1 00:00:12,375 --> 00:00:14,375 ಅಪ್ಪ, ಶರ್ಲಾಕ್ ನನ್ನ ಜೊತೆ ಆಡುತ್ತಿಲ್ಲ. 2 00:00:14,458 --> 00:00:16,041 ಪರವಾಗಿಲ್ಲ, ಕಂದ. 3 00:00:16,125 --> 00:00:19,000 ನಾನು ಕೆಲವು ಬಾತುಕೋಳಿ ಮೊಟ್ಟೆಗಳನ್ನು ನೋಡಿದೆ. 4 00:00:20,000 --> 00:00:21,291 ಅಲ್ಲಿ, ಮರದ ಬಳಿ. 5 00:00:21,375 --> 00:00:25,000 ಹಲೋ, ಬೀಟ್ರಿಸ್‌. ಒಂದು ಪುಟ್ಟ ಬಾತು ಮರಿ ನನಗೆ ಅಲ್ಲಿ ಕಂಡಿತು ಅನಿಸುತ್ತೆ. 6 00:00:25,083 --> 00:00:27,791 ಕೇಳು, ಕಂದ. ಮನೆಯಲ್ಲಿ ದೊಡ್ಡ ಅಪಘಾತ ಆಗಿದೆ. 7 00:00:27,875 --> 00:00:29,750 ಮನೆಗೆ ಬೆಂಕಿ ಬಿದ್ದಿದೆ. 8 00:00:29,833 --> 00:00:32,083 ಹಾಗಾಗಿ ನೀನು ಸ್ವಲ್ಪ ಸಮಯ ಮಿಸಸ್ ಟಿಲ್ಕಾಟ್‌ರ ಜೊತೆ ಇರಬೇಕಾಗುತ್ತೆ. 9 00:00:32,665 --> 00:00:34,208 ದೊಡ್ಡ ಅಪಘಾತ. 10 00:00:34,291 --> 00:00:36,500 ಮನೆಗೆ ಬೆಂಕಿ ಬಿದ್ದಿದೆ. 11 00:00:36,583 --> 00:00:38,000 ಮನೆಗೆ ಬೆಂಕಿ ಬಿದ್ದಿದೆ… 12 00:00:42,166 --> 00:00:43,541 ಮತ್ತೆ ಕೆಟ್ಟ ಕನಸು ಬಿತ್ತಾ? 13 00:00:45,791 --> 00:00:49,375 ನನಗೆ ನೆನಪಿಲ್ಲ… ಬೆಂಕಿ. 14 00:00:50,875 --> 00:00:52,250 ನನಗೆ ಯಾಕೆ ನೆನಪಿಲ್ಲ? 15 00:00:52,833 --> 00:00:55,125 ಕೋಟ್ ಹಾಕಿಕೋ, ಇಲ್ಲಾ ಚಳಿ ಹಿಡಿಯುತ್ತೆ. 16 00:00:55,958 --> 00:00:56,958 ಕಿವಿ ಮುಚ್ಚಿಕೋ. 17 00:00:58,333 --> 00:01:00,375 ಕಿವಿ ಮುಚ್ಚಿಕೊಳ್ಳಲ್ಲ. 18 00:01:04,833 --> 00:01:06,041 ಹುಟ್ಟುಹಬ್ಬದ ಶುಭಾಶಯಗಳು, ಚಿನ್ನ. 19 00:01:06,625 --> 00:01:08,208 ಅಮ್ಮ. ಅಪ್ಪ. 20 00:01:10,916 --> 00:01:13,583 ಪ್ರತಿ ವರ್ಷ ಇದೇ ಉಡುಗೊರೆ. ಎಲ್ಲಿಂದ ಬರುತ್ತವೆ? 21 00:01:14,416 --> 00:01:18,000 ನಾವು ಅವುಗಳನ್ನು ಹಾಲ್ಬೋರ್ನ್‌ನಲ್ಲಿರುವ ವಿಶೇಷ ಅಂಗಡಿಯಿಂದ ತರುತ್ತೇವೆ. 22 00:01:18,083 --> 00:01:20,541 ಹಾಗಾದರೆ ಅಂಚೆ ಅಣ್ಣ ಯಾಕೆ ಕೊಟ್ಟುಹೋದ? 23 00:01:23,458 --> 00:01:24,750 ಅದನ್ನು ಕಳಿಸಿದವರು ಯಾರು? 24 00:01:24,833 --> 00:01:26,333 ಜೆಂಕಿನ್ಸ್ ಚರ್ಮ ಪ್ರಸಾಧಕ, ಕೀಟಶಾಸ್ತ್ರಜ್ಞ 25 00:01:26,416 --> 00:01:28,666 ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ ಚಿಟ್ಟೆಯನ್ನು ಕಳಿಸುತ್ತಾರೆ. 26 00:01:28,750 --> 00:01:29,958 ಪ್ರೆಂಡರ್ಗಾಸ್ಟ್ ಇಂಪೋರ್ಟ್ಸ್ 27 00:01:30,041 --> 00:01:32,041 ಮತ್ತು ಅದಕ್ಕೆ ಪಾವತಿಸುವವರು ಈ ಕಛೇರಿಯಲ್ಲಿದ್ದಾರೆ. 28 00:01:42,083 --> 00:01:43,083 ನನಗೆ ನೀವು ಗೊತ್ತು. 29 00:01:45,583 --> 00:01:47,333 ನನಗೆ ನಿನ್ನ ಕಂಡಿತಾ ಗೊತ್ತು. 30 00:01:54,083 --> 00:01:55,166 ನನ್ನನ್ನು ಯಾಕೆ ದೂರ ಮಾಡಿದಿರಿ? 31 00:01:58,875 --> 00:02:00,166 ನಿನ್ನ ಅಮ್ಮನಿಗೆ ಹುಷಾರಿರಲಿಲ್ಲ, 32 00:02:00,250 --> 00:02:03,666 ಒಬ್ಬಂಟಿಯಾಗಿ ನಿನ್ನನ್ನು ನೋಡಿಕೊಳ್ಳಲು ನನಗೆ ಸಾಧ್ಯವಾಗುತ್ತೆ ಅನಿಸಲಿಲ್ಲ. 33 00:02:04,250 --> 00:02:05,375 ಮನೆಗೆ ಬೆಂಕಿ ಬೀಳಲಿಲ್ಲ. 34 00:02:06,291 --> 00:02:07,333 ಅಲ್ವಾ? 35 00:02:10,166 --> 00:02:11,666 ನೀನು ಇಂದು ರಾತ್ರಿ ನನ್ನ ಜೊತೆ ಇರಬಹುದು. 36 00:02:11,750 --> 00:02:12,875 ಆಮೇಲೆ? 37 00:02:12,958 --> 00:02:14,916 ನೀನು ಮಿಸಸ್ ಟಿಲ್ಕಾಟ್ ಜೊತೆ ಸಂತೋಷವಾಗಿಲ್ವಾ? 38 00:02:15,000 --> 00:02:16,375 ನಾನು ಅಲ್ಲಿಗೆ ಸೇರಿದವಳಲ್ಲ. 39 00:02:16,458 --> 00:02:18,458 ನಾನು ಧರ್ಮಾಧಿಕಾರಿಯ ಮಗಳಾಗಿರಲು ಹುಟ್ಟಿದವಳಲ್ಲ. 40 00:02:18,541 --> 00:02:20,291 ನೋಡು, ಅಮ್ಮ, ಅದರ ಹೃದಯ ಸಿಕ್ಕಿತು. 41 00:02:21,750 --> 00:02:23,500 ನನ್ನ ಜಾಗ ನಿಮ್ಮ ಜಗತ್ತಿನಲ್ಲಿ. 42 00:02:27,625 --> 00:02:29,958 ಪ್ಯಾಕೇಜುಗಳನ್ನು ಯುರೋಪಿನಾದ್ಯಂತ ಸಾಗಿಸಲಾಗುವುದು. 43 00:02:30,041 --> 00:02:32,708 ಯಾರೂ ನೋಡದಂತಹ ಜಾಗ ಹುಡುಕಬೇಕು. 44 00:02:32,791 --> 00:02:35,083 ಎಲ್ಲಾ ಪ್ಯಾಕೇಜುಗಳು ಸುಮಾರು ಇದೇ ಗಾತ್ರದವು. 45 00:02:36,541 --> 00:02:38,083 ನಾನು ಈಗ ನಿರತನಾಗಿದ್ದೇನೆ, ಕಂದ. 46 00:02:48,875 --> 00:02:51,250 ಸೈತಾನನೂ ಅಲ್ಲಿ ಹುಡುಕಲು ಹೋಗಲ್ಲ. 47 00:02:55,500 --> 00:02:57,291 ಇಂದು ನಿನ್ನ ಮೈಕ್ರಾಫ್ಟ್‌‌ನನ್ನು ನೋಡಿದೆ. 48 00:02:57,833 --> 00:03:00,583 ಅವನು ಯಾರಿಗಾಗಿ ಕೆಲಸ ಮಾಡುತ್ತಿದ್ದಾನೆ ಗೊತ್ತಾ? 49 00:03:00,666 --> 00:03:02,666 ಸರ್‌ ಬ್ಯೂಸೆಫಲಸ್‌ ಹಾಡ್ಜ್. 50 00:03:02,750 --> 00:03:05,000 ಸಾಮ್ರಾಜ್ಯದ ಅತಿ ಶ್ರೀಮಂತ ವ್ಯಕ್ತಿ. 51 00:03:05,083 --> 00:03:09,291 ಮೈಕ್ರಾಫ್ಟ್‌ ಹೇಳುತ್ತಿದ್ದ ಹಾಡ್ಜ್ ಯಾವುದೋ ಸರ್ಕಾರಿ ಯೋಜನೆ ವಹಿಸಿಕೊಂಡಿದ್ದಾನಂತೆ. 52 00:03:10,708 --> 00:03:11,791 ತುಂಬಾ ಗೌಪ್ಯವಂತೆ. 53 00:03:11,875 --> 00:03:13,208 ನನಗೆ ಏನು ಕಾಣುತ್ತಿದೆ, ಗೊತ್ತಾ? 54 00:03:14,125 --> 00:03:14,958 ಅವಕಾಶ. 55 00:03:16,500 --> 00:03:17,833 ಹಾಡ್ಜ್ ಏನೋ ಮಾಡುತ್ತಿದ್ದಾನೆ. 56 00:03:19,166 --> 00:03:22,250 ನಾನು ಅವನ ಕಛೇರಿಯಲ್ಲಿ ಒಂದು ಸ್ಥಾನ ಪಡೆಯಲು ನೋಡುವೆ. 57 00:03:22,333 --> 00:03:24,708 ಬಗ್ಗಿಸಬಹುದಾದವರನ್ನು ಹುಡುಕುವೆ. 58 00:03:24,791 --> 00:03:25,916 ನನ್ನ ಪುಟ್ಟ ಗೂಢಚಾರಿ. 59 00:03:26,000 --> 00:03:27,708 ಅದ್ಭುತ ಬೀ. 60 00:03:27,791 --> 00:03:28,625 ಆಕ್ಸ್‌ಫರ್ಡ್ ಹೇಗಿತ್ತು? 61 00:03:28,708 --> 00:03:30,375 ಪ್ರೊ. ಮಾಲಿಕ್ ಅತ್ಯಂತ ದುರ್ಬಲ ಕೊಂಡಿ. 62 00:03:31,083 --> 00:03:32,708 ತುಂಬಾ ದುರಾಸೆಯವ ಮತ್ತು ದುರಹಂಕಾರಿ. 63 00:03:32,791 --> 00:03:35,583 ಹಾಡ್ಜ್‌ನ ಪ್ರೊಫೆಸರ್‌ಗಳಲ್ಲಿ ಅವನೇ ಸಮಗ್ರತೆ ಇಲ್ಲದವನು. 64 00:03:35,666 --> 00:03:37,833 ನಿಮ್ಮ ಜೊತೆ ಭೇಟಿ ಏರ್ಪಡಿಸಿರುವೆ. 65 00:03:37,916 --> 00:03:38,791 ಅದ್ಭುತ ಕೆಲಸ, ಬೀ. 66 00:03:38,875 --> 00:03:41,125 ಪ್ರೊ. ಮಾಲಿಕ್, ನಿಮ್ಮ ಜೊತೆ ವ್ಯವಹಾರ ನಡೆಸುವ ನಿರೀಕ್ಷೆ ಇದೆ. 67 00:03:41,208 --> 00:03:42,500 ನನಗೂ, ಸರ್. 68 00:03:48,458 --> 00:03:49,583 ಅವನು ಗಾಳಕ್ಕೆ ಸಿಕ್ಕಿಬಿದ್ದ, ಬೀ. 69 00:04:39,707 --> 00:04:43,666 ಯಂಗ್ ಶರ್ಲಾಕ್ 70 00:04:54,541 --> 00:04:56,707 ಬೀಟ್ರಿಸ್‌, ಇಲ್ಲಿದ್ದೀಯಾ? 71 00:04:58,375 --> 00:04:59,291 ಚಿಂತಿತಳಾಗಿರುವೆ. 72 00:04:59,375 --> 00:05:01,250 ಪ್ಯಾರಿಸ್ ರೈಲಿನಲ್ಲಿ ಮೊದಲ ಡೆಲಿವರಿ ಆಗಬೇಕಿತ್ತು, 73 00:05:01,333 --> 00:05:03,625 ಮತ್ತು ಈಗ ನೋಡಿದರೆ ಮನೆ ತುಂಬಾ ಬೇಡದ ಅತಿಥಿಗಳಿದ್ದಾರೆ. 74 00:05:03,708 --> 00:05:05,875 ಅಲ್ಲದೆ, ರಾಜಕುಮಾರಿ ಬೇರೆ ಇನ್ನೂ ಸಿಕ್ಕಿಲ್ಲ, 75 00:05:05,958 --> 00:05:07,583 ಮತ್ತು ಅವಳನ್ನು ತಡೆಯದೆ ಅವಳು ಸುಮ್ಮನಾಗಲ್ಲ. 76 00:05:08,166 --> 00:05:11,916 ಅವಳು ಎಷ್ಟು ಅಪಾಯಕಾರಿ ಅಂತ ನನಗೆ ಗೊತ್ತು, ಬೀ. ನಂಬು, ನಾವವಳನ್ನು ಹುಡುಕುವೆವು. 77 00:05:13,791 --> 00:05:15,166 ಹೇಗೆ? 78 00:05:15,250 --> 00:05:16,250 ಶರ್ಲಾಕ್‌. 79 00:05:16,332 --> 00:05:18,375 ಅವನ ಮೇಲೆ ತುಂಬಾ ನಂಬಿಕೆ ಇರುವಂತಿದೆ. 80 00:05:18,957 --> 00:05:22,541 ನಿನಗೆ ಯಾಕೆ ಅಸಮಾಧಾನ ಅಂತ ಗೊತ್ತು. ನೀನು ನಿನ್ನ ಅಮ್ಮನನ್ನು ಭೇಟಿಯಾಗಬೇಕಿಲ್ಲ. 81 00:05:23,666 --> 00:05:24,707 ಇಲ್ಲ, ನನಗೆ ಭೇಟಿಯಾಗಬೇಕು. 82 00:05:25,875 --> 00:05:27,000 ನನ್ನ ದಿಟ್ಟ ಹುಡುಗಿ. 83 00:05:27,832 --> 00:05:28,916 ನನ್ನ ಜಾಣ ಕಂದ. 84 00:05:30,582 --> 00:05:32,750 ಈಗ, ನಾನು ಹೇಳಿದ್ದು ನೆನಪಿರಲಿ. 85 00:05:32,832 --> 00:05:37,082 ನಿನ್ನ ಅಮ್ಮನಿಗೆ ಸ್ವಲ್ಪ ಭ್ರಮೆ. 86 00:05:47,291 --> 00:05:53,250 ಬೀ, ನೀನು ತುಂಬಾ ಆಕರ್ಷಕ ಮತ್ತು ಸುಂದರ ಯುವತಿಯಾಗಿ ಬೆಳೆದಿರುವೆ. 87 00:05:53,750 --> 00:05:55,207 ಅಷ್ಟೇನಾ ನಿನಗೆ ಹೇಳಲು ಇರೋದು? 88 00:05:55,291 --> 00:05:56,500 ಏನು ನಿನ್ನ ಅರ್ಥ? 89 00:05:57,250 --> 00:05:58,416 ನೀನೇನು ಮಾಡಿದೆ ನನಗೆ ಗೊತ್ತು. 90 00:05:58,500 --> 00:05:59,541 ಏನು? 91 00:05:59,625 --> 00:06:02,291 ನನಗೆ ಹಾನಿ ಮಾಡಲು ನೋಡಿದೆ ಅಂತ ನಿನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದರು. 92 00:06:04,625 --> 00:06:08,458 -ಅದಕ್ಕೇ ಅಪ್ಪ ನನ್ನನ್ನು ದೂರ ಇಟ್ಟಿದ್ದು. -ಹಾಗೋ? ನಿನಗೆ ಅದನ್ನಾ ಅವನು ಹೇಳಿದ್ದು? 93 00:06:09,791 --> 00:06:12,666 ಬೀ, ಅವರು ಅಮ್ಮನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದ್ದು 94 00:06:12,750 --> 00:06:15,291 ಆಕೆಯ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು. 95 00:06:15,375 --> 00:06:16,707 ನೀನು ಹೀಗೆ ಹೇಳುವೆ ಅಂತ ಹೇಳಿದ್ದರು. 96 00:06:16,791 --> 00:06:20,416 ಅದೇ ಸತ್ಯ. ಆ ವ್ಯಕ್ತಿಯನ್ನು ನಂಬಲು ಆಗಲ್ಲ. 97 00:06:20,500 --> 00:06:22,582 ಆ ವ್ಯಕ್ತಿ ನನಗೆ ಕರುಣೆ ತೋರಿದವರು. 98 00:06:23,166 --> 00:06:24,250 ಚಿನ್ನ. 99 00:06:24,332 --> 00:06:26,457 ಬೀ, ನೀನು ನಮ್ಮನ್ನು ನಂಬಬೇಕು. 100 00:06:26,541 --> 00:06:28,375 -ದಯವಿಟ್ಟು ಕೇಳು. -ಯಾಕೆ? 101 00:06:29,041 --> 00:06:30,957 ಯಾಕೆಂದರೆ ನಮಗೆ ಸುಳ್ಳು ಹೇಳಲು ಕಾರಣವಿಲ್ಲ. 102 00:06:31,666 --> 00:06:33,332 ಮತ್ತು ನಾನು ನಿನ್ನ ಅಣ್ಣ. 103 00:06:37,041 --> 00:06:38,166 ರಾತ್ರಿ ಎಂಟಕ್ಕೆ ಊಟ. 104 00:06:50,625 --> 00:06:51,625 -ನೀನು! -ಅಮ್ಮ. 105 00:06:51,707 --> 00:06:55,832 -ನೀನು ನನ್ನ ವಿರುದ್ಧ ಅವಳಲ್ಲಿ ವಿಷ ತುಂಬಿದ್ದೀಯ. -ದಯವಿಟ್ಟು, ಸಾಕು ಮಾಡು. ಸಾಕು! ಕಾರ್ಡಿಲಿಯಾ! 106 00:06:55,916 --> 00:06:58,832 -ನೀನು ಮುಜುಗರ ತಂದುಕೊಳ್ಳುತ್ತಿದ್ದೀಯ. -ಸೈಲಸ್‌, ಬೇವರ್ಸಿ! 107 00:06:58,916 --> 00:06:59,957 ದಯವಿಟ್ಟು, ಕೂರು. 108 00:07:00,041 --> 00:07:01,041 ಪರವಾಗಿಲ್ಲ. 109 00:07:02,291 --> 00:07:03,291 ಸರಿ… 110 00:07:04,416 --> 00:07:06,291 ಹುಚ್ಚುತನ ಮುಗಿಯಿತೆಂದರೆ, 111 00:07:07,041 --> 00:07:09,250 ನಾವೆಲ್ಲಾ ಬಹುಶಃ ಕೂರಬಹುದು. 112 00:07:09,333 --> 00:07:10,791 ದಯವಿಟ್ಟು, ಎಲ್ಲರೂ ಕೂತು 113 00:07:10,875 --> 00:07:13,833 ನಾಗರಿಕರಂತೆ ಊಟ ಮಾಡೋಣ. 114 00:07:16,291 --> 00:07:20,666 ಹೂಂ, ಎಲ್ಲರೂ ಒಟ್ಟಿಗೆ ಸೇರಿರುವುದು… 115 00:07:23,500 --> 00:07:24,666 …ಎಂತಹ ಸಂತೋಷದ ವಿಷಯ ಅಲ್ವಾ? 116 00:07:28,625 --> 00:07:29,666 ಪುನರ್ಮಿಲನ. 117 00:07:34,875 --> 00:07:36,500 ಮೈಕ್ರಾಫ್ಟ್‌, ದಯವಿಟ್ಟು, ಮೀನೋಗರ ತಿಂದು ನೋಡು. 118 00:07:37,291 --> 00:07:38,625 -ಇಲ್ಲ, ಬೇಡ. -ದಯವಿಟ್ಟು. 119 00:07:39,166 --> 00:07:40,207 ಅದು ಮರ್ಮಾರದ್ದು. 120 00:07:41,582 --> 00:07:43,125 ಅಪ್ಸರೆಯರ ಕೈರುಚಿ. 121 00:07:45,457 --> 00:07:46,707 ನಾನು ಯೋಚಿಸುತ್ತಿದ್ದೆ, 122 00:07:46,791 --> 00:07:49,291 ಹಾಡ್ಜ್ ಅವರ ಸಹಾಯಕಿಯಾಗಿ ನೀನು ನನಗೆ ಹೆಚ್ಚು ಇಷ್ಟ ಆದೆಯಾ, ಈಗಲಾ ಅಂತ. 123 00:07:49,375 --> 00:07:51,541 ನಿರ್ಧರಿಸಿದಾಗ ನನಗೂ ತಿಳಿಸು. 124 00:07:55,832 --> 00:07:57,791 ಇನ್ನೂ ಎಷ್ಟು ಕಾಲ ನಾವಿಲ್ಲಿ ಇರಬೇಕು? 125 00:07:57,875 --> 00:08:00,833 ಶು'ಆನ್ ಎಲ್ಲಿ ಸಿಗಬಹುದು ಎಂದು ನೀನು ಹೇಳುವ ತನಕ. 126 00:08:01,750 --> 00:08:06,166 ನಿನಗೆ ನೆನಪಿಸಬೇಕಾ, ಶರ್ಲಾಕ್‌, ನೀನವಳಿಗೆ ನನ್ನನ್ನು ಕೊಲ್ಲಲು ಬಿಟ್ಟಿದ್ದೆ. 127 00:08:06,250 --> 00:08:09,916 ಇಲ್ಲಿ ಕೂತಿರುವವರಲ್ಲಿ ಯಾರಿಗಾದರೂ ಬೇಜಾರಾಗಬೇಕೆಂದರೆ, 128 00:08:10,000 --> 00:08:11,333 ಅದು ನನಗೆ ಅನಿಸುತ್ತೆ. 129 00:08:11,916 --> 00:08:14,250 ಆದರೂ ನಾನಿಲ್ಲಿ ಹೊಂದಿಕೊಳ್ಳಲು ನೋಡುತ್ತಿದ್ದೇನೆ. 130 00:08:15,333 --> 00:08:17,500 -ಹೊಂದಿಕೊಳ್ಳೋದಾ? -ನಿನಗೆ ಬೀಟ್ರಿಸ್‌‌ಳನ್ನು ಭೇಟಿಯಾಗಬೇಕಿತ್ತು. 131 00:08:19,166 --> 00:08:20,416 ಇಗೋ ಅವಳು ಇಲ್ಲಿದ್ದಾಳೆ. 132 00:08:21,957 --> 00:08:23,082 ಮಾತು ಕೊಟ್ಟೆ. 133 00:08:24,000 --> 00:08:25,207 ಮಾತು ಉಳಿಸಿಕೊಂಡೆ. 134 00:08:29,707 --> 00:08:31,166 ಒಮ್ಮೆ ಶು'ಆನ್ ಸಿಕ್ಕ ನಂತರ… 135 00:08:34,750 --> 00:08:36,457 -ನೀವು ಇಲ್ಲಿಂದ ಹೊರಡಬಹುದು. -ಮತ್ತು… 136 00:08:37,290 --> 00:08:40,457 ಬೀಟ್ರಿಸ್‌‌ಗೆ ಬೇಕಿದ್ದರೆ, ಅವಳೂ ಇಲ್ಲಿಂದ ಹೊರಡಬಹುದಾ? 137 00:08:41,290 --> 00:08:42,415 ಅವಳು ಬಂಧಿಯಲ್ಲ. 138 00:08:51,540 --> 00:08:55,000 ಒರ್ದು ಕಡೆಸಿಯಲ್ಲಿರುವ ಮಸೀದಿಯ ಹಿಂದೆ. 139 00:08:55,083 --> 00:08:56,708 ಶು'ಆನ್ ಅಲ್ಲೇ ವಾಸ ಇರೋದು. 140 00:08:56,790 --> 00:08:59,290 ನೋಡು, ಎಷ್ಟು ಸುಲಭವಾಗಿತ್ತು, ಅಲ್ವಾ? 141 00:09:00,083 --> 00:09:01,083 ಬೀ. 142 00:09:01,666 --> 00:09:02,875 ಬೀ, ನನ್ನ ಮಾತು ಕೇಳು. 143 00:09:03,500 --> 00:09:05,041 ನಾನು ನಿನಗೆ ಎಂದೂ ನೋವು ಮಾಡಿಲ್ಲ. 144 00:09:05,125 --> 00:09:06,166 ಶು'ಆನ್‌ಳನ್ನು ಹುಡುಕು. 145 00:09:06,250 --> 00:09:07,708 ಒಮ್ಮೆಯೂ. 146 00:09:07,791 --> 00:09:10,166 ನನ್ನಿಂದ ಆಗಲಿಲ್ಲ, ಆಗುವುದೂ ಇಲ್ಲ, ನನ್ನ ಕಂದ. 147 00:09:11,083 --> 00:09:12,875 ಅವಳನ್ನು ನೋಡು, ಬೀ. ಆಕೆ ಸತ್ಯ ಹೇಳುತ್ತಿದ್ದಾರೆ. 148 00:09:12,958 --> 00:09:15,708 ಶರ್ಲಾಕ್‌, ನಿನಗೆ ಆಗ ಹೆಚ್ಚೆಂದರೆ ಆರು ವರ್ಷ, 149 00:09:15,791 --> 00:09:18,666 ನಿನಗೆ ಹೇಗೆ ಏನಾದರೂ ನೆನಪಿದ್ದೀತು? 150 00:09:18,750 --> 00:09:20,083 ಅವರು ಇದನ್ನೇ ಮಾಡೋದು. 151 00:09:20,166 --> 00:09:22,000 ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾರೆ, 152 00:09:22,083 --> 00:09:24,583 ನಿನಗೆ ಗೊತ್ತಿರುವ ವಿಷಯವನ್ನೂ ನೀನು ಅನುಮಾನಿಸುವವರೆಗೂ. 153 00:09:24,666 --> 00:09:25,833 ನೋಡು, ಕೆಲವು ಸಂದರ್ಭಗಳಲ್ಲಿ, 154 00:09:26,375 --> 00:09:28,833 ನಮ್ಮ ನೆನಪುಗಳು ನಾವು ಏನು ನಂಬಲು ಬಯಸುತ್ತೇವೋ ಅದನ್ನೇ ಹೇಳುತ್ತವೆ. 155 00:09:29,750 --> 00:09:30,833 -ಸೈಲಸ್‌. -ಮಗನೇ. 156 00:09:30,916 --> 00:09:32,000 ಬಾಯಿ ಮುಚ್ಚು. 157 00:09:32,750 --> 00:09:34,000 ಎಂತಹ ಗೌರವ. 158 00:09:34,583 --> 00:09:36,250 ಕೌಟುಂಬಿಕ ಕಲಹಗಳು ಹೀಗೇ, ಅಲ್ವಾ, ಜೇಮ್ಸ್‌? 159 00:09:36,333 --> 00:09:39,083 ಮಿ. ಹೋಮ್ಸ್, ನನ್ನ ಕುಟುಂಬ ತುಂಬಾನೇ ಜಗಳವಾಡಿಕೊಳ್ಳುತ್ತಿತ್ತು, 160 00:09:39,165 --> 00:09:41,208 ಆದರೆ ಇದು ಹಾಗಲ್ಲ. 161 00:09:44,415 --> 00:09:45,500 ಇದೊಂದು ದುರಂತ. 162 00:09:45,583 --> 00:09:47,333 ಬೀ. ಬೀ. 163 00:09:47,415 --> 00:09:50,875 ದಯವಿಟ್ಟು, ಒಮ್ಮೆ ನಿನ್ನ ತಂದೆ ಇಲ್ಲದಿದ್ದಾಗ ನನಗೆ ನಿನ್ನ ಜೊತೆ ಮಾತಾಡಲು ಬಿಡು. 164 00:09:50,958 --> 00:09:53,625 ನಿನ್ನ ಮೇಲೆ ಅವನ ಪ್ರಭಾವ ಇಲ್ಲದಾಗ, 165 00:09:53,708 --> 00:09:55,833 ಆಗ ನಿನಗೆ ಬೇಕಿದ್ದರೆ, ನೀನೂ ಇಲ್ಲಿಂದ ಹೋಗಬಹುದು. 166 00:10:00,125 --> 00:10:01,458 ಅದೇನಾ ನಿನಗೆ ಬೇಕಿರೋದು? 167 00:10:07,500 --> 00:10:08,583 ಬೀಟ್ರಿಸ್‌? 168 00:10:12,125 --> 00:10:13,458 ಅಲ್ಲ. 169 00:10:13,541 --> 00:10:15,375 ಇಗೋ, ಕೇಳಿದಿರಲ್ಲಾ? 170 00:10:15,458 --> 00:10:18,666 ಹೂಂ, ಖಂಡಿತ ಅವಳು ನಿಮ್ಮ ಮುಂದೆ ಒಪ್ಪಿಕೊಳ್ಳಲ್ಲ, ಅಲ್ವಾ? 171 00:10:18,750 --> 00:10:21,625 ಅವಳಿಗೆ ಅವಳದೇ ಆದ ಸ್ವಂತ ಬುದ್ಧಿ ಇದೆ. 172 00:10:21,708 --> 00:10:22,625 ನೀವು ಇದನ್ನೇ ಮಾಡೋದು! 173 00:10:22,708 --> 00:10:26,375 -ನೀವು ಇದನ್ನೇ ಮಾಡೋದು, ವಿಷಯಗಳನ್ನು ತಿರುಚಿ-- -ವಾದ ನಿಲ್ಲಿಸುವಿರಾ? 174 00:10:33,790 --> 00:10:36,915 -ನಿನಗೆ ಏನಾದರೂ ಹೇಳುವುದಿದೆಯಾ? -ನಿಮ್ಮ ಜೊತೆ ಒಂಟಿಯಾಗಿ ಮಾತಾಡಬಹುದಾ? 175 00:10:37,000 --> 00:10:38,375 ಹೇಳುವುದು ಏನೇ ಇದ್ದರೂ, 176 00:10:38,458 --> 00:10:41,208 ಈ ಭವ್ಯ ಕುಟುಂಬದ ಮುಂದೆಯೇ ಹೇಳಬಹುದು. 177 00:10:42,625 --> 00:10:43,625 ಸರಿ. 178 00:10:45,208 --> 00:10:47,165 ನಾನು ರಾಣಿಯ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. 179 00:10:47,250 --> 00:10:51,958 ಅವರು ನಿನಗಾಗಿ ಬರುತ್ತಿದ್ದಾರೆ, ಸೈಲಸ್‌. ಜೀವನದ ಕೊನೆಯ ಕ್ಷಣಗಳನ್ನು ನೀನು ಜೈಲಿನಲ್ಲಿ ಕಳೆಯುವೆ. 180 00:10:52,040 --> 00:10:53,500 ಅವರಿಗೆ ಅವರ ಅಸ್ತ್ರ ವಾಪಸ್ ಬೇಕಂತೆ. 181 00:10:53,583 --> 00:10:56,250 -ಹೂಂ, ಖಂಡಿತ ಬೇಕಿರುತ್ತೆ. -ಅದಕ್ಕಾಗಿ ಅವರು ಪಾವತಿಸಲು ಸಿದ್ದರಿದ್ದಾರೆ. 182 00:10:57,415 --> 00:10:59,833 ಆದರೂ, 183 00:10:59,915 --> 00:11:01,916 ಪಶ್ಚಾತ್ತಾಪಕ್ಕೆ ಒಂದು ದಾರಿ ಇದೆ. 184 00:11:02,583 --> 00:11:06,833 ಮಿ. ಹೋಮ್ಸ್, ಅಸ್ತ್ರವನ್ನು ಬ್ರಿಟಿಷ್ ಸರ್ಕಾರಕ್ಕೆ ಮಾತ್ರ ಮಾರುವಂತೆ 185 00:11:06,916 --> 00:11:09,916 ನಿಮ್ಮ ತಂದೆಯ ಮನವೊಲಿಸಿ. 186 00:11:10,000 --> 00:11:12,125 -"ಪಾವತಿ"ನಾ? -ಬೇಕಾದಷ್ಟು. 187 00:11:12,208 --> 00:11:13,291 ಹೂಂ. 188 00:11:14,208 --> 00:11:15,041 ಮೈಕ್ರಾಫ್ಟ್‌. 189 00:11:15,125 --> 00:11:18,083 "ಬೇಕಾದಷ್ಟು" ಎಂದರೆ? 190 00:11:18,875 --> 00:11:20,125 ಬಹುಶಃ ನೀವು… 191 00:11:22,583 --> 00:11:23,625 ನಿಮಗೇನು ಬೇಕಾದರೂ ಕೇಳಬಹುದು. 192 00:11:24,625 --> 00:11:26,541 ಒಂದು ಷರತ್ತು ಇದೆ. 193 00:11:27,333 --> 00:11:28,875 ಅವರಿಗೆ ಮಾತ್ರ ನೀವು ಮಾರಬಹುದು. 194 00:11:28,958 --> 00:11:33,083 ಮತ್ತು ನೀನು ನಮ್ಮ ನಡುವಿನ ದಲ್ಲಾಳಿನಾ, ಮಾತುಕತೆ ನಡೆಸುವವನಾ? 195 00:11:33,165 --> 00:11:35,790 ನನ್ನ ಸ್ವಂತ ಕುಟುಂಬಕ್ಕೆ ನಾನು ದ್ರೋಹ ಬಗೆಯಬೇಕಾ? 196 00:11:35,875 --> 00:11:37,708 ನಿಮ್ಮ ವೃತ್ತಿ ನಿಮಗೆ ವಾಪಸ್ ಬೇಕಿದ್ದರೆ, ಸರ್, 197 00:11:37,790 --> 00:11:40,458 ನೀವು ಅದನ್ನೇ ಮಾಡಬೇಕಾಗುತ್ತೆ ಅಂತ ಹೇಳುತ್ತಿದ್ದೇವೆ. 198 00:11:41,083 --> 00:11:43,333 -ಹೌದು. -ಬೆನ್ನಿಗೆ ಚೂರಿ ಹಾಕುವವನೇ. 199 00:11:44,208 --> 00:11:46,083 ಮೈಕ್ರಾಫ್ಟ್‌, ಮುದ್ದು ದ್ರೋಹಿ. 200 00:11:46,750 --> 00:11:48,458 ದೇವರೇ, ನೀನು ಹೀಗೆ ಮಾಡುವೆ ಅಂದುಕೊಂಡಿರಲಿಲ್ಲ. 201 00:11:48,540 --> 00:11:52,375 ನೋಡಿದಿರಾ? ಇದನ್ನೇ ನಾನು ಹೇಳಿದ್ದು. ಧೈರ್ಯ! ಮಹತ್ವಾಕಾಂಕ್ಷೆ. 202 00:11:53,000 --> 00:11:54,040 ಮೈಕ್ರಾಫ್ಟ್‌. 203 00:11:54,125 --> 00:11:56,165 ಅಸ್ತ್ರ ಅವರಿಗೆ ಒಂದು ವಾರದಲ್ಲಿ ಬೇಕು, ಇಲ್ಲಾ ಒಪ್ಪಂದ ಇರಲ್ಲ. 204 00:11:56,250 --> 00:11:57,915 -ಬೀ? -ಒಪ್ಪಿಗೆ ನೀಡಬಹುದು. 205 00:11:58,583 --> 00:12:00,750 ಒಳ್ಳೆಯದು. ನಾನು ವಿದೇಶಾಂಗ ಕಛೇರಿಗೆ ಸಂದೇಶ ಕಳಿಸುವೆ. 206 00:12:00,833 --> 00:12:03,541 ಸರಿ, ನಾಳೆ ಬೆಳಿಗ್ಗೆ ಸಂದೇಶ ಕಛೇರಿ ತೆರೆದ ಕೂಡಲೇ ಯಾರಿಗಾದರೂ ನಿನ್ನನ್ನು ಅಲ್ಲಿಗೆ 207 00:12:03,625 --> 00:12:05,791 -ಕರೆದೊಯ್ಯಲು ಹೇಳುವೆ. -ಸರಿ. 208 00:12:07,708 --> 00:12:09,791 ಧನ್ಯವಾದ, ಅಪ್ಪ. 209 00:12:11,916 --> 00:12:13,041 ಕೇಳಿಸಿಕೊಂಡೆಯಾ, ಬೀ? 210 00:12:13,666 --> 00:12:14,708 ನನ್ನ ಒಬ್ಬ ಮಗನಾದರೂ ಇನ್ನೂ… 211 00:12:16,625 --> 00:12:17,833 ನನ್ನನ್ನು ಅಪ್ಪ ಅಂತ ಕರೆಯುತ್ತಾನೆ. 212 00:12:18,541 --> 00:12:20,666 ಬಹುಶಃ ಇನ್ನೂ ನನಗೆ ಕುಟುಂಬದಲ್ಲಿ ಒಂದಾಗುವ ಅವಕಾಶ ಇದೆ. 213 00:12:21,458 --> 00:12:26,791 ಸರಿ, ನಾನು ಮತ್ತು ಬೀಟ್ರಿಸ್‌ ನಮ್ಮ ಪುಟ್ಟ ಕಾರ್ಖಾನೆಗೆ ಭೇಟಿ ನೀಡಬೇಕು. 214 00:12:29,125 --> 00:12:31,208 ತುರ್ತಾಗಿ. 215 00:12:32,333 --> 00:12:35,375 ಶು'ಆನ್ ಸಿಗುವವರೆಗೂ ನೀವು ಇಲ್ಲೇ ಇರಬೇಕಾಗುತ್ತೆ. 216 00:12:36,458 --> 00:12:38,540 ಬೀಟ್ರಿಸ್‌, ಪ್ರಯಾಣಕ್ಕೆ ಸಿದ್ದರಾಗೋಣ. 217 00:12:43,665 --> 00:12:44,750 ಹೇಗೆ ಹೀಗೆ ಮಾಡಿದೆ? 218 00:12:49,583 --> 00:12:51,625 ಖುಷಿಯಾಯಿತಾ, ಅಣ್ಣ? 219 00:12:53,165 --> 00:12:54,333 ಖಂಡಿತ ಇಲ್ಲ. 220 00:13:05,250 --> 00:13:07,500 ಅವಳನ್ನು ಹುಡುಕಿ! ನನ್ನ ಬಳಿ ಕರೆತನ್ನಿ. 221 00:13:19,000 --> 00:13:20,708 ನೀನು ಅಂದುಕೊಂಡಿರಲಿಲ್ಲ, ಅಲ್ವಾ? 222 00:13:20,791 --> 00:13:22,333 ಮೈಕ್ರಾಫ್ಟ್‌ ದ್ರೋಹ ಬಗೆಯುತ್ತಾನೆ ಅಂತ. 223 00:13:23,208 --> 00:13:25,541 ಬಹುಶಃ ನಾನಂದುಕೊಂಡಿದ್ದಕ್ಕಿಂತ ಹೆಚ್ಚೇ ಅವನು ನಿಮ್ಮಿಂದ ಕಲಿತಿದ್ದಾನೆ. 224 00:13:28,083 --> 00:13:29,125 ಬಹುಶಃ. 225 00:13:30,000 --> 00:13:32,833 ನೀನು ತುಂಬಾ ಜಾಣ ಅಂತ ಸಾಬೀತುಪಡಿಸಿದ್ದೀಯ, ಕಂದ. 226 00:13:32,915 --> 00:13:35,625 ನಿನ್ನಂತಹ ಬುದ್ಧಿವಂತರು ಜಗತ್ತನ್ನೇ ಬದಲಾಯಿಸುತ್ತಾರೆ. 227 00:13:37,000 --> 00:13:39,125 ನೀನು ನನ್ನನ್ನು ಸೇರಬೇಕು ಅನ್ನೋದು ನನ್ನ ಆಸೆ. 228 00:13:43,208 --> 00:13:44,500 ನಿಮಗೆ ಭ್ರಮೆ. 229 00:13:45,125 --> 00:13:48,165 ಈಗ, ಕೇಳು, ನೀನು ಪ್ಯಾರಿಸ್‌ನ ಆ ಸುರಂಗದಲ್ಲಿ ನೋಡಿದ್ದು, 230 00:13:48,250 --> 00:13:50,125 ಯುದ್ಧದ ರೀತಿಯನ್ನೇ ಬದಲಾಯಿಸುತ್ತೆ. 231 00:13:50,208 --> 00:13:51,875 ಯುದ್ಧಕ್ಕೆ ಯಾವ ಸೈನಿಕರೂ ಹೋಗಬೇಕಿಲ್ಲ. 232 00:13:51,958 --> 00:13:54,625 ಒಂದೂ ಗುಂಡು ಹಾರಿಸದೆ ಶತ್ರುಗಳನ್ನು ಸೋಲಿಸಬಹುದು. 233 00:13:54,708 --> 00:13:57,415 ಈಗ ನೀವು ನನಗೆ ಅದು ಜೀವ ಉಳಿಸುತ್ತೆ ಅನ್ನುವಿರಿ. 234 00:13:57,500 --> 00:14:01,083 ಒಂದೇ ಒಂದು ನಿರೂಪಣೆ. ಅಷ್ಟೇ ಬೇಕಿರೋದು. ಆಮೇಲೆ ಯಾರೂ ಅಸ್ತ್ರಗಳನ್ನೆತ್ತಿಕೊಳ್ಳುವ ಧೈರ್ಯ ಮಾಡಲ್ಲ. 235 00:14:01,166 --> 00:14:04,166 ಮತ್ತು ಜನರು ನಿಮ್ಮನ್ನು ರಾಜ ಸೈಲಸ್‌, ಶಾಂತಿದೂತ ಅಂತ ಮೆರವಣಿಗೆ ಮಾಡುತ್ತಾರೆ. 236 00:14:05,958 --> 00:14:07,041 ಯಾಕಿಲ್ಲ? 237 00:14:08,500 --> 00:14:11,166 ನಿಮಗೆ ಜಗತ್ತನ್ನು ನೋಡಿದಾಗ ನಿಮ್ಮನ್ನು ಬಿಟ್ಟು ಬೇರೇನಾದರೂ ಕಾಣುತ್ತಾ? 238 00:14:11,875 --> 00:14:13,208 ಮಗುವಂತೆ ಆಡಬೇಡ, ಹುಡುಗ. 239 00:14:14,666 --> 00:14:19,166 ನಾವು ವಾಸಿಸುತ್ತಿರುವ ಜಗತ್ತಿನ ಪ್ರತಿಯೊಂದು ಭಾಗವೂ 240 00:14:20,625 --> 00:14:22,333 ಮನುಷ್ಯನ ಕಣ್ಣೀರಿನಿಂದ ಕಟ್ಟಿರೋದು. 241 00:14:26,125 --> 00:14:28,458 ಮತ್ತು ಗಟ್ಟಿಗರೇ ಉಳಿಯೋದು. 242 00:14:30,916 --> 00:14:35,083 ಆದರೆ ಎಲ್ಲಕ್ಕಿಂತ ಮೂಲಭೂತ, ಪ್ರಾರಂಭಿಕ ಆಲೋಚನೆ ಏನು ಗೊತ್ತಾ? 243 00:14:38,458 --> 00:14:41,458 ನಾವು ಪ್ರಕೃತಿಗಿಂತ ಮಿಗಿಲಾದವರಲ್ಲ. 244 00:14:44,083 --> 00:14:47,625 ನಮ್ಮಲ್ಲಿ ಕೆಲವರು ವಿನಮ್ರ, ಕಾರ್ಮಿಕ ದುಂಬಿಗಳು. 245 00:14:47,708 --> 00:14:50,250 ಮತ್ತು ಉಳಿದವರು ನಾಯಕರಂತೆ ಮುನ್ನಡೆಸುವವರು. 246 00:14:52,375 --> 00:14:53,458 ನೀನು ಮತ್ತು ನಾನು 247 00:14:54,708 --> 00:14:57,415 ನೈಸರ್ಗಿಕ ನಾಯಕರು. 248 00:14:59,165 --> 00:15:04,250 ನಿನಗೆ ಇಷ್ಟವಿರಲಿ ಬಿಡಲಿ, ಶರ್ಲಾಕ್‌, ನಿನ್ನಲ್ಲಿ ಹರಿಯುತ್ತಿರೋದು ನನ್ನ ರಕ್ತ. 249 00:15:05,208 --> 00:15:07,291 ಇದು ನಿನ್ನ ಕ್ಷಣ. ಅದನ್ನು ನಿನ್ನದಾಗಿಸಿಕೋ. 250 00:15:07,375 --> 00:15:10,875 ನನ್ನ ಬಲಗೈ ಬಂಟನಾಗು, ನನ್ನ ಉತ್ತರಾಧಿಕಾರಿಯಾಗು. 251 00:15:11,458 --> 00:15:13,208 ಬೀಟ್ರಿಸ್‌ ಈಗಾಗಲೇ ಆ ಜಾಗ ತೆಗೆದುಕೊಂಡಿಲ್ವಾ? 252 00:15:14,000 --> 00:15:16,541 ಬೀಟ್ರಿಸ್ ಅವಳದೇ ‌ರೂಪದಲ್ಲಿ ಅಭೂತಪೂರ್ವಳು, 253 00:15:16,625 --> 00:15:20,291 ಆದರೆ ನೀನು ಸಂಪೂರ್ಣ ಭಿನ್ನ ಸಂಪನ್ಮೂಲ. 254 00:15:34,415 --> 00:15:35,875 ಅವಳ ಮುಂದೆ ನಿಮ್ಮ ಸುಳ್ಳನ್ನೊಪ್ಪಿಕೊಳ್ಳಿ. 255 00:15:36,458 --> 00:15:40,250 ಅಮ್ಮನ ಜೊತೆ ಅವಳಿಗೆ ಹೋಗಲು ಬಿಡಿ, ನಾನು ನಿಮ್ಮ ಪ್ರಸ್ತಾವನೆಯ ಬಗ್ಗೆ ಯೋಚಿಸುವೆ. 256 00:15:40,333 --> 00:15:41,833 ಹೇಳಿದಳಲ್ಲಾ? ಅವಳಿಗೆ ಹೋಗಲು ಇಷ್ಟ ಇಲ್ಲ. 257 00:15:41,915 --> 00:15:44,833 ಇಲ್ಲ, ಖಂಡಿತ, ಅವಳಿಗೆ ಹೋಗಲು ಇಷ್ಟ ಇಲ್ಲ, ಆದರೆ ಅವಳನ್ನು ಒಪ್ಪಿಸಲು ನಿಮಗೆ ಮಾತ್ರ… 258 00:15:44,915 --> 00:15:46,040 ಅವಳ ಜೊತೆ ಮಾತಾಡಿ, ಸೈಲಸ್. 259 00:15:48,040 --> 00:15:50,708 ಅವಳನ್ನು ಕಳಿಸಿದರೆ, ನಾನು ಉಳಿದುಕೊಳ್ಳುವೆ. 260 00:15:51,833 --> 00:15:53,290 ಅವಳ ಜೊತೆ ಮಾತಾಡುವೆ. 261 00:15:57,958 --> 00:15:59,040 ಒಂದು ನಿಮಿಷ. 262 00:16:04,958 --> 00:16:07,041 ಶು'ಆನ್ ಅವನು ಕೊಟ್ಟ ವಿಳಾಸದಲ್ಲಿ ಇರಲಿಲ್ಲ. 263 00:16:16,291 --> 00:16:17,500 ಮಾಕಿಯವೆಲ್ಲಿ'ಸ್ ಪ್ರಿನ್ಸ್ 264 00:16:19,375 --> 00:16:20,375 ಬನ್ನಿ. 265 00:16:22,416 --> 00:16:23,416 ಅಡಚಣೆ ಆಯಿತಾ? 266 00:16:24,458 --> 00:16:25,500 ಖಂಡಿತ ಇಲ್ಲ. 267 00:16:36,250 --> 00:16:38,708 ಕಪಾಟಿನಲ್ಲಿ ತುಂಬಾ ಒಳ್ಳೆಯ ಪುಸ್ತಕ ಸಿಕ್ಕಿತು. 268 00:16:39,708 --> 00:16:40,625 ಮಾಕಿಯವೆಲ್ಲಿ. 269 00:16:40,708 --> 00:16:43,333 "ಪ್ರೀತಿ ಮತ್ತು ಭಯ ಒಂದೇ ಕಡೆ ಇರಲು ಸಾಧ್ಯವಿಲ್ಲ," 270 00:16:43,958 --> 00:16:45,833 ಅವುಗಳ ನಡುವೆ ಆಯ್ಕೆ ಮಾಡಬೇಕಾಗಿ ಬಂದರೆ…" 271 00:16:45,915 --> 00:16:48,500 "ಭಯಾನಕವಾಗಿರೋದು ಪ್ರೀತಿ ಮೂಡಿಸುವುದಕ್ಕಿಂತ ಹೆಚ್ಚು ಸುರಕ್ಷಿತ." 272 00:16:53,708 --> 00:16:55,583 ನಿನಗವರು ತುಂಬಾ ಇಷ್ಟ, ಅಲ್ವಾ? 273 00:16:57,333 --> 00:16:58,458 ನನ್ನ ತಂದೆ. 274 00:16:59,708 --> 00:17:00,791 ನಿನ್ನ ಕಣ್ಣುಗಳಲ್ಲಿ ಕಾಣುತ್ತೆ. 275 00:17:01,500 --> 00:17:02,958 ಪ್ರತಿಭೆ ಪ್ರತಿಭೆಯನ್ನು ಗುರುತಿಸುತ್ತೆ. 276 00:17:05,583 --> 00:17:07,250 ಹೂಂ, ಅವರು ಹೇಗೆ ಬದುಕುತ್ತಾರೆ ನೋಡು. 277 00:17:09,040 --> 00:17:10,665 ಅಂದರೆ, ನಿಜಕ್ಕೂ. 278 00:17:13,415 --> 00:17:16,125 ಅವರ ಮಹತ್ವಾಕಾಂಕ್ಷೆಯ ಪ್ರಮಾಣವನ್ನು ಮೆಚ್ಚಲೇಬೇಕು. 279 00:17:19,000 --> 00:17:21,875 ಬಡಪಾಯಿ ಮುದುಕ ಬ್ಯೂಸೆಫಲಸ್‌ ಹಾಡ್ಜ್ ಇನ್ನೂ ಬದುಕಿದ್ದಿದ್ದರೆ… 280 00:17:23,708 --> 00:17:25,833 ಖಂಡಿತ ಹೊಟ್ಟೆ ಉರಿದು ಸಾಯುತ್ತಿದ್ದರು. 281 00:17:28,916 --> 00:17:30,375 ನಿನಗೆ ನೈತಿಕತೆಯ ಗೀಳಿಲ್ಲ. 282 00:17:32,458 --> 00:17:33,375 ಶರ್ಲಾಕ್‌‌ನಂತೆ. 283 00:17:33,916 --> 00:17:35,500 ನೈತಿಕತೆ ನಮ್ಮನ್ನು ನಿಧಾನಗೊಳಿಸುತ್ತೆ. 284 00:17:37,250 --> 00:17:38,583 ಆದರೆ ನಿನಗದು ಈಗಾಗಲೇ ಗೊತ್ತು. 285 00:17:40,208 --> 00:17:41,250 ಆಕ್ಸ್‌ಫರ್ಡ್‌ನಲ್ಲಿ, 286 00:17:42,166 --> 00:17:43,708 ನೀನು ನಿನ್ನ ಸೋದರರ ಮುಂದೆ ನಿಂತಿದ್ದರೂ, 287 00:17:43,791 --> 00:17:46,375 ಅವರಿಗೆ ಸ್ವಲ್ಪವೂ ಕುರುಹು ನೀಡಲಿಲ್ಲ, 288 00:17:47,166 --> 00:17:49,208 ಸ್ವಲ್ಪ ಗುರುತನ್ನೂ ಬಿಟ್ಟುಕೊಡಲಿಲ್ಲ. 289 00:17:49,291 --> 00:17:51,666 ನನ್ನ ಆಸೆಗಳಿಗಾಗಿ ನಾನು ಏನು ಬೇಕಾದರೂ ಮಾಡಬಲ್ಲೆ. 290 00:17:54,416 --> 00:17:55,833 ನಿನಗೆ ಕಿರಿಕಿರಿ ಆಗಲ್ವಾ? 291 00:17:57,083 --> 00:17:58,208 ಏನು? 292 00:17:59,041 --> 00:18:00,458 ಶರ್ಲಾಕ್‌ ಮರೆಯಲ್ಲಿ ಇರೋದು. 293 00:18:03,125 --> 00:18:04,833 ಅವನೇ ಮುಖ್ಯ ವ್ಯಕ್ತಿ ಅಲ್ವಾ? 294 00:18:04,916 --> 00:18:09,541 ಮತ್ತು ನೀನು, ಮೋರಿಯಾರ್ಟಿ, ಅವನ ಚಮಚ. 295 00:18:14,625 --> 00:18:15,875 ನಾನು ಅವನ ಚಮಚ ಅಲ್ಲ. 296 00:18:41,750 --> 00:18:44,458 -ನಾವು ಕಾರ್ಖಾನೆಯಿಂದ ಹಿಂದಿರುಗಿದ ಕೂಡಲೇ… -ಹೇ, ಹೇ, ಹೇ. 297 00:18:45,208 --> 00:18:46,583 ಶರ್ಲಾಕ್‌‌ನನ್ನು ಕಳಿಸಿಬಿಡಿ. 298 00:18:48,333 --> 00:18:51,250 ಖಂಡಿತ ನಿನಗದೇ ಬೇಕಿರುತ್ತೆ. ನಿನಗೆ ನೀನೇ ಇಲ್ಲಿಯ ರಾಣಿಯಾಗಿರಬೇಕು. 299 00:18:52,250 --> 00:18:54,208 ಎಲ್ಲದಕ್ಕೂ ಒಂದು ಕಾಲ ಅಂತ ಇರುತ್ತೆ. 300 00:18:58,583 --> 00:19:00,291 ಎಲ್ಲರೂ ಚೆನ್ನಾಗಿ ಮಲಗಿದಿರಿ ಅಂದುಕೊಳ್ಳುವೆ. 301 00:19:01,708 --> 00:19:05,208 ಶು'ಆನ್ ನೀನು ಹೇಳಿದ ಕಡೆ ಇರಲಿಲ್ಲ, ಶರ್ಲಿ. 302 00:19:05,291 --> 00:19:06,708 ಎಂತಹ ನಾಚಿಕೆಗೇಡಿನ ವಿಷಯ. 303 00:19:06,791 --> 00:19:07,958 ಬೇಜಾರಾಯಿತು. 304 00:19:08,041 --> 00:19:09,750 -ಮಂಚದ ಕೆಳಗೆ ನೋಡಿದಿರಾ? -ಇಲ್ಲ. 305 00:19:09,833 --> 00:19:13,791 ಹಾಗಾಗಿ ನಾವು "ಮಂಚದ ಕೆಳಗೆ ನೋಡುವವರೆಗೂ" ನೀವು ಇಲ್ಲೇ ಉಳಿದುಕೊಳ್ಳಬೇಕಾಗುತ್ತೆ. 306 00:19:13,875 --> 00:19:15,125 ಮೈಕ್ರಾಫ್ಟ್‌. 307 00:19:16,958 --> 00:19:20,791 ರಾಣಿಯ ಸರ್ಕಾರಕ್ಕೆ ಆಶ್ವಾಸನೆ ಕಳಿಸು, ಅವರ ಅಸ್ತ್ರಗಳು ಅವರನ್ನು… 308 00:19:20,875 --> 00:19:22,083 ವಾರಾಂತ್ಯದೊಳಗೆ ತಲುಪುತ್ತೆ. 309 00:19:22,166 --> 00:19:24,000 -ವಾರಾಂತ್ಯದೊಳಗೆ ತಲುಪುತ್ತೆ ಅಂತ. -ಖಂಡಿತ. 310 00:19:25,541 --> 00:19:26,833 ಕ್ಷಮಿಸು, ಶರ್ಲಾಕ್‌. 311 00:19:28,125 --> 00:19:29,208 ಅಮ್ಮ. 312 00:19:29,291 --> 00:19:30,333 ಬೇಗ ಹೋಗು. 313 00:19:30,416 --> 00:19:34,041 ಅವನನ್ನು ಸಂದೇಶ ಕಛೇರಿಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಾ. 314 00:19:34,125 --> 00:19:35,375 ನನ್ನ ಪುಟ್ಟ ಕೆಲಸದ ಹುಡುಗ. 315 00:19:36,041 --> 00:19:37,375 ಬೀಟ್ರಿಸ್‌ ಜೊತೆ ಮಾತಾಡಿದಿರಾ? 316 00:19:37,458 --> 00:19:39,291 ಶು'ಆನ್ ಸಿಗುವವರೆಗೂ ಮಾತಾಡಲ್ಲ. 317 00:19:41,416 --> 00:19:42,916 ಸರಿ. ಹೊರಡೋಣ. 318 00:19:54,125 --> 00:19:57,666 -ಒರಟಾಗಿರುವ ಅವಶ್ಯಕತೆ ಇಲ್ಲ. -ನಿಜ, ಮಗಳೇ. ನಿಜ. 319 00:19:57,750 --> 00:19:59,208 ಕಂದ, ನೋಡಿದೆಯಾ? 320 00:19:59,291 --> 00:20:03,041 ಅವಳೊಳಗೆ ಬೀ ಇನ್ನೂ ಇದ್ದಾಳೆ, ಅವಳನ್ನು ಸೈಲಸ್‌ನಿಂದ ದೂರ ಮಾಡಬೇಕಷ್ಟೇ. 321 00:20:03,583 --> 00:20:05,541 ಅವಳು ಅರಿತುಕೊಳ್ಳುತ್ತಾಳೆ, ಮಿಸಸ್ ಹೋಮ್ಸ್. 322 00:20:06,291 --> 00:20:07,458 ಕಾದು ನೋಡೋಣ. 323 00:20:17,875 --> 00:20:18,916 ಧನ್ಯವಾದ. 324 00:20:20,291 --> 00:20:22,625 ನಾನು ಲಂಡನ್‌ಗೆ ಒಂದು ಸಂದೇಶ ಕಳಿಸಬೇಕು. ತುರ್ತಾಗಿ. 325 00:20:25,166 --> 00:20:26,541 ನೀನಾ? 326 00:20:27,500 --> 00:20:28,750 ಧನ್ಯವಾದ. 327 00:20:31,666 --> 00:20:34,041 ಥತ್. ಇದನ್ನು ಚೂಪು ಮಾಡಿ ಕೊಡುವಿರಾ? 328 00:20:34,833 --> 00:20:35,875 ಧನ್ಯವಾದ. 329 00:20:45,000 --> 00:20:45,875 ತಿರುಗು. 330 00:20:46,416 --> 00:20:47,708 ಬಾಗಿಲು ತೆರೆ. 331 00:20:49,291 --> 00:20:50,458 ಒಳಗೆ ಹೋಗು. 332 00:20:51,083 --> 00:20:52,208 ಒಳ್ಳೆಯ ಹುಡುಗ. 333 00:20:55,291 --> 00:20:56,541 ಪೆನ್ಸಿಲ್ ಬಗ್ಗೆ ಕ್ಷಮೆಯಿರಲಿ. 334 00:21:09,000 --> 00:21:10,000 ಬನ್ನಿ. 335 00:21:12,750 --> 00:21:13,875 ರಾಜಕುಮಾರಿ. 336 00:21:14,625 --> 00:21:16,500 ನಾನು ರಾಜಕುಮಾರಿ ಅಲ್ಲ ಅಂತ ನಿನಗೆ ಗೊತ್ತು. 337 00:21:16,583 --> 00:21:17,958 ಅಭ್ಯಾಸ ಬಲ. 338 00:21:18,833 --> 00:21:20,250 ನಿನ್ನ ಸಹಾಯ ಬೇಕು. 339 00:21:22,500 --> 00:21:25,458 ಅವರ ದಿನಚರಿ ನೋಡಿದರೆ, ಎಲ್ಲೂ ದೌರ್ಬಲ್ಯ ಕಾಣುತ್ತಿಲ್ಲ. 340 00:21:25,541 --> 00:21:26,833 ನಾವು ಅವರನ್ನು ಹೊಡೆದುರುಳಿಸಬಹುದು. 341 00:21:26,916 --> 00:21:29,708 ಅವರ ಬಳಿ ಅಸ್ತ್ರಗಳಿವೆ, ಹೆಚ್ಚು ಜನರೂ ಇದ್ದಾರೆ. 342 00:21:29,791 --> 00:21:32,666 ಸ್ಪಾರ್ಟನ್ಸ್ ಸುಮ್ಮನೆ ಕೂರಲಿಲ್ಲ. ಯೋಜನೆ ಹಾಕಬೇಕು ಅಷ್ಟೇ. 343 00:21:32,750 --> 00:21:35,041 ಇರಿ. ಅದು… 344 00:21:35,125 --> 00:21:36,541 ಮೈಕ್ರಾಫ್ಟ್‌. 345 00:21:36,625 --> 00:21:37,666 ಅವನು ಏನು ಮಾಡುತ್ತಿದ್ದಾನೆ? 346 00:21:37,750 --> 00:21:39,791 ನಿನ್ನತ್ತ ಕೈಬೀಸುತ್ತಿರುವಂತೆ ಇದೆ. 347 00:21:40,833 --> 00:21:43,291 ಇಷ್ಟು ಮಾಡಿ ಮತ್ತೆ ನಾನವನನ್ನು ನಂಬುವೆ ಅಂದುಕೊಂಡಿದ್ದರೆ 348 00:21:43,375 --> 00:21:44,666 ಅವನಿಗೆ ಹುಚ್ಚು. 349 00:21:44,750 --> 00:21:45,833 ಇಲ್ಲ, ಅಮ್ಮ, ನೋಡು. 350 00:21:47,166 --> 00:21:48,541 ಅವನು ನಮಗೆ ದ್ರೋಹ ಬಗೆಯಲಿಲ್ಲ. 351 00:21:50,958 --> 00:21:53,291 ಹೂಂ. ಹಲೋ. ಕೇಳಿ. 352 00:21:53,375 --> 00:21:55,583 ನಾನು ಅಪ್ಪನಿಗಾಗಿ ಒಂದು ತುರ್ತು ಕೆಲಸ ಮಾಡಬೇಕಿದೆ. 353 00:21:55,666 --> 00:21:57,541 ನೀವು ಈಗಲೇ ಗೇಟು ತೆರೆಯದಿದ್ದರೆ, 354 00:21:57,625 --> 00:22:00,083 ನಿಮ್ಮ ತಲೆಯನ್ನು ರಾತ್ರಿಯೊಳಗೆ ದೇಹದಿಂದ ಬೇರೆ ಮಾಡಿಡುವರು. 355 00:22:02,291 --> 00:22:04,333 ನಾವು ಮೇಲೆ ಹೋಗುತ್ತಿದ್ದೇವೆ. 356 00:22:10,125 --> 00:22:11,166 ತೆರೆಯಲ್ವಾ? 357 00:22:14,708 --> 00:22:16,000 ಅದನ್ನು ನೋಡಿ. 358 00:22:17,416 --> 00:22:18,791 ಕೀಲಿ ಕೊಡಿ, ದಯವಿಟ್ಟು. 359 00:22:19,750 --> 00:22:21,458 ಅದು ನನ್ನ ಬಳಿ ಇದ್ದರೆ ಒಳ್ಳೆಯದು. 360 00:22:22,708 --> 00:22:23,708 ಕ್ಷಮಿಸಿ. 361 00:22:28,500 --> 00:22:31,083 -ಅದ್ಭುತ ಕೆಲಸ, ಪ್ರಿಯ ಅಣ್ಣ. -ಧನ್ಯವಾದ, ಪ್ರಿಯ ತಮ್ಮ. 362 00:22:31,166 --> 00:22:33,416 -ಎಲ್ಲವೂ ಸುಗಮವಾಗಿ ನಡೆಯಿತು. -ಹೂಂ, ಹೌದು. 363 00:22:36,750 --> 00:22:38,083 ಬಗ್ಗಿ! 364 00:22:38,166 --> 00:22:39,250 ಅಮ್ಮ. 365 00:22:51,000 --> 00:22:52,250 ಚೆನ್ನಾಗಿರು. 366 00:22:57,750 --> 00:23:00,083 -ಬಂದಿದ್ದಕ್ಕಾಗಿ ಧನ್ಯವಾದ. -ನನಗೆ ನಿನ್ನನ್ನು ಮತ್ತೆ ನೋಡಬೇಕಿತ್ತು. 367 00:23:02,250 --> 00:23:03,625 ನಿನ್ನ ತಂದೆಯನ್ನು ಕೊಲ್ಲಲೂಬೇಕಿತ್ತು. 368 00:23:41,458 --> 00:23:42,625 ಗುಂಡು ಹಾರಿಸೋದು ನಿಲ್ಲಿಸಿ! 369 00:23:43,958 --> 00:23:46,125 -ಅಮ್ಮ, ಬಾ. -ಅಮ್ಮ, ಏನಾಗಿಲ್ಲ ತಾನೇ? 370 00:23:46,208 --> 00:23:48,333 ಸ್ವಲ್ಪ ಭಯವಾಗಿದೆ ಅಷ್ಟೇ. 371 00:23:50,333 --> 00:23:51,875 ದೇವರೇ, ಜೀವ ಬಂದಂತಿದೆ! 372 00:23:51,958 --> 00:23:53,416 ನಿನ್ನನ್ನು ಅನುಮಾನಿಸಿದೆ, ಕ್ಷಮಿಸು. 373 00:23:53,500 --> 00:23:56,625 ಪರವಾಗಿಲ್ಲ. ನನಗೂ ನನ್ನ ಮೇಲೆ ಸಂದೇಹ ಇತ್ತು, ಪರಿಸ್ಥಿತಿಯೇ ಹಾಗಿದೆ. 374 00:23:56,708 --> 00:23:57,875 ಅದ್ಭುತ ಆಟ. 375 00:23:57,958 --> 00:23:59,000 ನಿನ್ನದೂ. 376 00:23:59,708 --> 00:24:00,750 ನಿನ್ನ ಅಪ್ಪ ಎಲ್ಲಿದ್ದಾರೆ? 377 00:24:02,875 --> 00:24:03,958 ಅವರ ಕಾರ್ಖಾನೆಯಲ್ಲಿ. 378 00:24:04,791 --> 00:24:06,041 ಎಲ್ಲಿ? 379 00:24:06,125 --> 00:24:07,125 ನಮಗೆ ಗೊತ್ತಿಲ್ಲ. 380 00:24:07,791 --> 00:24:08,791 ಇನ್ನೂ. 381 00:24:08,875 --> 00:24:12,083 ಈ ಕಾರ್ಖಾನೆ ಎಲ್ಲಿರಬಹುದೆಂದು ಯಾವುದಾದರೂ ಸುಳಿವು ಸಿಕ್ಕಿತಾ? 382 00:24:12,166 --> 00:24:13,958 ಇಲ್ಲ. ಏನೂ ಇಲ್ಲ. 383 00:24:14,041 --> 00:24:16,041 ಏನಾದರೂ ಇರಬಹುದು, ಒಂದು ಪುಟ್ಟ ಸುಳಿವು. 384 00:24:17,291 --> 00:24:20,583 ಇದು? ನೋಡಲು ನಕ್ಷೆಯಂತೆ ಕಾಣುತ್ತಿದೆ. 385 00:24:20,666 --> 00:24:23,833 ಪ್ರಯೋಜನವಿಲ್ಲ. "ಉತ್ತರ" ಯಾವ ಕಡೆ ಎಂದೂ ಅದರ ಮೇಲೆ ಗುರುತಿಸಿಲ್ಲ. 386 00:24:23,916 --> 00:24:24,916 ಸರಿ. 387 00:24:29,375 --> 00:24:30,416 ನೆಲ. 388 00:24:31,000 --> 00:24:33,833 -ನೆಲಕ್ಕೆ ಏನಾಗಿದೆ? -ನೆಲ ಹಾಳಾಗಿದೆ. 389 00:24:33,916 --> 00:24:35,333 ಮತ್ತೆ ಮತ್ತೆ ಓಡಾಡುವುದರಿಂದ. 390 00:24:35,416 --> 00:24:36,916 ಅದೂ ಗೋಡೆಯ ಕೆಳಗಿನ ನೆಲ. 391 00:24:37,000 --> 00:24:39,750 ಗೋಡೆಯ ಕೆಳಗಿರುವ ನೆಲ ಹೇಗೆ ಹಾಳಾಗುತ್ತೆ? 392 00:24:39,833 --> 00:24:40,916 ಹಾಳಾಗಬಾರದು. 393 00:24:42,000 --> 00:24:43,083 ಏನಾದರೂ… 394 00:24:52,208 --> 00:24:53,250 ಹಾಗೇ ಒಂದು ಆಲೋಚನೆ. 395 00:25:04,333 --> 00:25:06,458 ನನಗೆ ರಹಸ್ಯ ಸುರಂಗಗಳು ಇಷ್ಟ. 396 00:25:07,500 --> 00:25:08,500 ಸರಿ. 397 00:25:10,958 --> 00:25:12,583 ಹಳೆಯ ಜವಳಿ ಅಂಗಡಿಯಂತೆ ಇದೆ. 398 00:25:14,125 --> 00:25:16,083 ಇದನ್ನು ಯಾಕೆ ರಹಸ್ಯವಾಗಿ ಇಡಬೇಕು? 399 00:25:17,791 --> 00:25:19,458 ದೇವರೇ. 400 00:25:21,333 --> 00:25:24,666 ಕಂದ, ಬೀ ಚಿಕ್ಕ ಹುಡುಗಿಯಾಗಿದ್ದಾಗ ಅವಳ ಬಳಿ ಈ ಗೊಂಬೆ ಇತ್ತು. 401 00:25:24,750 --> 00:25:25,750 ನಿನಗೆ ನೆನಪಿದೆಯಾ? 402 00:25:29,791 --> 00:25:30,791 ಇದು ಅಫೀಮು. 403 00:25:31,958 --> 00:25:34,625 ಜವಳಿ ಅಂಗಡಿ ಸ್ಥಾಪಿಸಿ ಮಾರಾಟ ಜಾಲ ಸೃಷ್ಟಿಸುತ್ತಾರೆ-- 404 00:25:34,708 --> 00:25:37,750 -ಆಮೇಲೆ ಅದನ್ನು ಕಳ್ಳಸಾಗಣೆಗೆ ಬಳಸುತ್ತಾರೆ. -ಮತ್ತು ಈಗ ಇವುಗಳನ್ನೇ ಬಳಸಿ 405 00:25:37,833 --> 00:25:39,333 ಆ ನರದ ವಿಷವನ್ನು ಸಾಗಿಸುತ್ತಾರೆ. 406 00:25:39,416 --> 00:25:40,416 ಇಲ್ಲಿ ನೋಡಿ. 407 00:25:41,041 --> 00:25:43,833 ಪ್ರೊ. ಥಾಮ್ಸನ್, ಮಾಲಿಕ್… 408 00:25:45,000 --> 00:25:47,208 ರಾಬರ್ಟ್ಸ್ ಮತ್ತು ಎನ್ರೈಟ್. 409 00:25:48,083 --> 00:25:50,583 ಅವರ ದನಿ ತರಂಗಗಳ ಮೇಲಿನ ಪ್ರಯೋಗವನ್ನು 410 00:25:50,666 --> 00:25:53,708 ವಿಷ ವಿಭಿನ್ನ ಹವಾಮಾನಗಳಲ್ಲಿ ಹೇಗೆ ಕೆಲಸ ಮಾಡುತ್ತಂತ ಪರೀಕ್ಷಿಸಲು ಬಳಸುತ್ತಿದ್ದಾರೆ. 411 00:25:53,791 --> 00:25:56,666 ಪಥಗಳು. ಇವು ಪಥಗಳ ಸಮೀಕರಣಗಳು. 412 00:25:57,375 --> 00:25:58,458 ರಾಕೆಟ್‌ಗಳು. 413 00:25:59,583 --> 00:26:03,208 ಅವರು ರಾಕೆಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ನರದ ವಿಷವನ್ನು ಹರಡಲು ರಾಕೆಟ್‌ಗಳು. 414 00:26:03,291 --> 00:26:05,500 ಮೇಲಿಂದ ಸಾವಿನ ಮಳೆ ಸುರಿಸಲು ರಾಕೆಟ್‌ಗಳು. 415 00:26:07,708 --> 00:26:08,958 ಪ್ರೊ. ಮಾಲಿಕ್. 416 00:26:12,083 --> 00:26:13,125 "ಥಾನಾಟೈಟ್." 417 00:26:13,708 --> 00:26:15,666 ನನ್ನ ಜನರ ಭೂಮಿಯಲ್ಲಿರುವ ಖನಿಜ. 418 00:26:18,458 --> 00:26:19,541 ಮತ್ತು ಇದು. 419 00:26:20,291 --> 00:26:23,125 ಅದನ್ನು ಮರಣ ಸಾಧನವನ್ನಾಗಿ ಮಾರ್ಪಡಿಸಲು ಇದು ಅವರ ಸೂತ್ರ. 420 00:26:23,208 --> 00:26:24,500 ಜೇಮ್ಸ್‌. 421 00:26:24,583 --> 00:26:26,208 -ನಮ್ಮ ಮೊದಲ ಭೇಟಿ ನೆನಪಿದೆಯಾ? -ಹಾಂ. 422 00:26:26,833 --> 00:26:29,791 ನಾವು ಹೊಸ ಸಂಖ್ಯೆಗಳನ್ನು ಸೃಷ್ಟಿಸುತ್ತೇವೆ, ಆದರೆ ಆ ಸಂಖ್ಯೆಗಳು ನಿಜ ಕೂಡ ಅಲ್ಲ. 423 00:26:30,500 --> 00:26:31,583 ಅವು ಕಾಲ್ಪನಿಕ. 424 00:26:32,333 --> 00:26:35,041 ಪರಿಹರಿಸಲಾಗದ ಸಮೀಕರಣಗಳನ್ನು ಪರಿಹರಿಸಲು ರಚಿಸಲಾದ ಕಾಲ್ಪನಿಕ ಸಂಖ್ಯೆಗಳು. 425 00:26:35,125 --> 00:26:36,875 ಎರಡು ಪರಿಹಾರಗಳು. ವಿರುದ್ಧಾತ್ಮಕ ಅಥವಾ ಪೂರಕ. 426 00:26:36,958 --> 00:26:38,625 ಎಲ್ಲಾ ಸಮೀಕರಣಗಳಿಗೂ ಮತ್ತೊಂದು ಪರಿಹಾರ ಇರುತ್ತೆ. 427 00:26:38,708 --> 00:26:41,041 -ಋಣಾತ್ಮಕವನ್ನು ಪ್ರತಿಬಿಂಬಿಸಲು-- -ಧನಾತ್ಮಕ. 428 00:26:41,125 --> 00:26:43,875 -ಧನಾತ್ಮಕ ಇದ್ದಲ್ಲಿ… -ಋಣಾತ್ಮಕವನ್ನು ಹುಡುಕಿ ತೆಗೆಯಬಹುದು. 429 00:26:43,958 --> 00:26:47,125 ಮತ್ತು ಈ ವಿಷವನ್ನು ತಟಸ್ಥಗೊಳಿಸುವ ರಸಾಯನವನ್ನು ತಯಾರಿಸಬಹುದು. 430 00:26:47,208 --> 00:26:49,375 ಸೈದ್ಧಾಂತಿಕವಾಗಿ, ನಾವು ಸೈಲಸ್‌‌ರನ್ನು ಸೋಲಿಸಬಹುದು. 431 00:26:50,333 --> 00:26:51,791 ಸೈದ್ಧಾಂತಿಕವಾಗಿ, ಹೌದು. 432 00:26:53,875 --> 00:26:55,083 ಏನು? ಏನಾದರೂ ಸಮಸ್ಯೆ ಇದೆಯಾ? 433 00:26:56,333 --> 00:26:57,833 ಈ ಸಮೀಕರಣ ಮುಗಿದಿಲ್ಲ. 434 00:26:58,666 --> 00:27:00,875 ಶರ್ಲಾಕ್‌, ಬಂದು ಇದನ್ನು ನೋಡು. 435 00:27:02,166 --> 00:27:07,041 ನೋಡು, ಈ ಎಲ್ಲಾ ಗೆರೆಗಳು ಬಂದು ವೃತ್ತದ ಹೃದಯಭಾಗದಲ್ಲಿ ಸೇರುತ್ತವೆ. 436 00:27:07,125 --> 00:27:09,791 -ಇದು ಸ್ಫೋಟದ ತ್ರಿಜ್ಯ ಇರಬಹುದಾ? -ನರ ವಿಷ ಹರಡುವ ದೂರ. 437 00:27:09,875 --> 00:27:13,458 ಎಲ್ಲವೂ ಒಂದೇ ಜಾಗದಿಂದ ಶುರು ಆಗುತ್ತಿವೆ. 438 00:27:14,625 --> 00:27:15,583 "ಅಫ್ಶಿನ್." 439 00:27:15,666 --> 00:27:16,666 ಅವರ ಕಾರ್ಖಾನೆ ಅಲ್ಲಿರಬಹುದಾ? 440 00:27:16,750 --> 00:27:17,750 ಇಲ್ಲಿಗೆ ಕರೆದೊಯ್ಯಬಲ್ಲೆಯಾ? 441 00:27:19,250 --> 00:27:21,500 ಹೂಂ. ಒಂದು ದಿನದಷ್ಟು ಸವಾರಿ ಮಾಡಬೇಕಾಗುತ್ತೆ. 442 00:27:21,583 --> 00:27:23,583 ಸರಿ ಹಾಗಾದರೆ, ಹೋಗಿ ಬೀಟ್ರಿಸ್‌‌ಳನ್ನು ಹುಡುಕೋಣ. 443 00:27:23,666 --> 00:27:27,333 ಬೇಗ, ನನಗೊಂದು ದಾರಿ ಗೊತ್ತು. ಬೆಟ್ಟದ ಮೂಲಕ ಹೋಗಬಹುದು. 444 00:27:32,958 --> 00:27:34,583 ಒಂದು ವಿಷಯ ಹೇಳಿ. 445 00:27:34,666 --> 00:27:35,708 ಏನು? 446 00:27:35,791 --> 00:27:37,583 ಅವರಿಗೆ ಗೊತ್ತಿತ್ತು, ಅಲ್ವಾ? 447 00:27:37,666 --> 00:27:38,750 ಮಿಸಸ್ ಟಿಲ್ಕಾಟ್ ಅವರಿಗೆ? 448 00:27:38,833 --> 00:27:40,875 ನಾನು ಎಲ್ಲಿಯವಳು ಅಂತ ಅವರಿಗೆ ಗೊತ್ತಿತ್ತು. 449 00:27:40,958 --> 00:27:42,625 ಈಗ ಯಾಕೆ ಇದನ್ನು ಕೇಳುತ್ತಿದ್ದೀಯ? 450 00:27:43,750 --> 00:27:45,083 ಯಾಕೆಂದರೆ ಈಗ ನನಗೆ ತಿಳಿಯಬೇಕು. 451 00:27:45,916 --> 00:27:49,625 ನನ್ನ ಪರಿಚಯದವರು ನಿನ್ನ ಕಾಳಜಿ ವಹಿಸಲಿ ಅಂತ ಹಾಗೆ ಮಾಡಿದೆ. 452 00:27:50,333 --> 00:27:52,083 ಇದರಿಂದನಾ ನಾನು ನಿನಗೆ ಸಿಕ್ಕಿದ್ದು? 453 00:27:52,666 --> 00:27:54,541 ಆಗಲೇ ಯಾಕೆ ನನ್ನನ್ನು ಕಳಿಸಿಬಿಡಲಿಲ್ಲ? 454 00:27:54,625 --> 00:27:57,625 ನಿನ್ನ ಅಮ್ಮನಿಂದಾಗಿ ಅಲ್ವಾ? ಅವಳಿಂದಾಗಿಯೇ ಇವೆಲ್ಲಾ ಪ್ರಶ್ನೆಗಳು. 455 00:27:58,416 --> 00:27:59,750 ಅವಳು ನಿನ್ನ ಮನವೊಲಿಸಲು ನೋಡಿದ್ದಾಳೆ. 456 00:28:00,500 --> 00:28:05,208 ಎಲ್ಲರಿಗೂ ಹಾಗೆ ಮಾಡುತ್ತಾಳೆ, ನನಗೆ ಗೊತ್ತು. ಸುಳ್ಳು ಹೇಳುತ್ತಾಳೆ, ಮೋಸ ಮಾಡುತ್ತಾಳೆ. 457 00:28:06,208 --> 00:28:07,500 ಅವಳ ಬಗ್ಗೆ ನಿನಗೆ ಎಚ್ಚರಿಸಿದ್ದೆ. 458 00:28:09,416 --> 00:28:11,958 ನಿನಗೆ ನಿನ್ನ ಬಗ್ಗೆಯೇ ಸಂದೇಹ ಮೂಡಲ್ಲ. 459 00:28:12,041 --> 00:28:13,791 ನನ್ನ ಬಗ್ಗೆ ಸಂದೇಹ ಮೂಡುತ್ತಿಲ್ಲ. 460 00:28:14,875 --> 00:28:16,083 ನಿಮ್ಮ ಬಗ್ಗೆ ಮೂಡುತ್ತಿದೆ. 461 00:28:17,666 --> 00:28:19,000 ಏನು ನಿನ್ನ ಮಾತಿನ ಅರ್ಥ? 462 00:28:20,541 --> 00:28:23,041 ಅವಳು ನಿಜಕ್ಕೂ ನನಗೆ ಹಾನಿ ಮಾಡುವವಳಿದ್ದಳಾ? ಅಮ್ಮ. 463 00:28:23,791 --> 00:28:25,625 ಅದಕ್ಕೇನಾ ನೀವು ನಿಜವಾಗಲೂ ನನ್ನನ್ನು ದೂರ ಮಾಡಿದ್ದು? 464 00:28:29,125 --> 00:28:30,291 ನೀನು ಶರ್ಲಾಕ್‌‌ಗೆ ಹೇಳುವೆಯಾ, 465 00:28:30,375 --> 00:28:32,875 ನೆನ್ನೆ ರಾತ್ರಿ ಅವನ ಗೆಳೆಯನ ಜೊತೆ ಸರಸ ಮಾಡಿದ ಬಗ್ಗೆ? 466 00:28:34,500 --> 00:28:36,000 ಖಂಡಿತ ಹೇಳಲ್ಲ. ಯಾಕೆ? 467 00:28:37,250 --> 00:28:39,708 ಯಾಕೆಂದರೆ ನಾವು ನಮ್ಮ ಆಸೆಗೆ ಮಣಿಯುವವರು, ಬೀಟ್ರಿಸ್‌. 468 00:28:39,791 --> 00:28:42,791 ನಾವು ಸ್ವಾರ್ಥಿಗಳು. 469 00:28:43,541 --> 00:28:46,083 ಖಂಡಿತ, ನಿನಗೆ ಅದು ಅರ್ಥ ಆಗುತ್ತೆ. 470 00:28:47,500 --> 00:28:49,833 ನೀವು ಶರ್ಲಾಕ್‌ ಜೊತೆ ಹೇಗೆ ಮಾತಾಡುತ್ತೀರಿ ಕೇಳಿದ್ದೇನೆ. 471 00:28:49,916 --> 00:28:54,000 ನನ್ನ ಕಡೆ ಇರಲು ಅವನಿಗೆ ಏನು ಹೇಳಬೇಕೋ ಅದನ್ನೇ ಹೇಳುತ್ತೇನೆ. 472 00:28:55,000 --> 00:28:56,583 ನನಗೂ ಅದನ್ನೇ ತಾನೇ ನೀವು ಮಾಡೋದು? 473 00:28:59,000 --> 00:29:00,625 ಈರ್ಷ್ಯೆ ನಿನಗೆ ಶೋಭೆಯಲ್ಲ, ಬೀ. 474 00:29:01,583 --> 00:29:04,125 ಅಲ್ಲದೆ, ನಾವು ಮೂವರು ಒಟ್ಟಿಗೆ… 475 00:29:05,375 --> 00:29:07,000 ಅದೇನು ಅಷ್ಟು ಕೆಟ್ಟದಾಗಿರುತ್ತಾ? 476 00:29:16,958 --> 00:29:18,583 ರಾತ್ರಿ ಇಲ್ಲೇ ಶಿಬಿರ ಹೂಡೋಣ. 477 00:29:21,250 --> 00:29:23,625 ಈಗ, ನಿನ್ನ ತಂಗಿ ವಾಪಸ್ ಬರುತ್ತಾಳೆ ಅಂದುಕೊಳ್ಳೋಣ, 478 00:29:23,708 --> 00:29:25,583 ಮನೆಗೆ ಬರುತ್ತಾಳೆ, ಕುಟುಂಬ ಒಂದಾಗುತ್ತೀರಿ. 479 00:29:25,666 --> 00:29:27,291 ಯಾರೂ ಯಾರನ್ನೂ ಕೊಲ್ಲಲು ನೋಡಲ್ಲ. 480 00:29:28,583 --> 00:29:31,291 -ಮುಂದೆ ನಿನ್ನ ಯೋಜನೆ ಏನು? -ಅಷ್ಟು ಮುಂದಕ್ಕೆ ಇನ್ನೂ ಯೋಚಿಸಿಲ್ಲ. 481 00:29:32,083 --> 00:29:33,250 ನನಗಿನ್ನೂ ಗೊತ್ತಿಲ್ಲ. 482 00:29:34,166 --> 00:29:35,166 ನೀನು? 483 00:29:36,458 --> 00:29:38,166 ನಾನು ನಿನ್ನ ಜೊತೆ ನಿನ್ನ ಮನೆಗೆ ಬರುವೆ. 484 00:29:40,500 --> 00:29:42,250 ಬ್ರಿಟಿಷ್ ಸರ್ಕಾರ ನಿನ್ನಪ್ಪನ ಅಸ್ತ್ರಕ್ಕೆ 485 00:29:42,333 --> 00:29:44,583 ಒಳ್ಳೆಯ ಹಣ ನೀಡಬಹುದು ಅಂದುಕೊಂಡೆ. 486 00:29:44,666 --> 00:29:48,375 ಅಪ್ಪನಿಗೆ ಹಣವನ್ನು ನೀಡುವ ಯೋಜನೆಯ ಭಾಗ ನಾನು ಆಗಲ್ಲ, ಜೇಮ್ಸ್‌. 487 00:29:48,458 --> 00:29:50,833 ಅವರಿಗಲ್ಲ, ಶರ್ಲಾಕ್‌. ನಮಗೆ. 488 00:29:50,916 --> 00:29:52,541 -ನಮಗಾ? -ಹಾಂ. 489 00:29:53,375 --> 00:29:55,291 ನಾವು ಅದನ್ನು ನಾಶ ಮಾಡದಿದ್ದರೆ? 490 00:29:56,333 --> 00:29:58,708 ಅದನ್ನು ರಾಣಿಯ ಸರ್ಕಾರಕ್ಕೆ ವಾಪಸ್ ಮಾರಿದರೆ? 491 00:30:01,291 --> 00:30:02,291 ಯೋಚಿಸಿ ನೋಡು. 492 00:30:03,083 --> 00:30:06,000 ನಮಗೆ ಸ್ವಾತಂತ್ರ್ಯ ಸಿಗುತ್ತೆ, ಶರ್ಲಾಕ್‌. ಬೇಕಿದ್ದದ್ದು ಮಾಡಬಹುದು. 493 00:30:06,083 --> 00:30:09,750 ನಮ್ಮ ದೊಡ್ಡ, ದೊಡ್ಡ ಪ್ರತಿಮೆಗಳನ್ನು ಕಟ್ಟುತ್ತಾರೆ. ಯಾರೂ ನಮ್ಮ ದಾರಿಗೆ ಅಡ್ಡ ಬರಲ್ಲ. 494 00:30:14,791 --> 00:30:17,291 ಕೇಳು! ಕೇಳು, ತಮಾಷೆ ಮಾಡುತ್ತಿದ್ದೆ. 495 00:30:59,083 --> 00:31:03,083 -ಎಸಾದ್, ಇದನ್ನು ನೋಡಿಕೊಳ್ಳುವೆಯಾ, ದಯವಿಟ್ಟು? -ಸರಿ, ಸರ್. 496 00:31:03,916 --> 00:31:06,083 ಸರಿ. ಸಾಗಿಸಲು ಪ್ಯಾಕ್ ಮಾಡಲು ಶುರು ಮಾಡೋಣ. 497 00:31:08,541 --> 00:31:11,125 ನಾವು ಬ್ರಿಟಿಷರಿಗೆ ಮಾತ್ರ ಮಾರಲ್ಲ, ತಾನೇ? 498 00:31:11,666 --> 00:31:13,000 ನಿನಗೇನನಿಸುತ್ತೆ? 499 00:31:13,083 --> 00:31:15,875 ಬ್ರಿಟಿಷರೊಂದಿಗಿನ ವಹಿವಾಟು ಮುಗಿದ ಕೂಡಲೇ 500 00:31:15,958 --> 00:31:17,625 ಫ್ರೆಂಚ್‌ನವರಿಗೆ ಮಾರೋಣ. 501 00:31:19,083 --> 00:31:22,250 ಪ್ರಶ್ಯನ್ನರು, ರಷ್ಯನ್ನರು, ಚೀನಿಯರು. ಯಾರು ತೆಗೆದುಕೊಳ್ಳುತ್ತಾರೋ ಅವರಿಗೆ. 502 00:31:23,458 --> 00:31:25,083 ಸರ್ಕಾರಗಳಿಗೆ ಮಾತ್ರ ಯಾಕೆ? 503 00:31:25,166 --> 00:31:26,041 ಮತ್ತೆ? 504 00:31:26,125 --> 00:31:28,583 ಖಾಸಗಿ ಖರೀದಿದಾರರಿಗೆ, ಸಂಸ್ಥೆಗಳಿಗೆ? 505 00:31:28,666 --> 00:31:30,000 ಕೊಳ್ಳುವವರಿಗೆ ಬರವಿಲ್ಲ. 506 00:31:30,083 --> 00:31:33,291 ನಿನ್ನ ಆಕಾಂಕ್ಷೆಗಳು ಯಾವಾಗಲೂ ನನಗಿಂತ ಹೆಚ್ಚು. 507 00:31:34,250 --> 00:31:35,625 ನನ್ನ ಅದ್ಭುತ ಬೀ. 508 00:31:39,583 --> 00:31:41,250 ನನ್ನ ಅದ್ಭುತ ಬೀ. 509 00:31:43,250 --> 00:31:44,458 ತುಂಬಾ ಅದ್ಭುತ. 510 00:31:46,375 --> 00:31:48,833 -ಏನಾಯಿತು? -ನೀನು ಆಕ್ಸ್‌ಫರ್ಡ್‌ಗೆ ಹೋಗೋದು. 511 00:31:48,916 --> 00:31:50,166 ಅದು… 512 00:31:51,250 --> 00:31:54,250 ನೀನಲ್ಲಿ ಮೈಕ್ರಾಫ್ಟ್‌‌ನನ್ನು ಭೇಟಿಯಾಗುವ ಸಾಧ್ಯತೆ ಇದೆ, ಬಹುಶಃ ಶರ್ಲಾಕ್‌ನನ್ನೂ ಸಹ. 513 00:31:54,333 --> 00:31:56,708 ಅದು ನಿನಗೆ ಕಷ್ಟ ಆಗಬಹುದು. 514 00:31:56,791 --> 00:31:59,541 ಖಂಡಿತ, ನೀನು ಅವರಿಗೆ, ನೀನವರ ಸೋದರಿ ಅಂತ ಹೇಳಬಹುದು, ಆದರೆ… 515 00:32:01,166 --> 00:32:03,708 ನೀನು ಅದನ್ನು ಅವರಿಗೆ ತಿಳಿಸಿದರೆ… 516 00:32:05,291 --> 00:32:07,833 ನಾವು ಒಟ್ಟಿಗೆ ಮಾಡಿದ ಇಷ್ಟೆಲ್ಲಾ ಕೆಲಸವೂ, 517 00:32:10,291 --> 00:32:12,333 ಸಮಸ್ಯೆಗೆ ಒಳಗಾಗುವ ಅಪಾಯ ಇದೆ. 518 00:32:14,500 --> 00:32:16,875 ನಾನು ನಿಮಗೆ ಎಂದಿಗೂ ದ್ರೋಹ ಬಗೆಯಲ್ಲ, ಅಪ್ಪ. 519 00:32:18,208 --> 00:32:19,250 ಎಂದಿಗೂ. 520 00:32:22,916 --> 00:32:23,916 ಪ್ರೊ. ಮಾಲಿಕ್. 521 00:32:24,000 --> 00:32:25,166 ಮಿ. ಹೋಮ್ಸ್. 522 00:32:44,958 --> 00:32:45,958 ಅಫ್ಶಿನ್. 523 00:32:48,291 --> 00:32:49,333 ಅಗೋ ಅವರು ಅಲ್ಲಿದ್ದಾರೆ. 524 00:32:50,625 --> 00:32:52,125 ಹೋಗಿ ನೋಡೋಣವಾ? 525 00:32:52,875 --> 00:32:55,416 ಅದೆಲ್ಲಾ ಸರಿ, ಜೇಮ್ಸ್‌, ಆದರೆ ಒಳಗೆ ಹೋಗೋದು ಹೇಗೆ? 526 00:32:56,000 --> 00:32:58,208 ಯಾರಾದರೂ ಸಲಹೆ ನೀಡುವಿರಾ? 527 00:33:00,333 --> 00:33:01,416 ಒಂದು ನಿಮಿಷ. 528 00:33:12,583 --> 00:33:13,958 ಸೈಲಸ್‌‌ರ ಅಧ್ಯಯನ ಕೋಣೆಯಲ್ಲಿದ್ದ ನಕ್ಷೆ, 529 00:33:14,041 --> 00:33:15,958 ಈ ಪರ್ವತಗಳ ರೂಪುರೇಖೆಗೆ ಹೋಲುತ್ತೆ. 530 00:33:16,041 --> 00:33:17,166 ಅದು ಪ್ರಯೋಜನವಿಲ್ಲದ್ದು ಅಂದೆ. 531 00:33:17,250 --> 00:33:19,291 -"ಉತ್ತರ" ಅನ್ನೋದನ್ನೂ ಗುರುತಿಸಿಲ್ಲ ಅಂದೆ. -ಅದು ನಕ್ಷೆ ಅಲ್ಲ. 532 00:33:19,375 --> 00:33:21,166 ಅದು ನೀಲನಕ್ಷೆ. 533 00:33:21,250 --> 00:33:23,208 ಅವು ರಸ್ತೆಗಳಾಗಿರಲಿಲ್ಲ. ಸುರಂಗಗಳಾಗಿದ್ದವು. 534 00:33:23,291 --> 00:33:25,541 ಮತ್ತು ಆ ಸುರಂಗಗಳು ನಮ್ಮ ಕಾಲುಗಳ ಕೆಳಗಿವೆ. 535 00:33:26,916 --> 00:33:28,250 ಎರಡನೇ ಪ್ರವೇಶ ಇದೆ. 536 00:33:51,958 --> 00:33:53,500 -ಮೆಚ್ಚಿದೆ. -ಧನ್ಯವಾದ. 537 00:33:57,250 --> 00:33:58,291 ಅದು ಮಾಲಿಕ್. 538 00:33:59,250 --> 00:34:00,625 ನಾನು ಅವನ ಹಿಂದೆ ಹೋಗುವೆ. 539 00:34:00,708 --> 00:34:03,458 -ಇರು, ಇರು. -ನಾನು ಅವಳ ಜೊತೆ ಹೋಗುವೆ. ಜಾಗ್ರತೆ. 540 00:34:31,416 --> 00:34:32,458 ದಯವಿಟ್ಟು. 541 00:34:32,541 --> 00:34:34,541 ನನ್ನ ಗ್ರಾಮದಲ್ಲಿ, ಯಾರದಾದರೂ ಕೊಲೆಯಾದಾಗ, 542 00:34:35,166 --> 00:34:37,416 ಅವರ ಆತ್ಮಗಳು ಲಿಯಾನ್ ಯುನಲ್ಲಿ ಸಿಕ್ಕಿಬಿದ್ದಿವೆ ಎಂದು ನಂಬುತ್ತೇವೆ. 543 00:34:38,166 --> 00:34:40,541 -ಒಂದು ಪ್ರಪಾತದಲ್ಲಿ. -ನಾನೊಬ್ಬ ವಿಜ್ಞಾನಿ ಅಷ್ಟೇ. 544 00:34:41,375 --> 00:34:43,875 -ಸತ್ಯವನ್ನು ಅನ್ವೇಷಿಸುವವ. -ಅವರ ಕೊಲೆಗೆ ಪ್ರತೀಕಾರ ಸಿಕ್ಕ ಮೇಲೆ 545 00:34:43,958 --> 00:34:45,875 -ಅವರು ಮುಕ್ತರಾಗುವರು. -ಬೇಡ. 546 00:34:48,625 --> 00:34:53,750 ಇಂದು ನನ್ನ ಹೆತ್ತವರು ಮುಕ್ತರಾದರು. 547 00:35:06,791 --> 00:35:07,833 ಈ ಜಾಗವನ್ನು ಮಣ್ಣು ಮಾಡೋಣ. 548 00:35:18,166 --> 00:35:19,166 ಹಲೋ, ಬೀಟ್ರಿಸ್‌. 549 00:35:23,458 --> 00:35:24,708 ಖಂಡಿತ ನೀನು ನನ್ನನ್ನು ಹುಡುಕಿದೆ. 550 00:35:26,166 --> 00:35:27,666 ಎಷ್ಟೆಂದರೂ ನೀನೊಬ್ಬ ಹೋಮ್ಸ್. 551 00:35:29,291 --> 00:35:31,125 ನೀನು ನನ್ನಂತೆ ಇದ್ದೀಯೋ ಇಲ್ಲವೋ ಅಂತ ಯೋಚಿಸುತ್ತಿದ್ದೆ. 552 00:35:31,208 --> 00:35:33,000 ನಾನು ನಿನಗಿಂತ ಹಿರಿಯವ, 553 00:35:33,083 --> 00:35:35,500 ನೀನು ನನ್ನಂತೆ ಇರೋದು. 554 00:35:36,625 --> 00:35:37,708 ಬೀ. 555 00:35:41,000 --> 00:35:42,291 ಒಮ್ಮೆ ಮಾತು ಕೇಳು. 556 00:35:42,958 --> 00:35:44,166 ನನ್ನ ಮಾತು ಕೇಳು, ಕಂದ. 557 00:35:45,458 --> 00:35:47,625 ಎಲ್ಲಿಂದ ಶುರು ಮಾಡಬೇಕೋ ನನಗೆ ಗೊತ್ತಿಲ್ಲ. 558 00:35:49,000 --> 00:35:51,458 ನನ್ನನ್ನು ಹುಚ್ಚಾಸ್ಪತ್ರೆಯಲ್ಲಿ ಇಟ್ಟ ಅಷ್ಟೂ ದಿನಗಳು, 559 00:35:52,583 --> 00:35:55,458 ಅಷ್ಟೂ ವರ್ಷಗಳು, ನನ್ನನ್ನು ಜೀವಂತವಾಗಿಟ್ಟ ಒಂದು ವಿಷಯ ಎಂದರೆ 560 00:35:56,500 --> 00:35:57,958 ಅದು ನಿನ್ನ ಜೊತೆಗಿನ ನನ್ನ ನೆನಪುಗಳು. 561 00:35:58,666 --> 00:36:00,250 ನಿನಗೆ ಆ ಹಕ್ಕಿ ನೆನಪಿದೆಯಾ? 562 00:36:01,916 --> 00:36:06,916 ಕಾಡಿನಲ್ಲಿ ನಮಗೆ ಸಿಕ್ಕಿದ ರೆಕ್ಕೆ ಮುರಿದ ಆ ಹಕ್ಕಿ. 563 00:36:08,291 --> 00:36:09,416 ನೀನದನ್ನು ಬದುಕಿಸಬೇಕೆಂದಿದ್ದೆ. 564 00:36:10,750 --> 00:36:14,208 ನಾವು ಅದನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಿ, ಕೊಟ್ಟಿಗೆಯಲ್ಲಿ ಇಟ್ಟೆವು, 565 00:36:14,916 --> 00:36:17,083 ಪ್ರತಿದಿನ ಅದಕ್ಕೆ ಭೇಟಿ ನೀಡಿ ಅದಕ್ಕೆ ಆಹಾರ ನೀಡುತ್ತಿದ್ದೆವು. 566 00:36:18,208 --> 00:36:20,708 ಒಂದು ದಿನ ನಾವು ಅಲ್ಲಿಗೆ ಹೋದಾಗ… 567 00:36:22,458 --> 00:36:23,625 ಅದು ಹಾರಿ ಹೋಗಿತ್ತು. 568 00:36:25,041 --> 00:36:26,125 ಅದು ಬದುಕುಳಿಯಿತು. 569 00:36:27,458 --> 00:36:28,583 ಮತ್ತು ನೀನು ಈಗ ಇಲ್ಲಿದ್ದೀಯ. 570 00:36:30,000 --> 00:36:31,083 ಬದುಕುಳಿದಿದ್ದೀಯ. 571 00:36:32,333 --> 00:36:33,375 ನೀನು ಬದುಕುಳಿದೆ. 572 00:36:36,541 --> 00:36:37,625 ನನಗೆ ನೆನಪಿದೆ. 573 00:36:38,416 --> 00:36:39,375 ನೆನಪಿದೆಯಾ? 574 00:36:39,458 --> 00:36:41,000 ನನಗೆ ಆ ಹಕ್ಕಿಯ ನೆನಪಿದೆ. ನಾನು… 575 00:36:59,291 --> 00:37:00,416 ನಾನು ನಿನ್ನನ್ನು ನಂಬುತ್ತೇನೆ. 576 00:37:02,125 --> 00:37:03,166 ನಾನು ನಿನ್ನನ್ನು ನಂಬುತ್ತೇನೆ. 577 00:37:04,041 --> 00:37:05,083 ನನ್ನ ಕಂದ. 578 00:37:09,583 --> 00:37:10,625 ಧನ್ಯವಾದ. 579 00:37:13,833 --> 00:37:16,791 ನೀನು ನಮ್ಮ ಜೊತೆ ಬರುತ್ತೀಯಾ? ದಯವಿಟ್ಟು, ಕಂದ, ನಮ್ಮ ಜೊತೆ ಬರುವೆಯಾ? 580 00:37:18,208 --> 00:37:21,416 ಬರುವೆ, ಆದರೆ ಅದಕ್ಕೆ ಮುಂಚೆ ನಾನೇನೋ ಮಾಡಬೇಕು. 581 00:37:21,500 --> 00:37:23,416 -ಮುನ್ನಡೆ. -ನಾವು ಹಿಂದೆಯೇ ಬರುತ್ತೇವೆ. 582 00:37:29,750 --> 00:37:31,041 ಇಷ್ಟು ಸಾಕು. 583 00:37:32,625 --> 00:37:34,958 ಇದು ಪರ್ವತವನ್ನು ಉರುಳಿಸುತ್ತೆ. 584 00:37:39,291 --> 00:37:41,875 -ಜೇಮ್ಸ್‌, ಏನು ಮಾಡುತ್ತಿದ್ದೀಯಾ? -ಈಗ ಬಂದೆ. 585 00:37:54,208 --> 00:37:56,166 -ಅಪ್ಪ. -ಹೇಳು, ಬೀ. 586 00:37:56,250 --> 00:37:58,750 -ಯಾರು ಸಿಕ್ಕಿದರು ನೋಡಿ. -ಬೀಟ್ರಿಸ್‌. 587 00:38:00,958 --> 00:38:02,791 ದಾರಿಹೋಕರು ಸಿಕ್ಕಂತಿದೆ. 588 00:38:04,541 --> 00:38:05,708 ಶರ್ಲಾಕ್‌. 589 00:38:07,083 --> 00:38:08,250 ಈ ಜಾಗವನ್ನು ಹುಡುಕಿದ್ದು… 590 00:38:09,875 --> 00:38:11,208 ಅದ್ಭುತ ಜಾಣ್ಮೆ ನಿನ್ನದು. 591 00:38:16,583 --> 00:38:17,708 ಏನು ಮಾಡುತ್ತಿದ್ದೀಯಾ? 592 00:38:18,500 --> 00:38:20,833 ನಾನವರ ಮಾತು ಕೇಳಿಸಿಕೊಂಡೆ, ಶರ್ಲಾಕ್‌. ಉದ್ಯಾನದಲ್ಲಿ. 593 00:38:20,916 --> 00:38:24,583 ನನ್ನ ಬಲಗೈ ಬಂಟನಾಗು, ನನ್ನ ಉತ್ತರಾಧಿಕಾರಿಯಾಗು. 594 00:38:24,666 --> 00:38:26,583 ನನಗೂ ಅದೇ ಮಾತು ನೀಡಿದ್ದರು. 595 00:38:27,375 --> 00:38:28,500 ಬೀಟ್ರಿಸ್‌, ಇಲ್ಲ. 596 00:38:29,500 --> 00:38:31,375 ನಾನು ನಿನಗೆ ಎಲ್ಲವನ್ನೂ ನೀಡಿದೆ. 597 00:38:33,000 --> 00:38:35,375 ನನಗದು ಬೇಡ, ಬೀಟ್ರಿಸ್‌. ಸರಿನಾ? 598 00:38:35,458 --> 00:38:37,958 -ನನಗವರ ಉತ್ತರಾಧಿಕಾರಿ ಪಟ್ಟ ಬೇಡ. -ಬೀಟ್ರಿಸ್‌. 599 00:38:45,166 --> 00:38:46,416 ನಾನು ನಿನಗೆ ಎಂದೂ ದ್ರೋಹ ಬಗೆಯಲ್ಲ. 600 00:38:56,833 --> 00:38:57,958 ಹಚ್ಚು ಬೆಂಕಿ. 601 00:38:59,291 --> 00:39:00,916 ಜೇಮ್ಸ್‌! ಬೇಗ! ನಡಿ! 602 00:39:23,166 --> 00:39:24,583 ಆರಾಮಿದ್ದೀಯಾ? 603 00:39:25,166 --> 00:39:26,500 ಅವರು ಎಲ್ಲಿ ಹೋದರು? 604 00:39:27,458 --> 00:39:28,833 ಅವರೆಲ್ಲಿ? 605 00:39:28,916 --> 00:39:31,000 -ಅವರೆಲ್ಲಿ? -ನಾವು ಹೋಗಬೇಕು. ಬೇಗ. 606 00:39:31,583 --> 00:39:32,583 ಈ ಕಡೆ! 607 00:40:04,750 --> 00:40:05,791 ಶರ್ಲಾಕ್‌! 608 00:40:50,375 --> 00:40:52,250 ನಾನು ಬಂದು ನಿನ್ನನ್ನು ಹುಡುಕಬೇಕಾ? 609 00:40:53,708 --> 00:40:56,416 ಪರವಾಗಿಲ್ಲ. ನಿಮ್ಮಿಬ್ಬರ ಧ್ಯೇಯವೂ ಒಂದೇ. 610 00:41:09,708 --> 00:41:11,833 ನೀನು ಏನಾದರೂ ಹೇಳುವುದಿದೆಯಾ? 611 00:41:11,916 --> 00:41:12,791 ಇಲ್ಲ. 612 00:41:12,875 --> 00:41:16,916 ಶರ್ಲಾಕ್‌, ನೀನಲ್ಲಿ ಸುಮ್ಮನೆ ನಿಂತು ಅವರು ನಿರಸ್ತ್ರ ವ್ಯಕ್ತಿಯನ್ನು ಕೊಲ್ಲೋದನ್ನ ನೋಡುವೆಯಾ? 613 00:41:19,541 --> 00:41:20,541 ಇದೇನಾ ನಿನ್ನ ವ್ಯಕ್ತಿತ್ವ? 614 00:41:25,000 --> 00:41:26,000 ಶರ್ಲಾಕ್‌. 615 00:41:29,750 --> 00:41:30,708 ಇಷ್ಟು ನಿರ್ದಯವಾಗಿ ಅಲ್ಲ. 616 00:41:30,791 --> 00:41:32,375 ನೀನು ಮಾತು ಕೊಟ್ಟಿದ್ದೆ. 617 00:41:32,458 --> 00:41:34,750 ಅವರಿಗೆ ಅವರ ತಪ್ಪಿಗೆ ತಕ್ಕ ಶಿಕ್ಷೆ ಆಗುತ್ತೆ. 618 00:41:34,833 --> 00:41:37,666 ನಿನಗದನ್ನು ನಿರ್ಣಯಿಸುವ ಹಕ್ಕಿಲ್ಲ, ಶರ್ಲಾಕ್‌. ಅಡ್ಡ ಬರಬೇಡ. 619 00:41:37,750 --> 00:41:39,708 ನಾನು ಕದಲಲ್ಲ, ಬೀಟ್ರಿಸ್‌. 620 00:41:39,791 --> 00:41:42,166 ನನಗೆ ನನ್ನ ಅಪ್ಪನ ಮೇಲೇ ಗುಂಡು ಹಾರಿಸಲು ಹಿಂಜರಿಕೆ ಇಲ್ಲದಾಗ, 621 00:41:42,250 --> 00:41:43,875 ನಿನ್ನ ಮೇಲೆ ಕೂಡ ನಾನು ಗುಂಡು ಹಾರಿಸಬಲ್ಲೆ. 622 00:41:49,208 --> 00:41:50,041 ನಾನು ಕದಲಲ್ಲ. 623 00:41:55,625 --> 00:41:58,916 ಏನು ಮಾಡುತ್ತಿದ್ದೀರಿ? ಇಲ್ಲ, ಇಲ್ಲ, ನಿಲ್ಲಿಸಿ! ನನ್ನನ್ನು ಬಿಡಿ! 624 00:41:59,000 --> 00:42:00,875 ನಿಲ್ಲಿಸಿ! ಬಿಡಿ ನನ್ನನ್ನು! 625 00:42:00,958 --> 00:42:01,958 ಬಿಡಿ! 626 00:42:05,333 --> 00:42:07,250 ನಿನಗೆ ನನ್ನ ಮೇಲೆ ಪ್ರೀತಿ ಇತ್ತು ಅಂತ ಗೊತ್ತಿತ್ತು, ಕಂದ. 627 00:42:07,333 --> 00:42:08,458 ಇಲ್ಲ, ಬೇಡ. ಬೇಡ. 628 00:42:48,000 --> 00:42:49,375 ಇಷ್ಟೇ ಉಳಿದಿರೋದು. 629 00:42:52,125 --> 00:42:54,875 ಅವರು ಯಾವಾಗ ದಾರಿ ತಪ್ಪಿದರು ಅನಿಸುತ್ತೆ? 630 00:42:54,958 --> 00:42:56,583 ತಪ್ಪು ದಾರಿಯಲ್ಲಿ ಯಾವಾಗ ನಡೆದರು? 631 00:42:57,333 --> 00:42:59,708 ಹೂಂ, ಅವರ ಮಟ್ಟಿಗೆ, ಅವರದು ತಪ್ಪು ದಾರಿಯಲ್ಲ. 632 00:43:00,583 --> 00:43:03,583 ಎಲ್ಲವೂ ಉದ್ದೇಶಪೂರ್ವಕ, ಯೋಜಿಸಿದಂತೆ ಇತ್ತು. 633 00:43:03,666 --> 00:43:06,833 ಅವರಿಗೆ ಪಶ್ಚಾತ್ತಾಪ ಇರಲಿಲ್ಲ. 634 00:43:08,541 --> 00:43:09,791 ಅವರ ನೈತಿಕತೆಯೇ ಬೇರೆ. 635 00:43:09,875 --> 00:43:12,291 -ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದೀಯಾ? -ಇಲ್ಲ, ಮೈಕ್ರಾಫ್ಟ್‌. 636 00:43:12,375 --> 00:43:13,625 ಅರ್ಥ ಮಾಡಿಕೊಳ್ಳಲು ನೋಡುತ್ತಿದ್ದೇನೆ. 637 00:43:14,250 --> 00:43:15,708 ಅವರ ಅಪರಾಧಿ ವ್ಯಕ್ತಿತ್ವವನ್ನು… 638 00:43:17,416 --> 00:43:18,541 ಅರಿಯಲು ನೋಡುತ್ತಿದ್ದೇನೆ. 639 00:43:26,333 --> 00:43:27,333 ಶರ್ಲಾಕ್‌? 640 00:43:27,416 --> 00:43:28,750 ಇದು ಜೇನುಗೂಡಿನಂತಿದೆ. 641 00:43:31,375 --> 00:43:33,083 ಆಪಿಸ್ ಮೆಲ್ಲಿಫೆರಾ. 642 00:43:36,583 --> 00:43:37,833 ಜೇನ್ನೊಣಗಳು. 643 00:43:37,916 --> 00:43:39,375 ದಯವಿಟ್ಟು, ನಿಲ್ಲಿಸು. 644 00:43:39,458 --> 00:43:41,583 ಅವರು ಇದನ್ನು ನನಗೆ ನೀಡಿದರು, ಯಾಕೆ? 645 00:43:42,208 --> 00:43:45,208 ನಾವು ಪ್ರಕೃತಿಗಿಂತ ಮಿಗಿಲಾದವರಲ್ಲ. 646 00:43:45,875 --> 00:43:47,708 "ನಾವು ಪ್ರಕೃತಿಗಿಂತ ಮಿಗಿಲಾದವರಲ್ಲ." 647 00:43:49,083 --> 00:43:51,083 -ಅವರು ನನಗೆ ಆ ಮಾತುಗಳನ್ನು ಹೇಳಿದರು. -ಶರ್ಲಾಕ್‌? 648 00:43:52,166 --> 00:43:53,500 ನನಗೊಂದು ಜಾಡು ಬಿಟ್ಟು ಹೋಗುತ್ತಿದ್ದರು. 649 00:43:53,583 --> 00:43:56,791 ಸಾಕು, ಶರ್ಲಾಕ್‌. ದಯವಿಟ್ಟು. 650 00:43:56,875 --> 00:43:59,833 ಎಲ್ಲವೂ ಯೋಜಿಸಿದಂತೆ. ಒಂದೂ ಪದ ಆಚೆ ಈಚೆ ಇಲ್ಲದೆ. 651 00:43:59,916 --> 00:44:02,666 ಗಟ್ಟಿಗರೇ ಉಳಿಯೋದು. ಎಲ್ಲಕ್ಕಿಂತ ಮೂಲಭೂತ, ಪ್ರಾರಂಭಿಕ ಆಲೋಚನೆ. 652 00:44:02,750 --> 00:44:04,416 -ನಾವು ಪ್ರಕೃತಿಗೆ-- -ಶರ್ಲಾಕ್‌! 653 00:44:04,500 --> 00:44:06,416 ಸಾಕು, ನಿನ್ನ ಮಾತಿಗೆ ಅರ್ಥ ಇಲ್ಲ. 654 00:44:08,541 --> 00:44:09,666 "ಮೂಲಭೂತ." 655 00:44:10,791 --> 00:44:11,916 ಡಾರ್ವಿನ್. 656 00:44:15,041 --> 00:44:16,958 ಆರಿಜಿನ್ ಆಫ್ ಸ್ಪೀಸೀಸ್ ಡಾರ್ವಿನ್ 657 00:44:26,541 --> 00:44:27,916 ನಾವು ಪ್ರಕೃತಿಗಿಂತ ಮಿಗಿಲಾದವರಲ್ಲ. 658 00:44:31,208 --> 00:44:32,833 ಎಲ್ಲವೂ ಯೋಜಿಸಿದಂತೆ. 659 00:44:39,583 --> 00:44:40,708 ಅದನ್ನು ವಾಪಸ್ ಇಡು. 660 00:44:42,125 --> 00:44:44,041 -ಯಾಕೆ? -ದಯವಿಟ್ಟು. 661 00:44:46,625 --> 00:44:47,916 ಪುಸ್ತಕ ಮುಚ್ಚು, ಶರ್ಲಾಕ್‌. 662 00:44:50,666 --> 00:44:51,791 ಎಲ್ಲಾ ಮುಗಿಯಿತು. 663 00:45:13,458 --> 00:45:14,958 ಧನ್ಯವಾದ, ಪ್ರಿಯ ತಮ್ಮ. 664 00:45:27,333 --> 00:45:30,041 ಗೊತ್ತಾ, ನನಗೆ ರಾಜಮನೆತನದವರು ಅಷ್ಟು ಇಷ್ಟ ಆಗಲ್ಲ. 665 00:45:31,500 --> 00:45:32,541 ಆದರೆ… 666 00:45:33,791 --> 00:45:34,958 ಒಂದು ಒಪ್ಪಿಕೊಳ್ಳುವೆ, 667 00:45:35,750 --> 00:45:37,250 ನೀನು ನನ್ನ ನೆಚ್ಚಿನ ರಾಜಕುಮಾರಿ. 668 00:45:38,291 --> 00:45:39,666 ಧನ್ಯವಾದ, ಶರ್ಲಾಕ್‌ ಹೋಮ್ಸ್. 669 00:45:40,875 --> 00:45:42,250 ನಿನ್ನ ಆ ಜಾಣ ತಲೆಯನ್ನು 670 00:45:42,333 --> 00:45:44,875 ಬಳಸಿಕೊಳ್ಳುವೆ ಎಂದು ಆಶಿಸುವೆ. 671 00:45:56,666 --> 00:45:57,833 ಎರಡು ಕಾರ್ಪ್ಲಿ ರೂಟ್‌ಗಳು ಇಲ್ಲಿವೆ 672 00:45:57,916 --> 00:45:59,125 ಸೂಕ್ತ ಸೂತ್ರ. 673 00:46:07,000 --> 00:46:08,125 ಹಲೋ. 674 00:46:09,333 --> 00:46:10,375 ಹಲೋ. 675 00:46:12,958 --> 00:46:13,958 ಸುಸ್ತಾದಂತೆ ಕಾಣುತ್ತಿರುವೆ. 676 00:46:14,958 --> 00:46:16,708 ನೆನ್ನೆ ರಾತ್ರಿ ನಿದ್ದೆ ಮಾಡಲಿಲ್ಲ. 677 00:46:16,791 --> 00:46:17,875 ಅದು ನನ್ನ ತಪ್ಪಾ? 678 00:46:17,958 --> 00:46:19,125 ನಾನು ದೂರುತ್ತಿಲ್ಲ. 679 00:46:21,083 --> 00:46:22,708 ನಿನಗೆ ಏನೋ ತೋರಿಸಬೇಕು. 680 00:46:23,375 --> 00:46:24,375 ಏನು? 681 00:46:24,458 --> 00:46:26,125 ನಾವೊಟ್ಟಿಗೆ ಚೆನ್ನಾಗಿ ಕೆಲಸ ಮಾಡಬಹುದು. 682 00:46:27,375 --> 00:46:28,416 ನೀನು ಮತ್ತು ನಾನು. 683 00:46:31,625 --> 00:46:34,333 -ನಿನ್ನನ್ನು ಯಾರಾದರೂ ಹಿಂಬಾಲಿಸಿದರಾ? -ಇಲ್ಲ, ಜಾಗ್ರತೆ ವಹಿಸಿದೆ. 684 00:46:34,416 --> 00:46:35,625 ಸರಿ, ಶರ್ಲಾಕ್‌ ಬಂದ. 685 00:46:35,708 --> 00:46:37,083 ಹಿಂದೆ ತಿರುಗಬೇಡ. 686 00:46:37,166 --> 00:46:38,250 ಹಿಂದಿನ ಬಾಗಿಲಿನಿಂದ ಹೋಗು. 687 00:46:39,375 --> 00:46:41,041 -ರಾತ್ರಿ ಸಿಗೋಣ. -ಹೂಂ. 688 00:46:46,916 --> 00:46:49,291 -ಇಲ್ಲಿ ಸಿಗುತ್ತೀಯ ಅಂತ ಗೊತ್ತಿತ್ತು. -ಸರಿಯಾಗಿ ಗೊತ್ತಿತ್ತು. 689 00:46:50,416 --> 00:46:52,166 ಕುಟುಂಬದಿಂದ ದೂರ ಇರಬೇಕಿತ್ತು. 690 00:46:53,291 --> 00:46:55,666 -ತಲೆ ಕೆಡಿಸುತ್ತಾರೆ. ನಿನ್ನ ಕುಟುಂಬದವರು. -ವಿಶೇಷವಾಗಿ ನನ್ನವರು. 691 00:46:58,541 --> 00:47:00,875 -ಎರಡು ವಿಸ್ಕಿ ಕೊಡಿ. -ಸರಿ, ಸರ್. 692 00:47:00,958 --> 00:47:03,375 ಆಕ್ಸ್‌ಫರ್ಡ್‌ನ ನಿನ್ನ ವಿದ್ಯಾರ್ಥಿವೇತನ ಕಳೆದುಕೊಂಡಿದ್ದು ಬೇಜಾರಿಲ್ವಾ? 693 00:47:04,708 --> 00:47:06,208 ನಿನ್ನನ್ನು ಭೇಟಿಯಾಗಿದ್ದು ಬೇಜಾರಿಲ್ಲ. 694 00:47:06,833 --> 00:47:09,416 ಕಸದ ತೊಟ್ಟಿ ಹಿಡಿದ ಪೋರ್ಟರ್. 695 00:47:09,500 --> 00:47:10,541 ಸ್ಕೌಟ್‍. 696 00:47:11,291 --> 00:47:13,666 ಪೋರ್ಟರ್‍ನ ಉನ್ನತ ಹುದ್ದೆಗೆ ಏರಲಿಲ್ಲ. 697 00:47:13,750 --> 00:47:16,125 -ನೀನು ಹೀಗೆ ನನ್ನನ್ನ ದಾರಿ ತಪ್ಪಿಸದಿದ್ದಿದ್ದರೆ… -ನಾನು ತಪ್ಪಿಸಿದೆನಾ? 698 00:47:16,208 --> 00:47:18,375 …ನಾನು ಖಂಡಿತ ಅಗ್ರ ಪದವೀಧರನಾಗಿ ಹೊರಬರುತ್ತಿದ್ದೆ. 699 00:47:18,458 --> 00:47:21,125 -ಖಂಡಿತ. -ಉತ್ತಮ ಸರ್ಕಾರಿ ಕೆಲಸ ಸಿಗುತ್ತಿತ್ತು. 700 00:47:21,208 --> 00:47:22,333 ಯಾರೂ ತಡೆಯುವವರು ಇರುತ್ತಿರಲಿಲ್ಲ. 701 00:47:22,416 --> 00:47:24,083 ಬಹುಶಃ ವಿದೇಶಾಂಗ ಕಾರ್ಯದರ್ಶಿಯಾಗುತ್ತಿದ್ದೆ. 702 00:47:24,166 --> 00:47:26,000 ಆಸೆಗೆ ತಡೆ ಹಾಕಬೇಡ, ಜೇಮ್ಸ್. 703 00:47:26,083 --> 00:47:28,333 ನೀನು ಕನಿಷ್ಟ ಪ್ರಧಾನಿಯಾಗುವೆ ಅನ್ನುತ್ತಿದ್ದೆ ನಾನು. 704 00:47:28,416 --> 00:47:32,625 ಹೂಂ, ಎಲ್ಲಾ ಗೊಂಬೆಗಳನ್ನು ಆಡಿಸುವ ಮಹಾಸೂತ್ರಧಾರಿ. 705 00:47:32,708 --> 00:47:34,333 ಹೂಂ, ನೀನು ಹೇಳಿದಂತೆ ಆಗಲಿ. 706 00:47:36,541 --> 00:47:37,541 ಇಲ್ಲ. 707 00:47:37,625 --> 00:47:38,916 ನನಗೆ ಬೇಜಾರಿಲ್ಲ. 708 00:47:41,750 --> 00:47:42,875 ಅಸಲಿಗೆ… 709 00:47:44,875 --> 00:47:46,708 ನಾನು ನಿನಗೆ ಧನ್ಯವಾದ ಹೇಳಬೇಕು, 710 00:47:47,666 --> 00:47:48,708 ಶರ್ಲಾಕ್‌ ಹೋಮ್ಸ್, 711 00:47:49,375 --> 00:47:51,791 ನೀರಸ ಜೀವನದಿಂದ ನೀನು ನನ್ನನ್ನು ಪಾರುಮಾಡಿದೆ. 712 00:47:52,583 --> 00:47:54,958 ಹೂಂ, ಅದಕ್ಕೆ ಧನ್ಯವಾದ ಯಾಕೆ, 713 00:47:55,666 --> 00:47:56,791 ಅದೆಲ್ಲಾ ಬೇಕಿಲ್ಲ. 714 00:48:17,875 --> 00:48:18,958 ಏನು? 715 00:48:22,416 --> 00:48:23,791 ನಿನ್ನ ಬಳಿ ಅದು ಇರೋದು ಗೊತ್ತು, 716 00:48:24,916 --> 00:48:25,958 ಜೇಮ್ಸ್‌. 717 00:48:29,000 --> 00:48:31,000 ನನ್ನ ಜೊತೆ ನಿಗೂಢ ಮಾತುಗಳು ಬೇಡ. 718 00:48:31,083 --> 00:48:32,916 ಮಾಲಿಕ್ ಅವರ ಸೂತ್ರದ ಭಾಗ. 719 00:48:34,041 --> 00:48:35,291 ಅದು ನಿನ್ನ ಬಳಿ ಇರೋದು ಗೊತ್ತು. 720 00:48:42,708 --> 00:48:43,750 ನಿಜ. 721 00:48:45,375 --> 00:48:46,750 ನೀನು ಹೇಳಿದ್ದು ಸರಿ. 722 00:48:49,166 --> 00:48:51,458 ಹೂಂ, ನಾನದನ್ನು ತಗೊಂಡೆ. ಯಾಕೆ ಗೊತ್ತಾ? 723 00:48:53,666 --> 00:48:55,125 ನಮಗಾಗಿ ತಗೊಂಡೆ. 724 00:48:55,791 --> 00:48:58,125 ಆ ಅಸ್ತ್ರ ಎಂದಾದರೂ ಮತ್ತೆ ಹೊರಬಂದರೆ, 725 00:48:58,208 --> 00:49:01,291 ಅದನ್ನು ಸೋಲಿಸೋ ಸಾಧನ ನಮ್ಮ ಬಳಿ ಇರಲಿ ಅಂತ. 726 00:49:02,541 --> 00:49:03,583 ನಿನ್ನ ಬಳಿ, ನನ್ನ ಬಳಿ. 727 00:49:06,791 --> 00:49:08,125 ಏನು, ನನ್ನ ಮೇಲೆ ನಂಬಿಕೆ ಇಲ್ವಾ? 728 00:49:09,583 --> 00:49:14,500 ಶರ್ಲಾಕ್‌, ಒಟ್ಟಿಗೆ ಇಷ್ಟೆಲ್ಲಾ ಎದುರಿಸಿದ ಮೇಲೆ, ಖಂಡಿತ… 729 00:49:17,166 --> 00:49:18,375 ನಿನಗೆ ನನ್ನ ಬಗ್ಗೆ ತಿಳಿದಿರುತ್ತೆ. 730 00:49:46,125 --> 00:49:47,291 ಏನದು? 731 00:49:49,041 --> 00:49:50,083 ಏನೂ ಅಲ್ಲ. 732 00:49:53,083 --> 00:49:54,291 ಏನೂ ಅಲ್ವಾ? 733 00:49:59,000 --> 00:50:00,083 ಏನೂ ಅಲ್ಲ. 734 00:50:53,458 --> 00:50:54,666 ಲಿಯು ಮೇ ಯಿ! 735 00:51:04,375 --> 00:51:05,625 ಅವರನ್ನು ಹುಡುಕಿದೆಯಾ? 736 00:51:06,291 --> 00:51:09,083 ಹುಡುಕಿ ಕೊಂದೆ, ಎಲ್ಲರನ್ನೂ. 737 00:51:13,125 --> 00:51:14,666 ನೀನು ಮಾಡಿ ತೋರಿದೆ. 738 00:51:23,708 --> 00:51:25,166 ನೀನು ಮನೆ ತಲುಪಿದೆ. 739 00:51:25,250 --> 00:51:26,666 ಜೀವಂತವಾಗಿ. 740 00:52:33,375 --> 00:52:35,375 ಉಪ ಶೀರ್ಷಿಕೆ ಅನುವಾದ: ಅನುರಾಧ 741 00:52:35,458 --> 00:52:37,458 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ