಹಾಕಿದೆ 538 00:36:04,037 --> 00:36:06,205 ಮತ್ತು ನಮಗೆ ಇನ್ನೂ ಅಲ್ಲಿ ಗುಡಿಸಲು ಅವಕಾಶ ಸಿಕ್ಕಿಲ್ಲ. 539 00:36:06,206 --> 00:36:08,250 - ನಿಮಗೆ ಅಭ್ಯಂತರವಿಲ್ಲದಿದ್ದರೆ-- - ಸ್ಪ್ರಿಂಗ್ ಫೀಲ್ಡ್! 540 00:36:09,209 --> 00:36:10,460 ಬಂದ ನೋಡು. 541 00:36:15,173 --> 00:36:19,011 ರೀಚರ್, ಕಾಂಗ್ರೆಸ್ ಮ್ಯಾನ್ ಸ್ಯಾಮ್ ಸನ್ ನಿಮ್ಮನ್ನು ಮತ್ತೆ ಭೇಟಿಯಾಗಲು ಯೋಚಿಸುತ್ತಿದ್ದರು. 542 00:36:20,053 --> 00:36:20,888 ನನ್ನ ಹಿಂದೆ ಬನ್ನಿ. 543 00:36:33,817 --> 00:36:34,734 ಬರುತ್ತಿದ್ದೀರಾ? 544 00:36:34,735 --> 00:36:38,905 ಕಳೆದ ಬಾರಿ ಸ್ಯಾಮ್ ಸನ್‌ರನ್ನು ಭೇಟಿ ಮಾಡುವ ಬದಲು, ನಾನು ಫೆಡರಲ್ ಗುಲಾಮರೊಂದಿಗೆ ಮಾತನಾಡಿದೆ. 545 00:36:38,906 --> 00:36:41,782 ನೀವು ನನಗೆ ಮತ್ತೆ ಮೋಸ ಮಾಡಲ್ಲ ಅನ್ನೋಕೆ ಖಾತ್ರಿ ಏನು? 546 00:36:41,783 --> 00:36:43,493 ಲಿಫ್ಟ್ ಹತ್ತಿ ನೀವೇ ತಿಳಿದುಕೊಳ್ಳಿ. 547 00:36:54,838 --> 00:36:57,674 ನೀನು ತೂರಾಡಿಕೊಂಡು ಗೋಡೆಗೆ ಗುದ್ದಬಾರದೆಂದುಕೊಂಡರೆ, ಅರ್ಧಕ್ಕೆ ನಿಲ್ಲಿಸು. 548 00:36:58,759 --> 00:36:59,843 ಅರ್ಧವೇ. 549 00:37:02,971 --> 00:37:04,139 ಒಳಗೆ ಬಾ, ಸ್ಪ್ರಿಂಗ್ ಫೀಲ್ಡ್. 550 00:37:05,140 --> 00:37:06,891 ಬಾಗಿಲನ್ನು ತೆರೆದು ಇಡಬಾರದು ನೀವು. 551 00:37:06,892 --> 00:37:09,311 ಇಪ್ಪತ್ತು ಕ್ಷಣಗಳ ಹಿಂದೆ ನನಗೆ ಲಿಫ್ಟಿನಿಂದ ಕರೆ ಮಾಡಿದೆ ನೀನು. 552 00:37:10,354 --> 00:37:12,856 ರೀಚರ್, ನಿನ್ನನ್ನು ಮತ್ತೆ ನೋಡಲು ಸಂತೋಷವಾಯಿತು. 553 00:37:13,941 --> 00:37:15,192 ಉಪಾಹಾರ ತಿನ್ನುತ್ತೀಯಾ? 554 00:37:15,817 --> 00:37:17,069 ನಾನು ಊಟಕ್ಕೆ ಎಂದೂ ಇಲ್ಲ ಅನ್ನಲ್ಲ. 555 00:37:17,945 --> 00:37:18,820 ಹಾಗಾದರೆ ಕುಳಿತುಕೋ. 556 00:37:20,781 --> 00:37:23,909 ಬೇಯಿಸಿದ ಮೊಟ್ಟೆ ಮತ್ತು ಒಂದು ಕಪ್ ಹಣ್ಣು ಇದೆ. ನಾನು ಅದನ್ನು ಮುಟ್ಟಿಲ್ಲ. 557 00:37:25,494 --> 00:37:26,411 ಧನ್ಯವಾದ. 558 00:37:28,372 --> 00:37:32,959 ನೀನಿಲ್ಲಿಗೆ ಬಂದಿರುವುದು ನಾನಂದುಕೊಳ್ಳುವಂತೆ, ಒಂದೋ ನಿನಗೆ 559 00:37:32,960 --> 00:37:37,005 ಮಾಹಿತಿ ಬೇಕಿದೆ, ಅಥವಾ ನಿನ್ನಲ್ಲಿ ನನಗೆ ಕೊಡಲು ಮಾಹಿತಿ ಇದೆ. ಯಾವುದು ಸರಿ? 560 00:37:38,131 --> 00:37:38,966 ಎರಡೂ. 561 00:37:39,841 --> 00:37:40,676 ಹೇಳು ಮತ್ತೆ. 562 00:37:44,554 --> 00:37:47,307 ನಾನು ನಿನಗೆ ಈಗಾಗಲೇ ಹೇಳಿದ್ದೇನೆ, ನಮ್ಮ ನಡುವೆ ಯಾವುದೇ ರಹಸ್ಯಗಳಿಲ್ಲ. 563 00:37:50,352 --> 00:37:51,228 ಸರಿ. 564 00:37:52,938 --> 00:37:55,982 ಜನರಲ್ ಪೂತ್ರ ಜೊತೆಗಿನ ನಿಮ್ಮ ನಂಟಿನ ಬಗ್ಗೆ ನನಗೆ ತಿಳಿಯಬೇಕು. 565 00:37:55,983 --> 00:37:59,736 ಆತ ಇಂಡೋನೇಷ್ಯಾದಲ್ಲಿ ಹಲವಾರು ರಾಜಕೀಯ ಭಿನ್ನಮತೀಯರನ್ನು ಹಿಂಸಿಸಿ ಹತ್ಯೆ ಮಾಡಿದ. 566 00:38:01,238 --> 00:38:02,154 ಆಮೇಲೆ? 567 00:38:02,155 --> 00:38:05,575 ಮತ್ತು ನನ್ನ ಮೂಲ ಹೇಳುವಂತೆ ಅವನಿಗೆ ನಿಮ್ಮ ನೇತೃತ್ವದ ಡೆಲ್ಟಾ ಫೋರ್ಸ್ ತರಬೇತಿ ನೀಡಿತು. 568 00:38:06,952 --> 00:38:09,662 ನೀವು ಒದ್ದಾಡುತ್ತಿರುವ ರೀತಿ ನೋಡಿದರೆ, ಜನರಲ್ ಹೆಸರು ನಿಮಗೆ ತಿಳಿದಿದೆ 569 00:38:09,663 --> 00:38:12,124 - ಮತ್ತು ಅವನ ದೌರ್ಜನ್ಯಗಳಲ್ಲಿ ಭಾಗಿಯಾಗಿದ್ದೀರಿ. - ಜಾನ್. 570 00:38:12,791 --> 00:38:15,584 ಯುದ್ಧ ಅಪರಾಧಗಳ ಆರೋಪ ಹೊರಿಸಿದರೂ ತುಂಬಾ ಶಾಂತವಾಗಿದ್ದೀರಿ. 571 00:38:15,585 --> 00:38:17,878 ನಿನ್ನ ಮೂಲವು ಕಥೆಯ ಭಾಗಶಃ ಭಾಗವನ್ನು ಮಾತ್ರ ಸರಿ ಹೇಳಿದ್ದಾರೆ. 572 00:38:17,879 --> 00:38:21,507 ಹೌದು, ನಾನು 1998ರಲ್ಲಿ ಡೆಲ್ಟಾ ಫೋರ್ಸ್‌ನೊಂದಿಗೆ ಇಂಡೋನೇಷ್ಯಾದಲ್ಲಿದ್ದೆ. 573 00:38:21,508 --> 00:38:23,217 ಮತ್ತು ನಾನು ಪೂತ್ರನನ್ನು ಭೇಟಿಯಾದೆ. 574 00:38:23,218 --> 00:38:24,552 ನನಗೆ ಅವನು ಅಷ್ಟೇನೂ ಇಷ್ಟವಾಗಲಿಲ್ಲ. 575 00:38:24,553 --> 00:38:26,971 ನಮ್ಮ ಧ್ಯೇಯವು ಅತ್ಯಂತ ರಹಸ್ಯವಾಗಿತ್ತು, ಮತ್ತು ಅದು ಹಾಗೆಯೇ ಇದೆ, 576 00:38:26,972 --> 00:38:31,727 ಆದರೆ ನಾನು ಬಹಿರಂಗಪಡಿಸಬಹುದಾದ ಸಂಗತಿಯೆಂದರೆ ನಾನು ಎಂದಿಗೂ ನಾಗರಿಕರನ್ನು ಹಿಂಸಿಸಿ ಕೊಂದಿಲ್ಲ. 577 00:38:32,894 --> 00:38:36,398 ನಾಗರಿಕರನ್ನು ಹಿಂಸಿಸುವುದರಲ್ಲಿ, ಕೊಲ್ಲುವುದರಲ್ಲಿ ನಾನು ಎಂದಿಗೂ ಸಹಾಯ ಮಾಡಿಲ್ಲ. 578 00:38:37,649 --> 00:38:40,735 ನೀನು ನನ್ನನ್ನು ಪ್ರಚೋದಿಸಲು ನೋಡುತ್ತಿದ್ದರೆ, ಅದು ನಡೆಯುವುದಿಲ್ಲ. 579 00:38:40,736 --> 00:38:42,695 ಏಕೆಂದರೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. 580 00:38:42,696 --> 00:38:44,947 ನಾವು ಮೊದಲ ಬಾರಿಗೆ ಭೇಟಿಯಾದಾಗ ನೀವು ನನಗೆ ಏಕೆ ಹೇಳಲಿಲ್ಲ? 581 00:38:44,948 --> 00:38:49,035 ನೀನು ಸಾಮಾನ್ಯವಾಗಿ ನಿಮ್ಮ ಅತ್ಯಂತ ರಹಸ್ಯ ಮಿಲಿಟರಿ ಕಾರ್ಯಾಚರಣೆಗಳ ವಿವರಗಳನ್ನು 582 00:38:49,036 --> 00:38:50,120 ಅಪರಿಚಿತರು ಕೇಳಿದಾಗ ನೀಡುವೆಯಾ? 583 00:38:50,620 --> 00:38:51,455 ಒಪ್ಪುತ್ತೇನೆ. 584 00:38:53,165 --> 00:38:55,291 ನೀವು ಹಂಚಿಕೊಳ್ಳದ ಬೇರೆ ಯಾವುದಾದರೂ ವಿಷಯ ಇದೆಯಾ? 585 00:38:55,292 --> 00:38:56,417 ಏನೂ ಇಲ್ಲ. 586 00:38:56,418 --> 00:38:58,836 - ನಿಮ್ಮ ಸಿಬ್ಬಂದಿ ಮುಖ್ಯಸ್ಥರ ಬಗ್ಗೆ ಏನು? - ಕೇಹಿಲ್? 587 00:38:58,837 --> 00:38:59,754 ಆತನ ಬಗ್ಗೆ ಏನು? 588 00:38:59,755 --> 00:39:02,256 ಆನಾ ಆತ್ಮಹತ್ಯೆ ಮಾಡಿಕೊಂಡ ರಾತ್ರಿ, ನಾಲ್ಕು ಸಾಕ್ಷಿಗಳಿದ್ದರು, 589 00:39:02,257 --> 00:39:04,717 ಆದರೆ ಪೊಲೀಸರು ಕೇವಲ ಮೂವರನ್ನು ಮಾತ್ರ ವಿಚಾರಣೆಗೆ ಒಳಪಡಿಸಿದರು. 590 00:39:04,718 --> 00:39:07,054 ಒಬ್ಬ ಓಡಿಹೋದ. ಅದು ಕೇಹಿಲ್. 591 00:39:09,931 --> 00:39:12,683 - ನನ್ನ ಭಾಷೆಗೆ ಕ್ಷಮಿಸು, ಆದರೆ ಅದು ಅಸಂಬದ್ಧ. - ನಾನು ಅವನನ್ನು ನೋಡಿದೆ. 592 00:39:12,684 --> 00:39:14,894 ಕೇಹಿಲ್ ಆ ರೈಲಿನಲ್ಲಿ ಇರಲಿಲ್ಲ. ಆತ ನನಗೆ ಹೇಳುತ್ತಿದ್ದ. 593 00:39:14,895 --> 00:39:17,772 ಹೌದಾ? ಇಲ್ಲಿನ ಜನರಿಗೆ ಚರ್ಚೆಗಳಿಂದ ಪ್ರಮುಖವಾದ ವಿವರಗಳನ್ನು 594 00:39:17,773 --> 00:39:19,190 ಮುಚ್ಚಿಡುವ ಅಭ್ಯಾಸ ಇದ್ದಂತಿದೆ. 595 00:39:19,191 --> 00:39:20,524 ನೋಲಾನ್ ಕೇಹಿಲ್ ಹಾಗಲ್ಲ. 596 00:39:20,525 --> 00:39:23,820 ಹೌದಾ? ಅವನು ಎಲ್ಲಿದ್ದಾನೆ? ನಾವು ಒಟ್ಟಿಗೆ ಹೋಗಿ ಅವನನ್ನು ಕೇಳೋಣ. 597 00:39:24,571 --> 00:39:26,907 ಸರಿ. ಹೋಗೋಣ. 598 00:39:32,204 --> 00:39:33,163 ನೋಲಾನ್… 599 00:39:34,915 --> 00:39:35,832 ನಾವು ಮಾತನಾಡಬೇಕು. 600 00:39:41,922 --> 00:39:43,757 ಎಂದಿಗೂ ಏನನ್ನೂ ಮುಚ್ಚಿಡಲು ಆಗಲ್ಲ, ಅಲ್ವಾ? 601 00:39:44,508 --> 00:39:45,592 ಅದರ ಅರ್ಥವೇನು? 602 00:39:46,343 --> 00:39:50,138 ವಾಟರ್‌ಗೇಟ್, ಇರಾನ್ ಕಾಂಟ್ರಾ, ಹಂಟರ್‌ನ ದರಿದ್ರ ಲ್ಯಾಪ್‌ಟಾಪ್. 603 00:39:50,972 --> 00:39:53,557 ಜನರು ಏನನ್ನೇ ಮರೆಮಾಡಲು ಪ್ರಯತ್ನಿಸಿದರೂ, ಅದು ಯಾವಾಗಲೂ ಹೊರಬರುತ್ತದೆ. 604 00:39:53,558 --> 00:39:56,853 ಆನಾ ಮೆರಿಕ್ ಸತ್ತ ರಾತ್ರಿ ನೀವು ಅವರ ಜೊತೆ ಸಬ್‌ವೇಯಲ್ಲಿ ಏಕೆ ಇದ್ದಿರಿ? 605 00:39:58,772 --> 00:40:00,565 ನೀವು ಅವಳ ಜಂಪ್ ಡ್ರೈವ್ ತೆಗೆದುಕೊಂಡಿರಾ? 606 00:40:03,193 --> 00:40:04,861 ನೀವು ಒಳ್ಳೆಯ ಅಧ್ಯಕ್ಷರಾಗುತ್ತಿದ್ದಿರಿ. 607 00:40:07,864 --> 00:40:08,865 ಕ್ಷಮಿಸಿ, ಜಾನ್. 608 00:40:09,866 --> 00:40:10,867 ನೋಲಾನ್. 609 00:40:11,868 --> 00:40:12,828 - ನೋಲಾನ್, ನೋಲಾನ್! - ಇಲ್ಲ! 610 00:40:16,540 --> 00:40:17,999 ಅಯ್ಯೋ, ದೇವರೇ. 611 00:40:19,084 --> 00:40:21,753 ನಾನು ಸ್ಪ್ರಿಂಗ್ ಫೀಲ್ಡ್. ನನಗೆ ಕಾವಲು ಬೇಲಿ ಮತ್ತು ವೈದ್ಯರು ಬೇಕು. 612 00:42:18,370 --> 00:42:20,454 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 613 00:42:20,455 --> 00:42:22,457 ಸೃಜನಶೀಲ ಮೇಲ್ವಿಚಾರಕರು ವಿವೇಕ್