1 00:01:24,461 --> 00:01:28,048 ಟಾಮ್ ಕ್ಲಾನ್ಸಿಯವರ ಜ್ಯಾಕ್ ರಯಾನ್ 2 00:01:54,867 --> 00:01:56,785 ಅಧ್ಯಕ್ಷರು ನಿಮ್ಮನ್ನೀಗ ನೋಡ್ತಾರೆ. 3 00:02:09,256 --> 00:02:13,552 -ಮಿಸ್ ರೈಟ್, ಪಶ್ಚಿಮ ವಿಭಾಗಕ್ಕೆ ಸ್ವಾಗತ. -ಧನ್ಯವಾದ, ಅಧ್ಯಕ್ಷರೇ. 4 00:02:13,552 --> 00:02:17,264 ಉಪಾಧ್ಯಕ್ಷರು ನನಗೆ ಮೂಲಭೂತ ಅಂಶಗಳು ತಿಳಿಸಿದ್ದಾರೆ. ನನಗೆ ವಿವರವಾಗಿ ತಿಳಿಸಿ. 5 00:02:17,264 --> 00:02:22,519 ಮಾಪನ ಹಾಗೂ ಸಹಿ ಮಾಹಿತಿಯ ಪ್ರಕಾರ ಅದು ಅಣು ಸ್ಫೋಟವಾಗಿತ್ತು, 6 00:02:22,519 --> 00:02:26,773 ಹಾಗೂ ಸಾಧನ ಅಮೇರಿಕಾ ನಿರ್ಮಿತ ಕಡಿಮೆ ಇಳುವರಿ ಆಯುಧದ ಹಾಗಿದೆ. 7 00:02:26,773 --> 00:02:28,483 ಇದು ದುರಂತವಾಗಿರ್ತಿತ್ತು, 8 00:02:28,483 --> 00:02:32,070 ಆದ್ರೆ ನಮ್ಮ ಆಫಿಸರಿನ ಕ್ರಮಗಳು ಪ್ರಾಣಹಾನಿ ತಪ್ಪಿಸಿದವು. 9 00:02:32,070 --> 00:02:34,573 ಇದು ಭಯೋತ್ಪಾದನೆಯಾ? ಅಘೋಷಿತ ಪರಮಾಣು ಶಕ್ತಿ? 10 00:02:34,573 --> 00:02:37,826 ನಮ್ಮ ಮಾಹಿತಿಯ ಪ್ರಕಾರ, ಮತಾಂಧ ರಷ್ಯನ್ನರ ಒಂದು ಗುಂಪು 11 00:02:37,826 --> 00:02:42,289 ಯುಎಸ್ ಹಾಗು ರಷ್ಯಾ ಸಂಘರ್ಷ ಮಾಡಲೆಂದು ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದೆ. 12 00:02:42,289 --> 00:02:44,583 ಇದೂ ಆ ಪ್ರಚಾರದ ಅಂಗವಾಗಿತ್ತೆಂದು ನಂಬಿದ್ದೇವೆ. 13 00:02:44,583 --> 00:02:48,962 -ಇದು ರಷ್ಯಾ ಸರ್ಕಾರದ ಕೆಲಸ ಅಲ್ವಾ? -ಇಲ್ಲ. ಸ್ಫೋಟದ ಹಿಂದಿರುವ ಗುಂಪಿನಲ್ಲಿ 14 00:02:48,962 --> 00:02:52,549 ಚೆಕ್ ಅಧ್ಯಕ್ಷೆ ಅಲೇನಾ ಕೋವ್ಯಾಕ್ ಅವರ ತಂದೆ ಪೀಟರ್ ಕೋವ್ಯಾಕ್ ಕೂಡ ಇದ್ದರು, 15 00:02:52,549 --> 00:02:55,594 ಹಾಗೂ ಅಲೆಕ್ಸೈ ಪೆಟ್ರಾವ್, ರಷ್ಯಾದ ನೂತನ ರಕ್ಷಣಾ ಮಂತ್ರಿ. 16 00:02:55,594 --> 00:02:58,347 ಇದು ಊಹೆನೋ ಅಥವಾ ನಿಜಾನೋ? 17 00:02:58,347 --> 00:03:01,892 ನಮ್ಮ ಅತ್ಯುತ್ತಮ ಅಧಿಕಾರಿಗಳು ಹಾಗೂ ವಿಶ್ಲೇಷಕರು ಮಾಡಿರುವ ತೀರ್ಮಾನ. 18 00:03:01,892 --> 00:03:05,729 ಅದು ತಪ್ಪು ಮಾಹಿತಿ ಅಂತ ಕ್ರಮ್ಲಿನ್ನಿಗೆ ಇನ್ನೂ ಗೊತ್ತಾಗಿಲ್ಲ ಅನ್ಸುತ್ತೆ. 19 00:03:05,729 --> 00:03:09,983 -ಅವರು ಯುದ್ಧಕ್ಕೆ ಸಿದ್ಧವಾಗ್ತಿದ್ದಾರೆ. -ಇದು ಅವರ ಪ್ರಚಾರದ ಅಂಗ ಅಂತಂದ್ರಿ. 20 00:03:09,983 --> 00:03:13,612 ರಷ್ಯನ್ನರು ತಮ್ಮ ರಕ್ಷಣಾ ಸಿದ್ಧತೆಯನ್ನು ಹೆಚ್ಚಿಸಿದ್ದಾರೆ. 21 00:03:13,612 --> 00:03:18,283 -ಈ ಗುಂಪು ಅದನ್ನ ಬಳಸ್ಕೊಳ್ಳುತ್ತೆ ಅಂತನ್ಸುತ್ತೆ. -ಡೆಫ್ಕಾನ್-2 ಗೆ ಹೋಗಲು ಮತ್ತೊಂದು ಕಾರಣ. 22 00:03:18,283 --> 00:03:21,119 ಮತ್ತೆ ಅವರಿಗೆ ಬೇಕಾಗಿರೋದೂ ಅದೇ. 23 00:03:21,119 --> 00:03:24,998 ಮಾಸ್ಕೋದಲ್ಲಿ ನಮ್ಮವರು ಕ್ರೆಮ್ಲಿನನ್ನು ತಣ್ಣಗೆ ಮಾಡಲು ರಷ್ಯಾದ ಗುಪ್ತಚರ ಒಬ್ಬನೊಂದಿಗೆ 24 00:03:24,998 --> 00:03:28,377 ಪೆಟ್ರಾವಿಗೆ ಅಪಖ್ಯಾತಿ ತರಲು ಮಾತಾಡ್ತಿದ್ದಾರೆ. 25 00:03:28,377 --> 00:03:31,088 ನಿರ್ದಿಷ್ಟವಾಗಿ ಏನಾದ್ರೂ ಗೊತ್ತಾದ್ರೆ ನನಗೆ ತಿಳಿಸಿ. 26 00:03:31,088 --> 00:03:34,049 ಈ ಮಧ್ಯೆ, ಇನ್ನೂ ನೇರ ಆಯ್ಕೆಗಳನ್ನು ಹುಡುಕಬೇಕು. 27 00:03:34,049 --> 00:03:36,551 -ಖಂಡಿತ, ಸರ್. -ಧನ್ಯವಾದ, ಮಿಸ್ ರೈಟ್. 28 00:03:37,594 --> 00:03:39,137 ಧನ್ಯವಾದ, ಮಿ. ಅಧ್ಯಕ್ಷರೇ. 29 00:03:40,389 --> 00:03:44,935 {\an8}ಬೋಲ್ಶಾಯ್ ಮಾಸ್ಕ್ವಾರೇಟ್ಸ್ಕೀ ಸೇತುವೆ ಮಾಸ್ಕೋ, ರಷ್ಯಾ 30 00:03:46,228 --> 00:03:48,689 ಅಲೆಕ್ಸೈ ತಪ್ಪೊಪ್ಪಿಕೊಳ್ತಾನೆ ಅಂತ ಹೇಗೆ ಹೇಳ್ತೀರಿ? 31 00:03:48,689 --> 00:03:52,651 ಈ ಹಂತದಲ್ಲಿ ಅವನನ್ನ ಯಾರೂ ಮುಟ್ಟಕಾಗಲ್ಲ ಅಂತ ಅಂದುಕೊಂಡಿದ್ದಾನೆ. 32 00:03:54,695 --> 00:03:58,824 ಆದ್ರೆ, ಸೂತ್ರದ ಬೊಂಬೆ ನನ್ನ ಮುಂದೆ ಮಾತಾಡ್ದೇ ಇರಲ್ಲ. 33 00:04:00,701 --> 00:04:02,285 ನಿನ್ನ ವ್ಯಾಪ್ತಿ ಏನಿದೆ? 34 00:04:05,122 --> 00:04:09,376 ಸುಮಾರು 200 ಮೀಟರ್. ಅವರು ಬಂದಮೇಲೆ ಸೇತುವೆ ಹತ್ರಾನೇ ಇರೋಕೆ ಪ್ರಯತ್ನ ಪಡಿ. 35 00:04:09,960 --> 00:04:12,629 ಒಳ್ಳೆ ವ್ಯಾಪ್ತಿ. ಅಮೇರಿಕಾ ತಂತ್ರಜ್ಞಾನನಾ? 36 00:04:13,672 --> 00:04:17,259 ಆಸ್ಟೇಲಿಯಾ, ಆದ್ರೆ ನಿಮ್ಮ ತಿರಸ್ಕಾರ ಗೊತ್ತಾಗ್ತಿದೆ. 37 00:04:18,593 --> 00:04:21,680 ಯಾರೋ ಬಂದ್ರು, ಆದ್ರೆ ಅಲೆಕ್ಸೈ ಅಲ್ಲ. 38 00:04:26,893 --> 00:04:27,936 ನಾನು ಬರ್ತಿದ್ದೀನಿ. 39 00:04:29,021 --> 00:04:31,690 ಅಚ್ಚರಿ ಏನು ಗೊತ್ತಾ, ಜ್ಯಾಕ್? 40 00:04:31,690 --> 00:04:34,484 ರಷ್ಯಾದ ಮೇಲೆ ಎಷ್ಟು ಸಂಶೋಧನೆ ಮಾಡಿದ್ರೂ, 41 00:04:34,484 --> 00:04:37,738 ಮಾಸ್ಕೋ ಹೇಗೆ ಕೆಲಸ ಮಾಡುತ್ತೆ ಅಂತ ಅವರಿಗೆ ಗೊತ್ತಾಗಲ್ಲ. 42 00:04:45,078 --> 00:04:47,414 ಮಂತ್ರಿಗಳಾದ ಪೆಟ್ರಾವ್ ಅವರನ್ನು ನಿರೀಕ್ಷಿಸಿದ್ದೆ. 43 00:04:48,165 --> 00:04:49,291 ಯೋಜನೆ ಬದಲಾಯ್ತು. 44 00:05:35,545 --> 00:05:37,422 ಧೂಮಪಾನ ಮಾಡಿದರೆ ಪರವಾಗಿಲ್ವಾ? 45 00:05:45,305 --> 00:05:47,015 ಜಿಆರ್ಯು, ತಾನೇ? 46 00:05:47,015 --> 00:05:47,933 ಮುಚ್ಚು ಬಾಯಿ. 47 00:05:51,978 --> 00:05:53,271 ಹೊಸಬ ಅಂತ ಕಾಣುತ್ತೆ. 48 00:05:55,065 --> 00:05:57,901 ಅನುಭವ ಇರೋರು ನನ್ನ ಹತ್ರ ಹಾಗೆ ಮಾತಾಡಲ್ಲ. 49 00:05:59,903 --> 00:06:03,990 {\an8}ಯು.ಎಸ್. ರಾಯಭಾರ ಕಛೇರಿ ಮಾಸ್ಕೋ, ರಷ್ಯಾ 50 00:06:12,207 --> 00:06:15,752 ವೋವ ಲಿತಿಶೆಂಕೊ- ವಯಸ್ಸು 52 ಸ್ಪೆಟ್ಸ್ನಾಜ್ ಬ್ಲ್ಯಾಕ್ ಟೋಪಿ - ದರ್ಜೆ: ಮೇಜರ್ 51 00:06:17,838 --> 00:06:20,549 ನಿಷ್ಕ್ರಿಯ 52 00:06:33,270 --> 00:06:36,773 -ನಿನ್ನ ಪ್ರವಾಸ ಚಿಕ್ಕದಾಗಿರುತ್ತೆ. -ನಮ್ಮನ್ನ ಒದ್ದೋಡಿಸಿದ್ರಾ? 53 00:06:36,773 --> 00:06:39,734 ಅಧಿಕೃತವಾಗಲ್ಲ, ಆದ್ರೆ ಬೇರಾವ ಯೋಜನೆಗಳು ಇಟ್ಟುಕೊಳ್ಳೋದು ಉಚಿತವಲ್ಲ. 54 00:06:40,485 --> 00:06:42,779 -ಏನು ನಡೀತಿದೆ? -ವೋವ ಲಿತಿಶೆಂಕೊ. 55 00:06:43,613 --> 00:06:47,242 -ಅವನ್ಯಾವಾಗ ನಿಷ್ಕ್ರಿಯನಾದ? -ಆಗಲಿಲ್ಲ. ಸ್ಪೆಟ್ಸ್ನಾಜ್ ಅವನನ್ನ ಓಡಿಸಿತು. 56 00:06:48,076 --> 00:06:50,162 -ಬೇರೆ ಮಾಹಿತಿ? -ನಿನಗೇ ಚೆನ್ನಾಗಿ ಗೊತ್ತಿರಬೇಕು. 57 00:06:50,787 --> 00:06:52,497 ಬೇರೆ ಯಾರ ಹತ್ತಿರಾನೂ ಮಾತಾಡಲ್ಲ. 58 00:06:52,497 --> 00:06:54,624 ಇನ್ನೂ ಮಾಸ್ಕೋದಲ್ಲೇ ಇದ್ದಾನೆ ಅಂತ ಸುದ್ದಿ ಇದೆ. 59 00:06:54,624 --> 00:06:58,003 ಅವನಿಗೆ ಪ್ರವೇಶ ಉಳಿದಿಲ್ಲ, ಅವನನ್ನ ಹಾಗೇ ಬಿಟ್ಟು ಬಿಡೋಣ. 60 00:06:58,003 --> 00:06:59,212 ಹೇಳಿದ್ದೊಳ್ಳೇದಾಯ್ತು. 61 00:06:59,212 --> 00:07:03,925 ಮತ್ತೆ, ಅಧ್ಯಕ್ಷೆ ಕೋವ್ಯಾಕ್ ಮಾಸ್ಕೋಗೆ ಅನಧಿಕೃತ ಪ್ರವಾಸ ಮಾಡಲಿದ್ದಾರೆ. 62 00:07:03,925 --> 00:07:06,344 ಹಾಂ. ಇವತ್ತು ಬಂದಿದ್ದು ತಿಳೀತು. 63 00:07:06,845 --> 00:07:09,264 ನಿನಗದರ ಚಿಂತೆ ಬೇಡ. ನಾವದನ್ನ ನೋಡ್ಕೋತಿದ್ದೀವಿ. 64 00:07:10,515 --> 00:07:11,558 ಒಂದು ಮಾತು ಸತ್ಯ. 65 00:07:12,726 --> 00:07:14,811 ನೀನು ಹಿಂದಿರುಗಿದ್ದು ಅದ್ಭುತವಾಗಿದೆ, ಜಿಮ್. 66 00:07:24,654 --> 00:07:25,530 ಬಾ. 67 00:07:28,992 --> 00:07:29,868 ನನ್ನ ಜೊತೆ ಬಾ. 68 00:07:33,455 --> 00:07:34,873 ಕರ್ಮ. 69 00:07:50,263 --> 00:07:52,265 ಯಾವಾಗಿಂದ ಮಾಡ್ತಿದ್ದೀಯ ಇದನ್ನ? 70 00:07:52,682 --> 00:07:56,102 ಇದರಲ್ಲಿ ನಿಪುಣನಾಗೋವರೆಗೂ ಬದುಕಿರ್ತೀಯ ಅಂದುಕೊಂಡಿದ್ದೀಯಾ? 71 00:08:15,497 --> 00:08:19,417 ತರಬೇತಿ ಶಿಬಿರದಿಂದ ಈಗಷ್ಟೇ ಬಂದಂಗಿದೆ. 72 00:08:23,880 --> 00:08:27,759 ನಿಂಗೊತ್ತು ನನ್ನ ಸಾಯಿಸೋಕೆ ನಿನ್ನೇ ಆಯ್ಕೆ ಮಾಡ್ತಾರೆ ಅಂತ. 73 00:09:19,561 --> 00:09:20,895 ಆಯುಧ ಇತ್ತು ಅನ್ಸುತ್ತೆ. 74 00:09:24,816 --> 00:09:26,359 -ಶ್ರವಣ ಯಂತ್ರ? -ಇಲ್ಲ. 75 00:09:27,527 --> 00:09:29,321 ಸುರಿಕಾವಿಗೆ ಇದು ಹಿಡಿಸೋದಿಲ್ಲ. 76 00:09:30,113 --> 00:09:33,158 ಅವನಿಷ್ಟ ಕಟ್ಟಿಕೊಂಡು ನನಗೇನೂ ಆಗ್ಬೇಕಿಲ್ಲ. 77 00:09:35,035 --> 00:09:37,746 ನಿನಗೆ ಗೊತ್ತಿರಬೇಕು, ರಾಜಕಾರಣಿಗಳು ಬಂದು ಹೋಗ್ತಾರೆ. 78 00:09:38,621 --> 00:09:39,873 ಬದಲಾವಣೆಗಳು ಬೇಗ ಆಗುತ್ತೆ. 79 00:09:41,958 --> 00:09:45,462 ಸುರಿಕಾವ್ ಬಹಳ ನಿನ್ನ ರಕ್ಷಣೆ ಮಾಡಿದ್ದಾನೆ. ನೀನು ಶಾಶ್ವತ ಅಲ್ಲ. 80 00:09:46,796 --> 00:09:47,964 ಶಾಶ್ವತ ಆಗಬೇಕಿಲ್ಲ. 81 00:09:49,215 --> 00:09:50,467 ನಿನಗಿಂತ ಜಾಸ್ತಿ ಇದ್ರೆ ಸಾಕು. 82 00:09:52,677 --> 00:09:55,847 ಪರ್ವತ ಸ್ಫೋಟವನ್ನ ಮರೆಮಾಚೋದು. ಒಳ್ಳೆ ಉಪಾಯ. 83 00:09:55,847 --> 00:09:57,265 ನಾನಲ್ಲಿ ಇರಲೇ ಇಲ್ಲ. 84 00:09:58,683 --> 00:10:03,980 ನೀನು ನನ್ನ ಪೀಟರ್ ಕೋವ್ಯಾಕಿಗೆ ಬಲಿಯಾಗಿ ತಲುಪಿಸುತ್ತಿದ್ದೆ 85 00:10:08,109 --> 00:10:10,612 ಹಳಬರು ಕಿತ್ತಾಡಿಕೊಳ್ಳಲಿ ಅಂತ ಬಿಟ್ಟೆ. 86 00:10:11,613 --> 00:10:12,906 ಈಗ ಪೀಟರ್ ಸತ್ತಿದ್ದಾನೆ. 87 00:10:14,157 --> 00:10:17,410 ಅವನ ಹಿರಿಮೆ ನಿನಗೆ ಬಳುವಳಿಯಾಗಿ ಬರುತ್ತೆ ಅಂದುಕೊಂಡ್ಯಾ? 88 00:10:19,621 --> 00:10:22,332 ನೀನು ಪೊಪೋವನ್ನ ಕೊಂದಾಗ ಅಂದುಕೊಂಡ ಹಾಗೆ. 89 00:10:23,666 --> 00:10:24,751 ಪೊಪೋವ್ ನಿಷ್ಪ್ರಯೋಜಕ. 90 00:10:25,543 --> 00:10:26,461 ತಡೆಯಾಗ್ತಿದ್ದ. 91 00:10:27,253 --> 00:10:28,630 ಅವನ ಸಮಯ ಮುಗಿದಿತ್ತು. 92 00:10:29,339 --> 00:10:30,673 ರಷ್ಯಾಗೆ ಉಪಕಾರ ಮಾಡಿದೆ ನಾನು. 93 00:10:36,137 --> 00:10:39,057 ಕೊನೆಗೂ ನೀನು ಮತ್ತು ಪೀಟರ್ ನಿಮ್ಮ ಲೆಕ್ಕ ಚುಕ್ತ ಮಾಡ್ಕೊಂಡ್ರಿ. 94 00:10:40,767 --> 00:10:44,854 ಪೀಟರ್ ನಮ್ಮ ಭೇಟಿಯಿಂದ ಜೀವಂತವಾಗಿ ಹೊರಬರುತ್ತಾನೆ ಅಂತ ಅಂದುಕೊಂಡ್ಯಾ? 95 00:10:47,190 --> 00:10:48,316 ನನಗದರ ಕಾಳಜಿ ಇರಲಿಲ್ಲ. 96 00:10:49,401 --> 00:10:50,402 ಅವನಿಗೂ ಇರಲಿಲ್ಲ. 97 00:10:51,569 --> 00:10:53,405 ಪೀಟರ್ ಜೀವಂತವಾಗುಳೀತೀನಿ ಅಂದುಕೊಂಡಿರಲಿಲ್ಲ. 98 00:10:53,405 --> 00:10:56,449 ಕೆಸ್ಲಾವಿನಲ್ಲಿ, ಆತ ಏನನ್ನೂ ತಡೆಯಲಿಲ್ಲ. 99 00:10:57,075 --> 00:10:58,368 ನಾನು ನಿನ್ನ ನಂಬಲ್ಲ. 100 00:10:59,953 --> 00:11:04,165 ಪೀಟರ್ ಏನೇ ಆದ್ರೂ, ಒಬ್ಬ ಯೋಧನಾಗಿದ್ದ. 101 00:11:04,165 --> 00:11:07,335 ಅವನು ಕ್ರಾಸ್ಬೋ ಬಿಟ್ಟು ನಿನ್ನಂಥ ರಾಜಕಾರಣಿ ಕೈ ಹಿಡಿಯುತ್ತಿರಲಿಲ್ಲ. 102 00:11:11,214 --> 00:11:13,800 ನಿನ್ನ ನಂಬಿಕೆ ಕಟ್ಕೊಂಡು ನನಗೇನೂ ಆಗ್ಬೇಕಿಲ್ಲ. 103 00:11:18,638 --> 00:11:19,472 ಇದನ್ನ ಬಳಸು. 104 00:11:37,907 --> 00:11:38,908 ಪರವಾಗಿಲ್ಲ. 105 00:11:43,538 --> 00:11:44,372 ಮಾಡು. 106 00:12:24,454 --> 00:12:25,288 ನಡೀರಿ. 107 00:12:45,517 --> 00:12:47,435 ಸಮಯಕ್ಕೆ ಸರಿಯಾಗಿ ಬಂದಿದ್ದೀಯ, ವೋವ. 108 00:12:47,435 --> 00:12:50,980 ಎಷ್ಟು ದಿನ ಆದ್ಮೇಲೆ ಭೇಟಿ, ಏನೋ ಒಳ್ಳೆ ವಿಷಯ ಇರ್ಬೇಕು. 109 00:12:52,565 --> 00:12:54,025 ಏನಾಯ್ತು? 110 00:12:54,901 --> 00:12:57,654 ಹುಷಾರು ತಪ್ಪಿದ್ಯೋ, ಬಿಟ್ಟುಬಿಟ್ಟಿದ್ಯೋ, ಏನೋ ಅಂತ ಕೇಳ್ಪಟ್ಟೆ. 111 00:12:57,654 --> 00:13:00,782 ಇಲ್ಲ. ಸ್ವಲ್ಪ ದಿನ ಬೇರೆ ಕಡೆ ಇದ್ದೆ. 112 00:13:00,782 --> 00:13:02,408 ನಾನು ಬಿಟ್ಟುಬಿಡೋದಾ? 113 00:13:02,408 --> 00:13:03,743 ಬಿಟ್ಟುಬಿಡೋಕೆ ಆಗಲ್ಲ. 114 00:13:11,417 --> 00:13:13,211 ಇತಿಹಾಸದ ಪಾಠ ಹೇಳಲಾ? 115 00:13:13,211 --> 00:13:17,090 ಅದು ಸ್ಪೆಟ್ಸ್ನಾಜ್ ಟೋಪಿ ಅಂತ ಗೊತ್ತು. ನಾನು ನೋಡಿಲ್ದಿರೋ ಬಣ್ಣ. 116 00:13:17,090 --> 00:13:18,466 ಹಳದಿ ನಿಲ್ಲಿಸಿ ಬಿಟ್ರು. 117 00:13:19,342 --> 00:13:22,762 ತುರ್ತು ನಿರ್ವಹಣಾ ಸೇವೆ, ಸ್ವಚ್ಛಗೊಳಿಸುವ ಸಿಬ್ಬಂದಿ. 118 00:13:22,762 --> 00:13:25,640 ಅಪಘಾತಗಳು, ಬೆಂಕಿ, ರಾಸಾಯನಿಕ ಸೋರಿಕೆಗಳು. 119 00:13:25,640 --> 00:13:29,477 ಕೆಲವೊಮ್ಮೆ, ಇವರು ಅವಘಡಗಳ ಮುಂಚೆಯೇ ಬಂದು ಬಿಡ್ತಿದ್ರು. 120 00:13:29,477 --> 00:13:32,855 -ಈಗೆಲ್ಲಿದ್ದಾರೆ? -ತಂಡ ವಿಸರ್ಜಿಸಲಾಯಿತು. ಸತ್ತಿದ್ದಾರೆ. 121 00:13:32,855 --> 00:13:36,067 ಚರ್ನೋಬಿಲ್ ಗೊತ್ತಲ್ಲ, ಅಂಥ ಅವಘಡಗಳು ಅವರನ್ನ ನಾಶ ಮಾಡ್ತು. 122 00:13:36,526 --> 00:13:37,735 ಒಂದಿಬ್ರು ಇನ್ನೂ ಇದ್ದಾರೆ. 123 00:13:37,735 --> 00:13:38,820 ಇದ್ದಾರೆ? 124 00:13:40,405 --> 00:13:42,907 -ಹೇಗೆ? -ಆನ್ಲೈನ್. ನರಕ ಸೃಷ್ಟಿ ಮಾಡ್ಕೊಂಡು. 125 00:13:42,907 --> 00:13:48,037 ಈಎಂಎಸ್ ತಂಡ ಗೊತ್ತಲ್ಲ, ಅವರು ಕೊನೆಯ ಗಸ್ತು ಇದ್ದಂಗೆ. 126 00:13:48,037 --> 00:13:49,122 ನಾಶವಾದ್ರು. 127 00:13:49,998 --> 00:13:52,834 ಆದ್ರೀಗ, ಒಂಥರಾ ಪ್ರಜಾಸೇನೆ ಇದ್ದಂಗೆ. 128 00:13:54,294 --> 00:13:55,336 ಯಾರಾದ್ರೂ ಗೊತ್ತಾ? 129 00:13:55,878 --> 00:13:59,591 ನನ್ನ ಸಮಯಕ್ಕೆ ಮುಂಚೆ ಇದ್ದಿದ್ದು, ಆದ್ರೆ ಒಂದೇ ಕುಟುಂಬ ಇದ್ದಂಗೆ. 130 00:13:59,591 --> 00:14:01,175 ಖಂಡಿತ ಹುಡುಕಬಲ್ಲೆ. 131 00:14:02,969 --> 00:14:05,346 ಈ ತಂಡದವರನ್ನ ಹುಡುಕ್ತಿದ್ದೀನಿ. 132 00:14:07,390 --> 00:14:10,226 ಇವರು ಬಹುಶಃ ಮಟೋಕ್ಸಾದಲ್ಲಿದ್ರು. 133 00:14:10,893 --> 00:14:12,270 ಕೆಟ್ಟ ಜಾಗ. 134 00:14:12,270 --> 00:14:13,855 ಆಗಿನವರು ಯಾರೂ ಇಲ್ಲ. 135 00:14:14,689 --> 00:14:15,898 ಒಬ್ಬ ಇರಬಹುದು. 136 00:14:17,400 --> 00:14:18,318 ಇರಬಹುದು. 137 00:14:22,322 --> 00:14:24,115 ಸರಿ. ಭೇಟಿ ವ್ಯವಸ್ಥೆ ಮಾಡು. 138 00:14:26,784 --> 00:14:27,619 ಆಯ್ತು. 139 00:14:27,619 --> 00:14:28,578 ಇವತ್ತು. 140 00:14:30,204 --> 00:14:31,122 ಪ್ರಯತ್ನ ಪಡ್ತೀನಿ. 141 00:14:38,588 --> 00:14:39,881 ಆಯ್ತು, ಇವತ್ತು. 142 00:14:46,471 --> 00:14:48,056 {\an8}ಚೆಕ್ ರಾಯಭಾರ ಕಛೇರಿ ಮಾಸ್ಕೋ, ರಷ್ಯಾ 143 00:14:48,056 --> 00:14:51,476 {\an8}ಅಧ್ಯಕ್ಷೆ ಕೋವ್ಯಾಕ್, ನೀವು ಮಾಸ್ಕೋದಲ್ಲಿ ಇದ್ದೀರ ಅಂತ ತಿಳಿದು ಆಶ್ಚರ್ಯವಾಯ್ತು. 144 00:14:51,476 --> 00:14:54,729 ನಾವು ಮಾತಾಡ್ಬೇಕು. ಎದುರುಬದಿರು. ಇವತ್ತು. 145 00:14:54,729 --> 00:14:58,107 ಹೌದು, ಸ್ಪಷ್ಟೀಕರಣಕ್ಕೆ ಮಾತು ಅವಶ್ಯಕ ಈಗ. 146 00:14:58,107 --> 00:15:00,777 -ನೀವಿಲ್ಲಿ ಬರಬೇಕಾಗುತ್ತೆ. -ಆಯ್ತು. 147 00:15:00,777 --> 00:15:04,405 ಇಂದು ಮಧ್ಯಾಹ್ನ. ನನ್ನ ಕಾರ್ಯದರ್ಶಿಗೆ ಹೇಳಿ ವ್ಯವಸ್ಥೆ ಮಾಡಿಸ್ತೀನಿ. 148 00:15:04,405 --> 00:15:06,074 ಎದುರು ನೋಡುತ್ತೇನೆ. 149 00:15:13,206 --> 00:15:14,082 ಭೇಟಿ ಮಾಡ್ತಾರೆ. 150 00:15:18,920 --> 00:15:20,338 -ಹುಷಾರಾಗಿದ್ದೀರಾ? -ಹಾಂ. 151 00:15:23,299 --> 00:15:24,926 ಏನ್ಮಾಡ್ಬೇಕು ಗೊತ್ತು ತಾನೆ? 152 00:15:27,512 --> 00:15:30,473 ನಾನು ಮಾಸ್ಕೋಗೆ ಬಂದಿರೋದು ಅವರಿಗೆ ಭಯ ಹುಟ್ಟಿಸಿರುತ್ತೆ. 153 00:15:30,473 --> 00:15:32,266 ಅವರ ಆತ್ಮವಿಶ್ವಾಸ ಕಾಪಾಡಬೇಕು. 154 00:15:32,266 --> 00:15:35,144 ಆತ ನನಗಿಂತ ಬಲಶಾಲಿ ಅಂತ ಅಂದುಕೊಳ್ಳಬೇಕು. 155 00:15:35,144 --> 00:15:38,272 ಅವರದೇ ವೈಭವದಲ್ಲಿ ದಿಕ್ಕು ತಪ್ಪಿಸುತ್ತೇನೆ. 156 00:15:38,272 --> 00:15:39,440 ಕಷ್ಟ ಆಗಲ್ಲ. 157 00:15:41,401 --> 00:15:44,320 ಅವರ ಗಮನ ನನ್ನ ಮೇಲಿರುವಾಗ ನೀವು ನಿಮ್ಮ ಕೆಲಸ ಮಾಡಿ. 158 00:15:46,698 --> 00:15:49,200 ಮೇಡಂ ಪೊಪೋವನ್ನು ಹೇಗೆ ಸಂಪರ್ಕಿಸೋದು ಗೊತ್ತಾಯ್ತಾ? 159 00:15:49,200 --> 00:15:51,994 ಗೊತ್ತಿಲ್ಲ. ಹೇಗಾದ್ರೂ ಮಾಡ್ತೀನಿ. 160 00:15:53,079 --> 00:15:56,165 ಇಲ್ಲಿಂದ, ನಾವು ನಿಮ್ಮ ಜಗತ್ತಿನಲ್ಲಿದ್ದೀವಿ. 161 00:16:15,560 --> 00:16:19,188 ಕ್ಷಮಿಸಿ, ಅಧ್ಯಕ್ಷರೇ. ಎಲ್ಲಾ ಬೇಗ ಬೇಗ ನಡೆಯುತ್ತಿದೆ. 162 00:16:20,273 --> 00:16:22,358 ಗೊತ್ತು, ಮಿನಿಸ್ಟರ್ ಪೆಟ್ರಾವ್. 163 00:16:24,068 --> 00:16:28,114 ಇವು ಅವಿಯಾನೋ ವಾಯುನೆಲೆಯಲ್ಲಿರುವ ಎಫ್-16ಗಳು. ಇಂಧನ ತುಂಬಿ ತಯಾರಾಗಿವೆ. 164 00:16:28,114 --> 00:16:31,576 ಯುಎಸ್ ನೌಕಾ ವಿಧ್ವಂಸಕ ಉತ್ತರ ಸಮುದ್ರಕ್ಕೆ ಹೋಗಿದೆ. 165 00:16:31,576 --> 00:16:34,829 ಯುಎಸ್ ಪಡೆಗಳನ್ನು ಸ್ಟುಟ್ಗಾರ್ಟಿನಲ್ಲಿರುವ ನೆಲೆಗೆ ಕಳುಹಿಸಲಾಗಿದೆ. 166 00:16:34,829 --> 00:16:38,624 ಕಳೆದ ಎಂಟು ಗಂಟೆಗಳಲ್ಲಿ ಇದೆಲ್ಲಾ ನಡೆದಿದೆ. ಅಮೇರಿಕನ್ನರು ಡೆಫ್ಕಾನ್-3 ನಲ್ಲಿದ್ದಾರೆ. 167 00:16:38,624 --> 00:16:40,418 ಪೊವಿಶೆನ್ನಯಗೆ ಪ್ರತಿಕ್ರಿಯೆಯಾಗಿ. 168 00:16:40,418 --> 00:16:44,714 ನಾವು ಎಸ್ಯು-57ಗಳನ್ನು ನಿಯೋಜಿಸಿ, ಯುಕ್ರೇನಿಗೆ ಪಡೆಗಳನ್ನು ಕಳಿಸಿ, ಬಾಲ್ಟಿಕ್... 169 00:16:44,714 --> 00:16:48,718 ನಿಲ್ಲಿಸು. ನಾವು ಪೊವಿಶೆನ್ನಯದಲ್ಲಿದ್ದೀವಿ. ಅವರು ಡೆಫ್ಕಾನ್-3ನಲ್ಲಿದ್ದಾರೆ. ಆಟ ಮುಗೀತು. 170 00:16:50,052 --> 00:16:51,429 ಸರ್, ನಾನಗೆ ಹಾಗನ್ನಿಸಲ್ಲ. 171 00:16:53,556 --> 00:16:57,226 ನಾವು ಸಮವಾಗಿಲ್ಲದಾಗ ಸ್ಟೇಲ್ಮೇಟ್ ಆಗೋಕೆ ಸಾಧ್ಯವಿಲ್ಲ. 172 00:16:59,061 --> 00:17:02,482 ಅಧ್ಯಕ್ಷರೇ, ಚೆಕ್ ಗಣರಾಜ್ಯದಲ್ಲಿ ಏನಾಯ್ತು ನೋಡಿ. 173 00:17:02,482 --> 00:17:03,941 ಅವರನ್ನ ನಂಬೋಕಾಗಲ್ಲ. 174 00:17:07,445 --> 00:17:10,948 -ಬಾಲ್ಟಿಕ್ ನೌಕಾಪಡೆ ತಯಾರಿದೆಯಾ? -ಖಂಡಿತವಾಗಿ, ಸರ್. 175 00:17:10,948 --> 00:17:12,909 ನಮ್ಮ ಆಜ್ಞೆ ಕಾಯ್ತಿದ್ದಾರೆ. 176 00:17:12,909 --> 00:17:16,204 ಸರ್, ಯುಎಸ್ ನೌಕಾಪಡೆ ನಮ್ಮ ಡೇವಿಡ್ಡಿಗೆ ಗೊಲಾಯತ್ ಇದ್ದಂಗೆ. 177 00:17:20,875 --> 00:17:22,960 ಎಸ್ಯು-57ಗಳನ್ನು ವಿಮಾನ ಏರುದಾರಿಗೆ ಕಳಿಸಿ. 178 00:17:22,960 --> 00:17:25,838 -ಅವರ ಕ್ಯಾಮೆರಾಗಳು ನೋಡಲಿ. -ಹಾಂ, ಸರ್. 179 00:17:25,838 --> 00:17:29,467 ಆದ್ರೆ ನನ್ನ ಆಜ್ಞೆಯಿಲ್ಲದೆ ಏನೂ ಮಾಡ್ಬೇಡಿ. 180 00:17:33,179 --> 00:17:34,180 ಎಲ್ಲರಿಗೂ ಧನ್ಯವಾದಗಳು. 181 00:17:45,066 --> 00:17:45,942 ಒಂದು ನಿಮಿಷ ಇರಿ. 182 00:17:48,653 --> 00:17:51,739 ಕ್ಷಮಿಸಿ, ಅಧ್ಯಕ್ಷರೇ. ಮಿತಿ ಮೀರಬೇಕು ಅಂತಲ್ಲ. 183 00:17:51,739 --> 00:17:52,698 ಮಿತಿ ಮೀರಿದೆ. 184 00:17:53,407 --> 00:17:56,577 ಮಹತ್ವಾಕಾಂಕ್ಷೀ ಯುವಕರು ಹಾಗೇ, ಮಿತಿ ಮೀರುತ್ತಾರೆ. 185 00:17:56,577 --> 00:17:59,080 ಹಾಗಾಗಿ ನೀವು ಕ್ಷಮಿಸಬೇಕು ನನ್ನ 186 00:17:59,080 --> 00:18:01,666 ಯಾಕಂದ್ರೆ ನಿಮ್ಮ ಜೊತೆ ಕೆಲಸ ಮಾಡೋದು ಇನ್ನೂ ರೂಢಿಯಾಗಿಲ್ಲ. 187 00:18:04,085 --> 00:18:05,962 ಡಿಮಿಟ್ರಿ ಪೊಪೋವ್ ನನ್ನ ಗೆಳೆಯನಾಗಿದ್ದ. 188 00:18:07,380 --> 00:18:09,340 ಇನ್ನೂ ಅದೇ ದುಃಖದಲ್ಲಿದ್ದೀನಿ. 189 00:18:10,675 --> 00:18:11,634 ತೀವ್ರವಾಗಿ. 190 00:18:12,468 --> 00:18:13,511 ಅರ್ಥ ಆಗುತ್ತೆ. 191 00:18:13,511 --> 00:18:14,554 ಅದೇ ನನ್ನ ಆಶಯ. 192 00:18:15,888 --> 00:18:18,933 ಈಗ ಹೊರಡಿ. ನೀವು ಹೇಳಿದ ಹಾಗೆ, ಎಲ್ಲ ಬೇಗ ಬೇಗ ನಡೀತಿದೆ. 193 00:18:43,082 --> 00:18:46,294 ಅಲೆಕ್ಸೈ ಮನುಷ್ಯರು ನಮ್ಮ ಕಣ್ಣು ಮತ್ತು ಕಿವಿಗಳಾಗಿರುತ್ತಾರೆ. 194 00:18:47,587 --> 00:18:49,463 ಇಲ್ಲಿದೆ ಅವನ ತಪ್ಪೊಪ್ಪಿಗೆ. 195 00:18:50,214 --> 00:18:52,633 ಇದನ್ನ ಅಧ್ಯಕ್ಷ ಕೋವ್ಯಾಕಿಗೆ ಕೊಡು. 196 00:18:56,929 --> 00:18:58,139 ನನಗೆ ಗೊತ್ತಾಗಬೇಕು. 197 00:19:03,477 --> 00:19:04,353 ಮಟೋಕ್ಸಾ. 198 00:19:08,524 --> 00:19:11,944 ಅವತ್ತು ಬಹಳ ಜನ ಸತ್ತರು. ನೀವ್ಯಾಕಿದ್ರಿ ಅಲ್ಲಿ ಅಂತ ನನಗೆ ತಿಳೀಬೇಕು. 199 00:19:23,539 --> 00:19:26,459 ಯಾಕಂದ್ರೆ ಅವರನ್ನು ಸಾಯಿಸುವ ಆಜ್ಞೆ ನಾನು ಕೊಟ್ಟಿದ್ದೆ. 200 00:19:32,798 --> 00:19:34,967 ನನಗೆ ತೀರಿಸೋಕೆ ಬಹಳ ಇದೆ, ಜ್ಯಾಕ್. 201 00:19:50,608 --> 00:19:54,654 {\an8}ಎಂಬಸ್ಸಿ ಸ್ಕ್ವೇರ್ ಮಾಸ್ಕೋ, ರಷ್ಯಾ 202 00:20:02,578 --> 00:20:03,412 ಹೊಸ ಸಂದೇಶ ವೋವ 203 00:20:03,412 --> 00:20:06,040 ವೋಲ್ಖೊಂಕ 33. 30 ನಿಮಿಷಗಳು. 204 00:20:37,446 --> 00:20:38,447 ಮೇಡಂ ಅಧ್ಯಕ್ಷರೇ. 205 00:20:39,657 --> 00:20:40,866 ಮಂತ್ರಿ ಪೆಟ್ರಾವ್. 206 00:20:42,868 --> 00:20:48,124 ನಿಮ್ಮೀ ರಷ್ಯಾ ಪ್ರವಾಸದಿಂದ ಏನು ಸಾಧಿಸಬೇಕು ಅಂತಿದ್ದೀರ ನಂಗೊತ್ತಿಲ್ಲ. 207 00:20:48,124 --> 00:20:51,335 ನಿಮಗೆ ಗೊತ್ತಿರೋ ಹಾಗೆ, ಯಾವುದೂ ರಾಜತಾಂತ್ರಿಕ ಕಾರ್ಯ ಅನಿಸಿಕೊಳ್ಳುವುದಿಲ್ಲ. 208 00:20:51,335 --> 00:20:53,796 ಯುಎಸ್ ನ್ಯೂಕ್ಲಿಯರ್ ಆಯುಧಗಳನ್ನ ದೇಶದೊಳಕ್ಕೆ ಬಿಟ್ಟುಕೊಂಡ 209 00:20:53,796 --> 00:20:57,508 ಮಹಿಳೆಯೊಂದಿಗೆ ಕಾಣಿಸಿಕೊಳ್ಳೋದು ತಪ್ಪು ಸಂದೇಶ ಕಳಿಸುತ್ತೆ ಅಂತ ನಮಗನ್ನಿಸುತ್ತೆ. 210 00:20:57,508 --> 00:21:01,137 ಸ್ಫೋಟಕ್ಕೂ ನೇಟೋಗೂ ಏನೂ ಸಂಬಂಧವಿರಲಿಲ್ಲ. ನಮ್ಮಿಬ್ಬರಿಗೂ ಗೊತ್ತು. 211 00:21:03,389 --> 00:21:05,391 ನಮ್ಮ ತಂದೆ ಸತ್ತಾಗ ನಾನಲ್ಲಿದ್ದೆ. 212 00:21:07,476 --> 00:21:10,438 ಅದೂ ರಷ್ಯಾದ ದೇಶದ್ರೋಹಿಯಿಂದ. 213 00:21:10,438 --> 00:21:12,857 ಆ ಪದ ನೀವು ಬಳಸುತ್ತಿರೋದು ಆಶ್ಚರ್ಯಕರ. 214 00:21:13,649 --> 00:21:15,526 ನಿಮ್ಮ ಹಾಗೂ ನನ್ನ ತಂದೆಯ ಯೋಜನೆಗಳು. 215 00:21:16,444 --> 00:21:19,447 ಬೆಳಕಿಗೆ ಬಂದಾಗ, ಗುಲಾಗ್ ನಿಮಗೆ ಆಯ್ಕೆಯಾಗಿ ಉಳಿದಿರೋದಿಲ್ಲ. 216 00:21:19,447 --> 00:21:21,615 ಪಿತೂರಿಗಳು ನಿಮ್ಮನ್ನ ತೊರೆದ ಪ್ರಜೆಗಳನ್ನ 217 00:21:21,615 --> 00:21:24,869 ಬಿಗಿಯಾಗಿ ಹಿಡಿದುಕೊಳ್ಳುವಂತೆ ಕಾಣೋ ಹಾಗೆ ಮಾಡಿವೆ. 218 00:21:25,369 --> 00:21:27,788 ತುಂಬಾ ದಿನದಿಂದ ನಿಮ್ಮ ಆಯ್ಕೆ ಅಸ್ಪಷ್ಟವಾಗಿದೆ. 219 00:21:28,289 --> 00:21:30,374 ಈಗ ರಷ್ಯಾದಲ್ಲಿ ಬದಲಾವಣೆಗಳಾಗ್ತಿವೆ. 220 00:21:30,374 --> 00:21:32,668 ನಿಮಗಿದು ನಿರ್ಧಾರ ಮಾಡಬೇಕಾದ ಸಮಯ. 221 00:21:34,420 --> 00:21:38,758 ನೀವು ನಿಜವಾಗಲೂ ದೇಶ ನಡೆಸಬೇಕು ಅಂತಿದ್ರೆ, ನೇಟೋ ಇಂದ ದೂರವಾಗಿ. 222 00:21:39,592 --> 00:21:42,053 ನಿಮ್ಮ ನೆರೆ ರಾಷ್ಟ್ರಗಳು ಮಾಡ್ತಿರೋ ಹಾಗೆ. 223 00:21:44,305 --> 00:21:46,557 ನಾನು ನಿಮ್ಮ ಸಲಹೆಗಳನ್ನು ತೆಗೆದುಕೊಳ್ಳುವುದಿಲ್ಲ. 224 00:21:48,642 --> 00:21:51,979 ನಿಮ್ಮ ಹತ್ರ ಮಾತಾಡಿ, ರಾಜಕಾರಣದ ಬಗ್ಗೆ ಒಂದು ಹಳೇ ಗಾದೆ ನೆನಪಾಯ್ತು. 225 00:21:53,314 --> 00:21:56,317 ಎರಡು ಕೈ ಸೇರಿದರೆ 226 00:21:56,317 --> 00:22:00,988 ಚಪ್ಪಾಳೆ ಅಂತ. 227 00:22:02,323 --> 00:22:05,242 ನಿಮಗೆ ಯಾರು ಸಹಾಯ ಮಾಡಿದ್ರು ಅಂತ ನಿಮ್ಮ ಪ್ರಜೆಗಳಿಗೆ ಗೊತ್ತಾ? 228 00:22:07,328 --> 00:22:09,663 ನಿಮ್ಮ ಬೆದರಿಕೆ ನನ್ನ ಮೇಲೆ ನಡೆಯಲ್ಲ. 229 00:22:10,664 --> 00:22:12,374 ನಾನು ಬೆದರಿಸ್ತಾ ಇಲ್ಲ. 230 00:22:13,584 --> 00:22:16,796 ನೀವು ಏನು ಅನ್ನೋದನ್ನ ನೆನಪಿಸ್ತಾ ಇದ್ದೀನಿ. 231 00:22:16,796 --> 00:22:18,297 ನೀವು ಅಮೇರಿಕಾದ ಕೈಗೊಂಬೆಯಾಗೋದು 232 00:22:19,882 --> 00:22:22,968 ನಿಮ್ಮ ತಂದೆ ಇಷ್ಟ ಪಡ್ತಿರಲಿಲ್ಲ. 233 00:22:22,968 --> 00:22:26,680 ನಿಮ್ಮಿಂದ ಆಜ್ಞೆ ತಗೊಳ್ಳೋದೂ ಇಷ್ಟ ಪಡ್ತಿರಲಿಲ್ಲ. 234 00:22:26,680 --> 00:22:28,265 ಏನು ಮಾಡೋದು, ಕೇಳೋಕಾಗಲ್ಲ. 235 00:22:31,811 --> 00:22:33,896 ಕ್ಷಮಿಸಿ, ಅಧ್ಯಕ್ಷೆ ಕೋವ್ಯಾಕ್. 236 00:22:33,896 --> 00:22:35,064 ನನಗೆ ಬಿಡುವಿಲ್ಲ. 237 00:22:36,023 --> 00:22:38,234 ನೀವು ವಾಪಸ್ಸು ಮನೇಗೆ ಹೋಗೋದೇ ಒಳ್ಳೇದು ಅನ್ಸುತ್ತೆ. 238 00:22:39,443 --> 00:22:41,195 ಈಗಿರೋ ಪರಿಸ್ಥಿತಿಯಲ್ಲಿ 239 00:22:41,195 --> 00:22:43,114 ನಿಮ್ಮ ಮನೆ ಹೊತ್ತಿಕೊಂಡು ಉರಿಯಬಹುದು. 240 00:23:35,249 --> 00:23:36,167 ವೋವ? 241 00:24:09,450 --> 00:24:10,659 ನನ್ನ ಕಾಲು. 242 00:24:11,660 --> 00:24:13,370 ನನ್ನ ಸಾಯಿಸೋಕೆ ನಿನಗೆ ಯಾರು ಹೇಳಿದ್ದು? 243 00:24:19,668 --> 00:24:22,504 ನಾನು ಮಟೋಕ್ಸಾ ಬಗ್ಗೆ ಕೇಳೋಕೆ ಶುರುಮಾಡಿದೆ. 244 00:24:22,504 --> 00:24:23,464 ಈಎಂಎಸ್ ಬಗ್ಗೆ. 245 00:24:23,464 --> 00:24:24,632 ಆಮೇಲೆ ಕರೆ ಬಂತು. 246 00:24:24,840 --> 00:24:25,716 ಯಾರು? 247 00:24:27,426 --> 00:24:28,302 ಯಾರು? 248 00:24:29,220 --> 00:24:30,679 ರೋಲಾನ್ ಆಂಟೊನಾವ್. 249 00:24:31,263 --> 00:24:33,140 ಅವರು ಆಜ್ಞೆ ಕೊಡ್ತಾರೆ, ಮಾಡ್ತೀನಿ. 250 00:24:33,933 --> 00:24:37,394 ನೀನು ಆಜ್ಞೆಗಳು ತಗೊಳ್ಳೋದಿಲ್ಲ, ವೋವ. ಅವರು ನಿನ್ನ ಓಡಿಸಿದ್ರು. 251 00:24:39,521 --> 00:24:41,649 ಚೀಫ್, ನಾವೆಲ್ರೂ ಆಜ್ಞೆ ಪಾಲಿಸ್ತೀವಿ. 252 00:25:04,755 --> 00:25:08,884 ಕುಬಿಂಕಾದಲ್ಲಿ ಬಲವರ್ಧನೆ ಮಾಡ್ತಿದ್ದಾರೆ. ಏನೂ ಅಲ್ಲದೇನೂ ಇರಬಹುದು. 253 00:25:08,884 --> 00:25:10,469 ಕಣ್ಣಿಟ್ಟಿದ್ದೀವಿ ಅಂತ ಗೊತ್ತು. 254 00:25:10,469 --> 00:25:14,223 ಅವಿಯಾನೊ, ಸ್ಟುಟ್ಗಾರ್ಟ್, ಕೆಸ್ಲಾವನ್ನು ಇನ್ನು 10 ನಿಮಿಷದಲ್ಲಿ ಅವರು ದಾಳಿ ಮಾಡ್ಬೋದು. 255 00:25:14,223 --> 00:25:16,767 ಯಾಕೆ ಯಾರೂ ಇದನ್ನ ಗಂಭೀರವಾಗಿ ಪರಿಗಣಿಸ್ತಾಯಿಲ್ಲ? 256 00:25:16,767 --> 00:25:20,104 ಇದ್ದೀವಿ, ಇವೆಲ್ಲ ನಿನ್ನ ಗಮನಕ್ಕೆ ಬರೋಕೆ ಮುಂಚಿಂದಾನೇ. 257 00:25:20,104 --> 00:25:22,898 ಅರ್ಥ ಮಾಡ್ಕೊಳ್ಳಿ, ಚೆಕ್ ಗಣರಾಜ್ಯದ ಘಟನೆಗಳು 258 00:25:22,898 --> 00:25:24,733 ಸ್ಪಷ್ಟವಾಗಿಲ್ಲ ಹಾಗೂ ಪರಿಶೀಲನೆಯಾಗಿಲ್ಲ. 259 00:25:25,526 --> 00:25:29,655 ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡ, ಅದು ನಿನ್ನ ಕೆಲಸ ತಾನೇ? 260 00:25:30,823 --> 00:25:33,200 ನೀವು ವೆಸ್ಟ್ ಪಾಯಿಂಟ್ ತಾನೇ? '83ರ ತರಗತಿ. 261 00:25:34,410 --> 00:25:35,286 ಹಾಂ? 262 00:25:35,286 --> 00:25:38,747 ಹಾಗಾದ್ರೆ ನಿಮಗೆ ಹೇಳಿಕೊಟ್ಟಿರ್ಬೇಕು, ಕೆಟ್ಟ ಸಲಹೆಗಿಂತ ಬೇರೊಂದು ವೈರಿ ಇಲ್ಲ. 263 00:25:38,747 --> 00:25:42,960 ನಾನು ಗೊತ್ತಿರೋದು ಹಂಚ್ಕೊಂಡು, ಒಂದಾದ್ರೂ ವೈರಿಯನ್ನ ಕಮ್ಮಿ ಮಾಡೋಕೆ ಪ್ರಯತ್ನ ಪಡ್ತಿದ್ದೀನಿ. 264 00:27:19,348 --> 00:27:21,308 ನಿಮಗೇನಾದ್ರೂ ತಾಂತ್ರಿಕ ತೊಂದರೆ ಇದೆಯಾ? 265 00:27:21,308 --> 00:27:22,810 ಆಂಗ್ಲ ಭಾಷೆ ಗೊತ್ತಿಲ್ಲ. 266 00:27:22,810 --> 00:27:23,852 ತಡೀ. 267 00:27:26,522 --> 00:27:27,481 ಒಂದು ನಿಮಿಷ. 268 00:27:28,190 --> 00:27:29,191 ನೋಡೋಣ. 269 00:27:30,734 --> 00:27:31,610 ತಗೋ. 270 00:27:34,696 --> 00:27:37,282 ನಿನ್ನ ಕಾರ್ ಸ್ವಲ್ಪ ಬಳಸ್ಕೋತೀನಿ. 271 00:27:44,081 --> 00:27:47,584 ಜಿಮ್, ಏನಾದ್ರೂ ನಿರ್ದಿಷ್ಟವಾದ್ದು ಬೇಕು, 20 ನಿಮಿಷದ ಹಿಂದೇನೇ ಬೇಕಿತ್ತು. 272 00:27:47,584 --> 00:27:50,754 ರಾಯಭಾರ ಕಛೇರಿಯನ್ನ ಹೊರಹಾಕಿದ್ದಾರೆ. ಅವರೀಗ ಖಾಲಿ ಮಾಡ್ತಿದ್ದಾರೆ. 273 00:27:50,754 --> 00:27:52,297 ಇದು ನಿರ್ದಿಷ್ಟವಾಗಿದೆಯಾ? 274 00:27:52,297 --> 00:27:55,050 ನಮಗೆ ಅಸೈನಿಕ ಆಯ್ಕೆಗಳು ಹೆಚ್ಚು ಉಳಿದಿಲ್ಲ, 275 00:27:55,050 --> 00:27:57,719 ಇನ್ಯಾರಿಗೆ ಸಹಾಯ ಕೇಳ್ಬೇಕೋ ಗೊತ್ತಾಗ್ತಿಲ್ಲ. 276 00:27:57,719 --> 00:28:01,348 ರೋಲಾನ್ ಆನ್ಟೋನಾವ್, ನೌಕಾ ಕ್ಯಾಪ್ಟನ್, ಪೀಟರ್ ಕೋವ್ಯಾಕನ ಮನುಷ್ಯ. 277 00:28:02,266 --> 00:28:03,600 ಅವನೆಲ್ಲಿದ್ದಾನೆ? 278 00:28:03,600 --> 00:28:06,562 ಗುಪ್ತ ಮಾಹಿತಿ. ನನ್ನ ಹತ್ರ ಸಮಯವಿಲ್ಲ ತಿಳ್ಕೊಳ್ಳೋಕೆ. 279 00:28:07,104 --> 00:28:08,397 ಜ್ಯಾಕ್ ಇಂದ ಏನಾದ್ರೂ? 280 00:28:09,231 --> 00:28:10,315 ತಿಳಿಸ್ತೀನಿ. 281 00:28:11,066 --> 00:28:15,070 ನೀನು ಅಲ್ಲಿಂದ ಜಾಗ ಖಾಲಿ ಮಾಡಲಿಲ್ಲ ಅಂದ್ರೆ ನಿನಗೆ ಅಪಾಯವಿದೆ. 282 00:28:15,070 --> 00:28:17,906 ಗೊತ್ತು. ಆದ್ರೆ ನನಗೆ ನಂಬಿಕೆಯಿದೆ. 283 00:28:17,906 --> 00:28:19,575 ನಿಮಗೂ ಇದೆ ಅನ್ಕೋತೀನಿ. 284 00:28:24,121 --> 00:28:26,457 ಅವರು ರಾಯಭಾರ ಕಛೇರಿಯ ಮೇಲೆ ಕಣ್ಣಿಟ್ಟಿರ್ತಾರೆ. 285 00:28:28,000 --> 00:28:29,209 ಹುಷಾರು, ಜಿಮ್. 286 00:28:37,217 --> 00:28:39,011 ಇಂದು ರಾತ್ರಿ ಸಂಗೀತ ಕಚೇರಿ! 287 00:28:39,011 --> 00:28:40,888 ಊರಿನಲ್ಲೇ ಅತ್ಯದ್ಭುತ ಕಚೇರಿ. 288 00:28:40,888 --> 00:28:42,264 ಹೇ, ಅತ್ಯದ್ಭುತ ಕಚೇರಿ. 289 00:28:43,682 --> 00:28:45,017 ಇಂದು ರಾತ್ರಿ ಸಂಗೀತ ಕಚೇರಿ. 290 00:28:47,895 --> 00:28:50,105 ಇವತ್ತು ನಿಮ್ಮನ್ಯಾರು ನೋಡ್ಬೇಕಂತೆ? 291 00:28:55,527 --> 00:28:56,778 ಊರಿನಲ್ಲೇ ಅತ್ಯದ್ಭುತ ಕಚೇರಿ. 292 00:29:08,290 --> 00:29:09,500 ಇಂದು ರಾತ್ರಿ ಸಂಗೀತ ಕಚೇರಿ! 293 00:29:09,500 --> 00:29:10,459 ಅತ್ಯದ್ಭುತ ಕಚೇರಿ! 294 00:29:58,173 --> 00:29:59,925 ಇದೆಂಥದೋ ಹಳೇ ಕಾಲದ ಹಾಗೆ. 295 00:30:00,968 --> 00:30:01,802 ನೋಡು. 296 00:30:02,511 --> 00:30:04,179 ನಾನಿನ್ನೂ ಹೀಗೆ ಆಶ್ಚರ್ಯ ಪಡಿಸ್ತೀನಿ. 297 00:30:06,348 --> 00:30:08,141 -ಹೇಗಿದ್ದೀರ? -ಚೆನ್ನಾಗಿದ್ದೀನಿ. 298 00:30:09,893 --> 00:30:10,727 ಕರ್ಮ, ಬಗ್ಗಿ. 299 00:30:25,784 --> 00:30:26,952 ಕರ್ಮ. 300 00:30:29,121 --> 00:30:30,163 ನಾನಂದುಕೊಂಡ ಹಾಗೇ. 301 00:30:30,747 --> 00:30:31,582 ಜಿಆರ್ಯು. 302 00:30:36,003 --> 00:30:38,797 -ಏಷ್ಟು ಕೆಟ್ಟದಾಗಿದೆ? -ಈತ ಅಲೆಕ್ಸೈ ಮನುಷ್ಯ. 303 00:30:39,256 --> 00:30:42,509 -ಜಿಆರ್ಯುಗೆ ಇದು ಇಷ್ಟ ಆಗಲ್ಲ. -ನಾವು ಹೊರಡಬೇಕು. 304 00:30:44,219 --> 00:30:46,305 ಇದನ್ನ ಮೈಕ್ ಹಾಗೂ ಅಲೇನಾಗೆ ತಲುಪಿಸಿ. ಆಯ್ತಾ? 305 00:30:46,305 --> 00:30:50,017 ಇದರಲ್ಲಿ ಅಲೇಕ್ಸೈ ಪೆಟ್ರಾವ್ ತಾನು ಡಿಮಿಟ್ರಿ ಪೊಪೋವನ್ನ ಕೊಂದ ಅಂತ ಒಪ್ಕೊಂಡಿದ್ದಾನೆ. 306 00:30:50,017 --> 00:30:52,185 -ಅದ್ಭುತ. -ನಿಮ್ಮ ಹತ್ರ ಏನಿದೆ? 307 00:30:52,185 --> 00:30:54,313 ನೌಕಾ ಕ್ಯಾಪ್ಟನ್, ರೋಲಾನ್ ಆನ್ಟೊನಾವ್. 308 00:30:55,397 --> 00:30:57,274 -ಸ್ಪೆಟ್ಸ್ನಾಜ್? -ಅನ್ಸುತ್ತೆ. 309 00:30:57,274 --> 00:30:59,651 ಇಲ್ಲ, ಇದು ತಪ್ಪು ಮಾಹಿತಿ. 310 00:30:59,651 --> 00:31:02,446 ಆಗಿರಲಿಕ್ಕಿಲ್ಲ. ಇದರ ವಿಚಾರವಾಗಿ ಸತ್ತೇ ಹೋಗ್ತಿದ್ದೆ. 311 00:31:04,072 --> 00:31:07,034 ಆತ ಒಳ್ಳೆ ಮನುಷ್ಯ. ಸ್ನೇಹಿತ ಅಂತಲೂ ಕರೀಬಹುದು. 312 00:31:32,100 --> 00:31:34,603 ಐದು ನಿಮಿಷ ಕೊಡಿ. 313 00:31:34,603 --> 00:31:37,314 ನಿಮ್ಮ ಗಂಡನಿಗೆ ನಿಜವಾಗಲೂ ಏನಾಯ್ತು ಅಂತ ಗೊತ್ತಾಗ್ಬೇಕಾ? 314 00:31:38,940 --> 00:31:41,401 ಅದನ್ನ ಮಾಡಿದವರ ಮೇಲೆ ಪ್ರತೀಕಾರ ಬೇಕಾ? 315 00:31:55,624 --> 00:31:58,293 -ಅನ್ಟೊನಾವ್ ಮಟೋಕ್ಸಾದಲ್ಲಿದ್ದನಾ? -ಹೌದು. 316 00:31:59,127 --> 00:32:02,297 ಹಾಗಂದ್ರೆ ಪೀಟರ್ ಅಥವಾ ಅಲೆಕ್ಸೈ ಹತ್ರ ಸಿಕ್ಕಿರಬಹುದು. 317 00:32:02,297 --> 00:32:04,007 ಇಲ್ಲ, ಅಲೆಕ್ಸೈ ಅಲ್ಲ. 318 00:32:04,007 --> 00:32:06,009 ರಾಜಕಾರಣಿ ಯಾವತ್ತೂ ಅವನನ್ನ ಪರಿವರ್ತಿಸಲಾಗಲ್ಲ. 319 00:32:06,009 --> 00:32:07,552 ಅದು ಒಬ್ಬ ಯೋಧನಿಂದ ಮಾತ್ರ ಸಾಧ್ಯ. 320 00:32:07,552 --> 00:32:11,515 -ಈಗ ಯಾವೂರಲ್ಲಿ ಕೆಲಸ ಮಾಡೋದು ಅಂತ ಗೊತ್ತಾ? -ಇಲ್ಲ. ಅವನ ಮನೆ ಗೊತ್ತು. 321 00:32:30,575 --> 00:32:33,620 ನೀವು ಹೇಳ್ತಿರೋದಕ್ಕೇನಾದ್ರೂ ಸಾಕ್ಷಿ ಇದೆಯಾ? 322 00:32:34,788 --> 00:32:36,707 ನನ್ನ ಸಹವರ್ತಿಗಳಿಗೆ ಉತ್ತರ ಕೊಡಲು ಬಿಡ್ತೀನಿ. 323 00:32:37,165 --> 00:32:40,335 ಹಾಗಾದ್ರೆ ಬಹಳ ಸ್ನೇಹಿತರನ್ನ ಮಾಡ್ಕೋತಿದ್ದೀವಿ ಇಂದು ರಾತ್ರಿ. 324 00:32:41,253 --> 00:32:43,046 ನನ್ನ ನಂಬಬಹುದು, ಮೇಡಂ ಪೊಪೋವ. 325 00:32:44,005 --> 00:32:45,006 ಈ ಕಡೆ. 326 00:33:01,857 --> 00:33:03,275 ಮೇಡಂ ಪೊಪೋವ. 327 00:33:05,402 --> 00:33:06,570 ಮೇಡಂ ಅಧ್ಯಕ್ಷೆ. 328 00:33:08,071 --> 00:33:10,741 ಈ ಅನಧಿಕೃತ ಭೇಟಿಗೆ ಕ್ಷಮಿಸಿ. 329 00:33:12,075 --> 00:33:15,370 ಆದ್ರೆ ನಾನು ಹೇಳ್ಬೇಕಿರೋದು ಕೇಳಿದ್ರೆ ಅರ್ಥ ಮಾಡ್ಕೋತೀರ. 330 00:33:15,370 --> 00:33:17,998 ದುರದೃಷ್ಟವಶಾತ್, ಕೇಳೋಕೆ ಹಿತವಾಗಿರಲ್ಲ. 331 00:33:20,208 --> 00:33:21,710 ಇಷ್ಟು ವರ್ಷ ಬದುಕಿದ್ದೀನಿ, 332 00:33:22,377 --> 00:33:25,338 ಅಹಿತಕರವಾದದ್ದು ಆಗಾಗ ಅಗತ್ಯವಾಗಿರುತ್ತೆ ಅನ್ನೋದನ್ನೂ ಕಲ್ತಿದ್ದೀನಿ. 333 00:33:31,428 --> 00:33:35,932 ಇದು ಒಪೆರಾ ಅಷ್ಟು ನೀರಸವಾಗಿರಲ್ಲ. 334 00:35:35,677 --> 00:35:37,637 ಜೆನೆರಲ್ ಆಜ್ಞೆ ಕೊಟ್ಟಿದ್ದಾರೆ. 335 00:35:38,722 --> 00:35:39,764 ಸೊಕೊಲ್ ಮುಗೀತು. 336 00:35:40,932 --> 00:35:42,267 ಅದನ್ನ ನಿಲ್ಲಿಸಬೇಕಂತೆ. 337 00:35:43,393 --> 00:35:44,603 ಸಂಪೂರ್ಣವಾಗಿ. 338 00:35:45,729 --> 00:35:49,357 -ಕ್ಷಮಿಸಿ, ಸರ್. ನೀವು ಹೇಳ್ತಿರೋದು... -ಏನು ಹೇಳ್ತಿದ್ದಾರೆ ಅಂತ ಗೊತ್ತಲ್ಲ. 339 00:35:50,734 --> 00:35:51,860 ಹೌದು, ಸರ್. 340 00:35:51,860 --> 00:35:52,986 ನಡೀರಿ! 341 00:36:01,036 --> 00:36:05,081 {\an8}ಕ್ರೋನ್ಸ್ಟಾಟ್ ಸಂತ ಪೀಟರ್ಸಬರ್ಗ್ ಇಂದ 30 ಕಿಮೀ ಪಶ್ಚಿಮಕ್ಕೆ 342 00:36:12,297 --> 00:36:14,633 ಯುಎಸ್ಎಸ್ ರೂಸ್ವೆಲ್ಟ್ ರೂಸ್ವೆಲ್ಟ್ 343 00:36:16,259 --> 00:36:19,262 ಬಾಲ್ಟಿಕ್ ನಲ್ಲಿರುವ ಪ್ರತೀ ಯುಎಸ್ ನೌಕೆಯ ಮಾಹಿತಿ ಅವನ ಹತ್ರ ಇದೆ. 344 00:36:21,431 --> 00:36:22,849 ಇದ್ಯಾಕೆ ಅವನ ಹತ್ರ ಇದೆ? 345 00:36:22,849 --> 00:36:26,686 ಯಾಕಂದ್ರೆ ಆನ್ಟೊನಾವ್ ಯುದ್ಧ ಶುರು ಮಾಡೋಕೆ ಹೊರಟಿದ್ದಾನೆ. 346 00:36:35,403 --> 00:36:36,446 ಫಿಯರ್ಲೆಸ್. 347 00:36:36,446 --> 00:36:39,616 ರಷ್ಯಾದ ನೌಕಾಪಡೆಯಲ್ಲಿನ ಅತ್ಯಂತ ಮಾರಕ ಯುದ್ಧನೌಕೆ. 348 00:36:39,616 --> 00:36:41,034 ಒಂದೂ ಅರ್ಥವಾಗ್ತಿಲ್ಲ. 349 00:36:42,452 --> 00:36:46,498 ಇಂಥ ಹಡಗಿನ ಚಲಾವಣೆಗೆ, ಕ್ರೆಮ್ಲಿನ್ ಇಂದ ನೇರ ಆಜ್ಞೆ ಇರಬೇಕು. 350 00:36:46,498 --> 00:36:47,415 ಅವನಿಗಿದೆ. 351 00:36:50,877 --> 00:36:54,339 ರಾಜಕಾರಣಿಗಳು ಬರ್ತಾರೆ ಹೋಗ್ತಾರೆ. ಬದಲಾವಣೆ ಬೇಗ ಆಗುತ್ತೆ. 352 00:36:56,049 --> 00:36:59,386 ಇದು ಪೀಟರ್ ಕೋವ್ಯಾಕನ ನಿಜವಾದ ಯೋಜನೆ. 353 00:37:07,811 --> 00:37:09,145 ಪೊಪೋವ ನಿಷ್ಪ್ರಯೋಜಕನಾಗಿದ್ದ. 354 00:37:09,938 --> 00:37:10,897 ತಡೆಯಾಗ್ತಿದ್ದ. 355 00:37:11,523 --> 00:37:12,899 ಅವನ ಸಮಯ ಮುಗಿದಿತ್ತು. 356 00:37:13,608 --> 00:37:15,026 ರಷ್ಯಾಗೆ ಉಪಕಾರ ಮಾಡಿದೆ ನಾನು. 357 00:37:17,737 --> 00:37:20,907 ಆ ಬೋಳಿಮಗ! 358 00:37:22,158 --> 00:37:26,329 ಮೂವತ್ತು ವರ್ಷದ ಹಿಂದೆ, ಡಿಮಿಟ್ರಿಗೆ ಮೈಲಿ ದೂರದಲ್ಲೇ ಗೊತ್ತಾಗ್ತಿತ್ತು. 359 00:37:27,789 --> 00:37:29,749 ಆದ್ರಿದು 30 ವರ್ಷ ಹಿಂದೆ ಅಲ್ಲ. 360 00:37:32,544 --> 00:37:35,422 ನಿಮ್ಮ ಗಂಡನಿಗಾದದ್ದರ ಬಗ್ಗೆ ತೀವ್ರ ಸಂತಾಪವಿದೆ, 361 00:37:35,422 --> 00:37:39,134 ಮತ್ತೆ ನಿಮ್ಮ ಹಾಗೇ ಅದರ ಕಾರಣಕರ್ತರಿಗೆ ಶಿಕ್ಷೆ ಆಗ್ಬೇಕು ಅನ್ನೋದು ನನ್ನಾಸೆ. 362 00:37:39,134 --> 00:37:43,138 ಅದನ್ನ ಮಾಡೋದಕ್ಕೆ, ಅಧ್ಯಕ್ಷ ಸುರಿಕಾವರನ್ನು ಭೇಟಿ ಆಗ್ಬೇಕು. 363 00:37:45,265 --> 00:37:46,891 ಅನಧಿಕೃತವಾಗಿ, ಅನ್ಕೋತೀನಿ. 364 00:37:46,891 --> 00:37:48,351 ಖಂಡಿತವಾಗಿಯೂ. 365 00:37:48,351 --> 00:37:50,729 ಅವರು ಈಗ ಸೂಕ್ಷ್ಮ ಪರಿಸ್ಥತಿಯಲ್ಲಿದ್ದಾರೆ. 366 00:37:50,729 --> 00:37:55,984 ನಿಮಗೆ ಗೊತ್ತಿರೋ ಹಾಗೆ, ಮೇಡಂ ಅಧ್ಯಕ್ಷೆ, ನಿಮ್ಮ ಮಾತು ಅವರು ತೆಗೆದು ಹಾಕಲ್ಲ. 367 00:37:57,861 --> 00:37:59,362 ಅವರೊಂದಿಗೆ ಹತ್ತು ನಿಮಿಷ ಸಾಕು. 368 00:38:00,196 --> 00:38:02,282 ಇದು ಅವರ ಅಧ್ಯಕ್ಷತೆ ಉಳಿಸಬಹುದು. 369 00:38:02,282 --> 00:38:03,366 ಹಾಗೇ ನಿಮ್ಮದೂ? 370 00:38:06,411 --> 00:38:10,206 ರಾಜಕಾರಣದ ಬಗ್ಗೆ ನನ್ನ ಅಭಿಪ್ರಾಯ ಬದಲಾಗ್ತಿದೆ. 371 00:38:11,332 --> 00:38:13,543 ಒಳ್ಳೇದು. ಇದು ಘೋರ ವ್ಯಾಪಾರ. 372 00:38:28,433 --> 00:38:30,977 ಆರಾಮಾಗಿರಿ. ತುಂಬಾ ಹೊತ್ತು ಇಲ್ಲೇ ಇರ್ತೀವಿ ಅನ್ಸುತ್ತೆ. 373 00:38:33,229 --> 00:38:37,609 ಕ್ರೈಮಿಯಾದಲ್ಲಿ ಸೈನ್ಯದ ಚಲನೆ ಹಾಗೂ ಬಾಲ್ಟಿಕ್ ನೌಕಾಪಡೆಯಲ್ಲಿ ಚಟುವಟಿಕೆ ಕಂಡುಬಂದಿದೆ. 374 00:38:37,609 --> 00:38:41,279 ರಷ್ಯಾದಲ್ಲಿ ನಮ್ಮ ಕಾರ್ಯಾಚರಣೆ ಬಗ್ಗೆ ನನಗೆ ವಿವರ ಸಿಕ್ಕಿದೆ. 375 00:38:41,279 --> 00:38:42,864 ನಿಮ್ಮವರು ಏನು ಮಾಹಿತಿ ತಂದಿದ್ದಾರೆ? 376 00:38:42,864 --> 00:38:46,409 ನಮ್ಮವನ ಪ್ರಕಾರ, ರಷ್ಯಾದ ನೌಕಾ ಕ್ಯಾಪ್ಟನ್, ಆನ್ಟೊನಾವ್, 377 00:38:46,409 --> 00:38:49,579 ಪೀಟರ್ ಕೋವ್ಯಾಕ್ ಹಾಗೂ ಅಲೆಕ್ಸೈ ಅವರಿಂದ ಪರಿವರ್ತಿಸಲ್ಪಟ್ಟಿದ್ದಾನೆ. 378 00:38:49,579 --> 00:38:50,663 ಹೇಗೆ? 379 00:38:50,663 --> 00:38:53,500 ಅವನು ಶಸ್ತ್ರಸಜ್ಜಿತ ವಿಧ್ವಂಸಕವನ್ನು ಹೊರಡಿಸಿದ್ದಾನೆ, 380 00:38:53,500 --> 00:38:56,628 ಕ್ರೆಮ್ಲಿನ್ ನ ಅಧಿಕೃತ ಆಜ್ಞೆ ಪಾಲಿಸುತ್ತಿಲ್ಲ ಅನ್ಸುತ್ತೆ. 381 00:38:56,628 --> 00:38:59,547 ನನಗೆ ದೃಢೀಕರಿಸಿದ ನಿರ್ದಿಷ್ಟ ಮಾಹಿತಿ ಬೇಕು. 382 00:38:59,547 --> 00:39:02,425 ಕಳೆದ ಒಂದು ಗಂಟೆಯಲ್ಲಿ ನಿಮ್ಮವರೊಂದಿಗೆ ಮಾತಾಡಿದ್ದೀರಾ? 383 00:39:02,425 --> 00:39:03,968 ಇಲ್ಲ, ಸರ್. 384 00:39:03,968 --> 00:39:05,595 ನಮಗೆ ಬೇರೆ ಯಾವ ಮಾರ್ಗಗಳಿವೆ? 385 00:39:05,595 --> 00:39:08,973 ನಮ್ಮ ಅಸೆಟ್ಗಳು ಉತ್ತರ ಸಮುದ್ರದಿಂದ ಬಾಲ್ಟಿಕ್ಗೆ ಹೋಗ್ತಿದ್ದಾರೆ. 386 00:39:25,907 --> 00:39:28,952 ನಿಮಗೆ ಗೊತ್ತಾ, ನಾನು ನಿಮ್ಮ ಪ್ರಚಾರವನ್ನ ಚೆನ್ನಾಗಿ ಗಮನಿಸಿದೆ. 387 00:39:28,952 --> 00:39:30,161 ಧನ್ಯವಾದ. 388 00:39:30,161 --> 00:39:34,082 200 ವರ್ಷ ಆಯ್ತು ಒಬ್ಬ ಮಹಿಳೆ ರಷ್ಯಾವನ್ನ ಆಳಿ. 389 00:39:35,542 --> 00:39:38,044 ನಾನು ಸಾಯೋಕೆ ಮುಂಚೆ ಅದು ಬದಲಾಗೋದನ್ನ ನೋಡ್ಬೇಕು. 390 00:39:38,044 --> 00:39:39,087 ನಾನೂ ಕೂಡ. 391 00:39:46,678 --> 00:39:50,807 ನಾಳೆ ಬೆಳಗ್ಗೆ, 367 ಲೆವಿಟ್ಸ್ಕಿ ಪ್ರಾಸ್ಪೆಕ್ಟ್. 392 00:39:50,807 --> 00:39:52,934 ಯಾರನ್ನಾದರೂ ಕಳಿಸ್ತೀನಿ ನಿಮ್ಮನ್ನ ಭೇಟಿ ಮಾಡೋಕೆ. 393 00:39:52,934 --> 00:39:54,227 ಧನ್ಯವಾದ. 394 00:39:54,227 --> 00:39:55,228 ಶುಭರಾತ್ರಿ. 395 00:39:55,770 --> 00:39:57,188 ಶುಭರಾತ್ರಿ, ಮೇಡಂ ಪೊಪೋವ. 396 00:40:25,300 --> 00:40:28,595 ಜ್ಯಾಕ್ ರಯಾನ್ - ತಪ್ಪಿದ ಕರೆ 397 00:40:33,892 --> 00:40:34,851 ಜ್ಯಾಕ್. 398 00:40:34,851 --> 00:40:36,144 ನಾವು ತಪ್ಪು ತಿಳ್ಕೊಂಡಿದ್ವಿ. 399 00:40:36,144 --> 00:40:39,731 ಪೂರ್ತಿ. ಸೊಕೊಲ್ ಪರಮಾಣು ಅಥವಾ ಯುದ್ಧ ಶುರು ಮಾಡೋದ್ರ ಬಗ್ಗೆ ಆಗಿರಲಿಲ್ಲ, 400 00:40:39,731 --> 00:40:41,566 ಅಧಿಕಾರದ ಬಗ್ಗೆಯಾಗಿತ್ತು. 401 00:40:42,567 --> 00:40:45,153 ಆನ್ಟೊನಾವನ ಮನೆಯಲ್ಲಿ, ಲಿಖಿತ ಆಜ್ಞೆ ಸಿಕ್ತು, 402 00:40:45,153 --> 00:40:49,532 ದ ಫಿಯರ್ಲೆಸ್ ಎಂಬ ವಿಧ್ವಂಸಕದಲ್ಲಿ ಬಾಲ್ಟಿಕ್ಕಿಗೆ ಹೊರಡೋದಕ್ಕೆ. ಇದೇ. 403 00:40:49,532 --> 00:40:53,411 -ಇದು ಅವನ ಗುರಿಯಾಗಿತ್ತು. -ಆನ್ಟೊನಾವ್ ಖುದ್ದಾಗಿ ಏನೂ ಮಾಡಲ್ಲ. 404 00:40:53,786 --> 00:40:57,832 -ಅವನಿಗೆ ಕ್ರೆಮ್ಲಿನ್ ಸಹಾಯ ಬೇಕಾಗುತ್ತೆ. -ಆಜ್ಞೆ ನೇರ ಕ್ರೆಮ್ಲಿನ್ ಇಂದ ಬಂದಿದೆ. 405 00:40:57,832 --> 00:41:00,168 ಆದ್ರೆ ಸಹಿ ಅಧ್ಯಕ್ಷರದ್ದಲ್ಲ. 406 00:41:01,544 --> 00:41:03,755 ಅಲೆಕ್ಸೈ ಪೆಟ್ರಾವ್ ಸಹಿ ಇತ್ತು. 407 00:41:03,755 --> 00:41:05,298 ಅಲೆಕ್ಸೈ ಪೆಟ್ರಾವ್? 408 00:41:05,298 --> 00:41:06,382 ದೇವರೇ. 409 00:41:08,051 --> 00:41:09,135 ಇದು ದಂಗೆ. 410 00:41:09,928 --> 00:41:12,138 ನಾವು ಇದರ ಮಧ್ಯದಲ್ಲಿದ್ದೀವಿ. 411 00:41:13,389 --> 00:41:15,183 ನಾನು ಅಧ್ಯಕ್ಷರಿಗೆ ತಿಳಿಸಬೇಕು. 412 00:41:15,183 --> 00:41:17,185 ಮುಂದೇನು ಮಾಡ್ತೀಯ? 413 00:41:17,185 --> 00:41:19,729 ಬಾಲ್ಟಿಕ್ಗೆ ಹೋಗಬೇಕು. 414 00:41:21,356 --> 00:41:22,482 ಒಳ್ಳೇದಾಗ್ಲಿ, ಜ್ಯಾಕ್. 415 00:41:23,399 --> 00:41:24,567 ನಿಮಗೂ ಕೂಡ. 416 00:41:33,743 --> 00:41:34,994 ಸರಿ, ಹೊರಡೋಣ. 417 00:41:35,745 --> 00:41:39,582 ನಾರ್ವದಲ್ಲಿ ಗಡಿ ದಾಟು. ಅಲ್ಲಿಂದ ನಿಮ್ಮವರು ಸಹಾಯ ಮಾಡ್ತಾರೆ. 418 00:41:40,667 --> 00:41:42,335 ರೋಲನ್ ನ ನಾನು ನೋಡ್ಕೋತೀನಿ. 419 00:41:42,335 --> 00:41:45,463 ದೇಶದ್ರೋಹಿಗೆ ಬದ್ಧರಾಗಿರುವ ರಷ್ಯಾದ ನಾವಿಕರು ತುಂಬಿರುವ 420 00:41:45,463 --> 00:41:47,257 ಹಡಗಿಗೆ ನೀವು ಹೋಗ್ತಿಲ್ಲ. 421 00:41:47,257 --> 00:41:48,383 ಅದು ಆತ್ಮಹತ್ಯೆ. 422 00:41:51,636 --> 00:41:52,804 ನೀನೇನು ಮಾಡ್ತಿದ್ದೆ? 423 00:42:35,096 --> 00:42:39,183 ರಷ್ಯಾದ ಹಡಗು ಅಪಾಯದಲ್ಲಿದೆ ಅಂತ ಸುದ್ದಿ ಬಂದಿದೆ, ಅಧ್ಯಕ್ಷರೇ. 424 00:42:40,435 --> 00:42:43,730 ಹಡಗಿನ ಕ್ಯಾಪ್ಟನ್ ರೋಲನ್ ಆನ್ಟೊನಾವ್ ಝೆಕ್ ಸ್ಫೋಟ ಹಾಗೂ ಡಿಮಿಟ್ರಿ ಪೊಪೋವರ 425 00:42:43,730 --> 00:42:47,900 ಕೊಲೆಗೆ ಸಂಬಂಧಿಸಿದ ದೊಡ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾನೆ. 426 00:42:47,900 --> 00:42:51,612 ಇದೆಲ್ಲಾ ಈಗ ನಡೆಯುತ್ತಿರುವ ರಷ್ಯಾದ ದಂಗೆಯ ಅಂಗವಾಗಿದೆ. 427 00:42:52,488 --> 00:42:55,867 ಬೇರೆ ಮೂಲದಿಂದ ಇದು ದೃಢೀಕೃತವಾಗಿದೆಯಾ? 428 00:42:55,867 --> 00:42:58,077 ನನ್ನ ಮೂಲಗಳು ಅಷ್ಟೇ. 429 00:42:58,077 --> 00:42:59,495 ನನಗೆ, ಅಷ್ಟು ಸಾಕು. 430 00:43:00,455 --> 00:43:02,999 ಮಿಸ್ ರೈಟ್, ಗೌರವಾನ್ವಿತವಾಗಿ, 431 00:43:02,999 --> 00:43:04,334 ನನಗೆ, ಅಷ್ಟು ಸಾಲಲ್ಲ. 432 00:44:52,358 --> 00:44:54,360 ಉಪ ಶೀರ್ಷಿಕೆ ಅನುವಾದ:: Kavitha Babu 433 00:44:54,360 --> 00:44:56,446 ಸೃಜನಾತ್ಮಕ ಮೇಲ್ವಿಚಾರಕರು