1 00:00:06,041 --> 00:00:08,041 {\an8}ಈ ಹಿಂದೆ 2 00:00:08,916 --> 00:00:10,500 ಬೆಟ್ಟ ಕೂಡ ವ್ಯಕ್ತಿ ಇದ್ದಂಗೆ. 3 00:00:10,500 --> 00:00:14,000 ಇದಕ್ಕೆ ಸರಿಯಾಗಿ ಹಾಡಿದರೆ, ಅದು ಹಾಡನ್ನ ನಿನಗೆ ಪ್ರತಿಧ್ವನಿಸುತ್ತಾ, 4 00:00:14,000 --> 00:00:16,250 ಎಲ್ಲಿ ಗಣಿ ತೋಡಬೇಕು, ಎಲ್ಲಿ ಕೊರೆಯಬೇಕು... 5 00:00:16,250 --> 00:00:18,375 ಬೆಟ್ಟವನ್ನ ಎಲ್ಲಿ ಮುಟ್ಟಬಾರದಂತ ತಿಳಿಸುತ್ತೆ. 6 00:00:21,000 --> 00:00:21,958 ಅಪ್ಪ... 7 00:00:21,958 --> 00:00:23,833 ನಾವು ಊಹಿಸಿದ್ದಕ್ಕಿಂತ ಹೆಚ್ಚೇ ಇದೆ. 8 00:00:23,833 --> 00:00:26,166 - ಮಹಾರಾಜ ಡ್ಯುರಿನ್, ಅಲ್ಲೊಂದು... - ಸಾಕು! 9 00:00:26,166 --> 00:00:27,416 ಎಲ್ಫನ್ನು ಬಂಧಿಸಿ. 10 00:00:28,375 --> 00:00:30,916 ಎಲ್ರೊಂಡ್ ನನ್ನ ತಾಯಿಯ ಗರ್ಭದಲ್ಲೇ 11 00:00:30,916 --> 00:00:34,250 ಹುಟ್ಟಿದ ಸಹೋದರನಂತೆ ನನಗೆ. 12 00:00:34,250 --> 00:00:36,041 ಎಷ್ಟು ಧೈರ್ಯ ನಿನಗೆ! 13 00:00:36,041 --> 00:00:38,166 ನಿನ್ನವರಿಗೇ ದ್ರೋಹ ಬಗೆಯುವ ನಿನ್ನ 14 00:00:38,166 --> 00:00:41,333 ನಿರ್ಧಾರವನ್ನು ಸಮರ್ಥಿಸಲು ನಿನ್ನ ತಾಯಿಯ ನೆನಪನ್ನು ಉಪಯೋಗಿಸುತ್ತೀಯಾ? 15 00:00:41,333 --> 00:00:43,625 ನಮ್ಮವರಿಗೆ ದ್ರೋಹ ಬಗೆದಿದ್ದು ನೀನು! 16 00:00:43,625 --> 00:00:46,041 ನೀನು ತೊಟ್ಟಿರುವ ಕಿರೀಟಕ್ಕೇ ಅದು ಕಳಂಕ! 17 00:00:49,875 --> 00:00:51,250 ಬಿಡು. 18 00:00:51,250 --> 00:00:52,750 ಇನ್ನು ಅದು ನಿನ್ನದಲ್ಲ. 19 00:00:55,125 --> 00:00:57,458 ನೆರಳಿನಿಂದ ನೀನು ಬಂದೆ. 20 00:00:57,458 --> 00:01:00,083 ನಿನ್ನನ್ನು ನೆರಳಿನೊಳಗೆೇ ಕಳಿಸುವೆನು! 21 00:01:04,833 --> 00:01:07,625 ನಿನ್ನೆ ರಾತ್ರಿ ಮತ್ತೆ ನಿನಗೆ ಆ ಕನಸು ಬಿತ್ತಲ್ವಾ? 22 00:01:07,625 --> 00:01:10,000 ಕನಸಿನಲ್ಲಿ, ಒಂದು ರೀತಿಯ... ರೆಂಬೆ ಇದೆ. 23 00:01:10,000 --> 00:01:11,375 ನಕ್ಷತ್ರಗಳ ಅಡಿಯಲ್ಲಿ. 24 00:01:14,125 --> 00:01:15,500 ಯಾರೋ ಹಿಂಬಾಲಿಸುತ್ತಿರಬಹುದು. 25 00:01:17,625 --> 00:01:19,583 ಸಾಡೋಕ್ ನ ಹಳೆಯ ಪುಸ್ತಕ ನೋಡುತ್ತಿದ್ದೆ. 26 00:01:19,583 --> 00:01:21,541 ಅದು ದಾರಿಯನ್ನು ತಿಳಿಸಬಹುದು. 27 00:01:21,541 --> 00:01:23,583 ರ್ಹುನ್ ನಾಡಿಗೆ ಸ್ವಾಗತ. 28 00:01:23,583 --> 00:01:25,500 ಅದನ್ನು ಯಾಕೆ ಹಾಗೆ ನೋಡುತ್ತಿದ್ದೀಯ? 29 00:01:25,500 --> 00:01:27,041 ಹಿಂದೆ ಇಲ್ಲಿಗೆ ಬಂದಿದ್ದಂತೆ. 30 00:01:27,041 --> 00:01:28,416 ಕನಸಿನಲ್ಲಿ ಮಾತ್ರ. 31 00:01:34,458 --> 00:01:35,625 ನಿನ್ನ ಹೆಸರನ್ನು ಹೇಳು. 32 00:01:35,625 --> 00:01:37,208 ನನಗೆಷ್ಟೋ ಹೆಸರುಗಳಿದ್ದವು. 33 00:01:38,291 --> 00:01:39,541 ಹಲ್ಬ್ರ್ಯಾಂಡ್ ಎಲ್ಲಿ? 34 00:01:39,541 --> 00:01:42,500 ಅವನು ಹೋದನು. ಮರಳಿ ಬರುವುದು ಅನುಮಾನ. 35 00:01:42,500 --> 00:01:45,583 ಮರಳಿ ಬಂದರೆ ನಾವ್ಯಾರೂ ಅವನನ್ನು ಸಂಪರ್ಕಿಸಬಾರದು. 36 00:01:45,583 --> 00:01:49,833 ಎಲ್ರೊಂಡ್ ನನಗೆ ತಿಳಿಸಿದ, ನಿನ್ನ ಈ ಜೊತೆಗಾರ ತಾನು ಹೇಳಿಕೊಂಡವನಲ್ಲ ಅಂತ. 37 00:01:49,833 --> 00:01:51,083 ಅವನು ನಾನಂದುಕೊಂಡವನಲ್ಲ. 38 00:01:51,083 --> 00:01:52,666 ಅವನು ಸೌರೊನ್. 39 00:01:52,666 --> 00:01:55,916 ಕೆಲಬ್ರಿಮ್ಬೋರ್ ದೊರೆಗೆ ಇದನ್ನು ನೇರವಾಗಿ ಕೊಡತಕ್ಕದ್ದು. 40 00:01:56,500 --> 00:02:00,291 ಹಲ್ಬ್ರ್ಯಾಂಡೇ ಸೌರೊನ್ ಅಂತ ಅವರಿಗೆ ತಿಳಿಸಬೇಕು. 41 00:02:00,291 --> 00:02:03,333 ಕ್ಷಮಿಸಿ, ನನ್ನೊಡೆಯ, ಈಗಷ್ಟೇ ಒಬ್ಬ ದೂತ ಬಂದಿದ್ದಾನೆ. 42 00:02:03,833 --> 00:02:05,416 ಅವನಿಗೆ ಒಳಬರಲು ಅನುಮತಿಸುವುದೇ? 43 00:02:36,791 --> 00:02:42,791 {\an8}ಖಜದ್-ದುಮ್ 44 00:03:20,291 --> 00:03:24,583 ಮುಂಗುಸಿ ಬಾಲದ ಸಾರು, ಮುಂಗುಸಿ ಬಾಲದ ಸಾರು... 45 00:03:24,583 --> 00:03:26,041 ತಡಿ. 46 00:03:26,041 --> 00:03:27,750 - ತುಂಬಾ ದುಬಾರಿ. - ಏನು? 47 00:03:28,625 --> 00:03:30,333 ನಾವು ಬಡವರಲ್ಲ. 48 00:03:30,333 --> 00:03:33,291 ಖರ್ಚು ಕಡಿಮೆ ಮಾಡುವುದು ಬುದ್ಧಿವಂತಿಕೆ ಅಂತ ಹೇಳಿದವನು ನೀನೇ. 49 00:03:33,291 --> 00:03:36,375 ಅಥವಾ ಆ ಮಾತನ್ನು ಹೇಳಿದಾಗ ನಿನಗೆ ಅನ್ವಯಿಸಲಿಲ್ಲವಾ? 50 00:03:42,416 --> 00:03:44,041 ನೀನೊಬ್ಬ ರಾಜನನ್ನು ಮದುವೆಯಾಗಿರುವೆ. 51 00:03:45,583 --> 00:03:47,583 ಈಗ ಒಬ್ಬ ಬಹಿಷ್ಕೃತನೊಂದಿಗೆ ಇದ್ದೀಯ. 52 00:03:51,625 --> 00:03:54,625 ನಾನು ಪ್ರೀತಿಸುವ ಡ್ವಾರ್ಫ್ ಜೊತೆ ಇದ್ದೇನೆ. 53 00:03:56,791 --> 00:04:01,791 ನನಗೆ ಅಗ್ನಿ ಕ್ಷೀರಸ್ಫಟಿಕದ ಗಣಿಯೇ ಸಿಕ್ಕರೂ ಅವನನ್ನು ಬಿಟ್ಟುಕೊಡಲ್ಲ. 54 00:04:08,708 --> 00:04:10,458 ಆದರೂ, ಕ್ಷೀರಸ್ಫಟಿಕಗಳಿದ್ದರೆ ಚಂದ. 55 00:04:10,458 --> 00:04:12,375 ಹೌದು. ಚಂದವೇ. 56 00:04:14,083 --> 00:04:16,083 ನಿನ್ನ ತಂದೆಯೊಂದಿಗೆ ಮಾತನಾಡಿದೆಯಾ-- 57 00:04:16,083 --> 00:04:19,500 ಡೀಸಾ, ಅವರು ನನ್ನನ್ನು ನೋಡಲು ಒಪ್ಪಲ್ಲ ಅಂತ ನಿನಗೆ ಗೊತ್ತು. 58 00:04:19,500 --> 00:04:20,875 ನಾನು ಕೇಳಿದ್ದು ಅದಲ್ಲ. 59 00:04:21,000 --> 00:04:23,666 ಪ್ರೇಕ್ಷಕರನ್ನು ಕೇಳಲು ನಾನೇ ಏಕೆ ಆಗಬೇಕು? 60 00:04:23,666 --> 00:04:25,125 ನನ್ನನ್ನು ತ್ಯಜಿಸಿದ್ದು ಅವರೇ! 61 00:04:25,625 --> 00:04:28,125 ಅವರೊಬ್ಬ ಕಠೋರ ಹಠಮಾರಿ. 62 00:04:28,125 --> 00:04:30,458 ಬೇಕಾದರೆ ನೀನು ಇಟ್ಟಿಗೆಯನ್ನು ಬಾಗಿಸಬಹುದು. 63 00:04:31,291 --> 00:04:32,458 ಹಾಗೆಯೇ ನೀನು-- 64 00:04:32,458 --> 00:04:33,541 ಡೀಸಾ? 65 00:04:34,833 --> 00:04:35,833 ತಯಾರಾಗು. 66 00:04:38,666 --> 00:04:40,791 ತಯಾರಾಗಿ ಅಂತ ಹೇಳಿದೆ! 67 00:04:40,791 --> 00:04:42,000 ಡೀಸಾ! 68 00:05:25,541 --> 00:05:26,750 ಡ್ಯುರಿನ್. 69 00:05:28,708 --> 00:05:29,708 ಇಲ್ಲ. 70 00:05:31,541 --> 00:05:32,666 ಇಲ್ಲ, ಇಲ್ಲ, ಇಲ್ಲ. 71 00:06:49,125 --> 00:06:54,125 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 72 00:07:15,500 --> 00:07:19,125 ಈ ಪ್ರದೇಶಗಳು ಮತ್ತೊಮ್ಮೆ ನಿಮಗೆ 73 00:07:19,125 --> 00:07:22,750 ಮಧುರವಾದ ಫಲಗಳನ್ನು ಕೊಡುತ್ತವೆ. 74 00:07:29,041 --> 00:07:30,500 ನನ್ನ ಪ್ರೀತಿಯ ಸಹೋದರ. 75 00:07:44,291 --> 00:07:45,541 ಕೆಲಬ್ರಿಮ್ಬೋರ್ ದೊರೆ. 76 00:07:47,416 --> 00:07:49,333 ನೀವು ಬಂದಿರೆಂದೇ ಅವರು ತಿಳಿಸಲಿಲ್ಲ. 77 00:07:52,125 --> 00:07:53,333 ಏನು ಸಮಾಚಾರ? 78 00:07:53,333 --> 00:07:55,625 ನನ್ನನ್ನೊಬ್ಬ ಅನಿರೀಕ್ಷಿತವಾಗಿ ಭೇಟಿಯಾದ. 79 00:07:58,666 --> 00:08:00,666 ಅವನಾಗಲೇ ಮರಳಿದನೇ? 80 00:08:04,291 --> 00:08:07,083 ಗಲಾದ್ರಿಯಲ್? ಗಲಾದ್ರಿಯಲ್? ಗಲಾದ್ರಿಯಲ್? 81 00:08:22,500 --> 00:08:25,083 ಇವು ನೀನು ನೆಟ್ಟ ಸಸಿಗಳೇ ಅಲ್ವಾ? 82 00:08:28,291 --> 00:08:33,125 ಆಗಸದ ಕೆಳಗಿನ ಎಲ್ಫ್ ರಾಜರಿಗೆ ಮೂರು ಉಂಗುರಗಳು 83 00:08:33,916 --> 00:08:38,375 ಕಲ್ಲು ಪಡಸಾಲೆಯೊಳಗಿನ ಡ್ವಾರ್ಫ್ ಆಳುಗರಿಗೆ ಏಳು. 84 00:08:38,375 --> 00:08:43,541 ಸಾವನ್ನು ಸಂಧಿಸುವ ಮನುಜರಿಗೆ ಒಂಬತ್ತು. 85 00:08:56,958 --> 00:08:58,583 ಮೊರ್ಡೊರ್ ಉತ್ತರಕ್ಕೆ ದಾಳಿ ಮಾಡಬೇಕು. 86 00:08:58,583 --> 00:09:02,000 ಇಲ್ಲಿ ಪ್ರವೇಶಿಸೋಣ, ಎರೆಡ್ ಲೀಥ್ವೀ ಮತ್ತು ಎಫೆಲ್ ಆರ್ನೆನ್ ನಡುವೆ. 87 00:09:02,583 --> 00:09:05,416 ಆಡಾರ್ ನ ಪೂರ್ವದಿಂದ ದಾಳಿ ಮಾಡಿದರೆ ಒಳ್ಳೆಯದು. 88 00:09:06,666 --> 00:09:08,833 ಸೌರೊನ್ ಬಗ್ಗೆ ಏನು ಗೊತ್ತಾಯಿತು? 89 00:09:08,833 --> 00:09:13,083 ನಮ್ಮ ಗೂಢಚಾರಿಗಳ ಪ್ರಕಾರ ಸೌರೊನ್ ಕಡೆಯದಾಗಿ ಮೊರ್ಡೊರ್ ಗೆ ಹೋಗುವಾಗ ಕಾಣಿಸಿಕೊಂಡ. 90 00:09:13,916 --> 00:09:17,500 ಆತ ಆಡಾರ್ ನ ಬದಲಿಸಿ ಅವನ ಸೇನೆಯನ್ನು ವಶಪಡಿಸಿಕೊಳ್ಳಬಹುದು ಎಂದು ಭಾವಿಸುತ್ತೇವೆ. 91 00:09:17,500 --> 00:09:19,375 ನಾವು ಬೇಗ ಹೋದರೆ, 92 00:09:19,375 --> 00:09:22,541 ಒಂದೇ ಬಾಣದಿಂದ ಎರಡು ಹಕ್ಕಿಗಳನ್ನು ಹೊಡೆಯಬಹುದು. 93 00:09:22,541 --> 00:09:24,958 ಉತ್ತರದ ಸೈನ್ಯದ ಸೇನಾಧಿಪತಿ ಏನಂತಾರೆ? 94 00:09:25,916 --> 00:09:27,125 ಗಲಾದ್ರಿಯಲ್? 95 00:09:31,416 --> 00:09:33,791 ಯಾಂಡುಯಿನ್ ಮೇಲಕ್ಕೆ ಹಡಗುಗಳನ್ನು ಕಳಿಸಬೇಕು, 96 00:09:34,625 --> 00:09:37,500 ಪಶ್ಚಿಮದಿಂದ ಮೊರ್ಡೊರನ್ನು ಆಕ್ರಮಿಸಬೇಕು. 97 00:09:42,416 --> 00:09:43,958 ಸಿದ್ಧತೆಗಳನ್ನು ನೋಡು. 98 00:09:52,250 --> 00:09:54,375 ನಿನ್ನ ಆಲೋಚನೆಗಳು ಬಹಳ ದೂರ ಹೋಗಿವೆ 99 00:09:54,375 --> 00:09:57,458 ಎಂದು ತಿಳಿಯಲು ತೀಕ್ಷ್ಣ ಬುದ್ಧಿಯೇನೂ ಬೇಕಾಗಿಲ್ಲ. 100 00:09:57,458 --> 00:09:59,500 ಅವಕ್ಕೆ ಏನು ತೊಂದರೆ? 101 00:10:01,375 --> 00:10:03,625 ಸೌರೊನ್ ಮೊರ್ಡೊರಿಗೆ ಪ್ರಯಾಣಿಸಿರಬಹುದು, 102 00:10:05,625 --> 00:10:07,791 ಆದರೆ ಅಲ್ಲಿಯೇ ಉಳಿದಿದ್ದಾನೆಂದು ಹೇಳೋಕಾಗಲ್ಲ. 103 00:10:09,875 --> 00:10:11,458 ಹಾಗೆ ಯಾಕೆ ಹೇಳುವೆ? 104 00:10:12,041 --> 00:10:13,166 ಸೌರೊನ್... 105 00:10:15,000 --> 00:10:17,791 ತನ್ನನ್ನು ತಾನು ಬಂಜರು ನಾಡಿನ ದೊರೆಯಂತಲ್ಲ, 106 00:10:18,958 --> 00:10:20,750 ಇಡೀ ಮಧ್ಯ ಧರೆಯ ದೊರೆಯೆಂದುಕೊಂಡಿದ್ದಾನೆ. 107 00:10:23,416 --> 00:10:26,000 ಅದನ್ನು ಆಳಲು ಕೇವಲ ಆಕ್ರಮಣವಷ್ಟೇ ಅಲ್ಲ, 108 00:10:26,500 --> 00:10:31,000 ಅದರ ಜನರ ಮನಸ್ಸು ಮತ್ತು ಇಚ್ಛೆಗಳನ್ನು ತನ್ನಿಚ್ಛೆಯಂತೆ ಬದಲಾಯಿಸಲು ಬಯಸುತ್ತಾನೆ. 109 00:10:31,583 --> 00:10:33,333 ಅದಕ್ಕಾಗಿ ಅವನಿಗೆ ಸೈನ್ಯವಲ್ಲ... 110 00:10:35,333 --> 00:10:36,583 ಉಂಗುರಗಳು ಬೇಕು. 111 00:10:37,333 --> 00:10:40,583 ಕೆಲಬ್ರಿಮ್ಬೋರ್ ಇಲ್ಲದೆ ಅವನು ಅವನ್ನು ತಯಾರಿಸಲಾರ. 112 00:10:40,583 --> 00:10:45,666 ಸೌರೊನ್ ಸೈನ್ಯ ಅಥವಾ ಮಿತ್ರರಿಲ್ಲದೆ ಏಕಾಂಗಿಯಾಗಿದ್ದಾನೆ. 113 00:10:46,208 --> 00:10:49,916 ಮೈಲಿಗಟ್ಟಲೆ ಹತ್ತು ಅಡಿ ದಪ್ಪದ ಡ್ವಾರ್ಫ್ ಕಲ್ಲಿನ 114 00:10:49,916 --> 00:10:55,250 ಪರದೆಯ ಗೋಡೆಗಳಿರುವ ಎರಡು ನದಿಗಳಿಂದ ಎರೆಗಿಯೊನ್ ರಕ್ಷಿಸಲ್ಪಟ್ಟಿದೆ. 115 00:10:56,916 --> 00:11:01,625 ನಿಶ್ಚಿಂತೆಯಿಂದಿರು, ಕೆಲಬ್ರಿಮ್ಬೋರ್ ಮತ್ತು ಅವನ ಕೌಶಲ್ಯದ ರಹಸ್ಯಗಳು 116 00:11:02,416 --> 00:11:03,416 ಸುರಕ್ಷಿತವಾಗಿವೆ. 117 00:11:22,208 --> 00:11:27,708 ಹೇಳುತ್ತಿದ್ದೇನೆ, ಯಾವುದೋ ಮುಸುಕಿನ ದುಷ್ಟ ಶಕ್ತಿ ಕೆಲಬ್ರಿಮ್ಬೋರ್ ನ ಆವರಿಸುತ್ತದೆ. 118 00:11:28,708 --> 00:11:32,250 ಈಗಲೂ ಸೌರೊನ್ ನ ಯೋಜನೆ ನಡೆಯುತ್ತಿದೆ. 119 00:11:32,833 --> 00:11:33,958 ನನಗೆ ಗೊತ್ತು. 120 00:11:35,666 --> 00:11:36,875 ಹೇಗೆ? 121 00:11:39,916 --> 00:11:42,500 ಈ ಉಂಗುರವನ್ನು ಧರಿಸಿದಾಗಿನಿಂದ, ನಾನು ಅಗೋಚರ ಜಗತ್ತಿನ... 122 00:11:44,166 --> 00:11:45,375 ಮಿಂಚುನೋಟಗಳನ್ನು... 123 00:11:46,541 --> 00:11:48,750 ಅನುಭವಿಸಿ, ಗ್ರಹಿಸಿದ್ದೇನೆ... 124 00:11:50,916 --> 00:11:54,541 ಅಪೇಕ್ಷಿಸದ ಕನಸುಗಳಂತೆ, ನನ್ನ ಎಚ್ಚರಗೊಳ್ಳುವ ಮನಸ್ಸನ್ನು ತುಂಬಲು ಹೊರಬರುವಂತೆ. 125 00:11:56,041 --> 00:11:58,458 ಉಂಗುರಗಳು ಇನ್ನೂ ನಡೆಯದ ಘಟನೆಗಳನ್ನು ನೋಡುವ 126 00:11:58,458 --> 00:12:01,416 ಸಾಮರ್ಥ್ಯವನ್ನು ನಿನಗೆ ಕೊಟ್ಟಿವೆ ಅನಿಸುತ್ತಾ? 127 00:12:04,291 --> 00:12:05,875 ನಿಮ್ಮ ಸಾಮರ್ಥ್ಯ ಎಬ್ಬಿಸಿಲ್ವಾ? 128 00:12:10,375 --> 00:12:12,541 ಪರ್ವತಗಳು ಕುಸಿಯುವುದನ್ನು ನೋಡಿದ್ದೇನೆ. 129 00:12:13,583 --> 00:12:18,375 ನೀರು ಬತ್ತಿಹೋಗುವುದನ್ನು. ಮತ್ತು ಮೋಡಗಳು. ಕಪ್ಪು. ಬಿಳಿ ಗೋಪುರಗಳ ಮೇಲೆ ಒಟ್ಟುಗೂಡುತ್ತಾ. 130 00:12:18,375 --> 00:12:21,291 - ನನ್ನನ್ನು ಎರೆಗಿಯೊನ್ ಗೆ ಕಳಿಸಿ. - ಗಲಾದ್ರಿಯಲ್-- 131 00:12:21,291 --> 00:12:24,625 - ಸೌರೊನ್ ಅಲ್ಲಿದ್ದರೆ, ಸುದ್ದಿ ಕಳಿಸುವೆ-- - ಸೌರೊನ್ ನ ಮತ್ತೆ ಎದುರಿಸಬೇಡ. 132 00:12:26,875 --> 00:12:31,125 ವಂಚಕನು ಒಮ್ಮೆ ಒಂದು ಜೀವಿಯ ನಂಬಿಕೆ ಗಳಿಸಿದರೆ, 133 00:12:31,125 --> 00:12:34,500 ಅವರ ಆಲೋಚನೆಗಳನ್ನೇ ಕೆತ್ತುವ ಸಾಮರ್ಥ್ಯ ಪಡೆಯುತ್ತಾನಂತೆ. 134 00:12:35,083 --> 00:12:39,208 ಅವರ ಹೃದಯ ಮತ್ತು ಮನಸ್ಸನ್ನು ಮೋಸ ಮಾಡಲಷ್ಟೇ ಅಲ್ಲ, ಅವರ ಕಣ್ಣು, ಕಿವಿಗಳನ್ನೂ ಸಹ. 135 00:12:39,208 --> 00:12:41,708 ಅವರ ವಾಸ್ತವತೆಯನ್ನು ಬದಲಾಯಿಸಲು. 136 00:12:43,041 --> 00:12:45,250 ನೀನು ಈಗಾಗಲೇ ಒಮ್ಮೆ ಅನುಭವಿಸಿರುವೆ. 137 00:12:48,250 --> 00:12:49,208 ಹೌದು. 138 00:12:50,791 --> 00:12:52,208 ಅವನಿಗೆ ನನ್ನ ಮನಸ್ಸು ಗೊತ್ತು. 139 00:12:53,875 --> 00:12:55,333 ನಾನು ಅವನನ್ನು ತಿಳಿದಿದ್ದೇನೆ. 140 00:12:56,416 --> 00:12:58,541 ಅದಕ್ಕಾಗಿಯೇ ನಾನು ಅವನನ್ನು ಎದುರಿಸಬೇಕು. 141 00:12:59,416 --> 00:13:01,708 ನಾನೊಬ್ಬಳೇ ಅವನನ್ನು ಏಕೆ ಕೊಲ್ಲಬಲ್ಲೆ ಅಂತ. 142 00:13:01,708 --> 00:13:04,208 ನೀನೊಮ್ಮೆ ಅವನನ್ನು ಸ್ನೇಹಿತ ಎಂದು ಪರಿಗಣಿಸಿದ್ದೆ. 143 00:13:04,208 --> 00:13:06,458 - ಹಲ್ಬ್ರ್ಯಾಂಡ್ ಹಾಗಲ್ಲ-- - ಸೌರೊನ್. 144 00:13:07,875 --> 00:13:09,750 ನೀನೊಬ್ಬಳೇ ಅವನನ್ನು ಎದುರಿಸಲಾರೆ. 145 00:13:12,125 --> 00:13:14,958 ಬಹುಶಃ... ನಾನೊಬ್ಬಳೇ ಇಲ್ಲದಿದ್ದರೆ? 146 00:13:21,458 --> 00:13:25,291 ಎರೆಗಿಯೊನ್ ಎಲ್ವೆನ್-ಸ್ಮಿತ್ಸ್ ಸಾಮ್ರಾಜ್ಯ 147 00:13:38,750 --> 00:13:43,166 ನಿಮಗೆ ಪ್ರವೇಶವನ್ನು ನೀಡಲು ಸಾಧ್ಯವಿಲ್ಲ ಎಂದು ಕೆಲಬ್ರಿಮ್ಬೋರ್ ದೊರೆ ವಿಷಾದಿಸುತ್ತಾರೆ. 148 00:13:44,000 --> 00:13:46,708 ಅವರೊಂದಿಗೆ ನೇರವಾಗಿ ಮಾತನಾಡಲಾಗದೇ? 149 00:13:46,708 --> 00:13:48,083 ದೊರೆಗೆ ಕೆಲಸವಿದೆ. 150 00:13:48,083 --> 00:13:50,583 ಆದರೆ ನಿಮ್ಮ ಪ್ರಯಾಣಕ್ಕೆ ಅವರು ಶುಭ ಕೋರುತ್ತಾರೆ. 151 00:13:51,166 --> 00:13:52,833 ನನಗೆ ಹೊರಡಲು ಹೇಳುತ್ತಿದ್ದೀರಾ? 152 00:13:55,125 --> 00:13:57,750 ಎರೆಗಿಯೊನ್ ಅರಸ ಹೇಳುತ್ತಿದ್ದಾರೆ. 153 00:14:00,166 --> 00:14:02,375 ನಾನು ಇಲ್ಲಿಯೇ ಕಾಯುತ್ತೇನೆ. 154 00:14:06,625 --> 00:14:08,375 ಅವರು ಮನಸ್ಸನ್ನು ಬದಲಾಯಿಸಿದರೆ. 155 00:14:23,791 --> 00:14:24,625 ಅವನು ಹೋದನೇ? 156 00:14:24,625 --> 00:14:27,208 ಇಲ್ಲ. ಅವನು ಹೊರಡಲು ಒಪ್ಪುತ್ತಿಲ್ಲ, ನನ್ನೊಡೆಯ. 157 00:14:30,625 --> 00:14:32,291 ಅವನು ಎಷ್ಟಾದರೂ ಒಪ್ಪದಿರಲಿ. 158 00:14:32,291 --> 00:14:36,458 ಮತ್ತೊಮ್ಮೆ ಅವನನ್ನು ಸಂಪರ್ಕಿಸುವುದೇ ಇಲ್ಲ ಅಂತ ಗಲಾದ್ರಿಯಲ್ ಗೆ ಮಾತು ಕೊಟ್ಟಿದ್ದೆ. 159 00:14:40,708 --> 00:14:42,125 ಇನ್ನೂ ಏನಾದರೂ ಇತ್ತಾ? 160 00:14:42,125 --> 00:14:44,375 ಅವನಿಗೆ ಪೆಟ್ಟಾಗಿರಬಹುದು, ನನ್ನೊಡೆಯ. 161 00:14:45,708 --> 00:14:46,916 ಅವನು ಇರಲಿ. 162 00:14:48,583 --> 00:14:49,583 ಬೇಗನೆ ಹೊರಡುತ್ತಾನೆ. 163 00:14:50,541 --> 00:14:53,541 ಲಿಂಡೊನ್ ನಿಂದ ದೂತರು ಯಾವುದೇ ದಿನದಂದು ಸುದ್ದಿ ಹೊತ್ತು ತರಬಹುದು. 164 00:16:13,541 --> 00:16:18,500 ಕರಾಸ್ ಗೇರ್ ಪಶ್ಚಿಮ ರ್ಹುನ್ 165 00:18:23,250 --> 00:18:25,708 ಬಿಳಿ ರೆಕ್ಕೆಗಳಿಂದ ಏನು ಸುದ್ದಿ ಇದೆ? 166 00:18:26,291 --> 00:18:28,291 ಸೌರೊನ್ ನ ನೆರಳು ಆಳವಾಗುತ್ತಿದೆ. 167 00:18:29,041 --> 00:18:33,541 ತನ್ನ ಶತ್ರುಗಳನ್ನು ಮೋಸಗೊಳಿಸಲು ಹೊಸ ರೂಪ ತಳೆದಿದ್ದಾನಂತೆ. 168 00:18:33,541 --> 00:18:34,583 ಮತ್ತೆ ಇಸ್ತಾರ್? 169 00:18:35,583 --> 00:18:41,375 ಉಪ್ಪು ತೋಟಿಗಳು ಮತ್ತು ಮುಮಕಿಲ್ ಕಳ್ಳರ ಪಿಸುಮಾತುಗಳನ್ನು ಕೇಳುತ್ತೇನೆ. 170 00:18:42,375 --> 00:18:48,375 ಇಬ್ಬರು ಅರೆಪಿಳ್ಳೆಗಳ ಜೊತೆ ಪೂರ್ವಕ್ಕೆ ಪಯಣಿಸುತ್ತಿರುವ ಮುದುಕನೊಬ್ಬನ ಪಿಸುಮಾತುಗಳು. 171 00:18:48,375 --> 00:18:50,375 ಅವನು ಕಳೆದುಹೋಗಿದ್ದಾನೆ. ದುರ್ಬಲ. 172 00:18:50,375 --> 00:18:52,666 ಆದರೆ ಅವನು ಹೆಚ್ಚು ಕಾಲ ಹಾಗಿರುವುದಿಲ್ಲ. 173 00:18:52,666 --> 00:18:55,916 ತನ್ನ ಶಕ್ತಿ ಬಳಸುವುದನ್ನು ಅವನು ಕಲಿಯುವ ಮೊದಲೇ ಅವನನ್ನು ತಲುಪಬೇಕು. 174 00:18:56,833 --> 00:19:00,666 ಬಹುಶಃ, ನಿನ್ನನ್ನು ನನ್ನ ಮುಂದೆ ಕರೆತರಲು 175 00:19:00,666 --> 00:19:05,416 ನಾನು ಪೋಲು ಮಾಡಿದ ರಕ್ತವನ್ನು ಬೇರೆ ಉಪಯುಕ್ತ ಸೇವಕರಿಗಾಗಿ ಬಳಸಬಹುದಿತ್ತು. 176 00:19:11,375 --> 00:19:12,916 ಒಡೆಯ. 177 00:19:12,916 --> 00:19:15,750 ನೀವು ಕಳಿಸಿದ್ದ ಒಬ್ಬ ಪತ್ತೇದಾರ ಮರಳಿ ಬಂದಿದ್ದಾನೆ. 178 00:19:19,208 --> 00:19:20,541 ಅವನು ಸಿಕ್ಕಿದನೇ? 179 00:19:20,541 --> 00:19:23,833 ಅವನು ಸಿಕ್ಕಿದ್ದಷ್ಟೇ ಅಲ್ಲ. ಅವನನ್ನು ಹಿಡಿಯುವುದೂ ನನಗೆ ಗೊತ್ತು. 180 00:19:23,833 --> 00:19:29,541 ನಮ್ಮ ಜನರ ಶಾಪ ವಿಮೋಚನೆ ಮಾಡಿ, ನಿಮಗೆ ಇಸ್ತಾರನ್ನು ಸರಪಳಿಯಲ್ಲಿ ಬಂಧಿಸಿ ಕರೆತರುವೆ. 181 00:19:30,125 --> 00:19:35,166 ನಿನ್ನಂಥ ಒಬ್ಬ ಮನುಷ್ಯ ಒಬ್ಬ ಇಸ್ತಾರನನ್ನು 182 00:19:35,166 --> 00:19:37,458 ಹೇಗೆ ಸೋಲಿಸಬಹುದು ಅಂತೀಯ, 183 00:19:37,458 --> 00:19:41,833 ನನ್ನ ಅತ್ಯಂತ ಬಲಶಾಲಿ ಹಿಂಬಾಲಕರಿಗೇ ಅದು ಆಗಲಿಲ್ಲ. 184 00:19:42,583 --> 00:19:47,666 ಇಸ್ತಾರ್ ನನಗೆ ಶರಣಾಗುತ್ತಾನೆ, ಅವನು ಆಗಲಿಲ್ಲವೆಂದರೆ, 185 00:19:47,666 --> 00:19:51,666 ಅವನು ಸ್ನೇಹಿತರು ಎನ್ನುವ ಅರೆಪಿಳ್ಳೆಗಳನ್ನು ಕೊಂದುಹಾಕುತ್ತೇನೆ. 186 00:19:55,291 --> 00:19:58,041 ಡೋಡೆರಿಕ್ ಬಗ್ಗೆ ಏನು? 187 00:20:00,458 --> 00:20:01,750 ಡೋಡೆರಿಕ್? 188 00:20:01,750 --> 00:20:05,000 ಸರಿ, ಸರಿ. ಅಂಡ್ವೈಸ್? 189 00:20:05,000 --> 00:20:08,791 ಅದು ಒಳ್ಳೆಯ ಹೆಸರೇ. ಆದರೂ, ಅದು ನನ್ನದಾಗಿರಲ್ಲ. 190 00:20:10,166 --> 00:20:11,208 ನನಗೆ ಗೊತ್ತು. 191 00:20:12,125 --> 00:20:13,000 ಫ್ರೆಡಗಾರ್ಡ್. 192 00:20:15,750 --> 00:20:16,833 ನಿನಗೆ ಕಾಣಲ್ಲವೇ? 193 00:20:17,958 --> 00:20:20,166 ಯಾರೂ ನಿನಗೆ ಹೆಸರನ್ನು ಕೊಡಲಾಗದು. 194 00:20:21,500 --> 00:20:22,833 ಅದು ಈಗಾಗಲೇ ನಿನ್ನದೇ. 195 00:20:24,333 --> 00:20:25,875 ಅದೇ ನೀನು. 196 00:20:27,916 --> 00:20:33,125 ಅದನ್ನು ಯಾರಾದರೂ ಹೇಳಿದಾಗ, ನಿನ್ನ ಹೃದಯ ಹಿಗ್ಗುತ್ತದೆ. 197 00:20:34,291 --> 00:20:36,000 ನೀನು ಒಂದು ದಿನ ಕೇಳುತ್ತೀಯ. 198 00:20:38,333 --> 00:20:39,375 ಖಂಡಿತವಾಗಿ. 199 00:20:40,875 --> 00:20:42,291 ನೀನು ಯಾರೆಂದು ತಿಳಿದುಕೊಳ್ಳೋಣ. 200 00:20:44,916 --> 00:20:46,000 ನನಗೆ ಗೊತ್ತಿತ್ತು! 201 00:20:46,000 --> 00:20:47,625 ನಾವು ಈಶಾನ್ಯಕ್ಕೆ ತಿರುಗಿದರೆ, 202 00:20:47,625 --> 00:20:50,125 ಈ ಪ್ರಯಾಣವನ್ನು ಅರ್ಧದಷ್ಟು ಕತ್ತರಿಸಬಹುದಂತೆ. 203 00:20:51,083 --> 00:20:52,708 ಆ ಕಡೆ. ಬನ್ನಿ! 204 00:21:08,791 --> 00:21:10,708 ಮೊದಲ ದಿನವೇ ನೀರು ಖಾಲಿಯಾಗಿ, 205 00:21:10,708 --> 00:21:12,833 ಎರಡನೇ ದಿನ ಶಾಖದಿಂದ ನಾವು ಸಾಯುವಂಥ 206 00:21:12,833 --> 00:21:15,125 ದಾರಿಯಲ್ಲಿ ಮಾತ್ರ ಹೋಗುವುದು ಬೇಡ ಅನ್ನುವೆ. 207 00:21:16,583 --> 00:21:18,666 ನನಗೆ ಮಾತ್ರ ಹಾಗನಿಸುತ್ತಾ? 208 00:21:23,041 --> 00:21:24,708 ಡೋಡೆರಿಕ್ ಆದರೆ ಹೇಗೆ? 209 00:21:26,166 --> 00:21:27,791 ಈಗಾಗಲೇ ಡೋಡೆರಿಕ್ ಎಂದು ಹೇಳಿರುವೆ. 210 00:21:30,208 --> 00:21:31,375 ಇಲ್ಲ, ಹೇಳಲಿಲ್ಲ. 211 00:21:31,375 --> 00:21:33,166 - ಹೌದು, ಹೇಳಿದೆ. - ಹೌದು, ಹೇಳಿದೆ. 212 00:21:37,458 --> 00:21:39,375 ಆಹಾರಾನ್ವೇಷಕಿಗೆ ಈ ಸಲ ಏನು ಸಿಕ್ಕಿತು? 213 00:21:40,291 --> 00:21:43,208 ನನಗೊಂದು ಚೇಳು ಮತ್ತು ಕಳ್ಳಿ ಗಿಡಗಳು ಮಾತ್ರ ಸಿಕ್ಕವು. 214 00:21:43,833 --> 00:21:47,208 ಚೇಳು ನನಗೆ ಕುಟುಕಿತು, ನಾನು ಬಿದ್ದೆ, ಆಮೇಲೆ... 215 00:21:47,208 --> 00:21:50,000 - ನನಗೆ ಕಳ್ಳಿ ಗಿಡವೂ ಸಿಕ್ಕಿತು. - ಕಳ್ಳಿ ಗಿಡ ಸಿಕ್ಕಿತು. 216 00:21:51,375 --> 00:21:56,000 ನೀನು, ಅದೇನಂದ್ರೆ, ಇನ್ನೊಂದು ಸ್ವಲ್ಪ ನೀರನ್ನು ಸೃಷ್ಟಿಸಲಾಗುವುದಿಲ್ಲವೇ? 217 00:21:58,500 --> 00:22:02,041 ಮಂತ್ರ ದಂಡ ಇಲ್ಲದೆ ಮತ್ತೆ ನಿಯಂತ್ರಣ ತಪ್ಪಬಹುದೆಂದು ಅವನ ಭಯ. 218 00:22:02,583 --> 00:22:05,000 ಮಂತ್ರ ದಂಡ ಹುಡುಕೋಣ. ಇಲ್ಲಿ ಬೇಕಾದಷ್ಟು ಕಡ್ಡಿಗಳಿವೆ. 219 00:22:05,541 --> 00:22:07,041 ಅದು ಹಾಗೆ ನಡೆಯಲ್ಲ, ಪಾಪ್. 220 00:22:07,541 --> 00:22:08,750 ಮೌನ. 221 00:22:10,875 --> 00:22:11,875 ಏನದು? 222 00:22:14,083 --> 00:22:16,916 ಗಾಳಿಯ ಮೇಲೆ. ನಿಮಗೆ ಕೇಳಿಸಿತಾ? 223 00:22:18,541 --> 00:22:20,333 - ಇದರ ಶಬ್ದ-- - ಗೊರಸುಗಳ ಹಾಗಿದೆ. 224 00:23:32,083 --> 00:23:34,958 ಅವರಿನ್ನೂ ಹತ್ತಿರದಲ್ಲಿದ್ದಾರೆ. ಮೇಲೇರಿ! 225 00:23:45,541 --> 00:23:47,000 ಅವರು ಯಾರು? 226 00:23:48,791 --> 00:23:49,916 ಗೊತ್ತಿಲ್ಲ. 227 00:23:51,083 --> 00:23:52,541 ನಮ್ಮ ಜಾಡು ನೋಡುತ್ತಿದ್ದಾರೆ. 228 00:23:53,416 --> 00:23:55,583 ಅದರರ್ಥ, ನಾವು ಬೇರೆ ದಾರಿ ಹಿಡಿಯಬೇಕು. 229 00:23:59,000 --> 00:24:00,333 ಈಗಾಗಲೇ ಹಿಡಿದಿದ್ದೇವೆ. 230 00:24:08,375 --> 00:24:09,583 ಯಾರೂ ದಾರಿ ತಪ್ಪಬೇಡಿ. 231 00:24:10,541 --> 00:24:13,041 - ಒಂಟಿಯಾಗಿ ಹೋಗಬೇಡಿ. - ಒಂಟಿಯಾಗಿ ಹೋಗಬೇಡಿ. 232 00:24:33,250 --> 00:24:35,833 ಭೂಕಂಪದ ನಂತರ ಪ್ರತಿ ತೋಟವೂ ಬಾಡಿಹೋಗಿದೆ. 233 00:24:35,833 --> 00:24:37,666 ಕೇವಲ ತೋಟಗಳಷ್ಟೇ ಅಲ್ಲ. 234 00:24:37,666 --> 00:24:42,041 ಡ್ವಾರ್ಫರ ಕ್ಷೇತ್ರಗಳಾದ್ಯಂತ ಅಪಶಕುನದ ವದಂತಿಗಳೇ ಕೇಳಿ ಬರುತ್ತಿವೆ. 235 00:24:43,166 --> 00:24:47,125 ಆ ಎಲ್ಫ್ ನ ರಾಜನು ಒಳಬಿಟ್ಟಾಗ ಆ ಬೆಟ್ಟಕ್ಕೆ ಶಾಪ ಬಡಿಯಿತು ಅಂತಾರೆ ಕೆಲವರು. 236 00:24:47,125 --> 00:24:49,875 ನಿಮ್ಮಿಬ್ಬರಿಗೂ ಕಳ್ಳಸಾಗಣೆ ಮಾಡುವ ಉದ್ದೇಶವೇನೂ ಇಲ್ಲವಲ್ಲ? 237 00:24:49,875 --> 00:24:51,416 - ಇಲ್ಲ. - ಕನಸಲ್ಲೂ ಮಾಡಲಾರೆ. 238 00:24:51,416 --> 00:24:54,083 ಒಳ್ಳೆಯದು. ಯಾಕೆಂದರೆ ವದಂತಿ ಇಂಚರಕ್ಕಿ ಇದ್ದಂತೆ. 239 00:24:54,083 --> 00:24:58,250 ದೂರದಿಂದ ದೊಡ್ಡದಾಗಿ ಕೇಳಬಹುದು, ಆದರೆ ಹತ್ತಿರ ಹೋದರೆ ಎಲ್ಲಾ ಖಾಲಿ. 240 00:24:58,958 --> 00:25:00,291 ಹಾಗಾದರೆ ಅದು ನಿಜವಲ್ಲವೇ? 241 00:25:00,958 --> 00:25:03,083 ಏನೋ ಭಯಾನಕವಾದದ್ದು ನಡೆಯುತ್ತಿಲ್ಲವೇ? 242 00:25:04,500 --> 00:25:07,041 ಅದು ನಡೆಯಲ್ಲ ಎಂದು ಸಾಬೀತುಪಡಿಸಲಿದ್ದೇವೆ. 243 00:25:18,833 --> 00:25:20,458 - ರಾಜ ಡ್ಯುರಿನ್. - ರಾಜ ಡ್ಯುರಿನ್. 244 00:25:20,458 --> 00:25:21,833 ಡೀಸಾ. 245 00:25:23,375 --> 00:25:24,916 ನಾರ್ವಿ, ನಿನ್ನ ವರದಿ? 246 00:25:26,333 --> 00:25:27,333 ಪ್ರಭು. 247 00:25:28,875 --> 00:25:31,958 ಸ್ವಲ್ಪ ಸಮಯದ ಹಿಂದೆ, ಅಗ್ನಿಪರ್ವತವೊಂದು ಎಚ್ಚರಗೊಂಡಿತು. 248 00:25:32,625 --> 00:25:36,833 ಅದು ನಮಗೆ ದಕ್ಷಿಣಕ್ಕೆ ದೂರದಲ್ಲಿದ್ದರೂ, 249 00:25:36,833 --> 00:25:39,625 ಅದರಿಂದ ಹುಟ್ಟಿದ ಭೂಮಿಯ ಕಂಪನ 250 00:25:39,625 --> 00:25:44,208 ಭೂಮಿಯ ಆಳದೊಳಗಿನಿಂದ ಇಲ್ಲಿಯವರೆಗೂ ಹಬ್ಬಿ, 251 00:25:44,208 --> 00:25:46,208 ನಮ್ಮ ಸೂರ್ಯ-ಕಂಬಗಳು ಕುಸಿದು, 252 00:25:47,125 --> 00:25:50,666 ಅದರೊಂದಿಗೆ, ನಮ್ಮ ಬೆಳೆ ಬೆಳೆಯುವ ಸಾಮರ್ಥ್ಯವೂ ಕುಸಿದಿದೆ. 253 00:25:54,208 --> 00:25:56,958 ಈಗ, ಸಹಜವಾಗಿ ಇದಕ್ಕೆ ಪರಿಹಾರ 254 00:25:56,958 --> 00:25:59,708 ಅಗೆಯುವ ತಂಡಗಳನ್ನು ಕರೆಸಿ, ಕಂಬಗಳನ್ನು ಸರಿಪಡಿಸಿ, 255 00:25:59,708 --> 00:26:02,250 ಹೊಸದನ್ನು ನಿರ್ಮಿಸುವುದು. ಆದರೂ-- 256 00:26:02,250 --> 00:26:07,208 ನೀನು ಇಲ್ಲಿಗೆ ಕರೆಸಿರುವ ಯಾವ ಶಿಲಾ ಗಾಯಕನಿಗೂ ಅಗೆಯಲು ಸುರಕ್ಷಿತ ಮಾರ್ಗ ಕಂಡುಹಿಡಿಯಲಾಗಿಲ್ಲ. 257 00:26:07,208 --> 00:26:09,041 ಅದೇನೋ ನಿಜವೇ. 258 00:26:11,791 --> 00:26:15,291 ನಿಮ್ಮ ಅಪ್ಪಣೆಯೊಂದಿಗೆ, ಪ್ರಭು, ಬೆಳಕನ್ನು ಹುಡುಕುತ್ತೇವೆ. 259 00:26:15,291 --> 00:26:16,625 ಅಪ್ಪಣೆ ಕೊಡುವೆ. 260 00:27:23,375 --> 00:27:25,166 ಒಂಬತ್ತು ಶತಮಾನಗಳಿಂದ, 261 00:27:27,000 --> 00:27:32,375 ಶಿಲಾ ಗಾಯಕರು ಈ ಬಂಡೆಯೊಂದಿಗೆ ನಮ್ಮ ಪವಿತ್ರ ಸಂಬಂಧವನ್ನು ಬೆಳೆಸಿದ್ದಾರೆ. 262 00:27:34,041 --> 00:27:38,791 ಮತ್ತು ಅಷ್ಟೆಲ್ಲಾ ವರ್ಷಗಳು, ಒಮ್ಮೆ ಕೂಡ, 263 00:27:38,791 --> 00:27:44,875 ಒಮ್ಮೆ ಕೂಡ ಅವರು ನಮಗೆ ನೆರವಾಗುವುದನ್ನು ನಿಲ್ಲಿಸಿಲ್ಲ. 264 00:27:48,541 --> 00:27:52,916 ಆದರೆ ಈಗ, ಕಾರಣ ಏನೇ ಇರಲಿ, 265 00:27:55,708 --> 00:27:57,500 ಬಂಧವು ಮುರಿದುಹೋಗಿದೆ. 266 00:27:57,500 --> 00:28:01,583 ಖಜದ್-ದುಮ್ ಸುತ್ತಲೂ ಕತ್ತಲೆಯ ಕೈ ಆವರಿಸಿದೆ. 267 00:28:01,583 --> 00:28:03,541 ಎಚ್ಚರಿಕೆಯಿಂದ ಅಗೆ, ಡೆಲ್ವ್ ಗುರು. 268 00:28:18,875 --> 00:28:20,208 ಡೀಸಾ. 269 00:28:22,125 --> 00:28:23,291 ಒಂದು ನಿಮಿಷ? 270 00:28:32,875 --> 00:28:34,791 ನನ್ನಿಂದ ನಿಜವಾಗಿ ಕೇಳಿಸುತ್ತೀಯಾ? 271 00:28:36,208 --> 00:28:39,041 ಅಂದರೆ ನಿನ್ನ ಮೊಮ್ಮಕ್ಕಳ ಬಗ್ಗೆಯಾ? ಅವರು ಚೆನ್ನಾಗಿದ್ದಾರೆ. 272 00:28:39,041 --> 00:28:41,125 ಅವರಿಗೆ ನಿನ್ನ ಗಡ್ಡ ಎಳೆಯಲು ಸಿಗುತ್ತಿಲ್ಲ-- 273 00:28:41,125 --> 00:28:44,416 ಈಗಿರುವುದಕ್ಕಿಂತ ಇನ್ನೂ ಕಷ್ಟ ಮಾಡಬೇಡ. 274 00:28:45,458 --> 00:28:48,125 ಅರೆ. ಅವನಿಗೂ ನಾನು ಇದನ್ನೇ ಹೇಳುತ್ತಿರುತ್ತೇನೆ. 275 00:28:49,958 --> 00:28:53,000 ನಾನು ಕೋಪದಲ್ಲಿ ಮಾತಾಡಿದೆ ಅಂತ ಖಂಡಿತವಾಗಿ ಡ್ಯುರಿನ್ ಬಲ್ಲ. 276 00:28:53,000 --> 00:28:56,166 ನೀವು ಕ್ಷಮೆ ಕೇಳಬೇಕೆಂದಿದ್ದರೆ, ಮಹಾರಾಜ, ನನ್ನ ಗಂಡನ ಬಳಿಯೇ ಕೇಳಿ. 277 00:28:56,166 --> 00:28:58,458 ನಾನ್ಯಾಕೆ ಕ್ಷಮೆ ಕೇಳಬೇಕು? 278 00:28:59,666 --> 00:29:01,500 ತಪ್ಪು ಮಾಡಿದ್ದು ಅವನು! 279 00:29:02,958 --> 00:29:04,125 ಹೇಳುವೆ ಕೇಳು, ಅವನು-- 280 00:29:04,125 --> 00:29:07,125 ಮಹಾ ಹಠಮಾರಿಯಂತಲೇ? 281 00:29:08,458 --> 00:29:11,041 ಇದು ನಿಮ್ಮಿಬ್ಬರಲ್ಲೂ ಇರುವ ಇನ್ನೊಂದು ಸಾಮ್ಯ ಗುಣ. 282 00:29:12,250 --> 00:29:14,541 ನೀನು "ಹಠ" ಎಂದು ಕರೆಯುವುದನ್ನು 283 00:29:15,625 --> 00:29:18,291 ಡ್ವಾರ್ವ್ಸ್ "ಬಲ" ಎಂದು ಕರೆಯುತ್ತಾರೆ. 284 00:29:19,375 --> 00:29:24,875 ಇಷ್ಟು ಬೃಹತ್ತಾದ ದ್ವೇಷ ಹೊರಲು ಅಷ್ಟು ಪ್ರಮಾಣದ ಬಲ ಬೇಕಾಗುತ್ತದೆ ಬಿಡಿ. 285 00:29:26,375 --> 00:29:30,833 ಗಾಯಗೊಂಡ ಹೃದಯವನ್ನು ಅಷ್ಟು ಗಟ್ಟಿಯಾಗಿ ಕಟ್ಟಿದರೆ, ಅದಕ್ಕೆ ಬಡಿಯಲೂ ಆಗದು. 286 00:29:33,041 --> 00:29:34,291 ಹೌದು, ಆಗುತ್ತೆ. 287 00:29:38,000 --> 00:29:39,416 ನಿಜವಾಗಲೂ ಆಗುತ್ತೆ. 288 00:29:45,166 --> 00:29:47,875 ಇದಕ್ಕೇ ಏನೋ ನಮಗೆ ಬೆಟ್ಟದ ಶಬ್ದ ಕೇಳಿಸಲ್ಲ. 289 00:29:47,875 --> 00:29:50,875 ಸ್ವಂತ ಮಗನ ದುಃಖವೇ ಅದರ ರಾಜನಿಗೆ ಕೇಳಿಸುತ್ತಿಲ್ಲ. 290 00:29:50,875 --> 00:29:52,375 ಮಾತು ನಿಲ್ಲಿಸು, ಡೀಸಾ! 291 00:29:52,375 --> 00:29:55,291 ನಿಜವಾದ ಬಲವನ್ನು ತೋರಿಸಬೇಕಾ? 292 00:29:56,166 --> 00:29:58,041 ನಿಮ್ಮ ಮಗನನ್ನು ಕರೆಸಿಕೊಳ್ಳಿ. 293 00:30:00,208 --> 00:30:01,541 ಆತನೇ ಉತ್ತರಿಸುತ್ತಾರೆ. 294 00:30:03,166 --> 00:30:07,458 ಆತನನ್ನು ಹಾಗೆಯೇ ಬಿಟ್ಟರೆ, ಜೀರಖ್ಜೀಗಿಲ್ ಪರ್ವತದ ಮಂಜು ಕರಗಬಹುದೇ ವಿನಾ 295 00:30:07,458 --> 00:30:09,375 ನಿಮ್ಮಿಬ್ಬರ ಜಗಳ ಮಾತ್ರ ನಿಲ್ಲಲ್ಲ. 296 00:30:16,083 --> 00:30:17,416 ಇನ್ನೂ ಸೂರ್ಯನ ಬೆಳಕಿಲ್ಲ. 297 00:30:19,333 --> 00:30:20,625 ಇನ್ನೊಂದು ಕೊನೆ. 298 00:30:21,416 --> 00:30:25,875 ನಾವು ರಾತ್ರಿಯಿಡೀ ಕೆಲಸ ಮಾಡಬೇಕು. ಅಯ್ಯೋ. 299 00:30:27,416 --> 00:30:31,583 ಬೊಬ್ಬೆಗಳು ಬೆಳೆಯುತ್ತಿರೋ ಹಾಗಿದೆ. ನಾಚಿಕೆ ಬೇಡ. ಅವು ನನಗೂ ಇದ್ದವು. 300 00:30:32,375 --> 00:30:35,416 - ಇದ್ದವಾ? - ಹೌದು. ನನಗೆ ಐದು ವರ್ಷವಾಗಿದ್ದಾಗ! 301 00:30:37,000 --> 00:30:38,541 ಹೌದೌದು, ರಾಜನ ಕೈಗಳು. 302 00:30:38,541 --> 00:30:40,708 ಜೀವನವಿಡೀ ಒಡವೆಗಳನ್ನೇ ಉಜ್ಜಿದ್ದಾನೆ. 303 00:30:42,500 --> 00:30:45,291 ಬೇಜಾರಾಗಬೇಡ, ರಾಜಕುಮಾರ, ಇನ್ನು 13 ಗಂಟೆಗಳಷ್ಟೇ ಉಳಿದಿವೆ. 304 00:30:45,291 --> 00:30:48,541 ಹೌದು. ನಾವು ಈ ತೊಂದರೆಯಲ್ಲಿ ಸಿಲುಕಿರುವುದಕ್ಕೆ ಅವನೇ ಕಾರಣ. 305 00:30:48,541 --> 00:30:49,750 ಮತ್ತು ಅವನ ತಂದೆ. 306 00:30:54,208 --> 00:30:57,958 ಮತ್ತೊಮ್ಮೆ ನನ್ನನ್ನು ಮುಟ್ಟಿದರೆ, ನಿನ್ನ ಬೆರಳು ಕಚ್ಚಿ ಎಸೆಯುತ್ತೇನೆ. 307 00:31:20,916 --> 00:31:22,083 ಗಣಿ ಹೇಗಿತ್ತು? 308 00:31:26,458 --> 00:31:27,458 ಎಂದಿನಂತೆ ಇತ್ತು. 309 00:31:30,625 --> 00:31:32,041 ಮಕ್ಕಳೆಲ್ಲಿ? 310 00:31:32,041 --> 00:31:34,333 ಅವರಿಗೆ ಹಸಿವಿಲ್ಲ ಎಂದು ಹೇಳಿದರು. ಮತ್ತೆ. 311 00:31:34,791 --> 00:31:36,041 ಅವರನ್ನು ದೂಷಿಸಲಾರೆ. 312 00:31:36,833 --> 00:31:39,125 ಈ ರೊಟ್ಟಿ ಕಳೆದ ವರ್ಷ ಮಾಡಿದ ಹಾಗಿದೆ. 313 00:31:39,125 --> 00:31:40,791 ಅದು ಕಳೆದ ವರ್ಷದ ರೊಟ್ಟಿಯೇ. 314 00:31:42,416 --> 00:31:45,083 ಇದನ್ನು ಕೊಟ್ಟು ಬೆಳೆದಿರುವ ತಾಜಾ ಧಾನ್ಯ ಪಡೆಯಬಾರದೇ? 315 00:31:45,791 --> 00:31:47,416 ಅದ್ಭುತ ಉಪಾಯ! 316 00:31:47,416 --> 00:31:51,125 ಆದರೆ ಡಿಮ್ರಿಲ್ ಡೇಲ್‌ನಲ್ಲಿ ನಿನ್ನ ತಂದೆಗೆ ಮನವರಿಕೆ ಮಾಡುವವರು ಯಾರು? 317 00:31:51,125 --> 00:31:53,708 - ಶುರು ಮಾಡಬೇಡ. - ಹೇಳ್ತೀನಿ ಇರು... 318 00:31:53,708 --> 00:31:54,916 ನಾನು ಬೇಡ ಅಂದೆ. 319 00:31:54,916 --> 00:31:57,583 ನಿನ್ನ ಅಹಂಕಾರವನ್ನು ಬದಿಗಿಟ್ಟು ಕ್ಷಮೆ ಕೇಳು! 320 00:31:57,583 --> 00:32:00,541 - ನಿನ್ನಿಂದ ಅಜೀರ್ಣವಾಗುತ್ತಿದೆ. - ಒಳ್ಳೆಯದೇ! ಕರುಳ ಮಾತು ಕೇಳು! 321 00:32:00,541 --> 00:32:01,875 ಕೇಳುತ್ತಿದ್ದೇನೆ! 322 00:32:02,583 --> 00:32:05,125 ನಾನೇ ಸರಿ ಅಂತ ಅವು ಈಗಲೂ ಹೇಳುತ್ತಿವೆ. 323 00:32:05,125 --> 00:32:08,541 ಎಲ್ರೊಂಡ್ ನ ನಾವು ಬಹಿಷ್ಕರಿಸಿ ಓಡಿಸದಿದ್ದಿದ್ದರೆ, ನಮಗೆ 324 00:32:08,541 --> 00:32:10,708 500 ವರ್ಷಗಳಿಗಾಗುವಷ್ಟು ಆಹಾರ ಇರುತ್ತಿತ್ತು! 325 00:32:10,708 --> 00:32:12,875 ಇದು ಆಹಾರದ ಬಗ್ಗೆ ಅಂದುಕೊಂಡೆಯಾ? 326 00:32:15,958 --> 00:32:18,791 ನಮಗೆ ಬೆಟ್ಟಗಳ ಶಬ್ದ ಕೇಳಿಸುತ್ತಿಲ್ಲ. 327 00:32:25,000 --> 00:32:26,750 ನನಗೆ ಭಯವಾಗಿದೆ, ಡ್ಯುರಿನ್. 328 00:32:29,541 --> 00:32:30,833 ನನಗೆ ಭಯವಾಗಿದೆ. 329 00:32:31,750 --> 00:32:34,916 ಡೀಸಾ... ಬಾ ಇಲ್ಲಿ. 330 00:32:42,000 --> 00:32:43,416 ನಾವು ಡ್ವಾರ್ವ್ಸ್. 331 00:32:44,541 --> 00:32:45,958 ಒಂದು ದಾರಿ ಹುಡುಕೋಣ. 332 00:32:48,458 --> 00:32:50,083 ಯಾವಾಗಲೂ ಹುಡುಕಿದ್ದೇವೆ. 333 00:32:51,375 --> 00:32:52,541 ಹೇಗೆ? 334 00:33:17,166 --> 00:33:21,333 ಕೆಲಬ್ರಿಮ್ಬೋರ್ ಗೆ ನಾವು ಬರೆದ ಯಾವ ಪತ್ರಕ್ಕೂ ಉತ್ತರ ಬಂದಿಲ್ಲ. 335 00:33:21,333 --> 00:33:23,458 ಎರೆಗಿಯೊನ್ ನಲ್ಲಿ ಸೌರೊನ್ ಇರಬಹುದು. 336 00:33:24,750 --> 00:33:27,750 ಮಹಾ ದೊರೆ ನನ್ನೊಂದಿಗೆ ಒಂದು ಸಣ್ಣ ತಂಡವನ್ನು ಕಳುಹಿಸಲು ಒಪ್ಪಿದ್ದಾರೆ, 337 00:33:28,583 --> 00:33:30,791 ಕೆಲಬ್ರಿಮ್ಬೋರ್ ಮತ್ತು ಅವರ ನಗರದ ಸುರಕ್ಷತೆಗಾಗಿ. 338 00:33:32,916 --> 00:33:34,708 ನಮ್ಮೊಂದಿಗೆ ಸೇರಿ ಎಂದು ಕೇಳುವೆ. 339 00:33:37,708 --> 00:33:40,250 ನನಗೆ ನೆನಪಿಸಲು ನಿನಗೆ ಇಷ್ಟವಿರುವಂತೆಯೇ, ಗಲಾದ್ರಿಯಲ್, 340 00:33:42,125 --> 00:33:43,416 ನಾನೊಬ್ಬ ರಾಜಕಾರಣಿ ಅಷ್ಟೇ. 341 00:33:43,416 --> 00:33:45,750 ಹಾಗಿದ್ದಂತೆ, ನಿಮ್ಮನ್ನು ಮಹಾ ದೊರೆ ನಂಬುತ್ತಾರೆ. 342 00:33:47,375 --> 00:33:48,833 ನಿಮ್ಮ ಸ್ಥಿರತೆ ನಂಬುತ್ತಾರೆ. 343 00:33:48,833 --> 00:33:52,416 ನಾಯಿಯೂ ಸ್ಥಿರವಾಗಿರುತ್ತೆ. ಹಗ್ಗ ಕಟ್ಟಿ ಎಳೆದರೆ ಬೇಗ ಹಿಂಬಾಲಿಸುತ್ತೆ. 344 00:33:59,416 --> 00:34:01,250 ನೀನಿಲ್ಲದೆ ಅವರು ನನ್ನನ್ನು ಕಳಿಸಲ್ಲ. 345 00:34:03,833 --> 00:34:05,000 ಅದು ಏಕೆ? 346 00:34:05,750 --> 00:34:08,166 - ಕಾರಣ ನಿನಗೆ ತಿಳಿದಿದೆ. - ನಿನಗೆ ಗೊತ್ತಾ ಅಂತ ಕೇಳಿದೆ. 347 00:34:10,166 --> 00:34:15,083 ಮಹಾ ದೊರೆಯ ಪ್ರಕಾರ, ನಾನೊಬ್ಬಳೇ ಶತ್ರುವನ್ನು ಎದುರಿಸಿದರೆ, 348 00:34:16,291 --> 00:34:18,041 ನನಗೆ ಮೋಸವಾಗಬಹುದಂತೆ. 349 00:34:18,583 --> 00:34:20,000 ಹಾಗ್ಯಾಕೆ ಆಲೋಚಿಸುತ್ತಾರೆ? 350 00:34:20,000 --> 00:34:21,041 ಸಾಕು, ಎಲ್ರೊಂಡ್. 351 00:34:23,375 --> 00:34:25,291 ಮಹಾ ದೊರೆಯ ಆಜ್ಞೆಯನ್ನು ಧಿಕ್ಕರಿಸಿರುವೆ. 352 00:34:25,291 --> 00:34:26,875 ಈಗ ಯಾಕೆ ಹಾಗೆ ಮಾಡಬಾರದು? 353 00:34:28,458 --> 00:34:29,791 ಏಕೆಂದರೆ ಅವರು ಸರಿ. 354 00:34:31,000 --> 00:34:32,375 ಸೌರೊನ್ ನನ್ನನ್ನು ಬಳಸಿಕೊಂಡ. 355 00:34:33,000 --> 00:34:37,041 ಅವನ ಅಡಿಯಲ್ಲಿ, ನನಗೆ ಆಯ್ಕೆ ಅಲ್ಲದಿದ್ದರೂ ಅವನ ತಾಳಕ್ಕೆ ತಕ್ಕಂತೆ ಕುಣಿಯಬೇಕಾಯಿತು. 356 00:34:38,916 --> 00:34:40,916 ಅದು ಸಂಪೂರ್ಣವಾಗಿ ನಿನ್ನ ಆಯ್ಕೆಯಾಗಿತ್ತು. 357 00:34:43,083 --> 00:34:44,875 ಸೌರೊನ್ ನಿನ್ನೊಳಗೆ ನೋಡಿದ, 358 00:34:44,875 --> 00:34:48,000 ನಿನ್ನ ನಾಟ್ಯಕ್ಕೆ ತಕ್ಕಂತೆಯೇ ತಾಳವನ್ನು ಜೋಡಿಸಿದ, 359 00:34:49,208 --> 00:34:51,375 ನಿನಗೆ ಬೇಕಾದಂತೆಯೇ ತಯಾರಾದ. 360 00:34:51,375 --> 00:34:53,458 ನಿನ್ನನ್ನು ಗೆಲುವಿನಡೆಗೆ ಒಯ್ಯುವ "ಸೋತ ರಾಜ." 361 00:34:53,458 --> 00:34:56,250 ನೀನು ಅವನಿಗೆ ಬೇಕಾದ ಎಲ್ಲವನ್ನೂ ಕೊಟ್ಟು ಧನ್ಯವಾದ ಅರ್ಪಿಸಿದೆ. 362 00:34:56,250 --> 00:34:58,250 ಈಗ ಗಿಲ್-ಗಲಾಡ್ ಗೂ ಅದನ್ನೇ ಮಾಡಿದ್ದಾನೆ. 363 00:34:58,250 --> 00:34:59,791 ಲಿಂಡೊನ್ ನ ಪ್ರತಿ ಎಲ್ಫ್ ಗೂ. 364 00:35:00,958 --> 00:35:04,291 ಅದಕ್ಕೇ ನಮಗೆ ನೀನು ಬೇಕು. ಈ ಚಕ್ರವ್ಯೂಹ ಭೇದಿಸಲು ನಮಗೆ ನೆರವಾಗು. 365 00:35:04,291 --> 00:35:06,041 ಅದನ್ನು ಭೇದಿಸಲು ಆಗಲ್ಲ. 366 00:35:06,041 --> 00:35:08,041 ಆ ಚಕ್ರವ್ಯೂಹವೇ ಅವನದು. 367 00:35:09,416 --> 00:35:11,958 ಅದರೊಳಗೆ ಇದ್ದಷ್ಟೂ ಕಾಲ, ನೀವು ಸೋಲುತ್ತೀರಿ. 368 00:35:13,333 --> 00:35:16,625 - ಎರೆಗಿಯೊನಲ್ಲಿ ಅವನಿಗೆ ನೀವು ಬೇಕು-- - ದಯವಿಟ್ಟು, ಎಲ್ರೊಂಡ್. 369 00:35:18,833 --> 00:35:20,791 ಅವನಿಗೆ ಮತ್ತೆ ಬಿಡಲಾರೆ. 370 00:35:22,500 --> 00:35:23,875 ಸಾಧ್ಯವಿಲ್ಲ. 371 00:35:46,041 --> 00:35:48,500 ಅವನು ಹೋಗಲೇ ಇಲ್ಲ, ಗಲಾದ್ರಿಯಲ್. 372 00:35:50,416 --> 00:35:52,750 ಆ ಉಂಗುರಗಳನ್ನು ಧರಿಸಲು ನಿರ್ಧರಿಸಿದರೆ, 373 00:35:53,750 --> 00:35:56,583 ನೀವೆಲ್ಲರೂ ಅವನ ಪಾಲುದಾರರಾಗಲು ನಿರ್ಧರಿಸಿದಂತೆ. 374 00:35:58,291 --> 00:36:00,083 ನನಗೂ ಇದಕ್ಕೂ ಸಂಬಂಧವಿಲ್ಲ. 375 00:36:01,708 --> 00:36:03,208 ನೀನೊಮ್ಮೆ ಮಾತು ಕೊಟ್ಟಿದ್ದೆ, 376 00:36:04,875 --> 00:36:08,458 ನಾನು ಹೆದರಿರುವ "ವದಂತಿಯ ಪಿಸುಮಾತು" ನಿಜವಾದರೂ, 377 00:36:09,666 --> 00:36:11,833 ಅದನ್ನು ಸರಿಪಡಿಸುವವರೆಗೂ ನೀನು ವಿರಮಿಸಲ್ಲ ಅಂತ. 378 00:36:14,583 --> 00:36:16,833 ನಮ್ಮ ಸ್ನೇಹದ ಬಗ್ಗೆ ನಿನಗೇನಾದರೂ ಗೌರವವಿದ್ದರೆ, 379 00:36:19,708 --> 00:36:20,708 ದಯವಿಟ್ಟು ಹೊರಡು. 380 00:36:49,166 --> 00:36:50,875 ಸೌಂದರ್ಯದಲ್ಲಿ ಬದುಕಲು ಇಷ್ಟವಿಲ್ಲವೇ? 381 00:36:51,958 --> 00:36:54,791 ಕಿರ್ಡಾನ್ ಗುರುಗಳೇ, ಈ ಉಂಗುರಗಳನ್ನು ನಂಬಲಾರೆ. 382 00:36:54,791 --> 00:36:57,583 ದುಷ್ಟತನದೊಂದಿಗೆ ಹುಟ್ಟಿದ್ದು, ಅದೆಂತಹ ಸೌಂದರ್ಯ? 383 00:36:58,125 --> 00:36:59,541 ಕಡಿಮೆ ಸೌಂದರ್ಯವೇನಲ್ಲ. 384 00:37:01,416 --> 00:37:02,583 ನನಗೆ ಅಲ್ಲ. 385 00:37:02,583 --> 00:37:05,416 ರೂಮಿಲ್ ನ ಪದಗಳನ್ನು ಬೆಂಕಿಗೆಸೆಯುತ್ತೀಯಾ, 386 00:37:05,416 --> 00:37:07,166 ಆ ಕವಿ ಕುಡುಕನಾಗಿದ್ದ ಅಂತ? 387 00:37:13,250 --> 00:37:14,625 ರೂಮಿಲ್ ಕುಡುಕನಾಗಿದ್ದನೇ? 388 00:37:16,916 --> 00:37:19,541 ಡೈರೋನ್ ಬಗ್ಗೆ ಕೇಳಬೇಡ. 389 00:37:20,500 --> 00:37:21,791 ಅಸಹನೀಯ. 390 00:37:23,041 --> 00:37:24,791 ಆದರೆ ಒಂದು ಧ್ವನಿ, 391 00:37:24,791 --> 00:37:29,750 ಸೂರ್ಯನಿಗೂ ಬೆಂಕಿಯ ಕಣ್ಣೀರು ತರಿಸುವಂಥದ್ದು. 392 00:37:32,875 --> 00:37:34,375 ಕೆಲಸವನ್ನು ನಿರ್ಣಯಿಸು, 393 00:37:36,375 --> 00:37:38,875 ಅದನ್ನು ಮಾಡಿದವರ ಬಗ್ಗೆ ನಿರ್ಣಯಿಸುವುದನ್ನು 394 00:37:38,875 --> 00:37:41,833 ಎಲ್ಲವನ್ನೂ ನೋಡುವ ಆ ಸೃಷ್ಟಿಕರ್ತನಿಗೆ ಬಿಡು. 395 00:37:41,833 --> 00:37:43,791 ಅದು ಅಸಾಧ್ಯ ಅನಿಸುತ್ತದೆ. 396 00:37:45,958 --> 00:37:47,458 ಅದನ್ನು ನಮ್ರತೆ ಎನ್ನುತ್ತಾರೆ. 397 00:37:47,458 --> 00:37:49,791 ಮತ್ತು ಹೆಚ್ಚಿನವರಿಗೆ ಅದು ಕಷ್ಟ. 398 00:37:49,791 --> 00:37:52,250 ಆದರೆ ಇದು ದೃಷ್ಟಿಯ ನಿಜವಾದ ರೂಪ. 399 00:38:03,458 --> 00:38:07,125 ನಿಮ್ಮ ಪ್ರಶಾಂತತೆ ನನಗೆ ತಿಳಿದಿದ್ದರೆ ಚೆನ್ನಾಗಿರುತ್ತಿತ್ತು. 400 00:38:09,541 --> 00:38:10,791 ನಿನ್ನಿಂದ ಸಾಧ್ಯ. 401 00:38:17,625 --> 00:38:20,958 ನಮಗೆ ಈ ಉಂಗುರಗಳು ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ. 402 00:38:20,958 --> 00:38:24,875 ಆದರೆ ಪ್ರತಿ ಜೀವಿಯ ಮೇಲೆ ಅವು ಬೀರುವ ಶಕ್ತಿಯನ್ನು ನೋಡು. 403 00:38:31,250 --> 00:38:35,833 ಸೌರೊನ್ ನ ಕೈಯಲ್ಲಿ, ಅವು ಯಾರೂ ಊಹಿಸಲಾರದಂಥ ದುಷ್ಟ ಶಕ್ತಿಯನ್ನು ಸೃಷ್ಟಿಸಬಹುದು, 404 00:38:35,833 --> 00:38:38,750 ಎಲ್ಲರ ಮನಸ್ಸು, ಇಚ್ಛೆಗಳ ಮೇಲೆ ಪ್ರಾಬಲ್ಯ ಸಾಧಿಸಬಹುದು. 405 00:38:39,291 --> 00:38:43,166 ಅದಕ್ಕಾಗಿಯೇ ಅವು ಎಲ್ಫ್ ಗಳ ಕೈಯಲ್ಲುಳಿಯಬೇಕು. 406 00:38:45,666 --> 00:38:49,458 ಈ ಶಕ್ತಿಗೆ ಭಯಪಡಲು ನೀನು ಬುದ್ಧಿವಂತ, ಎಲ್ರೊಂಡ್. 407 00:38:51,875 --> 00:38:56,875 ಆದರೆ ಆ ಭಯದಿಂದ ಆ ಶಕ್ತಿಯ ಒಳಿತು ನೋಡಲು ಕುರುಡನಾಗಬೇಡ. 408 00:38:59,666 --> 00:39:02,000 ಆ ಉಂಗುರಗಳನ್ನು ಧರಿಸುವುದು ನಿನ್ನ ಶತ್ರು ಅಲ್ಲ... 409 00:39:04,125 --> 00:39:08,083 ನಿನ್ನ ಅತ್ಯಂತ ವಿಶ್ವಾಸಾರ್ಹ ಸ್ನೇಹಿತರು. 410 00:39:08,708 --> 00:39:12,708 ಅವರು ದಾರಿ ತಪ್ಪಿದ್ದಾರೆ ಅನಿಸಿದರೆ, ಅವರನ್ನು ಬಿಟ್ಟುಬಿಡಬೇಡ, 411 00:39:12,708 --> 00:39:17,875 ಬದಲಾಗಿ ನಿನ್ನ ಕಣ್ಣುಗಳನ್ನು ತೆರೆದು ಅವರಿಗೆ ಮಾರ್ಗದರ್ಶನ ಕೊಡು... 412 00:39:18,541 --> 00:39:22,208 ಮಧ್ಯ ಧರೆಯಾದ್ಯಂತ ಕಗ್ಗತ್ತಲು ಕವಿದು, 413 00:39:22,208 --> 00:39:24,625 ನಮ್ಮೆಲ್ಲರನ್ನು ಕುರುಡಾಗಿಸುವ ಮುಂಚೆ. 414 00:39:57,500 --> 00:39:58,916 ನೀನು ವಿಶ್ರಾಂತಿ ಪಡೆಯಬೇಕು. 415 00:40:00,833 --> 00:40:03,291 ಖಂಡಿತ ಇಲ್ಲ, ನಾನು... 416 00:40:09,958 --> 00:40:11,166 ಎದ್ದೇಳು! 417 00:40:14,833 --> 00:40:17,416 ಏನು ಮಾಡುತ್ತಿರುವೆ? ಇಲ್ಲಿಗೆ ಹಿಂತಿರುಗು! 418 00:40:17,416 --> 00:40:19,500 ಅದನ್ನು ನೋಡಿದೆ. ನೋಡಿದೆನೆಂದು ಗೊತ್ತು. ಬಾ. 419 00:40:19,500 --> 00:40:21,291 ಪೋಪ್ಪಿ, ಅವನೀಗ ಉಸಿರಾಡುತ್ತಿಲ್ಲ! 420 00:40:23,666 --> 00:40:25,833 ಅದೋ! ಹಾಂ! ನೋರಿ, ನನಗೆ ಕಂಡಿತು! 421 00:40:26,541 --> 00:40:27,958 ಏನು ಕಾಣಿಸಿತು? 422 00:40:27,958 --> 00:40:29,583 ನೀರು. 423 00:40:31,458 --> 00:40:35,375 ಇಷ್ಟು ದಿನಗಳು ಏನೂ ತಿನ್ನದೆ ಇರುವಂಥವನು 424 00:40:35,375 --> 00:40:37,750 ಇಷ್ಟು ಭಾರ ಹೇಗಿದ್ದಾನೆ? 425 00:40:41,000 --> 00:40:42,458 ಬೇಗ ಬೇಗ! 426 00:40:45,041 --> 00:40:46,416 ದಯವಿಟ್ಟು, ದಯವಿಟ್ಟು. 427 00:40:47,166 --> 00:40:48,291 ಬೇಗ, ಪೋಪ್ಪಿ! 428 00:41:04,625 --> 00:41:05,708 ಬಾ! 429 00:41:15,541 --> 00:41:16,583 ಸಿಕ್ಕಿತು. 430 00:41:26,291 --> 00:41:27,541 ಬಾ. 431 00:41:31,166 --> 00:41:32,333 ಬಾ. 432 00:41:33,916 --> 00:41:35,416 ನಿನಗೇನೂ ಆಗಲ್ಲ. 433 00:41:40,541 --> 00:41:42,083 ಅಬ್ಬಾ, ಸದ್ಯ, ಬದುಕಿದ್ದೀಯ. 434 00:41:42,083 --> 00:41:44,916 ನೀನು ಹೋದೆ... ಹೋದೆ ಅಂತಲೇ ಅಂದುಕೊಂಡೆವು. 435 00:41:51,000 --> 00:41:53,583 ನಾವು ಯಾರೂ ಯಾರನ್ನೂ ಕಳೆದುಕೊಳ್ಳಲ್ಲ. 436 00:41:57,875 --> 00:42:00,208 ನನ್ನ ಕಣ್ಣುಗಳು ಒಣಗಿವೆ, ಇಲ್ಲಾ ಅಳುತ್ತಿದ್ದೆ. 437 00:42:29,833 --> 00:42:30,875 ಏನು? 438 00:42:32,625 --> 00:42:34,000 ನಿನಗೆ ಅನಿಸಲ್ವಾ... 439 00:42:34,000 --> 00:42:39,041 ನಾನು ಕನಸಿನಲ್ಲಿ ಕಂಡ ದಂಡಕ್ಕಿಂತ ಇದು ಭಿನ್ನವೇನಿಲ್ಲ. 440 00:42:40,000 --> 00:42:41,166 ನೋರಿ... 441 00:43:05,791 --> 00:43:07,708 ನಾವು ಕೇವಲ ನೀರು ಕುಡಿಯುತ್ತಿದ್ದೆವು. 442 00:43:23,583 --> 00:43:24,916 ಏನು ಮಾಡುತ್ತಿರುವೆ? 443 00:43:24,916 --> 00:43:25,875 ನೋರಿ, ಕೆಳಗಿಳಿ! 444 00:44:18,541 --> 00:44:20,500 ನಿಲ್ಲಿಸು! ನಿಲ್ಲಿಸು! ಅದನ್ನು ನಿಲ್ಲಿಸು! 445 00:44:26,458 --> 00:44:28,291 ಅವನು ಅದನ್ನು ಏಕೆ ತಡೆಯುತ್ತಿಲ್ಲ? 446 00:44:28,916 --> 00:44:30,291 ಅವನಿಗೆ ಸಾಧ್ಯವಿಲ್ಲ! 447 00:44:39,250 --> 00:44:40,416 ಕಾಪಾಡಿ! 448 00:44:42,083 --> 00:44:43,500 ನೋರಿ! 449 00:44:45,958 --> 00:44:47,708 ನಾನು ಬರುತ್ತಿದ್ದೇನೆ! 450 00:44:53,125 --> 00:44:57,458 ಹಿಡಿದುಕೋ! ಹಿಡಿದುಕೋ! 451 00:45:05,000 --> 00:45:06,208 ನೋರಿ! 452 00:45:07,166 --> 00:45:08,750 ನೋರಿ! 453 00:45:20,666 --> 00:45:22,083 ಹೋಯಿತು. 454 00:45:24,833 --> 00:45:26,083 ಹೌದಾ? 455 00:45:39,875 --> 00:45:41,750 ಇದನ್ನು ಇಥಿಲ್ಡಿನ್ ಎಂದು ಕರೆದಿದ್ದೇನೆ. 456 00:45:41,750 --> 00:45:44,375 ಮೀಥ್ರಿಲ್ ನ ನಮ್ಮ ಕಡೆಯ ಬೆಳ್ಳಿಯಿಂದ ಮಾಡಲ್ಪಟ್ಟಿದ್ದು. 457 00:45:44,375 --> 00:45:48,208 ಚಂದ್ರನ ಬೆಳಕಿಲ್ಲದೆ, ಇದು ಕಾಣುವುದೇ ಇಲ್ಲ. 458 00:45:49,125 --> 00:45:50,125 ಹೌದು. 459 00:45:51,916 --> 00:45:53,125 ತುಂಬಾ ಅಗೋಚರವಾದದ್ದೇ. 460 00:45:59,750 --> 00:46:02,375 ನಮ್ಮ ಸಂದರ್ಶಕ, ಅವನು ಇನ್ನೂ... 461 00:46:03,791 --> 00:46:05,958 ರಾತ್ರಿ ತಂಪಾಗಿದೆ, ಒಡೆಯ. 462 00:46:06,833 --> 00:46:09,000 ಅವನಿಗೊಂದು ಕಂಬಳಿ ತರಲೇ? 463 00:47:07,791 --> 00:47:10,875 ನೀನಿಲ್ಲಿ ಬಂದಿರುವ ಕಾರಣ ಏನೇ ಇರಲಿ, 464 00:47:12,875 --> 00:47:16,250 ನೀನಾಗಿಯೇ ಹೊರಡದಿದ್ದರೆ, ನಿನ್ನನ್ನು ಇಲ್ಲಿಂದ ಹೊರದಬ್ಬಬೇಕಾಗುತ್ತದೆ. 465 00:47:18,208 --> 00:47:19,833 ಇನ್ನು ನಿನ್ನನ್ನು ಸಂಧಿಸಲಾರೆ. 466 00:47:23,333 --> 00:47:24,750 ಹಾಗೆ ಹೇಳುವಿರಿ ಅಂತ ಹೇಳಿದಳು. 467 00:47:29,375 --> 00:47:32,583 ಗಲಾದ್ರಿಯಲ್? ಅವಳ ಜೊತೆ ಮಾತನಾಡಿದ್ದೀಯಾ? 468 00:47:34,083 --> 00:47:35,125 ಮಾತಾಡಿದ್ದೀಯ ತಾನೇ? 469 00:47:35,666 --> 00:47:36,583 ಇಲ್ಲ. 470 00:47:37,750 --> 00:47:39,500 ಲಿಂಡೊನ್ ಗೆ ಅವಳು ಹೊರಟಾಗಿನಿಂದ ಇಲ್ಲ. 471 00:47:40,416 --> 00:47:42,500 ಹಾಗಾದರೆ ಏನಾಯ್ತು ಅಂತ ನಿಮಗೆ ಗೊತ್ತಿಲ್ಲವೇ? 472 00:47:43,875 --> 00:47:45,166 ಉಂಗುರಗಳ ಬಗ್ಗೆ ಏನೂ ಇಲ್ವಾ? 473 00:47:48,375 --> 00:47:49,750 ಉಂಗುರಗಳ ಬಗ್ಗೆ ಏನು? 474 00:47:51,833 --> 00:47:52,833 ಅವು ಕೆಲಸ ಮಾಡಿದವಾ? 475 00:47:55,208 --> 00:47:56,750 ನೀವು ಅವಳನ್ನು ಕೇಳಿದರೇನೇ ಒಳಿತು. 476 00:47:57,250 --> 00:47:58,416 ಅವಳು ಇಲ್ಲಿಲ್ಲ. 477 00:47:59,541 --> 00:48:00,416 ನೀನಿದ್ದೀಯ. 478 00:48:00,416 --> 00:48:02,041 ಮಹಾ ದೊರೆಯ ಬಗ್ಗೆ ಏನು? 479 00:48:02,041 --> 00:48:04,916 ಖಂಡಿತವಾಗಿ ಅವರು ಸುದ್ದಿ ಕಳಿಸಲು ವಿಳಂಬ-- 480 00:48:06,958 --> 00:48:08,250 ಹಾಗೋ. 481 00:48:10,166 --> 00:48:13,375 ಇದು ಹಳೆಯ ಕಥೆ, ಅಲ್ವಾ? 482 00:48:16,375 --> 00:48:19,666 ಗೆಣ್ಣುಗಳಲ್ಲಿ ರಕ್ತ ಬರುವವರೆಗೂ ಕಷ್ಟಪಡುವವರು ಸೃಷ್ಟಿಕರ್ತರು, 483 00:48:20,833 --> 00:48:24,750 ಆಮೇಲೆ ಅವರು ಬಂದು, ಅವರಿಗೆ ಯಾವುದು ಲಾಭದಾಯಕವೋ ಅದನ್ನು ತಗೊಂಡು, 484 00:48:25,708 --> 00:48:27,458 ನಮ್ಮನ್ನೆಲ್ಲಾ ಮರೆತುಬಿಡುತ್ತಾರೆ. 485 00:48:30,666 --> 00:48:32,416 ನಿಮ್ಮ ತಾಳ್ಮೆಯನ್ನು ಮೆಚ್ಚುವೆ. 486 00:48:34,541 --> 00:48:36,083 ಎಲ್ಲಿಗೆ ಹೋಗುತ್ತಿರುವೆ? 487 00:48:36,083 --> 00:48:38,500 ನನ್ನ ಅಗತ್ಯವಿಲ್ಲದ ಕಡೆ ಇರಲು ನನಗೆ ಕಾರಣವಿಲ್ಲ. 488 00:48:40,791 --> 00:48:41,791 ಇರು. 489 00:48:55,458 --> 00:48:57,583 ಹಲ್ಬ್ರ್ಯಾಂಡ್. ದಯವಿಟ್ಟು. ನನಗೆ ಹೇಳು. 490 00:48:58,916 --> 00:49:02,833 ಉಂಗುರಗಳು. ಕೆಲಸ ಮಾಡಿದವಾ? 491 00:49:11,708 --> 00:49:13,291 ಅದ್ಭುತವಾಗಿ ಮಾಡಿದವು. 492 00:49:17,041 --> 00:49:18,625 ಹಾಗಾದರೆ, ಎಲ್ಫ್ ಗಳು-- 493 00:49:18,625 --> 00:49:19,708 ಹೌದು. 494 00:49:24,708 --> 00:49:26,916 ಮತ್ತೆ ಲಿಂಡೊನ್? 495 00:49:26,916 --> 00:49:28,000 ಹೌದು. 496 00:49:35,041 --> 00:49:36,958 - ಅಳುತ್ತಿದ್ದೀರಾ? - ಇಲ್ಲ. 497 00:49:42,583 --> 00:49:44,208 ನಾನು ಸಂಭ್ರಮಿಸುತ್ತಿದ್ದೇನೆ. 498 00:49:46,125 --> 00:49:49,083 ನಿನಗೆ ಸ್ವಲ್ಪವೂ ಸುಳಿವು ಇಲ್ಲ... 499 00:49:51,791 --> 00:49:53,291 ಇದು ಹೇಗೆ ಅನಿಸುತ್ತದಂತ. 500 00:49:53,291 --> 00:49:55,708 ಅಷ್ಟೆಲ್ಲಾ ಸಮಯದ ನಂತರ, ಅಷ್ಟೊಂದು ಶತಮಾನಗಳ ಬಳಿಕ, 501 00:49:55,708 --> 00:49:58,375 ಕೊನೆಗೂ ಏನಾದರೂ ಸೃಷ್ಟಿಸಲು. 502 00:50:01,166 --> 00:50:02,875 ನಾನೊಂದು ಮೊದಲ ಯುಗದ ಸೀಸೆ ತೆರೆಯುವೆ. 503 00:50:05,166 --> 00:50:08,291 ಅದನ್ನು ಕಾಪಾಡಿಕೊಂಡಿದ್ದೆ. 504 00:50:13,875 --> 00:50:15,125 ಕೆಲಬ್ರಿಮ್ಬೋರ್... 505 00:50:21,625 --> 00:50:22,958 ನೀವು ನನ್ನ ಸ್ನೇಹಿತನಾ? 506 00:50:24,916 --> 00:50:26,250 ಹೌದು, ಖಂಡಿತ. 507 00:50:27,791 --> 00:50:28,833 ಏಕೆ? 508 00:50:28,833 --> 00:50:30,791 ಯಾಕೆಂದರೆ ನಮ್ಮಿಬ್ಬರಷ್ಟು ಹತ್ತಿರವಾಗಿ 509 00:50:30,791 --> 00:50:33,791 ಕೆಲಸ ಮಾಡಿದವರ ನಡುವೆ ಯಾವುದೇ ಅರ್ಧ ಸತ್ಯಗಳಿಗೆ ಜಾಗವಿಲ್ಲ. 510 00:50:37,208 --> 00:50:40,958 ಆದರೂ ನಿಮಗೆ ಗೊತ್ತಿಲ್ಲದ್ದು ತುಂಬಾ ಇದೆ. 511 00:50:42,500 --> 00:50:43,666 ನಿಮಗೆ ತುಂಬಾ ಹೇಳುವುದಿದೆ. 512 00:50:45,458 --> 00:50:46,458 ಕೇವಲ... 513 00:50:49,291 --> 00:50:50,750 ನಿನಗೆ ಭಯವಾಗಿದೆ. 514 00:50:52,458 --> 00:50:55,333 ನೋಡಿದಿರಾ? ನಿಮ್ಮಿಂದ ನನಗೆ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. 515 00:50:56,958 --> 00:50:58,125 ಸರಿ... 516 00:51:02,750 --> 00:51:04,083 ನಿರಾಳವಾಗಿರು. 517 00:51:07,333 --> 00:51:10,583 ನೀನು ನನಗೆ ಏನು ಹೇಳಬೇಕೆಂದಿದ್ದರೂ, ತೆರೆದ ಮನಸ್ಸಿನಿಂದ ಸ್ವೀಕರಿಸುವೆ. 518 00:51:13,166 --> 00:51:15,375 ಎಲ್ವೆನ್ ಉಂಗುರಗಳ ವಿಚಾರವಾಗಿ ನಾನಿಲ್ಲಿಗೆ ಬರಲಿಲ್ಲ. 519 00:51:17,291 --> 00:51:21,041 ಮನುಷ್ಯರಿಗೆ ಉಂಗುರ ಮಾಡಿ ಎಂದು ಕೇಳಲು ಬಂದೆ. 520 00:51:22,500 --> 00:51:23,833 ಮನುಷ್ಯರಿಗಾಗಿ ಉಂಗುರಗಳಾ? 521 00:51:24,791 --> 00:51:26,208 ಎಲ್ಫ್ಗಳನ್ನು ಕಾಪಾಡಿದಿರಿ. 522 00:51:28,166 --> 00:51:29,291 ಎಲ್ಫ್ ಗಳು ಮನುಷ್ಯರಲ್ಲ. 523 00:51:30,916 --> 00:51:31,875 ಮನುಷ್ಯರಿಗೆ ದುರಾಸೆ. 524 00:51:34,208 --> 00:51:36,958 ಭ್ರಷ್ಟಾಚಾರದ ಅಪಾಯಗಳು ಹೆಚ್ಚು. 525 00:51:37,625 --> 00:51:39,291 ಹೆಚ್ಚಿನ ಉಂಗುರಗಳನ್ನು ತಯಾರಿಸಿದರೂ, 526 00:51:39,291 --> 00:51:41,208 ಡ್ವಾರ್ವ್ಸ್ ಎಂದಿಗೂ ಮೀಥ್ರಿಲ್ ಕೊಡಲ್ಲ. 527 00:51:41,208 --> 00:51:43,916 ಡ್ವಾರ್ವ್ಸ್ ತಮ್ಮದೇ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ. 528 00:51:43,916 --> 00:51:46,125 ಸಂದಿಗ್ಧತೆ? ಹಲ್ಬ್ರ್ಯಾಂಡ್, ಏನು ಹೇಳುತ್ತಿರುವೆ? 529 00:51:48,625 --> 00:51:50,625 ನನ್ನ ಹೆಸರು ಹಲ್ಬ್ರ್ಯಾಂಡ್ ಅಲ್ಲ. 530 00:51:52,375 --> 00:51:53,291 ಏನು? 531 00:51:53,291 --> 00:51:56,000 ಗಲಾದ್ರಿಯಲ್ ನಿಜವನ್ನು ತಿಳಿದಾಗ, ನನ್ನನ್ನು ಹೊರದಬ್ಬಿದಳು. 532 00:51:57,250 --> 00:51:59,416 ನಿಮ್ಮಿಂದಲೂ ಅದೇ ಆಗುವುದು ನನಗೆ ಬೇಕಿಲ್ಲ. 533 00:52:03,250 --> 00:52:06,166 ಅಂದರೆ... ಅಂದರೆ ನೀನು ರಾಜನಲ್ಲ ಅಂತಾಯ್ತು. 534 00:52:06,958 --> 00:52:09,500 ಇಲ್ಲ. ರಾಜನಲ್ಲ. 535 00:52:10,708 --> 00:52:12,500 ತೆಂಕಣ ನಾಡಿನವನಲ್ಲ. 536 00:52:13,166 --> 00:52:16,041 ಮನುಷ್ಯನೂ... ಅಲ್ಲ. 537 00:52:20,000 --> 00:52:21,000 ನೀನು ಏನು? 538 00:52:22,458 --> 00:52:28,083 ಈ ಜಗತ್ತಿನಲ್ಲಿ ದುಷ್ಟಶಕ್ತಿಗಳನ್ನೂ ಮೀರಿದ ಶಕ್ತಿಗಳಿವೆ, ಕೆಲಬ್ರಿಮ್ಬೋರ್. 539 00:52:28,708 --> 00:52:32,375 ಕೆಲವೊಮ್ಮೆ, ಅವು ಸಹಾಯ ಕಳಿಸುತ್ತವೆ, 540 00:52:33,500 --> 00:52:34,791 ರಾಯಭಾರಿಯ ರೂಪದಲ್ಲಿ. 541 00:52:34,791 --> 00:52:40,541 ಒಬ್ಬ... ಒಬ್ಬ ದೂತ, ಬುದ್ಧಿವಂತರ ಕಿವಿಗೆ ಮಾರ್ಗದರ್ಶನ ಹೇಳಲು ಬಂದವನು. 542 00:52:44,500 --> 00:52:46,708 ಯಾವ ರೀತಿಯ ಮಾರ್ಗದರ್ಶನ? 543 00:52:48,083 --> 00:52:50,333 ಮೊರ್ಡೊರಿನ ಉಗಮ ಆರಂಭವಷ್ಟೇ. 544 00:52:50,333 --> 00:52:53,750 ಈ ಕ್ಷಣದಲ್ಲಿ, ಮಧ್ಯ ಧರೆ ಎಲ್ಲಾ ದುರಂತದ ಅಂಚಿನ ಮೇಲೆ ನಿಂತಿದೆ. 545 00:52:54,458 --> 00:52:56,791 ಶೀಘ್ರದಲ್ಲೇ, ಪ್ರತಿ ಕ್ಷೇತ್ರವೂ ಕುಸಿಯುತ್ತದೆ. 546 00:52:58,208 --> 00:53:02,500 ಎಲ್ಫ್ಗಳಷ್ಟೇ ಅಲ್ಲ, ಡ್ವಾರ್ವ್ಸ್ ಕೂಡ. ಮತ್ತು ಮನುಷ್ಯರೂ ಸಹ. 547 00:53:04,541 --> 00:53:06,291 ಕಗ್ಗತ್ತಲೆ ಬಲಗೊಳ್ಳುತ್ತಿದೆ. 548 00:53:07,333 --> 00:53:10,583 ಬೆಳಕನ್ನು ಪುನಃಸ್ಥಾಪಿಸಲು ನಮಗಿರುವ ಕೊನೆಯ ಭರವಸೆ ಶಕ್ತಿಯ ಉಂಗುರಗಳು. 549 00:53:13,791 --> 00:53:15,250 ನಮ್ಮಿಬ್ಬರಿಗೂ ಕೆಲಸವಿದೆ. 550 00:53:21,625 --> 00:53:24,375 ವಲಾರಿನ ದೂತ ನೀನು ಅಂತ ಹೇಳಿದರೆ 551 00:53:24,375 --> 00:53:28,500 ನಾನು ಅದನ್ನು ನಂಬಬೇಕಾ-- 552 00:53:38,708 --> 00:53:39,916 ಹಲ್ಬ್ರ್ಯಾಂಡ್? 553 00:53:42,250 --> 00:53:43,250 ಹಲ್ಬ್ರ್ಯಾಂಡ್? 554 00:54:01,750 --> 00:54:02,916 ಹಲ್ಬ್ರ್ಯಾಂಡ್! 555 00:54:31,208 --> 00:54:34,583 ದೂರದ ನಾಡುಗಳ ಮಣ್ಣು ಮತ್ತು ಮರುಭೂಮಿಗಳ ಮೂಲಕ ಸಾಗಿದ್ದೇನೆ, 556 00:54:37,250 --> 00:54:43,041 ಮಧ್ಯ ಧರೆಯನ್ನೆಲ್ಲಾ ಉಳಿಸುವ ಕಲೆಯನ್ನು ಹೊಂದಿರುವ ಕಲಾವಿದನನ್ನು ಹುಡುಕುತ್ತಾ. 557 00:54:45,541 --> 00:54:47,958 ಚಂಡಮಾರುತ ಬರ್ತಿದೆ, ಕೆಲಬ್ರಿಮ್ಬೋರ್. 558 00:54:50,250 --> 00:54:53,375 ಯಾರ ಬಳಿಯೂ ಇಲ್ಲದ ಜ್ಞಾನವನ್ನು ನಾನು ನಿನಗೆ ತರಬಲ್ಲೆ. 559 00:54:53,958 --> 00:54:57,166 ನಿನ್ನ ಮಹಾ ಸಾಮರ್ಥ್ಯಗಳನ್ನು ತೆರೆದಿಡಬಲ್ಲೆ. 560 00:54:57,958 --> 00:55:00,125 ಮತ್ತು ನಮ್ಮ ಕೆಲಸ ಪೂರ್ಣಗೊಂಡಾಗ, 561 00:55:00,125 --> 00:55:05,458 ಜಗತ್ತು ನಿನ್ನನ್ನು ಎಂದಿಗೂ ಕೇವಲ ಫೀನೋರ್ ಕುಡಿಯೆಂದು ಕಡೆಗಣಿಸುವುದಿಲ್ಲ, 562 00:55:06,041 --> 00:55:08,333 ಆದರೆ ಎಂದೆಂದಿಗೂ ನಿನ್ನನ್ನು ಗೌರವಿಸುತ್ತದೆ... 563 00:55:14,291 --> 00:55:16,708 ಉಂಗುರಗಳ ದೊರೆ. 564 00:55:41,958 --> 00:55:43,666 ನೀನು ನನಗೆ ನಮಸ್ಕರಿಸಬೇಕಾಗಿಲ್ಲ. 565 00:55:44,416 --> 00:55:46,500 ಆದರೆ ನಾನು ನಿನ್ನ ಸಹಜ ರೂಪ ನೋಡಿದ್ದೇನೆ. 566 00:55:49,833 --> 00:55:51,000 ಏಳು. 567 00:55:53,708 --> 00:55:55,416 ನಮ್ಮ ಕೆಲಸ ಈಗ ಆರಂಭವಾಗುತ್ತದೆ. 568 00:55:56,666 --> 00:55:58,500 ನಾನು ನಿನ್ನನ್ನು ಏನೆಂದು ಕರೆಯಲಿ? 569 00:55:58,500 --> 00:55:59,666 ನಾನು ನಿನ್ನ ಸಹವರ್ತಿ. 570 00:56:02,125 --> 00:56:04,958 ಹೆಚ್ಚಲ್ಲ, ಕಡಿಮೆಯೂ ಅಲ್ಲ. 571 00:56:07,000 --> 00:56:08,875 ಉಡುಗೊರೆಗಳ ಹಂಚಿಕೆದಾರ. 572 00:56:11,375 --> 00:56:12,916 ಅನ್ನಟಾರ್. 573 00:56:14,708 --> 00:56:16,166 ಅನ್ನಟಾರ್. 574 00:56:19,958 --> 00:56:21,666 ಉಡುಗೊರೆಗಳ ಒಡೆಯ. 575 00:56:38,500 --> 00:56:39,583 ನನ್ನನ್ನು ಕರೆಸಿದಿರಾ? 576 00:56:40,416 --> 00:56:42,125 ನಿನಗೆ ಹೊಸ ಆದೇಶಗಳಿವೆ, ಸೇನಾಧಿಪತಿ. 577 00:56:42,916 --> 00:56:47,541 ಬೆಳಕು ಹರಿದದ್ದೇ, ನಮ್ಮ ಐದು ವೀರ ಎಲ್ಫ್ಗಳೊಂದಿಗೆ ಎರೆಗಿಯೊನ್ ಗೆ ಹೊರಡು. 578 00:56:48,708 --> 00:56:49,708 ನಾನು... 579 00:56:51,708 --> 00:56:54,541 ಮರುಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು. 580 00:56:54,541 --> 00:56:56,708 ಧನ್ಯವಾದ ಹೇಳಬೇಕಿರುವುದು ನನಗಲ್ಲ. 581 00:56:59,833 --> 00:57:00,916 ಎಲ್ರೊಂಡ್. 582 00:57:05,250 --> 00:57:08,458 ನೀವು ನನ್ನ ಜೊತೆ ಬರಲು ನಿರ್ಧರಿಸಿದ್ದಕ್ಕೆ ತುಂಬಾ ಧನ್ಯವಾದಗಳು. 583 00:57:11,208 --> 00:57:13,708 ಅಪಾರ್ಥ ಮಾಡಿಕೊಳ್ಳಬೇಡ, ಗಲಾದ್ರಿಯಲ್. 584 00:57:14,875 --> 00:57:17,791 ಎಲ್ರೊಂಡ್ ಕೆಲಸ ನಿಮ್ಮ ಜೊತೆ ಸೇರಿಕೊಳ್ಳುವುದಲ್ಲ. 585 00:57:18,541 --> 00:57:20,208 ನಿಮ್ಮನ್ನು ಮುನ್ನಡೆಸುವುದು. 586 00:57:58,458 --> 00:58:00,958 ಏನು? ಎಲ್ರೊಂಡಾ? 587 00:58:01,916 --> 00:58:04,708 ಇದು ಒಂದು ರೀತಿಯ ಆಹ್ವಾನ... 588 00:58:06,250 --> 00:58:08,916 ಕೆಲಬ್ರಿಮ್ಬೋರ್ ದೊರೆಯಿಂದ. 589 00:58:08,916 --> 00:58:12,041 ಅವರಿಗೆ ಡ್ವಾರ್ವ್ಸ್ ಎರೆಗಿಯೊನ್ ಗೆ ಬರಬೇಕಂತೆ. 590 01:00:10,208 --> 01:00:12,208 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 591 01:00:12,208 --> 01:00:14,291 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ