1 00:00:06,006 --> 00:00:07,382 ಈ ಹಿಂದೆ ರೀಚರ್‌ನಲ್ಲಿ... 2 00:00:07,383 --> 00:00:09,759 ಪಾಲ್ ವಾನ್ಹೋವನ್. ಈ ವ್ಯಕ್ತಿಯೊಂದಿಗೆ ಹೊಡೆದಾಡುವಿರಾ, ಬಾಸ್? 3 00:00:09,760 --> 00:00:11,220 ಹೊಡೆದಾಡದಿದ್ದರೇ ಸಾಕು ಅಂದುಕೊಳ್ಳುತ್ತಿರುವೆ. 4 00:00:11,887 --> 00:00:14,889 ರಷ್ಯಾದ ಸುಲಿಗೆಕೂಟದವರು, ಕ್ವಿನ್ ಸಾಲ ತೀರಿಸಿಲ್ಲ, ಹಾಗಾಗಿ ಅವರ ಹತೋಟಿಯಲ್ಲಿದ್ದಾನೆ. 5 00:00:14,890 --> 00:00:17,976 - ನಿಮ್ಮ ಹಣ ನಿಮಗೆ ಸಿಗುತ್ತದೆ. ಚಿಂತಿಸಬೇಡಿ. - ಚಿಂತಿಸಬೇಕಾದವನು ನಾನಲ್ಲ. 6 00:00:17,977 --> 00:00:20,019 - ಗನ್‌ಗಳನ್ನು ಪೂರೈಸುತ್ತಿದ್ದಾರೆ. - ಪ್ರಶ್ನೆ ಏನೆಂದರೆ, ಯಾರಿಗಾಗಿ? 7 00:00:20,020 --> 00:00:22,188 - ಅವನ ಮೇಲೆ ಅದೆಲ್ಲ ಏನು? - ಕ್ವಿನ್ ನೀಡಿದ ಶಿಕ್ಷೆ. 8 00:00:22,189 --> 00:00:25,066 ಖರೀದಿದಾರರು ಇಂದು ಯೆಮೆನ್‌ನಿಂದ ವಿಮಾನದಲ್ಲಿ ಬರುತ್ತಿದ್ದಾರೆ. 9 00:00:25,067 --> 00:00:26,443 ಇದು ಒಂದು ಭಯೋತ್ಪಾದಕರ ದಾಳಿಗಾಗಿ. 10 00:00:26,444 --> 00:00:28,528 ಜನನಿಬಿಡ ಪ್ರದೇಶಗಳಲ್ಲಿ ಏಕಕಾಲಿಕ ದಾಳಿಗಳು. 11 00:00:28,529 --> 00:00:29,446 ಸಂಪೂರ್ಣ ಹತ್ಯಾಕಾಂಡ. 12 00:00:29,447 --> 00:00:32,950 ನಿನಗೆ ಕೆಂಪು ಕೂದಲಿರುವುದರಿಂದ ನೀನೆಷ್ಟು ಅದೃಷ್ಟಶೃಷ್ಟಶಾಲಿ ಎಂದು ನಿನಗೆ ಗೊತ್ತಿಲ್ಲ. 13 00:00:33,826 --> 00:00:35,702 ನೀವು ಚಿಕ್ಕವರಾಗಿದ್ದಾಗ ನಿಮ್ಮ ಬಳಿ ಇಂಥದ್ದೇ ಇದ್ದದ್ದು. 14 00:00:35,703 --> 00:00:38,621 ಅದು ಇಲ್ಲಿ ಹಾಳಾಗಿದೆ, ಆದರೆ ನಾನು ಅದನ್ನು ಸರಿಪಡಿಸಿದೆ. 15 00:00:38,622 --> 00:00:40,082 ನನಗೊಂದು ಉಪಾಯ ಸಿಕ್ಕಿತು. 16 00:00:40,791 --> 00:00:42,333 ನನಗೆ ಮೆಕ್ಕೇಬ್‌ನಿಂದ ವಿವರಗಳು ಸಿಕ್ಕಿದವು. 17 00:00:42,334 --> 00:00:44,586 ಬುಲ್ ಹೆಡ್ ಸ್ಯಾಲ್ವೇಜ್ ಯಾರ್ಡ್ ಬಳಿ ಖರೀದಿ ನಡೆಯುತ್ತಿದೆ. 18 00:00:44,587 --> 00:00:46,671 ಇದರಲ್ಲಿ ಎಟಿಎಫ್‌ನವರನ್ನೂ ಸೇರಿಸಿಕೊಳ್ಳಬೇಕೆಂದು ನಮಗೆ ಅನಿಸುತ್ತೆ. 19 00:00:46,672 --> 00:00:50,633 ನೀವು ಕನಿಷ್ಟ 50 ಗಜಗಳಷ್ಟು ದೂರದಲ್ಲಿರುತ್ತೀರಿ, ಕಣ್ಗಾವಲು ವ್ಯಾನ್‌ನಲ್ಲಿ. 20 00:00:50,634 --> 00:00:52,510 ವಿನಿಮಯವು 9:00ಕ್ಕೆ. ನಿನಗೆ ಅಲ್ಲಿ ಸಿಗುತ್ತೇನೆ. 21 00:00:52,511 --> 00:00:53,803 ನೀವು ಎಲ್ಲಾದರೂ ಹೋಗಬೇಕೇ? 22 00:00:53,804 --> 00:00:55,806 ಹಾಂ. ಇಂದು ನನ್ನ ಕೆಟ್ಟ ಹುಟ್ಟುಹಬ್ಬ. 23 00:00:56,390 --> 00:00:59,225 ಒಂಬತ್ತು ಗಂಟೆಗೆ, ನೀನಿಲ್ಲಿ ಕೋಣೆಗೆ ಹಿಂತಿರುಗಿ, ಬಾಗಿಲ ಚಿಲಕ ಹಾಕಿಕೊಳ್ಳಬೇಕು. 24 00:00:59,226 --> 00:01:00,810 - ಮೊರನ್, ಸ್ಥಿತಿವರದಿ ಹೇಳು. - ಸಿದ್ಧನಾಗಿದ್ದೇನೆ. 25 00:01:00,811 --> 00:01:02,437 - ಮಾರ್ಟಿನೆಜ್? - ಸಿದ್ಧನಾಗಿದ್ದೇನೆ. 26 00:01:02,438 --> 00:01:04,564 ಆದರೆ ಕ್ವಿನ್ ನನ್ನ ಗನ್‌ನ ಗುರಿಗೆ ಸರಿಯಾಗಿ ಎದುರಾಗಲಿದ್ದಾನೆ. 27 00:01:04,565 --> 00:01:05,482 ಖರೀದಿದಾರರು ಬಂದರು. 28 00:01:05,483 --> 00:01:07,317 ಏನು ಹೇಳುತ್ತಿದ್ದೀಯಾ? ಇನ್ನೂ ಅವರನ್ನು ಹಿಂಬಾಲಿಸುತ್ತಿದ್ದೇನೆ. 29 00:01:07,318 --> 00:01:09,736 ಒಪ್ಪಂದ ನಡೆಯುತ್ತಿರುವುದು ಬೆಕ್‌ನ ಮನೆಯಲ್ಲಿಯೇ. 30 00:01:09,737 --> 00:01:11,530 ಕ್ವಿನ್ ಇಲ್ಲಿಲ್ಲ. ಇದು ಬಲೆ ಬೀಸಿರುವುದು. 31 00:01:19,622 --> 00:01:21,956 ರೀಚರ್, ಯಾವ ರೀತಿಯ ಬಲೆ? 32 00:01:21,957 --> 00:01:23,042 ರೀಚರ್? 33 00:01:24,001 --> 00:01:26,212 ರೀಚರ್, ದೇವರೇ, ನನಗೆ ಉತ್ತರಿಸು. 34 00:01:27,630 --> 00:01:29,214 ರೀಚರ್, ಯಾವ ರೀತಿಯ ಬಲೆ? 35 00:01:29,215 --> 00:01:30,841 ಹೋಗಬೇಕು, ನೀಗ್ಲೇ. 36 00:02:17,555 --> 00:02:18,848 ಇದು ಹೊಂಚುದಾಳಿ! 37 00:02:22,935 --> 00:02:26,104 - ಚಲಾಯಿಸು, ವಿಲ್ಲಿ! - ಎಚ್ಚರಿಕೆಯಿಂದ ಇರಿ ಮತ್ತು ಒಳಗೆ ನುಗ್ಗಿರಿ! 38 00:02:26,105 --> 00:02:27,523 ಹೋಗಿ, ಹೋಗಿ, ಹೋಗಿ! 39 00:03:07,563 --> 00:03:09,273 ಅಲ್ಲಿ ಒಳಗೆ ಹೋಗು! ಬಾ! 40 00:03:15,112 --> 00:03:16,405 ಓಹ್, ಅಯ್ಯೋ! 41 00:03:17,531 --> 00:03:18,407 ಛೇ! 42 00:03:30,878 --> 00:03:31,920 ನೀನು ಪೂರ್ವಕ್ಕೆ ಹೋಗು. 43 00:03:31,921 --> 00:03:33,546 ಸುರಕ್ಷಿತವಾಗಿರು, ಸರಿನಾ? 44 00:03:33,547 --> 00:03:35,382 - ಹೇಗೆ? - ನನಗೆ ಗೊತ್ತಿಲ್ಲ! ಹುಷಾರು ಅಷ್ಟೇ! 45 00:04:06,163 --> 00:04:07,706 ನಿನ್ನನ್ನು ಇದರಿಂದ ಹೊರಗಿಟ್ಟೆ ಅಂದುಕೊಂಡೆ. 46 00:04:25,891 --> 00:04:26,976 ಛೇ. 47 00:05:05,597 --> 00:05:08,475 ಈ ಟ್ರೈಲರ್ ಕೆಳಗೆ ನೋಡಿದರೆ ಏನು ಸಿಗುತ್ತದೋ ಎಂದು ಕುತೂಹಲವಾಗುತ್ತಿದೆ. 48 00:05:12,187 --> 00:05:13,731 ಮಾಹಿತಿ ನೀಡಿದ ದ್ರೋಹಿ. 49 00:05:18,819 --> 00:05:20,236 ಹೊರಗೆ ಬನ್ನಿ. 50 00:05:20,237 --> 00:05:21,739 ರೀಚರ್, ನಿನಗೇನೂ ಆಗಿಲ್ಲ ತಾನೆ? 51 00:05:25,409 --> 00:05:28,037 ಕೇಳಿ, ಇದು ಹೀಗೆ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. 52 00:05:28,662 --> 00:05:29,787 ಕ್ವಿನ್ ನನ್ನನ್ನೂ ಸಿಕ್ಕಿಹಾಕಿಸಿದ. 53 00:05:29,788 --> 00:05:32,373 - ನಿಮ್ಮ ಸತ್ಕಾರಕೂಟದಲ್ಲಿ ಒಪ್ಪಂದ ನಡೆಯುತ್ತಿದೆ. - ರಿಚರ್ಡ್ ಗತಿ ಏನು? 54 00:05:32,374 --> 00:05:34,709 ಅಗತ್ಯ ಬಿದ್ದರೆ, ಅವನನ್ನು ಒತ್ತೆಯಾಳಾಗಿ ಬಳಸಿಕೊಳ್ಳುವರು. 55 00:05:34,710 --> 00:05:36,127 ಇಲ್ಲದಿದ್ದರೆ... 56 00:05:36,128 --> 00:05:38,421 - ಅವನನ್ನು ಕೊಲ್ಲುತ್ತಾರೆ. - ಥೆರಿಸ ಆ ಮನೆಯಲ್ಲಿದ್ದಾಳಾ? 57 00:05:38,422 --> 00:05:40,548 ಅವರು ಸತ್ಕಾರಕೂಟಕ್ಕೂ ಮುನ್ನ ಅವಳನ್ನು ಕರೆತಂದರು. 58 00:05:40,549 --> 00:05:43,051 ಶವಜೀವಿಯಂತೆ ಇದ್ದಳು. ಆಕೆಗೆ ಮಾದಕ ದ್ರವ್ಯ ನೀಡಿದ್ದರು ಅನಿಸುತ್ತೆ. 59 00:05:43,052 --> 00:05:45,512 - ಅವಳನ್ನ ಎಲ್ಲಿ ಇರಿಸಿದರು? - ಎಲ್ಲೋ ಮೇಲಿನ ಮಹಡಿಯಲ್ಲಿ. ನೋಡಲಿಲ್ಲ. 60 00:05:50,100 --> 00:05:52,811 ರೀಚರ್ ಇಲ್ಲಿದ್ದಾನೆ. ವಾಪಸ್ ಕಳುಹಿಸಿ 61 00:05:57,107 --> 00:05:58,150 ಅಳಿಸು. 62 00:05:59,985 --> 00:06:01,195 ಈಗ ಇದನ್ನು ಟೈಪ್ ಮಾಡು. 63 00:06:03,155 --> 00:06:04,865 ಎಲ್ಲವೂ ಸರಿಯಾಗಿದೆ. ಈಗ ಹಿಂತಿರುಗುತ್ತಿದ್ದೇವೆ. 64 00:06:47,074 --> 00:06:48,825 ಸಮಯವಾಗಿದೆ. ಕೆಲಸ ಎಲ್ಲಿವರೆಗೆ ಬಂದಿದೆ? 65 00:06:48,826 --> 00:06:51,828 ನಾವು ಮೂವರು, ಬೆಕ್ ಹಾಗೂ ಕ್ವಿನ್‌ನ ವ್ಯಕ್ತಿಯೊಬ್ಬ ಬಿಟ್ಟು ಎಲ್ಲರೂ ಸತ್ತಿದ್ದಾರೆ. 66 00:06:51,829 --> 00:06:53,162 ಎಟಿಎಫ್ ಏಜೆಂಟ್‌ಗಳು? 67 00:06:53,163 --> 00:06:54,163 ಎಲ್ಲರೂ. 68 00:06:54,164 --> 00:06:56,707 ಕ್ವಿನ್ ಹೊಂಚುದಾಳಿಯ ಅಪರಾಧವನ್ನು ಬೆಕ್ ಹೊತ್ತುಕೊಳ್ಳುವಂತೆಯೂ, 69 00:06:56,708 --> 00:06:58,292 ಅದರಲ್ಲಿ ಆತ ಸತ್ತಂತೆ ಬಿಂಬಿಸಲು ಯೋಚಿಸಿದ್ದ. 70 00:06:58,293 --> 00:07:00,253 ಅಂದರೆ ಬೆಕ್ ನಮಗೆ ನೆರವಾಗುತ್ತಿದ್ದನೆಂದು ಆತ ತಿಳಿದಿದ್ದ. 71 00:07:00,254 --> 00:07:02,171 ಅಥವಾ ಬಹುಶಃ ಮೊದಲಿಂದಲೂ ಅದೇ ಅವರ ಯೋಜನೆವಾಗಿತ್ತು. 72 00:07:02,172 --> 00:07:05,466 ಅದನ್ನು ಸುಟ್ಟುಹಾಕು, ಲಕ್ಷಾಂತರ ಹಣದೊಂದಿಗೆ ಪರಾರಿಯಾಗು, ಬೇರೆಡೆ ತಲೆಮರೆಸಿಕೋ, 73 00:07:05,467 --> 00:07:08,052 ಮತ್ತೊಂದು ಕಾರ್ಯಾಚರಣೆ ವಶಪಡಿಸಿಕೋ, ಹೀಗೆ ಮತ್ತೆ ವ್ಯವಹಾರದಲ್ಲಿ ತೊಡಗುವನು. 74 00:07:08,053 --> 00:07:11,430 - ಅವನು ಅದನ್ನು ಹಿಂದೆ ಮಾಡಿದ್ದಾನೆ. - ಅವನು ಇನ್ನೂ ರಷ್ಯನ್ನರಿಗೆ ಹಣ ತೀರಿಸಬೇಕಿದೆ. 75 00:07:11,431 --> 00:07:12,932 ನೀಗ್ಲೇ, ನಿನ್ನಿಂದ ಸ್ಥಿತಿವರದಿ? 76 00:07:12,933 --> 00:07:16,352 ಖರೀದಿದಾರರು ಬಂದಾಗಿನಿಂದ ಯಾರೂ ಹೋಗಿಲ್ಲ. ಒಪ್ಪಂದ ಇನ್ನೂ ಆಗಿಲ್ಲ. 77 00:07:16,353 --> 00:07:17,896 ನಾವು ಒಳಗೆ ಹೇಗೆ ಹೋಗುವುದು? 78 00:07:18,689 --> 00:07:19,857 ಪೌಲಿಗೆ ದೂರದಿಂದ ಗುಂಡಿಕ್ಕಬಲ್ಲೆ. 79 00:07:20,524 --> 00:07:22,650 ಗುಂಡಿನ ಸದ್ದಿನಿಂದ ಮನೆಯಲ್ಲಿ ಎಲ್ಲರೂ ಎಚ್ಚೆತ್ತುಕೊಳ್ಳುವರು. 80 00:07:22,651 --> 00:07:26,864 ಕ್ವಿನ್‌ನ ಜನರು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಟ್ರಕ್‌ಗಳನ್ನು ಹಿಂತಿರುಗಿಸಬೇಕಿತ್ತು. 81 00:07:27,447 --> 00:07:29,115 ನಾವು ಟ್ರಕ್‌ಗಳನ್ನು ಹಿಂತಿರುಗಿಸೋಣ ಅಂತೀನಿ. 82 00:07:29,116 --> 00:07:30,575 ಬೆಂಬಲಕ್ಕೆ ಸ್ಥಳೀಯ ಪೊಲೀಸರೇ? 83 00:07:30,576 --> 00:07:32,910 ಕೌಂಟಿ ಪೊಲೀಸ್ ಬರಲು 40 ನಿಮಿಷ ಬೇಕು. ಅಷ್ಟು ಹೊತ್ತು ಕಾಯಲಾಗದು. 84 00:07:32,911 --> 00:07:34,370 ಇದನ್ನು ನಾವೇ ಮಾಡೋಣ. 85 00:07:34,371 --> 00:07:36,122 ಒಳನುಗ್ಗಿ, ರಿಚರ್ಡ್ ಹಾಗೂ ಥೆರಿಸರನ್ನು ಪಡೆದು, 86 00:07:36,123 --> 00:07:38,749 ಖರೀದಿದಾರರು ಶಸ್ತ್ರಾಸ್ತ್ರಗಳೊಂದಿಗೆ ಓಡಿಹೋಗುವುದನ್ನು ತಡೆದು, 87 00:07:38,750 --> 00:07:40,002 ನಂತರ ಕ್ವಿನ್‌ನನ್ನು ನೋಡಿಕೊಳ್ಳುವೆ. 88 00:07:40,919 --> 00:07:42,336 ದ್ವಾರಪಾಲಕನ ಬಗ್ಗೆ ಏನು ಮಾಡುವುದು? 89 00:07:42,337 --> 00:07:45,381 ಬೈಪ್ಲೇನ್‌ನಲ್ಲಿ ಹೋಗಿ ಕಿಂಗ್ ಕಾಂಗನ್ನು ಎಂಪೈರ್ ಕಟ್ಟಡದಿಂದ ಬೀಳಿಸಿದಂತೆ ಮಾಡ್ತೀವಾ? 90 00:07:45,382 --> 00:07:47,426 ಏಕೆಂದರೆ, ನಂಬಲಾಗುತ್ತಿಲ್ಲ, ರೀಚರ್. 91 00:07:48,844 --> 00:07:50,053 ಅವನನ್ನು ನನಗೆ ಬಿಡು. 92 00:07:50,971 --> 00:07:52,181 ನಾನು ಅವನಿಗೆ ಋಣ ತೀರಿಸಬೇಕಿದೆ. 93 00:07:53,140 --> 00:07:58,103 ರೀಚರ್ 94 00:08:18,457 --> 00:08:20,458 ಇನ್ನೊಂದು ಟ್ರಕ್ ಅನ್ನು ಯಾರು ಓಡಿಸುತ್ತಿದ್ದಾರೆ? 95 00:08:20,459 --> 00:08:22,836 ವಿಲ್ಲನುಏವ. ಕಷ್ಟದಿಂದ. 96 00:08:23,921 --> 00:08:26,214 ಹಾಂ, ಗೇರ್‌ಗಳನ್ನು ಸರಿಯಾಗಿ ಹಾಕಲು ಕಷ್ಟಪಡುತ್ತಿದ್ದಾನೆ. 97 00:08:26,215 --> 00:08:27,590 ನನಗೆ ಇದ್ದದ್ದು ಒಂದೇ ಆಯ್ಕೆ. 98 00:08:27,591 --> 00:08:29,092 ಆ ಇನ್ನೊಬ್ಬ ಚಾಲಕನನ್ನು ಕೊಂದುಬಿಟ್ಟೆ. 99 00:08:36,892 --> 00:08:38,101 ಸರಿ. 100 00:08:39,311 --> 00:08:41,979 ನಿನಗೆ ಇದನ್ನು ಓಡಿಸಲು ಬರುತ್ತೆಂದು ನೀನು ಹೇಳಿದೆ ಅಂತ ಅಂದುಕೊಂಡೆ. 101 00:08:41,980 --> 00:08:45,900 ನಾನು ಹೇಳಿದೆ, ಚಿಕ್ಕಪ್ಪ ಟ್ರಕ್ ಚಾಲಕರಾಗಿದ್ದರು ಮತ್ತು ಆಗಾಗ ಅವರ ಜೊತೆ ಹೋಗುತ್ತಿದ್ದೆ ಅಂತ. 102 00:08:45,901 --> 00:08:48,861 ಛೇ, ಇದು ಮುಗಿದಮೇಲೆ ನಿಮ್ಮಿಂದ ಮುಕ್ತಿ ಸಿಕ್ಕರೆ ನನಗೆ ಸಂತೋಷ. 103 00:08:48,862 --> 00:08:50,697 ಶೀಘ್ರದಲ್ಲೇ ಮೌರೀನ್‌ಗೆ ತಲೆನೋವು ಆಗಲಿದ್ದೀಯ. 104 00:08:54,493 --> 00:08:55,702 ನಿನ್ನನ್ನು ಪ್ರೀತಿಸುವೆ, ಕಂದ. 105 00:08:56,578 --> 00:08:57,996 ನಾನೂ ನಿನ್ನನ್ನು ಪ್ರೀತಿಸುವೆ, ಮುದಿಯ. 106 00:08:59,039 --> 00:09:01,874 ಮಹನೀಯರೇ. ಸತ್ಕಾರಕೂಟಕ್ಕೆ ಬಂದಿದ್ದಕ್ಕೆ ಬಹಳ ಸಂತೋಷವಾಯಿತು. 107 00:09:01,875 --> 00:09:03,000 ಖಂಡಿತ. 108 00:09:03,001 --> 00:09:07,046 ನಾವು ಮಧ್ಯ-ಅಟ್ಲಾಂಟಿಕ್‌ನ ಅತ್ಯಂತ ಪ್ರಭಾವಿ ವ್ಯವಹಾರಸ್ಥರು ಹಾಗೂ ಪ್ರಮುಖರಲ್ಲೊಬ್ಬರು. 109 00:09:07,047 --> 00:09:10,758 ಇಲ್ಲಿ ಚಾಂಪೇನ್ ಅಪ್ರತಿಮ ಮತ್ತು ಕಡಲ ನಳ್ಳಿ, ಜಗತ್ತಿನಲ್ಲೇ ಅತ್ಯುತ್ತಮ. 110 00:09:10,759 --> 00:09:14,136 ಮತ್ತು ಸುಖೋಪಭೋಗಗಳ ವಿಷಯದ ಬಗ್ಗೆ ಮಾತನಾಡುತ್ತಿರುವಾಗ, 111 00:09:14,137 --> 00:09:16,555 ನಮ್ಮ ಸಾಗಣೆ ವಿಳಂಬಗಳಿಗೆ ಕ್ಷಮೆಯಾಚಿಸುವ ಸಲುವಾಗಿ 112 00:09:16,556 --> 00:09:20,101 ಮತ್ತು ನಮ್ಮ ಸಂಬಂಧಕ್ಕೆ ನಮ್ಮ ಮೆಚ್ಚುಗೆಯ ಸಂಕೇತವಾಗಿ, 113 00:09:20,102 --> 00:09:21,520 ಈಗ ಮತ್ತು ಭವಿಷ್ಯದಲ್ಲಿ, 114 00:09:22,896 --> 00:09:25,315 ನಿಮಗೊಂದು ಉಡುಗೊರೆ ನೀಡಲು ಇಷ್ಟಪಡುತ್ತೇನೆ. 115 00:09:28,819 --> 00:09:29,735 ನಿಮಗಾಗಿ. 116 00:09:29,736 --> 00:09:32,238 ಸುಂದರವಾಗಿದ್ದಾಳೆ. ಬೆಂಕಿಯಂಥ ಕೆಂಗೂದಲು. 117 00:09:32,239 --> 00:09:33,615 ಅವಳು ಪೂರ್ತಿಯಾಗಿ ನಿಮಗೆ. 118 00:09:34,324 --> 00:09:36,742 ನಮ್ಮವರಿಗೆ ಹೇಳಿ ಕಣಜದಿಂದ ನಿಮ್ಮ ಸರಕುಗಳನ್ನು ತುಂಬಿಸುವೆ, 119 00:09:36,743 --> 00:09:38,744 ನೀವು ಈ ಸುಂದರ ಮಹಿಳೆಯೊಂದಿಗೆ ಸಮಯ ಕಳೆಯುತ್ತಿರಿ. 120 00:09:38,745 --> 00:09:42,206 ಹಾಗಾಗಿ, ನಿಮ್ಮ ಸರಕುಗಳು ನಿಮ್ಮ ಅನುಮೋದನೆಯನ್ನು ಪೂರೈಸುತ್ತವೆಯೇ ಎಂದು 121 00:09:42,207 --> 00:09:44,125 ಖಚಿತಪಡಿಸಿಕೊಳ್ಳಲು ನೀವು ಹೊರಗೆ ಬಂದು ನೋಡಲು ಬಯಸಿದರೆ, 122 00:09:44,126 --> 00:09:47,128 ನಮ್ಮ ವ್ಯವಹಾರವನ್ನು ಮುಗಿಸಿ, ಇತರ ಚಟುವಟಿಕೆಗಳಿಗೆ ಮುಂದುವರಿಯಬಹುದು. 123 00:09:47,129 --> 00:09:51,465 ನೀವು ಅಮೆರಿಕನ್ನರು, ಯಾವಾಗಲೂ ವ್ಯವಹಾರಕ್ಕೆ ಆದ್ಯತೆ ನೀಡುತ್ತೀರ. 124 00:09:51,466 --> 00:09:53,634 ವ್ಯವಹಾರ ಆಮೇಲೆ. 125 00:09:53,635 --> 00:09:55,803 ಮೊದಲು, ಸ್ವಲ್ಪ ಸಂಗೀತ, ಸ್ವಲ್ಪ ಪಾನೀಯಗಳು, 126 00:09:55,804 --> 00:09:57,805 ನಂತರ ಸುಖಪಡುವ ಸಮಯ. 127 00:09:57,806 --> 00:10:00,600 ತದನಂತರ ನಾವು ನಮ್ಮ ವ್ಯವಹಾರ ನಡೆಸುತ್ತೇವೆ. 128 00:10:01,518 --> 00:10:02,936 ನೀವು ಸಿದ್ಧರಿದ್ದೀರಿ ಅಂದಾಗ... 129 00:10:05,022 --> 00:10:07,816 ಅವಳು ಮೇಲ್ಮಹಡಿಯದ್ದಾಳೆ. ಬಲಕ್ಕೆ ಮೂರನೇ ಮಲಗುವ ಕೋಣೆ. 130 00:10:13,822 --> 00:10:17,367 ನೀನು ಪಾಲಿ ಕಡೆ ನೋಡಿದರೂ ಸಾಕು, ನಿನ್ನ ಪ್ರಾಣ ಹೋಗುತ್ತದೆ. 131 00:10:21,330 --> 00:10:22,372 ಆಟ ಈಗ ಶುರು. 132 00:10:26,084 --> 00:10:29,421 ಟೋಪಿ ಕೆಳಗೆ ಎಳೆದುಕೋ, ಆತ್ಮವಿಶ್ವಾಸದಿಂದ ಓಡಿಸಲು ಪ್ರಯತ್ನಿಸು. 133 00:11:08,001 --> 00:11:09,377 ಇವನನ್ನು ಏನು ಮಾಡುವುದು? 134 00:11:09,378 --> 00:11:12,172 ಇವನನ್ನು ಬಿಟ್ಟು ಹೋದರೆ, ಐದು ನಿಮಿಷದಲ್ಲಿ ನಮ್ಮ ಬಗ್ಗೆ ಹೇಳಿಬಿಡುತ್ತಾನೆ. 135 00:11:13,548 --> 00:11:15,759 ನಾನಿಲ್ಲಿ ಒಳಗೆ ಹಗ್ಗ ಹುಡುಕಬಲ್ಲೆ ಅಂತ ನೀನು ನಂಬಿದರೆ ಸರಿ. 136 00:11:20,263 --> 00:11:21,723 ರಿಚರ್ಡ್ ಅಲ್ಲಿಯೇ ಒಳಗೆ ಇದ್ದಾನೆ. 137 00:11:22,599 --> 00:11:23,600 ಹೇ. 138 00:11:24,476 --> 00:11:28,604 ನೀನು ಏನನ್ನಾದರೂ ಮಾಡಲು ಯೋಚಿಸುತ್ತಿದ್ದರೆ, ಇಲ್ಲಿಯೇ ನಿನಗೆ ತಿಕಕ್ಕೆ ಚಾಕು ಹಾಕಿಬಿಡುತ್ತೇನೆ. 139 00:11:28,605 --> 00:11:30,231 ನನ್ನ ತಾಳ್ಮೆ ಪರೀಕ್ಷಿಸಲು ಬಯಸುವೆಯಾ? 140 00:11:30,232 --> 00:11:32,483 ನಿನ್ನ ಮಗನಿಗೆ ಯಾವುದೇ ತೊಂದರೆಯಾಗುವುದು ನನಗಿಷ್ಟವಿಲ್ಲ, 141 00:11:32,484 --> 00:11:34,402 ಆದರೆ ಅವನಿಗಿಂತ ನನ್ನ ಮಾಹಿತಿದಾರಳು ಮುಖ್ಯ. 142 00:11:34,403 --> 00:11:37,696 ಹಾಗಾಗಿ ನಾವು ರೀಚರ್ ಹೇಳಿದಂತೆ ಮಾಡೋಣ, ಎಲ್ಲರೂ ಇಲ್ಲಿಂದ ಪಾರಾಗೋಣ ಅಂತ ಆಶಿಸೋಣ. 143 00:11:37,697 --> 00:11:40,325 ಅವಳು ಸುಮ್ಮನೆ ಹೇಳುತ್ತಿಲ್ಲ. ಸರಿಯಾಗಿ ತಿಕಕ್ಕೇ ಚಾಕು ಹಾಕುತ್ತಾಳೆ. 144 00:11:40,700 --> 00:11:41,535 ಹೇ! 145 00:11:42,661 --> 00:11:43,494 ಸಮಸ್ಯೆ. 146 00:11:43,495 --> 00:11:46,622 ನೀನು ಕುದುರೆಗಾಡಿಯ ಹೊರ ಕಟ್ಟಡದ ಇನ್ನೊಂದು ಬದಿಯಲ್ಲಿ ನಿಲುಗಡೆ ಮಾಡಬೇಕಿತ್ತು. 147 00:11:46,623 --> 00:11:48,750 ನಾವು ಅವನಿಗೆ ಗುಂಡಿಕ್ಕಿದರೆ, ಒಳಗೆ ಅವರಿಗೆ ಕೇಳಿಸುತ್ತೆ. 148 00:11:51,545 --> 00:11:52,586 ಹೇ. 149 00:11:52,587 --> 00:11:55,131 ಕ್ಷಮೆಯಾಚಿಸಿ, ಟ್ರಕ್‌ಗಳನ್ನು ಬೇರೆಡೆ ನಿಲ್ಲಿಸುತ್ತೇವೆ ಎನ್ನಲು ಚಾಲಕನಿಗೆ ಹೇಳು. 150 00:11:55,132 --> 00:11:56,716 ಹಾಗೆ ಮಾಡಲು ಸ್ವಲ್ಪ ತಡವಾಗಿದೆ. 151 00:11:58,301 --> 00:11:59,760 ತಮಾಷೆ ಮಾಡುತ್ತಿದ್ದೀಯಾ? 152 00:11:59,761 --> 00:12:01,011 ಯಾವುದೇ ಹಗ್ಗ ಸಿಗಲಿಲ್ಲ. 153 00:12:01,012 --> 00:12:03,305 - ನಾವು ಈಗೇನು ಮಾಡೋದು? - ನಾನು ಪೌಲಿಯನ್ನು ನೋಡಿಕೊಳ್ಳುವೆ. 154 00:12:03,306 --> 00:12:05,474 ನೀವು ಉಳಿದವರು, ರಿಚರ್ಡ್ ಹಾಗೂ ಥೆರಿಸಳನ್ನು ಹುಡುಕಿ. 155 00:12:05,475 --> 00:12:07,144 ಅರ್ಥವಾಯಿತು. ಹೋಗೋಣ. 156 00:12:08,437 --> 00:12:10,063 ಏನು ನೀನು? ಕಿವುಡನಾ? 157 00:12:10,856 --> 00:12:12,065 ಟ್ರಕ್ ಅನ್ನು ಬೇರೆಡೆ ನಿಲ್ಲಿಸು. 158 00:12:12,524 --> 00:12:13,525 ಬೇಗ! 159 00:12:14,317 --> 00:12:15,609 ಆ ಕಡೆ! 160 00:12:15,610 --> 00:12:18,280 ನೆಲಮಾಳಿಗೆಯ ಮೂಲಕ ಪ್ರವೇಶಿಸಬಹುದು. ನನ್ನನ್ನು ಹಿಂಬಾಲಿಸಿ. 161 00:12:19,865 --> 00:12:22,075 ದಡ್ಡ, ನಿನಗೇ ಹೇಳುತ್ತಿರುವುದು. 162 00:12:25,120 --> 00:12:26,371 ಏನಾಗಿದೆ? 163 00:12:50,979 --> 00:12:54,482 ಕ್ವಿನ್‌ನನ್ನು ಹುಡುಕಿ, ಕಣ್ಣಿಡುತ್ತೇನೆ, ಅದರಿಂದ ಒಪ್ಪಂದ ನಡೆದಾಗ ನಮಗೆ ತಿಳಿಯುತ್ತೆ. 164 00:12:54,483 --> 00:12:56,734 ನಿನ್ನ ಕೊಲೆಗೆ ಸುಪಾರಿ ಕೊಡುವನು. ನೀನು ಹೇಗೆ ಕಾಣುವೆ ಅಂತ ಅವನಿಗೆ ಗೊತ್ತಾ? 165 00:12:56,735 --> 00:12:58,986 ಹೊರಗುತ್ತಿಗೆಯವರ ಮಾಹಿತಿ ಮೇರೆಗೆ ಹೊರಗುತ್ತಿಗೆ ಸುಪಾರಿ ಕೊಡೋದಾ? 166 00:12:58,987 --> 00:13:00,321 ಆತ ಕೊಡಬಹುದು, ಆದರೆ ನನಗೆ ಅನುಮಾನ. 167 00:13:00,322 --> 00:13:02,491 - ನೀನು ತಪ್ಪಾಗಿದ್ದರೆ? - ನಮಗೆ ಶೀಘ್ರದಲ್ಲೇ ಗೊತ್ತಾಗುತ್ತೆ. 168 00:13:03,533 --> 00:13:07,161 - ಅಡುಗೆಯವರು ಏನನ್ನು ಧರಿಸಿದ್ದಾರೆ? - ಬಿಳಿ ಅಂಗಿ, ಕಪ್ಪು ಪ್ಯಾಂಟ್, ವೆಸ್ಟ್, ಬೋ ಟೈ. 169 00:13:07,162 --> 00:13:08,871 - ನಿಮ್ಮ ಅಂಗಿಯಂತೆನಾ? - ಇವನ ಹಾಗೆ. 170 00:13:08,872 --> 00:13:11,333 ನನಗೆ ಕೊಡಿ. ನಿಮ್ಮ ವೆಸ್ಟ್ ಮತ್ತು ಟೈ. ಬೇಗ. 171 00:13:22,761 --> 00:13:25,387 ಸರಿ, ನಮಗೆ ಅಲ್ಲಿ 20,000 ಚದರ ಅಡಿ ವಿಸ್ತೀರ್ಣದ ಮನೆ ಇದೆ. 172 00:13:25,388 --> 00:13:27,223 ಥೆರಿಸಳನ್ನು ಹುಡುಕಲು ಸ್ವಲ್ಪ ಸಮಯ ಹಿಡಿಯಬಹುದು. 173 00:13:27,224 --> 00:13:29,475 ಆಕೆ ಬಹುಶಃ ಪೂರ್ವ ಭಾಗದಲ್ಲಿದ್ದಾಳೆ, ಸತ್ಕಾರಕೂಟದಿಂದ ದೂರ. 174 00:13:29,476 --> 00:13:32,144 ಬಾಗಿಲು ಬಹುಶಃ ಬೀಗ ಹಾಕಿರಬಹುದು. ಅದನ್ನು ಒದ್ದರೆ ಜನರು ಗಮನಿಸುತ್ತಾರೆ. 175 00:13:32,145 --> 00:13:34,188 ಅಗತ್ಯವಿಲ್ಲ. ತಗೋ. 176 00:13:34,189 --> 00:13:35,272 ಸರ್ವತ್ರ ಬೀಗ ಕೀಲಿ. 177 00:13:35,273 --> 00:13:37,149 ಇದು ಮನೆಯ ಪ್ರತಿಯೊಂದು ಬಾಗಿಲನ್ನು ತೆರೆಯುತ್ತದೆ. 178 00:13:37,150 --> 00:13:38,859 ಹುಡುಗಿಯನ್ನು ಹುಡುಕಿರಿ. ನಾನು ರಿಚರ್ಡ್‌ನನ್ನು ಕರೆತರುವೆ. 179 00:13:38,860 --> 00:13:40,945 ಆಗಲ್ಲ. ಕ್ವಿನ್ ನಿಮ್ಮನ್ನು ಕೊಲ್ಲಲು ವ್ಯವಸ್ಥೆ ಮಾಡಿದ್ದ. 180 00:13:40,946 --> 00:13:42,279 ಆತ ನಿಮ್ಮನ್ನು ನೋಡಿಬಿಟ್ಟರೆ, ಮುಗಿಯಿತು. 181 00:13:42,280 --> 00:13:44,198 ಮತ್ತು ನಿಮ್ಮ ಮಗ ಸತ್ತಂತೆಯೇ. 182 00:13:44,199 --> 00:13:45,658 - ನಾನು ಅವನನ್ನು ಕರೆತರುವೆ. - ಅವನು ನನ್ನ ಮಗ. 183 00:13:45,659 --> 00:13:47,368 ಆತ ಬದುಕುವ ಸಾಧ್ಯತೆಗಳನ್ನು ಹೆಚ್ಚಿಸಬೇಕಾ? 184 00:13:47,369 --> 00:13:49,496 ಇಲ್ಲಿಯೇ ಇರಿ ಮತ್ತು ಆತನ ಕೆಲಸ ಮಾಡಲು ಬಿಡಿ. 185 00:13:51,248 --> 00:13:52,665 ಅವನ ಮಲಗುವ ಕೋಣೆಯಲ್ಲಿರಲು ನಾನು ಹೇಳಿದ್ದೆ. 186 00:13:52,666 --> 00:13:53,708 ಅರ್ಥವಾಯಿತು. 187 00:13:54,751 --> 00:13:57,294 ನೆಲಮಾಳಿಗೆಯ ಮೆಟ್ಟಿಲುಗಳು ಮೇಲಾಳುಗಳ ಅಡುಕಲ ಕೋಣೆಗೆ ಹೋಗುತ್ತವೆ. 188 00:13:57,295 --> 00:14:01,048 ಮೂರನೇ ಮಹಡಿ ಮೂಲಕ ನೇರವಾಗಿ ಹೋಗಿ, ಎರಡನೇ ಮಹಡಿಗೆ ಹೋದರೆ ನಿಮಗೆ ಸಿಗುವುದೇ ಮೊದಲ ಬಾಗಿಲು. 189 00:14:01,049 --> 00:14:02,300 - ಅರ್ಥವಾಯಿತು. - ಹೋಗೋಣ. 190 00:14:13,228 --> 00:14:14,396 ಗನ್‌ಗಳು ಬೇಡ. 191 00:14:18,358 --> 00:14:19,693 ಗಂಡಸರಂತೆ ಹೊಡೆದಾಡೋಣ. 192 00:14:20,277 --> 00:14:21,111 ಸರಿ. 193 00:14:21,945 --> 00:14:22,821 ಗಂಡಸರಂತೆ. 194 00:14:47,929 --> 00:14:49,306 ಇದರಲ್ಲಿ ಒಳ್ಳೆಯ ಮಜಾ ಸಿಗಲಿದೆ. 195 00:15:19,461 --> 00:15:21,963 ಬಾರೋ, ದಡಿಯ. ಅಷ್ಟೇನಾ ನಿನ್ನ ಶಕ್ತಿ? 196 00:17:00,061 --> 00:17:01,187 ಯಾರು ನೀನು? 197 00:17:02,397 --> 00:17:03,398 ಪ್ಲಂಬರ್. 198 00:17:03,815 --> 00:17:05,650 ನೀವು ಕರೆ ಮಾಡಿದ್ದು ಇದೇ ಶೌಚಾಲಯದ ಬಗ್ಗೆನಾ? 199 00:17:06,985 --> 00:17:09,696 ಅದನ್ನು ನಂಬುತ್ತೀಯ ಅಂತ ಅನಿಸಲಿಲ್ಲ. ಹಿಂದೆ ಒಳಗೆ ನಡಿ. 200 00:17:11,114 --> 00:17:12,115 ಹಾಗೇ ಹೋಗೋಣ. 201 00:17:12,782 --> 00:17:15,033 ಸರಿ, ಈಗ, ನಿನ್ನ ಗನ್ ಅನ್ನು ಹೊರತೆಗೆ. 202 00:17:15,034 --> 00:17:16,578 ಬೆರಳು ಮತ್ತು ಹೆಬ್ಬೆರಳು ಮಾತ್ರ ಬಳಸು. 203 00:17:17,912 --> 00:17:18,955 ನಾಜೂಕಾಗಿ ಮತ್ತು ನಿಧಾನ. 204 00:17:21,958 --> 00:17:23,793 ಈಗ ಅದನ್ನು ಶೌಚಾಲಯದಲ್ಲಿ ಬಿಡು. 205 00:17:27,046 --> 00:17:28,256 ಮುಚ್ಚಳವನ್ನು ಮುಚ್ಚು. 206 00:17:30,049 --> 00:17:31,384 ಈಗ ಹಿಂದೆ ನಡಿ. 207 00:17:31,968 --> 00:17:33,261 ಹಿಂದೆ ನಡಿ. 208 00:19:01,015 --> 00:19:03,476 ನಿನಗೆ ಉಸಿರುಗಟ್ಟುವುದು ಹೇಗನಿಸುತ್ತೆ ಅಂತ ನೋಡೋಣ, ಬೇವರ್ಸಿ. 209 00:19:36,134 --> 00:19:37,343 ದರಿದ್ರದವನೇ. 210 00:20:33,858 --> 00:20:35,234 ಬೋಳಿಮಗನೇ. 211 00:21:07,016 --> 00:21:08,225 ನೀವು ಇಲ್ಲೇನು ಮಾಡುತ್ತಿದ್ದೀರಿ? 212 00:21:08,226 --> 00:21:10,269 ನಿನ್ನನ್ನು ರಕ್ಷಿಸಲು ಬಂದೆ. 213 00:24:13,035 --> 00:24:15,162 ನೀನೇನು ಮಾಡುತ್ತಿದ್ದೀಯ? ನಿನ್ನನ್ನು ಗಮನಿಸುತ್ತಲೇ ಇದ್ದೇನೆ. 214 00:24:15,163 --> 00:24:16,913 ಸುಮ್ಮನೆ ಅಲೆದಾಡುತ್ತಿದ್ದೀಯ. 215 00:24:16,914 --> 00:24:18,456 ನಿನಗೆ ನಿಯೋಜಿಸಲಾದ ಜಾಗ ಯಾವುದು? 216 00:24:18,457 --> 00:24:21,168 ನಿನಗೆ ಕಪ್ಪು ಜೀನ್ಸ್ ಧರಿಸಲು ಯಾರು ಹೇಳಿದರು, ಇಜಾರ ಇರಲಿಲ್ವಾ? 217 00:24:21,169 --> 00:24:22,420 ಮರ್ರೆ ಹೇಳಿದನಾ? 218 00:24:22,879 --> 00:24:25,047 ಒಂದು ರಹಸ್ಯ ಕಾಪಾಡಬಲ್ಲೆಯಾ? ಇಲ್ಲಿಗೆ ಬಾ. 219 00:24:30,803 --> 00:24:34,015 ನಾನು ಖಾಸಗಿ ತನಿಖಾಧಿಕಾರಿ, ಕದಿಯುತ್ತಿರುವವರು ಯಾರೆಂದು ಕಂಡುಹಿಡಿಯಲು ನೇಮಿಸಲಾಗಿದೆ. 220 00:24:34,724 --> 00:24:36,183 ಕಾರ್ಪೊರೇಟ್ ಪ್ರಕಾರ ಅದು ಮರ್ರೆ. 221 00:24:36,184 --> 00:24:38,101 ಆ ಬೋಳಿಮಗ. 222 00:24:38,102 --> 00:24:39,853 ನನಗೆ ನೀನು ಸುತ್ತಲೂ ಕಣ್ಣಿಟ್ಟು ಗಮನಿಸಬೇಕು 223 00:24:39,854 --> 00:24:43,356 ಮತ್ತು ಅನುಮಾನಾಸ್ಪದವಾದ ಯಾವುದನ್ನಾದರೂ ನೇರವಾಗಿ ನನಗೆ ಸತ್ಕಾರಕೂಟದ ನಂತರ ವರದಿ ಮಾಡಬೇಕು. 224 00:24:43,357 --> 00:24:44,774 ನಿನ್ನಿಂದ ಅದು ಸಾಧ್ಯ ಅನಿಸುತ್ತಾ? 225 00:24:44,775 --> 00:24:46,401 ಅವನನ್ನು ಗಿಡುಗನಂತೆ ಗಮನಿಸುತ್ತೇನೆ. 226 00:24:46,402 --> 00:24:47,653 ನಿನ್ನನ್ನು ನಂಬಬಹುದೆಂದು ಗೊತ್ತಿತ್ತು. 227 00:24:56,037 --> 00:24:57,246 ಅಯ್ಯೋ. 228 00:25:09,926 --> 00:25:11,427 ನಿಜವಾಗಲೂ ನಂಬಲು ಆಗುತ್ತಿಲ್ಲ. 229 00:25:24,023 --> 00:25:26,733 ನೀನು ಮತ್ತು ನಿನ್ನ ತಂದೆ ಇದು ಮುಗಿಯುವವರೆಗೆ ನೆಲಮಾಳಿಗೆಯಲ್ಲಿ ಕ್ಷೇಮವಾಗಿರಿ. 230 00:25:26,734 --> 00:25:28,026 ನೀವು ನಮ್ಮ ಜೊತೆ ಇರುತ್ತೀರಾ? 231 00:25:28,027 --> 00:25:30,612 ಆಗಲ್ಲ. ಡಫಿಗೆ ಥೆರಿಸಳನ್ನು ಹುಡುಕಿ, ಆಚೆ ಕರೆದೊಯ್ಯಲು ನಾನು ನೆರವಾಗಬೇಕು. 232 00:25:30,613 --> 00:25:32,573 ಯಾರಾದರೂ ನಿನಗೆ ತೊಂದರೆ ಕೊಟ್ಟರೆ, ನನಗೆ ಕರೆ ಮಾಡು. 233 00:25:33,115 --> 00:25:34,449 ರಸ್ಟಿಗಾಗಿ ಇಲ್ಲಿ ಕಾಯಿರಿ. 234 00:25:34,450 --> 00:25:37,369 ನನಗೆ ನೀನು ಅವನನ್ನು ಖರೀದಿದಾರರೊಡನೆ ಕಣಜಕ್ಕೆ ಕರೆದೊಯ್ಯಬೇಕು. 235 00:25:37,370 --> 00:25:39,121 ನಾನು ಈ ಒಪ್ಪಂದ ಮಾಡಿ ಮುಗಿಸುತ್ತೇನೆ. 236 00:25:42,416 --> 00:25:43,918 ಹೊರಹೋಗಲು ಬೇರೆ ದಾರಿ ಗೊತ್ತಾ? 237 00:26:26,877 --> 00:26:29,004 ನೀನು ನನ್ನ ತಂಟೆಗೆ ಬರಬಾರದಿತ್ತು. 238 00:26:29,005 --> 00:26:31,590 ನಾನು ನಿನಗಿಂತ ಹೆಚ್ಚು ಗಾತ್ರದವನು. ನಾನು ನಿನಗಿಂತ ಬಲಶಾಲಿ. 239 00:26:38,973 --> 00:26:40,891 ನೀನು ಹೆಚ್ಚು ಗಾತ್ರದವನೂ ಬಲಶಾಲಿಯೂ ಇರಬಹುದು, 240 00:26:41,851 --> 00:26:42,852 ಆದರೆ ನಾನು ಬಹಳ ಬುದ್ಧಿವಂತ. 241 00:26:43,644 --> 00:26:46,397 ನಾನು ಬೆಲ್ಟ್‌ನಿಂದ ಗುಂಡನ್ನು ಹೊರತೆಗೆದು, ಬಂದೂಕಿನ ಕೊಳವೆ ಮುಚ್ಚಿದೆ. 242 00:27:44,705 --> 00:27:45,705 ಥೆರಿಸ? 243 00:27:45,706 --> 00:27:48,166 ಥೆರಿಸ, ಚಿನ್ನ, ಚಿನ್ನ, ನನ್ನ ಮಾತು ಕೇಳಿಸುತ್ತಿದೆಯಾ? 244 00:27:48,167 --> 00:27:50,251 ನಾನು ಸೂಸನ್ ಡಫಿ, ಸರಿನಾ? 245 00:27:50,252 --> 00:27:52,504 ಬಾ. ನಾವು ನಿನ್ನನ್ನು ಇಲ್ಲಿಂದ ಹೊರಗೆ ಕರೆದೊಯ್ಯಬೇಕು. 246 00:27:52,505 --> 00:27:53,506 ಬಾ. 247 00:27:54,131 --> 00:27:55,215 ಹೇ. 248 00:27:55,216 --> 00:27:57,175 ನೀನು ಸರಿಹೋಗುತ್ತೀಯ, ಆಯ್ತಾ? 249 00:27:57,176 --> 00:27:59,302 ಇಲ್ಲ, ಇಲ್ಲ, ಇಲ್ಲ! ಎಚ್ಚರವಾಗಿರು, ಎದ್ದೇಳು. 250 00:27:59,303 --> 00:28:00,388 ಥೆರಿಸ. 251 00:28:01,555 --> 00:28:02,932 ನೀವಿದನ್ನು ತುಂಬಾ ಸುಲಭ ಮಾಡುತ್ತೀರಿ. 252 00:28:04,558 --> 00:28:06,851 ವಲೀದ್, ಹೀಗೆ ಮಾಡುತ್ತಿರುವುದಕ್ಕೆ ಕ್ಷಮಿಸಿ, 253 00:28:06,852 --> 00:28:08,686 ಆದರೆ ನನಗೆ ಈ ರಾತ್ರಿ ಒಂದು ಭೇಟಿಯು ನಿಗದಿಯಾಗಿದೆ, 254 00:28:08,687 --> 00:28:10,564 ಹಾಗಾಗಿ ನಾವು ಈಗಲೇ ಒಪ್ಪಂದ ಮಾಡಿಕೊಳ್ಳಬೇಕು. 255 00:28:10,940 --> 00:28:14,609 ರಸ್ಟಿ ನಿಮ್ಮನ್ನು ಕಣಜಕ್ಕೆ ಕರೆದೊಯ್ಯುವನು, ಅಲ್ಲಿ ನೀವು ಸರಕುಗಳನ್ನು ಪರಿಶೀಲಿಸಬಹುದು, 256 00:28:14,610 --> 00:28:16,319 ನಂತರ ನಾವು ಅದನ್ನು ವಾಹನಕ್ಕೆ ತುಂಬಬಹುದು, 257 00:28:16,320 --> 00:28:20,324 ಇತ್ತ ನೀವು ಮತ್ತು ನಾಸರ್ ಇಷ್ಟಪಡುವವರೆಗೆ ಸತ್ಕಾರಕೂಟವನ್ನು ಆನಂದಿಸುತ್ತಿರಬಹುದು. 258 00:28:22,660 --> 00:28:24,119 ಅಂದಹಾಗೆ, ನಾಸರ್ ಎಲ್ಲಿದ್ದಾನೆ? 259 00:28:24,120 --> 00:28:25,454 ಅವನು ಮೇಲಿನ ಅಂತಸ್ತಿಗೆ ಹೋದ, 260 00:28:26,080 --> 00:28:27,873 ನೀವು ಕೊಟ್ಟ ಉಡುಗೊರೆಯನ್ನು ಆನಂದಿಸಲು. 261 00:28:28,290 --> 00:28:29,125 ಒಳ್ಳೆಯದು. 262 00:28:29,750 --> 00:28:30,584 ದಯಮಾಡಿ. 263 00:28:33,003 --> 00:28:34,379 ಸರಿ. 264 00:28:34,380 --> 00:28:35,922 ಥೆರಿಸ, ಎದ್ದೇಳು. 265 00:28:35,923 --> 00:28:37,632 ಎದ್ದೇಳು. ನನಗೆ ನೀನು ನಡೆಯಬೇಕು. 266 00:28:37,633 --> 00:28:38,717 ನನಗೋಸ್ಕರ ನಡೆಯಬಲ್ಲೆಯಾ? 267 00:28:44,306 --> 00:28:46,474 ಬಾಗಿಲನ್ನು ಕಾಯಿ. ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಿ. 268 00:28:46,475 --> 00:28:47,476 ಸರಿ, ಸರ್. 269 00:28:56,110 --> 00:28:57,360 ನೋಡು ನಿನ್ನನ್ನು. 270 00:28:57,361 --> 00:28:59,530 ನಿನ್ನ ಫೋಟೋದಲ್ಲಿರುವುದಕ್ಕಿಂತಲೂ ಹೆಚ್ಚು ಅಂದವಾಗಿದ್ದೀಯ. 271 00:29:01,866 --> 00:29:03,451 ಸ್ವಲ್ಪ ಮಜಾ ಮಾಡಲು ತಯಾರಾ? 272 00:29:07,079 --> 00:29:08,372 ಪ್ರತಿಕ್ರಿಯೆ ಇಲ್ಲವೇ? 273 00:29:10,332 --> 00:29:13,335 ಮೆಕ್ಕೇಬ್ ನಿನಗೆ ಔಷಧಿ ನೀಡಿ ಪೂರಾ ನಿಶ್ಚೇತನಗೊಳಿಸಿಲ್ಲವೆಂದು ಭಾವಿಸುತ್ತೇನೆ. 274 00:29:15,796 --> 00:29:18,214 ಮಹಿಳೆಯಲ್ಲಿ ಸ್ವಲ್ಪ ಪ್ರತಿರೋಧದ ಗುಣವಿರುವುದು ನನಗೆ ಇಷ್ಟ. 275 00:29:18,215 --> 00:29:19,757 ಹಾಗಾದರೆ ನಾನು ನಿನಗೆ ಇಷ್ಟವಾಗುತ್ತೇನೆ. 276 00:29:19,758 --> 00:29:21,594 ಅವನ್ನು ಅಲ್ಲಿಯೇ ಬಿಡು. 277 00:29:22,219 --> 00:29:25,763 ನೀನು ಮಾಡಲು ಹೊರಟಿದ್ದ ಕೃತ್ಯಕ್ಕಾಗಿ ನಿನ್ನ ಶಿಶ್ನಕ್ಕೆ ನಾನು ಗುಂಡು ಹೊಡೆಯಬೇಕು. 278 00:29:25,764 --> 00:29:27,223 ಆದರೆ ನೀನು ಹಾಗೆ ಮಾಡಲ್ಲ, ಅಲ್ವಾ? 279 00:29:27,224 --> 00:29:29,684 ಏಕೆಂದರೆ ನನ್ನ ಅಂಗರಕ್ಷಕ ಬಾಗಿಲಿನ ಹೊರಗಿದ್ದಾನೆ. 280 00:29:29,685 --> 00:29:31,644 ನೀನು ಗುಂಡು ಹಾರಿಸಿದರೆ, ಆತ ಬಂದು ನಿನಗೆ ಗುಂಡಿಕ್ಕುತ್ತಾನೆ. 281 00:29:31,645 --> 00:29:33,313 ನಾನು ಅವನಿಗೆ ಮೊದಲು ಗುಂಡಿಟ್ಟರೆ ಹಾಗಾಗಲ್ಲ. 282 00:29:33,314 --> 00:29:34,397 ನೀನು ಹಾಗೆ ಮಾಡಬಹುದೇನೋ. 283 00:29:34,398 --> 00:29:36,817 ಆದರೆ ಬಹುಶಃ ಆತ ಇವಳನ್ನು ಗುಂಡಿನ ಚಕಮಕಿಯಲ್ಲಿ ಕೊಲ್ಲಬಹುದು. 284 00:29:37,776 --> 00:29:40,987 ಅಥವಾ ಕೆಳಗಿರುವ ನನ್ನ ಅಂಗರಕ್ಷಕರು ಅದನ್ನು ಕೇಳಿಸಿಕೊಂಡು ಬಂದು ನಿನ್ನನ್ನು ಕೊಲ್ಲಬಹುದು. 285 00:29:40,988 --> 00:29:42,614 ಅಥವಾ ಮೆಕ್ಕೇಬ್‌ ಕಡೆಯವರು ಕೊಲ್ಲುತ್ತಾರೆ. 286 00:29:42,615 --> 00:29:44,574 ಯಾವುದೇ ರೀತಿಯಲ್ಲಾದರೂ, ನೀನು ಆ ಟ್ರಿಗರ್ ಎಳೆದರೆ, 287 00:29:44,575 --> 00:29:47,244 ನಿಮ್ಮಿಬ್ಬರಲ್ಲಿ ಯಾರೂ ಜೀವಂತವಾಗಿ ಇಲ್ಲಿಂದ ಹೊರಗೆ ಹೋಗುವುದಿಲ್ಲ. 288 00:30:36,460 --> 00:30:39,462 ...ಸಾಕಷ್ಟು ಮದ್ದುಗುಂಡುಗಳು. ನಿಮಗೆ ಬಹಳ ಸಂತೋಷವಾಗುವುದು ನಿಶ್ಚಿತ. 289 00:30:39,463 --> 00:30:40,673 ನೀವು ಹೇಳುವಂತೆಯೇ ಆಗಲಿ. 290 00:30:42,049 --> 00:30:42,883 ಓಹ್, ಛೇ. 291 00:30:48,639 --> 00:30:49,765 ಬಿಲಾಲ್! 292 00:30:58,107 --> 00:31:00,024 ಥೆರಿಸ? ಹೇ, ಹುಷಾರಾಗಿದ್ದೀಯಾ? 293 00:31:00,025 --> 00:31:02,235 ನನ್ನ ಕಡೆ ನೋಡು. ನೀನು ಸರಿಯಾಗುತ್ತೀಯ. ಹೋಗೋಣ. 294 00:31:02,236 --> 00:31:03,903 ಬಾ. ಎದ್ದೇಳು. 295 00:31:03,904 --> 00:31:05,780 ನೀನು ಚೆನ್ನಾಗಿದ್ದೀಯ. ಬಾ. 296 00:31:05,781 --> 00:31:06,865 ಹೋಗೋಣ. 297 00:31:07,658 --> 00:31:09,577 ಬಾ. ನೀನು ಸರಿಹೋಗುತ್ತೀಯ. 298 00:31:22,423 --> 00:31:23,424 ಹೊರಗೆ ಹೋಗಿ! 299 00:31:41,483 --> 00:31:43,360 ಏನು ನಡೆಯುತ್ತಿದೆ? ಎಲ್ಲರೂ ಎಲ್ಲಿದ್ದಾರೆ? 300 00:31:52,411 --> 00:31:54,455 ಪಕ್ಕಕ್ಕೆ ಸರಿಯಿರಿ! ಮುಂದಿನ ಬಾಗಿಲಿಗೆ ಹೋಗಿ! 301 00:32:01,629 --> 00:32:02,713 ರಿಚರ್ಡ್. 302 00:32:27,571 --> 00:32:29,239 ಅವರನ್ನು ತಡೆಹಿಡಿಯುತ್ತೇನೆ. ನೀನು ಇಲ್ಲಿಂದ ಹೊರಡು. 303 00:32:34,828 --> 00:32:36,038 ಹಲೋ, ರಿಚ್ಚೀ. 304 00:32:38,248 --> 00:32:40,541 ಈಗ, ನೀನು ನನಗೆ ಒತ್ತೆಯಾಳಾಗಿ ಹೆಚ್ಚು ಉಪಯುಕ್ತನಾಗಿದ್ದೀಯ, 305 00:32:40,542 --> 00:32:44,213 ಆದರೆ ನೀನು ಓಡಿದರೆ, ನಿನ್ನ ತಲೆಗೆ ಗುಂಡಿಕ್ಕುತ್ತೇನೆ. ಅರ್ಥವಾಯಿತಾ? 306 00:32:56,058 --> 00:32:57,183 ಅಲ್ಲೇ ಇರು. 307 00:32:57,184 --> 00:32:58,852 ನಾನು ಹೆಚ್ಚಿನ ಶಸ್ತ್ರಗಳನ್ನು ತರುವವರೆಗೆ. 308 00:33:08,195 --> 00:33:09,321 ನನ್ನ ಮಗನನ್ನು ಹೋಗಲು ಬಿಡು. 309 00:33:12,825 --> 00:33:13,951 ಯೂಝಿ ಶಸ್ತ್ರವನ್ನು ಕೆಳಗೆ ಎಸೆ! 310 00:33:15,119 --> 00:33:16,537 ನಾನು ನಿನ್ನನ್ನು ಶೂಟ್ ಮಾಡಲ್ಲ ಅನಿಸುತ್ತಾ? 311 00:33:17,371 --> 00:33:20,374 ವರ್ಷಗಳಿಂದ ನಿನ್ನನ್ನು ಹೇಗೆ ಕೊಲ್ಲುತ್ತೇನೆ ಎಂಬುದರ ಬಗ್ಗೆಯೇ ಯೋಚಿಸುತ್ತಿದ್ದೇನೆ. 312 00:33:21,417 --> 00:33:24,795 ನನ್ನ ಮಗನನ್ನು ನೋಯಿಸಿದ್ದಕ್ಕೆ ನಾನು ನಿನಗೆ ಹೇಗೆ ಶಿಕ್ಷೆ ಕೊಡಿಸಲಿ ಎಂದು. 313 00:33:25,796 --> 00:33:28,757 ನನ್ನ ಮಗನನ್ನು ಮುಟ್ಟಲು ನಿನಗೆ ಎಷ್ಟು ಧೈರ್ಯ! 314 00:33:35,556 --> 00:33:38,225 ರಾಯ್ ರೋಜರ್ಸ್ 315 00:33:40,936 --> 00:33:42,271 ರಿಚರ್ಡ್, ನನ್ನ ಹತ್ತಿರಕ್ಕೆ ಬಾ. 316 00:33:42,896 --> 00:33:43,896 ಚಿಂತಿಸಬೇಡ. 317 00:33:43,897 --> 00:33:46,442 ಅವನು ಅದಕ್ಕಾಗಿ ಅಲುಗಾಡಿದರೆ, ಸಾಯುತ್ತಾನೆ. 318 00:34:06,420 --> 00:34:07,670 ಕೆಳಗೆ ಬಗ್ಗು. 319 00:34:07,671 --> 00:34:11,550 ನನ್ನನ್ನು ಎದುರಿಸಲು ಸಾಧ್ಯವೆಂದು ನಿನಗೆ ಅನಿಸುತ್ತಾ, ಮುಠ್ಠಾಳ? 320 00:34:13,761 --> 00:34:14,970 ಸಾಯಿ, ಹಾಳಾದವನೇ! 321 00:34:22,394 --> 00:34:23,479 ರಿಚರ್ಡ್. 322 00:34:25,689 --> 00:34:26,648 ಅಪ್ಪಾ? 323 00:34:30,152 --> 00:34:31,111 ಅಪ್ಪಾ? 324 00:34:31,779 --> 00:34:33,030 ದಯವಿಟ್ಟು. 325 00:34:36,366 --> 00:34:37,493 ನಾನು ನಿನಗೆ ಹೇಳಿದೆ... 326 00:34:38,577 --> 00:34:40,370 ಅವರು ನಿನಗೆ ಮತ್ತೆ ತೊಂದರೆ ಕೊಡಲು ನಾನು ಬಿಡಲ್ಲ ಅಂತ. 327 00:35:41,974 --> 00:35:44,267 ಮಿಸ್ಟರ್ ಟಾಕ್ಟರೋವ್, ನಾನು ನಿಮ್ಮನ್ನೇ ನೋಡಲು ಹೊರಟಿದ್ದೆ. 328 00:35:44,268 --> 00:35:47,479 ನೀನು ತಡಮಾಡಿದ್ದೀಯ, ಮತ್ತು ನಾನು ಕಾಯುತ್ತಾ ಬೇಸತ್ತಿದ್ದೇನೆ. 329 00:35:49,648 --> 00:35:50,774 ನನ್ನ ಹಣ ಎಲ್ಲಿ? 330 00:35:54,152 --> 00:35:55,112 ಇವನನ್ನು ಎಳೆದುಕೊಂಡು ಬನ್ನಿ. 331 00:35:55,529 --> 00:35:56,779 ಇಲ್ಲ, ನನ್ನ ಬಳಿ ಹಣವಿದೆ! 332 00:35:56,780 --> 00:35:58,073 ಕ್ಷಮಿಸಿ, ಗೆಳೆಯರೇ, ಅವನು ನನ್ನ ಬೇಟೆ. 333 00:36:00,659 --> 00:36:02,744 ಈ ದೈತ್ಯ ಯಾರು? 334 00:36:03,203 --> 00:36:05,705 ನಿಮ್ಮ ಜೊತೆ ಯಾವುದೇ ಸಮಸ್ಯೆ ಇಟ್ಟುಕೊಂಡಿರದವನು... 335 00:36:05,706 --> 00:36:07,540 ಮತ್ತು ನನ್ನ ಹೆಸರು ರೀಚರ್. 336 00:36:07,541 --> 00:36:09,250 ಸರಿ, ರೀಚರ್. 337 00:36:09,251 --> 00:36:11,711 ನನಗೆ ಈ ವ್ಯಕ್ತಿಯೊಂದಿಗೆ ವ್ಯವಹಾರ ಬಾಕಿ ಇದೆ. 338 00:36:11,712 --> 00:36:12,670 ನನಗೂ ಅಷ್ಟೇ. 339 00:36:12,671 --> 00:36:14,505 ನಿನ್ನ ಸುತ್ತಲೂ ನೋಡು, ರೀಚರ್. 340 00:36:14,506 --> 00:36:16,215 ಬಹಳಷ್ಟು ಗನ್‌ಗಳಿವೆ, 341 00:36:16,216 --> 00:36:17,508 ಮತ್ತು ನೀನು ಒಬ್ಬನೇ ಇದ್ದೀಯ. 342 00:36:17,509 --> 00:36:18,802 ಆದರೆ ನಾನು ಇಲ್ಲಿದ್ದೇನೆ. 343 00:36:22,014 --> 00:36:24,557 ಸರಿ, ಹಾಗಾದರೆ ನಿಮ್ಮ ಬಳಿ ಎರಡು ಗನ್‌ಗಳಿವೆ. 344 00:36:24,558 --> 00:36:25,642 ಮೂರು. 345 00:36:27,644 --> 00:36:28,561 ಥೆರಿಸ ಎಲ್ಲಿ? 346 00:36:28,562 --> 00:36:30,063 ಸುರಕ್ಷಿತವಾಗಿದ್ದಾಳೆ. 347 00:36:32,232 --> 00:36:33,274 ನೀನೂ ಸಹ ಇಲ್ಲಿಂದ ಹೋಗಬೇಕು. 348 00:36:33,275 --> 00:36:36,612 ನೀನು ಅವಳನ್ನಾಗಲೀ ನನ್ನನ್ನಾಗಲೀ ಕೈಬಿಡಲಿಲ್ಲ. ಖಚಿತವಾಗಿ ನಾನು ನಿನ್ನನ್ನು ಬಿಟ್ಟು ಹೋಗಲ್ಲ. 349 00:36:37,112 --> 00:36:38,905 ಹಾಗಾದರೆ ನೀವು ವ್ಯರ್ಥವಾಗಿ ಸಾಯುತ್ತೀರಿ. 350 00:36:38,906 --> 00:36:41,616 ನೋಡಿ, ನಾನು ಕೆಲವರಿಗೆ ಉತ್ತರದಾಯಿ ಆಗಬೇಕಾಗಿದೆ. 351 00:36:41,617 --> 00:36:44,869 ಹಾಗಾಗಿ, ಎಷ್ಟೇ ವೆಚ್ಚವಾದರೂ ಪರವಾಗಿಲ್ಲ, 352 00:36:44,870 --> 00:36:47,330 ನಾನು ಈ ವ್ಯಕ್ತಿಯನ್ನು ನಿಮಗೆ ಕೊಡಲಾಗದು. 353 00:36:47,331 --> 00:36:49,166 ಒಂದು ವೇಳೆ ಅವನನ್ನು ನಿಮ್ಮಿಂದ ಖರೀದಿಸಿದರೆ? 354 00:36:50,584 --> 00:36:52,544 ನನ್ನ ಬಳಿ ಇದೆ ಅಂತ ನಾನು ಹೇಳಿದೆ. ಅವರು ಕದ್ದುಬಿಟ್ಟರು! 355 00:36:54,087 --> 00:36:54,922 ಯುವತಿ, 356 00:36:56,506 --> 00:36:57,840 ನನ್ನ ಹಣವನ್ನು ನನಗೆ ಕೊಡು. 357 00:36:57,841 --> 00:36:59,676 ಈ ಹಣ, ಅವನಿಗೆ ಬದಲಿಗೆ. 358 00:37:02,596 --> 00:37:04,096 ನಾವು ಎರಡನ್ನೂ ತೆಗೆದುಕೊಂಡರೆ? 359 00:37:04,097 --> 00:37:05,933 ಆಗ ನಿಮಗೆ ಎರಡೂ ಸಿಗುವುದಿಲ್ಲ. 360 00:37:20,781 --> 00:37:23,240 ನಾವು ಹಣಕ್ಕಾಗಿ ಬಂದೆವು. ಹಣ ತೆಗೆದುಕೊಂಡು ಹೊರಡುತ್ತೇವೆ. 361 00:37:23,241 --> 00:37:26,327 ನಾನು ಅದನ್ನು ನನ್ನ ಸ್ನೇಹಿತರಿಗೆ ಮರಳಿ ತಲುಪಿಸಿದರೆ ಸಾಕು, 362 00:37:26,328 --> 00:37:28,580 ಈ ವ್ಯಕ್ತಿಗೆ ಏನಾಗುತ್ತದೆಯೋ... 363 00:37:29,331 --> 00:37:30,874 ಆ ಬಗ್ಗೆ ನನಗೆ ಚಿಂತೆಯಿಲ್ಲ. 364 00:37:40,884 --> 00:37:42,010 ಶುಭ ಸಂಜೆ. 365 00:37:42,636 --> 00:37:43,679 ಶುಭ ಸಂಜೆ. 366 00:38:08,620 --> 00:38:11,039 ಈಗ ಆ ಪಿನ್ ಅನ್ನು ಮತ್ತೆ ಆ ಗ್ರೆನೇಡ್ ಒಳಗೆ ಹಾಕಲು ಇಷ್ಟಪಡುತ್ತೀಯಾ? 367 00:38:12,249 --> 00:38:14,543 ಸ್ಫೋಟಕಗಳನ್ನು ಹೊರತೆಗೆದು ನಿಷ್ಕ್ರಿಯಗೊಳಿಸಲಾಗಿದೆ. 368 00:38:15,669 --> 00:38:17,504 ಬೆಕ್ ಅದನ್ನು ಹಾಳೆತೂಕವಾಗಿ ಬಳಸುತ್ತಿದ್ದ. 369 00:38:19,006 --> 00:38:21,800 ಬೆಕ್ ಬಗ್ಗೆ ಹೇಳುವುದಾದರೆ, ಆ ಹುಡುಗ ತುಂಬಾ ಆಘಾತಕ್ಕೊಳಗಾಗಿದ್ದಾನೆ. 370 00:38:22,217 --> 00:38:23,510 ನಾನು ಅವನನ್ನು ಸಮಾಧಾನಪಡಿಸುತ್ತೇನೆ. 371 00:38:25,137 --> 00:38:27,304 ನಾನು ಅವಳಿಗೆ ಆಂಬ್ಯುಲೆನ್ಸ್ ಕರೆಸುತ್ತೇನೆ. 372 00:38:27,305 --> 00:38:29,307 ಇಲ್ಲಿಗೆ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ. 373 00:38:30,809 --> 00:38:32,185 ಹಾಗಾಗಿ, ನಿನಗೆ ಸ್ವಲ್ಪ ಸಮಯವಿದೆ. 374 00:38:42,404 --> 00:38:44,031 ನೀವು ಮಾಡಬೇಕಾದುದನ್ನು ಮಾಡಿ, ಬಾಸ್. 375 00:38:47,534 --> 00:38:50,912 ಕೇಳು, ನಿನ್ನ ಸಮಸ್ಯೆ ಏನೇ ಇರಲಿ, ನಾವು ಅದನ್ನು ಪರಿಹರಿಸಬಹುದು. 376 00:38:52,039 --> 00:38:54,041 ನಿನಗೆ ನಿಜವಾಗಲೂ ನನ್ನ ನೆನಪಿಲ್ಲ, ಅಲ್ವಾ? 377 00:38:55,042 --> 00:38:56,043 ಇಲ್ಲ. 378 00:38:56,835 --> 00:38:58,919 - ನೀನು ಯಾವನೋ ನಾಯಿ? - ಮುಖ್ಯವಲ್ಲ. 379 00:38:58,920 --> 00:39:00,505 ಮುಖ್ಯವಾದುದು ಏನೆಂದರೆ, 380 00:39:01,339 --> 00:39:03,050 ಅವಳ ಹೆಸರು ಡಾಮಿನಿಕ್. 381 00:39:15,312 --> 00:39:16,521 ಈಗ ನಿನಗೆ ನೆನಪಾಯಿತು. 382 00:39:39,586 --> 00:39:41,088 ಅದನ್ನು ಧ್ವಂಸಮಾಡಲು ಹೋಗಲಿದ್ದೀಯಾ? 383 00:39:43,673 --> 00:39:44,800 ನಿಜ ಹೇಳಬೇಕಾ? 384 00:39:46,426 --> 00:39:47,928 ಏನು ಮಾಡಬೇಕೆಂದು ನನಗೆ ಗೊತ್ತಾಗುತ್ತಿಲ್ಲ. 385 00:39:48,678 --> 00:39:49,638 ಹೌದು, ನಿನಗೆ ಗೊತ್ತು. 386 00:39:52,474 --> 00:39:53,891 ಪೆಟ್ರೋಲ್ ತುಂಬಿದೆ, ಹೋಗಲು ಸಿದ್ಧವಾಗಿದೆ. 387 00:39:53,892 --> 00:39:56,894 ಫೆಡ್‌ಗಳು ನಿಮ್ಮ ತಂದೆಯ ಬ್ಯಾಂಕ್ ಖಾತೆಯನ್ನು ಕೆಲವೇ ಗಂಟೆಗಳಲ್ಲಿ ನಿರ್ಬಂಧಿಸುತ್ತಾರೆ, 388 00:39:56,895 --> 00:39:58,897 ಹಾಗಾಗಿ ಮನೆಯಲ್ಲಿ ಯಾವುದೇ ಹಣವಿದ್ದರೂ ತಗೊಂಡು ಹೋಗು. 389 00:39:59,439 --> 00:40:01,273 ನೀನು ಹೇಳಿದ್ದೆ, ಒಂದು ದಿನ ಕಾರಿನ ಕೀಲಿ ತಗೊಂಡು, 390 00:40:01,274 --> 00:40:03,652 ಆ ಗೇಟನ್ನು ಗುದ್ದಿಕೊಂಡು ಹೋಗಿ, ಕಣ್ಮರೆಯಾಗುವ ಕನಸಿದೆ ಎಂದು. 391 00:40:04,611 --> 00:40:05,737 ಇಂದು ಆ ದಿನ ಬಂದಿದೆ. 392 00:40:08,198 --> 00:40:09,282 ನೀನು ಹೇಳಿದ್ದು ಸರಿ. 393 00:40:11,368 --> 00:40:12,577 ನಮ್ಮಪ್ಪನ ಬಗ್ಗೆ. 394 00:40:13,328 --> 00:40:14,996 ಆತ ನನಗಾಗಿ ತನ್ನ ಕೈಲಾದಷ್ಟು ಪ್ರಯತ್ನಪಟ್ಟರು. 395 00:40:15,914 --> 00:40:19,251 ಆತ ಸಾಯುವ ಮುನ್ನ ಅವರಲ್ಲಿರುವ ಒಳ್ಳೆಯದನ್ನು ನೋಡಲು ಸಾಧ್ಯವಾಯಿತೆಂದು ನನಗೆ ಸಂತೋಷವಾಗಿದೆ. 396 00:40:22,420 --> 00:40:26,424 ಅವರು ಬದುಕಿದ್ದಾಗ ಅದನ್ನು ಇನ್ನಷ್ಟು ನೋಡಲು ಸಾಧ್ಯವಾಗಿದ್ದರೆ ಚೆನ್ನಾಗಿತ್ತೆಂದು ಆಶಿಸುವೆ. 397 00:40:28,218 --> 00:40:29,845 ನನ್ನ ಅನುಭವದಲ್ಲಿ, 398 00:40:30,595 --> 00:40:33,849 ನೀನು ಹಳೆ ನೋವಿನ ಬಗ್ಗೆ ಯೋಚಿಸುತ್ತಾ ಸಾಕಷ್ಟು ಸಮಯ ಕಳೆದರೆ... 399 00:40:35,559 --> 00:40:36,560 ಅದು... 400 00:40:37,394 --> 00:40:39,062 ಅದು ಬಹುಶಃ ಒಳ್ಳೆಯದಲ್ಲ. 401 00:40:40,063 --> 00:40:41,731 ಹೆಚ್ಚಿನವರು ಅದನ್ನು ಸರಿಯಾಗಿ ನಿಭಾಯಿಸುವುದಿಲ್ಲ. 402 00:40:44,568 --> 00:40:45,735 ನಿನ್ನ ಬಗ್ಗೆ ಕಾಳಜಿ ವಹಿಸು. 403 00:40:46,987 --> 00:40:48,113 ನಿಮ್ಮ ಅಭಿಪ್ರಾಯವೇನು? 404 00:40:49,906 --> 00:40:52,909 ಹಿಂದೆ ನಡೆದ ನಿಮ್ಮ ಭೀಕರ ವಿಷಯಗಳನ್ನು ಮರೆಯಲು ಸಾಧ್ಯವಾಗದಿದ್ದಾಗ ಏನು ಮಾಡುವಿರಿ? 405 00:40:54,452 --> 00:40:56,163 ನಾನು ಆ ಭೀಕರ ವಿಷಯವನ್ನು ಹುಡುಕುತ್ತೇನೆ, 406 00:40:56,997 --> 00:40:58,123 ಮತ್ತು ಅದನ್ನು ತೊಡೆದುಹಾಕುತ್ತೇನೆ. 407 00:41:11,761 --> 00:41:12,804 ವಿಲ್ಲನುಏವ. 408 00:41:13,263 --> 00:41:14,222 ಹೇ. 409 00:41:14,598 --> 00:41:16,432 - ಕರ್ತವ್ಯದಿಂದ ನಿವೃತ್ತರಾಗಲು ಸಿದ್ಧನಾ? - ಹೌದು. 410 00:41:16,433 --> 00:41:19,393 ಮೌರೀನ್ ಜೊತೆ ಪ್ರತಿದಿನ ಒಂದು ಹತ್ತು-ಇಪ್ಪತ್ತು ವರ್ಷ ನಾನು ಬದುಕಲು ಸಾಧ್ಯವಾದರೆ... 411 00:41:19,394 --> 00:41:21,312 ನಾನು ಆ ಬಗ್ಗೆ ಚಿಂತಿಸುವುದಿಲ್ಲ. 412 00:41:21,313 --> 00:41:23,732 ನಿಮ್ಮ ಈ ದೇಹದ ಸ್ಥಿತಿಯಲ್ಲಿ, ಹತ್ತು-ಇಪ್ಪತ್ತು ವರ್ಷ ಬದುಕಲ್ಲ. 413 00:41:24,733 --> 00:41:26,817 ನಾನು ನಿನ್ನ ವಯಸ್ಸಿನಲ್ಲಿದ್ದಾಗ, ನಿನ್ನನ್ನ ಸೋಲಿಸಿರುತ್ತಿದ್ದೆ. 414 00:41:26,818 --> 00:41:27,986 ಇಲ್ಲ, ನಿಮಗೆ ಆಗುತ್ತಿರಲಿಲ್ಲ. 415 00:41:28,403 --> 00:41:29,487 ಇಲ್ಲ, ನನಗೆ ಆಗುತ್ತಿರಲಿಲ್ಲ. 416 00:41:31,239 --> 00:41:32,824 ನಿನ್ನ ಬಗ್ಗೆ ಕಾಳಜಿ ವಹಿಸು, ರೀಚರ್. 417 00:41:33,450 --> 00:41:34,451 ನೀವೂ ಕೂಡ. 418 00:41:40,081 --> 00:41:41,540 ಎಟಿಎಫ್‌ನವರ ಜೊತೆ ಸಭೆ ಹೇಗೆ ನಡೆಯಿತು? 419 00:41:41,541 --> 00:41:43,459 ಎಲ್ಲಾ ವಿಷಯಗಳನ್ನು ಪರಿಗಣಿಸಲಾಯಿತು, ಚೆನ್ನಾಗಿ ನಡೆಯಿತು. 420 00:41:43,460 --> 00:41:44,711 ಮತ್ತು ಡಿ ಈ ಎ? 421 00:41:46,755 --> 00:41:48,173 ನಾನು ಕೆಲಸ ಬಿಡುವ ಸಮಯ ಬಂದಿದೆ. 422 00:41:49,549 --> 00:41:50,592 ಕೇಳಿ ಬೇಜಾರಾಯಿತು. 423 00:41:54,137 --> 00:41:56,473 ಇಷ್ಟೆಲ್ಲ ಆದಮೇಲೆ, ನಾನು ಹೊರಡಲು ಸಿದ್ಧ. 424 00:41:58,266 --> 00:42:01,018 ನೀನು ಕೆಲಸ ಹುಡುಕುತ್ತಿದ್ದರೆ, ನನಗೆ ಕೆಲವು ಖಾಸಗಿ ತನಿಖಾಧಿಕಾರಿಗಳು ಗೊತ್ತು. 425 00:42:01,019 --> 00:42:02,895 ನಿನಗಾಗಿ ಒಳ್ಳೆಯ ಶಿಫಾರಸ್ಸು ಮಾಡಬಲ್ಲೆ. 426 00:42:02,896 --> 00:42:04,271 ನಾನು ಅದನ್ನು ಗೌರವಿಸುತ್ತೇನೆ. 427 00:42:04,272 --> 00:42:06,899 ಆದರೆ ಸದ್ಯಕ್ಕೆ, ನಾನು ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳುತ್ತೇನೆ. 428 00:42:06,900 --> 00:42:10,445 ಖಾಸಗಿ ತನಿಖಾಧಿಕಾರಿಗಳ ಬಗ್ಗೆ ಹೇಳುವುದಾದರೆ, ನೀನು ಮತ್ತು ನೀಲಿ ಈ ಎಲ್ಲದಕ್ಕೂ ಹೊಣೆಯಲ್ಲ. 429 00:42:11,780 --> 00:42:13,239 ನೀನು ಅವರಿಗೆ ಏನು ಹೇಳಿದೆ? 430 00:42:13,240 --> 00:42:15,242 ಸತ್ಯ, ಒಟ್ಟಾರೆಯಾಗಿ. 431 00:42:15,867 --> 00:42:18,577 ನೀನು ಮಾಜಿ ಸೇನಾ ತನಿಖಾಧಿಕಾರಿಗಳು, ನಿಮ್ಮ ಹಳೆಯ ಶಂಕಿತರಲ್ಲೊಬ್ಬನಿಗೆ 432 00:42:18,578 --> 00:42:20,871 ಸಂಬಂಧಿಸಿದ ಪ್ರಕರಣದಲ್ಲಿ ಸಲಹೆ ನೀಡುವಂತೆ ನಾನು ಕೇಳಿಕೊಂಡೆ. 433 00:42:20,872 --> 00:42:23,666 - ನಡೆದ ಗುಂಡಿನ ಚಕಮಕಿ ಸ್ವಯಂರಕ್ಷಣೆಗಾಗಿ. - ಕ್ವಿನ್‌ನ ಕಥೆ ಹೇಗೆ? 434 00:42:23,667 --> 00:42:26,211 ಅವರ ದೃಷ್ಟಿಯಲ್ಲಿ, ಅದನ್ನು ಮಾಡಿದ್ದು ರಷ್ಯನ್ನರು. 435 00:42:28,338 --> 00:42:29,339 ಧನ್ಯವಾದಗಳು. 436 00:42:30,548 --> 00:42:31,466 ನೋಡು... 437 00:42:33,260 --> 00:42:34,469 ಈ ಪ್ರಕರಣ, 438 00:42:35,095 --> 00:42:37,221 ಇದು ಸಾಕಷ್ಟು ತೀವ್ರವಾದ ವಿಷಯವಾಗಿತ್ತು. 439 00:42:37,222 --> 00:42:40,808 ಮತ್ತು ಅದು ನಿನ್ನ ಮತ್ತು ನನ್ನ ನಡುವೆ ತುಂಬಾ ತೀವ್ರವಾದ ವಿಷಯಕ್ಕೆ ಕಾರಣವಾಯಿತು. 440 00:42:40,809 --> 00:42:41,976 ಮತ್ತು ಅದು ಅದ್ಭುತವಾಗಿತ್ತು. 441 00:42:41,977 --> 00:42:44,687 ಬಹಳ ಅದ್ಭುತವಾಗಿತ್ತು, ನನಗೆ ನಿನ್ನನ್ನು ಆ ಉಗ್ರಾಣದಲ್ಲಿ ಮಲಗಿಸಿ, 442 00:42:44,688 --> 00:42:46,647 ಆ ಘಟನೆಯನ್ನು ಈಗಲೇ ಪುನಃ ಅನುಭವಿಸಲು ಮನಸ್ಸಾಗುತ್ತಿದೆ. 443 00:42:46,648 --> 00:42:48,691 ಆದರೆ ವಿಷಯವೇನೆಂದರೆ, ನಾನು ನಿಜವಾಗಲೂ 444 00:42:48,692 --> 00:42:50,734 ಜೊತೆಗೆ ಅಂಟಿಕೊಳ್ಳುವ, ಶಾಶ್ವತ ಸಂಬಂಧ ಹೊಂದುವ, 445 00:42:50,735 --> 00:42:54,948 ಸಂಸಾರಕ್ಕಾಗಿ ಹೊಸ ಮನೆಗೆ ವಸ್ತು-ಪೀಠೋಪಕರಣಗಳನ್ನು ಖರೀದಿಸಿ, ದೀಪ ಬೆಳಗಿಸುವಂತಹ ಹುಡುಗಿಯಲ್ಲ. 446 00:42:55,991 --> 00:42:58,617 ಜನರು ನನ್ನನ್ನು ವಿಚಾರಿಸದೇ ಇರುವುದು ನನಗೆ ಇಷ್ಟ, 447 00:42:58,618 --> 00:43:00,787 ಮತ್ತು ನಾನು ನನ್ನ ಕೆಲಸವನ್ನು ನಾನೇ ಮಾಡುವುದರಲ್ಲಿ ಉತ್ತಮ. 448 00:43:02,497 --> 00:43:05,708 "ಇದು ಬೇಸರದ ಸಂಗತಿ, ಏಕೆಂದರೆ, ನಾನು ಯಾರೊಂದಿಗೆ ಸಮಯ ಕಳೆದಿದ್ದರೂ, 449 00:43:05,709 --> 00:43:07,752 ನೀನು ನನಗೆ ಅಚ್ಚುಮೆಚ್ಚಿನವನಾಗಿರಬಹುದು. 450 00:43:09,546 --> 00:43:10,462 ಸರಿ. 451 00:43:10,463 --> 00:43:12,716 ಅಷ್ಟೇನಾ? "ಸರಿ"? 452 00:43:13,174 --> 00:43:14,175 ಅಂದರೆ... 453 00:43:14,676 --> 00:43:16,511 ಸಾಮಾನ್ಯವಾಗಿ ನಾನು ಹೇಳುವುದನ್ನು ನೀನು ಹೇಳಿಬಿಟ್ಟೆ. 454 00:43:18,013 --> 00:43:19,973 ನಿನಗೆ ಆ ತೊಂದರೆ ತಪ್ಪಿಸಿದ್ದಕ್ಕೆ ನನಗೆ ಸಂತೋಷವಾಯಿತು. 455 00:43:23,810 --> 00:43:28,023 ನಿಮಗೆ ಗೊತ್ತಾ, ನನ್ನ ತಾತ ನಿನ್ನನ್ನು ಹಳೆಯ ಕಾಲದವನು ಎಂದು ಕರೆದಿರುತ್ತಿದ್ದರು. 456 00:43:40,327 --> 00:43:42,078 ತೊಂದರೆಯಿಂದ ದೂರವಿರು, ರೀಚರ್. 457 00:43:58,219 --> 00:44:00,012 ಅವಳಿಗೆ ನೋವಾಗದಂತೆ ಹೇಳಲು ದಾರಿ ಸಿಕ್ಕಿತಾ? 458 00:44:00,013 --> 00:44:01,765 ಅವಳು ನನಗೆ ಆ ಅವಕಾಶ ಕೊಡಲಿಲ್ಲ. 459 00:44:02,932 --> 00:44:04,058 ಬೇಗಲ್ ಬೇಕಾ? 460 00:44:04,059 --> 00:44:04,976 ತಿನ್ನಲು ಆಗಲ್ಲ. 461 00:44:05,518 --> 00:44:06,519 ಹಲ್ಲುಗಳು ಅಲುಗಾಡುತ್ತಿವೆ. 462 00:44:07,771 --> 00:44:09,481 ಪೌಲಿ ನಿನಗೆ ಚೆನ್ನಾಗಿ ಹೊಡೆದನಾ, ಹಾಂ? 463 00:44:10,357 --> 00:44:11,733 ನಾನು ಅವನಿಗೆ ಹೊಡೆದಷ್ಟು ಏನಿಲ್ಲ. 464 00:44:15,779 --> 00:44:16,946 ನನಗೆ ಒಂದು ಗೊತ್ತಾಯಿತು. 465 00:44:17,655 --> 00:44:18,698 ಏನದು? 466 00:44:19,324 --> 00:44:20,657 ನೀನು ಮಾಡೋದನ್ನ ಏಕೆ ಮಾಡುತ್ತೀಯ ಎಂಬುದನ್ನು. 467 00:44:20,658 --> 00:44:23,452 ಇದು ಬರೀ ನೀನು ವಿಷಯಗಳನ್ನು ಸರಿಪಡಿಸಬೇಕಾಗಿರುವುದರಿಂದ ಅಲ್ಲ, 468 00:44:23,453 --> 00:44:25,872 ಮತ್ತು ಇದು ದುರ್ಬಲ ವ್ಯಕ್ತಿಯ ಮೇಲೆ ನಿನಗಿರುವ ಕಾಳಜಿಯಿಂದಾಗಿ ಅಲ್ಲ... 469 00:44:27,123 --> 00:44:28,791 ಪ್ರಬಲ ವ್ಯಕ್ತಿಯನ್ನು ದ್ವೇಷಿಸುವುದರಿಂದಾಗಿ. 470 00:44:28,792 --> 00:44:32,127 ನಿನಗೆ ದೊಡ್ಡ, ಬಲಿಷ್ಠ, ಸೊಕ್ಕಿರುವಂತಹ ಏನೇ ಮಾಡಿದರೂ ತಪ್ಪಿಸಿಕೊಳ್ಳಬಹುದು 471 00:44:32,128 --> 00:44:34,089 ಎಂದುಕೊಳ್ಳುವವರನ್ನು ಕಂಡರೆ ಆಗುವುದಿಲ್ಲ. 472 00:44:35,632 --> 00:44:37,049 ಹಾಗಾಗಿ ಅವರು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತೀಯ. 473 00:44:37,050 --> 00:44:38,885 ಅದು ನಿನಗೆ ಈಗ ಗೊತ್ತಾಯಿತಾ? 474 00:44:39,636 --> 00:44:42,055 ಮತ್ತು ಇಷ್ಟು ದಿನ ನನ್ನ ಬಗ್ಗೆ ನಿನಗೆ ಗೊತ್ತಿತ್ತು ಅಂದುಕೊಂಡಿದ್ದೆ, ನೀಲಿ. 475 00:45:01,533 --> 00:45:05,829 {\an8}ಎಲಿಯಟ್ಸ್ ಸ್ವಾಗತ! 476 00:45:59,716 --> 00:46:00,842 ಹಲೋ, ಸುಂದರಿ. 477 00:46:06,764 --> 00:46:07,849 ಬಾ ಒಳಗೆ. 478 00:47:01,152 --> 00:47:02,570 ಮನೆಗೆ ಬರಲು ತಯಾರಾ? 479 00:47:04,280 --> 00:47:05,365 ಹಾಂ, ತಯಾರಿದ್ದೇನೆ. 480 00:47:10,411 --> 00:47:11,412 ಅಜ್ಜಿ! 481 00:47:14,207 --> 00:47:15,375 ನನ್ನ ಕಂದ! 482 00:49:43,398 --> 00:49:45,399 ಉಪ ಶೀರ್ಷಿಕೆ ಅನುವಾದ: ಹೇಮಂತ್ ಕುಮಾರ್ 483 00:49:45,400 --> 00:49:47,485 ಸೃಜನಶೀಲ ಮೇಲ್ವಿಚಾರಕರು ವಿವೇಕ್